ವರ್ಷಾ..
-ಅನಿಲ್ ಬೆಡಗೆ
ಆಹಾ ..
ಇನ್ನೇನು ಬೇಸಿಗೆ ಶುರು ಆಗಬೇಕು, ಅಷ್ಟರಲ್ಲಿ ಒಂದು ಮಳೆ.!
ಸಂಜೆ ಆದಂತೆ ಜೋರು ಜೋರು ಗಾಳಿ, ತುಂತುರು ಮಳೆ..
ಆಮೇಲೆ, ಬೇಸಿಗೆಯ ಬೆವರ ಮಳೆ …
ಆದರೆ ಗೆಳತಿ, ಮನಸೆಲ್ಲ ಮುಂಗಾರು ಮಳೆ..!!
ಎಲ್ಲ ಹನಿಗಳ ಲೀಲೆ..
ನೆನಪಿದಿಯ..?
ನಮ್ಮಿಬ್ಬರ ಮೊದಲ ಭೇಟಿ.
ಆ ಮಳೆಗಾಲದ ದಿನ, ಶಾಲೆ ಬಿಟ್ಟ ವೇಳೆ ಮುಖ ಮುಚ್ಚುವಂತೆ ಕೊಡೆ ಹಿಡಿದು ಓಡಿ ಬರುವಾಗ ಒಬ್ಬರಿಗೊಬ್ಬರು ಡ್ಯಾಶ್ ಹೊಡೆದದ್ದು…!!
ಗುನು ಗುನು ಅಂತ ನನ್ನ ಬೈಕೊಂಡು ಹೋಗಿ ಮರದಡಿಗೆ ನಿಂತಿದ್ದು..
ಬಾಲ್ಯದ ಆ ಮಳೆಗಾಲ ಎಷ್ಟೊಂದು ಚೆನ್ನ..
“ವೋ ಕಾಗಜ್ ಕಿ ಕಷ್ತಿ, ವೋ ಬಾರೀಶ್ ಕ ಪಾನಿ..”
ಕೊಡೆ ಇದ್ದರು, ಮಡಚಿಟ್ಟು, ರೈನ್ ಕೋಟ್ ಬಿಚ್ಚಿ..
ಓ ಓ ಓ … ವೋ… ಅಂತ ಕೂಗಿಕೊಂಡು ಕುಣಿದಾಡ್ತಾ ಆ ಮಳೆಯಲ್ಲಿ ನೆನೆಯೋದು ಮಜಾ ರೆ ಮಜಾ.
ತಲೆಯಲ್ಲ ವದ್ದೆ ಆಗಿ, ಸ್ಕೂಲ್ ಉನಿಫಾರ್ಮ್ ಕೆಸರಿಕರಣವಾಗಿ,
ಅಮ್ಮ ಬೈಕೊಂಡು ಬೈಕೊಂಡು ತಲೆ ವರಸಿದ್ದು.
ಕೊಡೆ ಕಳೆದಾಗ, ತಲೆ ಮೇಲೆ ಎರಡು ಕೊಟ್ಟಿದ್ದು….
ಆ ಹಾ.. ಸವಿ ಸವಿ ನೆನಪು..
ಮನದಲ್ಲಿ ಹಸಿ ಹಸಿ..
ಅವೆಲ್ಲ ಆಗಿ ಎಷ್ಟು ವರುಷಗಳಾದವು , ಎಷ್ಟು ಮಳೆಗಾಲ ಕಳೆದವು.
ಕೆಲ ವರುಷಗಳ ಅಗಲಿಕೆ,
ಮತ್ತೆ ಮಳೆಗಾಲದ ಸಂಜೆ ಭೇಟಿ, ನೆನಪುಗಳ ಮೋಡದಲ್ಲಿ ಮನಸುಗಳು ತೇಲಾಡಿದ್ದು..
ನಮ್ಮಿಬ್ಬರ ಪ್ರೀತಿ.!
ಹಾ..!
ಆ ಸಂಜೆ ಪಾನಿಪುರಿ ತಿಂದು ಇನ್ನೇನು ಹೊರಡಬೇಕು ಅನ್ನೋದ್ರಲ್ಲಿ ತುಂತುರು ಸುರಿದ ಮಳೆ..
ಮೊದಲೆಲ್ಲಾ,
ಮಳೆ ಅಂದ್ರೆ ಕೆಸರು. ಶ್ಹೀ ಶ್ಹೀ.. ನೆನೆದರೆ ಆಕ್ಷ್ಹೀ.. ಅನ್ನೋಳು.
ಅವತ್ತು ಹೇಗೆ ನೆನೆದೆ, ಕುಣಿದೆ,
ಚಪ್ಪಲಿ ಕೈಯಲ್ಲಿ ಹಿಡಕೊಂಡು ನಡೆದದ್ದು..
ನಿಲ್ಲದ ನಿನ್ನ ಆ ಚಿಕ್ಕ ಚಿಕ್ಕ ಗುಂಡಿಯಲ್ಲಿನ ಜಿಗಿತ…
ಮಳೆ ಜೋರಾದಾಗ, ಅಲ್ಲೇ ಇದ್ದ ಟೀ ಅಂಗಡಿಯ ಶೆಡ್ದಲ್ಲಿ ನಿಂತು ನಿನ್ನ ಕುದಲೋಮ್ಮೆ ಸೊಂಯ್ಯನೆ ತಿರುಗಿಸಿದ್ದು..
ಆಹಾ ಆಹಾ,, ಅವತ್ತು ನನ್ನ ನಾನು ಕಷ್ಟ ಪಟ್ಟು ಕಂಟ್ರೋಲ್ ಮಾಡಿದ್ದು..!
ಶೆಡ್ಡಿನ ಸಂದಿಯಿಂದ ಸರಿಯುತ್ತಿದ್ದ ಹನಿಗಳಿಗೆ ಕೈ ಒಡ್ಡಿ ನನ್ನ ಮುಖಕ್ಕೆ ಎರಚಿದ್ದು..
ಒಂದು ಮಾತು,
ಅವತ್ತಿನ ನಿನ್ನ ಚೆಲುವಿನ ಬಗ್ಗೆ ಎನ್ಹೆಳಲಿ..
ನೀನು ಎಷ್ಟೇ ಸರಿಸಿದ್ದರು ನಿನ್ನ ಮೊಗವ ಬಿಡಲೊಲ್ಲದ ಆ ಕೂದಲ ಗುಂಪು..
ನಿನ್ನ ಹಣೆ, ಕಣ್ಣ ರೆಪ್ಪೆ ಮುದ್ದಿಸುತ್ತಿದ್ದ ಇನ್ನೊಂದು ಕೂದಲ ಗುಂಪು.
ಕಿವಿಯ ತುದಿ, ಮೂಗಿನ ತುದಿಗೆ ಜೋತು ಬಿದ್ದ ನೀರ ಹನಿ..!
ಬೆವರ ಹನಿಗಳು ಮುತ್ತಿಟ್ಟಂತ ಕಾಣುತಿದ್ದ ನಿನ್ನ ಹಣೆ..
ನೀಲಿ ಬಣ್ಣದ ಓಲೆ.. ಒಂದು ಓಲೆಗೆ ಸುತ್ತಿಕೊಂಡ ಕೂದಲು..
ಆಕಾಶ ನೀಲಿ ಚುಡಿ..
ಚಂದಿರನಿಗೆ ಚುಕ್ಕಿ ಇಟ್ಟ ಹಾಗೆ ನಿನ್ನ ನಯನ…
ಆ ಕೆಂದುಟಿ…
ಅಬ್ಬಾ… !!!
“ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಗ್ನ್ಯ”
ಅಸಲಿಗೆ ನಮ್ಮಿಬ್ಬರದು ಎಂಥ ಸಮಾಗಮ..?
ನನ್ನದು. ಲೆತು, ವೆಲ್ಡಿಂಗ್, ಗ್ರಿಲ್ಲಿಂಗು, ಡ್ರಿಲ್ಲಿಂಗು.!!
ನಿನ್ನದು.. ಸ್ಕೆತೊಸ್ಕೊಪು, ಎಕ್ಸ್ರೆ, ಸ್ಕ್ಯಾನಿಂಗು.!
ಮೈ ಡಿಯರ್ ಹನಿ,
ಹನಿ ಹನಿಗಳಿಂದ ಹಳ್ಳ ಅಂತಾರೆ..
ನಾನು ಮೆಡಿಕಲ್ ಸೇರಿಲ್ಲ,
ಮನೆಯಲ್ಲಿ ಮದುವೆಗೆ ಒಪ್ಪಿಗೆ ಕೊಡ್ತಾರೋ ಇಲ್ಲವೋ ಎಂದು ನೀನು ಸೀರಿಯಸ್ ಆಗಿ ಇಟ್ಟ ಕಣ್ಣೀರ, ಹನಿ.!
ಒಪ್ಪಿಗೆ ಕೊಟ್ಟಾಗ ಆನಂದ ಭಾಷ್ಪದ, ಹನಿ.
ನಿನ್ನ ಹಣೆಗೆ ಮೊದಲ ಹೂ ಮುತ್ತು ಕೊಟ್ಟಾಗ , ನಿನ್ನ ಕಣ್ಣಂಚಲಿ ಬಂದ ಆ ಮುತ್ತಿನಂತ ಹನಿ..!
ಪಾನಿಪುರಿ ತಿನ್ನೋವಾಗ ನಿನ್ನ ಕೇಳ ತುಟಿಗೆ ನೇತಾಡುತ ನನ್ನ ಗಂಟಲ ಒಣಗಿಸುವ ಆ ಹನಿ..!!
ಹೆಜ್ಜೆನಿನಂತೆ ಸುರಿಯುವ ಪುಟ್ಟ ಕಂದಮ್ಮಗಳ ಜೊಲ್ಲ ಹನಿ..
ಮಳೆಗೂ ನಮಗೂ ಎಂಥ ಸಂಭಂದವೋ..?
ಇನ್ನು ಬೆರಳೆಣಿಕೆಯ ದಿನಗಳಲ್ಲಿ ನಮ್ಮ ಮದುವೆ….!!
ಆ ದಿನವು ಮಳೆ ಬಂದರೆ ಎಷ್ಟು ಚೆನ್ನ.
ಹಸಿ ಹಸಿ.. ಬಿಸಿ ಬಿಸಿ.. !!
ಮತ್ತೊಂದು ಮಾತು,,
ನಮ್ಮ ಮಗಳ ಹೆಸರು..
” ವರ್ಷಾ ”
***
ಚಿತ್ರಕೃಪೆ: corbisimages.com






ಅನಿಲರವರೆ..
ಸೊಗಸಾದ ಬರವಣಿಗೆ..
ನೆನಪುಗಳು ಕೊಡುವ ಸಂತೋಷ ಮತ್ಯಾವುದೂ ಕೊಡಲಿಕ್ಕಿಲ್ಲ..
ಇಷ್ಟವಾಯಿತು…
ಇಂಥಹ ಇನ್ನಷ್ಟು ಲೇಖನಗಳು ಬರಲಿ…
ಜೈ ಹೋ !
Sakkath agide kavana…..