ರೈತರ ಬಾಳನು ಹಸನಾಗಿಸಿದ ಹೈನುಗಾರಿಕೆ
– ಸಂಜಯ.ಆರ್
• ಹೈನುಗಾರಿಕೆಯಿಂದಾಗಿ ಸ್ತ್ರೀ ಸಬಲೀಕರಣ
• ಸಾವಯವ ಹೈನುಗಾರಿಕೆಯಲ್ಲಿ ಕ್ಷೀರ ಕ್ರಾಂತಿ
ಅಭಿವೃದ್ಧಿ ಹೊಂದುತ್ತಿರುವ ದೇಶದ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಭಾರತ, ಕೈಗಾರಿಕಾ ಕ್ರಾಂತಿ ಐ.ಟಿ ಹಾಗೂ ಪ್ರಾರಂಭಿಕ ಉದ್ದಿಮೆ (ಸ್ಟಾರ್ಟ್ ಅಪ್) ಗಳ ಮೂಲಕೇಂದ್ರ ಬಿಂದುವಾದರೂ ಕೃಷಿ ಮತ್ತು ಹೈನುಗಾರಿಕೆ ಇಂದಿಗೂ ರಾಷ್ಟ್ರದ ಆರ್ಥಿಕ ವ್ಯವಸ್ಥೆಗೆ ಬೆನ್ನೆಲುಬಾಗಿ ನಿಂತಿದೆ. ರಾಷ್ಟ್ರದ ಶೇ ೪೦% ಅಧಿಕ ಜನಸಂಖ್ಯೆ ಇಂದಿಗೂ ಕೃಷಿ ಮತ್ತು ಕೃಷಿಯೇತರ ಉದ್ಯಮಗಳಾದ ಹೈನುಗಾರಿಕೆ ಮೇಲೆ ಅವಲಂಭಿತವಾಗಿದೆ. ಇಷ್ಟಾದರೂ ಕೃಷಿ ಅಧ್ಯಯನದ ಮೇಲೆ ಹೂಡಿಕೆ ಮಾಡುತ್ತಿರುವುದು ಶೇ ೦.೩೦% ರಷ್ಟು. ಇಂದು ಚೈನಾ (೦.೬೨%) ಅಮೇರಿಕಾ (೧.೨೦%) ಬ್ರೆಜಿಲ್ (೧.೮೨) ಹಾಗೂ ದಕ್ಷಿಣ ಆಫ್ರಿಕಾ (೩.೦೬) ಕ್ಕಿಂತ ಕಡಿಮೆಯಾಗಿದ್ದು, ರೈತರ ಪಾಲಿಗೆ ಬಹುದೊಡ್ಡ ಸಮಸ್ಯೆಯಾಗಿಯೇ ಉಳಿದಿದೆ. ಮತ್ತಷ್ಟು ಓದು 
ಓ ‘ಸಂಬಂಧ’ಗಳೇ ನೀವ್ಯಾಕೆ ಇಷ್ಟು ‘ಬಿಜಿ’!
– ಸುವರ್ಣ ಹೀರೆಮಠ
ಆ ಕಾಲವೇ ಹಾಗಿತ್ತು. ಮುಖಾಮುಖಿ ಮಾತು, ಸಂಬಂಧಗಳಿಗೆ ಬೆಲೆ ಇತ್ತು. ಜತೆಯಾಗಿ ಊಟ, ಆಟ, ಪಾಠ ನಮ್ಮದಾಗುತ್ತಿತ್ತು. ಆದರೆ ಈಗ ಕಾಲ ಆಗಿಲ್ಲ. ವೈಯಕ್ತಿಕ ಹಿತಾಸಕ್ತಿ ಸಾಧನೆ, ಕೆಲಸದ ಒತ್ತಡ ಎಲ್ಲವನ್ನು ನುಂಗುತ್ತಿದೆ. ಸಂಬಂಧವೆಂಬುದು ದೂರದ ಬೆಟ್ಟವಾಗುತ್ತಿದೆ. ಹತ್ತಿರ ಹೋಗಿ ನೋಡಿದಾಗ, ಅದು ಕೈಗೆ ಸಿಗದ ವಸ್ತು ಎಂಬುದು ತಿಳಿಯುತ್ತದೆ. ನಾವೆಲ್ಲ ಯಾಕೆ ಹೀಗೆ ಆಗುತ್ತಿದ್ದೇವೆ ? ದೊಡ್ಡ ಗ್ರಾತ್ರದ ಕಟ್ಟಡ ಕಟ್ಟಬೇಕು. ರೋಬೊ ಕಂಡುಹಿಡಿಯಬೇಕು ನಿಜ. ಆದರೆ ನಾವೇ ರೋಬೊ ಆಗಬಾರದು. ನಿಂತ ಕಟ್ಟಡವೂ ಆಗಬಾರದು. ಮತ್ತಷ್ಟು ಓದು 
ಆಗಸಕ್ಕೆ ಏಣಿ ಹಾಕಿದ ನಾಯಕರು..
– ಸುಜಿತ್ ಕುಮಾರ್
ರಿಚರ್ಡ್ ಬ್ರಾನ್ಸನ್:
ಆತನ ವಯಸ್ಸು 16. ಬಾಲ್ಯವೆಲ್ಲ ಡಿಸ್ಲೆಕ್ಸಿಯಾ ಸಮಸ್ಯೆಯಿಂದ ನರಳಿದ ಆತ ತನ್ನ ಜೀವನದ ಅತಿ ಮಹತ್ವದ ಘಟ್ಟದಲ್ಲಿ ನಿಂತಿದ್ದಾನೆ. ಓದಲು, ಕಲಿಯಲು ಮನಸ್ಸಿದ್ದರೂ ದೇಹ ಸಾಥ್ ನೀಡುತ್ತಿಲ್ಲ. ಹಿಂದಿಯ ‘ತಾರೆ ಝಮೀನ್ ಪರ್’ ಚಿತ್ರವನ್ನು ನೋಡಿದವರಿಗೆ ಈ ಸಮಸ್ಯೆಯ ಆಳ ಒಂದಿಷ್ಟು ಅರಿಯಬಹುದು. ಅಂದು ಆತನ ಶಾಲೆಯ ಕೊನೆ ದಿನ. ಓದಲು ಬರೆಯಲು ಆಗದು ಎಂದರಿತ ಪೋಷಕರು ಆತನನ್ನು ಶಾಲೆಯಿಂದ ತೆಗೆಯುವ ನಿರ್ಧಾರವನ್ನು ಮಾಡಿದ್ದಾರೆ. ಆ ಎಳೆಯ ಹುಡುಗ ತನ್ನ ಸ್ನೇಹಿತರಿಂದ, ಶಾಲೆಯಿಂದ ದೂರವಾಗುತ್ತಿದ್ದಾನೆ. ಶಿಕ್ಷಕರಲೊಬ್ಬರು ಈತ ಹೊರಡುವಾಗ ‘ನೀನು ಮುಂದೆ ಒಂದೋ ಅಪರಾದಿಯಾಗಿ ಜೈಲಿನಲ್ಲಿ ಕೊಳೆಯುತ್ತೀಯ ಇಲ್ಲವಾದರೆ ಒಬ್ಬ ಕೋಟ್ಯಧಿಪತಿಯಾಗಿ ಬೆಳೆಯುತ್ತೀಯ’ ಎಂದು ದ್ವಂದ್ವದ ಹಾರೈಕೆಯೊಂದನ್ನು ನೀಡಿ ಬೀಳ್ಕೊಟ್ಟರು. ಮತ್ತಷ್ಟು ಓದು 
ರಿಯಾಲಿಟಿ ಷೋ ಎಂಬ ಹೆಸರಲ್ಲಿ ನಡೆಯುವ ಅಪಸವ್ಯಗಳು..!
– ಶ್ರೀಧರ ಭಟ್ಟ, ಹೊನ್ನಾವರ
‘ಹಳ್ಳಿ ಹೈದ ಪ್ಯಾಟೆಗ್ ಬಂದ’ ಎಂಬ ರಿಯಾಲಿಟಿ ಷೋ ಒಂದರಲ್ಲಿ ನಮ್ಮ ಹೊನ್ನಾವರದ ಯುವಕರೊಬ್ಬರು ಭಾಗವಹಿಸಿದ್ದಾರೆ ಎಂಬ ವಿಷಯವನ್ನು ಕೇಳಿದಾಗ ನನಗೆ ನಂಬಲು ಸಾಧ್ಯವೇ ಆಗಲಿಲ್ಲ. ಶ್ರೀರಾಮ ಎಂಬ ಆ ಯುವಕ, ಹೊನ್ನಾವರ ಪಟ್ಟಣದ ಭಾಗವಾಗಿರುವ ರಾಯಲಕೇರಿಯವರು, ಸುತ್ತಮುತ್ತಲಿನ ಊರುಗಳಲ್ಲಿ ಹೆಸರುವಾಸಿಯಾಗಿರುವ ಅಶೋಕ ಜಾದೂಗಾರ ಅವರ ಮಗ ಎನ್ನುವ ಸಂಗತಿಯನ್ನು ಅರಗಿಸಿಕೊಳ್ಳುವುದಕ್ಕೂ ಆಗಲಿಲ್ಲ. ಸುವರ್ಣ ವಾಹಿನಿಯವರ ಕಣ್ಣಿಗೆ ನಮ್ಮ ಪಟ್ಟಣ ಅದ್ಯಾವ ಕೋನದಿಂದ ಹಳ್ಳಿಯಂತೆ ಕಂಡಿತೋ? ತಂದೆಯಂತೆ ಜಾದೂಗಾರರೇ ಆಗಿರುವ ಶ್ರೀರಾಮ ಅವರಿಗೆ ತಾನು ಹಳ್ಳಿ ಹೈದನಾಗಬೇಕು ಎಂದು ಏಕೆ ಅನಿಸಿತೋ? ಗೊತ್ತಿಲ್ಲ. ಮತ್ತಷ್ಟು ಓದು 
ಪುಸ್ತಕ ಪರಿಚಯ – “ಪ್ರಜ್ಞೆ ಮತ್ತು ಪರಿಸರ”
– ಚಂದ್ರಹಾಸ
“ಪ್ರಜ್ಞೆ ಮತ್ತು ಪರಿಸರ” – ಯು. ಆರ್. ಅನಂತಮೂರ್ತಿಯವರ ವಿಮರ್ಶಾ ಲೇಖನಗಳ ಸಂಕಲನ. ಪ್ರಸ್ತುತ ಪುಸ್ತಕ ಯಾವುದೋ ಕೆಲವು ಕೃತಿಗಳ ವಿಮರ್ಶೆಗಳಲ್ಲ, ಬದಲಾಗಿ ಕೃತಿಗಳನ್ನು ಸೃಷ್ಟಿಸಿದ ಕೃತಿಕಾರರ ದೃಷ್ಟಿಕೋನಗಳದ್ದು. ಸುತ್ತಲಿನ ಸಮಾಜ, ವಾಸ್ತವ ಅನುಭವಗಳು ಮತ್ತು ಲೋಕವ್ಯಾಪರ, ಹೇಗೆ ಸಾಹಿತಿಗಳ ಮನೋಭೂಮಿಕೆಯಲ್ಲಿ ವಿಶ್ಲೇಷಣೆಗೊಂಡು, ಶೋಧನೆಗೆ ಪ್ರೇರೇಪಿಸಿ ಕೃತಿಗಳಲ್ಲಿ ಮೂರ್ತಗೊಂಡಿರಬಹುದೆಂಬುದನ್ನು ತಮ್ಮ ಲೇಖನಗಳಾ ಮೂಲಕ ವಿವೇಶಿಸಿದ್ದಾರೆ. ಮುನ್ನುಡಿಯಲ್ಲಿ ಅವರೇ ಈ ಲೇಖನಗಳಾ ಹಿಂದಿನ ಪ್ರೇರಣೆಯನ್ನು ಹೀಗೆ ಹೇಳಿಕೊಂಡಿದ್ದಾರೆ – “ಸಾಹಿತ್ಯದಿಂದ ರಾಜಕೀಯದವರೆಗೆ ಸ್ನೇಹಿತರೊಡನೆ ನಡೆಸಿದ ಚರ್ಚೆಗಳಿಂದ,ಮಾರ್ಕ್ಸ್ ವಾದದ,ಲೋಹಿಯಾವಾದಗಳ ಬಗ್ಗೆ ಇದ್ದ ಅನುಮಾನ ಅಭಿಮಾನಗಳಿಂದ ಪ್ರಭಾವಗೊಂಡ ಅಲೋಚನ ಲಹರಿಗಳೇ, ಈ ಸಂಕಲನದಲ್ಲಿ ಲೇಖನಗಳಾಗಿ ಮೂಡಿವೆ.” ಮತ್ತಷ್ಟು ಓದು 
ದೇಶಕಟ್ಟುವ ಫ್ಯಾಂಟಸಿ..
– ಸುಜಿತ್ ಕುಮಾರ್
ಇತಿಹಾಸದ ಕಾಲಘಟ್ಟದಲ್ಲಿ ಐವತ್ತು ವರ್ಷಗಳ ಸಮಯ ತೀರಾ ಚಿಕ್ಕದು. ಅರ್ಧ ತಲೆಮಾರಿನ ಈ ಐದು ದಶಕಗಳಲ್ಲಿ ಹೆಚ್ಚೆಂದರೆ ಏನೆಲ್ಲಾ ಜರುಗಬಹುದು ? ಸಾಮಾಜಿಕ ಬೆಳವಣಿಗೆಯ ದೃಷ್ಟಿಯಲ್ಲಿ ನೋಡುವುದಾದರೆ ದಾರಿಕಾಣದ ಹಳ್ಳಿಗಳಿಗೆ ರಸ್ತೆಗಳ ಮೇಣವೊಂದಿಷ್ಟು ಅಂಟಿಕೊಳ್ಳಬಹುದು, ಸೂರು ಕಾಣದ ತಲೆಗಳ ಮೇಲೆ ಸ್ವಂತ ಮನೆಯೊಂದರ ನೆರಳು ಮೂಡಬಹುದು, ಬೆಳಕು ಕಾಣದ ಮನೆಗಳು ಎಲ್ ಇ ಡಿ ಬಲ್ಬುಗಳ ಕಾಂತಿಯಿಂದ ಮಿನುಗಬಹುದು ಅಥವಾ ಅಷ್ಟೂ ಸರ್ಕಾರೀ ಸ್ಕೂಲುಗಳ ಜಾಗದಲ್ಲಿ ತಕಿದಿಮಿತ ಕುಣಿಯುವ ಕಷ್ಟಪಟ್ಟು ಇಷ್ಟಪಡುವ ಪ್ರೈವೇಟ್ ಸ್ಕೂಲುಗಳು ತಲೆಯೆತ್ತಬಹುದು, ಎಲ್ಲವೂ ಗೂಗಲ್ ಇಂಟರ್ನೆಟ್ಮಯವಾಗುವ ಹಾದಿಯಲ್ಲಿ ಮಾನವ ಓದು ಬರಹಗಳನ್ನೇ ಮರೆತು ಕೇವಲ ಮಾಂಸದ ಮುದ್ದೆಯಂತಾಗಲೂಬಹುದು. ಒಟ್ಟಿನಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಸರ್ವೋತೋಮುಖ ಅಭಿವೃದ್ಧಿ ಎಂದರೆ ಇವಿಷ್ಟೇ ಎಂದರೂ ಅದು ಉತ್ಪ್ರೇಕ್ಷೆಯಾಗದು! ಆದರೆ ಅಲ್ಲೊಂದು ದೇಶವಿತ್ತು. ದೇಶವೆನ್ನುವುದಕ್ಕಿಂತ ಮರಳುಗಾಡಿನ ರಾಶಿ ರಾಶಿ ಗುಡ್ಡೆಗಳ ಪ್ರದೇಶವೆನ್ನಬಹುದು. ಸುಟ್ಟು ಕರಕಲಾಗುವ ಉರಿಬಿಸಿಲಿಗೆ ಅಲ್ಲಿ ಮಾನವರಾಗಲಿ ಕನಿಷ್ಠ ಒಂದೆರೆಡು ಪ್ರಾಣಿಗಳೂ ಕಾಣಲು ಸಿಗುತ್ತಿರಲಿಲ್ಲ. ನಮ್ಮ ರಾಜ್ಯಕ್ಕಿಂತಲೂ ಸಣ್ಣದಾದ ಆ ಭೂಪ್ರದೇಶ ಅಕ್ಷರ ಸಹ ಮರಳುಗಾಡಿನ ಆಗರ. ಅಲ್ಲೊಂದು ಇಲ್ಲೊಂದು ಗುಂಪು ಜನಗಳು ನೇಸರರಾಜನೊಟ್ಟಿಗೆ ಸೆಣೆಸುತ್ತಾ ವಾಸಿಸುತ್ತಿದ್ದದ್ದು ಬಿಟ್ಟರೆ ಉಳಿದಷ್ಟೂ ಜಾಗ ಬಟಬಯಲಿನ ಜನವಿರಳ ಪ್ರದೇಶವಾಗಿತ್ತು. ದಿನಕ್ಕೊಂದು ಮುಡಿಯಷ್ಟು ಅನ್ನವನ್ನು ಬಿಟ್ಟರೆ ಖರ್ಜೂರದ ಹಣ್ಣುಗಳೇ ಇವರಿಗೆ ಮೂರೊತ್ತಿನ ಆಹಾರ! ವರ್ಷಕೊಮ್ಮೆ ಅಥವಾ ಕೆಲವೊಮ್ಮೆ ಒಮ್ಮೆಯೂ ಬಾರದ ಮಳೆರಾಯನನ್ನು ಇಲ್ಲಿ ಒಂದು ನರಪಿಳ್ಳೆಯೂ ನಂಬಿ ಬದುಕುತ್ತಿರಲಿಲ್ಲ. ಇನ್ನು ನೀರನಂತೂ ಕೇಳಬೇಕೆ, ಅದು ಜಗತ್ತಿನ ಅತಿ ಕೊನೆಯ ಹನಿಯೋ ಎಂಬಂತೆ ಕಾಪಾಡಿಕೊಂಡು ಬರುತ್ತಿದ್ದರು. ಅದೆಷ್ಟೇ ಬಾಯಾರಿದರೂ ದಿನಕೊಂದು ಸಣ್ಣ ಲೋಟದ ನೀರನಷ್ಟೇ ಕುಡಿಯಲು ಶಕ್ತರಾಗಿದ್ದರು! ಇಂತಹ ಬರಬಿದ್ದ ಮರಳು ರಾಶಿಯಲ್ಲಿ ಮೇಲೆ ಹೇಳಿದ ಐವತ್ತು ವರ್ಷಗಳಲ್ಲೇ ಏನೆಲ್ಲಾ ಜರುಗಿರಬಹದು ? ಹಳ್ಳಿಯೊಂದು, ಊರೊಂದು ಹುಟ್ಟಿರಬಹುದು. ಹುಟ್ಟಿದರೂ ಈ ಬೆಂಕಿಯ ನೆಲದಲ್ಲಿ ಜೀವ ಪಣಕ್ಕಿಟ್ಟು ಬದುಕುವುದಕ್ಕಿಂತ ಮೂರ್ಖತನ ಮತ್ತೊಂದಿರದು. ಅಥವಾ ಅಕ್ಕಪಕ್ಕದ ಯಾವುದಾದರೊಂದು ಸದೃಢ ದೇಶ ನ್ಯೂಕ್ಲಿಯರ್ ಪ್ಲಾಂಟ್ಗಳನ್ನೋ ಅಥವಾ ಪವನಶಕ್ತಿ ಕೇಂದ್ರಗಳನ್ನೂ ನಿರ್ಮಿಸಿದ್ದಿರಬಹುದು. ಅಥವಾ ಇದ್ದ ಮೂರು ಮತ್ತೊಂದು ಕುಟುಂಬಗಳೂ ಕಣ್ಮರೆಯಾಗಿ ಕೇವಲ ಬಿಸಿಲಿನ ಮೊರೆತವೇ ಸರ್ವವ್ಯಾಪ್ತಿಯಾಗಿದ್ದಿರಬಹುದು, ಅಲ್ಲವೇ?
ಬಿಲ್ಲಕುಲ್ ಇಲ್ಲ! ಮತ್ತಷ್ಟು ಓದು 
ನಾಯಕರುಗಳಿಗೇ ಇಲ್ಲದ ‘ಮುಲಾಜು’ ಇಂಥ ಬಯೋಪಿಕ್ ಗಳನ್ನು ಮಾಡಹೋಗುವ ನಿಮಗ್ಯಾಕೆ ಹಿರಾನಿ?
– ಸುಜಿತ್ ಕುಮಾರ್
ಈ ವರ್ಷದ ದಿ ಮೋಸ್ಟ್ ಎಕ್ಸ್ಪೆಕ್ಟೆಡ್ ಚಿತ್ರಗಳಲ್ಲಿ ಒಂದಾದ ‘ಸಂಜು’ ಕೊನೆಗೂ ತೆರೆಯ ಮೇಲೆ ಬಂದಿದೆ. ಚಿತ್ರ ಜನಮಾನಸದಲ್ಲಿ ಕುತೂಹಲವನ್ನು ಮೂಡಿಸಲು ಹಲವಾರು ಕಾರಣಗಳಿದ್ದಿರಬಹುದು. ಮೊತ್ತ ಮೊದಲನೆಯದಾಗಿ ನಿರ್ದೇಶಕ ರಾಜ್ಕುಮಾರ್ ಹಿರಾನಿ. ಹಿರಾನಿ ಸದ್ಯಕ್ಕಂತೂ ಬಾಲಿವುಡ್ ನಲ್ಲಿ ಪಕ್ಕ ‘ಹೀರಾ’ ರೆಂದೇ ಹೇಳಬಹುದು. ತಾನು ನಿರ್ದೇಶನ ಮಾಡಿರುವ ಅಷ್ಟೂ ಚಿತ್ರಗಳು ಸೂಪರ್ ಡೂಪರ್ ಹಿಟ್ ಗಳಾಗಿ ಪ್ರತಿ ಬಾರಿಯೂ ಸೆಂಚೂರಿಯನ್ನು ಬಾರಿಸುತ್ತಿದರೆ ಆತ ಅದ್ಯಾವ ಹೀರೊ ಅಥವಾ ಹೀರೋಯಿನ್ ಗಳಿಗೂ ಕಮ್ಮಿ ಇರುವುದಿಲ್ಲ. ಮೇಲಾಗಿ ಹಿರಾನಿ ಕೇವಲ ನಿರ್ದೇಶನವಲ್ಲದೆ ಕಥೆ, ಚಿತ್ರಕತೆ, ಎಡಿಟಿಂಗ್ ಹಾಗು ಪ್ರೊಡಕ್ಷನ್ ಗಳಲ್ಲೂ ತಮ್ಮ ಕೈಯಾಡಿಸಿದವರು. ಇಂತಹ ಒಬ್ಬ ಕಲಾಸಾಮ್ರಾಟ್ ಬರೆದು, ನಿರ್ದೇಶಿಸಿ ನಿರ್ಮಿಸಿರುವ ಚಿತ್ರವೊಂದು ಬರುತ್ತಿದೆ ಎಂದರೆ ಸಿನಿಪ್ರಿಯರ ಹಪಾಹಪಿ ಹೆಚ್ಚಾಗದೇ ಇರದು. ಇದು ಅತಿ ಸಹಜವಾದ ವಿಷಯ. ಆದರೆ ಈ ಬಾರಿ ಸಂಜು ಚಿತ್ರ ಇನ್ನೂ ಹೆಚ್ಚಿನ ಗುಲ್ಲೆಬ್ಬಿಸಲು ಇರುವ ಕಾರಣ ಬೇರೆಯೇ ಇದೆ. ಅದು ಸರಿಸುಮಾರು ಇಪ್ಪತ್ತೈದು ವರ್ಷಗಳ ಕಾಲ ಪ್ರತಿ ದಿನ ಒಂದಿಲ್ಲೊಂದು ಬಗೆಯಲ್ಲಿ ಸುದ್ದಿಯಾಗುತ್ತಿದ್ದ ಸುದ್ದಿಯೊಂದರಿಂದ ಹಾಗು ಆ ಸುದ್ದಿಯ ಕೇಂದ್ರಬಿಂದುವಾದ ವ್ಯಕ್ತಿಯೊಬ್ಬನಿಂದ. ಸಂಜಯ್ ದತ್ತ್. ದೇಶದಲ್ಲಿ ಇಂದು ಸಿನಿಮಾಗಳನ್ನು ನೋಡದಿರದ ಮಂದಿ ಕೇವಲ ಬೆರಳಣಿಕೆಯಷ್ಟಿರಬಹುದು. ಅಂತಹ ಬೆರಳೆಣಿಕೆಯ ಮಂದಿಗೂ ಈ ಒಂದು ಹೆಸರು ಚಿರಪರಿಚಿತ! ನಟನಾಗಿ, ನಾಯಕನಾಗಿ ಅನ್ನುವುದಕ್ಕಿಂತ ಹೆಚ್ಚಾಗಿ 1993 ರ ಮುಂಬೈ ಸರಣಿ ಬಾಂಬಿನ ವಿಚಾರಣೆಯ ಸಲುವಾಗಿ. 50% ನಷ್ಟು ಚಿತ್ರ ಆತನ ಆತ್ಮಕತೆಯಾದರೆ ಉಳಿದರ್ದ ಭಾಗ ಚಿತ್ರದ ಕಲ್ಪಿತ ಚಿತ್ರಕತೆಯೆಂದೇ ಹೇಳಬಹುದು! ಚಿತ್ರವನ್ನು ಚಿತ್ರಗಳಾಗಿಯೇ ನೋಡಬಯಸುವವರಿಗೆ ಸಿಗುವ ಮತ್ತೊಂದು ರೋಮಾಂಚನಕಾರಿ ವ್ಯಕ್ತಿ ರಣಬೀರ್ ಕಪೂರ್. ನಟನೆಯಲ್ಲೇನಾದರೂ ಭಾರತಕ್ಕೆ ಆಸ್ಕರ್ ತಂದುಕೊಡಬಲ್ಲ ನಟರಿದ್ದಾರೆಂದರೆ ಆದರಲ್ಲಿ ರಣಬೀರ್ ಕಪೂರ್ನ ಹೆಸರು ಇರದಿರಲು ಸಾಧ್ಯವೇ ಇಲ್ಲ.. ಸಂಜಯ್ ದತ್ತ್ ನ ಪಾತ್ರವನ್ನು ಕಣ್ಣಿಗೆ ಕಟ್ಟುವಂತೆ ನಿಭಾಯಿಸಿ ಈ ಮಾತಿಗೆ ಮತ್ತಷ್ಟು ಪುಷ್ಟಿಕೊಟ್ಟಿದ್ದಾನೆ ಚಿತ್ರದಲ್ಲಿ. ಈ ಎಲ್ಲ ಕಾರಣಗಳಿಂದ ಚಿತ್ರ ತೆರೆಯ ಮೇಲೆ ದೂಳೆಬ್ಬಿಸುತ್ತಿದೆ. ನೋಡುಗರನ್ನು ಎರಡೂವರೆ ಘಂಟೆಗಳ ಕಾಲ ರಂಜಿಸುತ್ತಿದೆ. ಆದರೆ ಚಿತ್ರಕತೆಯ ಸತ್ಯಾಸತ್ಯತೆಯನ್ನು ಅರಿಯಬಯಸುವವರಿಗೆ, ಹಿಂದಿನ ಇತಿಹಾಸವನ್ನು ಅರೆಬರೆ ಮರೆತಿರುವವರಿಗೆ ಎರಡೂವರೆ ದಶಕಗಳ ವಿದ್ಯಮಾನಗಳನ್ನು ಕೇವಲ ಎರಡೂವರೆ ಘಂಟೆಯಷ್ಟೇ ನೋಡಿ ಇದು ಸರಿ ಅದು ತಪ್ಪೆಂದು ಖಡಾಖಂಡಿತವಾಗಿ ನಿರ್ಧರಿಸುವುದು ದುಡುಕುತನವಾದೀತು. ಚಿತ್ರ ಮಾಡಿದ್ದು ನಿಜವನ್ನು ಬಿಚ್ಚಿಡಲೋ ಅಥವಾ ಮುಖ್ಯವಾದ ಸಂಗತಿಯನ್ನು ಮುಚ್ಚಿಡಲೋ ಎಂಬೊಂದು ಪ್ರಶ್ನೆ ಮಾತ್ರ ಚಿತ್ರಮಂದಿರದಿಂದ ಹೊರಬರುವ ಒಂದಿಷ್ಟು ಮಂದಿಗಂತೂ ಕಾಡದಿರದು! ಮತ್ತಷ್ಟು ಓದು 
ಅಂಬೇಡ್ಕರ್ ಅವರಿಗೂ ಬೇಡವಾಗಿತ್ತು ಆರ್ಟಿಕಲ್ 370
– ರಾಕೇಶ್ ಶೆಟ್ಟಿ
“ಮಿ.ಅಬ್ದುಲ್ಲಾ, ಭಾರತ ಕಾಶ್ಮೀರವನ್ನು ರಕ್ಷಿಸಬೇಕು, ಅಭಿವೃದ್ಧಿಗೊಳಿಸಬೇಕು ಮತ್ತು ಕಶ್ಮೀರಿಗಳಿಗೆ ಭಾರತದ ಇತರ ಪ್ರಜೆಗಳಂತೆಯೇ ಸಮಾನ ಹಕ್ಕುಗಳಿರಬೇಕೆಂದು ನೀವು ಬಯಸುತ್ತೀರ. ಆದರೆ, ಭಾರತ ಮತ್ತು ಭಾರತೀಯರಿಗೆ ಕಾಶ್ಮೀರ ರಾಜ್ಯದಲ್ಲಿ ಯಾವುದೇ ಹಕ್ಕುಗಳು ಇರಬಾರದು ಎನ್ನುತ್ತೀರ. ನಾನು ಭಾರತದ ಕಾನೂನು ಮಂತ್ರಿ, ನನ್ನ ದೇಶದ ಹಿತಾಸಕ್ತಿಯನ್ನು ನಾನು ಕಡೆಗಣಿಸಲಾರೆ… “, ಆರ್ಟಿಕಲ್ 370ರನ್ನು ಸಂವಿಧಾನದಲ್ಲಿ ಸೇರಿಸಿ ಜಮ್ಮು ಕಾಶ್ಮೀರದಲ್ಲಿ ಜಾರಿಗೊಳಿಸುವ ವಿಷಯದಲ್ಲಿ ಅಂಬೇಡ್ಕರ್ ಅವರನ್ನು ಒಪ್ಪಿಸಲು ನೆಹರೂ ಸಲಹೆ ಮೇರೆಗೆ ಬಂದಿದ್ದ ಶೇಖ್ ಅಬ್ದುಲ್ಲಾನ ಮುಖಕ್ಕೆ ಹೊಡೆದಂತೆ ಡಾ.ಅಂಬೇಡ್ಕರ್ ಅವರು ಹೇಳಿ ಕಳುಹಿಸಿದ್ದು ಹೀಗೆ. ಖುದ್ಧು ಸಂವಿಧಾನ ಶಿಲ್ಪಿಯೇ ವಿರೋಧಿಸಿದ್ದ ಈ ಆರ್ಟಿಕಲ್ 370ಯನ್ನು ಅಂದು ಅವರ ಬಾಯಿ ಮುಚ್ಚಿಸಲು “ತಾತ್ಕಾಲಿಕ” ಎಂಬ ಪದ ಬಳಸಲಾಯಿತು. ಹೆಂಡ ಕುಡಿದ ಮರ್ಕಟದಂತಾಡುತ್ತಿದ್ದ ನೆಹರೂ ಸಾಹೇಬರು, ತಮ್ಮ ಬಾಲವನ್ನು ಶೇಖ್ ಅಬ್ದುಲ್ಲಾನ ಕೈಗೆ ಇಟ್ಟಾಗಿತ್ತು. ಆರ್ಟಿಕಲ್ 370 ಜಾರಿಯಾಗುತ್ತಿದಂತೆ ಹಿಂಬಾಗಿಲ ಮೂಲಕ ಅದಕ್ಕಿಂತಲೂ ಘೋರವಾದ ವಿಧಿ 35A ಅನ್ನು ಜಮ್ಮು ಕಾಶ್ಮೀರಕ್ಕೆ ಅನ್ವಯಿಸಲಾಯಿತು. ಅಂದು ಅಂಬೇಡ್ಕರ್ ಅವರು ವಿರೋಧಿಸಿದ್ದ ಆರ್ಟಿಕಲ್ 370 ರದ್ಧತಿ ಬಗ್ಗೆ ಮಾತನಾಡುತ್ತಿರುವುದು ಕೇವಲ ಬಿಜೆಪಿ ಮಾತ್ರವೇ. ಹಾಗೂ ಇದನ್ನು ವಿರೋಧಿಸುವವರು ಕಾಂಗ್ರೆಸ್ ಇತ್ಯಾದಿ ಸೆಕ್ಯುಲರ್ ಪಕ್ಷಗಳು ಹಾಗೂ ಸೋ-ಕಾಲ್ಡ್ ಸಂವಿಧಾನ ರಕ್ಷಕರು…! ಮತ್ತಷ್ಟು ಓದು 
ಜನ್ಮಾಷ್ಟಮಿಗೂ ಇಮಾಮ್ ಸಾಹೇಬ್ರಿಗೂ ಏನು ಸಂಬಂಧ ಎಂದು ಕೇಳುತ್ತಿರಾ?? ಖಂಡಿತಾ ಸಂಬಂಧ ಇದೆ..!!
– ಅಜಿತ್ ಶೆಟ್ಟಿ ಹೆರಾಂಜೆ
ಹೌದು ಉಡುಪಿಯ ಮಟ್ಟಿಗೆ ಜನ್ಮಾಷ್ಟಮಿಗೂ ಇಮಾಮ್ ಸಾಹೇಬ್ರಿಗೂ ಖಂಡಿತಾ ಸಂಬಂಧ ಇದೆ. ದುರಂತ ಅಂದ್ರೆ ಈ ಸಂಬಂಧದ ಬಗ್ಗೆ ನಮಗೆ ಯಾರೂ ಎಂದೂ ಹೆಳಿದವರೇ ಇಲ್ಲ. ಶಾಲಾ ಕಾಲೇಜುಗಳಲ್ಲಿ ನಮ್ಮ ಯಾವುದೇ ಶಿಕ್ಷಕರು ಈ ಸಂಬಂಧದ ಬಗ್ಗೆ ಪಾಠ ಮಾಡಲಿಲ್ಲ. ನಮಗೆ ಗಾಂಧಿ ಗೊತ್ತಿತ್ತು, ನಮಗೆ ಬುದ್ದ ಗೊತ್ತಿತ್ತು, ನಮಗೆ ಅಕ್ಬರ್ ಗೊತ್ತಿತ್ತು, ನಮಗೆ ಮುಸೊಲಿನಿ, ಹಿಟ್ಲರ್ ಚಗುವೇರ ಗೊತ್ತಿತ್ತು. ಆದ್ರೆ ನಮ್ಮೂರಿನ ಮಹಾತ್ಮರ ಬಗ್ಗೆ ಗೊತ್ತೇ ಇಲ್ಲ. ಅವರು ನಮ್ಮ ಸಮಾಜವನ್ನು ಕಟ್ಟಲು ತಮ್ಮ ಇಡಿ ಜೀವಮಾನದ ಗಳಿಕೆಯನ್ನೆಲ್ಲವೂ ಸಮಾಜದ ಉದ್ದಾರಕ್ಕಾಗಿ ನೀರಿನಂತೆ ಹರಿಸಿ, ತಮ್ಮ ಇಡಿ ಜೀವನವನ್ನು ಸಮಾಜಕ್ಕಾಗಿ ತೇದಿ ಸವೆದು ಸದ್ದಿಲ್ಲದೆ ಮರೆಯಾದವರು. ಅವರಿಗೆ ಯಾವುದೇ ಪ್ರಚಾರದ ಹಂಗಿರಲಿಲ್ಲ, ಅವರಿಗೆ ತಮ್ಮ ಸಮಾಜದ ಬಗೆಗಿನ ತಾವು ನಿಭಾಯಿಸಬೇಕಿದ್ದ ಕರ್ತವ್ಯಗಳ ಅರಿವಿತ್ತು, ಸಮಸ್ಯೆಗಳು ಬಂದಾಗ ಅದನ್ನ ಸರ್ಕಾರ ಅಥವಾ ಇನ್ಯಾರೋ ಪರಿಹರಿಸಲಿ ಎಂದು ಯಾವತ್ತೂ ಕಾದವರಲ್ಲ. ಅವರು ಸ್ವತಃ ತಾವೇ ಅಂತಹಾ ಸಮಸ್ಯೆಗಳಿಗೆ ಎದೆಯೊಡ್ಡಿ ನಿಂತು ಪರಿಹರಿಸಿದವರು. ಆಗ ಅವರ ಕಣ್ಣಲ್ಲಿ ಜಾತಿ, ಮತ ,ಪಂತ, ಪಂಗಡ, ಇವ ನಮ್ಮವ ಇವ ಬೇರೆಯವನು ಎಂಬುವ ಯಾವುದೆ ಬೇಧ ಭಾವ ಇರಲಿಲ್ಲ. ಅವ್ರಲ್ಲಿ ಇದ್ದದ್ದು ಸಮಾಜದಲ್ಲಿ ತಾನು ಮಾಡಬೇಕಾಗಿದ್ದ ಕೆಲಸಗಳ ಬಗ್ಗೆ ಇದ್ದ ತುಡಿತ ಮಾತ್ರ. ಅಂತಹ ಅದೆಷ್ಟೋ ಗಣ್ಯರು ಕಾಲದ ಪುಟಗಳಲ್ಲಿ ಮರೆಯಾಗಿ ಹೋದರು. ಅವರನ್ನ ಅವರ ಸಾಧನೆಗಳನ್ನ ಮುಂದಿನ ತಲೆಮಾರಿಗೆ ಪರಿಚಯಿಸುವ ಹೊಣೆ ಹೊತ್ತ ಸರ್ಕಾರಗಳು ಇಂತವರ ಪರಿಚಯನ್ನು ಯಾವತ್ತೂ ಮುಂದಿನ ಪೀಳಿಗೆಗೆ ಮಾಡಲೇ ಇಲ್ಲ. ಅದಿರಲಿ ಸಮಾಜವೂ ಅಂತವರನ್ನ ಮರೆತಿತು. ಇಂತಹಾ ಅನೇಕ ಮರೆತುಹೋದ ಮಹಾನುಭಾವರಲ್ಲಿ ಉಡುಪಿಯ ಖಾನ ಬಹದ್ದೂರ್ ಹಾಜಿ ಅಬ್ದುಲ್ಲಾ ಹಾಜಿ ಕಾಸಿಮ್ ಸಾಹೇಬ್ ಬಹದ್ದೂರ್ ಕೂಡ ಒಬ್ಬರು. ಚಿಕ್ಕದಾಗಿ ಹೇಳೋದಾದರೆ ಹಾಜಿ ಅಬ್ದುಲ್ಲಾ ಸಾಹೇಬರು . ಹಾಜಿ ಅಬ್ದುಲ್ಲಾ ಸಾಹೆಬರು !! ? ಯಾರೀತ?? ಮತ್ತಷ್ಟು ಓದು 
ಮತಾಂಧರ ಮುಂದೆ ಸಧ್ಭಾವನೆಯ ಕನಸೇ?
-ರಾಕೇಶ್ ಶೆಟ್ಟಿ
ದಿನಾ ಸಾಯೋರಿಗೆ ಅಳೋರು ಯಾರು ಅನ್ನೋ ಗಾದೆ ಜಮ್ಮುಕಾಶ್ಮೀರ ರಾಜ್ಯದ ದಿನನಿತ್ಯದ ಹಿಂಸಾಚಾರಕ್ಕೆ ಹೇಳಿ ಮಾಡಿಸಿದಂತಿದೆ. ಆದರೆ ಈ ಗಾದೆಗೆ ಅಪವಾದವೆಂಬಂತೆ ಉಗ್ರರು, ಉಗ್ರರ ಸಿಂಪಥೈಸರ್ ಗಳು ಸತ್ತಾಗ ಅಳಲಿಕ್ಕೆ ದೇಶದಾದ್ಯಂತ ಗಂಜಿಗಿರಾಕಿಗಳು, ಸೆಕ್ಯುಲರ್ ಮಾಧ್ಯಮಗಳು ತಯಾರಾಗುತ್ತವೆ. ಆದರೆ ಕಣಿವೆಯಲ್ಲಿ ಪಾಕಿಗಳು ಗಡಿಯಾಚೆಯಿಂದ ನಡೆಸುವ ಅಪ್ರಚೋದಿತ ಗುಂಡಿನ ದಾಳಿಗೆ, ಉಗ್ರರ ದಾಳಿಗೆ ಬಲಿಯಾಗುವ ಭಾರತೀಯ ಯೋಧರಿಗೆ ಮಾತ್ರ ಈ ಭಾಗ್ಯವಿಲ್ಲ. ಇವರ ಸಾವಿನ ಸುದ್ದಿಗಳು ದಿನಪತ್ರಿಕೆಗಳಲ್ಲಿ ಕಾರ್ನರ್ ಸುದ್ದಿಯಾಗಿರುತ್ತದೆ. ಓದುವ ಜನರಿಗೂ ಇದೆಲ್ಲಾ ಅಲ್ಲಿ ಮಾಮೂಲು ಎನಿಸಿಬಿಡುತ್ತದೆ. ಆದರೆ, ಭುಜದೆತ್ತರಕ್ಕೆ ಬೆಳೆದು ನಿಂತ ಮಗನನ್ನು ಕಳೆದುಕೊಂಡ ಹೆತ್ತವರಿಗಷ್ಟೇ ಆ ನೋವಿನ ತೀವ್ರತೆ ತಟ್ಟುವುದು. ಅದೇ ನೋವಿನಲ್ಲಿ ಮಾತನಾಡಿದವರು ಹುತಾತ್ಮ ಯೋಧ ಔರಂಗಜೇಬ್ ತಂದೆ. ದೇಶಕ್ಕಾಗಿ ಪ್ರಾಣ ಕೊಡುತ್ತೇನೆಂದಿದ್ದ ನನ್ನ ಮಗ ತನ್ನ ಮಾತನ್ನು ಉಳಿಸಿಕೊಂಡಿದ್ದಾನೆ, ಅವನ ಸಾವಿಗೆ ತಕ್ಕ ಉತ್ತರವನ್ನು 72 ಗಂಟೆಗಳೊಳಗೇ ನೀಡಿ ಎಂದು ಪ್ರಧಾನಿ ಮೋದಿಯವರನ್ನು ಅವರು ಆಗ್ರಹಿಸಿದ್ದಾರೆ. ಮೊನ್ನೆ ರಂಜಾನ್ ಹಬ್ಬಕ್ಕೆಂದು ರಜೆಯಲ್ಲಿ ಮನೆಗೆ ತೆರಳುತ್ತಿದ್ದ ಯೋಧ ಔರಂಗಜೇಬ್ ರನ್ನು ಅಪಹರಿಸಿದ ಉಗ್ರಗ್ರಾಮಿಗಳು ತಲೆ, ಕತ್ತಿನ ಭಾಗಕ್ಕೆ ಗುಂಡಿಟ್ಟು ಕೊಂದಿದ್ದಾರೆ. ಅದೇ ದಿನ ರೈಸಿಂಗ್ ಕಾಶ್ಮೀರ್ ಎಂಬ ಪತ್ರಿಕೆಯ ಸಂಪಾದಕ ಶುಜಾತ್ ಬುಖಾರಿ ಮತ್ತವರ ಖಾಸಗಿ ಅಂಗರಕ್ಷಕರನ್ನು ಉಗ್ರರು ಕೊಂದಿದ್ದಾರೆ. ಇವೆಲ್ಲಾ ಕೇಂದ್ರ ಸರ್ಕಾರದ ತಲೆಕೆಟ್ಟ ನಿರ್ಧಾರವಾಗಿದ್ದ ಪವಿತ್ರ ತಿಂಗಳಲ್ಲಿ ಭದ್ರತಾಪಡೆಗಳ ಮೇಲೆ ಏಕಪಕ್ಷೀಯ ಕದನವಿರಾಮ ಹೇರಿಕೆಯ ಫಲ. ಮತ್ತಷ್ಟು ಓದು 




