ಗಾಳಿ ಮಾತು!!!
– ಮಧು ಚಂದ್ರ, ಭದ್ರಾವತಿ

ಅರ್ಕಿಮಿಡಿಸ್, ಎಂದರೆ ತಕ್ಕ್ಷಣ ನೆನಪಿಗೆ ಬರುವುದು “ಯುರೇಕಾ, ಯುರೇಕಾ” ಎಂದು ಬಚ್ಚಲಿನಿಂದ ಬೆತ್ತಲಾಗಿ ಬೀದಿಯಲ್ಲಿ ಓಡಿದ ವ್ಯಕ್ತಿ . ವಸ್ತುವು ತನ್ನ ಗಾತ್ರದಷ್ಟೇ ನೀರನ್ನು ಸ್ಥಾನಪಲ್ಲಟಗೊಳಿಸುವುದು ಎಂದು, ಇದರಿಂದ ತನ್ನ ರಾಜನ ಚಿನ್ನದ ಕಿರೀಟದ ಸಮಸ್ಯೆಗೆ ಪರಿಹಾರ ಕಂಡು ಹಿಡಿದ ಗ್ರೀಕ್ ದೇಶದ ಗಣಿತಜ್ಞ, ತತ್ವಜ್ಞಾನಿ, ಮೇಧಾವಿ, ವಿಜ್ಞಾನಿ.
ಇಂದು ನಾನು ಹೇಳಬಯಸುವುದು ಅರ್ಕಿಮಿಡಿಸನ ದುರಂತ ಅಂತ್ಯದ ಬಗ್ಗೆ.
ರೋಮನ್ ಸೇನೆಯ ನಾಯಕನಾದ ಮರ್ಸಿಲಸ್(Marcellus) ಸ್ಯರಕಾಸ್(Syracuse) ನಗರವನ್ನು ಆಕ್ರಮಿಸಿದ. ಆಗ ಅವನು ತತ್ವಜ್ಞಾನಿ ಅರ್ಕಿಮಿಡಿಸ್ನನ್ನು ನೋಡಲು ಇಚ್ಛೆ ವ್ಯಕ್ತಪಡಿಸಿದ. ತನ್ನ ಸೇನೆಯ ಅಧಿಕಾರಿಯನ್ನು ಕರೆದು
” See if you can find archimedes for me! I should like to see him!” ಎಂದು ಹೇಳಿದ.
ನಂತರ ಅ ಅಧಿಕಾರಿ ತನ್ನ ಕೆಳಗಿನ ಅಧಿಕಾರಿಗೆ ಮರ್ಸಿಲಸ್ ಆಸೆಯನ್ನು ಹೇಳಿದ. ಕಡೆಗೆ ಅದು ಅಲ್ಲಿನ ಕಟ್ಟ ಕಡೆಯ ಸೈನಿಕನಿಗೆ ಮುಟ್ಟಿದಾಗ ಮೆರ್ಸಿಲಸ್ ನೀಡಿದ ಮಾಹಿತಿ ಮೂಲವೆ ಬದಲಾಗಿತ್ತು. ಇದು ಮೆರ್ಸಿಲಸ್ ಇಚ್ಛೆ ಬದಲಾಗಿ ಆದೇಶದ ರೂಪ ಪಡೆದಿತ್ತು.
“Find Archimededes ! the general wants him!” ಎಂದಾಗಿತ್ತು.
ನಿನ್ನೆಗೆ ನನ್ನ ಮಾತು …. ಭಾಗ 3
– ಮು ಅ ಶ್ರೀರಂಗ ಬೆಂಗಳೂರು
ಭಾಗ ೧ : ದೀಪವೂ ನಿನ್ನದೇ ಗಾಳಿಯೂ ನಿನ್ನದೇ ಆರದಿರಲಿ ಬೆಳಕೂ
ಭಾಗ ೨ : ಕಡಲು ನಿನ್ನದೇ ಹಡಗು ನಿನ್ನದೇ ಮುಳುಗದಿರಲಿ ಬದುಕು
ಅಂಚೆ ಗುಮಾಸ್ತನ ಕೆಲಸದ ತರಬೇತಿಗೆಂದು ಡಿಸೆಂಬರ್ ೧೯೭೮ರ ಕೊನೆಯ ವಾರದಲ್ಲಿ ಕೋಲಾರದಲ್ಲಿ ಬಂದಿಳಿದಾಗ ಮಧ್ಯಾನ್ಹ ಒಂದು ಗಂಟೆಯಾಗಿತ್ತು. ಬೆಳಗ್ಗೆ ಮಾಗಡಿಯಿಂದ ಹೊರಟಾಗ ಚಳಿಯಿತ್ತು. ಆದ್ದರಿಂದ ಬೆಚ್ಚಗಿರಲಿ ಎಂದು ಆಗ ಜೀನ್ಸ್ ಎಂದು ಕರೆಸಿಕೊಳ್ಳುತ್ತಿದ್ದ ದಪ್ಪ textureನ ಪ್ಯಾಂಟು ಮತ್ತು ಪ್ಯಾಂಟಿನ ಬಟ್ಟೆಯಷ್ಟೇ ದಪ್ಪವಿದ್ದ ಬಣ್ಣ ಬಣ್ಣದ ಬಟ್ಟೆಯಿಂದ ಹೊಲಿಸಿಕೊಂಡಿದ್ದ ಒಂದು ಫುಲ್ ತೋಳಿನ ಷರ್ಟ್ ಹಾಕಿಕೊಂಡಿದ್ದೆ. ಒಂದು ಕಡಿಮೆ ದರ್ಜೆಯ ದೊಡ್ಡ ಏರ್ ಬ್ಯಾಗ್ ನಲ್ಲಿ ಒಂದಷ್ಟು ಬಟ್ಟೆಗಳನ್ನು ತುಂಬಿಕೊಂಡು ಮಿಕ್ಕಿದ್ದನ್ನು ಒಂದು ಕೈ ಚೀಲದಲ್ಲಿ ಹಾಕಿಕೊಂಡು ಹೊರಟಿದ್ದೆ. ನಾನು ಈ ಮೊದಲು ಕೋಲಾರ ನೋಡಿರಲಿಲ್ಲ. ಬಸ್ ನಿಲ್ದಾಣದಲ್ಲಿ ಇಳಿದ ಮೇಲೆ ಒಂದಿಬ್ಬರನ್ನು ದಾರಿ ಕೇಳಿಕೊಂಡು .ಅಂಚೆ ಇಲಾಖೆಯ ಆಡಳಿತ ಕಛೇರಿಯನ್ನು ಪ್ರವೇಶ ಮಾಡಿದ್ದಾಯ್ತು. ಮೊದಲು ಅಲ್ಲಿ report ಮಾಡಿಕೊಳ್ಳ ಬೇಕಾಗಿತ್ತು. ಮೊದಲ ದಿನದ ಭಯ ಮಿಶ್ರಿತ ಆತಂಕ ಸಹಜ ತಾನೇ? ಜತೆಗೆ ನನ್ನ ವೇಷ-ಭೂಷಣ ಇವೆಲ್ಲ ಕಂಡು ಆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ, ಅಕ್ಕ ಪಕ್ಕ ಕೂತಿದ್ದ ಒಂದಿಬ್ಬರು ಲಲನಾಮಣಿಗಳು ಪರಸ್ಪರ ಮೆಲು ದನಿಯಲ್ಲಿ ಮಾತಾಡಿಕೊಂಡು ನಕ್ಕಂತಾಯ್ತು. ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ನನ್ನ ಪ್ರವರ ಒಪ್ಪಿಸಿದ್ದಾಯ್ತು. ಅವರು ಕೇಳಿದ ದಾಖಲಾತಿ ಪತ್ರಗಳು,ಸರ್ಟಿಫಿಕೇಟ್ ಇತ್ಯಾದಿಗಳನ್ನೆಲ್ಲ ತೋರಿಸಿದ್ದಾಯ್ತು.
ಜೀವನವೆ೦ಬ ಪತ್ತೆದಾರಿ ಕಾದ೦ಬರಿ
– ಗುರುರಾಜ್ ಕೊಡ್ಕಣಿ
“ನೀನಿನ್ನು ಪತ್ರಿಕೆಗಳಿಗೆ ಕಥೆ ಕಳುಹಿಸಬೇಡ,ನಿನ್ನ ಕಥೆಗಳಲ್ಲಿ ಗುಣಮಟ್ಟವಿಲ್ಲ,ನೀನು ಕಥೆಗಾರನಾಗಲು ಸಾಧ್ಯವೇ ಇಲ್ಲ.”
ಹೀಗೊ೦ದು ಪತ್ರ, ಪತ್ರಿಕಾ ಸ೦ಪಾದಕರಿ೦ದ ಬ೦ದಾಗ,ಕಥೆಗಾರನಾಗುವ ಕನಸೆ೦ಬ ಮುತ್ತಿನ ಹಾರ ಛಟ್ಟನೆ ಹರಿದುಹೋಗಿ ಮುತ್ತುಗಳೆಲ್ಲವೂ ರಪರಪನೆ ನೆಲದ ಮೇಲೆ ಹರಡಿಬಿದ್ದ ಅನುಭವ ಆ ಹುಡುಗನಿಗೆ.ಅವನು ತು೦ಬಾ ಖಿನ್ನನಾಗಿದ್ದ.ಪತ್ರಿಕೆಗೆ ಪ್ರಕಟಣೆಗೆ೦ದು ಕಳುಹಿಸಿದ್ದ ಅವನ ಕಥೆಗಳು ಸಾಲುಸಾಲಾಗಿ ಮರಳಿ ಬ೦ದಿದ್ದವು.ಅತ್ಯ೦ತ ನಿರಾಸೆಯಿ೦ದ ದಿನವಿಡಿ ಮನೆಯ ಮೂಲೆಯೊ೦ದರಲ್ಲಿ ಕೂತು ಆತ್ತಿದ್ದ ಅವನು ಸ೦ಜೆ ಹೊತ್ತಿಗಾಗಲೇ ಒ೦ದು ನಿರ್ಧಾರಕ್ಕೆ ಬ೦ದಿದ್ದ.ಯಸ್..! ತಾನಿನ್ನು ಬದುಕಿರಬಾರದು,ಕಥೆಗಾರನಾಗದಿದ್ದ ಮೇಲೆ ತಾನು ಬದುಕಿದ್ದು ಪ್ರಯೋಜನವಿಲ್ಲ,ತಾನಿನ್ನು ಆತ್ಮಹತ್ಯೆ ಮಾಡಿಕೊಳ್ಳುವುದೇ ಲೇಸು.ಹಾಗೆ ನಿಶ್ಚಯಿಸಿದವನೇ ಅಪ್ಪನ ಕೋಣೆಯಲ್ಲಿದ್ದ ನಿದ್ದೆ ಮಾತ್ರೆಗಳ ಬಾಟಲಿಯನ್ನು ಕಳ್ಳನ೦ತೆ ತೆಗೆದುಕೊ೦ಡು ತನ್ನ ಕೊಣೆಗೆ ಓಡಿದ.ಒ೦ದು ಗ್ಲಾಸಿನ ತು೦ಬಾ ನೀರು ತು೦ಬಿಕೊ೦ಡು,ಮುಷ್ಟಿ ತು೦ಬಾ ಮಾತ್ರೆಗಳನ್ನು ಹಿಡಿದು,ಇನ್ನೇನು ಬಾಯಿಗೆ ಹಾಕಬೇಕು ಎನ್ನುವಷ್ಟರಲ್ಲಿ ,ಯಾರೋ ತನ್ನನ್ನು ಗಮನಿಸುತ್ತಿದ್ದಾರೆ ಎ೦ಬ ಅನುಮಾನ ಮೂಡಿ ಒಮ್ಮೆ ಕೋಣೆಯ ಸುತ್ತ ನೋಡಿದ.ಕೋಣೆಯ ಬಾಗಿಲೆಡೆಗೆ ನೋಡಿದವನಿಗೆ ಒ೦ದು ಕ್ಷಣ ಗಾಭರಿಯಾಗಿಬಿಟ್ಟಿತು. ಅಲ್ಲಿ ಅವನ ಅಪ್ಪ ಅವನನ್ನೇ ನೋಡುತ್ತಾ ನಿ೦ತಿದ್ದರು.ಅವನು ಮಾತ್ರೆಗಳನ್ನು ಮುಚ್ಚಿಡಬೇಕು ಎನ್ನುವಷ್ಟರಲ್ಲಿ ತ೦ದೆಯೇ ಅವನ ಕೈ ಹಿಡಿದು ಮಾತನಾಡಿಸಿದರು.
’ಯಾಕೆ ಮಗು,ಸಾಯುವ ಯೋಚನೆ ಮಾಡುತ್ತಿದ್ದೀಯಾ..? ಈಗಿನ್ನೂ ಹದಿನೇಳು ವರ್ಷ ವಯಸ್ಸು ನಿನಗೆ!! ಸಾಯುವ೦ಥದ್ದೇನಾಗಿದೆ ,ನಾನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲವೇ..’?? ಎ೦ದು ಕೇಳಿದರು ಅಪ್ಪ ಶಾ೦ತವಾಗಿ.ಮಗ ಸಾಯುವ ಪ್ರಯತ್ನ ಮಾಡುತ್ತಿದ್ದರೂ ,ಅಪ್ಪ ಯಾವುದೇ ಭಾವೋದ್ವೇಗಕ್ಕೊಳಗಾಗದ್ದನ್ನು ಕ೦ಡು ಹುಡುಗನಿಗೆ ಆಶ್ಚರ್ಯವಾಯಿತಾದರೂ,ತಾನು ಸಾಯುವುದು ನಿಶ್ಚಿತವಾದುದರಿ೦ದ ತ೦ದೆಗೆ ಎಲ್ಲವನ್ನೂ ಹೇಳಿ ಬಿಡುವುದೇ ಸರಿಯೆ೦ದು ಅವನು ಭಾವಿಸಿದ .
ಜೀವನ ಪ್ರೀತಿಯ ಪ್ರತಿಬಿಂಬ – ಗೋಲ್ಡ್ ಅಂಡ್ ಕಾಪರ್
– ಡಾ ಅಶೋಕ್ ಕೆ ಆರ್
ಸಿನಿಮಾ ಅಂದ್ರೆ ಹೀರೋ ಹೀರೋಯಿನ್ ವಿಲನ್ ಇರಲೇಬೇಕೆಂಬ ಮನೋಭಾವವೇ ಹೆಚ್ಚು. ವಿಲನ್ ಇದ್ದ ಮೇಲೆ ಫೈಟು, ಹೀರೋ ಹೀರೋಯಿನ್ ಇದ್ದ ಮೇಲೆ ಒಂದಷ್ಟು ಸಾಂಗ್ಸು ಕಂಪಲ್ಸರಿ! ಪರದೇಶದ ಚಿತ್ರಗಳನ್ನು ವೀಕ್ಷಿಸಿದಾಗ ಹಾಡುಗಳಿರದೇ ಇದ್ದರೂ ಉಳಿದ ಅಂಶಗಳು ಹೆಚ್ಚು ಕಡಿಮೆ ಇದ್ದೇ ಇರುತ್ತವೆ. ಇವೆಲ್ಲ ಸಿದ್ಧಸೂತ್ರಗಳನ್ನು ತಿರಸ್ಕರಿಸಿ ಹೊಸತೊಂದು ನಿರೂಪಣೆಯ ಚಿತ್ರಗಳು ಅವಾಗಿವಾಗ ನಿರ್ಮಾಣವಾಗುತ್ತವೆ. ಅಂಥದೊಂದು ಇರಾನಿ ಚಿತ್ರ “ಗೋಲ್ಡ್ ಅಂಡ್ ಕಾಪರ್”. ಇಲ್ಲೂ ಹೀರೋ ಇದ್ದಾನೆ ಹೀರೋಯಿನ್ ಇದ್ದಾಳೆ ವಿಲನ್ ಕೂಡ ಇದೆ! ಇದೆ ಯಾಕೆಂದರೆ ವಿಲನ್ ಒಂದು ಖಾಯಿಲೆಯ ರೂಪದಲ್ಲಿ ಹೀರೋನ ಮನಸ್ಸಿನ ರೂಪದಲ್ಲಿ ಇದೆಯೇ ಹೊರತು ವಿಲನ್ ಒಬ್ಬ ವ್ಯಕ್ತಿಯ ರೂಪದಲ್ಲಿಲ್ಲ. ಹೋಮಾಯುನ ಅಸಾದಿಯನ್ (Homayoun Asadian) ನಿರ್ದೇಶನದ ಪರ್ಷಿಯನ್ ಭಾಷೆಯ ಈ ಚಿತ್ರ ಅಪರೂಪದ ಖಾಯಿಲೆಯೊಂದು ಹೇಗೆ ಒಂದು ಇಡೀ ಕುಟುಂಬದ ಜೀವನ ರೀತಿಯನ್ನು ಅಸ್ತವ್ಯಸ್ತಗೊಳಿಸುತ್ತದೆ ಎಂದು ತಿಳಿಸುವುದರ ಜೊತೆಜೊತೆಗೆ ಆ ಮಾರಣಾಂತಿಕ ಖಾಯಿಲೆ ಮನುಷ್ಯನ ಮನದ ಒಳಪದರದಲ್ಲಿ ಕಳೆದುಹೋಗಿದ್ದ ಸೂಕ್ಷ್ಮತೆಯನ್ನು ಹೊರತೆಗೆಯುವುದರಲ್ಲಿಯೂ ಸಹಕರಿಸುತ್ತದೆ!ಜನ ಮನ್ನಣೆ
– ಮಧು ಚಂದ್ರ, ಭದ್ರಾವತಿ
ಇಂದು ಅತ್ಯಂತ ಪ್ರಸ್ತುತದಲ್ಲಿರುವ ಪದ ಎಂದರೆ ” ಜನ ಮನ್ನಣೆ “. ಅದಕ್ಕಾಗಿ ನಾವು ಏನೆಲ್ಲಾ ಮಾಡುತ್ತೇವೆ. ದಾನ ಮಾಡಿದಾಗ ನಮ್ಮ ಹೆಸರು, ಶಂಕು ಸ್ಥಾಪನೆ ಮಾಡಿದಾಗ ನಮ್ಮ ಹೆಸರು( ಕಾಮಗಾರಿ ಆಗುತ್ತೋ ಇಲ್ಲವೋ), ಕಂಡ ಕಂಡಲೆಲ್ಲ ಹೆಸರು ರಾರಜಿಸುವುದಕ್ಕೆ ಏನೆಲ್ಲಾ ಮಾಡಬಹುದು ಎಲ್ಲಾ ಮಾಡುತ್ತೇವೆ. ಆದರೆ ಅದನ್ನು ಇಂದಿನ ಮಾನವ ಕೇವಲ ಕ್ಷಣಕ್ಕೆ ಮಾತ್ರ ಪರಿಗಣಿಸಿ ನಂತರ ಕಡೆಗಣಿಸುತ್ತಾನೆ. ಅವರಾರು ತಮ್ಮ ಹೆಸರನ್ನು ಕಡೆಯವರೆಗೂ ಉಳಿಸಿಕೊಂಡು ಮನ್ನಣೆ ಪಡೆಯಲು ಸಾಧ್ಯವಾಗದೆ ಅಳಿದು ಹೋಗುತ್ತಾರೆ .ಇಂದು ಸೇವಾ ಮನೋಭಾವವಿಲ್ಲದ ದಾನ ಕೇವಲ ಪ್ರಚಾರಕ್ಕೆ ಮಾತ್ರ ನಿಮಿತ್ತ. ಅಂದರೆ ದಾನಿಗಳು ಇರುವವರೆಗೂ ಮಾತ್ರ, ಅವರಳಿದ ಮೇಲೆ ಅವು ಸಹ ಅಳಿಯುತ್ತದೆ. ಅವು ಎಂದೂ ಜನರ ಮನದಲ್ಲಿ ಉಳಿಯುವುದೇ ಇಲ್ಲ. ಸ್ವಾರ್ಥದ ಸೇವೆ ಎಲ್ಲಿಯೂ ಸಲ್ಲುವುದಿಲ್ಲ. ನಿಸ್ವಾರ್ಥ ಸೇವೆ ಇಂದು ಕಣ್ಮರೆಯಾಗುತ್ತಿದೆ. ನಿಸ್ವಾರ್ಥ ಸೇವೆ ಎನ್ನುವುದು ಎಂದೆಂದಿಗೂ ಶಾಶ್ವತ ಎನ್ನುವುದಕ್ಕೆ ಒಂದು ಚಿಕ್ಕ ಉದಾಹರಣೆ ನಿಮ್ಮ ಮುಂದೆ ನೀಡುತ್ತಿದ್ದೇನೆ. ಆಮೇಲೆ ಸೇವೆ ಎನ್ನುವ ಪದಕ್ಕೆ ಸಮಾನಾರ್ಥಕ ಪದ ನೀವೇ ನಿರ್ಧರಿಸಿ.
ಕನ್ನಂಬಾಡಿ ಆಣೆಕಟ್ಟು ನಿರ್ಮಾಣವಾದ ನಂತರ ಪ್ರತಿದಿನವೂ ದೇಶ ವಿದೇಶಗಳಿಂದ ಜನರು ಭೇಟಿ ನೀಡುತ್ತಿದ್ದರು. ಅ ಸಮಯದಲ್ಲಿ ಕನ್ನಂಬಾಡಿ ಕಟ್ಟೆಯ ನಿರ್ಮಾತರ ಹೆಸರಿನ ಫಲಕಗಳು, ಗುರುತುಗಳು ಸಹ ಇರಲಿಲ್ಲ. ಓಮ್ಮೆ ಆಂಧ್ರದ ಹಳ್ಳಿಯ ರೈತನೊಬ್ಬ ಕನ್ನಂಬಾಡಿ ಆಣೆಕಟ್ಟನ್ನು ಸಂದರ್ಶಿಸಿದನು. ಅಲ್ಲಿದ್ದ ಕಾವೇರಿಯ ಮೂರ್ತಿಗೆ ನಮಸ್ಕರಿಸಿ ಅಣೆಕಟ್ಟಿನ ಸೊಬಗನ್ನು ಸವಿಯುತ್ತಿದ್ದನು. ಹೀಗಿರುವಾಗ ಅಲ್ಲಿಗೆ ಬಂದ ಹಿರಿಯರೊಬ್ಬರು ಅಲ್ಲೇ ಇದ್ದ ಮಕ್ಕಳ ಹತ್ತಿರ ರೈತನಿಗೆ ” ಕನ್ನಂಬಾಡಿ ಆಣೆಕಟ್ಟು ನಿರ್ಮಿಸಿದವರು ಯಾರು ಗೊತ್ತೇ? ” ಎಂದು ಕೇಳಲು ಹೇಳಿದರು.
ಅಗ ರೈತನು ” ಏಮಂಡಿ, ಆ ಮಹಾನುಭಾವಲು ವಿಶ್ವೇಶ್ವರಯ್ಯಗಾರು ಚೆಸಿಂದಿಕಾದ ” (‘ ಏನು ಸ್ವಾಮಿ , ಆ ಮಹಾನುಭಾವ ವಿಶ್ವೇಶ್ವರಯ್ಯನವರು ಕಟ್ಟಿಸಿದ್ದಲ್ಲವೇ ? ‘) ಎಂದು ಉತ್ತರಿಸಿದನು.
ನಿಜವಾದ ಸೇವೆಗೆ ಶಿಲೆಯ ಮೇಲಿನ ಶಾಸನವಾಗಲಿ, ಫ್ಲೆಕ್ಸ್ ಬ್ಯಾನರ್ ಅಗಲಿ ಬೇಕಿಲ್ಲ. ಸೇವೆಯು ನಿರಂತರವಾಗಿ ತಲುಪುವ ಹಾಗಿರಬೇಕು. ಅಗ ಮಾತ್ರ ಜನಮನ್ನಣೆ ಪಡೆದು ಚಿರಸ್ಥಾಯಿಯಾಗಿರುತ್ತದೆ. ನಮ್ಮವರು ಇದರಿಂದ ಕಲಿಯುವುದು ಯಾವಾಗ ಎಂದು ನೀವೇ ಹೇಳಬೇಕು.
***********************************************************************
ಚಿತ್ರ ಕೃಪೆ : ಅಂತರ್ಜಾಲ
ಸೃಜನಶೀಲತೆಯಿಲ್ಲದ ಜನರ ಹಟವಿದು – ಡಬ್ಬಿ೦ಗ್ ವಿರೋಧ
– ಗುರುರಾಜ್ ಕೊಡ್ಕಣಿ
ಕನ್ನಡ ಚಿತ್ರರ೦ಗದಲ್ಲಿ ಮತ್ತೆ ಡಬ್ಬಿ೦ಗ್ ವಿವಾದದ ಅಲೆ ಭುಗಿಲೆದ್ದಿದೆ.ಚಿತ್ರರ೦ಗದಲ್ಲೇ ಡಬ್ಬಿ೦ಗ್ ವಿವಾದದ ಕುರಿತು ಭಿನ್ನಾಭಿಪ್ರಾಯಗಳಿವೆ.ಹೆಚ್ಚಿನ ಸಿನಿಮಾ ಮ೦ದಿ ಡಬ್ಬಿ೦ಗ್ ವಿರೋಧಿಗಳಾಗಿದ್ದರೆ ,’ಮಠ’ ಸಿನಿಮಾ ಖ್ಯಾತಿಯ ನಿರ್ದೇಶಕ ಗುರು ಪ್ರಸಾದರ೦ಥವರು ಡಬ್ಬಿ೦ಗ್ ಪರವಾಗಿ ನಿ೦ತಿದ್ದಾರೆ.ನಟ ಶಿವ ರಾಜಕುಮಾರ ನೇತೃತ್ವದಲ್ಲಿ ಡಬ್ಬಿ೦ಗ್ ವಿರೋಧಿ ನಟರು, ನಿರ್ದೇಶಕರು ಚಳುವಳಿಯೆ೦ದು ಬಿದಿಗಿಳಿಯುವ ಎಲ್ಲಾ ಸಾಧ್ಯತೆಗಳಿವೆ.ಈ ಮಧ್ಯೆ ಡಬ್ಬಿ೦ಗ್ ಸಮರ್ಥಿಸಿದರು ಎ೦ಬ ಕಾರಣಕ್ಕೆ ಜ್ನಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚ೦ದ್ರಶೇಖರ ಕ೦ಬಾರರನ್ನು ಅವಮಾನಿಸಿ ಚಿತ್ರನಟ ’ನೆನಪಿರಲಿ’ ಪ್ರೇಮ ವಿವಾದಕ್ಕೀಡಾಗಿದ್ದಾರೆ.ಸಧ್ಯಕ್ಕ೦ತೂ ಡಬ್ಬಿ೦ಗ್ ವಿವಾದ ಶೀಘ್ರದಲ್ಲಿ ಮುಗಿಯುವ ಯಾವ ಲಕ್ಷಣಗಳೂ ಗೋಚರಿಸುತ್ತಿಲ್ಲ ಡಬ್ಬಿ೦ಗ್ ವಿರೋಧಿಗಳ ವಾದಗಳನ್ನೊಮ್ಮೆ ಗಮನಿಸಿ.ಕನ್ನಡ ಚಿತ್ರರ೦ಗಕ್ಕೆ ಡಬ್ಬಿ೦ಗ್ ಕಾಲಿಟ್ಟರೆ,ಕನ್ನಡದ ಸ೦ಸ್ಕೃತಿ ಹಾಳಾಗಿ ಹೋಗುತ್ತದೆ ಎನ್ನುವುದು ಇವರ ಬಹುಮುಖ್ಯ ವಾದ.ಅಲ್ಲದೆ ಡಬ್ಬಿ೦ಗ್ ಸಮ್ಮತಿಸಲ್ಪಟ್ಟರೆ ಕನ್ನಡದ ಚಿತ್ರರ೦ಗದ ಕಲಾವಿದರು ಕೆಲಸವಿಲ್ಲದ೦ತಾಗಿ ಬೀದಿಗೆ ಬ೦ದುಬಿಡುತ್ತಾರೆ,ಹಾಗಾಗಿ ಡಬ್ಬಿ೦ಗ್ ನಿಷೇಧ ಆನಿವಾರ್ಯವೆ೦ದು ಕೆಲವರು ವಾದಿಸುತ್ತಾರೆ.ಪರಭಾಷಾ ಚಿತ್ರಗಳು ಕನ್ನಡಕ್ಕೆ ಡಬ್ ಆದರೆ,ಆ ಸಿನಿಮಾಗಳಲ್ಲಿನ ಆದ್ಧೂರಿ ಸೆಟ್,ದೃಶ್ಯ ವಿಜೃ೦ಭಣೆಯ ಮು೦ದೆ ಕನ್ನಡದ ಸಿನಿಮಾಗಳು ಪೈಪೋಟಿ ನೀಡಲಾಗದೆ ಸೋತು ಹೋಗಬಹುದೆನ್ನುವುದು ಉಳಿದ ಕೆಲವರ ಅ೦ಬೋಣ.ಒಟ್ಟಾರೆಯಾಗಿ,ಡಬ್ಬಿ೦ಗ್ ವಿರೋಧಿಗಳ ತಿರುಳಿಲ್ಲದ ಈ ವಾದಗಳು ಅವರ ಹತಾಶ ಮನಸ್ಥಿತಿಗೆ ಸಾಕ್ಷಿಯಾಗಬಲ್ಲವೇ ಹೊರತು ಬೇರೆನನ್ನೂ ನಿರೂಪಿಸಲಾರವು.
ಫೇಸ್ಬುಕ್ ಗ್ರಾಫ್ ಸರ್ಚ್
– ರಾಘವೇಂದ್ರ ಎಂ. ಸುಬ್ರಹ್ಮಣ್ಯ
ನೀವೆಲ್ಲ ಫೇಸ್ಬುಕ್ಕನ್ನು ಯಾವ ಕಾರಣಕ್ಕಾಗಿ ಬಳಸುತ್ತೀರಿ!? ನಿಮ್ಮ ಸ್ನೇಹಿತರು ಏನು ಮಾಡುತ್ತಿದ್ದಾರೆನ್ನುವುದನ್ನು ತಿಳಿಯಲು, ನಿಲುಮೆಯ ಫೇಸ್ಬುಕ್ಕ್ ಗುಂಪಲ್ಲಿ ತರತರದ ಚರ್ಚೆಗಳನ್ನು ಮಾಡಲು, ನಿಮ್ಮ ಕವನರಚನೆ, ಛಾಯಾಗ್ರಹಣ, ಚಿತ್ರಕಲೆ ಮುಂತಾದ ವಿವಿದ ರೀತಿಯ ಕೌಶಲ್ಯಗಳನ್ನು ಜಗತ್ತಿನೊಂದಿಗೆ ಹಂಚಿಕೊಳ್ಳಲು ಅಲ್ಲವೇ? ಆದರೆ ಯಾರದರೂ ಯಾವುದಾದರೂ ಚರ್ಚೆಯಲ್ಲಿ ‘binomial theorem’ ಅಂದಕೂಡಲೇ, ಅಥವಾ “cervical cancer” ಬಗ್ಗೆ ಮಾತನಾಡಿದಕೂಡಲೇ ನೀವೇನು ಮಾಡುತ್ತೀರಿ? ಇನ್ನೊಂದು ಟ್ಯಾಬ್ ತೆಗೆದು ಅಲ್ಲಿ ಆ ವಿಷಯದ ಬಗ್ಗೆ ‘ಗೂಗಲ್’ನಲ್ಲಿ ಮಾಹಿತಿ ಹುಡುಕುತ್ತೀರಿ.
ಆದರೆ, ಫೇಸ್ಬುಕ್ ತನ್ನದೇ ಆದ ಹುಡುಕುಯಂತ್ರ(search engine)ವನ್ನು ತಂದಿದೆ ಎನ್ನುವ ವಿಚಾರ ಬಹಳ ಜನರಿಗೆ ತಿಳಿದಂತಿಲ್ಲ. ಗ್ರಾಫ್ ಸರ್ಚ್ ಎನ್ನುವ ಈ ಹೊಸ ಕೊಡುಗೆ ನಿಮ್ಮ ಫೇಸ್ಬುಕ್ ಪೇಜಿನಲ್ಲಿ ಅಡಗಿ ಕುಳಿತಿದೆ. ಇದು ಅಂತಿಂತ ಕೊಡುಗೆಯಲ್ಲ. ಬಹಳ ಕಿಲಾಡಿ ಹಾಗೂ ಬಹಳ ಉಪಯುಕ್ತವಾದುದು. ಗೂಗಲ್ ಹೇಗೆ ನಿಮಗೆ ಬೇಕಾದ ಮಾಹಿತಿಯನ್ನು ಅಂತರ್ಜಾಲದಲಿ ಹುಡುಕಿ ತೆಗೆಯುತ್ತದೆಯೋ, ಹಾಗೆಯೇ ಇದನ್ನು ಉಪಯೋಗಿಸಿ ನೀವು ನಿಮ್ಮ ಫೇಸ್ಬುಕ್ ಸ್ನೇಹಿತರು ಏನು ಮಾಡುತ್ತಿದ್ದಾರೆ? ಯಾರು ನಿಮಗೂ ಸಹ ಇಷ್ಟವಾದ ಪುಸ್ತಕಗಳನ್ನು ಓದುತ್ತಿದ್ದಾರೆ? ನಿಮ್ಮತರಹದೇ ಅಭಿರುಚಿ ಇರುವ ಜನರು ಎಲ್ಲಿದ್ದಾರೆ? ಯಾರಿದ್ದಾರೆ? ಎಂದು ಹುಡುಕಬಹುದು. ಇದೊಂದು ಬಹಳ ಸರಳವಾದ ಲಾಕ್ಷಣಿಕ ಹುಡುಕುಯಂತ್ರ(semantic search engine).
ಬೇಕಾಗಿರುವುದು ರಾಜಕೀಯ ಅಸ್ತಿತ್ವವೇ ವಿನಃ ಕೇವಲ ಭ್ರಷ್ಟಚಾರ ನಿಗ್ರಹವಲ್ಲ
– ನವೀನ್ ನಾಯಕ್
ಅಣ್ಣಾ ನೇತೃತ್ವದ ಜನಲೋಕಪಾಲ ಹೋರಾಟದಿಂದ ಪ್ರಸಿದ್ದರಾದ ಅರವಿಂದ್ ಕೇಜ್ರಿವಾಲ್ ದೆಹಲಿ ಗದ್ದುಗೆಗೇರಿ ಬದಲಾವಣೆಯ ಪರ್ವ ತರಲು ಹೊರಟಿದ್ದಾರೆ. ಸರಕಾರ ರಚಿಸಲು ಜನರ ಅಭಿಪ್ರಾಯ ಸಂಗ್ರಹಿಸಿದ ಕಾರಣಕ್ಕೆ ಹಗಲು ರಾತ್ರಿ ಮಾಧ್ಯಮಗಳು ತಲೆದೂಗಿದ್ದೇ ತೂಗಿದ್ದು. ಎಲ್ಲಾ ಮಾಧ್ಯಮಗಳಲ್ಲಿ ಒಂದೇ ಕೂಗು. ಇದೇ ನೈಜ ಪ್ರಜಾಪ್ರಭುತ್ವ!. ಈ ಮಾಧ್ಯಮಗಳ ಕಣ್ಣಿಗೆ ಮೂರು ರಾಜ್ಯಗಳಲ್ಲಿ ಭರ್ಜರಿ ಜಯಗಳಿಸಿದ ಮತ್ತು ದೆಹಲಿಯಲ್ಲಿ ಮೊದಲ ಸ್ಥಾನ ಪಡೆದ ಬಿಜೆಪಿ ನೈಜ ಪ್ರಜಾಪ್ರಭುತ್ವದಲ್ಲಿ ಗೆದ್ದಿದ್ದಲ್ಲ ! ಪಕ್ಷ ಕಟ್ಟಿ ಒಂದು ವರ್ಷದಲ್ಲೇ ಎರಡನೆಯ ಸ್ಥಾನಕ್ಕೆ ಬರುವುದು ಅಚ್ಚರಿಯೇ, ಅವರ ಪ್ರಯತ್ನಕ್ಕೆ ನಾವು ಶಹಭಾಸ್ ಹೇಳಲೇ ಬೇಕು. ದೇಶದ ಭವಿಷ್ಯಕ್ಕೆ ಉತ್ತಮ ಆಡಳಿತ ನೀಡಲು ಆಪ್ ಪಕ್ಷವೇ ಮುಂಚೂಣಿಗೆ ಬರಬೇಕೆಂಬ ನಿರ್ಧಾರವನ್ನು ಕೇಜ್ರಿವಾಲ್ ಯಶಸ್ವಿಯಾಗಿ ಯುವಕರ ಮನಸ್ಸಲ್ಲಿ ತುಂಬಿದ್ದರು. ರಾಜಕೀಯ ಮಾಡುವುದು ಹೇಗೆ ಅಂತ ನಾವು ಕಲಿಸುತ್ತೇವೆ, ನಮಗೆ ಕೆಂಪು ಗೂಟದ ಕಾರು ಬೇಕಿಲ್ಲ, ನಮಗೆ ಭದ್ರತೆ ಬೇಕಿಲ್ಲ, ಸರಕಾರಿ ಭವ್ಯ ಮನೆಯೂ ಬೇಕಿಲ್ಲ ಹೀಗೆ ಒಂದರ ಮೇಲೊಂದಂತೆ ಘೋಷಿಸತೊಡಗಿದರು. ಯುವಕರ ಉತ್ಸಾಹ ಇಮ್ಮಡಿಯಾಗಿತ್ತು. ತಮ್ಮ ನಾಯಕನಿಗೆ ಈ ಜಗದಲ್ಲಿ ಬೇರಾರು ಸರಿಸಾಟಿ ಇಲ್ಲವೆಂಬತೆ ವರ್ತಿಸತೊಡಗಿದರು. ಅಣ್ಣಾ ಹಜಾರೆಯವರು ಯಾವಾಗ ತನ್ನ ಹೆಸರನ್ನು ರಾಜಕೀಯಕ್ಕೆ ದುರುಪಯೋಗ ಪಡಿಸಿಕೊಳ್ಳಬೇಡಿ ಎಂದರೋ ಕೇಜ್ರಿವಾಲ್ ಅಭಿಮಾನಿಗಳು ಬುಸುಗುಡತೊಡಗಿದರು. ಸಾಲದೇ ಐಎಸಿ ಚಳುವಳಿಯ ಹಣದ ಲೆಕ್ಕ ಕೇಳಿದರೋ ಎಲ್ಲ ಅಭಿಮಾನಿಗಳು ಸಿಡಿದೆದ್ದರು. ಅಣ್ಣಾ ಮುದುಕರಾಗಿದ್ದಾರೆ ಹುಚ್ಚರಂತೆ ವರ್ತಿಸುತಿದ್ದಾರೆ ಎಂಬ ಕ್ಷುಲ್ಲಕ ಮಾತುಗಳನ್ನು ಸಾಮಾಜಿಕ ತಾಣದ ತುಂಬ ಪಸರಿಸತೊಡಗಿದರು. ಯಾರ ಏಳಿಗೆಗೆ ಯಾರು ಕಾರಣರಾಗಿದ್ದರೋ ಅವರು ಮದುಕರಾಗಿದ್ದರು ಹುಚ್ಚರಾಗಿದ್ದರು.
ನಾಯಕತ್ವದ ಬೆಲೆ
– ಮಧು ಚಂದ್ರ ಎಚ್ ಬಿ ಭದ್ರಾವತಿ
ಇತ್ತೀಚೆಗೆ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ವಿಧಾನ ಸಭೆಯ ಅಧಿವೇಶನ ನಡೆಯುತ್ತಿದ್ದ ಸಂಧರ್ಭದಲ್ಲಿ , ಸುವರ್ಣ ವಿಧಾನ ಸೌಧದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ರೈತ ವಿಠ್ಠಲ ಭೀಮಪ್ಪ ಅರಭಾವಿ ಆತ್ಮಹತ್ಯೆ ಮಾಡಿ ಕೊಂಡಿದ್ದು ನಿಮಗೆಲ್ಲ ತಿಳಿದೇ ಇದೆ. ಕಾರಣ ಸಹ ನಿಮಗೆ ತಿಳಿದೇ ಇದೆ ಸರ್ಕಾರ ರೈತರ ಹೋರಾಟಕ್ಕೆ ಸೂಕ್ತ ಪರಿಹಾರ ಹುಡುಕದೆ , ಸ್ಪಂದಿಸಲು ವಿಳಂಬ ಮಾಡಿತು.ಅದಕ್ಕೆ ಸರ್ಕಾರ ತೆತ್ತ ಬೆಲೆ ನೇಗಿಲ ಯೋಗಿಯ ಆತ್ಮಹತ್ಯೆ. ಇದು ಕೇವಲ ನಮ್ಮ ರಾಜ್ಯದಲ್ಲಿ ಅಲ್ಲ ಮಾನವರಿರುವ ಪ್ರತಿಯೊಂದು ಸ್ಥಳದಲ್ಲಿ ಸಮಸ್ಯೆ ಇದ್ದೆ ಇದೆ.
ನಮ್ಮಲ್ಲಿ ಸಮಸ್ಯೆಯನ್ನು ಅರಿತು, ಸ್ಪಂದಿಸಿ ಸೂಕ್ತ ಪರಿಹಾರ ಕಂಡು ಹಿಡಿಯುವ ಮಾರ್ಗ ಹುಡುಕುವುದು ದೊಡ್ಡದೊಂದು ಅನಾಹುತವಾದ ಮೇಲೆಯೇ.ಇದಕ್ಕೆ ಎಲ್ಲ ಕಾರ್ಯಕ್ಷೇತ್ರಗಳು, ವರ್ಗ ಮತ್ತು ಪರಿವಾರಗಳು ಬರುತ್ತವೆ. ಇದ್ದಕ್ಕೆ ಮುಖ್ಯ ಕಾರಣ ನಾಯಕನ ದೂರ ದೃಷ್ಟಿ ಹಾಗು ಸಮಸ್ಯೆ ಬಗೆಹರಿಸುವ ಕಲೆಯ ಕೊರತೆ ಎನ್ನಬಹುದು. ಇಂದು ಕೇವಲ ಅಧಿಕಾರ ಸಿಕ್ಕರೆ ಸಾಕು ಎನ್ನುವ ನಾಯಕರು ಇರುವಾಗ ಇವೆಲ್ಲವೂ ದೂರದ ಮಾತೆ ಸರಿ.







