ನಿಲುಮೆ ಪ್ರಕಾಶನದ ಪುಸ್ತಕ ಬಿಡುಗಡೆ ಮತ್ತು ನಿಲುಮೆ ಫೌಂಡೇಶನ್ ನ ಉದ್ಘಾಟನಾ ಸಮಾರಂಭದ ವರದಿ
– ಹರೀಶ್ ಆತ್ರೇಯ,ಹರ್ಷಿತ್ ಜೋಸೆಫ್
ನಿಲುಮೆ ಪ್ರಕಾಶನದಿಂದ ದಿನಾಂಕ ೧ ಮಾರ್ಚ್ ೨೦೧೫ ರಂದು ಬೌದ್ಧಿಕ ದಾಸ್ಯದಲ್ಲಿ ಭಾರತ ಎಂಬ ಪುಸ್ತಕವು ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ಬಿಡುಗಡೆಯಾಯಿತು. ಕಳೆದ ಐದು ವರ್ಷಗಳಿಂದ ಸತತವಾಗಿ ಬೌದ್ಧಿಕ ವಿಚಾರಗಳನ್ನು ಮಂಡಿಸುತ್ತಿದ್ದ ನಿಲುಮೆ ಬ್ಲಾಗ್ ಈಗ ಪ್ರಕಾಶನ ಸಂಸ್ಥೆಯ ಹೆಸರಿನಲ್ಲಿ ನಿಲುಮೆ ಫೌಂಡೇಶನ್ ಆಗಿ ಹೊರಹೊಮ್ಮಿದೆ, ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿಯೇ ನಿಲುಮೆ ಫೌಂಡೇಶನ್ನಿನ ಉದ್ಘಾಟನೆಯಾಯಿತು.
ಬ್ರಿಟಿಷರ ಕೆಳಗೆ ದಾಸರಾಗಿ ಬಾಳಿದ (?) ಭಾರತೀಯರ ಚರಿತ್ರೆ (?) ನಮಗೆ ಗೊತ್ತಿದೆ. ರಾಜಕೀಯವಾಗಿ ನಮ್ಮನ್ನು ಆಳಿದುದು ಹೌದಾದರೂ ಬೌದ್ಧಿಕವಾಗಿ ನಾವು ಅವರಿಂದ ಆಳಿಸಿಕೊಳ್ಳಬೇಕಾದ ಸ್ಥಿತಿಗೆ ತಲುಪಿದ್ದು ಶೋಚನೀಯ. ಅವರಿಂದ ಭೌತಿಕವಾಗಿ ಆಳಿಸಿಕೊಳ್ಳುವ ಕಾಲಘಟ್ಟವನ್ನು ವಸಾಹತುಶಾಹಿ ಕಾಲವೆಂದು ಕರೆಯುವುದಾದರೆ, ಈಗಲೂ ಅವರ ಬೌದ್ಧಿಕ ಚಿಂತನೆಗಳ, ಆಲೋಚನಾ ಕ್ರಮಗಳ ರೂಪದಲ್ಲಿ ಅವರಿಂದ ಬೌದ್ಧಿಕವಾಗಿ ಆಳಿಸಿಕೊಳ್ಳುತ್ತಿದ್ದೇವೆ ಎನ್ನುವುದೂ ಸತ್ಯ. ಇವೆಲ್ಲದರಿಂದ ಹೊರಬರಬೇಕಾದರೆ ನಮ್ಮ ಸಂಸ್ಕೃತಿಯ , ಆಚರಣೆಗಳ ಅರಿವು ನಮಗೆ ಬೇಕಾಗುತ್ತದೆ. ಸತ್ಯವನ್ನು ತಿಳಿಯುವ ಮತ್ತು ತಿಳಿಸುವ ಹೊಣೆ ನಮ್ಮದಾಗಿರುತ್ತದೆ. ಇವೆಲ್ಲವನ್ನೂ ಪ್ರಚುರಪಡಿಸಲು ನಮಗೊಂದು ದಾರಿ,ಕ್ರಮ ಮತ್ತು ಮಾರ್ಗದರ್ಶನದ ಅವಶ್ಯಕತೆಯಿದೆ. ಹತ್ತು ಹಲವು ಪುಸ್ತಕಗಳು ನಮ್ಮ ಕಣ್ಣಿಗೆ ಕಾಣಬಹುದು ಮತ್ತು ನಾವು ಓದಬಹುದು ಆದರೆ ದುರದೃಷ್ಟವಶಾತ್ ಅವೆಲ್ಲವೂ ಪಾಶ್ಚಾತ್ಯದ ಕಂಗಳಿಂದ ಕಂಡ ದೃಶ್ಯಗಳಾಗಿವೆ. ಅವರು ಚಿಂತನ ಕ್ರಮವನ್ನು ಅಳವಡಿಸಿಕೊಂಡು ಲೇಖಿಸಿದ ಮಹಾ ಪ್ರಬಂಧಗಳು ನಮ್ಮ ಸಂಸ್ಕೃತಿಯ ಮೂಲವನ್ನು ಅರಿಯುವ ಪ್ರಯತ್ನವನ್ನು ಮಾಡಿಯಾವೇ? ಇದು ಪ್ರಶ್ನೆಯಾಗಿ ಉಳಿಯುತ್ತಿರುವ ಹಂತದಲ್ಲಿ ಪ್ರೊ|| ಬಾಲಗಂಗಾಧರ್ ಅವರ ಲೇಖನಗಳು ಮತ್ತು ಕ್ರಮ ಹೆಚ್ಚು ಮೌಲ್ಯಯುತವೂ ಮತ್ತು ಸರಿಯಾದ ಮಾರ್ಗವೂ ಆಗಿರುವುದು ನಿಜಕ್ಕೂ ಸಂತಸದ ಸಂಗತಿ. ಆಲೋಚನಾ ಕ್ರಮಕ್ಕೆ ಹೊಸದೊಂದು ಹೊಳಹನ್ನು ತಂದುಕೊಟ್ಟವರು ಪ್ರೊ ಬಾಲು ರವರು.
ಮತ್ತಷ್ಟು ಓದು 
“ಬೌದ್ಧಿಕ ದಾಸ್ಯದಲ್ಲಿ ಭಾರತ” ಪುಸ್ತಕ ದೊರೆಯುವ ಬಗ್ಗೆ ಮಾಹಿತಿ
ಬೆಂಗಳೂರು :
1.ಅಂಕಿತ ಪುಸ್ತಕ,ಗಾಂಧಿ ಬಜಾರ್
2.ಸಾಹಿತ್ಯ ಗಂಗಾ,ಚಾಮರಾಜಪೇಟೆ (ಉಮಾ ಟಾಕೀಸ್ ಹಿಂದಿನ ರಸ್ತೆ)
3.ಸಾಹಿತ್ಯ ಸಿಂಧು,ನೃಪತುಂಗ ರಸ್ತೆ,ರಿಸರ್ವ್ ಬ್ಯಾಂಕ್ ಎದುರು (ಮಿಥಿಕ್ ಸೊಸೈಟಿಯ ನಂತರದ ಬಿಲ್ಡಿಂಗ್)
4.ರಾಷ್ಟ್ರೋತ್ಥಾನ ಸಾಹಿತ್ಯ,೩೬ನೇ ಕ್ರಾಸ್,೧೦ ನೇ ಮುಖ್ಯ ರಸ್ತೆ, ಜಯನಗರ ೪ನೇ ಬ್ಲಾಕ್ (ಬಿ.ಎಸ್.ಎನ್.ಎಲ್ ಆಫೀಸ್ ಹಿಂಬಾಗ )
5.ನಾಗಶ್ರೀ ಬುಕ್ ಹೌಸ್, ಜಯನಗರ ಬಿಡಿಎ ಕಾಂಪ್ಲೆಕ್ಸ್,ಜಯನಗರ ೪ನೇ ಬ್ಲಾಕ್.Tel: 26630993/26543465
6.ಟೋಟಲ್ ಕನ್ನಡ,ಜಯನಗರ ೪ನೇ ಬ್ಲಾಕ್,ಬೆಂಗಳೂರು
7.ರಾಕೇಶ್ ಶೆಟ್ಟಿ – 9964000058
8.ಸಂದೀಪ್ – 8147953299
ನಿಲುಮೆ ಪ್ರಕಾಶನ ಚೊಚ್ಚಲ ಪುಸ್ತಕ “ಬೌದ್ಧಿಕ ದಾಸ್ಯದಲ್ಲಿ ಭಾರತ” ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನ
ನಿಲುಮೆಯ ಓದುಗರೇ,
ಮುಂದಿನ ಭಾನುವಾರ,ಮಾರ್ಚ್ ೧ರಂದು ಬೆಳಿಗ್ಗೆ ೧೦.೩೦ಕ್ಕೆ,ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ “ನಿಲುಮೆ ಪ್ರಕಾಶನ”ದ ಮೊದಲ ಪುಸ್ತಕ “ಬೌದ್ಧಿಕ ದಾಸ್ಯದಲ್ಲಿ ಭಾರತ” ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರೊ.ಬಾಲಗಂಗಾಧರ,ಶತಾವಧಾನಿ ಗಣೇಶ್,ಪ್ರೊ.ಪ್ರಧಾನ್ ಗುರುದತ್ತ,ಪ್ರೊ.ರಾಜಾರಾಮ್ ಹೆಗಡೆ ಹಾಗೂ ಇನ್ನಿತರ ಗಣ್ಯರು ನಮ್ಮೊಂದಿಗಿರಲಿದ್ದಾರೆ.

ಪುಸ್ತಕ ಬಿಡುಗಡೆಗೆ ಸರ್ವರಿಗೂ ಸುಸ್ವಾಗತ.
ಪುಸ್ತಕ ಬಿಡುಗಡೆಯ ಕಾರ್ಯಕ್ರಮ ಮುಗಿದ ನಂತರ “ನಿಲುಮಿಗರ ದಿನ”ವಿರಲಿದೆ. ನಿಲುಮಿಗರ ದಿನದಲ್ಲಿ ಪಾಲ್ಗೊಳ್ಳುವವರು ತಮ್ಮ ಸ್ವ-ವಿವರಗಳನ್ನು ಈ http://goo.gl/X981PX ಕೊಂಡಿಯಲ್ಲಿ ದಾಖಲಿಸಿ.ನಮಗೆ ಕಾರ್ಯಕ್ರಮದ ತಯಾರಿಗೆ ಇದು ಅವಶ್ಯಕ.ಈ ವಿವರಗಳನ್ನು ದಾಖಲಿಸಲು ಕಡೆಯ ದಿನ ೨೫ನೇ ತಾರೀಖು.ಅದರಾಚೆಗೆ ಈ ಕೊಂಡಿ ಲಭ್ಯವಿರುವುದಿಲ್ಲ.
ಮಿಥಿಕ್ ಸೊಸೈಟಿ,ನೃಪತುಂಗ ರಸ್ತೆ.ತಲುಪುವ ಮಾರ್ಗ : ಮೆಜೆಸ್ಟಿಕ್ ಕಡೆಯಿಂದ ಬರುವುದಾದರೆ ಕೆ.ಆರ್ ಸರ್ಕಲ್ ನಲ್ಲಿ ಬಲ ತಿರುವು (ಕಬ್ಬನ್ ಪಾರ್ಕಿನೊಳಗಿನಿಂದ ಬಂದರೆ,ಕಾರ್ಪೊರೇಶನ್ ಸರ್ಕಲ್ ಕಡೆಗೆ ಎಡತಿರುವು) ತೆಗೆದುಕೊಂಡು ರಸ್ತೆಯ ಬಲಭಾಗದಲ್ಲೆ ಮುಂದುವರೆದರೆ ಸರ್ಕಾರಿ ವಿಜ್ನಾನ ಕಾಲೇಜಿನ ನಂತರದ ಕಟ್ಟಡವೇ ಮಿಥಿಕ್ ಸೊಸೈಟಿ (ಎದುರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇದೆ). ಬಸ್ಸಿನಲ್ಲಿ ಬರುವವರು ಬನ್ನಪ್ಪ ಪಾರ್ಕ್ ಬಸ್ ನಿಲ್ದಾಣದಲ್ಲಿ ಇಳಿದು ಸಿಟಿ ಸಿವಿಲ್ ಕೋರ್ಟ್ ರಸ್ತೆಯ ಕಡೆ ನಡೆದುಕೊಂಡು ಬಂದರೂ ತಲುಪಬಹುದು.(ಹತ್ತು-ಹದಿನೈದು ನಿಮಿಷದ ಹಾದಿ)
ನಿಮ್ಮ ಆಗಮನದ ನಿರೀಕ್ಷೆಯಲ್ಲಿ.
ನಿಮ್ಮೊಲವಿನ,
ನಿಲುಮೆ ಬಳಗ









