‘ಭಾರತದ ಬಳಿಯಿದೆ ನಿಂಬೆಯ ಶಕ್ತಿ’ !
ಪಾಕಿಸ್ತಾನದ ಬಳಿ ಭಾರತಕ್ಕಿಂತ ೧೦೦ಕ್ಕೊ ಹೆಚ್ಚು ಅಣ್ವಸ್ತ್ರಗಳಿವೆ ಅನ್ನೋ ಸುದ್ದಿ ಮೊನ್ನೆ ಪತ್ರಿಕೆಗಳಲ್ಲಿ ಬಂದಿದೆ.ಆದರೆ ಭಾರತೀಯರು ಈ ಸುದ್ದಿಗೆ ಗಲಿಬಿಲಿಯಾಗಬೇಕಿಲ್ರಿ! ಯಾಕೆ ಅಂತಿರಾ? ಯಾಕಂದ್ರೆ ‘ಭಾರತದ ಬಳಿಯಿದೆ ನಿಂಬೆಯ ಶಕ್ತಿ’ !
ಇದೇನಿದು ಯಾವ್ದೋ ಬಟ್ಟೆ ತೊಳ್ಯೋ ಸೋಪ್ ಜಾಹಿರಾತಿನ ಡೈಲಾಗ್ ತರ ಇದ್ಯಲ್ಲಪ್ಪ ಅಂತಿರಾ?ರೀ,ಇದು ಆ ತರ ನಿಂಬೆ ಅಲ್ಲ.ನಾನ್ ಹೇಳೋಕ್ ಹೊರಟಿದ್ದು,ಕಳೆದ ಬಾರಿ ಒಂದಿಷ್ಟು ಜನ ಎಂ.ಎಲ್.ಎಗಳು ಹೋಗಿ ಗೋವಾದಲ್ಲಿ ಕೂತು,ಅಲ್ಲಿಗೆ ಕುಮ್ಮಿನು ಹೋದ್ಮೇಲೆ,ಈ ಕಡೆ ಯಡ್ಡಿ ಕುರ್ಚಿ ಗಡ-ಗಡ ನಡುಗಲು ಶುರು ಮಾಡಿದಾಗ.ವಿಧಾನ ಸೌಧದ ಎದುರು ಕಾಣಿಸಿತ್ತಿಲ್ಲ ಹರಿಶಿನ ಕುಂಕುಮ ಹಚ್ಚಿದ ನಿಂಬೆಹಣ್ಣು ಅದರ ಬಗ್ಗೆ. ಮತ್ತೀಗ ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಕಾಣಿಸಿಕೊಂಡ ಪವರ್ಫುಲ್ ನಿಂಬೆಯ ಬಗ್ಗೆ! (ಆ ಪರಿ ಕಾಡ್ತಾ ಇರೋ ರಾಜಭವನದ ಬಳಿ ಯಾಕೆ ಇನ್ನ ನಿಂಬೆ ಬಿದ್ದಿಲ್ಲ ಅಂತ ನಾನ್ ಕೇಳೋಲಪ್ಪ 😉 ).ಇದೇ,ಈ ಮಂತ್ರಿಸಿದ ನಿಂಬೆಹಣ್ಣು ಕಣ್ರೀ ಭಾರತದ ಶಕ್ತಿಯಾಗಬೇಕು.ಅದ್ಹೆಂಗೆ ಸಿವಾ ಅಂತಿರ? ಹೇಳ್ತೀನಿ ಕೇಳಿ…
ಈಗಾಗ್ಲೇ ಚೀನಾ ಅನ್ನೋ ನಂಬಿಕೆಗೆ ಅರ್ಹವಲ್ಲದ ದೇಶ ಭಾರತವನ್ನ ಇರೋ ಬರೋ ದಿಕ್ಕುಗಳಿಂದ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಕಡೆಯಿಂದ ಸುತ್ತಿ ಕುಳಿತಿದೆ.ಹೀಗೆ ಪಾಕಿಸ್ತಾನ,ಶ್ರೀಲಂಕ,ಬಾಂಗ್ಲ,ನೇಪಾಳ,ಬರ್ಮಾ ಕಡೆ ಹರಡಿಕೊಂಡಿರೋ ಚೀನಿಗಳು ವಾಪಸ್ ಚೈನಗೆ ಹೋಗೋ ಹಾಗೆ ಮಾಡ್ಬೇಕು.ಹೇಗ್ ಮಾಡೋದು?
ಹೆಗಂದ್ರೆ,ಹೇಗಿದ್ರು ಅಲ್ಲಿ ಪ್ರಜಾಪ್ರಭುತ್ವಕ್ಕಾಗಿ ಚಿಕ್ಕದಾಗಿ ಕೂಗೆದ್ದಿದೆ.ಅಲ್ಲಿನ ಜನರಿಗೆ ದೈತ್ಯ ಶಕ್ತಿ ಆವಹನೆಯಾಗುವಂತೆ ಭಾರತ ನಿಂಬೆ ಶಕ್ತಿಯನ್ನ ಪ್ರಯೋಗಿಸ್ಬೇಕು ರೀ,ಆಗ ಅಲ್ಲಿ ರೊಚ್ಚಿಗೆಳೋ ಚೀನೀ ಜನರನ್ನ ಕಂಟ್ರೋಲ್ ಮಾಡೋಕೆ ಅಂತ ಚೀನಿಗಳೆಲ್ಲ ವಾಪಸ್ ಅವ್ರ ದೇಶಕ್ಕೆ ಹೋಗ್ತಾರೆ.ಅವರೆಲ್ಲ ಕಾಲ್ಕಿತ್ತ ಮೇಲೆ ಭಾರತ ಸೋಯ್ಯಿ-ಟಪಕ್ ಅಂತ ಮತ್ತಿನ್ನೊಂದು ಕೆಲ್ಸ ಮಾಡ್ಬೇಕಪ್ಪ.ಗಡಿಯುದ್ದಕ್ಕೂ ನಿಂಬೆ ಬೆಳೆಯೋದು ಕಡ್ಡಾಯ ಮಾಡಿ, ಗಡಿ ಬೇಲಿ ತರ ಮಂತ್ರಿಸಿದ ನಿಂಬೆ ಬೇಲಿ ಮಾಡಿಬಿಡ್ಬೇಕು.ಅಲ್ಲಿಗೆ ದೇಶ ಫುಲ್ ಸೆಕ್ಯೂರ್ ಆಗಿಬಿಡುತ್ತೆ! (ಹಿಂಗ್ ಮಾಡೋಕೆ ನಮ್ ದೇಸದ ಸಿಕ್ಯುಲರ್ಗಳು ಬಿಡೋಲ್ಲ ಅಂತಿರ, ಅವ್ರು ಯಾವ್ ಒಳ್ಳೆ ಕೆಲ್ಸ ತಾನೇ ಮಾಡೋಕ್ ಬಿಡ್ತಾರೆ ನೀವೇ ಹೇಳಿಪ್ಪ ;))
ಇಷ್ಟು ಮಾಡಿದ್ರೆ ಪಾಕಿಸ್ತಾನದ ಸದ್ದು ಸಹ ಅಡಗಿಬಿಡುತ್ತೆ,ಇಲ್ಲ ಅಂದ್ರೆ ಭಾರತದಲ್ಲಿಡಿ ಕಡ್ಡಾಯ ನಿಂಬೆ ಬೆಳೆಯುವಂತೆ ಮಾಡಿ ಅದೇ ನಿಂಬೆ ಹಣ್ಣು ಪಾಕಿಸ್ತಾನಕ್ಕೆ ಎಸೆಯುವಂತೆ ಮಾಡಿದ್ರೂ ಆ ದೇಶ ನಿಂಬೆಯಲ್ಲಿ ಮುಚ್ಚಿ ಹೋಗುತ್ತೆ! ಹೇಗಿದೆ ‘ನಿಂಬೆಯ ಶಕ್ತಿ’, ಸಕ್ಕತ್ತ್ ಅಲ್ವಾ?
ಇಷ್ಟು ಈಸಿಯಾಗಿ ಎಲ್ಲ ಶತ್ರುಗಳನ್ನ ನಿಂಬೆಯ ಶಕ್ತಿಯಲ್ಲಿ ನೀವಾಳಿಸಿ ಬಿಸಾಡುವ ಶಕ್ತಿಯಿರುವಾಗ ನಮಗ್ಯಾಕ್ರಿ ಅಣ್ವಸ್ತ್ರಗಳ,ಮಿಲಿಟರಿಯ ಚಿಂತೆ? ಪ್ರಧಾನಿ/ಮುಖ್ಯಮಂತ್ರಿ ಕುರ್ಚಿ ಉರುಳಿಸೋಕೆ, ಕುರ್ಚಿ ಸೆಳೆಯೋಕೆ ಎಲ್ಲಕ್ಕೂ ಬಳಸಿ all-in-one ಪವರ್ಫುಲ್ ನಿಂಬೆಯ ಶಕ್ತಿ 😉 ಹೇಗಿದ್ರು ಮಿಲಿಟರಿ ವಿಜ್ಞಾನ-ತಂತ್ರಜ್ಞಾನದಲ್ಲಿ ನಾವು ಚೈನಾ,ಅಮೇರಿಕಾ,ರಷ್ಯಗಳಂತೆ ಸ್ವದೇಶೀ ಶಕ್ತಿಯ ಮೇಲೆ ನಿಂತಿಲ್ಲ.ಸುಮ್ಮನೆ ಕೋಟಿಗಳ ಲೆಕ್ಕದಲ್ಲಿ ಅವರ ಬಾಯಿಗೆ ಸುರಿದು ಗನ್-ಪೆನ್ ತರೋ ಬದ್ಲು ಇಲ್ಲೇ ನಮ್ಮಲ್ಲೇ ಸಿಗೋ ನಿಂಬೆಯನ್ನೇ ಪರಿಣಾಮಕಾರಿಯಾಗಿ ಬಳಸೋಣ.ವೈಮಾನಿಕ ದಾಳಿಯಲ್ಲಿ ಬಾಂಬ್ ಬದಲು ನಿಂಬೆ ಹಣ್ಣನ್ನೇ ಭಯಾನಕವಾಗಿ ಮಂತ್ರಿಸಿ ತೂರಿ ಬಿಡೋಣ.ಹಸಿರು ಕ್ರಾಂತಿ,ಕ್ಷೀರ ಕ್ರಾಂತಿಯಂತೆ ನಿಂಬೆ ಕ್ರಾಂತಿ ಮಾಡೋಣ. ಆ ಮೂಲಕ ಬಳಲಿ ಬೆಂಡಾಗಿರೋ ರೈತನಿಗೂ ಲಾಭ ನೀಡೋಣ.ಹಾಗೆ ಮಂತ್ರಿಸೋ ಜನರಿಗೋ ಭರ್ಜರಿ ಕೆಲ್ಸ.ಯಾರಿಗುಂಟು ಯಾರಿಗಿಲ್ಲ!
ಅದಿಕ್ಕೆ ನಾನ್ ಹೇಳಿದ್ದು ”ಭಾರತದ ಬಳಿಯಿದೆ ನಿಂಬೆಯ ಶಕ್ತಿ” ಅಂತ 🙂
ಚಿತ್ರಕೃಪೆ: jensbooksthoughts.png





ಚೆನ್ನಾಗಿ ಹೇಳಿದ್ರಿ ….. ದರಿದ್ರ ರಾಜಕಾರಣಿಗಳು ಕೇಳಿಸಿ ಕೊಂಡರೆ, ಅದರಲ್ಲೂ ಒಂದು ಹಗರಣ ಸೃಷ್ಟಿ ಸಬಹುದು.” ನಿಂಬೆ ಹಗರಣ ರೂ 10 ಲಕ್ಷ ಕೋಟಿ”!!!!!
ಒಮ್ಮೆ ನೆಹರು ಚೀನಾ ಭಾರತದ ಗಡಿಗಳ ಉದ್ದಕ್ಕೂ ಸೇನೆ ನಿಲ್ಲಿಸುವ ಸುದ್ದಿ ಕಾರ್ಯಪ್ಪನವರಿಂದ ಕೇಳಿದಾಗ ಉಡಾಫೆ ಹೇಳಿಕೆ ನೆನಪಾಗುತ್ತೆ. ಆದ್ರೆ ಅಲ್ಲೆಲ್ಲೂ ನಿಂಬೆಯ ಶಕ್ತಿಬಗ್ಗೆ ತಿಳಿದಿರಲಿಲ್ಲ.
ಅರವಿಂದ್
Rakeshanna sadyakke coin ge sigo vastu andre limbu matra, adara bele nu onion thara madthira hege:P
Good one Raki 🙂 Keep going 🙂 but thing is that iduna naav odidre yenu agalla maraya.. make those politicians to read and realize 🙂 keep writing 🙂 Kannada type madake browser support illa 🙂
@ ರವಿ : ನಿಜ ರೀ , ಎಲ್ಲೆಲ್ಲಿ,ಎಷ್ಟೆಷ್ಟು ತಿನ್ನೋಕೆ ಸಾಧವೋ ಅದನ್ನೆಲ್ಲ ಬಿಡೋದಿಲ್ಲ ಈ ಮಂದಿ
@ಅರವಿಂದ್ : ನಿಂಬೆಯ ಶಕ್ತಿ ಕಾರ್ಯಪ್ಪ,ನೆಹರೂಗೆ ಗೊತ್ತಿರ್ಲಿಲ್ಲ ಮಾರಾಯ, ಇದು ನನ್ನ ಸಂ-ಶೋಧನೆ ಪೇಟೆಂಟ್ ನನ್ನದೇ ಆಯ್ತಾ 😉
@ಸಂತೋಷ : ನೀ ಎಂತ ಮಾರಾಯ,ಈಗಲೇ ನಿಂಬೆ ತೋಟ ಮಾಡಿಬಿಡು,ಮಂಡೆಬೆಚ್ಚ ಎಂತ ಮಾಡ್ಬೇಡ 😉
@ಇಂದು : ಅವ್ರು ಓದಿದರು ಅಷ್ಟರಲ್ಲೇ ಇದೆ ಬಿಡು ಬದಲಾಗೋದು.ಏನೋ ಒಂದು ಕಾಲ ಅನ್ನೋದು ಬಂದೆ ಬರುತ್ತೆ ಅನ್ನುತ್ತೆ ಮನಸು,ನೋಡೋಣ ಬಿಡು