ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 21, 2011

31

ಯಾರಿಗೂ ಅರ್ಥವಾಗದ ಬಾಪೂ …!

‍ನಿಲುಮೆ ಮೂಲಕ

ಶ್ರೀಹರ್ಷ ಸಾಲಿಮಠ

ಇದನ್ನು ಬೆಳಗೆರೆ ಕೃಷ್ಣಶಾಸ್ತ್ರಿಗಳು ಸ್ವತಃ ನನಗೆ ಹೇಳಿದ್ದು. ಈ ಘಟನೆ ನಡೆಯುವಾಗ ಶಾಸ್ತ್ರಿಗಳು ಖುದ್ದು ಎದುರಿಗೇ ಇದ್ದರಂತೆ.
ಸ್ವಾತಂತ್ರ್ಯದ ಸಮಯ. ಭಾರತದ ಪ್ರಧಾನಿ ಯಾರಾಗಬೇಕೆಂದು ನಿರ್ಧರಿಸಲು ನಡೆದ ಶಾಸನ ಸಭೆಯಲ್ಲಿ ನಡೆದ ಚುನಾವಣೆಯಲ್ಲಿ ನೆಹರೂ ಸರ್ದಾರ್ ಪಟೇಲರ ಎದುರಿಗೆ ೧೧-೧ ಮತಗಳ ಅಂತರದಿಂದ ಸೋತಿದ್ದರು. ಸ್ವಯಂ ನೆಹರೂ ಬಿಟ್ಟು ಬೇರೆ ಯಾರೂ ನೆಹರೂರವರಿಗೆ ಮತ ಹಾಕಿರಲಿಲ್ಲ!
ಇದಾದ ಮರುದಿನ ನೆಹರೂ ಗಾಂಧೀಜಿಯ ಬಳಿ ಬಂದು ನಿಮ್ಮ ಪ್ರಭಾವ ಬಳಸಿ ತಮ್ಮನ್ನು ಪ್ರಧಾನಿಯನ್ನಾಗಿ ಮಾಡಬೇಕೆಂದು ಕೇಳಿಕೊಂಡರು. ಅದಕ್ಕೆ ಗಾಂಧೀಜಿ “you are independent now. think independently. take independent decisions. why do you need my help?” ಎಂದರು. ನೆಹರೂಗೆ ನಿರಾಶೆಯಾಯಿತು. ವಾಪಸು ಹೊರಡಲು ಅನುವಾದರು. ಎರಡು ಹೆಜ್ಜೆ ಬಾಗಿಲ ದಿಕ್ಕಿನಲ್ಲಿ ನಡೆದು ಗಾಂಧೀಜಿಯ ತಿರುಗಿ “If I don’t become prime minister I will burn this country”ಎಂದರು. ಗಾಂಧೀಜಿ ಉತ್ತರಿಸದೆ ತಮ್ಮ ಕೆಲಸದಲ್ಲಿ ಮಗ್ನರಾದರು. ಮರುದಿನ ಸರ್ದಾರ್ ಪಟೇಲರು ಗಾಂಧೀಜಿಯವರ ಬಳಿ ಬಂದರು. ಸ್ವಲ್ಪ ಮಾತಾದ ಮೇಲೆ “ನೆಹರೂ ಇಲ್ಲಿಗೆ ಬಂದಿದ್ದರೆ?” ಎಂದು ಕೇಳಿದರು.
ಬಾಪೂ “ಹೌದು” ಎಂದರು.
“ಏನು ಹೇಳಿದರು ನೆಹರೂ?”
ಗಾಂಧೀಜಿ ಎಂದೂ ಸುಳ್ಳು ಹೇಳುವವರಲ್ಲ. ತಮ್ಮಿಬ್ಬರ ನಡುವೆ ನಡೆದ ಸಂಭಾಷಣೆಯನ್ನು ತಿಳಿಸಿ ಕೊನೆಗೆ ಹೋಗುವಾಗ ” I will burn this country”ಎಂದು ಹೇಳಿದರು ಎಂಬ ವರದಿ ಒಪ್ಪಿಸಿದರು.
ಪಟೇಲರ ಮುಖ ಗಂಭೀರವಾಯಿತು. ಅವರು ಗಾಂಧೀಜಿಯವರನ್ನು “ಇದಕ್ಕೆ ನೀವು ನನಗೆ ಎನು ಹೇಳುತ್ತೀರಿ ?” ಎಂದು ಕೇಳಿದರು.
ಗಾಂಧೀಜಿಯದ್ದು ಅದೇ ಉತ್ತರ “ಅವರಿಗೆ ಎನು ಹೇಳಿದೆನೋ ನಿಮಗೂ ಅದೇ ಅನ್ವಯಿಸುತ್ತದೆ you are independent now. think independently. take independent decisions” ಎಂದು ತಮ್ಮ ಚರಕದಲ್ಲಿ ಮಗ್ನರಾದರು ಬಾಪೂ.
ಸಲ್ಪ ಹೊತ್ತು ಯೋಚಿಸಿದ ಪಟೇಲರು. “I will not allow this country to burn” ಎಂದು ಹೇಳಿ ಎದ್ದು ಹೋದರು.
ಗಾಂಧೀಜಿಯೇ ನೆಹರೂರನ್ನು ಅಧಿಕಾರ ಪ್ರಯೋಗಿಸಿ ಪ್ರಧಾನಿಯನ್ನಾಗಿ ಮಾಡಿದ್ದು. ದೇಶ ವಿಭಜನೆಗೆ ಕಾರಣವಾಗಿದ್ದು ಎಂದು ಆರೋಪಿಸುವವರಿಗೆ ಮೇಲಿನ ಘಟನೆ ಉತ್ತರವೀಯಬಹುದು.
” ನೆಹರೂ ಪಾಶ್ಚಾತ್ಯ ನಾಗರೀಕತೆಯ ಆರಾಧಕರಾಗಿದ್ದರು. ಇದು ಗೊತ್ತಿದ್ದೂ ಗಾಂಧೀಜಿ ಯಾಕೆ ಅವರನ್ನು ಹತ್ತಿರ ಬಿಟ್ಟುಕೊಂಡರು?” ಎಂದು ನಾನು ಶಾಸ್ತ್ರಿಗಳನ್ನು ಕೇಳಿದೆ.
” ಗಾಂಧೀಜಿ ಯಾರನ್ನೂ ಹತ್ತಿರ ಬಾ ಎಂದು ಕರೆಯಲೂ ಇಲ್ಲ. ದೂರ ಹೋಗು ಎಂದು ನೂಕಲೂ ಇಲ್ಲ. ಅವರು ಎಲ್ಲರಿಗೂ ಮುಕ್ತವಾಗಿದ್ದರು. ನೆಹರೂ ಮಾಡಿದ ತಪ್ಪುಗಳಿಗೆ ಗಾಂಧೀಜಿಯವರನ್ನು ಹೊಣೆ ಮಾಡುವುದು ಸರಿಯಲ್ಲ” ಎಂದು ಉತ್ತರ ಬಂತು ಶಾಸ್ತ್ರಿಗಳಿಂದ.
ಸ್ವತಂತ್ರ್ಯಾನಂತರ ಗಾಂಧೀಜಿ ಆಶ್ರಮಕ್ಕೆ ಬ್ರಿಟಿಷ್ ಪತ್ರಕರ್ತರೊಬ್ಬರು ಭೇಟಿ ನೀಡಿದ್ದರು. ಆಗ ತಾನೆ ಉಪವಾಸದಿಂದ ಚೇತರಿಸಿಕೊಂಡು ಮಂಚದ ಮೇಲೆ ಮಲಗಿದ್ದ ಗಾಂಧೀಜಿಯವರನ್ನು “ಹೇಗಿದ್ದೀರಿ?” ಎಂದು ಕೇಳಿದರು. ಅದಕ್ಕೆ ಗಾಂಧೀಜಿ “ಹೇಗಿದ್ದೀರಿ ಎಂದು ಕೇಳುತ್ತಿದ್ದಿರಲ್ಲಾ? ನನ್ನ ದೇಹವನ್ನು ನೋಡಿ. ಹಿಂದುಸ್ತಾನ ಪಾಕಿಸ್ತಾನ ಎಂದು ಎರಡು ಭಾಗವಾಗಿದೆ. ದೇಹದ ಒಂದು ಭಾಗವನ್ನು ಕಳೆದುಕೊಂಡು ನಾನು ನರಳುತ್ತಿರುವುದು ನಿಮಗೆ ಕಾಣದೇ ? ” ಎಂದು ನೋವಿನಿಂದ ಉತ್ತರಿಸಿದರು.
ಇನ್ನೊಂದು ಘಟನೆ. ಇದು ಬ್ರಿಟಿಷ್ ಗೆಜೆಟಿಯರ್ ೧೯೩೧ ರಲ್ಲೂ ಪ್ರಕಟವಾಗಿದೆ. ದುಂಡು ಮೇಜಿನ ಪರಿಷತ್ತಿನಲ್ಲಿ ಪಾಲ್ಗೊಳ್ಳಲು ಗಾಂಧೀಜಿ ಬ್ರಿಟನ್ ಗೆ ಹೋದರು. ಈ ಭೇಟಿಯ ಸಮಯದಲ್ಲಿ ಅನೇಕ ಘಟನೆಗಳು ನಡೆದಿವೆಯಾದರೂ ಮುಖ್ಯವಾಗಿ ಇದನ್ನು ಉಲ್ಲೇಖಿಸುತ್ತಿದ್ದೇನೆ. ಬ್ರಿಟನ್ ನ ರಾಜನ ಆಹ್ವಾನದ ಮೇರೆಗೆ ಅರಮನೆಗೆ ಹೋದರು ಗಾಂಧೀಜಿ. ಆದರದಿಂದ ಸ್ವಾಗತಿಸಿದ ಬ್ರಿಟಿಷ್ ರಾಜ ಮಾತುಕತೆಯ ಸಮಯದಲ್ಲಿ ಗಾಂಧೀಜಿಯನ್ನು ಕೇಳಿದರು “ನಾವು ನಿಮ್ಮ ದೇಶವನ್ನು ಎಷ್ಟು ಅಭಿವೃದ್ಧಿ ಪಡಿಸಿದ್ದೇವೆ. ರಸ್ತೆಗಳು, ರೈಲುಗಳು, ಅಂಚೆ, ವಿದ್ಯುತ್, ಮೋಟಾರು ಬಂಡಿಗಳು ಶಿಕ್ಷಣ ಏನೆಲ್ಲಾ ವ್ಯವಸ್ಥೆ ಸುಖಗಳನ್ನು ನಿಮ್ಮ ಜನರಿಗಾಗಿ ನೀಡಿದ್ದೇವೆ. ಆದರೂ ನಮ್ಮನ್ನು ಹೊರದಬ್ಬಲು ನೀವು ಹೋರಾಡುತ್ತಿರುವುದೇಕೆ?”.
ಗಾಂಧೀಜಿ ನಿರ್ಲಿಪ್ತವಾಗಿ ಹೇಳಿದರು ” ಈ ಪ್ರಕೃತಿಯಲ್ಲಿ ಎಲ್ಲಾದರೂ ಯಾವುದಾದರೂ ಪ್ರಾಣಿ ಅಥವಾ ಪಕ್ಷಿ ಇನ್ನೊಂದು ಜೀವಿಯ ಮೇಲೆ ದಬ್ಬಾಳಿಕೆ ನಡೆಸಿ ಅದನ್ನು ಬಂಧನದಲ್ಲಿಟ್ಟು ಬದುಕುವುದನ್ನು ನೋಡಿದ್ದೀರಾ ? ಇಲ್ಲ ತಾನೆ? ಸ್ವತಂತ್ರವಾಗಿ ಬದುಕುವುದು ಪ್ರಕೃತಿಯಲ್ಲಿನ ಪ್ರತಿ ಜೀವಿಯ ಹಕ್ಕು. ಹಾಗೆಯೇ ನಾವೂ ಸಹ ಪ್ರಾಕೃತಿಕವಾಗಿ ನಮಗೆ ದೊರಯಬೇಕಾಗಿದ್ದ ಹಕ್ಕನ್ನು ಕೇಳುತ್ತಿದ್ದೇವೆ ಅಷ್ಟೆ! ನಿಮ್ಮ ಲಂಡನ್‍ನ್ನು ಯಾವುದೋ ದೇಶದ ಜನ ಬಂದು ಹಿಡಿದಿಟ್ಟುಕೊಂಡರೆ ನೀವೇನು ಮಾಡುತ್ತೀರಿ? ಸುಮ್ಮನೆ ಸಹಿಸುತ್ತೀರಾ?”
“ಅದನ್ನು ಹೇಗೆ ಸಹಿಸಲಾಗುತ್ತದೆ? ಅವರನ್ನು ಒದ್ದು ಓಡಿಸುತ್ತೇವೆ” ಎಂದು ರಾಜರು.
“ನಿಮಗೆ ಬರಿ ಗುಲಾಮರಾಗುವ ಕಲ್ಪನೆಯೇ ಕೋಪ ತಂದಿತು. ನಾವು ಎಷ್ಟೊಂದು ವರ್ಷಗಳಿಂದ ಗುಲಾಮರಾಗಿದ್ದೇವೆ. ನಾವು ಯಾಕೆ ಸಹಿಸಿಕೊಳ್ಳಬೇಕು?” ಥಟ್ಟನೆ ಉತ್ತರ ಬಂತು ಗಾಂಧೀಜಿಯಿಂದ.
ಗಾಂಧೀಜಿಯವರನ್ನು ಅರ್ಥ ಮಾಡಿಕೊಂಡವರು ಯಾರೂ ಇಲ್ಲ. ಸ್ವತಃ ಅವರ ಅನುಯಾಯಿಗಳೆನಿಸಿಕೊಂಡವರೇ ತಪ್ಪು ದಾರಿ ಹಿಡಿದರು. ಗಾಂಧೀಜಿಯವರನ್ನು ಅವರನ್ನು ದೇಶದ್ರೋಹಿ ಎಂದು ಚಿತ್ರಿಸುವುದನ್ನು ನೋಡಿ ನೋವಾಗುತ್ತದೆ ಎಂದು ನಿಟ್ಟುಸಿರಾದರು ಶಾಸ್ತ್ರಿಗಳು.

(ಚಿತ್ರ ಕೃಪೆ : c2w.com)

31 ಟಿಪ್ಪಣಿಗಳು Post a comment
  1. ಮಹೇಶ ಪ್ರಸಾದ್ ನೀರ್ಕಜೆ's avatar
    ಮಹೇಶ ಪ್ರಸಾದ್ ನೀರ್ಕಜೆ
    ಫೆಬ್ರ 21 2011

    ಭಾರತಕ್ಕೆ ಏನೇನೂ ಸಂಬಂಧವಿಲ್ಲದ ಖಿಲಾಪತ್ ಚಳುವಳಿಗೆ ಗಾಂಧಿ ಬೆಂಬಲ ಕೊಟ್ಟಿದ್ದು ಯಾಕೆ? ಮುಸ್ಲಿಮರ ದಂಗೆ ನಿಯಂತ್ರಿಸಲಾಗದ ಗಾಂಧಿ ಹಿಂದುಗಳನ್ನು ಮಾತ್ರ ಯಾಕೆ ಸುಮ್ಮನಿರಲು ಹೇಳುತ್ತಿದ್ದರು? ಗಾಂಧಿ ಬಗ್ಗೆ ನನಗೆ ಇರುವ ಕೆಲವೇ ಕೆಲವು ಆಕ್ಷೇಪಣೆಗಳಲ್ಲಿ ಎರಡನ್ನು ಬರೆದಿದ್ದೇನೆ. ಉತ್ತರ ಗೊತ್ತಿದ್ದರೆ ದಯವಿಟ್ಟು ತಿಳಿಸಿ.

    ಉತ್ತರ
    • O S Kempawad's avatar
      O S Kempawad
      ಫೆಬ್ರ 21 2011

      ಗಾಂಧೀ ಒಬ್ಬ ಮಹಾ ಸ್ವಾರ್ಥಿ, ಎಂಬುದೇ ನನ್ನ ಧೃಡವಾದ ಅನಿಸಿಕೆ.

      ಉತ್ತರ
  2. sriharsha's avatar
    sriharsha
    ಫೆಬ್ರ 21 2011

    <>
    ಇದು ನನ್ನ ಜೀವನದಲ್ಲಿ ಮಾಡಿದ ದೊಡ್ಡ ತಪ್ಪು ಅಂತ ಗಾಂಧಿಜಿಯೇ ಒಪ್ಪಿಕೊಂಡಿದ್ದಾರೆ.

    <
    ಗಾಂಧಿಜಿ ಸ್ವಾತಂತ್ರ ಬರುವ ಸಮಯದಲ್ಲಿ ಒರಿಸ್ಸಾದ ನೌಕಾಲಿಯಲ್ಲಿ ಇದ್ದರು ನೌಕಾಲಿ ಮುಸ್ಲಿಂ ಬಾಹುಳ್ಯದ ಪ್ರದೇಶ. ದಂಗೆಯ ಸಮಯದಲ್ಲಿ ಮುಸ್ಲಿಮರಿಂದ ಹಿಂದೂಗಳನ್ನು ರಕ್ಷಿಸಲು ಅಲ್ಲಿದ್ದರು. ಅವರು ಯಶಸ್ವಿಯಾಗಿದ್ದರ ಬಗ್ಗೆ ಬ್ರಿಟಿಷರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ನಿಮ್ಮ ವಾಕ್ಯ
    ಆಧಾರ ರಹಿತ.

    ಉತ್ತರ
    • kiran's avatar
      ಡಿಸೆ 17 2012

      ತಾವು ದಯವಿಟ್ಟು ಇತಿಹಾಸವನ್ನು ಸಮಗ್ರವಾಗಿ ಓದಬೇಕಾಗಿ ಕೋರುತ್ತೇನೆ.ನೌಕಾಲಿಯಲ್ಲಿ ಮುಸ್ಲಂರನ್ನು ರಕ್ಷಿಸಲು ಹೋಗಿದರು ಅದಕ್ಕೆ ಸುವ೵ವದಿ೵ ಸಾತ್ ನೀಡಿದ್ರು,ಸತ್ತವರು ಹೆಚ್ಚು ಹಿಂದುಗಳೇ….,ಪೂವ೵ಗ್ರಹಿತ ಕೆಲವು.ಗಾಂದಿವಾದಿಗಳು ,ಇತಿಹಾಸಕಾರರು ನಿಜವ಻ದ ಭಾರತಿಯರಿಗೆ ಮೋಸ ಮಾಡಿದರು….ಇದು ನಮ್ಮ ದದೈ೵ವ

      ಉತ್ತರ
  3. Narendra Kumar.S.S's avatar
    Narendra Kumar.S.S
    ಫೆಬ್ರ 21 2011

    ವಿಭಜನೆಯ ನಂತರ ಹೊಸದಾಗಿ ಹುಟ್ಟಿದ್ದ ಪಾಕಿಸ್ತಾನಕ್ಕೆ ೫೦ ಕೋಟಿ ರೂಪಾಯಿಗಳನ್ನು ನೀಡಬೇಕೆಂದು ಗಾಂಧೀಜಿ ಪಟ್ಟು ಹಿಡಿದರು.
    ಅದಕ್ಕೆ ಭಾರತ ಸರಕಾರ ಒಪ್ಪದಿದ್ದಾಗ ಉಪವಾಸ ಸತ್ಯಾಗ್ರಹ ಕೂತು ತಮ್ಮ ಮಾತು ಕೇಳುವಂತೆ ಮಾಡಿದರು.
    > ಅದಕ್ಕೆ ಗಾಂಧೀಜಿ “ಹೇಗಿದ್ದೀರಿ ಎಂದು ಕೇಳುತ್ತಿದ್ದಿರಲ್ಲಾ? ನನ್ನ ದೇಹವನ್ನು ನೋಡಿ. ಹಿಂದುಸ್ತಾನ ಪಾಕಿಸ್ತಾನ ಎಂದು ಎರಡು
    > ಭಾಗವಾಗಿದೆ. ದೇಹದ ಒಂದು ಭಾಗವನ್ನು ಕಳೆದುಕೊಂಡು ನಾನು ನರಳುತ್ತಿರುವುದು ನಿಮಗೆ ಕಾಣದೇ ? ” ಎಂದು ನೋವಿನಿಂದ
    > ಉತ್ತರಿಸಿದರು.
    ಈ ಮೇಲಿನ ಮಾತಿನ್ನು ನೋಡಿದಾಗ, ಗಾಂಧೀಜಿ ಬಹಳ ನೋವುಂಡದ್ದು ಕಾಣುತ್ತದೆ. ಅದನ್ನು ನಾವು ಪ್ರಾಮಾಣಿಕವಾಗಿ ನಂಬುತ್ತೇವೆ.
    ಆದರೆ, ಆ ನೋವಿಗೆ ಕಾರಣರಾದವರಿಗೆ ೫೦ ಕೋಟಿ ಸಹಾಯ ಮಾಡಲು ಉಪವಾಸ ಸತ್ಯಾಗ್ರಹ ಕೂತದ್ದು ಸರಿಯೇ?
    ಅದೇ ಸಮಯದಲ್ಲಿ ಲಕ್ಷಾಂತರ ಹಿಂದುಗಳ ಮಾರಣಹೋಮವಾಗಿತ್ತು. ಪಂಜಾಬ್, ಬಂಗಾಳ, ಗುಜರಾತ್, ಕರಾಚಿ, ಕಾಶ್ಮೀರಗಳಲ್ಲಿ ಬದುಕುಳಿದ ಹಿಂದುಗಳ ಸಂಕಟ ಹೇಳತೀರದಾಗಿತ್ತು.
    ಅದನ್ನು ಸರಿಪಡಿಸಲು ಗಾಂಧೀಜಿ ಉಪವಾಸ ಸತ್ಯಾಗ್ರಹ ಕುಳಿತದ್ದು ನನ್ನ ಗಮನಕ್ಕೆ ಬಂದಿಲ್ಲ.

    ಸ್ವಾಮಿ ಶ್ರದ್ಧಾನಂದರು ಆರ್ಯಸಮಾಜಿಗಳು. ಕಾಂಗ್ರೆಸ್ಸಿನ ಸದಸ್ಯರೂ ಆಗಿದ್ದರು. ಶುದ್ಧಿ ಚಳುವಳಿಯ ಮಂಚೂಣಿಯಲ್ಲೂ ಇದ್ದರು. ಹಿಂದು-ಮುಸ್ಲಿಂ ಐಕ್ಯಕ್ಕಾಗಿ ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟಿದ್ದರು. ಅವರನ್ನು ರಷೀದ್ ಎಂಬ ಮುಸಲ್ಮಾನ ತರುಣ ಇರಿದು ಕೊಂದ.
    ರಷೀಧನನ್ನು ಬಂಧಿಸಿದ ಸರಕಾರ ಮರಣದಂಡನೆ ಶಿಕ್ಷೆ ನೀಡಿತು.
    ಇದರಿಂದ ದುಃಖಿತರಾದ ಗಾಂಧೀಜಿ, ಅವನ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಅತನನ್ನು “ಘಾಜಿ” (ಅರ್ಥಾತ್ ಹುತಾತ್ಮ) ಎಂದು ಕರೆದರು. ಅಂದರೆ ರಷೀದ್ ಮಾಡಿದ್ದು ತಪ್ಪಲ್ಲ; ರಷೀದ್ ಶ್ರದ್ಧಾನಂದರನ್ನು ಕೊಂದದ್ದು ಪುಣ್ಯದ ಕೆಲಸ ಮತ್ತು ಅದಕ್ಕಾಗಿ ಆತ ಘಾಜಿ ಪಟ್ಟಕ್ಕೇರಿದ; ಆತ ಮಾಡಿದ್ದು ಅಹಿಂಸೆಯ ಪಕ್ಕಾ ಪ್ರತಿಪಾದಕರಾದ ಗಾಂಧೀಜಿಯವರಿಗೆ ಸರಿ ಕಂಡಿತು.

    ಅದೇ ಸರ್ಧಾರ್ ಭಗತ್ ಸಿಂಗ್ ಮರಣದಂಡನೆ ಶಿಕ್ಷೆಗೆ ದಿನವೆಣಿಸುತ್ತಿದ್ದ ಸಮಯ.
    ದೇಶಾದ್ಯಂತ ಆತನ ಬಿಡುಗಡೆಗಾಗಿ ಬೇಡಿಕೆ ಎದ್ದಿತ್ತು.
    ಭಗತ್ ಸಿಂಗನ ಬೆಂಬಲಿಗರ ನಿಯೋಗವೊಂದು ಗಾಂಧೀಜಿಯವರನ್ನು ಭೇಟಿ ಮಾಡಿ, ಭಗತ ಸಿಂಗನನ್ನು ಬಿಡುಗಡೆ ಮಾಡುವಂತೆ ಸರಕಾರದ ಮುಂದೆ ಒತ್ತಾಯ ಮಾಡುವಂತೆ, ತಮ್ಮ ಪ್ರಭಾವ ಬಳಸಿ ಅವನ ಫಾಸಿ ಶಿಕ್ಷೆ ತಪ್ಪಿಸುವಂತೆ ಗಾಂಧೀಜಿಯವರನ್ನು ವಿನಂತಿಸಿದರು. “ಭಗತ್ ಸಿಂಗ್ ಹಿಂಸೆಯಲ್ಲಿ ನಂಬಿಕೆಯಿಟ್ಟಿರುವವನು. ಆತನ ಬಿಡುಗಡೆಗೆ ನಾನು ಸಹಾಯ ಮಾಡಲಾರೆ” ಎಂದು ಗಾಂಧೀಜಿ ಕೈಚೆಲ್ಲಿಬಿಟ್ಟರು!

    ಭಗತ್ ಸಿಂಗ್ ಮಾಡಿದ್ದು ಹಿಂಸೆ; ರಷೀದ್ ಮಾಡಿದ್ದು ಅಹಿಂಸೆ – ಏಕೆಂದರೆ ಅವನು ಎಷ್ಟಾದರೂ ಮುಸಲ್ಮಾನನಲ್ಲವೇ?

    ಈ ರೀತಿಯ ಅದೆಷ್ಟೋ ಘಟನೆಗಳು ಗಾಂಧೀಜಿಯವರ ಇಬ್ಬಗೆ ನೀತಿಯನ್ನು ಸಾರಿಸಾರಿ ಹೇಳುತ್ತಿವೆ.

    ಬೆಳಗೆರೆ ಕೃಷ್ಣಶಾಸ್ತ್ರಿಗಳು ತಿಳಿಸಿದ ಸಂಗತಿ ಯಾವುದಾದರೂ ಪುಸ್ತಕದಲ್ಲಿದ್ದರೆ ತಿಳಿಸಿ.
    ಅವರು ಎರಡೂ ಸಂದರ್ಭದಲ್ಲಿ (ನೆಹರೂ ಭೇಟಿ ಮತ್ತು ನಂತರ ಪಟೇಲ್ ಭೇಟಿ) ಗಾಂಧೀಜಿ ಬಳಿಯೇ ಇದ್ದರೆ?
    ಅವರುಗಳು ಭೇಟಿಯಾದಾಗ, ಬೇರೆ ಇನ್ನಾರು ಇದ್ದರೆಂದು ಶಾಸ್ತ್ರಿಗಳು ಹೇಳಿರುವರು?
    ನಮಗೆ ತಿಳಿದಿರುವಂತೆ, ಪಟೇಲರು ಚುನಾವಣೆಯಿಂದ ಹಿಂದೆಗೆಯುವಂತೆ ಮಾಡಿದ್ದು ಗಾಂಧೀಜಿಯವರ ಪ್ರಭಾವ.
    ನೀವು ತಿಳಿಸಿದ ಭೇಟಿಗಳು, ಆಗ ನಡೆದ ಮಾತುಕತೆಗಳು ನಿಜವೆ ಆಗಿದ್ದರೂ, ಅದಾದ ನಂತರ ಬೇರೆ ಮಾತುಕತೆಗಳೇ ನಡೆಯಲಿಲ್ಲ, ಗಾಂಧೀಜಿ ತಮ್ಮ ಪ್ರಭಾವ ಬೀರಲೇ ಇಲ್ಲ ಎನ್ನುವುದನ್ನು ನಂಬುವುದು ಹೇಗೆ?
    ಗಾಂಧೀಜಿ ಕಾಂಗ್ರೆಸ್ಸಿನಲ್ಲಿ ತಮ್ಮ ಮಾತೇ ನಡೆಯಬೇಕೆಂದು ಬಯಸುತ್ತಿದ್ದರು ಎಂಬುದು ಸುಳ್ಳೇನಲ್ಲ.
    ಹಾಗಿಲ್ಲದಿದ್ದರೆ, ಗಾಂಧೀಜಿಯವರ ಅಭ್ಯರ್ಥಿ ಪುರುಷೋತ್ತಮದಾಸ್ ಠಂಡನ್ ಅವರನ್ನು ಅಧ್ಯಕ್ಷ ಚುನಾವಣೆಯಲ್ಲಿ ಸೋಲಿಸಿದ
    ಸುಭಾಷ್ ಚಂದ್ರ ಬೋಸರು ಕಾಂಗ್ರೆಸ್ಸಿಗೆ ಏಕೆ ರಾಜೀನಾಮೆ ನೀಡುತ್ತಿದ್ದರು? ಅವರು ಆ ರೀತಿ ರಾಜಿನಾಮೆ ನೀಡುವಂತೆ ವಾತಾವರಣ ಸೃಷ್ಟಿಸಿದವರು, ಅವರನ್ನು ಒತ್ತಾಯಿಸಿದವರು ಯಾರು?

    ನೆಹರೂ ನನ್ನ ಮಾನಸ ಪುತ್ರ ಎಂದು ಗಾಂಧೀಜಿಯವರೇ ಅನೇಕ ಬಾರಿ ಹೇಳಿದ್ದಾರೆ.
    ಹೀಗಾಗಿ ನೆಹರೂ ಪ್ರಧಾನಿಯಾಗಬೇಕೆಂದು ಗಾಂಧೀಜಿಯವರಿಗೆ ಇಚ್ಚೆ ಇದ್ದಿರುವುದು ಅತ್ಯಂತ ಸಹಜ.
    ಆದರೆ, ತಮ್ಮನ್ನು ಪ್ರಧಾನಿ ಮಾಡದಿದ್ದರೆ ದೇಶವನ್ನು ನಾಶ ಮಾಡುತ್ತೇನೆ ಎಂದವನನ್ನು ಗಾಂಧೀಜಿ ಬೆಂಬಲಿಸಿದ್ದು ದುರಂತವೇ ಸರಿ.
    ನೀವು ಗಾಂಧೀಜಿ ಆ ಸಂದರ್ಭದಲ್ಲಿ ನೆಹರೂ ಅವರನ್ನು ಬೆಂಬಲಿಸಲಿಲ್ಲ ಎಂದರೂ, ನೆಹರೂ ಅವರ ಈ ಮಾನಸಿಕತೆ ಇದ್ದಕ್ಕಿದ್ದಂತೆ ಅಂದು ಮಾತ್ರ ಮುಂದೆ ಬಂದಿತು, ಗಾಂಧೀಜಿಯವರಿಗೆ ಅದು ತಿಳಿದಿರಲಿಲ್ಲ ಎಂದರೆ, ಅದನ್ನು ನಂಬುವುದು ಕಷ್ಟ.
    ಈ ರೀತಿಯ ನೆಹರೂ ಅವರನ್ನು ಗಾಂಧೀಜಿ ಸದಾ ಬೆಂಬಲಿಸಕೊಂಡೇ ಬಂದರಲ್ಲ.

    ಉತ್ತರ
  4. sriharsha's avatar
    sriharsha
    ಫೆಬ್ರ 21 2011

    ಶ್ರದ್ಧಾನಂದರ ಕೊಲೆಯ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲವಾದರೆ ನಾನು ಹೆಚ್ಚು ಹೇಳಲಾರೆ. ತಿಳಿದುಕೊಂಡು ಹೇಳುತ್ತೆನೆ.

    ಭಗತ್ ಸಿಂಗ್ ತಮ್ಮನ್ನು ಉಳಿಸಬಾರದೆಂದು ಸ್ವತಃ ಗಾಂಧಿಜಿಗೆ ಪತ್ರ ಬರೆದಿದ್ದರು. ಭಗತ್ ಸಿಂಗ್ ರ ಸ್ವಾತಂತ್ರ ಪಡೆಯುವ ರೀತಿಯ ಬಗ್ಗೆ ಗಾಂಧಿಜಿಗೆ ಅಸಮಾಧಾನವಿತ್ತು ಭಗತ್ ಸಿಂಗ್ ಬಗ್ಗೆ ಅಲ್ಲ. ಸ್ವತಃ ಅಹಿಂಸೆಯ ಪ್ರತಿಪಾದಕರಾಗಿದ್ದ ಗಾಂಧಿಜಿ ಮರಣದಂಡನೆಯನ್ನು ಸಮರ್ಥಿಸುವರೇ? ಇದೆಂಥ ಮಾತು?

    ಶಾಸ್ತ್ರಿಗಳಿಗೆ ಈಗ ತೊಂಬತ್ತಾರು ವರ್ಷ. ಸಧ್ಯಕ್ಕೆ ಬೆಂಗಳೂರಲ್ಲೆ ಇರುವರು. ತಾವು ಸ್ವತಃ ಭೇಟಿ ಮಾಡಿ ಈ ಬಗ್ಗೆ ತಿಳಿದುಕೊಳ್ಲಬಹುದು.

    ಗ್ಯಾರಂಟಿ ಬಗ್ಗೆ ಕೇಳುವದಾದರೆ ನಂಬಿಕೆಯೊಂದೇ ಗ್ಯಾರಂಟಿ. ಹೆಚ್ಚಲ್ಲ. ಮಾನಸ ಪುತ್ರರನ್ನು ಪ್ರಧಾನಿ ಮಾಡಬಲ್ಲ ಗಾಂಧಿಜಿಗೆ ಸ್ವಂತ ಪುತ್ರರನ್ನು ಪ್ರಧಾನಿ ಮಾಡುವ ತಾಕತ್ತಿರಲಿಲ್ಲವೇ? ಈ ಬಗ್ಗೆ ತಮ್ಮ ಗಮನ ತಮ್ಮ ಏಕೆ ಹೋಗುತ್ತಿಲ್ಲ ?

    ಗಾಂಧಿಜಿಯ ಅಭ್ಯರ್ಥಿ ಪಟ್ಟಾಭಿ ಸೀತಾರಾಮಯ್ಯ. ಠಂಡನ್ ಅಲ್ಲ. ಸುಭಾಷ್ ಪಟ್ಟ ಬಿಟ್ಟುಕೊಡಬೇಕಾದ ಸಂದರ್ಭದ ಬಗ್ಗೆ ಇನ್ನೊಂದು ಲೇಖನದಲ್ಲಿ ಬರೆದಿದ್ದೇನೆ.

    ಉತ್ತರ
  5. Narendra Kumar.S.S's avatar
    Narendra Kumar.S.S
    ಫೆಬ್ರ 21 2011

    > ಗಾಂಧಿಜಿಯ ಅಭ್ಯರ್ಥಿ ಪಟ್ಟಾಭಿ ಸೀತಾರಾಮಯ್ಯ. ಠಂಡನ್ ಅಲ್ಲ.
    ತಪ್ಪನ್ನು ತಿದ್ದಿದ್ದಕ್ಕೆ ಧನ್ಯವಾದಗಳು.
    > ಸುಭಾಷ್ ಪಟ್ಟ ಬಿಟ್ಟುಕೊಡಬೇಕಾದ ಸಂದರ್ಭದ ಬಗ್ಗೆ ಇನ್ನೊಂದು ಲೇಖನದಲ್ಲಿ ಬರೆದಿದ್ದೇನೆ.
    ನಾನು ಅದನ್ನು ಓದಿಲ್ಲ. ಇಲ್ಲು ಕೂಡಾ ಅದಕ್ಕೆ ಉತ್ತರಿಸಬಹುದಿತ್ತಲ್ಲವೇ?

    > ಶ್ರದ್ಧಾನಂದರ ಕೊಲೆಯ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲವಾದರೆ ನಾನು ಹೆಚ್ಚು ಹೇಳಲಾರೆ. ತಿಳಿದುಕೊಂಡು ಹೇಳುತ್ತೆನೆ.
    ಶ್ರದ್ಧಾನಂದರ ಕೊಲೆ ಪ್ರಕರಣದ ಕುರಿತಾಗಿ ಸಾಕಷ್ಟು ಮಾಹಿತಿಗಳು ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಕೊಂಡಿಗಳನ್ನು ಬಳಸಿ:
    1. http://www.gurusfeet.com/guru/swami-shraddhananda
    2. http://www.islam-watch.org/index.php?option=com_content&task=view&id=470
    3. http://santoshbhatt.wordpress.com/2010/07/12/muslim-appeasement-was-an-inseparable-part-of-gandhi%E2%80%99s-quack-doctrine-of-non-violence/

    > ಶಾಸ್ತ್ರಿಗಳಿಗೆ ಈಗ ತೊಂಬತ್ತಾರು ವರ್ಷ. ಸಧ್ಯಕ್ಕೆ ಬೆಂಗಳೂರಲ್ಲೆ ಇರುವರು. ತಾವು ಸ್ವತಃ ಭೇಟಿ ಮಾಡಿ ಈ ಬಗ್ಗೆ
    > ತಿಳಿದುಕೊಳ್ಲಬಹುದು.
    ಮಾಹಿತಿಗಾಗಿ ಧನ್ಯವಾದಗಳು.
    ಅವರ ಪರಿಚಯ ನನಗಿಲ್ಲ ಮತ್ತು ಅವರ ಸ್ಥಳವೂ ನನಗೆ ತಿಳಿದಿಲ್ಲ.
    ತಾವು ಸ್ವತಃ ಅವರನ್ನು ಭೇಟಿ ಮಾಡಿ ಮಾತನಾಡಿರುವೆನೆಂದು ತಿಳಿಸಿದ್ದರಿಂದ, ನೀವು ಅವರ ಆಪ್ತರಿರಬಹುದೆಂದು ಎಣಿಸಿದೆ.
    ಹೀಗಾಗಿ ಹೆಚ್ಚಿನ ಮಾಹಿತಿಯನ್ನು ನೀವು ಸುಲಭದಲ್ಲಿ ಪಡೆಯಬಹುದು ಎನ್ನುವುದು ನನ್ನ ಊಹೆ.

    > ಭಗತ್ ಸಿಂಗ್ ತಮ್ಮನ್ನು ಉಳಿಸಬಾರದೆಂದು ಸ್ವತಃ ಗಾಂಧಿಜಿಗೆ ಪತ್ರ ಬರೆದಿದ್ದರು.
    ದಯವಿಟ್ಟು ಇದಕ್ಕೆ ಆಧಾರವಿದ್ದರೆ ಹೆಚ್ಚಿನ ವಿಷಯ ತಿಳಿದುಕೊಳ್ಳುವೆ.

    > ಸ್ವತಃ ಅಹಿಂಸೆಯ ಪ್ರತಿಪಾದಕರಾಗಿದ್ದ ಗಾಂಧಿಜಿ ಮರಣದಂಡನೆಯನ್ನು ಸಮರ್ಥಿಸುವರೇ?
    ಇತಿಹಾಸ ಹೇಳುವುದನ್ನು ಒಪ್ಪುವುದಿಲ್ಲವೆಂದರೆ ಹೇಗೆ?

    > ಮಾನಸ ಪುತ್ರರನ್ನು ಪ್ರಧಾನಿ ಮಾಡಬಲ್ಲ ಗಾಂಧಿಜಿಗೆ ಸ್ವಂತ ಪುತ್ರರನ್ನು ಪ್ರಧಾನಿ ಮಾಡುವ ತಾಕತ್ತಿರಲಿಲ್ಲವೇ?
    ಹೌದು ತಾಕತ್ತಿತ್ತು. ಆದರೆ, ಅವರ ಪುತ್ರರು ಅವರಿಗೇ ಉಲ್ಟಾ ಹೊಡೆದರಲ್ಲ?
    ಒಬ್ಬನಂತೂ ಮುಸಲ್ಮಾನನಾಗಿ ಮತಾಂತರ ಹೊಂದಿಬಿಟ್ಟ!
    ಅವರು ಮಾಡಿದ “ಸತ್ಯದ ಪ್ರಯೋಗಗಳು” ಅವರ ಕುಟುಂಬದ ಮೇಲೆ ವಿಪರೀತ ಪರಿಣಾಮ ಬೀರಿದವು.

    ಉತ್ತರ
  6. sriharsha's avatar
    sriharsha
    ಫೆಬ್ರ 21 2011

    ಶಾಸ್ತ್ರಿಗಳು ಬನಶಂಕರಿ ಎರಡನೆ ಹಂತದಲ್ಲಿರುವ ರವಿ ಬೆಳಗೆರೆಯವರ ಮನೆಯಲ್ಲಿ ಇರುತ್ತಾರೆ.ಶಾಸ್ತ್ರಿಗಳು ಎಲ್ಲರನ್ನೂ ಮಾತನಾಡಿಸುತ್ತಾರೆ ಪರಿಚಯ ಇರಲೇಬೆಕೆಂದಿಲ್ಲ. ನನಗೆ ಅವರು ಕೊಟ್ಟಿರುವ ಮಾಹಿತಿ ಸಾಕು, ನಿಮಗಿರುವ ಅನುಮಾನಗಳನ್ನು ಸ್ವತಃ ಪರಿಹರಿಸಿಕೊಳ್ಳಿ.

    ಗಾಂಧಿಜಿಯ ಒಬ್ಬ ಮಗ ಹರಿಲಾಲ ಮಾತ್ರ ತಿರುಗಿ ಬಿದ್ದದ್ದು. ಉಳಿದವರೆಲ್ಲ ತಂದೆಯ ಕಟ್ಟಾ ಆಜ್ಞಾಪಾಲಕರಾಗಿದ್ದರು. ಅವರಾದರೂ ಅಗಬಹುದಿತ್ತು.
    ಭಗತ್ ಸಿಂಗ್ ರ ಪತ್ರ ದೆಹಲಿಯ ತೀನ್ ಮೂರ್ತಿ ಭವನದಲ್ಲಿ ಇದೆ. ಹತ್ತು ವರ್ಷಗಳ ಹಿಂದೆ ನೋಡಿದ ನೆನಪು.

    ೧೯೩೯ ರ ಕಾಂಗ್ರೆಸ್ ಚುನಾವಣೆಯಲ್ಲಿ ಬೋಸ್ ಪರವಾಗಿ ಭರ್ಜರಿ ಪ್ರಚಾರ ನಡೆದಿತ್ತು! ಪಟ್ಟಾಭಿ ಸೀತಾರಾಮಯ್ಯ ನಾಲ್ಕು ಕಾರುಗಳನ್ನು ನಾಲ್ಕು ಕಡೆ ಕಳಿಸಿ ನಾನು ಚುನಾವಣೆಗೆ ನಿಂತಿದ್ದೇನೆ ಎಂದಷ್ಟೇ ಹೇಳಿದರು. ಮುತ್ತುರಾಮಲಿಂಗಂ ತೇವಾರರು ಸ್ವತಃ ಮುತುವರ್ಜಿ ವಹಿಸಿ ಸುಭಾಷರಿಗೆ ಬಡಗಣಪ್ರಾಂತದ ಎಲ್ಲ ಓಟುಗಳನ್ನು ಗಳಿಸಿಕೊಟ್ಟರು. ಎಷ್ಟೋ ಜನರಿಗೆ ಪಟ್ಟಾಭಿಯವರು ಚುನಾವಣೆಗೆ ನಿಂತಿದ್ದೇ ಗೊತ್ತಿರಲಿಲ್ಲ!!!
    ಹಾಗಾಗಿ ಸುಭಾಷ್ ಗೆದ್ದರು. ಸುಭಾಷ್ ರ ಹೊಸ ಪಾಲಿಸಿಗಳು ಗಾಂಧಿಜಿಗೆ ಸರಿಬಾರದಿದ್ದಾಗ ಅವರು ಪ್ರತಿಭಟಿಸಿದರು. ಗಾಂಧಿಜಿಯ ಕಡೆ ಹೆಚ್ಚಿನ ಜನಬಲ ಇದ್ದದ್ದನ್ನು ನೋಡಿ ಸುಭಾಷ್ ಹೊರನಡೆದರು.

    ಉತ್ತರ
  7. ವಿಕಾಸ್'s avatar
    ಫೆಬ್ರ 21 2011

    ಶಾಸನ ಸಭೆ ಚುನಾವಣೆಯಲ್ಲಿ ಸೋತೂ ನೆಹರು ಹೇಗೆ ಪ್ರಧಾನಿಯಾದರು?

    ಉತ್ತರ
    • Narendra Kumar.S.S's avatar
      Narendra Kumar.S.S
      ಫೆಬ್ರ 21 2011

      ವಿಕಾಸ್> ಶಾಸನ ಸಭೆ ಚುನಾವಣೆಯಲ್ಲಿ ಸೋತೂ ನೆಹರು ಹೇಗೆ ಪ್ರಧಾನಿಯಾದರು?
      ಚುನಾವಣೆಯಿಂದ ಸರ್ದಾರ್ ಪಟೇಲರು ಹಿಂತೆಗೆಯುವಂತೆ ಗಾಂಧೀಜಿ ಅವರ ಮನವೊಲಿಸಿದರು.
      ಹೀಗಾಗಿ ನೆಹರು ಗೆದ್ದರು.
      ಆ ಚುನಾವಣೆ ನಡೆದದ್ದು ಪ್ರಧಾನಿ ಅಭ್ಯರ್ಥಿಗಲ್ಲ.
      ಅದು ಕಾಂಗ್ರೆಸ್ ವರ್ಕಿಂಗ್ ಕಮಿಟೀ ಚುನಾವಣೆ. ೧೯೪೬ರಲ್ಲಿ ನಡೆದ ಚುನಾವಣೆ ಅದು.
      ಆಗಿನ್ನೂ ಸ್ವಾತಂತ್ರ್ಯ ಬಂದಿರಲಿಲ್ಲ. ಆದರೆ, ೨ನೇ ಮಹಾಯುದ್ಧದ ತರುವಾಯ ಬ್ರಿಟನ್ನಿನ ರಾಣಿ ಭಾರತದಲ್ಲಿದ್ದ ಗವರ್ನರ್ ಜನರಲ್ ಲಾರ್ಡ್ ವೇವೆಲ್‍ರನ್ನು ಹೊರಗೋಡಿಸಿ, ಬರ್ಮಾದ ರಂಗೂನಿನಲ್ಲಿನ ಯುದ್ಧದಲ್ಲಿ ಯಶಸ್ವಿಯಾಗಿದ್ದ ಲಾರ್ಡ್ ಮೌಂಟ್ ಬ್ಯಾಟನ್ನರನ್ನು ಗವರ್ನರ್ ಜನರಲ್ ಮಾಡಿದ್ದರು. ಮೌಂಟ್ ಬ್ಯಾಟನ್ ಭಾರತಕ್ಕೆ ಬಂದಿಳಿದೊಡನೆಯೇ ಸ್ವಾತಂತ್ರ್ಯ ನೀಡುವ ನಾಟಕಕ್ಕೆ ಶುರುವಿಟ್ಟುಕೊಂಡರು.
      ಈ ನಾಟಕದಲ್ಲಿ, ಉಗ್ರವಾಗಿ ಮಾತನಾಡುತ್ತಿದ್ದವರನ್ನು ಕರೆಯದೆ, ಸೌಮ್ಯವಾಗಿ ಮಾತನಾಡುತ್ತಿದ್ದ ಕಾಂಗ್ರೆಸ್ಸಿನವರನ್ನು ಮಾತ್ರ ಕರೆದರು.
      ಹೀಗಾಗಿ ೧೯೪೬ರ ಹೊತ್ತಿಗೆ ಭಾರತಕ್ಕೆ ಸ್ವಾತಂತ್ರ್ಯ ಬರುವುದು ನಿಶ್ಚಿತವಾಗಿತ್ತು. ಈಗ ನೆಹರು ಅವರ ಆಸೆ ಗರಿಗೆದರಿತು.
      ಏನಾದರೂ ಮಾಡಿ ತಾನು ಪ್ರಧಾನಿ ಆಗಬೇಕೆಂದು ಅವರು ಪ್ರಯತ್ನಿಸಿದರು. ಕಾಂಗ್ರೆಸ್ಸಿನೊಳಗೆ ಅದಕ್ಕಿದ್ದ ದೊಡ್ಡ ಅಡ್ಡಿ ಸರ್ದಾರ್ ಪಟೇಲರು. ಅವರನ್ನು ಚುನಾವಣೆಯಿಂದ ದೂರ ತಳ್ಳಿದರು.
      ಕಾಂಗ್ರೆಸ್ಸಿನ ಹೊರಗೆ ಸುಭಾಷ್ ಚಂದ್ರ ಬೋಸರು ಸುಪ್ರಸಿದ್ಧರಾಗಿದ್ದರು; ಸೈನ್ಯವನ್ನೆ ದೇಶದೊಳಗೆ ನುಗ್ಗಿಸಿದ್ದರು.
      ೧೯೪೪-೪೫ ಸುಭಾಷರು ವಿಮಾನ ಅಪಘಾತದಲ್ಲಿ ತೀರಿಕೊಂಡರೆಂದು ಎಲ್ಲರನ್ನೂ ನಂಬಿಸಲು ಪ್ರಯತ್ನಿಸಿದರು.
      ಆದರೆ, ಆ ಅಪಘಾತ ನಡೆದ ಸಮಯದಲ್ಲಿ ತನ್ನ ಯಾವುದೇ ವಿಮಾನ ಹಾರಾಡುತ್ತಿರಲಿಲ್ಲ ಎಮ್ದು ಜಪಾನ್ ಸರಕಾರ ಒಪ್ಪಿಕೊಂಡಿದೆ.
      ಬ್ರಿಟಿಷರ ಸಹಾಯದಿಂದ ಸುಭಾಷರು ಮತ್ತೆ ಭಾರತದೊಳಕ್ಕೆ ಬರದಂತೆ ನೆಹರು ಬಂದೋಬಸ್ತ್ ಮಾಡಿದರು.
      ನೆಹರು ಚುನಾವಣೆ ಗೆದ್ದು ಪ್ರಧಾನಿಯಾಗಿದ್ದು ಹೀಗೆ!

      ಉತ್ತರ
  8. mpneerkaje's avatar
    ಫೆಬ್ರ 21 2011

    ನೆಹರೂರವರನ್ನು ವಾಮಮಾರ್ಗದಲ್ಲಿ ಪ್ರಧಾನಿಯಾಗಲು ಬಿಟ್ಟಿದ್ದು ಗಾಂಧೀಜಿಯ ತಪ್ಪಲ್ಲವೇ? ಈಗಿನ ಪರಿಸ್ಥಿತಿಗೆ ಹೋಲಿಸಿ ನೋಡುವುದಾದರೆ ಮನಮೋಹನ್ ಸಿಂಗ್ ತಮ್ಮ ಮೂಗಿನ ಅಡಿಯಲ್ಲೇ ಹೆಗ್ಗಣಗಳು ಮುಕ್ಕುತ್ತಿದ್ದರೂ ಬಾಯಿ ಬಿಟ್ಟಿಲ್ಲ. ಈ ಮಟ್ಟಿಗೆ ಗಾಂಧಿ ಮತ್ತು ಸಿಂಗ್ ಒಂದೇ ಕೆಟಗರಿಯವರಾಗುತ್ತಾರೆ. ನನ್ನ ಪ್ರಕಾರ ಇವೆರಡು ನಿರ್ಧಾರಗಳೂ ಅಕ್ಷಮ್ಯ ಅಪರಾಧ.

    ಉತ್ತರ
    • Narendra Kumar.S.S's avatar
      Narendra Kumar.S.S
      ಫೆಬ್ರ 21 2011

      > ಎರಡು ಹೆಜ್ಜೆ ಬಾಗಿಲ ದಿಕ್ಕಿನಲ್ಲಿ ನಡೆದು ಗಾಂಧೀಜಿಯ ತಿರುಗಿ “If I don’t become prime minister I will burn this country”ಎಂದರು. ಗಾಂಧೀಜಿ ಉತ್ತರಿಸದೆ ತಮ್ಮ ಕೆಲಸದಲ್ಲಿ ಮಗ್ನರಾದರು.
      ಅಂದರೆ, ದೇಶಕ್ಕೆ ಅನ್ಯಾಯವಾಗುತ್ತದೆ ಎಂದು ಗೊತ್ತಿದ್ದರೂ ಗಾಂಧೀಜಿ ಮೌನವಾಗಿದ್ದು “ದೇಶಸೇವೆ” ಮಾಡಿದರು ಎಂದೇ?
      “ಅಹಿಂಸೆ ಎಂದರೆ ಅನ್ಯಾಯವನ್ನು ಸಹಿಸುವುದಲ್ಲ; ಅನ್ಯಾಯವನ್ನು ಯಾವುದೇ ಬೆಲೆಕೊಟ್ಟಾದರೂ ತಡೆಯಬೇಕು; ಹಾಗೆ ಮಾಡದವನು ಹೇಡಿ;”
      ಹೀಗೆಲ್ಲಾ ಹೇಳಿದ್ದ ಗಾಂಧೀಜಿ, ನೆಹರು ಈ ಮೇಲಿನಂತೆ ಹೇಳಿದರೂ ಸುಮ್ಮನಿದ್ದರೇ…..ಹೇ ರಾಮ್….!!

      ಉತ್ತರ
  9. Narendra Kumar.S.S's avatar
    Narendra Kumar.S.S
    ಫೆಬ್ರ 21 2011

    ಭಗತ್ ಸಿಂಗ್‍ನನ್ನ್ನು ಗಲ್ಲುಶಿಕ್ಷೆ ಖಾಯಂ ಆದ ನಂತರದಲ್ಲಿ ನಡೆದ ಸಂಗತಿಗಳ ಕುರಿತಾಗಿ ಇಲ್ಲಿ ಓದಬಹುದು:
    http://hcsingh.com/2010/04/01/shahid-bhagat-singh%E2%80%99s-courage-and-patriotism-little-known-facts/
    http://bhagatsinghstudy.blogspot.com/2010/07/gandhi-and-bhagat-singh-historians.html
    http://www.sikhiwiki.org/index.php/Shaheed_Bhagat_Singh#Bhagat_Singh_and_Mahatma_Gandhi

    > ಶಾಸ್ತ್ರಿಗಳು ಬನಶಂಕರಿ ಎರಡನೆ ಹಂತದಲ್ಲಿರುವ ರವಿ ಬೆಳಗೆರೆಯವರ ಮನೆಯಲ್ಲಿ ಇರುತ್ತಾರೆ.
    ಅವರು ರವಿ ಬೆಳಗೆರೆ ಮನೆಯಲ್ಲಿದ್ದಾರಾ? ಆ ಮನೆಯ ಒಳಗೆ ಹೋಗುವುದು ಎಷ್ಟು ಕಠಿಣವೆಂದು ತಿಳಿದರೆ, ಶಾಸ್ತ್ರಿಗಳನ್ನು ಭೇಟಿ ಮಾಡುವುದು ಎಷ್ಟು ಕಷ್ಟವೆಂದು ತಿಳಿಯುತ್ತದೆ. ಸಧ್ಯಕ್ಕೆ ನಾನಲ್ಲಿ ಹೋಗುವ ಸಾಹಸ ಮಾಡುವುದಿಲ್ಲ.

    > ಭಗತ್ ಸಿಂಗ್ ರ ಪತ್ರ ದೆಹಲಿಯ ತೀನ್ ಮೂರ್ತಿ ಭವನದಲ್ಲಿ ಇದೆ.
    ಈ ರೀತಿಯ ಪತ್ರದ ಅಸ್ತಿತ್ವದ ಕುರಿತಾಗಿ ಯಾವ ಇತಿಹಾಸದ ಪುಟಗಳೂ ತಿಳಿಸುತ್ತಿಲ್ಲ!

    ಮತ್ತು ಇಲ್ಲಿ ಮುಖ್ಯವಾದ ವಿಷಯ, ಭಗತ್ ಸಿಂಗ್‍ರ ಬಿಡುಗಡೆಗೆ ಗಾಂಧೀಜಿ ಪ್ರಯತ್ನಿಸಲಿಲ್ಲ ಎನ್ನುವುದು ಮಾತ್ರವಲ್ಲ,
    ಶ್ರದ್ಧಾನಂದರನ್ನು ಕೊಲೆಗೈದ ಕೊಲೆಪಾತಕ ರಷೀದನನ್ನು ಹುತಾತ್ಮನೆಂದು ಕೊಂಡಾಡಿದರು.
    ಈ ವಿಷಯಗಳ ಕುರಿತಾಗಿ ಗಾಂಧೀಜಿ ತಮ್ಮ “ಸತ್ಯದೊಡನೆ ಪ್ರಯೋಗ”ದಲ್ಲಿ ಏಕೆ ಮಾತೇ ಆಡುವುದಿಲ್ಲ ಎಂದು ತಿಳಿದಿಲ್ಲ!

    > ೧೯೩೯ ರ ಕಾಂಗ್ರೆಸ್ ಚುನಾವಣೆಯಲ್ಲಿ ಬೋಸ್ ಪರವಾಗಿ ಭರ್ಜರಿ ಪ್ರಚಾರ ನಡೆದಿತ್ತು! ಪಟ್ಟಾಭಿ ಸೀತಾರಾಮಯ್ಯ ನಾಲ್ಕು
    > ಕಾರುಗಳನ್ನು ನಾಲ್ಕು ಕಡೆ ಕಳಿಸಿ ನಾನು ಚುನಾವಣೆಗೆ ನಿಂತಿದ್ದೇನೆ ಎಂದಷ್ಟೇ ಹೇಳಿದರು. ಮುತ್ತುರಾಮಲಿಂಗಂ ತೇವಾರರು ಸ್ವತಃ
    > ಮುತುವರ್ಜಿ ವಹಿಸಿ ಸುಭಾಷರಿಗೆ ಬಡಗಣಪ್ರಾಂತದ ಎಲ್ಲ ಓಟುಗಳನ್ನು ಗಳಿಸಿಕೊಟ್ಟರು. ಎಷ್ಟೋ ಜನರಿಗೆ ಪಟ್ಟಾಭಿಯವರು
    > ಚುನಾವಣೆಗೆ ನಿಂತಿದ್ದೇ ಗೊತ್ತಿರಲಿಲ್ಲ!!!
    ಗಾಂಧೀಜಿಯವರ ಅಬ್ಯರ್ಥಿಗೆ ಪ್ರಚಾರದ ಆವಶ್ಯಕತೆಯಿತ್ತೇ?
    ಚುನಾವಣೆಗೆ ನಿಂತ ಮೇಲೆ “ನಾನು ಪ್ರಚಾರ ಮಾಡಲಿಲ್ಲ; ಹಾಗಾಗಿ ಸೋತೆ” ಎಂದರೆ, ಅದು ಸರಿಯಾದ ಉತ್ತರವಾದೀತೆ?
    “ಬಿದ್ದರೂ ಮೀಸೆ ಮಣ್ಣಾಗಲಿಲ್ಲ” ಎನ್ನುವಂತಹ ಮಾತಾಯಿತು ಇದು.

    > ಗಾಂಧಿಜಿಯ ಕಡೆ ಹೆಚ್ಚಿನ ಜನಬಲ ಇದ್ದದ್ದನ್ನು ನೋಡಿ ಸುಭಾಷ್ ಹೊರನಡೆದರು.
    ಗಾಂಧೀಜಿಯವರಿಗೆ ಹೆಚ್ಚಿನ ಜನಬಲ ಇದ್ದಿದ್ದರೆ ಚುನಾವಣೆಯಲ್ಲಿ ಗೆಲ್ಲುತ್ತಿದ್ದರು.
    ಚುನಾವಣಾ ಪರಾಭವವೇ ಅವರಿಗೆ ಜನಬಲ ಇರಲಿಲ್ಲ ಎನ್ನುವುದಕ್ಕೆ ಸಾಕ್ಷಿ.

    > ಸುಭಾಷ್ ರ ಹೊಸ ಪಾಲಿಸಿಗಳು ಗಾಂಧಿಜಿಗೆ ಸರಿಬಾರದಿದ್ದಾಗ ಅವರು ಪ್ರತಿಭಟಿಸಿದರು
    ಚುನಾವಣೆಯಲ್ಲಿ ಗೆದ್ದ ಮೇಲೆ, ಆಡಳಿತ ನಡೆಸಲು ಬಿಡಬೇಕಲ್ಲವೇ?
    ಅವರ ಪಾಲಿಸಿಗಳು ಇಷ್ಟವಾಗಿದೆಯೆಂದೇ ಜನ ಅವರಿಗೆ ಮತ ಹಾಕಿರುವರು.
    ಹೀಗಿರುವಾಗ, ಗಾಂಧೀಜಿಯವರಿಗೆ ಇಷ್ಟ ಬರಲಿಲ್ಲವೆಂದ ಮಾತ್ರಕ್ಕೆ, ಅವರನ್ನು ಪಕ್ಷದಿಂದಲೇ ಓಡಿಸುವ ಕುತಂತ್ರಗಳಿಗೆ ಕೈಹಾಕುವುದು ಸರಿಯೇ? ಇದು ಪ್ರಜಾಪ್ರಭುತ್ವದ ರೀತಿಯೇ?
    ಗಾಂಧೀಜಿ ಮುಂದಿನ ಚುನಾವಣೆವರೆಗೆ ಕಾಯಬಹುದಿತ್ತಲ್ಲವೇ?

    > ಗಾಂಧಿಜಿಯ ಒಬ್ಬ ಮಗ ಹರಿಲಾಲ ಮಾತ್ರ ತಿರುಗಿ ಬಿದ್ದದ್ದು.
    ಮೋಹನದಾಸನ ಕಥೆ ಏನು?

    ಉತ್ತರ
    • Narendra Kumar.S.S's avatar
      Narendra Kumar.S.S
      ಫೆಬ್ರ 21 2011

      >> ಗಾಂಧಿಜಿಯ ಒಬ್ಬ ಮಗ ಹರಿಲಾಲ ಮಾತ್ರ ತಿರುಗಿ ಬಿದ್ದದ್ದು.
      > ಮೋಹನದಾಸನ ಕಥೆ ಏನು?
      ನಾನು ದೇವದಾಸ್ ಎಂದು ಹೇಳಬೇಕಿತ್ತು. ಆದರೆ, ಆತನೇನೂ ಗಾಂಧಿಗೆ ತಿರುಗಿ ಬೀಳಲಿಲ್ಲ. ಅದು ಹರಿಲಾಲ್ ಗಾಂಧಿ ಮತ್ತು ಸ್ವತಃ ಗಾಂಧೀಜಿಯವರೇ ಇದು ತನ್ನ ಜೀವನದ ಅತ್ಯಂತ ದೊಡ್ಡ ಸೋಲೆಂದು ತಿಳಿಸಿರುವರು.

      ಉತ್ತರ
    • sriharsha salimath's avatar
      sriharsha salimath
      ಫೆಬ್ರ 22 2011

      >>ಅವರು ರವಿ ಬೆಳಗೆರೆ ಮನೆಯಲ್ಲಿದ್ದಾರಾ? ಆ ಮನೆಯ ಒಳಗೆ ಹೋಗುವುದು ಎಷ್ಟು ಕಠಿಣವೆಂದು ತಿಳಿದರೆ, ಶಾಸ್ತ್ರಿಗಳನ್ನು ಭೇಟಿ ಮಾಡುವುದು ಎಷ್ಟು ಕಷ್ಟವೆಂದು ತಿಳಿಯುತ್ತದೆ. ಸಧ್ಯಕ್ಕೆ ನಾನಲ್ಲಿ ಹೋಗುವ ಸಾಹಸ ಮಾಡುವುದಿಲ್ಲ.

      ಪ್ರಯತ್ನವನ್ನೇ ಮಾಡದೆ ನಿರ್ಧಾರಕ್ಕೆ ಬರುವ ತಾವು ಇತಿಹಾಸವನ್ನು ತಿಳಿದಿರುವಂತೆ ಮಾತನಾಡುತ್ತಿರುವುದು ಹಾಸ್ಯಾಸ್ಪದ.
      ಕ್ರುಷ್ಣಶಾಸ್ತ್ರಿಗಳನ್ನು ನೋಡುವುದು ಕಷ್ಟ ಎಂದು ಏಕಾ ಏಕಿ ನಿರ್ಧಾರಕ್ಕೆ ಬಂದ ತಾವು ಗಾಂಧಿಜಿಯ ಬಗ್ಗೆ ಸರಿಯಾದ ಹಿನ್ನೆಲೆ ತಿಳಿದಿರುವುದು ನನಗೆ ಅನುಮಾನ.
      ಕೃಷ್ಣಶಾಸ್ತ್ರಿಗಳು ಇಲ್ಲದಿದ್ದಾಗ ರವಿ ಬೆಳಗೆರೆ ಮನೆಗೆ ಹೋಗುವುದು ಕಷ್ಟ
      ಶಾಸ್ತ್ರಿಗಳುಂನು ನೋಡಲು ಹೋದರೆ ನೀವು ಯಾರು ಎತ್ತ ಎಂದು ಕೇಳದೆ ಒಳಗೆ ಬಿಡಲಾಗುತ್ತದೆ.
      ರವಿ ಬೆಳಗೆರೆ ನನಗೆ ಪರಿಚಯವಿಲ್ಲ. ಆದರೂ ಇಲ್ಲಿಯವರೆಗೆ ಶಾಸ್ತ್ರಿಗಳನ್ನು ನೋಡಲು ನನಗೆ ಒಮ್ಮೆಯೂ ತೊಂದರೆಯಾಗಿಲ್ಲ.

      ಪಟ್ಟಾಭಿಯವರು ಚುನಾವಣೆಗೆ ನಿಂತಿದ್ದೆ ಗೊತ್ತಿಲ್ಲದಿರುವಾಗ ಜನ ಅವರಿಗೆ ಮತ ನೀಡುವುದಾದರೂ ಹೇಗೆ?
      ಗಾಂಧೀಜಿಯ ಬಗ್ಗೆ ವಿಷವೇ ತುಂಬಿರುವಾಗ ಇಷ್ಟು ಚಿಕ್ಕ ವಿಷಯಯವೂ ತಲೆಗೆ ಹೋಗುವುದು ಕಷ್ಟವೇ.

      ಇನ್ನು ನೀವು ಕೊಟ್ಟಿರುವ ಲಿಂಕುಗಳು ಹಾಸ್ಯಾಸ್ಪದವಾಗಿವೆ.
      ಯಾರೋ ಒಂದಿಬ್ಬರು ಮುಸ್ಲಿಮರು ಬಂದು ಗಾಂಧೀಜಿಗೆ ಹೊಡೆದರಂತೆ ಆವಾಗಿನಿಂದ ಗಾಂಧಿಜಿ ಮುಸ್ಲಿಮರಿಗೆ ಹೆದರಲು ಶುರುಮಾಡು ಒಲೈಸತೊದಗಿದರಂತೆ.
      ಯಾವನಾದರೂ ನಂಬುವಂತೆ ಆದರೂ ಸುಳ್ಳು ಹೇಳಿ ಸ್ವಾಮಿ.

      >>ಮೋಹನದಾಸನ ಕಥೆ ಏನು?
      ದೇವದಾಸ ನ ಕಥೆ ಏನಾಯಿತು ತಾವೇ ಹೇಳಿ.
      ಅದನ್ನೂ ಕೇಳಿ ನಕ್ಕುಬಿಡುತ್ತೇನೆ. ಬತ್ತಳಿಕೆಯಲ್ಲಿರುವ ಸುಳ್ಳುಗಳನ್ನು ಹರಿಬಿಟ್ಟು ನಮ್ಮನ್ನು ನಗಿಸಿ

      ಉತ್ತರ
      • Narendra Kumar.S.S's avatar
        Narendra Kumar.S.S
        ಫೆಬ್ರ 22 2011

        > ಪ್ರಯತ್ನವನ್ನೇ ಮಾಡದೆ ನಿರ್ಧಾರಕ್ಕೆ ಬರುವ ತಾವು ಇತಿಹಾಸವನ್ನು ತಿಳಿದಿರುವಂತೆ ಮಾತನಾಡುತ್ತಿರುವುದು ಹಾಸ್ಯಾಸ್ಪದ.
        ರವಿ ಬೆಳಗೆರೆಯವರ ಮನೆ ಕುರಿತಾಗಿ ತಿಳಿದಿರುವುದರಿಂದ ಹಾಗೆ ಹೇಳಿದೆನಷ್ಟೇ.
        ನಾನು ಪ್ರಯತ್ನವನ್ನು ಮಾಡಿಲ್ಲ ಎಂದು ನೀವು ನಿರ್ಧಾರಕ್ಕೆ ಬಂದಿರುವುದನ್ನು “ಬಾಲಿಶ” ಎಂದಷ್ಟೇ ನಾನು ಹೇಳಬಹುದು.

        > ಕ್ರುಷ್ಣಶಾಸ್ತ್ರಿಗಳನ್ನು ನೋಡುವುದು ಕಷ್ಟ ಎಂದು ಏಕಾ ಏಕಿ ನಿರ್ಧಾರಕ್ಕೆ ಬಂದ ತಾವು ಗಾಂಧಿಜಿಯ ಬಗ್ಗೆ ಸರಿಯಾದ ಹಿನ್ನೆಲೆ
        > ತಿಳಿದಿರುವುದು ನನಗೆ ಅನುಮಾನ.
        ನಾನು ಬಂದಿರುವ ನಿರ್ಧಾರಕ್ಕೂ ನಾವು ಚರ್ಚಿಸುತ್ತಿರುವ ವಿಷಯಕ್ಕೂ ಸಂಬಂಧವೇನು?
        ತಾವು ಗಾಂಧೀಜಿಯವರ ಕುರಿತಾಗಿ ಬರೆದಿದ್ದೀರಿ. ಆದರೆ ಗಾಂಧೀಜಿಯವರನ್ನು ಕಂಡಿರಲು ಸಾಧ್ಯವಿಲ್ಲ.
        ಹೀಗಾಗಿ ನೀವು ಗಾಂಧೀಜಿಯವರ ಕುರಿತಾಗಿ ತಿಳಿದಿರುವುದು ಅನುಮಾನ, ಎಂದು ನಾನು ಕೂಡಾ ವಾದಿಸಬಹುದು.
        ಕೃಷ್ಣಶಾಸ್ತ್ರಿಗಳೊಡನೆ ಮಾತನಾಡದೆ ಗಾಂಧೀಜಿಯವರ ಕುರಿತಾಗಿ ತಿಳಿಯಲು ಸಾಧ್ಯವಿಲ್ಲ ಎಂದು ನೀವು ಅಭಿಪ್ರಾಯ ಹೊಂದಿದಂತಿದೆ.
        ಇದು ಇತಿಹಾಸವನ್ನು ಅಭ್ಯಸಿಸುವ ರೀತಿಯಲ್ಲ.

        > ಪಟ್ಟಾಭಿಯವರು ಚುನಾವಣೆಗೆ ನಿಂತಿದ್ದೆ ಗೊತ್ತಿಲ್ಲದಿರುವಾಗ ಜನ ಅವರಿಗೆ ಮತ ನೀಡುವುದಾದರೂ ಹೇಗೆ?
        ತಾವು ಚುನಾವಣೆಗೆ ನಿಂತಿದ್ದೇ ಗೊತ್ತುಪಡಿಸಲಾಗದ ವ್ಯಕ್ತಿ ಚುನಾವಣೆಗೆ ನಿಂತದ್ದಾದರೂ ಏಕೆ?
        ಇನ್ನು ಅಂತಹವರು ಚುನಾವಣೆ ಗೆದ್ದುಬಿಟ್ಟರೆ ಗತಿ ಏನು?

        > ಗಾಂಧೀಜಿಯ ಬಗ್ಗೆ ವಿಷವೇ ತುಂಬಿರುವಾಗ ಇಷ್ಟು ಚಿಕ್ಕ ವಿಷಯಯವೂ ತಲೆಗೆ ಹೋಗುವುದು ಕಷ್ಟವೇ.
        ಇದು ಕೂಡಾ ನಿಮ್ಮ ಊಹೆಯೇ.
        ಒಂದು ವಿಷಯದ ಕುರಿತಾಗಿ ಚರ್ಚಿಸುವಾಗ ಅಮೂಲಾಗ್ರವಾಗಿ ಚರ್ಚಿಸಬೇಕು ಮತ್ತು ವಿಷಯದ ಕುರಿತಾಗಿ ಮಾತ್ರ ಚರ್ಚಿಸಬೇಕು.
        ಅದನ್ನು ಬಿಟ್ಟು, ಚರ್ಚಿಸುತ್ತಿರುವ ವ್ಯಕ್ತಿಯ ಚಾರಿತ್ರ್ಯವಧೆಗೆ ಪ್ರಯತ್ನಿಸುವುದು ಚರ್ಚೆಯಲ್ಲಿ ಸೋಲುತ್ತಿರುವುದರ ಕುರುಹು ಅಷ್ಟೇ.

        > ಇನ್ನು ನೀವು ಕೊಟ್ಟಿರುವ ಲಿಂಕುಗಳು ಹಾಸ್ಯಾಸ್ಪದವಾಗಿವೆ.
        ಅದರಲ್ಲಿ ಹಾಸ್ಯವೇನಿದೆ ಹೇಳಿ?
        ನೀವು ಹೇಳುತ್ತಿರುವ ” ಪಟ್ಟಾಭಿಯವರು ಚುನಾವಣೆಗೆ ನಿಂತಿದ್ದೆ ಗೊತ್ತಿಲ್ಲದಿರುವಾಗ ಜನ ಅವರಿಗೆ ಮತ ನೀಡುವುದಾದರೂ ಹೇಗೆ?” ಕಾರಣ ಹಾಸ್ಯಾಸ್ಪದವಲ್ಲ ಅಲ್ಲವೇ?
        ನಾನು ಕೊಟ್ಟಿರುವ ಕೊಂಡಿಗಳಲ್ಲಿರುವ ಸಂಗತಿ ಸತ್ಯವಲ್ಲವೆಂದಾದರೆ ನನ್ನ ತಪ್ಪನ್ನು ತಿದ್ದಿಕೊಳ್ಳುವೆ.
        ಆದರೆ, ಅದು ಸತ್ಯವೆಂದು ನಾನು ನಂಬಿರುವೆ. ಅದು ಸತ್ಯವಲ್ಲವೆನ್ನುವುದು ನಿಮ್ಮ ಅಧ್ಯಯನ ಮತ್ತು ಸಂಶೋಧನೆಗಳಿಂದ ಗೋಚರವಾಗಿದ್ದರೆ, ದಯವಿಟ್ಟು ಅದಕ್ಕೆ ನಿಮ್ಮ ಆಧಾರಗಳನ್ನು ತೋರಿಸಿ.
        ಅದನ್ನು ಬಿಟ್ಟು “ಹಾಸ್ಯಾಸ್ಪದ” ಎಂದು ಜರೆದು, ವಿಷಯವನ್ನು ಪಕ್ಕಕ್ಕೆ ತಳ್ಳಿಬಿಡುವುದು ಚರ್ಚಿಸುವ ರೀತಿಯಲ್ಲ.

        > ಯಾವನಾದರೂ ನಂಬುವಂತೆ ಆದರೂ ಸುಳ್ಳು ಹೇಳಿ ಸ್ವಾಮಿ.
        ನಾನಿಲ್ಲಿ ಯಾವ ಸುಳ್ಳನ್ನೂ ಹೇಳಲು ಹೊರಟಿಲ್ಲ, ಸುಳ್ಳನ್ನು ಸತ್ಯವೆಂದು ಸಾಧಿಸಲೂ ಹೊರಟಿಲ್ಲ.
        ಗಾಂಧೀಜಿಯವರು ನೆಹರೂ ಅವರನ್ನು ಬೆಂಬಲಿಸಿದರು ಎನ್ನುವುದು ಇಂದಿನವರೆಗೂ ಜಗತ್ತೇ ನಂಬಿಕೊಂಡು ಬಂದಿರುವ ಸತ್ಯ.
        ಅದನ್ನು ಸುಳ್ಳಾಗಿಸಲು ಹೊರಟವರು ತಾವು.
        ಹೀಗಾಗಿ ನಿಮ್ಮ ಮಾತು ನಿಮಗೇ ಹೆಚ್ಚು ಅನ್ವಯಿಸುತ್ತದೆ.
        ನಿಮ್ಮ ವಾದಕ್ಕೆ ಪುಷ್ಟಿ ಕೊಡುವಂತ ಹೊಸ ವಿಷಯಗಳನ್ನು, ಸಂಬಂಧಿಸಿದ ಮತ್ತಷ್ಟು ಮಾಹಿತಿಗಳನ್ನು ತಿಳಿಸುವುದು ಬಿಟ್ಟು
        ಚರ್ಚಿಸುತ್ತಿರುವವನನ್ನು ಹೀಗೆ ಜರೆಯುವುದು ಸರಿಯಲ್ಲ ಎನ್ನುವುದು ನನ್ನ ನಂಬಿಕೆ.

        > ದೇವದಾಸ ನ ಕಥೆ ಏನಾಯಿತು ತಾವೇ ಹೇಳಿ.
        ನನಗೆ ಈ ವಿಷಯದಲ್ಲಿ ಸ್ವಲ್ಪ ಗೊಂದಲವಾಯಿತು. ಹರಿಲಾಲ್ ಎಂದು ನೀವು ಹೇಳಿದ್ದು ಸರಿಯಾಗಿದೆ.
        ಈ ಕುರಿತಾಗಿ 13ನೇ comment ನಲ್ಲಿ ತಿಳಿಸಿದ್ದೇನೆ. ಅದನ್ನು ನೀವು ಓದಿರಲೇಬೇಕು. ಅದರ ನಂತರವೇ ನಿಮ್ಮ comment ದಾಖಲಾಗಿರುವುದು. ಹೀಗಿದ್ದೂ ನೀವು, ಈ ಕೆಳಗಿನಂತೆ ಹೇಳಿರುವುದು ದುರದೃಷ್ಟಕರ: > ಅದನ್ನೂ ಕೇಳಿ ನಕ್ಕುಬಿಡುತ್ತೇನೆ. ಬತ್ತಳಿಕೆಯಲ್ಲಿರುವ ಸುಳ್ಳುಗಳನ್ನು ಹರಿಬಿಟ್ಟು ನಮ್ಮನ್ನು ನಗಿಸಿ

        ನಾನು ಎತ್ತಿರುವ ಅನೇಕ ಪ್ರಶ್ನೆಗಳಿಗೆ ನಿಮ್ಮಿಂದ ಇಲ್ಲಿಯತನಕ ಸಮರ್ಪಕ ಉತ್ತರ ದೊರೆತಿಲ್ಲ.
        ಅವುಗಳಿಗೆ ಉತ್ತರ ನೀಡುವುದರ ಬದಲು, “ಹಾಸ್ಯಾಸ್ಪದ”, “ಸುಳ್ಳು”, ಇತ್ಯಾದಿ ಹೇಳಿ ಚರ್ಚೆಯ ದಾರಿತಪ್ಪಿಸುತ್ತಿರುವಿರಿ.
        ನನ್ನ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿ.
        ಮೊದಲು ನನ್ನ 11ನೇ comment ಗೆ ಉತ್ತರಿಸಿ.
        ಆ ನಂತರ 16ನೇ comment ಗೆ ಬರಬಹುದು.
        ಮತ್ತು ನಂತರ 12ನೇಯದನ್ನು ಚರ್ಚಿಸಬಹುದು.

        ಶ್ರೀಹರ್ಷ ಅವರೆ, ಇವೆಲ್ಲಕ್ಕೂ ಮುಂಚೆ ನಾನೊಂದು ವಿಷಯವನ್ನು ಸ್ಪಷ್ಟಪಡಿಸಬಯಸುತ್ತೇನೆ.
        ನಾವಿಲ್ಲಿ ನಡೆಸುತ್ತಿರುವುದು ಚರ್ಚೆಯೇ ಹೊರತು ಬೀದಿ ಜಗಳವಲ್ಲ ಅಥವಾ ಅಸೆಂಬ್ಲಿಯಲ್ಲಿ ನಡೆಸುವ ಹೊಡೆದಾಟವಲ್ಲ.
        ಚರ್ಚೆ ನಡೆಸುವುದು ಸತ್ಯದ ಎಲ್ಲಾ ಮುಖಗಳನ್ನು ಸರಿಯಾಗಿ ತಿಳಿದುಕೊಳ್ಳಲು.
        ಕೆಲವೊಂದು ಸತ್ಯ ನಮಗಿಷ್ಟವಾಗದಿರಬಹುದು, ಆದರೆ, ಸತ್ಯ ಬದಲಾಗುವುದಿಲ್ಲ.
        ಮತ್ತು ಇಲ್ಲಿ ಚರ್ಚಿಸುತ್ತಿರುವುದು ನಿಮ್ಮ ವಾದವೋ ಅಥವಾ ನನ್ನ ವಾದವೋ ಗೆಲ್ಲಲಿ ಯಾ ಸೋಲಲಿ ಅಂತಲ್ಲ.
        ಹೀಗಿರುವಾಗ ನೀವು “ವೈಯಕ್ತಿಕ ಟೀಕೆ”ಗಳನ್ನು ಮಾಡಿದರೆ, ಅದು ಚರ್ಚೆಗೆ ಮತ್ತು ಸತ್ಯಕ್ಕೆ ಮಾಡುವ ಮೋಸವಾಗುತ್ತದಷ್ಟೇ.
        “ವೈಯಕ್ತಿಕ ಟೀಕೆ”ಗಳ ಬದಲಾಗಿ ನಿಮ್ಮ ಟೀಕೆಗಳನ್ನು ಸತ್ಯದ ಕುರಿತಾಗಿ ಹೆಚ್ಚು ಬೆಳಕು ಚೆಲ್ಲಲು ಉಪಯೋಗಿಸಿದರೆ ಎಲ್ಲರಿಗೂ ಉಪಯೋಗವಾಗುತ್ತದೆ. ನೀವು ನನ್ನ ಈ “ಸಲಹೆ”ಗಳನ್ನು ಅಪಾರ್ಥ ಮಾಡಿಕೊಳ್ಳುವುದಿಲ್ಲವೆಂದು ಭಾವಿಸುವೆ.
        ನನ್ನ ಈ ಮಾತುಗಳನ್ನು ನೀವು ಒಪ್ಪಬಹುದು ಅಥವಾ ಒಪ್ಪದಿರಬಹುದು – ಆ ಸ್ಬಾತಂತ್ರ್ಯ ನಿಮಗಿದೆ.
        ಸತ್ಯಾನ್ವೇಷಣೆಗಿಂತ ವಾದ ಗೆಲ್ಲುವುದೇ ಮುಖ್ಯವೆಂದು ನೀವು ನಂಬುವುದಾದರೆ, ಇದು ನನ್ನ ಕಡೆಯ comment ಎಂದು ತಿಳಿಯಬಹುದು.

        ಉತ್ತರ
  10. Narendra Kumar.S.S's avatar
    Narendra Kumar.S.S
    ಫೆಬ್ರ 21 2011

    ಇನ್ನು ಭಾರತಕ್ಕೆ ಸ್ವಾತಂತ್ರ್ಯ ಸಿಗಲು ಪ್ರಮುಖ ಕಾರಣವೇನು?
    ೧೯೪೨ರ ಕ್ವಿಟ್ ಇಂಡಿಯಾ ಚಳುವಳಿ ವಿಫಲವಾಗಿತ್ತು. ಸುಭಾಷರ ಸೈನ್ಯ ಯುದ್ಧದಲ್ಲಿ ಸೋತಿತ್ತು.
    ೧೯೪೬-೪೭ರಲ್ಲಿ ಯಾವುದೇ ಚಳುವಳಿ ನಡೆಯಲಿಲ್ಲ.
    ಹೀಗಿರುವಾಗ ಬ್ರಿಟಿಷರು ಸ್ವಾತಂತ್ರ್ಯ ಏಕೆ ನೀಡಿದರು.
    ೧೯೪೮ರಲ್ಲಿ ನೀಡುವೆವೆಮ್ದು ಹೇಳಿದ್ದ ಸ್ವಾತಂತ್ರ್ಯವನ್ನು ಒಂದು ವರ್ಷ ಮೊದಲೇ – ಅಂದರೆ ೧೯೪೭ರಲ್ಲೇ ಆತುರಾತುರದಿಂದ ನೀಡಿಬಿಟ್ಟರು. ಅವರಿಗೇಕೆ ಸ್ವಾತಂತ್ರ್ಯ ನೀಡಲು ಇದ್ದಕ್ಕಿದ್ದಂತೆ ಇಷ್ಟು ಅವಸರಕ್ಕಿಟ್ಟುಕೊಂಡಿತು?
    ಇದರ ಕುರಿತಾಗಿ ತಿಳಿಯಲು, ಈ ಕೆಳಗಿನ ವಾಕ್ಯಗಳನ್ನು ಓದಿರಿ. ನಾನು ಇದನ್ನು ಬೇರಾವುದೋ ಚರ್ಚೆಯಲ್ಲಿ ಬರೆದದ್ದು ಮತ್ತು ಅದನ್ನು ಕನ್ನಡಕ್ಕೆ ಅನುವಾದ ಮಾಡಲು ಪುರುಸೊತ್ತಿಲ್ಲ. ಹೀಗಾಗಿ ಆಂಗ್ಲ ಭಾಷೆಯಲ್ಲೇ ನೀಡುತ್ತಿದ್ದೇನೆ. ಇದನ್ನು ಓದಿದ ನಂತರ, ಸ್ವಾತಂತ್ರ್ಯ ಗಳಿಸುವಲ್ಲಿ ಗಾಂಧೀಜಿಯವರ ಪಾತ್ರದ ಕುರಿತು ಮನದಟ್ಟಾಗುತ್ತದೆ:

    http://www.ihr.org/jhr/v03/v03p407_Borra.html – This page is from the “Institute of Historical Review”.
    In this read the last section – it talks about R.C.Majumdar’s book and also a conversation between Clement Attlee and P.B.Chakrabarty (he was the chief justice of Culcutta High Court and also worked as governer or West Bengal).

    http://www.tribuneindia.com/2006/20060212/spectrum/main2.htm – This talks about the revolt in the Navy famously called as RIN Mutiny (RIN – Royal Indian Navy).

    Here is the interesting piece ascribed to P.B.Chakrabarty:
    You have fulfilled a noble task by persuading Dr. Majumdar to write this history of Bengal and publishing it … In the preface of the book Dr. Majumdar has written that he could not accept the thesis that Indian independence was brought about solely, or predominantly by the non-violent civil disobedience movement of Gandhi. When I was the acting Governor, Lord Atlee, who had given us independence by withdrawing the British rule from India, spent two days in the Governor’s palace at Calcutta during his tour of India. At that time I had a prolonged discussion with him regarding the real factors that had led the British to quit India. My direct question to him was that since Gandhi’s “Quit India” movement had tapered off quite some time ago and in 1947 no such new compelling situation had arisen that would necessitate a hasty British departure, why did they have to leave? In his reply Atlee cited several reasons, the principal among them being the erosion of loyalty to the British Crown among the Indian army and navy personnel as a result of the military activities of Netaji. Toward the end of our discussion I asked Atlee what was the extent of Gandhi’s influence upon the British decision to quit India. Hearing this question, Atlee’s lips became twisted in a sarcastic smile as he slowly chewed out the word, “m-i-n-i-m-a-l!”

    The above has been published in: Majumdar, R. C., Jibanera Smritideepe, Calcutta, General Printers and Publishers, 1978, pp. 229-230

    ಉತ್ತರ
  11. Narendra Kumar.S.S's avatar
    Narendra Kumar.S.S
    ಫೆಬ್ರ 21 2011

    http://retributions.nationalinterest.in/weekend-reading-gandhi-nehru-and-patel/
    ಈ ಮೇಲಿನ ಕೊಂಡಿಯಲ್ಲಿ ೧೯೪೬ರ ಚುನಾವಣೆಗೆ ಸಂಬಂಧಿಸಿದ ಬರಹಗಳಿವೆ.
    ಸ್ವತಃ ಗಾಂಧೀಜಿಯವರ ಮೊಮ್ಮಗ ರಾಜಮೋಹನ ಗಾಂಧಿಯವರ ಬರಹವದು!
    ಸರ್ದಾರ್ ಪಟೇಲ ಮತ್ತು ನೆಹರು ಮಾತ್ರವಲ್ಲ, ಇನ್ನೂ ಇಬ್ಬರು ಅಭ್ಯರ್ಥಿಗಳಿದ್ದರು – ಆಚಾರ್ಯ ಕೃಪಲಾನಿ ಮತ್ತು ಪಟ್ಟಾಭಿ ಸೀತಾರಾಮಯ್ಯ.
    ನೆಹರು ಪರವಾಗಿ ಕೇವಲ ಸರ್ಧಾರ್ ಪಟೇಲರು ಮಾತ್ರವಲ್ಲ, ಉಳಿದ ಅಭ್ಯರ್ಥಿಗಳೂ ತಮ್ಮ ಪತ್ರಗಳನ್ನು ವಾಪಸ್ ಪಡೆದರು.
    ಮೌಲಾನಾ ಅಜ಼ಾದ್ ಅವರಿಗೂ ಆ ಚುನಾವಣೆಗೆ ನಿಲ್ಲುವ ಆಸೆಯಿತ್ತು. ಇದರ ಕುರಿತಾಗಿ ಅವರೇ ಸ್ವತಃ ಬರೆದಿದ್ದಾರೆ.
    ಅದನ್ನು ಗಾಂಧೀಜಿಯವರಲ್ಲಿ ತಿಳಿಸಿದಾಗ, ಅವರಿಗೆ ನಿಲ್ಲದಂತೆ ಮತ್ತು ತಮ್ಮ ಬೆಂಬಲ ನೆಹರೂ ಅವರಿಗೆ ಇದೆಯೆಂಬುದಾಗಿಯೂ ಗಾಂಧೀಜಿ ಹೇಳಿದರೆಂದು ಸ್ವತಃ ಮೌಲಾನಾ ಅಜ಼ಾದ್ ಹೇಳಿದ್ದಾರೆ.
    ಮೌಲಾನಾ ಅವರಿಗೆ ಗಾಂಧೀಜಿ ಈ ರೀತಿಯಾಗಿ ತಿಳಿಸಿದಾಗ ಪ್ರಾಯಶಃ ಬೆಳಗೆರೆ ಕೃಷ್ಣಶಾಸ್ತ್ರಿಗಳು ಅಲ್ಲಿದ್ದಿರಲಾರರು.

    ನೆಹರು ಅವರಿಗೆ ಗಾಂಧೀಜಿ ಬೆಂಬಲವಿತ್ತು ಎನ್ನುವುದರಲ್ಲಿ ಎರಡನೇ ಮಾತಿಲ್ಲ.
    ಅದಕ್ಕೆ ಸಾಕಷ್ಟು ಆಧಾರಗಳಿವೆ. ತಮ್ಮ ಅಭ್ಯರ್ಥಿ ಗೆಲ್ಲುವಂತೆ ಮಾಡಲು ಗಾಂಧೀಜಿ ಅನೇಕ ತಂತ್ರಗಳನ್ನು ಹೂಡುತ್ತಿದ್ದರು.
    ಸುಭಾಷ್ ಚಂದ್ರ ಬೋಸರನ್ನು ಓಡಿಸಲು ಒಂದು ತಂತ್ರವಾದರೆ, ಪಟೇಲರನ್ನು ಹಿಂತೆಗೆಯುವಂತೆ ಮಾಡಲು ಮತ್ತೊಂದು ತಂತ್ರ.
    ಒಟ್ಟಿನಲ್ಲಿ ತಮ್ಮ ಮಾತು ಮಾತ್ರ ನಡೆಯಬೇಕು ಎನ್ನುವುದೇ ಅವರ ಉದ್ದೇಶವಾಗಿರುತ್ತಿತ್ತು.
    ಗಾಂಧೀಜಿಯವರ ಈ ನಿಲುವಿನಿಂದಾಗಿ ನೆಹರು ಪ್ರಧಾನಿಯಾದರು ಮತ್ತು ಅದರ ಪರಿಣಾಮವನ್ನು ದೇಶ ಯಾವ ರೀತಿ ಎದುರಿಸುತ್ತಿದೆ
    ಎನ್ನುವುದನ್ನು ವಿವರಿಸುವ ಆವಶ್ಯಕತೆಯಿಲ್ಲ.

    ಉತ್ತರ
    • agn's avatar
      agn
      ಫೆಬ್ರ 24 2011

      I dont know the history to a greater depth, but in my spare time i have touched the surface. Considering the history from the corners of the world, the perspective of the later generations lets take a look at this alternate 1900- If Bose and his aides were dominant in the freedom struggle and after independence, then probably several stories would have been derived out of faint and distorted and fictious historical facts against him in support of the loser Gandhi. I believe even some would have told us the story of violent ways of Subhash to suppress ‘peaceful’ Gandhi for political mileage. Its very human to derive a sense of pride in supporting underestimated and ignored ones.

      ಉತ್ತರ
      • Narendra Kumar.S.S's avatar
        Narendra Kumar.S.S
        ಫೆಬ್ರ 24 2011

        agn> If Bose and his aides were dominant in the freedom struggle and after
        agn> independence
        This is a hypothetical situation and we are not discussing the various permutations and combinations of “what would have happened if….” here. History is not based on permutation & combination. History is based on facts. We cannot discuss something which is not a fact.

        agn> several stories would have been derived out of faint and distorted and
        agn> fictitious historical facts against him in support of the loser Gandhi. I
        agn> believe even some would have told us the story of violent ways of Subhash to
        agn> suppress ‘peaceful’ Gandhi for political mileage
        Even if we agree to discuss this hypothesis for argument sake, the above argument cannot be taken as a justifications for whatever that was done by Gandhi.
        If that is done, even you can defend Hitler and tell “Mahatma Gandhi would have behaved like Hitler, if he were to be in his place”!

        If some wrong has been done, we should accept that it is “Wrong”. Why do you want to defend the “wrongs”. That doesn’t undermine the good deeds and the greatest sacrifices that Gandhi has done and the way he created awareness in the common masses regarding Independence Struggle.
        But, just because we call a person as “Mahatma”, we are not obligated to defend even the mis-deeds if any have been done by that person.

        ಉತ್ತರ
        • agn's avatar
          agn
          ಫೆಬ್ರ 24 2011

          Yes history is ‘based’ on the facts.

          A misconception on your part, the arguments were not meant to be any kind of justifications for anyone’s misdeeds. I would have posted the present historical facts as a ‘fictitious’ situation in the fictitious alternate present presented in the previous comment.

          I do agree Gandhi/Bose might have behaved like Hitler and Hitler might have behaved like Gandhi/Bose if he was in their situation.
          I bet Gandhi would not have remained non-violent if there was any hitlerish act in India.

          Anyhow I was speaking of two entities in the history named as ‘MK Gandhi’ and ‘SC Bose’ not the persons. I dont know a bit about those persons. So dont presume I am defending someone.

          My few logical doubts/conclusions.
          1) During the pre independence era why Gandhi would attempt minority appeasement when the majority of Hindus were followers of him (based on the fact that Congress got huge majority for the next 30 years in the polls)?
          2) If he had stood for partition of india and pak he would have retained his followers + gained those who hated to share india with muslims. If I am thinking of this then Gandhi might have had thought of this for sure. So he dint go against it to appease some minorities as claimed by a few today.

          Finally, the tragic part is that you have been defending your claims against ‘Gandhi’ more than tributes of the legends Bose or Bhagath and the other person exactly the opposite. What on the earth is driving us to conclude that ‘to admire Gandhi’ and ‘to admire Bose/Bhagath’ as mutually exclusive events? or ‘to blame Gandhi’ and ‘to admire Bose/Bhagath’ as highly correlated events?

          The last note:
          Here I am speaking of Gandhi, not the damned post-independent Congress, which awarded ‘Bharath Ratna’ to some film personalities/nehru-bloodline years before Ambedkar/Bose (alphabetical order 🙂 ) were considered.

          ಉತ್ತರ
          • ರಾಕೇಶ್ ಶೆಟ್ಟಿ's avatar
            ಫೆಬ್ರ 24 2011

            ಇದು ಕನ್ನಡದ ಬ್ಲಾಗು,ಇಲ್ಲಿ ಕನ್ನಡದಲ್ಲೇ ಚರ್ಚೆಯಾದ್ರೆ ಚಂದ 🙂

            ಉತ್ತರ
          • Narendra Kumar.S.S's avatar
            Narendra Kumar.S.S
            ಫೆಬ್ರ 25 2011

            > I do agree Gandhi/Bose might have behaved like Hitler and Hitler might have behaved
            > like Gandhi/Bose if he was in their situation. I bet Gandhi would not have remained
            > non-violent if there was any hitlerish act in India.
            Thanks for clarifying and understanding.

            > I dont know a bit about those persons. So dont presume I am defending someone.
            Here, we are not defending anybody or opposing anybody. We are just looking back at some events that happened in history and see if we can draw some lessons.

            > 1) During the pre independence era why Gandhi would attempt minority appeasement
            > when the majority of Hindus were followers of him (based on the fact that
            > Congress got huge majority for the next 30 years in the polls)?
            First of all, Mahatma Gandhi never had an eye on making Congress win in the polls.
            Even before Gandhi joined Congress, that organizations was in talks with Britishers. But, it was always appealing to grant “some” extra benefits, etc.
            After 1905, the situation changed and Congress was changed into an organization for fighting freedom.
            But, Britishers were very intelligent and were always thinking of ways to divide the people and continuing their rule. They had learnt a very good lesson from 1857 and 1905 – If Hindus and Muslims come together, then it will be very difficult for them to rule here. So, they used the enmity between the two societies to their advantage.
            They used to meet the leaders of both the groups separately.
            When they met Muslim leaders, they told them:
            “Do not believe Hindus. Mulsims should be the real rulers after Britishers left, Hindus will deceive you, Muslims will not get fair deal in a Hindu Majority country, etc”.
            When they met Hindu (read Congress) leaders, they told them that:
            “You are communal. Reason is, you don’t have any Muslims among you. You are representing only one group and not the entire nation. We will listen to you and agree to all your demands, only if you all come as a single group”.

            Now Congress leaders believed in those words and wanted to win over Muslims.
            But, muslims already had an organization called Muslim League and also many muslim leaders and they were all opposed to Congress.
            So, how to win over the Muslims, without which independence is not possible.
            Thus started the appeasement.
            The first historic blunder happened in 1919-21 in the form of Khilafat Movement.
            There is no relation to “Khilafat Movement” and our Independence movement.
            Still Gandhi gave unconditional support to Khilafat and announced “Non-Cooperation Movement”. Khilafat failed and resulted in Moplah Riot – Thousands of Hindus were killed, raped, kidnapped, etc!!
            But, Gandhi defended the Moplah Riot, because he wanted to win over Muslims!!
            Later, they agreed to the dissection of Vande Mataram (because Muslims didn’t want to sing it). Later Gandhi inserted the name of “Allah” in the famous “Raghupati Raghava Rajaram” bhajan. Finally they divided the flag and also the country!!

            > 2) If he had stood for partition of india and pak he would have retained his
            > followers + gained those who hated to share india with muslims.
            Gandhi till the end did not support partition.
            But, leaders like Nehru were fed up with freedom struggle and wanted to enjoy the fruits and put pressure on Gandhi to accept.
            Actually Gandhi had announced that “Vivisect my body before vivisecting my mother land”.

            > Finally, the tragic part is that you have been defending your claims against
            > ‘Gandhi’ more than tributes of the legends Bose or Bhagath and the other person
            > exactly the opposite.
            Look at the original article. Then you will know how we came here.
            It is a historical fact that Gandhi supported Nehru for presidentship in 1946.
            But, the author thought it is a black mark on Gandhi and wanted to change that opinion. So, we had to put forth the facts to show how Gandhi was adament from the beginning and also how he was always supporting Nehru.

            > What on the earth is driving us to conclude that ‘to admire Gandhi’ and ‘to
            > admire Bose/Bhagath’ as mutually exclusive events? or ‘to blame Gandhi’ and ‘to
            > admire Bose/Bhagath’ as highly correlated events?
            It is not about admiring Gandhi or admiring Bose at all.

            > gained those who hated to share india with muslims.
            One more thing that you need to understand.
            Nobody hated to share India with Muslims.
            In fact, every Hindu was asking them to stay here and every Hindu wanted an united India. Congress also had passed a resolution 1930 session that, “We want Independence for the United India”.
            But, Muslim League was pestering for Pakistan and till the end it didn’t budge.
            When Congress gave a call for “Quit India” in 1942, Muslim League gave a call for “Split and Quit”.
            In 1946 when the talks for Independence started, Muslim League let out a call for bloodshed and millions of Hindus got affected.
            So, it was the Muslim League that didn’t want to stay in India.
            The reason they gave was “Muslims are a separate nation and they cannot live with Hindus”.

            ಉತ್ತರ
  12. Narendra Kumar.S.S's avatar
    Narendra Kumar.S.S
    ಫೆಬ್ರ 25 2011

    ರಾಕೇಶ್ ಶೆಟ್ಟಿ> ಇದು ಕನ್ನಡದ ಬ್ಲಾಗು,ಇಲ್ಲಿ ಕನ್ನಡದಲ್ಲೇ ಚರ್ಚೆಯಾದ್ರೆ ಚಂದ
    ಒಪ್ಪಿದೆ. ಇಂಗ್ಲಿಷಿನಲ್ಲಿ ಪ್ರಶ್ನೆ ಬಂದಿತು. ಪ್ರಾಯಶಃ ಅವರಿಗೆ ಕನ್ನಡದ ಉತ್ತರ ಅರ್ಥವಾಗದಿರಬಹುದೆಂದು ಭಾವಿಸಿ ಆ ಭಾಷೆಯಲ್ಲಿಯೇ ಬರೆಯಬೇಕಾಯಿತು. ಅದಕ್ಕಾಗಿ ಕ್ಷಮೆ ಇರಲಿ.:)

    ಉತ್ತರ
    • agn's avatar
      agn
      ಫೆಬ್ರ 25 2011

      ರಾಕೇಶ್ ಶೆಟ್ಟಿ> ನೆನಪಿಸಿದ್ದಕ್ಕಾಗಿ ಅನಂತಾನಂತ ಧನ್ಯವಾದಗಳು.

      Narendra Kumar.S.S>
      ಮುಸ್ಲಿಮ್ ಲೀಗ್ ಬಗೆಗಿನ ಮಾಹಿತಿ ಪರಿಶೀಲಿಸಿದೆ ಹಾಗು ಒಪ್ಪಿದೆ. ಧನ್ಯವಾದಗಳು.

      >ಗಾಂಧೀಜಿಯವರ ಈ ನಿಲುವಿನಿಂದಾಗಿ ನೆಹರು ಪ್ರಧಾನಿಯಾದರು ಮತ್ತು ಅದರ ಪರಿಣಾಮವನ್ನು ದೇಶ ಯಾವ ರೀತಿ ಎದುರಿಸುತ್ತಿದೆ
      >ಎನ್ನುವುದನ್ನು ವಿವರಿಸುವ ಆವಶ್ಯಕತೆಯಿಲ್ಲ.
      “ಗಾಂಧೀಜಿಯವರ ಈ ಅಕ್ಷೆಪಾರ್ಹ ನಿಲುವಿನಿಂದಾಗಿ ನೆಹರು ಪ್ರಧಾನಿಯಾದರು” ಎಂದು ಹೇಳಿದ್ದರೆ ಅದು ಸರ್ವರು ಒಪ್ಪುವಂತಿರುತ್ತಿತ್ತು, ತದ್ವಿರುದ್ಧ ನಿಲುವಿನಿಂದ ದೇಶದ ಸ್ತಿತಿ ಉತ್ತಮವಾಗಿರುತ್ತಿತ್ತು ಎಂಬರ್ಥವನ್ನು ಕೊಡುವ ಮುಂದಿನ ಸಾಲನ್ನು ಒಪ್ಪಲು ಸ್ವಲ್ಪ ಕಷ್ಟವಾದಿತು, ಕಾರಣ ನಮ್ಮ ದೇಶದ ಸ್ಥಿತಿಗೆ ಮೆಕ್ ಕಾಲೇಯಂತ ಯಕಶ್ಚಿಥ್ ವ್ಯಕ್ತಿಗಳಿಂದ ಕೂಡ ಬಹು ದೊಡ್ಡ ಕೊಡುಗೆಗಳಿವೆ. ಅಂತಹ ಕೊಡುಗೆಗಳ ಪಟ್ಟಿಗೆ ಈ ಕೊಡುಗೆಯು ಸೇರಿಹುದು. ನೂರು ಕೊಡಲಿ ಪೆಟ್ಟುಗಳಲ್ಲಿ ಇದು ಒಂದು, ಹಾಗೆಂದು ಅದನ್ನು ಕಡೆಗಣಿಸಲು ಕೂಡ ಆಗದು.

      ನಾನು ಗಾಂಧಿಯವರ ಅಭಿಮಾನಿ. ಆದರೆ ಇಲ್ಲಿ ಪ್ರಸ್ತುತ ಪಡಿಸಿರುವ ಲೇಖನ ನಾಟಕೀಯವಾಗಿಯು, ವಾಸ್ತವದಿಂ ಕೊಂಚ ದೂರವಿಹುದೆಂಬಂತೆ ತೋರುವುದು. ಪ್ರಧಾನಿಯ ಹುದ್ದೆ ಇಷ್ಟು ಸುಲಭವಾಗಿ, ಒಂದೆ ಸನ್ನಿವೇಶದಿಂದ ನಿರ್ಧರಿತವಾಗುವುದನ್ನು ನಂಬಲು ಕಷ್ಟ ಸಾಧ್ಯ. ಹಾಗೆಂದಕೂಡಲೆ ನಾನು ಗಾಂಧಿ ’ವಿರೋಧಿ’ ಎಂದು ನಿರ್ಣಯಿಸಿದೊಡೆ ಅದು ಮೌಢ್ಯತೆಯ ಪರಮಾವಧಿ.

      ಕೊನೆಯದಾಗಿ,
      ಆಂಗ್ಲರ ಆಗಮನ ಪೂರ್ವ ಉತ್ತರದ ಮತ್ತು ದಕ್ಷಿಣದ ದೇಶಗಳಲ್ಲಿ (ಇಂದಿನ ಭಾರತ ಒಕ್ಕೂಟದ ರಾಜ್ಯಗಳು ಮತ್ತು ನೆರೆಯ ದೇಶಗಳು) ಹಿಂದು-ಮುಸ್ಲಿಮರ ಸಂಬಂಧದ ಕುರಿತು ಯಾವುದಾದರು ನಿಷ್ಪಾಕ್ಷಿಕ ಪುಸ್ತಕ/ಬರಹ/ಸಂಪರ್ಕ ಕೊಂಡಿಗಳಿದ್ದರೆ ತಿಳಿಸಿ.

      ಉತ್ತರ
      • Narendra's avatar
        Narendra
        ಫೆಬ್ರ 25 2011

        > ಆಂಗ್ಲರ ಆಗಮನ ಪೂರ್ವ ಉತ್ತರದ ಮತ್ತು ದಕ್ಷಿಣದ ದೇಶಗಳಲ್ಲಿ
        > (ಇಂದಿನ ಭಾರತ ಒಕ್ಕೂಟದ ರಾಜ್ಯಗಳು ಮತ್ತು ನೆರೆಯ
        > ದೇಶಗಳು) ಹಿಂದು-ಮುಸ್ಲಿಮರ ಸಂಬಂಧದ ಕುರಿತು
        > ಯಾವುದಾದರು ನಿಷ್ಪಾಕ್ಷಿಕ ಪುಸ್ತಕ/ಬರಹ/ಸಂಪರ್ಕ ಕೊಂಡಿಗಳಿದ್ದರೆ
        > ತಿಳಿಸಿ.
        ಈ ಕೆಳಗಿನ ಕೊಂಡಿಯಲ್ಲಿ ಅನೇಕ ಪುಸ್ತಕಗಳಿವೆ. ಅವನ್ನು ಉಚಿತವಾಗಿ ಓದಬಹುದು: http://voi.org/books/
        ಅವೆಲ್ಲವೂ ಸಾಕಷ್ಟು ಇತಿಹಾಸದ ಅಧ್ಯಯನ ನಡೆಸಿ ಬರೆದಿರುವಂತಹುದು. ಉದಾಹರಣೆಗೆ “Indian Muslims – Who are they? by K.S.Lal” ಪುಸ್ತಕವನ್ನೇ ನೋಡಿ. ಭಾರತದ ಮುಸಲ್ಮಾನರ ಮೂಲ ಯಾವುದು. ಅವರ ಸಂಖ್ಯೆ ಯಾವ ರೀತಿಯಲ್ಲಿ ಹೆಚ್ಚಾಯಿತು, ಇತ್ಯಾದಿ ಮಾಹಿತಿಗಳಿವೆ. ಈ ಪುಸ್ತಕ ಬರೆಯಲು, ಲೇಖಕರು ಮಧ್ಯಕಾಲೀನ ಲೇಖಕರ, ಅಕ್ಬರ್, ಔರಂಗಜೇಬ್ ಇತ್ಯಾದಿ ಮುಘಲ ರಾಜರ ಆಸ್ಥಾನ ಇತಿಹಾಸಕಾರರ, ಅಕ್ಬರೀನಾಮ, ಬಾಬರೀನಾಮ ಇತ್ಯಾದಿ ಸ್ವತಃ ಬಾದಶಹರು ಬರೆದಿರುವ ಪುಸ್ತಕಗಳಿಂದ ನೇರ ಉಲ್ಲೇಖಗಳನ್ನು ತೆಗೆದುಕೊಂಡಿದ್ದಾರೆ. ಹೀಗಾಗಿ, ಭಾರತೀಯ ಮುಸಲ್ಮಾನರ ಮೂಲದ ಕುರಿತಾಗಿ ಅದರಲ್ಲಿರುವಷ್ಟು ಅಧಿಕೃತ ಮಾಹಿತಿ ಬೇರೆಲ್ಲೂ ಸಿಗಲಾರದು ಎಂದು ಹೇಳಬಹುದು.
        ಸಾಕಷ್ಟು ಅಧ್ಯಯನ ಯೋಗ್ಯ ಪುಸ್ತಕಗಳು ಅಲ್ಲಿವೆ.
        ಭಾರತದ ವಿಭಜನೆಗೆ ಸಂಬಂಧಿಸಿದಂತೆ “ಆ ಕಾಳ ರಾತ್ರಿಯ ಪ್ರಶ್ನೆ” ಮತ್ತು “ದೇಶ ವಿಭಜನೆಯ ದುರಂತ ಕಥೆ” ಪುಸ್ತಕಗಳನ್ನು ಓದಿರಿ.

        ಉತ್ತರ
      • Narendra's avatar
        Narendra
        ಫೆಬ್ರ 25 2011

        > ನಾನು ಗಾಂಧಿಯವರ ಅಭಿಮಾನಿ. ಆದರೆ ಇಲ್ಲಿ ಪ್ರಸ್ತುತ ಪಡಿಸಿರುವ
        > ಲೇಖನ ನಾಟಕೀಯವಾಗಿಯು, ವಾಸ್ತವದಿಂ ಕೊಂಚ
        > ದೂರವಿಹುದೆಂಬಂತೆ ತೋರುವುದು. ಪ್ರಧಾನಿಯ ಹುದ್ದೆ ಇಷ್ಟು
        > ಸುಲಭವಾಗಿ, ಒಂದೆ ಸನ್ನಿವೇಶದಿಂದ ನಿರ್ಧರಿತವಾಗುವುದನ್ನು
        > ನಂಬಲು ಕಷ್ಟ ಸಾಧ್ಯ. ಹಾಗೆಂದಕೂಡಲೆ ನಾನು ಗಾಂಧಿ
        > ’ವಿರೋಧಿ’ ಎಂದು ನಿರ್ಣಯಿಸಿದೊಡೆ ಅದು ಮೌಢ್ಯತೆಯ
        > ಪರಮಾವಧಿ.
        ಇಲ್ಲಿ ನಾವಾರೂ ಗಾಂಧೀಜಿಯವರ ವಿರೋಧಿಗಳಲ್ಲ.
        ಗಾಂಧೀಜಿಯವರು ಅನೇಕ ವಿಷಯಗಳಲ್ಲಿ ಜಗತ್ತಿಗೇ ಆದರ್ಶವನ್ನು ಮೆರೆದವರು. ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ತಿರುವನ್ನು ನೀಡಿದವರು ಗಾಂಧೀಜಿ.
        ಆದರೆ, ಹಾಗೆಂದ ಮಾತ್ರಕ್ಕೆ ಅವರು ಮಾಡಿದ್ದೆಲ್ಲವನ್ನೂ ಕಣ್ಮುಚ್ಚಿ ಒಪ್ಪಿಕೊಳ್ಳಬೇಕೆಂದೇನೂ ಇಲ್ಲ. ಇತಿಹಾಸವನ್ನು ವಿಮರ್ಶಿಸುವಾಗ ವಸ್ತುನಿಷ್ಠವಾಗಿ ವಿಮರ್ಶಿಸಬೇಕು. ಈ ನಿಟ್ಟಿನಲ್ಲಿ ಗಾಂಧೀಜಿಯವರು ತೆಗೆದುಕೊಂಡ ಕೆಲವು ನಿರ್ಣಯಗಳ ದೂರಗಾಮಿ ಪರಿಣಾಮಗಳನ್ನು ನಾವು ಗಮನಿಸಲೇಬೇಕು.
        ಅವರು ಮಾಡಿರಬಹುದಾದ ತಪ್ಪುಗಳನ್ನು ಮುಚ್ಚಿಹಾಕಬೇಕಾದ ಅಗತ್ಯವೇನು? ಅವರ ತಪ್ಪುಗಳನ್ನು ಒಪ್ಪುವುದರಿಂದ ಗಾಂಧೀಜಿಯವರ ಮಹತ್ವಕ್ಕೇನೂ ಧಕ್ಕೆ ಬರುವುದಿಲ್ಲ. ಇತಿಹಾಸದ ಅಧ್ಯಯನವನ್ನು ವಸ್ತುನಿಷ್ಠವಾಗಿ ಮಾಡದಿದ್ದರೆ, ನಾವು ವಿಕೃತ ಇತಿಹಾಸವನ್ನೇ ಕಲಿಯುತ್ತಿರುತ್ತೇವೆ ಮತ್ತು ನಾವು ಕಲಿಯಬೇಕಾದ ಪಾಠವನ್ನು ಕಲಿಯುವುದಿಲ್ಲ, ಇದರಿಂದ ಇತಿಹಾಸ ಮರುಕಳಿಸುತ್ತದೆ.

        ಉತ್ತರ
  13. ನಿಲುಮೆ's avatar
    ಫೆಬ್ರ 25 2011

    @ನರೇಂದ್ರ,AGN
    ರಾಕೇಶ್ ಹೇಳಿದ ಹಾಗೆ ಚರ್ಚೆ ಕನ್ನಡದಲ್ಲಿರಲಿ,ಅದೇ ಚಂದ 🙂

    ಉತ್ತರ
  14. ಮೋಹನ's avatar
    ಮೋಹನ
    ಫೆಬ್ರ 25 2011

    25 ರ ಆಸುಪಾಸಿನ ಯುವಕ ಗಾಂಧಿ ನೆಹರು ಮಧ್ಯೆ ನಡೆಯುವ ಮಾತನ್ನು ಕೇಳಿಸಿಕೊಳ್ಳುವಷ್ಟು ಗಾಂಧಿಗೆ ಹತ್ತಿರವಿದ್ದರೆ?
    ತನ್ನ ನಾಯಕನನ್ನು ಉತ್ತುಂಗಕ್ಕೇರಿಸಲು ಹೇಳಿದ ಮಾತುಗಳಿರಬಹುದೆಂಬ ಸಂದೇಹ ಬಾರದಿರುವುದೆ?

    ಉತ್ತರ
  15. vithalrao Kulkarni Malkhed(GLB)'s avatar
    vithalrao Kulkarni Malkhed(GLB)
    ಮಾರ್ಚ್ 6 2011

    very very good and healthy discussion..

    ಉತ್ತರ

Leave a reply to ಮಹೇಶ ಪ್ರಸಾದ್ ನೀರ್ಕಜೆ ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments