ನನ್ನ ಅಜ್ಜಿ
– ಚೇತನ್ ಕೆ.ವಿ
ಬಹಳ ವರ್ಷಗಳ ನಂತರ ನಾನು ನನ್ನ ಅಜ್ಜಿ ಊರು, ಮಂಜುಗುಡ್ಡೆಗೆ ಕಾಲಿರಿಸಿದ್ದೆ. ಒಮ್ಮೆ ನನ್ನ ಬಾಲ್ಯದ ದಿನಗಳೆಲ್ಲ ಕಪ್ಪುಬಿಳಪು ಚಿತ್ರದಂತೆ ತಟ್ಟನೆ ಕಣ್ಣೆದುರು ಬಂದು ಹೋಯಿತು. ಗಲ್ಲಿ ಗಲ್ಲಿಗೆ ಕಾಲಿರಿಸಿದಂತೆ ಮತ್ತೆ ಹಳೆ ನೆನಪಿನ ಪುಟಗಳು ತಿರುವುತಿತ್ತು. ಸುತ್ತ ಇಬ್ಬನಿ ಮುಸುಕಿದ ಪ್ರದೇಶ. ಬರೇ ಏರು-ಪೇರುಗಳ ಜಾಗಗಳು ಹೆಸರಿಗೆ ತಕ್ಕಂತೆ – ಮಂಜುಗುಡ್ಡೆ. ನಾನು ಈ ಊರು ಬಿಟ್ಟು ೨೫ ವರ್ಷಗಳ ಮೇಲಾಯಿತು. ಹೈಸ್ಕೂಲ್ ಮುಗಿಸಿ ತಂದೆ-ತಾಯಿ ಜೊತೆ ಊರು ಬಿಟ್ಟವನು ಮತ್ತೆ ಈ ಕಡೆ ಬಂದವನೆ ಅಲ್ಲ.ಆದರೂ ಅಲ್ಪ ಸ್ವಲ್ಪ ಬದಲಾವಣೆ ಬಿಟ್ಟರೆ ಹೇಳಿಕೊಳ್ಳುವಂತ change ಎನೂ ತೋರಲಿಲ್ಲ,ಅದೆ ನಾನಿರುವ ಬೆಂಗಳೂರು ವರ್ಷ ವರ್ಷಕ್ಕೂ ಎಂತ ಬದಲಾವಣೆ,೧ ವರ್ಷ ಯಾವುದಾದರು ಜಾಗಕ್ಕೆ ಹೋಗದಿದ್ದರೆ ಮತ್ತೆ ಆ ಜಾಗ ಗುರುತು ಸಿಗೋದು ಕಷ್ಟವೆ ಸರಿ ಎಂದುಕೊಂಡು ಮೂಲೆಯ ಒಂದು ಪೆಟ್ಟಿಗೆಯಂತಹ ಅಂಗಡಿ ಹೊಕ್ಕೆ.
ನನ್ನ ಅಜ್ಜ ವೆಂಕಟರಾಜಪ್ಪನ ಹೆಸರು ಹೇಳಿ ಅವರ ಮನೆಯ ವಿಳಾಸ ಕೇಳಿ,ಅವನು ತೋರಿದ ದಾರಿ ಹಿಡಿದು ಹೊರಟೆ.
ಸರಿ ಸುಮಾರು ೨೫ ವರ್ಷಗಳ ನಂತರ ತನ್ನ ಅಜ್ಜನ ಮನೆಗೆ ಹೋಗುತ್ತಿರುವ ಸಂಭ್ರಮ ಒಂದು ಕಡೆಯಾದರೆ, ಅಜ್ಜ ಅಜ್ಜಿಯ ಗುರುತೆ ಮರೆತ ಬೇಸರ ಮತ್ತೊಂದೆಡೆ. ಅಮ್ಮ ಅಜ್ಜಿಯೋಂದಿಗೆ ಜಗಳವಾಡಿ ಊರು ಬಿಡಲೇ ಬೇಕು ಎಂದು ಹಟ ಹಿಡಿದು ಪಟ್ಟಣ ಸೇರಿದ ಮೇಲೆ ಈ ಕಡೆ ಮತ್ತೆ ತಲೆ ಹಾಕಿ ಸಹ ಮಲಗಿರಲಿಲ್ಲ.ಒಬ್ಬನೆ ಮಗನನ್ನು ಕಳೆದುಕೊಂಡು ಎಷ್ಟು ದುಃಖ ಪಟ್ಟಿದ್ದರೂ ಅಜ್ಜಿ ಎಂದುಕೊಳ್ಳುತ್ತಾ ಹೆಜ್ಜೆ ಮುಂದಿಟ್ಟೆ. ದಾರಿಯಲ್ಲಿ ವಿಳಾಸ ಕೇಳುತ್ತಾ ಅಂತು ಮನೆ ಎದಿರು ಬಂದೆ. ಹಾಳು ಬಿದ್ದ ಮನೆಯಂತಿದ್ದ ಆ ಮನೆಯನ್ನೆ ಹಾಗೆ ದಿಟ್ಟಿಸಿ ನೋಡಿದೆ.ಹೆಂಚಿನ ಮನೆ,ಮುಂದಿನ ಅಂಗಳ ತುಂಬೆಲ್ಲ ಹುಲ್ಲು ಬೆಳೆದು ಎತ್ತರವಾಗಿತ್ತು.ಹಾಗೆ gateನಂತೆ ಅಡ್ಡಲಾಗಿಟ್ಟಿದ್ದ ಮರದ ದಿಣ್ಣೆ ಸರಿಸಿ ಒಳ ಹೊಕ್ಕೆ. ಮನೆಯ ಹೆಬ್ಬಾಗಿಲ ಬಳಿ ಬಂದು ನಿಲ್ಲುತಿದ್ದ ಹಾಗೆ ಹೆಬ್ಬಾಗಿಲಿಗೆ ಹತ್ತಿದ ಒರಳೆ ಕಣ್ಣಿಗೆ ರಾಚಿತು.ಒಂದು ಭಾಗ ಪೂರ ತಿಂದು ಈಗಲೊ ಅಗಲೊ ಅನ್ನುವಂತಿತ್ತು.
ಒಣಗಿದ ಗಂಟಲಲ್ಲೆ ಮೂರು ಬಾರಿ ಅಜ್ಜಿ ಎಂದು ಜೋರಾಗಿ ಕೂಗಿದ ನಂತರ ಒಳಗಿಂದ ಬೆನ್ನು ಬಾಗಿಹೋದ ಅಜ್ಜಿ ಹಣೆಯ ಮೇಲೆ ಕೈ ಇಟ್ಟು “ಯಾರೂ…..” ಎಂದು ನಡುಗುವ ಆ ದನಿಯಲ್ಲೆ ಕೇಳುತ್ತಾ ಬಂದಳು.ಅಜ್ಜಿಯನ್ನು ನೋಡಿದಕೂಡಲೆ ಇದು ನನ್ನ ಅಜ್ಜಿಯೆ ಹೌದ ಎಂದೆನ್ನಿಸಿತು. ನೇರವಾಗಿದ್ದ ಬೆನ್ನು ಮುರಿದು ಬಾಗಿ ಹೋಗಿತ್ತು, ಹಲ್ಲುಗಳೆಲ್ಲ ಉದುರಿ ಹೋಗಿ ಮತ್ತಷ್ಟು ಓದು 
ನಮ್ಮ ಬರಹ ಇನ್ನೊಬ್ಬರ ಬದುಕಿಗೆ ಬೆಂಕಿ ಇಡಬಾರದು
– ರಾಕೇಶ್ ಶೆಟ್ಟಿ
ಛೆ..! ದೆಹಲಿ,ಉತ್ತರ ಭಾರತದ ಕಡೆಯಿಂದ ಸಾಮಾನ್ಯವಾಗಿ ಸುದ್ದಿಯಾಗುತಿದ್ದ ಅತ್ಯಾಚಾರದಂತ ರಾಕ್ಷಸಿ ವರ್ತನೆ ಕರ್ನಾಟಕದಲ್ಲೂ ದಾಖಲಾಯಿತಲ್ಲ ಅಂತ ಮೊನ್ನೆಯ ‘ಮದ್ದೂರಿನ ರೈಲಿನಲ್ಲಿ ನಡೆದ ದುರ್ಘಟನೆ’ ಸುದ್ದಿಯಾದಾಗ ನಾಡಿನ ಬಹಳಷ್ಟು ಜನರಿಗೆ ಅನ್ನಿಸಿರಲಿಕ್ಕೂ ಸಾಕು.ಅದೃಷ್ಟವೆಂದರೆ ಆ ಹುಡುಗಿ ಪ್ರಾಣಾಪಾಯದಿಂದ ಪಾರಾಗಿದ್ದು.ಕಡೆಗೂ ರೈಲಿನಲ್ಲಿದ್ದ ಜನ ಧೈರ್ಯ ತಂದುಕೊಂಡು ಆ ರಾಕ್ಷಸರಿಗೆ ಬಡಿದು ಪೋಲಿಸರಿಗೆ ಒಪ್ಪಿಸಿದ್ದು ಮತ್ತೆ ಮರು ದಿನ ಹಿಂದೂ ಜಾಗರಣ ವೇದಿಕೆಯವರು ನೀಡಿದ ತಪರಾಕಿ ಎಲ್ಲವೂ ಸುದ್ದಿಯಾದವು.
ಆದರೆ, ಆ ನಂತರ ಆ ಹುಡುಗಿಯ ಪೂರ್ವಾಪರ ಮತ್ತು ಘಟನೆಯ ಬಗ್ಗೆ ಮಾಹಿತಿ ತಿಳಿದುಕೊಂಡು ಮಾಧ್ಯಮಗಳು ಬರೆಯಲು ಶುರು ಮಾಡಿದವಲ್ಲ.ಒಂದು ವರದಿಯಲ್ಲಿ ಹುಡುಗಿಯ ನಿಜ ಹೆಸರನ್ನೇ ಬರೆದುಬಿಟ್ಟಿದ್ದರು.ಕಡೆಗೆ ಓದುಗರು ಗಮನಕ್ಕೆ ತಂದ ಮೇಲೆ ತಿದ್ದಿದರು.ಮತ್ತದೇ ಆನ್-ಲೈನ್ ಪತ್ರಿಕೆಯಲ್ಲಿ ಹಾಗೂ ರಾಜ್ಯಮಟ್ಟದ ದಿನಪತ್ರಿಕೆ ಪ್ರಜಾವಾಣಿಯಲ್ಲಿ (ನಾಡಿನ ವಿಚಾರಾವಂತರ ನೆಚ್ಚಿನ ಪತ್ರಿಕೆಯಿದು..!) ಹುಡುಗಿಯ ಪೊಟೋವನ್ನೇ ಹಾಕಿಬಿಡುವುದಾ? ಕನಿಷ್ಠ ಮುಖವನ್ನು ಬ್ಲರ್ ಮಾಡಬೇಕು ಅನ್ನುವ ಕಾಮನ್ ಸೆನ್ಸ್ ಕಾಣೆಯಾಯಿತಾ?ಇದೆಂತ Irresponsibility ? ವರದಿಗಾರಿಕೆ ಅನ್ನುವುದು ಇಷ್ಟೊಂದು ಕಾಟಾಚಾರವಾಗಿದೆಯಾ? ಈ ಮಧ್ಯೆ ಆ ಹುಡುಗಿಯ ಕೆಲಸ ಮಾಡುವ ಜಾಗ ಎಲ್ಲವನ್ನೂ ಹೇಳಿಯೂಬಿಟ್ಟವು.ಮುಂದೆ ಆ ಹುಡುಗಿಯ ಭವಿಷ್ಯವೇನು? ಅವಳನ್ನು ನೋಡಿದಾಗೆಲ್ಲ ಜನ ಅವಳನ್ನ ಏನೆಂದು ಗುರುತಿಸುತ್ತಾರೆ?
ಈ ಹಿಂದೆ ಸುವರ್ಣವಾಹಿನಿ ಶಿವಮೊಗ್ಗದ ಹುಡುಗಿಯೊಬ್ಬಳ ವಿಷಯದಲ್ಲೂ ಹೀಗೆ ಬೇಜವಬ್ದಾರಿತನ ತೋರಿತ್ತು.ಈ ವಿಷಯದ ಬಗ್ಗೆ ದಯಾನಂದ ಟಿ.ಕೆ ಸರಿಯಾಗಿ ಜಾಡಿಸಿ ಆ ವಾಹಿನಿಯ ಸಂಪಾದಕರಿಗೆ ಬಹಿರಂಗ ಪತ್ರ ಬರೆದಿದ್ದರು.ಉತ್ತರ ಬಂದ ಬಗ್ಗೆ ಸುದ್ದಿಯಿಲ್ಲ.ಇದೆ ನ್ಯೂಸ್ ಚಾನೆಲ್ಗಳೇ ತಾನೇ ಬ್ಲೂ ಬಾಯ್ಸ್ ಗಳನ್ನ ತೋರಿಸುವ ನೆಪದಲ್ಲಿ ಬ್ಲೂ-ಫಿಲಂ ತೋರಿಸಿದ್ದು,ಮುನ್ನಿ-ಶೀಲ,ಮದನಾರಿ ಅಂತೆಲ್ಲ ತಲೆ ಕೆಟ್ಟ ಕಾರ್ಯಕ್ರಮ ಮಾಡುತ್ತಿರುವುದು.ಮಕ್ಕಳಿರೋ ಮನೆಯಲ್ಲಿ ನ್ಯೂಸ್ ಚಾನೆಲಗಳನ್ನು ನೋಡಬೇಡಿ ಮಕ್ಕಳು ಹಾದಿ ತಪ್ಪುತ್ತಾರೆ ಅನ್ನುವ ಕಾಲ ಬಂದು ಬಿಟ್ಟಿತಲ್ಲ…!
ಮೂರುವರೆ ರೂಪಾಯಿ ಓದುಗ ಆರೂವರೆ ರೂಪಾಯಿಯ ಜಾಹೀರಾತುದಾರ…
– ಡಾ.ಅಶೋಕ್ ಕೆ.ಆರ್
ಪ್ರಜಾವಾಣಿಯಿಂದ ನಿವೃತ್ತರಾದ ವ್ಯಂಗ್ಯಚಿತ್ರಕಾರ ಪಿ.ಮಹಮ್ಮದ್ ರವರು ವ್ಯಂಗ್ಯಚಿತ್ರಕಾರರ ಬವಣೆ, ಹಣ ನೀಡದ ಪತ್ರಿಕಾ ಸಂಸ್ಥೆಗಳಬಗ್ಗೆ ತಮ್ಮ ಅಭಿಪ್ರಾಯವನ್ನು ಫೇಸ್ ಬುಕ್ಕಿನಲ್ಲಿ ಪತ್ರದ ರೂಪದಲ್ಲಿ ಬರೆದುಕೊಂಡಿದ್ದರು.ಅದಕ್ಕೆ ಪ್ರತಿಕ್ರಿಯೆಯಾಗಿ ಪ್ರಜಾವಾಣಿಯ ದಿನೇಶ್ ಅಮೀನ್ ಮಟ್ಟುರವರು ಫೇಸ್ ಬುಕ್ಕಿನಲ್ಲಿ ಕೆಳಗಿನಂತೆ ಬರೆದಿದ್ದಾರೆ.

ಇನ್ನು “ ಕುಮಾರ ಪಟ್ಟಾಭಿಷೇಕ “ದ ದಿನಗಳು ಬಲು ದೂರವಿಲ್ಲ
-ಕೆ ಎಸ್ ರಾಘವೇಂದ್ರ ನಾವಡ
ಪ್ರಣಬ್ ಮುಖರ್ಜಿ ರಾಷ್ಟ್ರಪತಿಯಾಗಿ ಆಯ್ಕೆಯಾಗುವ ಎರಡು ದಿನಗಳ ಮು೦ಚೆಯೇ ಕಾ೦ಗ್ರೆಸ್ ನಲ್ಲಿ ಕುಮಾರ ಪಟ್ಟಾಭಿಷೇಕದ ದಿನಗಳು ಹತ್ತಿರವಾಗುವ ಲಕ್ಷಣಗಳ ಬಗ್ಗೆ ಹುಟ್ಟಿಕೊ೦ಡಿದ್ದ ವದ೦ತಿಗಳು ಪ್ರಣವ್ ದಾದಾ ರಾಷ್ಟ್ರಪತಿಯಾಗಿ ಆಯ್ಕೆಯಾಗುವುದರೊ೦ದಿಗೆ, ನಿಜವಾಗುವ ಸಾಧ್ಯತೆಗಳು “ಕಾಲದ ಕನ್ನಡಿಗೆ“ ಕ೦ಡು ಬ೦ದಿವೆ. ನೆಹರೂ ಕುಟು೦ಬದ ಮತ್ತೊ೦ದು ಕುಡಿ ಈಗಾಗಲೇ ಸಕ್ರಿಯ ರಾಜಕಾರಣದಲ್ಲಿದ್ದರೂ, ಅಧಿಕೃತ ಪಟ್ಟಾಭಿಷೇಕಕ್ಕಾಗಿ ಹೊಸ ಸೂಟು ಹೊಲಿಸಿ, ನೀಟಾಗಿ ತಲೆ ಬಾಚಿಕೊಳ್ಳೋಕೆ ರೆಡಿ ಆಗ್ತಿದ್ದಾರೆ! ಭಾರತ ರಾಜಕೀಯದಲ್ಲಿ ಅಧಿಕೃತ “ ಕುಮಾರ ಸ೦ಭವ “ ಜರುಗುವುದು ಖ೦ಡಿತವಾಗಿದೆ! ಸೋನಿಯಾರವರ ಬುಧ್ಧಿಶಕ್ತಿಯೇ ಅಷ್ಟೊ೦ದು ಚುರುಕು! ತನ್ನ ಮಗನ ಅದ್ದೂರಿ ರ೦ಗ ಪ್ರವೇಶಕ್ಕೆ ಎಷ್ಟೊ೦ದು ನೀಟಾಗಿ ದಾಳಗಳನ್ನು ಉರುಳಿಸಿದರಲ್ಲ! ಪಕ್ಷದ ಏಕಮೇವ ಪ್ರಭೃತಿಯಾಗಿದ್ದ ಪ್ರಣವ್ ಮುಖರ್ಜಿ ಇ೦ದು ರಾಷ್ಟ್ರಪತಿಯಾಗಿ, ಸಕ್ರಿಯ ರಾಜಕಾರಣದಿ೦ದಲೇ ದೂರವಾದರು! ಪ್ರಣಬ್ ದಾದಾ ಕಾ೦ಗ್ರೆಸ್ಸಿನ ಉನ್ನತ ನಾಯಕರಲ್ಲಿ ಮೊದಲನೇ ಪ೦ಕ್ತಿಯವರು. ಸಚಿವ ಸ೦ಪುಟದಲ್ಲಿ ಅವರಿಗಿದ್ದದ್ದು ೨ ನೇ ರ್ಯಾ೦ಕ್ !
ಲಿಮಿಟ್ಟೆ ಇಲ್ಲವ?
– ಮಧು ಚಂದ್ರ
ಒಂದು ಕಾಲ ಇತ್ತು , ದಿನ ಪತ್ರಿಕೆಯ ಮುಖ ಪುಟ ಕೇವಲ ಸಾಧಕರು ಮತ್ತು ರಾಜಕೀಯ ಬೆಳವಣಿಗೆಗಳ ಲೇಖನಗಳಿಂದ ರಾರಜಿಸುತಿತ್ತು. ದಿನ ಕಳೆದಂತೆ ನಮ್ಮ ಸುತ್ತಲಿನ ಪರಿಸರದಲ್ಲಿ ಬೆಳವಣಿಗೆಯು ಸಹ ವೇಗವನ್ನು ಪಡೆದುಕೊಂಡಿತು. ಕೇವಲ ಸಾಧಕರಿಗೆ ಮೀಸಲಾದ ಮುಖ ಪುಟದಲ್ಲಿ ಇಂದು ಬ್ರಷ್ಟ ಭ್ರಷ್ಟಚರ ಅಧಿಕಾರಿಗಳು, ಸಮಾಜ ಘಾತುಕರು , ಹಿಂಸೆ ಮತ್ತು ಆತ್ಮ ಹತ್ಯೆಗಳ ಸುದ್ದಿ ಅಲಂಕರಿಸಿವೆ. ಅದರಲ್ಲೋ ಬ್ರಷ್ಟ ಅಧಿಕಾರಿಗಳು ಬಗ್ಗೆ ಲೇಖನವಿಲ್ಲದೆ ಇದ್ದರೆ ದಿನಪತ್ರಿಕೆಯ ಮುಖಪುಟಕ್ಕೆ ಕಳೆಗುಂದುತ್ತದೆ .
ಜವಾನ , ಜಲಗಾರ, ಬಸ್ ನಿರ್ವಾಹಕನಿಂದು ಹಿಡಿದು ಅಧಿಕಾರಿಗಳು, ರಾಜಕಾರಣಿಗಳು ಬ್ರಷ್ಟಚಾರವು ಸೃಷ್ಟಿಸಿದ ಹಲವು ಮುಖಗಳು ನಮ್ಮ ರಾಜ್ಯದ ಶಾಸಕನೊಬ್ಬ ಲಂಚ ಪಡೆಯುವಾಗ ಸಿಕ್ಕಿ ಹಾಕಿಕೊಂಡದ್ದು. ನಂತರ ಅದರಿಂದ ಜಾಗೃತರಾದ ಇತರ ರಾಜಕಾರಣಿಗಳು ಲಂಚ ಪಡೆಯುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿ. ಮುಂದೆ ಲಂಚ ಪಡೆಯುವಾಗ ಬಳಸುವ ವಾಮ ಮಾರ್ಗಗಳನ್ನು ಹುಡುಕಲು ಆರಂಬಿಸಿದರು ಎನ್ನುವ ವಿಚಾರ ನಿಮಗೆಲ್ಲ ಗೊತ್ತೇ ಇದೆ.
ತಮ್ಮ ಮೇಲೆ ಎಷ್ಟೇ ಆಕ್ರಮಣವಾದರೂ ಏನೇ ಅಗಲಿ ದಿನಕೊಂದು ಭರ್ಜರಿ ಬೇಟೆಯಾಡುವುದನ್ನು ನಮ್ಮ ಲೋಕಾಯುಕ್ತ ಹುಲಿಗಳು ಎಲ್ಲಿಯೂ ನಿಲ್ಲದೆ ಮುಂದುವರೆಸಿದ್ದಾರೆ. ಒಂದು ಕಡೆ ಅಣ್ಣ ಹಜಾರೆ ಗರ್ಜಿಸುತ್ತಿದ್ದರೆ , ಇನ್ನೊದು ಕಡೆ ಅದೇ ಸರ್ಕಾರ ಅಣ್ಣ ಹಜಾರೆಯ ತಂಡದ ಮೇಲೆ ಇದ್ದ ಬದ್ದ ಆರೋಪಗಳನ್ನು ಮಾಡುತ ಅಣ್ಣನ ಹುಟ್ಟಡಗಿಸುವ ಶತಾಯಗತಾಯ ಪ್ರಯತ್ನದಲ್ಲಿ ತೊಡಗಿದೆ… .
ಒಮ್ಮೆ ಒಬ್ಬ ಬ್ರಷ್ಟ ಅಧಿಕಾರಿಯ ಮನೆಗೆ ಲೋಕಾಯುಕ್ತರು ದಾಳಿ ಮಾಡಿದರೆಂದರೆ ಮಿನಿಮಮ್ ಒಂದು ನಾಲ್ಕು ಸೈಟಿನ ದಾಖಲೆಗಳು , ಒಂದೆರಡು ಕಾರು, ಒಂದು ಹತ್ತಿಪ್ಪತು ಎಕರೆ ತೋಟದ ದಾಖಲೆಗಳು , ಒಂದು ಕೆಜಿ ಚಿನ್ನ ..ಇತ್ಯಾದಿ ಹೀಗೆ ದಾಳಿ ಸಂಧರ್ಭದಲ್ಲಿ ವಶಪಡಿಸಿಕೊಂಡ ವಸ್ತುಗಳ ಪಟ್ಟಿ ನೀಡುತ್ತಾರೆ… ಸದ್ಯಕ್ಕೆ ಇಷ್ಟು ಸಾಕು ..
ಹಿಂದುತ್ವವೇ ನಮ್ಮ ತತ್ವ ಎಂದು ಸಾರುತ್ತ ಮಾಡಿದ್ದೇನು?
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದಾಗ ಸಂಭ್ರಮ…ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಬಿಡಿಸಿಕೊಂಡು ಸಂತೋಷದಿಂದ ಬದುಕು ಸಾಗಿಸಬಹುದು ಎನ್ನುವ ಅಸೆಯ ಅಂಬಾರಿಯನ್ನು ಹೊಡೆದು ಉರುಳಿಸಿದರಲ್ಲಾ ಎನ್ನುವ ಭಾವನೆ ಮೂಡಿದರೆ ತಪ್ಪಲ್ಲ. ಕಾರಣ ರಾಜ್ಯದ ರಾಜಕೀಯದಲ್ಲಿನ ಪ್ರಸ್ತುತ ಬೆಳವಣಿಗೆ. 1950ರಲ್ಲಿ ಸಂವಿಧಾನ ರಚನೆಯಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದು ಶಾಸಕಾಂಗ,ನ್ಯಾಯಾಂಗ,ಕಾರ್ಯಾಂಗ ಹಾಗೂ ಮಾಧ್ಯಮರಂಗಗಳು ಸಮಾಜದ ಸ್ವಾಸ್ಥ್ಯ ಕಾಪಾಡುವ ಪ್ರಮುಖ ಪಾತ್ರಧಾರಿಗಳು ಎಂದು ಎದೆ ತಟ್ಟಿಕೊಂಡು ಹೇಳುತ್ತಿದ್ದ ಕಾಲ ಮರೆಯಾಗಿದೆ. ಆದರೆ ಯಾವುದೇ ರಂಗದಲ್ಲಿ ಲೋಪದೋಷಗಳಾದರೂ ಕಷ್ಟ ಅನುಭವಿಸುವವರು ಸಾಮಾನ್ಯ ಜನತೆ ಎನ್ನುವುದು ಸ್ಪಷ್ಟ.
ಯತ್ಖಲು ಖಲಮುಖಹುತವಹವಿನಿಹಿತಮಪಿ ಶುದ್ದಿಮೇವ ಪರಮೇತಿ
ತದನಲ ಶೌಚಮಿವಾಂಶುಕಮಿಹ ಲೋಕೇ ದುರ್ಲಭಂ ಪ್ರೇಮ||
ನೀಚರ ಬಾಯೆಂಬ ಬೆಂಕಿಯಲ್ಲಿ ಬಿದ್ದದ್ದೆಲ್ಲ ಶುದ್ದವಾಗುವುದೆಂಬ ಮಾತು ಸರ್ವಥಾ ಸರಿಯಲ್ಲ. ಏಕೆಂದರೆ ಬೆಂಕಿಯಲ್ಲಿ ಬಿದ್ದು ಶುದ್ದವಾಗಿ ಉಳಿದು ಬಂದ ಬಟ್ಟೆಯೆಷ್ಟು ದುರ್ಲಭವೋ ದುಷ್ಟರ ಬಾಯಿಗೆ ಸಿಲುಕಿ ಶುದ್ದವಾಗಿ ಹೊರಬಂದ ಸದ್ಗುಣಗಳು ಅಷ್ಟೇ ದುರ್ಲಭ.
ಮೊಬೈಲುಗಳಲ್ಲಿ ಕನ್ನಡದ ಬೆಂಬಲ ಬರಲಿ
-ರವಿ ಸಾವ್ಕರ್
HTC ಕಂಪನಿಯವರು ತಮಿಳು, ಹಿಂದಿ ,ಮರಾಠಿ ಭಾಷೆಗಳ ಬೆಂಬಲವನ್ನು ಕೊಡುಲು ಮುಂದಾಗಿರುವ ಸುದ್ದಿ ಬಂದಿದೆ. ಆದರೆ ಕನ್ನಡ ಭಾಷೆಯ ಬೆಂಬಲದ ಬಗೆಗೆ ಪ್ರಸ್ತಾಪವೂ ಮಾಡಿಲ್ಲ. ಕನ್ನಡದಲ್ಲಿ ಸಹ ಮೊಬೈಲುಗಳನ್ನು ಹೊರತನ್ನಿ ಎಂದು HTC ಕಂಪನಿಯವರಿಗೆ ತಿಳಿಸಬೇಕಾಗಿದೆ.
ಬಡವರ “ಕೊಳಚೆ” ಉಳಿದವರ “ಶುದ್ಧತೆ”
ಡಾ!! ಅಶೋಕ್ ಕೆ.ಆರ್
ಸನ್ಮಾನ್ಯ ಶ್ರೀ ಶ್ರೀ ಶ್ರೀ ಪೇಜಾವರ ಸ್ವಾಮಿಗಳಿಗೆ ಸೆಡ್ಡು ಹೊಡೆಯಲು ಮತ್ತೊಬ್ಬ ಹುಟ್ಟಿದ್ದಾನೆ. ಶ್ರೀಗಳು ಮಾಂಸಾಹಾರಿಗಳ ಪಕ್ಕ ಕುಳಿತು ಊಟ ಮಾಡಿದರೆ ಸಸ್ಯಾಹಾರಿ ಬ್ರಾಹ್ಮಣರೂ ಮಾಂಸಾಹಾರಿಗಳಾಗಿಬಿಡುತ್ತಾರೆಂದು ಗಾಬರಿಗೊಂಡಿದ್ದರು. ನಂತರ ತಮ್ಮ ಹೇಳಿಕೆಯ ಬಗ್ಗೆ ಸಮಜಾಯಿಷಿಗಳನ್ನೂ ಕೊಟ್ಟಿದ್ದರು. ಇಂದು ಕರ್ನಾಟಕ ಅನುದಾನರಹಿತ ಶಾಲೆಗಳ ಸಂಘ ಕುಸ್ಮಾದ ಅಧ್ಯಕ್ಷ ಜಿ.ಎಸ್. ಶರ್ಮರವರು ಶಿಕ್ಷಣ ಹಕ್ಕು ಕಾಯ್ದೆಯನ್ನು ವಿರೋಧಿಸುತ್ತ “ಸಮುದ್ರಕ್ಕೆ ಕೊಳಚೆ ನೀರು ಬಂದು ಸೇರಿದರೆ ಇಡೀ ಸಮುದ್ರವೇ ಕೊಳಚೆಯಾಗುತ್ತದೆ. ನೀರು ಯಾವಾಗಲೂ ಶುದ್ಧ ಆಗಿರಬೇಕು. ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಸಂಸ್ಕೃತಿ ವಿಭಿನ್ನ. ಬಡ ಮಕ್ಕಳನ್ನು ಶಾಲೆಗೆ ಸೇರಿಸಿಕೊಂಡ ಮರುದಿನವೇ ಉಳಿದ ಪೋಷಕರು ಬಂದು ಮಕ್ಕಳ ವರ್ಗಾವಣೆಗೆ ಪತ್ರ ಕೇಳುವ ಅಪಾಯವಿದೆ. ಆದ್ದರಿಂದ ಕುಸ್ಮಾ ಶಾಲೆಗಳಲ್ಲಿ ಆರ್.ಟಿ.ಐ ಕಾಯ್ದೆ ಅನುಷ್ಠಾನ ಸಾಧ್ಯವಿಲ್ಲ” ಎಂದು ‘ಅಮೋಘ ವಿವೇಕಭರಿತವಾದ’ ಹೇಳಿಕೆಯನ್ನಿತ್ತಿದ್ದಾರೆ. ಈ ಹಾಳು ವಿಚಾರವಂತರು, ಪ್ರಗತಿಪರರು ಈ ಹೇಳಿಕೆಗೂ ವಿರೋಧ ವ್ಯಕ್ತಪಡಿಸುತ್ತಾರಲ್ಲ! ಎಂಥ ಕೆಟ್ಟ ಮನಸ್ಥಿತಿಯವರಿರಬೇಕು ಇವರೆಲ್ಲ?!
ಕೇಸರೀಕರಣ: ದಾಯಾದಿಗಳ ಕಲಹ
– ಸಂತೋಷ್ ಕುಮಾರ್ ಪಿಕೆ
ಕರ್ನಾಟಕದ ಪ್ರಾಥಮಿಕ ಶಾಲಾಪಠ್ಯದಲ್ಲಿ ಹೊಸ ಪಠ್ಯಕ್ರಮವನ್ನು ಸೇರ್ಪಡೆ ಮಾಡುತ್ತಿರುವ ಕುರಿತು ಎರಡು ಬಣಗಳ ನಡುವೆ ವ್ಯಾಪಕವಾದ ಚರ್ಚೆಯಾಗುತ್ತಿರುವುದು ಒಳ್ಳೆಯ ಸಂಗತಿ. ಬಿ.ಜೆ.ಪಿಯವರು ಹೊಸಪಠ್ಯಕ್ರಮವನ್ನು ಕೇಸರೀಕರಣವೆಂದೂ ಆದರೆ ಅದು ವಿರೋಧಿ ಬಣಗಳು ತಿಳಿದುಕೊಂಡಿರುವ ರೀತಿಯದ್ದಲ್ಲ ಎಂತಲೂ ಹಾಗೂ ಅದರ ವಿರೋಧಿ ಗುಂಪು ಅದು ಕೇಸರೀಕರಣ ಪ್ರಕ್ರಿಯೆ ಎಂತಲೂ ನಿರಪಯುಕ್ತವಾದ ಚರ್ಚೆಯನ್ನು ಬಿರುಸಾಗಿ ನಡೆಸುತ್ತಿದ್ದಾರೆ. ಪ್ರಸ್ತುತ ಬರಹದಲ್ಲಿ ಆ ಚರ್ಚೆಯಲ್ಲಿ ಪಾಲ್ಗೊಂಡವರು ಬೇರೆ ಬೇರೆ ತುದಿಯಲ್ಲಿ ನಿಂತಂತೆ ಭಾಸವಾದರೂ ಇಬ್ಬರೂ ಒಂದೇ ಸೇತುವೆಯ ಮೇಲೆ ನಿಂತಿರುವುದನ್ನು ನಿದರ್ಶಿಸುವ ಪ್ರಯತ್ನವನ್ನು ಮಾಡಲಾಗುವುದು. ಮೊದಲನೆಯದಾಗಿ ಬಿ.ಜೆ.ಪಿ.ಬಣದ ವಾದದಿಂದ ಪ್ರಾರಂಭಿಸುತ್ತೇನೆ.
ಮಾನ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ವಿಶ್ವೇಶ್ವರ ಹೆಡಗೆ ಕಾಗೇರಿಯವರು ಇತ್ತೀಚೆಗೆ ತಮ್ಮ ಲೇಖನದಲ್ಲಿ ಕೇಸರೀಕರಣದ ಕುರಿತು ಎಲ್ಲರಿಗೂ ಗೊಂದಲವಿದ್ದು, ಅದರ ಕುರಿತು ಸ್ಪಷ್ಟತೆ ಅದನ್ನು ವಿರೋಧಿಸುವ ವಿರೋಧಿಗಳಿಗಿಲ್ಲ ಎಂಬ ಮಾತನ್ನು ಹೇಳಿದ್ದಾರೆ. ನನ್ನ ಪ್ರಕಾರ, ಕೇಸರೀಕರಣದ ಕುರಿತು ಅದರ ವಿರೋಧಿಗಳಿಗಿರಲಿ, ಅದರ ಸ್ವಯಂ ಪ್ರತಿಪಾದಕರಿಗೇ ಸರಿಯಾದ ಜ್ಞಾನ ಇರುವುದು ಅನುಮಾನ. ಏಕೆಂದರೆ ಇದುವೇ ಕೇಸರೀಕರಣ ಎಂದು ಸ್ಪಷ್ಟವಾಗಿ ಹೇಳುವ ಧೈರ್ಯ ಯಾರಿಗೂ ಇದ್ದಂತಿಲ್ಲ, ಕೇವಲ ಭಗವಾಧ್ವಜ ಹಿಡಿದುಕೊಂಡು ಮಾಡುವ ಕೆಲಸಗಳು ಮಾತ್ರ ಕೇಸರೀಕರಣವಾಗುತ್ತದೆಯೇ? ಖಂಡಿತ ಇಲ್ಲ, ಏಕೆಂದರೆ ಕೇಸರೀಕರಣ ಎಂಬುದು ಒಂದು ಐಡಿಯಾಲಜಿ, ನಿದರ್ಶಿ ಷ್ಟವಾಗಿ ಇಂತಿಂತಹ ಕೆಲಸಗಳನ್ನು ಮಾಡಬೇಕು ಎಂದು ನಿರ್ದೇಶನ ನೀಡುವ ವಿಚಾರಗಳ ಗುಚ್ಚ ಅದಾಗಿದೆ. ಹಾಗೂ ಕೇಸರೀಕರಣದ ಕುರಿತು ಯಾವುದೇ ಸಿದ್ಧಾಂತ (ಥಿಯರಿ)ದ ಜ್ಞಾನಶಿಸ್ತು (ಜ್ಞಾನಶಿಸ್ತಿನ ಅಗತ್ಯ ಇಲ್ಲ ಎಂದು ಬಿ.ಜೆಪಿ ಯವರು ಭಾವಿಸಿದ್ದರೂ ಕೂಡ) ಇಲ್ಲದಿರುವುದರಿಂದ ಜನರು ತಮ್ಮ ಮನಸೋಇಚ್ಚೆ ಅರ್ಥಮಾಡಿಕೊಳ್ಳಲು ಸಾಧ್ಯವಿದೆ.
ನಿಜವಾಗಿ ಇದು ಯಡಿಯೂರಪ್ಪನವರ ಸೋಲು!!
ರಾಘವೇಂದ್ರ ನಾವಡ
ಅ೦ತೂ ಇ೦ತು ಗೌಡರು ಶೆಟ್ಟರಿಗೆ ದಾರಿ ಬಿಟ್ಟಿದ್ದಾರೆ! ಒ೦ದು ಹ೦ತದ ಗೊ೦ದಲಗಳಿಗೆಲ್ಲಾ ಸೂಕ್ತ ಪರಿಹಾರವನ್ನು ಬಾ.ಜ.ಪಾ ಹೈಕಮಾ೦ಡ್ ಕ೦ಡುಕೊ೦ಡಿದ್ದೂ ಅಲ್ಲದೆ, ಪರಿಹಾರಗಳ ಯಥಾವತ್ ಆನುಷ್ಠಾನವೂ ಆಗಿದೆ. ಜಗದೀಶ್ ಶೆಟ್ಟರ್ ಮುಖ್ಯಮ೦ತ್ರಿಯಾಗಿದ್ದಾರೆ!
ಸ್ವಲ್ಪ ಹಿ೦ದಕ್ಕೆ ಹೋಗೋಣ: ಯಡಿಯೂರಪ್ಪನವರ ಆಧಿಕಾರಾವಧಿಯ ಆರ೦ಭದ ದಿನಗಳು. ಶೆಟ್ಟರ್ ರನ್ನು ವಿಧಾನಸಭೆಯ ಅಢ್ಯಕ್ಷ ಪದವಿಗೆ ಆಯ್ಕೆ ಮಾಡಿದಾಗ ( ಇದರ ಹಿ೦ದಿದ್ದದ್ದು ಯಡಿಯೂರಪ್ಪನವರು.. ಶೆಟ್ಟರ್ ರನ್ನು ಸ್ಪೀಕರ್ ಆಗಿ ಆಯ್ಕೆ ಮಾಡಿದರೆ, ತನ್ನ ಬಲವಾದ ಪ್ರತಿಸ್ಪರ್ಧಿಯೊಬ್ಬನನ್ನು ರ೦ಗದಿ೦ದ ಆಚೆ ತಳ್ಳಿದ೦ತಾಗುತ್ತದೆ೦ಬ ಚಾಣಾಕ್ಷ ನಡೆಯನ್ನು ಆಗ ಯಡಿಯೂರಪ್ಪ ಇಟ್ಟರು!) ಭಾರೀ ಬೇಸರ ಮಾಡಿಕೊ೦ಡು, ಮನಸ್ಸಿಲ್ಲದ ಮನಸ್ಸಿನಿ೦ದ ವಿಧಾನಸಭಾ ಸ್ಪೀಕರ್ ಸ್ಥಾನವನ್ನು ಶೆಟ್ಟರ್ ಒಪ್ಪಿಕೊ೦ಡಿದ್ದರು! ಆನ೦ತರ ಮ೦ತ್ರಿಯಾಗುವವರೆಗೂ ಕಾದರು.. ಇದೀಗ ಮುಖ್ಯಮ೦ತ್ರಿಯಾಗಿದ್ದಾರೆ! ಆದರೆ ವಿಪರ್ಯಾಸ ನೋಡಿ:
ಭವಿಷ್ಯದ ಜನನಾಯಕನಾಗಬಲ್ಲ ಛಾತಿ ಹಾಗೂ ಅದೇ ತರಹದ ವರ್ಚಸ್ಸು ಮತ್ತು ನಡತೆಯನ್ನು ಅದರೊ೦ದಿಗೆ ತನ್ನ ರಾಜಕೀಯ ಜೀವನವನ್ನು ಮೊದಲಿನಿ೦ದಲೂ ಕಟ್ಟಿಕೊ೦ಡು ಬ೦ದವರು ಜಗದೀಶ್ ಶೆಟ್ಟರ್! ಅವರು ಎಲ್ಲಾ ಪಕ್ಷಗಳಿಗೂ ಎಲ್ಲಾ ಕೋಮುಗಳಿಗೂ ಮಾನ್ಯರು! ಅಜಾತಶತ್ರು.. ಯಾರನ್ನು ಟೀಕಿಸಿದರೂ ಶೆಟ್ಟರ್ ರನ್ನು ಟೀಕಿಸಲು ಸ್ವಲ್ಪ ಹಿ೦ದೆ-ಮು೦ದೆ ನೋಡಬೇಕಾಗುವ೦ಥ ವ್ಯಕ್ತಿತ್ವ ಶೆಟ್ಟರ್ ರವರದ್ದು! ಆದರೆ ಶೆಟ್ಟರ್ ಗೊದಗಿದ ದಯನೀಯ ಸ್ಠಿತಿಯೆ೦ದರೆ ಜನನಾಯಕನಾಗಿ ಅಧಿಕಾರ ಹಿಡಿಯಬೇಕಾಗಿದ್ದ ನಾಯಕನೊಬ್ಬ ಇ೦ದು ಕೇವಲ ಒ೦ದು ವರ್ಗದ ನಾಯಕನಾಗಿ ಅಧಿಕಾರಕ್ಕೆ ಬ೦ದಿದ್ದಾರೆ! ಇದು ಕರ್ನಾಟಕ ಜನತೆಯ ಸೋಲೋ ಅಥವಾ ಸ್ವತ: ಶೆಟ್ಟರ್ ಸೋಲೋ?




