ವಿಷಯದ ವಿವರಗಳಿಗೆ ದಾಟಿರಿ

Posts from the ‘ಲೇಖನಗಳು’ Category

15
ಡಿಸೆ

ಕೋರೆ-ಷಡಕ್ಷರಿ-ಮಯ್ಯ ಶುರು ಮಾಡ್ತಾರಂತೆ ಸುವರ್ಣ ಕರ್ನಾಟಕ…ಹೌದಾ?

ಆತ್ರಾಡಿ ಸುರೇಶ ಹೆಗ್ಡೆ

ಹೌದು ಸುದ್ದಿಮನೆಯ ಸುತ್ತುಮುತ್ತಲಿಂದ, ಹೊಸ ಹೊಸ ಗಾಳಿ ಸುದ್ದಿಗಳು, ದಿನದಿಂದ ದಿನಕ್ಕೆ ಹೊಸ ಹೊಸ ಸಂಗತಿಗಳೊಂದಿಗೆ, ಯಾವುದೇ ಲಂಗು ಲಗಾಮಿಲ್ಲದೇ ತೇಲಿಬರುತ್ತಿವೆ.

ನಿನ್ನೆ ಸಂಜೆ ವಿಶೇಷವಾಗಿ ನನ್ನ ಕಿವಿಗಳಿಗೆ ಕೇಳಿಸಿದ ಪಿಸುಮಾತುಗಳ ಪ್ರಕಾರ, ವಿಜಯ ಕರ್ನಾಟಕದ ಮಾಜಿ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ಟರು ನವದೆಹಲಿಯಿಂದ ಬೆಂಗಳೂರಿಗೆ, ಹೊಸ ಸುದ್ದಿಯೊಂದನ್ನು, ಹೊಸ ಯೋಜನೆಯೊಂದರ ರೂಪುರೇಷೆಯನ್ನು ಗುಟ್ಟಾಗಿ ಹಿಡಿದುಕೊಂಡು ಬಂದಿರುತ್ತಾರಂತೆ.

ವಿಜಯ ಸಂಕೇಶ್ವರರ “ಆನಂದ ಕರ್ನಾಟಕ”ದ ಯೋಜನೆಗಳು ಪ್ರಾಥಮಿಕ ಹಂತದಲ್ಲಿ ಇರುವಾಗಲೇ, ಉದ್ಯಮಿ ಹಾಗೂ ಸಂಸದ ಪ್ರಭಾಕರ ಕೋರೆಯವರು ಮೀನಿಗೆ ಗಾಳ ಬೀಸಿದ್ದಾರೆ ಎನ್ನುವ ಸುದ್ದಿ ಇದೆ.

ಅಣಿಮುತ್ತುಗಳನ್ನು ದಿನವೂ ಉಣಬಡಿಸುವ ಷಡಕ್ಷರಿಯವರು ಮತ್ತು ಹೊಸ ಹೊಸ ಅಡುಗೆಗಳನ್ನು ಉಣಬಡಿಸುವ ಮಯ್ಯರವರನ್ನು ಸೇರಿಸಿಕೊಂಡು, ಕೋರೆಯವರು ಸುಮಾರು ೬೦-೭೦ ಕೋಟಿ ರೂಪಾಯಿಗಳ ಯೋಜನೆಯೊಂದನ್ನು ಭಟ್ಟರ ಮುಂದಿಟ್ಟಿದ್ದಾರಂತೆ. ಆ ಯೋಜನೆಯ ಪ್ರಕಾರ “ಸುವರ್ಣ ಕರ್ನಾಟಕ” ಅನ್ನುವ ಹೊಸ ದಿನಪತ್ರಿಕೆ ಈ ನಾಡಿನ ಪತ್ರಿಕಾ ರಂಗದಲ್ಲಿ ಸದ್ಯದಲ್ಲೇ ಸಂಚಲನ ಹೊರಡಿಸಲಿದೆಯಂತೆ. ಮತ್ತಷ್ಟು ಓದು »

15
ಡಿಸೆ

೧೨ ವರ್ಷದ ಪೋರ ಅಲೆಕ್ಸ್ ಮಿಲ್ಲರ್ ನ ಕಥೆ

ಓಂಶಿವಪ್ರಕಾಶ್ ಎಚ್. ಎಲ್.

ಸ್ಕೂಲ್ ಮೆಟ್ಟಿಲೇರುತ್ತ, ಸಣ್ಣ ಪುಟ್ಟ ಲೆಕ್ಕ ಪಾಠಗಳನ್ನು ಕಲಿಯುತ್ತ, ೧೨ನೇ ವರ್ಷದ ಆಸುಪಾಸಿಗೆ ವಿಜ್ಞಾನ ಇತ್ಯಾದಿ ವಿಷಯಗಳ ಬಗ್ಗೆ ಕುತೂಹಲ ಬೆಳೆಸಿಕೊಳ್ಳುತ್ತ ಬೆಳೆದ ನನ್ನ, ನಿಮ್ಮಂತಹವರ ಕಥೆ ಹಳೆಯದಾಯಿತು ಬಿಡಿ. ವಿಶ್ವವ್ಯಾಪಿ ತನ್ನ ಚಾಚನ್ನು ಹರಿಸಿರುವ ಕಂಪ್ಯೂಟರು,  ಕೀಲಿಮಣೆಯ ಮೇಲೆಯೇ ಸಂಪರ್ಕವನ್ನು ನೀಡುವ ಇಂಟರ್ನೆಟ್ ಇರುವ ಈ ಶತಮಾನದಲ್ಲಿ, ಅಪ್ಪ ಅಮ್ಮಂದಿರನ್ನೂ ಮೀರಿಸಿ ತಂತ್ರಜ್ಞಾನವನ್ನು ತಮ್ಮದಾಗಿಸಿಕೊಳ್ಳುತ್ತಿರುವ ಅನೇಕರು ಇಂದು ನಮ್ಮ ಸುತ್ತಮುತ್ತಲಿದ್ದಾರೆ. ವಿಸ್ಮಯಗಳ ಲೋಕದಲ್ಲಿ ಇದೂ ಒಂದು. ಆಗಾಗ್ಗೆ ಹೀಗೆ ನಮ್ಮ ಮಧ್ಯೆ ಕಂಡು ಬರುವ ಇಂತಹವರು ನಮ್ಮ ಹುಡುಗರಿಗೂ ಒಂದಿಷ್ಟು ಸ್ಪೂರ್ತಿಯಾಗಲಿ, ಜೊತೆಗೆ ವೇಳೆ, ತಂತ್ರಜ್ಞಾನ, ಸೌಲಭ್ಯಗಳ ಕೊರತೆ ಇವುಗಳ ಮಧ್ಯೆ ಇದು ನಮ್ಮವರಿಗೆ ಹೊರೆಯೂ ಆಗದಿರಲಿ.

ಈ ಕಥೆ ೧೨ ವರ್ಷದ ಪೋರ ಅಲೆಕ್ಸ್ ಗ್ಲೆನ್ ನದ್ದು. ಪೋರನಾಗಿದ್ದರೂ ಈತ ಸಾಮಾನ್ಯನಲ್ಲ. ಇಂಟರ್ನೆಟ್ ಬ್ರೌಸ್ ಮಾಡಲು ಬಳಸುವ ಮೋಜಿಲ್ಲಾ ಫೈರ್ ಫಾಕ್ಸ್ ನ ಸುರಕ್ಷತೆಯ ಕೊರತೆಗಳನ್ನು ಹೆಕ್ಕಿ ತೆಗೆಯುವುದು ಈತನ ಹವ್ಯಾಸ.  ಎರಡು ವಾರಗಳ ಇವನದೊಂದು ಹುಡುಕು ೩೦೦೦$ ಗಳನ್ನು ನಿರಾಯಾಸವಾಗಿ ಮೋಜಿಲ್ಲಾ ಫೌಂಡೇಶನ್ ನಿಂದ ಸಂಪಾದಿಸುವಂತೆ ಮಾಡಿದೆ.

ಸುರಕ್ಷತೆಗೆ ಪ್ರಾಶಸ್ತ್ಯ ನೀಡುವ ಸಾಪ್ಟ್ವೇರ್ ಕಂಪೆನಿಗಳು, ತಮ್ಮ ತಂತ್ರಾಂಶದ ಸುರಕ್ಷತೆಯ ಕೊರತೆಯ ಬಗ್ಗೆ ಸುಳಿವನ್ನು ನೀಡುವವರಿಗೆ ಡಾಲರುಗಳ ಮೊತ್ತದಲ್ಲಿ ಇನಾಮು ನೀಡುತ್ತವೆ. ಇದೇ ಯುನಿವರ್ಸಿಟಿ ಪ್ರೆಪ್ ಅಕ್ಯಾಡೆಮಿಯಲ್ಲಿ ೭ನೇ ಇಯತ್ತೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅಲೆಕ್ಸ್ ಗೆ ಪ್ರೇರೇಪಣೆ. ತನ್ನ ಕಂಪ್ಯೂಟರಿನ ಬ್ರೌಸರ್ ನಲ್ಲೇ ಇರಬಹುದೇ ಕೊರತೆ ಎಂದು ಇವನು ಪ್ರತಿದಿನ ೯೦ ನಿಮಿಷಗಳಷ್ಟು ಹೊತ್ತು ನೆಡೆಸಿದ ಸಂಶೋಧನೆ ಕೊನೆಗೂ ಫಲ ನೀಡಿದೆ. ಕಂಪ್ಯೂಟರಿನ ಸೃತಿಯಲ್ಲಿನ ಒಂದು ದೋಷವನ್ನು ಕಂಡುಹಿಡಿದ ಈತನ ಸಾಧನೆ ಸಾಮಾನ್ಯವಾದುದ್ದಲ್ಲ ಮತ್ತು ಇಂತಹ ನ್ಯೂನ್ಯತೆಯನ್ನು ಕಂಡು ಹಿಡಿಯುವುದು ನಿಷ್ಣಾತರಿಗೇ ಸೈ ಎಂದು ಮೋಜಿಲ್ಲಾದ ಸೆಕ್ಯೂರಿಟಿ ಕಾರ್ಯಕ್ರಮದ ನಿರ್ವಾಹಕ ಹೇಳುತ್ತಾರೆ. ಮತ್ತಷ್ಟು ಓದು »

14
ಡಿಸೆ

ಭೈರಪ್ಪ ಮತ್ತು ತರ್ಲೆ ರಾಜ್ಯ ರಾಜಕೀಯ…

-ಶಂಶೀರ್, ಬುಡೋಳಿ

ಇವರೆಗೆ ನೀವು  ಜೆಡಿ‌ಎಸ್, ಕಾಂಗ್ರೆಸ್ಸನ್ನು ಬಿಜೆಪಿ ತಮ್ಮ ತರಲೆ ಮನೋಸ್ಥಿತಿಯ ಮೂಲಕ ತರಾಟೆಗೆ ತೆಗೆದುಕೊಂಡಿರುವುದನ್ನು ನೋಡಿರಬಹುದು. ಆದರೆ ಈಗ ನಡೆದಿರುವುದು ವಿಶೇಷವೇನೂ ಅಲ್ಲವಾದರೂ ರಾಜಕೀಯ ವ್ಯಕ್ತಿಯಲ್ಲದ, ರಾಜಕೀಯ ಪರ ಮಾತನಾಡುವ ಸಾಹಿತಿಯೊಬ್ಬರು ತಮ್ಮ ಮನೋಸ್ಥಿತಿಯನ್ನು, ಕೋಮುವಾದಿ ಸಾಹಿತಿ ಎಂಬ ಹಣೆಪಟ್ಟಿ ಕಟ್ಟಿಕೊಂಡ ಕನ್ನಡ ಸಾಹಿತಿ ಎಸ್.ಎಲ್.ಭೈರಪ್ಪ ಹೊರಗೆಡುವ ಮೂಲಕ ಮತ್ತೊಮ್ಮೆ ಸುದ್ದಿಗೆ ಬಂದಿದ್ದಾರೆ.

ಹೆಚ್ಚಿನದಾಗಿ ತಮ್ಮ ಕೃತಿಗಳಲ್ಲಿ ಜಾತಿ, ಧರ್ಮಗಳ ಬಗ್ಗೆ ಮಾತನಾಡುತ್ತಿದ್ದ ಭೈರಪ್ಪನವರು, ಏಕಾ‌ಏಕಿ ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿರುವುದರ ಹೊತ್ತಿನಲ್ಲಿ ಗುಜರಾತ್ ಮಾದರಿ ರಾಜಕೀಯವನ್ನು ಮುಂದಿಟ್ಟುಕೊಂಡು ಕರ್ನಾಟಕ ಸರಕಾರವನ್ನು ಬೆಂಬಲಿಸಬೇಕೆಂದು ಪರೋಕ್ಷವಾಗಿ ಕರೆ ಕೊಟ್ಟಿದ್ದಾರೆ. ತಾನು ವಾಸಿಸುವ, ಜನ್ಮ ತಾಳಿದ ಕರ್ನಾಟಕದ  ರಾಜ್ಯದ ಜನರ ಮನಸ್ಥಿತಿಯನ್ನು ತರಲೆಗೆ ಹೊಲಿಸಿರುವ ಇಂತಹವರನ್ನು ಏನೆನ್ನಬೇಕು? ಕರ್ನಾಟಕ ರಾಜ್ಯದ ಜನರ ತರ‍್ಲೆ  ಮನೋಸ್ಥಿತಿಯೇ  ರಾಜ್ಯದ ಅಭಿವೃದ್ದಿಗೆ ಅಡ್ಡಿಯಾಗಿದೆ ಎಂದು ಇವರು ಹೇಳಿದ್ದು ತಪ್ಪಾಗಿದೆ ಎಂದೆನಿಸುತ್ತದೆ. ನಿಜವಾದ ಕಾರಣವೆಂದರೆ ರಾಜ್ಯ ಸಚಿವ ಸಂಪುಟದ ತರ‍್ಲೆ ಮನೋಸ್ಥಿತಿಯೆ ರಾಜ್ಯದ ಅಭಿವೃದ್ದಿಗೆ ಅಡ್ಡಿಯಾಗುತ್ತಿದೆ ಎಂದು ಹೇಳಬೇಕಾಗಿತ್ತು. ಆದರೆ ಭೈರಪ್ಪನವರು ಬೇಕೆಂತಲೂ ಅಥವಾ ಗೊತ್ತಿಲ್ಲದೆಯೋ ಇಂತಹ ಹೇಳಿಕೆ  ಕೊಡುವ ಮೂಲಕ ಮತ್ತೊಮ್ಮೆ ತಮ್ಮ ಮನೋಸ್ಥಿತಿಯ ಅತಂತ್ರತೆಯನ್ನು ಬಿಚ್ಚಿಟ್ಟಿದ್ದಾರೆ ಎಂದೆನಿಸುತ್ತದೆ. ಮತ್ತಷ್ಟು ಓದು »

13
ಡಿಸೆ

ರಾಷ್ಟ್ರಭಾಷೆಯಿಲ್ಲದ ರಾಷ್ಟ್ರದಲ್ಲಿ…

ರಾಕೇಶ್ ಶೆಟ್ಟಿ
 
ಅದು ೧೯೩೭ ರ ಸಮಯ ಇಡಿ ದೇಶ ಸ್ವಾತಂತ್ರ್ಯ ಹೋರಾಟದಲ್ಲಿ ಮುಳುಗಿತ್ತು.ಆದರೆ ಇತ್ತ ತಮಿಳು ನಾಡಿನಲ್ಲಿ ಬೇರೆಯದೇ ಹೋರಾಟ ಶುರುವಾಗಿತ್ತು! ಒಂದು ಕಡೆ ನೋಡಿದರೆ ವಿದೇಶಿಗಳ ವಿರುದ್ಧ ಹೋರಾಟ ಇನ್ನೊಂದು ಕಡೆ ಇದೆ ದೇಶದ ಮತ್ತೊಂದು ಭಾಷೆಯ ಹೇರಿಕೆಯ ಮೇಲೆ ಹೋರಾಟ! ಅದು ‘ಹಿಂದಿ ಹೇರಿಕೆಯ ವಿರುದ್ಧ’!
ಮೇಲ್ನೋಟಕ್ಕೆ ಸ್ವಾತಂತ್ರ್ಯ ಹೋರಾಟದಂತಹ ಸಮಯದಲ್ಲಿ ದಂಗೆಯೆದ್ದ ತಮಿಳರ ಮೇಲೆ ಕೋಪ ಉಕ್ಕಿ ಬರುವುದು ಸಹಜವೇ.ಆದರೆ ಅವರೇನು ಸುಮ್ ಸುಮ್ನೆ ಬಾಯಿ ಬಡ್ಕೊತಿದ್ರಾ? ಅವರು ಹಾಗೆ ತಿರುಗಿ ಬೀಳುವಂತೆ ಮಾಡಿದ್ದಾದರು ಏನು? ಮಾಡಿದ್ದಾದರೂ ಯಾರು? ಅವ್ರ ಹೆಸರು ಸಿ.ರಾಜಗೋಪಾಲಚಾರಿ.

ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ೧೯೩೭ರಲ್ಲಿ ನಡೆದ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ನ್ಯಾಷನಲ್ ಕಾಂಗ್ರೆಸ್ಸಿನ ರಾಜಗೋಪಾಲಚಾರಿಯವರು, ಶಿಕ್ಷಣದಲ್ಲಿ ‘ಹಿಂದಿ’ ಕಲಿಕೆಯನ್ನ ಕಡ್ಡಾಯ ಮಾಡಿಬಿಟ್ಟರು.ಅಷ್ಟು ಸಾಕಾಯ್ತು ಪೆರಿಯಾರ್ ನೇತೃತ್ವದಲ್ಲಿ ಶುರುವಾದ ಹೋರಾಟ ಮೂರು ವರ್ಷಗಳಷ್ಟು ಕಾಲ ನಡೆದು ಕಡೆಗೆ ೧೯೪೦ರಲ್ಲಿ ಬ್ರಿಟಿಷರು ಆ ನಿರ್ಧಾರವನ್ನ ವಾಪಸ್ ಪಡೆದ ಮೇಲಷ್ಟೇ ತಮಿಳುನಾಡು ಶಾಂತವಾಗಿದ್ದು.ಹಿಂದಿಯನ್ನ ರಾಷ್ಟ್ರ ಭಾಷೆ ಮಾಡುವ ನಾಯಕರ ಆಸೆಗೆ ಈ ಹೋರಾಟ ಭಂಗ ತರುವಲ್ಲಿ ತಮಿಳರ ಹೋರಾಟ ಯಶಸ್ವಿಯಾಗಿತ್ತು. ಮತ್ತಷ್ಟು ಓದು »

10
ಡಿಸೆ

ಸುದ್ದಿ ಮಾತಿನ ಭಟ್ಟರು ಸುದ್ದಿಯದಾಗ…

ಸಾತ್ವಿಕ್ ಎನ್ ವಿ

 ‘ಸರ್, ಆಗಸತ್ತರಕ್ಕೆ ನೀವು ಬೆಳೆಸಿದ ಪತ್ರಿಕೆ ಇ೦ದೆ ಸದ್ದಿಲ್ಲದೆ ಹೊರಬರಲು ಕಾರಣವೇನು ? ಹೊಸ ಚಿ೦ತನೆಗಳು, ಮೊನಚಾದ ಬರಹಗಳು, ಅ೦ಕಣಗಳು ಒ೦ದೇ ಎರಡೇ..ಲವಲವಕೆ ಯ೦ತಹ ಹೊಸ ರೂಪವನ್ನು ಪತ್ರಿಕೆಗೆ ಪರಿಚಯಿಸಿದಿರಿ, ರಾಜಕಾರಣಿ ಗಳ ಮಾನ ಹರಾಜು ಹಾಕಿ ಪತ್ರಿಕೊಧ್ಯಮದ ಘನತೆ ಹೆಚ್ಚಿಸಿದಿರಿ…..ನೀವಿಲ್ಲದ ಪತ್ರಿಕೆ ಇನ್ನುಮು೦ದೆ ನೀರಸ…ನಿಮ್ಮೂದಿಗೆ ನಾವಿದ್ದೇವೆ..’

ಇಂಥ ಒಂದು ಕಾಮೆಂಟ್ ವಿಶ್ವೇಶ್ವರ ಭಟ್ಟರ ಫೇಸ್ ಬುಕ್ ನಲ್ಲಿ ಇದೆ ಅಂದ್ರೆ ಅವರ ಬರಹಗಳನ್ನು ಆರಾಧಿಸುವ ಜನ ಎಷ್ಟಿರಬಹುದೆಂದು ಯೋಚಿಸಿ. ಪತ್ರಿಕೆಯ ಸಂಪಾದಕನಾದವನಿಗೆ ಇದಕ್ಕಿಂತ ಹೆಮ್ಮೆ ಬೇಕೆ? ಒಂದು ಕಾಲವಿತ್ತು. ಪತ್ರಿಕೆಯ ಸಂಪಾದಕರ ಹೆಸರುಗಳನ್ನು ಪತ್ರಿಕೆಯ ಕಡೆಯ ಸಾಲುಗಳಲ್ಲಿ ಹುಡುಕಬೇಕಾಗಿತ್ತು. ಈ ಸಂಸ್ಕೃತಿಯನ್ನು ತಪ್ಪಿಸಿ ದಿನವೂ ಬರೆಯುವ ಯಾರಾದರೂ ಸಂಪಾದಕರಿದ್ದರೆ ಅದು ವಿಶ್ವೇಶ್ವರ ಭಟ್ಟರು ಮಾತ್ರ ಎಂಬಂತಾಗಿತ್ತು.

ಮತ್ತಷ್ಟು ಓದು »

9
ಡಿಸೆ

ಇದು ನಿತೀಶಣ್ಣನ ದರ್ಬಾರು!! ಕಾರುಬಾರು!!

ಕೆ ಎಸ್ ರಾಘವೇಂದ್ರ ನಾವಡ

ಛೇ!ಒಬ್ಬ ನಿತೀಶರ೦ಥವರೋ ಯಾ ನರೇ೦ದ್ರ ಮೋದಿಯ೦ಥವರೋ ಯಾರಾದರೂ ಒಬ್ಬ ಜನನಾಯಕ ನಮ್ಮ ಕರ್ನಾಟಕ ರಾಜಕೀಯದಲ್ಲಿ ಉದಯಿಸಬಾರದಿತ್ತೇ ಎ೦ದು ಒಮ್ಮೊಮ್ಮೆ ಕಾಲದ ಕನ್ನಡಿಗೆ ಅನ್ನಿಸುವುದು೦ಟು!ಆದರೆ ಏನು ಮಾಡುವುದು? ಕಾ೦ಗ್ರೆಸ್ಸೂ ಬೇಡ, ಕುಮಾರಣ್ಣನೂ ಬೇಡ ಅ೦ತ ಅವರಿಗೂ  ಹಾಗೂ ನಮಗೂ ಒಮ್ಮೆ ಬದಲಾವಣೆಯ ಗಾಳಿ ಬೀಸಲೆ೦ಬ ಕಾರಣದಿ೦ದಲೋ ಯಾ ಒಳ ಮನಸ್ಸಿನಲ್ಲಿ ಭಾ.ಜ.ಪಾದ ಮೇಲಿದ್ದ ನಿರೀಕ್ಷೆ ಕಾತುರತೆಗಳಿ೦ದ ಮತ್ತು ಕುಮಾರಣ್ಣನಿ೦ದ ವ೦ಚನೆಗೊಳಗಾದ ಯಡಿಯೂರಪ್ಪನವರ ಮೇಲಿನ ಕರುಣೆಯಿ೦ದಲೋ  ಮತದಾರರು ಎರಡೂವರೆ ವರ್ಷಗಳ ಹಿ೦ದೆ ಯಡಿಯೂರಪ್ಪನವರನ್ನು ಆರಿಸಿದರೆ, ಅವರೋ ಇವರನ್ನೆಲ್ಲಾ ಮೀರಿಸಿದರು!!ಕರ್ನಾಟಕದ ಸಮಸ್ತ ಜನತೆ ಬೇಸರದಿ೦ದ ನಿಟ್ಟುಸಿರು ಬಿಡುತ್ತಿರುವ ಈ ಸ೦ರ್ಭದಲ್ಲಿ ದೂರದ ಗುಜರಾತ್ ನಲ್ಲಿ ಮೋದಿಯವರ ಮೋಡಿ ಎರಡನೇ ಅವಧಿಗೂ ಮು೦ದುವರೆದಿದ್ದು ಹಾಗೂ ಬಿಹಾರದಲ್ಲಿ ನಿತೀಶರು ಎರಡನೇ ಅವಧಿಗೆ ಪುನರಾಯ್ಕೆಯಾಗಿದ್ದು ನೈಜ ಜಾತ್ಯಾತೀತವಾದಿಗಳಿಗೆ ಹಾಗೂ ಅಭಿವೃಧ್ಧಿಯನ್ನು ಬಯಸುವ ಮನಸ್ಸುಗಳಿಗೆ ತುಸುವಾದರೂ ನೆಮ್ಮದಿ ನೀಡಿದೆ ಎ೦ದೇ ಹೇಳಬೇಕಾಗುತ್ತದೆ!! ಏಕೆ೦ದರೆ ಈ ಎರಡೂ ಗೆಲುವುಗಳು ಭಾರತೀಯ ಜನತಾ ಪಕ್ಷದ ವೈಯಕ್ತಿಕ ದೃಷ್ಟಿಯಿ೦ದ ಹಾಗೂ ಆಯಾ ರಾಜ್ಯಗಳ ಮಹಾ ಜನತೆಗಳ ದೃಷ್ಟಿಯಿ೦ದ ಮೈಲುಗಲ್ಲುಗಳೆ೦ದೇ ಹೇಳಬಹುದು! ಆ ನಿಟ್ಟಿನಲ್ಲಿ ನರೇ೦ದ್ರ ಮೋದಿಯವರ ಮೇಲೆ ಕಾಲದ ಕನ್ನಡಿ ತನ್ನ ಕ್ಷಕಿರಣ ಈಗಾಗಲೇ ಬೀರಿದೆ. ಈಗ “ಬಿಹಾರಿ ಬಾಬು“ ನಿತೀಶ“ರ ಸರದಿ. ಮತ್ತಷ್ಟು ಓದು »

4
ಡಿಸೆ

ಸಾಂಸ್ಕೃತಿಕ ಕಾರ್ಯಕ್ರಮಗಳ ಔಚಿತ್ಯತೆ

ಜಗನ್ನಾಥ್ ಶಿರ್ಲಾಲ್

ನಮ್ಮ ನೆಲದ ಸಾಂಸ್ಕೃತಿಕ ಸತ್ವವನ್ನು ಅನಾವರಣಗೊಳಿಸುವ ಕಲಾ ಪ್ರದರ್ಶನವನ್ನು ಸಾಂಸ್ಕೃತಿಕ ಕಾರ್ಯಕ್ರಮ ಎನ್ನಬಹುದು. ಇಂತಹ ಕಲಾ ಸಾಧ್ಯತೆಗಳನ್ನು ಆಸ್ವಾದಿಸುವ ಮೂಲಕ ಸಹೃದಯ ಪ್ರೇಕ್ಷಕರು ಮತ್ತಷ್ಟು ಸುಸಂಸ್ಕೃತರಾಗಿ ಬೆಳೆಯಬಹುದು. ಸಾಂಸ್ಕೃತಿಕ ಕಾರ್ಯಕ್ರಮ ಎಂದಾಕ್ಷಣ ಇಷ್ಟಪಡದವರು ಇಲ್ಲ. ದಾರಿಹೋಕರೂ ಕೂಡಾ ಆಸುಪಾಸಿನ ಶಾಲಾ ಕಾಲೇಜು, ಯುವಕ ಸಂಘ, ದೇವಸ್ಥಾನದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕ್ಷಣ ಮಾತ್ರದಲ್ಲಿ ದೃಷ್ಟಿ ಹಾಯಿಸುತ್ತಾರೆ. ಇನ್ನೂ ಕೆಲವರು ತನ್ನೆಲ್ಲ ಅತ್ಯಗತ್ಯ ಕೆಲಸಗಳನ್ನು ಬದಿಗೊತ್ತಿ ಕಾರ್ಯಕ್ರಮ ವೀಕ್ಷಿಸುವವರಿದ್ದಾರೆ.

       ಸಾಂಸ್ಕೃತಿಕ ಕಾರ್ಯಕ್ರಮಗಳು ಆಧುನಿಕ ಯುಗದಲ್ಲಿ ಮಕ್ಕಳು, ಯುವಕರು, ಹಿರಿಯರನ್ನು ಮನರಂಜಿಸುವ ಮಾಧ್ಯಮವಾಗಿವೆ. ಅಲ್ಲದೆ ಹಲವಾರು ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಲು ಸಾಧ್ಯವಾಗಿದೆ.
        ಇಂತಹ ಕಾರ್ಯಕ್ರಮಗಳು ಮೌಲ್ಯಯುತವಾಗಿ, ಮನೋರಂಜನೆ, ಸಮಯದ ಮಿತಿ ಮತ್ತು ಸಂಸ್ಕೃತಿಯನ್ನು ಬಿಂಬಿಸುವಂತಿರಬೇಕು. ವಸ್ತು ದೃಷ್ಟಿಯಲ್ಲಿ ಸಂದೇಶದ ಸ್ಪಷ್ಟತೆಯಿದ್ದು ಸಕುಟುಂಬಿಕವಾಗಿ ನೋಡುವಂತಿದ್ದರೆ ಒಳ್ಳೆಯದು. ಮತ್ತಷ್ಟು ಓದು »
30
ನವೆಂ

ಕ್ರಿಕೆಟ್ ಕ್ರಿಕೆಟ್ ಕ್ರಿಕೆಟ್ – ಕ್ರಿಕೆಟೆಂಬ ಹುಚ್ಚು

ಅಜಕ್ಕಳ ಗಿರೀಶ ಭಟ್

 ಮೊನ್ನೆ ಭಾರತ ೨೦-೨೦ ಕ್ರಿಕೆಟ್ ನಲ್ಲಿ ಹೀನಾಯವಾಗಿ ಸೋತದ್ದು ಮತ್ತು ಚೆಸ್ಸಿನಲ್ಲಿ ವಿ.ಆನಂದ್ ವಿಶ್ವ ಚಾಂಪಿಯನ್ ಆಗಿ ನಾಕನೇ ಬಾರಿಗೆ ,ಅದರಲ್ಲೂ ಸತತವಾಗಿ ಮೂರನೇ ಬಾರಿಗೆ ಮೂಡಿಬಂದದ್ದು ಒಟ್ಟೊಟ್ಟಿಗೇ ಆಯಿತು. ಹೀಗಾದದ್ದರಿಂದ ಅನೇಕ ಕ್ರೀಡಾವಿಶ್ಲೇಷಕರು ಹಾಗೂ ಸಾಮಾನ್ಯ ಕ್ರೀಡಾಭಿಮಾನಿಗಳು ಕ್ರಿಕೆಟಿಗೆ ಈ ದೇಶದಲ್ಲಿ ನೀಡಲಾಗುವ ಮಹತ್ವ ಮತ್ತು ಇತರ ಆಟಗಳ ಬಗ್ಗೆ ಅಲಕ್ಷ್ಯದ ಬಗ್ಗೆ ತುಂಬ ಬರೆದಿದ್ದಾರೆ ಮತ್ತು ಹೇಳಿದ್ದಾರೆ.

ನನಗೆ ನಿಜವಾಗಿ ಆಸಕ್ತಿಯ ಆಟವೆಂದರೆ ಕ್ರಿಕೆಟ್ಟೇ. ಯಾಕೆಂದರೆ ಕ್ರಿಕೆಟ್ಟು ಆಡಲು ಹೆಚ್ಚು ಖರ್ಚು ಇಲ್ಲ.ಬ್ಯಾಟು ಮಾಡಲು ತೆಂಗಿನ ಕೊತ್ತಳಿಗೆ ಕೂಡ ಆಗುತ್ತಿತ್ತು ನಾವು ಚಿಕ್ಕವರಿದ್ದಾಗ. ಚೆಂಡು ಬಾಳೆ ಚಾಂಬಾರಿನದೂ ಆಗುತ್ತಿತ್ತು. ಹತ್ತು ಇಂಟು ಇಪ್ಪತ್ತು ಅಡಿ ಅಂಗಳದಲ್ಲೂ ಕ್ರಿಕೆಟ್ ಆಡಬಹುದು ನಮ್ಮದೇ ರೂಲ್ಸುಗಳೊಂದಿಗೆ. ಹಾಗೆಯೇ ಕ್ರಿಕೆಟ್ಟು ಆಡಲು ಅಥವಾ ನೋಡಲು ಚೆಸ್ಸಿನ ಹಾಗೆ ಹೆಚ್ಚು ತಲೆಖರ್ಚು ಮಾಡುವ ಅಗತ್ಯವಿಲ್ಲ. ತಲೆಖರ್ಚು ಮಾಡುವುದೆಂದರೆ ನಾನು ಮೊದಲಿಂದಲೂ ಸ್ವಲ್ಪ ಜಿಪುಣನೇ. ಕ್ರಿಕೆಟ್ಟಿನ ಮೇಲೆ ನನಗೆ ವಿಶೇಷ ಮಮತೆ ಇರಲು ಇನ್ನೊಂದು ಕಾರಣವೆಂದರೆ ನಾನು ನನ್ನ ಹತ್ತು- ಹನ್ನೊಂದನೇ ವಯಸ್ಸಿನಲ್ಲಿಯೇ ಭಾರತ ತಂಡವನ್ನು ಫೋಲ್ಲೋ ಮಾಡಲು ಆರಂಭ ಮಾಡಿದ್ದು. ನಾನು ಬಹುಶ ನಾಕನೇ ಅಥವಾ ಐದನೇ ಕ್ಲಾಸಿನಲ್ಲಿ ಇದ್ದಾಗ ಇರಬೇಕು ನಾನು ಮೊದಲು ಕಮೆಂಟ್ರಿ ಕೇಳಿದ್ದು. ನನಗೆ ಕ್ರಿಕೆಟಿನ ಹುಚ್ಚು ಹಿಡಿದದ್ದು ಭಾರತ ಮತ್ತು ಇಂಗ್ಲೆಂಡುಗಳ ನಡುವಿನ ಒಂದು ಸರಣಿಯ ಮಧ್ಯದಲ್ಲಿ. ಹಾಗೆ ನನಗೆ ಸಡನ್ನಾಗಿ ಹುಚ್ಚು ಹಿಡಿದದ್ದು ಹೇಗೆ ಎಂದು ಈಗಲೂ ನನಗೆ ಅರ್ಥವಾಗುತ್ತಿಲ್ಲ. ಸಾಮಾನ್ಯವಾಗಿ ಇಂಥ ಹುಚ್ಚುಗಳು ಗ್ರಾಜುಯಲ್ಲಾಗಿ ಹಿಡಿಯುವುದು. ಸಡನ್ನಾಗಿ ಹಿಡಿದದ್ದು ಹುಚ್ಚೇ ಅನ್ನಲು ಕಾರಣವೇನೆಂದರೆ ಆನಂತರದ ಹೆಚ್ಚು ಕಡಿಮೆ ಪ್ರತಿಯೊಂದು ಪಂದ್ಯವನ್ನೂ ನಾನು ಪತ್ರಿಕೆ ಅಥವಾ ರೇಡಿಯೋ ಕಮೆಂಟ್ರಿ ಮೂಲಕ ಫೋಲ್ಲೋ ಮಾಡುತ್ತಿದ್ದೆ. ನನಗೆ ಕ್ರಿಕೆಟ್ ಅಂತ ಒಂದಿದೆ ಎಂದು ಗೊತ್ತಾಗುವಾಗ ಆ ಸರಣಿಯಲ್ಲಿ ಒಂದು ಪಂದ್ಯವನ್ನು ಭಾರತ ಗೆದ್ದಾಗಿತ್ತು ಅನಿಸುತ್ತದೆ. ಅದು ಮೊದಲ ಪಂದ್ಯ ಇರಬೇಕು. ಆ ಗೆದ್ದ ವಿಷಯ ನನಗೆ ಆನಂತರ ಗೊತ್ತಾದದ್ದು. ನನ್ನ ನೆನಪಿನ ಪ್ರಕಾರ ಆ ಸರಣಿಯ ನಂತರದ ಐದು ಟೆಸ್ಟ್ ಗಳೂ ಡ್ರಾ ಆಗಿರಬೇಕು. ಒಟ್ಟಿನಲ್ಲಿ ಆ ಸರಣಿಯನ್ನು ಭಾರತ ಒಂದು-ಸೊನ್ನೆ ಅಂತರದಲ್ಲಿ ಗೆದ್ದಿತ್ತು. ಒಂದು ಇನ್ನಿಂಗ್ಸ್ ನಲ್ಲಿ ಕಪಿಲ್ ದೇವ್ ಮತ್ತು ಮದನ್ ಲಾಲ್ ತಲಾ ಐದು ವಿಕೆಟ್ ಗಳನ್ನು ಪಡೆದು ಮಿಂಚಿದ್ದರು. ಆಗ ಇಂಗ್ಲೆಂಡಿನ ನಾಯಕನಾಗಿದ್ದವನು ಕೀತ್ ಫ್ಲೆಚರ್ ಎಂಬ ಅನಾಮಧೇಯ. ಮತ್ತಷ್ಟು ಓದು »

29
ನವೆಂ

ಯದಾ ಯದಾಹಿ ಧರ್ಮಸ್ಯ… : ಕಲಿಕಾ ಪ್ರಕ್ರಿಯೆಯ ಅವನತಿ ಮತ್ತು ಪುನರುಜ್ಜಿವನ.

ಪ್ರೊ. ಬಾಲಗಂಗಾಧರ

Degeneration of a Learning Process and its Rejuvenation

Prof. Balagangadhar

Ghent University, Belgium

ಯದಾ ಯದಾಹಿ ಧರ್ಮಸ್ಯ … ಸಂಭವಾಮಿ ಯುಗೇಯುಗೇ : ಭಗವದ್ ಗೀತೆಯ ಈ ಶ್ಲೋಕ ಬಹಳಷ್ಟು ಜನರಿಗೆ ಚಿರಪರಿಚಿತ. ಈ ಮಂದಿನ ಚರ್ಚೆಯ ಸಲುವಾಗಿ ಈ ಶ್ಲೋಕದ  ಒಂದು ಕರಡು ಭಾಷಾಂತರವನ್ನು ಮಾಡಲು ನನಗೆ ಅನುಮತಿ ನೀಡಿ.

ಯಾವಾಗ ಮತ್ತು ಎಲ್ಲೆಲ್ಲಿ ಧರ್ಮದಲ್ಲಿ ಏರುಪೇರುಗಳು ವ್ಯಕ್ತಗೊಂಡು, ಅಧರ್ಮವು ಮೆರೆಯತೊಡಗುತ್ತದೆಯೋ (ಪ್ರತಿ ಯುಗದಲ್ಲೂ ಪುನಾರಾವರ್ತಿತವಾಗುವ ವಿದ್ಯಮಾನವಿದು), ಆಗ ಶಿಷ್ಟ ರಕ್ಷಣೆ ಮತ್ತು ದುಷ್ಟರ ನಿಗ್ರಹಕ್ಕಾಗಿ, ಹಾಗೂ ಧರ್ಮವನ್ನು ಪುನರ್ಸ್ಥಾಪಿಸಲು ನಾನು ಸ್ವಯಂ ವ್ಯಕ್ತವಾಗುತ್ತೇನೆ.

ಪ್ರತಿ ಯುಗದಲ್ಲಿಯೂ ಕೂಡ ಕೃಷ್ಣನ ಅವತಾರ ಸಂಭವಿಸುತ್ತದೆ, ಅದು ನಮ್ಮ ಯುಗದಲ್ಲಿಯೂ ಆಗಿರಬಹುದು, ಅಥವಾ ಮುಂದಿನ ದಿನಗಳಲ್ಲಿ ಘಟಿಸಬಹುದು ಇತ್ಯಾದಿ, ಇದು ನಮಗೆಲ್ಲಾ ಕಲಿಸುತ್ತಾ ಬಂದಿರುವ ಹಾಗೂ ಈ ಶ್ಲೋಕವನ್ನು ವ್ಯಾಖ್ಯಾನಿಸುವ ಒಂದು ಪ್ರಸಿದ್ಧ ಮತ್ತು ಪ್ರಮುಖ ರೀತಿ.

ಆದರೆ, ನೀವು ಇಪ್ಪತ್ತೊಂದನೆಯ ಶತಮಾನದ ದೃಷ್ಟಿಕೋನದಿಂದ ಈ ಶ್ಲೋಕವನ್ನು ಮತ್ತೊಮ್ಮೆ ಓದಿದರೆ ಇಲ್ಲೊಂದು ಎದ್ದು ಕಾಣುವ ಹಾಗೂ ಬೆಕ್ಕಸ ಬೆರಗಾಗುವಂತೆ ಮಾಡುವ ವಿಚಾರವಿದೆ. ಈ ವಿಚಾರವನ್ನು ನಾನು ನನ್ನಪದಗಳಲ್ಲಿ ನಿರೂಪಿಸುವವನಿದ್ದೇನೆ; (ಇದು ಶ್ಲೋಕಗಳ ಕೇವಲ ಒಂದು ಹೊಸ ವ್ಯಾಖ್ಯಾನವಷ್ಟೆ ಅಲ್ಲ): ನೈತಿಕವಾಗಿರಲು *ಕಲಿಯುವ* ಒಂದು ಪ್ರಕ್ರಿಯೆ ಇದೆ, ಹಾಗೂ ಈ ಪ್ರಕ್ರಿಯೆಯು ಸಮಾಜದಲ್ಲಿರುವ ಕಲಿಕಾ ಪ್ರಕ್ರಿಯೆ ಎಂಬುದು ಒಂದು ಸಿದ್ಧಾಂತ. ಇಂತಹ ಒಂದು ಕಲಿಕಾ ಪ್ರಕ್ರಿಯೆಯು ಕ್ರಮೇಣ ಅವನತಿಯ ದಾರಿ ಹಿಡಿಯಬಹುದು ಅಥವಾ ಹಿಡಿಯುತ್ತದೆ, ಮತ್ತು ಇದೊಂದು ಅನಿವಾರ್ಯ ಸಂಗತಿ ಎಂಬುದು ಎರಡನೇಯ ಸಿದ್ಧಾಂತ. ತಾರ್ಕಿಕವಾಗಿ, ಈ ಎರಡು ಸಿದ್ದಾಂತಗಳಿಂದ ಹೊರಡುವ ವಿಚಾರವಿದು: ಯಾವಾಗೆಲ್ಲ ಸಾಮಾಜಿಕ ಕಲಿಕಾ ಪ್ರಕ್ರಿಯೆಯು ಅವನತಿ ಎಡೆಗೆ ಸಾಗುತ್ತದೆಯೋ, ಆಗ ಅವನತಿ ಒಂದು ಸಂದಿಗ್ಧ ಘಟ್ಟದಲ್ಲಿ, ಸಮಾಜದ ಮಟ್ಟದಲ್ಲಿ, ಕೆಲವು ಹೊಸ ಪ್ರಕ್ರಿಯೆಗಳು ಹುಟ್ಟಿಕೊಂಡು, ಈ ಕಲಿಕಾ ಪ್ರಕ್ರಿಯೆಯನ್ನು (ನೈತಿಕವಾಗಿರಲು, *ಕಲಿಯುವ* ಪ್ರಕ್ರಿಯೆ) ಪುನರುಜ್ಜೀವನಗೊಳಿಸುತ್ತವೆ.

ಭಾರತದಲ್ಲಿರುವ ನೈತಿಕ ಕಲಿಕೆಯ ಸ್ವರೂಪದ ಬಗ್ಗೆ ಇದೊಂದು ಅದ್ಭುತ ಹೇಳಿಕೆ (ಸದ್ಯಕ್ಕೆ ಇದರ ವ್ಯಾಪ್ತಿಯ ಮಿತಿಯನ್ನು ಭಾರತದ ಮಟ್ಟಿಗಷ್ಟೆ ಇಟ್ಟುಕೊಳ್ಳೋಣ). ಸಹಜವಾಗಿಯೆ ಅವರು (ಗೀತೆಯನ್ನು ಬರೆದ ಲೇಖಕನು/ಲೇಖಕರು) ತಮಗೆ ಪರಿಚಿತವಿದ್ದಂತಹ ಕೃಷ್ಣ ಮತ್ತು ಅವನ ‘ಅವತಾರಗಳ’ ಬಗೆಗಿನ ರೂಪಕಗಳನ್ನು ಬಳಸಿಕೊಂಡು ಈ ಮೇಲಿನ ಒಳನೋಟವನ್ನು ನಿರೂಪಿಸಿದ್ದಾರೆ. ಈ ರೂಪಕಗಳು ನಮ್ಮ ಕೈಕಟ್ಟಿ ಹಾಕಬೇಕಿಲ್ಲ. ಆದರೆ ಸಮಾಜದ ಸ್ವರೂಪದ ಬಗ್ಗೆ ಅವರು ನೀಡುವ ಈ ಒಳನೋಟಗಳು ಮಾತ್ರ ನಮ್ಮನ್ನು ಒಮ್ಮೆ ಅಲ್ಲಾಡಿಸಿ ಎಚ್ಚರಗೊಳಿಸಬೇಕು. ಅವರು ಹೇಗೆ ಮತ್ತು ಎಲ್ಲಿ ಈ ಒಳನೋಟಗಳನ್ನು ಕಂಡುಕೊಂಡರು? ಈ ವಿಚಾರಗಳನ್ನು ಚರ್ಚಿಸಿದ್ದಾದರೂ ಹೇಗೆ? ಯಾವ ರೀತಿಯ ಸಂಶೋಧನೆಯಿಂದ ಅವರು ಅದ್ಭುತವಾದ ಈ ಒಳನೋಟವನ್ನು ಪಡಕೊಂಡರು? ನಾವು ಹೆಸರಿಸಬಹುದಾದ (ನೈತಿಕ ಕಲಿಕೆಯ ಬಗೆಗಿರುವ ) ಮನಶ್ಯಾಸ್ತ್ರ ಅಥವಾ ಸಮಾಜಶಾಸ್ತ್ರದ ಯಾವ್ಯದೇ ಸಿದ್ದಾಂತಗಳಿಗಿಂತ ಈ ಒಳನೋಟವು, ಒಂದು ವೇಳೆ ಅದು ತಪ್ಪಾಗಿದ್ದರೂ ಸಹ, * ಹಲವು ಜ್ಯೋತಿರ್ವಷಗಳಷ್ಟು* ಮುಂದಿದೆ.

ಈ ಎಲ್ಲಾ ಕಾರಣಗಳಿಂದಾಗಿ, ಕೇವಲ ಈ ಎರಡು ಶ್ಲೋಕಗಳು ನೈತಿಕ ಕಲಿಕೆಯ ಸ್ವರೂಪದ ಕುರಿತು ಒಂದು ಉತ್ಕೃಷ್ಟ ವೈಜ್ಞಾನಿಕ ಉಹಾಸಿದ್ದಾಂತವನ್ನು (hypothesis) ನಿರೂಪಿಸುತ್ತವೆ. ಯಾವ ವಿಚಾರವನ್ನು (ಉದಾಹರಣೆಗೆ, ನಾನು ಮೇಲೆ ಗುರುತಿಸಿದ ಎರಡು ಸಿದ್ಧಾಂತಗಳು) ಈ ಶ್ಲೋಕಗಳು ಪ್ರಮಾಣಿತ ಸಿದ್ಧಾಂತವೆಂದು ಪರಿಗಣಿಸುತ್ತವೆಯೋ, ಆ ವಿಚಾರದ ಅಸ್ತಿತ್ವದ ಬಗ್ಗೆ ಪಾಶ್ಚಿಮಾತಯ ಸಂಸ್ಕೃತಿಗೆ ಸಣ್ಣ ಕಲ್ಪನೆ ಕೂಡಾ ಇಲ್ಲವಲ್ಲ. ಹೇಗೆ ಮತ್ತು ಏತಕ್ಕಾಗಿ ಅಷ್ಟೊಂದು ಸಾವಿರ ವರ್ಷಗಳ ಕೆಳಗೆ ಭಾರತೀಯರು ಈ ವಿಚಾರಗಳ ಬಗ್ಗೆ ಯೋಚಿಸಿದರು? ನಿಜವಾಗಿಯು ರುದ್ರಾ, ನಾನು ಮೂಕವಿಸ್ಮಿತನಾಗಿದ್ದೇನೆ

ಯದಾ ಯದಾಹಿ ಧರ್ಮಸ್ಯ

ಗ್ಲಾನಿರ್ಭವತಿ ಭಾರತ

ಅಭ್ಯುತ್ಥಾನಮಧರ್ಮಸ್ಯ

ತದಾತ್ಮಾನಂ ಸೃಜಾಮ್ಯಹಮ್ (ಭಗವದ್ಗೀತಾ 4: 7)

ಪರಿತ್ರಾಣಾಯ ಸಾಧೂನಾಂ

ವಿನಾಶಯ ಚ ದುಷ್ಕೃತಾಮ್

ಧರ್ಮಸಂಸ್ಥಾಪನಾರ್ಥಾಯ

ಸಂಭವಾಮಿ ಯುಗೇ ಯುಗೇ (ಭಗವದ್ಗೀತಾ 4: 8)

ಹೆಚ್ಚಿನ ಓದಿಗಾಗಿ

26
ನವೆಂ

ಬೀಟ್ ಬಾಯ್ಸ್…ಇವರು ಬೀಟೆಡ್ ಬಾಯ್ಸ್!

ಇರ್ಷಾದ್ ವೇಣೂರು

ಜಗತ್ತೇ ಮಲಗಿರುವಾಗ ಬುದ್ದನೊಬ್ಬ ಎದ್ದ ಎನ್ನುವುದು ಹಳೇ ಮಾತು. ಆದರೆ ಈ ಮಾಡರ್ನ್ ಯುಗದಲ್ಲಿ ಎಲ್ಲರೂ ಮಲಗಿರುವಾಗ ಎದ್ದು ಕಾಯಕವೇ ಕೈಲಾಸ ಎಂದು ದುಡಿಯುವವರು ಯಾರು ಗೊತ್ತಾ? ಸ್ವಲ್ಪ ಬುದ್ದಿಗೆ ಕೆಲಸ ಕೊಡಿ. ಇನ್ನೂ ತಿಳೀಲಿಲ್ವಾ? ಈ ಪತ್ರಿಕೆ ನಿಮ್ಮ ಮನೆ ಬಾಗಿಲಿಗೆ ತಲುಪಿಸಿದ್ದು ಯಾರು? ಹಾ…. ಅವರೇ…. ದಿನಪತ್ರಿಕೆ ಹಂಚುವವರು.

ಮಧ್ಯರಾತ್ರಿಯ ಹೊತ್ತಿಗೆ ಪತ್ರಿಕಾ ಮುದ್ರಣಾಲಯ ಬಿಟ್ಟ ಪ್ರೆಸ್ ವಾಹನ ತನ್ನ ಸಂಚಾರವನ್ನು ಆರಂಭಿಸಿರುತ್ತದೆ. ತನ್ನ ರೂಟ್ ಗಳಲ್ಲಿ ಬರುವ ವೆಂಡರ್ ಅರ್ಥಾತ್ ಪತ್ರಿಕಾ ಏಜೆಂಟ್ ನಿಗೆ ನಸುಕಿನ ಜಾವ 3ರ ಹೊತ್ತಿಗೆ ಪತ್ರಿಕೆಗಳ ಬಂಡಲ್ ಇಳಿಸಿ ಹೋಗಿರುತ್ತದೆ. ಅಲ್ಲಿಂದ ಶುರು. ಹೊಸ ಪ್ರಪಂಚವೊಂದು ತೆರೆದುಕೊಳ್ಳುತ್ತದೆ. ನಿಶ್ಯಬ್ದವಾಗಿ ಮಲಗಿರುವ ಫುಟ್ಪಾತ್ ಗಳು ಎಚ್ಚರಗೊಳ್ಳುತ್ತವೆ. ದಿನಪತ್ರಿಕೆ ಬಂಡಲ್ ಗಳು ಬಿಚ್ಚತೊಡಗುತ್ತವೆ. ಪತ್ರಿಕೆಗಳು ಎಷ್ಟು ಬಂದಿವೆ ಎಂಬ ಎಣಿಕೆ ಪ್ರಾರಂಭವಾಗುತ್ತದೆ. ಅಷ್ಟಾಗುವಾಗ ಬೀಟ್ ಬಾಯ್ಸ್ ಆಗಮನವಾಗುತ್ತದೆ. ಬೇರೆಯಾಗಿಯೇ ಇರುವ ಪುರವಣಿಗಳನ್ನು ದಿನ ಪತ್ರಿಕೆಯ ಮುಖ್ಯ ಆವೃತ್ತಿಯ ಜೊತೆ ಸೇರಿಸುವ ಕೆಲಸ ಚಾಲನೆ ಪಡೆದುಕೊಳ್ಳುತ್ತದೆ. ಸುಮಾರು 6 ಗಂಟೆಯಾಗುವ ಹೊತ್ತಿಗೆ ಅಷ್ಟೂ ಪತ್ರಿಕೆಗಳ ಜೋಡಣೆ ಮುಗಿದು ಬಸ್ ಗಳಲ್ಲಿ ಕಳಿಸುವ ಪಾರ್ಸಲ್, ಬೀಟ್ ಬಾಯ್ಸ್ ಪಾರ್ಸಲ್ ಹೀಗೆ ಹಂಚಿಕೆ ಪ್ರಾರಂಭವಾಗುತ್ತದೆ. ಬಳಿಕ ಬೀಟ್ ಬಾಯ್ಸ್ ಗಳ ಕಾರುಬಾರು ಶುರುವಾಗುತ್ತದೆ.
ಒಂದು ಏರಿಯಾಕ್ಕೆ ದಿನಪತ್ರಿಕೆ ಹಾಕುವವರನ್ನು ಪತ್ರಿಕಾ ಏಜನ್ಸಿ ಏಜೆಂಟ್ ಅರ್ಥಾತ್ ನ್ಯೂಸ್ ಪೇಪರ್ ವೆಂಡರ್ಗಳು ಬೀಟ್ ಬಾಯ್ಸ್ ಎಂದು ಕರೆಯುತ್ತಾರೆ. ತಮ್ಮ ತಮ್ಮ ಸೈಕಲ್ ಗಳಿಗೆ ಚೀಲಗಳಲ್ಲಿ ದಿನಪತ್ರಿಕೆ ಕಟ್ಟಿಕೊಂಡು ಹತ್ತಿದರೆಂದರೆ ಮತ್ತೆ ಕೆಳಗಿಳಿಯುವುದು ತಮ್ಮ ಏರಿಯಾದ ಕೊನೆಯಲ್ಲಿ. ಅಷ್ಟೂ ನಾಜೂಕಿನಿಂದ ಸೈಕಲ್ ನಲ್ಲೇ ಕುಳಿತು ಜಾದೂ ಮಾಡಿದವರಂತೆ, ಏಕಲವ್ಯ ಬಿಟ್ಟ ಬಾಣದಂತೆ ಪೇಪರ್ ಗುರಿ ಇಟ್ಟು ಎಸೆಯುವ ಇವರ ಗುರಿ ಮುಟ್ಟಿರುತ್ತದೆ. ಎಸೆದ ಪೇಪರ್ ಯಾವ ಮನೆಯ ಸಿಟ್ಔಟ್ ನಲ್ಲಿ ಬೀಳಬೇಕೋ ಅಲ್ಲೇ ಹೋಗಿ ಬಿದ್ದಿರುತ್ತದೆ. ಕಾಂಪ್ಲೆಕ್ಸ್ ನ ಶಟರ್ ಮುಂದೆ ಕೂತಿರುತ್ತದೆ. ಇನ್ನು ಕೆಲವೆಡೆ ಗೇಟಿನ ಪೈಪ್ ಒಳಗಡೆ ಸೇಫ್ ಆಗಿರುತ್ತವೆ.
ವಾಕಿಂಗ್ ಹೊರಟವರೆಲ್ಲ ಮನೆ ಹಾದಿ ಹಿಡಿಯುವಾಗ ಬೀಟ್ ಬಾಯ್ ಬರುತ್ತಿರುತ್ತಾನೆ. ಅವನ ಸೈಕಲ್ ಅವರ ವಾಕ್ ಲಯಕ್ಕೆ ಸರಿ ಸಾಟಿಯಾಗುವಂತೆ ವೇಗ ತಗ್ಗಿಸಿ ಸಂಚಾರಿಯಾಗಿಯೇ ದಿನ ಪತ್ರಿಕೆ ಕೈಗಿಡುತ್ತಾನೆ. ವಾಕ್’ಮ್ಯಾನ್ ವಾಕಿಂಗ್ ನಲ್ಲೇ ಪತ್ರಿಕೆ ಬಿಡಿಸುತ್ತಾನೆ! ಸಾಮಾನ್ಯವಾಗಿ ನೂರು ಮನೆಗಳಿಗೆ ಒಬ್ಬನಂತೆ ಬೀಟ್ ಬಾಯ್ ಇರುತ್ತಾನೆ. ದಿನಪತ್ರಿಕೆ ಬೇಗ ಓದುಗರಿಗೆ ಸಿಗಲಿ ಎನ್ನುವ ಕಾರಣಕ್ಕಾಗಿ ವೆಂಡರ್ ಗಳು ಹೀಗೆ ಮಾಡಿರುತ್ತಾರೆ. ಮತ್ತಷ್ಟು ಓದು »