ಮೊದಲ ಬಾನಯಾನ : ಚಳಿಯಲ್ಲೂ ಬೆವೆತಿತ್ತು ಮನಸ್ಸು..!
– ಪ್ರಶಾಂತ್ ಯಳವಾರಮಠ
ನನ್ನ ಮುಂದಿನ ಪುಟ್ಟ ಸ್ಕ್ರೀನ್ ಮೇಲೆ ಚಲಿಸ್ತಾ ಇರೋ ವೇಗ ೭೫೦ ಮೈಲ್ಸ್/ಗಂಟೆಗೆ ಅಂತ ಮತ್ತು ಹೊರಗಡೆಯ ತಾಪಮಾನ -೬೩’ಸೆ ಅಂತ ತೋರಿಸ್ತಾ ಇದೆ !!! ನನ್ನ ಹೆಂಡತಿ ಹೇಳಿದಹಾಗೆ ಟೇಕ್ ಆಫ್ ಆಗುವಾಗ ಕಣ್ಣು ಮುಚ್ಚಿಕೊಂಡು ಕುಳಿತಿದ್ದ ನಾನು ಕಣ್ಬಿಟ್ಟಾಗ ಕಂಡ ಮಾಹಿತಿ ಇದು! ಏರ್ ಫ್ರಾನ್ಸ್ ವಿಮಾನದಲ್ಲಿ ಅದೂ ಮೊಟ್ಟಮೊದಲಬಾರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಾ ಇರೋ ನನ್ನ ಹುಚ್ಚು ಮನಸ್ಸಿನಲ್ಲಿ ಸಾವಿರಾರು ಕೆಟ್ಟ ಯೋಚನೆಗಳು ಬಂದು ಮನಸ್ಸು ತನ್ನಷ್ಟಕ್ಕೆ ತಾನೆ ಭಯಬೀತಗೊಂಡಿತ್ತು. ಇದರಿಂದ ಅತ್ತಿಂದಿತ್ತ ನೋಡುತ್ತಾ ಪಕ್ಕದಲ್ಲಿ ಯಾವುದೇ ಫೀಲಿಂಗ್ಸ್ ಗಳು ಇರದೇ ಕುಳಿತುಕೊಂಡಿರುವ ಅಜ್ಜಿಯೊಬ್ಬಳನ್ನು ನೋಡಿ ಧೈರ್ಯತಂದುಕೊಳ್ಳಲು ಪ್ರಯತ್ನಿಸಿದೆ, ನಾನು ಮೊದಲ ಬಾರಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದೇನೆ ಅದಕ್ಕೆ ಹೀಗೆಲ್ಲ ಅನಿಸುತ್ತಾ ಇದೆ ಅಂಥ ನನ್ನಷ್ಟಕ್ಕೆ ನಾನೆ ಗೊಂದಲಗಳಿಂದ ಕೂಡಿದ ಮನಸ್ಸಿಗೆ ಸಮಾಧಾನ ಹೇಳುತ್ತಾ ಇದ್ದೆ.
ಇವುಗಳ ಮದ್ದೆ ತಮ್ಮ ನಾಜೂಕಾದ ನಡಿಗೆಗಳಿಂದ ಮುಖದಲ್ಲಿ ತುಂಬು ಮುಗುಳ್ನಗೆಗಳನ್ನು ತುಂಬಿಕೊಂಡ ಗಗನಸಖಿಯರು ಅತ್ತಿಂದಿತ್ತ ಓಡಾಡ್ತಾ ಇದ್ದಾರೆ ಎಷ್ಟೋ ಜನ ಕೆಂಪು ಮುಖಗಳ ವಿದೇಶಿಯರು ತಮ್ಮ ಮಾತೃಭಾಷೆ ಫ್ರೆಂಚ್ ನಲ್ಲಿ ಮಾತಾಡುತ್ತ, ನಗುತ್ತಾ ನಿರ್ಭೀತರಾಗಿ ಹರಟುತ್ತಿದ್ದಾರೆ. ವಿಮಾನದಲ್ಲಿ ಆಗ್ತಾ ಇರೋ ಈ ಎಲ್ಲ ಆಗುಹೋಗುಗಳಿಂದ ನನಗು ಸ್ವಲ್ಪ ಸಮಾಧಾನವಾಗಿ ಮನಸ್ಸು ಹಗುರವಾಯಿತು.
ಜಲಿಯನ್ ವಾಲಾಬಾಗ್ ಒಂದು ಘೋರ ನೆನೆಪು
– ಜಯಂತ್ ರಾಮಾಚಾರ್
ಏಪ್ರಿಲ್ ೧೩, ಇಂದಿಗೆ ಸರಿಯಾಗಿ ೯೨ ವರ್ಷಗಳು ಸಂದಿವೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದು. ೧೯೧೯, ಏಪ್ರಿಲ್ ೧೩ ರಂದು ಸುಮಾರು ೨ ಸಾವಿರ ಮಂದಿ ಹಿಂದೂ, ಮುಸ್ಲಿಂ, ಸಿಖ್ ಬಾಂಧವರ ಮಾರಣ ಹೋಮಕ್ಕೆ ಸಾಕ್ಷಿಯಾಯಿತು ಈ ಜಲಿಯನ್ ವಾಲಾಬಾಗ್. ಜಲಿಯನ್ ವಾಲಾಬಾಗ್ ಒಂದು ಚಚ್ಚೌಕವಾದ ಪ್ರದೇಶ, ಇದಕ್ಕೆ ಹೋಗಿಬರಲು ಇದ್ದ ದಾರಿಗಳು ವಿರಳ. ಎತ್ತರೆತ್ತರದ ಗೋಡೆಗಳು, ಮಧ್ಯದಲ್ಲಿ ಬಾವಿ, ಮನೆ ಕಟ್ಟಲು ಬಳಸುತ್ತಿದ್ದ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟಿದ್ದ ಜಾಗ.
ಏಪ್ರಿಲ್ ೧೩, ೧೯೧೯ ಅಂದು ವೈಶಾಖಿಯ ಸಂಭ್ರಮ. ವೈಶಾಖಿಯ ಸಂಭ್ರಮವೆಂದರೆ ಕಣಜ ತುಂಬಿಸುವ, ಸುಗ್ಗಿಯ ಸಂಭ್ರಮ. ಆದರೆ ಪ್ರತಿ ವೈಶಾಖಿಗೂ ೧೯೧೯ರ ವೈಶಾಖಿಗೂ ವ್ಯತ್ಯಾಸವಿತ್ತು. ಏಕೆಂದರೆ ಅದೇ ಸಮಯದಲ್ಲಿ ಗಾಂಧಿಜಿ ಅವರನ್ನು ಬ್ರಿಟಿಶ್ ಸರ್ಕಾರ ಬಂಧಿಸಿತ್ತು. ಅದರ ಪ್ರತೀಕಾರ ತೀರಿಸಿಕೊಳ್ಳಲು ಜನ ಹಾತೊರೆಯುತ್ತಿದ್ದರು. ಎಂದಿನಂತೆ ಹೊರವಲಯದಲ್ಲಿ ಸೇರದ ಜನ ಅಂದು ಜಲಿಯನ್ ವಾಲಾಬಾಗ್ ನಲ್ಲಿ ಸುಮಾರು ೨೦ ಸಾವಿರ ಮಂದಿ ನೆರೆದಿದ್ದರು. ಸುತ್ತಲೂ ಜನ ಮಧ್ಯದಲ್ಲಿ ವೇದಿಕೆಯಿದ್ದು ಅದರ ಮೇಲೆ ಹಂಸರಾಜ್ ಎಂಬುವವರು ಭಾಷಣ ಶುರು ಮಾಡಿದ್ದರು. ಭಾಷಣ ಶುರುವಾಗಿ ಹೆಚ್ಚು ಸಮಯವೇನು ಆಗಿರಲಿಲ್ಲ. ಅಷ್ಟರಲ್ಲಿ ಅಲ್ಲಿಗೆ ತನ್ನ ಸೈನ್ಯದೊಂದಿಗೆ ಆಗಮಿಸಿದ ಜನರಲ್ ಡಯರ್ ನೇರವಾಗಿ ಗುಂಡಿನ ಸುರಿಮಳೆಗೈಯ್ಯಲು ಆದೇಶವಿತ್ತ. ಸಂಜೆ ಐದೂವರೆಗೆ ಶುರುವಾದ ಈ ಹತ್ಯಾಕಾಂಡ ಕೆಲವೇ ಕೆಲವು ನಿಮಿಷಗಳಲ್ಲಿ ಸುಮಾರು ಎರಡು ಸಾವಿರ ಮಂದಿಯ ಪ್ರಾಣ ತೆಗೆದು ಹಾಕಿತ್ತು.
ರಾಷ್ಟ್ರೀಯ ಪಕ್ಷಗಳ ಒಡೆದು ಆಳುವ ನೀತಿ…!
– ಚೇತನ್ ಜೀರಾಳ್
ಕಳೆದ ಎರಡು ವಾರಗಳಲ್ಲಿ ನಡೆದಿರುವ ಸುದ್ದಿಗಳ ಬಗ್ಗೆ ನಿಮ್ಮ ಗಮನ ಹರಿಸಲು ಇಷ್ಟಪಡುತ್ತೇನೆ. ಪತ್ರಿಕೆಗಳಲ್ಲಿ ಕೇವಲ ಸುದ್ದಿ ಎನ್ನುವಂತೆ ಇವುಗಳನ್ನು ಬಿತ್ತರಿಸಲಾಯಿತು, ಆದರೆ ಇವುಗಳ ಬಗ್ಗೆ ಎಲ್ಲೂ ಚರ್ಚೆಯಾಗಿಲ್ಲ.
ಮರುಚುನಾವಣೆ ಹಾಗೂ ತೆಲುಗಿನಲ್ಲಿ ಭಾಷಣ:
ಮೊನ್ನೆ ನಡೆದ ಮರುಚುನಾವಣೆಯ ಪ್ರಚಾರಕ್ಕಾಗಿ ನಮ್ಮ ರಾಜ್ಯದ ರಾಷ್ಟ್ರೀಯ ಪಕ್ಷಗಳು ಭರ್ಜರಿ ಪ್ರಚಾರ ಕೈಗೊಂಡವು, ಅದಕ್ಕಾಗಿಯೇ ಹೊರರಾಜ್ಯದ ಚಲನಚಿತ್ರ ನಟ/ನಟಿಯರನ್ನು ಕರೆಸಿದ್ದವು. ಮತದಾರನನ್ನು ಓಲೈಸುವ ಭರದಲ್ಲಿ ನಮ್ಮ ರಾಜಕೀಯ ಪಕ್ಷಗಳು ಮಾಡುತ್ತಿರುವ ತಪ್ಪುಗಳು ಮಾತ್ರ ಬಹಳ ದೊಡ್ಡದಾಗಿವೆ. ಬಂಗಾರ ಪೇಟೆಯಲ್ಲಿ ನಡೆದ ಉಪಚುನಾವಣೆಗಾಗಿ ನಡೆಸಿದ ಪ್ರಚಾರದಲ್ಲಿ ಕಾಂಗ್ರೆಸ್ ಪಕ್ಷ ತೆಲಗು ಚಿತ್ರನಟ ಚಿರಂಜೀವಿಯನ್ನು ಬಳಸಿಕೊಂಡಿತ್ತು. ಅವರು ಸಹ ಭರ್ಜರಿಯಾಗಿ ತೆಲುಗಿನಲ್ಲಿ ಭಾಷಣ ಮಾಡಿ ಹೊರಟು ಹೋದರು. ಇದರಲ್ಲಿ ತಪ್ಪೇನು ಅಂತೀರಾ? ಮತದಾರನನ್ನು ಓಲೈಸುವ ಭರದಲ್ಲಿ ಕರ್ನಾಟಕದ ವಿವಿಧ ಭಾಷಿಕರಲ್ಲಿ ಒಡಕುಂಟು ಮಾಡಲಾಗುತ್ತಿದೆ. ಮೊನ್ನೆ ನಡೆದಿದ್ದು ಸಹ ಅದೇ, ಹಲವು ಶತಮಾನ ಅಥವಾ ಹಲವು ದಶಕಗಳಿಂದ ಇಲ್ಲಿ ನೆಲೆಸಿರುವ ತೆಲುಗು ಭಾಷಿಕರು ಕನ್ನಡದವರೇ ಆಗಿಹೋಗಿದ್ದಾರೆ. ಆದರೆ ನೀವು ತೆಲುಗರು ನೀವು ಕನ್ನಡಿಗರಲ್ಲಾ ಅಂತಾ ತೋರಿಸೋ ಪ್ರಯತ್ನಗಳೇ ಚಿರಂಜೀವಿ ಯಂತಹ ತೆಲುಗು ನಟರನ್ನು ಕರೆದುಕೊಂಡು ಬಂದು ಕರ್ನಾಟಕದಲ್ಲಿ ಭಾಷಣ ಮಾಡಿಸುವುದು. ಕರ್ನಾಟಕದ ಜನರನ್ನ ಓಲೈಸಲು ಆಂಧ್ರಪ್ರದೇಶದ ಕರಾವಳಿ ತೀರದ ಒಬ್ಬ ನಟ ಬಂದು ನೀವು ಕನ್ನಡಿಗರಲ್ಲಾ ಎಂದು ಸಂದೇಶ ನೀಡಿಸುವ ಕೆಲಸ ಮಾಡುತ್ತಿರುವ ಪಕ್ಷಗಳು ಮಾಡುತ್ತಿರುವುದಾದರು ಏನು ಅನ್ನೋದನ್ನ ತಾವೇ ಪ್ರಶ್ನಿಸಿಕೊಳ್ಳಲಿ.
ಅವರೆತ್ತರಕ್ಕೆ ಏರಲಾಗದಿದ್ದರೆ ತೆಪ್ಪಗಿರಿ…!
– ರಾಕೇಶ್ ಶೆಟ್ಟಿ
“ಇಂದಿನ ಪರಿಸ್ಥಿತಿಯಲ್ಲಿ ಮಹಾತ್ಮ ಗಾಂಧೀಜಿ ಅವರು ಇದ್ದಿದ್ದರೆ, ಅವರು ಕೂಡಾ ಭ್ರಷ್ಟರಾಗುತ್ತಿದ್ದರು. ರಾಜಕೀಯದಲ್ಲಿ ಉಳಿಯಬೇಕಾದರೆ ಭ್ರಷ್ಟರಾಗದೆ ಇರಲು ಸಾಧ್ಯವೇ ಇಲ್ಲ” ಇಂತ ಹೇಳಿಕೆ ಕೊಟ್ಟೊವ್ರು ಯಾರು ಅನ್ನೋದು ಎಲ್ರಿಗು ಗೊತ್ತಿದೆಯಲ್ವಾ? ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವ್ರು.ಒಂದ್ ಕಡೆ ದೇವೆಗೌಡ್ರು ಫೋಟೊ,ಇನ್ನೊಂದ್ ಕಡೆ ಇದೇ ಮಹಾತ್ಮನ ಫೋಟೊ ಹಾಕೊಂಡಿರೋ ಪಕ್ಷದ ರಾಜ್ಯಾಧ್ಯಕ್ಷರ ಬಾಯಿಯಲ್ಲಿ ಬಂದ ಮುತ್ತಿನಂತ ಮಾತುಗಳಿವು.
ಮುತ್ತುಗಳು ಬಿದ್ದಾಗ ಆರಿಸಿ ಮನೆಗ್ ತಗೊಂಡು ಹೋಗೊದು ರೂಢಿ,ಆದ್ರೆ ಕುಮಾರ ಸ್ವಾಮಿ ಅವ್ರ ಮುತ್ತನ್ನ ಹಿಡಿದು ಅವರಿಗೆ ಪೈಡ್ ಪೈಡ್ ಅಂತ ಎಲ್ಲ ಕಡೆಯಿಂದ ಬಾರಿಸುತಿದ್ದಾರೆ.ಬಾರಿಸದೆ ಬಿಡ್ಬೇಕಾ? ಒಂದು ಕಡೆ ಮಹಾತ್ಮರ ಹೋರಾಟದಿಂದ ಸ್ಪೂರ್ತಿ ಪಡೆದ ೭೬ ವರ್ಷದ ಅಣ್ಣಾ ಹಜಾರೆಯಂತವರು ಸತ್ತತಿಂಹರನ್ನ ಬಡಿದೆಬ್ಬಿಸಲು ಉಪವಾಸ ಕೂತರೆ,ಇನ್ನೊಂದು ಕಡೆ ಈ ಕುಮಾರಸ್ವಾಮಿ ಮಹಾತ್ಮರ ಬಗ್ಗೆ ಇಂತ ಮಾತನಾಡಲು ಹೊರಟಿದ್ದಾರೆ!
ಇನ್ನೊಂದು ಸಮರಕ್ಕೆ ಸಿದ್ಧರಾಗಿ…
-ಸಂಪತ್ ಕುಮಾರ್
ಅಣ್ಣ ಹಜಾರೆಯವರ ಉಪವಾಸವೇನೋ ಮುಗಿಯಿತು. ರಂಗೋಲೆಯ ಕೆಳಗೆ ನುಸುಳುವ ಬುದ್ಧಿ ಉಳ್ಳ ರಾಜಕಾರಣಿಗಳು ಎಂತಹ ಕಾನೂನು ತಯಾರಿಸುತ್ತರೋ ಕಾದುನೋಡಬೇಕು.
ಈಗಾಗಲೇ ಅಸ್ತಿತ್ವದಲ್ಲಿರುವ ಲೋಕಾಯುಕ್ತದಂತಹ ಸಂಸ್ಥೆಯಿಂದ ಆಗುತ್ತಿರುವ ಭ್ರಷ್ಟಾಚಾರಿಗಳ ಬೇಟೆ ಅವರಿಗೆ ಶಿಕ್ಷೆ ಕೊಡಿಸುವಲ್ಲಿ ವಿಫಲವಾಗಿರುವುದು ಸರ್ವವೇದ್ಯ. ಅಲ್ಲದೆ ಇಂತಹ ವಿಧೇಯಕ ಸಂಸತ್ತಿನಲ್ಲಿ ಅಂಗೀಕಾರಗೊಳ್ಳುವುದೂ ಅನುಮಾನ.ಇಂತಹ ಪರಿಸ್ತಿತಿಯಲ್ಲಿ ಇನ್ನೊದು ಹೋರಾಟದ ಅಗತ್ಯ ಇದೆ.
ಭಾರತದ ರಾಜಕಾರಣಿಗಳ ಕೋಟಿ ಕೋಟಿ ಕಪ್ಪು ಹಣ ಸ್ವಿಸ್ ಬ್ಯಾಂಕಿನಲ್ಲಿ ಕೊಳೆಯುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಈ ಹಣವನ್ನು ರಾಷ್ಟ್ರೀಯ ಸಂಪತ್ತೆಂದು ಘೋಷಿಸಿದರೆ ಭಾರತ ತನ್ನೆಲ್ಲ ಸಾಲದಿಂದ ಮುಕ್ತವಾಗಿ, ಹಣ ದುಬ್ಬರ, ಬಡತನ, ಮುಂತಾದ ತನ್ನೆಲ್ಲ ಕಷ್ಟ ಕೋಟಲೆಗಳಿಂದ ಹೊರಬರಲು ಸಾಧ್ಯ. ಇದಕ್ಕಾಗಿ ಅಣ್ಣ ಹಜಾರೆ ಅವರನ್ನು ಈ ಉದ್ದೇಶಕ್ಕಾಗಿ ಪುನಃ ಉಪವಾಸ ಕೂರಲು ಹೇಳುವುದು ಸ್ವಾರ್ಥ ಎನಿಸಬಹುದು. ಈ ವಿಚಾರವನ್ನೇ ತನ್ನ ಚುನಾವಣ ಪ್ರಾಣಾಳಿಕೆ ಮಾಡಿಕೊಂಡಿರುವ ಭಾ.ಜ.ಪ. ದಿಂದ ಇದನ್ನು ರಾಜಕೀಯಗೊಳಿಸಬಾರದು.
ಮತ್ತಷ್ಟು ಓದು 
“ತಾಯ್ನುಡಿಯಲ್ಲಿ ಕಲಿಕೆ” ಯಾಕೆ ಮಹತ್ವದ್ದು?
– ಪ್ರಿಯಾಂಕ್
ತಾಯ್ನುಡಿಯಲ್ಲಿ ಕಲಿಕೆ ಮಾಡಿ ಉಪಯೋಗ ಏನು? ಚಿಕ್ಕ ಮಕ್ಕಳು ಯಾವ ಭಾಷೆ ಬೇಕಿದ್ರೂ ಬೇಗ ಕಲಿತಾರಲ್ಲ, ಹಾಗಾಗಿ ಚಿಕ್ಕಂದಿಂದಲೇ ಇಂಗ್ಲೀಷಿನಲ್ಲಿ ಕಲಿಸಿಬಿಟ್ರೆ ಎಲ್ರಿಗೂ ಒಳ್ಳೇದಲ್ವ? ಇಂತಹ ಪ್ರಶ್ನೆಗಳು ಬಹಳಷ್ಟು ಜನರಲ್ಲಿ ಇರೋದನ್ನ ಕಾಣಬಹುದು.
ಸ್ವಾಮಿನಾಮಿಕ್ಸ್ ಹೆಸರಿನಡಿ ಅಂಕಣ ಬರೆಯುವ “ಸ್ವಾಮಿನಾಥನ್ ಐಯ್ಯರ್” ಅವರು, ತಮ್ಮ ಈ ಅಂಕಣದಲ್ಲಿ, ಮಕ್ಕಳಿಗೆ ಮೊದಲು ತಾಯ್ನುಡಿಯಲ್ಲಿ ಕಲಿಕೆಯಾಗಬೇಕಾದ್ದು ಯಾಕೆ ಮುಖ್ಯ ಎಂಬುದನ್ನು ಅಧ್ಯಯನದ ಉದಾಹರಣೆಗಳ ಜೊತೆಗೆ ತೋರಿಸಿದ್ದಾರೆ. ಅವರ ಅಂಕಣದ ಆಯ್ದ ಕೆಲವು ಅಂಶಗಳನ್ನು ಇಲ್ಲಿ (ಕನ್ನಡದಲ್ಲಿ) ಹಾಕಲಾಗಿದೆ.
* ಎರಡನೇ ತರಗತಿಯಲ್ಲಿರುವ ಮಕ್ಕಳು ಸರಾಗವಾಗಿ ಓದಲು ಕಲಿಯದಿದ್ದರೆ, ಅವರು ಬಹುಶ ಮುಂದೆಂದೂ ಚೆನ್ನಾಗಿ ಓದಲಾರರು. ಅವರು ಓದಿನಲ್ಲಿ ಹಿಂದೆ ಉಳಿಯುವ ಸಾಧ್ಯತೆಯೇ ಹೆಚ್ಚು.
ಈ ಹೋರಾಟ ಗೆಲ್ಲಲೇಬೇಕು…!
– ಬನವಾಸಿ ಬಳಗ
ಕಿಸನ್ ಬಾಬುರಾವ್ ಹಜಾರೆ ಎಂಬ ಹೆಸರಿನ ಆ ಹಿರಿಯರು ಇವತ್ತಿನಿಂದ ಭ್ರಷ್ಟಾಚಾರದ ವಿರುದ್ಧದ ಒಂದು ದೊಡ್ಡ ಹೋರಾಟಕ್ಕೆ ಮುನ್ನುಡಿ ಹಾಡಿದ್ದಾರೆ. ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ರೆಲೆಗನ್ ಸಿದ್ಧಿ ಎಂಬ ಹಳ್ಳಿಯನ್ನು ಮಾದರಿ ಹಳ್ಳಿಯಾಗಿ ರೂಪಿಸಿ, ತನ್ನಿಡೀ ಬದುಕನ್ನೇ ಸಮಾಜಕ್ಕಾಗಿ ಮೀಸಲಿಟ್ಟ ಈ ಹಿರಿಯರು ದೆಹಲಿಯ ಜಂತರ್ ಮಂತರ್ ಬಳಿ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಕುಳಿತಿದ್ದಾರೆ.
ರಾಜು ಪ್ರಿಯಾಂಕಳಾಗಿ ಬದಲಾದ ರೀತಿ…!
-ನಾಗರಾಜ್, ಬೆಂಗಳೂರು
ನಮಸ್ಕಾರ ಕೇಳುಗರೇ ನೀವು ಕೇಳ್ತಾ ಇದ್ದೀರಾ ೯೦.೪ ಕಂಪನಾಂಕಗಳಲ್ಲಿ ರೇಡಿಯೊ ಆಕ್ಟೀವ್. ಇದೇನಪ್ಪ ನ್ಯೂಸ್ ಲೆಟರ್‌ನಲ್ಲಿ ರೇಡಿಯೋ ಸ್ಟೈಲ್ ಅಂತಾ ಇದ್ದೀರಾ ಇಲ್ಲ ರೀ ಇದು ನಮ್ಮ ನಿಮ್ಮೆಲ್ಲರ ನೆಚ್ಚಿನ ಹುಡುಗಿ ರೇಡಿಯೋ ಜಾಕಿ ಪ್ರಿಯಾಂಕ ಸ್ಟೈಲ್. ಇದ್ಯಾರು ಪ್ರಿಯಾಂಕ ಅಂತ ಯೋಚಿಸ್ತಾ ಇದ್ದಿರಾ ? ಅವರೇ ರೀ ನೆನ್ನೆ ಮೊನ್ನೆ ತನಕ ಲೈಂಕಿಕ ವೃತ್ತಿಯನ್ನು ಮಾಡುತ್ತಿದ್ದ ಟ್ರಾನ್ಸ್ ಜೆಂಡರ್ ಪ್ರಿಯಾಂಕ.
ರಾಜು ಪ್ರಿಯಾಂಕಳಾಗಿ ಬದಲಾದ ರೀತಿ
ಪ್ರಿಯಾಂಕಳ ಮೊದಲ ಹೆಸರು ರಾಜು ಓದಿದ್ದು ೯ನೇ ತರಗತಿ ಮಾತ್ರ ತಾನು ೯ನೇ ತರಗತಿಯಲ್ಲಿ ವಿದ್ಯಾಬ್ಯಾಸ ಮಾಡ್ತಾ ಇರುವಾಗ ಎಲ್ಲರಂತೆ ತನ್ನಲ್ಲಿ ಅನೇಕ ಬದಲಾವಣೆಗಳು ಆಗತೊಡಗಿದವು ತನಗೆ ಹುಡುಗಿಯ ಆವಭಾವ ಉಂಟಾಗುತ್ತಿತ್ತು. ಬೆರಳುಗಳಿಗೆ ನೈಲ್ ಪಾಲೀಷ್ ಹಾಕಿಕೊಳ್ಳುವುದು ಲಿಪ್‌ಸ್ಟೀಕ್ ಹಚ್ಚಿಕೊಳ್ಳಬೇಕು ಹೀಗೆ ಅನೇಕ ರೀತಿಯಾಗಿ ಹುಡುಗಿಯರ ಥರಾ ಮೇಕಪ್ ಮಾಡಿಕೊಳ್ಳತೊಡಗಿದ ಜೊತೆಗೆ ತನ್ನ ಕೈಲಿ ಹುಡುಗರು ಮಾಡುವ ಸಾಮಾನ್ಯ ಕೆಲಸಗಳನ್ನು ಮಾಡುವುದು ಕಷ್ಟವೆನಿಸಿತು. ಅದೇ ರಂಗೋಲಿ ಹಾಕು, ಪಾತ್ರೆ ತೊಳಿ, ಮನೆ ಒರೆಸು, ಬಟ್ಟೆ ಒಗಿ ಅಂದ್ರೆ ಎಲ್ಲಿಲ್ಲದ ಸಂತೋಷ. ಹೀಗೆ ರಾಜುವಿನಲ್ಲಿನ ಬದಲಾವಣೆಗಳನ್ನು ಕಂಡ ಸ್ನೇಹಿತರು ಹಿಯಾಳಿಸತೊಡಗಿದರು, ಶಿಕ್ಷಕರು ಸಹ ಕೀಳಾಗಿ ಕಂಡರು ಅಂತೂ ಇಂತು ೯ನೇ ತರಗತಿಯಲ್ಲಿ ಓದುತ್ತಿದ್ದ ರಾಜು ತನ್ನ ಪೋಷಕರ ಬಳಿ ತನ್ನಲ್ಲಾಗುತ್ತಿರುವ ಬದಲಾವಣೆಗಳು, ಆಸೆಗಳು ಎಲ್ಲವನ್ನೂ ಎಲೆ ಎಲೆಯಾಗಿ ಬಿಚ್ಚಿಟ್ಟ ಆದ್ರೆ ಇದಕ್ಕೆ ಪೋಷಕರ ಬೆಂಬಲ ಸಿಗಲಿಲ್ಲ. ಇದನ್ನು ಅರಿತ ೧೪ ವರ್ಷದ ರಾಜು ೯ನೇ ತರಗತಿಗೆ ಮದ್ಯದಲ್ಲೇ ತಿಲಾಂಜಲಿ ಆಡಿ ಮನೆ ಬಿಟ್ಟು ತನ್ನದೇ ಪ್ರಪಂಚಕ್ಕೆ ಓಡಿ ಹೋದ ಮತ್ತಷ್ಟು ಓದು 
ಅಫ್ರಿದಿಯ ಬೊಗಳುವಿಕೆ ಹಾಗೂ ನಮ್ಮ ತಿಕ್ಕಲುತನಗಳು..
– ಉಮೇಶ್ ದೇಸಾಯಿ
“ಸಮಾ” ಎನ್ನುವ ನ್ಯೂಸ್ ಚಾನೆಲ್ ನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ಅಫ್ರಿದಿ ಅಂದ
—
“”In my opinion, if I have to tell the truth, they (Indians) will never have hearts like Muslims and Pakistanis. I don’t think they have the large and clean hearts that Allah has given us,”
ಅವನ ಮಾತುಗಳಲ್ಲಿ ಸತ್ಯಇದೆಯೋ ಇಲ್ಲವೋ ಇಲ್ಲಿರುವ ಮುಸ್ಲಿಮ್ ರು ಹೇಳಬೇಕು. ಇದು ಸೋತವನ ಹತಾಶ ನುಡಿಯೋ ಅಥವಾ ಮನದಲ್ಲಿ ಮಥಿಸಿ ಮಥಿಸಿ ಕಾರಿದ ವಿಷವೋ ಗೊತ್ತಿಲ್ಲ. ಒಂದೇ ಮಾತಿನಲ್ಲಿ ಭಾರತವನ್ನು ಇಬ್ಭಾಗ ಮಾಡಿದ್ದಾನೆ. ಅಲ್ಲಾಹು ಕೊಟ್ಟ ದೇಣಿಗೆ ಹೃದಯ ಅದು ಭಾರತೀಯರಲ್ಲಿಲ್ಲ ಇದು ಅವನ ಅಂಬೋಣ.
ಈ ಮಾತಿಗೆ ಆಗಲೇ ಅಲ್ಲಿಯ ಬೋರ್ಡು ಪ್ರತಿಕ್ರಿಯಿಸಿದೆ.ಅದು ಅವನ ವ್ಯಕ್ತಿಗತ ಪ್ರತಿಕ್ರಿಯೆ ಎಂದು ತಿಪ್ಪೆ ಸಾರಿಸಿದೆ.ಇಲ್ಲಿಯ ಮುಸ್ಲಿಂ ಬೋರ್ಡು ಅದನ್ನು ಖಂಡಿಸಿದೆ. ಅದು ತಿಕ್ಕಲುತನ ಎಂದಿದೆ.






