ವಿಷಯದ ವಿವರಗಳಿಗೆ ದಾಟಿರಿ

Posts from the ‘ಲೇಖನಗಳು’ Category

16
ಜನ

ನಮ್ಮ ರಾಷ್ಟ್ರಧ್ವಜ ಅಲ್ಲಿ ಹಾರಬಾರದಾ?

ರಾಕೇಶ್ ಶೆಟ್ಟಿ

ವಿಶ್ವಸಂಸ್ಥೆಯಲ್ಲಿ ಭಾರತೀಯ ರಾಯಭಾರಿ ಭಾಷಣ ಶುರು ಮಾಡುತ್ತಾ,

“ನಾನು ಕಾಶ್ಮೀರ ಸಮಸ್ಯೆಯ ಬಗ್ಗೆ ಮಾತನಾಡುವುದಕ್ಕಿಂತ ಮೊದಲು ‘ಋಷಿ ಕಶ್ಯಪ’ರ ಬಗ್ಗೆ ಹೇಳಲಿಚ್ಛಿಸುತ್ತೇನೆ. ಅವರಿಂದಾಗಿಯೇ ಕಣಿವೆಗೆ ‘ಕಾಶ್ಮೀರ’ ಎಂಬ ಹೆಸರು ಬಂತು. ಒಮ್ಮೆ ಅವರು ಹೀಗೆ ಕಾಶ್ಮೀರ ಕಣಿವೆಯಲ್ಲಿ ಸಾಗುವಾಗ ‘ಕಲ್ಲು ಬಂಡೆ’ಗಳ ನಡುವೆ ಹರಿಯುತಿದ್ದ ಜಲಧಾರೆಯನ್ನು ನೋಡಿ, ಸ್ನಾನ ಮಾಡುವ ಮನಸ್ಸಾಯಿತು. ಬಟ್ಟೆಯನ್ನು ಕಳಚಿ ಬಂಡೆಗಳ ಮೇಲಿಟ್ಟು ‘ಕಶ್ಯಪ’ರು ಸ್ನಾನ ಮುಗಿಸಿ ನೋಡಿದರೆ, ಅವರು ಬಂಡೆಯ ಮೇಲಿಟ್ಟಿದ್ದ ‘ಬಟ್ಟೆ’ಯನ್ನು ‘ಪಾಕಿಸ್ತಾನಿ’ಯೊಬ್ಬ ಕದ್ದೊಯ್ದಿದ್ದ!”

ಅವರು ಇಷ್ಟು ಹೇಳಿ ಮುಗಿಸುವಷ್ಟರಲ್ಲಿ ‘ಪಾಕಿಸ್ತಾನಿ ರಾಯಭಾರಿ’ ಕುಳಿತಲ್ಲಿಂದ ಚಂಗನೆ ಜಿಗಿದೆದ್ದು,
“ನೀವ್ ಏನ್ ಮಾತಾಡ್ತಾ ಇದ್ದೀರಾ? ಆ ಕಾಲದಲ್ಲಿ ‘ಪಾಕಿಸ್ತಾನಿ’ಗಳು ‘ಕಾಶ್ಮೀರ’ದಲ್ಲಿ ಇರಲೇ ಇಲ್ಲ!! ”

ನಸು ನಕ್ಕ ಭಾರತೀಯ ರಾಯಭಾರಿ, “ಕಾಶ್ಮೀರ ಯಾರಿಗೆ ಸೇರಿದ್ದು ಅನ್ನೋ ವಿಷಯವನ್ನ ಸ್ಪಷ್ಟಪಡಿಸಿರುವುದರಿಂದ ನಾನು ನನ್ನ ಮಾತನ್ನು ಮುಂದುವರೆಸುತ್ತೇನೆ” 🙂
(‘ಕಾಶ್ಮೀರ’ಕ್ಕೆ ಸಂಬಂಧಿಸಿದಂತೆ ‘ವಿಶ್ವ ಸಂಸ್ಥೆ’ಯಲ್ಲಿ ನಡೆದ ಘಟನೆಯಿದು ಅನ್ನೋ ಮಿಂಚೆಯಲ್ಲಿ ಬಂದ ಜೋಕ್ ಇದು)

Jokes Apart…

ಮತ್ತಷ್ಟು ಓದು »

14
ಜನ

ಬೆಂಕಿಯಲ್ಲಿ ಅರಳುವ ಹೂವುಗಳು…

ಇರ್ಷಾದ್ ವೇಣೂರು

ಫಿಟ್ಟಿಂಗ್ ನಲ್ಲಿದೆ ಬದುಕು…

ಎಲ್ಲಿಗೋ ಹೊರಟಿದ್ದಾಗ ವಾಹನ ಇದ್ದಕ್ಕಿದ್ದಂತೆ ಕೈಕೊಡುತ್ತದೆ. ಅದುವರೆಗೂ ಲೀಟರಿಗೆ ಸರಿಯಾಗಿ 55-60 ಮೈಲೇಜ್ ಕೊಡುತ್ತಿದ್ದ ಬೈಕ್ ಅಂದು ಮಾತ್ರ 35 ಮೈಲೇಜ್ ಕೊಟ್ಟು ಅರ್ಧ ದಾರಿಯಲ್ಲಿ ಇಂಗು ತಿಂದ ಮಂಗನ ಸ್ಥಿತಿ ತರಿಸುತ್ತದೆ. ನಿನ್ನೆಯಷ್ಟೇ ಗಾಳಿ ಎಷ್ಟಿದೆ ಎಂದು ಚೆಕ್ ಮಾಡಿ ಮನೆಗೆ ಬಂದು ಶೆಡ್ ನಲ್ಲಿ ನಿಲ್ಲಿಸಿದ್ದ ಕಾರು ಬೆಳಿಗ್ಗೆ ಆಫೀಸಿಗೆ ಹೋಗಬೇಕು ಎಂದು ನೋಡಿದರೆ ಟಯರ್ ಠುಸ್ಸಾಗಿರುತ್ತದೆ. ಯಾವತ್ತೂ ಒಂದೇ ನಿಮಿಷದಲ್ಲಿ ಸ್ಟಾರ್ಟ್ ಆಗುತ್ತಿದ್ದ ಸ್ಕೂಟರ್ ಇಂದು ಜಪ್ಪಯ್ಯಾ ಎಂದರೂ ಸ್ಟಾರ್ಟ್ ಆಗುತ್ತಿಲ್ಲ. ಇಂತಹ ಸಮಸ್ಯೆಗಳು ಎದುರಾದಾಗ ನೆನಪಾಗುವುದೇ ನಮ್ಮೂರಿನ ಫಿಟ್ಟರ್.
ಅದುವರೆಗೂ ಇದ್ದದ್ದೆಲ್ಲಾ ಮಾಡಿ, ದಾರಿ ಹೋಕರಿಗೆ ದಮ್ಮಯ್ಯಾ ಹಾಕಿ ದೂಡಲು ಸಹಾಯ ಮಾಡುವಂತೆ ವಿನಂತಿಸಿ ಏನೆಲ್ಲಾ ಸರ್ಕಸ್ ಮಾಡಿದ್ದರೂ ಸ್ಟಾರ್ಟ್ ಆಗದ ಕಾರು ಫಿಟ್ಟರ್ ಕೈ ಸೋಂಕಿದ ಕೂಡಲೇ ಗುಯ್ ಗುಯ್ ಎನ್ನುತ್ತದೆ. ಒಂದರ್ಥದಲ್ಲಿ ಇವರೆಲ್ಲಾ ಪಲ್ಸ್ ಹಿಡಿದು ಪರೀಕ್ಷಿಸುವ ಡಾಕ್ಟರ್ ತರಹದವರು. ಮುಟ್ಟಿದ ಕೂಡಲೇ ನಾಚಿಕೆ ಮುಳ್ಳು ಮುನಿಯುವಂತೆ ಇವರ ಕೈ ತಾಗಿದ ಕೂಡಲೆ ಸಮಸ್ಯೆ ಸರಿಯಾಗುತ್ತದೆ. ಅಷ್ಟು ಚೆನ್ನಾಗಿ ಯಂತ್ರದ ಭಾಷೆಯನ್ನು ಅರ್ಥೈಸಿಕೊಂಡಿರುವ ಫಿಟ್ಟರ್ ಗಳಿದ್ದಾರೆ. ಮತ್ತಷ್ಟು ಓದು »
13
ಜನ

ಎಷ್ಟೊತ್ತು ನಿನ್ನ ಅಲಂಕಾರ ?

ಅರವಿಂದ್

ಮೊನ್ನೆ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನಕ್ಕೆ ನಾನು ನನ್ನ ಹೆಂಡತಿ ಹೋಗುವ ತಯಾರಿ ನಡೆಯುತ್ತಿತ್ತು. ಸಂಜೆ ನಾಲ್ಕಕ್ಕೆ ಹೊರಡುವ ನನ್ನ ತರಾತುರಿಗೂ ಅವಳ ಅಲಂಕಾರ ಪರಾಕಾಷ್ಟೆಗೂ ಸಮಯ ಐದುವರೆಯಾಗಿತ್ತು. ಅಂತು ಹೊರಡುವ ಭಾಗ್ಯ ಜೊತೆಗೆ ದೊಡ್ಡ ಗಣಪನಿಗೆ ನಮ್ಮ ದರ್ಶನದ ಭಾಗ್ಯ ನೆನೆದು ಕಿರುನಗೆ ಬೀರುತ್ತಾ, ಬೆಂಗಳೂರಿಗೆ ಹೊಸಬಳಾದ ನನ್ನಾಕೆ ರಸ್ತೆಯಲ್ಲಿ ಸಿಗುವ ಅಷ್ಟು ಕಟ್ಟಡಗಳು, ಪಾರ್ಕುಗಳು, ಸಿನಿಮಾ ಥಿಯೇಟರ್ಗಳು, ಅಂಗಡಿ, ಶಾಪಿಂಗ್ ಮಾಲ್ ಎಲ್ಲವನ್ನು ಕುತೂಹಲದಿಂದ ನೋಡುತ್ತಾ, ಪ್ರತಿಯೊಂದಕ್ಕೂ ವಿವರಣೆ ಕೇಳುತ್ತಾ, ಮತ್ತದನ್ನು ತನ್ನ ಊರುಗಳಿಗೆ ಹೊಲಿಸುತಾ ಸಾಗಿತು, ಸಂಜೆ ಆರಕ್ಕೆ ತಲುಪಿದ್ದಾಯಿತು.

ಅವಳ ಮನಸ್ಸಿನಲ್ಲಿ ಬೆಂಗಳೂರು ಏನು ಅಲ್ಲ, ನ್ಯೆಸರ್ಗಿಕ ಸೌಂದರ್ಯವಿಲ್ಲ, ಅಲ್ಲೆಲ್ಲೂ ಬೆಟ್ಟ ಗುಡ್ಡವಿಲ್ಲ, ನದಿ ತೊರೆಗಳಿಲ್ಲ, ನೇಗಿಲಿಲ್ಲ, ಉಳುವ ಯೋಗಿಯಿಲ್ಲ, ಹಸಿರು ಉಹೂ ಅದ ವಾಸನೆಯೇ ಇಲ್ಲ, ಪ್ರಾಣಿ ಪಕ್ಷಿಗಳಿಲ್ಲ, ಇದ್ದದ್ದು ಒಂದಷ್ಟು ಕಾಗೆಗಳಷ್ಟೇ, ಅದು ಎಲ್ಲೋ ದೂರಕ್ಕೆ ಅಕಸ್ಮಾತಾಗಿ ಬೆಳಯಲು ಬಿಟ್ಟಿದ್ದ ಮರಗಳಲ್ಲಿ, ಆಕಾಶದಲ್ಲಿ, ಮತ್ತೆಲ್ಲೋ ಹೊಟ್ಟೆಹೊರೆಯುವ ಕಾಯಕದಲ್ಲಿ, ಮಲ್ಲೇಶ್ವರಂ ದಾಟಿ ಆನಂದ್ ರಾವ್ ಸರ್ಕಲ್ಲಿಗೆ ಬರುವಾಗ ಇವಳನ್ನು  ಫ್ಲ್ಯೆಓವರ್ ಮೇಲೆ ಕರೆದುಕೊಂಡು ಹೋಗುವ ಮನಸ್ಸಾಗಿ ಕೃಷ್ಣ ಪ್ಲೋರ್ ಮಿಲ್ ಕಡೆಗೆ ಗಾಡಿ ತಿರುಗಿಸಿದ್ದಾಯಿತು, ನೋಡೇ ಈಗ ಪ್ಹ್ಲ್ಯೇಓವರ್ ಬರುತ್ತೆ ಅದು ಮುಗಿಯುವ ವೇಳೆಗೆ ಪಕ್ಕದಲ್ಲೇ ರೇಸ್ ಕೋರ್ಸ್ ಸಿಗುತ್ತೆ ಅಂದೇ, ಯಾಕೋ ಏನು ಮಾತಾಡಲಿಲ್ಲ, ನನ್ನ ಹೆಮ್ಮೆಯ ಬೆಂಗಳೂರು ನೋಡ್ತಿದ್ದಾಳೆ ಅನಿಸಿ, ಸುಮ್ಮನೆ ಗಾಡಿ ಚಲಾಯಿಸುತ್ತಿದ್ದೆ, ಪ್ಹ್ಲ್ಯೇ ಓವರ್ ಇಳಿಯುವಾಗ ಕಾಣುವ ರೇಸ್ ಕೋರ್ಸ್ ತೋರಿಸಲು ಗಾಡಿ ಬಾಡಿಗೆ ಹಾಕಿ ನಿಲ್ಲಿಸಿದೆ, ಇದೆ ಕಣೆ ರೇಸ್ ಕೋರ್ಸ್ ಅಂದೇ, ಥೂ!!! ಇದೆನಾ ನಿಮ್ಮ ಬೆಂಗಳೂರು ಒಂದು ಗಿಡ ಮರ ಇಲ್ವೆಲ್ಲಲ್ರಿ, ಬರ ಬಂದ ಬಯಲುಸೀಮೆಯಾಗಿದೆ ನಿಮ್ಮೂರು, 🙂 ನಾನು ಅವಳಿಗೆ ರೇಸ್ ಕೋರ್ಸ್ ಬಗ್ಗೆ ಹೇಳೋಕೆ ಹೊರಟೆ, ಸುಮ್ನಿರಿ ಸಾಕು ಕೆಲಸಕ್ಕೆ ಬರದ ಕುದುರೆ ಜೂಜಿಗೆ ಇಷ್ಟು ಜಾಗವಿದೆ, ಒಂದಷ್ಟು ಕೆರೆ ಹೊಲ ಇರೋಕೆ ಜಾಗ ಇಲ್ಲ ಅಂದದ್ದಾಯಿತು. ಮತ್ತಷ್ಟು ಓದು »

13
ಜನ

ಆಂಗ್ ಸಾನ್ ಸೂಕಿ ಎಂಬ ಹೆಣ್ಣುಮಗಳಿಂದ ನಾವು ಕಲಿಯಬೇಕಾದದ್ದು !

ವಸಂತ್ ಶೆಟ್ಟಿ

ಬರ್ಮಾದ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಹೋರಾಟಗಾರ್ತಿ ಆಂಗ್ ಸಾನ್ ಸೂ ಕಿಯ ಬಗ್ಗೆ ಚಿಕ್ಕಂದಿನಿಂದಲೂ ಬೇರೆ ಬೇರೆ ಪತ್ರಿಕೆಗಳಲ್ಲಿ ಓದುತ್ತಲೇ ಇದ್ದೆ. ತನ್ನ ನಾಡಿನ ಜನರ ಸ್ವಾತಂತ್ರ್ಯಕ್ಕಾಗಿ, ಅವರ ಹಕ್ಕುಗಳಿಗಾಗಿ ಹೋರಾಡುತ್ತ ಹೆಚ್ಚು ಕಡಿಮೆ ಬದುಕಿನ ಮುಕ್ಕಾಲು ಭಾಗ ಗೃಹ ಬಂಧನದಲ್ಲೇ ಕಳೆದ ಛಲಗಾರ್ತಿ ಈಕೆ. ಇತ್ತೀಚೆಗಷ್ಟೇ ಬಿಡುಗಡೆಗೊಂಡು ಆಚೆ ಬಂದ ಆಕೆಯ ಈ ಕೆಳಗಿನ ಮಾತುಗಳು ಏಳಿಗೆಗೆ ಕನ್ನಡವೊಂದನ್ನೇ ನೆಚ್ಚಿಕೊಂಡಿರುವ ಕೋಟ್ಯಾಂತರ ಅವಕಾಶವಂಚಿತ ಕನ್ನಡಿಗರ ನಡುವೆ “ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಮತ್ತು ಅದು ಕೊಡ ಮಾಡುವ ಉದ್ಯೋಗ, ಜೀವನವಕಾಶದ ಪ್ರಯೋಜನ” ಪಡೆದುಕೊಂಡಿರುವ ಕೆಲವೇ ಕೆಲವು ಕನ್ನಡಿಗರ ಮನಸಿನಲ್ಲಿ ರಿಂಗಣಿಸಬೇಕಿದೆ. ಅಷ್ಟೇ ಅಲ್ಲ, ಸಂವಿಧಾನದ ಪ್ರಕಾರವೇ ಇಡೀ ಭಾರತದೆಲ್ಲೆಡೆ ಹಿಂದಿಯೇತರ ಜನರಿಗಿಂತ ಹೆಚ್ಚಿನ ಸವಲತ್ತು, ಸೌಕರ್ಯ ಪಡೆಯುತ್ತಿರುವ ಹಿಂದಿ ಭಾಷಿಕ ಭಾರತೀಯರ ಮನಸಲ್ಲೂ ಅವರ ಈ ಮಾತುಗಳು ಪ್ರತಿಧ್ವನಿಸಬೇಕಿದೆ:

The value systems of those with access to power and of those far removed from such access cannot be the same. The viewpoint of the privileged is unlike that of the underprivileged.

ಅಧಿಕಾರ, ಸವಲತ್ತು ಅನುಭವಿಸುತ್ತಿರುವ ಜನರು ನಂಬುವ ಮೌಲ್ಯ ವ್ಯವಸ್ಥೆ ಮತ್ತು ಅಧಿಕಾರ, ಸವಲತ್ತಿದಿಂದ ವಂಚಿತರಾಗಿರುವ ಜನರ ಮೌಲ್ಯ ವ್ಯವಸ್ಥೆ ಒಂದೇ ಆಗಿರುವುದಿಲ್ಲ. ಸವಲತ್ತು, ಹಕ್ಕು ಅನುಭವಿಸುತ್ತಿರುವ ಜನರ ನಿಲುವು ವಂಚಿತರಾದವರ ನಿಲುವಿಗಿಂತ ಯಾವತ್ತಿಗೂ ಬೇರೆಯೇ ಆಗಿರುತ್ತದೆ.

ಮತ್ತಷ್ಟು ಓದು »

12
ಜನ

ನೆನಪುಗಳ ಮಾತೆ ಮಧುರ.. ನಿಮಗೂ ಹಾಗೇನಾ?

ಚೇತನ್ ಕೋಡುವಳ್ಳಿ

ಅಂತೂ ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿಗೆ ಬಂದು ಹುಡುಗರೆಲ್ಲ ಸೇರಿ ಬಾಡಿಗೆ ಮನೆ ಮಾಡಿ ಆಮೇಲೆ ಒಂದು ಕೆಲಸ ಹುಡ್ಕಿದ್ದಾಯ್ತು. ಇನ್ನೇನು ಆರಾಮು ಅಂದ್ಕೊಂಡ್ರೆ ಸಮಸ್ಯೆ ಶುರುವಾಗಿದ್ದೆ ಆಗ. ಬೆಳಗ್ಗೆ ಎದ್ರೆ ಏನು ತಿಂಡಿ ಮಾಡೋದು ಅನ್ನೋ ಯೋಚನೆ, ಏನೋ ಮಾಡೋಣ ಅಂದ್ಕೊಂಡು ಶುರು ಮಾಡಿದ್ರೆ, ಇಲ್ಲ ಈರುಳ್ಳಿ ಅಥವಾ ಟೊಮೇಟೊ ಅಥವಾ ಮೆಣಸಿನಕಾಯಿ ಅಥವಾ ಹೆಸರುಬೇಳೆ ಹೀಗೆ ಏನಾದರೂ ಒಂದು ಮಿಸ್. ಅಂತೂ ತಿಂಡಿ ಮಾಡಿ ಆಫೀಸಿಗೆ ರೆಡಿ ಆಗಿ ಬಸ್ ಹಿಡಿಯೋಕೆ ಹೋದ್ರೆ, ನಮ್ಮ ಹಳ್ಳಿ ಬಸ್ಸಾದ್ರೂ ಆಗಬಹುದು ಉಹುಂ ಬಿ.ಎಂ.ಟಿ.ಸಿ ಬಸ್ ಸಹವಾಸ ಅಲ್ಲ. ಮಕ್ಕಳನ್ನು ಕಂಡ್ರೆ ಬೆಂಗ್ಳೂರಿನ ಬೀದಿ ನಾಯಿಗಳು ಅಟ್ಟಿಸಿಕೊಂಡು ಹೋಗಿ ಕಚ್ಹೋ ಹಾಗೆ ಜನಗಳು ಸೀಟ್ ಹಿಡ್ಕೊಳ್ಳೋಕೆ ನುಗ್ತಿರ್ತಾರೆ. ಆ ಟ್ರಾಫಿಕ್ನಲ್ಲಿ ಆ ರಶ್ನಲ್ಲಿ ಆಫೀಸ್ ತಲ್ಪೋಹೊತ್ತಿಗೆ ಹೈರಾಣಾಗಿ ಹೋಗಿರ್ತೇವೆ.

ಆಫೀಸಲ್ಲಿ ಆ ಡೆಡ್ ಲೈನ್ಗಳು, ಮೀಟಿಂಗ್ಗಳು, ಟ್ಯೂಬ್ ಲೈಟ್ಗಳು, ಕಣ್ಣು ಕುಕ್ಕುವ ಮಾನಿಟರ್ಗಳು, ಟೇಸ್ಟ್ ಇಲ್ಲದ ಟೀ, ಕಾಫೀಗಳು, ಬೇಡದೆ ಇರೋ ಗಾಸಿಪ್ಗಳು. ಅಬ್ಬ ಸಾಕಪ್ಪಾ ಇದೇನು ಜೀವನ ಅನ್ಸಿಬಿಡತ್ತೆ ಆದ್ರೆ ಏನು ಮಾಡೋ ಹಾಗಿಲ್ಲ, ಹೊಟ್ಟೆಪಾಡು.

ಕೆಲಸ ಮುಗಿಸಿ ಮತ್ತೆ ಮನೆ ಕಡೆ ಹೊರಟ್ರೆ ಮತ್ತೆ ಅದೇ ಬಿ.ಎಂ.ಟಿ.ಸಿ ಬಸ್, ಸಂತೆಯಂತೆ ಜನ, ಟ್ರಾಫಿಕ್ ಜಾಮ್. ಮನೆ ತಲುಪೋ ಹೊತ್ತಿಗೆ ನಮ್ಮ ಪಾಡು ಹೇಗಾಗಿರತ್ತೆ ಅಂದ್ರೆ ನೀರಿನಲ್ಲಿ ಅದ್ದಿಟ್ಟ ಬಟ್ಟೆಯನ್ನು ತೆಗೆದು ಹಿಂಡಿಹಾಕ್ತಾರಲ್ಲ ಹಾಗೆ ಆಗಿರ್ತೀವಿ. ರಾತ್ರಿ ಮತ್ತದೇ ಕಥೆ, ಬೆಳಗ್ಗೆ ನಡೆದ ಘಟನೆಗಳ ಪುನರಾವರ್ತನೆ. ಮತ್ತಷ್ಟು ಓದು »

11
ಜನ

ಓಶೋ ಕಂಡಂತೆ ಗಾಂಧಿ!

ಸುಪ್ರೀತ್, ಬೆಂಗಳೂರು

ಓಶೋ ರಜನೀಶ್ ಜಗತ್ತು ಕಂಡ ಅತ್ಯಂತ ವಿವಾದಾಸ್ಪದ ವ್ಯಕ್ತಿ. ಮಧ್ಯಪ್ರದೇಶದ ಜೈನ ಕುಟುಂಬವೊಂದರಲ್ಲಿ ಹುಟ್ಟಿದ ರಜನೀಶ್ ಬಾಲ್ಯದಿಂದಲೇ ಸ್ವತಂತ್ರ ಚಿಂತನೆಯೆಡೆಗೆ ಒಲವು ಹೊಂದಿದ್ದ. ತನ್ನ ಇಪ್ಪತ್ಮೂರನೆಯ ವಯಸ್ಸಿನಲ್ಲಿ ತನಗೆ ಜ್ಞಾನೋದಯವಾಯಿತು ಎಂದು ಹೇಳಿಕೊಳ್ಳುವ ಈತ ಜಗತ್ತಿನ ಎಲ್ಲಾ ಧರ್ಮಗಳ ಬಗ್ಗೆ ಅತ್ಯಂತ ವಸ್ತುನಿಷ್ಠವಾದ, ಹಿಂದೆ ಯಾರೂ ಹೇಳಿರದಿದ್ದ ಸಂಗತಿಗಳನ್ನು ಹೇಳಿದ. ನಂಬಿಕೆಗಳನ್ನು ಬಿತ್ತುವ, ಆ ಮೂಲಕ ಸ್ವತಂತ್ರ ಚಿಂತನೆಯನ್ನು ನಾಶ ಮಾಡುವ ಎಲ್ಲಾ ವ್ಯವಸ್ಥೆಗಳನ್ನೂ ಖಂಡಿಸಿದ. ಮನುಷ್ಯ ತತ್‌ಕ್ಷಣಕ್ಕೆ ಮಾತ್ರ ಸ್ಪಂದಿಸಬೇಕು. ಯಾವ ಪೂರ್ವಾಗ್ರಹವಿಲ್ಲದೆ, ಭವಿಷ್ಯತ್ತಿನ ಬಗ್ಗೆ ಯೋಜನೆಯಿಲ್ಲದೆ ಈ ಕ್ಷಣದಲ್ಲಿ ಬದುಕಬೇಕು ಎಂದು ಹೇಳಿದ. ಜಗತ್ತಿನ ಯಾವ ವ್ಯಕ್ತಿಯನ್ನೂ, ನಂಬಿಕೆಗಳನ್ನೂ ಬಿಡದೆ ಜಾಲಾಡಿದವ ಈತ. ೧೯೯೦ರಂದು ಹೃದಯಾಘಾತದಿಂದ ನಿಧನನಾದ.

ಇಡೀ ಜಗತ್ತೇ ಮಹಾತ್ಮಾ ಗಾಂಧಿಯನ್ನು ಅಹಿಂಸಾ ಮಾರ್ಗದ ಅನ್ವೇಷಕ ಎಂದು ಕೊಂಡಾಡಿದರೆ ಈತ ಗಾಂಧಿಯನ್ನು ಕುಟಿಲ ರಾಜಕಾರಣಿ ಎಂದು ಕರೆದ. ಗಾಂಧೀಜಿ ಪ್ರತಿಪಾದಿಸಿದ ಅಹಿಂಸೆ, ಸತ್ಯಾಗ್ರಹವೆಲ್ಲವೂ ಕೇವಲ ರಾಜಕೀಯ ತಂತ್ರಗಳು ಎಂದು ವಾದಿಸಿದ. ಗಾಂಧೀಜಿಯ ಸರಳತೆ ಢೋಂಗಿಯದು ಎಂದು ಜರೆದ. ಅವರ ಆಧ್ಯಾತ್ಮ, ಶಿಸ್ತು, ಬ್ರಹ್ಮಚರ್ಯ, ದೇವರ ಕಲ್ಪನೆ ಎಲ್ಲವನ್ನೂ ಲೇವಡಿ ಮಾಡಿದ.

ನಿಜವಾದ ಚಿನ್ನವನ್ನು ಯಾವ ಒರಗೆ ಹಚ್ಚಿದರೂ ತನ್ನ ಹೊಳಪನ್ನು ಹೆಚ್ಚಿಸಿಕೊಳ್ಳುತ್ತದೆಯೇ ಹೊರತು ಕಳೆಗುಂದುವುದಿಲ್ಲ. ಹೀಗಾಗಿ ಓಶೋ ರಜನೀಶ್ ಗಾಂಧಿಯ ಬಗ್ಗೆ ಮಾತಾಡಿರುವ ಬಗ್ಗೆ ಸ್ವಲ್ಪ ತಿಳಿಯೋಣ. ಇದರಲ್ಲಿ ನಮಗೆ ಗಾಂಧೀಜಿಯ ವ್ಯಕ್ತಿತ್ವದ ಬಗ್ಗೆ, ಘನತೆಯ ಬಗ್ಗೆ ಹೊಸತೊಂದು ಆಯಾಮ ಸಿಕ್ಕಬಹುದು. ಯಾರನ್ನೂ ಕಣ್ಣು ಮುಚ್ಚಿ ಒಪ್ಪಬಾರದು ಎಂಬ ಎಚ್ಚರಿಕೆಯಿದ್ದರೆ ನಮ್ಮ ಪ್ರಯತ್ನ ಹೆಚ್ಚು ಪ್ರಯೋಜನಕಾರಿಯಾಗಬಲ್ಲದು.

***

… ನನ್ನ ಪ್ರಕಾರ ಮಹಾತ್ಮ ಗಾಂಧಿ ಒಬ್ಬ ಕಪಟ ರಾಜಕಾರಣಿ. ಅಹಿಂಸೆಯನ್ನು ಅಳವಡಿಸಿಕೊಳ್ಳುವ ಮೂಲಕ ಆತ ಎಷ್ಟೋ ಸಂಗತಿಗಳನ್ನು ತನಗೆ ಹಿತವಾಗುವಂತೆ ನಿರ್ವಹಿಸಿದ. ಎಲ್ಲಾ ಜೈನರು ಆತನ ಅನುಯಾಯಿಗಳಾದರು. ತಾವು ನಂಬಿದ ಅಂಹಿಸೆಯ ತತ್ವವನ್ನು ಬೆಂಬಲಿಸುವ ಒಬ್ಬ ವ್ಯಕ್ತಿಯನ್ನು ಅವರು ಆತನಲ್ಲಿ ಕಂಡಿದ್ದರು. ಗಾಂಧಿ ಜೈನನಾಗಿರಲಿಲ್ಲ. ಆತ ಕೇವಲ ಶೇ ೯ರಷ್ಟು ಜೈನನಾಗಿದ್ದ. ನಾನು ಗಾಂಧಿಯನ್ನು ಹೀಗೆ ವರ್ಣಿಸಲು ಇಚ್ಚಿಸುತ್ತೇನೆ: ಆತ ಹುಟ್ಟಿನಿಂದ ಹಿಂದು ಆದರೆ ಆತ ಕೇವಲ ಶೇ ೧ರಷ್ಟು ಹಿಂದು. ಆತ ಹುಟ್ಟಿದ್ದು ಜೈನರು ಹೆಚ್ಚು ಸಂಖ್ಯೆಯಲ್ಲಿದ್ದ ಗುಜರಾತಿನಲ್ಲಿ ಹೀಗಾಗಿ ಆತ ಶೇ ೯ರಷ್ಟು ಜೈನ. ಉಳಿದ ಶೇ ೯೦ರಷ್ಟು ಆತ ಕ್ರಿಶ್ಚಿಯನ್ ಆಗಿದ್ದ. ಮೂರು ಬಾರಿ ಆತ ಕ್ರೈಸ್ತನಾಗಿ ಮತಾಂತರವಾಗುವ ಹಂತದಲ್ಲಿದ್ದ. ಮತ್ತಷ್ಟು ಓದು »

10
ಜನ

ಹವ್ಯಕರೇ ಉದಾಹರಣೆಯಾದರೇಕೆ??

ದಿವ್ಯ ಉಮೇಶ್‌ ಶಿಮ್ಲಡ್ಕ

 ಇಂದು  ಬೆಳಗ್ಗೆ ಹಾಸ್ಟೆಲ್  ತಿಂಡಿ ಮುಗಿಸಿ ಪೇಪರ್ ಓದುತ್ತಿದ್ದೆ. ಪಕ್ಕದಲ್ಲೇ ಕುಳಿತವಳು ಸಂಯುಕ್ತ ಕರ್ನಾಟಕ ಓದುತ್ತಿದ್ದಳು. ನಿನ್ನದು ಓದಿ ಆದ ನಂತರ ನನಗೆ ಕೊಡು ಎಂದು ಬುಕ್ ಮಾಡಿದೆ. ಒಮ್ಮೆಲೇ ಅವಳು ನೀವು ಹವ್ಯಕರೇ ಅಲ್ವಾ ಅಂತ ಕೇಳ್ಬೇಕಾ.. ಹ್ಮ್ಮ್ ಅಂದೆ. ಏನು ಹೀಗೆ ಕೇಳಿದಳಲ್ಲ, ಎಂದು ಅವಳನ್ನೊಮ್ಮೆ ದಿಟ್ಟಿಸಿ ನೋಡಿದೆ. ಆಗ ಅವಳು”ಅಲ್ಲ ನಿಮ್ಮಲ್ಲಿ ಪೇಪರ್ ಅಲ್ಲೆಲ್ಲ ಬರೋವಷ್ಟರ ಮಟ್ಟಿಗೆ ಹುಡುಗಿಯರು ಕಡಿಮೆಯಾಗಿದಾರಾ ಅಂದಳು. ಏನು ಉತ್ತರಿಸದೆ ಪ್ರಶ್ನಾರ್ಥಕವಾಗಿ ಅವಳನ್ನೇ ನೋಡಿದೆ. ಪೇಪರ್ ಕೈಗಿತ್ತು ಹೋದಳು.

 ಓಹ್!! ನೋಡಿದರೆ,” ವಧು ಬೇಕಾಗಿದ್ದಾರೆ” ಎಂದು ದೊಡ್ಡದಾಗಿ ಬರೆದಿತ್ತು ಶ್ರೀಮತಿ ಕೆ.ಎಚ್.ಸಾವಿತ್ರಿಯವರ ಜೀವನ್ಮುಖಿ ಕಾಲಂನಲ್ಲಿ!! ಅಲ್ಲಿ ಹವ್ಯಕರಲ್ಲಿ ವಧುಗಳಿಗೆ ಕೊರತೆ ಎನ್ನೋ ಉದಾಹರಣೆಗಳು. ಹವ್ಯಕರೇ ಏಕೆ ಉದಾಹರಣೆಯಾಗುತ್ತಿದ್ದಾರೆ? ಬೇರೆಯವರಲ್ಲಿ ಉದಾಹರಣೆಗಳಿಲ್ಲವೇ?ಕಾರಣಗಳು ಕಾಣುತ್ತಿರುವುದೆಲ್ಲ ಹವ್ಯಕರಲ್ಲೇ ಜಾಸ್ತಿಯಾಗಿದೆಯೇ? ಎನ್ನೋ ಪ್ರಶ್ನೆಗಳು. ೨ ವರುಷಗಳ ಹಿಂದೆಯೇ ಈ ಟಿವಿ ಹೆಡ್ಲೈನ್ ಅಲ್ಲಿ “ಹವ್ಯಕರಲ್ಲಿ ವಧುಗಳ ಕೊರತೆ, ವರರಿಗೆ ಮದುವೆಯ ಚಿಂತೆ” ಎಂದು ದೊಡ್ಡದಾಗಿ ಕೊಟ್ಟಿದ್ದರು. ಮತ್ತೊಮ್ಮೆ ಸಾಪ್ತಾಹಿಕ ವಿಜಯದಲ್ಲೂ ಪುಟವೆಲ್ಲ ಇದೇ ವಿಷ್ಯ!ಹೀಗೆ ಮನೆ ಮಾತಾಗುವ ಮಟ್ಟಕ್ಕಿಳಿಯಿತೇ? ಮತ್ತಷ್ಟು ಓದು »

9
ಜನ

ಪ್ರೀತಿಯ (?) ರಾಜಕಾರಣಿಗಳಿಗೆ ೩ ಪ್ರಶ್ನೆ-೧ ಸಲಹೆ

ಪ್ರಶಾಂತ್ ಯಾಳವಾರಮಠ

ಇಂದಿನ ನಮ್ಮ ರಾಜಕೀಯ ಪರಿಸ್ತಿತಿಯೇನ್ನು ನೋಡಿ ನಮ್ಮ ಪ್ರೀತಿಯ ರಾಜಕಾರಣಿಗಳಿಗೆ ೩ ಪ್ರಶ್ನೆಗಳನ್ನು ಕೇಳೋಣ ಅಂತ ಅಂದುಕೊಂಡಿದಿನೀ…

೧. ನಿಮಗೆ ಸಾಮಾನ್ಯರಂತೆ ಬದುಕಲು ಆಗುವುದಿಲ್ಲವೇ?

ಇಂದು ಯಾವುದೇ ಪಕ್ಷ ಅತವಾ ವ್ಯಕ್ತಿಯನ್ನ ತಗೊಳ್ಳಿ ಎಲ್ಲರೂ ದುಡ್ಡು ದುಡ್ಡು ಅಂತಿದ್ದಾರೆ.ಒಬ್ಬ ಸಾಮಾನ್ಯ ವ್ಯಕ್ತಿ ಎಲ್ಲ ಸವಲತ್ತುಗಳನ್ನು ಪಡೆದು, ಮನೆ ಮಟ ಮಾಡಿ, ಮಕ್ಕಳನ್ನ ಒಳ್ಳೆ ಶಾಲೆಗಳಿಗೆ ಸೇರಿಸಿ  ಸಂತೋಷದಿಂದ ಬದುಕಲು ಕೇವಲ ೧ ಕೋಟಿಗಿಂತ [ಬೆಂಗಳೂರಲ್ಲಿ] ಕಡಿಮೆ ದುಡ್ಡು ಸಾಕು.

ಆದರೆ ಇವತ್ತು ರಾಜಕೀಯದಲ್ಲಿರೋ ಎಲ್ಲರೂ [೯೯%] ಕೋಟ್ಯದಿಪತಿಗಳೇ ಇದ್ದೀರಾ… ಆದರು ನಿಮಗೆ ಯಾಕೆ ಇಷ್ಟೊಂದು ಆಸೆ ಯಾರಿಗೋಸ್ಕರ ಇಷ್ಟೆಲ್ಲಾ ಆಸ್ತಿಯನ್ನ ಮಾಡ್ತಾ ಇದ್ದೀರಾ … ನಿಮಗೂ ಗೊತ್ತು ನಮಗೂ ಗೊತ್ತು ಎಲ್ಲರೂ ಹೋಗುವಾಗ ಏನನ್ನು ತೆಗೆದುಕೊಂಡು ಹೋಗೋದಿಲ್ಲ ಅಂತ ಆದರೂ …

೨. ನೀವು ಯಾಕೆ ಆತ್ಮವಂಚಕರಾಗಿ ಬದುಕುತ್ತಾ ಇದ್ದೀರಿ?

ನೀವು ಎಷ್ಟೊಂದು ತಪ್ಪುಗಳನ್ನ ಮಾಡಿದ್ದಿರೀ, ಮಾಡುತ್ತ ಇದ್ದೀರಿ ಅಂತ ನಮಗಿಂತ ನಿಮಗೆ ಚೆನ್ನಾಗಿ ಗೊತ್ತು ಆದರು ನೀವು ಏನು ಮಾಡಿಯೇ ಇಲ್ಲ ಅಂತೀರಾ.

ನೀವು ಮಾಡಿದ್ದೂ ತಪ್ಪು ಅಂತ ಒಬ್ಬ ಸಾಮಾನ್ಯನು ಹೇಳುತ್ತಾನೆ… ಲಂಚ ತೊಗೊತಿರಿ, ಧಮಕಿ ಹಾಕಸ್ತಿರಿ, ಸರಕಾರಿ ದುಡ್ಡನ್ನ/ಜಾಗವನ್ನ/ವಸ್ತುಗಳನ್ನ/ಮೋಟಾರುಗಳನ್ನ ಗುಳುಂ ಅನಸ್ತಿರಿ, ಗುಂಡಾಗಳನ್ನ ಸಾಕುತ್ತಿರೀ …ಅಬ್ಬಾ ಒಂದಾ ಎರಡಾ …. ಇಷ್ಟೆಲ್ಲಾ ಮಾಡಿದ್ದು ನಿಮಗೂ ಗೊತ್ತು ಆದರು ಯಾಕೆ ನೀವು ಆತ್ಮವಂಚಕರಾಗಿ, ಸಭ್ಯರತರ ನಟಸ್ತೀರಿ ಅಥವಾ ನಿಮಗೆ ಆತ್ಮ ಅನ್ನೋದೇ ಇಲ್ಲವಾ ಹೇಗೆ?

೩. ನಿಮ್ಮ ನಡವಳಿಕೆ ಅಧಿಕಾರದಲ್ಲಿದ್ದಾಗ ಬೇರೆ ಇಲ್ಲದಿದ್ದಾಗ ಬೇರೆ ಯಾಕೆ ?

ನಾನು ಎಷ್ಟೊಂದು ರಾಜಕೀಯ ವ್ಯಕ್ತಿಗಳ ಬಗೆಗಿನ ವಿವರಗಳನ್ನ ನೋಡಿದೆ ಎಲ್ಲರೂ ಎಷ್ಟೊಂದು ಒಳ್ಳೆಯವರು,ಎಷ್ಟೊಂದು ಹೋರಾಟಗಳನ್ನ ಮಾಡಿದ್ದಾರೆ, ಒಳ್ಳೊಳ್ಳೆಯ ಮಾತುಗಳನ್ನ ಆಡಿದ್ದಾರೆ, ಬಡಬಗ್ಗರಿಗೆ ಸಹಾಯ ಮಾಡಿದ್ದಾರೆ ಆದರೆ ಈ  ಎಲ್ಲವನ್ನು ಅವರು ವಿರೋಧ ಪಕ್ಷದಲ್ಲಿದ್ದಾಗ ಮಾಡಿದ್ದಾರೆ. ಅಂದರೆ ಇವೆಲ್ಲ ನೀವು ಅಧಿಕಾರ ಹಿಡಿಯಲು ಮಾಡಿರುವ/ಆಡಿರುವ ನಾಟಕಗಳಾ? ಏಕೆಂದರೆ ಅದೇ ವ್ಯಕ್ತಿಗಳು ಅಧಿಕಾರ ಹಿಡಿದಮೇಲೆ ಎಷ್ಟೊಂದು ಭ್ರಷ್ಟಾಚಾರ, ಅನ್ಯಾಯಗಳನ್ನ ಮಾಡಿದ್ದಾರೆ ಅಂದರೆ ಅವುಗಳಿಗೆ ಲೆಕ್ಕವಿಲ್ಲ. ಇದು ಯಾಕೆ ಹೀಗೆ, ಅಧಿಕಾರದ ಮುಂದೆ ಒಳ್ಳೆಯತನ ನಿಲ್ಲೋದಿಲ್ಲವಾ? ಇದು ನಿಜ ಅಂದರೆ ನೀವು ಅಧಿಕಾರದಲ್ಲಿ ಇರೋದೇ ಬೇಡಾ.

ಸಲಹೆ :

ದಯವಿಟ್ಟು ನೀವು ದುಡ್ಡುಮಾಡೋದಕ್ಕೆ ರಾಜಕೀಯ ಸೇರಬೇಡಿ … ಯಾಕಂದರೆ ದುಡ್ಡು ಮಾಡೋದಕ್ಕೆ ನಾನಾ ದಾರಿಗಳಿವೆ.ನಿಮ್ಮ ಮಕ್ಕಳಿಗೆ ಚೆನ್ನಾಗಿ ಜೀವನ ಮಾಡಲು ಕಲಿಸೋ ಶಕ್ತಿ ಇಲ್ಲಾ ಅಂದರೆ ಮಕ್ಕಳನ್ನ ಹಡಿಯಬೇಡಿ ಯಾಕಂದರೆ ನೀವು ಮಾಡೋ ಎಲ್ಲ ತಪ್ಪುಗಳು ನಿಮ್ಮ ಮಕ್ಕಳಿಗೊಸ್ಕರನೆ.ಇನ್ನು ಉಳಿದ ಸಲಹೆಗಳನ್ನ ಈ ಕೆಳಗಿನ ಗೆಳೆಯರು ಕೊಡ್ತಾರೆ ಕೇಳಿ 🙂

(ಚಿತ್ರ ಕೃಪೆ : connect.in.com)
8
ಜನ

ಬ್ಲಾಗರ್‌ಗಳೆಂಬ ಜರ್ನಲಿಸ್ಟುಗಳಿಗೆ ಜಯವಾಗಲಿ

‘ಸಂಪಾದಕೀಯ’

ಇವರು ಪತ್ರಕರ್ತರಲ್ಲ, ಆದರೂ ಪತ್ರಕರ್ತರು. ಇವರು ಪತ್ರಿಕೋದ್ಯಮಿಗಳಲ್ಲ, ಆದರೂ ಪತ್ರಿಕೋದ್ಯಮಿಗಳು. ಇವರು ಬ್ಲಾಗರ್‌ಗಳು. ಪರ್ಯಾಯ ಮಾಧ್ಯಮವನ್ನು ಕಟ್ಟಿಕೊಂಡವರು. 

ಇವರು ತಮ್ಮ ಪಾಡಿಗೆ ತಾವು ಬರೆಯುತ್ತಾರೆ. ಪಿಕ್ನಿಕ್ಕಿಗೆ ಹೋಗಿ ಬಂದ ಖುಷಿ, ಮನೆಯಲ್ಲಿ ಮಗು ಹುಟ್ಟಿದ ಸಡಗರ, ಕಸದ ತೊಟ್ಟಿಯಲ್ಲಿ ಎಸೆಯಲ್ಪಟ್ಟು ಸತ್ತ ಮಗುವಿನ ಕುರಿತ ಮರುಕ, ಹೊಸದಾಗಿ ಓದಿದ ಕವಿತೆಯ ಕನವರಿಕೆ, ಮನೆಯಲ್ಲಿ ಘಟಿಸಿದ ಸಾವಿನ ವಿಷಾದ, ರಸ್ತೆ ಅಪಘಾತದಲ್ಲಿ ಸತ್ತೋದವರ ಕುರಿತು ನೋವು, ಹಬ್ಬಗಳ-ವಿವಿಧ ಡೇ ಗಳ ಸಂಭ್ರಮ, ಹೊಸದಾಗಿ ಶಾಪಿಂಗ್ ಮಾಡಿದ ವಸ್ತುಗಳ ವಿವರ, ರಾತ್ರಿಯಷ್ಟೇ ಕಂಡ ದುಸ್ವಪ್ನದ ಕಿರಿಕಿರಿ… ಹೀಗೆ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ.

ಇವರ ಬ್ಲಾಗುಗಳಿಗೆ ಇವರೇ ಮಾಲೀಕರು, ಇವರೇ ಸಂಪಾದಕರು, ಇವರೇ ಉಪಸಂಪಾದಕರು, ಇವರೇ ವರದಿಗಾರರು, ಇವರೇ ಡಿಟಿಪಿ ಆಪರೇಟರ್‌ಗಳು. ಯಾರ ಅಂಕೆಯಲ್ಲಿ ಇವರಿಲ್ಲವಾದರೂ ತಮ್ಮ ತಮ್ಮ ಅಂಕೆಯಲ್ಲಿ ಇದ್ದು ಬರೆಯುವವರು. ಮತ್ತಷ್ಟು ಓದು »

7
ಜನ

ಕನ್ನಡ ಮತ್ತು ಸಂಸ್ಕೃ’ತ’ ಇಲಾಖೆಯೇ?

ವಸಂತ ಶೆಟ್ಟಿ

ಸಂಸ್ಕೃತದಲ್ಲಿ ಅಡಗಿರುವ ಅರಿವನ್ನು ಹೆಚ್ಚು ಜನರಿಗೆ ಪರಿಚಯಿಸುವ ಉದ್ದೇಶದಿಂದ ಶುರುವಾದ ಸಂಸ್ಕೃತ ಭಾರತಿ ಸಂಸ್ಥೆ ಬೆಂಗಳೂರಿನಲ್ಲಿ ಸಂಸ್ಕೃತ ಪುಸ್ತಕ ಮೇಳ ಆಯೋಜಿಸಿದೆ ಅನ್ನುವ ಜಾಹೀರಾತು ಪತ್ರಿಕೆಗಳಲ್ಲಿ ಕಂಡೆ. ವೇದ, ಉಪನಿಷತ್ತು, ಆಯುರ್ವೇದ ಸೇರಿದಂತೆ ಹಲವು ಜ್ಞಾನ ಸಂಪತ್ತನ್ನು ಜನ ಸಾಮಾನ್ಯರಿಗೆ ಮುಟ್ಟಿಸುವುದು ಈ ಮೇಳದ ಉದ್ದೇಶವಾಗಿದೆಯಂತೆ. ಪುಸ್ತಕ ಮೇಳಕ್ಕೆ ನನ್ನ ಯಾವುದೇ ವಿರೋಧವಿಲ್ಲ. ಸಂಸ್ಕೃತದ ಬಗ್ಗೆ ಮೊದಲೇ ವಿರೋಧ ಇಲ್ಲ. ಸಂಸ್ಕೃತದಲ್ಲಿರುವ ಎಲ್ಲ ಒಳ್ಳೆಯದು ಕನ್ನಡಕ್ಕೆ ಅನುವಾದಗೊಂಡು ಕನ್ನಡಿಗರಿಗೆ ದೊರಕಲಿ ಅನ್ನುವುದು ನನ್ನ ನಿಲುವು.  ಆದರೆ ಈ ಮೇಳದ ಜಾಹೀರಾತು ನೋಡಿದಾಗ ಅಚ್ಚರಿಯಾಗಿದ್ದು, ಈ ಮೇಳದ ಸಹ ಪ್ರಾಯೋಜಕರು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಂಬುದು !

ಕನ್ನಡ ಮತ್ತು ಸಂಸ್ಕೃ’ತ’ ಇಲಾಖೆಯೇ?
ಆರ್.ಎಸ್.ಎಸ್ ನ ಅಂಗಸಂಸ್ಥೆಯಾದ “ಸಂಸ್ಕೃತ ಭಾರತಿ”  ಸಂಸ್ಕೃತ ಪ್ರಚಾರ, ಪುಸ್ತಕ ಮೇಳ ಅಂತ ಖಾಸಗಿಯಾಗಿ ಕಾರ್ಯಕ್ರಮ ನಡೆಸುವುದಕ್ಕೆ ಯಾರ ವಿರೋಧವೂ ಇಲ್ಲ. ಆದರೆ ಇಂತಹ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿಸುವುದರ ಹಿಂದಿನ ರಹಸ್ಯವೇನು? ಇಮಾಮ ಸಾಬಿಗೂ ಗೋಕುಲಾಷ್ಟಮಿಗೂ ಏನ್ ಸಂಬಂಧ? ಬೆಳಗಾವಿಯಲ್ಲಿ ನಡೆಯಬೇಕಿದ್ದ ವಿಶ್ವ ಕನ್ನಡ ಸಮ್ಮೇಳನಕ್ಕೆ ಸರಿಯಾದ ಆದ್ಯತೆ, ಗಮನ ಕೊಡದೇ ವರ್ಷಾನುಗಟ್ಟಲೆ ಅದನ್ನು ಮುಂದೆ ಹಾಕುವ ಸರ್ಕಾರ ಸಂಸ್ಕೃತ ಪುಸ್ತಕ ಮೇಳದ ಯಶಸ್ಸಿಗೆ ಟೊಂಕ ಕಟ್ಟಿ ನಿಲ್ಲುವುದನ್ನು ನೋಡಿದಾಗ ಅದನ್ನು misplaced priority ಅನ್ನದೇ ವಿಧಿಯಿಲ್ಲ. ಹೇಗೆ ಕೊಂಕಣಿ ಅಕಾಡೆಮಿಯ ಕೆಲಸ ಕೊಂಕಣಿ ಭಾಷೆ, ಸಂಸ್ಕೃತಿಯ ಉಳಿಸುವಿಕೆ-ಬೆಳೆಸುವಿಕೆಯೋ, ಹೇಗೆ ತುಳು ಅಕಾಡೆಮಿಯ ಕೆಲಸ ತುಳು ನುಡಿ, ತುಳು ಸಂಸ್ಕೃತಿಯ ಪೋಷಣೆ, ರಕ್ಷಣೆಯೋ, ಅದೇ ರೀತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೆಲಸ ಕನ್ನಡ ನಾಡು-ನುಡಿ, ಸಂಸ್ಕೃತಿಯ ಉಳಿವು,ಬೆಳೆವು, ಕನ್ನಡಿಗರಲ್ಲಿ ಕನ್ನಡತನದ ಅರಿವು ಹೆಚ್ಚಿಸುವತ್ತ ಗಮನ ಹರಿಸುವುದೇ ವಿನಹ ಇಂದು ಸಂಸ್ಕೃತ ಮೇಳ ಇಲ್ಲವೇ ನಾಳೆ ದಿನ ತಮಿಳು ಮೇಳ, ಹಿಂದಿ ಮೇಳ ಅಂತ ತನ್ನ ಕಾರ್ಯ ವ್ಯಾಪ್ತಿಗೆ ಸಂಬಂಧಿಸದ ಮೇಳಗಳನ್ನು ಪ್ರಾಯೋಜಿಸುವುದಲ್ಲ. ಕನ್ನಡ ವಿಶ್ವವಿದ್ಯಾಲಯಗಳು ಅನುದಾನವಿಲ್ಲದೇ ಒದ್ದಾಡುತ್ತಿವೆ. ಗಡಿ ಭಾಗದ ಕನ್ನಡ ಶಾಲೆಗಳೆಲ್ಲ ಒಂದೊಂದಾಗಿ ಬಾಗಿಲು ಹಾಕಿ, ಅಲ್ಲಿನ ಕನ್ನಡಿಗರೆಲ್ಲ ಪರಭಾಷಿಕರಾಗುತ್ತಿದ್ದಾರೆ, ಇದಾವುದನ್ನೂ ಗಮನಿಸದ ಸರ್ಕಾರ, ಸಂಸ್ಕೃತ ಪುಸ್ತಕ ಮೇಳವನ್ನು ಪ್ರಾಯೋಜಿಸುವುದನ್ನು ನೋಡಿದಾಗ, ಕೋಟ್ಯಾಂತರ ಜನ ಆಡುವ ಜೀವಂತ ಭಾಷೆಯತ್ತ ಅದಕ್ಕಿರುವ ಆದ್ಯತೆ ಏನಿದೆ, ಎಷ್ಟಿದೆ ಅನ್ನುವ ಪ್ರಶ್ನೆ ಕನ್ನಡಿಗರ ಮನಸಲ್ಲಿ ಬರದೇ ಇರದು. ಮತ್ತಷ್ಟು ಓದು »