‘ಕೈ’ ಪಕ್ಷಕ್ಕೆ ಈ ಸಲ ಜನತೆ ‘ಕೈ’ ಕೊಡಬೇಕಿದೆ !
– ಅಭಿಷೇಕ್ ಬಿ ಎಸ್
‘ಕರ್ನಾಟಕ ನಂಬರ್ 1 ರಾಜ್ಯ’ – ಮೇಲಿಂದಲೋ ಕೆಳಗಿಂದಲೋ ?
ಕರ್ನಾಟಕ ಮತ್ತೊಮ್ಮೆ ಚುನಾವಣೆಯ ಕಡೆ ಮುಖ ಮಾಡಿ ನಿಂತಿದೆ. ಒಂದು ಸರ್ಕಾರದ ಅಧಿಕಾರಾವಧಿ ಮುಗಿತಾ ಬರ್ತಾ ಇದೆ. ಹೊಸ ಸರ್ಕಾರವನ್ನ ನಿರ್ಧಾರ ಮಾಡುವ ಅಧಿಕಾರ ನೇರವಾಗಿ ಜನರ ಬಳಿಗೆ shift ಆಗತ್ತೆ. ಕಳೆದ ಮೂರು ಚುನಾವಣೆಗಳಲ್ಲಿ ಕರ್ನಾಟಕ ಮೂರೂ ಪಕ್ಷಗಳ ಅಧಿಕಾರವನ್ನ ನೋಡಾಗಿದೆ. ಹಾಗಿದ್ರೆ, ಈ ಸಲವೂ ಅದೇ ಮೂರು ಪಕ್ಷಗಳು, ಮತ್ತು ಅದೇ ಮೂರು ಪಕ್ಷಗಳ ನಾಯಕರು ಇದ್ದಾರಲ್ಲ, ಯಾರಿಗೆ ವೋಟ್ ಮಾಡಬೇಕು ಅನ್ನೋದನ್ನ ಕರ್ನಾಟಕದ ಸಾಮಾನ್ಯ ಮತದಾರ ಲೆಕ್ಕ ಹಾಕ್ತಾ ಇರ್ತಾನೆ.
ಯಶಸ್ವಿ ಐದು ವರ್ಷಗಳನ್ನ ಮುಗಿಸಿದ ಶ್ರೀಯುತ ಸಿದ್ದರಾಮಯ್ಯನವರ ಸರ್ಕಾರ ಜನರ ಆಶೋತ್ತರಗಳಿಗೆ ತಕ್ಕನಾಗಿ ಕೆಲಸ ಮಾಡಿದ್ಯಾ ? ನಾಡಿನ ಜನತೆ ಬಯಸಿದ್ದ ಆಡಳಿತದ ಗುರಿಯನ್ನ ತಲುಪಲಿಕ್ಕೆ ಸಾಧ್ಯ ಆಗಿದ್ಯಾ ? ಇದು ವಿಮರ್ಶೆಯ ಸಮಯ. ಮತ್ತಷ್ಟು ಓದು
ಜಮ್ಮುವಿನ ಹಿಂದೂಗಳ ಮೇಲೆ ಕಣ್ಣಿಟ್ಟಿರುವ ಮಾಫಿಯಾಗಳು ಯಾವುವು?
– ರಾಕೇಶ್ ಶೆಟ್ಟಿ
೬ ವರ್ಷಗಳ ಹಿಂದೆ ದೆಹಲಿಯಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣವೊಂದು ಇಡೀ ದೇಶದ ಅಂತಃಕರಣವನ್ನೇ ಕಲುಕಿಹಾಕಿತ್ತು.ಸಾರ್ವಜನಿಕರು, ಭಿನ್ನ ಭಿನ್ನ ನಿಲುವುಳ್ಳ ಸಂಘಟನೆಗಳೆಲ್ಲ ಅಪರೂಪದ ಒಗ್ಗಟ್ಟು ಪ್ರದರ್ಶಿಸಿದ್ದ ಕೇಸು ಅದು.ದೆಹಲಿಯ ವಿದ್ಯಾರ್ಥಿಗಳು,ಸಾರ್ವಜನಿಕರು ನೋಡು ನೋಡುತ್ತಿದಂತೆಯೇ ರಾಷ್ಟ್ರಪತಿಭವನದ ರಸ್ತೆಗೆ ಮುತ್ತಿಗೆ ಹಾಕಿಬಿಟ್ಟಿದ್ದರು. ಹಾಗೆ ರಾಷ್ಟ್ರಪತಿ ಭವನದ ಮುಂದೆ ನಿಂತು ನ್ಯಾಯ ಕೇಳಿದ ಯುವಕ-ಯುವತಿಯರ ಮೇಲೆಯೇ ಲಾಠಿ ಚಾರ್ಜ್,ಜಲಫಿರಂಗಿ,ಅಶ್ರು ವಾಯು ಪ್ರಯೋಗವನ್ನು ಆಗಿನ ಯುಪಿಎ ಸರ್ಕಾರ ನಡೆಸಿ ಉರಿಯುವ ಬೆಂಕಿಗೆ ತುಪ್ಪ ಸುರಿದಿತ್ತು.ದೆಹಲಿಯಲ್ಲಿ ಹೊತ್ತಿಕೊಂಡ ಕಿಡಿ ದೇಶದ ಮೂಲೆಯಲ್ಲೂ ಪ್ರತಿಧ್ವನಿಸಿತ್ತು.ಮೊದಲು ಮೊದಲು ಮೊಂಡತನ ತೋರಿದ್ದ ದೆಹಲಿಯ ಶೀಲಾ ದೀಕ್ಷಿತ್ ಸರ್ಕಾರ ಆ ನಂತರ ತಲೆಬಾಗಿ,ಅತ್ಯಾಚಾರ ಪ್ರಕರಣಗಳ ಕುರಿತ ಕಾನೂನುಗಳ ಸುಧಾರಣೆಗೆ ನ್ಯಾ.ವರ್ಮಾ ಅವರ ನೇತೃತ್ವದ ಸಮಿತಿಯನ್ನು ನೇಮಿಸಿತ್ತು,ಅಂತಿಮವಾಗಿ Criminal Amendment Bill, 2013 ಹೊರಬಂದಿತ್ತು.
ಆ ಭೀಕರ ಅತ್ಯಾಚಾರ ಪ್ರಕರಣದ ಮುಖ್ಯ ಆರೋಪಿಗಳೆಲ್ಲ ಆತ್ಮಹತ್ಯೆ ಮಾಡಿಕೊಂಡು ತೊಲಗಿದ್ದಾರಾದರೂ,ಅತ್ಯಾಚಾರಿಗಳ ಅತಿಕ್ರೂರಿ ಎನಿಸಿಕೊಂಡಿದ್ದವ ಮಾತ್ರ ‘ಅಪ್ರಾಪ್ತ’ ಎಂಬ ಸ್ಲೇಟು ಹಿಡಿದು ಇಂದಿಗೂ ಎಲ್ಲೋ ಬದುಕಿಕೊಂಡಿದ್ದಾನೆ. ಜೈಲಿನಿಂದ ಬಿಡುಗಡೆಯಾಗಿ ಬಂದವನಿಗೆ ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್ ಸರ್ಕಾರವೇ ಜೀವನಕ್ಕೆ ವ್ಯವಸ್ಥೆ ಮಾಡಿಕೊಟ್ಟಿತ್ತು. ಇಡೀ ದೇಶದಲ್ಲಿ ಕಿಚ್ಚು ಹಚ್ಚಿಹೋದ ಆ ಹೆಣ್ಣುಮಗಳ ನಿಜವಾದ ಹೆಸರು ಬಿಬಿಸಿ ಸುದ್ದಿ ಸಂಸ್ಥೆ ಹೇಳುವ ತನಕ ಜನಸಾಮಾನ್ಯರಿಗೆ ಗೊತ್ತಿರಲಿಲ್ಲ. ದೇಶ ಆ ಹೆಣ್ಣುಮಗಳಿಗೆ ‘ನಿರ್ಭಯ’ ಎಂಬ ಹೆಸರಿಟ್ಟಿತ್ತು. ಈ ದೇಶದ ಎಷ್ಟೋ ತಾಯಂದಿರು ಆಕೆಗಾದ ಅನ್ಯಾಯ ತಮ್ಮದೇ ಕುಟುಂಬದವರ ಮೇಲಾದ ಅನ್ಯಾಯವೆಂಬಂತೆ ಮರುಗಿದರು,ಬೀದಿಗಿಳಿದರು.ಹಾಗೆ ಬೀದಿಗಿಳಿದವರಿಗೆ ನಿರ್ಭಯಳ ಜಾತಿ ಯಾವುದು,ರಿಲಿಜನ್ ಯಾವುದು? ಆಕೆಯ ಹಿಂದುವೋ?ಮುಸ್ಲಿಮೋ?ಕ್ರಿಶ್ಚಿಯನ್ನೋ?ಇದ್ಯಾವುದರೋ ಪರಿವೆಯೂ ಇರಲಿಲ್ಲ. ಮುಖ್ಯವಾಗಿ ಅದರ ಅವಶ್ಯಕತೆಯೂ ಇರಲಿಲ್ಲ. ಇಡೀ ದೇಶ ಆ ಹೆಣ್ಣುಮಗಳ ನೋವಿಗೆ ಜೊತೆಯಾಗಿ ನಿಂತಿದ್ದು ಆಕೆಯ ಮೇಲಾದ ದೌರ್ಜ್ಯನ್ಯಕ್ಕಾಗಿ,ಆಕೆಯ ಪ್ರಾಣ ತೆಗೆದ ರಾಕ್ಷಸರಿಗೆ ಶಿಕ್ಷೆಯಾಗಲೇ ಬೇಕೆಂಬ ಏಕೈಕ ಕಾರಣಕ್ಕಾಗಿ!
ಆಡುವ ಮಾತು….!!
– ಗೀತಾ ಜಿ.ಹೆಗಡೆ
ಕಲ್ಮನೆ
ಕೆಲವೊಮ್ಮೆ ಮನುಷ್ಯರ ಮಾತು, ನಡವಳಿಕೆ ಎಷ್ಟೊಂದು ಇರುಸು ಮುರುಸು ತರಿಸುತ್ತದೆ. ಕೆಲವರು ಆಡುವ ಮಾತುಗಳು ಅದೆಷ್ಟು ಕಿರಿ ಕಿರಿ ಬೇಸರ ತರಿಸುವುದೆಂದರೆ ಕೇಳೋದಕ್ಕೇ ಆಗೋದಿಲ್ಲ. ಏನಾದರೂ ತಿರುಗಿ ಹೇಳೋದಕ್ಕೂ ಸ್ವಲ್ಪ ಕಷ್ಟ. ಅದರಲ್ಲೂ ಕೆಲವು ಹತ್ತಿರದ ಸಂಬಂಧಿಕರಾದರಂತೂ ಮುಗಿದೇ ಹೋಯಿತು. ಅವರ ವಾಕ್ ಚಾತುರ್ಯ ಸದಾ ಕಿವಿಗೆ ಬೀಳುತ್ತಲೇ ಇರುತ್ತದೆ. ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಈ ರೀತಿಯ ಮಾತುಗಳು ಅವರಿಗೆ ಅದೇನೋ ಅಚ್ಚು ಮೆಚ್ಚು. ತಾನೇನೊ ಗಹನವಾಗಿ ಮಾತನಾಡುವವರೆಂಬ ಹುಸಿ ಭ್ರಮೆ ಮನೆ ಮಾಡಿರಬಹುದೇನೊ? ಏಕೆಂದರೆ ಕೇಳಿಸಿಕೊಳ್ಳುವ ಎದುರಾಳಿಯ ಕಡೆ ಕಿಂಚಿತ್ತೂ ಗಮನವಿಲ್ಲದೆ ತಮ್ಮದೇ ಮಾತಿನ ದಾಟಿ ಮುಂದುವರಿಸಿಕೊಂಡು ಹೋಗುತ್ತಿರುತ್ತಾರೆ. ಇದು ಅವರ ಹುಟ್ಟು ಗುಣವಾದರೂ ಇದು ಎಷ್ಟು ಸರಿ? ವಯಸ್ಸಾಗುತ್ತ ಮನುಷ್ಯನಿಗೆ ತಿಳಿವಳಿಕೆ ಬಂದಂತೆ ನಮ್ಮ ಮಾತು ನಡೆಯಲ್ಲಿ ತಿದ್ದುಪಡಿ ಮಾಡಿಕೊಳ್ಳಬೇಕೆಂಬ ಪರಿಜ್ಞಾನವೂ ಇದ್ದಂತೆ ಕಾಣುವುದಿಲ್ಲ. ಆನೆ ನಡೆದಿದ್ದೇ ದಾರಿ ಅನ್ನುವಂತೆ ಅವರ ಮಾತು ಮುಂದುವರಿದಿರುತ್ತದೆ. ಮತ್ತಷ್ಟು ಓದು
ಬುದ್ಧಿಜೀವಿಗಳ ಐಡಿಯಾಲಜಿ ಹಾಗೂ ಭಾರತೀಯ ಸಾಧಕರ ಸಹಜತರ್ಕ
– ವಿನಾಯಕ ಹಂಪಿಹೊಳಿ
“ಕಡಲೆಯು ಬಡವರ ಗೋಡಂಬಿ” ಎಂಬ ಮಾತನ್ನು ನಾವೆಲ್ಲರೂ ಕೇಳಿರುತ್ತೇವೆ. ಇದರ ಅರ್ಥವೇನು ಎಂಬುದು ಏನೂ ಕಲಿಯದ ಮನುಷ್ಯನಿಗೂ ಬೇಗನೇ ಅರ್ಥವಾಗುತ್ತದೆ. ಈ ಮಾತನ್ನು ನಮ್ಮ ಅಜ್ಜನಿಗೋ, ಅಜ್ಜಿಗೋ ಹೇಳಿ, ಇದರ ಅರ್ಥವೇನು ಎಂದು ಕೇಳಿದರೆ ಅವರು ಏನು ಹೇಳಬಹುದು? “ಗೋಡಂಬಿಯಿಂದ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನವಿದೆಯೋ, ಆ ಪ್ರಯೋಜನವನ್ನು ಕಡಲೆಯಿಂದಲೂ ಪಡೆಯಬಹುದು; ಅದೂ ಕೂಡ ಕಡಿಮೆ ಖರ್ಚಿನಲ್ಲಿ.” ಎಂಬ ವಿವರಣೆ ಅವರಿಂದ ಬರಬಹುದು.
ಈಗ ನಾವು ನಮ್ಮ ಹಿರಿಯರ ಬಳಿ, “ಈ ಮಾತಿನಲ್ಲಿ ಬಹಳ ಗಹನ ಅರ್ಥವಿದೆ, ಇದು ಗೋಡಂಬಿಯ ಶ್ರೇಷ್ಠತೆಯನ್ನು ಧಿಕ್ಕರಿಸಿ, ಆಹಾರಗಳೆಲ್ಲವೂ ಸಮಾನ ಎಂಬುದನ್ನು ಸಾರುವ ಅರ್ಥವು ಇದರಲ್ಲಿ ಅಡಗಿದೆ” ಎಂದರೆ ಅವರಿಗೇನು ಅರ್ಥವಾಗಲು ಸಾಧ್ಯ? “ಏನೋಪ್ಪಾ! ಅಷ್ಟೆಲ್ಲ ಗೊತ್ತಿಲ್ಲ” ಎಂದು ನುಣುಚಿಕೊಳ್ಳುತ್ತಾರೆ. ಆಗ ನಮಗೆ “ನಮ್ಮ ಪೂರ್ವಜರಲ್ಲಿ ತಾರ್ಕಿಕ ಸಾಮರ್ಥ್ಯವೇ ಇರಲಿಲ್ಲ. ತರ್ಕಮಾಡಿ ವಿಚಾರಿಸುವ ಬುದ್ಧಿಯೇ ಇಲ್ಲದೇ ಮೌಢ್ಯದಲ್ಲಿ ಇದ್ದರು. ತರ್ಕಬದ್ಧವಾಗಿ ಯೋಚಿಸುವದನ್ನು ನಾವು ರೂಢಿಸಿಕೊಂಡು ಮೌಢ್ಯದಿಂದ ಹೊರಬರಬೇಕು.” ಎಂದೆಲ್ಲ ಭಾವಿಸುತ್ತೇವೆ. ಮತ್ತಷ್ಟು ಓದು