ನಾವು ಸ್ವತಂತ್ರರೇ..?
ಮಮತ ಕಂಡ್ಲೂರು
ಅಂದು ಸಿಕ್ಕಿತ್ತು ಮುಕ್ತಿ
ಕಳಚಿತ್ತು ಆ ಪರರ ಕಪಿಮುಷ್ಟಿ
ಅಂತೂ ಇಂತೂ ಸ್ವಾತಂತ್ರ್ಯ ಬಂತೆಂದರು ಹಿರಿಯರು
ತನ್ನ ಕರುಳಕುಡಿಗಳಿವರೆಲ್ಲ ಒಂದೆಂಬ ಭಾವದಿ
ಇಹರೆಂದು ‘ಭರತಮಾತೆ’ಯ ಎದೆಯು ಮಿಡಿದಿತ್ತು.
ಆಹಾ, ಎಂಥಾ ಪರಮಾನಂದವಾಗುತ್ತಿದೆ.
ನಮ್ಮದೇ ನೆಲ,ಜಲ,ಗಾಳಿ ಕೊನೆಗೆ ನಮ್ಮದೇ ‘ಸರಕಾರ’.
ನೆಮ್ಮದಿಯ ಉಸಿರು ಬಿಡುತ್ತಿದ್ದಂತೆ,
ಆರಂಭವಾಯ್ತು ಪ್ರಗತಿಯ ಅರಸುವಿಕೆ!
ಜನ್ಮತಾಳಿದುವು ಕಟ್ಟಡಗಳು ಗೆದ್ದಲಗೂಡಿನ ತೆರದಿ.
ಬಲಿಯಾಗಿ ಪಕ್ಷಪಕ್ಷಗಳ ಸ್ವಾರ್ಥರಾಜಕೀಯಕ್ಕೆ
ಅನಾಥಭಾವದಿ ನರಳುವಂತಾಯ್ತು ಬಡಜನತೆ.
ಬೆಳೆದವು ಸರಕಾರದ ಯೋಜನೆಗಳು ಹನುಮಂತನ ಬಾಲದಂತೆ……
ಪ್ರಕೃತಿಯ ಶಾಂತತೆ,ರಮಣೀಯತೆ ಮಾಯವಾಯ್ತು.
ಬಡತನ ಶಾಪವಾಗಿ, ಜೀತದ ದುಡಿಮೆಯಾಯ್ತು.
ಇಂದು ಅರ್ಜುನನ ಪೌರುಷ ವೀರರ ಎದುರಲ್ಲ
ನಾಗನ ವಾಸ ತಂಪಾದ ಬನಗಳಲಿಲ್ಲ,
ಅಧಿಕಾರಿಗಳ ದರ್ಪ, ಕೊಳವೆಗಳು ಉಗುಳುವ ಹೊಗೆಯಲ್ಲಿ
ಅಸಹಾಯಕತೆ ಕಣ್ಣೀರಾಯ್ತು, ಹಣದ ಮದ ಮೇಲಾಯ್ತು.
ವಿರೋಧಿಸುವವರ ಆಕ್ರೋಶ ಅರಣ್ಯರೋದನವಾಯ್ತು.
ಪ್ರಭುತ್ವಕ್ಕೆ ಅಂತಃಕರಣ, ದಯೆ ಇಲ್ಲವೇ ಇಲ್ಲ.
ಪರರ ದಾಸ್ಯ ಕಿತ್ತೊಗೆದು ಬಂದ ನಾವು,
ಇಂದು ಸ್ವತಂತ್ರರೇ ಅಥವಾ ನಮ್ಮವರ ದಾಸರೇ ನೀವೇ ಹೇಳಿ…





ನಿಮ್ಮ ಕವಿತೆ ಸರಕಾರ ಪ್ರಗತಿಯ ಹೆಸ್ಅರಿನಲ್ಲಿ ಜನಸಾಮಾನ್ಯರ ಮೇಲೆ ಮಾಡುತ್ತಿರುವ ದಬ್ಬಾಳಿಕೆಯನ್ನು ತಳಿಸುತ್ತಿದೆ. ನೀವು ಪ್ಪುಟ್ಟ ಕವಿತೆಯ ಮೂಲಕ ಸಕಾರದ ಲೋಪ ದೋಷಗಳನ್ನು ಸಮಗ್ರವಾಗಿ ವಿವರಿಸಿದ್ದೀರಿ. ಇನ್ನು ಮುಂದೆ ನಿಮ್ಮಿಂದ ನಾವು ಸಮಾಜಪರವಾದ, ಜನಪರವಾದ ಬರವಣಿಗೆತಯನ್ನು ನಿರೀಕ್ಷೇ ಮಾಡುತ್ತೇವೆ.ಅಥವ ಇನ್ನವುದೇ ಬರವನಣಿಗೆ ಇರಬಹುದು. ಧನ್ಯವಾದಗಳು ನಿಮಗೆ.
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.