ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 10, 2011

2

ಮೀನುಗಳು—ಅಬ್ಬಾ..ಎಂಥ ಮೀನುಗಳು…!!

‍ನಿಲುಮೆ ಮೂಲಕ

– ಆಜಾದ್

ಮೀನುಗಳು, ಜಲಕನ್ಯೆಯರು, ಮತ್ಸ್ಯಾವತಾರ ಹೀಗೆ ನಮ್ಮೊಂದಿಗೆ ನಮ್ಮ ಪರಂಪರೆಯೊಂದಿಗೆ ಹಾಸು ಹೊಕ್ಕಾಗಿರುವ ಜೀವಿಗಳು. ಮಾನವನ ಜೀವವಿಕಾಸ ಸರಣಿಯ ಶ್ರಂಖಲೆಯಲ್ಲಿ ಬಹು ಮುಖ್ಯ ಕೊಂಡಿ..ಈ ಮೀನುಗಳು. ಬೆನ್ನುಮೂಳೆಯ ಪ್ರಥಮ ಅವತರಣ ಮೀನಿನಲ್ಲಾಯಿತು. ಅದೇ ಕಾರಣಕ್ಕೆ ಮಾನವ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಮೂಲವನ್ನು ಹುಡುಕಲು ಹೋದರೆ…ಮೀನು ಸಂಶೋಧನಾ ಯೋಗ್ಯ ಎಂದು ಶಾಸ್ತ್ರವೇತ್ತರು ಮೀನನ್ನು ಸಂಶೋಧನೆಗಳಿಗೆ ಬಳಸಲಾಗುತ್ತಿದೆ.

ಇನ್ನು ಮೀನುಗಳ ವಿಕಾಸದಲ್ಲೂ ಬಹು ಮಹತ್ತರ ತಿರುವುಬಂದದ್ದು…ಮೃದ್ವಸ್ಥಿ (ಕಾರ್ಟೀಲೇಜ್..ಮೆದು ಮೂಳೆ) ಮೀನುಗಳ ವಿಕಾಸ ನಂತರ ಸಹಜಸ್ಥಿ (ಟ್ರೂ ಬೋನ್) ಹೊಂದಿದ ಮೀನುಗಳು. ಮುದ್ವಸ್ಠಿ ಮೀನುಗಳು ಎಂದರೆ ಒಡನೆಯೇ ನೆನೆಪಾಗುವುದು ಶಾರ್ಕ್ ಮೀನು. ಬಹುಶಃ ಜಲಜೀವಿಗಳಲ್ಲಿ ವಿಖ್ಯಾತ ಮತ್ತು ಕುಖ್ಯಾತವಾಗಿರುವ ಜೀವಿ ಎಂದರೆ ಶಾರ್ಕ್ ಮೀನು. ಬಹುಪಾಲು ಮೃದ್ವಸ್ಥಿಗಳು ಸಮುದ್ರಗಳಲ್ಲೇ ಕಂಡುಬರುತ್ತವೆ (ಶಾರ್ಕ್ ಗಳ ಬಗ್ಗೆ ಇನ್ನೊಮ್ಮೆ ಬರೆಯುವೆ..). ಶಾರ್ಕ್ ಜಾತಿಗೆ ಸೇರಿದ ಸ್ಕೇಟ್ ಮತ್ತು ರೇ ಮೀನುಗಳೂ ಮೃದ್ವಸ್ಥಿಗಳೇ.

ಇನ್ನು ಸಹಜಸ್ಥಿ ಮೀನುಗಳು, ಕೆರೆ, ಕುಂಟೆ, ಹೊಂಡ, ಕುಂಟೆ, ಸರೋವರ, ನದಿ, ನಾಲೆ, ಜಲಾಶಯ ಅಲ್ಲದೇ ಹಿನ್ನೀರು, ಚೌಳುಪ್ಪುನೀರು, ಸಮುದ್ರ ತಟಗಳು, ಆಳ ಸಮುದ್ರ, ಅಷ್ಟೇ ಏಕೆ…ಹಿಮಾವೃತ ಅಂಟಾರ್ಟಿಕಾದಲ್ಲೂ ಕಂಡುಬರುತ್ತವೆ.

ಇವುಗಳಲ್ಲಿನ ಕೆಲವು ವೈವಿಧ್ಯಗಳ ಸ್ಥೂಲ ಪರಿಚಯವೇ ಈ ಲೇಖನ.

ಚುಕ್ಕೆ ಬಾಲದ ಸಮುದ್ರ ಸಿಂಹ: ಸಮುದ್ರ ಸಿಂಹಗಳು ಬಹು ಮನೋಹಕ ಮೀನುಗಳಲ್ಲಿ ಪ್ರಮುಖವಾದುವು.

ಇವುಗಳ ರೆಕ್ಕೆಮುಳ್ಳು ವಿಷಯುಕ್ತವಾಗಿದ್ದು ಇವುಗಳ ದೇಹವಿನ್ಯಾಸ ಒಂದುರೀತಿಯ ಅಪಾಯ ಸೂಚಕ

ಎಲೆಯಾಕಾರದ ಸಮುದ್ರ ದೈತ್ಯ : ಕಡಲ್ಗುದುರೆಗಳ ಜಾತಿಯ ಮೀನುಗಳಿವು, ತನ್ನ ಪರಿಸರದೊಡನೆ (ಸಮುದ್ರ ಸಸ್ಯಗಳ ನಡುವೆ)

ಸಮ್ಮಿಳಿತಗೊಳ್ಳುವ ಸ್ವರಕ್ಷಣಾ ತಂತ್ರ ಇವುಗಳದ್ದು.

ಹಾರುವ ಗುರ್ನಾರ್ಡ ಮೀನು: ಸಮುದ್ರ ತಲದಲ್ಲಿ ಹಾರಾಡುವಂತೆ ಈಜಾಡುವ ಮೀನುಗಳಿವು. ಕೆರೆಬ್ಬಿಯನ್ ದ್ವೀಪಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಸಮುದ್ರ ಮೇಲ್ಪದರಗಳಲ್ಲಿ ಕಾಣಸಿಗುವ ಹಾರಾಡುವ ಮೀನುಗಳಿಗಿಂತ ವಿಭಿನ್ನ.


ಹಾವಿನಂತಿರುವ ಮೊರೆ ಈಲ್ ಮೀನು: ಸಮುದ್ರ ತಲದ ಕೋರಲ್ಕಾಡಿನ ಬಹು ನಿಷ್ಣಾತ ಬೇಟೆಗಾರ. ಇದರ ಮಚ್ಚೆಗಳು ಕೋರಲ್ಗಳ ಅವಿತಾಗ ತನ್ನನ್ನು ಗುರುತಿಸದಂತೆ ಮಾಡಿಕೊಂಡು ಮೀನನ್ನು ಬೇಟೆಯಾಡುತ್ತದೆ.


ಪಾರ್ಕುಪೈನ್ ಮೀನು: ನೋಡಲು ವಿಚಿತ್ರವಾಗಿದ್ದು ಸ್ವರಕ್ಷಣಾ ಸಾಮರ್ಥ್ಯದ ಅಮೋಘ ನಮೂನೆಯನ್ನು ಹೊಂದಿದೆ. ಇದು ವೈರಿಯನ್ನು ಕಂಡರೆ ನೀರನ್ನು ಕುಡಿದು ಒಮ್ಮೆಗೇ ಊದಿಕೊಂಡು ಗಾಬರಿ ಹುಟ್ಟಿಸುತ್ತೆ ಅಲ್ಲದೇ ಅದರ ಚೂಪಾದ ಮುಳ್ಳುಗಳು ತಿನ್ನಲು ಬರುವ ಮೀನಿಗೆ ಕಂಟಕಪ್ರಾಯವಾಗಿರುತ್ತೆ.

Read more from ವಿಜ್ಞಾನ
2 ಟಿಪ್ಪಣಿಗಳು Post a comment
  1. Chitra's avatar
    ಫೆಬ್ರ 10 2011

    ಆಜಾದ್ ಅವರೆ,

    ಮೀನುಗಳ ಮಾಹಿತಿ ಚೆನ್ನಾಗಿದೆ ಹಾಗು ಉಪಯುಕ್ತ. ಪಾರ್ಕುಪೈನ್ ಒಂದು ಪ್ರಾಣಿ ಅಂತ ತಿಳಿದಿದ್ದೆ. ಆದರೆ ಅದು ಅಕ್ವಾಟಿಕ್ ಅಂತ ಗೊತ್ತಿರಲಿಲ್ಲ.

    ಶಾರ್ಕ್ ಬಗ್ಗೆ ಬರೆಯಿರಿ.

    ಚಿತ್ರ

    ಉತ್ತರ
  2. Kanthi's avatar
    ಏಪ್ರಿಲ್ 21 2011

    upyukta lekhana..

    ಉತ್ತರ

Leave a reply to Chitra ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments