ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 4, 2011

12

ನಿಮ್ಮ ನಿಲುಮೆಗೆ ಒಂದು ವರ್ಷ- ಹರಸ ಬನ್ನಿ, ಹಾರೈಸಬನ್ನಿ

‍ನಿಲುಮೆ ಮೂಲಕ

ವರ್ಷವಾಗಿದ್ದು ತಿಳಿಯಲೇ ಇಲ್ಲ ನೋಡಿ.ಹೌದು ನಮ್ಮ-ನಿಮ್ಮ ’ನಿಲುಮೆ’ಗೆ ವರ್ಷದ ಸಂಭ್ರಮ :). ’ಕನಸು-ಕನವರಿಕೆ’ಯಾಗಿ ಶುರುವಾದ ನಿಲುಮೆ ’ಎಲ್ಲ ತತ್ವದ ಎಲ್ಲೇ ಮೀರಿ’ ನಿಲ್ಲಲ್ಲಿ ಅನ್ನುವ ನಮ್ಮ ಆಶಯಕ್ಕೆ ವರುಷವಾಗಿದೆ. ಈ ಸಂಭ್ರಮಕ್ಕೆ ನಮ್ಮ ಎಲ್ಲ ಬರಹಗಾರರು, ಓದುಗರು ಕಾರಣಕರ್ತರು. ಅವರಿಲ್ಲದಯೇ ನಾವಾದರೂ ಏನು ಮಾಡಲಿಕ್ಕಾಗುತಿತ್ತು ಅಲ್ಲವೇ?

ನೂರು ಮತದ ಹೊಟ್ಟ ತೂರಿ
ಎಲ್ಲ ತತ್ವದ ಎಲ್ಲೆ ಮೀರಿ
ನಿರ್ದಿಗಂತವಾಗಿ ಏರಿ
ಓ ನನ್ನ ಚೇತನ ಆಗು ನೀ ಅನಿಕೇತನ

ರಸ ಋಷಿ ಕುವೆಂಪು ಅವರ ಈ ನುಡಿಗಳೆ ನಮಗೆ ಸ್ಪೂರ್ತಿ. ಯಾವುದೇ ಜಾತಿ, ಮತ, ತತ್ವಗಳಿಗೆ ಗಂಟು ಬೀಳದೆ, ಎಡ-ಬಲ ಪಂಥೀಯರ ನಡುವೆ ಸಿಕ್ಕಿಕೊಳ್ಳದೆ, ಯಾವುದೇ ಮತ್ತು ಯಾರದೇ ಮರ್ಜಿಗೇ ಬೀಳದೆ ಅನ್ನಿಸಿದ್ದನ್ನು ನೇರವಾಗಿ ಹೇಳುವ, ಆ ಮೂಲಕ ಯಾವ ಗುಂಪಿಗೂ ಸೇರದೆಯೆ ಸ್ವತಂತ್ರವಾಗಿ ಯೋಚಿಸುವ ಬಯಕೆ ನಮ್ಮದು. ಅಷ್ಟಕ್ಕೂ ’ಸತ್ಯ’ ಅನ್ನುವುದು ಎಡ-ಬಲ ಪಂಥದ ಆಸ್ತಿಯೇನು ಅಲ್ಲವಲ್ಲ. ಅದು ಈ ಇಬ್ಬರ ನಡುವೆಯು ಸಿಲುಕದೆ ತನ್ನ ಪಾಡಿಗದು ಯಾವುದೋ ಮೂಲೆಯಲ್ಲಿ ನಿರ್ಲಿಪ್ತವಾಗಿರುತ್ತದೆ. ಅದನ್ನ ಹುಡುಕುವ ಮುಗ್ಧ ಆಸೆ ನಮ್ಮದು.ನೊಂದ ಜೀವಗಳಿಗೆ ದನಿಯಾಗುವ ಬಯಕೆ ನಮ್ಮದು.
ಮೇಲಿನ ಮಾತುಗಳು ’ನಿಲುಮೆಯ ನಿಲುವಿನಲ್ಲಿ’ ನಾವು ಬರೆದುಕೊಂಡಿರುವುದು. ನಿಲುಮೆ ಶುರುವಾದ ವರುಷದ ಅವಧಿಯಲ್ಲಿ ಮೇಲಿನ ಮಾತುಗಳಿಗೆ ನ್ಯಾಯ ಸಲ್ಲಿಸಿದ್ದೇವೆ ಅನ್ನುವ ಭಾವನೆ ನಮ್ಮದು.ಇದುವರೆಗೂ ನಿಲುಮೆಗೆ ಕಳಿಸಲ್ಪಟ್ಟ ಲೇಖನಗಳನ್ನು, ನಾವು ನಮ್ಮ ವಾದ,ನಂಬಿಕೆ,ಅಭಿಪ್ರಾಯಕ್ಕೆ ವಿರುದ್ಧವಾಗಿದೆ ಅನ್ನುವ ಕಾರಣಕ್ಕೆ ಪ್ರಕಟಿಸದೇ ತಡೆ ಹಿಡಿದವರಲ್ಲ.ವಿಭಿನ್ನ ಸಂಸ್ಕೃತಿ,ಆಚಾರ,ವಿಚಾರ,ನಂಬಿಕೆಗಳನ್ನುನ ಗೌರವಿಸಬೇಕು ಅನ್ನುವುದು ಕೇವಲ ನಮ್ಮ ಮಾತಲ್ಲ,ಅದನ್ನ ಈ ವರುಶದ ಅವಧಿಯಲ್ಲಿ ಕಾರ್ಯಗತಗೊಳಿಸಿದ್ದೇವೆ ಕೂಡ.

ಆದರೆ ಒಂದು ಮಾತು ನಿಜ.ಕೆಲವೊಂದು ಲೇಖನಗಳು ಯುನಿಕೋಡ್ನಲ್ಲಿರದ ಕಾರಣ, ಇನ್ನು ಕೆಲವು ಸಾಂಧರ್ಭಿಕ ಲೇಖನಗಳನ್ನ ನಾವು ನೋಡುವಷ್ಟರಲ್ಲೇ ತಡವಾಗಿದ್ದರಿಂದ ಕೆಲವು ಪ್ರಕಟವಾಗಿಲ್ಲ (ನಿಲುಮೆ ನಮ್ಮ ಹವ್ಯಾಸದ ಭಾಗವಾಗಿರುವುದರಿಂದ, ಕೆಲವೊಮ್ಮೆ ಕೆಲಸದ ಒತ್ತಡದಲ್ಲಾಗುವ ತಪ್ಪುಗಳಿವು, ಮನ್ನಿಸಿ).ಇವಿಷ್ಟು ಕಾರಣ ಬಿಟ್ಟರೆ ನಮಗೆ ಕಳಿಸಲ್ಪಟ್ಟ ಎಲ್ಲ ಲೇಖನಗಳನ್ನು ನಾವು ಪ್ರಕಟಿಸಿದ್ದೇವೆ.

ಇನ್ನು, ಕೆಲವು ಲೇಖನಗಳಿಂದಾಗಿ, ಕೆಲವರು ನಮ್ಮನ್ನು ಬಲಪಂಥೀಯರನ್ನಾಗಿಯೂ ಮಾಡಿದರು. ಆದರೆ ಎಡಪಂಥೀಯರನ್ನಾಗಿ ಮಾಡಿದ್ದು ಸ್ವಲ್ಪ ಕಡಿಮೆಯೇ ಅನ್ನಬಹುದು.ಇದಕ್ಕೂ ನಾವೇನು ಕಾರಣರಲ್ಲ. ಮೇಲೆ ಹೇಳಿದ ಹಾಗೆ ಬಂದಿದ್ದನ್ನೆಲ್ಲಾ ಯಾವುದೇ ಫಿಲ್ಟರ್ ಇಲ್ಲದೆ ನಿಮ್ಮ ಮುಂದೆ ಇಡುತ್ತಲೇ ಬಂದಿದ್ದೇವೆ. ಇನ್ನೂ ನಮ್ಮನ್ನ ಯಾವ ಪಂಥಕ್ಕೆ ಸೇರಿಸಬೇಕು ಅನ್ನುವುದು ನಿಮಗೇ ಬಿಟ್ಟದ್ದು :)ಇದ್ದಿದ್ದು ಇದ್ದ ಹಾಗೇ ಹೇಳಿದ್ದರಿಂದಾಗಿಯೇ, ಕೆಲವು ಜನರ ಪಾಲಿಗೆ ನಾವು ಅಸ್ಪೃಷ್ಯರು ಆಗಿದ್ದೇವೆ, ಹಾಗೆಯೇ ಹಲವು ಜನರ ಸ್ನೇಹವು ನಮಗೆ ಸಿಕ್ಕಿದೆ. ಆ ಮಟ್ಟಿಗಿನ ತೃಪ್ತಿಯು ನಮಗಿದೆ. ಕೆಲವು ಬ್ಲಾಗುಗಳು ನಾವು ಅವರ ಬಗ್ಗೆ ಪ್ರೀತಿಯಿಂದ ಮಾತಾಡಿದ್ದನ್ನು ಪ್ರಕಟಿಸಿದರು. ನೇತ್ಯಾತ್ಮಕ ಅಂಶಗಳನ್ನು ಹೇಳಿದಾಗ ಮನಿಸಿಕೊಂಡಿದ್ದು ಉಂಟು. ಅದು ಅವವರ ಭಕುತಿಗೆ ಬಿಟ್ಟ ವಿಷಯ.ಇನ್ನು, ಇದುವರೆಗೂ ನಿಲುಮೆ ತಂಡದಲ್ಲಿ ಯಾರ್ಯಾರು ಇದ್ದಾರೆ ಅನ್ನುವುದು ಬಹಳಷ್ಟು ಜನರಿಗೆ ಗೊತ್ತಿರಬಹುದು, ಗೊತ್ತಿಲ್ಲದೆಯೂ ಇರಬಹುದು.ಯಾವುದೇ ಹಿಡನ್ ಅಜೆಂಡವನ್ನೇನು ಇಟ್ಟುಕೊಂಡು ಮುಖ ಮುಚ್ಚಿಕುಳಿತಿರುವವರು ನಾವಲ್ಲ. ಅಷ್ಟಕ್ಕೂ ನಿಲುಮೆ ನಡೆಯುತ್ತಿರುವುದು ಕೇವಲ ನಮ್ಮಿಂದ ಅಲ್ಲ,ಅದಕ್ಕೆ ಕಾರಣ ನಾವು ಮೊದಲೇ ಹೇಳಿದಂತೆ ನಮ್ಮ ಲೇಖಕರ ಬಳಗ ಮತ್ತು ಓದುಗ ಮಿತ್ರರು.ಇವರೇ ಮುಖ್ಯವಾದಾಗ ನಾವು ನಮ್ಮ ಹೆಸರು ಹೇಳಿಕೊಂಡು ಓಡಾಡುವುದು ತೋರಿಕೆಯಾಗಬಹುದು ಅನ್ನುವ ಕಾರಣಕ್ಕಾಗಿ ಮಾತ್ರ. ನಿಲುಮೆಯ ಓದುಗರು ಅಪೇಕ್ಷಿಸಿದರೆ   ಸದಸ್ಯರ ಪಟ್ಟಿಯನ್ನು ಖಂಡಿತ ನಿಮ್ಮ ಮುಂದೆ ಇಡುತ್ತೇವೆ. ಹೆಸರು ಹೇಳಿಕೊಲ್ಲುದೆ ಇರುವುದು ಕೇವಲ ಮುಜಗರದ ವಿಷಯಕ್ಕಾಗಿ. ನಾವು ಮಾಡುತ್ತಿರುವ ಚಿಕ್ಕ ಕೆಲಸಕ್ಕೆ ದೊಡ್ಡ ಪ್ರಚಾರ ಬೇಡ ಎಂಬ ಕಾರಣಕ್ಕಾಗಿ.

ಇನ್ನು ಕಮೆಂಟುಗಳನ್ನೂ ಮಾಡರೇಟ್ ಮಾಡುವುದರಲ್ಲೂ ನಮಗೆ ನಂಬಿಕೆಯಿಲ್ಲ. ನಿಲುಮೆಯಲ್ಲಿ ’ವಾಕ್ ಸ್ವಾತಂತ್ರ್ಯ’ವಿದೆ.ಹಾಗಂದ ಮಾತ್ರಕ್ಕೆ ನಾವು ಕಮೆಂಟುಗಳಿಗೆ ಕತ್ತರಿ ಪ್ರಯೋಗ ಮಾಡಿಲ್ಲವೆಂದಲ್ಲ.ಅಸಭ್ಯ ಭಾಷೆ ಬಳಸಲ್ಪಟ್ಟ ಬಹುತೇಕ ಎಲ್ಲ ಪ್ರತಿಕ್ರಿಯೆಗಳನ್ನೂ ತೆಗೆದುಹಾಕಿದ್ದೇವೆ, ಹಾಕುತ್ತಲೂ ಇರುತ್ತೇವೆ. ಸ್ವಾತಂತ್ರ್ಯವನ್ನ ಸ್ವೇಚ್ಚಾಚಾರ ಮಾಡಿಕೊಳ್ಳಲು ಬಿಡುವುದೂ ಇಲ್ಲ.

ಇದೆಲ್ಲ ಹೇಳಿದ ಮೇಲೆ ನಿಮ್ಮ ಬಗ್ಗೆ ಹೇಳದಿದ್ದರೆ ಅದು ಅಪೂರ್ಣ. ನೀವು ನಮ್ಮ ಬೆನ್ನಿಗೆ ನಿಂತವರು. ನಿಮ್ಮಗಳ ಪ್ರೋತ್ಸಾಹ ನಿಲುಮೆಯನ್ನು ಇ ಮಟ್ಟಕ್ಕೆ ಬೆಳೆಸಿದೆ. ಹಿರಿಯರ ಮಾರ್ಗದರ್ಶನ ಕಿರಿಯರ ಪ್ರೀತಿ ಎರಡು ನಿಲುಮೆಯನ್ನು ಸಾಕಷ್ಟು ಪ್ರೋತ್ಸಾಹಿಸಿವೆ. ಅದಕ್ಕೆ ನಿಲುಮೆ ನಿಮಗೆ ಚಿರರುಣಿ. ಹಾಗೆ ಮತ್ತೊಮ್ಮೆ ನಿಮ್ಮನ್ನು ನಿಲುಮೆ ಭಿನ್ನವಿಸುವುದು ಏನೆಂದರೆ ಹೇಗೆ ನಿಲುಮೆಯನ್ನು ಇನ್ನಷ್ಟು ಜನರಿಗೆ ತಲುಪಿಸಬಹುದು ಎಂಬ ನಿಮ್ಮ ಅಭಿಪ್ರಾಯಕ್ಕಾಗಿ. ಇದರಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಏನು ಎಂಬ ಪ್ರೀತಿಯ ಒತ್ತಾಯಕ್ಕಾಗಿ. ನಿಮ್ಮಗಳ ಪ್ರೀತಿಯೇ ನಿಲುಮೆಯ ಹರುಷ.ನಿಲುಮೆಯ ಈ ವರುಷದ ಸಂಭ್ರಮದಲ್ಲಿ ನೀವೂ ಪಾಲ್ಗೊಳ್ಳಿ. ನಿಲುಮೆಯ ಬಗ್ಗೆ ನಿಮ್ಮ ಅನಿಸಿಕೆ, ಅಭಿಪ್ರಾಯ, ಟೀಕೆ ಟಿಪ್ಪಣಿಗಳನ್ನ ಕಳಿಸಿಕೊಡಿ. ಸಹ್ಯ ಭಾಷೆಯಲ್ಲಿರುವ ಟೀಕೆ-ಟಿಪ್ಪಣಿಗಳನ್ನೂ, ಪ್ರೀತಿಯ ಮಾತುಗಳನ್ನೂ ಎಲ್ಲವನ್ನು ನಾವು ಇಲ್ಲೇ ಪ್ರಕಟಿಸುತ್ತೇವೆ.ನಿಮ್ಮೊಲುಮೆಯ,
ನಿಲುಮೆ

**********
ಚಿತ್ರಕೃಪೆ: ವಿಜಯ ಪೈ
12 ಟಿಪ್ಪಣಿಗಳು Post a comment
  1. ವಿಜಯ್ ಹೆರಗು's avatar
    ಆಕ್ಟೋ 4 2011

    “ನಿಲುಮೆ”ಗೆ ಒಂದು ವರ್ಷ ತುಂಬಿದ್ದು ಬಹಳ ಸಂತಸದ ವಿಷಯ. ನಿಲುಮೆ ತಂಡಕ್ಕೆ ಹಾರ್ದಿಕ ಶುಭಾಶಯಗಳು. ವೈವಿಧ್ಯತೆಯಲ್ಲಿ ಏಕತೆ ಎಂಬ ಮಾತಿನಂತೆ ನಿಲುಮೆಯಲ್ಲಿ ವೈವಿಧ್ಯಮಯ ವಿಷಯಗಳ ಕುರಿತು ಲೇಖನಗಳು ಮೂಡಿಬರುತ್ತವೆ. ನಿಲುಮೆ ಮತ್ತಷ್ಟು ಬೆಳೆಯಲಿ……ಕನ್ನಡದ ಓದುಗರ ಕಣ್ಮನವ ತಣಿಸಲಿ ಎಂದು ಹಾರೈಸುವೆ.

    ಉತ್ತರ
  2. ಪಂಡಿತಾರಾಧ್ಯ's avatar
    ಆಕ್ಟೋ 4 2011

    ಪ್ರೀತಿಯ ನಿಲುಮೆ
    ನಿನಗೆ ಒಂದು ವರ್ಷ ಕಳೆಯಿತೆ!
    ನೂರು ವರ್ಷ ಒಳಿತನ್ನು ಹಾರೈಸುವೆ

    ಪ್ರೀತಿಯಿಂದ
    ಪಂಡಿತಾರಾಧ್ಯ ಮೈಸೂರು

    ಉತ್ತರ
  3. Ravi Murnad's avatar
    ಆಕ್ಟೋ 4 2011

    ತುಂಬು ಹೃದಯದಿಂದ ಹಾರೈಸುತ್ತೇನೆ.ನಾಡಿನಾದ್ಯಂತ ಕನ್ನಡ ಭಾಷೆ, ಸಾಹಿತ್ಯ, ಸತ್ಯ,ನ್ಯಾಯ ನೀತಿ , ಧರ್ಮವನ್ನು ಎತ್ತಿ ಹಿಡಿಯುವಲ್ಲಿ ಶಕ್ತಿ ಬರಲಿ. ಸಾಹಿತ್ಯ ಲೋಕಕ್ಕೊಂದು ಅಮೂಲ್ಯ ಕೊಡುಗೆ ನಿಲಿಮೆಯದ್ದಾಗಲಿ.

    ಉತ್ತರ
  4. abhi082941@gmail.com's avatar
    ಆಕ್ಟೋ 4 2011

    ಶುಭಾಶಯಗಳು ನಿಲುಮೆ ತ೦ಡಕ್ಕೆ, ನಿರ೦ತರವಾಗಿ ಸಾಗಲಿ ಇ ನಿಮ್ಮ ನಿಲುಮೆಯ ಪಯಣ

    ಉತ್ತರ
  5. ಸತ್ಯಚರಣ ಎಸ್. ಎಮ್. (Sathya Charana S.M.)'s avatar
    ಆಕ್ಟೋ 4 2011

    ನಿಲುಮೆಗೆ ಮೊದಲನೇ ಹುಟ್ಟುಹಬ್ಬದ(ವಾರ್ಷಿಕೋತ್ಸವದ) ಶುಭಾಶಯಗಳು..!
    ನಿಲುಮೆ ಹೀಗೆ ಹೆಚ್ಚೆಚ್ಚು ಜನರನ್ನ ತಲುಪಲಿ ಅಂತ ಹಾರೈಸುತ್ತಾ..!

    ನಿಮ್ಮೊಲವಿನ,
    ಸತ್ಯ..:)

    ಉತ್ತರ
  6. ಶುಭಾಶಯಗಳು … 🙂

    ಉತ್ತರ
  7. ಕೃಷ್ಣಪ್ರಕಾಶ ಬೊಳುಂಬು's avatar
    ಕೃಷ್ಣಪ್ರಕಾಶ ಬೊಳುಂಬು
    ಆಕ್ಟೋ 5 2011

    ಒಂದು ವರ್ಷ ಪೂರೈಸಿದ ನಿಲುಮೆಗೆ ತುಂಬುಹೃದಯದ ಅಭಿನಂದನೆಗಳು. ನಿಲುಮೆ ಬ್ಲೋಗ ಇನ್ನಷ್ಟು ಆಕರ್ಷಕವಾಗಿಯೂ ಕಣ್ಮನಗಳ ಸೆಳೆವಂತೆಯೂ ಮೂಡಿಬರಲೆಂಬ ಹಾರೈಕೆ.

    ಉತ್ತರ
  8. Abdul Satthar Kodagu's avatar
    abdulsatthar
    ಆಕ್ಟೋ 5 2011

    ನಿಲುಮೆಯ ಹುಟ್ಟುಹಬ್ಬಕ್ಕೆ ನನ್ನದೊಂದು ಒಲವಿನ ಹಾರೈಕೆ, ‘ಹುಟ್ಟು ಹಬ್ಬದ ಶುಭಾಶಯಗಳು’.
    ಸಾಹಿತ್ಯಕ್ಕೆ ನೀರೆರಚುವ ಕಾರ್ಯ ನಿರಂತವಾಗಿರಲಿ.

    ಉತ್ತರ
  9. chukkichandira's avatar
    ಆಕ್ಟೋ 5 2011

    ನಲ್ಮೆಯ ನಿಲುಮೆಗೆ ಶುಭಹಾರೈಕೆ

    ಉತ್ತರ
  10. Pramod's avatar
    ಆಕ್ಟೋ 5 2011

    🙂 ಅಭಿನ೦ದನೆಗಳು.
    ಇನ್ನೂ ಹೆಚ್ಚಾಗಿ ಜ್ವಲ೦ತ ಸಮಸ್ಯೆಗಳ ಬಗ್ಗೆ, ಶ್ರೀಸಾಮನ್ಯನ ಬವಣೆಯ ಬಗ್ಗೆ, ಪ್ರಸಕ್ತ ವಿದ್ಯಮಾನಗಳ ಬಗ್ಗೆ ಬರಹಗಳು ಬರಲಿ. ಜನರ ಕಣ್ಣು ತೆರೆಸಲಿ. ಸತ್ಯಮೇವ ಜಯತೇ

    ಉತ್ತರ
  11. ksraghavendranavada's avatar
    ಆಕ್ಟೋ 5 2011

    ನನ್ನ೦ತಹ ಲೇಖಕನನ್ನು ಸಾವಿರಾರು ಜನರೆಡೆಗೆ ತಲುಪಿಸಿದ ನಿಲುಮೆಗೆ ನನ್ನ ನನ್ನಿಗಳು.. ಹಾಗೂ ಮೊದಲ ವರುಷದ ಜನುಮದಿನದ ಶುಭಹಾರೈಕೆಗಳು.
    ನಿಲುಮೆಯ ನಿರ್ವಾಹಕ ತ೦ಡಕ್ಕೆ ಹಾಗೂ ಓದುಗ ಬಳಗಕ್ಕೆ ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ಉತ್ತರ
  12. sankushetty's avatar
    ಆಕ್ಟೋ 5 2011

Leave a reply to chukkichandira ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments