ದನ ತಿಂದ್ರೆ ತಪ್ಪು ಜನಾನ್ ಬೇಕಾದ್ರೆ ತಿವ್ಕೊಳ್ಳಿ! …
-ಅಶೋಕ್ ಕೆ.ಆರ್

ಕಾನೂನಿನಂಗಳ ೧ : ಕಾನೂನಿನ ಸ್ವರೂಪ
– ಉಷಾ ಐನಕೈ ಶಿರಸಿ
ಪ್ರತೀ ಮನುಷ್ಯ ಹುಟ್ಟುವಾಗಲೇ ಆತನಿಗೆ ಅರಿವಿಲ್ಲದೇ ಹಲವಾರು ರೀತಿಯ ಕಾನೂನು ವ್ಯಾಪ್ತಿಗೆ ಸೇರಿಬಿಡುತ್ತಾನೆ. ಅದನ್ನು ಬೇಕಾದರೆ ಧರ್ಮ ಅನ್ನೋಣ. ನೈಸರ್ಗಿಕ ಕಾನೂನು ಅನ್ನೋಣ ಅಥವಾ ಪ್ರಭುತ್ವ ನಿಗದಿಪಡಿಸಿದ ಕಾನೂನು ಎಂದು ಕರೆಯೋಣ. ಒಟ್ಟಿನಲ್ಲಿ ಮನುಷ್ಯನಿಗೆ ಕಾನೂನಿನ ಆಶ್ರಯ ಬೇಕೇಬೇಕು. ಏಕೆಂದರೆ ಮನುಷ್ಯ ಸಂಘಜೀವಿ. ಅಷ್ಟೇ ಅಲ್ಲ, ಜೀವಿಗಳಲ್ಲೇ ಅತ್ಯಂತ ವಿಶಿಷ್ಟವಾದ ಮೆದುಳನ್ನು ಹೊಂದಿದ ಬುದ್ಧಿವಂತ ಈ ಮನುಷ್ಯ. ಇಂಥ ಮನುಷ್ಯರು ಸಾಮೂಹಿಕವಾಗಿ ಬಾಳಬೇಕಾದರೆ ಅದಕ್ಕೊಂದು ಚೌಕಟ್ಟು ಬೇಕು. ನಿಯಮಾವಳಿ ಬೇಕು. ಮಾರ್ಗದರ್ಶಿ ತತ್ವಗಳು ಬೇಕು. ಇದರಿಂದ ಇಡೀ ಸಮುದಾಯ ಆರೋಗ್ಯಕರವಾಗಿ ಪ್ರಗತಿಯತ್ತ ಸಾಗಲು ಸಾಧ್ಯ. ಹೀಗೆ ಮನುಷ್ಯ ಸಮೂಹವನ್ನು ನಿಯಂತ್ರಿಸಲು, ಚಾಲನೆಗೆ ತರಲು ಸೃಷ್ಟಿಸಿಕೊಂಡ ಚೌಕಟ್ಟನ್ನೇ ನಾವು ಕಾನೂನು ಎನ್ನಬಹುದು.
ಕಾನೂನು ಮನುಷ್ಯನಿಗೆ ಹಕ್ಕನ್ನು ನೀಡುತ್ತದೆ. ಹಕ್ಕಿಗೆ ಪ್ರತಿಯಾಗಿ ಕೆಲವು ಕರ್ತವ್ಯಗಳನ್ನು ಸೂಚಿಸುತ್ತದೆ. ಈ ಹಕ್ಕು ಮತ್ತು ಕರ್ತವ್ಯಗಳೇ ಮನುಷ್ಯನ ಆತ್ಮಗೌರವ, ಸದ್ವಿನಯ, ಪರೋಪಕಾರ, ಸಹಬಾಳ್ವೆ ಮುಂತಾದ ಮೌಲ್ಯಗಳನ್ನು ಸೃಷ್ಟಿಸುತ್ತವೆ ಮತ್ತು ನಿರ್ದೇಶಿಸುತ್ತವೆ.
ಕಾನೂನು ಎಂದರೆ ಏನು ಎನ್ನುವ ಪ್ರಶ್ನೆಗೆ ನಿಖರವಾದ ಒಂದು ವ್ಯಾಖ್ಯೆಯನ್ನು ಕೊಡುವುದು ಕಷ್ಟ. ಕಾನೂನು ಅನ್ನುವ ಪದ ಸರಳವಾಗಿ ಕಂಡರೂ ಅದರ ಅರ್ಥವ್ಯಾಪ್ತಿ ಬಹುವಿಸ್ತಾರವಾಗಿದೆ. ಹಾಗಾಗಿ ಮನುಷ್ಯನ ಹಕ್ಕು ಮತ್ತು ಕರ್ತವ್ಯಗಳ ಮೂಲಕವೇ ಕಾನೂನುಗಳನ್ನು ಅರ್ಥೈಸಿಕೊಳ್ಳುತ್ತ ಹೋಗಬೇಕು.
ಸ್ಮಾರ್ಟ್ ಫೋನ್ ಬಗ್ಗೆ ನಮಗೆಷ್ಟು ಗೊತ್ತು?
– ಮುರಳಿಧರ್ ದೇವ್
ಇತ್ತೀಚಿಗೆ ಎಲ್ಲೆಡೆಯೂ ಸ್ಮಾರ್ಟ್ ಫೋನ್ ಗಳದ್ದೇ ಸುದ್ದಿ, ಬಹುತೇಕ ಎಲ್ಲ ದೊಡ್ಡ ದೊಡ್ಡ ಕಂಪನಿಗಳು ತಾವು ಸ್ಮಾರ್ಟ್ ಫೋನ್ ನಲ್ಲಿ ಇರಬೇಕೆಂದು ಬಯಸ್ತ ಇವೆ. ಅಲ್ಲದೆ ಗೂಗಲ್ ಎಂಬ ದೈತ್ಯ ಕಂಪನಿ android ಎನ್ನುವ ಆಪರಟಿಂಗ್ ಸಿಸ್ಟಮ್ ತಂದಮೆಲಂತೂ ಸ್ಮಾರ್ಟ್ ಫೋನ್ ಮಾರುಕಟ್ಟೆ ತುಂಬಾನೇ ವಿಸ್ತಾರವಾಗಿದೆ. ಗೂಗಲ್ ನ android ಆಧಾರಿತ ಹೊಸ ಸ್ಮಾರ್ಟ್ ಫೋನ್ ಗಳು ಕೇವಲ ೪ ಸಾವಿರದಿಂದ ಶುರುವಾಗಿ ೪೦ ಸಾವಿರದವರೆಗೂ ದೊರೆಯುತ್ತವೆ. ಹಣಕ್ಕೆ ತಕ್ಕಂತೆ ಮೊಬೈಲ್ ಪರದೆ, ವಿಶೇಷತೆಗಳು, ಕ್ಯಾಮರ ಸೌಲಭ್ಯ ಇರುತ್ತವೆ. ಈ ಸ್ಮಾರ್ಟ್ ಫೋನ್ ಗಳಲ್ಲಿನ ಮತ್ತೊಂದು ವಿಶೇಷ ಅಂದರೆ, ಬಳಕೆದಾರ ತನಗೆ ಬೇಕಾದ ಅಪ್ಲಿಕೇಶನ್ ಗಳನ್ನು ” android ಮಾರ್ಕೆಟ್” ನಿಂದ ತನ್ನ ಮೊಬೈಲ್ ನಲ್ಲಿ ಬಳಸಬಹುದು. ವಿವಿಧ ಆಟಗಳನ್ನು, ಸಾಮಾಜಿಕ ತಾಣಗಳ ಅಪ್ಲಿಕೇಶನ್ ಗಳನ್ನು, ಬ್ಯಾಂಕಿಂಗ್ ಅಪ್ಲಿಕೇಶನ್ ಗಳನ್ನು ಮೊಬೈಲ್ ನಲ್ಲಿ ಬಳಸಬಹುದು. ಇದೆ ವಿಚಾರದಿಂದ ಭಾರತದಲ್ಲೂ ಪ್ರತಿಯೊಬ್ಬರಿಗೂ ತಾವು ಒಂದು ಸ್ಮಾರ್ಟ್ ಫೋನ್ ತಗೊಂಡು ಸ್ಮಾರ್ಟ್ ಆಗಬೇಕೆಂಬ ಹಂಬಲ. ಅಲ್ಲದೆ android ಮಾರ್ಕೆಟ್ ನಲ್ಲಿ ಬಹಳಷ್ಟು ಉಚಿತವಾಗಿ ಬಳಸಬಹುದಾದ ಅಪ್ಲಿಕೇಶನ್ ಗಳಿವೆ. ಫೋನ್ ಬೆಲೆಯೂ ಕೈಗೆಟಗುವ ದರದಲ್ಲೇ ಇದೆ, ಹೀಗಾಗಿ ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರ ಕೈನಲ್ಲಿ ಇಂತಹ ಸ್ಮಾರ್ಟ್ ಫೋನ್ ಗಳನ್ನ ಕಾಣಬಹುದು.
ಬಹುತೇಕರಿಗೆ ಸ್ಮಾರ್ಟ್ ಫೋನ್ ನ ಉಪಯೋಗ ಏನು ಅಂತ ಗೊತ್ತಿಲ್ದೆ ಇದ್ರೂ ಸ್ಮಾರ್ಟ್ ಆಗಿರಬೇಕು ಅಂತ ಸ್ಮಾರ್ಟ್ ಫೋನ್ ತೊಗೋತ ಇದಾರೆ. ತಿಳಿದವರಿಗೂ ಸ್ಮಾರ್ಟ್ ಫೋನ್ ಗಳ ಬಗ್ಗೆ ಹಾಗು ಅದರಲ್ಲಿ ಉಪಯೋಗಿಸಬಹುದಾದ ಅಪ್ಪ್ಲಿಕೆಶನ್ ಗಳ ಗ್ಗೆ ಹೆಚ್ಚಾಗಿ ತಿಳುವಳಿಕೆ ಇರುವುದಿಲ್ಲ. ಇದರಿಂದಾಗಿಯೇ ಇತ್ತೀಚಿನ ದಿನಗಳಲ್ಲಿ ಹ್ಯಾಕರ್ ಗಳು ಈ ಅಪ್ಪ್ಲಿಕೆಶನ್ ಲೋಕಕ್ಕೆ ನಿಧಾನವಾಗಿ ಕಾಲಿಡ್ತಾ ಇದಾರೆ. ಬಳಕೆದಾರನಿಗೆ ಯಾಮಾರಿಸಿ ಅವನ ಅರಿವಿಗೆ ಬರದಂತೆ ಆತನ ಮಾಹಿತಿಗಳನ್ನು ಕದಿಯುವ ಜಾಲಗಳು ನ್ಧಾನವಾಗಿ ಹುಟ್ತ್ಕೊಳ್ತಾ ಇವೆ. ಹಾಗು ಇದಕ್ಕೆಲ್ಲ ಬಳಕೆದಾರನಿಗೆ ಸ್ಮಾರ್ಟ್ ಫೋನ್ ಗಳು & ಅದರಲ್ಲಿ ಬಳಸಬಹುದಾದ ಅಪ್ಪಿಕೆಶನ್ ಗಳ ಬಗ್ಗೆ ಇರುವ ಕಡಿಮೆ ಜ್ಞಾನದಿಂದ ಹ್ಯಾಕರ್ ಗಳು ಸುಲಭವಾಗಿ ಸ್ಮಾರ್ಟ್ ಫೋನ್ ನಲ್ಲಿರುವ ಸ್ಮಾರ್ಟ್ ಜನರ ಮಾಹಿತಿಗಳನ್ನು ಸುಲಭವಾಗಿ ಪಡೆದುಕೊಳ್ಳುತ್ತಾರೆ.
ಮತ್ತಷ್ಟು ಓದು 
ಮದ್ಯ, ಮಾಂಸ, ಮಾನಿನಿಯರ ಮಧ್ಯೆ ಮಿಲಿಯನೇರ್ ಮಲ್ಯ ಬರೆದ ಮತ್ತಿಳಿಸುವ ಕಥೆ !
ಮಾಡಿದ್ದುಣ್ಣೋ ಮಹರಾಯ ಎಂಬ ಗಾದೆಯನ್ನು ಯಾರು ಯಾವ ಕಾಲದಲ್ಲಿ ಮಾಡಿದರೋ ತಿಳಿಯದಲ್ಲ. ಭರತಭೂಮಿ ಎಂಬುದು ಆದರ್ಶ ಮಾನವ ಮೌಲ್ಯಗಳ
ನೆಲೆವೀಡು. ಇಂಥಾ ನೆಲದಲ್ಲೇ ಯುಗದ/ಕಾಲದ ಪ್ರಭಾವದಿಂದ ಮಾನವೀಯ ಮೌಲ್ಯಗಳಿಗೇ ಮೌಲ್ಯವಿಲ್ಲದಂತಾಗಿದೆ. ಶ್ರೀರಾಮ ಜನಿಸಿ, ಆಳಿ, ಆದರ್ಶ ಯಾವುದೆಂದು ತೋರಿಸಿಕೊಟ್ಟ ಈ ದೇಶದಲ್ಲಿ, ಪ್ರಾಜ್ಞರು ಹೇಳುತ್ತಲೇ ಬಂದರು: “ಮದ್ಯ, ಮಾಂಸ ಮತ್ತು ಮಾನಿನಿ” ಈ ಮೂರನ್ನು ದೂರವಿಡಿ ಎಂಬುದಾಗಿ. ಇಲ್ಲಿ ಮಾನಿನಿ ಎಂದರೆ ಕೇವಲ ಬೆಲೆವೆಣ್ಣುಗಳು ಎಂದರ್ಥ. ಮದ್ಯಕುಡಿದ ಯಾವ ಪ್ರಾಣಿಯೂ ತನ್ನ ಇತಿಮಿತಿಯನ್ನು ಮೀರಿ ವಿಚಿತ್ರಗತಿಯಲ್ಲಿ ವರ್ತಿಸುತ್ತದೆ, ಯಾಕೆಂದರೆ ಮದ್ಯದ ಮತ್ತು ನೆತ್ತಿಗೇರಿದಾಗ ಎಲ್ಲಿ ಏನಾಗುತ್ತಿದೆ ಎಂದಾಗಲೀ, ತಾನು ಏನು ಮಾಡುತ್ತಿದ್ದೇನೆ ಎಂದಾಗಲೀ ಅರ್ಥವಾಗದಲ್ಲ. ಮದ್ಯ, ಮಾಂಸ ಮತ್ತು ಮಾನಿನಿ ಈ ಮೂರೂ ಒಮ್ಮೆ ನಮ್ಮನ್ನು ತಮ್ಮ ತೆಕ್ಕೆಗೆ ಸೆಳೆದುಕೊಂಡರೆ ಅವುಗಳಿಂದ ಬಿಡುಗಡೆ ಬಹುತೇಕ ಸಾಧ್ಯವಿಲ್ಲ. ಅಂಥದ್ದರಲ್ಲಿ ಕಾಲಗತಿಯಲ್ಲಿ ಮದ್ಯ ತಯಾರಿಕೆಯನ್ನೇ ಉದ್ದಿಮೆಯನ್ನಾಗಿ ಮಾಡಿಕೊಂಡು ಕೆಲವರು ಬೆಳೆದರು. ಅದೆಷ್ಟೋ ಕುಟುಂಬಗಳು ಅವರ ತಯಾರಿಕೆಯ ಮದ್ಯವನ್ನು ನಿತ್ಯವೂ ಕುಡಿಯುತ್ತಾ ಬೀದಿ ಪಾಲಾದವು!
ದುಶ್ಯಂತ-ಶಕುಂತಲೆಯರ ಪ್ರಿಯ ಪುತ್ರ-ಚಕ್ರವರ್ತಿ ಭರತನ ಹೆಸರಿನಿಂದ ಭಾರತವೆನಿಸಿದ ಈ ಪುಣ್ಯನೆಲದಲ್ಲಿ, ಸಗರಪುತ್ರ ಭಗೀರಥ ತನ್ನ ಅಖಂಡ ತಪಸ್ಸಿನಿಂದ ಗಂಗೆಯನ್ನು ಧರೆಗೆ ಕರೆತಂದ ಎಂಬುದು ನಮಗೆಲ್ಲಾ ತಿಳಿದಿರುವ ವಿಷಯ. ನಿಜ ಘಟನೆಗಳನ್ನೇ ಕಥೆಯನ್ನಾಗಿಸಿದ ಇತಿಹಾಸವನ್ನು, ವಿಜ್ಞಾನವೆಂಬ ಕನ್ನಡಕ ಹಾಕಿಕೊಂಡು ಹಳದಿ ಬಣ್ಣದಲ್ಲೇ ಎಲ್ಲವನ್ನೂ ನೋಡುತ್ತಾ ನಾವು ತೆರಳುವಾಗ, ಜೀವ ಇರುವ ಜೀವಿಯೂ ನಮಗೆ ಸತ್ತ ಪ್ರಾಣಿಯ ಹಾಗೇ ಕಾಣಿಸುವುದು ಸಹಜ; ಯಾಕೆಂದರೆ ಅದು ನಮ್ಮ ಅಧಿಕಪ್ರಸಂಗದ ಪರಾಕಾಷ್ಠೆ.
ಕನ್ನಡದಲ್ಲೂ ಮಾಹಿತಿ ಮುದ್ರಿತವಾಗಲಿ
– ರವಿ ಸಾವ್ಕರ್
ಇತ್ತೀಚಿಗೆ ಪೆಪ್ಸಿಕೋ ರವರ ಲೇಸ್ , ಮ್ಯಾಕ್ ಡೋನಾಲ್ದ್ ರವರ ಬರ್ಗರ್ ಗಳಲ್ಲಿ ಆರೋಗ್ಯಕ್ಕೆ ಹಾನಿಕಾರವಾಗುವಂಥಹ ಕೊಬ್ಬಿನಂಶ ಹೆಚ್ಚಾಗಿ ಇದೆ ಅನ್ನೋದರ ಬಗ್ಗೆ ಸುದ್ದಿ ಪ್ರಚಾರದಲ್ಲಿದೆ. ತಯಾರಕರು ತಮ್ಮ ಉತ್ಪಾದನೆಗಳಲ್ಲಿ ಯಾವ ಸಾಮಗ್ರಿ ಎಷ್ಟು ಪ್ರಮಾಣದಲ್ಲಿದೆ ಎಂದು ಗ್ರಾಹಕನಿಗೆ ಸರಿಯಾಗಿ ತಿಳಿಸುವುದು ಅವರ ಕರ್ತವ್ಯ. ಹಾಗೆಯೇ ಅದನ್ನು ಕೇಳಿ ಪಡೆಯುವುದೂ ಸಹ ಒಬ್ಬ ಗ್ರಾಹಕನಹಕ್ಕು ಆಗಿದೆ. Centre for Science and Environment (CSE) ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ.ಆದರೆ ಇಂಥಹ ಚರ್ಚೆಗಳಲ್ಲಿ ಈ ಮಾಹಿತಿಯನ್ನು ಜನರು ಅರಿಯಬೇಕಾದರೆ ಅದು ಜನರ ಭಾಷೆಯಲ್ಲಿ ಇರಬೇಕು ಅನ್ನೋ ಅತಿ ಮುಖ್ಯವಾದ ಅಂಶವನ್ನು ಮರೆತ ಹಾಗಿದೆ. ಒಂದು ವರದಿಯ ಪ್ರಕಾರ ನಮ್ಮ ದೇಶದಲ್ಲಿ ೭% ಜನರಿಗೆ ಮಾತ್ರ ಇಂಗ್ಲಿಷ್ ನಲ್ಲಿ ಇರುವುದನ್ನು ಅರ್ಥಮಾಡಿಕೊಳ್ಳಬಲ್ಲರು. ಮಿಕ್ಕ ೯೩% ಜನರಿಗೆ ಇಂಗ್ಲಿಷ್ ನಲ್ಲಿ ಮಾಹಿತಿ ತಲುಪಿಸಲಾಗದ ಪರಿಸ್ಥಿತಿ ಇರುವಾಗ , ಕೇವಲ ಇಂಗ್ಲಿಷ್ನಲ್ಲಿ ಮಾಹಿತಿಯನ್ನು ನಮೂದಿಸಿದರೆ ನಮ್ಮ ಜನರಿಗೆ ಹೇಗೆ ಅರ್ಥವಾದೀತು? ಒಬ್ಬ ಕನ್ನಡ ಮಾತ್ರ ಬರುವ ಗ್ರಾಹಕನೂ ಸಹ ಅಷ್ಟೇ ದುಡ್ಡು ಕೊಟ್ಟು ಖರೀದಿ ಮಾಡಿರುತ್ತಾನೆ. ಅವನಿಗೆ ಆ ಸಾಮಗ್ರಿಯ ಬಗೆಗೆ ಮಾಹಿತಿಯನ್ನು ತಿಳಿಸದಿರುವುದು ಯಾವ ನ್ಯಾಯ ?
ಬರದ ಸೀಮೆಯಿಂದ ಹೊರಟ ನೆನಪಿನ ಬಂಡಿ
ಇದೆಲ್ಲವೂ ೧೯೮೦ರ ದಶಕದ ಮಾತು. ಹೈದ್ರಾಬಾದ್ ಕರ್ನಾಟಕ ಸೀಮೆಯಲ್ಲಿ ಆಗಷ್ಟೇ ಎಂಎಸ್ಸಿ ಪೂರ್ಣಗೊಳಿಸಿದ ತರುಣನೊಬ್ಬ ಕೆಲಸ ಅರಸಿಕೊಂಡು ಬೆಂಗಳೂರಿನ ಶಾಸಕರ ಭವನಕ್ಕೆ ಬಂದಿಳಿಯುತ್ತಾನೆ. ತನ್ನೂರಿನ ಶಾಸಕನನ್ನು ಹಿಡಿದುಕೊಂಡು ನೌಕರಿ ಗಿಟ್ಟಿಸಿಕೊಳ್ಳುವ ಇರಾದೆ ಹೊಂದಿದ್ದ ಆ ಯುವಕ, ರಾಜ್ಯದ ಯಾವುದಾದರೊಂದು ಕಾಲೇಜಿನಲ್ಲಿ ಉಪನ್ಯಾಸಕನಾಗಬೇಕೆಂಬ ಮಹಾ ಗುರಿಯನ್ನೂ ಮನಸ್ಸಿನಲ್ಲಿ ಹಾಕಿಕೊಂಡಿದ್ದ !
ಆದರೆ, ಯುವಕ ಹುಡುಕಿಕೊಂಡು ಬಂದಿದ್ದ ಆ ದಲಿತ ಶಾಸಕನ ಯೋಜನೆಯೇ ಬೇರೆ ಆಗಿತ್ತು. ಏನಾದರೂ ಮಾಡಿ ಯುವಕನನ್ನು ಪತ್ರಕರ್ತನನ್ನಾಗಿಸಬೇಕು ಎಂಬುದು ಆತನ ಗುರಿ. ಹೈದ್ರಾಬಾದ್ ಕರ್ನಾಟಕ ಪ್ರಾಂತ್ಯದಲ್ಲಿ ಓದುವ ಹುಡುಗರೇ ಕಡಿಮೆ. ಅದರಲ್ಲಿಯೂ ಓದಿದವರೆಲ್ಲರೂ ಮೇಷ್ಟ್ರು-ಕ್ಲರ್ಕ್ ಎಂದು ಕೆಲಸ ಹುಡುಕಿಕೊಂಡು ಹೋದರೆ, ಆ ಭಾಗದ ಸಂಕಟಗಳನ್ನು , ನೋವುಗಳನ್ನು ರಾಜ್ಯದ ಜನರಿಗೆ ಅರ್ಥೈಸುವವರು ಯಾರು ಎಂಬುದು ಶಾಸಕನ ಕಳಕಳಿ. ಹಾಗಾಗಿಯೇ ಏನೋ, ಕೆಲಸ ಹುಡುಕಿಕೊಂಡು ಬಂದಿದ್ದ ಯುವಕನಿಗೆ ತನ್ನ ಶಾಸಕರ ಕಚೇರಿಯಲ್ಲಿಯೇ ಅಶನ-ವಶನ ನೀಡಿದ್ದಲ್ಲದೇ, ತಲೆಯಲ್ಲಿ ಪತ್ರಕರ್ತನ ಕನಸನ್ನೂ ಬಿತ್ತಿದ. ಇದೊಂದು ನನಸಾಗದ ಕನಸು ಎಂದು ಕಲ್ಯಾಣ ಕರ್ನಾಟಕದ ಯುವಕ ಅಂದುಕೊಳ್ಳುತ್ತಿರುವಾಗಲೇ, ರಾಜಕಾರಣಿಯೊಬ್ಬರು ಇಂಗ್ಲಿಷ್ ಪತ್ರಿಕೆಯೊಂದನ್ನು ಆರಂಭಿಸಿದರು. ಕನಸು ಸಾಕಾರಗೊಂಡಿತು ಎನ್ನುವಷ್ಟರಲ್ಲಿ, ಪತ್ರಿಕೆಯೇ ಕಣ್ಮುಚ್ಚಿತು ! ಯುವಕನ ನಿರುದ್ಯೋಗ ಮುಂದುವರಿಯಿತು.
ಆ ದಿನಗಳಲ್ಲಿಯೇ ಟೈಂಸ್ ಆಫ್ ಇಂಡಿಯಾ ಪತ್ರಿಕೆ ವರದಿಗಾರರು ಬೇಕಿದ್ದಾರೆ ಎಂದು ತನ್ನ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಿತು. ಪತ್ರಿಕೆ ಆಹ್ವಾನಿಸಿದ್ದ ಬಿಡಿ ವರದಿಗಾರ, ಹಿರಿಯ ವರದಿಗಾರ, ಉಪ ಸಂಪಾದಕ ಎಂಬ ಮೂರು ಹುದ್ದೆಗಳಿಗೂ ಕಲ್ಯಾಣ ಕರ್ನಾಟಕದ ಕಲಿ ಅರ್ಜಿ ಗುಜರಾಯಿಸಿದ. ಎಲ್ಲವಕ್ಕೂ ಅರ್ಜಿ ಹಾಕಲೇಬೇಕು ಎಂಬುದು ಶಾಸಕನ ಒತ್ತಾಯವಾಗಿತ್ತು. ಯಾವುದಾದರು ಒಂದು ಹುದ್ದೆಗಾದರೂ ಸಂದರ್ಶನ ಬರಲಿ ಎಂಬುದು ಒತ್ತಾಯದ ಹಿಂದಿನ ತಂತ್ರ. ಮತ್ತಷ್ಟು ಓದು 
ಕೈದಿಯೊಬ್ಬ ಜೈಲು ಸೂಪರಿಂಟೆಂಡೆಂಟ್ ಆಗಿದ್ದು!… ಮ್ಯಾಜಿಸ್ಟ್ರೇಟರೂ ಆಗಿದ್ದು!!
– ಕವಿ ನಾಗರಾಜ್
ಸುಮಾರು ೩೭ ವರ್ಷಗಳ ಹಿಂದೆ ಅವನೊಬ್ಬ ಜೈಲಿನ ಕೈದಿಯಾಗಿದ್ದ. ಆರು ತಿಂಗಳು ಹಾಸನದ ಜೈಲಿನಲ್ಲಿದ್ದ. ಅವನ ಮೇಲೆ ಭಾರತ ರಕ್ಷಣಾ ಕಾಯದೆಯನ್ವಯ ಹಲವಾರು ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿದ್ದವು. ಅದೇ ವ್ಯಕ್ತಿ ಜೈಲಿನಿಂದ ಹೊರಬಂದ ಸುಮಾರು ನಾಲ್ಕು ವರ್ಷಗಳ ನಂತರ ಒಂದು ಉಪಕಾರಾಗೃಹದ ಜೈಲು ಸೂಪರಿಂಟೆಂಡೆಂಟ್ ಆಗಿ ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದ. ಇದಾಗಿ ೧೦ ವರ್ಷಗಳ ನಂತರದಲ್ಲಿ ಅವನು ತಹಸೀಲ್ದಾರ್ ಮತ್ತು ತಾಲ್ಲೂಕು ದಂಡಾಧಿಕಾರಿಯಾದ. ಆ ಹುದ್ದೆಯಲ್ಲಿ ಸುಮಾರು ೧೨ ವರ್ಷಗಳ ಕಾಲ ಕೆಲಸ ಮಾಡಿದ. ಹೀಗೇ ಆಗಲು ಸಾಧ್ಯವೇ? ಒಬ್ಬ ಕೈದಿ ಜೈಲು ಸೂಪರಿಂಟೆಂಡೆಂಟ್ ಆಗುವುದು ಮತ್ತು ನಂತರ ತಾಲ್ಲೂಕು ಮ್ಯಾಜಿಸ್ಟ್ರೇಟರೂ ಆದನೆಂದರೆ ಯಾರೂ ನಂಬಲಾರರು. ಆದರೆ ಇದು ನಡೆದ ಸಂಗತಿ.
ಏಕಪಾತ್ರಾಭಿನಯಕ್ಕೆ ಪಾತ್ರ ಹುಡುಕುತ್ತಿದ್ದಾಗ ಸಿಕ್ಕ ಸೇನಾನಿ..!!!!!
– ಭೀಮಸೇನ್ ಪುರೋಹಿತ್
ಪ್ರತಿವರ್ಷ ನಮ್ಮ ಕಾಲೇಜಿನಲ್ಲಿ ನಡೆಯುವ ಅಂತರ್ಕಾಲೇಜು ಮಟ್ಟದ ಸಾಂಸ್ಕೃತಿಕ ಸ್ಪರ್ಧಾಹಬ್ಬ “ದವನ”ದಲ್ಲಿ “ಏಕಪಾತ್ರಾಭಿನಯ”ವೂ ಒಂದು ಸ್ಪರ್ಧೆ.. ಈ ವರ್ಷ ಯಾರ ಅಭಿನಯ ಮಾಡಲಿ ಎಂದು ಯೋಚಿಸುತ್ತಿದ್ದೆ.. ಅಭಿನಯವಂತೂ ಇದ್ದಿದ್ದೇ. ಆದಷ್ಟು ಅಜ್ಞಾತ ಸ್ವಾತಂತ್ರ್ಯ ಹೋರಾಟಗಾರನೊಬ್ಬನ ಪಾತ್ರ ಆಯ್ದುಕೊಂಡರೆ, ಬಹಳಷ್ಟು ಜನಕ್ಕೆ ಆ ಚರಿತ್ರೆಯನ್ನು ತಲುಪಿಸಿದಂತಾಗುತ್ತದೆ, ಅದರಲ್ಲೂ ಕರ್ನಾಟಕದವನೇ ಆದರೆ, ಪಾತ್ರದ ಸಂಭಾಷಣೆ ಬರೆಯುವುದೂ ನನಗೆ ಸುಲಭವಾಗುತ್ತದೆ ಎಂದು ಭಾವಿಸಿ, ಅಂಥಾ ಚಾರಿತ್ರಿಕವ್ಯಕ್ತಿಯ ಹುಡುಕಾಟದಲ್ಲಿ ಇದ್ದಾಗ, ಥಟ್ಟನೆ ಒಬ್ಬನ ನೆನಪಾಯಿತು..
ಎಂಟನೆ ತರಗತಿಯಲ್ಲಿದ್ದಾಗ ಅವನ ಬಗೆಗಿನ ಪುಸ್ತಕ ಓದಿದ್ದಷ್ಟೇ ನೆನಪು.. ಆದರೆ, ಅವನ ಉಜ್ವಲ ದೇಶಭಕ್ತಿ ಇವತ್ತಿಗೂ ಅವನ ಚಿತ್ರಣವನ್ನು ನನ್ನ ಮನಸ್ಸಿನಲ್ಲಿ ಹಸಿರಾಗಿಸಿದೆ..
“ಸುರಪುರ”-ಗದಗ ಜಿಲ್ಲೆಯ ಊರು. “ಬೇಡ”ನಾಯಕರು ಅದನ್ನು ಆಳುತ್ತಿದ್ದರು. ವಿಜಯನಗರದ ರಾಜರುಗಳಿಂದ ಪ್ರಭಾವಿತರಾಗಿದ್ದ ನಾಯಕರು, ಸಹಜವಾಗಿಯೇ ನಾಡು-ನುಡಿಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಧೈರ್ಯ-ಸಾಹಸಗಳಿಗೆ ಹೆಸರಾದ ವಂಶ ಅದು.. ಇಂಥ ಪರಂಪರೆಯಲ್ಲಿ ಬಂದವನೇ ಈ ಲೇಖನದ ಮೂಲಸ್ರೋತ “ವೆಂಕಟಪ್ಪ ನಾಯಕ”…!!
ಮಂಕು ತಿಮ್ಮನ ಕಗ್ಗ – ರಸಧಾರೆ (೨೩)
ರವಿ ತಿರುಮಲೈ
ಲೋಕಜೀವನ ಮಂಥನ
” ಉದರ ವೈರಾಗ್ಯವಿದು ” ಎಂದು ಹೇಳುವ ಪುರಂಧರ ದಾಸರ ಪದದಲ್ಲಿನ ಅಂತರ್ಯವೂ ಇದೆ ಆಗಿರುತ್ತೆ. ಹೀಗೆ ಹೊಟ್ಟೆಪಾಡಿಗಾಗಿ ಕೆಲಸಮಾಡುವಾಗ , ನಮಗೆ ಬೇಸರ, ಕೋಪ, ದ್ವೇಷ ಅಸೂಯೆ ಮುಂತಾದವುಗಳೆಲ್ಲ ಮನಸ್ಸಿಗೆ ಬಂದು ಒಂದು ರಸಾನುಭಾವವಿಲ್ಲದೆ ಅತೃಪ್ತಿಯ ಭಾವನೆಯೇ ಇರುವುದು ಹಾಗಾಗಿ ಈ ಜೀವನವೆಲ್ಲ ಒಂದು ಒಣ ರಗಳೆ ಎಂದು ಹೇಳುತ್ತಾರೆ.
ಇದು ಹೀಗೆ ಎಲ್ಲರಿಗೂ ಇರುವುದಿಲ್ಲ. ತಮ್ಮ ಕೆಲಸವನ್ನು ಬಹಳ ಇಷ್ಟಪಟ್ಟು ಮಾಡುವವರೂ ತಾವು ಮಾಡುವ ಕೆಲಸದಲ್ಲಿ ಸಂಪೂರ್ಣ ಆಸಕ್ತಿ ತನ್ಮಯತೆ ಮತ್ತು ತೃಪ್ತಿಯನ್ನು ಕಂಡುಕೊಳ್ಳುವವರೂ ಇದ್ದಾರೆ. ಆದರೆ ಅವರ ಸಂಖ್ಯೆ ಬಹಳ ಕಡಿಮೆ. ಬಹಳ ಸಂಖ್ಯೆಯ ಜನ, ಶ್ರೀ ಗುಂಡಪ್ಪನವರು ಹೇಳುವ ಹಾಗೆ ನೀರಸವಾದ ಜೀವನವನ್ನೇ ನಡೆಸುತ್ತಾರೆ. ನಾವೂ ಸಹ ನಮ್ಮ ನಮ್ಮ ಕಾರ್ಯಕ್ಷೇತ್ರಗಳಲ್ಲಿ ತೃಪ್ತಿಯನ್ನು ಕಂಡುಕೊಳ್ಳಬಹುದೇನೋ ಎಂದು ಆಲೋಚಿಸುತ್ತಾ…………….
ಮುಂದಿನ ಕಗ್ಗಕ್ಕೆ ಹೋಗೋಣ,
ಮಂಗನಿಂದ ಮಾನವನಾದ ಎನ್ನುವುದು ಬರೇ ಅಪವಾದ !
ಇಷ್ಟಕ್ಕೂ ನಾವು ಓದಿದ ಜೀವಶಾಸ್ತ್ರದಲ್ಲಿ ಅಥವಾ ಸಮಾಜಶಾಸ್ತ್ರಲ್ಲಿ ಮಾನವನ ಹುಟ್ಟಿನ ಬಗೆಗೆ ನಾವು ತಿಳಿದುಕೊಂಡ ಸತ್ಯ ಎಂಬುದು ಸುಳ್ಳು. ಅದೊಂದು
ಹೋಲಿಕೆಯ ಕಥೆ ಅಷ್ಟೇ! ಯಾಕೆ ಎಂದು ಯಾರೂ ಚಿಂತಿಸಿದವರಿಲ್ಲ. ಹರಪ್ಪ ಮತ್ತು ಮೊಹೆಂಜೊದಾರೋ ಸ್ಥಳ ಮಂಗನಿಂದ ಮಾನವನಾದ ಎನ್ನುವುದು ಬರೇ ಅಪವಾದ !ಸಂಶೋಧನೆಗಳಲ್ಲಿ ಸಿಕ್ಕಿದವು ಎನ್ನಲಾದ ಕಲ್ಲಿನ ಆಯುಧಗಳು, ಉಪಯೋಗಿಸಿರಬಹುದಾದ ಮಣ್ಣಿನ ಮಡಕೆ-ಕುಡಿಕೆಗಳು, ಗುಹೆಗಳಲ್ಲಿನ ಗೋಡೆ ಚಿತ್ರಗಳು ಕೇವಲ ಇವುಗಳನ್ನೇ ಅವಲಂಬಿಸಿ ಕಟ್ಟಿದ ಅಂದಾಜು ಕಥೆಯೇ ಮಂಗನಿಂದ ಮಾನವ ಎಂಬುದಾಗಿದೆ!ಇದಕ್ಕೆ ಇದಮಿತ್ಥಂ ಎಂದು ಸಾಕ್ಷೀಕರಿಸುವ ಯಾವುದೇ ಪುರಾವೆಗಳು ಇರುವುದಿಲ್ಲ. ಆದಿ ಮಾನವ ಕಾಡೊಳಗೇ ವಾಸವಾಗಿದ್ದನೆಂದೂ ಮೊದಲು ಹಸಿ ಮಾಂಸವನ್ನಷ್ಟೇ ತಿಂದು ಬದುಕಿದ್ದನೆಂದೂ ನಂತರ ಬೆಂಕಿಯನ್ನು ಕಂಡುಹಿಡಿದನೆಂದೂ ಹಲವಾರು ಮೈನವಿರೇಳಿಸುವ ರೋಚಕ ಕಥೆಗಳನ್ನು ಕೇಳುತ್ತೇವೆ. ಕಲ್ಲಿನ ಚೂಪಾದ ಆಯುಧಗಳಿಂದ ಪ್ರಾಣಿಗಳನ್ನು ವಧಿಸುತ್ತಿದ್ದ ಮಾನವ ಕ್ರಮೇಣ ಲೋಹವನ್ನೂ ಕಂಡುಕೊಂಡು ಚಿಕ್ಕಪುಟ್ಟ ಲೋಹದ ಆಯುಧಗಳನ್ನು ತಯಾರಿಸಿಕೊಂಡ ಎಂದು ನಮಗೆ ಹೇಳಿದ ಕಥೆಗಳು ಸಾರುತ್ತವೆ. ನನಗನಿಸುತ್ತಿದೆ ಅವೆಲ್ಲಾ ಬರೇ ಕಟ್ಟುಕಥೆಗಳಾಗಿವೆ; ಅವುಗಳಲ್ಲಿ ಯಾವುದೇ ಹುರುಳಿಲ್ಲ.
ಭಾರತೀಯ ಆಯುರ್ವೇದಕ್ಕೆ ೩೦೦೦ ವರ್ಷಗಳ ದಾಖಲೆಯಿದೆ. ಎಷ್ಟೋಕಡೆ ೫೦೦೦ ವರ್ಷಗಳಷ್ಟು ಹಳೆಯ ದಾಖಲೆಗಳೂ ಸಿಗುತ್ತಿವೆ. ಒಂದೊಮ್ಮೆ ಹಾಗೆ ಮಂಗನಿಂದ ಮಾನವ ಎಂದಾದರೆ ನಮ್ಮ ಪೂರ್ವಜರು ಅಷ್ಟೊಂದು ಹಿಂದೆಯೇ ಬರೆದಿದ್ದ ಗ್ರಂಥಗಳು, ಪುರಾಣೇತಿಹಾಸಗಳು, ಮಹಾಕಾವ್ಯಗಳು, ವೇದ-ವೇದಾಂತಗಳೆಲ್ಲಾ ಸುಳ್ಳೇ?






