ಮರೆಯಾಯಿತೇ, ನಮ್ಮ ಕ್ರಿಯಾಶೀಲತೆ ?
–ಮಧುಚಂದ್ರ ಭದ್ರಾವತಿ
ಅಮೇರಿಕ ಖಂಡವನ್ನು ಅನ್ವೇಷಣೆ ಮಾಡಿದ ಸಲುವಾಗಿ ಸ್ಪೇನ್ ದೇಶದ ರಾಣಿ ಇಸಬೆಲ ಒಂದು ಕೂಟವನ್ನು ಏರ್ಪಡಿಸಿದ್ದಳು. ಅಲ್ಲಿಗೆ ಕೊಲಂಬಸ್ ಸಹ ಬಂದಿದ್ದನು. ಎಲ್ಲರೂ ಮೇಜಿನ ಮುಂದೆ ಕುಳಿತಿರುವಾಗ ಅಲ್ಲಿ ನೆರೆದಿದ್ದ ಅಮಂತ್ರಿತರನ್ನು ಕುರಿತು ” ಮೊಟ್ಟೆಯನ್ನು ಯಾರು ಮೇಜಿನ ಮೇಲೆ ನಿಲ್ಲಿಸುತ್ತಿರ ” ಎಂದು ಪ್ರಶ್ನೆಯನ್ನು ಇಟ್ಟಳು. ಅಲ್ಲಿದ್ದ ಮಹಾ ಜನರು ಅದೇನು ಮಹಾ ಎಂದು ಮೊಟ್ಟೆಯನ್ನು ಮೇಜಿನ ಮೇಲೆ ನಿಲ್ಲಿಸಲು ಪ್ರಯತ್ನಿಸಿ ವಿಫಲರಾದರು. ಆಗ ಕೊಲಂಬಸ್ ಬೆಂದ ಮೊಟ್ಟೆಯನ್ನು ಕುಕ್ಕಿ ನಿಲ್ಲಿಸಿದಾಗ ಅಲ್ಲಿ ನೆರೆದಿದ್ದ ಕೆಲವರು ಹೊಗಳಿದರೆ, ಮತ್ತೆ ಕೆಲವರು ಇದನ್ನು ನಾನು ಮಾಡುತಿದ್ದೆ ಇದರಲ್ಲಿ ಏನು ಇದೆ ಎಂದು ತಿರಸ್ಕಾರದಿಂದ ತೆಗಳಿದರು.
ಕೆಲ ತಿಂಗಳ ಹಿಂದೆ ಕನ್ನಡದ ಉದಯೋನ್ಮಕ ಗಾಯಕಿಯೋಬ್ಬರು ಬೇರೆಯವರ ಶೈಲಿಯನ್ನು ಅನುಕರಣೆ ಮಾಡಿ ಇದು ತನ್ನದೆಂದು ಹೇಳಿ ಛೀಮಾರಿ ಹಾಕಿಸಿಕೊಂಡಿದ್ದರು. ಕನ್ನಡ ಚಲನಚಿತ್ರ ರಂಗ ಇದರ ಹೊರತಲ್ಲ ಕ್ರಿಯಾ ಶೀಲತೆ ಇಲ್ಲದ ದೊಡ್ಡ ದೊಂಬಿ. ಕೆಲವರು ಇದಕ್ಕೆ ಅಪವಾದ.
ಇದೆಲ್ಲ ಬಿಡಿ ಸ್ವಲ್ಪ ಅಜ್ಞಾನಿಗಳು ಮಾಡುವ ಕೆಲಸ. ಜ್ಞಾನ ಇರುವ ಅತಿಬುದ್ದಿವಂತರು ಎಂಬ ವರ್ಗವೊಂದು ಕಳೆದ ದಶಕದಲ್ಲಿ ಸೃಷ್ಟಿಯಾಯಿತು. ಇವರು ವರ್ಷಗಟ್ಟಲೆ ಒಂದೇ ಕುರ್ಚಿಯಲ್ಲಿ ಕುಳಿತು, ಕುರ್ಚಿ ಕಪ್ಪೆದ್ದರು. ಕ್ರಿಯಾಶೀಲತೆ ಅನ್ನುವ ಪದವೇ ತೆಲೆಗೆ ಹೊಕ್ಕದೆ ಎತ್ತು ಗಾಣವ ಸುತ್ತಿದಂತೆ ಸುತ್ತುತ ತಮ್ಮ ಕರ್ಮವನ್ನು ಮಾಡುತ . ಹೊಸತನವನ್ನು ಬಯಸದೆ, ಕೇವಲ ನಕಲು ಎಂಬ ಪದದ ಮಾಯೆಗೆ ಸಿಲುಕಿ ಅದರಲ್ಲೇ ಇದನ್ನು ತಾವು ಮಾಡಿದ್ದೂ ಎನ್ನುವ ಹುಚ್ಚು ಭ್ರಮೆಯಲ್ಲಿ ತೊಡಗಿರುತ್ತಾರೆ. ಕೆಲವೊಮ್ಮೆ ಅದರಲ್ಲೇ ಎನು ಇದೆ, ನಾನು ಮಾಡುತ್ತೀನಿ ಎಂದು ಅವರನ್ನು ಪುರಸ್ಕರಿಸದೇ ಇದು ನನ್ನ ಕ್ರಿಯಾ ಶೀಲತೆ ಎಂದು ಕೊನೆವರೆಗೂ ಕಂಡ ಕಂಡವರ ನಕಲಿನಲ್ಲೆ ಮೈ ಮರೆಯುತ್ತಾರೆ.
ನಾನು ಮತ್ತು ನಕಲನ್ನು ಬಿಟ್ಟು ಸ್ವಲ್ಪ ದೃಷ್ಟಿಯನ್ನು ಬೇರೆ ಕಡೆ ಹರಿಸಿದರೆ ಹೊಸತನವೆಂಬ ಲೋಕವು ತಾನಾಗೆ ತೆರೆಯುವುದು. ಇಲ್ಲದಿದ್ದರೇ ಕೊನೆಯವರೆಗೂ ನಾನು ಮಾಡಿದ್ದೂ ಮತ್ತು ನಕಲು ಎಂಬ ಮಾಯೆಯಲ್ಲಿ ನಕಲುಗಳಾಗಿ ಮರೆಯಾಗಿ ಬಿಡುತ್ತಾರೆ. ಶಾಶ್ವತ ಎನ್ನುವ ಪದಕ್ಕೆ ಅರ್ಥವೇ ಇರುವುದಿಲ್ಲ. ಈ ಹುಚ್ಚು ಭ್ರಮೆಯಿಂದ ನಮ್ಮ ಜನರು ಯಾವಾಗ ಬರುತ್ತಾರೋ ಗೊತ್ತಿಲ್ಲ.ಹಾಗೆ ಮೂಲವನ್ನು ಗೌರವಿಸಿ , ಸ್ವಲ್ಪ ಹೊಸದನ್ನ ಯೋಚಿಸಿದರೆ ಒಳ್ಳೆಯದೆನ್ನುವುದು ನನ್ನ ಭಾವನೆ.
ಕೊನೆಗೆ ಸಹಜವಾಗಿ ಒಂದು ಪ್ರೆಶ್ನೆ ಮನದಲ್ಲಿ ಮೂಡುತ್ತದೆ “ಮರೆಯಾಯಿತೇ ,ನಮ್ಮ ಕ್ರಿಯಾಶೀಲತೆ ? ”
* * * * * * * * *
ಚಿತ್ರಕೃಪೆ : ಅಂತರ್ಜಾಲ





nice one
ವಿಷಾದವೆಂದರೆ ಕ್ರಿಯಾಶೀಲತೆಗೆ ಸಲ್ಲಬೇಕಾದ ಗೌರವ ನಮ್ಮ ದೇಶದಲ್ಲಿ ಸಲ್ಲುತ್ತಿಲ್ಲ. ವಿದ್ಯಾರ್ಥಿಗಳು ಅಂತರ್ಜಾಲದಿಂದ ಕಾಪಿ ಮಾಡಿ assignment ಮಾಡಿದರೆ ಅದನ್ನು ಕಂಡುಹಿಡಿದು ಖಂಡಿಸುವ ಜಾಣ್ಮೆ ನಮ್ಮ ಅಧ್ಯಾಪಕರುಗಳಿಗಿಲ್ಲ. ನಾನು ಐಐಟಿ ಯಲ್ಲಿ MBA ಮಾಡಿದೆ, ನಾನು ಅಂತರ್ಜಾಲವನ್ನು refer ಮಾಡುತ್ತಿದ್ದೆನೇ ಹೊರತು ಕಾಪಿ ಮಾಡಲಿಲ್ಲ, ನನ್ನ ಗೆಳತಿಗೆ ಒಮ್ಮೆ ನೀನು business magazine ಗೆ ಬರೆದ article ತುಂಬಾ ಚೆನ್ನಾಗಿದೆ ನನಗೆ ಅಷ್ಟು ಬುದ್ದಿ ಇಲ್ಲ ಎಂದೆ. ಅಯ್ಯೋ ಅದರಲ್ಲೇನಿದೆ ಬದನೇಕಾಯಿ, internet ನಿಂದ ಬರೆದದ್ದು, ಎಂದಳು. ನಾನು ಅದೇ ಸಾಲುಗಳನ್ನು ಕಾಪಿ ಮಾಡಿ ಗೂಗಲ್ ಮಾಡಿದರೆ ನನಗೆ ಯಥಾವತ್ article ದೊರಕಿತು.!!
ಅಷ್ಟೇ ಅಲ್ಲ ಅನೇಕರು ಐಐಎಮ್ ನಿಂದ FPM ಮಾಡುತ್ತಾರೆ, ನನಗೂ FPM ಮಾಡಬೇಕೆಂದು ಆಸೆ. ಆದರೆ ಹಲವರಿಂದ ತಿಳಿದ ವಿಷಯ, ಅನೇಕ publication ಗಳಲ್ಲಿ ಅವರು, ಒಂದು ರಾಜ್ಯಕ್ಕೋ ಊರಿಗೋ ಸಂಭದಿಸಿದ ವಿಷಯವನ್ನು ಹೆಸರು ಬದಲಾಯಿಸಿ, ಹೊಸ ಪ್ರಕಟಣೆಯೆಂದು ಘೋಷಿಸುತ್ತಾರಂತೆ. ಅಂದರೆ ’ ಕರ್ಣಾಟಕ ದಲ್ಲಿ ಗ್ರಾಹಕರ ಅಧ್ಯಯನ ’ ಎಂದಿದ್ದರೆ, ನಂತರ ಅದನ್ನೇ ’ಆಂಧ್ರಪ್ರದೇಶದ ಗ್ರಾಹಕರ ಅಧ್ಯಯನ’ ಎಂದು ಮಾಡುವುದು!
ಸ್ವಂತವಾಗಿಯೇ ಬರೆಯಬೇಕೆಂಬ ನಾವು ಹತ್ತು ಪುಟಗಳಿಗೆ ಪಡುವ ಶ್ರಮವನ್ನು ಅವರು ನೂರು ಪುಟದ ಪ್ರಕಟಣೆಗೂ ಪಡುವುದಿಲ್ಲ. ಹಾಗಾಗಿ ನಮ್ಮ ಪ್ರಾಮಾಣಿಕ ಹತ್ತು ಪುಟಗಳಿಗೆ ಯಾವ ಬೆಲೆಯೂ ಸಿಗುವುದಿಲ್ಲ.
ಹೀಗಾಗಿ ನಾವು phd ಮಾಡುವ ಆಸೆಯನ್ನೇ ಬಿಡುವಂತಾಗುತ್ತದೆ.