ಫ್ರಾನ್ಸಿನ ಸೆಕ್ಯುಲರಿಸಂ ಮತ್ತು ಇಸ್ಲಾಮಿನ ಜಗಳದಲ್ಲಿ ಭಾರತಕ್ಕೇನು ಪಾಠ?
– ವಿನಾಯಕ ಹಂಪಿಹೊಳಿ
ಸದ್ಯಕ್ಕೆ ಫ್ರಾನ್ಸಿನಲ್ಲಿ ಬುರ್ಕ ಬ್ಯಾನ್ ಕುರಿತು ಚರ್ಚೆ ನಡೆಯುತ್ತಿದೆ. ಬುರ್ಕಾ ಬ್ಯಾನ್ ತುಂಬಾ ಹಿಂದೆಯೇ ಆಗಿದೆ. ಈ ರೀತಿಯ ನಿಷೇಧಗಳಿಗೆ ಫ್ರಾನ್ಸ್ ಕೊಡುತ್ತಿರುವ ಕಾರಣ ರಿಲಿಜನ್ನುಗಳು ಪ್ರತಿಪಾದಿಸುವ ವಸ್ತ್ರಸಂಹಿತೆಯನ್ನು ಪಬ್ಲಿಕ್ ವಲಯದಲ್ಲಿ ಪಾಲಿಸುವುದು ಅಲ್ಲಿನ ಸೆಕ್ಯುಲರಿಸಂ ಐಡಿಯಾಲಜಿಯೊಂದಿಗೆ ಸರಿಹೊಂದದಿರುವದು. ಫ್ರಾನ್ಸಿನಲ್ಲಿ ಪ್ರಜಾಪ್ರಭುತ್ವದ ಆಡಳಿತವನ್ನು ಚರ್ಚಿನಿಂದ ಪ್ರತ್ಯೇಕಿಸುವ ಪ್ರಕ್ರಿಯೆ ತುಂಬ ಕಟ್ಟುನಿಟ್ಟಾಗಿತ್ತು. ಫ್ರಾನ್ಸಿನ ಸೆಕ್ಯುಲರಿಸಂ ರಿಲಿಜನ್ನನ್ನು ಕೇವಲ ರಾಜಕೀಯದಿಂದಷ್ಟೇ ಪ್ರತ್ಯೇಕಿಸುವದಷ್ಟೇ ಅಲ್ಲ, ಫ್ರಾನ್ಸ್ ದೇಶವು ಯಾವ ರಿಲಿಜನ್ನಿನೊಂದಿಗೂ ಗುರುತಿಸಿಕೊಳ್ಳಬಾರದು ಎನ್ನುವದು ಅದರ ಆಶಯ. ಆದ್ದರಿಂದ ಫ್ರಾನ್ಸ್ ದೇಶವು ತನ್ನನ್ನು ತಾನು ರಿಪಬ್ಲಿಕ್ ಮತ್ತು ಸೆಕ್ಯುಲರ್ ದೇಶವೆಂದು ಘೋಷಿಸಿಕೊಂಡಿತ್ತು. ಈ ರೀತಿಯ ಲಿಬರಲ್ ಸೆಕ್ಯುಲರಿಸಂ ಅನ್ನು ಬರೀ ಕ್ರಿಶ್ಚಿಯನ್ನರೇ ತುಂಬಿಕೊಂಡಿದ್ದ ದೇಶದಲ್ಲಿ ಈ ರೀತಿಯ ಸೆಕ್ಯುಲರಿಸಂ ಅನ್ನು ಜಾರಿಗೆ ತರುವದು ಅಷ್ಟು ಕಷ್ಟವಾಗಿರಲಿಲ್ಲ. ಮತ್ತಷ್ಟು ಓದು 
ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ
ದಿನ – 21:
ಲಾಲಾ ಹರದಯಾಳ್
– ರಾಮಚಂದ್ರ ಹೆಗಡೆ
‘ಬೇಕಾಗಿದ್ದಾರೆ – ಭಾರತದಲ್ಲಿ ಬಂಡಾಯವೆಬ್ಬಿಸಲು ಸೈನಿಕರು.
ವೇತನ – ಸಾವು
ಬಹುಮಾನ – ಹುತಾತ್ಮತೆ
ಪೆನ್ಷನ್ – ಸ್ವಾತಂತ್ರ್ಯ
ಯುದ್ಧ ಕ್ಷೇತ್ರ – ಭಾರತ’
ಹೀಗೆ ದಪ್ಪ ದಪ್ಪ ಅಕ್ಷರಗಳಲ್ಲಿ ಈ ಜಾಹೀರಾತು, 1914ರ ಸೆಪ್ಟೆಂಬರ್ ತಿಂಗಳಲ್ಲಿ ಹೊರಬಿದ್ದ “ಗದರ್” ಪತ್ರಿಕೆಯ ಮುಖಪುಟದಲ್ಲಿ ಅಚ್ಚಾಗಿತ್ತು. ಗದರ್ (ಬಂಡಾಯ) ಪಕ್ಷ, ಗದರ್ ಪತ್ರಿಕೆ – ಮೊದಲನೆಯ ಮಹಾಯುದ್ಧ ಆರಂಭವಾಗುವುದಕ್ಕೆ ಸ್ವಲ್ಪ ಮುಂಚೆ ಸ್ಥಾಪಿತವಾಗಿ, ಸಶಸ್ತ್ರ ಬಂಡಾಯವೆಬ್ಬಿಸಿ ಭಾರತವನ್ನು ಸ್ವತಂತ್ರಗೊಳಿಸಲು ಮಹಾನ್ ಪ್ರಯತ್ನ ನಡೆಸಿದವು. ಈ ಕ್ರಾಂತಿಯ ಉರಿಯೆಬ್ಬಿಸಿದ ಸಾಹಸಿ ಲಾಲಾ ಹರದಯಾಳ್. ವಿದೇಶದಲ್ಲಿರುವ ಭಾರತೀಯರನ್ನು ಸಂಘಟಿಸಿ ಅವರಲ್ಲಿ ತಾಯ್ನಾಡಿನ ಸ್ವಾತಂತ್ರ್ಯ ಭಾವನೆ ಅರಳಿಸಿ ಅವರೆಲ್ಲರೂ ಸ್ವದೇಶಕ್ಕೆ ತೆರಳಿ ದಂಗೆಯೇಳುವಂತೆ ಮಾಡಬೇಕು ಎಂಬುದು ಲಾಲನ ಅಪೇಕ್ಷೆಯಾಗಿತ್ತು. 1884 ರಲ್ಲಿ ಜನಿಸಿದ ಹರದಯಾಳ್ ಚಿಕ್ಕಂದಿನಲ್ಲೇ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ತಮ್ಮ ತಂದೆ ತಾಯಿಯಿಂದ ಕೇಳಿ ತಿಳಿದಿದ್ದರು. ಬ್ರಿಟಿಷ್ ಸರ್ಕಾರದಿಂದಲೇ ವಿದ್ಯಾರ್ಥಿ ವೇತನ ಪಡೆದು ಉನ್ನತ ವ್ಯಾಸಂಗಕ್ಕಾಗಿ ಆಕ್ಸ್ಫರ್ಡ್ ಗೆ ತೆರಳಿದ ಲಾಲಾ ಅಲ್ಲಿ ಸಾವರ್ಕರ್, ಶ್ಯಾಮಜಿ ಕೃಷ್ಣವರ್ಮ, ಭಾಯಿ ಪರಮಾನಂದರ ಸಂಪರ್ಕಕ್ಕೆ ಬಂದು ಭಾರತ ಭಕ್ತರಾಗಿ ಬದಲಾದರು. ಮತ್ತಷ್ಟು ಓದು 
ಕನಸು ನನಸಾದಾಗ….!
-ನಾಗರಾಜ ಅಡಿಗ, ಕೈಗಾ.
ಸುಮಾರು ೩೫ ವರ್ಷಗಳ ಹಿಂದಿನ ಮಾತು. ರೋಹಿತ್ ನ ಬಾಲ್ಯದ ದಿನಗಳವು. ಆ ದಿನಗಳಲ್ಲಿಯೇ ರೋಹಿತ್ ಗೆ ಬಾಹ್ಯಾಕಾಶ , ಆಕಾಶಕಾಯಗಳು, ಉಪಗ್ರಹಗಳು ಇವುಗಳ ಬಗ್ಗೆ ಅತ್ಯಂತ ಆಸಕ್ತಿ. ಕರೆಂಟಿಲ್ಲದ ಆ ಕತ್ತಲ ರಾತ್ರಿಯಲ್ಲಿ ಆಕಾಶವನ್ನು ವೀಕ್ಷಿಸುವುದು ಒಂದು ಹವ್ಯಾಸವಾಗಿತ್ತು. ಸಪ್ತಋಷಿ ಮಂಡಲ, ದ್ರುವ ನಕ್ಷತ್ರ, ನಕ್ಷತ್ರ ಪುಂಜಗಳು, ಶುಕ್ರ, ಮಂಗಳ, ಗುರು ಗ್ರಹಗಳನ್ನು ಬಾಲ್ಯದಲ್ಲಿಯೇ ಗುರುತಿಸಿಕೊಂಡು ಅವುಗಳ ಚಲನವಲನಗಳನ್ನು ವೀಕ್ಷಿಸುತ್ತಿದ್ದ. ಪುತ್ತೂರಿನಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಒಬ್ಬ ಖಗೋಳ ವೀಕ್ಷಕನಿಂದ ರಾತ್ರಿ “ಆಕಾಶ ವೀಕ್ಷಣೆ” ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮೇಲಂತೂ ಆಸಕ್ತಿ ಇನ್ನೂ ಹೆಚ್ಚಾಯಿತು. ಹೈಸ್ಕೂಲಿನಲ್ಲಿರುವಾಗ ಕಾಣಿಸಿದ ಧೂಮಕೇತು ಅವನ ಕುತೂಹಲವನ್ನು ಇನ್ನೂ ಕೆರಳಿಸಿತ್ತು. ರೋಹಿತ್ ನು ಬಾಲ್ಯವನ್ನು ಕಳೆದ ಊರು ಕುಗ್ರಾಮ ಅಲ್ಲದಿದ್ದರೂ ಪ್ರಾಥಮಿಕ ಅಗತ್ಯತೆಗಳನ್ನೂ ಹೊಂದಿರದ ಚಿಕ್ಕ ಗ್ರಾಮ. ಒಂದೆರಡು ವರ್ಷಗಳ ಹಿಂದಷ್ಟೇ ಅಲ್ಲಿ ಸರಕಾರಿ ಹೈಸ್ಕೂಲ್ ಹುಟ್ಟಿಕೊಂಡಿದೆ. ಸಾಮಾನ್ಯ ಸರಕಾರಿ ಶಾಲೆಗಳಲ್ಲಾಗುವಂತೆ ಶಾಲೆಯ ಬಹುತ್ತಮ ಅಧ್ಯಾಪಕರು ನಿರಾಸಕ್ತಿಯಿಂದ ಪಾಠ ಹೇಳಿಕೊಡುತ್ತಿದ್ದರೆ, ವಿಜ್ಞಾನ ಅಧ್ಯಾಪಕರು ಅದಕ್ಕೆ ತದ್ವಿರುಧ್ಧ. ಹೈಸ್ಕೂಲಿನ ನೆಚ್ಚಿನ ವಿಜ್ಞಾನ ಅಧ್ಯಾಪಕರು ರೋಹಿತ್ ನ ಆಸಕ್ತಿಗಳಿಗೆ ಹೆಚ್ಚಿನ ಬೆಂಬಲ ಕೊಟ್ಟು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದರು. “Children’s knowledge bank” ಮತ್ತು ವಿಜ್ಞಾನಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ತಂದುಕೊಟ್ಟು ರೋಹಿತ್ ಗೆ ಅರ್ಥವಾಗದ ವಿಷಯಗಳನ್ನು ವಿವರವಾಗಿ ತಿಳಿಸುತ್ತಿದ್ದರು. ಆಸಕ್ತಿ ತೋರುತ್ತಿದ್ದ ವಿದ್ಯಾರ್ಥಿಗಳೆಂದರೆ ಮುತುವರ್ಜಿವಹಿಸಿ ಹೇಳಿಕೊಡುವುದು ಅವರ ಇಷ್ಟದ ವಿಷಯವಾಗಿತ್ತು. ಅಕ್ಕ-ಪಕ್ಕದ ಶಾಲೆಗಳಲ್ಲಾಗುವ ವಿಜ್ಞಾನ ವಸ್ತುಪ್ರದರ್ಶನಗಳಲ್ಲಿ ಅಧ್ಯಾಪಕದ ಸಹಾಯ-ಪ್ರೋತ್ಸಾಹದಿಂದ ಭಾಗವಹಿಸಿ, ಸೌರವ್ಯೂಹ, ಚಂದ್ರಗ್ರಹಣ-ಸೂರ್ಯಗ್ರಹಣಗಳ ಮಾದರಿಗಳನ್ನು ಮಾಡಿ ಪ್ರದರ್ಶಿಸಿ ಹಲವವಾರು ಬಹುಮಾನಗಳನ್ನೂ ಪ್ರಶಸ್ತಿಗಳನ್ನೂ ಪಡೆದುಕೊಂಡಿದ್ದ. ಶಾಲೆಯಲ್ಲಿರುವ ದೂರದರ್ಶಕದಿಂದ ಕ್ಲಾಸಿನ ಎಲ್ಲ ಮಕ್ಕಳಿಗೆ ಚಂದ್ರನನ್ನು ಮಾತ್ರ ತೋರಿಸುತ್ತಿದ್ದ ಅಧ್ಯಾಪಕರು, ರೋಹಿತ್ ಅನ್ನು ರಾತ್ರಿಯಲ್ಲೂ ಕರೆದು ಗ್ರಹಗಳ ವೀಕ್ಷಣೆ ಮಾಡಿಸುತ್ತಿದ್ದರು. ಹೈಸ್ಕೂಲಿನ್ನಲಿರುವಾಗಲೇ ಗುರು, ಮಂಗಳ ಶುಕ್ರ ಗ್ರಹಗಳ ಚಲನಯನ್ನು ಅಂದಾಜಿಸುತ್ತಿದ್ದ. ಹಾಗೆಯೇ ಭಾರತೀಯ ಪಂಚಾಂಗ ಮತ್ತು ಖಗೋಳ ವಿಜ್ಞಾನಗಳ ಸಂಬಂಧವನ್ನು ಹಲವರನ್ನು ಕೇಳಿ ತನ್ನ ಸ್ವಯಂ ಜ್ಞಾನಾರ್ಜನೆ ಮಾಡುತ್ತಿದ್ದ. “ಬೆಳೆಯುವ ಸಿರಿ ಮೊಳಕೆಯಲ್ಲಿ” ಎಂಬಂತೆ ತನ್ನ ಕನಸನ್ನೂ ತಂದೆ-ತಾಯಿ, ಅಧ್ಯಾಪಕರ ಅಲ್ಲದೆ ಊರಿನವರ ನಿರೀಕ್ಷೆಯನ್ನೂ ಆಕಾಶದೆತ್ತರಕ್ಕೆ ಏರಿಸಿಟ್ಟಿದ್ದ.! ಮತ್ತಷ್ಟು ಓದು 
ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ
ದಿನ – 20:
ಬಿನೋಯ್ ಬಾದಲ್ ದಿನೇಶ್:
– ರಾಮಚಂದ್ರ ಹೆಗಡೆ
ಭಾರತ ಸ್ವಾತಂತ್ರ್ಯ ಸಮರದ ಪುಟಗಳನ್ನು ತೆರೆಯುತ್ತಾ ಹೋದಂತೆ ಅಲ್ಲಿ ಒಂದಕ್ಕಿಂತ ಒಂದು ರೋಚಕ ಅಧ್ಯಾಯವನ್ನು ಕಾಣುತ್ತ ಹೋಗಬಹುದು. ದೇಶವನ್ನು ದಾಸ್ಯದ ಕಪಿಮುಷ್ಟಿಯಿಂದ ರಕ್ಷಿಸಲು ಈ ದೇಶದ ಬಿಸಿರಕ್ತದ ಯುವಕರು ಜೀವ ನೀಡಲಿಕ್ಕೂ ಹಿಂದೇಟು ಹಾಕದ ಸ್ಪೂರ್ತಿದಾಯಕ ಸಾಹಸಗಾಥೆ ನಮಗಲ್ಲಿ ಸಿಗುತ್ತವೆ. ದೇಶದ ರಕ್ಷಣೆಯ ವಿಚಾರ ಬಂದಾಗ ರಕ್ತವೇನು, ಜೀವವನ್ನೂ ಕೊಟ್ಟೇವು ಎಂದಿದ್ದಷ್ಟೇ ಅಲ್ಲ, ಸ್ವಯಂ ತಮ್ಮನ್ನು ಅರ್ಪಿಸಿಕೊಂಡು ನಗುನಗುತ್ತಾ ನೇಣುಗಂಬವೇರಿದ ರೋಮಾಂಚಕಾರಿ ಸಾಹಸಗಳು ಸ್ವಾತಂತ್ರ್ಯ ಸಮರದ ಇತಿಹಾಸವನ್ನು ರಕ್ತರಂಜಿತವಾಗಿ, ವರ್ಣರಂಜಿತವಾಗಿ ಮಾಡಿವೆ. ಬಂಗಾಳದ ಈ ಮೂವರು ಬಿಸಿರಕ್ತದ ದೇಶಪ್ರೇಮಿ ತರುಣರು ಬಿನೋಯ್ ಬಸು, ಬಾದಲ್ ಗುಪ್ತಾ, ದಿನೇಶ್ ಗುಪ್ತಾ ಹಾಗೆ ಸ್ವಾತಂತ್ರ್ಯದ ಕನಸಿನಲ್ಲಿ ಕ್ರಾಂತಿಯ ಕಹಳೆ ಊದಿ ಸಾವಿನ ಕದ ತಟ್ಟಿದಾಗ ಅವರಿಗಿನ್ನೂ 22, 19, 18 ವರ್ಷಗಳಷ್ಟೇ. ಮತ್ತಷ್ಟು ಓದು 
ಇದು ಹೆಣ್ಣಿನ ಕಥೆ
– ಗೀತಾ ಹೆಗ್ಡೆ
ಅವಳಿಗೆ ಕೇವಲ ಹದಿಮೂರು ವರ್ಷ. ಹುಟ್ಟೂರು ಪುತ್ತೂರು, ಉಡುಪಿ ತಾಲ್ಲೂಕು. ಅವಳಿಗೆ ಮದುವೆ ಗಂಡು ಗೊತ್ತಾಯಿತು. ಅವನಿಗೆ ವಯಸ್ಸು ಮೂವತ್ತೆರಡು. ಅವನ ಊರು ಉತ್ತರ ಕನ್ನಡದ ಒಂದು ಚಿಕ್ಕ ಹಳ್ಳಿ. ಆಗ ಮದುವೆಗೆ ಹೆಣ್ಣಿನ ಬರ. ತಿರಾ ಕೊಟ್ಟು(ವಧು ದಕ್ಷಿಣೆ ) ಹೆಣ್ಣನ್ನು ಮದುವೆ ಆಗುತ್ತಿದ್ದರಂತೆ. ಇನ್ನೂ ದೊಡ್ಡವಳಾಗಿಲ್ಲ; ಆಗಲೇ ಮದುವೆ ಮಾಡಿದರು. ಮೈ ತುಂಬಾ ಒಡವೆ ಗೆಜ್ಜೆಟಿಕ್ಕಿ, ತೋಳಬಂಧಿ, ಸೊಂಟಕ್ಕೆ ಬೆಳ್ಳಿ ಡಾಬು, ಕಿವಿ ಓಲೆ ಬುಗುಡಿ, ಕೈ ತುಂಬಾ ಬಳೆಗಳು ಇನ್ನೂ ಮುಂತಾದ ಆಭರಣ ಸುಂದರಿ. ದಕ್ಷಿಣದಿಂದ ಉತ್ತರಕ್ಕೆ ಅವಳ ಪಯಣ. ಗೊತ್ತಿಲ್ಲದ ಊರು. ಶಾಸ್ತ್ರ ಸಂಪ್ರದಾಯದ ಮನೆ. ಒಟ್ಟು ಕುಟುಂಬ. ಗಂಡನ ಮನೆ ಸೇರಿದಳು ವರ್ಷ ಹದಿನಾಲ್ಕಕ್ಕೆ ದೊಡ್ಡವಳಾಗಿ. ಅವಳ ಭಾಷೆ ತುಳು. ಶಿವಳ್ಳಿ ಬ್ರಾಹ್ಮಣ ಕುಟುಂಬದವಳು. ನಿಧಾನವಾಗಿ ಕನ್ನಡ ಭಾಷೆ ಕಲಿತಳು. ಹದಿನಾರರ ವಯಸ್ಸಿನಲ್ಲಿ ಗಂಡು ಮಗುವಿನ ಜನನ. ಮಗಳು ಬಾಳಂತನ ಮುಗಿಸಿಕೊಂಡು ಗಂಡನ ಮನೆ ಸೇರಿದಳು. ಮತ್ತಷ್ಟು ಓದು 
ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ
ದಿನ – 19:
ಸುಬ್ರಮಣ್ಯ ಭಾರತಿ
– ರಾಮಚಂದ್ರ ಹೆಗಡೆ
ಮಹಾಕವಿ ಭಾರತಿಯಾರ್ ಎಂದೇ ಪ್ರಸಿದ್ಧರಾದ, ಭಾರತದ ಅತ್ಯುತ್ತಮ ಕವಿಗಳಲ್ಲಿ ಒಬ್ಬರು ಎಂಬ ಖ್ಯಾತಿಗೆ ಪಾತ್ರರಾದ ತಮಿಳುನಾಡಿನ ಕವಿ, ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕರು ಶ್ರೀ ಸುಬ್ರಮಣ್ಯ ಭಾರತಿ. ತಮ್ಮ ರಾಷ್ಟ್ರೀಯವಾದಿ ಸಾಹಿತ್ಯದ ಮೂಲಕ ಭಾರತೀಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ದಕ್ಷಿಣ ಭಾರತದಲ್ಲಿ ಜನಸಮೂಹವನ್ನು ಸಂಘಟಿಸುವಲ್ಲಿ ಸುಬ್ರಮಣ್ಯ ಭಾರತಿಯವರ ಪಾತ್ರ ಬಲು ದೊಡ್ಡದು. ಆವರ ಹಲವಾರು ಕೃತಿಗಳು ಭಾರತೀಯ ಸ್ವಾತಂತ್ಯ ಆಂದೋಲನದ ಕಾಲದಲ್ಲಿ ದೇಶಭಕ್ತಿ ಮತ್ತು ರಾಷ್ಟ್ರೀಯತೆಯ ಜ್ವಾಲೆಯನ್ನು ಪ್ರಖರಗೊಳಿಸುವಲ್ಲಿ ನೆರವಾದವು ಹಾಗೂ ದೇಶಪ್ರೇಮವನ್ನು ಬಡಿದೆಬ್ಬಿಸಿದವು. 1882ರಲ್ಲಿ ತಮಿಳುನಾಡಿನ ಎತ್ತಯಾಪುರಂ ಎಂಬ ಗ್ರಾಮದಲ್ಲಿ ಜನಿಸಿದ ಸುಬ್ರಮಣ್ಯ ಭಾರತಿ ತಿರುನಲ್ವೇಲಿಯಲ್ಲಿ ಆರಂಭಿಕ ಶಿಕ್ಷಣ ನಂತರ ವಾರಣಾಸಿ ಯಲ್ಲಿ ಪ್ರೌಢ ಹಾಗೂ ಪದವಿ ಶಿಕ್ಷಣ ಪಡೆದರು. ಬಾಲ್ಯದಿಂದಲೇ ಅತ್ಯಂತ ಪ್ರತಿಭಾಶಾಲಿ ಕವಿಯಾಗಿದ್ದ ಭಾರತಿ ತಮ್ಮ 11ನೇ ವಯಸ್ಸಿನಲ್ಲೆ ಎತ್ತಯಾಪುರಂನ ಆಸ್ಥಾನ ಕವಿಗಳು ಹಾಗು ಸಂಗೀತಗಾರರ ಸಮ್ಮೇಳನಕ್ಕೆ ಆಹ್ವಾನಿತರಾಗಿದ್ದರು. ವಾರಣಾಸಿ ಯಲ್ಲಿ ನೆಲಸಿದ್ದ ಅವಧಿಯಲ್ಲಿ ಭಾರತಿಯವರು ಹಿಂದೂ ಆಧ್ಯಾತ್ಮಿಕತೆ ಹಾಗು ರಾಷ್ಟ್ರೀಯತೆಯ ಪ್ರಭಾವಕ್ಕೆ ಒಳಗಾದರು. ಜೊತೆಗೆ ಅವರು ಸಂಸ್ಕೃತ, ಹಿಂದಿ ಹಾಗು ಆಂಗ್ಲ ಭಾಷೆಗಳಲ್ಲಿ ಪರಿಣತಿಯನ್ನು ಹೊಂದಿದರು. ಡಿಸೆಂಬರ್ 1905ರಲ್ಲಿ, ಬನಾರಸ್ ನಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಭಾರತಿ ಪಾಲ್ಗೊಂಡರು. ನಂತರ ಅವರು ವಿವೇಕಾನಂದರ ಮಾನಸ ಪುತ್ರಿ ಸೋದರಿ ನಿವೇದಿತಾರನ್ನು ಸಂಧಿಸಿದರು. ಮತ್ತಷ್ಟು ಓದು 
ಇಂಡೋನೇಷ್ಯದ ನೋಟಿನಲ್ಲೂ ಈತನದೊಂದು ಫೋಟೋ ಇದೆ!
– ರೋಹಿತ್ ಚಕ್ರತೀರ್ಥ
ಗಿರೀಶ ಕಾರ್ನಾಡರ ಹಯವದನ ನಾಟಕ ಗೊತ್ತಲ್ಲ? ಪದ್ಮಿನಿ ಎಂಬ ಸುರಸುಂದರ ಹೆಣ್ಣನ್ನು ಮೋಹಿಸಿ ತಲೆ ಕಡಿದುಕೊಳ್ಳುವ ಮತ್ತು ಇದ್ದ (ಮತ್ತು ಬಿದ್ದ) ತಲೆಯ ಬದಲಾಗಿನ್ನೊಂದು ತಲೆ ಅಂಟಿಸಿಕೊಂಡು ಪೇಚಾಡುವ ಇಬ್ಬರು ಜೀವದ ಗೆಳೆಯರ ಕತೆ ಅದು. ಆ ನಾಟಕದ ಪ್ರಾರಂಭದಲ್ಲಿ ಭಾಗವತ ಹೇಳುತ್ತಾನೆ: “ಸರ್ವ ವಿಘ್ನಗಳನ್ನೂ ನಿರ್ಮೂಲನಗೊಳಿಸಿ ಸಕಲ ಈಪ್ಸಿತಗಳಲ್ಲಿ ಸಿದ್ಧಿಯನ್ನು ನೀಡುವ ಆ ವಿಘ್ನೇಶ್ವರನೇ ಇಂದಿನ ನಮ್ಮ ನಾಟಕಕ್ಕೆ ಯಶಸ್ಸನ್ನು ನೀಡಲಿ. ಆತನ ಮಹಾತ್ಮ್ಯವನ್ನಾದರೂ ವರ್ಣಿಸುವುದು ಹೇಗೆ? ಆನೆಯ ಮುಖ, ಮನುಷ್ಯನ ದೇಹ, ಮುಖದಲ್ಲಿ ಮುರುಕು ದಂತ, ದೇಹದಲ್ಲಿ ಬಿರುಕು ಬಿಟ್ಟ ಉದರ – ಹೇಗೆ ನೋಡಿದರೂ ಅಪೂರ್ಣತೆಗೇ ಸಾಕ್ಷಿಯಾಗಿರುವಂತೆ ಕಾಣುವ ಈ ವಕ್ರತುಂಡನೇ ವಿಘ್ನಹರ್ತನೂ ಆಗಿರಬೇಕು ಎಂಬುದರ ರಹಸ್ಯವನ್ನಾದರೂ ಹೇಗೆ ಬಿಡಿಸೋಣ? ಬಹುಶಃ ದೇವರ ಪೂರ್ಣತ್ವ ಮನುಷ್ಯ ಕಲ್ಪನೆಗೇ ಒಗ್ಗಲಾರದಂಥಾದ್ದು ಎಂಬುದನ್ನೇ ಈ ಮಂಗಳಮೂರ್ತಿಯ ರೂಪ ಸಂಕೇತಿಸುತ್ತಿರಬಹುದು” ಮತ್ತಷ್ಟು ಓದು 
ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ
ದಿನ – 18:
ದುರ್ಗಾ ದೇವಿ ವೋಹ್ರಾ (ದುರ್ಗಾ ಬಾಭಿ) :
– ರಾಮಚಂದ್ರ ಹೆಗಡೆ
ನೀವು ‘ಲೆಜೆಂಡ್ ಆ ಭಗತ್ ಸಿಂಗ್’ ಸಿನೆಮಾ ನೋಡಿದ್ದರೆ ಅದರಲ್ಲಿ ಬ್ರಿಟಿಷ್ ಅಧಿಕಾರಿ ಸೌಂಡರ್ಸ್ ಹತ್ಯೆಯ ನಂತರ ಭಗತ್ ಸಿಂಗ್ ಲಾಹೋರ್ ನಿಂದ ಕಲ್ಕತ್ತಾ ಗೆ ತಪ್ಪಿಸಿಕೊಂಡು ಹೋಗುವ ದೃಶ್ಯ ನೋಡಿರುತ್ತೀರಿ. ಬ್ರಿಟಿಷರು ಭಗತ್ ಸಿಂಗ್ ಗಾಗಿ ದೇಶಾದ್ಯಂತ ಕಟ್ಟೆಚ್ಚರದ ಹುಡುಕಾಟ ನಡೆಸಿದ್ದಾಗ ಅಲ್ಲಿಂದ ಕಲ್ಕತ್ತಾ ಗೆ ತಪ್ಪಿಸಿಕೊಂಡು ಹೋಗುವ ಐಡಿಯಾ ಕೊಟ್ಟು ಹಾಗೆ ತಪ್ಪಿಸಿಕೊಂಡು ಹೋಗಲು ಭಗತ್ ಸಿಂಗ್ ನ ಪತ್ನಿಯಂತೆ ವೇಷ ಧರಿಸಿ ಅವನಿಗೆ ಕಲ್ಕತ್ತಾ ತಲುಪಲು ನೆರವಾದವಳು ಈ ದುರ್ಗಾ ಬಾಭಿ. ಮತ್ತಷ್ಟು ಓದು 
ಅಂಬೇಡ್ಕರ್, ಮಾರ್ಕ್ಸ್ ಮತ್ತು ಬುದ್ಧ…..
– ಗುರುರಾಜ ಕೋಡ್ಕಣಿ. ಯಲ್ಲಾಪುರ
“ಅದೊಮ್ಮೆ ಬುದ್ಧನ ಅಗ್ರಗಣ್ಯ ಶಿಷ್ಯರಲ್ಲಿ ಒಬ್ಬನಾದ ಅನಾಥಪಿಂಡಿಕನು ಬುದ್ದನಿರುವಲ್ಲಿಗೆ ಆಗಮಿಸುತ್ತಾನೆ. ಹಾಗೆ ಬಂದವನೇ ಬುದ್ಧನಿಗೆ ವಂದಿಸಿ, ಪಕ್ಕದಲ್ಲಿದ್ದ ಆಸನದಲ್ಲಿ ಕುಳಿತುಕೊಳ್ಳುತ್ತ ‘ಹೇ ಮಹಾಜ್ಞಾನಿಯೇ, ಗೃಹಸ್ತನೆನಿಸಿಕೊಂಡವನಿಗೆ ತುಂಬ ಆಸಕ್ತಿದಾಯವೆನ್ನಿಸುವ ಹಿತನೀಡುವ, ಆದರೆ ಅಷ್ಟೇ ಕಷ್ಟವೆನಿಸುವ ಕಾರ್ಯ ಯಾವುದೆಂದು ನಿನಗನ್ನಿಸುತ್ತದೆ .’? ಎಂದು ಪ್ರಶ್ನಿಸುತ್ತಾನೆ. ಹೀಗೊಂದು ಪ್ರಶ್ನೆಯನ್ನು ಕೇಳಿ ಮುಗುಳ್ನಕ್ಕ ಗೌತಮ, ‘ಅಂತಹ ಹಲವಾರು ಕೆಲಸಗಳಿವೆ ಶಿಷ್ಯೋತ್ತಮನೇ. ನ್ಯಾಯಬದ್ಧವಾಗಿ ಸಂಪತ್ತನ್ನು ಗಳಿಸುವುದು ಅಂಥದ್ದೊಂದು ಬಹುಮುಖ್ಯ ಕಾರ್ಯ. ಮೊದಲು ವ್ಯಕ್ತಿ ತಾನು ಧರ್ಮಯುತವಾಗಿ ಸಂಪತ್ತನ್ನು ಗಳಿಸಿಕೊಳ್ಳಬೇಕು. ನಂತರ ತನ್ನ ಹತ್ತಿರದ ಬಂಧುಗಳೂ ಸಹ ನ್ಯಾಯಸಮ್ಮತವಾಗಿಯೇ ಸಂಪತ್ತಿನ ಗಳಿಕೆ ಮಾಡುವಂತೆ ನೋಡಿಕೊಳ್ಳಬೇಕು. ಮೂರನೆಯದ್ದಾಗಿ ವ್ಯಕ್ತಿಯೊಬ್ಬ ತುಂಬ ಕಾಲ ಬದುಕಿ ದೀರ್ಘಾಯುಷಿಯೆನ್ನಿಸಿಕೊಳ್ಳಬೇಕು. ಇವೆಲ್ಲವೂ ಮನುಷ್ಯನಿಗೆ ಇಷ್ಟವಾಗುವ, ಹಿತವೆನಿಸುವ ಕಾರ್ಯಗಳೇ. ಆದರೆ ಅವುಗಳ ಸಾಧನೆ ಸುಲಭಸಾಧ್ಯವಲ್ಲ. ಇಂಥಹ ಐಹಿಕ ಭೋಗಗಳ ಗಳಿಕೆಗೂ ನಂಬಿಕೆ, ಸಚ್ಚಾರಿತ್ರ್ಯ, ಉದಾರತೆ ಮತ್ತು ವಿವೇಕವೆನ್ನುವ ನಾಲ್ಕು ಮೌಲ್ಯಗಳ ಆಶೀರ್ವಾದ ಬೇಕು. ಸಚ್ಚಾರಿತ್ರ್ಯವೆನ್ನುವುದು ಮನುಷ್ಯನ ಮನಸ್ಸು ಚಂಚಲವಾಗದೇ ಕುಡಿತ, ಕಳ್ಳತನ ಕೊಲೆಗಳಂತಹ ಕೆಟ್ಟ ಕಾರ್ಯಗಳನ್ನು ಮಾಡದಂತೆ ಆತನನ್ನು ತಡೆಯುತ್ತದೆ. ಉದಾರತೆಯ ಭಾವವು ಮನುಷ್ಯನನ್ನು ದುರಾಸೆಯಂತಹ ದುರ್ಗುಣಗಳಿಂದ ಮುಕ್ತವಾಗಿಸಿ ತೆರೆದ ಮನಸ್ಸಿನಿಂದ ದಾನಧರ್ಮಗಳನ್ನು ಮಾಡುವಂತೆ ಪ್ರೋತ್ಸಾಹಿಸುತ್ತದೆ. ವಿವೇಕವೆನ್ನುವುದು ಮನುಷ್ಯನನ್ನು ವಿಮೋಚನೆಯತ್ತ ಕರೆದೊಯ್ಯುವ ಮಾರ್ಗ. ವಿವೇಕವೆನ್ನುವ ಹಾರೈಕೆ, ಮನುಷ್ಯನನ್ನು ಜಡತ್ವ, ಕುಯುಕ್ತಿ, ಆಲಸ್ಯ ಅನುಮಾನದಂತಹ ಅವಗುಣಗಳಿಂದ ದೂರವಿರಿಸುತ್ತದೆ. ಹಾಗಾಗಿ ನೈತಿಕತೆಯಿಂದ, ನ್ಯಾಯಸಮ್ಮತ ದುಡಿಮೆಯಿಂದ ಬೆವರು ಸುರಿಸಿ ಗಳಿಸಿದ ಆಸ್ತಿಯೂ ಸಾಮಾನ್ಯ ಮನುಷ್ಯನಿಗೆ ಒಂದು ವರದಾನವಿದ್ದಂತೆಯೇ ಸರಿ. ಹೀಗೆ ಸಿರಿವಂತನಾಗುವ ಗೃಹಸ್ತ, ಬದುಕಿನುದ್ದಕ್ಕೂ ತಾನು ಸಂತಸವಾಗಿರುವುದಲ್ಲದೇ, ಸದಾಕಾಲ ತನ್ನ ಹೆತ್ತವರು, ಮಡದಿ ಮಕ್ಕಳು ಮತ್ತು ಸ್ನೇಹಿತರನ್ನೂ ಸಹ ಸಂತೋಷವಾಗಿರಸಬಲ್ಲ. ಸಂತಸವೇ ಸಾಮಾನ್ಯನೊಬ್ಬನ ಬದುಕಿನ ಸಾರ್ಥಕತೆ ‘ಎನ್ನುತ್ತ ಉತ್ತರಿಸುತ್ತಾನೆ’ ಎಂದು ಬರೆಯುತ್ತಾರೆ, ಸಂವಿಧಾನ ಶಿಲ್ಪಿ ಡಾ.ಭೀಮರಾವ್ ಅಂಬೇಡ್ಕರ್ ತಮ್ಮ ‘Buddha Or Karl Marx’ಎನ್ನುವ ಕೃತಿಯಲ್ಲಿ. ಮತ್ತಷ್ಟು ಓದು 
ಸ್ವಾತಂತ್ರ್ಯೋತ್ಸವ ವಿಶೇಷ ಸರಣಿ – ದಿನಕ್ಕೊಬ್ಬ ದೇಶಭಕ್ತರ ಸ್ಮರಣೆ
ದಿನ – 17:
ಧೋಂಡಿಯ ವಾಘ್
– ರಾಮಚಂದ್ರ ಹೆಗಡೆ
ಮಲೆನಾಡು ಪ್ರದೇಶದಲ್ಲಿ ಬ್ರಿಟಿಷರ ನಿದ್ದೆಗೆಡಿಸಿ ಸಹ್ಯಾದ್ರಿಯ ಹುಲಿ ಎಂಬ ಖ್ಯಾತಿಗೆ ಪಾತ್ರನಾದ ವೀರ ಧೋಂಡಿಯ ವಾಘ್. ಹುಟ್ಟಿನಿಂದ ಮರಾಠಾ ಆಗಿದ್ದ ದೋಂಡಿಯಾ ವಾಘ್ ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲೂಕಿನಿಂದ ಬಂದ ಒಬ್ಬ ಕೂಲಿ ಸೈನಿಕ. ಮೊದಲು ಕೊಲ್ಹಾಪುರ, ಧಾರವಾಡ ಮುಂತಾದ ಕಡೆ ಸಂಸ್ಥಾನಗಳಲ್ಲಿ ದುಡಿದು ನಂತರ ಹೈದರಾಲಿ ಸೈನ್ಯದಲ್ಲಿ ಸೇರಿಕೊಂಡಿದ್ದ. ನಂತರ ಸೈನ್ಯದಿಂದ ಓಡಿಹೋದ ವಾಘ್ ತನಗೆ ಬೇಕಾದ ಜನರ ಒಂದು ತಂಡವನ್ನು ಖಾಸಗಿ ಸೈನ್ಯವಾಗಿ ಕಟ್ಟಿದ. ಕೆಲಕಾಲ ಸೆರೆಯಲ್ಲಿದ್ದ ವಾಘ್ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸವಾಲೆಸೆಯುವ ತೀರ್ಮಾನ ಕೈಗೊಂಡ. ಅಲ್ಲಿಂದ ಬಿಡುಗಡೆಯಾಗಿ ಬ್ರಿಟಿಷರ ವಿರೋಧಿಯಾಗಿ ಬೆಳೆದ. ಮೈಸೂರು ಸಂಸ್ಥಾನವು ಬ್ರಿಟಿಷರಿಗೆ ವಾರ್ಷಿಕ ಕಾಣಿಕೆಯನ್ನು ಒಪ್ಪಿಸುವ ಸಲುವಾಗಿ ರೈತರ ಮೇಲೆ ಕರ ಹೇರಿದಾಗ ವಾಘ್ ಅದರ ವಿರುದ್ಧ ದನಿಯೆತ್ತಿದ. ರೈತರು ದೋಂಡಿಯಾ ವಾಘನನ್ನು ಬೆಂಬಲಿಸಿದರು. ಆರಂಭದಲ್ಲಿ ಅವನ ಸಂಘಟನೆ ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿದ್ದು, ಬ್ರಿಟಿಷರು ಬಿನ್ನುಹತ್ತಿದಾಗ ಹೈದರಾಬಾದ್ ಕರ್ನಾಟಕ ಪ್ರಾಂತಕ್ಕೆ ಬಂದು ಸೇರಿದ. ಮತ್ತಷ್ಟು ಓದು 




