ವಿಷಯದ ವಿವರಗಳಿಗೆ ದಾಟಿರಿ

ನಿಲುಮೆ ರವರಿಂದ ಪ್ರಕಟಿತ

4
ಡಿಸೆ

ಸಂಸದರ ಸಮೇತ ಇಡೀ ಪಾರ್ಲಿಮೆಂಟನ್ನೇ ಮಾರಿದ ಭೂಪನೀತ!!

– ಸುಜಿತ್ ಕುಮಾರ್

imagesಪ್ರತಿಭೆ. ಎಲ್ಲೆಂದರಲ್ಲಿ ಎಲ್ಲರಿಗೂ ಸಿಗುವ ವಸ್ತುವಂತು ಇದು ಅಲ್ಲವೇ ಅಲ್ಲ. ಹುಟ್ಟುತ್ತಲೇ ಬರುವ ಪ್ರತಿಭೆಯನ್ನು ಹೇಗೆ ಪ್ರತಿಭೆಯೆಂದೆನ್ನಲಾಗದೋ ಹಾಗೆಯೇ ಕಷ್ಟ ಪಟ್ಟು ಗಿಟ್ಟಿಸಿಕೊಳ್ಳುವ ಪ್ರತಿಭೆಯನ್ನು ಪ್ರತಿಭೆಯೆಂದೆನ್ನಲಾಗದಿರದು! ಹಾಗೆ ಅದನ್ನು ಅದನ್ನು ಗಿಟ್ಟಿಸಿಕೊಳ್ಳಲು ಸವೆಸಬೇಕಾದ ಹಾದಿಯೂ ಸಹ ಬಲು ದುರ್ಘಮ. ಒಮ್ಮೆ ದೊರೆತರೆ ಮೇಲು-ಕೀಳು, ಬಡವ-ಬಲ್ಲಿದ, ಕಳ್ಳ ಕಾಕರ್ಯಾರನ್ನೂ ಸಹ ಅದು ಪರಿಗಣಿಸುವುದಿಲ್ಲ. ಕಾರ್ಯಗಳು ಒಳ್ಳೆವೋ, ಕೆಟ್ಟವೋ ಅಥವಾ ಉಪಯೋಗ ದುಷ್ಪಾರಿಣಾಮಗಳೇನೇ ಇದ್ದರೂ ಲೆಕ್ಕಿಸದೆ ಆಡಿಸುವವನ ಕೈಚಳಕದಲ್ಲಿ ಪ್ರತಿಭೆಯೂ ಕೂಡ ಆಡತೊಡಗುತ್ತದೆ. ವಿಶ್ವೇಶ್ವರೈಯ್ಯ, ಸತ್ಯಜಿತ್ ರೇ, ವಿರಾಟ್ ಕೊಹ್ಲಿ ಅಥವಾ ಧೀರೂಭಾಯಿ ಅಂಬಾನಿಯಂತಹ ಹಲವರೊಟ್ಟಿಗಿದ್ದ/ಇರುವ ವಿಭಿನ್ನ ಹಾಗು ವಿಶಿಷ್ಟ ಪ್ರತಿಭೆಯೇ ಅವರನ್ನು ಇಂದು ದೇಶದ ಇತಿಹಾಸದಲ್ಲಿ ದಂತಕತೆಗಳನ್ನಾಗಿ ಮಾಡಿದೆ. ಅಂತೆಯೇ ವೀರಪ್ಪನ್, ಸದ್ದಾಂ ಹುಸೇನ್, ಒಸಾಮಾ ಬಿನ್ ಲಾಡೆನ್ರಂತಹ ನರರಾಕ್ಷಸರ ಕೈಯ ಬೆಂಕಿಯ ಉಂಡೆಯಂತೆಯೂ ಅದು ಸಾವಿರಾರು ಜನರ ವಂಚನೆ ಹಾಗು ಮಾರಣಹೋಮದಲ್ಲಿ ಪರೋಕ್ಷವಾಗಿಯೂ ಸಹಕರಿಸಿದೆ! ಇಂತಹದ್ದೇ ಪ್ರತಿಭೆಯನ್ನು ಬೆಳೆಸಿಕೊಂಡು ಬಂದ ಹಲವರು ದೇಶದ ನಾನಾ ಜೈಲುಗಲ್ಲಿ ಬಂದಿಯಾಗಿ, ಶಿಕ್ಷೆಗಳೆಲ್ಲವನ್ನೂ ಅನುಭವಿಸಿದರೆ ಕೆಲವರು ಅಲ್ಲಿಯೇ ಕೊಳೆತು ಕೊನೆಯುಸುರೆಳೆದಿದ್ದಾರೆ. ಇನ್ನು ಕೆಲವರು ತಮ್ಮ ಕೊನೆಗಾಲದಲ್ಲಿ ಕುಂಟುತ್ತಾ ಕೊರಗುತ್ತಾ ಹೊರಬರುತ್ತಾರೆ ಮತ್ತೂ ಕೆಲವರು ಮಾತ್ರ ಒಂದಲ್ಲ, ಎರಡಲ್ಲ ಹತ್ತಾರು ಭಾರಿ ಅಂತಹ ಭಾರಿ ಜೈಲುಗಳಿಗೇ ಚಳ್ಳೆಹಣ್ಣನು ತಿನ್ನಿಸಿ ಹೊರ ಓಡಿರುವುದೂ ಉಂಟು. ಅಲ್ಲೂ ಇದ್ದ ಆ ಅಮೂಲ್ಯ ಅಂಶವೇ ಪ್ರತಿಭೆ! ಇಂತಹ ಪ್ರತಿಭೆಗಳ ಮಾಸ್ಟರ್ ಗೇಮ್ಗಳನ್ನು ನಾವು ಹಲವಾರು ಚಿತ್ರಗಳಲ್ಲಿ ಕಂಡು ಬೆರಗಾಗಿದ್ದೇವೆ. ಅಂತಹ ಪ್ರತಿಭೆಯುಳ್ಳವನು ಒಬ್ಬ ವಿಲನ್ ನಂತಾದರೂ ನೋಡುಗರನೇಕರಿಗೆ ಮಾತ್ರ ನಾಯಕಶ್ರೇಷ್ಠ! ಮತ್ತಷ್ಟು ಓದು »

27
ನವೆಂ

ನಮೋ “ಅರಿಹಂತಾಯ” : ವಿಕ್ಷಿಪ್ತ ಶಕ್ತಿಗಳ ಅಣ್ವಸ್ತ್ರ ಬೆದರಿಕೆಗೆ ಭಾರತದ ಸುರಕ್ಷಾ ಕವಚ.

– ಶ್ರೇಯಾಂಕ ಎಸ್ ರಾನಡೆ

arihant“ಅರಿಹಂತ” ಅಂದರೆ ಸಂಸ್ಕೃತ ಭಾಷೆಯಲ್ಲಿ “ಶತ್ರುಗಳ ವಿನಾಶಕ” ಎಂದರ್ಥ ( ಅರಿ=ಶತ್ರು. ಹಂತ = ವಿನಾಶಕ ). ‘ಐಎನ್‍ಎಸ್ ಅರಿಹಂತ್’ ಭಾರತದ ಮೊದಲ ಸ್ವದೇಶಿ ನಿರ್ಮಿತ ಅಣ್ವಸ್ತ್ರ ಜಲಾಂತರ್ಗಾಮಿ ನೌಕೆ. ನವೆಂಬರ್ 5 ಕ್ಕೆ ಅರಿಹಂತ ಹಿಂದೂ ಮಹಾಸಾಗರದಲ್ಲಿ ಸುಮಾರು 300 ಮೀಟರ್ ಆಳಕ್ಕೆ ಧುಮುಕಿ ಮೊದಲ ಹಂತದ ಗಸ್ತು ಪರೀಕ್ಷಣವನ್ನು ಯಶಸ್ವಿಯಾಗಿ ಪೂರೈಸಿದೆ. ಇದರ ಲೋಕಾರ್ಪಣೆಯೊಂದಿಗೆ ಭಾರತ ದೇಶ ಭೂ(ಪೃಥ್ವಿ, ಅಗ್ನಿ ಕ್ಷಿಪಣಿಗಳು), ವಾಯು ಹಾಗೂ ಜಲ ಹೀಗೆ ಮೂರೂ ಮಾಧ್ಯಮಗಳಲ್ಲಿಯೂ ನ್ಯೂಕ್ಲಿಯರ್ ಶಸ್ತ್ರ ಬಲವಿರುವ “ಅಣ್ವಸ್ತ್ರ ತ್ರಿವಳಿ” ಶಕ್ತಿಯಾಗಿದೆ. ರಷ್ಯ, ಅಮೆರಿಕ, ಫ್ರಾನ್ಸ್, ಇಂಗ್ಲೆಂಡ್, ಚೀನ ದೇಶಗಳನ್ನು ಹೊರತುಪಡಿಸಿ ಪರಮಾಣು ತಂತ್ರಜ್ಞಾನದ ಜಲಾಂತರ್ಗಾಮಿಯನ್ನು ಅಭಿವೃದ್ಧಿಪಡಿಸಿ ಬಳಸುತ್ತಿರುವ “ಅಣ್ವಸ್ತ್ರ ತ್ರಿವಳಿ” ಸಾಮಾರ್ಥ್ಯವಿರುವ ವಿಶ್ವದ ಆರನೇ ದೇಶ ಭಾರತ. ಏಷ್ಯಾದ ಖಂಡದ ಎರಡನೇ ದೇಶ. ಮತ್ತಷ್ಟು ಓದು »

25
ನವೆಂ

ಮನಸೇ..!

– ಸ್ನೇಹ

12ಬೇಕು ಬೇಡಗಳ ನಡುವಿನ ನಮ್ಮ ಜೀವನದ ಚಿಕ್ಕದೊಂದು ಒಳನೋಟವಿದು.

ಮನಸೇ ಹಾಗೆ ನಾವು ಎಷ್ಟೇ ಪ್ರಯತ್ನಿಸಿದರು ಅದನ್ನು ನಿಯಂತ್ರಿಸಲು ಅಸಾಧ್ಯ. ಯಾವುದು ಬೇಡವೋ ಅದನ್ನೇ ಬಯಸುತ್ತೆ, ನಿಜಕ್ಕೂ ನನ್ನನ್ನು ಕಾಡುವ ನಿರಂತರ ಪ್ರಶ್ನೆ ನೆಮ್ಮದಿಯ ಬದುಕು ಬೇಕಿರುವುದು ಮನಸ್ಸಿಗೋ ಅಥವಾ ನಮ್ಮ ಸುತ್ತಲಿನ ಸಮಾಜದ ಮೆಚ್ಚುಗೆಗೊ. ನಮ್ಮ ಜೀವನದಲ್ಲಿ ನಾವೆಷ್ಟು ಬಾರಿ ನಮಗಾಗಿ ಬದುಕುತ್ತೀವಿ ಎಂದು ಅರಿತರೆ ಜೀವನದ ನಿಜವಾದ ಅರ್ಥ ಬಹುಶಃ ತಿಳಿಯಬಹುದೇನೋ. ಬಾಲ್ಯದಿಂದ ಮುಪ್ಪಿನವರೆಗೆ ಯಾವುದೋ ಒಂದು ನಿರೀಕ್ಷೆಯಲ್ಲಿ ನಮ್ಮ ಜೀವನ ಸಾಗುತ್ತಿರುತ್ತದೆ. ಹಂತ ಹಂತವಾಗಿ ನಮ್ಮ ಅಭಿಪ್ರಾಯ ಬದಲಾಗುತ್ತ ಹೋಗುತ್ತದೆ. ಆದರೆ ಕಟುವಾದ ಸತ್ಯವೆಂದರೆ ಅದು ಯಾವುದು ನಮ್ಮ ಅಭಿಪ್ರಾಯವಾಗಿರುವುದಿಲ್ಲ.ನಾವು ನಮ್ಮ ಸುತ್ತಲಿನ ನೀರಿಕ್ಷೆಗಳಿಗೆ ನಮ್ಮನ್ನು ಹೊಂದಿಸಿಕೊಂಡು ಹೋಗುತ್ತಿರುತ್ತೇವೆಯೇ ಹೊರತು ನಮ್ಮ ಮನಸಿನ ಭಾವನೆಗಳೊಂದಿಗಲ್ಲ. ಮತ್ತಷ್ಟು ಓದು »

1
ನವೆಂ

#MeToo, ಒಂದೆರಡು ಪ್ರಶ್ನೆಗಳು from Me Too…!

– ಸುಜಿತ್ ಕುಮಾರ್

timthumbಸ್ಥಳ ವರ್ಲಿ, ಮುಂಬೈ. ಅದು ಕಡುಕಪ್ಪು ಕೋಟುಗಳು ಹಾಗು ಎಲ್ಲೆಂದರಲ್ಲಿ ಸೀಳಿಕೊಂಡು ಗಾಳಿಗೆ ಹಾರಾಡುತ್ತಿರುವ ಡ್ರೆಸ್ಸುಗಳೇ ತುಂಬಿ ತುಳುಕುತ್ತಿರುವ ಸ್ಟೇಡಿಯಂ. ಸೇರಿರುವರೆಲ್ಲ ಸಿನಿಮಾರಂಗದಲ್ಲಿ ಒಂದಿಲ್ಲೊಂದು ಬಗೆಯಲ್ಲಿ ಗುರುತಿಸಿಕೊಂಡಿರುವ ದೊಡ್ಡ ದೊಡ್ಡ ಹಸ್ತಿಗಳು. ಘಾಡ ಮೌನದ ಸೀರಿಯಸ್ನೆಸ್ ಅನ್ನು ಒಳಗೊಂಡ ಆ ಮುಖಗಳನ್ನು ಗಮನಿಸಿದಾಗ ಮುಂದಿದ್ದ ಸ್ಟೇಜಿನ ಮೇಲೆ ಇಂದು ತೀರಾ ಸಾಮನ್ಯವೆನಿಸಿಕೊಂಡಿರುವಂತೆ ಕೇಂದ್ರ ಸರ್ಕಾರಗಳ ನಡೆಯ ವಿರುದ್ಧವೋ, ದೇವಸ್ಥಾನಗಳಿಗೆ ಮಹಿಳೆಯ ಪ್ರವೇಶ ಬೇಕೆಂಬುದರ ಬಗ್ಗೆಯೂ ಅಥವಾ ಜೀವ ಪಣವಿಟ್ಟು ಕಾದಾಡುವ ಸೈನಿಕರ ನಡೆಗಳ ಬಗ್ಗೆಯೂ ಜನತೆಗೆ ಅರ್ಥವಾಗದ ದುಬಾರಿ ಭಾಷೆಯಲ್ಲಿ ಅವರವರೇ ಚರ್ಚಿಸಿ, ಮಧ್ಯದಲ್ಲಿ ಒಂದೆರೆಡು ಮದ್ಯಗಳನ್ನು ಏರಿಸಿ, ಕೊನೆಗೆ ತೂರಾಡುತ್ತಾ ಮನೆಗೆ ತೆರಳುವ ಹೈ ಪ್ರೊಫೈಲ್ ಪ್ರಗತಿಪರರ ಕಾರ್ಯಕ್ರಮವೇನೋ ಎಂದೆನಿಸುತ್ತಿತ್ತು. ಮತ್ತಷ್ಟು ಓದು »

31
ಆಕ್ಟೋ

ಪಟೇಲ್ ಎಂಬ ಉಕ್ಕಿನ ಪುರುಷ, ಸ್ವತಂತ್ರ ಭಾರತದ ಐಕ್ಯತೆಯ ಪ್ರತೀಕ.

– ಶ್ರೇಯಾಂಕ ಎಸ್ ರಾನಡೆ.

sardar_patel-statue_of_unity-kVtG--621x414@LiveMint“ಪ್ರಾಚೀನ ಭಾರತ ಅನೇಕ ವರ್ಷಗಳ ಕಾಲ ಬ್ರಿಟಿಷರ ಗುಲಾಮಗಿರಿಯಲ್ಲಿತ್ತು ಎಂಬುದು ಅತ್ಯಂತ ತಲೆತಗ್ಗಿಸುವ ವಿಚಾರ. ಆದರೆ ಈಗ ಸ್ವಾತಂತ್ರ್ಯ ಲಭಿಸಿದೆ. ಎಲ್ಲಾ ಭಾರತೀಯರ ಕರ್ತವ್ಯವೆಂದರೆ ಸ್ವತಂತ್ರ ಭಾರತ ಮತ್ತೊಮ್ಮೆ ಗುಲಾಮವಾಗದಂತೆ ನೋಡಿಕೊಳ್ಳಬೇಕು. ಏನಿದ್ದರೂ ಅದು ಮುಂದೆ ಸಾಗಬೇಕು, ಹಿನ್ನಡೆಯಬಾರದು ಆಗಲೇ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಒದಗುತ್ತದೆ.”- ಸರ್ದಾರ್ ವಲ್ಲಭಭಾಯಿ ಪಟೇಲ್. ಮತ್ತಷ್ಟು ಓದು »

25
ಆಕ್ಟೋ

ಪ್ರಗತಿಪರರ ಈ ವಿತಂಡ ಹೋರಾಟ ಹಿಂದೂಗಳ ಆಚರಣೆಗಳ ಮೇಲೆಯೇ ಏಕೆ..?

– ನಮೋ ಹಿಂದುಸ್ಥಾನಿ 

file6x2g9i3wm3mjrklz1w4ಓದಿದ್ದೇವೆ ಎನ್ನುವ ಹಮ್ಮುಬಿಮ್ಮಿನ ಮೂಲಕ, ಕೈಯ್ಯಲೊಂದಿಷ್ಟು ಅವಾರ್ಡಗಳು, ಕುತ್ತಿಗೆಮೇಲೆ ಒಂದಿಷ್ಟು ಬೋರ್ಡ್ ಗಳು, ಹೀಗೆ ಹಲಾವಾರು ರೀತಿಯಲ್ಲಿ ಕಾಣಿಸಿಕೊಳ್ಳುವ ಈ ಪ್ರಗತಿಪರರು ಲಗ್ಗೆ ಇಡುವುದೇ ಪುರಾತನ ಹಿಂದೂ ಆಚರಣೆಗಳು ಮೇಲೆ.

ಮೊದಲೆಲ್ಲ ಟೀಕಿಸುತ್ತಿದ್ದವರು, ಇಂದು ಬರಬರುತ್ತ ಇವರ ಅಟಾಟೋಪಗಳು ಹಿಂದೂ ಸಂಪ್ರದಾಯದ ಮೇಲೆ ಬಿದ್ದಿದೆ. ಕಾಲ ಬದಲಾಗುತ್ತಿದೆ ಎಲ್ಲರು ವಿದ್ಯಾವಂತರಾದೆವೆಂದು ಪಾಶ್ಚಾತ್ಯ ಶೈಲಿಯ ವಿದೇಶಿಗರ ಉಡುಗೆ ತೊಡುಗೆಗೆ ಮಾರುಹೋಗಿ ಹಿಂದುತ್ವವನ್ನೇ ಬಿಟ್ಟು ಬಿಡುವ ಕೊನೆ ಪರಿಸ್ಥಿತಿಯ ಕಡೆ ಪಯಣವೇ ಇವರ ಈ ಹಿಂದೂ ವಿರೋಧಿ ರೀತಿ-ನೀತಿ ರುಜುವಾತುಗಳು. ಮತ್ತಷ್ಟು ಓದು »

25
ಆಕ್ಟೋ

ಆಲಾಪ..

– ಸುಜಿತ್ ಕುಮಾರ್

young-couple-breaking-up-girl-450w-239389240‘ಎಕ್ಸ್ ಕ್ಯೂಸ್ ಮೀ .. ನೀವು ರಿಸರ್ವ್ಡ್ ಸೀಟಲ್ಲಿ ಕೂತಿದ್ದೀರಾ ಅನ್ಸುತ್ತೆ?’

‘ಇಸ್ ಇಟ್?.. ಸ್ವಲ್ಪ ತಾಳಿ, ಒಮ್ಮೆ ಚೆಕ್ ಮಾಡ್ಕೊಬಿಡ್ತೀನಿ’ ಎನುತ ಆಕೆ ಮೊಬೈಲ್ ಅನ್ನು ಹೊರಗೆಳೆದಳು.

‘ಓ ಗಾಡ್, ಮೊಬೈಲ್ ಸ್ವಿಚ್ ಆಫ್ ಬರ್ತಾ ಇದೆ. ಏನ್ ಹುಡುಗ್ರಪ್ಪ ಇವ್ರು.. ಎನಿವೇಸ್ ಐಮ್ ಸಾರೀ..ನೀವ್ ಬಂದ್ ಕೂತ್ಕೊಳ್ಳಿ’ ಎಂದು ಕೂಡಲೇ ಆಕೆ ಎದ್ದು ಕಾಫಿ ಡೇಯಿಂದ ಹೊರನಡೆದಳು.

ಈತನಿಗೆ ಅಷ್ಟರಲ್ಲಾಗಲೇ ತನ್ನ ಅನುಮಾನ ನಿಜವೆನಿಸಿದ್ದರಿಂದ ಒಂದರೆಕ್ಷಣ ಮಾತು ಬಾರದಂತಾಗುತ್ತದೆ. ತನ್ನ ಮೊಬೈಲ್ ಅನ್ನು ಹೊರಗೆಳೆದು ಸ್ವಿಚ್ ಆನ್ ಮಾಡಿದ ಕೂಡಲೇ ಆಕೆಯ ನಂಬರ್ ಎಂದು ಕಳಿಸಲ್ಪಟ್ಟಿದ್ದ ನಂಬರ್ನಿಂದ ಎರಡು ಮಿಸ್ಡ್ ಕಾಲ್ ಗಳು ಬಂದಿರುತ್ತವೆ. ಇದೇಗೆ ಸಾಧ್ಯ!? ಅದೆಷ್ಟೇ ಯೋಚಿಸಿದರೂ ಉತ್ತರ ಹೊಳೆಯಲಿಲ್ಲ. ಕೂಡಲೇ ಆಕೆಯ ಅಪ್ಪನಿಗೆ ಫೋನಾಯಿಸಿ ನಾಲ್ಕು ಬೈದುಬಿಡಬೇಕೆಂಬ ಮನಸ್ಸಾದರೂ ಏಕೋ ಸುಮ್ಮನಾಗುತ್ತಾನೆ. ‘ಐಮ್ ಸಾರೀ..ನೀವ್ ಬಂದ್ ಕೂತ್ಕೊಳ್ಳಿ’ ಎಂದ ಆಕೆಯ ಮಾತುಗಳಲ್ಲಿ ಅದೇನೋ ಒಂದು ಬಗೆಯ ಮುಗ್ದತೆ ಆತನನ್ನು ಕಾಡಿತು. ಅಂತಃಕರಣ ರೋಧಿಸಿತು. ತಾನು ಫೋಟೋದಲ್ಲಿ ನೋಡಿದ ಚೆಲುವೆ ನಿಜವಾಗಿಯೂ ಇವಳೇನಾ ಅಂತಂದುಕೊಳ್ಳುತ್ತಾ ಆಕೆಯ ಫೋಟೋಗಳನ್ನೇ ಒಂದೊಂದಾಗೆ ನೋಡತೊಡಗಿದ. ಮತ್ತಷ್ಟು ಓದು »

22
ಆಕ್ಟೋ

ಈ ತುಲನೆ ನ್ಯಾಯವೇ!?

– ಶ್ರೀಧರ್ ಭಟ್

Sabarimala-kDBB--621x414@LiveMintಶಬರಿಮಲೆಯ ದೇಗುಲವನ್ನು ವಯಸ್ಸಿನ ಮಿತಿಯಲ್ಲದೇ ಯಾವ ಮಹಿಳೆಯೂ ಸಹ ಪ್ರವೇಶಿಸಬಹುದು ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪನ್ನು ನೀಡಿದ ಬೆನ್ನಲ್ಲೇ ವ್ಯಕ್ತವಾದ ಹಲವಾರು ಪ್ರತಿಕ್ರಿಯೆಗಳು ನನ್ನ ಗಮನ ಸೆಳೆದಿದ್ದವು. ಹಿಂದುತ್ವದ ಪರವಾಗಿ ಅನೇಕ ಕೆಲಸಗಳನ್ನು ಮಾಡಿರುವ, ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಂಡಿರುವ ಮತ್ತು ನಾನು ಗೌರವಿಸುವ ಕೆಲವು ವ್ಯಕ್ತಿಗಳ ಪ್ರತಿಕ್ರಿಯೆಗಳು ಮಾತ್ರ ಅವಾಸ್ತವಿಕ ಎಂದೆನಿಸಿದವು. ಮತ್ತಷ್ಟು ಓದು »

21
ಆಕ್ಟೋ

ಸಮಾನತೆಯ ಪ್ರಶ್ನೆ, ಸಾಮರಸ್ಯದ ಸಂಕೇತ ಶಬರಿಮಲೆ

– ಸ್ನೇಹಾ ಸಾಗರ

downloadಕೆಲ ದಿನಗಳ ಪ್ರಶ್ನೆಯಲ್ಲ, ಹಲವು ವರ್ಷಗಳ ಪ್ರಶ್ನೆ. ‘ಶಬರಿಮಲೆಗೆ ಹೆಣ್ಣಿಗೇಕೆ ಪ್ರವೇಶವಿಲ್ಲ’ ಎನ್ನುವುದು. ಹೆಣ್ಣೆೆಂದೆರೆ ಅಪವಿತ್ರತೆ ಎನ್ನುವುದೋ, ಪಂದಳದ ರಾಜ ಹೆಣ್ಣಿನ ವಿರೋಧಿ ಎನ್ನುವುದೋ ಅಥವಾ 48 ದಿನಗಳ ಕಠಿಣ ವೃತ ಮತ್ತು ದೊಡ್ಡ ಪಾದ, ಸಣ್ಣ ಪಾದಗಳನ್ನು ಹತ್ತಿ ದೇವರ ದರ್ಶನ ಪಡೆಯುವುದು ಹೆಣ್ಣಿನ ಶಕ್ತಿಗೆ ಆಗದ್ದು ಎನ್ನುವುದೋ. ಒಟ್ಟಿನಲ್ಲಿ ಶಬರಿಮಲೆ ಅಂದಿಗೂ – ಇಂದಿಗೂ ಪ್ರಶ್ನೆೆಯೇ, ವಿವಾದವೇ. ಆದರೆ ಅದು ಯಾರಿಗೆ ಎನ್ನುವುದು ದೊಡ್ಡ ಪ್ರಶ್ನೆೆ. ಭಾರತವೆಂದರೆ ಪರಂಪರೆ, ಭಾರತವೆಂದರೆ ಸಂಸ್ಕೃತಿ – ಸಂಪ್ರದಾಯ ಎನ್ನುವರಿಗೆ ಹಾಗೂ ದೇವರೊಡನೆ ಸಂಪ್ರದಾಯ, ಸಂಸ್ಕೃತಿಗಳ ಬಗ್ಗೆೆ ನಂಬಿಕೆಗಳನ್ನು ಉಳಿಸಿಕೊಂಡು ಬಂದವರಿಗೆ ಖಂಡಿತ ಶಬರಿಮಲೆಯ ಈ ಕಟ್ಟುಪಾಡು ಸಮಸ್ಯೆೆಯೇ ಅಲ್ಲ. ಮತ್ತಷ್ಟು ಓದು »

21
ಆಕ್ಟೋ

ಅರ್ಝಿ ಹುಕುಮತ್-ಇ-ಹಿಂದ್ ಆಜಾದ್: ಸ್ವತಂತ್ರ ಭಾರತದ ಪ್ರಾಂತೀಯ ಸರಕಾರಕ್ಕೆ 75..!

– ಶ್ರೇಯಾಂಕ ಎಸ್ ರಾನಡೆ.

netaji-subhash-chandra-bose-01-1501591576‘ಬೋಸ್ ಹಾಗೂ ಐಎನ್‍ಎ ಪ್ರತಿನಿಧಿಗಳನ್ನು “ದೇಶಭಕ್ತರಲ್ಲೇ ಶ್ರೇಷ್ಠರು” ಎಂದು ಬ್ರಿಟಿಷ್‍ರಾಜ್ ಪರಿಗಣಿಸಿತು’- ಎಡ್ವಡ್ಸ್ ಮೈಕಲ್, ದಿ ಲಾಸ್ಟ್ ಇಯರ್ಸ್ ಆಫ್ ಬ್ರಿಟಿಷ್ ಇಂಡಿಯಾ, ಕ್ಲೀವ್‍ಲ್ಯಾಂಡ್ ಪ್ರಕಾಶನ, 1964, ಪುಟ: 93.

ಅಕ್ಟೋಬರ್ 21, 1943, ಭಾರತ ಬ್ರಿಟಿಷರಿಂದ ದಾಸ್ಯದ ಮುಕ್ತಿಗಾಗಿ ಸ್ವಾತಂತ್ರ್ಯದ ಪ್ರಾಪ್ತಿಗಾಗಿ ಕೊನೆಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ತುದಿಗಾಲಲ್ಲಿ ನಿಂತಿದ್ದ ಸಂದರ್ಭ. ಒಂದೆಡೆ ಗಾಂಧೀಜಿಯೇ ಸ್ವಾತಂತ್ರ್ಯ ದೊರಕಲು ಹಳೆಯ ಮಾರ್ಗಗಳಿಗೆ ಶುಭವಿದಾಯ ಹೇಳಿ, 1942ರಲ್ಲಿ “ಮಾಡು ಇಲ್ಲವೆ ಮಡಿ: ಭಾರತ ಬಿಟ್ಟು ತೊಲಗಿ” ಆಂದೋಲನಕ್ಕೆ ಕರೆ ನೀಡಿದ್ದರೆ, ಮತ್ತೊಂದೆಡೆ ಅದಕ್ಕೆ ಪರೋಕ್ಷ ಉತ್ತೇಜನ ಮತ್ತು ಅಂತಹ ಹೋರಾಟಕ್ಕೆ ಅನಿವಾರ್ಯತೆಯನ್ನು ಸೃಷ್ಟಿಸುವ ಪ್ರಕ್ರಿಯೆ ವಿದೇಶಿ ನೆಲದಲ್ಲಿ ನೆಲೆಸಿದ್ದ ಭಾರತೀಯ ಹೋರಾಟಗಾರರಿಂದ ನಡೆಯುತ್ತಿತ್ತು. ಮತ್ತಷ್ಟು ಓದು »