ವಿಷಯದ ವಿವರಗಳಿಗೆ ದಾಟಿರಿ

Posts from the ‘ಲೇಖನಗಳು’ Category

27
ಡಿಸೆ

ಗೋಹತ್ಯೆ ನಿಷೇಧದ ಸುತ್ತ…!

ಕವಿತಾ ಪಿ.ಎನ್ ಮತ್ತು ಸಂದೀಪ

ಗೋಹತ್ಯೆ ಹಾಗೂ ಗೋಹತ್ಯೆ ನಿಷೇಧಕಾಯಿದೆ/ಶಾಸನಬದ್ಧಗೊಳಿಸುವ ಕುರಿತಂತೆ ಬಿಡುವಿಲ್ಲದೇ ಚರ್ಚೆಗಳು ನಡೆಯುತ್ತಿರುವುದನ್ನು ನಾವೆಲ್ಲ ಓದುತ್ತಿದ್ದೇವೆ. ಹಳೆಯ ಒಂದು ಹಿಂದೂ ಪತ್ರಿಕೆಯಲ್ಲಿ ಬಂದ ‘Cow slaughter ban is a tool to oppress Dalits’ ಸಿಬ್ಬಂದಿ ಮಾಡಿದ್ದ ವರದಿಯಲ್ಲಿ, ಆರ್.ಎಸ್.ಎಸ್. ಮತ್ತು ಅದರ ವಿರೋಧಿ ಪಾಳೇಯದ ಟೀಕಾ ಪ್ರಹಾರಗಳು ಕಂಡುಬಂದವು.

ಆರ್.ಎಸ್.ಎಸ್.ಅನ್ನು ಟೀಕಿಸುವರು ಹೇಳುವುದೆನೆಂದರೆ, ಭಾರತೀಯ ಸ್ಥಳೀಯ ಸಂಸ್ಕೃತಿಗಳಿಗೆ ಹಿಂದೂ ರಾಷ್ಟ್ರೀಯತೆ ಎಂಬ ಪರಿಕಲ್ಪನೆಯು ವಿದೇಶದಿಂದ ಆಮದು ಮಾಡಿಕೊಂಡ ಸರಕು, ಆದರೆ ಆರ್.ಎಸ್,ಎಸ್.ನವರು ಬೇರೆ ಬೇರೆಯ ರೀತಿಯ ಆಹಾರ ಪದ್ದತಿಗಳನ್ನು ಹೊಂದಿರುವ ಸಂಸ್ಕೃತಿಗಳನ್ನು ರಾಷ್ಟ್ರೀಯತೆಯ ವಿರೋಧಿಗಳು ಎಂದು ಗುರುತಿಸುವ ಮೂಲಕ, ಆಂತರೀಕವಾಗಿ ಶತ್ರುಗಳನ್ನು ಹುಟ್ಟುಹಾಕುತ್ತಿದ್ದಾರೆ ಎಂಬ ಹೇಳಿಕೆಯನ್ನು ಪ್ರಕಾಶ ಅವರು ನೀಡಿದ್ದಾರೆ. ಮತ್ತಷ್ಟು ಓದು »

25
ಡಿಸೆ

“ಗ್ರಾಮದೇಗುಲಗಳಾಗಿ ಗರೋಡಿಗಳು”

ಜಗನ್ನಾಥ್ ಶಿರ್ಲಾಲ್

ತುಳುನಾಡು ಸಾಂಸ್ಕೃತಿಕ ಅನನ್ಯತೆಯ ನಾಡು. ದೈವ, ದೇವರುಗಳ ಸಮಾಗಮದ ಬೀಡು. ಇಲ್ಲಿನ ಪರಿಸರ, ಪ್ರಾಣಿ, ಪಕ್ಷಿ, ಗಿಡ, ಮರ, ಸ್ಥಳ, ವೀರ ಪುರುಷರ, ಆರಾಧನೆಯ ದೈವಿಕ ನೆಲೆಯಾಗಿದೆ. ಪ್ರತಿಯೊಂದು ನಂಬಿಕೆ ನಡವಳಿಕೆಗಳು ಜಾನಪದದ ಆಧಾರದಲ್ಲಿ ಹೆಣೆದಿರುವುದು ತುಳುನಾಡ ಸಂಸ್ಕೃತಿಯ ವೈಶಿಷ್ಟ್ಯ.
ವ್ಯಕ್ತಿಗಳು ತನ್ನ ಜೀವಿತ ಕಾಲದಲ್ಲಿ ಅಸಾಮಾನ್ಯ ರೀತಿಯಲ್ಲಿ ಬಾಳಿ ಬದುಕಿ ಬಲಿದಾನವಾದಾಗ ಅವರನ್ನು ದೈವತ್ವ ಮಟ್ಟಕ್ಕೆ ಏರಿಸಿ ಪೂಜಿಸುವ ಪದ್ಧತಿ ನಮ್ಮ ಸಂಸ್ಕೃತಿಯಲ್ಲಿ ಕಂಡುಬರುತ್ತದೆ. ಅತಿಮಾನುಷ ಶಕ್ತಿಗಳನ್ನು ಪೂಜಿಸಲು ಅತ್ತ ದೇವಸ್ಥಾನವು ಅಲ್ಲದ ಇತ್ತ ಭೂತ ಸ್ಥಾನವೂ ಅಲ್ಲದ ಒಂದು ವಿಶಿಷ್ಟ ಪೂಜಾ ಕೇಂದ್ರವಾಗಿ ‘ಗರೋಡಿ’ ಎಂಬ ದೇಗುಲವು ನಿರ್ಮಾಣವಾದುದು ಜನರ ಭಾವುಕ ಪ್ರಜ್ಞೆಗೆ ತಲೆಬಾಗಲೇ ಬೇಕಾದುದು. ಈ ಮೂಲಕ ಇಡೀ ಗ್ರಾಮ ವ್ಯವಸ್ಥೆಯಲ್ಲಿ ಆ ಗರೋಡಿಗೆ ಸಂಬಂಧಿಸಿದ ಸಮುದಾಯದ ಜನರನ್ನು ಒಂದುಗೂಡಿಸುವಲ್ಲಿ ದೈವ ಭಕ್ತಿಯು  ಕಾರಣವಾಗಿದೆ. ಅಲ್ಲದೆ ಪ್ರಸ್ತುತ ಆಧುನಿಕ ಜಗತ್ತಿನಲ್ಲಿ ಸಮುದಾಯಗಳ ಮಧ್ಯೆ ಸಾಮರಸ್ಯ ಮೂಡಿಸಲು ಮತ್ತು ಪಾಲ್ಗೊಳ್ಳುವಿಕೆಗೆ ಗರೋಡಿಗಳು ಒಂದು ಕಾರಣವಾಗಿದೆ. ಮತ್ತಷ್ಟು ಓದು »
24
ಡಿಸೆ

ಬೆಂಗಳೂರು-ಮಂಗಳೂರು ಬಸ್ಸಲ್ಲಿ…!

ವೇಣುವಿನೋದ್, ಪತ್ರಕರ್ತರು, ಮಂಗಳೂರು

ಇದುವರೆಗೆ ಸುಮಾರು ೩೦ ಬಾರಿ ಬೆಂಗಳೂರಿಗೆ ಹೋಗಿ ಬಂದಿದ್ದೇನೆ. ಅದರಲ್ಲಿ ಮೊನ್ನೆಯ ನನ್ನ ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣ ಮಾತ್ರ ದಾಖಲೆಯ ಪುಟದಲ್ಲಿ ಸೇರಿ ಹೋಯಿತು…

ಕ್ಯಾಮೆರಾ ರಿಪೇರಿ, ಒಂದಷ್ಟು ಪುಸ್ತಕ ಖರೀದಿ ಕೆಲಸ ಇದ್ದ ಕಾರಣ ಶನಿವಾರದ ವಾರದ ರಜೆಯನ್ನು ಉಪಯೋಗ ಮಾಡಿಕೊಳ್ಳೋಣ ಎಂದು ಶುಕ್ರವಾರ ರಾತ್ರಿ ಮಂಗಳೂರಿನಿಂದ ಹೊರಟೆ. ಕೆಟ್ಟ ರಸ್ತೆಯಲ್ಲಿ ಆರ್ಡಿನರಿ ಬಸ್‌ಗಳಲ್ಲಿ ಹೋದರೆ ಖಂಡಿತಾ ನಿದ್ದೆ ಬರುವುದು ಕಷ್ಟ ಎಂದು ಗೊತ್ತು. ಅದಕ್ಕೇ ೫೦೦ ರು. ಕೊಟ್ಟು ಕೆಎಸ್ಸಾರ‍್ಟಿಸಿ ಐರಾವತದಲ್ಲೇ ಸೀಟ್ ಬುಕ್ ಮಾಡಿಸಿದ್ದೆ. ೯.೨೩ರ ನನ್ನ ಬಸ್ ಎಸಿ ಸರಿ ಇಲ್ಲ ಎಂದು ಅರ್ಧ ಗಂಟೆ ವಿಳಂಬವಾಗಿ ಹೊರಟಿತು. ಶಿರಾಡಿ ಬ್ಲಾಕ್ ಆದ ಕಾರಣ ಮಡಿಕೇರಿ-ಮೈಸೂರು ರೋಡಲ್ಲಿ ಬಸ್ ಸಾಗಿತ್ತು. ಆದರೆ ಕೆಟ್ಟ ರಸ್ತೆ ಮತ್ತು ವೋಲ್ವೋ ಕೂಡಾ ಹಳೆಯದಾಗಿದ್ದರಿಂದಲೋ ಏನೋ ಚೆನ್ನಾಗಿ ನಿದ್ದೆ ತೆಗೆಯುವ ನನ್ನ ಉದ್ದೇಶ ಈಡೇರಲಿಲ್ಲ. ಘಾಟ್ ರಸ್ತೆಯಲ್ಲಿ ಕ್ರಶರ‍್ನಲ್ಲಿ ಹಾಕಿ ಕುಲುಕಿಸಿದ ಅನುಭವ. ಮತ್ತಷ್ಟು ಓದು »

23
ಡಿಸೆ

ಕನ್ನಡ ಮಿಡಿಯಾ – ಎಡವುತ್ತಿರುವುದೆಲ್ಲಿ ?

ವಸಂತ ಶೆಟ್ಟಿ, ಬೆಂಗಳೂರು

ದಿನಾ ಓದೋ ಕನ್ನಡ ಪತ್ರಿಕೆಗಳಿರಬಹುದು (ವಿ.ಕ, ಪ್ರ.ವಾ,ಉ.ವಾ, ಕ.ಪ್ರ), ನೋಡೋ ಕನ್ನಡ ಸುದ್ದಿ ವಾಹಿನಿಗಳಿರಬಹುದು (ಟಿವಿ9, ಸುವರ್ಣ) ಇಲ್ಲವೇ ಕನ್ನಡದ ಮನರಂಜನೆ ಚಾನೆಲ್ ಗಳಿರಬಹುದು( ಜೀ ಕನ್ನಡ, ಕಸ್ತೂರಿ, ಈ ಟಿವಿ ಕನ್ನಡ, ಸುವರ್ಣ), ಇವರೆಲ್ಲರಲ್ಲಿ ಒಂದು ಸಾಮಾನ್ಯವಾದ ಅಂಶವೆಂದರೆ ಇವರಿಗಿರೋ ಹಿಂದಿ ಸಿನೆಮಾ, ಬಾಲಿವುಡ್ ಬಗೆಗಿನ ವಿಪರೀತ ಅಭಿಮಾನ. ಇವರ ಹಿಂದಿ ಸಿನೆಮಾ, ಹಾಡು, ನಟರ ಬಗೆಗಿನ disproportionate ಪ್ರಚಾರದ ವೈಖರಿ ನೋಡಿದವರಿಗೆ ಕರ್ನಾಟಕದಲ್ಲಿ ಹಿಂದಿ ಚಿತ್ರೋದ್ಯಮ ಕನ್ನಡಕ್ಕಿಂತ ದೊಡ್ಡದು ಅನ್ನುವಂತೆ ಅನ್ನಿಸುವ ಹಾಗೆ ಮಾಡಿದ್ದರೆ ಅಚ್ಚರಿಯಿಲ್ಲ. ಹಾಗಿದ್ರೆ ಇದೆಷ್ಟು ಸರಿಯಾದದ್ದು ?

ಮಾಧ್ಯಮದ ಮಂದಿಗೆ ಕೆಲವು ಪ್ರಶ್ನೆಗಳು

’ಹಿಂದಿ’ಗಿಂತ ’ಕನ್ನಡ’ದ ಮನರಂಜನೆ, ಕನ್ನಡ ಚಿತ್ರಗಳು ಗ್ರಾಹಕರಾಗಿ ಕನ್ನಡಿಗರ ಮನಸಿಗೆ ಹೆಚ್ಚು ಹತ್ತಿರ ಅನ್ನುವುದನ್ನು ಹಲವು ಹಿಟ್ ಚಿತ್ರಗಳು ( ಈ ವರ್ಷ ಜಾಕಿ, ಸೂಪರ್, ಪಂಚರಂಗಿ, ಆಪ್ತರಕ್ಷಕ, ಪೃಥ್ವಿ, ಕೃಷ್ಣನ್ ಲವ್ ಸ್ಟೋರಿ) ಸಾಬೀತು ಮಾಡಿದ್ದರೂ ಹಿಂದಿ ಚಿತ್ರಗಳ ಬಗ್ಗೆ ಕನ್ನಡದ ಪ್ರಿಂಟ್ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ನಡೆಯುತ್ತಿರುವ ಮಿತಿ ಮೀರಿದ ಪ್ರಚಾರ ಇಂದಿಗೂ ಹಾಗೆಯೇ ಸಾಗಿದೆ. ಮತ್ತಷ್ಟು ಓದು »

22
ಡಿಸೆ

ಅಲೆಲ್ಲೆಲ್ಲೆ…. ಸಿಂಗ್ರಿ!

ಇರ್ಷಾದ್ ಎಂ.ವೇಣೂರು

ಸಿಂಗ್ರಿ ರೌಂಡ್ಸ್…

 ಬೆಳಿಗ್ಗೆ 8.15 ದಾಟಿದರೆ ಸಾಕು ಯಾವುದೇ ಕೆಲಸದಲ್ಲಿ ಬ್ಯೂಸಿ ಆಗಿರುವವರು ಟಿ.ವಿ ಮುಂದೆ ಹಾಜರಾಗ್ತಾರೆ. ಬೇರೆ ಯಾವುದೇ ಚಾನಲ್ ನೋಡ್ತಿರೋರು ಸುವರ್ಣ ನ್ಯೂಸ್ ಚಾನೆಲ್ ಗೆ ಜಂಪ್ ಆಗ್ತಾರೆ. 8 ಗಂಟೆಯ ನ್ಯೂಸ್ ಓದ್ತಿರೋ ಆಂಕರ್ ‘ಈಗ ಸಿಂಗ್ರಿ ರೌಂಡ್ಸ್ ಪ್ರಸಾರವಾಗತ್ತೆ, ಕ್ಷಣ ಕ್ಷಣದ ಸುದ್ದಿಗಾಗಿ ಸುವರ್ಣ ನ್ಯೂಸ್ 24X7 ನೋಡ್ತಾ ಇರಿ’ ಎಂದಾಗ ಟಿವಿ ಮುಂದೆ ಕೂತವರ ಮುಖದಲ್ಲಿ ಮಂದಹಾಸ ಬೀರುತ್ತೆ. ಇನ್ನು ಸಿಂಗ್ರಿ ಮ್ಯೂಸಿಕ್ ಬಂತು ಅಂದ್ರೆ ಮನೆ ಮಂದಿಯ ಕಣ್ಣೆಲ್ಲಾ ಟಿ.ವಿ ಪರದೆಯ ಮೇಲೆ ಬೀಳುತ್ತೆ!
ಹಿಂದಿನ ದಿನದ ಆಗು ಹೋಗುಗಳನ್ನು ತನ್ನದೇ ಆದ ಶೈಲಿಯಲ್ಲಿ ಉಣಬಡಿಸುವ ಸಿಂಗ್ರಿ ಎಲ್ಲರ ಅಚ್ಚುಮೆಚ್ಚು. ತೆರೆಯ ಮೇಲೆ ಕುಡುಕನೋರ್ವ 90 ಹಾಕ್ಕೊಂಡು ಗಾಳಿಯಲ್ಲಿ ತೂರಾಡ್ತಾ ಇರ್ತಾನೆ. ಅವನಿಗೆ ಸಾಥಿಯಾಗಿ ಕುಡುಕನ ವಾಯ್ಸ್ ರಾಜಕೀಯ – ಪ್ರಚಲಿತ ವಿದ್ಯಮಾನಗಳ ಬಗ್ಗೆ ತನ್ನ ಅನಿಸಿಕೆ ಹೇಳುತ್ತಾ ಹೋಗುತ್ತೆ. ಕೇವಲ ರಾಜಕೀಯದ ಸುತ್ತ ಮಾತ್ರ ಸಿಂಗ್ರಿ ರೌಂಡ್ ಹಾಕಲ್ಲ. ಕೆಲವೊಮ್ಮೆ ವಿಶಿಷ್ಟ ಸುದ್ದಿಗಳೂ ಅಲ್ಲಿರುತ್ತೆ! ಪ್ರತಿಯೊಂದು ಟಾಂಗ್ – ಟಾಂಟ್ ಮೂಲಕ ಚಾಟಿಯೇಟು ನೀಡಿದ ಬಳಿಕ ಹ್ಹಿಹ್ಹಿಹ್ಹಿ ಎಂಬ ಮಗುವಿನ ನಗು ಪ್ರೇಕ್ಷಕರ ಬಾಯಲ್ಲೂ ಪ್ರತಿಫಲನವಾಗುತ್ತೆ.
21
ಡಿಸೆ

ಅಪರಾಧ ಮತ್ತು ಶಿಕ್ಷೆ

ಅಜಕ್ಕಳ ಗಿರೀಶ ಭಟ್

 ಕ್ಷಮಿಸಿ, ನನ್ನ ಅಭಿಪ್ರಾಯ ಈಗಿನ ಬಹುತೇಕ ಜನರ ಅಭಿಪ್ರಾಯಕ್ಕಿಂತ ಬೇರೆಯಾಗಿದೆ. ಅದರಲ್ಲೂ ಮಾನವ ಹಕ್ಕಿನ ಬಗ್ಗೆ ಕಾಳಜಿ ಉಳ್ಳವರ ಮಟ್ಟಿಗಂತೂ ಅಮಾನವೀಯವಾಗಿ ಕಾಣುವಂತಿರಬಹುದು.ಇರಲಿ. ಅಪರಾಧಕ್ಕೆ ಶಿಕ್ಷೆ ಯಾಕೆ?ಈ ಪ್ರಶ್ನೆ ವಿಚಿತ್ರವಾಗಿ ಕಾಣಬಹುದು. ತುಂಬಾ ಜನ ಅಂದುಕೊಳ್ಳುವುದೇನೆಂದರೆ ಅಪರಾಧ ಮಾಡಿದ್ದಕ್ಕಾಗಿ ಶಿಕ್ಷೆ ಅಂತ. ವಾಸ್ತವವಾಗಿ ಶಿಕ್ಷೆ ಕೊಡಬೇಕಾದದ್ದು ಮತ್ತು ಕೊಡುವುದು ಆತ ಇನ್ನು ಮುಂದೆ ಅಪರಾಧ ಮಾಡಬಾರದು ಎಂದಷ್ಟೆ ಅಲ್ಲ .ಅದಕ್ಕಿಂತ ಮುಖ್ಯವಾಗಿ,ಅಂಥ ಅಪರಾಧಗಳನ್ನು ಬೇರೆಯವರು ಮಾಡಬಾರದು ಎಂಬ ಕಾರಣಕ್ಕಾಗಿ. ಹಾಗಾಗಿ ಅಪರಾಧದ ಪ್ರಮಾಣಕ್ಕೆ ಅನುಗುಣವಾಗಿ ಕಠಿಣ ಶಿಕ್ಷೆಯೇ ಆಗಬೇಕಾಗುತ್ತದೆ. ಭಿನ್ನಾಭಿಪ್ರಾಯ ಎಂದೆನಲ್ಲ, ಅದು ಜೈಲುಗಳ ಬಗ್ಗೆ. ಜೈಲುಗಳು ಕೆಟ್ಟ ಸ್ಥಿತಿಯಲ್ಲಿವೆಯೆಂದು ಎಲ್ಲರೂ ಬೊಬ್ಬೆ ಹೊಡೆಯುತ್ತಾರೆ.ಜೈಲುಗಳು ಇರಬೇಕಾದದ್ದೇ ಹಾಗೆ. ಅಲ್ಲದಿದ್ದರೆ ಅದು ಶಿಕ್ಷೆಯಾಗುವುದು ಹೇಗೆ? ವಿಚಾರಣಾಧೀನ ಕೈದಿಗಳಿಗೆ ಮಾತ್ರ ಒಳ್ಳೆ ವ್ಯವಸ್ಥೆಯಿರಬೇಕು ನಿಜ.ಹಾಗಾಗಿ ಅವರಿಗೆ ಬೇರೆಯೇ ಜೈಲುಗಳು ಬೇಕು.ಈ ಮಟ್ಟಿಗೆ ಜೈಲು ವ್ಯವಸ್ಥೆ ಸುಧಾರಣೆಯಾಗಬೇಕೆಂಬುದು ನಿಜ. ನ್ಯಾಯಾಲಯದಿಂದ ತಪ್ಪಿತಸ್ಥರೆಂದು ತೀರ್ಮಾನವಾದ ಕೈದಿಗಳಿಗೆ ಈಗಿರುವುದಕ್ಕಿಂತ ಕೆಟ್ಟ ಜೈಲುಗಳೇ ಬೇಕು. ಅವರಿಗೆ ನಾಟಕ ಅದು ಇದು ಮನರಂಜನೆ ಇತ್ಯಾದಿ ಇರಬಾರದು. ಅವರ ಮನಪರಿವರ್ತನೆ ಮಾಡಬೇಕು ಎಂಬುದೆಲ್ಲ ಬರೀ ಬೊಗಳೆ. ಹಾಗೆ ಮನಪರಿವರ್ತನೆ ಆಗಬೇಕಾದರೆ ಶಿಕ್ಷಿಸದೆ ಬಿಡುವುದೇ ಒಳ್ಳೆಯದು. ಮತ್ತಷ್ಟು ಓದು »

19
ಡಿಸೆ

ಭಾರತಕ್ಕೆ ರಾಹುಲ್ ಡೇಂಜರ್!

ರಾಕೇಶ್ ಶೆಟ್ಟಿ

’ಭಾರತಕ್ಕೆ ರಾಹುಲ್ ಡೇಂಜರ್!’ ಅನ್ನೋ ಹೇಳಿಕೆಯನ್ನ ಕೊಟ್ರೆ ಕಾಂಗ್ರೆಸ್ಸಿಗರು,ರಾಹುಲ್ ಅಭಿಮಾನಿಗಳಿಗೆ ನನ್ನ ಅಟ್ಟಾಡಿಸಿಕೊಂಡು ಹೊಡಿಬೇಕು ಅನ್ನಿಸೋದಿಲ್ವಾ? ಅವ್ರಿಗ್ ಯಾಕೆ ಬೇರೆಯವರಿಗೂ ಇದೆಂತ ಎಡಬಿಡಂಗಿ ಹೇಳಿಕೆ ಮಾರಾಯ? ಅಂತ ಅನ್ನಿಸ್ಬಹುದು.ಆದ್ರೆ,ಒಂದ್ನಿಮಿಷ ಕೆಳಗೆ ಓದಿಬಿಡೀಪ್ಪಾ 😉

ಜಗತ್ತಿನ ರಾಜತಾಂತ್ರಿಕರ ಅದರಲ್ಲೂ ಮುಖ್ಯವಾಗಿ ಅಮೆರಿಕಾದ ಇಬ್ಬಗೆ ನೀತಿಯನ್ನ ಬಯಲು ಮಾಡುತ್ತ ಬಂದ ಜುಲಿಯನ್ ಅಸಾಂಜ್ನ ವಿಕಿಲೀಕ್ಸ್ ವರದಿಯಿಂದ ಈವರೆಗೂ ಭಾರತದಲ್ಲಿ ಅಂತ ಹಂಗಾಮವೇನು ಆಗಿರ್ಲಿಲ್ಲ,ಆದ್ರೆ ಮೊನ್ನೆ ಮೊನ್ನೆ ಕಾಂಗ್ರೆಸ್ಸಿನ ಪ್ರಧಾನಿ ರಾಹುಲ್ ಗಾಂಧಿ (ಸದ್ಯ! ಭಾರತದ ಪ್ರಧಾನಿ ಅಲ್ಲ! 😉 ) “ಮುಸ್ಲಿಂ ಉಗ್ರ ಸಂಘಟನೆಗಳಾದ ಲಷ್ಕರ್-ಇ-ತೊಯ್ಬಾದಂಥ ಸಂಘಟನೆಗಳಿಗೆ ಭಾರತದ ಕೆಲ ಮುಸ್ಲಿಂ ಸಂಘಟನೆಗಳಿಂದ ಬೆಂಬಲವಿದೆ. ಆದರೆ, ಅವರಿಗಿಂತ ಹಿಂದೂ ಉಗ್ರವಾದಿಗಳಿಂದ ಹೆಚ್ಚು ಆತಂಕವನ್ನು ಭಾರತ ಎದುರಿಸುತ್ತಿದೆ” ಅಂತ ಅಮೆರಿಕಾದ ರಾಜತಾಂತ್ರಿಕನ ಜೊತೆ ಹೇಳ್ಕೊಂಡಿದ್ರು ಅನ್ನೋ ಕೇಬಲ್ ಬಿಡುಗಡೆ ಮಾಡಿದಾಗ ನಂಗೂ ಮೇಲೆ ಹೇಳಿದಂತೆ ಅನ್ನಿಸಿತ್ತು,ಕಾಮನ್ ಸೆನ್ಸ್ ಇರೋ ಭಾರತದ ಬಹುತೇಕರಿಗೆ ರಾಹುಲ್ನ ಹೇಳಿಕೆಯು ಎಡಬಿಡಂಗಿತನದ್ದು ಅನ್ನಿಸಿರಿಬಹ್ದು. ಮತ್ತಷ್ಟು ಓದು »

19
ಡಿಸೆ

ಹೊಲಸು ತುಂಬಿದ ರಾಜಕೀಯವೂ….. ಮಹಿಳಾ ರಾಜಕೀಯದ ಹೊಸ ಬದಲಾವಣೆಯೂ…

-ಶಂಶೀರ್, ಬುಡೋಳಿ, ಪತ್ರಕರ್ತ

ನಿಮಗೆ ಇದನ್ನು ಹೇಳಲೇಬೇಕು. ಕರ್ನಾಟಕ ರಾಜ್ಯದಲ್ಲಿ ಹೆಣ್ಣುಮಕ್ಕಳಿಗಾಗಿ ಭಾಗ್ಯಲಕ್ಷ್ಮಿ ಯೋಜನೆ ಇರುವುದು ನಿಮಗೆ ತಿಳಿದಿರಬಹುದು. ಈ ಯೋಜನೆ ಕರ್ನಾಟಕದಲ್ಲಿ ಇನ್ನಷ್ಟೇ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಗೊಳ್ಳಬೇಕಷ್ಟೇ. ಹೀಗಾಗಿ ಈ ಯೋಜನೆಯ ಯಶಸ್ಸಿನ ಕುರಿತು ಈಗ ಮಾತನಾಡುವುದು ಔಚಿತ್ಯವಲ್ಲ. ನಮ್ಮ ನೆರೆಯ ರಾಜ್ಯ ಕೇರಳದಲ್ಲಿ ಮಹಿಳೆಯರು ಸ್ಥಳೀಯ ಹಾಗೂ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಹೊಸ ರಾಜಕೀಯದ ಭಾಷ್ಯಕ್ಕೆ ಮುನ್ನುಡಿ ಬರೆದರು. ಕಳೆದ ಚುನಾವಣೆ ಸಂದರ್ಭದಲ್ಲಿ ಕೇರಳದಲ್ಲಿ ಶೇಕಡಾ ೫೦ರಷ್ಟು ಮಹಿಳೆಯರು ಚುನಾವಣಾ ಕಣಕ್ಕಿಳಿದಿದ್ದರು. ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ. ರೈತ ಮಹಿಳೆ, ಟೈಲರಿಂಗ್ ವೃತ್ತಿಯಲ್ಲಿರುವ , ಬೀದಿ ಬದಿ ವ್ಯಾಪಾರ ಮಾಡುವ, ಲೆಕ್ಕಪರಿಶೋಧಕಿಯರ ಜೊತೆಗೆ ಸ್ನಾತಕೋತ್ತರ ಪದಧರೆಯರು ಕೇರಳದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದವರು. ಇವರಲ್ಲಿ ಹೆಚ್ಚಿನವರು ಕೇರಳದಲ್ಲಿ ಬಹಳ ಯಶಸ್ಸನ್ನು ಗಳಿಸಿಕೊಂಡಿರುವ ಕುಟುಂಬಶ್ರೀ ಯೋಜನೆಯಡಿಯಲ್ಲಿ ಪಳಗಿದವರಾಗಿದ್ದಾರೆ. ವಿವಿಧ ಪಕ್ಷಗಳಲ್ಲಿ, ಪಕ್ಷೇತರರಾಗಿ ಕಣಕ್ಕಿಳಿದಿದ್ದ ಕೇರಳಿ ಮಹಿಳೆಯರು ಹೊಸ ರಾಜಕೀಯದ ಭಾಷ್ಯ ಬರೆಯುವತ್ತ ದಾಪುಗಾಲು ಇಟ್ಟಿದ್ದಾರೆ ಎಂದು ಹೇಳಬಹುದು. ಮತ್ತಷ್ಟು ಓದು »

18
ಡಿಸೆ

ಸಾವನ್ನು ನಾಚಿಸಿದ ರ್ಯಾಂಡಿ!

– ಸುಪ್ರೀತ್.ಕೆ.ಎಸ್

‘ದಿ ಲಾಸ್ಟ್ ಲೆಕ್ಚರ್’ ಎಂಬ ಹೆಸರಿನಲ್ಲಿ ಕಾರ್ನೆಗಿ ಮೆಲ್ಲನ್ ವಿಶ್ವವಿದ್ಯಾಲಯ ಉಪನ್ಯಾಸ ಸರಣಿಯನ್ನು ಏರ್ಪಡಿಸುತ್ತದೆ. ವರ್ಷಕ್ಕೊಬ್ಬರ ಹಾಗೆ ತನ್ನ ವಿಶ್ವವಿದ್ಯಾಲಯದ ಅಧ್ಯಾಪಕರೊಬ್ಬರು ‘ಇದೇ ತಮ್ಮ ಬದುಕಿನ ಕಟ್ಟ ಕಡೆಯ ಉಪನ್ಯಾಸ’ ಎಂದು ಕಲ್ಪಿಸಿಕೊಂಡು ವಿದ್ಯಾರ್ಥಿಗಳಿಗೆ ಲೆಕ್ಚರ್ ಕೊಡಬೇಕು. ತಾವು ತಮ್ಮ ಬದುಕಿನ ಅಂತಿಮ ಘಟ್ಟದಲ್ಲಿ ನಿಂತಾಗ ತಮಗೆ ತಮ್ಮಿಡೀ ಬದುಕಿನಲ್ಲಿ ಬಹುಮುಖ್ಯವಾಗಿ ಕಾಣುವ ಸಂಗತಿಗಳ್ಯಾವುವು ಎಂಬ ವಿವೇಚನೆ ನಡೆಸಲು ಅಧ್ಯಾಕಪರಿಗೆ ಇದು ಅವಕಾಶ ಮಾಡಿಕೊಟ್ಟರೆ, ಅಕಾಡೆಮಿಕ್ ಮುಖವಾಡದಾಚೆಗಿನ ತಮ್ಮ ಲೆಕ್ಚರರ ವ್ಯಕ್ತಿತ್ವದ ಪರಿಚಯ ವಿದ್ಯಾರ್ಥಿಗಳಿಕ್ಕೆ ಸಿಕ್ಕುತ್ತದೆ ಎಂಬ ಉದ್ದೇಶ ವಿಶ್ವವಿದ್ಯಾಲಯದ್ದು .

ಸೆಪ್ಟೆಂಬರ್ ಹದಿನೆಂಟು ೨೦೦೭ರಂದು ‘ದಿ ಲಾಸ್ಟ್ ಲೆಕ್ಚರ್’ ಸರಣಿಯಲ್ಲಿ ಉಪನ್ಯಾಸ ನೀಡಿದವರು ಮೆಲಾನ್‌ನಲ್ಲಿ ಕಂಪ್ಯೂಟರ್ ಸೈನ್ಸ್ ಬೋಧಿಸುತ್ತಿದ್ದ ರಾಂಡಾಲ್ಫ್ ಫೆಡ್ರರಿಕ್ ಪೌಚ್. ಅವರ ಉಪನ್ಯಾಸ ಸಾಮಾನ್ಯವಾದುದಾಗಿರಲಿಲ್ಲ. ಉಳಿದೆಲ್ಲಾ ಅಧ್ಯಾಪಕರು ಅದು ತಮ್ಮ ಬದುಕಿನ ಕಟ್ಟ ಕಡೆಯ ಉಪನ್ಯಾಸ ಎಂದು ‘ಕಲ್ಪಿಸಿ’ಕೊಂಡು ಮಾತಾಡಿದ್ದರೆ ರ್‍ಯಾಂಡಿಗೆ ಅದು ನಿಜಕ್ಕೂ ಕಟ್ಟ ಕಡೆಯ ಉಪನ್ಯಾಸವಾಗಿತ್ತು. ಭಾಷಣ ನೀಡುವ ಹೊತ್ತಿಗೆ ಆತ ದೇಹದಲ್ಲಿ ಮನೆ ಮಾಡಿಕೊಂಡಿದ್ದ ಯಕೃತ್ತಿನ ಕ್ಯಾನ್ಸರ್ ಅಂತಿಮ ಘಟ್ಟದಲ್ಲಿತ್ತು. ಆತನಿಗೆ ಹೆಚ್ಚೆಂದರೆ ಆರು ತಿಂಗಳು ಬದುಕುವ ಅವಕಾಶವನ್ನು ನೀಡಿತ್ತು ಕ್ಯಾನ್ಸರ್. ಸಾವಿನ ಸಮ್ಮುಖದಲ್ಲಿ ನಿಂತಂತೆ ಕಲ್ಪಿಸಿಕೊಂಡು ಉಪನ್ಯಾಸ ಕೊಡುವುದು ಬೇರೆ. ಆದರೆ ಸಾವು ಡೇಟು ಕೊಟ್ಟು ಹೋದ ನಂತರ ತನ್ನ ಬದುಕಿನ ಬಗ್ಗೆ ಮಾತನಾಡುವುದು ಬೇರೆ.ಹಾಗೆ ಮಾತಾಡುವ ಮನುಷ್ಯನಲ್ಲಿ ಅದಮ್ಯ ಜೀವನೋತ್ಸಾಹ, ಆತ್ಮವಿಶ್ವಾಸ ಇರಬೇಕಾಗುತ್ತದೆ. ಅವೆಲ್ಲವೂ ರ್‍ಯಾಂಡಿಯಲ್ಲಿದ್ದವು. ಮತ್ತಷ್ಟು ಓದು »

17
ಡಿಸೆ

ಲಲಿತ ಪ್ರಬಂಧ: ಹಾಸ್ಟೆಲ್ ಹುಡುಗರ ಕಾಫಿ ಯಾತ್ರೆ!

ಸುಪ್ರೀತ್ ಕೆ ಎಸ್

‘ಎಷ್ಟನೆ ಸಲದ ದಂಡ ಯಾತ್ರೆಯಪ್ಪಾ ಇದು?’ ಹಾಗಂತ ಕಾಫಿಗೆ ಕರೆಯುವ ಗೆಳೆಯರನ್ನು ರೇಗಿಸುತ್ತಿರುತ್ತೇನೆ. ಹಾಸ್ಟೆಲ್ಲಿನ ಹುಡುಗರು ಕಾಫಿಗೆ ಹೋಗುವ ಸಂಭ್ರಮವೇ ಬೇರೆ. ಬೆಳಿಗಿನ ಚಳಿಯಲ್ಲಿ ಧೈರ್ಯ ಮಾಡಿ ಎದ್ದವರು ಮಾಡಿಟ್ಟ ಕಾಫಿಯನ್ನು ತಮ್ಮ ಕೆಪಾಸಿಟಿಗೆ ತಕ್ಕಂತ ಹೀರಿಬಿಟ್ಟಿರುತ್ತರಾದ್ದರಿಂದ ನನ್ನಂಥ ಸೂರ್ಯದ್ವೇಷಿಗಳಿಗೆ, ಏಳು ಗಂಟೆಯ ಮೊದಲು ಎದ್ದು ಬಿಡುವುದು ನೈತಿಕ ಅಧಃಪಥನ ಎಂದು ಭಾವಿಸಿರುವವರಿಗೆ ಖಾಲಿ ಕಾಫಿ ಜಗ್ ಮಾತ್ರ ಕಾದಿರುತ್ತದೆ!

ಎಲ್ಲಾ ಹುಡುಗರು ಇದ್ದಾಗ ಹಾಸ್ಟೆಲ್ಲಿನ ವಾತಾವರಣ ಕಲಕಲ ಎನ್ನುತ್ತಿರುತ್ತದೆ. ಎಲ್ಲರಿಗೂ ಕಾಲೇಜು ರಜೆಯಿದ್ದರೆ, ಇಲ್ಲವೇ ಪರೀಕ್ಷೆಗಳಿಗೆ ಓದಲು ಕಾಲೇಜಿನವರೇ ರಜೆ ಕರುಣಿಸಿ ಓಡಿಸಿದ್ದರೆ ಕಾಫಿ ಟೀ ಕುಡಿಯಲು ಸಮೀಪದ ಕಾಫಿ ಬಾರ್‌ಗೆ ದಂಡು ದಂಡು ಸಮೇತ ಲಗ್ಗೆ ಹಾಕುವುದನ್ನು ನೋಡುವುದು ಕಣ್ಣಿಗೆ ಹಬ್ಬ. ಬೆಳಗಿನ ತಿಂಡಿ ಮುಗಿಸಿಕೊಂಡ ನಂತರ ಒಂದು ಸುತ್ತು, ಮಧ್ಯಾನದ ಊಟಕ್ಕೂ, ತಿಂಡಿಗೂ ನಡುವಿನ ಸಮಯದಲ್ಲಿ ಓದಿ ಓದಿ ಸುಸ್ತಾದವರಿಗಾಗಿ ಒಂದು ಸುತ್ತು, ಮಧ್ಯಾನದ ಊಟ ಮುಗಿಸಿ ಗಡದ್ದಾಗಿ ನಿದ್ದೆ ಹೊಡೆದು ಸಂಜೆಗೆ ಎದ್ದು ಒಂದು ಸುತ್ತು, ರಾತ್ರಿ ಊಟವಾದ ಮೇಲೆ ಓದುತ್ತಾ ಕೂರಲು ಎನರ್ಜಿ ಬೇಕಾದವರದ್ದು ಒಂದು ಸುತ್ತು ಕಾಫಿ ಬಾರ್ ಪರ್ಯಟನೆ- ಇದು ನಮ್ಮ ದೈನಂದಿನ ಅವಿಭಾಜ್ಯ ಅಂಗ. ಕೆಲವೊಮ್ಮೆ ಕಾಲೇಜು ಗೆಳೆಯರು ನಮ್ಮ ಭೇಟಿಗೆ ಹಾಸ್ಟೆಲ್ಲಿಗೇ ಬಂದಾಗ, ಒಲ್ಲದ ಅತಿಥಿ ರೂಮಿನಲ್ಲಿ ಒಕ್ಕರಿಸಿಕೊಂಡು ಕೊರೆತದಿಂದ ರೋಧನೆ ಕೊಡುವಾಗ ಅವನನ್ನು ಸಾಗಿ ಹಾಕಲು ಈ ‘ಕಾಫಿ’ ಆಪದ್ಭಾಂದವನ ಹಾಗೆ ನೆರವಿಗೆ ಬರುವುದೂ ಇದೆ. ಮತ್ತಷ್ಟು ಓದು »