ನಿಮ್ಮ ನಿಲುಮೆಗೆ ಒಂದು ವರ್ಷ- ಹರಸ ಬನ್ನಿ, ಹಾರೈಸಬನ್ನಿ
ವರ್ಷವಾಗಿದ್ದು ತಿಳಿಯಲೇ ಇಲ್ಲ ನೋಡಿ.ಹೌದು ನಮ್ಮ-ನಿಮ್ಮ ’ನಿಲುಮೆ’ಗೆ ವರ್ಷದ ಸಂಭ್ರಮ :). ’ಕನಸು-ಕನವರಿಕೆ’ಯಾಗಿ ಶುರುವಾದ ನಿಲುಮೆ ’ಎಲ್ಲ ತತ್ವದ ಎಲ್ಲೇ ಮೀರಿ’ ನಿಲ್ಲಲ್ಲಿ ಅನ್ನುವ ನಮ್ಮ ಆಶಯಕ್ಕೆ ವರುಷವಾಗಿದೆ. ಈ ಸಂಭ್ರಮಕ್ಕೆ ನಮ್ಮ ಎಲ್ಲ ಬರಹಗಾರರು, ಓದುಗರು ಕಾರಣಕರ್ತರು. ಅವರಿಲ್ಲದಯೇ ನಾವಾದರೂ ಏನು ಮಾಡಲಿಕ್ಕಾಗುತಿತ್ತು ಅಲ್ಲವೇ?
“ನೂರು ಮತದ ಹೊಟ್ಟ ತೂರಿ
ಎಲ್ಲ ತತ್ವದ ಎಲ್ಲೆ ಮೀರಿ
ನಿರ್ದಿಗಂತವಾಗಿ ಏರಿ
ಓ ನನ್ನ ಚೇತನ ಆಗು ನೀ ಅನಿಕೇತನ…
ರಸ ಋಷಿ ಕುವೆಂಪು ಅವರ ಈ ನುಡಿಗಳೆ ನಮಗೆ ಸ್ಪೂರ್ತಿ. ಯಾವುದೇ ಜಾತಿ, ಮತ, ತತ್ವಗಳಿಗೆ ಗಂಟು ಬೀಳದೆ, ಎಡ-ಬಲ ಪಂಥೀಯರ ನಡುವೆ ಸಿಕ್ಕಿಕೊಳ್ಳದೆ, ಯಾವುದೇ ಮತ್ತು ಯಾರದೇ ಮರ್ಜಿಗೇ ಬೀಳದೆ ಅನ್ನಿಸಿದ್ದನ್ನು ನೇರವಾಗಿ ಹೇಳುವ, ಆ ಮೂಲಕ ಯಾವ ಗುಂಪಿಗೂ ಸೇರದೆಯೆ ಸ್ವತಂತ್ರವಾಗಿ ಯೋಚಿಸುವ ಬಯಕೆ ನಮ್ಮದು. ಅಷ್ಟಕ್ಕೂ ’ಸತ್ಯ’ ಅನ್ನುವುದು ಎಡ-ಬಲ ಪಂಥದ ಆಸ್ತಿಯೇನು ಅಲ್ಲವಲ್ಲ. ಅದು ಈ ಇಬ್ಬರ ನಡುವೆಯು ಸಿಲುಕದೆ ತನ್ನ ಪಾಡಿಗದು ಯಾವುದೋ ಮೂಲೆಯಲ್ಲಿ ನಿರ್ಲಿಪ್ತವಾಗಿರುತ್ತದೆ. ಅದನ್ನ ಹುಡುಕುವ ಮುಗ್ಧ ಆಸೆ ನಮ್ಮದು.ನೊಂದ ಜೀವಗಳಿಗೆ ದನಿಯಾಗುವ ಬಯಕೆ ನಮ್ಮದು.
ಮೇಲಿನ ಮಾತುಗಳು ’ನಿಲುಮೆಯ ನಿಲುವಿನಲ್ಲಿ’ ನಾವು ಬರೆದುಕೊಂಡಿರುವುದು. ನಿಲುಮೆ ಶುರುವಾದ ವರುಷದ ಅವಧಿಯಲ್ಲಿ ಮೇಲಿನ ಮಾತುಗಳಿಗೆ ನ್ಯಾಯ ಸಲ್ಲಿಸಿದ್ದೇವೆ ಅನ್ನುವ ಭಾವನೆ ನಮ್ಮದು.ಇದುವರೆಗೂ ನಿಲುಮೆಗೆ ಕಳಿಸಲ್ಪಟ್ಟ ಲೇಖನಗಳನ್ನು, ನಾವು ನಮ್ಮ ವಾದ,ನಂಬಿಕೆ,ಅಭಿಪ್ರಾಯಕ್ಕೆ ವಿರುದ್ಧವಾಗಿದೆ ಅನ್ನುವ ಕಾರಣಕ್ಕೆ ಪ್ರಕಟಿಸದೇ ತಡೆ ಹಿಡಿದವರಲ್ಲ.ವಿಭಿನ್ನ ಸಂಸ್ಕೃತಿ,ಆಚಾರ,ವಿಚಾರ,ನಂಬಿಕೆಗಳನ್ನುನ ಗೌರವಿಸಬೇಕು ಅನ್ನುವುದು ಕೇವಲ ನಮ್ಮ ಮಾತಲ್ಲ,ಅದನ್ನ ಈ ವರುಶದ ಅವಧಿಯಲ್ಲಿ ಕಾರ್ಯಗತಗೊಳಿಸಿದ್ದೇವೆ ಕೂಡ.
ಆದರೆ ಒಂದು ಮಾತು ನಿಜ.ಕೆಲವೊಂದು ಲೇಖನಗಳು ಯುನಿಕೋಡ್ನಲ್ಲಿರದ ಕಾರಣ, ಇನ್ನು ಕೆಲವು ಸಾಂಧರ್ಭಿಕ ಲೇಖನಗಳನ್ನ ನಾವು ನೋಡುವಷ್ಟರಲ್ಲೇ ತಡವಾಗಿದ್ದರಿಂದ ಕೆಲವು ಪ್ರಕಟವಾಗಿಲ್ಲ (ನಿಲುಮೆ ನಮ್ಮ ಹವ್ಯಾಸದ ಭಾಗವಾಗಿರುವುದರಿಂದ, ಕೆಲವೊಮ್ಮೆ ಕೆಲಸದ ಒತ್ತಡದಲ್ಲಾಗುವ ತಪ್ಪುಗಳಿವು, ಮನ್ನಿಸಿ).ಇವಿಷ್ಟು ಕಾರಣ ಬಿಟ್ಟರೆ ನಮಗೆ ಕಳಿಸಲ್ಪಟ್ಟ ಎಲ್ಲ ಲೇಖನಗಳನ್ನು ನಾವು ಪ್ರಕಟಿಸಿದ್ದೇವೆ.
ಇನ್ನು ಕಮೆಂಟುಗಳನ್ನೂ ಮಾಡರೇಟ್ ಮಾಡುವುದರಲ್ಲೂ ನಮಗೆ ನಂಬಿಕೆಯಿಲ್ಲ. ನಿಲುಮೆಯಲ್ಲಿ ’ವಾಕ್ ಸ್ವಾತಂತ್ರ್ಯ’ವಿದೆ.ಹಾಗಂದ ಮಾತ್ರಕ್ಕೆ ನಾವು ಕಮೆಂಟುಗಳಿಗೆ ಕತ್ತರಿ ಪ್ರಯೋಗ ಮಾಡಿಲ್ಲವೆಂದಲ್ಲ.ಅಸಭ್ಯ ಭಾಷೆ ಬಳಸಲ್ಪಟ್ಟ ಬಹುತೇಕ ಎಲ್ಲ ಪ್ರತಿಕ್ರಿಯೆಗಳನ್ನೂ ತೆಗೆದುಹಾಕಿದ್ದೇವೆ, ಹಾಕುತ್ತಲೂ ಇರುತ್ತೇವೆ. ಸ್ವಾತಂತ್ರ್ಯವನ್ನ ಸ್ವೇಚ್ಚಾಚಾರ ಮಾಡಿಕೊಳ್ಳಲು ಬಿಡುವುದೂ ಇಲ್ಲ.
ನಿಲುಮೆ





“ನಿಲುಮೆ”ಗೆ ಒಂದು ವರ್ಷ ತುಂಬಿದ್ದು ಬಹಳ ಸಂತಸದ ವಿಷಯ. ನಿಲುಮೆ ತಂಡಕ್ಕೆ ಹಾರ್ದಿಕ ಶುಭಾಶಯಗಳು. ವೈವಿಧ್ಯತೆಯಲ್ಲಿ ಏಕತೆ ಎಂಬ ಮಾತಿನಂತೆ ನಿಲುಮೆಯಲ್ಲಿ ವೈವಿಧ್ಯಮಯ ವಿಷಯಗಳ ಕುರಿತು ಲೇಖನಗಳು ಮೂಡಿಬರುತ್ತವೆ. ನಿಲುಮೆ ಮತ್ತಷ್ಟು ಬೆಳೆಯಲಿ……ಕನ್ನಡದ ಓದುಗರ ಕಣ್ಮನವ ತಣಿಸಲಿ ಎಂದು ಹಾರೈಸುವೆ.
ಪ್ರೀತಿಯ ನಿಲುಮೆ
ನಿನಗೆ ಒಂದು ವರ್ಷ ಕಳೆಯಿತೆ!
ನೂರು ವರ್ಷ ಒಳಿತನ್ನು ಹಾರೈಸುವೆ
ಪ್ರೀತಿಯಿಂದ
ಪಂಡಿತಾರಾಧ್ಯ ಮೈಸೂರು
ತುಂಬು ಹೃದಯದಿಂದ ಹಾರೈಸುತ್ತೇನೆ.ನಾಡಿನಾದ್ಯಂತ ಕನ್ನಡ ಭಾಷೆ, ಸಾಹಿತ್ಯ, ಸತ್ಯ,ನ್ಯಾಯ ನೀತಿ , ಧರ್ಮವನ್ನು ಎತ್ತಿ ಹಿಡಿಯುವಲ್ಲಿ ಶಕ್ತಿ ಬರಲಿ. ಸಾಹಿತ್ಯ ಲೋಕಕ್ಕೊಂದು ಅಮೂಲ್ಯ ಕೊಡುಗೆ ನಿಲಿಮೆಯದ್ದಾಗಲಿ.
ಶುಭಾಶಯಗಳು ನಿಲುಮೆ ತ೦ಡಕ್ಕೆ, ನಿರ೦ತರವಾಗಿ ಸಾಗಲಿ ಇ ನಿಮ್ಮ ನಿಲುಮೆಯ ಪಯಣ
ನಿಲುಮೆಗೆ ಮೊದಲನೇ ಹುಟ್ಟುಹಬ್ಬದ(ವಾರ್ಷಿಕೋತ್ಸವದ) ಶುಭಾಶಯಗಳು..!
ನಿಲುಮೆ ಹೀಗೆ ಹೆಚ್ಚೆಚ್ಚು ಜನರನ್ನ ತಲುಪಲಿ ಅಂತ ಹಾರೈಸುತ್ತಾ..!
ನಿಮ್ಮೊಲವಿನ,
ಸತ್ಯ..:)
ಶುಭಾಶಯಗಳು … 🙂
ಒಂದು ವರ್ಷ ಪೂರೈಸಿದ ನಿಲುಮೆಗೆ ತುಂಬುಹೃದಯದ ಅಭಿನಂದನೆಗಳು. ನಿಲುಮೆ ಬ್ಲೋಗ ಇನ್ನಷ್ಟು ಆಕರ್ಷಕವಾಗಿಯೂ ಕಣ್ಮನಗಳ ಸೆಳೆವಂತೆಯೂ ಮೂಡಿಬರಲೆಂಬ ಹಾರೈಕೆ.
ನಿಲುಮೆಯ ಹುಟ್ಟುಹಬ್ಬಕ್ಕೆ ನನ್ನದೊಂದು ಒಲವಿನ ಹಾರೈಕೆ, ‘ಹುಟ್ಟು ಹಬ್ಬದ ಶುಭಾಶಯಗಳು’.
ಸಾಹಿತ್ಯಕ್ಕೆ ನೀರೆರಚುವ ಕಾರ್ಯ ನಿರಂತವಾಗಿರಲಿ.
ನಲ್ಮೆಯ ನಿಲುಮೆಗೆ ಶುಭಹಾರೈಕೆ
🙂 ಅಭಿನ೦ದನೆಗಳು.
ಇನ್ನೂ ಹೆಚ್ಚಾಗಿ ಜ್ವಲ೦ತ ಸಮಸ್ಯೆಗಳ ಬಗ್ಗೆ, ಶ್ರೀಸಾಮನ್ಯನ ಬವಣೆಯ ಬಗ್ಗೆ, ಪ್ರಸಕ್ತ ವಿದ್ಯಮಾನಗಳ ಬಗ್ಗೆ ಬರಹಗಳು ಬರಲಿ. ಜನರ ಕಣ್ಣು ತೆರೆಸಲಿ. ಸತ್ಯಮೇವ ಜಯತೇ
ನನ್ನ೦ತಹ ಲೇಖಕನನ್ನು ಸಾವಿರಾರು ಜನರೆಡೆಗೆ ತಲುಪಿಸಿದ ನಿಲುಮೆಗೆ ನನ್ನ ನನ್ನಿಗಳು.. ಹಾಗೂ ಮೊದಲ ವರುಷದ ಜನುಮದಿನದ ಶುಭಹಾರೈಕೆಗಳು.
ನಿಲುಮೆಯ ನಿರ್ವಾಹಕ ತ೦ಡಕ್ಕೆ ಹಾಗೂ ಓದುಗ ಬಳಗಕ್ಕೆ ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
🙂