ಹಿಂದೂಧರ್ಮದಿಂದ ಹೊರಹೋಗುವುದು ಎಂದರೇನು?
– ರಾಕೇಶ್ ಶೆಟ್ಟಿ
ಅರ್ಧ ಸೌಟು ಲಾರ್ಡ್ ಕರ್ಜನ್,ಒಂದು ಹಿಡಿಯಷ್ಟು ನೆಹರೂ-ಜಿನ್ನಾ ಮಿಶ್ರಣಕ್ಕೆ ಅರ್ಧ ಗ್ಲಾಸು ತುಘಲಕ್-ಟಿಪ್ಪು ಎಂಬ ದ್ರಾವಣ ಬೆರೆಸಿದರೇ ಸಿದ್ದರಾಮಯ್ಯ ತಯಾರಾಗಿಬಿಡುತ್ತಾರೆ. ಲಾರ್ಡ್ ಕರ್ಜನ್ ಸಾಧನೆ ಬಂಗಾಳ ವಿಭಜನೆಯದ್ದು. ಭಾರತ ವಿಭಜನೆಯ ಸಾಧನೆ ಜಿನ್ನದ್ದಾದರೂ,ಕಾಂಗ್ರೆಸ್-ನೆಹರೂ ಯೋಗದಾನವನ್ನು ಮರೆಯುವಂತಿಲ್ಲವಲ್ಲ.ಅದೇ ಸಾಲಿಗೆ ಸೇರುವುದು ಹಿಂದೂ ವಿಭಜನೆ ಮಾಡಿದ ಸನ್ಮಾನ್ಯ ಸಿದ್ದರಾಮಯ್ಯ. ಕರ್ಜನ್ ಬಂಗಾಳ ವಿಭಜನೆಗೆ ಕೈ ಹಾಕಿದ್ದು ಮತೀಯ ಆಧಾರದ ಮೇಲೆ,ಕರ್ಜನ್ ಹಾದಿಯನ್ನೇ ದಾರಿದೀಪವಾಗಿಸಿಕೊಂಡವ ಜಿನ್ನಾ,ದೇಶವನ್ನೇ ಮತೀಯವಾಗಿ ವಿಭಜಿಸಿದರು.ಇಬ್ಬರೂ ನೆಮ್ಮದಿಯಿಂದಿದ್ದ ಸಮಾಜವನ್ನು ವಿಭಜಿಸಿದ್ದು ಅಧಿಕಾರಕ್ಕಾಗಿ. ಈಗ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಮತ್ತವರ ಸಚಿವರು ವೀರಶೈವ-ಲಿಂಗಾಯಿತ ವಿಭಜನೆ ಮಾಡಿದ್ದು ಚುನಾವಣೆ ಗೆಲ್ಲಬೇಕೆಂಬ ಏಕೈಕ ಕಾರಣಕ್ಕಾಗಿ.ರಾಜಕೀಯ ಕಾರಣದಾಚೆಗೆ ಈ ವಿಭಜನೆಯಲ್ಲಿರುವುದು ವ್ಯಾವಹಾರಿಕ ಕಾರಣಗಳು, ಅಲ್ಪಸಂಖ್ಯಾತ ಬ್ಯಾಡ್ಜಿನಡಿ ಸಿಗುವ ಸೌಲಭ್ಯಗಳ ಆಧಾರವಷ್ಟೇ.ರಾಜಕೀಯ,ವ್ಯಾವಹಾರಿಕ ಕಾರಣಗಳಿಗಿಂತ , ಈ ವಿಷಯದ ವೈಚಾರಿಕ ಆಯಾಮದ ಬಗ್ಗೆ ಗಮನಹರಿಸುವುದು ಈ ಲೇಖನದ ಉದ್ದೇಶ.
ಲಿಂಗಾಯಿತರು “ಹಿಂದೂ ಧರ್ಮ” ಭಾಗವಲ್ಲ,ಅವರದ್ದು ಪ್ರತ್ಯೇಕ “ಧರ್ಮ” ಎಂದು ನಡೆಯುತ್ತಿರುವ ಈ ಚರ್ಚೆಯಲ್ಲಿ ಮುಖ್ಯವಾಗುವುದು ಹಿಂದೂ+ಧರ್ಮ ಪದಗಳು. ಒಂದು ಉದಾಹರಣೆಯ ಮೂಲಕ ಈ ಚರ್ಚೆಯೊಳಗೆ ಹೋಗೋಣ :ಶಾಲಾ ಪಠ್ಯವೊಂದರಲ್ಲಿ “ಭಾರತ ವೈವಿಧ್ಯಮಯ ದೇಶ.ಇಲ್ಲಿ ಹಿಂದೂ,ಜೈನ,ಬೌದ್ಧ,ಸಿಖ್,ಇಸ್ಲಾಂ,ಕ್ರಿಶ್ಚಿಯಾನಿಟಿ, ಪಾರ್ಸಿ (ಮುಂದೆ ಲಿಂಗಾಯತ ?) ಹೀಗೆ ಬಹಳಷ್ಟು ಧರ್ಮಗಳಿವೆ” ಎಂಬ ಪಾಠವನ್ನು ಕೇಳಿದ ವಿದ್ಯಾರ್ಥಿಯೊಬ್ಬ ಶಾಲೆ ಮುಗಿಸಿಕೊಂಡು ಹೊರಗೆ ಬಂದಾಗ,ಅವನಿಗೆ ಎದುರಾದ ಭಿಕ್ಷುಕನೊಬ್ಬ “ಧರ್ಮ ಮಾಡಪ್ಪ” ಅಂತಾನೇ.ಆಗ ಆ ಪಾಪದ ಹುಡುಗನಿಗೆ “ತರಗತಿಯಲ್ಲಿ ಮೇಷ್ಟ್ರು ಹೇಳಿದ ಅಷ್ಟೊಂದು ವೈವಿಧ್ಯಮಯ “ಧರ್ಮ”ಗಳಲ್ಲಿ ಯಾವ ಧರ್ಮವನ್ನು ಈ ಭಿಕ್ಷುಕನಿಗೆ ಮಾಡಬೇಕು? ಅಷ್ಟಕ್ಕೂ ಧರ್ಮ ಮಾಡುವುದೆಂದರೇನು?” ಎಂಬಿತ್ಯಾದಿ ಪ್ರಶ್ನೆಗಳು ಕಾಡಿದರೆ,ನಮ್ಮ ಬುದ್ಧಿಜೀವಿಗಳ ಬಳಿ ಆ ಹುಡುಗನ ಪ್ರಶ್ನೆಗೆ ಉತ್ತರವಿದೆಯೇ?
ರಾಜಕಾರಣಿಗಳೇ, ಮಹಿಳೆಯರಿಗೆ ರಕ್ಷಣೆಕೊಡಿ ಇಲ್ಲವೇ ಜಾಗ ಖಾಲಿ ಮಾಡಿ
– ಚೈತ್ರ ಗೌಡ ಹಾಸನ
ಸ್ನಾತಕೋತ್ತರ ಪತ್ರಿಕೋದ್ಯಮ,
ಮಾನಸಗಂಗೋತ್ರಿ, ಮೈಸೂರು.
ಆದಿಯಿಂದಲೂ ಸೃಷ್ಟಿಯ ಮೂಲ ಹೆಣ್ಣು, ಕರುಣೆ, ವಾತ್ಸಲ್ಯ, ಮಮತೆ, ಅಕ್ಕರೆ ತಾಳ್ಮೆ ಹೀಗೆ ವಿಶಿಷ್ಟ ಶಕ್ತಿಗಳ ಸಂಗಮದ ಜೊತೆಗೆ ನವಿರಾದ ಭಾವನಾತ್ಮಕ ತಂತುಗಳು ಬೆಸೆದುಕೊಂಡಿವೆ. ಹೆಣ್ಣು ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಈ ಪ್ರಕೃತಿಯಿಂದಲೇ ವಿಭಿನ್ನ ಶಕ್ತಿಯನ್ನು ಪಡೆದಿರುವ ಪೋಷಕಿ, ತನ್ನ ಗರ್ಭದಲ್ಲಿ ಒಂಬತ್ತು ತಿಂಗಳು ಶಿಶುವನ್ನು ಹೊತ್ತು ಪೋಷಿಸಿ, ತನ್ನ ಎಲ್ಲ ಕಷ್ಟಗಳನ್ನು ನಗುನಗುತ್ತ ಸಹಿಸಿ ಮರುಹುಟ್ಟು ಎನ್ನುವಂತಹ ನೋವನ್ನು ಸಹಿಸಿಕೊಂಡು ಜನ್ಮ ಕೊಡುತ್ತಾಳೆ. ಪುರುಷನ ಜೀವನದ ಪ್ರತಿ ಹಂತದಲ್ಲಿಯೂ ಹೆಣ್ಣಿನ ಪಾತ್ರ ಮಹತ್ವವಾದದ್ದು. ಜನ್ಮಕೊಟ್ಟು ಸಲಹುವ ತಾಯಿಯಾಗಿ, ಅಕ್ಕರೆಯ ಸೋದರಿಯಾಗಿ, ಸಾಂತ್ವನ ನೀಡುವ ಸ್ನೇಹಿತೆಯಾಗಿ, ಭಾವನೆಗಳ ಬೆಸುಗೆಯ ಮಡದಿಯಾಗಿ, ಪ್ರೀತಿ ಚಿಲುಮೆಯ ಮಗಳಾಗಿ. ಇಂದು ಹೆಣ್ಣು ಎಲ್ಲ ಕ್ಷೇತ್ರದಲ್ಲೂ ಮುನ್ನಡೆಯುತ್ತ ಜಗತ್ತಿನ ದೃಷ್ಟಿಯನ್ನು ತನ್ನೆಡೆಗೆ ಸೆಳೆದಿದ್ದಾಳೆ. ಪ್ರತಿಭೆ, ಕಲೆ, ಸಾಹಿತ್ಯ, ಸಾಹಸ ಪ್ರವೃತ್ತಿ ಅಂತಹ ಸಾಧನೆ ಮಾಡಿ ವಿಶ್ವದ ಗೌರವಕ್ಕೆ ಪಾತ್ರಳಾಗಿದ್ದಾಳೆ. ಉತ್ತಮ ಗುಣ ನಡತೆಗಳಿಂದ ಪೂಜನೀಯ ಸ್ಥಾನದಲ್ಲಿದ್ದಾಳೆ. ಮತ್ತಷ್ಟು ಓದು
ರಾಷ್ಟ್ರಕ್ಕೆ ರಕ್ಷಣೆ ಹೆಣ್ಣು ನೀಡಬಲ್ಲಳಾದರೆ ತನ್ನನ್ನು ತಾನೂ ರಕ್ಷಿಸಿಕೊಳ್ಳಬಲ್ಲಳು..
– ತನ್ಮಯೀ ಪ್ರೇಮ್ ಕುಮಾರ್
ಪ್ರತಿ ವರ್ಷದ ಹಾಗೆ ಈ ವರ್ಷವೂ ಮತ್ತೊಂದು ಮಹಿಳಾ ದಿನಾಚರಣೆಯ ಹೊಸ್ತಿಲಲ್ಲಿ ನಿಂತಿದ್ದೇವೆ.ಮಹಿಳೆಯ ಹರಹಿನ ವಿಸ್ತಾರ ಅಗಾಧವಾಗಿ ಬೆಳೆದು ನಿಂತಿದೆ. ಸಮಾಜದ ಮುಖ್ಯ ವಾಹಿನಿಯಲ್ಲಿಯೂ ಮಹಿಳೆಯ ನಾಗಾಲೋಟ ಭರದಿಂದಲೇ ಸಾಗುತ್ತಿದೆ.ಆದರೆ ಎತ್ತ?? ಆಕೆಗೆ ಸುರಕ್ಷಿತವಾಗಿ ನಿರ್ಭಿಡೆಯಿಂದ ಕೆಲಸ ಮಾಡಲು,ಓಡಾಡಲು, ಸ್ವತಂತ್ರವಾಗಿರಲು ಅನುವು ಮಾಡಿಕೊಟ್ಟಿದ್ದೇವಾ?? ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಆಕೆಗೆ ರಕ್ಷಣೆ ಒದಗಿಸಿದ್ದೇವಾ?? ನಮ್ಮೊಳನಗಿನ ನಮ್ಮ ನಾಡಿನ ಆಂತರ್ಯವನ್ನು ಪ್ರಶ್ನಿಸಿಕೊಂಡಾಗಲಂತೂ ಅತ್ಯಂತ ಹೇಸಿಗೆಯಿಂದ ತಲೆ ಬಗ್ಗಿಸಬೇಕಾದ ಪರಿಸ್ಥಿತಿ ನಿರ್ಮಿಸಿಕೊಂಡಿದ್ದೇವೆ. ಮಹಿಳಾವಾದ ,ಸಮಾನತೆ,ಹಕ್ಕುಗಳು ಹೀಗೆ ರೋಮ್ಯಾಂಟಿಕ್ ಶಬ್ದಗಳ ಆಚೆಗೆ ಹೆಣ್ಣಿಗೆ ಸಿಗಬೇಕಿದ್ದ ಕನಿಷ್ಟ ಸುರಕ್ಷತೆಯ ಭರವಸೆ ತಂದಿದ್ದೇವಾ? ಮತ್ತಷ್ಟು ಓದು
ಮೋದಿಯವರನ್ನು ಪ್ರಶ್ನಿಸುವ ನೈತಿಕತೆ ಸಿದ್ಧರಾಮಯ್ಯನವರಿಗೆ ಇದೆಯೇ?
– ರಾಕೇಶ್ ಶೆಟ್ಟಿ
ನೈತಿಕತೆ ಎಂದರೆ ಕೇಜಿಗೆಷ್ಟು ಎಂದು ಬದುಕುವ ಜನರು ಯಾರನ್ನು ಬೇಕಾದರೂ, ಏನನ್ನೂ ಬೇಕಾದರೂ ನಾಚಿಕೆ ಬಿಟ್ಟು ಪ್ರಶ್ನಿಸಬಲ್ಲರು. ಉದಾಹರಣೆಗೆ, ಮುಖ್ಯಮಂತ್ರಿ ಸಿದ್ಧರಾಮಯ್ಯ ಮೊನ್ನೆ ಟ್ವಿಟರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು “ಲೋಕಪಾಲ್’ ಯಾಕ್ರೀ ನೇಮಕ ಮಾಡಿಲ್ಲ ಅಂತ ಪ್ರಶ್ನಿಸುತ್ತಿದ್ದಿದ್ದು! ಇಡೀ ದೇಶಕ್ಕೆ ಮಾದರಿಯಾಗಿದ್ದ ಕರ್ನಾಟಕ ಲೋಕಾಯುಕ್ತವನ್ನು ನುಂಗಿ ನೀರು ಕುಡಿದ ಸಿಎಂ ಸಾಹೇಬರು ಪ್ರಧಾನಿಯವರನ್ನು ಆ ಪರಿ ಅಧಿಕಾರವಾಣಿಯಲ್ಲಿ ಪ್ರಶ್ನಿಸುವುದನ್ನು ನೋಡಿದಾಗ, ಇವರಿಗೆ ಪಾಪ ಪ್ರಜ್ಞೆಯೇ ಇಲ್ಲವೇನೋ ಎನ್ನಿಸುತ್ತಿತ್ತು. ಮತ್ತಷ್ಟು ಓದು