ಎಷ್ಟು ಕಷ್ಟ ಒಂದ್ ಮದ್ವೆ ಅಂದ್ರೆ
-ಪರೇಶ್ ಸರಾಫ್
ಡಾಕ್ಟರ್ ಮಾಮನ ಆಸ್ಪತ್ರೆಯ ಹಿಂದಿನ ಹಾಲ್ನಲ್ಲಿ ಆಗಾಗ ಚಿಕ್ಕ ಪುಟ್ಟ ಸಮಾಜ ಸೇವಾ ಕಾರ್ಯಕ್ರಮಗಳು ನಡೆಯುವುದು ಸಾಮಾನ್ಯ. ಅದರಲ್ಲಿ ಪ್ರತಿ ರವಿವಾರ ನಡೆಯುವ ಮ್ಯಾರೇಜ್ ಬ್ಯುರೋ ಸಹ ಒಂದು. ನಮ್ಮ ಸಮುದಾಯದ ಹುಡುಗ, ಹುಡುಗಿಯರ ಮಾಹಿತಿ ಸಂಗ್ರಹ, ಜಾತಕ ಮೇಳಾಮೇಳಿ
, ಮಾತುಕತೆಯಿಂದ ಹಿಡಿದು, ಬಡವರಿದ್ದರೆ ಮದುವೆಗೆ ಸಹಾಯ ಮಾಡುವಷ್ಟರವರೆಗೆ ಸಮಾಜಸೇವೆ ನಡೆಯುತ್ತಿತ್ತು. ಪ್ರಭು ಮಾಸ್ತರರು, ಮಹಾಲೆ ಮಾಮನ ಸಾರಥ್ಯದಲ್ಲಿ ಈ ಕಾರ್ಯ ಬಹಳ ಸಮರ್ಥವಾಗಿ ಮುಂದುವರೆದುಕೊಂಡು ಹೋಯಿತು. ಬರೀ ವಧು ವರರ ಮಾಹಿತಿ ನೀಡುವುದಷ್ಟೇ ಅಲ್ಲದೇ ಹುಡುಗನ, ಹುಡುಗಿಯ ಹಿನ್ನೆಲೆಗಳನ್ನು ನೋಡಿ, ಜೋಡಿ ಸರಿ ಹೊಂದುತ್ತದೆಯೋ, ಹುಡುಗನಿಗೆ ವ್ಯಸನಗಳಿವೆಯೋ ಎಂಬುದನ್ನೆಲ್ಲ ಪರೀಕ್ಷಿಸಿ ತಮ್ಮ
ಕೈಲಾದ ಮಟ್ಟಿಗೆ ಉತ್ತಮ ಸೇವೆ ನೀಡಿ, ಮದುವೆಯ ನೈತಿಕ ಹೊಣೆಯನ್ನು ಸಹ ಹೊತ್ತು ಮನೆ ಮಾತಾದರು. ಹೀಗೆ ಬರುವವರ ಸಂಖ್ಯೆ ಸಹ ಜಾಸ್ತಿಯಾಗುತ್ತ ಹೋಯಿತು. ಸಂಖ್ಯೆಗಳು ಜಾಸ್ತಿಯಾದಂತೆ ಹಲವು ಸಿಹಿ ಕಹಿ ಅನುಭವಗಳು ಸಹ ಆಗುತ್ತಾ ಹೋಯಿತು. ಪ್ರತಿ ಅನುಭವವೂ ಈಗಿನ ಸಾಮಾಜಿಕ ಜೀವನ,





