ವಂಚನೆಗೆ ಮತ್ತೊಂದು ಹೆಸರು “ಅವಳು”
ಅವಳ ಹೆಸರು ನಯನ(ಹೆಸರು ಬದಲಾಯಿಸಲಾಗಿಲ್ಲ). ನನ್ನ ಸ್ನೇಹಿತನೊಬ್ಬ ಆಕೆಯನ್ನು ಹುಚ್ಚನಂತೆ ಪ್ರೀತಿಸುತ್ತಿದ್ದ. ಅವಳು ಇರೋದು ಬೆಂಗಳೂರಿನಲ್ಲಿ. ಆತ ದಕ್ಷಿಣ ಕನ್ನಡ ಜಿಲ್ಲೆಯಲ್ಲೊಂದು ಊರಿನಲ್ಲಿ. ತಕ್ಕಮಟ್ಟಿಗೆ ಸ್ಥಿತಿವಂತ. ಅದಕ್ಕೆ ಇರಬೇಕು. ಅವಳು ಅವನನ್ನು ಆಯ್ಕೆ ಮಾಡಿಕೊಂಡದ್ದು. ಸಿಕ್ಕಾಪಟ್ಟೆ ಪ್ರೀತಿಸುತ್ತಿದ್ದ. ನಾನು ಕಾಲ್ ಮಾಡಿದಾಗ ಏನು ಮಾಡ್ತಾ ಇದ್ದಿ ಅಂತ ಕೇಳಿದಾಗ “ಅವಳ ಫೋಟೊ ನೋಡ್ತಾ ಇದ್ದಿನಿ” ಅಂತ ನಗುತ್ತಿದ್ದ. ಅವನದ್ದು ಮಗುವಿನ ಮನಸ್ಸು. ಅವಳು ಸೆಟ್ ಆದಾಗಲೇ ಮದುವೆ, ಭವಿಷ್ಯ ಎಲ್ಲ ಯೋಚಿಸಿದ್ದ. ಮುಂದಿನ ವರ್ಷವೇ ಮದುವೆಯಾಗ್ತಿನಿ ಅಂತ ಮಾತುಕೊಟ್ಟಿದ್ದ.
ಅದು ಆತನ ಮೊದಲ ಪ್ರೀತಿ. ದಿನಕ್ಕೆ ಕಮ್ಮಿ ಎಂದರೂ 5-6 ಬಾರಿ ಫೋನ್ ಮಾಡಿ ಮಾತನಾಡುತ್ತಿದ್ದರು. ಇತ್ತೀಚೆಗೊಮ್ಮೆ ಭೇಟಿಯೂ ಆಗಿದ್ದರು. ಇವರಿಬ್ಬರ ಪರಿಚಯವಾದದ್ದು ಅವನ ಊರಿನವಳೊಬ್ಬಳ ಸಹಾಯದಿಂದ. ಆಕೆಯ ನೆರೆಮನೆಯ ಹುಡುಗನಾದ್ದರಿಂದ ಒಂದಿಷ್ಟು ಸಲುಗೆ ಜಾಸ್ತಿಯಿತ್ತು. ನನಗೆ ಲವ್ ಸ್ಟೋರಿ ಕೇಳುವುದಕ್ಕೆ ತುಂಬಾ ಇಷ್ಟ. ಅವನು ದಿನಾ ನಂಗೆ ರಿಪೋರ್ಟ್ ಮಾಡುತ್ತಿದ್ದ. ಆದರೆ ಮೊನ್ನೆ “ಅವಳನ್ನು ಬಿಟ್ಟು ಬಿಡು” ಅಂದೆ. ಅವನು ಓಕೆ ಅಂದ.
ಮಂಗಳಮುಖಿಯರಿಗೂ ದಕ್ಕಿದ ಹಕ್ಕುಗಳು
ಭಾರತದಲ್ಲಿ ಫೆಬ್ರವರಿ 9ರಿಂದ ಪ್ರಾರಂಭವಾಗಿರುವ ಜನಗಣತಿಯಲ್ಲಿ ಸ್ತ್ರೀ ಪುರುಷರ ಜೊತೆಗೆ ಪ್ರಥಮ ಬಾರಿಗೆ ಲೈಂಗಿಕ ಅಲ್ಪಸಂಖ್ಯಾತರನ್ನೂ ಸೇರಿಸಲು ನಿರ್ಧರಿಸಿರುವುದನ್ನು ಸ್ವಾಗತಿಸಿರುವುದಾಗಿ ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ಹೇಳಿದೆ.
ಗುರುವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಜನಗಣತಿ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ಕಾರ್ಯಕರ್ತರು ಸರಕಾರಕ್ಕೆ ತಾವು ಸಲ್ಲಿಸುತ್ತಿರುವ ಬೇಡಿಕೆಗಳ ಬಗ್ಗೆ ವಿವರ ನೀಡಿದರು.
ಭಾರತದಲ್ಲಿ 1872ರಿಂದ ಜನಗಣತಿ ಪ್ರಾರಂಭವಾಗಿ ಪ್ರತಿ 10 ವರ್ಷಗಳಿಗೊಮ್ಮೆ ನಡೆಯುತ್ತಿದೆ. ಸರಣಿಯಲ್ಲಿ 15ನೆಯ ಹಾಗೂ ಸ್ವಾತಂತ್ರ್ಯ ಬಳಿಕದ 7ನೇ ಜನಗಣತಿ ಇದಾಗಿದೆ. ಈಗಾಗಲೇ ಜನಗಣತಿಗೆ ಸಕಲ ಸಿದ್ದತೆಗಳಾಗಿದ್ದು ಸ್ತ್ರೀ ಪುರುಷರ ಜೊತೆಗೆ ಭಾರತ ಇತಿಹಾಸದಲ್ಲೇ ಪ್ರಥಮ ಬಾರಿಗೆ ಲೈಂಗಿಕ ಅಲ್ಪಸಂಖ್ಯಾತರನ್ನು ದಾಖಲಿಸಲು ಮುಂದಾಗಿದೆ. ಇದನ್ನು ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ಸ್ವಾಗತಿಸುತ್ತದೆ ಎಂದು ವೇದಿಕೆ ಹರ್ಷ ವ್ಯಕ್ತಪಡಿಸಿತು.
ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ : ಈ ವೇದಿಕೆಯು ಕರ್ನಾಟದ ಲೈಂಗಿಕ ಅಲ್ಪಸಂಖ್ಯಾತರ ಸಮುದಾಯದವರ ರಾಜ್ಯಮಟ್ಟದ ಪ್ರಜಾಸತ್ತಾತ್ಮಕ ಸಂಸ್ಥೆಯಾಗಿದ್ದು, 22ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕಾರ್ಯನಿರತವಾಗಿದೆ. ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ಲೈಂಗಿಕ ಅಲ್ಪಸಂಖ್ಯಾತರ ಮಾನವ ಹಕ್ಕುಗಳನ್ನು ಸಂರಕ್ಷಿಸುವುದು ಮತ್ತು ಅವರ ಪರವಾಗಿ ಸರ್ಕಾರ, ಮಾದ್ಯಮ, ಸರ್ಕಾರೇತರ ಸಂಸ್ಥೆಗಳು ಮತ್ತು ಸಮುದಾಯ ಆಧಾರಿತ ಸಂಸ್ಥೆಗಳೊಂದಿಗೆ ವಕಾಲತ್ತು ನಡೆಸುತ್ತಿದೆ. ವೇದಿಕೆಯು ಲೈಂಗಿಕ ಅಲ್ಪಸಂಖ್ಯಾತರ ವಿಷಯದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವುದು, ಸಾಮಾಜಿಕ ಚಳವಳಿಗಳೊಂದಿಗೆ ಕೈ ಜೋಡಿಸಿ ಸಾರ್ವಜನಿಕ ಕಾರ್ಯಕ್ರಮಗಳ ಮುಖಾಂತರ ಲೈಂಗಿಕ ಅಲ್ಪಸಂಖ್ಯಾತರ ಪರವಾಗಿ ಸಮಾಜ ಬದಲಾವಣೆ ಕೆಲಸ ಮಾಡುತ್ತಿದೆ. ಮತ್ತಷ್ಟು ಓದು 
ರಾಜ್ಯಸಭೆಗೆ ಕನ್ನಡೇತರರು – ಎಷ್ಟು ಸರಿ ?
ಸುದ್ದಿ ನಿನ್ನೆ ಪತ್ರಿಕೆಗಳಲ್ಲಿ, ಟಿವಿಯಲ್ಲಿ ನೋಡಿದೆ. ಹೀಗೆ ಕನ್ನಡ, ಕರ್ನಾಟಕಕ್ಕೆ ಯಾವ ಕೊಡುಗೆಯನ್ನು ನೀಡದ, ಯಾವ ಸೇವೆಯನ್ನು ಮಾಡದ, ಕನ್ನಡಿಗರ ಬದುಕಿನ ಯಾವ ಸಮಸ್ಯೆಗಳ ಬಗ್ಗೆಯೂ ಒಂದಿನಿತು ಅರಿವಿಲ್ಲದ ಒಬ್ಬ ಮಾಜಿ ಚಿತ್ರ ನಟಿ, ಈ ರೀತಿ ರಾಜ್ಯ ಸಭೆ ಅನ್ನುವ ಒಕ್ಕೂಟ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿಸಲೆಂದೇ ಹುಟ್ಟಿದ ವ್ಯವಸ್ಥೆಗೆ, ಆಯ್ಕೆಯಾಗುವುದನ್ನು ನೋಡಿದಾಗ ಈ ರಾಜ್ಯಸಭೆ ಅನ್ನುವ ವ್ಯವಸ್ಥೆಯ ಅರ್ಥವಾದರೂ ಏನು? ಅದು ಯಾಕಾಗಿ ಬೇಕಾಗಿದೆ ಅನ್ನುವ ಪ್ರಶ್ನೆ ಮನದಲ್ಲಿ ಹುಟ್ಟಿತು.ರಾಜ್ಯ ಸಭೆ ಹುಟ್ಟಿದ್ದು ಯಾಕೆಂದು ಗೊತ್ತೇ?
ರಾಜ್ಯಸಭೆ ಅನ್ನುವುದು ಮಾಂಟೆಗೊ-ಚೆಮ್ಸಫರ್ಡ್ ಅನ್ನುವ ಬ್ರಿಟಿಷ್ ಸರ್ಕಾರದ ಅಧಿಕಾರಿಗಳ ವರದಿಯನ್ನಾಧರಿಸಿ 1918ರಲ್ಲಿ ಹುಟ್ಟಿದ ವ್ಯವಸ್ಥೆ. ಸ್ವಾತಂತ್ರ್ಯ ಬಂದ ನಂತರ ಲೋಕಸಭೆ ಅಸ್ತಿತ್ವಕ್ಕೆ ಬಂದ ನಂತರ ರಾಜ್ಯಸಭೆ ಅನ್ನುವ Council of States ಮುಂದುವರೆಯಬೇಕೇ, ಅದರ ಅಗತ್ಯ ಇದೆಯೇ ಅನ್ನುವ ಬಗ್ಗೆ ಸುದೀರ್ಘವಾದ ಚರ್ಚೆ ನಡೆದಿತ್ತು. ಭಾರತದಂತ ಹೆಜ್ಜೆ ಹೆಜ್ಜೆಗೂ ವೈವಿಧ್ಯತೆಯುಳ್ಳ ದೇಶಕ್ಕೆ ಒಕ್ಕೂಟ ವ್ಯವಸ್ಥೆಯೇ ಸರಿಯಾದ ವ್ಯವಸ್ಥೆ ಅಂಬುದನ್ನು ಅಂದಿನ ರಾಜಕೀಯ ನಾಯಕರು ಒಪ್ಪಿ ಭಾರತವನ್ನು ಒಂದು ಒಕ್ಕೂಟ ವ್ಯವಸ್ಥೆಯೆಂದೇ ಘೋಷಿಸಿದ್ದರು. ಜನರಿಂದಲೇ ನೇರವಾಗಿ ಆಯ್ಕೆಯಾಗುವ ಲೋಕಸಭೆಯೊಂದಕ್ಕೆ ಜನರ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವಾಗದು, ಆದ್ದರಿಂದ ರಾಜ್ಯಸಭೆ ಅನ್ನುವ ಪ್ರತಿ ರಾಜ್ಯದ ಜನ ಪ್ರತಿನಿಧಿಗಳಿಂದಲೇ ಆಯ್ಕೆಯಾಗಿ ಬರುವ ವಿಶೇಷ ಪ್ರತಿನಿಧಿಗಳ ಸಂಸ್ಥೆಯನ್ನು ಲೋಕಸಭೆಗೆ complimentory ಎಂಬಂತೆ ಇಟ್ಟುಕೊಳ್ಳಲಾಯಿತು. ಅದರ ಸ್ಥಾಪಿತ ಉದ್ದೇಶವನ್ನು ರಾಜ್ಯಸಭೆಯ ವೆಬ್ ಸೈಟ್ ಹೀಗೆ ಬಣ್ಣಿಸುತ್ತೆ (ಕೆಳಗೆ ಕೆಲ ಅಂಶಗಳನ್ನು ನಾನೇ ಹೈಲೈಟ್ ಮಾಡಿದ್ದೇನೆ)
ಕಾಂಗ್ರೆಸ್ ಸಂಸದ ಭಾರತಕ್ಕೆ ಸೇರಿದವನಲ್ಲವೇ?
ಮಹೇಶ ಪ್ರಸಾದ ನೀರ್ಕಜೆ
ಅರುಣಾಚಲ ಪ್ರದೇಶ ಪ್ರವಾಸದಲ್ಲಿರುವ ಬಾಬಾ ರಾಮ್ ದೇವ್ ಸಮಾವೇಶಕ್ಕೆ ಬಂದಿದ್ದ ಅಲ್ಲಿನ ಕಾಂಗ್ರೆಸ್ ಸಂಸದ ನಿನಾಂಗ್ ಎರಿಂಗ್ ಬಾಬಾ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂಬುದು ಇತ್ತೀಚಿನ ಸುದ್ದಿ. “ಯು ಬ್ಲಡಿ ಇಂಡಿಯನ್”, “ಸಾಲೆ ಕುತ್ತೇ, ಮೈಕ್ ತೋಡ್ ದೂಂಗಾ, ಸ್ಟೇಜ್ ಫೋಡ್ ದೂಂಗಾ, ಯೋಗಾ ಕರ್ನೇ ಆಯೀ ಹೇ, ಯೋಗಾ ಕರ್. ಕರಪ್ಷನ್ ಕೆ ಬಾರೇ ಮೇ ಬೋಲೇಗಾ ತೋ ಮಾರ್ ಡಾಲೂಗಾ!” ಇತ್ಯಾದಿ. ಈ ಬಗ್ಗೆ ಸಾಕಷ್ಟು ವಿವರಗಳು ಸಿಗುತ್ತಿವೆ ಅಂತರ್ಜಾಲದಲ್ಲಿ. ನಮ್ಮ ಟಿವಿ ಮಾಧ್ಯಮಗಳು ಭಾರತ ಬಾಂಗ್ಲಾದೇಶ ಕ್ರಿಕೆಟ್ ಪಂದ್ಯದಲ್ಲಿ ಹೇಗೆ ಭಾರತ ಬಾಂಗ್ಲಾದೇಶದ ಮೇಲೆ ಸೇಡು ತೀರಿಸಿಕೊಂಡಿತು ಎಂದು ವಿಮರ್ಷಿಸುವುದರಲ್ಲಿ ಬ್ಯುಸಿಯಾಗಿದ್ದವು. ಅವುಗಳಿಗೆ ಹೇಗೆ ಈಶಾನ್ಯ ಭಾರತದ ಮಂದಿ ಹೇಗೆ ಭಾರತದ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಬೇಕಿಲ್ಲ. ಇರಲಿ. ಈಗ ಪ್ರಶ್ನೆಯೇನೆಂದರೆ ಕಾಂಗ್ರೆಸ್ ಸಂಸದ ಬಾಬಾರನ್ನು “ಯೂ ಬ್ಲಡಿ ಇಂಡಿಯನ್”ಅನ್ನಬೇಕಿದ್ದರೆ ಆತ ಇಂಡಿಯನ್ ಅಲ್ಲವೇ? ಎಲ್ಲಿಯವನು ಆತ? ಚೈನಾದವನೇ? ಅಥವಾ ಬೋಡೋ ದೇಶದವನೇ? ಅಥವಾ ಬೇರೆ ಪಾಶ್ಚಿಮಾತ್ಯ ದೇಶದವನೇ?
ಮತ್ತಷ್ಟು ಓದು 
ಯಾರಿಗೂ ಅರ್ಥವಾಗದ ಬಾಪೂ …!
–ಶ್ರೀಹರ್ಷ ಸಾಲಿಮಠ
ಇದನ್ನು ಬೆಳಗೆರೆ ಕೃಷ್ಣಶಾಸ್ತ್ರಿಗಳು ಸ್ವತಃ ನನಗೆ ಹೇಳಿದ್ದು. ಈ ಘಟನೆ ನಡೆಯುವಾಗ ಶಾಸ್ತ್ರಿಗಳು ಖುದ್ದು ಎದುರಿಗೇ ಇದ್ದರಂತೆ.
ಸ್ವಾತಂತ್ರ್ಯದ ಸಮಯ. ಭಾರತದ ಪ್ರಧಾನಿ ಯಾರಾಗಬೇಕೆಂದು ನಿರ್ಧರಿಸಲು ನಡೆದ ಶಾಸನ ಸಭೆಯಲ್ಲಿ ನಡೆದ ಚುನಾವಣೆಯಲ್ಲಿ ನೆಹರೂ ಸರ್ದಾರ್ ಪಟೇಲರ ಎದುರಿಗೆ ೧೧-೧ ಮತಗಳ ಅಂತರದಿಂದ ಸೋತಿದ್ದರು. ಸ್ವಯಂ ನೆಹರೂ ಬಿಟ್ಟು ಬೇರೆ ಯಾರೂ ನೆಹರೂರವರಿಗೆ ಮತ ಹಾಕಿರಲಿಲ್ಲ!
ಇದಾದ ಮರುದಿನ ನೆಹರೂ ಗಾಂಧೀಜಿಯ ಬಳಿ ಬಂದು ನಿಮ್ಮ ಪ್ರಭಾವ ಬಳಸಿ ತಮ್ಮನ್ನು ಪ್ರಧಾನಿಯನ್ನಾಗಿ ಮಾಡಬೇಕೆಂದು ಕೇಳಿಕೊಂಡರು. ಅದಕ್ಕೆ ಗಾಂಧೀಜಿ “you are independent now. think independently. take independent decisions. why do you need my help?” ಎಂದರು. ನೆಹರೂಗೆ ನಿರಾಶೆಯಾಯಿತು. ವಾಪಸು ಹೊರಡಲು ಅನುವಾದರು. ಎರಡು ಹೆಜ್ಜೆ ಬಾಗಿಲ ದಿಕ್ಕಿನಲ್ಲಿ ನಡೆದು ಗಾಂಧೀಜಿಯ ತಿರುಗಿ “If I don’t become prime minister I will burn this country”ಎಂದರು. ಗಾಂಧೀಜಿ ಉತ್ತರಿಸದೆ ತಮ್ಮ ಕೆಲಸದಲ್ಲಿ ಮಗ್ನರಾದರು. ಮರುದಿನ ಸರ್ದಾರ್ ಪಟೇಲರು ಗಾಂಧೀಜಿಯವರ ಬಳಿ ಬಂದರು. ಸ್ವಲ್ಪ ಮಾತಾದ ಮೇಲೆ “ನೆಹರೂ ಇಲ್ಲಿಗೆ ಬಂದಿದ್ದರೆ?” ಎಂದು ಕೇಳಿದರು.
ಬಾಪೂ “ಹೌದು” ಎಂದರು.
“ಏನು ಹೇಳಿದರು ನೆಹರೂ?”
ಮತ್ತಷ್ಟು ಓದು 
ಪ್ರೀತಿಗೆ ಕಣ್ಣು ಬೇಡ ಒಂದಿಷ್ಟು ಮಣ್ಣಾದರೂ ಬೇಡವೇ?
ಪ್ರೇಮಿಗಳ ದಿನಾಚರಣೆಗೆ ಧಿಕ್ಕಾರ…..! ಇದು ಭಾರತದಲ್ಲಿ ಈ ದಿನಾಚರಣೆಯ ಒಟ್ಟೊಟ್ಟಿಗೆ ಬೆಳೆದು ಬಂದ ಒಂದು ಘೋಷಣೆ ಮತ್ತು ಕ್ರಿಯೆ. ಇಲ್ಲಿ ವಿರೋಧ ಮತ್ತು ಪರ ಒಟ್ಟೊಟ್ಟಿಗೆಯೇ ಸಾಗಿದೆ, ಸಾಗುತ್ತಿದೆ ಮತ್ತು ಮುಂದೆಯೂ ಸಾಗಬಹುದು.ವಿಪರ್ಯಾಸವೆಂದರೆ ಧಿಕ್ಕಾರದ ಕೂಗು ಜೋರಾದಂತೆ ಸ್ವೀಕಾರದ ಬಯಕೆ ಕೂಡ ಏರುತ್ತಿದೆ. ಅದು ಹಾಗೆಯೇ, ಮುಚ್ಚಿಟ್ಟಿರುವುದರ ಬಗೆಗೆ ಹೆಚ್ಚು ಕುತೂಹಲ. ಇದು ಮಾನವನ ಸಹಜ ಸಂಸ್ಕ್ರತಿ. ಕಾಲದ ಹರಿವು ಮುಂದೆ ಮುಂದೆ…. ಹಿಂದೆಯಲ್ಲ, ಅನ್ನುವುದು ’ಹೀಗೂ ಒಂದು ದಿನ’ ಬೇಕು ಎಂಬುವವರ ಅಂಬೋಣ. ಆದರೆ ಯಾವುದು ಮುಂದೆ, ಯಾವುದು ಹಿಂದೆ ಎಂಬುದು ನಿರ್ದಿಷ್ಟ ವ್ಯಾಖ್ಯೆಯಿಲ್ಲದ ’ಕಾಲಗುಣ’. ಒಟ್ಟಿನಲ್ಲಿ ನನ್ನಂಥವರ ಸದ್ಯದ ಸ್ಥಿತಿ, ಮೂರು ಮಾರ್ಗದ ಮಧ್ಯೆ ಮದ್ಯ ಕುಡಿದು ತೂರಾಡುವವನಂತಾಗಿದೆ!
***
ಪ್ರವೀಣ್ ಗೊಡ್ಕಿಂಡಿಯ ಕೊಳಲನಾದ ಅಲೆ ಅಲೆಯಾಗಿ ತೇಲಿ ವಾಲಿ ನನ್ನ ಸುತ್ತ ಮತ್ತು ನನ್ನೊಳಗೊಂದು ಭಾವವಲಯ ಸ್ರೃಷ್ಟಿಸಿ ಬಿಡುತ್ತದೆ. ಹೌದು, ನಾನು ಕೊಳಲನ್ನು ಪ್ರೀತಿಸುತ್ತೇನೆ. ನುಡಿಸುವವನನಲ್ಲ! ಅದನ್ನು ಯಾರು ನುಡಿಸಿದರೂ ನನಗಷ್ಟೆ! ನಾ ಝಾಕೀರ್ ಹುಸೇನ್‌ನನ್ನು ಪ್ರೀತಿಸುತ್ತೇನೆ. ತಬಲವನ್ನಲ್ಲ! ಮತ್ತಷ್ಟು ಓದು 
ಒಲುಮೆ
ಪದ್ಮಾವತಿ ಎನ್
ವಯ್ಯಾರದಾ ಛಾಪಿಲ್ಲ . . . ಗೊಂದಲದ ಮುಸುಕಿಲ್ಲ
ರೆಪ್ಪೆಯಂಚಲಿ ಮೂಡಿದಾ ಕಳೆ
ಆವರಿಸಿತ್ತು ನನ್ನ ಮನ ಪಟಲವ . . . . .
ಸಂಕೋಚದಲೆ ಬಾಚಿದೆ ಆ ಕಿರಣವ
ಪುಳಕಗೊಂಡಿತಾಗ ಮೈಮನಸು
ನನ್ನಿರವ ಮರೆತಿದ್ದೆ
ನೋಟವನೇ ಗೆದ್ದಿದ್ದೆ
ಕನಸಿನರಮನೆಯ ಅರಸುತ್ತಾ ಸಾಗಿದ್ದೆ. . . . .
ನನ್ನೊಡಲ ದಣಿಸಿದವನು ನನ್ನುಸಿರ ತಣಿಸಿದವನು
ನಂಬಿದ್ದೆ ನಾನಾಗ ಆ ಕಣ್ಣಂಚ ಕಿರಣವನು
ಆದರತೆಯು ಚಿಗುರಿ ನಿಂತಾಗ
ಕ್ಷಣ ಕಳೆದು ಕಾಲ ಮಗುಚಿದರೂ
ನಿಂತಿದೆ ನನ್ನುಸಿರು ಅವನಾಳದಲಿ
ತಂಪೆರೆದಿಹಾ ಪ್ರೀತಿಯಾಮೃತಕೆ . . . . . . ಮತ್ತಷ್ಟು ಓದು 
ನಮ್ಮ ರಾಜ್ಯವನ್ನು ಪ್ರತಿನಿಧಿಸಲು ಜನರಿಲ್ವಾ???
– ಚೇತನ್ ಜೀರಾಳ್
ಇದು ಖಂಡಿತಾ ಕರ್ನಾಟಕದ ದೌರ್ಭಾಗ್ಯದ ಪರಮಾವಧಿ. ಹೈಕಮಾಂಡ್ ದಾಸ್ಯಕ್ಕೆ ಸಿಲುಕಿರುವ ಬಿಜೆಪಿ ಪಕ್ಷ ಮತ್ತೊಂದು ಎಡವಟ್ಟು ತೀರ್ಮಾನ ಕೈಗೊಂಡಿದೆ. ಹಿರಿಯ ರಾಜಕಾರಣಿ ಶ್ರೀ ರಾಜಶೇಖರ ರ್ಮೂರ್ತಿಯವರ ನಿಧನದಿಂದ ತೆರವಾಗಿದ್ದ ರಾಜ್ಯಸಭಾ ಸ್ಥಾನಕ್ಕೆ ಹಿಂದಿ ಚಲನಚಿತ್ರ ನಟಿ ಶ್ರೀಮತಿ ಹೇಮಾ ಮಾಲಿನಿ ಅವರನ್ನ ರಾಜ್ಯದಿಂದ ಬಿಜೆಪಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಬಿಜೆಪಿ ಹೈಕಮಾಂಡ್ ತೀರ್ಮಾನಿಸಿದೆ.
ರಾಜ್ಯಸಭಾ ಸದಸ್ಯತ್ವ ಅಂದರೇನು?
ಒಬ್ಬ ರಾಜ್ಯಸಭಾ ಸದಸ್ಯ ಮುಖ್ಯವಾಗಿ ಆಯಾ ರಾಜ್ಯದ ಪ್ರತಿನಿಧಿಯಾಗಿ ಸಂಸತ್ತಿನ ಮೇಲ್ಮನೆಯಲ್ಲಿ ಕೆಲಸಮಾಡುತ್ತಾರೆ. ರಾಜ್ಯಸಭೆ ಅನ್ನುವುದು ಒಕ್ಕೂಟ ವ್ಯವಸ್ಥೆಯ ಒಂದು ಮುಖ್ಯ ಭಾಗ. ಕೇಂದ್ರದಲ್ಲಿ ಲೋಕಸಭೆಗಿರುವಷ್ಟೇ ಪ್ರಾಮುಖ್ಯತೆ ರಾಜ್ಯಸಭೆಗೂ ಇದೆ. ರಾಜ್ಯಸಭಾ ಸದಸ್ಯರನ್ನು ಆಯಾ ರಾಜ್ಯದ ಶಾಸಕರು ಆಯ್ಕೆ ಮಾಡುತ್ತಾರೆ.
ನಮ್ಮ ರಾಜ್ಯವನ್ನೂ ಪ್ರತಿನಿಧಿಸಲು ಅರ್ಹ ಜನಪ್ರತಿನಿಧಿಗಳು ಇಲ್ಲವೇ?
ಇಷ್ಟಕ್ಕೂ ರಾಜ್ಯಸಭೆ ಸ್ಥಾನಕ್ಕೆ ಹೇಮಾ ಮಾಲಿನಿಯವರನ್ನು ಕಣಕ್ಕಿಳಿಸಲು ಇರುವ ಅರ್ಹತೆಯಾದರೂ ಏನು? ಮೊದಲನೆಯದಾಗಿ ಹೇಮಾ ಮಾಲಿನಿ ನಮ್ಮ ನಾಡಿನವರಲ್ಲ, ಹೋಗಲಿ ಆ ಕಾರಣವನ್ನು ಬದಿಗಿಟ್ಟು ನೋಡೋಣವೆಂದರೆ ಅವರಿಂದ ನಮ್ಮ ರಾಜ್ಯಕ್ಕೆ ಆಗಿರುವ ಉಪಯೋಗವಾದರೂ ಏನು? ನಮ್ಮ ನಾಡಿನ ಯಾವ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವ ಪ್ರಯತ್ನ ರಾಜ್ಯ ಮಟ್ಟದಲ್ಲಾಗಲಿ ಅಥವಾ ಕೇಂದ್ರ ಮಟ್ಟದಲ್ಲಾಗಲಿ ಪ್ರಯತ್ನಿಸಿದ್ದಾರೆ? ನಮ್ಮ ನೆಲ, ಜಲ, ಭಾಷೆ, ಉದ್ಯೋಗ, ಉದ್ದಿಮೆ ಹೀಗೆ ಯಾವ ಕಾರಣಕ್ಕಾಗಿ ನಮ್ಮ ನಾಡಿಗಾಗಿ ಕೆಲಸ ಮಾಡಿದ್ದಾರೆ? ಯಾವುದೇ ದೃಷ್ಠಿಯಿಂದ ನೋಡಿದರೂ ಸಹ ಹೇಮಾ ಮಾಲಿನಿ ನಮ್ಮ ರಾಜ್ಯದ ಪ್ರತಿನಿಧಿಯಾಗಿ ರಾಜ್ಯಸಭೆ ಪ್ರವೇಶಿಸಲು ಅರ್ಹರಲ್ಲ. ಇಂತಹುದೇ ತಪ್ಪನ್ನು ಹಿಂದೆ ಬಿಜೆಪಿ ಹೈಕಮಾಂಡ್ ವೆಂಕಯ್ಯ ನಾಯ್ಡು ಅವರನ್ನ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸಿವಾಗ ಮಾಡಿತ್ತು. ಕಾಂಗ್ರೆಸ್ ಹಾಗೂ ಜನತಾದಳ ಪಕ್ಷಗಳು ಸಹಿತ ಇಂತಹುದೇ ತಪ್ಪನ್ನು ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ.
ಮತ್ತಷ್ಟು ಓದು 
ಓಶೋ ವಿಚಾರಗಳು ಪ್ರಾಕ್ಟಿಕಲ್ಲಾಗಿವೆಯೇ?
– ಸುಪ್ರೀತ್.ಕೆ.ಎಸ್
ಈ ಲೇಖನದ ಉದ್ದೇಶ ಓಶೋ ಮೇಲಿನ ನನ್ನ ಪ್ರೀತಿ, ಮುನಿಸು, ಅಭಿಮಾನ, ಆತನ ಬಗೆಗಿರುವ ಬೆರಗು, ಕುತೂಹಲ, ಅನುಮಾನ, ಅಸಹ್ಯಗಳನ್ನು ಬರೆದಿರಿಸುವುದು, ಆ ಮೂಲಕ ನನ್ನೊಳಗೊಂದು ಸ್ಪಷ್ಟ ನಿಲುವನ್ನು ರೂಪಿಸಿಗೊಳ್ಳುತ್ತಾ ಹೋಗುವುದು ಎಂದಾಗಿತ್ತು. ಓಶೋನ ವಿಚಾರಗಳನ್ನು ನಾನೆಷ್ಟೇ ಮೆಚ್ಚಿದರೂ
ಅವನ್ನು ಯಥಾವತ್ತಾಗಿ ಬ್ಲಾಗಿಗೆ ಹಾಕುವುದು ವ್ಯರ್ಥ ಶ್ರಮ ಎನ್ನಿಸಿ ಸುಮ್ಮನಾದೆ. ಹಾಗೆ ನೋಡಿದರೆ ಅಂತರ್ಜಾಲದಲ್ಲಿ ಓಶೋ ಸಾಹಿತ್ಯಕ್ಕೆ ಕೊರತೆಯೇನೂ ಇಲ್ಲ. ಆತನ ಪ್ರತಿಯೊಂದು ಭಾಷಣ, ಪುಸ್ತಕಗಳು ಅಂತರ್ಜಾಲದಲ್ಲಿ ಲಭ್ಯವಿವೆ. ಕನ್ನಡದಲ್ಲಿಯೂ ಓಶೋ ವಿಚಾರಗಳಿಗಾಗಿಯೇ ಮೀಸಲಾದ ಪತ್ರಿಕೆಯಿದೆ. ಇಂಗ್ಲೀಷಿನಲ್ಲಿ ತುಂಬಾ ಸರಳವಾಗಿರುವ ಪ್ರವಚನಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಹೊರಟರೆ ನಮ್ಮ ಶ್ರದ್ಧೆಯೆಂಬ ಕಲ್ಮಷವೇ ಸೇರಿಕೊಂಡು ಭಾಷಾಂತರ ಮೂಲಕ್ಕಿಂತ ಹೆಚ್ಚು ಕ್ಲಿಷ್ಟಕರವಾಗಿಬಿಡುತ್ತದೆ. ಮೇಲಾಗಿ ಓಶೋ ಇಂಥದ್ದೊಂದು ವಿಷಯದ ಬಗ್ಗೆ ಎಂದು ತಯಾರಾಗಿ ಮಾತಾಡಿದವನಲ್ಲ. ತನ್ನ ಸಂನ್ಯಾಸಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋದ. ಒಂದೊಂದು ಪ್ರವಚನದಲ್ಲೂ ಬೇರೆ ಬೇರೆ ಆಯಾಮಗಳಲ್ಲಿ ವಿಷಯಗಳನ್ನು ವಿವರಿಸುತ್ತಾ ಹೋಗುವ ಆತನ ಶೈಲಿಯನ್ನು ಅನೇಕ ವೇಳೆ ನಾವು ವಿರೋಧಾಭಾಸ ಎಂದು ಭಾವಿಸುತ್ತೇವೆ.ಯೇಸುವಿನ ಬಗ್ಗೆ ಇದುವರೆಗೂ ನಾನು ಕೇಳಿರುವ ಪ್ರವಚನಗಳಲ್ಲಿ ಒಂದಕ್ಕಿಂತ ಒಂದು ಭಿನ್ನವಾದ, ಕೆಲವೊಂದು ವೇಳೆ ವೈರುಧ್ಯಗಳಂತೆ ಕಾಣುವ ಹಾಗೆ ಆತ ಮಾತನಾಡಿದ್ದಾನೆ. ಹೀಗಾಗಿ ಓಶೋ ಚಿಂತನೆ ಎಂಬುದು ನನ್ನೆದುರು ಸಮುದ್ರದ ಹಾಗೆ ನಿಂತಂತೆ ಭಾಸವಾಗುತ್ತದೆ. ಕಲ್ಲು ಸಕ್ಕರೆಯ ದೊಡ್ಡ ಬಂಡೆಯೆದುರು ನಿಂತಂತೆ ಅನ್ನಿಸುತ್ತದೆ. ಹೀಗಾಗಿ ಆತನ ಪ್ರವಚನಗಳನ್ನು ಯಥವಾತ್ತಾಗಿ ಭಾಷಾಂತರಿಸಿ ಬ್ಲಾಗಿಗೆ ಹಾಕುವುದಕ್ಕಿಂತ ಆತನ ಪ್ರೇರಣೆಯಿಂದ ನಾನು ಕಂಡುಕೊಂಡ ಸತ್ಯ ಯಾವುದು, ಆತ ನನ್ನಲ್ಲಿ ಹುಟ್ಟುಹಾಕಿದ ವಿಚಾರಗಳು ಯಾವುವು, ಅವು ನನ್ನೊಳಗೆ ಮಾಡಿದ ಪ್ರಭಾವಗಳೇನು ಎಂಬುದರ ಬಗ್ಗೆ ಬರೆಯುತ್ತೇನೆ. ಮತ್ತಷ್ಟು ಓದು 
ದುರಂತ ನಾಯಕ
ರೂಪಾ
ಸ್ಮಶಾನಕ್ಕೆ ಕಾಲಿಟ್ಟಂತಹ ಅನುಭವ.ಒಬ್ಬಂಟಿಯಾಗಿ ನಡೆಯುತ್ತಿದ್ದೆ.
ಎಲ್ಲಿ ನೋಡಿದರೂ ಮುರಿದ ರಥಗಳು, ರಕ್ತದ ಮಡುವು, ಕರುಳು ಆಚೆ ಕಿತ್ತು ಬಂದಿರುವ ಸೈನಿಕರು. ನಿಟ್ಟುಸಿರು ತಂತಾನೆ ಹೊರಹೊಮ್ಮಿತು .
ದೀರ್ಘವಾಗಿ ಉಸಿರೆಳೆದೆ. ನನ್ನ ಸ್ವಾರ್ಥಕ್ಕೆ, ಹಣದಾಹಕ್ಕೆ, ಭೂಮಿಯಾಸೆಗೆ, ಅಭಿಮಾನಕ್ಕೆ ಬಲಿಯಾದ ಮುಗ್ಧರು. ತಾವು ಏತಕ್ಕಾಗಿ ಯಾರಿಗಾಗಿ ಯುದ್ದ್ದ ಮಾಡುತ್ತಿದ್ದೆವೆಂಬ ಅರಿವೂ ಇಲ್ಲದವರು.
ಅದೂ ನನ್ನದೇ ಅಪ್ಪಣೆಯಾಗಿತ್ತಲ್ಲವೇ. ಪ್ರತಿಯೊಂದು ಗಂಡಸೂ ಯುದ್ದರಂಗದಲ್ಲಿ ಹೋರಾಡಬೇಕೆಂಬ ನಿಯಮ ತಂದು ಮನೆ ಮನೆಗೆ ನುಗ್ಗಿ ೧೪ ರಿಂದ ೭೦ ರವರೆಗಿನ ಪುರುಷರನ್ನು ಎಳೆತಂದು ಯುದ್ದ ತರಬೇತಿ ಕೊಟ್ಟು……….
ಆಗ ತಾನೆ ಮದುವೆಯಾಗಿತ್ತಲ್ಲವೇ ಲಕ್ಷ್ಮಣನಿಗೆ. ಹಾ ಕಂದ ಲಕ್ಷ್ಮಣನನ್ನು ನೆನೆದು ಕರುಳು ಹರಿದಂತಾಯಿತು. ತನ್ನ ಮುಂದೆಯೇ ಕೊಂದನಲ್ಲಾ ಆ ಎನ್ನ ಅರಿ ಅರ್ಜುನನ ಮಗ ಅಭಿಮನ್ಯು. ತಾನೇನೂ ಮಾಡಲಾಗಲಿಲ್ಲವಲ್ಲಾ . ಇಲ್ಲ ಇಲ್ಲ ಅವನನ್ನೂಕೊಂದು ಬಿಟ್ಟೆವಲ್ಲ್ಲಾ ಅವನೂ ಹೊಸದಾಗಿ ಮದುವೆಯಾದವನೇ ತಾನೆ. ದ್ವೇಷಕ್ಕೆ ದ್ವೇಷ . ಸೇಡಿಗೆ ಸೇಡು . ಅವನನ್ನು ಕೊಂದ ತಪ್ಪಿಗೆ ಸೈಂಧವನ ಬಲಿ. ಪ್ರೀತಿಯ ಸಹೋದರಿ ವಿಧವೆಯಾದಳು. ಮತ್ತಷ್ಟು ಓದು 








