ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 21, 2011

10

ಕಾಂಗ್ರೆಸ್ ಸಂಸದ ಭಾರತಕ್ಕೆ ಸೇರಿದವನಲ್ಲವೇ?

‍ನಿಲುಮೆ ಮೂಲಕ

ಮಹೇಶ ಪ್ರಸಾದ ನೀರ್ಕಜೆ

ಅರುಣಾಚಲ ಪ್ರದೇಶ ಪ್ರವಾಸದಲ್ಲಿರುವ ಬಾಬಾ ರಾಮ್ ದೇವ್ ಸಮಾವೇಶಕ್ಕೆ ಬಂದಿದ್ದ ಅಲ್ಲಿನ ಕಾಂಗ್ರೆಸ್ ಸಂಸದ ನಿನಾಂಗ್ ಎರಿಂಗ್ ಬಾಬಾ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂಬುದು ಇತ್ತೀಚಿನ ಸುದ್ದಿ. “ಯು ಬ್ಲಡಿ ಇಂಡಿಯನ್”, “ಸಾಲೆ ಕುತ್ತೇ, ಮೈಕ್ ತೋಡ್ ದೂಂಗಾ, ಸ್ಟೇಜ್ ಫೋಡ್ ದೂಂಗಾ, ಯೋಗಾ ಕರ್ನೇ ಆಯೀ ಹೇ, ಯೋಗಾ‌ ಕರ್. ಕರಪ್ಷನ್ ಕೆ ಬಾರೇ ಮೇ ಬೋಲೇಗಾ ತೋ ಮಾರ್ ಡಾಲೂಗಾ!” ಇತ್ಯಾದಿ. ಈ ಬಗ್ಗೆ ಸಾಕಷ್ಟು ವಿವರಗಳು ಸಿಗುತ್ತಿವೆ ಅಂತರ್ಜಾಲದಲ್ಲಿ. ನಮ್ಮ ಟಿವಿ ಮಾಧ್ಯಮಗಳು ಭಾರತ ಬಾಂಗ್ಲಾದೇಶ ಕ್ರಿಕೆಟ್ ಪಂದ್ಯದಲ್ಲಿ ಹೇಗೆ ಭಾರತ ಬಾಂಗ್ಲಾದೇಶದ ಮೇಲೆ ಸೇಡು ತೀರಿಸಿಕೊಂಡಿತು ಎಂದು ವಿಮರ್ಷಿಸುವುದರಲ್ಲಿ ಬ್ಯುಸಿಯಾಗಿದ್ದವು. ಅವುಗಳಿಗೆ ಹೇಗೆ ಈಶಾನ್ಯ ಭಾರತದ ಮಂದಿ ಹೇಗೆ ಭಾರತದ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಬೇಕಿಲ್ಲ. ಇರಲಿ. ಈಗ ಪ್ರಶ್ನೆಯೇನೆಂದರೆ ಕಾಂಗ್ರೆಸ್ ಸಂಸದ ಬಾಬಾರನ್ನು “ಯೂ ಬ್ಲಡಿ ಇಂಡಿಯನ್”ಅನ್ನಬೇಕಿದ್ದರೆ ಆತ ಇಂಡಿಯನ್ ಅಲ್ಲವೇ? ಎಲ್ಲಿಯವನು ಆತ? ಚೈನಾದವನೇ? ಅಥವಾ ಬೋಡೋ ದೇಶದವನೇ? ಅಥವಾ ಬೇರೆ ಪಾಶ್ಚಿಮಾತ್ಯ ದೇಶದವನೇ?

ನಿನಾಂಗ್ ಮಾತ್ರವಲ್ಲ, ಈಶಾನ್ಯ ಭಾರತದಲ್ಲಿ ಮಹುಪಾಲು ಜನ ತಾವು ಭಾರತೀಯರು ಎಂದು ಕರೆಸಿಕೊಳ್ಳುವುದಿಲ್ಲ. ಇದಕ್ಕೆ ಅಪವಾದಗಳಿರಬಹುದು, ಆದರೆ ಬಹುಪಾಲು ಸತ್ಯ ಇದು. ಸದ್ಯಕ್ಕೆ ಈ ನಿಂದನೆ ಪ್ರಕರಣವನ್ನು ಬಿಟ್ಟು ಸಾಮಾನ್ಯವಾಗಿ ಈಶಾನ್ಯ ಭಾರತದ ಜನ ಯಾಕೆ ಈ‌ರೀತಿ ಯೋಚಿಸುತ್ತಾರೋ ನೋಡೋಣ. ಭಾರತದ ಯಾವ ತಪ್ಪಿಗೆ ಈಶಾನ್ಯ ಭಾರತದ ಮಂದಿ ಈ ರೀತಿ ದ್ವೇಷ ಕಾರುತ್ತಾರೆ? ಉತ್ತರ ಹುಡುಕಿದರೆ ನಮ್ಮಲ್ಲೇ ಸುಲಭವಾಗಿ ಸಿಗುತ್ತದೆ. ಇಲ್ಲೇ ಬೆಂಗಳೂರಿನಲ್ಲಿ ಕಾಣಸಿಗುವ ಅಲ್ಲಿನ ಯುವಕ ಯುವತಿಯರನ್ನು ನಾವು ಎಷ್ಟು ವಿಚಿತ್ರವಾಗಿ ನೋಡುತ್ತೇವೆ ಯೋಚಿಸಿ. ಗೆಳೆಯರ ಬಳಗದಲ್ಲೇ ಎಷ್ಟೋ ಜನ ಇಂಥವರನ್ನು “ಚೈನೀಸ್, ಚೈನೀಸ್” ಎಂದು ಮೂದಲಿಸುವವರನ್ನು ನೋಡಿ ಉರಿದು ಹೋಗಿದ್ದೇನೆ. ಅಲ್ಲಾ ಸ್ವಾಮಿ, ಅವರು ಭಾರತದವರೇ ತಾನೆ, ಚೈನೀಸ್ ಎಂದು ಕರೆದು ಧೂರ್ತ ಚೈನಾ ದೇಶದ ವಾದವನ್ನೇ ಪುರಸ್ಕರಿಸುತ್ತಿದ್ದೀರಲ್ಲ ಎಂದು ಅನಿಸುತ್ತದೆ. ಅಂಥಾ ಮನೋಭಾವದಿಂದಾಗಿಯೇ ಅವರು ಇಂದು ನಮ್ಮನ್ನು ದ್ವೇಷಿಸುತ್ತಿದ್ದಾರೆ. ವಾಜಪೇಯಿ ಸರಕಾರವೊಂದನ್ನು ಹೊರತುಪಡಿಸಿ ಇಲ್ಲಿವರೆಗಿನ ಮಹಾನ್ ಭಾರತದ ಅತಿಮಹಾನ್ ಸರಕಾರಗಳು ಈಶಾನ್ಯವನ್ನು ಎಷ್ಟು ಕಡೆಗಣಿಸಿದ್ದಾರೆದಂದು ತಿಳಿದರೆ ಅಲ್ಲಿನವರು ಏಕೆ ಸಿಡಿದು ಬೀಳುತ್ತಾರೆಂದು ಅರ್ಥವಾಗುತ್ತದೆ. ಮೊದಲನೆಯದಾಗಿ ಅಲ್ಲಿನ ಬಂಡುಕೋರರಿಂದ ಜನರನ್ನು ರಕ್ಷಿಸಲು ಸರಕಾರ ಇಷ್ಟು ವರ್ಷಗಳಿಂದಲೂ ವಿಫಲವಾಗಿದೆ. ಚೈನಾ ಕಡೆಯಿಂದ ಮಾರಕಾಸ್ತ್ರಗಳನ್ನು ತರುವ ಉಗ್ರರನ್ನು ನೋಡಿಯೂ ಬಿಎಸ್ಸೆಫ್ ಯೋಧ ಸುಮ್ಮನಿರುತ್ತಾನೆ. ಏಕೆ ಹೇಳಿ, ಆ ಉಗ್ರ ಚೈನಾದಿಂದ ತರುತ್ತಿರುವುದು ಅತ್ಯಾಧುನಿಕ ರೈಫಲ್. ಯೋಧನ ಕೈಯಲ್ಲಿರುವುದು ಸರಿಸಾಟಿಯಲ್ಲದ ಇನ್ಸಾಸ್ ತೋಪು. ಉಗ್ರರನ್ನು ವಿರೋಧಿಸಿದರೆ ಈತನಿಗೆ ಉಳಿವಿಲ್ಲ. ಆಧುನಿಕ ಶಸ್ತ್ರಾಸ್ತ್ರ ಸರಕಾರ ಕೊಡಿಸುತ್ತಿಲ್ಲ. ತನ್ನ ಜನರನ್ನೇ ರಕ್ಷಿಸಲು ಸಾಧ್ಯವಾಗದ ಕುನ್ನಿ ಸರಕಾರವನ್ನು ಅಲ್ಲಿನ ಜನ ಯಾಕಾದರೂ ಗೌರವಿಸುತ್ತಾರೆ? ಇದು ಎಲ್ಲ ಕಡೆ ಕೇಳಿ ಬರುವ ಪ್ರಶ್ನೆ.

ಮುಖ್ಯ ಭಾರತದಿಂದ ಯಾರೇ ಆದರೂ ಅಲ್ಲಿನ ಮಕ್ಕಳನ್ನು ಕರೆತಂದು ಶಿಕ್ಷಣ ಕೊಡಿಸಲು ಮುಂದೆ ಬಂದರೆ ಅಲ್ಲಿನವರು ತಮ್ಮ ಮಕ್ಕಳನ್ನು ಕಳಿಸಲು ತಯಾರಿದ್ದಾರಂತೆ. ಅವರಿಗೂ‌ ತಮ್ಮ ಮಕ್ಕಳು ಕಲಿತು ಮುಂದೆ ಬರಬೇಕೆಂದು ಆಸೆ ಇರುವುದು ಸಹಜ ತಾನೆ. ಆದರೆ ಸರಕಾರ ಅಥವಾ ಜನ ಇದನ್ನು ಪ್ರೋತ್ಸಾಹಿಸುತ್ತದೆಯೇ, ಖಂಡಿತಾ ಇಲ್ಲ. ಸಂಘಪರಿವಾರದ ಕೆಲವು ಜನ ಅಲ್ಲಿನ ಕೆಲವು ಮಕ್ಕಳನ್ನು ಕರೆತಂದು ತಮ್ಮ ತಮ್ಮ ಮನೆಗಳಲ್ಲಿ, ಸಣ್ಣ ಪುಟ್ಟ ಶಾಲೆಗಳಲ್ಲಿಟ್ಟುಕೊಂಡು ಓದು ಬರಹ ಕಲಿಸುತ್ತಿದ್ದಾರಂತೆ. ಈ ಬಗ್ಗೆ ಕೆಲ ಸಮಯಗಳ ಹಿಂದೆ ಪತ್ರಿಕೆಗಳಲ್ಲಿ ವರದಿ ಬಂದಿತ್ತು – ಅವರೇನೋ ಚೈಲ್ಡ್ ಟ್ರಾಫಿಕಿಂಗ್ ಮಾಡುತ್ತಿದ್ದಾರೆ ಹಾಗೆ ಹೀಗೆ ಅಂತ. ಹೆತ್ತವರ ಒಪ್ಪಿಗೆ ಮೇರೆಗೆ ಮಕ್ಕಳನ್ನು ಕರೆತಂದರೂ ಕೂಡ ಅದು ಟ್ರಾಫಿಕಿಂಗ್ ಆಗುತ್ತದೆಯೇ? ಈ ಪತ್ರಿಕೆಗಳಲ್ಲಿ ಬರೆಯುವವರು ಅಥವಾ ಅವರ ಕೈಯಲ್ಲಿ ಬರೆಸುವವರು ಮನುಷ್ಯರೋ ಅಥವಾ‌ ಕಲ್ಲು  ಹೃದಯದವರೋ ಎಂದು ಇಂಥಾ ಸುದ್ದಿಗಳನ್ನು ಓದಿದರೆ ಸಂಶಯವಾಗುತ್ತದೆ.

ಪರಿಸ್ಥಿತಿ ಹೀಗೆಯೇ ಮುಂದುವರೆದರೆ ನಾಳೆ ಬಾಬಾ ಅಥವಾ ಯಾರೇ ಆದರೂ ಈಶಾನ್ಯ ಭಾರತಕ್ಕೆ ಹೋಗಲು ವೀಸಾ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬಂದರೆ ಆಶ್ಚರ್ಯವಿಲ್ಲ. ಮೇರಾ ಭಾರತ್ ಮಹಾನ್! ಮಾತು ಶೀರ್ಷಿಕೆಯ ವಿಷಯಕ್ಕಿಂತ ಬಹು ದೂರ ಹೋಯಿತು. ಆದರೆ Symptoms ಗಳ ಬಗ್ಗೆಯೇ ಬರೆಯುವುದಕ್ಕಿಂತ ಅದರ ಮೂಲ ಹುಡುಕುವುದು ಮುಖ್ಯ. ಏನಂತೀರಿ?

ಚಿತ್ರ ಕೃಪೆ : ಐನ್ಯೂಸ್ ಇಂಡಿಯ

10 ಟಿಪ್ಪಣಿಗಳು Post a comment
  1. mpneerkaje's avatar
    ಫೆಬ್ರ 21 2011

    ಅಕ್ಷರ ಬ್ರಹ್ಮ ಮುನಿಸಿಕೊಂಡಿದ್ದಾನೆ.

    “ವಿಮರ್ಷಿಸುವುದರಲ್ಲಿ” ಎಂಬುದನ್ನು “ವಿಮರ್ಶಿಸುವುದರಲ್ಲಿ ” ಎಂಬುದಾಗಿಯೂ, “ಅವುಗಳಿಗೆ ಹೇಗೆ ಈಶಾನ್ಯ ಭಾರತದ ಮಂದಿ ಹೇಗೆ ಭಾರತದ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಬೇಕಿಲ್ಲ” ಎನ್ನುವುದನ್ನು “ಅವುಗಳಿಗೆ ಯಾಕೆ ಈಶಾನ್ಯ ಭಾರತದ ಮಂದಿ ಭಾರತದ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಬೇಕಿಲ್ಲ” ಎಂದು ಓದಿಕೊಳ್ಳಬೇಕಾಗಿಯೂ ವಿನಂತಿ.

    ಉತ್ತರ
  2. sriharsha's avatar
    sriharsha
    ಫೆಬ್ರ 21 2011

    ಹೋಗಲಿ ಬಿಡಿ ಟೆನ್ಶನ್ ಯಾಕೆ? ಅಲ್ಲಿ ಒಂದು ದೇಶ ಆಗಲಿ. ನಾವೂ ಉದ್ಧಾರ ಆಗೋಣ ಅವರೂ ಉದ್ಧಾರ ಆಗಲಿ.
    ದೊಡ್ಡ ದೇಶ ಇಟ್ಟುಕೊಂಡು ಮೇಂಟೇನ್ ಮಾಡಲಾಗದೇ ಒದ್ದಾಡುವದಕ್ಕಿಂತ ಚಿಕ್ಕ ಚಿಕ್ಕದಾಗಿ ವಿಭಜಿಸಿ ಪ್ರತಿಯೊಬ್ಬರಿಗೂ ಸ್ವಾಯತ್ತೆ ಕೊಟ್ಟು ರಕ್ಷಣೆ ಮತ್ತು ವಿತ್ತೀಯ ವಿಷಯಗಳಲ್ಲಿ ಒಂದು common understanding ಗೆ ಬಂದು ಎಲ್ಲರೂ ಸುಖವಾಗಿದ್ದರಾಯಿತು.
    ಆಯಾ ಪ್ರದೇಶದ ತೊಂದರೆಗಳು ಅಲ್ಲಿನವರಿಗೇ ಗೊತ್ತಿರುತ್ತದೆ. ಹಾಗಾಗಿ ಆಡಳಿತ ಅಲ್ಲಿನವರೆ ಮಾಡಬೇಕು, ಯಾವನೋ ತಿಳಿಯದವನು ಬಂದು ಸತ್ತೆಯ ಮೇಲೆ ಕೂತರೆ ಹಿಂಗೇ ಆಗೋದು.
    ಫಲವತ್ತಾದ ಭೂಮಿಯ ಪಂಜಾಬದ ವ್ಯಕ್ತಿಗೆ ಗುಡ್ಡಗಾಡಿನ ಪ್ರದೇಶ ಅಸ್ಸಾಂ ಬಗ್ಗೆ ಹೇಗ್ರಿ ಗೊತ್ತಿರುತ್ತೆ? ಉತ್ತರ ಪ್ರದೇಶದ ವಾಜಪೇಯಿಗೆ ಕೇರಳದೋರ ಕಷ್ಟ ಅರಿವಾಗುತ್ತಾ?
    ಶಿವಮೊಗ್ಗದ ಯಡಿಯೂರಪ್ಪನವರಿಗೆ ಲೋಕಲ್ ಗುಲಬರ್ಗಾದ ತೊಂದರೆಗಳೇ ಗೊತ್ತಾಗಲ್ಲ ಇನ್ನು ಯಾವುದೋ ಮೂಲೆಯ ಜನರ ಬಗ್ಗೆ ಇನ್ನಾವುದೋ ಮೂಲೆಯ ಜನ ಅರಿತುಕೋಬೇಕು ಅಂತ ಬಯಸೋದು ಯಾವ ನ್ಯಾಯ?
    ಅಸಲಿಗೆ ಭಾರತ ಅನ್ನೋ ‘ಬ್ರಾಂಡ್’ ಬೇಕೇ ಬೇಕಾ ಅಂತ ನನ್ನ ಪ್ರಶ್ನೆ.

    ಉತ್ತರ
    • ರವಿ's avatar
      Ravi
      ಫೆಬ್ರ 21 2011

      ಶ್ರೀಹರ್ಷ ಅವರೇ, ನೀವೇನು ಮಾತಾಡುತ್ತಿದ್ದೀರಿ ಎಂದು ಗೊತ್ತಿದೆಯೇ? ಮಾಡಿದ ತಪ್ಪನ್ನು ಸರಿಪಡಿಸುವ ಬದಲು, ದೇಶ ವಿಭಜನೆ ಎಷ್ಟು ಸರಿ? ಹೀಗೆ ವಿಭಜಿಸುತ್ತ ಹೋದರೆ ಎಷ್ಟು “ಬ್ರಾಂಡು”ಗಳಾಗಬಹುದು ಯೋಚನೆ ಇದೆಯೇ? ಮೂಗು ಸೋರುತ್ತಿದ್ದರೆ ಮೂಗನ್ನೇ ಕತ್ತರಿಸಿ ಎನ್ನುತ್ತಿದ್ದಿರಿ. ಯೋಚಿಸಿ ಮಾತಾಡಿ.

      ಉತ್ತರ
    • mpneerkaje's avatar
      ಫೆಬ್ರ 21 2011

      ಸ್ವಾಯತ್ತತೆ ಎಂದರೆ ಏನು ನಿಮ್ಮ ಪ್ರಕಾರ? ಆಡಳಿತ ವಿಕೇಂದ್ರೀಕರಣ ಎಂದರೆ ಒಪ್ಪಬಹುದು. ಭಾರತ ಎಂಬ ಬ್ರಾಂಡ್ ಅನ್ನು ಕಿತ್ತು ಹಾಕುವುದೇ ನಿಮ್ಮ ಪ್ರಕಾರ ಸ್ವಾಯತ್ತತೆ ಅಂತ ಇದ್ದರೆ ಅದನ್ನು ಒಪ್ಪಲಾಗದು.

      ಉತ್ತರ
    • Narendra Kumar.S.S's avatar
      Narendra Kumar.S.S
      ಫೆಬ್ರ 21 2011

      sriharsha> ದೊಡ್ಡ ದೇಶ ಇಟ್ಟುಕೊಂಡು ಮೇಂಟೇನ್ ಮಾಡಲಾಗದೇ ಒದ್ದಾಡುವದಕ್ಕಿಂತ ಚಿಕ್ಕ ಚಿಕ್ಕದಾಗಿ ವಿಭಜಿಸಿ
      ಭೇಷ್ ಶ್ರೀಹರ್ಷ. ನಿಮ್ಮ ಪರಿಹಾರದಿಂದ ಜಗತ್ತೆಲ್ಲವೂ ಶಾಂತಿಯ ಸಮುದ್ರದಲ್ಲಿ ತೋಲಾಡಬಹುದಲ್ಲವೇ?

      ನೀವು ಮತ್ತೊಂದು ಸ್ವಲ್ಪ ವಿವರಕ್ಕೆ ಹೋಗಬೇಕಾಗಿತ್ತು.
      ದೇಶ ಎಷ್ಟು ಚಿಕ್ಕದಾಗಿದ್ದರೆ ಒಳ್ಳೆಯದು?
      sriharsha> ಶಿವಮೊಗ್ಗದ ಯಡಿಯೂರಪ್ಪನವರಿಗೆ ಲೋಕಲ್ ಗುಲಬರ್ಗಾದ ತೊಂದರೆಗಳೇ ಗೊತ್ತಾಗಲ್ಲ
      ಕರ್ನಾಟಕ ಒಂದು ದೇಶವಾಗಬೇಕೋ ಅಥವಾ ಬೆಂಗಳೂರೇ ಒಂದು ದೇಶವಾಗಬೇಕೊ?
      ಶಿವಮೊಗ್ಗೆಯ ಯೆಡಿಯೂರಪ್ಪನವರಿಗೆ ಗುಲ್ಬರ್ಗಾದ ಸಮಸ್ಯೆ ತಿಳಿಯುವುದಿಲ್ಲ;
      ರಾಜಾಜಿನಗರದ ಸುರೇಶ್ ಕುಮಾರರಿಗೆ ಜಯನಗರ ದೂರ – ಅಲ್ಲಿನ ಸಮಸ್ಯೆ ತಿಳಿಯುವುದಿಲ್ಲ.
      ಈಗ ಬೆಂಗಳೂರನ್ನು ಒಂದು ದೇಶ ಮಾಡಿದರೂ ಸಮಸ್ಯೆ. ಪ್ರತಿಯೊಂದು ವಾರ್ಡು ಒಂದು ದೇಶವಾಗಬೇಕಲ್ಲವೇ?
      ಆದರೆ, ಇಲ್ಲೂ ಸಮಸ್ಯೆ ಇದೆ!
      ನಮ್ಮ ವಾರ್ಡನಲ್ಲಿನ ಕಾರ್ಪೊರೇಟರ್ ನಾನಿರುವ ರಸ್ತೆಯಲ್ಲಿ ಕೆಲಸ ಮಾಡಿಸುತ್ತಿಲ್ಲ.
      ಏಕೆಂದರೆ, ಅವನ ಮನೆಯಿರುವುದು ವಾರ್ಡಿನ ಮತ್ತೊಂದು ತುದಿಯಲ್ಲಿ, ಮತ್ತೊಂದು ರಸ್ತೆಯಲ್ಲಿ.
      ಪ್ರಾಯಶಃ ಪ್ರತಿಯೊಂದು ರಸ್ತೆಯನ್ನೂ ದೇಶ ಮಾಡಿಬಿಟ್ಟರ ಸುಲಭ ಎನ್ನಿಸುತ್ತದಲ್ಲವೇ!?

      ನಿಮ್ಮ ಪರಿಹಾರ ಅತ್ಯಂತ ಉತ್ತಮವಾಗಿದೆ ಮತ್ತು ಅತ್ಯಾಧುನಿಕವಾಗಿದೆ.
      ಅದಕ್ಕೆ ಭಾರತ ರತ್ನವೋ ಅಥವಾ ನೊಬೆಲ್ ಪಾರಿತೋಷಕವೋ ಸಿಗಲೇಬೇಕು!
      ಇಂತಹ ಪ್ರತಿಭೆಗಳನ್ನು ದೇಶದಲ್ಲಿ ಗುರುತಿಸಬೇಕು…….ಯಾವ ದೇಶದಲ್ಲಿ……ಪ್ರಾಯಶಃ ನಿಮ್ಮ ದೇಶದಲ್ಲಿ ನೀವೇ ಪ್ರಧಾನಿಯೋ, ಉಪಪ್ರಧಾನಿಯೋ ಅಥವಾ ಇನ್ಯಾವುದೋ ಖಾ(ಕ್ಯಾ)ತೆ ಮಂತ್ರಿಯೋ ಆಗಿರುವಿರಿ…..ಪ್ರಶಸ್ತಿ ಗಿಟ್ಟಿಸುವುದು ಬಹಳ ಸುಲಭವೇ ಆಯಿತು.
      ಒಟ್ಟಿನಲ್ಲಿ ನೀವೂ ಬಹಳ ಮುಖ್ಯ ವ್ಯಕ್ತಿಯಾಗಿಬಿಟ್ಟಿರಿ!

      ಉತ್ತರ
    • shanuboga shastri's avatar
      ಫೆಬ್ರ 22 2011

      sriharsha avare neevu desha na dose andukondiddira hege..tundu tundu madoke:P

      ಉತ್ತರ
  3. sriharsha salimath's avatar
    sriharsha salimath
    ಫೆಬ್ರ 22 2011

    ಗೊತ್ತಿದ್ದ ವಿರೋಧವೇ!
    ಇವೆಲ್ಲ ವಿಚಲಿತ ಗೊಳಿಸಲ್ಲ ಬಿಡಿ ನನ್ನ.

    ಮಾತು ಇಷ್ಟೇ ಸ್ವಾಮಿ.

    ಸ್ಥಳೀಯ ಸರಕಾರ ಆಡಳಿತ ನಡೆಸಬೇಕು.
    ಆಯಾ ನಾಡಿನ ಆಡಳಿತ ಅಲ್ಲಿಯವರ ಕೈಲೆ ಇರಬೇಕು.
    ಅಲ್ಲಿನ ತೆರಿಗೆ ಅಲ್ಲಿನ ಅಭಿವೃದ್ದಿಗೆ ಬಳಕೆಯಾಗಬೇಕು.

    ಈಗ ಆಗುತ್ತಿರುವುದೇನು? ನಾವು ದುಡಿದ ಹಣ ತೆರಿಗೆಯಾಗಿ ಕೇಂದ್ರಕ್ಕೆ ಸೇರಿ ಬಿಹಾರ ಉತ್ತರ ಪ್ರದೇಶದ ಬ್ರಷ್ಟಾಚಾರಿಗಳ ಕೈಗೆ ಸೇರುತ್ತಿದೆ.
    ಮಾಯಾವತಿ ತಮ್ಮ ಪ್ರತಿಮೆ ನಿಲ್ಲಿಸುತ್ತಿರುವುದು ನಮ್ಮ ಹಣದಲ್ಲಿ.

    ಸ್ವಾಯತ್ತೆ ಎಂದರೆ ನಮ್ಮ ತೆರಿಗೆ ನಮ್ಮ ಆಡಳಿತ.

    ರಕ್ಷಣೆಗಾಗಿ ಮತ್ತು ವಿತ್ತೀಯ ಏಕರೂಪತೆಗಾಗಿ ರಾಜ್ಯಗಳ ನಡುವೆ ಒಡಂಬಡಿಕೆ ಮಾಡಿಕೊಳ್ಳಬಹುದು. ಇದಕ್ಕಾಗಿ ಸ್ವಲ್ಪ ಹಣವನ್ನು ಕಪ್ಪ ಅಥವಾ ತೆರಿಗೆ ರೂಪವಾಗಿ ಕೇಂದ್ರಕ್ಕೆ ಕೊಡಬಹುದು.

    ಇವೆರಡು ಬಿಟ್ಟು ಉಳಿದೆಲ್ಲ ಅಂದರೆ ಕೃಷಿ, ತೆರಿಗೆ ಪದ್ಧತಿ, ವಿದೇಶಿ ಬಂಡವಾಳ, ಕೈಗಾರಿಕಾ ನೀತಿ ಇತ್ಯಾದಿಗಳೆಲ್ಲ ಸ್ಥಳೀಯ ಸರಕಾರಗಳ ಹಿಡಿತದಲ್ಲಿರಬೇಕು. ಇದನ್ನೇ ಸ್ವಾಯತ್ತೆ ಎಂದು ಕರೆದೆ.
    ಇದಲ್ಲದೆ ನಮಮ್ ಭೂಭಾಗವನ್ನು ಭಾರತ ಎಂದು ಕರೆದರೂ ಒಂದೇ ಇಂಗ್ಲೆಂಡ್ ಎಂದು ಕರೆದರೂ ಒಂದೇ.

    ಉತ್ತರ
    • Keshava's avatar
      Keshava
      ಫೆಬ್ರ 22 2011

      ಸ್ವಾಮಿ, ಶ್ರೀಹರ್ಷರವರೇ, ತಮ್ಮ ವಯಸ್ಸೇ‍‍ನೋ ಗೊತ್ತಿಲ್ಲ, ಇತಿಹಾಸ ಓದಿಲ್ಲಾ ಅನ್ನೋದು ಗೊತ್ತಾಗುತ್ತ, ದೇಶ ತುಂಡು ಮಾಡಿದರೆ, ಪಾಳೇಗಾರಿಕೆವರೆಗೂ ತುಂಡು ಮಾಡಬಹುದು. ಬೀದಿ ಬೀದಿಗೂ ಒಬ್ಬ ಪಾಳೇಗಾರ ಹುಟ್ಟುತ್ತಾne.

      ಉತ್ತರ
  4. Narendra Kumar.S.S's avatar
    Narendra Kumar.S.S
    ಫೆಬ್ರ 22 2011

    > ಇದಲ್ಲದೆ ನಮಮ್ ಭೂಭಾಗವನ್ನು ಭಾರತ ಎಂದು ಕರೆದರೂ ಒಂದೇ ಇಂಗ್ಲೆಂಡ್ ಎಂದು ಕರೆದರೂ ಒಂದೇ
    ಕನ್ನಡವನ್ನು ಕನ್ನಡ ಎಂದರೂ ಒಂದೇ ಇಂಗ್ಲಿಷ್ ಎಂದು ಕರೆದರೂ ಒಂದೇ.
    ಕರ್ನಾಟಕವನ್ನು ಕರ್ನಾಟಕ ಎಂದರೂ ಒಂದೇ, ಬಿಹಾರ್ ಎಂದರೂ ಒಂದೇ.
    ತಾಯಿಯನ್ನು ತಾಯಿ ಅಂದರೂ ಒಂದೇ ತಂದೆ ಎಂದರೂ ಒಂದೇ!

    ಮೇಲೆ ಹೇಳಿದ್ದು ಹಾಸ್ಯಕ್ಕಾಗಿ – ಅದನ್ನು ಅದೇ ರೀತಿ ತೆಗೆದುಕೊಳ್ಳುವಿರೆಂದು ಭಾವಿಸುವೆ.
    ಅದಿರಲಿ, ನೀವು ಹೇಳುತ್ತಿರುವ “ಸ್ಥಳೀಯ ಸರಕಾರ”ದಿಂದ ನೀವು ಹೇಳುತ್ತಿರುವ ಸಮಸ್ಯೆಗಳು ಹೇಗೆ ಪರಿಹಾರವಾಗುತ್ತವೆ?
    ನೀವೇ ಹೇಳಿದಂತೆ ಶಿವಮೊಗ್ಗದ ಯೆಡ್ಯೂರಪ್ಪನವರಿಗೆ ಗುಲ್ಬರ್ಗಾ ತಿಳಿದಿಲ್ಲ.
    ಅಂದರೆ, ಕರ್ನಾಟಕ ರಾಜ್ಯವೂ “ಸ್ಥಳೀಯ” ಆಗಲಾರದು.
    ನಿಮ್ಮ “ಸ್ಥಳೀಯ” ಪದ ಪರಿಭಾಷೆಯನ್ನು ಸ್ವಲ್ಪ ವಿವರಿಸಿದರೆ ನಿಮ್ಮ ಪರಿಹಾರವನ್ನೂ ಅರ್ಥ ಮಾಡಿಕೊಳ್ಳಬಹುದು.

    ಉತ್ತರ
  5. ರವಿ's avatar
    Ravi
    ಫೆಬ್ರ 22 2011

    ಶ್ರೀ ಹರ್ಷ, ನಿಮ್ಮ ಹೇಳಿಕೆಯನ್ನು ಸಾಧಿಸಲೋಸುಗ ಈ ರೀತಿ ಮಾತಾಡುತ್ತೀರಿ. ಸ್ಥಳೀಯಾಡಳಿತ ಭಾರತದಲ್ಲಿ ಗ್ರಾಮಮಟ್ಟದ ವರೆಗೂ ಅಳವಡಿಸಲಾಗಿದೆ. ಇದಕ್ಕಿಂತಲೂ ಕೆಳಗೆ ಬಹುಷಃ ಸಾಧ್ಯವಿಲ್ಲ. ಇನ್ನು ಉತ್ತರ ಭಾರತದ ಭ್ರಷ್ಟಾಚಾರಿಗಳ ಮಾತು ಯಾಕೆ, ನಮ್ಮಲ್ಲಿ ಯಾಕೆ ಕಡಿಮೆಯೇ? ನಾವು ಜನ ಸಾಮಾನ್ಯರು ನಮ್ಮ ತಾಕತ್ತಿಗೂ ಮೀರಿ ಭ್ರಷ್ಟಾಚಾರ ಮಾಡುತ್ತಿಲ್ಲವೇ? ಚಿಲ್ಲರೆ ಕೊಡದ ಬಸ್ ಕಂಡಕ್ಟರ್ ನಿಂದ ತೆರಿಗೆ ವಂಚನೆ ಮಾಡುವ ಸಾಫ್ಟ್ವೇರ್ ಇಂಜಿನಿಯರ್ ಗಳವರೆಗೂ ಎಲ್ಲರೂ ಭ್ರಷ್ಟರೇ. ನಮ್ಮೆಲ್ಲರ ರಕ್ತದಲ್ಲೇ ಬಂದುಬಿಟ್ಟಿದೆ ಅದು. ಮನಪರಿವರ್ತನೆಯಾಗದೆ ಭ್ರಷ್ಟಾಚಾರ ನಿಲ್ಲಲ್ಲ, ನಿಮ್ಮ ಸ್ಥಳೀಯಾಡಳಿತದಲ್ಲೂ!
    “ಇದಲ್ಲದೆ ನಮಮ್ ಭೂಭಾಗವನ್ನು ಭಾರತ ಎಂದು ಕರೆದರೂ ಒಂದೇ ಇಂಗ್ಲೆಂಡ್ ಎಂದು ಕರೆದರೂ ಒಂದೇ” ಇದೇನೋ ಸ್ವಾಮೀ ಅರ್ಥ ಆಗಲ್ಲ. ಅದೇನು ತಲೆಯಲ್ಲಿಟ್ಟುಕೊಂಡು ಮಾತಾಡುತ್ತೀರೋ?

    ಉತ್ತರ

Leave a reply to Keshava ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments