ವಿಷಯದ ವಿವರಗಳಿಗೆ ದಾಟಿರಿ
39

ನಿಲುಮೆಯ ನಿಲುವು

ಪ್ರೀತಿಯ ಗೆಳೆಯರೇ,

ನೂರು ಮತದ ಹೊಟ್ಟ ತೂರಿ
ಎಲ್ಲ ತತ್ವದ ಎಲ್ಲೆ ಮೀರಿ
ನಿರ್ದಿಗಂತವಾಗಿ ಏರಿ
ಓ ನನ್ನ ಚೇತನ ಆಗು ನೀ ಅನಿಕೇತನ…

ರಸ ಋಷಿ ಕುವೆಂಪು ಅವರ ಈ ನುಡಿಗಳೆ ನಮಗೆ ಸ್ಪೂರ್ತಿ.ಯಾವುದೇ ಜಾತಿ,ಮತ,ತತ್ವಗಳಿಗೆ ಗಂಟು ಬೀಳದೆ, ಎಡ-ಬಲ ಪಂಥೀಯರ ನಡುವೆ ಸಿಕ್ಕಿಕೊಳ್ಳದೆ,ಯಾವುದೇ ಮತ್ತು ಯಾರದೇ ಮರ್ಜಿಗೇ ಬೀಳದೆ ಅನ್ನಿಸಿದ್ದನ್ನು ನೇರವಾಗಿ ಹೇಳುವ ಆ ಮೂಲಕ ಯಾವ ಗುಂಪಿಗೂ ಸೇರದೆಯೆ ಸ್ವತಂತ್ರವಾಗಿ ಯೋಚಿಸುವ ಬಯಕೆ ನಮ್ಮದು. ಅಷ್ಟಕ್ಕೂ ’ಸತ್ಯ’ ಅನ್ನುವುದು ಎಡ-ಬಲ ಪಂಥದ ಆಸ್ತಿಯೇನು ಅಲ್ಲವಲ್ಲ.ಅದು ಈ ಇಬ್ಬರ ನಡುವೆಯು ಸಿಲುಕದೆ ತನ್ನ ಪಾಡಿಗದು ಯಾವುದೋ ಮೂಲೆಯಲ್ಲಿ ನಿರ್ಲಿಪ್ತವಾಗಿರುತ್ತದೆ.ಅದನ್ನ ಹುಡುಕುವ ಮುಗ್ಧ ಆಸೆ ನಮ್ಮದು.ನೊಂದ ಜೀವಗಳಿಗೆ ದನಿಯಾಗುವ ಬಯಕೆ ನಮ್ಮದು.

ಇಲ್ಲಿ ಒಂದಿಷ್ಟು ಹಾಸ್ಯ,ಹತಾಶೆ,ನೋವು,ಸಿಟ್ಟು,ಸೆಡವು,ಪ್ರಚಲಿತ ವಿದ್ಯಮಾನಗಳು,ಕಥೆ-ವ್ಯಥೆಗಳು,ಇತಿಹಾಸ, ದೇಶ, ಭಾಷೆ,ಧರ್ಮ,ಸಿನೆಮ,ಪುಸ್ತಕ ಪರಿಚಯ ಎಲ್ಲ ಸಿಗುತ್ತದೆ.

ನಮ್ಮ ನಮ್ಮ ಅಭಿಪ್ರಾಯಗಳನ್ನು ಒಂದೇ ವೇದಿಕೆಯಲ್ಲಿ ಹಂಚಿಕೊಳ್ಳಬೇಕೆಂಬ ಆಶಯವೆ ಈ ನಿಲುಮೆ.ನಿಲುಮೆಯೊಳಗೆ ಒಂದು ಸುತ್ತು ಹೊಡೆದು ಬನ್ನಿ,ನಿಮ್ಮ ಅಭಿಪ್ರಾಯ ತಿಳಿಸಿ.ಸಾಧ್ಯವಾದಲ್ಲಿ ನಿಮ್ಮ ಒಂದು ಲೇಖನ ಯಾ ಕವನಗಳನ್ನು ನಮಗೆ ಕಳುಹಿಸಿದರೆ ನಮ್ಮ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹವೂ ಸೇರಿದಂತಾಗುತ್ತದೆ. ನಿಮ್ಮ ಲೇಖನಗಳನ್ನು nilume@sify.com  ಅಥವಾ

baraha@nilume.netಇ-ಮೇಲ್ ವಿಳಾಸಕ್ಕೆ ಕಳುಹಿಸಿ.ಹನಿಹನಿ ಸೇರಿದರೆ ಹಳ್ಳ- ತೆನೆತೆನೆಗೂಡಿದರೆ ಬಳ್ಳ ಅನ್ನೋ ಮಾತಿದೆಯಲ್ಲ ಹಾಗೆಯೇ,

‘ನಿಲುಮೆ’ಯನ್ನ ಕನ್ನಡ ಸಾಹಿತ್ಯ ಪ್ರಪಂಚದ ಮನೆ ಮಾತಾಗಿಸುವ ಬನ್ನಿ.ಈ ನಿಲುಮೆ ಬರಿ ನಮ್ಮದಲ್ಲ ಇದು ನಿಮ್ಮದು,ಪ್ರತಿಯೊಬ್ಬ ಕನ್ನಡಿಗನದು.

ನಿಮ್ಮ ಅಭಿಪ್ರಾಯಗಳು ಕನ್ನಡದಲ್ಲಿದ್ದರೆ ಚೆನ್ನ.ಸುಲಭವಾಗಿ ಕನ್ನಡದಲ್ಲಿ ಬರೆಯಲು ಇಲ್ಲಿ ಕ್ಲಿಕ್ಕಿಸಿ.

ನಿಮ್ಮೊಲುಮೆಯ
ನಿಲುಮೆ


(ಲೇಖನದ ಅಭಿಪ್ರಾಯಗಳು ಮತ್ತು ಪ್ರತಿಕ್ರಿಯೆಗಳು ಆಯಾ ಲೇಖಕರಿಗೆ ಮತ್ತು ಕಮೆಂಟುದಾರರಿಗೆ ಸಂಬಂದಿಸಿದ್ದು.’ನಿಲುಮೆ’ ನಿರ್ವಹಣೆ ತಂಡ ಜವಾಬ್ದಾರರಾಗಿರುವುದಿಲ್ಲ)

39 ಟಿಪ್ಪಣಿಗಳು Post a comment
  1. Prathibha Kudthadka
    ಆಕ್ಟೋ 28 2010

    good… all the best…..

    ಉತ್ತರ
  2. ಆಕ್ಟೋ 28 2010

    ಧನ್ಯವಾದಗಳು ಮೇಡಮ್

    ಉತ್ತರ
  3. kv
    ಜನ 10 2011

    good effort.. best wishes for nilume team… lay out innu chennagi madbahuditthu… innastu olleya article prakatisi..

    ಉತ್ತರ
    • ಜನ 10 2011

      ನಿಮ್ಮ ಸಲಹೆಯ ಬಗ್ಗೆ ಖಂಡಿತ ಗಮನಹರಿಸುತ್ತೇವೆ.
      ಧನ್ಯವಾದಗಳು,

      ನಿಮ್ಮೊಲುಮೆಯ,
      ನಿಲುಮೆ

      ಉತ್ತರ
  4. Karthik
    ಜನ 11 2011

    Thumba chennagide nimma uddhesha nilume beleyali……..

    ಉತ್ತರ
  5. ಫೆಬ್ರ 1 2011

    ಪ್ರಯತ್ನ ಎಂಬ ಕಡಲಲ್ಲಿ ಗುರಿಯ ಬೆಂಬತ್ತಿ ಈಜಿದರೆ…..ನಿಲುಮೆ ತಾಣದ ಆಳದ ಮಹಿಮೆ ಜಗತ್ತಿಗೇ ತಿಳಿಯುವುದು…
    ಒಳ್ಳೆಯ ಪ್ರಯತ್ನ..
    ಶುಭವಾಗಲಿ…

    ಉತ್ತರ
  6. Arjun
    ಫೆಬ್ರ 18 2011

    ನಿಮ್ಮ ಅಂಕಣಗಳು ತುಂಬಾ ಚೆನ್ನಾಗಿದೆ. ಮುಂದುವರೆಸಿ, ನಿಮ್ಮಿಂದ ಪ್ರೆರಿತರಾಗಿದ್ದೇವೆ

    ಉತ್ತರ
  7. ಫೆಬ್ರ 22 2011

    ನಿಲುಮೆ 20 ಸಾವಿರ ಹಿಟ್ಸ್ ದಾಟಿದೆ; ಕಂಗ್ರಾಟ್ಸ್

    ಉತ್ತರ
  8. Vinod Phadke
    ಮಾರ್ಚ್ 8 2011

    ನಿಲುಮೆಯನ್ನು ಪ್ರಥಮ ಬಾರಿಗೆ ನೋಡಿದೆ/ಓದಿದೆ. ತುಂಬಾ ಚೆನ್ನಾಗಿದೆ. ನಿಮಗೆ ಅಭಿನಂದನೆಗಳು.

    ಉತ್ತರ
    • ಮಾರ್ಚ್ 13 2011

      ಮೆಚ್ಚಿ ಪ್ರತಿಕ್ರಿಯಿಸಿದ ಕಾರ್ತಿಕ್,ಲೋಕು,ಅರ್ಜುನ್,ಚುಕ್ಕಿ ಚಂದಿರ ಮತ್ತು ವಿನೋದ್ ಪಡ್ಕೆ ಅವರಿಗೆ ವಂದನೆಗಳು
      ಪ್ರೋತ್ಸಾಹ ಹೀಗೆ ಇರಲಿ 🙂

      ನಿಮ್ಮೊಲುಮೆಯ,
      ನಿಲುಮೆ

      ಉತ್ತರ
  9. ಕನ್ನಡ ವೆಬ್ ಸೈಟ್ ನೀಡಿದ್ದಕ್ಕೆ ಧನ್ಯವಾದಗಳು!!

    ಉತ್ತರ
  10. mudradi surendra
    ಮೇ 12 2011

    ನಿಲುಮೆಯ ಲೋಕಕ್ಕೆ ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು.

    ಉತ್ತರ
  11. anand prasad
    ಮೇ 27 2011

    ಉತ್ತಮ ಪ್ರಯತ್ನ. ಶುಭವಾಗಲಿ.

    ಉತ್ತರ
  12. ravins
    ಜೂನ್ 19 2011

    ತುಂಬಾ ಖುಷಿಯಾಗ್ತಿದೆ.. ಒಳ್ಳೆಯ ಪ್ರಯತ್ನ…

    ಉತ್ತರ
  13. ದೊಡ್ಡಿಪಾಳ್ಯ ನರಸಿಂಹಮೂರ್ತಿ.
    ಆಗಸ್ಟ್ 7 2011

    ಆಗು ನೀ ಅನಿಕೇತನ….. ನಮ್ಮೆಲ್ಲರಿಗೂ ಸ್ಪೂರ್ತಿಯಾಗಲಿ. ಧನ್ಯವಾದಗಳು.
    —- dmnmurthy@gmail.com

    ಉತ್ತರ
  14. ಆಕ್ಟೋ 29 2011

    Nimma website darushana ivattu aayithu. Chennagide odalu.
    All the best
    Umesh Nagasandra
    Vice President,
    Adelaide kannada Sangh Inc
    Australia

    ಉತ್ತರ
  15. suchupachu
    ಡಿಸೆ 15 2011

    ಕಾದಂಬರಿ ಲೋಕ ಇಲ್ಲಿದೆ ನೋಡಿ ಓದಿ ಆನಂದಿಸಿ ಅಂತ ಇದಿಯಲ್ಲ… ಅದುನ್ನ ನೀವು ಸೆಪ್ಟೆಂಬರ್ ನಲ್ಲಿ ಅಪ್ಡೇಟ್ ಮಾಡಿದ್ದು ಮತ್ತೆ ಮಾಡಿಲ್ಲ ಮತ್ತೆ ಅಪ್ಡೇಟ್ ಮಾಡ್ತಿರಾ….ಕಾದಂಬರಿ ತುಂಬ ಚೆನ್ನಾಗಿದೆ ಎಲ್ಲವು……

    ಉತ್ತರ
  16. krishna
    ಡಿಸೆ 30 2011

    ಅರೆ,ಇದೆನು ನಮ್ಮ ಕನ್ನದ ಅಕ್ಷರಗಳನು ಇಲ್ಲಿ ಬರೆಯಬಹುದು ಇದು ನಿಜವಾಗಿಯು ಸುಂದರ ಮತ್ತು ಅದ್ಬುತ ತ್ಯಾಂಕ್ಸ್ ಟು ಸ್ಲೇಟು

    ಉತ್ತರ
  17. Sangamesh P H
    ಜನ 20 2012

    ನಿಮ್ಮ ವೆಬ್ ಸೈಟ್ ನೋಡಿ ತುಂಬಾ ಖುಷಿಯಾಯಿತು. ಕನ್ನಡಕ್ಕಾಗಿ ನೀವು ಮಾಡ್ತಾ ಇರುವ ಸೇವೆಗೆ ನನ್ನ ಹೆಗಲನ್ನು ಕೊಡ್ತೇನೆ.
    ಶುಭವಾಗಲಿ.

    ಉತ್ತರ
  18. ಮಾರ್ಚ್ 17 2012

    good powerfull

    ಉತ್ತರ
  19. ಮಾರ್ಚ್ 19 2012

    ನಿಲುಮೆಯ ಪ್ರಯತ್ನಕ್ಕೆ ಹಾರ್ಧಿಕ ಅಭಿನಂದನೆಗಳು! ಆದರೆ, ವೆಬ್ ಸೈಟ್ ನ ವಿನ್ಯಾಸ ಇನ್ನಷ್ಟು ಉತ್ತಮಗೊಳಿಸುವ ಕಡೆ ಗಮನ ಹರಿಸಬೇಕಾದ ಅಗತ್ಯತೆ ಇದೆ ಅನ್ನಿಸುತ್ತಿದೆ. ನಿಮ್ಮ ಡೆವಲಪರ್ WordPressನಲ್ಲಿ Traction theme ಮಾತ್ರ ಇನ್ಸ್ಟಾಲ್ ಮಾಡಿ ಕೈ ತೊಳೆದುಬಿಟ್ಟಿದ್ದಾರೇನೋ?

    ನನ್ನ ವೈಯಕ್ತಿಕ ಸಲಹೆ:
    ನೀವು http://janathe.com ವೆಬ್ ಸೈಟ್ ಒಂದು ಸಲ ನೋಡಲೇಬೇಕು ಅಥವಾ ಅದರ ಡೆವಲಪರ್ ಜತೆ ಮಾತನಾಡಲೇಬೇಕು. ಖಂಡಿತಾ ನಿಮ್ಮ http://nilume.net ಅನ್ನು ಇನ್ನೂ ಉತ್ತಮವಾಗಿ ಅಭಿವೃದ್ಧಿಪಡಿಸಬಹುದು.

    ಉತ್ತರ
  20. ಏಪ್ರಿಲ್ 15 2012

    @ ನಿಲುಮೆ : ನಿಮ್ಮಲ್ಲಿ ಯಾವುದೇ ಗುಪ್ತ ಕಾರ್ಯಸೂಚಿಗಳು ಇರಲಿ ಬಿಡಲಿ, ಮೇಲೇ ವಿವರಿಸಿದ ನಿಲುವುಗಳಂತೂ ಒಪ್ಪುವಂತಿವೆ. 🙂 ನಿಮ್ಮೀ ಪ್ರಯತ್ನ ಈವರೆಗೂ ಅಭಿನಂದನಾರ್ಹವಾಗಿಯೇ ಇದೆ. 🙂

    ಆದರೆ ತಾವು ತಮ್ಮ ನಿಲುವುಗಳನ್ನು ಮತ್ತಷ್ಟು ಸ್ಪಷ್ಟಪಡಿಸುವ ಅಗತ್ಯ ‘ಅಭಿಗಾರ’ ಸರಣಿಯ ಇತ್ತೀಚಿನ ಲೇಖನಗಳಿಂದ ಎದುರಾಗಿದೆ. ತಾವು ದಯಮಾಡಿ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸುವಿರೆಂದು ಭಾವಿಸಿದ್ದೇನೆ.

    ೧) ನಿಮ್ಮಲ್ಲಿ ಯಾರು ಯಾವ ಲೇಖನವನ್ನು ಹೇಗೆ ಬರೆದು ಕಳಿಸಿದರೂ ಹಾಕುತ್ತೀರೇನು? ಪ್ರಕಟಣೆಗೆ ಲೇಖನ ಯೋಗ್ಯವೋ ಅಲ್ಲವೋ, ಸರಣಿ ಮುಂದುವರಿಕೆಗೆ ಲೇಖಕ ಯೋಗ್ಯನೋ ಅಲ್ಲವೋ ಎಂದು ನಿರ್ಧರಿಸುವ ಯಾವ ಮಾನದಂಡಗಳೂ ನಿಮ್ಮಲ್ಲಿ ಇರುವುದಿಲ್ಲವೇ?

    ೨) ‘ಲೇಖನಗಳಲ್ಲಿ ವ್ಯಕ್ತವಾದ ಅಭಿಪ್ರಾಯಗಳಿಗೆ ಆಯಾ ಲೇಖಕರೇ ಹೊಣೆ’ ಎಂದರೇನೋ ಸರಿ, ಆದರೆ ಲೇಖನಗಳ ಮತ್ತು ಅವುಗಳಲ್ಲಿನ ಭಾಷೆಯ ಗುಣಮಟ್ಟದ ಕುರಿತೂ ನಿಲುಮೆ ತಂಡಕ್ಕೆ ಬದ್ಧತೆ-ಜವಾಬ್ದಾರಿ ಇರುವುದಿಲ್ಲವೇ?

    ೩) ‘ಅಂತರ್ಜಾಲ-ಅನಾಮಿಕತ್ವ’ದ ಬಗ್ಗೆ, ಮತ್ತು ಓದುಗರ ಬಗ್ಗೆ ‘ನಿಲುಮೆ’ ತಂಡಕ್ಕೆ ಗೌರವವಿರುವುದಿಲ್ಲವೇ? ಇರುವುದಿಲ್ಲವೆಂದಾದರೆ ತಂಡದ ಸದಸ್ಯರು ತಮ್ಮ ತಮ್ಮ ಇತ್ಯೋಪರಿಗಳನ್ನೂ ಬಹಿರಂಗಪಡಿಸುವಿರೇ?

    ವೇದಿಕೆಯೊದಗಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು. 🙂

    ಉತ್ತರ
    • ಏಪ್ರಿಲ್ 15 2012

      ಓದುಗರೇ,

      ನಿಲುಮೆ ತನ್ನ ನಿಲುವಿಗೆ ಇದುವರೆಗೂ ಮತ್ತು ಮುಂದಕ್ಕೂ ಬದ್ಧವಾಗಿಯೇ ಇರುತ್ತದೆ.ನಿಲುಮೆ ತಂಡದ ಎಲ್ಲರೂ ತಮ್ಮ ಕೆಲಸ-ಕಾರ್ಯಗಳ ನಡುವೆ ನಿಲುಮೆಯನ್ನ ನಿರ್ವಹಿಸುವುದರಿಂದ ಕೆಲವೊಮ್ಮೆ ನಮ್ಮ ಕಣ್ತಪ್ಪಿ ಇಂತ ಪ್ರಮಾದಗಳು ಆಗುತ್ತವೆ.ಹಾಗಂತ ನಾವು ಅದನ್ನೇ ಮುಂದಿಟ್ಟುಕೊಂಡು ಎಲ್ಲ ತಪ್ಪುಗಳಿಗೂ ಸಮಜಾಯಿಷಿ ನೀಡಿ ತಪ್ಪಿಸಿಕೊಳ್ಳಲು ಬಯಸುವುದಿಲ್ಲ. ’ಅಭಿಗಾರ’ ಸರಣಿಯ ಈ ಬಾರಿಯ ಲೇಖನದ ಬಗ್ಗೆ ನಮ್ಮ ನಿಲುವೇನು ಅನ್ನುವುದು ಲೇಖಕರಿಗೆ ತಿಳಿಸಲಾಗಿದೆ.ಇನ್ನು ಮುಂದೆ ಇಂತ ’ಧಾಟಿ’ಯ ಲೇಖನಗಳು ಪ್ರಕಟವಾಗುವುದಿಲ್ಲ.

      ಇನ್ನ ನಿಲುಮೆಯಲ್ಲಿ ಯಾರ್ಯಾರು ಇದ್ದಾರೆ ಅನ್ನುವ ಪ್ರಶ್ನೆಗೆ ಉತ್ತರವಾಗಿ “ನಾವ್ಯಾರು?” ಅನ್ನುವುದರಲ್ಲೇ ನಾವೇಕೆ ನಮ್ಮ ಹೆಸರನ್ನ ಹೇಳಿಕೊಳ್ಳಲು ಬಯಸುವುದಿಲ್ಲ ಅಂತ ಹೇಳಿದ್ದೇವೆ.

      “ನಿಲುಮೆ ತಂಡದಲ್ಲಿ ಯಾರು ಯಾರು ಇದ್ದಾರೆ ಅನ್ನುವುದು ಬಹಳಷ್ಟು ಜನರಿಗೆ ಗೊತ್ತಿರಬಹುದು, ಗೊತ್ತಿಲ್ಲದೆಯೂ ಇರಬಹುದು. ಯಾವುದೇ ಹಿಡನ್ ಅಜೆಂಡಾವನ್ನೇನು ಇಟ್ಟುಕೊಂಡು ಮುಖ ಮುಚ್ಚಿಕುಳಿತಿರುವವರು ನಾವಲ್ಲ. ಅಷ್ಟಕ್ಕೂ ನಿಲುಮೆ ನಡೆಯುತ್ತಿರುವುದು ಕೇವಲ ನಮ್ಮಿಂದ ಅಲ್ಲ, ಅದಕ್ಕೆ ಕಾರಣ ನಮ್ಮ ಲೇಖಕರ ಬಳಗ ಮತ್ತು ಓದುಗ ಮಿತ್ರರು. ಇವರೇ ಮುಖ್ಯವಾದಾಗ ನಾವು ನಮ್ಮ ಹೆಸರು ಹೇಳಿಕೊಂಡು ಓಡಾಡುವುದು ತೋರಿಕೆಯಾಗಬಹುದು ಅನ್ನುವ ಕಾರಣಕ್ಕಾಗಿ ಮಾತ್ರ. ನಾವು ಮಾಡುತ್ತಿರುವ ಚಿಕ್ಕ ಕೆಲಸಕ್ಕೆ ದೊಡ್ಡ ಪ್ರಚಾರ ಬೇಡ ಎಂಬ ಕಾರಣಕ್ಕಾಗಿಯಷ್ಟೆ… ”

      ನಿಮ್ಮೊಲುಮೆಯ,
      ನಿಲುಮೆ

      ಉತ್ತರ
      • ಏಪ್ರಿಲ್ 21 2012

        ಪ್ರಿಯ ನಿಲುಮೆ,
        ಹಿಂದಿನಿಂದಲೂ ಇದರಲ್ಲಿ ಬರುತ್ತಿದ್ದ ಚೆನ್ನು ಚೆನ್ನಾದ ಲೇಖನಗಳನ್ನು ಓದುತ್ತಾ ಪ್ರಭಾವಿತನಾದವನು ನಾನು.
        🙂
        ಈಗೀಗ ಬಹುಶಃ comment ಹಾಕುವಾಗಿನ ಭಾಶೆಯಮೇಲೂ ‘ನಿಲುಮೆ ತಂಡ’ ಕತ್ತರಿ ಪ್ರಯೋಗ ಮಾಡಿದರೆ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಕೆಟ್ಟ ಪ್ರಭಾವ ಆಗದೆಂದು ಭಾವಿಸುತ್ತೇನೆ. (ದನಾನ್ ಬೇಕಿದ್ರೆ ತಿಂದ್ಕೊಳ್ಳಿ ಲೇಖನ)

        ಮುಂದೆಯೂ ನಿಮ್ಮಲ್ಲಿ ಒಳ್ಳೊಳ್ಳೆ ಲೇಖನಗಳು ಬರುತ್ತಿರಲಿ ಎಂಬುದೇ ಆಶಯ.

        ಉತ್ತರ
        • ಏಪ್ರಿಲ್ 22 2012

          ಪ್ರತಿಕ್ರಿಯೆಗಳನ್ನ ಮಾಡರೇಟ್ ಮಾಡುವ ಮನಸ್ಸು ನಮಗಿಲ್ಲ.ವಾಕ್ ಸ್ವಾತಂತ್ರ್ಯದ ಬಗ್ಗೆ ಭಾಷಣ ಬಿಗಿದು ಹಾಗೆ ಮಾಡುವುದು ಸರಿಯೂ ಆಗಲಿಕ್ಕಿಲ್ಲ ಅನ್ನುವ ಕಾರಣಕ್ಕಾಗಿ.ಎಲ್ಲೋ ಇಬ್ಬರು-ಮೂವರು ಕೊಟ್ಟ ಸ್ವಾತಂತ್ರ್ಯವನ್ನ ಸ್ವೇಚ್ಚೇಯಾಗಿ ಬಳಸಿಕೊಂಡಾಗ ಬೇಸರವಾಗುತ್ತದೆ.

          ಪ್ರತಿನಿತ್ಯ ಬರುವ ಕಮೆಂಟುಗಳನ್ನ ನೋಡುತ್ತ ಕೂರುವುದು ತ್ರಾಸದಾಯಕ.ಓದುಗರು ನಮ್ಮ ಗಮನಕ್ಕೆ ತಂದರೆ ಅಂತ ಕಮೆಂಟುಗಳನ್ನ ಅಳಿಸಿ ಹಾಕುತ್ತೇವೆ. ಮತ್ತು ಪ್ರತಿಕ್ರಿಯಿಸುವವರು ಅದೇ ರೀತಿ ಅಶ್ಲೀಲ ಭಾಷೆಯಲ್ಲಿ ಮುಂದುವರೆದರೆ ಅಂತವರ ಕಮೆಂಟುಗಳಿಗೆ ಸೀದಾ ಕಸದ ಬುಟ್ಟಿಯ ಹಾದಿ ತೋರುತ್ತೇವೆ.

          ವಿದ್ಯಾವಂತರಾದವರೇ ಹೀಗೆ ಬೀದಿ ಜಗಳಕ್ಕೆ ನಿಂತಂತೆ ಪ್ರತಿಕ್ರಿಯುಸುವುದೂ ನೋಡಿದರೆ ಇವರೆಲ್ಲ ಓದಿಕೊಂಡವರ ಅನ್ನಿಸುತ್ತದೆ

          ಉತ್ತರ
  21. ಏಪ್ರಿಲ್ 25 2012

    ಕಮೆಂಟುಗಳನ್ನು ಬರೆಯುವ ವ್ಯಕ್ತಿಗಳ ‘ಭಾಷೆ’ಗೆ ಇತಿ-ಮಿತಿಯನ್ನು ನಿಗದಿಪಡಿಸಲು ಅಸಾಧ್ಯವಾದ ಸಂಗತಿ. ಅವುಗಳನ್ನು ಕೂಲಂಕುಶವಾಗಿ ಪರಿಶೀಲಿಸಲು ಕಷ್ಟಸಾಧ್ಯವಾದರೂ, ಕನಿಷ್ಟ ಕಣ್ಣಾಡಿಸಿದರೂ, ಬರವಣಿಗೆಯ ಸ್ವಾಸ್ಥ್ಯ ಕಾಯ್ದುಕೊಳ್ಳಬಹುದಲ್ಲದೇ, ಇತರ ಸಂಭಾವಿತ ಓದುಗರಿಗೆ ಆಗುವ ಕಿರಿಕಿರಿಯನ್ನು ಸ್ವಲ್ಪ ಮಟ್ಟಿಗಾದರೂ ತಪ್ಪಿಸಬಹುದು.. ಇದರ ಬಗ್ಗೆ ನಿಲುಮೆ ತಂಡ ಚಿಂತನೆ ನಡೆಸಬೇಕಾಗಿದೆ..?

    ಉತ್ತರ
  22. Dinesh
    ಆಗಸ್ಟ್ 13 2012

    ನಿಲುಮೆಯಲ್ಲಿ ಬರುವ ಎಲ್ಲ ಕವನಗಳು ತುಂಬ ಚೆನ್ನಾಗಿದೆ
    ಕನ್ನಡ ಭಾಷೆ ಬೆಳೆಸಿ ಉಳಿಸಲು ಇದು ತುಂಬ ಸಹಾಯಕ.
    ನಿಮ್ಮೆಲ್ಲರ ಪ್ರೆಥಿಯ ಗೆಳೆಯ
    ದಿನೇಶ್ ಉಡುಪಿ

    ಉತ್ತರ
  23. ಸೆಪ್ಟೆಂ 13 2013

    ನಿಮ್ಮ ಈ ನಿಲುಮೆ ದರ್ಶನ ಈಗ ತಾನೇ ಆಯಿತು ಲೇಖನಗಳು ಹಾಗೂ ಉದ್ಯೋಗ ಮಾಹಿತಿಯ ಬಗ್ಗೆ ಚೆನ್ನಾಗಿದೆ. ಕನ್ನಡ ಆಸಕ್ತರಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಆದರೆ ಉದ್ಯೋಗಗಳು ಕೇವಲ ಬೆಂಗಳೂರು ಸಿಟಿಯಲ್ಲಿ ಮಾತ್ರ ಇವೆ. ಬೆಳಗಾವಿ, ಬಿಜಾಪೂರ, ಬಳ್ಳಾರಿ, ಹೀಗೆ ಇನ್ನಿತರ ನಗರಗಳಲ್ಲಿಯೂ ಇರುವ ುದ್ಯೋಗದ ಬಗ್ಗೆ ಮಾಹಿತಿ ಕೊಡಬೇಕೆಂದು ತಮ್ಮಲ್ಲಿ ನನ್ನ ಒಂದು ವಿನಂತಿ.

    ಉತ್ತರ
  24. anjaneya reddy sm
    ನವೆಂ 18 2014

    “ನಿಲುಮೆ ಈ ನಾಡಿನ ಧ್ವನಿ” ಆಗಬೇಕು

    ಉತ್ತರ
  25. ಏಪ್ರಿಲ್ 24 2015

    ಭಾವನೆಗಳ ಸ್ಪಂದನೆಗೆ ಹೇಳಿಮಾಡಿಸಿದಂತಹ ವೇದಿಕೆ ಈ ನಿಮ್ಮ ನಿಲುಮೆ. ನಿಜವಾಗಿಯೂ ಮೆಚ್ಚಬೇಕಾದ್ದೆ, ನಮ್ಮ ಮಾತ್ರಬಷೆಯಲ್ಲಿ ನಮ್ಮ ಅನಿಸಿಕೆಗಳು, ” ಕೇಳುವುದಕ್ಕೆ ಹಿತವಾಗಿದೆ”

    ಉತ್ತರ
  26. Suraj B Hegde
    ಜೂನ್ 22 2015

    ಉತ್ತರ ಪ್ರತ್ಯುತ್ತರಗಳು ಸೇರಿ ಜಂಗಮವಾಣಿಯಲ್ಲಿ (mobile view / mobile version) ಓದುವಾಗ ಕ್ರಮವಾಗಿ ಒಂದು-ಎರಡು-ಮೂರನೆಯ ಅನಿಸಿಕೆಗಳು ಮಾತ್ರ ಕಾಣಿಸುತ್ತವೆ…! ತದನಂತರದ ಪ್ರತ್ಯುತ್ತರಗಳು ಮತ್ತು ಅನಿಸಿಕೆಗಳು (successive comments after third reply / comments) ಅಗೋಚರವಾಗಿವೆ…!
    ಹೇಗಾದರೂ ಮಾಡಿ ಎಲ್ಲಾ ಅನಿಸಿಕೆಗಳು ಜಂಗಮವಾಣಿಯಲ್ಲಿ ಓದುವಾಗ ಕೂಡ ಗೋಚರವಾಗುವಂತೆ ಮಾಡಬೇಕೆಂದು ವಿನಂತಿಸಿಕೊಳ್ಳುತ್ತೇನೆ…!!!

    ಅದು ಸಾಧ್ಯವಾಗದಿದ್ದಲ್ಲಿ ಈ-ಮಿಂಚೆಯ ಮೂಲಕ ಓದುಗರ ಅನಿಸಿಕೆಯನ್ನು ಕಳುಹಿಸುವಾಗ ದಯವಿಟ್ಟು *ಕನ್ನಡ*ದಲ್ಲೇ ಕಳಿಸಿ… (ಈ-ಮಿಂಚೆಯಲ್ಲಿ ಬರುತ್ತಿರುವ ಸಾರಾಂಶ / ಹೊಸ ಅನಿಸಿಕೆಗಳು / ಪ್ರತ್ಯುತ್ತರಗಳು ಕನ್ನಡದ ಬದಲು “ಾಪಿಸಿಕೊಳ೔ ರೂಪದಲ್ಲಿ ಬರುತ್ತಿದ್ದು, ಅನಿಸಿಕೆಯ ಸಂಪರ್ಕ ಕೊಂಡಿಗೆ (linkಗೆ) ಹೋದಲ್ಲಿ ಹೊಸಾ ಪ್ರತ್ಯುತ್ತರಗಳು ಕಾಣಿಸುತ್ತಿಲ್ಲ…!)

    ದಯವಿಟ್ಟು ಈ ಸಮಸ್ಯೆಯನ್ನು ಶೀಘ್ರವಾಗಿ ‘ಜಂಗಮವಾಣಿಯಲ್ಲಿ ಓದುವಾಗ ಹೊಸ ಪ್ರತ್ಯುತ್ತರಗಳು ಕಾಣುವಂತೆ’ ಅಥವಾ ‘ಈ-ಮಿಂಚೆಯಲ್ಲಿ ಸಮರ್ಪಕವಾಗಿ *ಕನ್ನಡದಲ್ಲಿ* ಬರುವಂತೆ’ ಮಾಡುವ ಮೂಲಕ ಜಂಗಮವಾಣಿಯ ಮೂಲಕ ನೆಚ್ಚಿನ “ನಿಲುಮೆ ಓದುಗರಿಗೆ” ಸಹಾಯಮಾಡಬೇಕಾಗಿ ನಿಲುಮೆಯ ಸಂಪಾದಕರಲ್ಲಿ ಕಳಕಳಿಯ ವಿನಂತಿ…

    -ಸೂರಜ್ ಬಿ ಹೆಗಡೆ

    ಉತ್ತರ
  27. ವಿಶ್ವನಾಥ ಎಳಚಿತ್ತಾಯ
    ಸೆಪ್ಟೆಂ 16 2015

    ನಿಲುಮೆಯ ಈ ಪ್ರಯತ್ನಕ್ಕೆ ನನ್ನ ಚಿಕ್ಕದಾದ ಒಂದು ಅಂಕಣವನ್ನು ನಿಮ್ಮ email ವಿಳಾಸಕ್ಕೆ ಕಳುಹಿಸಿದ್ದೇನೆ. ಆ ಲೇಖನದ ಬಗ್ಗೆ ಅಭಿಪ್ರಾಯ ಮತ್ತು ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ.

    ಇತಿ ನಿಮ್ಮ ವಿಶ್ವಾಸಿ,
    ವಿಶ್ವನಾಥ

    ಉತ್ತರ
  28. Kartik Gowda
    ಆಕ್ಟೋ 16 2015

    How to display ads in Nilume website.. please catch me on above mentioned mail id

    ಉತ್ತರ
  29. Jayanth Hegde
    ಡಿಸೆ 23 2015

    ‘ಎಲ್ಲ ತತ್ವದ ಎಲ್ಲೆ ಮೀರಿ’ಗಿಂತ ‘ಎಲ್ಲ ತತ್ವಗಳ ಎಲ್ಲೆ ಮೀರಿ’ ಅನ್ನೋದು ಹೆಚ್ಚು ಸಮಂಜಸ ಅನ್ನೋದು ನನ್ನ ಭಾವನೆ. ನೀವೇನಂತೀರಿ ?

    ಉತ್ತರ
  30. ಜುಲೈ 29 2016

    ನಮಸ್ಕಾರ ಸರ್
    ನಿಲುಮೆಯಲ್ಲಿನ ಉಪುಯುಕ್ತ ಲೇಖನಗಳನ್ನು ಓದುಗರಿಗಾಗಿ ಲೇಖಕರ ಹೆಸರಿನೊಂದಿಗೆ ಸ್ಥಳೀಯ ದಿನಪತ್ರಿಕೆಗಳಲ್ಲಿ ಬಳಸಿಕೊಳ್ಳಬಹುದೆ.

    ಉತ್ತರ
  31. sukumar shetty
    ನವೆಂ 3 2016

    very nice

    ಉತ್ತರ
  32. Naveen kumar
    ಮೇ 21 2017

    ಸರಕಾರವೇನಾದರೂ ಬಂದು ಸ್ವರಾಜ್ಯ ತೆಗೆದುಕೊಳ್ಳಿ ಎಂದು ಹೇಳಿದರೆ ಧನ್ಯವಾದ ನಿಮಗೆ ಎನ್ನುವೆ. ಆದರೆ, ಸ್ವೀಕರಿಸುವುದಿಲ್ಲ. ಸ್ವರಾಜ್ಯ ಪಡೆಯುವುದು ನಮ್ಮ ಸಾಮರ್ಥ್ಯದಿಂದಲೇ ಹೊರತು ಬೇಡುವುದರಿಂದಲ್ಲ.
    -ಬಿಪಿನ್ ಚಂದ್ರಪಾಲ್

    ಇಂಥಹ ರಾಷ್ಟ್ರವಾದಿ ನಾಯಕ ಹೆಸರನ್ನು ಇಷ್ಟು ವರ್ಷ ನಮ್ಮನಾಳಿದ ಸರಕಾರ ಎಂದೂ ಪ್ರಚಾರ ಮಾಡಲಿಲ್ಲ, ಕೇವಲ ಹೋರಾಟದಲ್ಲಿ ನಾಮಕಾವಸ್ತೆಯಲ್ಲಿ ಭಾಗವಹಿಸಿ, ಶ್ರೀಮಂತಿಕೆಯನ್ನು ಅನುಭವಿಸಿಕೊಂಡು ಲಲನೆಯರೊಂದಿಗೆ ತಿರುಗುತ್ತಾ, ಮೋಹದಲ್ಲಿ ಒಳಗಾಗಿ ಭಾರತದ ವಿಭಜನೆಗೆ ಕಾರಣರಾದವರನ್ನು ಸ್ವಾತಂತ್ರ್ಯ ಹೋರಾಟಗಾರರೆಂದು ಬಿಂಬಿಸಿ ದೇಶದ ಅಧಿಕಾರ ಪಡೆದು ಹಲವು ಸಮಸ್ಯೆಗಳನ್ನು ಜೀವಂತವಾಗಿರಿಸಿ ದೇಶದ ಶಾಂತಿ ಇಲ್ಲವಾಗಿಸಿದ ನಾಯಕರನ್ನು ಪೂಜಿಸುವ ನಾವುಗಳು ಒಮ್ಮೆ ಸ್ವಾತಂತ್ರ ಹೋರಾಟದ ನೈಜ ಇತಿಹಾಸವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಅದು ನಮ್ಮ ಜವಾಬ್ದಾರಿ ಕೂಡ. ಇಲ್ಲದಿದ್ದರೆ ನಾವು ನಿಜವಾದ ಹೋರಾಟಗಾರರಿಗೆ ದ್ರೋಹ ಬಗೆದಂತೆ. ಇದಕ್ಕೆ ನೀವೆನಂತಿರಿ…?
    ಜೈಹಿಂದ್

    ಉತ್ತರ
  33. ಆಗಸ್ಟ್ 16 2017

    ಉತ್ತಮವಾದ ಲೇಖನ. ಇದರ ಮುಂದಿನ ಭಾಗಕ್ಕಾಗಿ ಕಾಯುತ್ತಿರುವೆ

    ಉತ್ತರ

ನಿಮ್ಮದೊಂದು ಉತ್ತರ Kartik Gowda ಗಾಗಿ ಪ್ರತ್ಯುತ್ತರವನ್ನು ರದ್ದುಮಾಡಿ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments