ವಿಷಯದ ವಿವರಗಳಿಗೆ ದಾಟಿರಿ

Archive for

28
ಸೆಪ್ಟೆಂ

ಪ್ರಶ್ನೆಯಾಗಿ ಕಾಡುತ್ತಿರುವ ಕರುತ್ತಮ್ಮ..

-ರಶ್ಮಿ ಕಾಸರಗೋಡು

ಹೌದು, ಈ ಕರುತ್ತಮ್ಮ ಕಾಡಿದಷ್ಟು ಇನ್ಯಾರೂ ನನ್ನನ್ನು ಕಾಡಿರಲಿಲ್ಲ. ಬಾಲ್ಯದಿಂದ ಹಿಡಿದು ಇಲ್ಲಿಯವರೆಗೆ ನಾನು ಇಷ್ಟಪಡುವ ಹೆಂಗಸರಲ್ಲಿ ಇವಳೂ ಒಬ್ಬಳು. ನಾನು ಹೀಗೆಹೇಳುತ್ತಿದ್ದರೆ ಆ ಕರುತ್ತಮ್ಮ ಯಾರು ಎಂಬ ಪ್ರಶ್ನೆ ನಿಮ್ಮನ್ನೂ ಕಾಡುತ್ತಿರಬಹುದು ಅಲ್ಲವೇ? ಅವಳು ಮತ್ಯಾರೂ ಅಲ್ಲ ಪ್ರಶಸ್ತಿ ವಿಜೇತ ಹಳೇ ಕಾಲದ ಮಲಯಾಳಂ ಚಿತ್ರ ಚೆಮ್ಮೀನ್್ನ ನಾಯಕಿ. ಚಿತ್ರದಲ್ಲಿ ಕರುತ್ತಮ್ಮನ ಪಾತ್ರ ನಿರ್ವಹಣೆ ಮಾಡಿದ್ದು ನಟಿಶೀಲ. ಮಲಯಾಳಂನಲ್ಲಿ ಚೆಮ್ಮೀನ್ ಅಂದ್ರೆ ಸಿಗಡಿ ಮೀನು. ತಗಳಿ ಶಿವಶಂಕರ ಪಿಳ್ಳೆ ಬರೆದ ಚೆಮ್ಮೀನ್ ಎಂಬ ಕಾದಂಬರಿ ಆಧರಿತ ಚಿತ್ರವಾದ ಚೆಮ್ಮೀನ್ 1965ರಲ್ಲಿ ತೆರೆಕಂಡರೂ ಅದರಯಶಸ್ಸು ಇಂದಿಗೂ ಚಿರನೂತನ. ಅವರ ಕಥೆ, ಹಾಡು, ನಟನೆ ಅಬ್ಬಾ…ಆ ಚಿತ್ರವನ್ನು ನೋಡಿಯೇ ಅನುಭವಿಸಬೇಕು.
ಚಿಕ್ಕವರಿರುವಾಗ ಶಾಲೆಯಲ್ಲಿ ಕ್ವಿಜ್್ಗೆ ಚೆಮ್ಮೀನ್ ಕಾದಂಬರಿ ಬರೆದವರು ಯಾರು? ಎಂಬ ಪ್ರಶ್ನೆ ಕಾಮನ್ ಆಗಿತ್ತು. ಮೊದಲಬಾರಿಗೆ ಚೆಮ್ಮೀನ್ ಕಾದಂಬರಿ ಬಗ್ಗೆ ಕುತೂಹಲ ಹುಟ್ಟಿಕೊಂಡದ್ದೇ ಹೀಗೆ. ಅಂತೂ ಕೊನೆಗೂ ಅದೊಂದು ದಿನ ಡಿಡಿ 1 ಚಾನೆಲ್್ನಲ್ಲಿ ಆದಿತ್ಯವಾರ ಪ್ರಾದೇಶಿಕ ಚಲನಚಿತ್ರ ವಿಭಾಗದಲ್ಲಿ ಚೆಮ್ಮೀನ್ ಚಿತ್ರ ಪ್ರಸಾರವಾಗಿತ್ತು.ನಮ್ಮ ಬ್ಲಾಕ್ ಆ್ಯಂಡ್ ವೈಟ್ ಟೀವಿಯಲ್ಲಿ ಚೆಮ್ಮೀನ್ ಚಿತ್ರ ಮೂಡಿಬರುತ್ತಿದ್ದಂತೆ ಟೀವಿಯಲ್ಲೇ ಗಮನ ಕೇಂದ್ರೀಕರಿಸಿ ಕುಳಿತಿದ್ದೆ. ಚಿತ್ರದುದ್ದಕ್ಕೂ ಕಡಲ ಕಿನಾರೆ…ಮೀನು…ಮೀನುಗಾರರ ಸಂಭಾಷಣೆ..ಅದ್ಭುತ ಸಂಗೀತ…ಒಂದಷ್ಟು ರೊಮ್ಯಾಂಟಿಕ್ ದೃಶ್ಯಗಳು…ನಾವು ಮಾತನಾಡುವ ಮಲಯಾಳಂಗೂ ಮೀನುಗಾರರು ಮಾತನಾಡುವ ಮಲಯಾಳಂಗೂವ್ಯತ್ಯಾಸವಿರುವುದರಿಂದ ಚಿತ್ರದಲ್ಲಿನ ಎಲ್ಲ ಸಂಭಾಷಣೆಗಳು ನನಗೆ ಅರ್ಥವಾಗುತ್ತಿರಲಿಲ್ಲ. ಚಿತ್ರ ನೋಡುತ್ತಿರುವಾಗ ಅವಳು ಆಗಿನ ಕಾಲದ ‘ಸೆಕ್ಸೀ ನಟಿ’ಎಂದು ಅಪ್ಪ ಹೇಳುತ್ತಿದ್ದರೆ, ಮಕ್ಕಳ ಮುಂದೆ ಹಾಗೆಲ್ಲಾ ಹೇಳ್ಬೇಡ್ರಿ ಎಂದು ಅಮ್ಮ ಗುರ್ ಅಂತಿದ್ರು 🙂

ಮತ್ತಷ್ಟು ಓದು »

28
ಸೆಪ್ಟೆಂ

ಕ್ರಾಂತಿಕಾರಿ ಹೇಗೆ ತಾನೇ ಕಾಮ್ರೆಡ್ ಆಗಬಲ್ಲ?

 -ಸಂತೋಶ್ ತಮ್ಮಯ್ಯ

ಕೇರಳದ ತ್ರಿಶೂರ್‌ನಿಂದ ಕಣ್ಣೂರಿಗೆ ಹೋಗುತ್ತಿದ್ದರೆ ದಾರಿಯುದ್ದಕ್ಕೂ ವಿಚಿತ್ರಗಳು. ಕೆಂಪು ಕಮ್ಯುನಿಸ್ಟರ ಕಛೇರಿಗಳು. ರಸ್ತೆ ಬದಿಯುದ್ದಕ್ಕೂ ಬಂಟಿಂಗ್ಸ್‌ಗಳು. ದೊಡ್ಡ ದೊಡ್ಡ ಕೌಟೌಟ್‌ಗಳು,ಫ್ಲೆಕ್ಸ್‌ಗಳು,ಬ್ಯಾನರ್‌ಗಳು.ಈ ಬ್ಯಾನರ್‌ಗಳಲ್ಲಿ ಪೊಲೀಸ್ ಠಾಣೆಗಳಲ್ಲಿ ’ಬೇಕಾಗಿದ್ದಾರೆ’ ಎಂದು ಹಾಕುವಲ್ಲಿ ಕಾಣಬಹುದಾದ ಭಾವಚಿತ್ರಗಳು.ವೊದಲ ನೋಟಕ್ಕೇ ಗೂಂಡಗಾಳು ಎಂದು ತಿಳಿದುಬಿಡುವ ವೃತ್ತಿಪರ ರೌಡಿಗಳ ಚಿತ್ರಗಳು. ಅವರೆಲ್ಲರೂ ಎಂದೋ ಸತ್ತುಹೋದವರು. ಕಮ್ಯುನಿಸ್ಟ್ ಕಾಮ್ರೆಡರ ಪ್ರಕಾರ ಅವರೆಲ್ಲರೂ ಹುತಾತ್ಮ ಕಾಮ್ರೆಡ್‌ಗಳು.ಇವನು ಕಮ್ಯುನಿಷ್ಟರ ಪ್ರಾರಬ್ಧ,ಸಾಯಲಿ ಎನ್ನುವಂತೆಯೂ ಇಲ್ಲ.ಏಕೆಂದರೆ ಈ ಸತ್ತ ಗೂಂಡಾಗಳ ಪಕ್ಕದಲ್ಲೇ ಹ್ಯಾಟು ಹಾಕಿದ ಭಗತ್ ಸಿಂಗ್ ಚಿತ್ರ. ಕಮ್ಯುನಿಸ್ಟರ ಪ್ರಕಾರ ದೇಶಕ್ಕಾಗಿ ಪ್ರಾಣ ಕೊಟ್ಟ ಭಗತ್‌ಸಿಂಗನೂ ಎಲ್ಲೋ ಕೊಲೆಯಾಗಿ ಹೋದ ರೌಡಿಗಳಿಬ್ಬರೂ ಕಾಮ್ರೆಡ್‌ಗಳು,ಶಹೀದ್‌ಗಳು. ಇಬ್ಬರಿಗೂ ಅವರದು ಲಾಲ್ ಸಲಾಂ. ಇನ್ನೊಂದೆಡೆ ದೇಶವನ್ನೇ ಅರಿಯದ ಲೋಕಲ್ ರೌಡಿ! ಕಮ್ಯುನಿಸ್ಟರ್ ಹಾಗೆಯೆ. ಅವರು ರೌಡಿಯನ್ನು ಕಾಣುವಂತೆಯೆ ಭಗತ್‌ಸಿಂಗ್‌ರನ್ನೂ ಕಾಣುತ್ತಾರೆ.ಇಬ್ಬರನ್ನೂ ಕಾಮ್ರೆಡ್ ಎಂದೇ ಭಾವಿಸುತ್ತಾರೆ.

ಈಗೊಂದು ಐದಾರು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಫ್ರೀಡಂ ಪೆರೇಡ್ ಎಂಬ ಕಾರ್ಯಕ್ರಮ ನಡೆಯಿತು. ಕೆಎಫ್‌ಡಿಯ ಜನರನ್ನು ಎಲ್ಲೆಲ್ಲಿಂದಲೋ ಕರೆಸಿಕೊಳ್ಳಲಾಯಿತು. ಎಲ್ಲೆಲ್ಲಿಂದಲೋ ಬಸ್ಸುಗಳು ಬಂದವು. ಗಡ್ಡಧಾರಿಗಳು,ಆರ್ಮಿಯಂತೆ ಸಮವಸ್ತ್ರ ಭರಿಸಿದವರು ಬಂದಿಳಿದಿದ್ದರು. ಮುಂದೆ ಹುಣಸೂರಿನಲ್ಲಿ ಮಕ್ಕಳನ್ನು ಕೊಂದ ಆ ಸಂಘಟನೆಯ ಜನರನ್ನು ನೋಡುತ್ತಾ ಕೆಲವರು ’ಕರಾಚಿಯಾ?’ ಎಂದು ಮಾತಾಡಿಕೊಂಡರು.ಅವರೆಲ್ಲರೂ ಮಂಗಳಾ ಸ್ಟೇಡಿಯಂನಲ್ಲಿ ಸೇರಿ ಮಿಲಿಟರಿಯಂತೆ ಕವಾಯತು ನಡೆಸಿದರು. ಹಿಂದಿಯಲ್ಲಿ ಅವರನ್ನುದ್ದೇಶಿಸಿ ಒಬ್ಬ ಮಾತಾಡಿದ್ದ. ಸಾವರ್ಕರ್‌ರನ್ನು ಹಿಗ್ಗಾಮುಗ್ಗಾ ಬೈದಿದ್ದ. ಹೋಗಿ, ದನ ಕಡಿಯಿರಿ ಎಂದಿದ್ದ. ಆತ ಮಾತನಾಡುತ್ತಿದ್ದ ವೇದಿಕೆಯ ಹೆಸರು ’ಶಹೀದ್ ಭಗತ್ ಸಿಂಗ್ ವೇದಿಕೆ’ ಆಗಿತ್ತು. ಯಾವ ಭಗತ್ ಸಿಂಗ್ ದೇಶದ ಬಗ್ಗೆ ಕನಸು ಕಂಡಿದ್ದನೋ,ಯಾವ ಭಗತ್‌ಸಿಂಗ್‌ಗೆ ಸ್ಪಷ್ಟ ಸಾಮರಸ್ಯ ಸಮಾಜದ ಕಲ್ಪನೆಯಿತ್ತೋ , ಯಾವ ಭಗತ್‌ಸಿಂಗ್‌ಗೆ ದೇಶವೆನ್ನುವುದು ಉಸಿರಾಗಿತ್ತೋ ಅಂತಹ ಭಗತ್ ಸಿಂಗ್ ಇಂದು ಇವರೆಲ್ಲರ ಸ್ವತ್ತಂತೆ. ದಾಸ್ಯದ ಬಿಡುಗಡೆ ಕ್ರಾಂತಿಯಿಂದ ಅಸಾಧ್ಯ ಎಂದಿದ್ದ  ಭಗತ್ ಸಿಂಗ್‌ನ ಹೆಸರಲ್ಲಿ ಸಾವರ್ಕರ್‌ರನ್ನು ಬಯ್ಯುವುದು, ಧಾರ್ಮಿಕತೆ ಅಷ್ಟಕ್ಕಷ್ಟೇ ಎಂಬಂತಿದ್ದ ಭಗತ್‌ಸಿಂಗ್‌ನನ್ನು ನೆಪವಾಗಿಟ್ಟುಕೊಂಡು ಗೋಹತ್ಯೆಯನ್ನು ಸಮರ್ಥಿಸುವುದು , ದೇಶಪ್ರೇಮಕ್ಕೆ ಬಣ್ಣವನ್ನು  ಬಿತ್ತುವುದು ಇಂದು ನಿರಂತರ ನಡೆಯುತ್ತಿದೆ.

ಮತ್ತಷ್ಟು ಓದು »

27
ಸೆಪ್ಟೆಂ

ಕಾವೇರಿ ನದಿನೀರು ಹಂಚಿಕೆಯಲ್ಲಿ ನಾಡಿಗಾದ ಅನ್ಯಾಯ – ಕಿರು ವರದಿ

– ಜಯಪ್ರಕಾಶ್ ಪಿ., ಕರುನಾಡ ದನಿ

ಕಾವೇರಿ ನದಿಯು ಕರ್ನಾಟಕದ ಕೊಡಗು ಜಿಲ್ಲೆಯಲ್ಲಿರುವ ಬ್ರಹ್ಮಗಿರಿ ತಪ್ಪಲಿನ ’ತಲಕಾವೇರಿ’ ಯಲ್ಲಿ ಹುಟ್ಟಿ ಕರ್ನಾಟಕದ ಬಹುತೇಕ ಭಾಗದಲ್ಲಿ ಹರಿದು ತಮಿಳುನಾಡು ಮತ್ತು ಕೇರಳದ ಕೆಲ ಭಾಗಗಳಲ್ಲಿ ಹರಿದು ಹೋಗುತ್ತದೆ. 1883 ರಲ್ಲಿ ಅಂದಿನ ಮೈಸೂರು ಪ್ರಾಂತ್ಯದ ದಿವಾನರು ಕಾವೇರಿ ನದಿನೀರನ್ನು ನೀರಾವರಿ ಯೋಜನೆಗೆ ಬಳಸಿಕೊಳ್ಳಲು ಮುಂದಾದಾಗ, ಅಂದಿನ ಬ್ರಿಟಿಷ್ ಆಳ್ವಿಕೆಯಲ್ಲಿದ್ದ ಮದರಾಸು ಪ್ರಾಂತ್ಯ ಅದನ್ನು ಸಹಿಸದೆ, ಮದರಾಸಿಗೆ ಅನುಕೂಲವಾಗುವಂತ ಅನೇಕ ಕಟ್ಟಳೆಗಳನ್ನು ಮಾಡುವ ಮೂಲಕ ತಾರತಮ್ಯ ನೀತಿ ಆರಂಭಿಸಿತು. ಅಂದು ಆರಂಭವಾದ ಕಾವೇರಿ ನದಿನೀರಿನ ಸಮಸ್ಯೆ ಸುಮಾರು 120ವರ್ಷಗಳೇ ಕಳೆದಿದ್ದರೂ,ಸರಿಯಾದ ಒಂದು ನಿಷ್ಪಕ್ಷಪಾತ ಜಲನೀತಿ ಇಲ್ಲದ ಪರಿಣಾಮವಾಗಿ ಇಂದು ಬಗೆಹರಿಯದ ಕಗ್ಗಂಟಾಗಿ ಬೆಳೆದು ನಿಂತಿದೆ.
27
ಸೆಪ್ಟೆಂ

ವೇಗವಾಗಿ ಟೊರೆಂಟ್ ಕಡತವನ್ನು ಡೌನ್ಲೋಡ್ ಮಾಡಿಕೊಳ್ಳಲು

– ಆದೇಶ್ ಕುಮಾರ್

ನಿಮಗೆ ಟೊರೆಂಟ್ ಕಡತಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ತೊಂದರೆಯಾಗುತ್ತಿರಬೇಕು ಅಥವಾ ತುಂಬಾ ನಿಧಾನವಿರಬಹುದು. ಈಗ ಈ ನಿಧಾನ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಇಲ್ಲೊಂದು ಚಿಕ್ಕ ಉಪಾಯವಿದೆ.

ಈ ಕೆಳಗಿನವುಗಳನ್ನು ಅಲ್ಲಿರುವಂತೆಯೇ ಪಾಲಿಸಿ
೧.ಮೊದಲು ನಿಮಗೆ ಬೇಕಾದ ಟೊರೆಂಟ್ ಅನ್ನು ನಿಮ್ಮ ಗಣಕಕ್ಕೆ ಡೌನ್ಲೋಡ್ ಮಾಡಿಕೊಳ್ಳಿ ಅಥವಾ ಅದರ ವೆಬ್ ಅಡ್ರೆಸ್ ಅನ್ನು ಕಾಪಿ ಮಾಡಿಕೊಳ್ಳಿ.
೨.ನಂತರ www.bitlet.org ವೆಬ್ಸೈಟಿಗೆ ಭೇಟಿ ನೀಡಿ.
೩. ಅಲ್ಲಿ ನಿಮ್ಮ ಗಣಕದಲ್ಲಿರುವ ಟೊರೆಂಟ್ ಅನ್ನು ಡೌನ್ಲೋಡ್ ಮಾಡಲು “Select Local Torrent” ಬಟನ್ ಒತ್ತಿ ಅಥವಾ ನಿಮ್ಮ ಬಳಿ ಆ ಟೊರೆಂಟಿನ ವೆಬ್ ಅಡ್ರೆಸ್ ಇದ್ದಲ್ಲಿ ಕೆಳಗೆ ನೀಡಿರುವ ಚಿತ್ರದಲ್ಲಿರುವಂತೆ ಅಲ್ಲಿರುವ ಬಾಕ್ಸಿನಲ್ಲಿ ಅಂಟಿಸಿ ಮತ್ತು “Download Torrent” ಬಟನ್ ಮೇಲೆ ಒತ್ತಿ.

ಮತ್ತಷ್ಟು ಓದು »

26
ಸೆಪ್ಟೆಂ

ಅತಿರೇಕದ ಅವೆರಡರ ನಡುವೆ ಒಂದು ಮಧ್ಯ ಮಾರ್ಗವಿದ್ದೇ ಇದೆ!

ಬೇರೆ ಬೇರೆ ಕಾರಣಗಳಿಗೆ ಅವರನ್ನು ವಿರೋಧಿಸುವವರು ಕೂಡ ತಮ್ಮೊಳಗೆ ಒಮ್ಮೆ ‘ಎಷ್ಟು ಚಂದ ಬರಿತಾನ್ರಿ’ ಅನ್ನುವಂತೆ ಬರೆದು ಸೈ ಅನ್ನಿಸಿಕೊಳ್ಳುವುದು ರವಿ ಬೆಳಗೆರೆ ಅವರ ಬರವಣಿಗೆಯ ಶೈಲಿ ಮತ್ತು ಶಕ್ತಿ.

“ಯಾವುದೇ ಜಾತಿ,ಮತ,ತತ್ವಗಳಿಗೆ ಗಂಟು ಬೀಳದೆ, ಎಡ-ಬಲ ಪಂಥೀಯರ ನಡುವೆ ಸಿಕ್ಕಿಕೊಳ್ಳದೆ,ಯಾವುದೇ ಮತ್ತು ಯಾರದೇ ಮರ್ಜಿಗೇ ಬೀಳದೆ ಅನ್ನಿಸಿದ್ದನ್ನು ನೇರವಾಗಿ ಹೇಳುವ ಆ ಮೂಲಕ ಯಾವ ಗುಂಪಿಗೂ ಸೇರದೆಯೆ ಸ್ವತಂತ್ರವಾಗಿ ಯೋಚಿಸುವ ಬಯಕೆ ನಮ್ಮದು. ಅಷ್ಟಕ್ಕೂ ’ಸತ್ಯ’ ಅನ್ನುವುದು ಎಡ-ಬಲ ಪಂಥದ ಆಸ್ತಿಯೇನು ಅಲ್ಲವಲ್ಲ.ಅದು ಈ ಇಬ್ಬರ ನಡುವೆಯು ಸಿಲುಕದೆ ತನ್ನ ಪಾಡಿಗದು ಯಾವುದೋ ಮೂಲೆಯಲ್ಲಿ ನಿರ್ಲಿಪ್ತವಾಗಿರುತ್ತದೆ” ಅನ್ನುವ ನಿಲುಮೆಯ ನಿಲುವಿಗೆ ಪೂರಕವಾಗಿರುವಂತ ಬೆಳಗೆರೆ ಅವರ ಈ ಬರಹ ನಿಲುಮೆಯ ಓದುಗರಿಗಾಗಿ – ನಿಲುಮೆ

=================================================================================

ರವಿ ಬೆಳಗೆರೆ

ಆಟ ಗೆದ್ದಿತಾ?
ನಾವು ಆಡೋಕೆ ಬಂದಿದ್ವಿ ಅನ್ನುತ್ತಾರೆ.
ಆಟ ಸೋತಿತಾ?

ಏಹ್, ಸುಮ್ನೆ ನಾವು ನೋಡೋಕೆ ಬಂದಿದ್ವಿ ಅಂತಾರೆ ಚನ್ನವೀರ ಕಣವಿ ಮತ್ತು ಶಿವರುದ್ರಪ್ಪ ಎಂದು ತಮಾಷೆ ಮಾಡುತ್ತಿದ್ದರು ಚಂದ್ರಶೇಖರ ಪಾಟೀಲರು. ಅವತ್ತಿಗೆ ಕಣವಿ ಮತ್ತು ಶಿವರುದ್ರಪ್ಪನವರನ್ನು ಸಮನ್ವಯ ಕವಿಗಳು ಎಂದೇ ಕರೆಯುತ್ತಿದ್ದರು. ಒಂದು ಕಡೆ ಸಂಪ್ರದಾಯಬದ್ಧವಾದ ನವೋದಯ, ರಮ್ಯ, ನವ್ಯ ಕಾವ್ಯಗಳಿದ್ದವು. ಇನ್ನೊಂದು ಕಡೆ ಕೈಯಲ್ಲಿ ಕಲ್ಲು ಹಿಡಿದು ನಿಂತ ದಲಿತ-ಬಂಡಾಯ ಕಾವ್ಯವಿತ್ತು. ಸಹಜವಾಗಿಯೇ ಎರಡರ ಮಧ್ಯೆ ಹಾಕ್ಯಾಟ. ಈ ಹಂತದಲ್ಲಿ “ಸಮನ್ವಯ”ವೆಂಬ ಮಾತಾಡಿದವರು ಕಣವಿ ಮತ್ತು ಶಿವರುದ್ರಪ್ಪ.

ಈ ಕೆಲಸ ಕೇವಲ ಇತ್ತೀಚಿನದಲ್ಲ. ಕಾಲಾಂತರದಿಂದ ಜಗತ್ತಿನ ಎಲ್ಲ ಕ್ಷೇತ್ರಗಳಲ್ಲೂ ನಡೆಯುತ್ತ ಬಂದಿದೆ. ಬಹುಶಃ ಇದಕ್ಕೆ ‘ಮಧ್ಯಪಥ‘ ಎಂಬ ಅಧಿಕೃತ ಹೆಸರಿಟ್ಟವನು ಬುದ್ಧ.
ನಿಮ್ಮ ಪಕ್ಕದ ಮನೆಯವರು ನಿಮ್ಮ ಮನೆಯ ಅಂಗಳದೊಳಕ್ಕೆ ದಿನನಿತ್ಯ ಕಸ ಹಾಕುತ್ತಿರುತ್ತಾರೆ. ನೀವು ಕಂಪೋಂಡಿನ ಆಚೀಚೆಗೆ ನಿಂತು ಶರಂಪರ ಜಗಳವಾಡುತ್ತೀರಿ. ನಿಮಗೂ ಅವರಿಗೂ ಬೇರೆ ತಕರಾರುಗಳೇ ಇಲ್ಲ. ಅವರ ಮಕ್ಕಳು ಸಂಭಾವಿತರು. ಗೃಹಿಣಿ ಸಭ್ಯೆ. ಬೇರೆ ಯಾವ ತಕರಾರೂ ಇಲ್ಲ. ಆದರೂ ಕಸ ಹಾಕುತ್ತಾರೆ. ನೀವು ಸಿಟ್ಟಿಗೇಳುತ್ತೀರಿ.

ಮತ್ತಷ್ಟು ಓದು »

25
ಸೆಪ್ಟೆಂ

ಒಂದು ರುಪಾಯಿ ಚಿಲ್ರೆ ತಗೋಬೇಕ???

– ಸೂರ್ಯ ಅವಿ

“ನನಗು ನಿನಗು ಕಣ್ಣಲ್ಲೆ ಪರಿಚಯ, ಸನಿಹ ಸುಳಿವ ಮನದಾಸೆ ಅತಿಶಯ, ಏನೋ ಆಗಿದೆ ನನಗಂತು ಸಂಶಯ” ಅರಮನೆ ಚಿತ್ರದ ಈ song ಅಲ್ಲಿ ಹೀರೋ ಜಾಗದಲಿ ನಾನಿದೆ, ಇನ್ ಏನು ನಟಿ ರೋಮ ಅವರಿಗೆ ಐ ಲವ್  ಯು ಚಿನ್ನ ಎಂದು ಹೇಳಬೇಕು!! ಅದೇ ಸಮಯಕ್ಕೆ ಸರಿಯಾಗಿ ಅಲಾರಾಂ ಕಿರುಚತೊಡಗಿತು. ಸಮಯ ಆಗಲೇ ಮುಂಜಾನೆ 4.30 !! ಮೈಸೂರಿಗೆ ಯಾವುದೊ ಕೆಲಸದ ವಿಚಾರವಾಗಿ ಬೇಗ ಹೊರಡಬೇಕಿತ್ತು,   ಛೆ.. ಎರಡು ನಿಮಿಷ ಇದಿದ್ರೆ ಚೆನಾಗಿತ್ತು ಅನ್ಕೊತ, ನಿದ್ದೆ ಮಂಪರಲಿ ದಿನನಿತ್ಯದ ಕ್ರಿಯೆ ಮುಗಿಸಿ ,ಗಡಿಬಿಡಿಯಲಿ ಯಾವುದೊ ಎರಡು ಪುಸ್ತಕ, ಕ್ಯಾಮೆರಾ ಮತ್ತು ಕ್ಯಾಮೆರಾ ಸ್ಟ್ಯಾಂಡ್ ಹೆಗಲಿಗೆ ಸಿಗಿಸಿಕೊಂಡು ಹೊರಡುವುದಕ್ಕೆ ಸಿದ್ದನಾದೆ.

ತಕ್ಷಣಕ್ಕೆ ಹೊರಡುವುದು ಹೇಗೆ ಎಂಬ ದೊಡ್ಡ ಪ್ರಶ್ನೆ ನನ್ನ ಮುಂದೆ? ಒಂದು ಕ್ಷಣ ಗಾಬರಿಗೊಂಡೆ ಸಮಯ ಇನ್ನು ಮುಂಜಾನೆ 5.೦೦ ಗಂಟೆ, ಈ ಸಮಯಕ್ಕೆ ಯಾವ BMTC ಬಸ್ ಸಿಗುವುದಿಲ್ಲ, ಗಾಡಿಯಲ್ಲಿ ಹೋದರೆ ಅದನ್ನು ಎಲ್ಲಿ ನಿಲಿಸುವುದು? ಸರಿ ಅಪ್ಪನನು ನಿದ್ರೆಯಿಂದ ಎಚ್ಹರಿಸಿ nayandalli ಗೆ ಡ್ರಾಪ್ ಮಾಡಿಸಿಕೊಂಡೆ. ಮಗನಿಗೆ ‘ಕ್ಷೇಮವಾಗಿ ಹೋಗಿ ಬಾ’ ಎಂದು ಹೇಳದೆ ಗಾಡಿ ವಾಪಾಸ್ ತಿರುಗಿಸಿ ಗುರ್ರ್…. ಎಂದು ಮನೆ ಕಡೆ ಹೊರಟರು. ಆ ಸಮಯದಲ್ಲೂ ಸುಮಾರು ಜನ ಬಸ್ ಗಾಗಿ  ಕಾಯುತ್ತ ಕುಳಿತಿದರು,ಒಬ್ಬೊಬ್ರು ಒಂದೊಂದು ಬಂಗಿಯಲ್ಲಿ ನಿಂತಿದರು, ಒಬ್ಬ ಆಕಾಶ ನೋಡುತ ಬೀಡಿ ಸೇದುತ್ತಿದ,  ಚಿಕ್ಕ ಮಗುವೊಂದು ತನ್ನ ಅಪ್ಪನ ಕಾಲನು ತಬ್ಬಿ ನಿಂತು, ಆ ಮುಗ್ದ ಕಣ್ಣುಗಳಿಂದ ಆಗೊಂದು ಹೀಗೊಂದು ಬರುವ ಗಾಡಿಯನು ದಿಟ್ಟಿಸಿ ನೋಡುತ್ತಿತ್ತು. ಇದನೆಲ್ಲ ಗಮನಿಸುತ್ತಿದ್ದ ಹಾಗೆ ಬಸ್ ಬಂತ್ತು ನೋಡಿ!

ಮತ್ತಷ್ಟು ಓದು »

24
ಸೆಪ್ಟೆಂ

ಕನ್ನಡದಲ್ಲಿ ಉನ್ನತ ವ್ಯಾಸಾಂಗ

– ಬಿಂದುಮಾಧವಿ ಪಿ,ಹೈದರಾಬಾದ್

ನಮ್ಮ ದೇಶವು ವಿದ್ಯೆಯಲ್ಲಿ ಯಾವ ದೇಶಕ್ಕೂ ಕಡಿಮೆಯಿಲ್ಲ. ವಿದ್ಯಾವಂತರಿಗೆ ಬರವಿಲ್ಲ. ಹಾಗಿದ್ದರೂ ನಮ್ಮ ದೇಶದಿಂದ ಹೊಸ ಹೊಸ ಸಂಶೋಧನೆಗಳು ವಿರಳವಾಗಿವೆ. ಸಿ.ವಿ ರಾಮನ್, ಹರಗೋವಿಂದ ಖೊರಾನ ಇವರುಗಳ ಹೆಸರನ್ನೇ ಅನೇಕ ದಶಕಗಳಿಂದ ಹೇಳುತ್ತಿದ್ದೇವೆ. ಇದೇಕೆ ಹೀಗೆ?

ಗಣಿತದಲ್ಲಿ ಭಾರತೀಯರು ಎಂದೂ ಮುಂದು.ಅಮೇರಿಕದಲ್ಲಿ ಅನೇಕ ಸ್ಪರ್ಧೆಗಳಲ್ಲಿ ಭಾರತೀಯ ಮೂಲದ ಬಾಲಕರೇ ಮೊದಲ ಸ್ಥಾನ ಗಳಿಸುತ್ತಾರೆ. ಹಾಗಿರುವಾಗ Inventions and Discoveries ಪಟ್ಟಿಯಲ್ಲಿ ನಮ್ಮ ದೇಶದ ಹೆಸರು ಏಕೆ ಕಾಣುವುದಿಲ್ಲ?

ಇದಕ್ಕೆ ಉತ್ತರ ನಮ್ಮ ಮಾಧ್ಯಮ. ಒಂದರಿಂದ ಏಳನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ ನಾನು, ಅಲ್ಲಿಯವರೆಗೆ ಯಾವತ್ತೂ ತರಗತಿಯಲ್ಲಿ ಮೊದಲಿಗಳಾಗಿರುತ್ತಿದ್ದೆ. ನಂತರ ಪ್ರೌಢಶಾಲೆಯಲ್ಲಿ ಆಂಗ್ಲ ಮಾಧ್ಯಮ ಅದೂ ಮರಿಮಲ್ಲಪ್ಪ ಶಾಲೆಯಲ್ಲಿ. ಅಲ್ಲಿ ಅಪರೂಪಕ್ಕೆ ಮೂರನೇ ಅಥವಾ ನಾಲ್ಕನೆಯ ಸ್ಥಾನ ಬಂದರೆ ಅದೇ ಹೆಚ್ಚು. ಪದವಿ ಪೂರ್ವ ಕಾಲೇಜಿನಲ್ಲಿ, ನಂತರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಾಗೂ ಹೀಗೂ ಮೊದಲ ದರ್ಜೆಯಲ್ಲಿ ಉತ್ತೀರ್ಣಳಾಗುವುದೇ ಹೆಚ್ಚಾಯಿತು. ಏಕೆ ಹೀಗೆ? ಬಹುಶ: ನಾನು ಕನ್ನಡ ಮಾಧ್ಯಮದಲ್ಲೇ ಮುಂದುವರೆದಿದ್ದರೆ ಎಂದಿಗೂ ಮೊದಲ ಸ್ಥಾನದಲ್ಲಿ ಇರುತ್ತಿದ್ದೆನೇನೊ?
ಮತ್ತಷ್ಟು ಓದು »

22
ಸೆಪ್ಟೆಂ

ಚಂದ್ರಮನ ಚಂದ್ರಿಕೆ

– ರಂಜಿತಾ ಅಂಜು

ಅದು ಸುಂದರದ ಆ ಕ್ಷಣ , ಸೂರ್ಯನು ತನ್ನ ಕೋಪವನ್ನು ಇಂಗಿಸುತ್ತಾ , ನೆಮ್ಮದಿಯ ನಿಟ್ಟಿಸಿರು ಬಿಡುತ್ತಾ , ವನ್ಯ ಸಂಕುಲಗಳ ಮೇಲೆ ಪ್ರೀತಿ ತೋರುತ್ತಾ , ಆಗಸದಲ್ಲಿ ಮರೆಯಾಗುತಿದ್ದನು. ಹಕ್ಕಿಗಳು ಚಿಲಿಪಿಲಿ ಸದ್ದಿನೊಂದಿಗೆ , ತಮ್ಮ ಜೊತೆಗಾರರನ್ನು ಸೇರಲು ಗುಂಪಿನೊಂದಿಗೆ ತಮ್ಮ ತಮ್ಮ ಗೂಡನ್ನು ತಾವು ಸೇರಿಕೊಳ್ಳುತ್ತಿದ್ದವು…. ತಂಪನೆಯ ತಂಗಾಳಿ ಇಡೀ ಪ್ರಕೃತಿಗೆ ಉಲ್ಲಾಸದ ಅನುಭವ ನೀಡುತಲಿತ್ತು…

ಆ ರವಿಯ ಶಾಂತತೆಗೆ ಆಗಸವು ನಾಚಿ ತನ್ನ ಹೊಂಬೆಳಕಿನ ಮುಡಿಯಲ್ಲಿ ಕೆಂಪನೆಯ ಗುಲಾಬಿಯನ್ನು ಮುಡಿದಂತೆ , ಇಡೀ ಆಗಸದಲ್ಲಿ   ಹಲವು ಬಣ್ಣಗಳ ರಂಗಿನಾಟದಲ್ಲಿ ಮುಳುಗಿತ್ತು. ನಿಸರ್ಗವು ತನ್ನ ನಲ್ಲನು ಅವಳನ್ನು ನೋಡಲು ಬರುತಿಹನೆಂದು ಖಾತರಿ ಪಡಿಸಿ , ತನ್ನನ್ನು ತಾನು ಸಿಂಗರಿಸಿಕೊಳ್ಳಲು ನಿರತಳಾದಳು….

ಮತ್ತಷ್ಟು ಓದು »

21
ಸೆಪ್ಟೆಂ

ಬರಹಗಾರನ ಭಾಷೆ ಮತ್ತು ಸ್ಮಾರಕ

ಡಾ ಅಶೋಕ್. ಕೆ. ಆರ್.

ಆರ್. ಕೆ. ನಾರಾಯಣ್ ಯಾರಿಗೆ ಸೇರಿದವರು? ಅವರು ಮೂಲತಃ ತಮಿಳಿಗ, ಕರ್ನಾಟಕದ ಮೈಸೂರಿನಲ್ಲೂ ವಾಸಿಸಿದ್ದರು. ಬರೆದಿದ್ದು ತಮಿಳಿನಲ್ಲೂ ಅಲ್ಲ, ಕನ್ನಡದಲ್ಲೂ ಅಲ್ಲ; ನಮ್ಮ ದೇಶದ್ದೇ ಅಲ್ಲದ ಆಂಗ್ಲ ಭಾಷೆಯಲ್ಲಿ. ಇದೊಂದೇ ಕಾರಣಕ್ಕೆ ಅವರನ್ನು ಕನ್ನಡಿಗರೂ ಅಲ್ಲ, ತಮಿಳರೂ ಅಲ್ಲ ಕೊನೆಗೆ ಭಾರತದವರೇ ಅಲ್ಲ ಎನ್ನಲಾದೀತೆ? ಬರಹಗಳು ಒಂದು ಭಾಷೆ, ರಾಜ್ಯ, ರಾಷ್ಟ್ರಕ್ಕಷ್ಟೇ ಸೀಮಿತವಾದ ಸಂಗತಿಯೇ? ಮನದ ಭಾವನೆ ತುಮುಲಗಳನ್ನು, ಸಮಾಜದ ಜೀವನ ವಿಧಾನವನ್ನು ಬರಹರೂಪದಲ್ಲಿ ಕಟ್ಟಬಯಸುವ ಲೇಖಕನಿಗೆ ತನಗೆ ಹಿಡಿತವಿರುವ ಭಾಷೆಯಲ್ಲಿ ಬರೆಯುವ ಸ್ವಾತಂತ್ರ್ಯವಿದ್ದೇ ಇದೆ. ಪ್ರಾದೇಶಿಕ ಭಾಷೆಗಳ ಪುಸ್ತಕಗಳು ಮೇಲ್ನೋಟಕ್ಕೆ ಆ ಭಾಷಿಗರಿಗಷ್ಟೇ ಸೀಮಿತವೆಂಬಂತೆ ತೋರಿದರೂ ಅನುವಾದಗಳ ಮುಖಾಂತರ ಅನ್ಯಭಾಷಿಗರನ್ನೂ ತಲುಪುತ್ತದೆ. ರಷಿಯನ್ ಭಾಷೆಯಲ್ಲಿ ಬರೆದ ಲಿಯೋ ಟಾಲ್ ಸ್ಟಾಯ್, ದಸ್ತೋವಸ್ಕಿ ಪ್ರಪಂಚವನ್ನೆಲ್ಲ ತಲುಪಲು ಸಾಧ್ಯಾವಾಗಿದ್ದು ಅನುವಾದದಿಂದ. ತೆಲುಗಿನ ಯಂಡಮೂರಿ ವಿರೇಂದ್ರನಾಥ್ ನಮ್ಮವನೆನಿಸಿದ್ದು ಅನುವಾದದಿಂದ. ಭಾಷೆಗಿಂತ ಬರಹಗಳಲ್ಲಿನ ಮಾನವೀಯತೆ, ಸಾರ್ವತ್ರಿಕತೆಯಷ್ಟೇ ಕೊನೆಗೆ ಮುಖ್ಯವಾಗುಳಿಯುವುದು. ಆರ್. ಕೆ. ನಾರಾಯಣ್ ರ ಬಹುತೇಕ ಕೃತಿಗಳು ಕನ್ನಡಕ್ಕೆ ಅನುವಾದಗೊಂಡು ಕನ್ನಡಿಗರನ್ನೂ ತಲುಪಿದೆ. ಓದಲು ಬಾರದವರಿಗೆ, ಓದಲು ಇಚ್ಛಿಸದವರಿಗೆ ಶಂಕರ್ ನಾಗ್ ರ ಸಮರ್ಥ ನಿರ್ದೇಶನದಲ್ಲಿ ಮೂಡಿಬಂದ ಮಾಲ್ಗುಡಿ ಡೇಸ್ ಧಾರಾವಾಹಿಯ ಮುಖಾಂತರ ಹಿಂದಿ ಅರ್ಥೈಸಿಕೊಳ್ಳುವ ಜನರಿಗೂ ತಲುಪಿದೆ. ಎಲ್ಲರ ಮನಸ್ಸು ತಟ್ಟುವ ನಮ್ಮದೇ ಜೀವನದ ತುಣುಕುಗಳಂತೆ ಕಾಣುವ ನಾರಾಯಣ್ ರ ಕಥೆಗಳು ಭಾಷೆಯನ್ನು ಮೀರಿ ನಮ್ಮನ್ನು ತಲುಪುತ್ತದೆ.

kuvempu's house

 ಕುವೆಂಪು ವಾಸಿಸಿದ್ದ ಮನೆ

ಮೈಸೂರಿನಲ್ಲಿ ಆರ್. ಕೆ. ನಾರಾಯಣ್ ವಾಸವಿದ್ದ ಮನೆಯನ್ನು ಸ್ಮಾರಕವಾಗಿಸಬೇಕೆಂಬ ಸರಕಾರದ ಉದ್ದೇಶವನ್ನು ಕನ್ನಡದ ಕೆಲವು ಲೇಖಕರು ವಿರೋಧಿಸಿದ್ದಾರೆ. ‘ಕನ್ನಡಕ್ಕೆ ಆರ್. ಕೆ. ನಾರಾಯಣರ ಕೊಡುಗೆ ಏನು?’ ಎಂದು ಪ್ರಶ್ನಿಸಿದ್ದಾರೆ. ಆರ್. ಕೆ. ನಾರಾಯಣ್ ಕನ್ನಡಿಗರೂ ಅಲ್ಲ, ತಮಿಳರೂ ಅಲ್ಲ, ಭಾರತೀಯರೂ ಅಲ್ಲವೆಂಬ ಭಾವನೆ ಅವರ ಬರಹದ ಭಾಷೆಯ ಚೌಕಟ್ಟಿನಿಂದಾಗಿ ಉದ್ಭವವಾಗುವುದಾದರೆ ಆರ್. ಕೆ. ನಾರಾಯಣ್ ಒಬ್ಬ ಶ್ರೇಷ್ಠ ಸಾಹಿತಿ ಎಂಬ ದೃಷ್ಟಿಕೋನವಾದರೂ ಇರಬೇಕಲ್ಲವೇ? ಇಂಥ ಒಬ್ಬ ಸಾಹಿತಿ ವಾಸವಿದ್ದ, ಬರವಣಿಗೆ ನಡೆಸಿದ ಮನೆಯನ್ನು ಸ್ಮಾರಕ ಮಾಡುವುದನ್ನು ವಿರೋಧಿಸುವುದಕ್ಕೆ ಭಾಷೆಯೊಂದೇ ಕಾರಣವಾಗುವುದು ಸರಿಯಲ್ಲ. ಆರ್. ಕೆ. ನಾರಾಯಣ್ ರ ಸಾಹಿತ್ಯಿಕ ಕೊಡುಗೆಯನ್ನು ಗಮನಿಸುವಾಗ ಭಾಷೆ ಗೌಣವಾಗಬೇಕು. ನಾರಾಯಣ್ ರ ಮನೆಯವರು ಅವರು ವಾಸವಿದ್ದ ಮನೆಯನ್ನು ಸರಕಾರಕ್ಕೆ ‘ಮಾರಿದ್ದಾರೆ’ ಎಂಬ ಆರೋಪವೂ ಇದೆ. ಅದು ಅವರ ಮನೆಯವರ ಅನಿವಾರ್ಯತೆಯೇನೋ? ಖಾಸಗಿ ವ್ಯಕ್ತಿ ಖರೀದಿಸಿ ವಾಸ್ತುವಿನ ಹೆಸರಲ್ಲೋ, ನವೀಕರಣದ ಹೆಸರಲ್ಲೋ ಮನೆಯನ್ನು ಕೆಡವಿ ಕೆಡಿಸುವುದಕ್ಕಿಂತ ಸರಕಾರ ಖರೀದಿಸುವುದೇ ಸೂಕ್ತವಲ್ಲವೇ?

shivaram karant's house in puttur

ಪುತ್ತೂರಿನ ಬಾಲವನ

ಇನ್ನು ಲೇಖಕರ ಮನೆಯನ್ನು ಸ್ಮಾರಕವನ್ನಾಗಿಸಿ ಪ್ರವಾಸಿ ತಾಣದಂತೆ ಮಾರ್ಪಡಿಸುವುದು ಎಷ್ಟರಮಟ್ಟಿಗೆ ಸಾಹಿತ್ಯಕ್ಕೆ ಉಪಯೋಗಕಾರಿ? ಸ್ಮಾರಕಗಳಿಗೆ ವೆಚ್ಚ ಮಾಡುವ ಹಣವನ್ನು ಸಾಹಿತಿಯ ಪುಸ್ತಕಗಳನ್ನು ಮುದ್ರಿಸಿ ಜನರಿಗೆ ತಲುಪಿಸುವುದು ಹೆಚ್ಚು ಸೂಕ್ತವೆಂಬ ವಾದವೂ ಇದೆ. ಪ್ರತಿಮೆಗಳಿಗೆ ವೆಚ್ಚ ಮಾಡುವುದನ್ನು ವಿರೋಧಿಸುವುದು ಅರ್ಥಪೂರ್ಣ. ಆದರೆ ಸ್ಮಾರಕಗಳಿಂದ ಸಾಹಿತ್ಯಿಕ ಉಪಯೋಗವಿಲ್ಲ ಎಂಬುದನ್ನು ಸಂಪೂರ್ಣವಾಗಿ ಒಪ್ಪುವುದು ಕಷ್ಟ. ಮೋಜಿಗಾಗಿ, ಪ್ರವಾಸಕ್ಕಾಗಿ ಇಂಥ ಸ್ಮಾರಕಗಳಿಗೆ ಭೇಟಿ ನೀಡುವವರು ಇದ್ದಾರಾದರೂ ಸಾಹಿತಿಯ ಬರಹಗಳನ್ನು ಓದಿದ ಓದುಗನಿಗೆ ಆ ಸಾಹಿತಿ ಓಡಾಡಿದ, ಆ ಸಾಹಿತ್ಯ ಪಡಿಮೂಡಿದ ಜಾಗವನ್ನು ನೋಡುವ ಕುತೂಹಲವೂ ಇರುತ್ತದೆ. ಪುತ್ತೂರಿನ ಶಿವರಾಮ ಕಾರಂತ ಬಾಲವನ, ಕುವೆಂಪುರವರ ಕುಪ್ಪಳ್ಳಿಗೆ ಭೇಟಿ ನೀಡಿದಾಗ ಓದುಗರಿಗೆ ಸಿಗುವ ಉಲ್ಲಾಸ, ‘ನಾನೂ ಬರೆಯಬೇಕೆಂದು’ ಕೊಂಡವರಿಗೆ ಸಿಗುವ ಉತ್ಸಾಹ – ಪ್ರೇರಣೆಯನ್ನು ಕಡೆಗಣಿಸಲಾದೀತೆ? ಪುಸ್ತಕಗಳನ್ನು ಜನರಿಗೆ ತಲುಪಿಸುವುದು ಸಾಹಿತಿಗೆ ತೋರುವ ಶ್ರೇಷ್ಠ ಗೌರವವೆಂಬುದು ಸತ್ಯ, ಇದರೊಟ್ಟಿಗೆ ಸಾಹಿತಿಗಳ ಮನೆಯನ್ನು ಸ್ಮಾರಕವಾಗಿಸುವುದು ಕೂಡ ಅವರನ್ನು ಮತ್ತಷ್ಟು ಅರಿಯಲು, ಮಗದಷ್ಟು ಓದಲು ಸಹಾಯಕ.

 

ಚಿತ್ರಗಳು – ಡಾ ಅಶೋಕ್ ಕೆ ಆರ್, churumuri

 

20
ಸೆಪ್ಟೆಂ

ಇಂಗ್ಲೀಷ್ ಹೋಯ್ತು ಹಿಂದಿ ಬಂತು ಢುಂ ಢುಂ ಢುಂ…

ಸಾತ್ವಿಕ್ ಎನ್ ವಿ

ನಾನು ಮೊದಲೇ ಒಂದು ವಿಷಯ ಸ್ಪಷ್ಟಪಡಿಸಿ ಬರಹವನ್ನು ಮುಂದುವರೆಸುತ್ತೇನೆ. ನನಗೆ ಕನ್ನಡ ಬಿಟ್ಟು ಯಾವ ಭಾಷೆಯೂ ಸರಿಯಾಗಿ ಬರುವುದಿಲ್ಲ. ಇಂಗ್ಲಿಷ್ ‘ಕೊಂಚ ಕೊಂಚ’ ಅರ್ಥವಾದರೂ, ಹಿಂದಿ ‘ಸುಟ್ಟು ತಿನ್ನಲಿಕ್ಕೂ’ ಬರುವುದಿಲ್ಲ. ಬರುವುದಿಲ್ಲ ಎಂಬುದು ಹೆಮ್ಮೆಯ ವಿಷಯವಲ್ಲದಿದ್ದರೂ ಕಲಿಯಲು ಪ್ರಯತ್ನಿಸಿ ಸೋತಿದ್ದೇನೆ. ಇರಲಿ ಈಗ ನೇರ ವಿಷಯಕ್ಕೆ ಬರೋಣ. ಹಿಂದೆ ಒಮ್ಮೆ ಲೇಖನವೊಂದನ್ನು  ಓದುವಾಗ- ಹಿಂದಿ ರಾಷ್ಟ್ರಭಾಷೆ, ಅದನ್ನು ಕಲಿಯುವುದು ನಮ್ಮ ದೇಶದ ಏಕತೆಯ ಸಂಕೇತ. ಇಂಗ್ಲೀಷ್ ಎಂಬುದು ಪರಕೀಯ ಭಾಷೆ. ಅದನ್ನು ಉಪಯೋಗಿಸಿಯೇ ಬ್ರಿಟಿಷರು ನಮ್ಮನ್ನು ೨೦೦ ಹೆಚ್ಚು ವರ್ಷ ಆಳಿದರು. ಇಂಥ ದಾಸ್ಯದ ಸಂಕೇತವನ್ನು ಒಪ್ಪಬೇಕೆ? ಅಂತೆಲ್ಲ ಬರೆದಿದ್ದರು.
ನನಗೆ ಅರ್ಥವಾಗದೇ ಇರುವುದು ಯಾವುದು ನಮ್ಮ ರಾಷ್ಟ್ರ ಭಾಷೆ? ಹಿಂದಿಗೂ ದೇಶಪ್ರೇಮಕ್ಕೂ ಏನು ಸಂಬಂಧ? ಸಮಾನತೆಯ ತಳಹದಿಯ ಮೇಲೆ ನಿಂತಿರುವ  ಸಂವಿಧಾನವಿರುವ ಭಾರತದಲ್ಲಿ ಹೆಚ್ಚು ಜನ ಒಂದು ಭಾಷೆಯನ್ನು ಮಾತಾಡುತ್ತಾರೆಂಬ ಕಾರಣಕ್ಕೆ ಅದನ್ನು ರಾಷ್ಟ್ರ ಭಾಷೆ ಎಂದು ಕರೆದು ಉಳಿದ ಭಾಷೆಗಳನ್ನು ಅಧೀನ ಭಾಷೆಗಳೆಂದು ಘೋಷಿಸಲು ಸಾಧ್ಯವೇ? (ಹಿಂದಿ ನಮ್ಮ ಸೇನೆಯ ಭಾಷೆಯಾಗಿದೆ. ಅದು ಅಗತ್ಯ. ಹಲವಾರು ರಾಜ್ಯಗಳಿಂದ ಬಂದ ಸಿಪಾಯಿಗಳು ಅಲ್ಲಿದ್ದು ಅವರು ಇಂಗ್ಲೀಷ್ ಗಿಂತ ಹಿಂದಿಯನ್ನು ಸುಲಭವಾಗಿ ಕಲಿಯಬಲ್ಲರೆಂಬ ಕಾರಣವಿರಬಹುದು. ಇದನ್ನು ನಮ್ಮ ಚರ್ಚೆಯಿಂದ ಹೊರಗಿಡುವ) ಹಿಂದಿಯನ್ನು ನಾವು ತೃತೀಯ ಭಾಷೆಯಾಗಿ ಕಲಿಯುತ್ತೇವೆ, ಯಾವ ಹಿಂದಿಯಾಡುವ ರಾಜ್ಯ, ಇತರೆ ಭಾರತೀಯ ಭಾಷೆಗಳನ್ನು ತಮ್ಮ ವಿದ್ಯಾರ್ಥಿಗಳಿಗೆ ಕಲಿಸುತ್ತಿದೆ? ಈ ದ್ವಂದ್ವ ನಿಲುವು ಯಾಕೆ? ಇದು ಹಿಂದಿಯೇತರ ವಿದ್ಯಾರ್ಥಿಗಳಿಗೆ ಹೊರೆಯಲ್ಲವೇ? ಸ್ವಲ್ಪ ಯೋಚಿಸಿ. ಭಾಷೆ ಎಂಬುದು ಕೇವಲ ಮಾಧ್ಯಮ ಮಾತ್ರ ಅಲ್ಲ. ಅದೊಂದು ಸಂಸ್ಕೃತಿವಾಹಕ ಕೂಡ. ಒಂದು ಭಾಷೆ ಬಂತು ಎಂದಾದರೆ ಅದರ ಜೊತೆಯಲ್ಲೇ ಅಲ್ಲಿನ ಸಂಸ್ಕೃತಿಯ ತುಣುಕುಗಳನ್ನು ಕಲಿಯುವ ವ್ಯಕ್ತಿಗಳಲ್ಲಿ ತುರುಕುತ್ತದೆ. ಮತ್ತಷ್ಟು ಓದು »