ಕಡಲು ನಿನ್ನದೇ ಹಡಗು ನಿನ್ನದೇ ಮುಳುಗದಿರಲಿ ಬದುಕು -೨
– ಮು ಅ ಶ್ರೀರಂಗ ಬೆಂಗಳೂರು
(ನಿಲುಮೆಯಲ್ಲಿ ೫-೧೨-೨೦೧೩ರಂದು ಪ್ರಕಟವಾದ ‘ದೀಪವೂ ನಿನ್ನದೇ ಗಾಳಿಯೂ ನಿನ್ನದೇ ಆರದಿರಲಿ ಬೆಳಕೂ’.……… . ನೆನಪುಗಳ ಮುಂದುವರೆದ ಭಾಗ)
ಪಿ ಯು ಸಿ ಯಲ್ಲಿ ನನಗೆ ಕೆಮಿಸ್ಟ್ರಿ ಮತ್ತು ಬಯಾಲಜಿ ವಿಷಯಗಳು ಕಷ್ಟವಾಗಿತ್ತು. ಅದರಿಂದ ಬಿಎಸ್ಸಿಯಲ್ಲಿ ಅದನ್ನು ಬಿಟ್ಟು ಫಿಸಿಕ್ಸ್ ಮ್ಯಾಥಮೆಟಿಕ್ಸ್ ಮತ್ತು ಸ್ಟ್ಯಾಟಿಸ್ಟಿಕ್ಸ್ ವಿಷಯಗಳನ್ನು ತೆಗೆದುಕೊಂಡಿದ್ದೆ. ಮೂರು ವರ್ಷಗಳು ಬಿಎಸ್ಸಿಯಲ್ಲಿ ಸ್ಟ್ಯಾಟಿಸ್ಟಿಕ್ಸ್ ಅನ್ನು ಓದಿದ್ದರಿಂದ ಆ ವಿಷಯದಲ್ಲೇ ಎಂಎಸ್ಸಿ ಮಾಡಲು ನಿರ್ಧರಿಸಿದೆ. ಕೋರ್ಸಿಗೆ ಸೇರಿದ್ದಾಯ್ತು. ಆದರೆ ತರಗತಿಯ ಪಾಠಗಳು ಅರ್ಥವಾಗುತ್ತಿರಲಿಲ್ಲ. ಹೀಗಾಗಿ ಮೂರ್ನಾಲಕ್ಕು ತಿಂಗಳ ನಂತರ ಓದನ್ನು ಬಿಟ್ಟು ಊರಿಗೆ ವಾಪಸ್ಸು ಬಂದುಬಿಟ್ಟೆ. ನಮ್ಮ ತಂದೆ ಸ್ಕೂಲಿನ ವೇಳೆ ಮುಗಿದ ನಂತರ ಹತ್ತು ಹದಿನೈದು ಹುಡುಗರಿಗೆ ಮನೆ ಪಾಠ ಮಾಡುತ್ತಿದ್ದರು. ಆಗ ತಿಂಗಳಿಗೆ ಒಬ್ಬ ಹುಡುಗನಿಗೆ ಹತ್ತು ರೂಪಾಯಿ ಫೀಸು. ಅದನ್ನು ಆ ಹುಡುಗರು ಕೊಡಲು ನಿಗದಿತ ದಿನಾಂಕ ಎಂಬುದೇನಿಲ್ಲ. ತಿಂಗಳ ಮೊದಲನೇ ತಾರೀಖಿನಿಂದ ಕೊನೆಯ ದಿನದ ತನಕ ಯಾವಾಗ ಅವರಿಗೆ ಅನುಕೂಲವೋ ಆಗ ಕೊಡುತ್ತಿದ್ದರು. ಜತೆಗೆ ಆ ಸಲ ಹಾಸ್ಟೆಲ್ ನಲ್ಲಿ ಬದಲಾದ ನಿಯಮಗಳಿಂದ ನನಗೆ ಶುಲ್ಕದಲ್ಲಿ ಅರ್ಧ ಮಾಫಿ ಸಿಗಲಿಲ್ಲ. ಎಷ್ಟೇ ಕಷ್ಟವಾದರೂ ನನ್ನ ಮೇಲೆ ಭರವಸೆಯಿಟ್ಟಿದ್ದ ನನ್ನ ಅಪ್ಪನ ಹಣವನ್ನು ಸುಖಾಸುಮ್ಮನೆ ಖರ್ಚು ಮಾಡಿಕೊಂಡು ಬೆಂಗಳೂರಿನಲ್ಲಿರುವುದು ನನಗೆ ಇಷ್ಟವಾಗಲಿಲ್ಲ. ಬಹುಶಃ ನನ್ನ ಬುದ್ಧಿ ಶಕ್ತಿ ಪದವಿ ಮಟ್ಟದ್ದಷ್ಟೇ ಆಗಿರಬೇಕು. ಇದನ್ನೆಲ್ಲಾ ಯೋಚಿಸಿ ನನ್ನ ಅಪ್ಪನಿಗೆ ಒಂದು ಕಾಗದ ಬರೆದೆ. ಅದರಲ್ಲಿ ನನ್ನ ತಳಮಳ, ದುಃಖವನ್ನೆಲ್ಲಾ ವಿವರವಾಗಿ ತಿಳಿಸಿದೆ . ಅದು ತಲುಪಿದ ಮಾರನೇ ದಿನ ಮಧ್ಯಾನ್ಹದ ವೇಳೆಗೆ ನನ್ನ ಅಪ್ಪ ಬಂದರು. ನಮ್ಮ ಹಾಸ್ಟೆಲ್ ಹತ್ತಿರದಲ್ಲಿ ಒಂದು ಪಾರ್ಕಿತ್ತು. ಅಲ್ಲಿಗೆ ಹೋಗಿ ಕಲ್ಲು ಬೆಂಚೊಂದರ ಮೇಲೆ ಇಬ್ಬರೂ ಕುಳಿತೆವು. ತಮ್ಮ ಷರ್ಟಿನ ಜೇಬಿನಿಂದ ನಾನು ಬರೆದ ಪತ್ರವನ್ನು ತೆಗೆದುಕೊಂಡು ಮತ್ತೊಮ್ಮೆ ಓದಿಕೊಂಡು “ನಿನ್ನ ಇಷ್ಟ”ಎಂದು ಹೇಳಿ ಎದ್ದರು. ಹಾಸ್ಟೆಲ್ಲಿಗೆ ವಾಪಸ್ಸು ಬಂದು ಲೆಕ್ಕ ಚುಕ್ತಾ ಮಾಡಿ ನನ್ನ ಗಂಟು ಮೂಟೆಯೊಂದಿಗೆ ಊರಿಗೆ ವಾಪಸ್ಸು ಬಂದೆವು.
ಇಷ್ಟವಿಲ್ಲದ ಗಂಡನಿಂದ ವಿಚ್ಛೇದನ ಪಡೆದು ಬಂದ ಮಗಳು ತವರಿನಲ್ಲಿ ಅರ್ಧ ದುಃಖ, ಅರ್ಧ ಸಮಾಧಾನದಿಂದ ಕಾಲ ತಳ್ಳುವಂತೆ ಹಾಗೂ ಹೀಗೂ ಮೂರ್ನಾಲಕ್ಕು ತಿಂಗಳನ್ನು ಕಳೆದೆ. ದಿನಾ ಬೆಳಗ್ಗೆ ಪಬ್ಲಿಕ್ ಲೈಬ್ರರಿಗೆ ಹೋಗುವುದು;ಪತ್ರಿಕೆಗಳ wanted ಕಾಲಂ ನೋಡುವುದು;ನಂತರ ಅಲ್ಲೇ ಯಾವುದಾದರೊಂದು ಪುಸ್ತಕ ಓದುವುದು. ಇದರ ನಡುವೆ ನನ್ನ ವಿದ್ಯಾರ್ಹತೆಗೆ ಸಿಗುವ ಕೆಲಸಗಳಿಗೆ ಅರ್ಜಿ ಹಾಕುವುದು ನಡೆದಿತ್ತು. ಸಿಂಡಿಕೇಟ್ ಬ್ಯಾಂಕ್ ನಲ್ಲಿ ಗುಮಾಸ್ತರ ಕೆಲಸಕ್ಕಾಗಿ ಲಿಖಿತ ಪರೀಕ್ಷೆಗೆ ಹೋಗಿದ್ದೆ. ಪಾಸಾಗಲಿಲ್ಲ. ಅಂಚೆ ಇಲಾಖೆಯಲ್ಲಿ ಗುಮಾಸ್ತರ ಹುದ್ದೆಗೆ ಅರ್ಜಿ ಹಾಕಿದ್ದೆ. ಆಗ ಎಸ್ ಎಸ್ ಎಲ್ ಸಿ ಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಲ್ಲಿ ಕೆಲಸ ಕೊಡುತ್ತಿದ್ದರು. ಇಲಾಖೆಯು ಬೇರೆ ಯಾವ ಪರೀಕ್ಷೆ ಮಾಡುತ್ತಿರಲಿಲ್ಲ. ಈಗ ಪಿ ಯು ಸಿ ಕನಿಷ್ಠ ಅರ್ಹತೆ. ಜತೆಗೆ ಟೈಪಿಂಗ್ ಮತ್ತು ಕಂಪ್ಯೂಟರ್ ನಲ್ಲಿ ಇಲಾಖೆಯವರೇ ಪರೀಕ್ಷೆ ನಡೆಸಿ ನಂತರ ಆಯ್ಕೆ ಮಾಡುತ್ತಾರೆ. ೧೯೭೮ರ ಡಿಸೆಂಬರ್ ಕೊನೆಯ ವಾರದಲ್ಲಿ ತರಬೇತಿಗೆಂದು ಮಾಗಡಿಯಿಂದ ಕೋಲಾರಕ್ಕೆ ಹೊರಟೆ. ಅಂತು ನನ್ನ ವನವಾಸ, ಶೋಕ ಪರ್ವ, ನಿರುದ್ಯೋಗ ಪರ್ವಗಳು ಮುಗಿದಿತ್ತು. ಎಂಎಸ್ಸಿಯನ್ನು ಮುಗಿಸದೆ ವಾಪಸ್ಸು ಬಂದಿದ್ದ ನನ್ನ ಕಹಿ ನೆನಪು,ಅನುಭವಗಳನ್ನು ಮರೆಯಲು ಇದು ಸಹಾಯಕವಾಯ್ತು. ಮನೆಯಲ್ಲಿ ಅಪ್ಪ ಅಮ್ಮ ನನ್ನನ್ನು ಏನೂ ಅನ್ನದಿದ್ದರೂ ನನ್ನೊಳಗೇ ಅದು ಕುಟ್ಟೆ ಹುಳದಂತೆ(ಮರದ ಸಾಮಾನಿನೊಳಗೆ ಸೇರಿಕೊಂಡು ಕೊರೆಯುತ್ತಾ ಹೋಗುವ ಒಂದು ಜಾತಿಯ ಹುಳ) ಕೂತಲ್ಲಿ, ನಿಂತಲ್ಲಿ ಕೊರೆಯುತ್ತಿತ್ತು.
ಬೆಂಗಳೂರಿನ ಹಾಸ್ಟೆಲ್ ನಲ್ಲಿ ನಾನು ಇದ್ದ ಮೂರು ವರ್ಷಗಳಲ್ಲಿ ನನ್ನ ಜತೆಯಿದ್ದ ಸ್ನೇಹಿತರ , ರೂಂಮೇಟ್ ಗಳಾಗಿದ್ದವರ ಯಾರ ಸಂಪರ್ಕವೂ ಈಗ ನನಗಿಲ್ಲವಾಗಿದೆ. ಹಾಸ್ಟೆಲ್ ಬಿಟ್ಟ ಒಂದೆರೆಡು ವರ್ಷಗಳ ತನಕ ಹಾಗೂ ಹೀಗೂ ತಿಂಗಳಿಗೋ ಎರಡು ತಿಂಗಳಿಗೋ ಒಮ್ಮೆ ಪತ್ರಗಳ ಮೂಲಕ ಸಂಪರ್ಕವಿತ್ತು. ನಂತರದಲ್ಲಿ ತಮ್ಮ ತಮ್ಮ ಮುಂದಿನ ಓದು ಕೆಲಸಗಳಿಗಾಗಿ ಚದುರಿಹೋದರು. ಈಗ ಅವರೆಲ್ಲಾ ಕೇವಲ ನೆನಪಷ್ಟೇ. ಪಾವಗಡದ ಕಡೆಯವರು ಒಬ್ಬರು ನನಗೆ ತೀರಾ ಆಪ್ತರಾಗಿದ್ದರು. ನನಗಿಂತ ಹತ್ತು ವರ್ಷ ಹಿರಿಯರಾದ ಅವರು ಬಿಎಸ್ಸಿ ಮಾಡಿ ತಮ್ಮ ಊರಿನ ಖಾಸಗಿ ಪ್ರೌಢ ಶಾಲೆಯಲ್ಲಿ ಉಪಾಧ್ಯಾಯರಾಗಿದ್ದರು. ಕನ್ನಡ ಎಂ ಎ ಮಾಡುವ ಸಲುವಾಗಿ ಆ ಕೆಲಸಕ್ಕೆ ರಾಜೀನಾಮೆ ಕೊಟ್ಟು ಬೆಂಗಳೂರಿಗೆ ಬಂದಿದ್ದರು. ನಮ್ಮ ಹಾಸ್ಟೆಲ್ ನಲ್ಲಿ ಪೂರ್ಣಾವಧಿಯ ವಾರ್ಡನ್ ಇರಲಿಲ್ಲ. ಬೆಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಪ್ರಾಧ್ಯಾಪಕರಾಗಿದ್ದ ಒಬ್ಬರು ದಿನಾ ಬೆಳಗ್ಗೆ ಮತ್ತು ಸಂಜೆ ಒಂದೆರೆಡು ಗಂಟೆಗಳ ಕಾಲ ಬಂದು ಹೋಗುತ್ತಿದ್ದರು. ಅವರು ಹಿಂದೆ ಅದೇ ಹಾಸ್ಟೆಲ್ ನಲ್ಲಿ ಇದ್ದುಕೊಂಡು ಓದಿದವರಾಗಿದ್ದರಂತೆ. ಹೀಗಾಗಿ ಹಾಸ್ಟೆಲ್ ನ ಆ ಕೆಲಸವನ್ನು ತಾವು ಮಾಡಬೇಕಾದ ಒಂದು ಸೇವೆ ಎಂದು ಮಾಡುತ್ತಿದ್ದರು. ಹಾಸ್ಟೆಲ್ ನ ಲೆಕ್ಕ-ಪತ್ರಗಳು,ಪ್ರತಿ ತಿಂಗಳು ಮಾಡಬೇಕಾದ ಶುಲ್ಕ ವಸೂಲಿ,ಮೇಲ್ವಿಚಾರಣೆ ಇತ್ಯಾದಿ ಕೆಲಸಗಳಿಗೆ ಒಬ್ಬ ಪೂರ್ಣಾವಧಿಯ ಮ್ಯಾನೇಜರ್ ಅವಶ್ಯಕತೆ ಇತ್ತು. ಆ ಕೆಲಸವನ್ನು ಈ ನನ್ನ ಹಿರಿಯ ಸ್ನೇಹಿತರು ವಹಿಸಿಕೊಂಡರು. ಅದರಿಂದ ಬರುತ್ತಿದ್ದ ಅಲ್ಪ ಸ್ವಲ್ಪ ಸಂಬಳ ಅವರ ಓದಿಗೆ ಸಹಾಯವಾಯಿತು. ಅವರು ಸಂಜೆ ಕಾಲೇಜಿಗೆ ಸೇರಿಕೊಂಡಿದ್ದರು. ಹೀಗಾಗಿ ಓದು ಮತ್ತು ಹಾಸ್ಟೆಲ್ ಕೆಲಸ ಒಟ್ಟಿಗೆ ನಡೆದಿತ್ತು. ನನ್ನನ್ನು ಆಗಾಗ ಸೆಂಟ್ರಲ್ ಕಾಲೇಜಿನಲ್ಲಿ ನಡೆಯುತ್ತಿದ್ದ ಕನ್ನಡ ಸಾಹಿತ್ಯದ ವಿಚಾರ ಸಂಕಿರಣಗಳು ಸಭೆಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ೧೯೭೦–೮೦ರ ದಶಕ ಕನ್ನಡ ಸಾಹಿತ್ಯದಲ್ಲಿ ಒಂದು ಸುವರ್ಣ ಕಾಲ ಎನ್ನಬಹುದು. ದಿವಂಗತ ಜಿ ಎಸ್ ಎಸ್ ಅವರು ಬೆಂಗಳೂರು ವಿ ವಿ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿದ್ದ ಆ ವರ್ಷಗಳಲ್ಲಿ ಕನ್ನಡ ಸಾಹಿತ್ಯ ಮತ್ತು ವಿಮರ್ಶೆಗಳನ್ನು ಕುರಿತು ನಡೆದ ವಿಚಾರ ಗೋಷ್ಠಿಗಳು ಉತ್ತಮವಾಗಿರುತ್ತಿದ್ದವು. ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ ಸಾಹಿತ್ಯಾಸಕ್ತರಿಂದ,ಸಾಹಿತಿಗಳಿಂದ ವಿಮರ್ಶಕರುಗಳಿಂದ ತುಂಬಿ ತುಳುಕುತ್ತಿತ್ತು. ಆಗ ಸಾಹಿತಿಗಳು ಮತ್ತು ವಿಮರ್ಶಕರುಗಳು ನಿಜವಾಗಲೂ star ಗಳಾಗಿದ್ದರು. ಅವರ ಸಾಹಿತ್ಯ/ವಿಮರ್ಶೆಗೆ ಓದುಗರು ತೋರಿಸುತ್ತಿದ್ದ ಆದರ,ಪ್ರೀತಿಗಳೇ ಅದಕ್ಕೆ ಕಾರಣ. ಗೌರವ,ಪ್ರಶಸ್ತಿಗಳು ಸಾಹಿತಿಗಳನ್ನು ಹುಡುಕಿಕೊಂಡು ಬರುತ್ತಿದ್ದವು. ಅಲ್ಲಲ್ಲಿ ಒಂದೋ ಎರಡೋ”lobby”ಗಳು ಇದ್ದಿರಬಹುದು;ಇಲ್ಲವೆಂದಲ್ಲ. ಈಗಿನ ಹಾಗೆ ಅದೇ ಒಂದು “ರೋಜ್ಗಾರ್” ಸ್ಕೀಮ್ ಆಗಿರಲಿಲ್ಲ.
ಮಾಗಡಿಯಲ್ಲಿ ನಾನು ಪಿ ಯು ಸಿ ಫಲಿತಾಂಶಕ್ಕೆ ಕಾಯುತ್ತ ಬೇಸಿಗೆ ರಜೆಯಲ್ಲಿ ಕಾಲ ಕಳೆಯಲು ಖಾಸಗಿ ಲೈಬ್ರರಿಯೊಂದರಿಂದ ಎನ್.ನರಸಿಂಹಯ್ಯ,ಜಿಂದೆ ನಂಜುಂಡಸ್ವಾಮಿ,ಟಿ.ಕೆ. ರಾಮರಾವ್, ತ್ರಿವೇಣಿ,ವಾಣಿ,ಎಂ. ಕೆ ಇಂದಿರಾ,ಯಂಡಮೂರಿ ವೀರೇಂದ್ರನಾಥ್ ……… ಇವರುಗಳ ಪತ್ತೇದಾರಿ/ಸಾಂಸಾರಿಕ ಕಾದಂಬರಿಗಳನ್ನು ಮನೆಗೆ ತಂದು ಓದುತ್ತಿದ್ದೆ. ಒಂದು ಪುಸ್ತಕಕ್ಕೆ ಒಂದು ದಿನಕ್ಕೆ ಹತ್ತು ಪೈಸೆ ಶುಲ್ಕ. ೧೫೦–೨೦೦ ಪುಟಗಳು ಇರುತ್ತಿದ್ದ ಅವುಗಳನ್ನು ಒಂದೇ ದಿನದಲ್ಲಿ ಓದಿ ಮುಗಿಸುತ್ತಿದೆ. ಈಗ ನಾನು ಅಂತಹ ಕಾದಂಬರಿಗಳನ್ನು ಓದಲಾರೆ;ಅದು ಬೇರೆ ವಿಷಯ. ಆದರೆ ಆ ವಯಸ್ಸಿನಲ್ಲಿ ಪಠ್ಯ ಪುಸ್ತಕಗಳನ್ನು ಬಿಟ್ಟು ಬೇರೆ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಅವು ಮಾಡಿಸಿದವು. ಅದನ್ನು ಮರೆಯಲಾರೆ. ಇಲ್ಲಿ ಯಂಡಮೂರಿ ವೀರೇಂದ್ರನಾಥ್ ಅವರ ಬಗ್ಗೆ ಒಂದೆರೆಡು ಮಾತುಗಳನ್ನು ಹೇಳಬೇಕೆನ್ನಿಸ್ಸಿದೆ. ಅವರು ತೆಲುಗಿನ ಲೇಖಕರು. ಅವರ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದ ಮಾಡುವ ಒಂದಿಬ್ಬರು ಲೇಖಕರು ನಮ್ಮಲ್ಲಿದ್ದರು. ವಾರಪತ್ರಿಕೆಗಳಲ್ಲಿ ಧಾರಾವಾಹಿಗಳಾಗೂ ಅವು ಒಮ್ಮೊಮ್ಮೆ ಪ್ರಕಟವಾಗುತ್ತಿತ್ತು. ಅವರ ಕಾದಂಬರಿಗಳು ಮಾರುಕಟ್ಟೆಗೆ ಬರುವುದೇ ತಡ ಬಿಸಿ ಬಿಸಿ ದೋಸೆಗಳಂತೆ ಖರ್ಚಾಗಿ ಹೋಗುತ್ತಿದ್ದವು. ಅವರು ಕಾದಂಬರಿಗಳಲ್ಲಿ stock exchangeನ ವಿಷಯ ಬರಲಿ ಅಥವಾ telephone exchangeನ ವಿಷಯ ಬರಲಿ ಅವುಗಳ ಬಗ್ಗೆ ಪೂರ್ತಿ ವಿಷಯ ತಿಳಿದುಕೊಂಡು ನಂತರ ಬರೆಯುತ್ತಿದ್ದರು. ಅದು ಅವರ ಪ್ಲಸ್ ಪಾಯಿಂಟ್. ಅವರ ಕಾದಂಬರಿಗಳನ್ನು ಆಧರಿಸಿ ಕನ್ನಡದಲ್ಲೂ ಎರಡೋ ಮೂರೋ ಸಿನಿಮಾಗಳು ಬಂದಿದ್ದವು. “ಬೆಳದಿಂಗಳ ಬಾಲೆ”ಅಂತಹುಗಳಲ್ಲಿ ಒಂದು. ಆ ಕಾದಂಬರಿಯನ್ನು ನಾನು ನನ್ನ “ಪೂರ್ವಾಶ್ರಮ”ದಲ್ಲಿ ಓದಿದ್ದೆ. ಹೀಗಾಗಿ ಕುತೂಹಲದಿಂದ ಆ ಸಿನಿಮಾ ನೋಡಲು ಹೋಗಿದ್ದೆ. ಈಗ ಅವರು ಕಾದಂಬರಿ ಬರೆಯುತ್ತಿಲ್ಲವಂತೆ. personality development ಬಗ್ಗೆ ಪುಸ್ತಕಗಳನ್ನು ಬರೆಯುತ್ತಿದ್ದಾರಂತೆ.
ಹೀಗೆ ಮಾಗಡಿಯಲ್ಲಿದ್ದಾಗ ರಜೆಯ ಸಮಯದಲ್ಲಿ ಕಾಲ ಕಳೆಯಲು ಪ್ರಾರಂಭಿಸಿದ ಓದಿಗೆ ಬೆಂಗಳೂರಿನ ಹಾಸ್ಟೆಲ್ ನಲ್ಲಿ ನಾನಿದ್ದಾಗ ಒಂದು ರೂಪ ನೀಡಿ,ತಿದ್ದಿ,ತೀಡಿ ಬೆಳೆಸಿದವರು ಪಾವಗಡದ ಆ ಹಿರಿಯ ಸ್ನೇಹಿತರು. ಆ ಮೂರು ವರ್ಷಗಳಲ್ಲಿ ಅವರು ನನಗೆ ಸಾಹಿತ್ಯದ ಓದಿನ ದಾರಿ-ದಿಕ್ಕುಗಳನ್ನು ಪರಿಚಯಿಸಿದ್ದರು. ಅವರನ್ನು ಸಂಪರ್ಕಿಸಲು ನಾನು ಮಾಡಿದ ಪ್ರಯತ್ನಗಳು ವಿಫಲವಾಗಿದೆ. ಒಮ್ಮೆ ಅವರ ಮೊಬೈಲ್ ನಂಬರ್ ನನ್ನ ಬಂಧುವೊಬ್ಬರಿಂದ ಸಿಕ್ಕಿತ್ತು. ಆದರೆ ಅದು ಯಾವಾಗಲೂ switch off ಆಗಿರುತ್ತಿತ್ತು. ಏಳೆಂಟು ದಿನಗಳು ಪ್ರಯತ್ನಿಸಿ ನೋಡಿದ್ದಾಯ್ತು; ಪ್ರಯೋಜನವಾಗಲಿಲ್ಲ.
… (ಸಶೇಷ)
ಚಿತ್ರ ಕೃಪೆ : http://www.wallpaperswala.com
Were you never motivated by leftist ideology in your early life? Instead of reading time pass literature, you should have studied Marks, Engels, Lenin and others.
ಶೆಟ್ಕರ್ ಸಾರ್,
ನೀವು ಮೇಲೆ ಹೇಳಿದ ಮಹನೀಯರ ಸೋವಿಯತ್ ಯುನಿಯನ್ ಹಳ್ಳ ಹಿಡಿದ ಮೇಲೂ ಇನ್ನೂ ಈ ಐಡಿಯಾಲಜಿಗಳ ಮೇಲಿನ ನಂಬಿಕೆ ಉಳಿದಿರುವುದು ಸೋಜಿಗವಾಗಿದೆ
ದೆಹಲಿಯಲ್ಲಿ ಮೋದಿ ಹಳ್ಳ ಹಿಡಿದ ಮೇಲೂ ನೀವು ನಮೋ ಭಜನೆ ಬಿಟ್ಟಿದ್ದೀರಾ??
ಯಾರದೋ ವಿಜಯವನ್ನು ತನ್ನ ವಿಜಯ ಎಂಬಂತೆ ಸಂಭ್ರಮಿಸುತ್ತಿರುವ ಈ ಮಹಾನುಬಾವರಿಗೆ ಏನನ್ನಬೇಕೊ!. ಎರಡು ವರುಷದ ನಂತರ ಮನೆಗೆ ಬಂದವ ತನ್ನ ಎರಡು ತಿಂಗಳ ಮಗುವ ಕಂಡು ಸಂಭ್ರಮಿಸಿದಂತೆ..
ಕೇಜ್ರೀವಾಲ್ ಯಾರೋ ಅಲ್ಲ, ಅವರು ನಮ್ಮವರೇ!
ನಿಮ್ಮವರಾ…!
ಅಲ್ಲಿಗೆ ಕೇಜ್ರಿವಾಲ್ ಕತೆ ಮುಗಿಯಿತು.ಪಾಪ
ನಮೋ ಬಾಲಗಳಿಗೇಕೆ ಕೇಜ್ರೀವಾಲ್ ಕತೆಯ ಚಿಂತೆ?
ಒಹ್ ಅದು ಗೊತ್ತು ಬಿಡಿ. ಮುಂದಿನ ದಿನಗಳಿಗೆ ಗಂಜಿ ವ್ಯವಸ್ಥೆ ಮಾಡಿಕೊಳ್ಳಬೇಕಲ್ಲ!. ಅದಕ್ಕೆ ತನ್ನದಲ್ಲ ಅಂತ ಗೊತ್ತಿದ್ದರೂ, ತನ್ನದೇ ಮಗು ಎಂಬಂತೆ ಸಂಭ್ರಮ ಪಡುತ್ತಿರುವುದು :p
ಹೌದು, ನಿಮ್ಮ ನಮೋ ದರ್ಬಾರಿನಲ್ಲಿ ನಡೆಯುವ pogrom ಗಳಿಂದ ನಿರಾಶ್ರಿತರಾಗಿ ಗಂಜಿಗೆ ಅಂಗಾಲಾಚುವ ಪರಿಸ್ಥಿತಿ ನಮಗೆ ಬರಬಾರದೆಂದರೆ ನಾವು ಕೇಜ್ರೀವಾಲರಿಗೆ ಬೆಂಬಲ ನೀಡಲೇ ಬೇಕಲ್ಲವೆ?
ಅಂತಹ ಒಂದು ಭಯ ಇದೆ, ಎಡಬಿಡಂಗಿಗಳು ಮೋದಿಯಿಂದ ನಿರಾಶ್ರಿತರಾದರೆ ಅದು ಮೋದಿ ಗೆ ಮತ ಕೊಡಲು ಮತ್ತೊಂದು ಕಾರಣವಾಯ್ತು
ನಾಗಶೆಟ್ಟಿ ಶೆಟ್ಕರ್ ರವರೇ, ನೀವು ಹೇಳಿದ್ದು ವಿಚಾರ ಪ್ರಚೋದಿತವಾಗಿದೆ. ನಿಮ್ಮಂತಹ ತಿಳಿದವರು ತಮ್ಮ ವಿಚಾರಗಳನ್ನು ಖಂಡಿತವಾಗಿಯೂ ಪದೇ ಪದೇ ವ್ಯಕ್ತಪಡಿಸುತ್ತಿರಬೇಕು.
ಮಾರ್ಕ್ಸ್ ವಾದವು ಮನುಷ್ಯ ಸಮಾಜದ ಬಗ್ಗೆ ಸಾರ್ವಕಾಲಿಕ ಸತ್ಯವನ್ನೇ ಹೇಳಿದೆ. ಆದುದರಿಂದ ಮಾರ್ಕ್ಸ್ ವಾದವು ಸದಾ ಪ್ರಸ್ತುತವಾಗಿಯೇ ಇದೆ. ಎಂಡಮೂರಿ ಕಾದಂಬರಿ ಓದಿ ಸಮಯ ಹಾಳು ಮಾಡುವ ಬದಲು ಮಾರ್ಕ್ಸ್ ವಾದದಿಂದ ಪ್ರೇರಿತವಾದ ಸಾಹಿತ್ಯವನ್ನು ಓದುವುದು ಒಳ್ಳೆಯದು.
+೧
ಇವತ್ತು ಕಮೆಂಟ್ ಮಾಡುತ್ತೆ. ನಾಳೆ ತಾನೇ ಅದಕ್ಕೆ +೧ ಅಂತ ಹಾಕುತ್ತೆ. ಬಹುಶ: ತಾನು ಬರೆದಿದ್ದು ಓದಿ ಅಷ್ಟು ಸಂತೋಷವಾಗುತ್ತೇನೊ. ಒಟ್ಟಿನಲ್ಲಿ ಫಿರ್ಕಿ ಗಿರಾಕಿ!
ನಾನು ಬರೆದ ವಿಚಾರವನ್ನು ನೀವೇ ಬರೆದಿದ್ದರೆ ನಿಮ್ಮ ಕಮೆಂಟಿಗೂ +೧ ಹಾಕುತ್ತಿದ್ದೆ!
ಮಾನ್ಯ ಶ್ರೀರಂಗ ಅವರೆ ನಿಮ್ಮ ಆತ್ಮ ಕಥನ ಓದುತ್ತಿದ್ದೇನೆ. ಮೊದಲಿಗೆ ನನಗೆ ಈ ನಿಲುಮೆಯಲ್ಲಾಗಲೀ ಬೇರೆ ಯಾವುದೆ ಸೈಟ್‍ನಲ್ಲಿ ನನ್ನ ಅಭಿಪ್ರಾಯ ವ್ಯಕ್ತಪಡಿಸಲು ಸಂಕೋಚವೆನಿಸುತ್ತಿತ್ತು. ಯಾಕೆಂದರೆ ಕಂಪ್ಯೂಟರ್ ಬಳಕೆ ಕೇವಲ ಯುವಕರಿಗೆ; ನನ್ನಂಥ ಮಧ್ಯಮ ವಯಸ್ಸಿಗರಿಗಲ್ಲ ಎಂಬ ಭಾವವಿತ್ತು. ಆದರೆ ನಿಮ್ಮ ಜೀವನೋತ್ಸಾಹ ನೋಡಿದ ಮೇಲೆ ನನ್ನ ಅಭಿಪ್ರಾಯ ಬದಲಿಸಿಕೊಂಡಿದ್ದೇನೆ. ಇರಲಿ, ನೀವು ಎಂಡ್ಮುರಿ ಕಾದಂಬರಿಗಳ ಕುರಿತು ಬರೆದಿದ್ದೀರಿ. ಹೌದು ಅವರ ಕಾದಂಬರಿಗಳು ತುಂಬಾ ಥ್ರಿಲ್ಲಿಂಗ್ ಇರುತ್ತಿದ್ದರಿಂದ ಅವುಗಳನ್ನು ಎಲ್ಲರು ಮೆಚ್ಚುತ್ತಿದ್ದರು. ಈಗ ಎಂಡಮುರಿ ಅವರ ರೀತಿಯಲ್ಲೇ ಕನ್ನಡದಲ್ಲಿ ಕೆ. ಎನ್. ಗಣೇಶಯ್ಯ ಅವರು ಬರೆಯುತ್ತಾರೆ. ಅವರ ಕಾದಂಬರಿಗಳು ಇತಿಹಾಸ ವಿಜ್ಞಾನ, ಸಂಶೋಧನೆ ಎಲ್ಲವನ್ನು ಒಳಗೊಂಡ ಥ್ರಿಲ್ ಕಾದಂಬರಿಗಳಾಗಿವೆ. ಓದಲು ಶುರು ಮಾಡಿದರೆ ಮುಗಿಯುವವರೆಗೆ ಯಾರೂ ಪುಸ್ತಕ ಕೆಳಗಿಡುವಂತಿಲ್ಲ!! ಎಂಡಮುರಿಯವರ ಕನ್ನಡದ ಅಭಿಮಾನಿಗಳಿಗಂತೂ ಪುನಃ ಅವರೇ ಬರೆಯಲು ಶುರು ಮಾಡಿದ್ದಾರೇನೋ ಎನ್ನಿಸುತ್ತದೆ. ನೀವು ಅವರ ಕಾದಂಬರಿ ಓದಿರಬಹುದು. ಕೆಲವು ವಿಷಯಗಳಿಗೆ ಸಾಕ್ಷಿಗಾಗಿ ಪುಸ್ತಕದ ಹೆಸರು ವೆಬ್ ವಿಳಾಸ ಎಲ್ಲವನ್ನೂ ಕೊಡುತ್ತಾರೆ. ಇದ್ರಿಂದ ಇತಿಹಾಸದ ವಿದ್ಯಾರ್ಥಿಗಳಿಗೆ ವಿಜ್ಞಾನ ಕಲಿಕಾ ವಿದ್ಯಾರ್ಥಿಗಳಿಗೆ ಬಹಳೇ ಅನುಕೂಲಗಳಾಗುತ್ತವೆ. ಎಂಡಮುರಿ ಕಾದಂಬರಿ ಬರವಣಿಗೆ ನಿಲ್ಲಿಸಿದ್ದಾರೆಂದು ನಿರಾಶರಾದ ನನ್ನಂಥವರು ಇವರ ಕಾದಂಬರಿ ಓದಿ ಉಲ್ಲಸಿತರಾಗಬಹುದಾಗಿದೆ. ಹ್ಞಾ! ಇವರು ಕನ್ನಡಿಗರೂರಿ.
ಶೆಟ್ಕರ್ ಅವರಿಗೆ–
೧. ನಾನು time pass ಕಾದಂಬರಿಗಳನ್ನು ನನ್ನ ಯಾವ ವಯಸ್ಸಿನಲ್ಲಿ ಓದುತ್ತಿದ್ದೆ ಎಂಬುದಕ್ಕೆ ಉತ್ತರ ನನ್ನ ಬರಹದಲ್ಲೇ ಇದೆ.
೨. ಮಹಡಿಗೆ ಹೋಗಬೇಕಾದರೆ ಮೆಟ್ಟಲುಗಳನ್ನು ಹತ್ತುವುದು ಉತ್ತಮ ಎಂದು ನನ್ನ ಭಾವನೆ ಮತ್ತು ಅನುಭವ. ನೆಲದಿಂದಲೇ
ಹಾರುತ್ತೇನೆ ಎನ್ನುವವರೂ; ಅಂತಹ ಶಕ್ತಿ ಇರುವವರು ಹಾರಲಿ; ಅಡ್ಡಿಯಿಲ್ಲ.
೩. ನನ್ನ ಜೀವನವನ್ನು ಎಡ ಪಂಥ/ಬಲ ಪಂಥ ಅಥವಾ ಇನ್ಯಾವುದೇ ಪಂಥಗಳಿಗೆ ಮುಡಿಪಾಗಿಡಲು ನನಗೆ ಇಷ್ಟವಿಲ್ಲ.
ಮಾರ್ಕ್ಸ್ ವಾದ ಓದಿಲ್ಲ ಅಂತೀರಿ ಆದರೂ “ನನ್ನ ಜೀವನವನ್ನು ಎಡ ಪಂಥ/ಬಲ ಪಂಥ ಅಥವಾ ಇನ್ಯಾವುದೇ ಪಂಥಗಳಿಗೆ ಮುಡಿಪಾಗಿಡಲು ನನಗೆ ಇಷ್ಟವಿಲ್ಲ” ಅಂತೀರಿ! ಮಾರ್ಕ್ಸ್ ವಾದ ಓದಿ ನಿರ್ಧಾರ ತೆಗೆದುಕೊಂಡಿದ್ದರೆ ನಿರ್ಧಾರಕ್ಕೆ ಒಂದು ಬೆಲೆ ಇರುತ್ತದೆ. ಓದದೆ ನಿರ್ಧಾರ ತೆಗೆದುಕೊಂಡದ್ದು ಸರಿಯೆ? ಆ ವಯಸ್ಸಿನಲ್ಲಿ ಎಂಡಮೂರಿ, ಈ ವಯಸ್ಸಿನಲ್ಲಿ ಭೈರಪ್ಪನವರ ಕಾದಂಬರಿಗಳನ್ನು ಓದಿ ಟೈಮ್ ಪಾಸ್ ಮಾಡುತ್ತಿದ್ದೀರಿ! ಜನಪ್ರಿಯ ಸಾಹಿತ್ಯದಿಂದ ಕ್ಷಣಿಕ ರೋಚಕತೆಯನ್ನು ಪಡೆದಿದ್ದೀರಿ. ನೀವೇ ಧನ್ಯರು!
ಬೇರೆಯವರಿಗೆ ಪ್ರವಚನ ಮಾಡೋ ಈ ಯಪ್ಪ ಆ ದರ್ಗಾ ಕಾಲ ಬುಡದಲ್ಲೇ ಭದ್ರವಾಗಿ ಕುಳಿತಿದೆ!. ಐದು ಪೈಸೆಯ ಸ್ವಂತ ವಿಚಾರವಿಲ್ಲದೇ ಬಾವಿಯೊಳಗಿನ ಕಪ್ಪೆಯಂತೆ..
Why do you hate Darga Sir? Is it a crime to be a Muslim in this country?
ಇದರಲ್ಲಿಯೂ ಹಿಂದು-ಮುಸ್ಲಿಂ ಹುಡುಕಿದ್ರಾ??? ಅಬ್ಬಾ, ನಿಮ್ಮ ಮಹಿಮೆ ವರ್ಣಿಸಲಾಗದ್ದು!. ನಿಮಗೆ ಸ್ವಂತ ವಿಚಾರವಿಲ್ಲ ಅಂದರೆ, ಅದರಲ್ಲಿ ಧರ್ಮದ ವಿಷಯ ಬರುತ್ತಾ ??
ಶ್ರೀರಂಗ ಸಾರ್,
ನಿಮ್ಮ ಲೇಖನಗಳನ್ನು ನಿಲುಮೆಯಲ್ಲಿ ಓದುತ್ತಾ ಇರುತ್ತೇನೆ.ಅವು ಸಮತೋಲನದಿಂದ ಕೂಡಿರುವುದಾಗಿದೆ.
ನೀವು ಮಾಡಿರುವ ಒಳ್ಳೆಯ ಕೆಲಸಗಳಲ್ಲಿ ಮಾರ್ಕ್ಸ್ ಅನ್ನು ಓದದಿರುವುದೇ ಆಗಿದೆ.ಓದಿದ್ದರೆ ನಮ್ಮ ಶೆಟ್ಕರ್ ಸಾರ್ ತರ ಆಗುತಿದ್ದಿರಿ 😛
Please stop personal attacks. Be objective while criticizing others.
ಶೆಟ್ಕರ್ ಅವರಿಗೆ —
ನಾನು ನನ್ನ ನೆನಪುಗಳ ಲೇಖನ ಬರೆಯುವುದಕ್ಕೂ ತುಂಬಾ ಹಿಂದೆ ತಾವು ನಾನು ಯಾರು; ಏನು ಕೆಲಸ ಮಾಡುತ್ತಿದ್ದೆ ಎಂಬುದನೆಲ್ಲಾ ಕಂಡು ಹಿಡಿದು ನನಗೆ ಆಶ್ಚರ್ಯ ಮೂಡಿಸಿದ್ದಿರಿ. ಈಗ ನಾನು ಏನನ್ನು ಓದುತ್ತಿದ್ದೇನೆ ಎಂದು ಊಹೆ ಮಾಡಿದ್ದೀರಿ. ಆದರೆ ನಾನು ಓದಿದ್ದನ್ನೆಲ್ಲಾ/ಈಗ ಓದುತ್ತಿರುವುದನ್ನೆಲ್ಲಾ ಇಲ್ಲಿ ಪಟ್ಟಿ ಮಾಡಿ ನನ್ನ ತುತ್ತೂರಿಯನ್ನು ನಾನೇ ಊದಿಕೊಳ್ಳುವುದು ಸಭ್ಯತೆಯ ಲಕ್ಷಣವಲ್ಲ. ಭೈರಪ್ಪನವರ ಜನಪ್ರಿಯತೆಯೇ ಒಂದು ಕುಂದು ಎಂದು ವಿ ವಿ ಗಳ ವಿಮರ್ಶಕರು ಹೇಳುತ್ತಾ ಬಂದಿದ್ದಾರೆ. ಈ ಹಳೆಯ ಸಾಹಿತ್ಯ ರಾಜಕೀಯವನ್ನೆಲ್ಲಾ ಪುನಃ ಹೇಳುವುದು ಬೇಡ . ತಮ್ಮಂತಹ ಪ್ರಾಜ್ಞರು ಇವೆಲ್ಲವನ್ನೂ ಬಲ್ಲಿರಿ ಎಂದು ಭಾವಿಸಿದ್ದೇನೆ.
“ನನ್ನ ತುತ್ತೂರಿಯನ್ನು ನಾನೇ ಊದಿಕೊಳ್ಳುವುದು ಸಭ್ಯತೆಯ ಲಕ್ಷಣವಲ್ಲ.” tell this to namo and his cyber coolies.
“ಭೈರಪ್ಪನವರ ಜನಪ್ರಿಯತೆಯೇ ಒಂದು ಕುಂದು” he is a debater who wants to win the debate at any cost.
ಶೆಟ್ಕರ್ ಅವರಿಗೆ ——-Please stop personal attacks. . Be objective while criticizing others” ಎಂದು ಅಪ್ಪಣೆ ಮಾಡುವ ತಾವು,ನೀವು ಮಾಡುತ್ತಾ ಬಂದಿರುವ
personal attacksನ ಖಾತೆಯನ್ನು ಒಮ್ಮೆ ನೋಡುವುದು ಒಳ್ಳೆಯದು. ಇದುವರೆಗೆ ನಾನು objective ಆದ ನಿಮ್ಮ ಒಂದೂ criticismಅನ್ನು ಓದಿಲ್ಲ. ಟೀಕೆಗಾಗಿ ಟೀಕೆ ಮಾಡುವುದರಿಂದ ಯಾವ ಪ್ರಯೋಜನವೂ ಇಲ್ಲ. ನಿಮಗೆ ಒಂದು ಪಂಥ,ಧ್ಯೇಯ ಇರುವಂತೆ ಬೇರೆಯವರಿಗೂ ಇರುತ್ತದೆ. ಅದನ್ನು ಸಭ್ಯತೆಯ ಗಡಿ ದಾಟದಂತೆ ಟೀಕಿಸುವ ಮನೋಭಾವ ಬೆಳೆಸಿಕೊಂಡರೆ,ನಾವೂ ಬೆಳೆಯಬಹುದು. ಇದನ್ನು ನೀವು ನನ್ನ ಲೇಖನವನ್ನು ಓದಿ ಟೀಕಿಸಿದ್ದರಿಂದ ಬೇಸರವಾಯ್ತು ಎಂದು ಹೇಳಿಲ್ಲ. ಒಂದು ಲೇಖನ ಬರೆದ ಮೇಲೆ ಅದಕ್ಕೆ ಬರುವ ಟೀಕೆಗಳನ್ನು ಎದುರಿಸುವುದು ನನ್ನ ಧರ್ಮ. ನನ್ನ ಅಭಿಪ್ರಾಯ/ಅನಿಸಿಕೆಗಳನ್ನು ಲೇಖನವಾಗಿ ಬರೆದಾಗ ಅದಕ್ಕೆ ಬರುವ ಟೀಕೆಗಳಿಗೆ ಮುಕ್ತ ಮನಸ್ಸಿನಿಂದ ಸ್ಪಂದಿಸಬೇಕು ಎಂದು ನಾನು ನಂಬಿದ್ದೇನೆ; ಮತ್ತು ಅದೇ ರೀತಿ ನಡೆದುಕೊಂಡು ಬಂದಿದ್ದೇನೆ. ನನ್ನ ಪ್ರತಿಕ್ರಿಯೆಯಿಂದ ಯಾರಿಗಾದರೂ ಬೇಸರವಾಗಿದ್ದರೆ ಅಂತಹ ಸಮಯದಲ್ಲಿ ಅದಕ್ಕೆ ಕ್ಷಮೆಯನ್ನೂ ನಾನು ಕೇಳಿದ್ದೇನೆ.
“-Please stop personal attacks. . Be objective while criticizing others” ಅಂತ ಅಂದಿದ್ದು ನಿಮಗಲ್ಲ ನವೀನ ಅವರಿಗೆ. ಟೀಕೆಗಾಗಿ ಟೀಕೆ ಮಾಡುವ ಚಟ ಅವರದ್ದು.
“ಇದುವರೆಗೆ ನಾನು objective ಆದ ನಿಮ್ಮ ಒಂದೂ criticismಅನ್ನು ಓದಿಲ್ಲ.” ನಿಮ್ಮದು ಜಾಣ ಕುರುಡು. ನಾನು “ಮಾರ್ಕ್ಸ್ ವಾದವು ಮನುಷ್ಯ ಸಮಾಜದ ಬಗ್ಗೆ ಸಾರ್ವಕಾಲಿಕ ಸತ್ಯವನ್ನೇ ಹೇಳಿದೆ. ಆದುದರಿಂದ ಮಾರ್ಕ್ಸ್ ವಾದವು ಸದಾ ಪ್ರಸ್ತುತವಾಗಿಯೇ ಇದೆ. ಎಂಡಮೂರಿ ಕಾದಂಬರಿ ಓದಿ ಸಮಯ ಹಾಳು ಮಾಡುವ ಬದಲು ಮಾರ್ಕ್ಸ್ ವಾದದಿಂದ ಪ್ರೇರಿತವಾದ ಸಾಹಿತ್ಯವನ್ನು ಓದುವುದು ಒಳ್ಳೆಯದು.” ಅಂತ ಬರೆದದ್ದರಲ್ಲಿ objective ಅಲ್ಲದೇ ಇರುವುದು ಏನಿದೆ?!!
ನಿಜ, ನಾಗಶೆಟ್ಟಿ ಶೆಟ್ಕರ್ ರವರೇ, ಎಂಡಮೂರಿ ಕಾದಂಬರಿಗಳ ಬದಲು ಮಾರ್ಕ್ಸ್ ವಾದದ ಪುಸ್ತಕಳನ್ನು ಬೀದಿ ಬೀದಿಯಲ್ಲಿ ಮಾರಬೇಕು. ಮಾಸಪತ್ತಿಕೆಗಳಲ್ಲಿ ಧಾರಾವಹಿಯಂತೆ ಪ್ರಕಟಿಸಬೇಕು. ಆಗಲಾದರೂ ಉಳಿದವರಿಗೆ ಕೊಂಚವಾದರೂ ನಿಮ್ಮಂತಹ ಬುದ್ಧಿ ಬರಬಹುದು.
ನಾನು ಶೆಟ್ಕರ್ ಅವರು ಹೇಳುವುದನ್ನ ಒಪ್ಪುತ್ತೇನೆ. ಯೌವನ ಅನ್ನುವುದು ಜೀವನದಲ್ಲಿ ಬಹಳ ಮುಖ್ಯವಾದ ಕಾಲಘಟ್ಟ. ಆ ಕಾಲದಲ್ಲಿ ಸರಿಯಾದ ಮಾರ್ಗದರ್ಶನ ಸಿಗದಿದ್ದರೆ ಮುಂದಿನ ಜೀವನ ಹಾಗೂ ಒಬ್ಬ ಮನುಷ್ಯನ ಮುಂದಿನ ಪೀಳಿಗೆ ಸಹ ತಪ್ಪು ದಾರಿ ಹಿಡಿಯುವ ಎಲ್ಲಾ ಸಾಧ್ಯತೆಗಳಿರುತ್ತವೆ. ಅಂತಹ ಸಮಯದಲ್ಲಿ ಮಾರ್ಕ್ಸ್ ಅಥವಾ ಲೆನಿನ್ ಬಗ್ಗೆ ಒದುವುದನ್ನು ಬಿಟ್ಟು, ಯಂಡಮೂರಿಯ ಕಲ್ಪನಾ ಲೋಕದಲ್ಲಿ ವಿಹರಿಸಿದರೆ ಜೀವನಕ್ಕೊಂದು ಅರ್ಥವಿದೆಯೇ? ಆ ತಪ್ಪು ತಪ್ಪಾದ ಸುಂದರ ಕಲ್ಪನೆಗಳು ಮುಂದೆ ಜೀವನ ಹೇಗೆ ನಡೆಸಬೇಕೆಂದು ಕಲಿಸಿಕೊಡುತ್ತವೆಯೇ?
ಸೋವಿಯತ್ ರಷ್ಯಾ ಮಗುಚಿ ಬಿದ್ದರೂ ಸಹ ಇಂದಿಗೂ ಮಾರ್ಕ್ಸ್ ಪ್ರಸ್ತುತನೇ ಆಗಿದ್ದಾನೆ. ಇದು ಗೊತ್ತಿಲ್ಲದ ಜನರಿಗೆ ಯಂಡಮೂರಿ, ರಾಜಾ ಚಂಡೂರ್ ಇವರೇ ದಾರಿದೀಪ! ದೇಶಕ್ಕೆಂಥಾ ನಷ್ಟ!? ಇಲ್ಲಿ ಕಮೆಂಟಿಸಿರುವ ಅರ್ಧದಷ್ಟಾದರೂ ಜನ ಇದನ್ನು ಅರ್ಥೈಸಿಕೊಂಡಿದ್ದರೆ ಭಾರತ ಸ್ವಲ್ಪವಾದರೂ ಮುಂದುವರಿಯುತ್ತಿತ್ತು.
ಸೋವಿಯತ್ ರಷ್ಯಾ ಮಗುಚಿ ಬೀಳಲು ಮಾರ್ಕ್ಸ್ ವಾದ ಕಾರಣವಲ್ಲ. ಅಮೇರಿಕಾ ನೇತೃತ್ವದ ಬಂಡವಾಳಶಾಹಿ ಶಕ್ತಿಗಳು ಮಾಡಿದ ಪಿತೂರಿಯಿಂದ ಸೋವಿಯತ್ ರಷ್ಯಾ ಮಾರ್ಕ್ಸ್ ವಾದದಿಂದ ದೂರವಾಯಿತು. ಮಾರ್ಕ್ಸ್ ವಾದ ಮತ್ತೆ ಬೆಳಗಲಿದೆ ನಂಬಿಕೆ ಇರಲಿ.
ಸದ್ಯ ಬ್ರಾಹ್ಮಣರ ಪಿತೂರಿ ಕಾರಣ ಎಂದು ಹೇಳಲಿಲ್ವಲ್ಲ ಅದೆ ಸಮಾಧಾನ
ಬ್ರಾಹ್ಮಣರು ದುಡಿಯುವ ವರ್ಗದ ಅನ್ನ ಕಸಿದು ಸುಖಜೀವನ ನಡೆಸುವ ಭೂಸುರರೇ ಆಗಿದ್ದರು. ಭೂಸುರರು ಅಂದರೆ ಬಂಡವಾಳಶಾಹಿಗಳೇ ಅಲ್ಲವೆ? ಇಂದು ನೀವು ಬ್ರಾಹ್ಮಣರು ಐ ಟಿ ಬಿ ಟಿ ಸೇರಿ ಅಮೇರಿಕೆಯ ಬಂಡವಾಳಶಾಹಿಗಳ ಕೈಗೂಡಿಸಿದ್ದೀರಿ.
ಬಂಡವಾಳಶಾಹಿ ಜಗತ್ತಿನಲ್ಲಿ, ಜಾತಿ ಧರ್ಮದ ಹೆಸರು ಹೇಳಿ ಯಾರ್ದೊ ಕಾಲು ಹಿಡಿದು ಮೀಸಲಾತಿಯಲ್ಲಿ ಒಂದು ಪುಕ್ಕಟೆ ಕೆಲಸ ಗಿಟ್ಟಿಸಿಕೊಂಡು, ರಾಜಕೀಯ ಮಾಡಿ ಬದುಕುವ ಕೌಶಲ್ಯವಿರುವ ಅಯೊಗ್ಯರಿಗೆ ಬದುಕಲು ಸಾಧ್ಯವಿಲ್ಲ. ಭಾರತದಲ್ಲಿ ಕಾರ್ಖಾನೆಗಳು ಸೆಂಟ್ರಲೈಸ್ ಆದ ಹಾಗೆ ಹುಟ್ಟಿನ ಆಧಾರಿತವಾದ ಜಾತಿಗಳು ನಿರ್ಮೂಲನೆಯಾಗುವದೆಂದು ಮಾರ್ಕ್ಸ್ ಕೂಡ ಅಭಿಪ್ರಾಯ ಪಟ್ಟಿದ್ದ. ಅದು ನಿಜವೂ ಹೌದು.ಆದರೆ ಇದಕ್ಕೆ ವಿರುದ್ಧವಾಗಿ ಭಾರತದ ಸೋಶಿಯಲಿಸ್ಮ್ ವ್ಯವಸ್ಥೆಯ ಹರಿಕಾರರು ಜಾತಿ ಧರ್ಮ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಚಲಾವಣೆಯಲ್ಲಿರುವಂತೆ ನೋಡಿಕೊಳ್ಳುವದಂತೂ ಸತ್ಯ.ಇವತ್ತು ಜಾತಿಯ ಅಂತರ ಕಡಿಮೆ ಆಗಿರುವದಕ್ಕೆ ಗ್ಲೋಬಲೈಸೆಶನ್ ಕಾರಣವೆ ಹೊರತು ಯುನಿವರ್ಸಿಟಿಗಳಲ್ಲಿ ಉದ್ದುದ್ದವಾಗಿ ಸಮಾಜವಾದವನ್ನು ಪಾಠ ಮಾಡುವ, ಕೆಲಸಕ್ಕೆ ಬಾರದ ಹೋರಾಟ ಮಾಡುವ ಪ್ರಗತಿಪರ ಸಂಘಟನೆಗಳು ಖಂಡಿತ ಕಾರಣ ಅಲ್ಲ.
ಆಶಾವಾದ ಚೆನ್ನಾಗಿದೆ.ಅಲ್ಲಿಯವರೆಗೆ ನೀವು ಹೇಗಾದರೂ ಮಾಡಿ ಜೀವ ಹಿಡಿದುಕೊಂಡಿರಿ..ಆಪ್ ನ ಗಂಜಿ ಕುಡಿದು..
ಸಮತಾವಾದ (ಕಮ್ಯುನಿಸಂ)ದಲ್ಲಿ ಕೆಲವು ಗಂಭೀರ ಲೋಪಗಳು ಇವೆ. ಇಲ್ಲದೇ ಹೋಗಿದ್ದರೆ ಸಮತಾವಾದಿ ವ್ಯವಸ್ಥೆಯು ಸೋವಿಯತ್ ಯೂನಿಯನ್ನಲ್ಲಿ ಕುಸಿಯುತ್ತಿರಲಿಲ್ಲ ಮತ್ತು ಬಹುತೇಕ ಪ್ರಪಂಚದ ರಾಷ್ಟ್ರಗಳಿಂದ ಮಾಯವಾಗುತ್ತಿರಲಿಲ್ಲ. ಸಮತಾವಾದಿ ವ್ಯವಸ್ಥೆಯು ಪ್ರಜಾಪ್ರಭುತ್ವದ ಮೌಲ್ಯಗಳಾದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹಾಗೂ ವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತದೆ. ಇದು ಅಂತಿಮವಾಗಿ ಇಡೀ ವ್ಯವಸ್ಥೆಯೇ ಕುಸಿಯುವಂತೆ ಮಾಡುತ್ತದೆ. ಬಂಡವಾಳಶಾಹಿ ವ್ಯವಸ್ಥೆಯು ಸಮತಾವಾದಿ ವ್ಯವಸ್ಥೆಯಂತೆ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವುದಿಲ್ಲ.
ರಷ್ಯಾಗೆ ಅಮೇರಿಕಾ ಪಿತೂರಿ ಕಾರಣ ಬೇರೆ ಕಮ್ಯುನಿಸ್ಟ್ ರಾಷ್ಟ್ರಗಳೇಕೆ ಬಿದ್ದು ಹೋದವು?
ಬೇರೆ ಯಾವ ಕಮ್ಯೂನಿಸ್ಟ್ ದೇಶದ ಬಗ್ಗೆ ಮಾತಾಡುತ್ತಿದ್ದೀರಾ ಶ್ರೀಕಾಂತ್!? ಕ್ಯೂಬಾ ಇಂದಿಗೂ ಎದೆ ಸೆಟೆದು ನಿಂತಿದೆ. ಅದರ ಬಡತನಕ್ಕೆ ಇಂದು ಅಮೇರಿಕಾದ ಬಂಡವಾಳಶಾಹಿ ನೀತಿ ಹಾಗೂ ಪಿತೂರಿಯೇ ಕಾರಣವಲ್ಲವೇನು? ದಕ್ಷಿಣ ಅಮೆರಿಕಾದ ರಾಷ್ಟ್ರಗಳು ಇಂದಿಗೂ ನಿಂತಿರುವುದು ಕಮ್ಯೂನಿಸ್ಟ್ ನೆಲೆಗಟ್ಟಿನಲ್ಲಿಯೇ. ಹ್ಯೂಗೋ ಛಾವೆಝ್ ನಂತಹಾ ಜನಪ್ರಿಯ ನಾಯಕ ನಿಮಗೆ ನಿನಪಿಗೆ ಬರುತ್ತಿಲ್ಲವೇ!? ಅದೇ ನಿಲೆಗಟ್ಟಿನ ಮೇಲೆ ನಿಂತ ಚೀನ ಇಂದು ಜಗತ್ತಿಗೇ ಮಾದರಿಯಾಗಿ ನಿಂತಿದೆ. ಇನ್ಯಾವ ದೇಶದೆಡೆಗೆ ನಿಮ್ಮ ಬೊಟ್ಟು!?
ಕ್ಯೂಬಾದಲ್ಲಾದ ಬದಲಾವಣೆಯ ಗಾಳಿಯ ಬಗ್ಗೆ ನಿಮಗೆ ಏನೂ ಗೊತ್ತಿಲ್ಲವೆನ್ನುವದಕ್ಕೆ ನಿಮ್ಮ ಮೇಲಿನ ಕಾಮೆಂಟುಗಳೆ ಸಾಕ್ಷಿ. ಕ್ಯೂಬಾದಲ್ಲಿ ಈಗಾಗಲೆ ಗ್ಲೋಬಲೈಸೆಶನ್ ಆವರಿಸಿಕೊಂಡಿದೆ. (http://www.ndtv.com/video/player/ndtv-special-ndtv-24×7/inside-castro-s-cuba/237902?curl=1389033717)೪೦೦೦೦ ಕ್ಕೂ ಹೆಚ್ಚು ಬಂಡವಾಳ ಕಂಪನಿಗಳಿಗೆ ಲೈಸೆನ್ಸ್ ಅನ್ನು ಕೊಡಲಾಗಿದೆ. ಇನ್ನು ಧಾರ್ಮಿಕ ವಿಷಯಕ್ಕೆ ಬಂದರೆ ಕಮ್ಯುನಿಸ್ಟನೆಂದು ಹೇಳಿಕೊಳ್ಳುವ ಫಿಡೆಲ್ ಕ್ಯಾಸ್ಟ್ರೊ ಒಬ್ಬ ಹಿಡ್ಡನ್ ಕ್ರೈಸ್ತ ಮತದ ಅನುಯಾಯಿ.ಒಮ್ಮೆ ಆತ ಹೇಳಿದ್ದ ಕೂಡ “ಕ್ರಿಸ್ತನು ಒಬ್ಬ ಕ್ರಾಂತಿಕಾರಿ” “ಕಮ್ಯುನಿಸ್ಮ್ ಹಾಗೂ ಬೈಬಲ್ ನ ತತ್ವಗಳ ನಡುವೆ ಯಾವುದೆ ವೈರುದ್ಯತೆ(contradiction) ಇಲ್ಲ” ಎಂದೆಲ್ಲ.
ಆದರೆ ಅವನು ಹಾಗೆ ಹೇಳಿದ್ದರಿಂದ ಮಾರ್ಕ್ಸ್ ವಾದ ಹಳ್ಳ ಹಿಡಿದದ್ದು ಮಾತ್ರ ಅಲ್ಲ, ಅದು ಬೈಬಲ್ ನ ಒಳ್ಳೆಯ ತತ್ವಗಳಿಗೆ ತೋರಿಸಿದ ಅಗೌರವವೂ ಹೌದು. ಅವನು ಹಾಗೆ ಅಂದಿರುವದಕ್ಕೂ ಇಂದು ಮಾರ್ಕ್ಸ್ ವಾದವನ್ನು ಬಸವ/ಶರಣ ತತ್ವಗಳಿಗೆ ಸಮೀಕರಿಸಲು ಪ್ರಯತ್ನಿಸುವ ಪ್ರಗತಿಪರರೆನಿಸಿಕೊಂಡ ಬುದ್ದಿಮಾಂದ್ಯರಿಗೂ ಯಾವುದೆ ವ್ಯತ್ಯಾಸವಿಲ್ಲ. ಅಲೌಕಿಕವಾದ ಬಸವ/ಶರಣ ತತ್ವಗಳನ್ನು ಹಳ್ಳ ಹಿಡಿಸಲು ಇಂತಹ ಅಯೊಗ್ಯರಿಗೆ ಮಾತ್ರ ಸಾಧ್ಯ.
ರಿ ಸೋಮಶೇಖರ್, ನೀವು ಒಳ್ಳೆ ಓತಿಕಾಟಕ್ಕೆ ಬೇಲಿಗೂಟ ಸಾಕ್ಷಿ ಅಂತಾರಲ್ಲ ಹಾಗೆ. ಈ ಶೆಟ್ಕರ್ ಮಹಾನುಭಾವರಿಗೆ ಮಾರ್ಕ್ಸ್ ವಾದ ಅನ್ನುವುದು ಅನ್ನ ಸಂಪಾದನೆಯ ಮಾರ್ಗ. ಜಗತ್ತಿನಲ್ಲಿ ಬಡವರು, ಶೋಷಣೆ ಇದ್ದಷ್ಟು ಇವರ ಅಂಗಡಿ ಚೆನ್ನಾಗಿ ನಡೆಯುತ್ತೆ. ನೀವು/ಇವರು ಹೇಳಿದ ಹಾಗೆ ಯೌವನದಲ್ಲಿ ಮಾರ್ಕ್ಸ ಓದಿದರೆ ಆಮೇಲೆ ಮಧ್ಯವಯಸ್ಸಿನಲ್ಲಿ ಭೌಧಿಕ ಗುಲಾಂರಾಗಿ ಗಂಜಿ ಹುಡುಕಬೇಕಾಗುತ್ತೆ!. ಯಂಡಮೂರಿ ಓದಿದರೆ ಕನಿಷ್ಟ ವೈಯುಕ್ತಿಕ ಸಾಧನೆಯ ಕನಸಾದರೂ ಇರುತ್ತೆ. 🙂
ಮಾರ್ಕ್ಸ್ ವಾದ ಪಾಶ್ಚಾತ್ಯ ದೇಶಗಳಲ್ಲಿ ಅಂದಿನ ಸಾಮಾಜಿಕ ಸ್ಥಿತಿಗತಿಗಳಿಗೆ ಸರಿಯಾಗಿಯೆ ಇತ್ತೇನೊ. ಆದರೆ ಭಾರದಂತಹ ದೇಶಗಳಲ್ಲಿ ಪ್ರಸ್ತುತವಲ್ಲ. ಇನ್ನು ಮಾರ್ಕ್ಸ್ ವಾದ, ಶೆಟ್ಕರ್ ರಂತ ಬೌದ್ಧಿಕವಾಗಿ ದಿವಾಳಿಯಾದಂತವರಿಗೆ ದೊರಕುವ ಸುಲಭ ಫಿಲಾಸಫಿಯೂ ಅಲ್ಲ. ಮಾರ್ಕ್ಸ್ ವಾದವನ್ನು ತಮಗಿಷ್ಟ ಬಂದಂತೆ ಭಂಡರು ಮಾರ್ಕ್ಸ್ ವಾದದ ಗುತ್ತಿಗೆ ಪಡೆದಿರುವದು ವಿಷಾದನೀಯ. ಭಾರತದ ಬಗೆಗೆ ಆತನ ಕೆಲವು ಹೇಳಿಕೆಗಳು ಸತ್ಯವೂ ಹೌದು. ಭಾರತದ ಇತಿಹಾಸ ಬರಿಯ ಆಕ್ರಮಣಕಾರರು ಬರೆದ ಇತಿಹಾಸವಾಗುವದೆಂದು ಹಾಗೂ ಭಾರತದ ಸಂಪತ್ತು ಬ್ರಿಟೀಶರಿಂದ ಕೊಳ್ಳೆ ಹೊಡೆಯಲ್ಪಡುವದೆಂದು ಆತ ಯಾವಾಗಲೊ ಹೇಳಿದ್ದ. ಆದರೆ ಇಂದಿನ ಸೊ ಕಾಲ್ಡ್ ಮಾರ್ಕ್ಸ್ ವಾದಿಗಳು ಆತನ ಈ ಮಾತಿಗೆ ತದ್ವಿರುದ್ದ ನಿಲುವನ್ನು ತಳೆದಿದ್ದಾರೆ. ಅಂದರೆ ಬ್ರಿಟಿಶರ ಇತಿಹಾಸವನ್ನೆ ನಿಜ ಎಂದು ನಂಬಿದ್ದಾರೆ, ನಂಬಿಸಲು ಪ್ರಯತ್ನ ಪಡುತ್ತಿದ್ದಾರೆ. ಹಾಗಾಗಿ ಮಾರ್ಕ್ಸ್ ನ ಚಿಂತನೆಗಳು ಅವರಲ್ಲಿ ಇಲ್ಲವೆ ಇಲ್ಲ ಎಂಬುದರಲ್ಲಿ ಸಂಶಯವೇ ಇಲ್ಲ.
ಅರೇ! ಮನೋಹರ್ ಅವರೇ ಹಾಗೂ ಬಾಲಚಂದ್ರರವರೇ, ಶೆಟ್ಕರ್ ಹೇಳಿದ್ದರಲ್ಲಿ ತಪ್ಪೇನಿದೆ!? ಮಾರ್ಕ್ಸ್ ವಾದ ಎಂದಿಗೂ ಅಳಿಯದ ಸತ್ಯ. ಅದರ ಬಗ್ಗೆ ಅವರಿಗ್ಗಿದ್ದಷ್ಟೇ ನಂಬಿಕೆ ನನಗಿದೆ. ಅದಕ್ಕಾಗಿ ಅವರನ್ನು ಬೆಂಬಲಿಸಿದೆ. ಅದಕ್ಕೇ ಓತಿಕ್ಯಾತ ಅಂಥಾ ಯಾಕೆ ಹೀಗಳೆಯುತ್ತೀರಾ? ಸತ್ಯವೆಲ್ಲಿದೆಯೋ ನಾವಲ್ಲಿದ್ದೇವೆ, ಅಷ್ಟೇ! ನೀವೂ ಸಾರ್ವಕಾಲಿಕ ಸತ್ಯವನ್ನು ನಿರೂಪಿಸಿ, ನಿಮ್ಮ ಕಡೆಗೂ ನಾವಿದ್ದೇವೆ. ಇಷ್ಟಕ್ಕೂ ಯಂಡಮೂರಿಯ ಕಾದಂಬರಿಗಳನ್ನೋದಿ ಯಾವ ವೈಯುಕ್ತಿಕ ಸಾಧನೆಯ ಕನಸುಗಳನ್ನು ಹೊರಟಿದ್ರಿ ನೀವು!? ಬಡವ ನಾಯಕನಿಗೆ ಶ್ರೀಮಂತ, ಸುಂದರಿ ನಾಯಕಿ ಹಾಗೇ ಸಿಕ್ಕಿಬಿಡ್ತಾಳೆಂಬ ಕನಸೇ? ಸ್ವಾಮಿ, ಅವೆಲ್ಲಾ ಸಿನಿಮಾದಲ್ಲಿ ಅಷ್ಟೇ. ನಿಜಜೀವನದ ಸತ್ಯಗಳೇ ಬೇರೆ. ರಿಜ್ವಾನುರ್ ರೆಹ್ಮಾನ್ ಕೇಸ್ ಬಗ್ಗೆ ಓದಿದ್ದೀರಾ ನೀವು!? ಮೊದಲು ಜೀವನದ ಕ್ರೌರ್ಯವನ್ನು ಅರಿತುಕೊಳ್ಳಿ, ಆಮೆಲೆ ಕನಸು ಕಾಣುವಿರಂತೆ.
ಮಾರ್ಕ್ಸ್ ವಾದ ನಿಮ್ಮ ತಲೆಯೊಳಗೆ ಹೋಗದ ಕಬ್ಬಿಣದ ಕಡಲೆಯೆಂದ ಮಾತ್ರಕ್ಕೆ, ಉಳಿದವರಿಗೆ ಅರ್ಥವಾಗಬಾರದಂತೇನಿಲ್ಲ. ಗೊತ್ತಿದ್ದವರು ಮಾತಾಡುತ್ತಾರೆ. ಗೊತ್ತಿಲ್ಲದವರು ನಿಮ್ಮಂತೆ ವಿತಂಡವಾದ ಮಾಡುತ್ತಾರೆ, ಅಷ್ಟೆ! 😛
ನಾನು ಮೊದಲಿನಿಂದಲೂ ನೊಡ್ತಾನೇ ಇದ್ದೀನಿ, ನಿಲುಮೆಯಲ್ಲಿ, ವಿನಾಕಾರಣ ಶೆಟ್ಕರ್ ಅವರಂಥವರ ಮೇಲೆ ಹಾರಾಡುತ್ತೀರ. ನಿಮ್ಮ ವಾದಸರಣಿಗೆ ಯಾರದ್ರೂ ಅಡ್ಡ ಬಂದ್ರೆ ಅವರೆಲ್ಲಾ ಭಯೋತ್ಪಾದಕರೆಂದು ನಿರೂಪಿಸಿಬಿಡ್ತೀರ. ವಾದ ಮಾಡುವಾಗ ಎದುರಿಗಿರುವವರನ್ನು ಗೌರವದಿಂದ ಕಾಣುವ ಹೃದಯ ವೈಶಾಲ್ಯತೆ ಬೆಳೆಸಿಕೊಳ್ಳಿ ಸ್ವಾಮಿ.
ಅಲ್ರೀ ಸೋಮಶೇಖರ್, ನಮ್ಮ ದೇಶದ ಸಮಸ್ಯೆ, ಇಲ್ಲಿ ಕಮ್ಯುನಿಷ್ಟರು ಮಾಡಿದ ರಾಡಿ ಬಗ್ಗೆ ಮಾತನಾಡಿ ಅಂದ್ರೆ ನೀವು ಕ್ಯೂಬಾ, ಅಮೇರಿಕ, ದಕ್ಷಿಣ ಅಮೇರಿಕ ಅಂತೆಲ್ಲ ಉದಾಹರಣೆ ಕೊಡ್ತಿರಿ. ಈ ಶೆಟ್ಕರ್ ಮತ್ತು ಅವರ ಗ್ಯಾಂಗ ನೋಡಿದ್ರೆ ಬಸವ, ಬುದ್ಧ,ಅಲ್ಲಮರನ್ನೂ ಕೂಡ ಮಾರ್ಕ್ಸ್ ಅಳತೆಗೋಲಲ್ಲೇ ಅಳಿತಾರೆ. ಈ ಜನ ಕಂಬಾಲಪಲ್ಲಿ ದಲಿತರ ಮೇಲೆ ದೌರ್ಜನ್ಯ ಅಂದರೂ ಮಾರ್ಕ್ಸ್ ನ ಮುಖ ನೋಡ್ತಾರೆ, ಮೂಡಬಿದರೆ ಸಮ್ಮೇಳನ ಅಂದ್ರೂ, ಅದರಲ್ಲಿ ಬಂಡವಾಳಶಾಹಿ ತತ್ವ ಹುಡುಕ್ತಾರೆ. ನಿಮಗ್ಯಾರಿಗೂ ಸ್ವಂತ, ದೇಶಿಯ ಅನ್ನುವಂತಹ ವಿಚಾರ ಯಾವುದು ಇಲ್ಲವೆ? ಅದ್ಯಾಕೆ ನೀವೆಲ್ಲ ಉಧೋ ಅಂತ ರಶಿಯ, ಕ್ಯೂಬಾ, ಚೀನ ಕಡೆ ನೋಡ್ತೀರಿ? ರಶಿಯಾ ಗತಿ ಬಿಡಿ,ಚೀನಾದಲ್ಲಿ ಈಗಿರೋದು ಹೆಸರಿಗಷ್ಟೇ ಕಮ್ಯುನಿಸಂ. ಅದು ಸಮತಾಬಂಡವಾಳಶಾಹಿಯಾಗಿ ..ಈಗ ಸಮಬಂಡವಾಳಶಾಹಿಯಾಗಿದೆ!.. ಜಾಗತಿಕ ಬದಲಾವಣೆಗೆ ತಕ್ಕಂತೆ ಬದಲಾಗದಿದ್ದರೆ ಈ ಮಾರ್ಕ್ಸವಾದ ಮತ್ತು ವಾದಿಗಳು ತಿಪ್ಪೆ ಸೇರುವ ಕಾಲ ದೂರವಿಲ್ಲ.
ಕನಸು ಕಾಣುವುದಕ್ಕಿಂತ ನಿಜಜೀವನದ ಸತ್ಯ ನೋಡಬೇಕು ಅಂತೀರಿ. ಒಪ್ಪೋಣ. ಆದರೆ ನಿಮ್ಮ ಈ ಶೆಟ್ಕರ ಮತ್ತು ಸ್ನೇಹಿತರು ಅಲ್ಲೇ ೧೨ ನೆಯ ಶತಮಾನದಲ್ಲಿ, ಅದಕ್ಕೂ ಮುಂಚಿನ ಇತಿಹಾಸದಲ್ಲಿ ಬಿದ್ದು ಒದ್ದಾಡ್ತಾ ಇದಾರೆ. ನಮಗಿಂತ ಹೆಚ್ಚು ವಾಸ್ತವವಲ್ಲದ ತಿರುಕನ ಕನಸುಗಳು ಇವರಿಗೆ ಬಿಳುತ್ತವೆ.ಇದಕ್ಕೇನಂತೀರಿ? ಯಂಡಮೂರಿ ಓದಿ, ನಾನು ಏನಾದ್ರೂ ಮಾಡಬೇಕು, ಬೆಳೆಯಬೇಕು ಅಂತ ಕನಸು ಕಾಣುವುದು, ಅದನ್ನು ನಿಜ ಮಾಡಿಕೊಳ್ಳಲು ತಯಾರಾಗುವುದು ಒಳ್ಳೆಯದೊ ಅಥವಾ ಅದೇ ಕರುಳ ಕೊಯ್ಯುವ ಕಥಾನಕವನ್ನು ಹೇಳಿಕೊಂಡು, ಇಲ್ಲದ ಭಯವನ್ನು ಹುಟ್ಟುಹಾಕಿ ಹೊಟ್ಟೆ ಹೊರೆದುಕೊಳ್ಳುವುದು ಸರಿಯಾದದ್ದೊ? ನೀವೇ ಹೇಳಿ.
ನರೇಂದ್ರ ಮೋದಿ ಬಂದರೆ ಜನರ ಸ್ವಾತಂತ್ರ್ಯ ನಾಶವಾಗುದಂತೆ, ಬಲ ಪ್ರಯೋಗಳಿಂದ ಪ್ರತಿಭಟನೆ ಹತ್ತಿಕ್ಕುತ್ತಾರಂತೆ, ವಿರೋಧಗಳಿಗೆ ಅವಕಾಶ ಇರುವುದೇ ಇಲ್ಲವಂತೆ ಹಾಗೆ-ಹೀಗೆ ಎಂದು ಈ ಎಡ ಜನ ಮತ್ತು ಅವರ ಗ್ಯಾಂಗ್ ಭೂಸಿ ಬಿಡುತ್ತ ತಿರುಗಾಡುತ್ತಿದೆಯಲ್ಲ, ಇವರಿಗೆ ಕಮ್ಯುನಿಷ್ಟ್ ರಾಷ್ಟ್ರಗಳಲ್ಲಿರುವ ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ, ಅಲ್ಲಿ ವಿರೋಧವನ್ನು ಹತ್ತಿಕ್ಕುತ್ತಿರುವದರ ಬಗ್ಗೆ ಕಾಣಲಾಗದಂತೆ ಕಣ್ಣಿಗೆ ಪೊರೆ ಬಂದಿದೆಯೆ? ಕೇರಳ ಮತ್ತು ಪ.ಬಂಗಾಳದಲ್ಲಿ ಈ ಪಕ್ಷದ ಕಾರ್ಯಕರ್ತರು ಮಾಡಿದ ಘನ ಕಾರ್ಯಗಳ ಬಗ್ಗೆ ಮಾಹಿತಿ ಕೊರತೆ ಇವರಿಗೆ ಇದೆಯೆ? ನಾವೊಂದು ವರ್ತಮಾನದ ಉದಾಹರಣೆ ತೆಗೆದುಕೊಳ್ಳೋಣ. ನಿಮಗೆ ಪ್ರಿಯವೆನಿಸಬಹುದು. ಉ.ಕೋರಿಯಾದಲ್ಲಿ (A family dynasty heads a secretive, communist regime which tolerates no dissent) ಆಗುತ್ತಿರುವುದನ್ನು ಗಮನಿಸಿದರೆ, ನಮಗೆ ಇವರ ಪುಸ್ತಕ ಸಮಾನತೆ, ವಾಸ್ತವ ಕರಾಳತೆ ಅರಿವಾಗುತ್ತದೆ.
ಸೋಮಶೇಖರ್ ಅವರೆ ಮಾರ್ಕ್ಸ್ ಕಮ್ಯುನಿಸಂ ಸಮಾಜವಾದ ಇವೆಲ್ಲವೂ ಚೆಂದವೆ, ಆದರೆ ಅದು ೨೦ ವರ್ಷದವರೆಗೆ ಮಾತ್ರ. ಏಕೆಂದರೆ ಆ ವಯಸ್ಸಿನಲ್ಲಿ ಎಲ್ಲವನ್ನು ಧಿಕ್ಕರಿಸುವ ಗುಣವಿರುತ್ತದೆ. ಆ ವಯಸ್ಸಿನಲ್ಲಿ ಎಲ್ಲರೂ ಕಮ್ಯುನಿಷ್ಠರುಗಳೆ ಆದರೆ ಬುದ್ದಿ ಬೆಳೆದಂತೆಲ್ಲಾ ಜೀವನದ ಅರ್ಥವಾದಂತೆಲ್ಲಾ ಈ ಹಳಸಲು ವಾದಗಳಿಂದ ದೂರ ಸರಿಯುತ್ತಾರೆ. ಬುದ್ದಿ ಬೆಳೆಯದವರು ಹಾಗೆಯೇ ಉಳಿದು ಲದ್ದಿಜೀವಿಗಳಾಗಿ ಪರಾವಲಂಬಿಗಳಾಗಿ ಬೇರೆಯವರ ಮಕ್ಕಳ ಕೈ ಗೆ ಬಂದೂಕು ಕಒಟ್ಟು ಕಾಡಿಗೆ ಕೊಟ್ಟು ಇವರುಗಳು ವಿಶ್ವವಿದ್ಯಾಲಯದಲ್ಲಿ ಕೂತು ತಮ್ಮ ಮಕ್ಕಳಿಗೆ ವಿದೇಶ ವಿದ್ಯಾಭ್ಯಾಸ ಮಾಡಿಸುತ್ತಾರೆ
ಶ್ರೀಕಾಂತ್, ಮಾರ್ಕ್ಸ್ವಾದಿಗಳು, ಕಮ್ಯೂನಿಸ್ಟರೆಲ್ಲಾ ನಕ್ಸಲರು ಎಂಬುದು ನಿಮ್ಮ ಮುಗ್ದತೆ ಹಾಗೂ ದಾರಿತಪ್ಪಿಸುವಿಕೆಯ ಮಟ್ಟವನ್ನು ತೋರಿಸುತ್ತದೆಯಷ್ಟೇ. ಜೀವನದ ಸತ್ಯಗಳು ಅರ್ಥವಾದ ದಿನವೇ ಮಾರ್ಕ್ಸ್ ವಾದದ ನಿಜ ತಿರುಳು ಅರ್ಥವಾಗುವುದು. ಅದು ಅರ್ಥವಾಗದವರು ಯಂಡಮೂರಿಯ ಸುಂದರಿ ನಾಯಕಿಯ ಕನಸು ಕಾಣುತ್ತಾ ಸುಮ್ಮನೆ ಕೂರುತ್ತಾರೆ ಅಷ್ಟೆ. ಅಂಥವರು ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಓದಿದರೂ, ಸರ್ಕಾರಿ ಕಾಲೇಜುಗಳಲ್ಲಿ ಓದಿದರೂ ದೇಶಕ್ಕೆ ಏನೂ ವ್ಯತ್ಯಾಸವಾಗುವುದಿಲ್ಲ. ವ್ಯತ್ಯಾಸ ತರಬಲ್ಲವರು ಜೀವನದ ನಿಜ ತಿರುಳನ್ನು ಅರ್ಥಮಾಡಿಕೊಂಡವರು. ದುರ್ದೈವವೆಂದರೆ ಅಂಥವರನ್ನು ಮುಖ್ಯವಾಹಿನಿಯಿಂದ ದೂರವಿಟ್ಟು ಲದ್ದಿಜೀವಿಗಳು, ಕೆಂಪುಕಳ್ಳರು ಎಂದೆಲ್ಲಾ ಜರಿಯಲಾಗುತ್ತದೆ.
ಮಾರ್ಕ್ಸ್ ವಾದ, ಸಮಾನತೆ, ವರ್ಗಭೇದ ಇತ್ಯಾದಿ ಬಡಬಡಿಸುವ ಸ್ನೇಹಿತರೆ ನೀವು ನಿಮ್ಮ ವೇತನದಲ್ಲಿನ ಎಷ್ಟು ಪಾಲು ಹಣವನ್ನು ಬಡವರಿಗೆ ಮೀಸಲಿರಿಸಿದ್ದೀರಿ. ಬಡವರಿಗಾಗಿ ನಿಮ್ಮ ಐಷಾರಾಮಿ ಜೀವನವನ್ನು ಎಷ್ತು ತ್ಯಾಗ ಮಾಡಿದ್ದೀರಿ. ಹಳ್ಳಿಗಳಲ್ಲ್ಲಿ ಸಾಲದ ಶೂಲದಲ್ಲಿ ನರಳಾಡುತ್ತಿರುವ ನಿಮ್ಮ ಚಿಕ್ಕಪ್ಪ ದೊಡ್ಡಪ್ಪಂದಿರಿಗೆ ನೀವೆಷ್ಟು ಸಹಾಯ ಮಾಡಿದ್ದೀರಿ?? ನಿಮ್ಮ ಆಫೀಸಿನ ಶ್ರಮಜೀವಿ ಪಿಯೂನ್ಗೆ ನಿಮ್ಮಷ್ಟೆ ವೇತನ ಕೊಡಿಸಲು ನೀವು ಪ್ರಯತ್ನಿಸಿದ್ದೀರಾ?? ಹೋಗಲಿ ಆ ಶ್ರಮಿಕನಿಗೆ ಎಲ್ಲರೂ ಎಕವಚನದಲ್ಲಿ ಮಾತನಾಡಿದಾಗ ನೀವೇನಾದರೂ ಪ್ರತಿಭಟಿಸಿದ್ದೀರಾ? ಅದೂ ಹೊಗಲಿ, ನಿಮ್ಮ ಆಫೀಸಿನ ಕಾರ್ಯಕ್ರಮಗಳಲ್ಲಿ ಈ ಶ್ರಮಜೀವಿಗಳ ಕಾರ್ಯಕ್ಕೆ ವಂದನಾರ್ಪಣೆ ಹ್ಜೇಳಿದ್ದೀರಾ?? ಈ ಶ್ರಮಜೀವಿಗಳನ್ನು ನಿಮ್ಮ ಹುಟ್ಟು ಹಬ್ಬದ ಪಾರ್ಟಿಗಳಿಗೆ ಆಹ್ವಾನಿಸಿದ್ದೀರಾ?? ಅವರ ಜೊತೆಗೆ ಊಟ ಮಾಡಿದ್ದೀರಾ? ನಿಮ್ಮ ಮನೆಯ ಶೌಚಾಲಯ ಸ್ವಚ್ಛಗೊಳಿಸಿದವನಿಗೆ ನೀವೂ ಒಂದು ದಿನ ಪಡಿಯುವ ವೇತನ ಅವನಿಗೂ ನೀಡಿದ್ದೀರಾ? ನಾನು ವ್ಹೈಟ್ಕಾಲರು ನನಗೂ ಶ್ರಮಜೀವಿಗೆ ಕೊಡುವಷ್ಟೇ ವೇತನ ಕೊಡಿ ಎಂದು ನೀವು ಹೇಳಿ ನಿಮ್ಮ ಹೆಚ್ಚುವರಿ ವೇತನವನ್ನು ಶ್ರಮಜೀವಿಗೆ ನೀಡಿದ್ದೀರಾ?? ಇವಾವ ಕೆಲಸ ಮಾಡದ ನೀವು ಮಾರ್ಕ್ಸನ ಬಗ್ಗೆ ಪುಸ್ತಕ ಓದಿದರೆ ನಿಮ್ಮ ಕರ್ತವ್ಯ ಮುಗಿಯಿತೆ?? ನಿಮ್ಮ ಪ್ರ ಗತಿ ಪರರು ತಮಗೆ ಸಂದ ಪ್ರಶಸ್ತಿ ಮೊತ್ತವನ್ನು ಎಂದಾದರೂ ಶ್ರಮಿಕರ ಕಲ್ಯಾಣಕ್ಕೆ ಖರ್ಚು ಮಾಡಿದ ಉದಾಹರಣೆ ಇದೆಯೇ?? ತಮ್ಮ ಒಂದಾದರೂ ಪುಸ್ತಕವನ್ನು ಶ್ರಮಿಕನೋರ್ವನಿಗೆ ಅರ್ಪಿಸಿದ್ದಾರೆಯೆ?? ಪುಸ್ತ್ಕಕದ ಬದನೆಕಾಯಿ ಬೇಡ. ಕೃತಿಯಲ್ಲಿ ಮಾರ್ಕ್ಸ್ ಇರಲಿ
ಮಾರ್ಕ್ಸ್ ಕೃತಿಯಲ್ಲಿ ಓದಲಿಕ್ಕೆ ಮಾತ್ರ ಚಂದವಾಗಿದೆ 😛
“ನೋಡು,
ಮರುಭೂಮಿಯ ಮುಳ್ಳುಕಂಟಿ ಚಿಗುರಿ ಹೂವರಳಿಸುತ್ತದೆ
ಮುಸುಕಿದ ಮಂಜು ಹನಿಗೆ ಉಸುಕೂ ಸಂಭ್ರಮಪಡುತ್ತದೆ
ದೊಂಬಿಯ ಮರುದಿನ ನಿರ್ಜನ ಶಹರದ
ರಸ್ತೆಗಳ ಇಕ್ಕೆಲದಲೂ ಮರ ಹೂವರಳಿಸಿ ನಗುತ್ತದೆ
ಅರಳೆ ಸಿಗದ ಕಾಲಕ್ಕೆ ಹಕ್ಕಿ, ನಾರು ಹೆಕ್ಕಿ ಗೂಡು ಕಟ್ಟುತ್ತದೆ
ಯಾವ ತಾಲಿಬಾನಿಗೂ ಅವು ಅಂಜುವುದಿಲ್ಲ ಗೆಳತೀ,
ನಮೋಸುರನ ಬೆದರಿಕೆಗೆ ಗಿರ್‌ನ ಕೇಸರಗಳು ದಿಗಿಲುಗೊಳ್ಳುವುದಿಲ್ಲ”
http://ladaiprakashanabasu.blogspot.in/2014/01/blog-post_2286.html
ಶೆಟ್ಕರ್ ರವರು ಮತ್ತು ಸೋಮಶೇಖರ್ ರವರು ಜೀವನದಲ್ಲಿ ಎಷ್ಟು ಮುಂದುವರಿದಿದ್ದಾರೆ ಎಂಬುದನ್ನು ಎಲ್ಲರಿಗೂ ತಿಳಿಸಿಕೊಡಬೇಕಾಗಿದೆ. ನಮ್ಮ ಜೀವನದಲ್ಲಿ ಅಜ್ಞಾನವನ್ನು ಖಂಡಿತ ದೂರಮಾಡಿಕೊಳ್ಳಬೇಕು.
ಶ್ರೀರಂಗ ರವರೆ,
ಮಾರ್ಕ್ಸ್ ವಾದ ಎಂದು ಶೆಟ್ಕರ್ ರು ಬಡಬಡಿಸುತ್ತಿರುವದು ಸುಮ್ಮನೆ. ಅವರಿಗೆ ಯಾವುದರ ಬಗ್ಗೆಯೂ ತಾರ್ಕಿಕವಾಗಿ ಚರ್ಚಿಸುವ ಬುದ್ಧಿಮತ್ತೆ ಇಲ್ಲ. ಈಗ ಮಾರ್ಕ್ಸ್ ವಾದವನ್ನೆ ಚರ್ಚಿಸೋಣ ಎಂದರೂ ಅವರು ಬರಲಾರರು. ಎನೊ ಒಂದು ಸಬೂಬು ಹೇಳಿ ಓಡಿ ಹೋಗುತ್ತಾರೆ ಎನ್ನುವ ನಂಬಿಕೆ ನನಗಿದೆ
.
ಮಾರ್ಕ್ಸ್ ವಾದ, ಸಮಾನತೆ, ವರ್ಗಭೇದ ಇತ್ಯಾದಿ ಬಡಬಡಿಸುವ ಸ್ನೇಹಿತರೆ ನೀವು ನಿಮ್ಮ ವೇತನದಲ್ಲಿನ ಎಷ್ಟು ಪಾಲು ಹಣವನ್ನು ಬಡವರಿಗೆ ಮೀಸಲಿರಿಸಿದ್ದೀರಿ. ಬಡವರಿಗಾಗಿ ನಿಮ್ಮ ಐಷಾರಾಮಿ ಜೀವನವನ್ನು ಎಷ್ತು ತ್ಯಾಗ ಮಾಡಿದ್ದೀರಿ. ಹಳ್ಳಿಗಳಲ್ಲ್ಲಿ ಸಾಲದ ಶೂಲದಲ್ಲಿ ನರಳಾಡುತ್ತಿರುವ ನಿಮ್ಮ ಚಿಕ್ಕಪ್ಪ ದೊಡ್ಡಪ್ಪಂದಿರಿಗೆ ನೀವೆಷ್ಟು ಸಹಾಯ ಮಾಡಿದ್ದೀರಿ?? ನಿಮ್ಮ ಆಫೀಸಿನ ಶ್ರಮಜೀವಿ ಪಿಯೂನ್ಗೆ ನಿಮ್ಮಷ್ಟೆ ವೇತನ ಕೊಡಿಸಲು ನೀವು ಪ್ರಯತ್ನಿಸಿದ್ದೀರಾ?? ಹೋಗಲಿ ಆ ಶ್ರಮಿಕನಿಗೆ ಎಲ್ಲರೂ ಎಕವಚನದಲ್ಲಿ ಮಾತನಾಡಿದಾಗ ನೀವೇನಾದರೂ ಪ್ರತಿಭಟಿಸಿದ್ದೀರಾ? ಅದೂ ಹೊಗಲಿ, ನಿಮ್ಮ ಆಫೀಸಿನ ಕಾರ್ಯಕ್ರಮಗಳಲ್ಲಿ ಈ ಶ್ರಮಜೀವಿಗಳ ಕಾರ್ಯಕ್ಕೆ ವಂದನಾರ್ಪಣೆ ಹ್ಜೇಳಿದ್ದೀರಾ?? ಈ ಶ್ರಮಜೀವಿಗಳನ್ನು ನಿಮ್ಮ ಹುಟ್ಟು ಹಬ್ಬದ ಪಾರ್ಟಿಗಳಿಗೆ ಆಹ್ವಾನಿಸಿದ್ದೀರಾ?? ಅವರ ಜೊತೆಗೆ ಊಟ ಮಾಡಿದ್ದೀರಾ? ನಿಮ್ಮ ಮನೆಯ ಶೌಚಾಲಯ ಸ್ವಚ್ಛಗೊಳಿಸಿದವನಿಗೆ ನೀವೂ ಒಂದು ದಿನ ಪಡಿಯುವ ವೇತನ ಅವನಿಗೂ ನೀಡಿದ್ದೀರಾ? ನಾನು ವ್ಹೈಟ್ಕಾಲರು ನನಗೂ ಶ್ರಮಜೀವಿಗೆ ಕೊಡುವಷ್ಟೇ ವೇತನ ಕೊಡಿ ಎಂದು ನೀವು ಹೇಳಿ ನಿಮ್ಮ ಹೆಚ್ಚುವರಿ ವೇತನವನ್ನು ಶ್ರಮಜೀವಿಗೆ ನೀಡಿದ್ದೀರಾ?? ಇವಾವ ಕೆಲಸ ಮಾಡದ ನೀವು ಮಾರ್ಕ್ಸನ ಬಗ್ಗೆ ಪುಸ್ತಕ ಓದಿದರೆ ನಿಮ್ಮ ಕರ್ತವ್ಯ ಮುಗಿಯಿತೆ?? ನಿಮ್ಮ ಪ್ರ ಗತಿ ಪರರು ತಮಗೆ ಸಂದ ಪ್ರಶಸ್ತಿ ಮೊತ್ತವನ್ನು ಎಂದಾದರೂ ಶ್ರಮಿಕರ ಕಲ್ಯಾಣಕ್ಕೆ ಖರ್ಚು ಮಾಡಿದ ಉದಾಹರಣೆ ಇದೆಯೇ?? ತಮ್ಮ ಒಂದಾದರೂ ಪುಸ್ತಕವನ್ನು ಶ್ರಮಿಕನೋರ್ವನಿಗೆ ಅರ್ಪಿಸಿದ್ದಾರೆಯೆ?? ಪುಸ್ತ್ಕಕದ ಬದನೆಕಾಯಿ ಬೇಡ. ಕೃತಿಯಲ್ಲಿ ಮಾರ್ಕ್ಸ್ ಇರಲಿ.
ಸೋಮಶೇಖರ್ ಅವರಿಗೆ ——
ನಾನು ಕನ್ನಡ ಭಾಷೆಯನ್ನು ಓದಲು ಮತ್ತು ಬರೆಯಲು ಕಲಿಯ ಬೇಕಾದರೆ ಅ,ಆ,ಇ,ಈ …… ಕಮಲ,ಬಸವ ಅನ್ನು ಮೊದಲು ಕಲಿತವನು. ಎನ್. ನರಸಿಂಹಯ್ಯ …………… ಯಡಮೂರಿ ಅವರ ತನಕದ ಉದಾಹರಣೆಗಳನ್ನು ಕೊಟ್ಟಿದ್ದು ಹದಿನಾರು,ಹದಿನೇಳನೇ ವಯಸ್ಸಿನಲ್ಲಿ ಇತರೆ ಪುಸ್ತಕಗಳನ್ನು ಓದುವ ಬಗ್ಗೆ ಆಸಕ್ತಿ ಮೂಡಿಸಿದವು ಎಂಬ ಕಾರಣಕ್ಕೆ. ಸುಮಾರು ನಲವತ್ತು ವರ್ಷಗಳ ಹಿಂದೆ ಟಿ ವಿ ಯಾಗಲೀ,ಕಂಪ್ಯೂಟರ್ ಆಗಲೀ ಇಲ್ಲದೆ ಇರುವಾಗ ಆ ವಯಸ್ಸಿನಲ್ಲಿ ಗ್ರಾಮಾಂತರ ಪ್ರದೇಶದ ಪುಟ್ಟ ಪಟ್ಟಣವೊಂದರಲ್ಲಿದ್ದ ನನ್ನಂತಹವರಿಗೆ ಸಾಮಾನ್ಯವಾಗಿ ಇದ್ದ ಹವ್ಯಾಸವನ್ನು ಹೇಳಿದ್ದು. ಆ ವಯಸ್ಸಿಗೇ ಮಾರ್ಕ್ಸ್ ವಾದವನ್ನೂ ಓದುವಂತಹ ಬುದ್ಧಿವಂತರಿರಬಹುದು. ನಾನು ಅಷ್ಟು ಭಾಗ್ಯಶಾಲಿ ಅಲ್ಲ. ಜತೆಗೆ ನಾನು ಈಗಲೂ ಹಿಂದಿನ ಅದೇ moodನಲ್ಲಿ ಇಲ್ಲ ಎಂದು ನನ್ನ ಲೇಖನದಲ್ಲೇ ಹೇಳಿದ್ದೇನೆ.
ಯಂಡಮೂರಿ ಎಂದು ಓದಿಕೊಳ್ಳಬೇಕಾಗಿ ವಿನಂತಿ.
ಸೋಮಶೇಖರ್ ಅವರೆ ಮಾರ್ಕ್ಸ್ವಾದ ಮಾತನಾಡುತ್ತಿದ್ದರೆ ಸುಂದರಿಯಾದ ನಾಯಕಿ ಸಿಗುತ್ತಾಳೆಂದು ನಿಮ್ಮ ಮಾತಿನ ಅರ್ಥವಿದ್ದಂತಿದೆ. ಏಕೆಂದರೆ ಭಾರತದ ಮಾರ್ಕ್ಸ್ವಾದಿಗಳೆಲ್ಲಾ ಅದನ್ನೇ ಮಾಡುತ್ತಿರುವುದು.ಒಂದಷ್ಟು ಹಣ ಮದಿರೆ ನಿದಿರೆ ನೀರೆ ಇವುಗಳಲ್ಲೆ ಅವರ ಜೀವನ ಕಳೆದು ಹೋಗುತ್ತಿದೆ. ಮಾರ್ಕ್ಸ್ ನನ್ನು ಮರೆತುಬಿಟ್ಟಿದ್ದಾರೆ. ಅಂದ ಹಾಗೆ ಅಭಿನವ ಚನ್ನಬಸವ ಅವರು ಇಂದು ತಮ್ಮ ಮಾರ್ಕ್ಸ್ವಾದಿಗೆ ಬಸವ ಪ್ರಶಸ್ತಿ ಕೊಡಿಸಿದ್ದಾರೆ. ಶೆಟ್ಕರ್ ಅವರು ಸಂಭ್ರಮಾಚರಣೆಯಲ್ಲಿ ತೊಡಗಿರಬೇಕು