ಕಾರಂತ ಸಾಹಿತ್ಯ: ಪರಿಸರ ವಿನಾಶ ಮತ್ತು ವಲಸೆ ರಾಜಕಾರಣ (ಭಾಗ-೧)
ದೇವು ಹನೆಹಳ್ಳಿ
ಬಂಡಿಮಠ, ಹನೆಹಳ್ಳಿ ಗ್ರಾಮ,
ಬಾರಕೂರು, ಉಡುಪಿ ತಾಲೂಕು-ಜಿಲ್ಲೆ.
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜು ಯು.ಜಿ.ಸಿ ಅನುದಾನದಲ್ಲಿ ಸುಬ್ರಹ್ಮಣ್ಯದಲ್ಲಿ ಏರ್ಪಡಿಸಿದ ಎರಡು ದಿನಗಳ ವಿಚಾರಸಂಕಿರಣದಲ್ಲಿ ದಿನಾಂಕ 4-3-2017ರಂದು ಮಂಡಿಸಿದ ಲೇಖನ.
ಸತ್ಯಮೇವ ಜಯತೆ ನ ಅನೃತಂ ಎಂಬ ಪರಮ ಪವಿತ್ರ ಸುಳ್ಳಿನ ಕೃಪಾಛತ್ರದಡಿಯಲ್ಲಿ ಮಾತನಾಡುವುದು, ಬದುಕುವುದು ಅದೆಷ್ಟು ಸುಖದಾಯಕ ಎಂಬುದು ಕೇಂದ್ರ ಸಚಿವ ಕಿರಣ್ ರಿಜುಜು ಅವರಿಗೆ ಅರ್ಥವಾಗಿರಬಹುದು; ನ್ಯಾಯಮೂರ್ತಿ ಕರ್ಣನ್ ಅವರಿಗೆ ಬಲು ಚೆನ್ನಾಗಿಯೇ ಅರ್ಥವಾಗಿರಬೇಕು.*1 ಹಾಗೆಯೇ, Whatsapp, Facebookಗಳ ಕೆಮರಾ ಮುಂದೆ ಕರಕಲಾದ, ಹಳಸಲು ವಾಸನೆ ಬೀರುತ್ತಿರುವ ರೊಟ್ಟಿಯನ್ನು ಹಿಡಿದು `ದಂಗೆಯೆದ್ದ’ ಸೈನಿಕರಿಗೆ ಮೈಕೈ ನೋಯುವಂತೆ ಅರ್ಥವಾಗಿರಬಹುದು. ಇವತ್ತು ಅಂತಹ ಒಂದು ಹಳಸಲು ರೊಟ್ಟಿಯನ್ನು ನಿಮಗೆಲ್ಲ ಬಡಿಸಲು ನಿಂತಿದ್ದೇನೆ. ಅದು ಕನ್ನಡ ಸಾಹಿತ್ಯದಲ್ಲಿ ಶಿವರಾಮ ಕಾರಂತರು ಹಿಡಿದ ರೊಟ್ಟಿ. ಬಲು ಸ್ವಾದಿಷ್ಟ ರೊಟ್ಟಿಯೆಂದು ಬಾಯಲ್ಲಿ ಹೇಳುತ್ತಾ ಹಲವಾರು ಮಂದಿ ಕನ್ನಡದ ಸಾಹಿತಿಗಳು, ರಾಜಕಾರಣಿಗಳು, ಬುದ್ಧಿಜೀವಿಗಳು ಮತ್ತು ವಿಮರ್ಶಕರು ಮೂಗುಮುಚ್ಚಿಕೊಂಡೇ ಸವಿಸವಿದು ತಿಂದ ಕೊಳೆತ ರೊಟ್ಟಿ. King is naked ಎಂದು ಘೋಷಿಸಿಬಿಡುವುದು ಜಾಣತನವೂ ಅಲ್ಲ, ಲಾಭದಾಯಕವೂ ಅಲ್ಲ, politically correct, politically lucrative ಕೂಡಾ ಅಲ್ಲ. ಆದರೂ ಹೇಳುವ ಮನಸ್ಸು ಮಾಡಿದ್ದೇನೆ. ಕಳೆದುಕೊಳ್ಳುವುದಕ್ಕೆ ಏನೂ ಉಳಿದಿಲ್ಲ. ಮತ್ತಷ್ಟು ಓದು
ಉತ್ತರ ಸಿಗದ ನನ್ನ ಪ್ರಶ್ನೆಗಳು
– ವಿದ್ಯಾ ಕುಲಕರ್ಣಿ
ಜಿಜ್ಞಾಸು, ಪ್ರಬುದ್ಧರ ಚಿಂತನೆ, ಕುಲುಮೆ, ನಿಲುಮೆ ಈ ಗುಂಪುಗಳಲ್ಲಿ ನಾನು ಕೆಲವು ಪ್ರಶ್ನೆಗಳನ್ನು ಕೇಳುತ್ತಲೇ ಬಂದಿದ್ದೇನೆ. ಅವುಗಳಿಗೆ ಯಾರೂ ಸಮರ್ಪಕ ಉತ್ತರ ಕೊಡದೇ ಪುನಃ ಬೇರೆ ಬೇರೆ ಪ್ರಶ್ನೆ ಕೇಳುತ್ತಲೇ ಹೋಗುತ್ತಾರೆ.
ನನ್ನ ಪ್ರಶ್ನೆಗಳಿಗೆ ಉತ್ತರಿಸಿ ಎಂದರೆ “ಉತ್ತರಿಸಿದ್ದೇನೆ. ನಿಮಗೆ ತಿಳಿಯದಿದ್ದರೆ ಏನು ಮಾಡಲಿ??” “ನಿಮಗೆ ಗ್ರಹಿಸುವ ಶಕ್ತಿ ಇಲ್ಲ ಏನು ಮಾಡಲಿ?” ಇತ್ಯಾದಿ ಹಾರಿಕೆಯ ಉತ್ತರ ಕೊಡುತ್ತಾರೆ. ಹಾಗಿದ್ದರೆ ನನ್ನ ಪ್ರಶ್ನೆಗಳಾದರೂ ಏನು??
ಪುನಃ ಅದೇ ಪ್ರಶ್ನೆಗಳನ್ನು ಕ್ರೋಢೀಕರಿಸಿ ನಂಬರ್ ಕೊಟ್ಟು ಕೇಳುತ್ತಿದ್ದೇನೆ. ಈಗಲಾದರೂ ಉತ್ತರಿಸುವ (ನಂಬರ್ ಪ್ರಕಾರ ಉತ್ತರಿಸುವ) ಸೌಜನ್ಯ ಯಾರಾದರೂ ತೋರಿಸುತ್ತೀರಾ?? ಮತ್ತಷ್ಟು ಓದು
ಆಧ್ಯಾತ್ಮಿಕ ಪ್ರಗತಿ ಮತ್ತು ಭಾರತೀಯ ಸಂಸ್ಕೃತಿ
ಡಾ. ಸಂತೋಷ್ ಕುಮಾರ್ ಪಿ.ಕೆ
ಶಿವಮೊಗ್ಗ.
ದೀನ್ ದಯಾಳ್ ಉಪಾಧ್ಯಾಯ, ಪ್ರಾಯಶಃ ಇವರ ಹೆಸರನ್ನು ನಮ್ಮ ಪೀಳಿಗೆ ಹೆಚ್ಚಾಗಿ ಕೇಳಿಲ್ಲ ಎಂದರೂ ತಪ್ಪಾಗಲಾರದು. ಇಂದಿನ ಭಾರತೀಯ ಜನತಾ ಪಕ್ಷದ ಮೂಲ ಪಕ್ಷವಾದ ಜನಸಂಘವನ್ನು ಸ್ಥಾಪಿಸಿದ ಮಹಾ ನಾಯಕ ದೀನ್ ದಯಾಳ್ ರವರು. ಯಾವುದೋ ರಾಜಕೀಯ ಲಾಭ ಅಥವಾ ವೈಯುಕ್ತಿಕ ಹಿತಾಸಕ್ತಿಗೋಸ್ಕರ ರಾಜಕೀಯ ಪಕ್ಷವನ್ನು ಅವರು ಹುಟ್ಟುಹಾಕಲಿಲ್ಲ. ಬದಲಾಗಿ, ಅವರಲ್ಲಿದ್ದ ಅಧಮ್ಯ ರಾಷ್ಟ್ರಪ್ರೇಮ ಹಾಗೂ ರಾಜಕೀಯ ಸ್ಥಿತ್ಯಂತರಗಳನ್ನು ಸಕಾರಾತ್ಮಕ ದಿಕ್ಕಿಗೆ ತೆಗೆದುಕೊಂಡು ಹೋಗುವ ಇರಾದೆಯಿಂದ ರಾಜಕೀಯ ಪಕ್ಷವನ್ನು ಕಟ್ಟಿದರು. ಇಂದಿನ ಬಹುತೇಕ ರಾಜಕಾರಣಿಗಳಿಗೆ ರಾಜಕಾರಣ ಮಾಡುವುದರಲ್ಲಿ ಕೌಶಲ್ಯವಿದೆಯೇ ಹೊರತು, ರಾಜಕೀಯವನ್ನು ಏಕೆ ಮಾಡಬೇಕು, ಅದರ ಫಲಿತಾಂಶಗಳೇನು ಎನ್ನುವ ಸಮಗ್ರ ಜ್ಞಾನ ಇರುವುದು ಅಪರೂಪ. ಆದರೆ ಇದಕ್ಕೆ ವ್ಯತಿರಿಕ್ತ ಎನ್ನುವಂತೆ, ಬಹಳ ಸ್ಪಷ್ಟವಾಗಿ ಸಂಸ್ಕೃತಿ ಹಾಗೂ ರಾಜಕಾರಣದ ಕುರಿತು ಅಪಾರ ಜ್ಞಾನವನ್ನು ಹೊಂದಿದ್ದ ವ್ಯಕ್ತಿ ಎಂದರೆ ಉಪಾಧ್ಯಾಯರು. ಸಂಸ್ಕೃತಿಯ ಆಳ ಅಗಲಗಳನ್ನು ಅಮೂಲಾಗ್ರವಾಗಿ ಬಲ್ಲಂತಹ ಹಾಗೂ ನಿರ್ಧಿಷ್ಟವಾಗಿ ರಾಜಕೀಯ ವ್ಯವಸ್ಥೆಯ ಉದ್ದೇಶ ಹಾಗೂ ಅದು ತಲುಪಬೇಕಾದ ಗುರಿಗಳನ್ನು ಸ್ಪಷ್ಟೀಕರಿಸಿದ ಮೊದಲ ಭಾರತೀಯ ವ್ಯಕ್ತಿ ಎಂದರೂ ಅತಿಶಯೋಕ್ತಿಯಾಗಲಾರದು. ಈ ಪುಟ್ಟ ಬರವಣಿಗೆಯಲ್ಲಿ ಅವರ ಕೆಲವು ವಿಚಾರಧಾರೆಗಳನ್ನು ಪರಿಚಯಿಸುವ ಮೂಲಕ ನಮ್ಮ ರಾಜಕೀಯ ವ್ಯವಸ್ಥೆಯನ್ನು ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಮಾಡಲಾಗುತ್ತದೆ. ಮತ್ತಷ್ಟು ಓದು
ನಮ್ಮೂರ ಹಬ್ಬ : ತಿಂಗಳು ಮಾಮನ ಹಬ್ಬ
– ಶಾಂತಮ್ಮ ಕೋಡಯ್ಯ
ನಮ್ಮೂರ ಹಬ್ಬ ಪ್ರಬಂಧ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದ ಲೇಖನ
ಪೀಠಿಕೆ: ಹಬ್ಬಗಳು ಗ್ರಾಮದ ಅವಿಭಾಜ್ಯ ಅಂಗಗಳು ಹಳ್ಳಿಗರಿಗೆ ಹಬ್ಬಗಳೇ ಜೀವಾಳ. ಹಬ್ಬಗಳೇ ಮಾದ್ಯಮಗಳು, ಮನೋರಂಜನೆಗಳು.. ನಮ್ಮ ಪೂರ್ವಜರಿಂದ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ಪರಿಚಯಿಸುವ ನಮ್ಮ ಜೀವನದಲ್ಲಿ ಸುಂದರ ಅನುಭವಗಳು ಮತ್ತು ಬಾಲ್ಯ, ಯೌವನ, ಮುಪ್ಪು, ಪ್ರೇಮ ಮುಂತಾದವುಗಳ ಸಂಗಮ. ಹಬ್ಬಗಳು ಹಳ್ಳಿಗರ ಪ್ರತಿಷ್ಠೆ ಕೂಡ ಹೌದು. ಎಲ್ಲ ಜಾತಿಯವರು ಬೆರೆತು, ಭೇದ ಮರೆತು ಒಂದಾಗುವ ಪರಿ ಅದ್ಭುತ. ನಮ್ಮ ಹಿರಿಯರ ಹಾಡು, ಹಸೆ, ಬೈಗುಳ, ಬೆಡಗು, ಬಿನ್ನಾಣ, ಕಾರ್ಯ ವೈಖರಿ ಎಲ್ಲ ಸಂಸ್ಕೃತಿಯನ್ನ ಹೊಂದಿ ಬೆಳೆಯಲು ಸಹಾಕಾರಿ ಈ ತಿಂಗಳಮಾಮನ ಹಬ್ಬ. ಮತ್ತಷ್ಟು ಓದು
ಬಾಲಗಂಗಾಧರ ತಿಲಕರೆಂದರೆ ಸ್ವಾತಂತ್ರ್ಯ ಹೋರಾಟಗಾರ ಮಾತ್ರವಲ್ಲ ಧಾರ್ಮಿಕ ಸಾಮರಸ್ಯ ಮೂಡಿಸಿದ ಧೀಮಂತನಾಯಕ.
ಶಿವಾನಂದ ಶಿವಲಿಂಗ ಸೈದಾಪೂರ
ಬಾಲಗಂಗಾಧರ ತಿಲಕರೆಂದರೆ ಭಾರತದ ಸಂಪೂರ್ಣ ಸ್ವಾತಂತ್ರ್ಯ ಚಳುವಳಿಯ ಮೊದಲ ನಾಯಕ. “ಸ್ವರಾಜ್ಯವೇ ನನ್ನ ಜನ್ಮಸಿದ್ಧ ಹಕ್ಕು” ಎಂದು ಬ್ರಿಟನಿಯರ ವಿರುದ್ಧ ಘರ್ಜಿಸಿದ ಪ್ರಖರ ಹಿಂದೂ ರಾಷ್ಟ್ರವಾದಿ. ಧಾರ್ಮಿಕ ಹಬ್ಬಗಳಾದ ಶಿವಾಜಿ, ಸಾರ್ವಜನಿಕ ಗಣೇಶ ಉತ್ಸವಗಳ ಜನಕ. ಭಾರತೀಯರಲ್ಲಿ ಧಾರ್ಮಿಕ ಸಾಮರಸ್ಯ ಮೂಡಿಸಿ, ಅವರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಅಣಿಗೊಳಿಸಿದ ಏಕೈಕ ಜನನಾಯಕ. ಸಮಸ್ತ ಭಾರತೀಯರ ಬಾಯಿಂದ “ಲೋಕಮಾನ್ಯ”ರೆಂದು ಕರೆಸಿಕೊಂಡವರು. ಮತ್ತಷ್ಟು ಓದು
ನಮ್ಮೂರ ಹಬ್ಬ:- ನಮ್ಮೂರ ತೇರು
– ಸುರೇಖಾ ಭೀಮಗುಳಿ
ಪ್ರತಿ ವರ್ಷ ಮೇ ತಿಂಗಳಲ್ಲಿ ಬೊಮ್ಮಲಾಪುರದಲ್ಲಿ ತ್ರಿಪುರಾಂತಕಿ ಅಮ್ಮನವರ ರಥೋತ್ಸವ! ಅದೊಂದು ಮಧುರ ನೆನಪು… ನೆನಪು ಮಾತ್ರದಿಂದಲೇ ಮನಸ್ಸು ತೇರುಪೇಟೆಯಲ್ಲಿ ಕಳೆದು ಹೋಗುತ್ತದೆ… ಚಿಕ್ಕಮಗಳೂರಿನ ಕೊಪ್ಪ ತಾಲ್ಲೂಕಿನ ಬೊಮ್ಲಾಪುರದಿಂದ ನಾಲ್ಕೈದು ಕಿಲೋಮೀಟರ್ ದೂರದಲ್ಲಿದ್ದ ಕಮ್ಮಕ್ಕಿ ನನ್ನ ತವರೂರು. ಸುತ್ತಮುತ್ತಲ ಊರಿಗೆಲ್ಲ ಬೊಮ್ಲಾಪುರ ತ್ರಿಪುರಾಂತಕಿ ಅಮ್ಮನವರ ರಥೋತ್ಸವ ಎಂದರೆ ಸಾಮೂಹಿಕ ಹಬ್ಬ. ಊರಿಂದ ಹೊರಬಂದು ಬೆಂಗಳೂರಲ್ಲಿ ನೆಲೆಗೊಂಡ ನಾವು ಮಕ್ಕಳ ಹುಟ್ಟುಹಬ್ಬ ದಿನ ಪೂಜೆಗೆ ಕಿರುಕಾಣಿಕೆ ಸಲ್ಲಿಸಿದ್ದೇವೆ. ನಾವು ಮರೆತರೂ ಆ ದೇವಸ್ಥಾನದಿಂದ ಪ್ರಸಾದ ಬರುತ್ತದೆ. ವರ್ಷದ ರಥೋತ್ಸವ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬರುತ್ತದೆ… ಮತ್ತಷ್ಟು ಓದು
ನಮ್ಮೂರ ಹಬ್ಬ – ಕೆಡ್ಡಸ (ಭೂಮಿ ಋತುಮತಿಯಾಗುವುದು)
– ಭರತೇಶ ಅಲಸಂಡೆಮಜಲು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ
ತುಳುನಾಡು ಅಂದ ಕೂಡಲೇ ಅಲ್ಲಿನ ಆಚರಣೆ, ಕ್ರಮ, ನಿಲುವುಗಳಲ್ಲಿ ಒಂದಷ್ಟು ಬಿನ್ನ ವಿಶೇಷತೆಯಿಂದಲೇ ಕೂಡಿರುತ್ತದೆ. ಇಲ್ಲಿ ಪಂಚಭೂತಗಳನ್ನು ವಿವಿಧ ರೀತಿಯಿಂದ ವಿಶೇಷವಾಗಿ ಆಚರಿಸುವುದು ವಾಡಿಕೆ. ಹೌದು, ಇಲ್ಲಿ ಹೆಣ್ಣಿಗೆ ವಿಶೇಷ ಸ್ಥಾನಮಾನವಿದೆ ಹಿಂದಿನಿಂದಲೂ ಅಕ್ಕನೇ ಮನೆಯೊಡತಿ, ಆಳಿಯಕಟ್ಟು ಪದ್ಧತಿಯೇ ಇದಕ್ಕೆ ಮೊಹರು… ಹೌದು ಅದುದರಿಂದಲೇ ಇಲ್ಲಿ ಭೂಮಿಯನ್ನು ಹೆಣ್ಣು ಎಂದು ಸಂಕಲ್ಪಿಸಿ ಮಾನುಷಿಕವಾಗಿ ಸಾಮಾನ್ಯ ಸ್ತ್ರಿಯಲ್ಲಾಗುವ ಪ್ರಕೃತಿ ಸಹಜ ಬದಲಾವಣೆಯನ್ನು ಭೂತಾಯಿಯಲ್ಲಿ ಸಂಭೂತ ಮಿಲಿತವಾಗಿಸಿ ಅವಳನ್ನು ದೇವಿಯೆಂದು ಅರಾಧಿಸುವುದು, ಅವಳ ಮೊದಲ ಋತುಸ್ರಾವವನ್ನು ಸಂಭ್ರಮಿಸುವುದು, ಹೇಗೆ ಮನೆ ಹುಡುಗಿ ದೊಡ್ಡವಳಾದಳೆಂದು ಮನೆಯವರೆಲ್ಲಾ ಸಂಭ್ರಮಿಸುತ್ತಾರೋ, ಮದಿಮಾಲ್ ಮದಿಮೆ ಮಾಡಿ ಊರವರನ್ನೆಲ್ಲಾ ಕರೆದು ಪುಟ್ಟ ಮಗಳಿಗೆ ಸೀರೆ ಉಡಿಸಿ ಮದುವೆ ಮಾಡುತ್ತರೋ… ಮತ್ತಷ್ಟು ಓದು
ನಮ್ಮೂರ ಹಬ್ಬ- ನುಡಿ ಮತ್ತು ಭೇಟಿ
– ಪ್ರಮೋದ್ ಜತ್ಕರ
ನನ್ನದು ಗುಮ್ಮಟ ನಗರಿ ವಿಜಯಪುರ. ತನ್ನದೇ ಆದ ಕಲಾ ಸ್ವಂತಿಕೆ ಹೊಂದಿರುವಂತಹದ್ದು. ಇಲ್ಲಿ ತಾಲುಕಿಗೊಂದು ಭಾಷೆ, ವಲಯಕ್ಕೊಂದು ಆಚರಣೆ, ಊರಿಗೊಂದು ದೈವ.. ಹೀಗೆ ವೈಶಿಷ್ಟ್ಯವಾದದ್ದು. ಇದು ಕೇವಲ ನಮ್ಮ ಜಿಲ್ಲೆಯ ವೈಶಿಷ್ಟ್ಯವಲ್ಲ ಇಡೀ ಭಾರತದ ವೈಶಿಷ್ಟ್ಯ, ಅದಕ್ಕೆಂದೇ ನಾವು ವಿವಿಧತೆಯನ್ನು ಪ್ರದರ್ಶಿಸುವವರು… (ಏಕತೆ ಎಂದು ಹೇಳಲಾರೆ!).
ನನ್ನೂರು ವಿಜಯಪುರದ ಇಂಡಿ ತಾಲ್ಲೂಕಿನ ಚಡಚಣ ವಲಯದಲ್ಲಿ ಬರುತ್ತದೆ. ನನ್ನೂರು ಒಂದು ಚಿಕ್ಕ ಹಳ್ಳಿ, ನಿವರಗಿ ಅಂತ ಅದರ ಹೆಸರು, ಭೀಮೆಯ ತಂಪಿನಲ್ಲಿ ಬೆಳೆದ ಊರು. ಅವಳೇ ನಮಗೆ ದೈವಗಳ ದೈವ.. ಭೀಮೆ ದಾಟಿದರೆ ಮಹಾರಾಷ್ಟ್ರ. ನಮ್ಮ ಸಂಪ್ರದಾಯಗಳು ಸಾಮಾನ್ಯವಾಗಿ ಮಹಾರಾಷ್ಟ್ರದ ಸಂಪ್ರದಾಯಗಳಿಗೆ ಹೋಲುತ್ತವೆ.
ನಮ್ಮಲ್ಲಿನ ಪ್ರಮುಖ ಸಂಪ್ರದಾಯಗಳಲ್ಲಿ “ನುಡಿ” ಮತ್ತು “ಭೇಟಿ” ಎಂಬ ಎರಡು ಸಂಪ್ರದಾಯಗಳು ಬಹು ಮುಖ್ಯವಾದವು. ಮತ್ತಷ್ಟು ಓದು
ನಮ್ಮೂರ ಹಬ್ಬ – ಋಷ್ಯಶೃಂಗೇಶ್ವರನ ರಥೋತ್ಸವ
– ಅಪರ್ಣ ಜಿ. ಸಿರಿಮನೆ
ಹಬ್ಬಗಳು ಸಾಮಾಜಿಕ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಅದರಲ್ಲೂ ಪಾರಂಪರಿಕವಾಗಿ ನಡೆದುಕೊಂಡು ಬರುವ ಊರ ಹಬ್ಬಗಳು ಸಾಮಾಜಿಕ ಒಗ್ಗಟ್ಟನ್ನು ಪ್ರತಿನಿಧಿಸುವುದರಲ್ಲಿ ಎರಡು ಮಾತಿಲ್ಲ. ಮಲೆನಾಡಿನ ದಟ್ಟ ಹಸಿರಿನ ನಡುವೆ ರಮಣೀಯತೆಯನ್ನೇ ಹಾಸಿ ಹೊದ್ದಿರುವ ಒಂದು ಪುಟ್ಟ ಗ್ರಾಮ ‘ಕಿಗ್ಗಾ’ ನಮ್ಮೂರು. ಪ್ರಾಕೃತಿಕ ಸೌಂದರ್ಯದಿಂದಲೇ ಜನರನ್ನು ತನ್ನೆಡೆಗೆ ಸೆಳೆಯುವ ನಮ್ಮೂರು ಮಳೆದೇವರೆಂದೇ ಹೆಸರಾಗಿರುವ ಋಷ್ಯಶೃಂಗೇಶ್ವರ ನೆಲೆಸಿರುವ ಪುಣ್ಯಕ್ಷೇತ್ರ. ಪ್ರತಿವರ್ಷವೂ ನಡೆಯುವ ಋಷ್ಯಶೃಂಗೇಶ್ವರನ ರಥೋತ್ಸವ ನಮ್ಮೂರಿನ ಪ್ರಮುಖ ಹಬ್ಬ. ಮತ್ತಷ್ಟು ಓದು
ನಮ್ಮೂರ ಹಬ್ಬ – ಹೊಸ ಹುರುಪಿನ ಹೊಸ್ತು
– ಸ್ವಾತಿ ಶೆಟ್ಟಿ
ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ
ಎಳ್ಳು ಜೀರಿಗೆ ಬೆಳೆಯೋಳ ಭೂಮಿತಾಯಿ
ಎದ್ದೊಂದುಗಳಿಗೆ ನೆನೆದೇನು…
ಮೋಡ ಮಳೆಗೆ ಮೂಲ, ಮಕ್ಕಳಿಗೆ ತಾಯಿ ಮೂಲ, ಬೆಳಕಿಗೆ ಸೂರ್ಯ ಮೂಲ, ಭೂಮಿತಾಯಿ ಬೆಳೆಗೆ ಮೂಲ. ಹೌದು, ನಮ್ಮದು ಕೃಷಿ ಪ್ರದಾನವಾದ ವ್ಯವಸ್ಥೆ ರೈತರಿಗೆ ಅನ್ನ ನೀಡುವ ಭೂಮಿ ತಾಯಿ ಹಾಗೂ ಕೃಷಿಯೊಂದಿಗೆ ಅವಿನಾಭಾವ ಸಂಭಂದವಿದೆ. ಭೂಮಿಯನ್ನು ಹಾಗೂ ಕೃಷಿಯನ್ನು ಈ ಹಿನ್ನೆಲೆಯಲ್ಲಿ ಪೂಜ್ಯ ಭಾವನೆಯಿಂದ ಆರಾಧಿಸಿಕೊಂಡು ಬಂದಿದ್ದೇವೆ. ನಮ್ಮ ಕರಾವಳಿಯ ಹೆಚ್ಚಿನ ಎಲ್ಲಾ ಆಚರಣೆಗಳು ಕೃಷಿ ಸಂಬಂಧಿತವಾದ ಆಚರಣೆಗಳಾಗಿ ರೂಢಿಯಲ್ಲಿದೆ. ಮತ್ತಷ್ಟು ಓದು