ರಾಮಜನ್ಮ ಭೂಮಿ ಚಳವಳಿ – ನನ್ನ ಬಾಲ್ಯದ ನೆನಪಿನಲ್ಲಿ
– ಅಜಿತ್ ಶೆಟ್ಟಿ ಹೆರಂಜೆ
ಚಿತ್ರ ಕೃಪೆ: ಕಲಾವಿದರದ್ದು. ಕೇರಳದ ಕಲಾವಿದರೊಬ್ಬರ ಕುಂಚದಲ್ಲಿ ಅರಳಿದ ಅಯೋಧ್ಯೆ ಭೂಮಿಪೂಜೆ
ಅಯೋದ್ಯೆಯ ರಾಮ ಜನ್ಮ ಭೂಮಿಯ ಹೋರಾಟ ನನ್ನ ವಯೋಮಾನದವರಿಗೆ ನಮ್ಮ ಕಣ್ಣ ಮುಂದೆಯೇ ನಿರ್ಮಾಣವಾದ ಇತಿಹಾಸ.ಮಹರ್ಷಿ ವಾಲ್ಮೀಕಿಯವರು ಬರೆದ ರಾಮಾಯಣ ಒಂದು ಕಡೆಯಾದರೆ ಇನ್ನೊಂದು ಕಡೆ ಆಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಮಂದಿರ ಕಟ್ಟಲು ಭಾರತದ ಹಿಂದೂ ಸಮಾಜ ಮಾಡಿದ ಸುಮಾರು 500 ವರ್ಷಗಳ ಸುಧೀರ್ಘ ಹೋರಾಟ. ಈ ಹೋರಾಟದ ಇತಿಹಾಸ ಕೂಡ ವಾಲ್ಮೀಕಿಯವರು ರಾಮಾಯಣಕ್ಕಿಂತ ಭಿನ್ನವಾಗಿರಲಿಲ್ಲ. ತ್ರೇತಾ ಯುಗದಲ್ಲಿ ವನವಾಸ ಮುಗಿಸಿ, ರಾವಣ ಸಂಹಾರ ಮಾಡಿ ಅಯೋಧ್ಯೆಗೆ ಮರಳಿದ ಪ್ರಭು ಶ್ರೀರಾಮಚಂದ್ರನ ಪಟ್ಟಾಭಿಷೇಕವಾಗಿ ರಾಮ ರಾಜ್ಯದ ಸ್ಥಾಪನೆ ಆದದ್ದು ಒಂದು ಭಾಗವಾದರೆ,ಈ ಕಲಿಯುಗದಲ್ಲಿ ಅಯೋಧ್ಯೆಯಲ್ಲಿ ಇದ್ದ ಪ್ರಭು ಶ್ರೀರಾಮಚಂದ್ರನ ಮಂದಿರವನ್ನು ಬಾಬರನ ಸೈನ್ಯ ಕೆಡವಿ ಮಸೀದಿ ಮಾಡಿದ್ದಲ್ಲಿನಿಂದ, ಆ ಮಸೀದಿಯನ್ನ ಕೆಡವಿ ಅಲ್ಲಿ ಪುನಃ ಒಂದು ಭವ್ಯ ಮಂದಿರ ನಿರ್ಮಾಣ ಮಾಡಲು ಆಯಾ ಕಾಲದ ಆಡಳಿತ ವ್ಯವಸ್ಥೆ ವಿರುದ್ಧ ಸುಧೀರ್ಘ ಹೊರಾಟ ಮಾಡಿ ಇಂದು ನೆರವೇರುತ್ತಿರುವ ಶಿಲಾನ್ಯಾಸದವರೆಗಿನ ಅಧ್ಯಾಯ ಇನ್ನೊಂದು ಭಾಗ. ಅಲ್ಲಿ ರಾವಣನ ಸಂಹಾರ ಆಯಿತು, ಇಲ್ಲಿ ಕಾಂಗ್ರೆಸ್ ಪಕ್ಷ ಎಂಬ ಸೆಕ್ಯುಲರ್ ಮಾರೀಚನ ಅಧಃಪತನ ಆಯಿತು. ಈ ಘಟನೆಗಳ ಸರಪಳಿಯಲ್ಲಿ ನನ್ನ ಊರಾದ ಹೆರಂಜೆ ಮತ್ತು ಸುತ್ತಮುತ್ತಲಿನ ಇನ್ನೂ ಐವತ್ತನಾಲಕ್ಕು ಗ್ರಾಮಗಳ ಒಂದು ಅಳಿಲು ಸೇವೆಯ ಕೊಂಡಿ ಕೂಡ ಇತ್ತು.
ಇದು ನನ್ನ ಸೌಭಾಗ್ಯವೇ ಹೌದು, ನನ್ನ ಬಾಲ್ಯದ ತೀರಾ ಮೊದಲಿನ ನೆನಪುಗಳಲ್ಲಿ ನನ್ನ ಮನಸ್ಸಿನಲ್ಲಿ ಇನ್ನು ಅಚ್ಚೊತ್ತಿದಂತೆ ಉಳಿದಿರುವುದು “ರಾಮ ಶಿಲಾ ರಥ ಯಾತ್ರ.” ಇದು ನಡೆದದ್ದು 1990-91 ರ ಸಮುಯದಲ್ಲಿ. ಆಗ ನನಗೆ ಸುಮಾರು 8-9 ರ ವಯಸ್ಸು. ಅದು ಸುಮಾರು ರಾತ್ರಿ ಎಂಟು ಗಂಟೆಯ ಸಮಯ.ದೂರದ ಬಯಲಿನ ಅಂಚಿನಲ್ಲಿ ಒಂದು ಗುಂಪು ಪೆಟ್ರೊ ಮ್ಯಾಕ್ಸ್ ಲೈಟ್, ತೆಂಗಿನ ಗರಿಯ ಬೆಂಕಿಸೂಡಿ ಹಿಡಿದು ಜೋರಾಗಿ ರಾಮ ಭಜನೆ ಮಾಡುತ್ತಾ ತಾಳ ತಟ್ಟುತ್ತ ನಮ್ಮ ಮನೆಯತ್ತ ಬರವುದನ್ನ ಕಂಡೊಡನೆ, ಓಡಿ ಹೋಗಿ ಅಜ್ಜಿಗೆ ಹೇಳಿದೆ. ಅಜ್ಜಿ ಕೂಡಲೇ ಹೊರ ಬಂದು ಅಂಗಳಕ್ಕೆಲ್ಲಾ ನೀರು ಹಾಕಿ ಶೇಡಿ ಮಣ್ಣಿನಲ್ಲಿ ರಂಗೋಲಿ ಬಿಡಿಸಿ, ತುಳಸಿಗೆ ದೀಪ ಹಚ್ಚಿ, ಮನೆಯ ಒಳಗಿದ್ದ ಒಂದು ತಾಮ್ರದ ಬಿಂದಿಗೆ, ಒಂದು ಚೆಂಬು,ಒಂದು ಬಟ್ಟಲು ಗಟ್ಟಿ ಬೆಲ್ಲ ತಗೆದು ಬಾವಿಕಟ್ಟಯಲ್ಲಿ ಇಟ್ಟು ಅವರು ಬರುವುದನ್ನೆ ಎದುರು ನೋಡುತ್ತಿದ್ದರು.ನನಗೆ ಆಶ್ಚರ್ಯ ಇದೇನಿದು ಇವರು ಮಾರಿಗೆ, ಕಂಬಳಕ್ಕೆ ಊರೂರು ತಿರುಗಿ ಡೋಲು ಹೊಡೆಯುವವರಲ್ಲ, ಜೊತಗೆ ಭಜನೆ ಬೇರೆ ಕೇಳಿಸುತ್ತಿದೆ, ಅಜ್ಜಿ ನೋಡಿದರೆ ಇಷ್ಟೆಲ್ಲಾ ವ್ಯವಸ್ಥೆ ಮಾಡಿ ಕಾದು ಕುಳಿತಿದ್ದಾರೆ. ಅವರು ನಮ್ಮ ಅಂಗಳಕ್ಕೆ ಬರುವ ತನಕ. ನನಗೆ ಕಾಯದೆ ಬೇರೆ ಉಪಾಯ ಇರಲಿಲ್ಲ.
ಅಳಿದ ಮೇಲೆ
ದೇವು ಹನೆಹಳ್ಳಿ,
ಬಂಡೀಮಠ, ಹನೆಹಳ್ಳಿ ಗ್ರಾಮ ಮತ್ತು ಅಂಚೆ,
ವಯಾ ಬಾರಕೂರು, ಉಡುಪಿ ಜಿಲ್ಲೆ – 576 210.
ಕೋವಿಡ್-19 ಸಂಕಷ್ಟದ ಹೊತ್ತಲ್ಲಿ ಬಹುಚರ್ಚಿತ ವಿಷಯಗಳಲ್ಲಿ ಒಂದು ಶವಸಂಸ್ಕಾರ. ಶವಕ್ಕೆ ಇರುವುದು ಒಂದೇ ಮುಖವಾದರೆ ಪಾರ್ಥಿವ ಶರೀರದ ನಿವೃತ್ತಿಗೆ ಮತ್ತು ಸಮಸ್ಯೆಗೆ ಹಲವು ಮುಖಗಳು. ಒಮ್ಮೆಲೇ ಹೆಚ್ಚಾದ ಶವಗಳ ಸಂಖ್ಯೆ ಒಂದು ಸಮಸ್ಯೆಯಾದರೆ ಕೋವಿಡ್-19 ರೋಗಿಗಳ ಶವವು `ಭಯಾನಕ ರೋಗಗಳ ಕೂಪ’ ಎಂದು ತಿಳಿದದ್ದು ಇನ್ನೊಂದು ಸಮಸ್ಯೆ. ಈ ವಿದ್ಯಮಾನ ನಾವು ತಿಳಿದ ಮತ್ತು ಇದುವರೆಗೆ ಪಾಲಿಸಿಕೊಂಡ ಬಂದ ಶವಗಳ ಅಂತಿಮ ವಿಲೇವಾರಿ ಮತ್ತು ಸಂಸ್ಕಾರಗಳ ರೀತಿ-ನೀತಿ-ನಿಯಮಗಳನ್ನು ಮಣ್ಣುಪಾಲು ಮಾಡಿತು. ಈ ಹೊತ್ತಿನಲ್ಲಿ ಜಗತ್ತಿನಾದ್ಯಂತ ಕೋವಿಡ್-19 ಶವ ವಿಲೇವಾರಿಯ ನೂತನ ವಿಲೇವಾರಿ ರೀತಿ, ಕ್ರಮ, ಸಿದ್ಧತೆ, ಕಾಮಗಾರಿಗಳ ಕುರಿತಂತೆ ಬರಹ, ಚಿತ್ರ, ಚರ್ಚೆ, ವೀಡಿಯೋಗಳು ನಡೆದವು, ಹರಿದಾಡಿದವು. ಸ್ಪೈನ್ ದೇಶದಲ್ಲಿ ಹೊಸ ವಿನ್ಯಾಸ, ಕಚ್ಚಾವಸ್ತುಗಳ ಶವಪೆಟ್ಟಿಗೆ ತಯಾರಿಯ ಅರ್ಧ ಗಂಟೆಯ ಟಿ.ವಿ ರೂಪಕ, ಬ್ರೆಜಿಲ್‍ನಲ್ಲಿ ಹತ್ತಾರು ಎಕರೆ ಕಾಡನ್ನು ಸವರಿ ಮಾಡಿದ ನೂರಾರು-ಸಾವಿರಾರು ಶವಗುಂಡಿಗಳ ಡ್ರೋನ್ ನೋಟದ ವೀಡಿಯೋಗಳಿಂದ ತೊಡಗಿ ಇಲ್ಲಿಯೇ ಸಮೀಪದ ಬಳ್ಳಾರಿಯಲ್ಲಿ ಶವವನ್ನು ಎಳೆದು ದೂಡಿ ಗುಂಡಿಗೆ ನೂಕಿ `ಎದ್ದೆವೋ ಬಿದ್ದೆವೋ ಕೆಟ್ಟೆವೋ’ ಎಂದು ಭಯದಿಂದ ಓಡಿದ (ಹೆಗಲ ಮೇಲೆ ಚಟ್ಟವಿರದ) ನಾಲ್ವರು ಚಟ್ಟೋಪಾಧ್ಯಾಯರ ವೀಡಿಯೋದ ತನಕ ನೂರಾರು ಸಾವಿರಾರು ಬಂದವು.
ಈ ಹೊತ್ತಲ್ಲಿ ಶವಸಂಸ್ಕಾರ ಹೇಗೆ ನಡೆದರೆ ಉತ್ತಮ ಎಂಬ ಚರ್ಚೆಗಳೂ ವ್ಯಾಪಕವಾಗಿ ನಡೆದವು. ಶವದ ಘನತೆಯಿಂದ ತೊಡಗಿ ಶವಹೊರುವವರ ಆರೋಗ್ಯದ ತನಕ ಎಲ್ಲ ವಿಷಯಗಳು ಕೂಲಂಕಷವಾಗಿ ಚರ್ಚಿತವಾದವು. (ದೇಹವನ್ನು ಕಡೆದು ವಿದೇಹ ಹುಟ್ಟಿಕೊಳ್ಳಲಿಲ್ಲ!) ಅಂತಹ ಹೊತ್ತಲ್ಲಿ ನನ್ನೋರ್ವ ಕಿರಿಯ ಮಿತ್ರ ಕಳುಹಿಸಿದ ಬರಹ ಹೀಗಿತ್ತು: ಮತ್ತಷ್ಟು ಓದು
ಆನ್‌ಲೈನ್ ಗೇಮುಗಳೆಂಬ ಜೂಜಾಟಕ್ಕೆ ನಿಷೇಧ ಯಾವಾಗ ?

ಸ್ವ ರಕ್ಷಣೆಯಿಂದ ರಾಷ್ಟ್ರರಕ್ಷಣೆ: ರಕ್ಷಾಬಂಧನ ಸಂದೇಶ

‘ಗ್ರಸ್ತ’ ಕಾದಂಬರಿ – ನನ್ನ ಅನಿಸಿಕೆಗಳು.
– ಸುದರ್ಶನ ಗುರುರಾಜ ರಾವ್
ಕೊಂಡು ತಂದು ೨ ವರ್ಷಗಳಷ್ಟೇ ಆಗಿದ್ದರೂ ಗ್ರಸ್ತವನ್ನು ಓದಲು ಕಾಲ ಕೂಡಿ ಬಂದಿರಲೇ ಇಲ್ಲ. ಅಂತರ್ಜಾಲದಲ್ಲೂ ,ಫೇಸ್ಬುಕ್ ಪುಟಗಳಲ್ಲೂ ಸಾಕಷ್ಟು ಓದುಗರು ಈ ಕಾದಂಬರಿಯನ್ನು ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಮೊದಲು ಕರಣಂ ಅವರ ಕರ್ಮ ಮತ್ತು ನನ್ನಿ ಎರಡನ್ನೂ ಓದಿ ಮೆಚ್ಚಿದ್ದೆ.ಈ ಭಾನುವಾರ ಯಾವ ಕೆಲಸ ಇಲ್ಲದ ಕಾರಣ ನಿಧಾನವಾಗಿ ಕುಳಿತು ಓದಿದ್ದಾಯ್ತು. ಚಿಕ್ಕದಾದ ಕಾದಂಬರಿ ಚೆನ್ನಾಗಿ ಓದಿಸಿಕೊಂಡು ಹೋಯಿತು.
ಬೆಂಗಳೂರಿನ ಬ್ರಾಹ್ಮಣ ಬಡಾವಣೆಯಲ್ಲಿ ಪ್ರಾರಂಭವಾಗುವ ಕಥೆ ಅಲ್ಲಲ್ಲಿ ಹರಿದು, ಪ್ರಾಗ್ ಎಂಬ ವಿದೇಶಕ್ಕೆ ಹೋಗಿ ಪುನಃ ಬೆಂಗಳೂರಿಗೆ ಬಂದು, ತಿರುವು ಪಡೆದು ಮಲೆನಾಡಿನ ಮಲೆಯೊಂದರ ಮೇಲೆ ಬಂದು ನಿಲ್ಲುತ್ತದೆ ಮುಕ್ತಾಯವೋ ಹೊಸ ಆರಂಭವೋ ಎಂಬುದನ್ನು ಓದುಗರು ಊಹಿಸಿಕೊಳ್ಳಬೇಕು.
ಕೆಳ ಮಧ್ಯಮ ವರ್ಗದ ಮಾಧ್ವ ಬ್ರಾಹ್ಮಣ ಕುಟುಂಬದಲ್ಲಿ ಕಣ್ಣಿನ ತುಂಬಾ ಕನಸು ಹೊತ್ತ ಯುವತಿ, ಸರಿಯಾಗಿ ತಿಳಿಯದೆ, ಪರಿಶಿಷ್ಟ ಜಾತಿಯ ಯುವಕನನ್ನು ಪ್ರೀತಿಸಿ ಮನೆಬಿಟ್ಟು ಓಡಿಹೋಗಿ ಮದುವೆ ಮಾಡಿಕೊಳ್ಳುವ ಜಯಶ್ರೀ; ಕನಸುಗಳೊಂದೂ ಸಾಕಾರವಾಗದೆ ಬರೀ ಬೀಳುಗಳ ಹಾದಿಯಲ್ಲಿ ಕ್ರಮಿಸುತ್ತಲೇ ಇನ್ನೇನು ಸ್ವಲ್ಪ ಏಳು ಕಾಣುತ್ತಿದೆ ಎಂಬಲ್ಲಿ ಹೃದಯಾಘಾತದಿಂದ ನಿಧನಳಾಗುತ್ತಾಳೆ. ಕನಸುಗಳು ತುಂಬಿದ ಜೀವವೊಂದು, ಕನಸುಗಳೇ ಇಲ್ಲದ, ಕೆಲಸ ಮಾಡುವ ಕಸುವೂ ಇಲ್ಲದ ಒಬ್ಬನನ್ನು ಓಡಿಹೋಗಿ ಮದುವೆಯಾಗುವ ವಿಪರ್ಯಾಸಗಳು ದಿನವೂ ಕಂಡು ಕೇಳುವ ವಿಚಾರವೇ. ಬವಣೆಗಳನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ. ಅವಳ ಮಗನೇ ಅಸಾಧಾರಣ ಬುದ್ಧಿಮತ್ತೆ ಮತ್ತು ಅತೀಂದ್ರಿಯ ಮನ:ಶಕ್ತಿ ಇರುವ ಅವಿನಾಶ್!
ಕಾಂಗ್ರೆಸೀ – ಚೀನೀ ಭಾಯಿ ಭಾಯಿ, ದೇಶ ಬಡಿದುಕೊಳ್ಳಬೇಕಿದೆ ಬಾಯಿ ಬಾಯಿ!
– ಪ್ರೇಮಶೇಖರ
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಮತ್ತು ಚೈನೀಸ್ ಕಮ್ಯೂನಿಸ್ಟ್ ಪಾರ್ಟಿಗಳ ನಡುವೆ ಹನ್ನೆರಡು ವರ್ಷಗಳ ಹಿಂದೆ ಅಂದರೆ 2008ರಲ್ಲಿ ರಹಸ್ಯ ಒಪ್ಪಂದವೊಂದಾಗಿದೆಯಂತೆ. ವರದಿಗಳ ಪ್ರಕಾರ ಆ ಒಪ್ಪಂದಕ್ಕೆ ಸಹಿ ಹಾಕಿದ್ದು ಕಾಂಗ್ರೆಸ್ ಪರವಾಗಿ ಆಗಿನ ಜನರಲ್ ಸೆಕ್ರೆಟರಿ ಶ್ರೀ ರಾಹುಲ್ ಗಾಂಧಿ ಮತ್ತು ಸಿಸಿಪಿ ಪರವಾಗಿ ಆಗಿನ ಚೀನೀ ಉಪಾಧ್ಯಕ್ಷ ಷಿ ಜಿನ್‍ಪಿಂಗ್. ಈ ‘ರಹಸ್ಯೋತ್ಪಾಟನೆ’ ಇದುವರೆಗೆ ನಮ್ಮನ್ನು ಕಾಡುತ್ತಿದ್ದ ಹಲವಾರು ಪ್ರಶ್ನೆಗಳಿಗೆ ಉತ್ತರ ಒದಗಿಸುವಂತಿದೆ. ಈ ಪ್ರಶ್ನೆಗಳು ಮತ್ತು ಉತ್ತರಗಳು ಏನು ಎನ್ನುವ ಮೊದಲು ಇದನ್ನೊಮ್ಮೆ ಓದಿ-
“ಚೀನೀಯರ ಜತೆಗಿನ ನಿಮ್ಮ ಆತ್ಮೀಯ ಸ್ನೇಹಸಂಬಂಧಗಳನ್ನು ಉಪಯೋಗಿಸಿಕೊಂಡು, (ಮಸೂದ್ ಅಜ಼ರ್ ವಿಷಯದಲ್ಲಿ) ಭಾರತಕ್ಕೆ ಹಿತಕಾರಿಯಾಗಿ ನಡೆದುಕೊಳ್ಳುವಂತೆ ಚೀನಾವನ್ನು ನೀವು ಮನವೋಲಿಸಬಹುದಾಗಿತ್ತಲ್ಲ? ಹಾಗೇಕೆ ಮಾಡಲಿಲ್ಲ? ಬದಲಾಗಿ, ಇಂದು ಚೀನಾ ನಮ್ಮ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಬಗ್ಗೆ ನಿವು ಖುಷಿ ಪಡುತ್ತಿದ್ದೀರಲ್ಲ? ಚೀನೀ ನಡವಳಿಕೆಯನ್ನು ನಿಮ್ಮ ಮೋದಿ-ವಿರುದ್ಧದ ರಾಜಕೀಯ ಹಿತಾಸಕ್ತಿಗಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದೀರಲ್ಲ?” ಎಂದು ರವಿಶಂಕರ್ ಪ್ರಸಾದ್ ಮತ್ತು ಅರುಣ್ ಜೇಟ್ಲಿ ಕೇಳುವ ಪ್ರಶ್ನೆಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಚೀನಾ ಕುರಿತಾಗಿ ರಾಹುಲ್ ಗಾಂಧಿವರ ನೀತಿಗಳನ್ನು ಅವಲೋಕಿಸೋಣ.
ಜೂನ್-ಆಗಸ್ಟ್ 2017ರ ದೊಕ್ಲಾಮ್ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಹುಲ್ ಗಾಂಧಿ ನವದೆಹಲಿಯಲ್ಲಿನ ಚೀನೀ ದೂತಾವಾಸಕ್ಕೆ ಭೇಟಿ ನೀಡಿ, ಚೀನೀ ರಾಯಭಾರಿಯ ಜತೆ ಮಾತುಕತೆ ನಡೆಸಿದ್ದರು. “ಈ ದೇಶದ ಒಬ್ಬ ನಾಯಕನಾಗಿ ದೊಕ್ಲಾಮ್ ಬಗ್ಗೆ ವಿವರಗಳನ್ನು ಪಡೆದುಕೊಳ್ಳಲು ನನಗೆ ಹಕ್ಕಿದೆ” ಎಂದವರು ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದರು. ಆದರೆ ಆ ಭೇಟಿಯಲ್ಲಿ ದೊಕ್ಲಾಮ್ ಬಗ್ಗೆ ಯಾವುದೇ ಮಾತುಕತೆ ನಡೆಯಲಿಲ್ಲ ಎನ್ನುವ ಸೂಚನೆ ವರ್ಷದ ನಂತರ ರಾಹುಲ್ ಗಾಂಧಿಯವರಿಂದಲೇ ಬಂತು! ಸೆಪ್ಟೆಂಬರ್ 2018ರಲ್ಲಿ ಲಂಡನ್‌ನಲ್ಲಿ ಪತ್ರಕರ್ತರ ಸಮಾವೇಶದಲ್ಲಿ “…ನೀವು ಅಧಿಕಾರದಲ್ಲಿದ್ದರೆ ದೊಕ್ಲಾಮ್ ವಿವಾದವನ್ನು ಹೇಗೆ ನಿಭಾಯಿಸುತ್ತಿದ್ದಿರಿ?” ಎಂಬ ಪ್ರಶ್ನೆ ಬಂದಾಗ ರಾಹುಲ್ ಗಾಂಧಿ “ದೊಕ್ಲಾಮ್ ಬಗ್ಗೆ ನನ್ನಲ್ಲಿ ವಿವರಗಳಿಲ್ಲ. ಹೀಗಾಗಿ ಈ ಪ್ರಶ್ನೆಗೆ ಉತ್ತರಿಸಲು ನನ್ನಿಂದಾಗದು” ಎಂದುತ್ತರಿಸಿದರು. ಇದರರ್ಥ ವರ್ಷದ ಹಿಂದೆ ಅವರು ದೊಕ್ಲಾಮ್ ಬಗ್ಗೆ ಮಾತಾಡುವ ನೆಪದಲ್ಲಿ ಚೀನೀ ರಾಯಭಾರಿಯನ್ನು ಭೇಟಿಯಾದಾಗ ಅವರು ಮಾತಾಡಿರುವುದು ಬೇರೆಯೇ ವಿಷಯ! ಇದು ಸೂಚಿಸುವುದು ಚೀನೀಯರ ಜತೆ ರಾಹುಲ್ ಗಾಂಧಿ ಹೊಂದಿರಬಹುದಾದ, ಭಾರತ-ಚೀನಾ ಸಂಬಂಧಗಳಿಂದ ಬೇರೆಯಾದ, ಹೊಕ್ಕುಬಳಕೆಯ ಬಗ್ಗೆ. ಇದರ ಸೂಚನೆ ಮತ್ತೊಂದು ಪ್ರಕರಣದಲ್ಲೂ ದೊರೆಯುತ್ತದೆ. ಕಳೆದ ಸೆಪ್ಟೆಂಬರ್‌ನಲ್ಲಿ ರಾಹುಲ್ ಗಾಂಧಿ ಕೈಲಾಶ್ ಮಾನ್‌ಸರೋವರ್ ಯಾತ್ರೆಯ ಮೊದಲ ಹಂತವಾಗಿ ಕಾಠ್ಮಂಡುಗೆ ಹೊರಟಾಗ ಅವರನ್ನು ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬೀಳ್ಕೊಡಲು ನವದೆಹಲಿಯಲ್ಲಿನ ಚೀನೀ ರಾಯಭಾರಿ ಬಯಸಿದ್ದರು. ಭಾರತ ಸರ್ಕಾರದ ಅನುಮತಿ ಸಿಗದೇಹೋದದ್ದರಿಂದ ಅದು ಸಾಧ್ಯವಾಗಲಿಲ್ಲ.
ಲಡಾಖ್‍ನಲ್ಲಿ ಚೀನೀ ಕಾಸೂ ಕೇಡು, ತಲೆಯೂ ಬೋಳು?
– ಪ್ರೇಮಶೇಖರ
ಭಾಗ – 2
ಜೂನ್ 15ರ ಘರ್ಷಣೆ ಮತ್ತು ಅದರಿಂದಾಗಿ ಎರಡೂ ಕಡೆ ಘಟಿಸಿದ ಪ್ರಾಣಹಾನಿಯಿಂದಾಗಿ ಉಂಟಾದ ವಿಷಮ ಪರಿಸ್ಥಿತಿಯನ್ನು ಸುಧಾರಿಸುವ ಉದ್ದೇಶದಿಂದ ಭಾರತೀಯ ಮತ್ತು ಚೀನೀ ಸೇನೆಗಳ ನಡುವೆ ಜೂನ್ 22ರಂದು ಲೆಫ್ಥಿನೆಂಟ್ ಜನರಲ್ ಮಟ್ಟದ ಮಾತುಕತೆಗಳು ನಡೆದು, ಹತೋಟಿ ರೇಖೆಯಲ್ಲಿ ಮುಖ್ಯವಾಗಿ ಗಲ್ವಾನ್ ಕಣಿವೆಯಲ್ಲಿ ಶಾಂತಿ ಕಾಪಾಡಲು ಎರಡೂ ಪಕ್ಷಗಳು ಒಮ್ಮತಕ್ಕೆ ಬಂದವು. ಜೂನ್ 6ರ ಒಪ್ಪಂದವನ್ನು ಚೀನಾ ಉಲ್ಲಂಘಿಸಿ ಘರ್ಷಣೆಗಳಿಗೆ ಕಾರಣವಾಗಿದ್ದರ ಹಿನ್ನೆಲೆಯಲ್ಲಿ ಹೊಸ ಒಪ್ಪಂದದ ಬಾಳಿಕೆಯ ಬಗ್ಗೆ ಪ್ರಶ್ನೆಗಳೆದ್ದರೂ ಈ ಬಾರಿ ಚೀನಾದಿಂದ ಹಿಂದಿನ ವಿಶ್ವಾಸಘಾತಕತನ ಮರುಕಳಿಸಲಾರದು ಎಂಬ ಆಶಾಭಾವನೆಯನ್ನೂ ಮೂಡಿಸುವ ಕಾರಣಗಳು ನಮ್ಮೆದುರಿಗಿದ್ದವು.
ವಸ್ತುಸ್ಥಿತಿಯನ್ನು ಹೊರಜಗತ್ತಿನಿಂದ ಮುಚ್ಚಿಡಲು ಚೀನಾ ಅದೆಷ್ಟೇ ಹೆಣಗಿದರೂ ಜೂನ್ ತಿಂಗಳಲ್ಲಿ ದೇಶದ ಆಂತರಿಕ ಸಂಕಷ್ಟಗಳು ಮಿತಿಮೀರಿದ ಬಗೆಗಿನ ವಿವರಗಳು ನಮಗೆ ತಿಳಿಯತ್ತಲೇ ಇವೆ. ಜೂನ್ 11ರಂದು ಆರಂಭವಾದ ವಾರ್ಷಿಕ ಮಳೆ ದೇಶದ ಮೂರನೆಯ ಎರಡು ಭಾಗಗಳಲ್ಲಿ ಅಗಾಧ ಪ್ರಮಾಣದ ಪ್ರವಾಹ ಮತ್ತು ಭೂಕುಸಿತಗಳನ್ನುಂಟು ಮಾಡುತ್ತಿದೆ. ಇಂತಹ ಭಾರಿ ಮಳೆಯನ್ನು ಚೀನಾ ದೇಶ 1940ರ ನಂತರ ಕಂಡಿರಲಿಲ್ಲಂತೆ. ಈ ಪ್ರಾಕೃತಿಕ ವಿಕೋಪ ಬೆಳೆಗಳಿಗೆ ವ್ಯಾಪಕ ಹಾನಿ ಮಾಡುವುದರ ಜತೆಗೆ ಸಾರಿಗೆ ಸಂಪರ್ಕವ್ಯವಸ್ಥೆಯನ್ನೂ ಹಾಳುಗೆಡವಿದೆ. ಇದು ಈಗಾಗಲೇ ಕೆಟ್ಟಿರುವ ಆಹಾರಪೂರೈಕೆಯನ್ನು ಮತ್ತಷ್ಟು ಬಿಗಡಾಯಿಸಿದೆ. ಈ ನಡುವೆ ಯಾಂಗ್ಟ್‍ಝೆ ನದಿಗೆ ಕಟ್ಟಲಾಗಿರುವ ಬೃಹತ್ ಅಣೆಕಟ್ಟು ಕುಸಿಯುವ ಅಪಾಯ ಉಂಟಾಗಿದೆ. ಜಗತ್ತಿನ ಅತಿ ದೊಡ್ಡ ಅಣೆಕಟ್ಟುಗಳಲ್ಲೊಂದಾದ ಈ “ತ್ರೀ ಗಾರ್ಜಸ್ ಡ್ಯಾಮ್” ನಿಜಕ್ಕೂ ಕುಸಿದರೆ 24 ಪ್ರಾಂತ್ಯಗಳ ನಲವತ್ತು ಕೋಟಿ ಜನರ ಜೀವಗಳು ಅಪಾಯಕ್ಕೀಡಾಗುತ್ತವೆ. ಅಪಾಯವನ್ನು ತಡೆಯುವ ಕ್ರಮವಾಗಿ ಅಣೆಕಟ್ಟೆಯ ಮೇಲಿನ ನೀರಿನ ಒತ್ತಡವನ್ನು ಕಡಿಮೆಗೊಳಿಸಲೆಂದು ಸರ್ಕಾರ ಜೂನ್ 29ರಂದು ಏಕಾಏಕಿ ಗೇಟ್‍ಗಳನ್ನು ತೆರೆದಿದೆ. ಆದರೆ ಮುನ್ಸೂಚನೆ ನೀಡದೆ ಹಾಗೆ ಮಾಡಿದ್ದರಿಂದಾಗಿ ನದಿಯುದ್ದಕ್ಕೂ ಉಕ್ಕಿದ ಪ್ರವಾಹಕ್ಕೆ ಹಲವಾರು ಹಳ್ಳಿ ಪಟ್ಟಣಗಳ ಲಕ್ಷಾಂತರ ಜನ ಸಿಲುಕಿಹೋದರು. ಪ್ರವಾಹ ಮತ್ರು ವಿದ್ಯುದಾಘಾತದಿಂದ ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ.
ಇದರ ಜತೆಗೆ ಕೊರೋನಾ ಸೋಂಕು ದೇಶದೆಲ್ಲೆಡೆ ಮತ್ತಷ್ಥು ಉಗ್ರವಾಗಿದೆ. ರಾಜಧಾನಿ ಬೀಜಿಂಗ್ ದೊಡ್ಡ ವೂಹಾನ್ ಆಗಿ ಬದಲಾಗಿಹೋಗಿದೆ. ದಿನೇ ದಿನೇ ಅಂಕೆಮೀರಿ ಹೆಚ್ಚುತ್ತಲೇ ಇರುವ ಸೋಂಕಿತರನ್ನು ಉಪಚರಿಸಲು ರಾಜಧಾನಿಯ ಆಸ್ಪತ್ರೆಗಳಿಗೆ ಸಾಧ್ಯವಾಗುತ್ತಿಲ್ಲ. ನಗರದ 70% ಜನತೆಗೆ ಆಹಾರಪದಾರ್ಥಗಳನ್ನು ಪೂರೈಸುವ ಮಾರುಕಟ್ಟೆಗಳು ಸೋಂಕಿನ ಪರಿಣಾಮವಾಗಿ ಜೂನ್ ಆರಂಭದಲ್ಲಿ ಮುಚ್ಚಲ್ಪಟ್ಟ ಕಾರಣ ಸಾಮಾನ್ಯ ಜನತೆ ಅತೀವ ಕಷ್ಥಕ್ಕೀಡಾಗಿದ್ದಾರೆ. ಈ ನಡುವೆ ಲಾಕ್‍ಡೌನ್ ಜಾರಿಗೊಳಿಸುವ ಅತ್ಯುತ್ಸಾಹದಲ್ಲಿಯೋ ಅಥವಾ ಸರ್ಕಾರೀ ಆದೇಶದ ಪಾಲನೆಯ ಮೇರೆಗೋ ಪೊಲೀಸರು ನಗರದ ಕೆಲವೆಡೆ ಜನರನ್ನು ಮನೆಗಳೊಳಗೆ ಕೂಡಿಹಾಕಿ ಅಪಾರ್ಟ್‍ಮೆಂಟ್ ಕಟ್ಟಡಗಳ ಪ್ರವೇಶದ್ವಾರಗಳನ್ನು ಕಬ್ಬಿಣದ ಪಟ್ಟಿಗಳಿಂದ ಬಂದ್ ಮಾಡಿದ ಕಾರಣ ಜನರ ಸಂಕಷ್ಟಗಳು ಇನ್ನಷ್ಟು ಹೆಚ್ಚಿವೆ. ಈ ನಡುವೆ ಕಮ್ಯೂನಿಸ್ಟ್ ಪಾರ್ಟಿಯ ನೇತಾರರಿಗಷ್ಟೇ ಮೀಸಲಾದ “ಮಿಲಿಟರಿ ಹಾಸ್ಪಿಟಲ್ 301”ಗೇ ಕೊರೋನಾ ಸೋಂಕು ಹರಡಿದ ಸುದ್ಹಿ ಬಂದಿದೆ.
ರಾಮಾಯಣ,ಮಹಾಭಾರತ,ಪುರಾಣಗಳ 64 ಸಂಪುಟಗಳು ಕನ್ನಡದಲ್ಲಿ ಅತ್ಯಂತ ಕಡಿಮೆ ಬೆಲೆಗೆ
– ವಿಶ್ವನಾಥ ಸುಂಕಸಾಲ
ಮೂಲ ಶ್ಲೋಕಗಳೊಂದಿಗೆ ಕನ್ನಡದಲ್ಲಿ ರಾಮಾಯಣ, ಮಹಾಭಾರತದ ಗ್ರಂಥಗಳು ಸಿಗುತ್ತವೆಯೇ ಎಂಬ ಪ್ರಶ್ನೆ ಹಲವರದು. ಕನ್ನಡದಲ್ಲಿ ಸಮಗ್ರವಾಗಿ ಇಂಥ ಗ್ರಂಥಗಳು ದೊರೆಯುವುದು ವಿರಳವೇ. ಒಂದೆರಡು ಪ್ರಕಾಶನಗಳು ಮಾತ್ರ ಇಂದಿಗೂ ರಾಮಾಯಣ, ಮಹಾಭಾರತ, ಪುರಾಣಗಳನ್ನು ಜನರಿಗೆ ದೊರಕುವಂತೆ ಮಾಡುತ್ತಿವೆ. ಅವುಗಳಲ್ಲಿ ಭಾರತ ದರ್ಶನ ಪ್ರಕಾಶನವೂ ಒಂದು.
ಅತ್ಯಂತ ಕಡಿಮೆ ಬೆಲೆಗೆ ಕನ್ನಡದ ಜನತೆಗೆ ಭಾರತೀಯ ಸಂಸ್ಕೃತಿಯ ಮೂಲವಾದ ಈ ಗ್ರಂಥಗಳನ್ನು ತಲುಪಿಸಲೆಂದೇ ಹುಟ್ಟಿದ ಸಂಸ್ಥೆ ‘ಭಾರತ ದರ್ಶನ ಪ್ರಕಾಶನ’.
ಮುದ್ರಣದ ವ್ಯಯಕ್ಕಿಂತ ಕಡಿಮೆ ಬೆಲೆಗೆ ಪುಸ್ತಕವನ್ನು ಒದಗಿಸುತ್ತಿರುವ ಭಾರತ ದರ್ಶನ ಪ್ರಕಾಶನಕ್ಕೆ ಓದುಗರು, ದಾನಿಗಳೇ ಬೆನ್ನೆಲುಬು. ರಾಮಾಯಣ, ಮಹಾಭಾರತಗಳ ಕಥೆಗಳನ್ನು ಸಂಕ್ಷಿಪ್ತವಾಗಿ ವಿವರಿಸುವ ಅನೇಕ ಪುಸ್ತಕಗಳು ಸಿಗಬಹುದು. ಆದರೆ ಮೂಲ ವಾಲ್ಮೀಕಿ ಹಾಗೂ ವ್ಯಾಸರಿಂದ ಲಿಖಿತವಾದ ಪ್ರತಿ ಶ್ಲೋಕವನ್ನೂ ಸಂಪುಟದ ಒಂದು ಕಡೆ ಕೊಟ್ಟು, ಮತ್ತೊಂದು ಭಾಗದಲ್ಲಿ ಸಂಪೂರ್ಣ ಅರ್ಥವನ್ನು ವಿಸ್ತೃತವಾಗಿಯೂ, ನಿರ್ದುಷ್ಟವಾಗಿಯೂ, ಸರಳ ಕನ್ನಡದಲ್ಲಿ ವಿವರಿಸಿರುವ ಗ್ರಂಥಮಾಲೆ ತೀರಾ ವಿರಳ.
ಭಾರತ ದರ್ಶನ ಪ್ರಕಾಶನದ ಒಂದೊಂದು ಸಂಪುಟವೂ 620-650 ಪೇಜುಗಳಿಂದ ಕೂಡಿವೆ. ಪ್ರತಿ ಸಂಪುಟದ ಮುದ್ರಣಕ್ಕೂ ಸರಾಸರಿ 120-150 ರೂಪಾಯಿಗಿಂತ ಹೆಚ್ಚು ವ್ಯಯವಾಗುತ್ತದಂತೆ. ಆದರೆ, ರಾಮಾಯಣ, ಮಹಾಭಾರತಗಳ ಪ್ರಚಾರಕ್ಕಾಗಿಯೇ ಹುಟ್ಟಿಕೊಂಡ ಈ ಸಂಸ್ಥೆಯು ದಾನಿಗಳ ಸಹಕಾರದಿಂದ ಮುದ್ರಣ ವ್ಯಯಕ್ಕಿಂತಲೂ ಕಡಿಮೆ ದರಕ್ಕೆ ಅಂದರೆ ಸರಾಸರಿ ಬರೀ ನೂರು ರೂಪಾಯಿಗೆ ಕೊಡುತ್ತಿದೆ.
ಕಮ್ಯುನಿಸಂನ ಅಭದ್ರತೆ ಮತ್ತು ಅಸಹನೆಯೇ ಚೀನಾ ಆಕ್ರಮಣದ ಮೂಲ
– ಅಜಿತ್ ಶೆಟ್ಟಿ ಹೆರಂಜೆ
ಯಾವುದೇ ದೇಶ ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಪ್ರಭುತ್ವ ಸ್ಥಾಪಿಸಬೇಕಾದರೆ ಅದು ವ್ಯಾಪಾರ ನಡೆಸುವ ಮಾರ್ಗ ಸುರಕ್ಷಿತವಾಗಿರಬೇಕು ಮತ್ತು ಬಹುತೇಕ ಅದು ಆ ದೇಶದ ನಿಯಂತ್ರಣದಲ್ಲಿ ಇರಬೇಕು. ಈ ಭೂಮಿಯ ಮೇಲೆ ಶತಮಾನಗಳಿಂದಲೂ ಅಂತಾರಾಷ್ಟ್ರೀಯ ವ್ಯಾಪಾರ ಬಹುತೇಕ ಸಮುದ್ರ ಮಾರ್ಗದ ಮುಖಾಂತರವೇ ನೆಡೆದಿದ್ದು. ಇದರ ನಿಯಂತ್ರಣ ಯಾರ ಕೈಯಲ್ಲಿ ಇರುತ್ತದೆಯೋ ಅವರು ಜಗತ್ತಿನ ರಾಜಕೀಯವನ್ನು ನಿಯಂತ್ರಿಸುತ್ತಾರೆ. ಇದಕ್ಕೆ ಇತಿಹಾಸದಲ್ಲಿ ಅನೇಕ ಉದಾಹರಣೆಗಳು ಸಿಗುತ್ತವೆ. ನೆಪೋಲಿಯನ್ ಬೊನಪಾರ್ಟೆ ಇಂಗ್ಲೆಂಡನ್ನು ಸಾಮರಿಕವಾಗಿ ಬಗ್ಗುಬಡಿಯಲು ಆಗದ ಸಂದರ್ಭದಲ್ಲಿ ಅದರ ಆರ್ಥಿಕತೆಯ ನರಮಂಡಲವಾಗಿದ್ದ ಸಮುದ್ರ ವ್ಯಾಪಾರ ಮಾರ್ಗದ ಮೇಲೆ ದಿಗ್ಭಂಧನವನ್ನು ಹಾಕುತ್ತಾನೆ. ಇದು ಆ ಕಾಲದಲ್ಲಿ ಇಂಗ್ಲೆಂಡಿಗೆ ಬಲವಾದ ಹೊಡತವನ್ನೇ ಕೊಟ್ಟಿತ್ತು. ಯೂರೋಪ್ ಮತ್ತು ಪೂರ್ವ ರಾಷ್ಟ್ರಗಳ ನಡುವೆ ವಾಣಿಜ್ಯ ವ್ಯವಹಾರಗಳ ಸಂಪರ್ಕದ ಕೊಂಡಿಯಾಗಿದ್ದ ಕಾಂನ್‌ಸ್ಟಾಂಟಿನೋಪಲನ್ನು ಒಟ್ಟೋಮನ್ ತುರ್ಕರು ವಶಪಡಿಸಿಕೊಂಡಾಗ ಯುರೋಪಿಯನ್ನರಿಗೆ ಪೂರ್ವದ ಜೊತೆಗೆ ವ್ಯವಹಾರ ಮಾಡಲು ಹೊಸ ಮಾರ್ಗದ ಅನ್ವೇಷಣೆ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಹಾಗೆಯೆ ಇವತ್ತು ಚೀನಾ ಇಂತಹುದೇ ಒಂದು ಕೃತ್ಯಕ್ಕೆ ಕೈ ಹಾಕಿ ಕೈ ಸುಟ್ಟುಕೊಳ್ಳುತ್ತಿದೆ.
ಕಳೆದ ಕೆಲವು ದಿನಗಳಿಂದ ಲಡಾಕಿನ ಗಲ್ವಾನ್ ಸರೋವರದ ತೀರದಲ್ಲಿ ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ಉಪದ್ರವ ಚೀನಾ ಇಡೀ ಜಗತ್ತಿನಲ್ಲಿ ತಾನು ವಿಶ್ವದ ಆರ್ಥಿಕ ಜಗತ್ತಿನ ಅನಭಿಶಕ್ತ ದೊರೆಯಾಗಬೇಕು ಎನ್ನುವ ಕೂಟ ನೀತಿಯ ಒಂದು ಚಿಕ್ಕ ಭಾಗ. ಇದು ಭಾರತ ಮತ್ತು ಚೀನಾದ ಒಂದು ಸಣ್ಣ ಗಡಿ ವಿವಾದ ಎಂದು ಭಾವಿಸಿದರೆ ಖಂಡಿತ ತಪ್ಪಾಗುತ್ತದೆ.
ಅಧಿಕಾರ ನಿಮಿತ್ತಂ ಬಹುಕೃತ ವೇಷಂ
– ಬಿದಿರೆ ಪ್ರಕಾಶ್
ಎಂತಹ ಮಾತು? : ‘ನನ್ನ ಮೇಲೆ ಬಿಜೆಪಿಯ ಕೃಪೆಯಿದೆ, ಬಿಜೆಪಿಯ ಕೃಪೆಯಿಂದ, ಬಿಜೆಪಿಯ ಹಿರಿಯರು ನೀಡಿದ ನನಗೊಂದು ಅವಕಾಶದಿಂದ ನಾನು ಇಂತಹ ಸ್ಥಾನದಲ್ಲಿದ್ದೇನೆ’ ಇದು ಇಡೀ ದೇಶದಲ್ಲಿ ತನ್ನದೇ ನಾಮಬಲದಿಂದ ಬಿಜೆಪಿಯನ್ನು ಮೇರು ಶಿಖರಕ್ಕೆ ಹೊತ್ತೊಯ್ದ ದೇಶದ ನೆಚ್ಚಿನ ಪ್ರಧಾನಿಯವರ ಮಾತುಗಳು.
ಕಳೆದ ಲೋಕಸಭಾ ಚುನಾವಣೆಯಲ್ಲಿ 282ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದದ್ದೂ ಇವರ ನಾಮಬಲದಿಂದಲೇ, ನಂತರ ಒಂದಾದ ಮೇಲೆ ಒಂದರಂತೆ ದೇಶದ ರಾಜ್ಯಗಳೆಲ್ಲಾ ಬಿಜೆಪಿ ಗೆಲುವು ಸಾಧಿಸುತ್ತಿರುವುದೂ ಇವರ ಸಾಮರ್ಥ್ಯದಿಂದಲೇ. ಆದರೆ ಈ ಗೆಲುವು, ಸಾಧನೆಗಳೆಲ್ಲವಕ್ಕೂ ತಾವೇ ಕಾರಣೀ ಪುರುಷನಾಗಿದ್ದರೂ ಅದನ್ನು ‘ಕಾರ್ಯಕರ್ತರ ಗೆಲುವು’, ಹಿರಿಯರು ಕೊಟ್ಟ ಅವಕಾಶ’ ಎಂದು ಹೇಳುವ ಶ್ರೀ ನರೇಂದ್ರ ಮೋದಿಯವರಂತಹ ಮೇರು ವ್ಯಕ್ತಿತ್ವವಿರುವುದೂ ಬಿಜೆಪಿಯಲ್ಲೇ.
ಎಂತಹ ವಿಪರ್ಯಾಸ… ! : ಬಿಜೆಪಿ ಅಧಿಕಾರದಲ್ಲಿದ್ದಾಗ ಮಾತ್ರ ಬಿಜೆಪಿಗೆ ಬಂದರು, ಅಧಿಕಾರವನ್ನೂ ಅನುಭವಿಸಿದರು. ಬಿಜೆಪಿಗೆ ಏನನ್ನೂ ಕೊಡದೆ, ಬಿಜೆಪಿಯಿಂದಲೇ ಎಲ್ಲವನ್ನೂ ಪಡೆದರು. ಕೊನೆಗೆ ಬಿಜೆಪಿಯನ್ನೂ, ಬಿಜೆಪಿ ನಾಯಕರನ್ನೂ ಜರಿದು ಬಿಡುವ ಬಿ.ಜೆ. ಪುಟ್ಟಸ್ವಾಮಿಯಂತಹ ನಾಯಕ(?)ರುಗಳು ಇರುವುದೂ ಬಿಜೆಪಿಯಲ್ಲೇ.ಬಿಜೆಪಿಗೆ ಒಳಹೊಕ್ಕಾಗ ಇದರಿಂದ ಬರುವಂತಹ ಮಾತುಗಳೆಂತಹವು? ಬಿಜೆಪಿ ಬಿಡುವಾಗ ಇವರುಗಳ ಬಾಯಿಂದ ಉದುರುವ ನುಡಿಮುತ್ತುಗಳೆಂತವು? ಎಂಎಲ್‌ಸಿ ಸ್ಥಾನ ವಂಚಿತರಾದ ಕೂಡಲೇ ಎಂತಹ ಮಾತುಗಳು ಈ ಪುಟ್ಟಸ್ವಾಮಿಯವರಿಂದ ಬಂದು ಬಿಟ್ಟಿತು! ಇವರು ಬಂದ ಮೇಲೆಯೇ ಬಿಜೆಪಿಯಲ್ಲಿ ಹಿಂದುಳಿದ ವರ್ಗ ಸಂಘಟನೆಯಾಯಿತಂತೆ! ಪುಟ್ಟಸ್ವಾಮಿಯವನರನ್ನು ಒಮ್ಮೆ ಕೇಳಲೇಬೇಕು. ಎಲ್ಲಿದ್ದೀರಾ ಪುಟ್ಟಸ್ವಾಮಿಯವರೇ? ನೀವು ಬರುವ ಮೊದಲು ಬಿಜೆಪಿ ಏನಾಗಿತ್ತು? ನೀವು ಬಂದ ಮೇಲೆ ಬಿಜೆಪಿ ಏನಾಯಿತು? ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಿ, ಹಾಗೆಯೇ ಬಿಜೆಪಿಗೆ ನೀವು ಬಂದ ಮೇಲೆ, ನೀವೂ, ನಿಮ್ಮ ಅಂತಸ್ತು ಏನಾಯಿತೆಂಬುದನ್ನೂ ಮನನ ಮಾಡಿಕೊಳ್ಳಿ.