ಅಮೇರಿಕಾ ಕಲಿಸಿದ ಪಾಠ…?
ಅರೆಹೊಳೆ ಸದಾಶಿವ ರಾವ್

ಅಂತ:ಶಕ್ತಿ ಮತ್ತು ಅಂತರಿಕ ದೌರ್ಬಲ್ಯದ ಬಗ್ಗೆ ಒಂದು ಮಾತಿದೆ. ಅಂತ:ಶಕ್ತಿ ಲಾಭದಾಯಕವಾದರೆ, ಅಂತರಿಕ ದೌರ್ಬಲ್ಯ ಅಪಾಯಕಾರಿ. ವಿಶ್ವದ ಉಗ್ರರ ಪಟ್ಟಿಯಲ್ಲಿ ನಂ.೧ ನೆಯ ಸ್ಥಾನದಲ್ಲಿದ್ದವನು ಒಸಾಮಾ ಬಿನ್ ಲ್ಯಾಡೆನ್. ಅಮೇರಿಕಾ ಅವನನ್ನು ಹತ್ತುವರ್ಷಗಳ ಭೇಟೆಯ ನಂತರ ಕೊಂದು ಮುಗಿಸಿದೆ. ಗುಣಕ್ಕೆ ಮತ್ಸರವಿಲ್ಲದಂತೆ ಭಾವಿಸಿದರೆ, ಅಮೆರಿಕಾಕ್ಕೆ ಈ ವಿಷಯದಲ್ಲಿ ಹ್ಯಾಟ್ಸ್ ಆಫ್ ಹೇಳಲೇ ಬೇಕು.
ಹಾಗೇ ಸುಮ್ಮನೇ ಒಮ್ಮೆ ನಮ್ಮ ಪರಿಸ್ಥಿತಿಗೆ ಈ ಘಟನೆಯನ್ನು ಸಮೀಕರಿಸಿಕೊಳ್ಳೋಣ. ಭಾರತದ ಪವಿತ್ರ ಸಂಸತ್ತಿನ ಮೇಲೆ ಉಗ್ರ ಅಫ್ಜಲ್ ದಾಳಿ ಮಾಡಿದ ಮತ್ತು ಸಿಕ್ಕಿ ಬಿದ್ದ. ಮುಂಬೈ ತಾಜ್ ಹೋಟೆಲ್ ಮೇಲಿನ ದಾಳಿಯಲ್ಲಿ ಕಸಬ್ ಸಿಕ್ಕಿ ಬಿದ್ದ. ನಾವು, ಇಬ್ಬರನ್ನೂ ಕಟ Pಟೆಯಲ್ಲಿ ನಿಲ್ಲಿಸಿದೆವು. ಇಬ್ಬರಿಗೂ ಅವರ ಪರವಾಗಿ ವಾದ ಮಾಡಲೆಂದು, ಒಲ್ಲೆ ಒಲ್ಲೆನೆಂದರೂ ವಕೀಲರನ್ನು ಸರಕಾರಿ ಖರ್ಚಿನಲ್ಲಿ ಒದಗಿಸಿಕೊಟ್ಟೆವು. ವಾದ ವಿವಾದಗಳು ನಡೆದುವು. ಎಲ್ಲರೂ ನಿರೀಕ್ಷಿಸಿದ್ದಂತೆ, ನ್ಯಾಯಾಲಯ ನ್ಯಾಯ ನೀಡಿತು. ಜೊತೆಗಿದ್ದ ಕೆಲವರು ಆರೋಪ ಮುಕ್ತರಾದರೆ, ಈ ದಾಳಿಗಳ ರೂವಾರಿಗಳಾದ ಅಫ್ಜಲ್, ಕಸಬ್‌ರಿಗೆ ಮರಣದಂಡನೆಯನ್ನು ನ್ಯಾಯಾಲಯ ಘೋಷಿಸಿತು. ಈಗ ಕಸಬ್ ಕಾನೂನು ಸಮರ ಮುಂದುವರಿಸಿದ್ದರೆ, ಅಫ್ಜಲ್ ದಯಾ ಭಿಕ್ಷೆಯನ್ನುಕೇಳಿಕೊಂಡು, ಕೆಲವು ವರ್ಷಗಳಿಂದ ಜೈಲಿನಲ್ಲಿಯೇ ಇದ್ದಾನೆ. ಅಫ್ಜಲ್‌ನ ಕಥೆ ಏನು ಎಂಬುದಕ್ಕೆ ಯಾವ ಸರಕಾರವೂ ಸ್ಪಷ್ಟ ಉತ್ತರ ನೀಡುತ್ತಿಲ್ಲ. ಎಲ್ಲರೂ ತಮ್ಮ ತಮ್ಮ ‘ರಾಜಕೀಯ’ ಲೆಕ್ಕಾಚಾರದಲ್ಲಿ ಸಿಗಬಹುದಾದ ಲಾಭಕ್ಕಾಗಿ ಕಾದು ಕುಳಿತಿದ್ದಾರೆ.
ಹಲವು ಸಾವಿಗೆ ಕಾರಣರಾದ ಉಗ್ರರಾದ ಅಫ್ಜಲ್ ಮತ್ತು ಕಸಬ್‌ರ ‘ರಕ್ಷಣೆ’ಗಾಗಿ ನಮ್ಮ ಸರಕಾರಗಳು ಕೋಟಿ ಕೋಟಿ ವ್ಯಯಿಸುತ್ತಿವೆ. ಮತ್ತೊಂದರ್ಥದಲ್ಲಿ ನಮ್ಮ ಮೇಲೆ, ನಮ್ಮ ಸ್ವಾಭಿಮಾನದ ಮೇಲೆ ಮತ್ತು ತೀರಾ ನಮ್ಮ ಮಾತ್ರಭೂಮಿಯ ಮೇಲೆ, ದಾಳಿಯ ಮೂಲಕ ಅಕ್ಷಮ್ಯ ಅಪರಾಧವನ್ನು ಮಾಡಿದ ಈ ಉಗ್ರರನ್ನು ನಾವು ‘ರಕ್ಷಿ’ಸುತ್ತಿದ್ದೇವೆ. ಮತ್ತಷ್ಟು ಓದು 
ಬ್ಲಾಗು ಕದಿಯುವ ಪತ್ರಿಕೆಗಳಿವೆ ಎಚ್ಚರ…!
– ನಿಲುಮೆ
ಇಂತದ್ದೊಂದು ತಲೆಬರಹ ಕೊಡುವುದೇ ಅಷ್ಟು ಚಂದ ಕಾಣುತ್ತಿಲ್ಲ,ಆದರೇನು ಮಾಡುವುದು ನಡೆದ ವಿಷಯವನ್ನ ಹೇಳ ಹೊರಟಾಗ ಹೀಗೆ ಆಗುತ್ತದೆ. ಕಳೆದ ತಿಂಗಳ ೨೭ರಂದು ಅರೆಹೊಳೆ ಸದಾಶಿವ ರಾವ್ ಅವರ ’‘ಸತ್ಯ ಸಾಯಿ’ ಮತ್ತು ‘ಸತ್ಯ ಸಾಯಿಸುವ’ ಮಾಧ್ಯಮಗಳು’ ಲೇಖನ ಹಾಗೆ ೨೫ರಂದು ರಶ್ಮಿ ಕಾಸರಗೋಡು ಅವರ ’‘ಎಂಡೋ ನಿಷೇಧಿಸಿ’ – ಶರದ್ ಪವಾರ್ ಗೊಂದು ಬಹಿರಂಗ ಪತ್ರ’ ಅನ್ನುವ ಲೇಖನವನ್ನ ನಿಲುಮೆಯ ಓದುಗರೆಲ್ಲ ನೋಡಿಯೆ ಇರುತ್ತೀರಿ. ಕಳೆದ ೨೮ರಂದು ’ಕರಾವಳಿ’ಯ ಪತ್ರಿಕೆಯೊಂದು ಏಕಾಏಕಿ ಲೇಖಕ/ನಿಲುಮೆಯ ಅನುಮತಿಯಿಲ್ಲದೆ ಈ ಲೇಖನಗಳನ್ನ ಕದ್ದಿದ್ದು ಅಲ್ಲದೇ ಕಡೆ ಪಕ್ಷ ಕೃಪೆ ಅಂತಲೂ ಹಾಕದೇ ತನ್ನ ಪತ್ರಿಕೆಯಲ್ಲಿ ಪ್ರಕಟಿಸಿ ’ಕರಾವಳಿ’ಯ ಜನರಿಗೆ ಹಂಚಿದೆ.(ಆ ಪತ್ರಿಕೆಯ ಹೆಸರಿಗೆ ನಮ್ಮಿಂದ ಸ್ವಲ್ಪವು ಧಕ್ಕೆ ಬಾರದಿರಲಿ ಅನ್ನುವ ಏಕೈಕ ಉದ್ದೇಶದಿಂದ ಆ ಪತ್ರಿಕೆಯ ಹೆಸರನ್ನ ನೇರವಾಗಿ ಬರೆಯುತ್ತಿಲ್ಲ).
ಒಸಾಮಾ – ಒಬಾಮಾ…!
– ಡಾ.ಅಜಕ್ಕಳ ಗಿರೀಶ್ ಭಟ್
ಅಂತೂ ಅಮೆರಿಕ ಒಸಾಮಾನನ್ನು ಕೊಂದಿದೆ ಅನ್ನುವುದನ್ನು ಅದು ಅಧಿಕೃತವಾಗಿ ಘೋಷಿಸಿದೆ. ಹೀಗೆ ಕೊಲ್ಲುವುದು ಅಮೆರಿಕಕ್ಕೆ ಏನೂ ಕಷ್ಟದ ಸಂಗತಿಯಲ್ಲ. ಅದು ಅದನ್ನು ದಕ್ಕಿಸಿಕೊಳ್ಳಬಲ್ಲುದು. ಆದರೆ ಹಲವು ಪ್ರಶ್ನೆಗಳು ಎಲ್ಲರ ಮನಸ್ಸಲ್ಲೂ ಏಳುವುದು ಸಹಜ. ಕೆಲದಿನಗಳಾದ ನಂತರ ಆ ಪ್ರಶ್ನೆಗಳನ್ನು ಎಲ್ಲರೂ ಮರೆಯುತ್ತಾರೆ ಅನ್ನೋದು ಕೂಡ ನಮಗೆಲ್ಲ ಗೊತ್ತು.ನಾವು ಕೂಡ ಮರೀತೇವೆ.ಹಾಗೆ ಮರೆಯುವುದು ನಮ್ಮ ಮಾನಸಿಕ ಆರೋಗ್ಯಕ್ಕೆ ಅತ್ಯಂತ ಮುಖ್ಯ.ಆದರೂ ಈಗ ಮನಸಲ್ಲಿ ಬಂದ ಆಲೋಚನೆಗಳಲ್ಲಿ ಕೆಲವನ್ನು ಮರುನೆನೆದುಕೊಳ್ಳುತ್ತೇನೆ.ಇವು ನನ್ನ ಮನಸಲ್ಲಿ ಮಾತ್ರ ಬಂದ ಪ್ರಶ್ನೆಗಳಲ್ಲವಾದ್ದರಿಂದ ಈ ಪ್ರಶ್ನೆಗಳ ಬಗ್ಗೆ ನಾನು ಯಾವುದೇ ಕಾಪಿರೈಟ್ ಕ್ಲೈಮ್ ಮಾಡುವುದಿಲ್ಲ!!!
ನೋಡಿ,ಇದು ಅನ್ಯಾಯವಲ್ಲವೇ? ವ್ಯಕ್ತಿಯನ್ನು ವಿಚಾರಣೆಯಿಲ್ಲದೆ ಕೊಲ್ಲುವುದು ನ್ಯಾಯವೇ?
ಆಧುನಿಕ ನ್ಯಾಯಶಾಸ್ತ್ರದಲ್ಲಿ ಎಲ್ಲಾದರೂ ವಿಚಾರಣೆಯಿಲ್ಲದೆ ಹೀಗೆ ಶಿಕ್ಷೆ ನೀಡುವುದನ್ನು ಸಮರ್ಥಿಸಲಾಗಿದೆಯೇ? ಲಾಡೆನ್ ಗೆ ಫೇರ್ ಟ್ರಯಲ್ ನೀಡಲಾಗಿಲ್ಲ. ಅವನನ್ನು ಯಾವ ಕೋರ್ಟಿನಲ್ಲಿ ವಿಚಾರಣೆ ಮಾಡಲಾಗಿದೆ? ತಾನು ಕೊಲೆ ಮಾಡಿದ್ದೇನೆ ಅಂತ ಒಬ್ಬ ವ್ಯಕ್ತಿ ಹೇಳಿದ ಕೂಡಲೇ ಯಾವ ಕೋರ್ಟು ಕೂಡ ವಿಚಾರಣೆಯಿಲ್ಲದೆ ಆ ವ್ಯಕ್ತಿಯನ್ನು ಗಲ್ಲಿಗೆ ಹಾಕುವುದಿಲ್ಲ. ಹಾಗಿರುವಾಗ ,ಅಮೆರಿಕವಿರಬಹುದು ಅಥವಾ ಅದರಪ್ಪನಿರಬಹುದು, ಕಾನೂನನ್ನು ಕೈಗೆ ತೆಗೆದುಕೊಳ್ಳುವುದೆಂದರೇನು? ಓಯ್!! ಅಮ್ನೆಸ್ಟಿ ಇಂಟರ್ ನ್ಯಾಷನಲ್ ಅನ್ನುವ ಸಂಸ್ಥೆಯವರೇ!!!ಎಲ್ಲಿದ್ದೀರಿ? ಒಸಾಮಾನ ಮಾನವ ಹಕ್ಕಿಗೆ ಬೆಲೆ ಇಲ್ಲವೇ???
ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ
– ಚಾಮರಾಜ ಸವಡಿ
’ಬ್ಲಾಗ್‌ನಲ್ಲಿ ಬರೆಯುವವರು ಬರಹಗಾರರೇನಲ್ಲ’ ಅಂದ ನನ್ನ ಪತ್ರಕರ್ತ ಮಿತ್ರನೊಬ್ಬ.
ಹಾಗಾದರೆ, ಬರಹಗಾರರೆಂದರೆ ಯಾರು? ಅಂದೆ.
ಅವನ ಉತ್ತರ ಕೇಳಿ ನನಗೆ ದಿಗ್ಭ್ರಮೆಯಾಯಿತು. ನಂತರ ಮರುಕ ಹುಟ್ಟಿತು. ಆತನ ಪ್ರಕಾರ, ಪತ್ರಿಕೆಗಳಲ್ಲಿ ಬರೆಯುವವರು ಮಾತ್ರ ಬರಹಗಾರರು. ಉಳಿದವರೆಲ್ಲ ತಮ್ಮ ತೆವಲಿಗೆ ಬರೆಯುತ್ತಾರೆ. ಅದನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಅವಕ್ಕೆ ಮೌಲ್ಯವಿಲ್ಲ.
ಆತನ ಜೊತೆ ವಾದಿಸುವುದು ವ್ಯರ್ಥ ಅನಿಸಿ ಸುಮ್ಮನಾದೆ. ಆದರೆ, ಈ ವಿಷಯ ಪ್ರಸ್ತಾಪಿಸುವುದು ಉತ್ತಮ ಅನಿಸಿ ಇಲ್ಲಿ ಬರೆಯುತ್ತಿದ್ದೇನೆ.
ಹಿಂದೊಮ್ಮೆ ಇಂಥದೇ ವಿಷಯದ ಬಗ್ಗೆ ಓದಿದ್ದು ನೆನಪಾಯಿತು. ಟಿವಿ ದಾಂಗುಡಿಯಿಡುತ್ತಿದ್ದ ದಿನಗಳವು. ಟಿವಿ ತಾರೆಯರು ಸಿನಿಮಾ ತಾರೆಯರಂತೆ ಜನಪ್ರಿಯತೆ ಗಳಿಸುತ್ತಿದ್ದರು. ಆಗ ಕೆಲ ನಟ, ನಟಿಯರು ಮೇಲಿನ ಅಭಿಪ್ರಾಯವನ್ನೇ ಬಿಂಬಿಸುವಂಥ ಮಾತು ಹೇಳಿದ್ದರು: ಸಿನಿಮಾ ನಟನೆಯೇ ನಿಜವಾದ ನಟನೆ. ಟಿವಿ ನಟನೆಗೆ ಮೌಲ್ಯವಿಲ್ಲ.
ನಿಮಗೆ ದೇವರ ಅಸ್ಥಿತ್ವದಲ್ಲಿ ನಂಬಿಕೆ ಇದೆಯೇ?
– ಗೋವಿಂದ ರಾವ್
ವಿಜ್ಞಾನ ಮಾರ್ಗ, ವೈಜ್ಞಾನಿಕ ಮನೋಧರ್ಮ, ವೈಜ್ಞಾನಿಕತೆ ಮುಂತಾದ ವಿಷಯಗಳ ಕುರಿತು ನಾನು ಆಯೋಜಿಸುತ್ತಿದ್ದ ತರಬೇತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದವರು ಕೇಳುತ್ತಿದ್ದ ಸಾಮಾನ್ಯ ಪ್ರಶ್ನೆ ಇದು. ಅಂಥ ಸಂದರ್ಭಗಳಲ್ಲಿ ನಾನು ನೀಡುತ್ತಿದ್ದ ಸ್ಪಷ್ಟ ಉತ್ತರ ಇಂತಿರುತ್ತಿತ್ತು – ‘ಖಂಡಿತ ಇದೆ. ಆಧ್ಯಾತ್ಮಿಕತೆ ಮತ್ತು ವೈಜ್ಞಾನಿಕತೆ ಪರಸ್ಪರ ವೈರುಧ್ಯಗಳಲ್ಲ, ಪೂರಕಗಳು. ವೈಜ್ಞಾನಿಕತೆ ಕಂದಾಚರಗಳನ್ನೂ ಯಾಂತ್ರಿಕ ಮತೀಯ ಆಚರಣೆಗಳನ್ನೂ ವಿರೋಧಿಸುತ್ತದೆಯೇ ವಿನಾ ಪ್ರಾಮಾಣಿಕ ಸತ್ಯಾನ್ವೇಷಣೆಯನ್ನಲ್ಲ, ಪ್ರಾಮಾಣಿಕ ಸತ್ಯಾನ್ವೇಷಕರನ್ನಲ್ಲ. ವೈಜ್ಞಾನಿಕ ಮನೋಧರ್ಮದ ಪ್ರವರ್ತಕರು ಇಂದಿನ ‘ಸ್ವಘೋಷಿತ ಜಗದ್ಗುರುಗಳು’ ‘ಧರ್ಮ’ದ ಹೆಸರಿನಲ್ಲಿ ಪೋಷಿಸುತ್ತಿರುವ ಮೌಢ್ಯವನ್ನೂ ಕಂದಾಚರಣೆಗಳನ್ನೂ ಪ್ರದರ್ಶಿಸುತ್ತಿರುವ ‘ಪವಾಡ’ಗಳನ್ನೂ ವಿರೋಧಿಸುತ್ತಿದ್ದಾರೆಯೇ ವಿನಾ ರಾಮಕೃಷ್ಣ ಪರಮಹಂಸರ, ಸ್ವಾಮಿ ವಿವೇಕಾನಂದರ, ಗೌತಮಬುದ್ಧನ, ಬಸವಣ್ಣನವರ ಆಧ್ಯಾತ್ಮಿಕ ಚಿಂತನೆಗಳನ್ನಲ್ಲ.’
ನಾನು ನಂಬಿರುವ ‘ದೇವರು’ ಯಾವುದು? (ಗಮನಿಸಿ: ಯಾರು? ಅಲ್ಲ). ಹಾಲಿ ಅಸ್ಥಿತ್ವದಲ್ಲಿ ಇರುವ ವಿಶ್ವ ಯಾವುದರಿಂದ ಮೂಡಿ ಬಂದಿತೋ ಅದೇ ನಾನು ನಂಬುವ ‘ದೇವರು’. ನಾನು ನೋಡದೇ ಇದ್ದರೂ ಇದೆಯೆಯೆಂದು ನಂಬಿರುವ ‘ದೇವರ’ ಕಿರು ಪರಿಚಯ ಈಗ ಮಾಡಿಕೊಡುತ್ತೇನೆ. ಈ ದೇವರ ವೈಜ್ಞಾನಿಕ ಹೆಸರು ‘ವಿಚಿತ್ರತೆ’. ‘ವೈಚಿತ್ರ್ಯ’ ಎಂದು ಕರೆದರೂ ಆದೀತು. ‘Singularity’ ಎಂಬ ಇಂಗ್ಲಿಷ್ ಪದದ ಭಾಷಾಂತರ ಇದು (ನೋಡಿ: ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್-ಕನ್ನಡ ನಿಘಂಟು). ಈ ದೇವರನ್ನು ಆವಿಷ್ಕರಿಸಿದವರು ವಿಶ್ವವಿಜ್ಞಾನಿಗಳು (Cosmologists).
ಬಡ ಮಕ್ಕಳ ವಿಧ್ಯಾಭ್ಯಾಸಕ್ಕೆಸಹಾಯ ಮಾಡಿ
-ನಾಗರಾಜ್ ಎಲ್ಲರಿಗೂ ನಮಸ್ಕಾರ, ಇಂಡಿಯಾ ಸುಧಾರ್ ಕರ್ನಾಟಕ ರಾಜ್ಯದಲ್ಲಿ ಚಿಕ್ಕಬಳ್ಳಾಪುರ, ಚಿತ್ರದುರ್ಗ, ತುಮಕೂರು, ಮಧುಗಿರಿ ಮತ್ತು ಕೋಲಾರ ಜಿಲ್ಲೆಯಲ್ಲಿ ಸುಮಾರು 60 ಸರ್ಕಾರಿ ಶಾಲೆಗಳಲ್ಲಿ ಸುಮಾರು 9000 ವಿಧ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ, ಪೆನ್ನ್, ಪೆನ್ಸಿಲ್, ಜಾಮಿಟ್ರಿ ಬಾಕ್ಸ್ ಇತ್ಯಾದಿ ಸಾಮಾಗ್ರಿಗಳನ್ನು ಈ ಶೈಕ್ಷಣಿಕ ವರ್ಷದಲ್ಲಿ ನೀಡುತ್ತಿದೆ.
ಕುರುಕ್ಷೇತ್ರದ ಯುದ್ಧಕ್ಕೆ ಕೃಷ್ಣನೇ ಸರಿ ಅಣ್ಣಾ !
– ರಾಕೇಶ್ ಶೆಟ್ಟಿ
ಕುಂಭಕರ್ಣ ನಿದ್ದೆಯಿಂದ ಎದ್ದ ಭಾರತವನ್ನ ಮತ್ತೆ ನಿದ್ದೆಗೆ ದೂಡಲಾಗುತ್ತಿದೆಯಾ? ಇಂತದ್ದೊಂದು ಪ್ರಶ್ನೆ ಕಾಡಲಾರಂಭಿಸಿದೆ.ಕೆಲವೆ ದಿನದ ಹಿಂದೆ ಅಣ್ಣಾ ಹಜ಼ಾರೆಯವರ ಉಪವಾಸ ಸತ್ಯಾಗ್ರಹದಿಂದ ನಿದ್ದೆಯಲ್ಲಿದ್ದ ಜನ (ಎಲ್ಲ ಜನ ಅಂತೇಳಲು ಸಾಧ್ಯವಿಲ್ಲ) ಎದ್ದು ಬಂದು, ಕಡೆಗೆ ಸೋನಿಯಾ ಮೇಡಂ ಅವರ ಯುಪಿಎ ಸರ್ಕಾರ ಅಣ್ಣನ ಮುಂದೆ ಮಂಡಿಯೂರಿ ಕುಳಿತಾಗಲೇ, ‘ಪಿಕ್ಚರ್ ಅಭಿ ಬಾಕಿ ಹೈ ಮೇರಿ ದೋಸ್ತ್’ ಅಂತ ಬಹುಷಃ ಬಹುತೇಕರಿಗೆ ಅನ್ನಿಸಿತ್ತು.ಅದನ್ನ ನಿಜ ಮಾಡಲೆಂಬಂತೆ ಜನಲೋಕಪಾಲ ಸಮಿತಿ ರಚನೆಯಾದ ಮರುದಿನವೇ ಕೇಂದ್ರ ಮಂತ್ರಿ ಕಪಿಲ್ ಸಿಬಲ್, ಖುದ್ದು ಸಮಿತಿಯ ಸದಸ್ಯರಾಗಿದ್ದೂ, ಸಮಿತಿಯ ಬಗ್ಗೆ ಕೊಂಕು ನುಡಿದು,ಕಡೆಗೆ ನಂಬಿಕೆಯಿಲ್ಲದಿದ್ದರೆ ತೊಲಗಿ ಅಂತ ಅಣ್ಣಾ ಗದರಿದ್ಮೇಲೆ ಯಥಾಪ್ರಕಾರ ರಾಜಕಾರಣಿಗಳ ಹೇಳಿಕೆಯಂತೆ ’ತಪ್ಪಾಗಿ ಅರ್ಥೈಸಲಾಗಿದೆ; ಅಂತೇಳಿ ತೇಪೆ ಹಾಕಿದ್ರು.ಮೊಯ್ಲಿ,ಮನೀಶ್ ತಿವಾರಿಯವ್ರು ಕೊಂಕಿಸಿದ್ದಾಯ್ತು.
ಬಹುಷಃ ಗಾಂಧೀಜಿ,ಜೆಪಿ ನಂತರ ಈ ಮಟ್ಟಕ್ಕೆ ಜನರನ್ನ ಸೆಳೆದಿದ್ದು ಅಣ್ಣಾ ಹಜ಼ಾರೆಯವರೇ ಇರಬೇಕು.ಅವರ ಈ ಪರಿಯ ಜನಪ್ರಿಯತೆ ಪುಡಿವೋಟಿಗಾಗಿ ದೇಶವನ್ನೆ ಬೇಕಾದರು ಮಾರಬಲ್ಲ (ಪುರುಲಿಯಾ ಶಸ್ತ್ರಾಸ್ತ್ರ ಕರ್ಮಕಾಂಡಕ್ಕಿಂತ ದೇಶವನ್ನ ಅಡ ಇಡುವ ಉದಾಹರಣೆ ಬೇಕಾ?) ಹಗಲು ವೇಷದ ರಾಜಕಾರಣಿಗಳ ಕಣ್ಣು ಕೆಂಪಗಾಗುವಂತೆ ಮಾಡಿದ್ದು ಸುಳ್ಳಲ್ಲ.ಸಾಲಾಗಿ ಎಲ್ಲ ಅಣ್ಣನ ವಿರುದ್ಧ ಸದ್ದಿಲ್ಲದೆ ಕೆಲಸ ಶುರು ಹಚ್ಚಿಕೊಂಡರು…!
“ಡೋಂಟ್ ಕೇರ್” ಕಾಲದಲ್ಲಿ “ವೀ ಕೇರ್”ಎಂಬ ವಿಸ್ಮಯ
– ವಿಜಯ್ ಹೆರಗು
ಈವತ್ತಿನ ದಿನಮಾನದಲ್ಲಿ ಸಾಮಾನ್ಯವಾಗಿ ಜನರು ತಮ್ಮದೇ ಆದ ಸಮಸ್ಯೆಗಳಲ್ಲಿ ನೊಂದು-ಬೆಂದು ಇತರರೆಡೆಗೆ ದಿವ್ಯ ಔದಾಸೀನ್ಯವನ್ನು ತಳೆಯುವುದು ಎಲ್ಲರೂ ಬಲ್ಲ ವಿಷಯವೇ ಸರಿ. ನಾವು ಕಛೇರಿಗೆ ಅಥವಾ ಬೇರೆಲ್ಲಾದರೂ ಹೋಗುವಾಗ ಯಾರಾದರೂ ಅಪರಿಚಿತರು ತೊಂದರೆಯಲ್ಲಿ ಸಿಲುಕಿದ್ದಾಗ ಅವರಿಗೆ ಸಹಾಯಹಸ್ತ ಚಾಚುವ ಬದಲು “ನಮಗೇಕೆ ಬೇಕು ಅವರಿವರ ಉಸಾಬರಿ” ಎಂದು ಕಂಡೂ ಕಾಣದ ಹಾಗೆ ಹೊರಡುತ್ತೇವೆ. ತೊಂದರೆಯಲ್ಲಿದ್ದಂತೆ ನಟಿಸಿ ಜನರನ್ನು ದೋಚುವ ಪುಂಡರ, ದುಷ್ಕರ್ಮಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿರುವುದೂ ಈ ಬೆಳವಣಿಗೆಗೆ ಕಾರಣೀಭೂತವಾಗಿದೆ ಎಂಬುದು ಅತಿಶಯೋಕ್ತಿಯೇನಲ್ಲ.
ಆದರೆ ಇಂದಿಗೂ ಮಾನವೀಯ ಮುಖವನ್ನು ಹೊಂದಿ ಸಮಾಜಸೇವೆಯನ್ನೇ ಧ್ಯೇಯವನ್ನಾಗಿಸಿಕೊಂಡ ಹಲವಾರು N G O ಗಳನ್ನು ನಾವು ಕಾಣಬಹುದು.
ಅಂತಹದ್ದೇ ಒಂದು ತಾಜಾ ಉದಾಹರಣೆ “ವೀ ಕೇರ್ ಚಾರಿಟೀಸ್ (ರಿ)”.
ಮತ್ತಷ್ಟು ಓದು 
ಭಾರತದಲ್ಲಿ ಕನ್ನಡನೂ ಇದೆ ಹಿಂದಿ ಮಾತ್ರ ಅಲ್ಲ
ಸಂಪಾದಕೀಯ ಅನ್ನೋ ಮೊಟ್ಟೆಯ ಮೇಲೆ ಒಂದು ಪ್ರೀತಿಯ ಕುಟುಕು…
– ಮಹೇಶ್ ಪ್ರಸಾದ್ ನೀರ್ಕಜೆ
ಸಂಪಾದಕೀಯದಲ್ಲಿ ಪ್ರಕಟವಾದ ಬ್ಲಾಗ್ ಬರಹಕ್ಕೆ ಪ್ರತಿಯಾಗಿ ನನ್ನ ಅನಿಸಿಕೆ ಇದು.
ಸಾಯಿ ಬಾಬಾರ ಸುತ್ತ ಇರುವ ಪವಾಡಗಳ ಬಗೆಗಿನ ವಿವಾದಗಳ ಬಗ್ಗೆ ಸಂಪಾದಕೀಯ ಈ ಹಿಂದೆ ಒಂದೆರಡು ಲೇಖನಗಳಲ್ಲಿ ಬರೆದಿತ್ತು (ಅದರಲ್ಲಿ ಒಂದು ಸನ್ಮಾರ್ಗ ಎನ್ನುವ ಪತ್ರಿಕೆಯಲ್ಲಿ ಪ್ರಕಟವಾದ ಸಂಪಾದಕೀಯ ಬರಹ). ಅವುಗಳಲ್ಲೊಂದು ಲೇಖನಕ್ಕೆ ಬಂದ ಪ್ರತಿಕ್ರಿಯೆಯೊಂದಕ್ಕೆ ಪ್ರತಿಯಾಗಿ ಸಂಪಾದಕೀಯ ಬರೆದ ಸ್ಪಷ್ಟೀಕರಣ ರೂಪದ ಬರಹವೇ ನಾನು ಮೇಲೆ ನೀಡಿದ ಬ್ಲಾಗ್ ಬರಹ. ಈ ಬ್ಲಾಗ್ ಬರಹದ ಸಾರಾಂಶ ಏನೆಂದರೆ ಸಾಯಿ ಬಾಬಾ ಮಾಡಿದ ಸಮಾಜ ಮುಖೀ ಕೆಲಸಗಳ ಬಗ್ಗೆ ಮೆಚ್ಚುಗೆಯಿದ್ದರೂ ಮೂಲತಹ ಬಾಬಾ ನಡೆದ ದಾರಿ ಪವಾಡಗಳನ್ನೊಳಗೊಂಡ ದಾರಿಯಾಗಿದ್ದು ಅದು ಜನರನ್ನು ದಿಕ್ಕುತಪ್ಪಿಸುವ, ಮೌಢ್ಯತೆಗೆ ನೂಕುವ ಮೋಸದ, ಸುಳ್ಳಿನ ದಾರಿಯಾಗಿದೆ, ಆದ್ದರಿಂದ ನಮಗೆ ಅಂತಹ ಸುಳ್ಳಿನ ದಾರಿ ಬೇಕೋ ಅಥವಾ ಬುಧ್ಧ ಹಾಕಿಕೊಟ್ಟ ಸತ್ಯದ ದಾರಿ ಬೇಕೋ ಎಂಬ ಜಿಜ್ಞಾಸೆ. ಕೊನೆಯಲ್ಲಿ ಸಂಪಾದಕೀಯ ಹೀಗೆ ಹೇಳುತ್ತದೆ – “ಬುದ್ಧನ ಸತ್ಯ ಮಾರ್ಗವೇ ನಿಜವಾದ ಬದುಕಿನ ತಳಪಾಯ. ಅದರ ಮೇಲೇ ನಮ್ಮ ಬದುಕು ಕಟ್ಟಿಕೊಳ್ಳುವಂತಾಗಬೇಕು” ಮತ್ತು “ನಾವು ಸತ್ಯದ ಮಾರ್ಗದಲ್ಲಿ ಊರ್ಧ್ವಮುಖಿಗಳಾಗಬೇಕೇ ಹೊರತು ಸುಳ್ಳಿನ ಮಾರ್ಗದಲ್ಲಿ ಅಧೋಮುಖಿಗಳಾಗಬಾರದು ಅಲ್ಲವೇ?”. ಇದರ ಬಗ್ಗೆ ಒಂದು ಚಿಂತನೆ ನಡೆಸುವ ಉದ್ದೇಶ ಈ ಲೇಖನದ್ದು.




-ನಾಗರಾಜ್
ಎಲ್ಲರಿಗೂ ನಮಸ್ಕಾರ,

