ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 23, 2011

7

ವಂಚನೆಗೆ ಮತ್ತೊಂದು ಹೆಸರು “ಅವಳು”

‍ನಿಲುಮೆ ಮೂಲಕ

ಪಿಸಿಬಿ ಪುತ್ತೂರು

ಅವಳ ಹೆಸರು ನಯನ(ಹೆಸರು ಬದಲಾಯಿಸಲಾಗಿಲ್ಲ). ನನ್ನ ಸ್ನೇಹಿತನೊಬ್ಬ ಆಕೆಯನ್ನು ಹುಚ್ಚನಂತೆ ಪ್ರೀತಿಸುತ್ತಿದ್ದ. ಅವಳು ಇರೋದು ಬೆಂಗಳೂರಿನಲ್ಲಿ. ಆತ ದಕ್ಷಿಣ ಕನ್ನಡ ಜಿಲ್ಲೆಯಲ್ಲೊಂದು ಊರಿನಲ್ಲಿ. ತಕ್ಕಮಟ್ಟಿಗೆ ಸ್ಥಿತಿವಂತ. ಅದಕ್ಕೆ ಇರಬೇಕು. ಅವಳು ಅವನನ್ನು ಆಯ್ಕೆ ಮಾಡಿಕೊಂಡದ್ದು. ಸಿಕ್ಕಾಪಟ್ಟೆ ಪ್ರೀತಿಸುತ್ತಿದ್ದ. ನಾನು ಕಾಲ್ ಮಾಡಿದಾಗ ಏನು ಮಾಡ್ತಾ ಇದ್ದಿ ಅಂತ ಕೇಳಿದಾಗ “ಅವಳ ಫೋಟೊ ನೋಡ್ತಾ ಇದ್ದಿನಿ” ಅಂತ ನಗುತ್ತಿದ್ದ. ಅವನದ್ದು ಮಗುವಿನ ಮನಸ್ಸು. ಅವಳು ಸೆಟ್ ಆದಾಗಲೇ ಮದುವೆ, ಭವಿಷ್ಯ ಎಲ್ಲ ಯೋಚಿಸಿದ್ದ. ಮುಂದಿನ ವರ್ಷವೇ ಮದುವೆಯಾಗ್ತಿನಿ ಅಂತ ಮಾತುಕೊಟ್ಟಿದ್ದ.

ಅದು ಆತನ ಮೊದಲ ಪ್ರೀತಿ. ದಿನಕ್ಕೆ ಕಮ್ಮಿ ಎಂದರೂ 5-6 ಬಾರಿ ಫೋನ್ ಮಾಡಿ ಮಾತನಾಡುತ್ತಿದ್ದರು. ಇತ್ತೀಚೆಗೊಮ್ಮೆ ಭೇಟಿಯೂ ಆಗಿದ್ದರು. ಇವರಿಬ್ಬರ ಪರಿಚಯವಾದದ್ದು ಅವನ ಊರಿನವಳೊಬ್ಬಳ ಸಹಾಯದಿಂದ. ಆಕೆಯ ನೆರೆಮನೆಯ ಹುಡುಗನಾದ್ದರಿಂದ ಒಂದಿಷ್ಟು ಸಲುಗೆ ಜಾಸ್ತಿಯಿತ್ತು. ನನಗೆ ಲವ್ ಸ್ಟೋರಿ ಕೇಳುವುದಕ್ಕೆ ತುಂಬಾ ಇಷ್ಟ. ಅವನು ದಿನಾ ನಂಗೆ ರಿಪೋರ್ಟ್ ಮಾಡುತ್ತಿದ್ದ. ಆದರೆ ಮೊನ್ನೆ “ಅವಳನ್ನು ಬಿಟ್ಟು ಬಿಡು” ಅಂದೆ. ಅವನು ಓಕೆ ಅಂದ.

ನಯನಳ ರೂಂ ಮೇಟ್ ಹುಡುಗಿ, ಐಮೀನ್ ಆತನ ಊರಿನ ಹುಡುಗಿಗೊಂದುದಿನ ಷಾಕ್. ಯಾಕೆಂದರೆ ನಯನ ದಿನಾ ಇವನ ಬಳಿಯೇ ಮಾತನಾಡುತ್ತಾಳೆ. ಅಂದುಕೊಂಡಿದ್ದಳು. ಆದರೆ ಅವಳು ಮೆಂಟಲ್. ಯಾಕೆಂದರೆ ಅವಳಲ್ಲಿ ಎರಡು ಸಿಮ್ ಎರಡು ಮೊಬೈಲ್. ಒಂದರಲ್ಲಿ ಇವನಲ್ಲಿ ಮಾತನಾಡೋದು. ಮತ್ತೊಂದರಲ್ಲಿ ಮಂಡ್ಯದ ಹುಡುಗನಲ್ಲಿ. ನನ್ನ ಫ್ರೆಂಡ್ ಮೈಮರೆತು ಮಾತನಾಡುವಾಗ ಮಂಡ್ಯದ ಹುಡುಗನ ಫೋನ್ ಬಂದರೆ “ಬ್ಯಾಟರಿ ಮುಗಿತು. ಈಗ ಸ್ವೀಚ್ ಆಫ್ ಆಗುತ್ತೆ” ಅಂತ ಫೋನ್ ಕಟ್ ಮಾಡುತ್ತಿದ್ದಳು. ಹೀಗೆ ಅವಳದ್ದು ಎರಡು ದೋಣಿ ಸವಾರಿ.

ಅವಳಿಗೆ ಗೊತ್ತು. ಮಂಡ್ಯದ ಹುಡುಗನನ್ನು ಮದುವೆಯಾಗಲು ಸಾಧ್ಯವಿಲ್ಲ ಅಂತ. ಆದ್ರೆ ಆತನ ಪೋಲಿತನ ಅವಳಿಗೆ ಇಷ್ಟ. ಇವನ ಭಾವನಾತ್ಮಕತೆ ಅವಳಿಗೆ ಇಷ್ಟ. ಇವನು ತನ್ನದೇ ಜಾತಿಯವ. ಮದುವೆಯಾಗಲು ಅಡ್ಡಿಯಿಲ್ಲ ಅಂತ ಅವಳು ಯೋಚಿಸಿರಬೇಕು. ಕೊನೆಯ ಬಾರಿ ಅವಳಿಗೆ ಕರೆ ಮಾಡಿ “ಮತ್ತೆ ನನಗೆ ಕಾಲ್ ಮಾಡಿದ್ರೆ ಜಾಗ್ರತೆ” ಅಂತ ಬಯ್ದುಬಿಟ್ಟನಂತೆ. ಮತ್ತೆ ಒಂದು ರಾತ್ರಿ ಪೂರ್ತಿ ಅತ್ತನಂತೆ. ಮರುದಿನ ಬೆಳ್ಳಗ್ಗೆ ನಾನು ಕರೆ ಮಾಡಿದಾಗಲೂ ಅತ್ತ. ಥೂ.. ಆಗ್ಲೆ ಇಂತಹ ವಂಚಕಿಯರ ಕುರಿತ ನನ್ನ ದ್ವೇಷ ಗಟ್ಟಿಯಾದದ್ದು. ಇದರಲ್ಲಿ ಎಲ್ಲಿ ಹುಡುಕಿದರೂ ಅವನ ತಪ್ಪಿರಲಿಲ್ಲ. ಆಯ್ಕೆ ಮಾಡಿಕೊಂಡ ತಪ್ಪೊಂದನ್ನು ಹೊರತುಪಡಿಸಿ. ಇಂತಹ ಹಲವು ಘಟನೆಗಳನ್ನು ನಾನು ನೋಡಿದ್ದೇನೆ. ಪಾಪದ ಹುಡುಗರು ವಂಚನೆಗೆ ಒಳಗಾಗುವುದು.

ನಿಮ್ಹಾನ್ಸ್ ನಲ್ಲಿ ನರ್ಸಿಂಗ್ ಮಾಡುವ ನನ್ನ ರಿಲೇಷನ್ ಹುಡುಗಿಯೊಬ್ಬಳು ಅವಳ ಸ್ನೇಹಿತೆಯರ ಕತೆ ಹೇಳುತ್ತಾಳೆ. ಅವರಿಗೆಲ್ಲ ತಿಂಗಳಿಗೊಬ್ಬ ಬಾಯ್ ಪ್ರೇಂಡ್ ಅಂತೆ. ಡ್ರೆಸ್ ಬದಲಾಯಿಸಿದ ಹಾಗೇ ಅವರನ್ನು ಬದಲಾಯಿಸುತ್ತಾರಂತೆ. ಪಾಪ ಮತ್ತೆ ಎಷ್ಟು ಕರೆ ಮಾಡಿದರೂ, ಗೋಗರೆದರೂ ಅವರ ಕರೆಯನ್ನು ಸ್ವೀಕರಿಸುವುದಿಲ್ಲವಂತೆ. ಎಂತಹ ಕಟು ಹೃದಯ. ಅವರ ಟೈಂಪಾಸ್ ಗುಣದಿಂದ ವಿಲವಿಲನೆ ಒದ್ದಾಡುವ ಹೃದಯಗಳೆಷ್ಟೋ..

ಹಾಗಂತ ಎಲ್ಲ ಹುಡುಗಿರು ವಂಚಕರು ಅಂತ ಹೇಳಲಾಗದು. ಹುಡುಗರಿಂದ ಮೋಸ ಹೋದವರೂ ಇದ್ದಾರೆ. ಆದರೆ ನಾನು ನೋಡಿರುವ ಹೆಚ್ಚಿನ ಪ್ರೀತಿಗಳಲ್ಲಿ ವಂಚನೆಯಾಗಿದ್ದು ಹುಡುಗರಿಗೆ. ಅವಳು ಸದಾ “ವಂಚಕಿ”ಯಾಗಿ ನನಗೆ ಕಾಣುತ್ತಾಳೆ. ಮತ್ತೊಬ್ಬನಿದ್ದ. ಆತನ ಹೆಸರು ಪ್ರಾಣೇಶ್ ಎಂದಿರಲಿ. 3 ವರ್ಷಗಳ ಕಾಲ ಒಬ್ಬ ಹುಡುಗಿಯನ್ನು ಪ್ರೀತಿಸಿದ. ಮತ್ತೆ ಅವಳು ಕೈಕೊಟ್ಟಳು. ಇವನು ಭಗ್ನ ಪ್ರೇಮಿಯಾಗಿ ಬಿಟ್ಟ. ಈಗ ಅವನಿಗೆ ಪ್ರೀತಿ ಅಂದ್ರೆ ಅಲರ್ಜಿ. ಅದಕ್ಕೆ ಯಾರಾದರೂ ಪ್ರೀತಿಯ ಬಗ್ಗೆ ಮಾತನಾಡಿದರೆ ಸಾಕು. ಅವನದ್ದು ಒಂದೇ ಮಾತು. ಸುಮ್ಮನೆ ಪ್ರೀತಿ ಮಾಡಬೇಡ. ಸಾಧ್ಯವಾದರೆ “ಮಾಡಿ” ಬಿಡು. ನಾನು ಅವನ ಮಾತನ್ನು ಯಾವತ್ತೂ ವಿರೋಧಿಸುತ್ತೇನೆ.

ಆದರೆ “ವಂಚಕಿ”ಯರ ಕತೆಗಳನ್ನು ಕೇಳುವಾಗ, ವಂಚನೆಗೆ ಒಳಗಾಗುವಾಗ, ಭಗ್ನ ಹೃದಯದೊಂದಿಗೆ ಬಡಬಡಿಸುವರಿಗೆ ಪ್ರಾಣೇಶ್ ಮಾತು ಆದರ್ಶವಾಗುವ ಅಪಾಯವೂ ಇದೆ. ಅಥವಾ ಪ್ರಾಣೇಶ್ ನಂತಹ ವ್ಯಕ್ತಿತ್ವ ಸೃಷ್ಟಿಯಾಗುವ ಸಾಧ್ಯತೆನೂ ಇದೆ. ಹೆಚ್ಚಿನ ಸಂದರ್ಭದಲ್ಲಿ ಹುಡುಗೀರೆಂದರೆ ಅರ್ಥವಾಗುವುದೇ ಇಲ್ಲ. ಅದಕ್ಕೆ ಹೇಳುವುದು. ನೀರಿನಲ್ಲಿ ಮೀನಿನ ಹೆಜ್ಜೆಯನ್ನಾದರೂ ಕಂಡು ಹಿಡಿಯಬಹುದು. ಆದರೆ ಹುಡುಗೀರ ಮನಸ್ಸನ್ನು…..

ವಂಚನೆಗೆ ಮತ್ತೊಂದು ಹೆಸರು “ಅವಳು” “ಅವಳು” ಮತ್ತು “ಅವಳು”

ಚಿತ್ರಕೃಪೆ: voteupindia.com

7 ಟಿಪ್ಪಣಿಗಳು Post a comment
  1. Gokul's avatar
    Gokul
    ಫೆಬ್ರ 23 2011

    sathya !! naanoo inthaha thumba katheyannu keliddene. bekkige aata, ilige praana sankata annothara!!!!!

    ಉತ್ತರ
  2. umesh desau's avatar
    ಫೆಬ್ರ 23 2011

    sir why this story appeared in nilume. these things whether mattrer in ral world and todays INDIA?
    i thought nilume was different

    ಉತ್ತರ
    • ನಿಲುಮೆ's avatar
      ಫೆಬ್ರ 23 2011

      ಉಮೇಶ್ ತಮ್ಮ ಮಾತುಗಳನ್ನು ಗೌರವಿಸುತ್ತಲೇ, ಈ ಮಾತನ್ನು ಹೇಳುತ್ತಿದ್ದೇವೆ. ಬದುಕಿನ ಹಲವು ಮಗ್ಗುಲುಗಳ ಪರಿಚಯ, ಪ್ರಸ್ತಾಪ, ಸಮಸ್ಯೆಗಳು ನಿಲುಮೆಯಲ್ಲಿ ಚರ್ಚೆಯಾಗಬೇಕು ಎಂಬುದಷ್ಟೇ ನಿಲುಮೆಯ ಆಶಯ. ಮತ್ತು ಎಲ್ಲ ರೀತಿಯ ಬರಹಗಾರರಿಗೂ ವೇದಿಕೆಯಾಗಲಿ ಎಂಬ ಉದ್ದೇಶದಿಂದ ಇಲ್ಲಿ ಈ ಲೇಖನವನ್ನು ಪ್ರಕಟಿಸಲಾಗಿದೆ. ವಿಭಿನ್ನ ಮನೋಭಾವದ ಓದುಗ ಪ್ರಭುಗಳು ನಿರೀಕ್ಷಿಸುತ್ತಾರಲ್ಲ ಅದಕ್ಕಾಗಿ ಮಧ್ಯೆ ಮಧ್ಯೆ ಲಘುಧಾಟಿಯ ಬರಹಗಳನ್ನು ಪ್ರಕಟಿಸುತ್ತೇವೆ. ತಮ್ಮಿಂದಲೂ ಲೇಖನವನ್ನು ನಿರೀಕ್ಷಿಸುತ್ತೇವೆ.
      ನಿಲುಮೆ ತಂಡ.

      ಉತ್ತರ
  3. ROOPA's avatar
    ಫೆಬ್ರ 23 2011

    ಪ್ರೀತಿ ಪ್ರೇಮ ಅನ್ನೋದನ್ನ ಟೈಮ್ ಪಾಸ್‌ಗೆ ಅಂದುಕೊಂಡಿರುವ ಹುಡುಗರ ಹಾಗೆ ಹುಡುಗಿಯರಲ್ಲೂ ಕೆಲವರಿರುತ್ತಾರೆ. ಅಂತಹವರಿಂದ ಪ್ರೀತಿ ಅನ್ನುವ ಪದದ ಅರ್ಥವೇ ಬದಲಾಗುತ್ತಿದೆ.
    ಈಗಿನ ಮುಕ್ಕಾಲು ಭಾಗ ಪ್ರೀತಿಸುವವರು ಪ್ರೀತಿಯ ಪರ್ಯಾಯ ಪದವಾಗಿ ಫ್ಲರ್ಟಿಂಗ್ ಬಳಕೆ ಆಗುತ್ತಿದೆ.
    ಹುಡುಗರೂ ಹುಡುಗಿಯರೂ ಇದರಲ್ಲಿ ಸಮಪಾಲು.ಯಾರೂ ಹೆಚ್ಚು ಇಲ್ಲ ಯಾರೂ ಕಡಿಮೆ ಇಲ್ಲ
    ಒಟ್ಟಿನಲ್ಲಿ ಮೋಸ ಹೋಗುವವರು ಮಾತ್ರ ನಿಜವಾದ ಪ್ರೀತಿ ಮಾಡಿ ಅಳುವವರು.ಹುಚ್ಚರಾಗುವರು ಮದಿರೆಯ ದಾಸರಾಗುವವರು, ಆತ್ಮಹತ್ಯೆಯಲ್ಲಿಯೇ ಬದುಕಿನ ಅರ್ಥ ಕಾಣುವವರು.

    ಉತ್ತರ
  4. chukkichandira's avatar
    ಫೆಬ್ರ 23 2011

    ಲೇಖನಕ್ಕೆ ಕೇವಲ ಒಂದು ಮುಖ ಮಾತ್ರ ಇದೆ. ಇಂಥವರೂ ಇದ್ದಾರೆ ಅಂತ ಅಚ್ಚರಿಯೂ ಆಗುತ್ತದೆ. ಆದರೆ ಇಲ್ಲಿ ಹುಡುಗಿಯರಿಗೆ ವಂಚಕಿ ಪಟ್ಟ ಕಟ್ಟೋ ಆತುರದಲ್ಲಿ ಬರೆದ ಹಾಗೀದೆ. ಅವರು ಅವರ ಸ್ನೇಹಿತೆಯರಲ್ಲಿ, ಹುಡುಗಿಯರಲ್ಲಿ “ನಿಮ್ಮ ಸ್ನೇಹಿತೆಯರಿಗೆ ಹುಡುಗರಿಂದ ಮೋಸವಾಗಿದೆಯ? ಅಂತ ಸ್ವಲ್ಪ ಪ್ರಶ್ನಿಸಿದರೆ ಸಾಕಷ್ಟು ವಂಚಕರು ಪತ್ತೆಯಾಗುತ್ತಿದ್ದರೇನೋ. ಆಮೇಲೆ “ವಂಚನೆಗೆ ಮತ್ತೊಂದು ಹೆಸರು “ಅವನು” ಅಂತನೂ ಲೇಖನ ಬರಿಬಹುದಿತ್ತು. ಕೇವಲ ಒಂದೇ ಕಡೆ ಪೂರ್ವಗ್ರಹ ಪೀಡಿತರಾಗದೇ ವಂಚನೆಗೆ ಮತ್ತೊಂದು ಹೆಸರು ಅವನು ಮತ್ತು ಅವಳು ಅಂತನೂ ಬರೀಬಹುದಿತ್ತೇನೋ…

    ಬರೆದ ಓಘಾ ಚೆನ್ನಾಗಿದೆ. ಆವೇಶದಲ್ಲಿ, ತೀವ್ರತೆಯಲ್ಲಿ ಬರೆದಂತ್ತಿದೆ. ಸ್ನೇಹಿತನಿಗೆ ಆದ ಅನ್ಯಾಯಕ್ಕ್ಕೆಕಾಗಿ ಇಡೀ “ಅವಳ” ಲೋಕವನ್ನೇ ದೂರಬೇಕಿಲ್ಲ. ಒಳ್ಳೆಯ”ಅವಳು” ಕೂಡ ಈ ಪ್ರಪಂಚದಲ್ಲಿ ಸಾಕಷ್ಟು ಜನ ಇದ್ದಾರೆ. ಇರಲಿ

    ಉತ್ತರ
  5. Pramod's avatar
    ಫೆಬ್ರ 23 2011

    ಬ್ಯಾಲನ್ಸ್ ಇಲ್ಲದೆ ಒ೦ದು ಬದಿ ಜಾಸ್ತಿ ತೂಗುತ್ತಿದೆ.

    ಉತ್ತರ
  6. RAGHAVENDRA RAO DA's avatar
    ಮಾರ್ಚ್ 3 2011

    ನಾನು ಈ ಛಾಯಾಚಿತ್ರ ಸುಮಾರು ಹಿಂದೆ ನೋಡಿದ್ದೇ.
    ಈ ಚಿತ್ರ ನೋಡ್ತಾ ಇದ್ದಿರೆ………..ಹಿಂದೆ ನೆಡದ ನಮ್ಮ
    ಗೆಳಯರ ಬಾಳಿನಲ್ಲಿ ಹಾದು ಹೋದ ಘಟನೆಗಳು ನೆನಪಿಗೆ
    ಬರ್ತಿದೆ.

    ಉತ್ತರ

Leave a reply to RAGHAVENDRA RAO DA ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments