ವಿಷಯದ ವಿವರಗಳಿಗೆ ದಾಟಿರಿ

Posts from the ‘ಲೇಖನಗಳು’ Category

26
ಮೇ

ಸುಳ್ಸುದ್ದಿ : “ಭ್ರಷ್ಟಾಚಾರ ಮುಕ್ತ ಭಾರತ” ಮಾಡುತ್ತೇವೆ ಎನ್ನುವವರಿಗೆ ಕಂಕನಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತೇವೆ

ಪ್ರವೀಣ್ ಕುಮಾರ್, ಮಾವಿನಕಾಡು

sulsuddi (1)ಇತ್ತೀಚಿನ ಕೆಲವು ವರ್ಷಗಳಲ್ಲಿ ಭಾರತದಲ್ಲಿ “ಭ್ರಷ್ಟಾಚಾರ ಮುಕ್ತ ಭಾರತ” ಎನ್ನುವ ಘೋಷಣೆ ಟ್ರೆಂಡ್ ಆಗಿ ಬೆಳೆದಿದ್ದು ಮೊನ್ನೆ ನಡೆದ ಪಂಚ ರಾಜ್ಯಗಳ ಚುನಾವಣೆಗಳ ಬಳಿಕ ಈ ಘೋಷಣೆ ಇನ್ನಷ್ಟು ಜೋರಾಗಿ ಕೇಳಿಬರುತ್ತಿದೆ. ಇದನ್ನೇ ನೆಪವಾಗಿಟ್ಟುಕೊಂಡು ನಮ್ಮ ‘ಸುಳ್ಸುದ್ದಿ’ ವಾಹಿನಿಯ ತಂಡ “ಭ್ರಷ್ಟಾಚಾರ ಮುಕ್ತ ಭಾರತ ಎನ್ನುವ ಘೋಷಣೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು?” ಎನ್ನುವ ಪ್ರಶ್ನೆಯನ್ನು ಹಲವು ನಾಯಕರ ಬಳಿ ಕೇಳಿತು. ನಮ್ಮ ಪ್ರಶ್ನೆಗೆ ಉತ್ತರಿಸಿದ ಕೆಲವು ರಾಜಕೀಯ ನಾಯಕರ ಉತ್ತರಗಳನ್ನು ನಿಮಗಾಗಿ ಇಲ್ಲಿ ನೀಡಲಾಗಿದೆ. ಮತ್ತಷ್ಟು ಓದು »

25
ಮೇ

ಭಾನುಮತಿ ನೀ ಸುಮತಿ.

–  ನಾಗೇಶ ಮೈಸೂರು

image1 (1)ಮಹಾಭಾರತದಲ್ಲಿ ನಿರ್ಲಕ್ಷ್ಯಕ್ಕೊಳಪಟ್ಟು ನೇಪಥ್ಯಕ್ಕೆ ಸರಿಸಲ್ಪಟ್ಟ ಅನೇಕ ಸ್ತ್ರೀ ಪಾತ್ರಗಳಲ್ಲೊಂದು ಪ್ರಮುಖ ಪಾತ್ರ ಕೌರವೇಶ ದುರ್ಯೋಧನನ ಪತ್ನಿ ಭಾನುಮತಿಯದು. ಭೂಮಂಡಲವನ್ನಾಳುವ ಒಡೆಯನಾದ ಕೌರವೇಶನ ಸತಿಯಾದರೂ ಯಾಕೊ ಅವಳ ಉಲ್ಲೇಖ ಅಲ್ಲಿಲ್ಲಿ ತುಸು ಮೆಲುವಾಗಿ ಹೆಸರಿಸಿದ್ದು ಬಿಟ್ಟರೆ ಗಾಢವಾದ ವಿವರಣೆ ಕಾಣಿಸುವುದಿಲ್ಲ. ಬಹುಶಃ ಸುಯೋಧನನಿಗೆ ಆರೋಪಿಸಿದ ಋಣಾತ್ಮಕ, ಖಳನಾಯಕ ಪಟ್ಟದಿಂದಲೋ ಅಥವಾ ಚತುಷ್ಟಯದ ಚಟುವಟಿಕೆಗಳಿಗೆ ಕೊಟ್ಟಷ್ಟೇ ಗಮನ ಅವನ ಖಾಸಗಿ ಜೀವನಕ್ಕೆ ಕೊಡಲಿಲ್ಲವೆಂದೊ – ಒಟ್ಟಾರೆ ಭಾನುಮತಿ ಹೆಚ್ಚಾಗಿ ತೆರೆಮರೆಯ ಅಪ್ರತ್ಯಕ್ಷ ಪ್ರಭಾವ ಬೀರುವ ಪಾತ್ರವಾಗಷ್ಟೆ ಆಗಿ ಗೌಣವಾಗಿಬಿಡುತ್ತಾಳೆ. ಈಗಲೂ ಅಂತರ್ಜಾಲ ಹುಡುಕಿದರೆ ಅವಳ ಕುರಿತಾದ ವಿವರ ಸಿಗುವುದು ತೀರಾ ಅಲ್ಪವೇ. ಮತ್ತಷ್ಟು ಓದು »

24
ಮೇ

ತಲೆಕೆಟ್ಟ ಕಾನೂನುಗಳು ಮತ್ತು ಸ್ವಂತ ಬುದ್ಧಿಯಿಲ್ಲದ ಜೀವಿಗಳು

–  ರಾಕೇಶ್ ಶೆಟ್ಟಿ

ಬುದ್ಧಿಜೀವಿಗಳ ಮೂಢನಂಬಿಕೆಗಳುಇತ್ತೀಚೆಗೆ ಮತ್ತೂರಿನಲ್ಲಿ ನಡೆದ ಸೋಮಯಾಗದಲ್ಲಿ ಸಂಕೇತಿ ಬ್ರಾಹ್ಮಣರು ಮೇಕೆ ಬಲಿ ಕೊಟ್ಟು ತಿಂದರಂತೆ, ಸೋಮರಸ ಕುಡಿದರಂತೆ ಅಂತ ಪ್ರಗತಿಪರರ ವಾಣಿಯೊಂದು ಸುಳ್ಳು ಸುದ್ದಿ ಬರೆಯಿತು. ಈ ಸುದ್ದಿಯಿಂದಾಗಿ ಟೌನ್ ಹಾಲ್ ಮುಂದೆ ನಿಂತು ದನ ತಿನ್ನುವುದನ್ನು ಬೆಂಬಲಿಸುವ ಕಬಾಬ್ ಕ್ರಾಂತಿಕಾರಿಗಳಿಗೂ ಹೊಟ್ಟೆನೋವು ಕಾಣಿಸಲಾರಂಭಿಸಿತು. ಇವರನ್ನು ಕರೆಯದೇ ತಿಂದರೂ ಎಂದು ಹೊಟ್ಟೆ ನೋವಾಗಿತ್ತೋ ಏನೋ. PhD ಮಹಾಶಯನೊಬ್ಬ ಬ್ರಾಹ್ಮಣರು ಮಾಂಸ ತಿನ್ನಲು ಶುರು ಮಾಡಿದರೆ ರೇಟ್ ಜಾಸ್ತಿಯಾಗುತ್ತೆ ಅಂತ ಅಳ್ತಾ ಇದ್ದ. ಎಂತೆಂತವರೆಲ್ಲ ವಿವಿಗಳಲ್ಲಿ ಪಾಠ ಮಾಡುತ್ತಾರಪ್ಪಾ ಅನಿಸಿತು. ಎಲ್ಲಾ (ಜಾತಿ/ಪಂಗಡದ) ಬ್ರಾಹ್ಮಣರು ಸಸ್ಯಹಾರಿಗಳು ಅನ್ನೋದು “ಮೂಢನಂಬಿಕೆ”. ಸಿದ್ರಾಮಯ್ಯನವರಿಗೆ ಹೇಳಿ ಮೌಢ್ಯ ನಿಷೇಧ ಕಾಯ್ದೆಯ ಮೂಲಕ ಈ ಮೂಢನಂಬಿಕೆಯನ್ನು ನಿಷೇಧಿಸಬೇಕು. ಕಾಶ್ಮೀರಿ ಪಂಡಿತರಿಗೆ ಶಿವರಾತ್ರಿ ಹಬ್ಬದಂದು ಮಾಂಸದಡುಗೆಯೇ ವಿಶೇಷವಾದದ್ದು. ಬಂಗಾಳಿ, ಓಡಿಶಾದ ಬ್ರಾಹ್ಮಣರೂ, ಗೌಡ ಸಾರಸ್ವತ ಬ್ರಾಹ್ಮಣರಲ್ಲೂ ಮಾಂಸಹಾರಿಗಳಿದ್ದಾರೆ. ಮತ್ತಷ್ಟು ಓದು »

23
ಮೇ

ಅರುಣಾ ಶಾನಭಾಗ: ಸ್ತ್ರೀ ಶೋಷಣೆಯ ಇನ್ನೊಂದು ಮುಖ

-ರಾಜಕುಮಾರ.ವ್ಹಿ.ಕುಲಕರ್ಣಿ,
ಮುಖ್ಯಗ್ರಂಥಪಾಲಕರು
ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ
ಬಾಗಲಕೋಟ

18_05_2015-aruna18(ಅರುಣಾ ಶಾನಭಾಗ ನಿಧನಹೊಂದಿ  ಮೇ 18 ಕ್ಕೆ ಒಂದು ವರ್ಷವಾಯಿತು. ಅವರ ನೆನಪಿನಲ್ಲಿ ಈ ಲೇಖನ)
ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಅಂದರೆ ಅಷ್ಟೆ ಸಾಕೇ?
-ಜಿ.ಎಸ್.ಶಿವರುದ್ರಪ್ಪ

ಸ್ತ್ರೀ ಶೋಷಿತಳು ಎನ್ನುವುದಕ್ಕೆ ಇತಿಹಾಸವೇ ಬಹುದೊಡ್ಡ ಸಾಕ್ಷಿ. ಇಲ್ಲಿ ಕಾನೂನಿನ ನಿಯಮಗಳು ಎಷ್ಟೇ ಕಠಿಣವಾಗಿದ್ದರೂ ಮಹಿಳೆಯನ್ನು ಶೊಷಣೆಯ ಪರಧಿಯಿಂದ ಹೊರತರಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಶೋಷಣೆಗೆ ಒಳಗಾಗುವ ಮಹಿಳೆ ಮಾನ ಮತ್ತು ಗೌರವಕ್ಕೆ ಹೆದರಿ ಕಾನೂನಿನ ನೆರವು ಪಡೆಯಲು ಮುಂದಾಗುತ್ತಿಲ್ಲವಾದ್ದರಿಂದ ಮಹಿಳಾ ಶೋಷಣೆ ಎನ್ನುವುದು ಅನೂಚಾನವಾಗಿ ಮುಂದುವರೆಯುತ್ತಿದೆ. ಈ ಸಂದರ್ಭ ಮಾಧ್ಯಮಗಳ ಪಾತ್ರವನ್ನು ನಾವು ಒಂದಿಷ್ಟು ಶ್ಲಾಘಿಸಲೇ ಬೇಕು. ಸ್ತ್ರೀ ದೌರ್ಜನ್ಯದ ಸಂದರ್ಭಗಳಲ್ಲೆಲ್ಲ ಪತ್ರಿಕಾ ಮಾಧ್ಯಮ ಕಾನೂನಿಗೆ ತನ್ನ ನೆರವನ್ನು ನೀಡುತ್ತ ಬಂದಿದೆ. ಅದರಲ್ಲೂ ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಪತ್ರಿಕಾ ಮಾಧ್ಯಮದಲ್ಲಿ ತಂತ್ರಜ್ಞಾನದ ಬಳಕೆಯ ಪರಿಣಾಮ ಮಹಿಳೆಯರ ಮೇಲಿನ ದೌರ್ಜನ್ಯ ಬಹುಬೇಗ ಜನರನ್ನು ಹೋಗಿ ತಲುಪುತ್ತಿದೆ. ಹೀಗೆ ಸುದ್ಧಿ ವಾಹಿನಿಗಳು ಮಹಿಳೆಯ ಮೇಲಾಗುತ್ತಿರುವ ದೌರ್ಜನ್ಯ ಹಾಗೂ ಶೋಷಣೆಯನ್ನು ಜನರಿಗೆ ಒಯ್ದು ತಲುಪಿಸುತ್ತಿರುವ ಸಂದರ್ಭ ನನಗೆ ಅರುಣಾ ಶಾನಭಾಗ ಎನ್ನುವ ನತದೃಷ್ಟ ಹೆಣ್ಣುಮಗಳು ನೆನಪಾಗುತ್ತಾಳೆ. ಒಂದು ವೇಳೆ 1970 ರ ದಶಕದಲ್ಲಿ ಸುದ್ದಿವಾಹಿನಿಗಳು ಈಗಿನಂತೆ ಕಾರ್ಯನಿರ್ವಹಿಸುತ್ತಿದ್ದರೆ ಆ ಹತಭಾಗ್ಯಳಿಗೆ ನಿಜಕ್ಕೂ ನ್ಯಾಯ ದೊರೆಯುತ್ತಿತ್ತು. ಮತ್ತಷ್ಟು ಓದು »

22
ಮೇ

ಹುಣ್ಣಿವೀ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲತs ಹಗಲ!

– ರೋಹಿತ್ ಚಕ್ರತೀರ್ಥ
ಉಪೇಂದ್ರರ “ಉಪ್ಪಿ 2” ಚಿತ್ರ ಬಿಡುಗಡೆಯಾದ ಮರುದಿನ ಕನ್ನಡ ಪತ್ರಿಕೆಯೊಂದರಲ್ಲಿ ಒಂದು ಲೇಖನ ಬಂದಿತ್ತು. ಅದರಲ್ಲಿ ಮೊದಲಿಂದ ಕೊನೆವರೆಗೆ ಇದ್ದದ್ದು ಉಪ್ಪಿಟ್ಟಿನ ವಿವರಣೆ! ಉಪ್ಪಿಟ್ಟನ್ನು ಜನ ಹೇಗೆ ಮಾಡುತ್ತಾರೆ; ಹೇಗೆ ತಿನ್ನುತ್ತಾರೆ; ಮನೆಗಳಲ್ಲಿ ಉಪ್ಪಿಟ್ಟು ಮಾಡುವಾಗ ಯಾರ್ಯಾರ ಭಾವನೆ ಹೇಗಿರುತ್ತದೆ ಎಂದು ಇಡೀ ಲೇಖನದ ತುಂಬ ಉಪ್ಪಿಟ್ಟಿನ ಮಹಿಮೆಯನ್ನೇ ವರ್ಣಿಸಲಾಗಿತ್ತು. ಕೊನೆಗೆ ಮಾತ್ರ “ಇಲ್ಲಿ ಉಪ್ಪಿಟ್ಟು ಎಂದಿರುವಲ್ಲೆಲ್ಲ ಉಪ್ಪಿ – 2 ಎಂದು ಓದಿಕೊಳ್ಳಿ” ಎಂಬ ಸೂಚನೆ ಕೊಟ್ಟಿದ್ದರು! ಬಹುಶಃ ಸಿನೆಮದ ಬಗ್ಗೆ ಒಂದು ಸಾಲನ್ನೂ ಆಡದೆ ಬರೆದ ಮೊದಲ ಸಿನೆಮ ವಿಮರ್ಶೆ ಅದೇ ಇರಬೇಕು! ವಾಸ್ತವದಲ್ಲಿ, ವಿಮರ್ಶಕರು ತಾನು ಉಪ್ಪಿಟ್ಟಿನ ಬಗ್ಗೆ ಏನೇನು ಹೇಳುತ್ತ ಹೋಗುತ್ತಿದ್ದೇನೋ ಅವೆಲ್ಲವೂ ಆ ಹೆಸರಲ್ಲಿ ಬಂದ ಸಿನೆಮಕ್ಕೂ ಅನ್ವಯವಾಗುತ್ತವೆ ಎನ್ನುವುದನ್ನು ಲೇಖನದ ಉದ್ದಕ್ಕೂ ಪರೋಕ್ಷವಾಗಿ ಹೇಳಿಬಿಟ್ಟಿದ್ದರು. “ಈ ಚಿತ್ರ ಕೂಡ ಉಪ್ಪಿಟ್ಟಿನಂತೆ; ಅವರವರ ಭಾವಕ್ಕೆ, ಅವರವರ ಭಕುತಿಗೆ” ಎನ್ನುವುದು ಅವರ ಲೇಖನದ ಆಶಯವಾಗಿತ್ತು. ಹೀಗೆ, ಉಪ್ಪಿಯ ಚಿತ್ರವಿಮರ್ಶೆಯಲ್ಲಿ ಉಪಮಾ, ಉಪಮಾನವಾಗಿ ಬಂದುಹೋಯಿತು! ಮತ್ತಷ್ಟು ಓದು »

20
ಮೇ

ಬೀಭತ್ಸ (ಭಾಗ ೨)

ಗುರುರಾಜ್ ಕೊಡ್ಕಣಿ,ಯಲ್ಲಾಪುರ

ಭಾಗ 1 ರಿಂದ ಮುಂದುವರೆದ ಕತೆ

8149361_f260“ಎಷ್ಟು ಬೇಗ ಈ ಆಚರಣೆ ಮರುಕಳಿಸಿತು ಅಲ್ಲವಾ..”? ಎಂದವಳು ಶ್ರೀಮತಿ ಡೆಲಾಕ್ರೋಕ್ಸ್. ಅವಳ ಮಾತಿಗೆ ಸಮ್ಮತಿಸುವಂತೆ ತಲೆಯಾಡಿಸಿದ ಶ್ರೀಮತಿ ಗ್ರೇವ್ಸ್, “ಹೌದು, ಮೊನ್ನೆಮೊನ್ನೆಯಷ್ಟೇ ಕಳೆದ ವರ್ಷದ ಚೀಟಿಯೆತ್ತುವಿಕೆಯ ಆಚರಣೆ ಮುಗಿದಿತ್ತೇನೋ ಎಂದು ಭಾಸವಾಗುತ್ತಿದೆ. ಕಾಲ ಎಷ್ಟು ಬೇಗ ಸರಿದು ಹೋಗುತ್ತದಲ್ಲವಾ..’?”ಎಂದು ನುಡಿದಳು. ಅಷ್ಟರಲ್ಲಿ ಕ್ಲಾರ್ಕ್ ನ ಸರದಿ ಮುಗಿದು ಡೆಲಾಕ್ರೋಕ್ಸ್ ತನ್ನ ಪಾಳಿಗಾಗಿ ಕಾಯುತ್ತ ನಿಂತಿದ್ದ. “ಅಲ್ನೋಡು ನನ್ನ ಗಂಡನ ಸರದಿ ಬಂದೇ ಬಿಟ್ಟಿತು” ಎಂದ ಅವನ ಮಡದಿಗೆ ಒಂದು ಕ್ಷಣ ಉಸಿರು ನಿಂತ ಅನುಭವ. ಡೆಲಾಕ್ರೊಕ್ಸ್ ಚೀಟಿಯನ್ನೆತ್ತಿಕೊಂಡು ಸ್ವಸ್ಥಾನಕ್ಕೆ ಮರಳಿದ. “ಡನ್ಬರ್” ಎಂಬ ಹೆಸರು ಕೇಳುತ್ತಲೇ ಕಾಲು ಮುರಿದುಕೊಂಡು ಮನೆಯಲ್ಲಿಯೇ ಮಲಗಿದ್ದ ಡನ್ಬರನ ಮಡದಿ ನಿಧಾನವಾಗಿ ಕಪ್ಪುಪೆಟ್ಟಿಗೆಯ ಬಳಿ ನಡೆಯಲಾರಂಭಿಸಿದಳು. ಆಕೆಯನ್ನು ಗಮನಿಸಿದ ಮಹಿಳೆಯೊಬ್ಬಳು “ಧೈರ್ಯವಾಗಿ ಹೋಗು ಜೇನಿ, ಭಯ ಬೇಡ” ಎನ್ನುತ್ತ ಆಕೆಯನ್ನು ಹುರಿದುಂಬಿಸಿದಳು. “ನಮ್ಮದು ಮುಂದಿನ ಸರದಿ” ಎನ್ನುತ್ತ ಕೊಂಚ ಗಂಭೀರಳಾದಳು ಶ್ರೀಮತಿ ಗ್ರೇವ್ಸ್. ತನ್ನ ಪತಿ ಗಡಿಬಿಡಿಯಾಗಿ ಕರಿಪೆಟ್ಟಿಗೆಯತ್ತ ತೆರಳಿ ಸಮ್ಮರ್ಸನಿಗೊಂದು ನಮಸ್ಕಾರ ಹೇಳಿ, ಚೀಟಿಯನ್ನು ಎತ್ತಿದ್ದನ್ನು ದೂರದಿಂದಲೇ ಗಮನಿಸಿದಳಾಕೆ. ಸಾಕಷ್ಟು ಸಮಯ ಕಳೆದಿತ್ತು. ಅದಾಗಲೇ ಚೀಟಿಯನ್ನು ಎತ್ತುಕೊಂಡಿದ್ದ ಜನ ಚೀಟಿಯನ್ನು ತೆರೆದು ನೋಡಲಾಗದೆ, ಕುತೂಹಲವನ್ನು ತಡೆದುಕೊಳ್ಳಲಾಗದೆ ನಿಂತಲ್ಲೆ ಸಣ್ಣಗೆ ಕಂಪಿಸುತ್ತಿದ್ದರು. ಡನ್ಬರನ ಮಡದಿ ಸಹ ಕೊಂಚ ಆತಂಕದಿಂದಲೇ ತನ್ನೆರಡು ಮಕ್ಕಳೊಡಗೂಡಿ ಮೂಲೆಯೊಂದರಲ್ಲಿ ನಿಂತಿದ್ದಳು. ಅಷ್ಟರಲ್ಲಿ ಹರ್ಬರ್ಟನ ಸರದಿ ಮುಗಿದು, ಹಚ್ಚಿಸನ್ನನ ಸರದಿ ಬಂದಿತ್ತು. “ಬೇಗ ಹೋಗಿ ಚೀಟಿ ಎತ್ತು, ಬಿಲ್” ಎಂದ ಟೆಸ್ಸಿಯ ಮಾತಿನ ಶೈಲಿಯೇ ನೆರೆದಿದ್ದ ಕೆಲವರಿಗೆ ನಗು ತರಿಸಿತ್ತು. ಹಚ್ಚಿಸನ್ನನ ನಂತರ ಚೀಟಿಯೆತ್ತುವ ಸರದಿ ಜೋನ್ಸಳದ್ದು. ಮತ್ತಷ್ಟು ಓದು »

19
ಮೇ

ಬೀಭತ್ಸ…….!!(ಭಾಗ ೧)

ಗುರುರಾಜ್ ಕೊಡ್ಕಣಿ,ಯಲ್ಲಾಪುರ

8149361_f260ಅದು ಜೂನ್ ಇಪ್ಪತ್ತೇಳನೆಯ ತಾರೀಖು. ಎಳೆಯ ಬಿಸಿಲಿನ್ನೂ ಭೂಮಿಯನ್ನು ಚುಂಬಿಸುತಿತ್ತು. ಮೈದಾನದುದ್ದಕ್ಕೂ ಆವರಿಸಿಕೊಂಡಿದ್ದ ಹಸಿರು ಹುಲ್ಲಿನ ನಡುನಡುವೆ ಬೆಳೆದುಕೊಂಡಿದ್ದ ಸಣ್ಣ ಗಿಡಗಳ ತುಂಬೆಲ್ಲ ಚಂದದ ಪುಷ್ಫಗಳು ಅರಳಿಕೊಂಡಿದ್ದವು. ಹಳ್ಳಿಯ ಅಂಚೆ ಕಚೇರಿ ಮತ್ತು ಬ್ಯಾಂಕುಗಳ ರಸ್ತೆಗಳು ಕೂಡುವ ಚೌಕದಲ್ಲಿ ನಿಧಾನವಾಗಿ ಹಳ್ಳಿಗರು ಸೇರಲಾರಂಭಿಸಿದ್ದರು. ಹಳ್ಳಿಯ ಚೀಟಿ ಎತ್ತುವಿಕೆಯ ಕಾರ್ಯಕ್ರಮ ಕೇವಲ ಒಂದೇ ದಿನದಲ್ಲಿ ಮುಗಿದು ಹೋಗುತ್ತದೆ. ಆದರೆ ಬೇರೆ ಕೆಲವು ಪಟ್ಟಣಗಳಲ್ಲಿ ಜನಸಂಖ್ಯೆ ಹೆಚ್ಚಿರುವುದರಿಂದ ಕಡಿಮೆಯೆಂದರೂ ಎರಡು ದಿನಗಳಷ್ಟು ಕಾಲಾವಕಾಶ ಬೇಕು. ಕಡಿಮೆ ಜನಸಂಖ್ಯೆಯ ಕಾರಣದಿಂದಾಗಿ ಆ ಹಳ್ಳಿಯ ಜನ ಬೆಳಗ್ಗಿನ ಹತ್ತು ಗಂಟೆಗೆಲ್ಲ ಕಾರ್ಯಕ್ರಮ ಆರಂಭಿಸಿ, ಮಧ್ಯಾಹ್ನದ ಹೊತ್ತಿಗೆ ವಿಧಿವಿಧಾನಗಳನ್ನು ಪೂರೈಯಿಸಿ ಊಟಕ್ಕೆಂದು ತಮ್ಮತಮ್ಮ ಮನೆಗಳಿಗೆ ತೆರಳುತ್ತಿದ್ದರು. ಮತ್ತಷ್ಟು ಓದು »

18
ಮೇ

ನಂಜುಂಡೇಗೌಡರು ಮೋದಿಗೆ ಬರೆದ ಪತ್ರಕ್ಕೊಂದು ಆತ್ಮೀಯ ಪ್ರತಿಕ್ರಿಯೆ

– ವಿಜಯ್ ಪೈ

pvec16may16editmainಸನ್ಮಾನ್ಯ ಹೊನಕೆರೆ ನಂಜುಂಡೇಗೌಡರಿಗೆ ವಂದನೆಗಳು.

ತಾವು ಪ್ರಧಾನ ಮಂತ್ರಿಗಳಿಗೆ ಪ್ರಜಾವಾಣಿ ಪತ್ರಿಕೆಯಲ್ಲಿ ಬರೆದ ‘ಆತ್ಮೀಯ’ ಪತ್ರವನ್ನು ಓದಿದ ನಂತರ ನಿಮಗೊಂದು ಆತ್ಮೀಯ ಪ್ರತಿಕ್ರಿಯೆ ನೀಡಬೇಕಾಯಿತು.

(ನಂಜುಂಡೇಗೌಡರ ಪತ್ರ : www.prajavani.net/columns/ಗೌರವಾನ್ವಿತ-ಪ್ರಧಾನಿಗೆ-ಆತ್ಮೀಯ-ಪತ್ರ )

ಮೋದಿ ಆಡಳಿತದಿಂದ ಈ ದೇಶದಲ್ಲಿ ಬಂದ ಒಂದು ಅತ್ಯುತ್ತಮ ಬದಲಾವಣೆಯೆಂದರೆ, ‘ಬುದ್ಧಿಜೀವಿ’ಗಳೆಂದು / ಪತ್ರಕರ್ತರೆಂಬ ಅಪಾದನೆಗೊಳಲ್ಪಟ್ಟವರು ಆಗಾಗ ಪ್ರಧಾನಿಗೆ ಪತ್ರ ಬರೆಯುವ, ಬುದ್ಧಿವಾದ ಹೇಳುವ/ ಎಚ್ಚರಿಸುವ ಕಾರ್ಯಕ್ರಮದಲ್ಲಿ ತೊಡಗಿಕೊಂಡಿರುವುದು. ದಶಕಗಳ ಕಾಲ ಕೋಮಾಕ್ಕೆ ಒಳಗಾಗಿದ್ದ ಇವರುಗಳು, ಈಗ ಮೋದಿ ಎಂಬ ಸಂಜೀವಿನಿಯಿಂದ ಮತ್ತೆ ಜೀವಂತಗೊಂಡು ಮತ್ತೆ ‘ಸಾಕ್ಷಿ ಪ್ರಜ್ಞೆ’ಗಳಾಗಿದ್ದಾರೆ ಎಂದು ಜನ ಭಾವಿಸಿದರೆ, ನೀವೂ ಕೂಡ ಅಲ್ಲಗೆಳೆಯುವುದಿಲ್ಲ ಅಂದುಕೊಳ್ಳುತ್ತೇನೆ. ಮೊನ್ನೆ-ಮೊನ್ನೆ ಬರವನ್ನು ಹೇಗೆ ನಿರ್ವಹಿಸಬೇಕು, ಈ ವಿಷಯದಲ್ಲಿ ಸರಕಾರದ ನ್ಯೂನತೆಗಳೇನು ಎಂಬ ಬಗ್ಗೆ ನಮ್ಮ ದೇಶ ಕಂಡ ಕೆಲವು ಬಹುಮುಖ್ಯ ಸಾಕ್ಷಿಪ್ರಜ್ಞೆಗಳು ಪ್ರಧಾನಿಗಳಿಗೆ ಪತ್ರ ಬರೆದಿದ್ದರು. ಈಗ ನೀವು ಕೂಡ ಸರಕಾರದ ಎರಡನೆಯ ವರ್ಷಾಚರಣೆಯ ಸಂದರ್ಭದಲ್ಲಿ ಪತ್ರ ಬರೆದಿದ್ದೀರಿ. ತಮ್ಮ ಕಾಳಜಿಗೆ ವಂದನೆಗಳು. ಮತ್ತಷ್ಟು ಓದು »

17
ಮೇ

ಕಾಂಗ್ರೆಸ್‌ನ ವ್ಯಾಘ್ರ ದಾಳಿಗೆ ನಲುಗಿದ ಸಾಧ್ವಿ

– ಎಸ್.ಆರ್. ಅನಿರುದ್ಧ ವಸಿಷ್ಠ, ಭದ್ರಾವತಿ

sadhvi-pragya-singh.before_afterಮಾಲೇಗಾಂವ್ ಸ್ಪೋಟ ಪ್ರಕರಣದಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್‌ಗೆ ಕ್ಲೀನ್‌ಚಿಟ್ ನೀಡಿ ಆರೋಪಮುಕ್ತಗೊಳಿಸಲಾಗಿದೆ. ಹಾಗಾದರೆ, ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ನಿಜಕ್ಕೂ ಭಾಗಿಯಾದವರು ಯಾರು? ಸ್ಫೋಟದ ಹಿಂದಿರುವ ವ್ಯಕ್ತಿ ಹಾಗೂ ಸಂಘಟನೆಗಳು ಯಾರು ಎನ್ನುವುದರ ಕುರಿತು ಉನ್ನತ ಮಟ್ಟದ ತನಿಖೆ ನಡೆಯಬೇಕಿದ್ದು, ಈ ಕುರಿತಂತೆ ಸತ್ಯ ಹೊರಬರಬೇಕಿದೆ. ಈ ಕುರಿತಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ.

ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣಕ್ಕೀಗ ತಾರ್ಕಿಕ ಅಂತ್ಯ ದೊರೆತಿದ್ದು, ಸಾಧ್ವಿ ಪ್ರಜ್ಞಾ ಸಿಂಗ್ ಸೇರಿದಂತೆ ಆರು ಜನರ ಮೇಲೆ ಹೇರಲಾಗಿದ್ದ ಮೋಕಾ ಪ್ರಕರಣದಲ್ಲಿ ಇವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ ಎಂದು ಚಾರ್ಜ್‌ಶೀಟ್ ಸಲ್ಲಿಸಿರುವ ತನಿಖಾ ಸಂಸ್ಥೆ ಎನ್‌ಐಎ ಆರೋಪಗಳಿಂದ ಕ್ಲೀನ್ ಚಿಟ್ ನೀಡಿದೆ.

ನಿಜಕ್ಕೂ ಇದು ಸತ್ಯಕ್ಕೆ ಸಂದ ಜಯ ಎಂದು ಸಂತಸ ಪಡುವ ವೇಳೆಯೇ ಈ ಸಂತಸವನ್ನು ಸಂಭ್ರಮಿಸುವ ಮನಸ್ಥಿತಿ ಹಾಗೂ ದೇಹಸ್ಥಿತಿಯಲ್ಲಿ ಸ್ವತಃ ಸಾಧ್ವಿ ಪ್ರಜ್ಞಾ ಸಿಂಗ್ ಇಲ್ಲ ಎನ್ನುವುದು ಇಡೀ ಪ್ರಜಾಪ್ರಭುತ್ವ ವ್ಯವಸ್ಥೆ ತಲೆ ತಗ್ಗಿಸಬೇಕಾದ ವಿಚಾರ. ಮತ್ತಷ್ಟು ಓದು »

15
ಮೇ

ಸಿದ್ಧಾಂತಗಳ ಸಂಗ ಸಾಕಾಗಿದೆ; ದೇಶಭಕ್ತಿಯ ಸಂಘ ಬೇಕಾಗಿದೆ

– ರೋಹಿತ್ ಚಕ್ರತೀರ್ಥ

indian-flag-rallyಕನ್ನಡದಲ್ಲಿ “ತಾಯಿನಾಡು” ಪತ್ರಿಕೆಯನ್ನು ನಾಲ್ಕು ದಶಕಗಳ ಕಾಲ ನಡೆಸಿದ ಮತ್ತು ಬೆಂಗಳೂರಿನ ಬಸವನಗುಡಿ ಕ್ಷೇತ್ರದ ಮೊದಲ ಚುನಾಯಿತ ಶಾಸಕನಾಗಿದ್ದ ಪಿ.ಆರ್.ರಾಮಯ್ಯ ಬನಾರಸ್ ಹಿಂದೂ ವಿಶ್ವ ವಿದ್ಯಾಲಯದಲ್ಲಿ ಕಲಿಯುತ್ತಿದ್ದ ದಿನಗಳು. ಪದವಿಯ ಅಂತಿಮ ವರ್ಷದಲ್ಲಿದ್ದರು. ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಕಾವು ದಿನದಿನಕ್ಕೆ ಏರುತ್ತಿದ್ದ ಹೊತ್ತು. ಗಾಂಧಿಯ ಮಾತುಗಳನ್ನು ಕೇಳಲು ಎಲ್ಲಿಂದ ಎಲ್ಲಿಯವರೆಗೂ ಕಾಲ್ನಡಿಗೆಯಲ್ಲೋ ರೈಲಿನಲ್ಲೋ ಹೋಗಿಬರಲು ತಯಾರಾಗಿದ್ದ ರಾಮಯ್ಯನವರಿಗೆ ಒಂದು ದಿನ ವಾರಾಣಸಿಯ ಪಕ್ಕದಲ್ಲೇ ಗಾಂಧಿ ಭಾಷಣ ಏರ್ಪಾಟಾಗಿದ್ದನ್ನು ಕಂಡು ಸಕ್ಕರೆ ಹಾಲು ಕುಡಿದಷ್ಟು ಸಂತೋಷವಾಯಿತು. ಅಂದಿನ ಭಾಷಣದಲ್ಲಿ ಗಾಂಧಿ, ಹೋರಾಟಕ್ಕೆ ಭೀಮಬಲ ಬರಬೇಕಾದರೆ ವಿದ್ಯಾರ್ಥಿಗಳೆಲ್ಲರೂ ತಮ್ಮ ಶಾಲಾ-ಕಾಲೇಜುಗಳಿಂದ ಹೊರಬಂದು ಹೋರಾಟದ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು. ಈ ಮಾತು ರಾಮಯ್ಯನವರ ಮೇಲೆ ಎಷ್ಟು ಪ್ರಭಾವ ಬೀರಿತೆಂದರೆ ಅವರು ತಕ್ಷಣ ತನ್ನ ಪದವಿ ವ್ಯಾಸಂಗವನ್ನು ಮೊಟಕುಗೊಳಿಸಿ ಚಳವಳಿಯಲ್ಲಿ ಭಾಗವಹಿಸಲು ನಿರ್ಧರಿಸಿಬಿಟ್ಟರು. ಇನ್ನೊಂದೆರಡು ವಾರಗಳು ಕಳೆದರೆ ಮುಖ್ಯಪರೀಕ್ಷೆಗಳು ಪ್ರಾರಂಭವಾಗುವುದರಲ್ಲಿದ್ದವು. ಈಗ ಏಕಾಏಕಿ ವಿಶ್ವವಿದ್ಯಾಲಯ ತೊರೆದರೆ ಗತಿಯೇನು ಎಂಬ ಸಣ್ಣದೊಂದು ಅಂಜಿಕೆಯೂ ಅವರ ಮನದ ಮೂಲೆಯಲ್ಲಿತ್ತು. ನೇರವಾಗಿ ವಿವಿಯ ಕುಲಪತಿಗಳಾಗಿದ್ದ ಮದನ ಮೋಹನ ಮಾಲವೀಯರಲ್ಲಿಗೆ ಹೋಗಿ ತನ್ನ ಇಬ್ಬಂದಿತನವನ್ನು ವಿವರಿಸಿ ಏನು ಮಾಡಲಿ ಎಂದು ಮಾರ್ಗದರ್ಶನ ಕೇಳಿದರು. ಮತ್ತಷ್ಟು ಓದು »