ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ತಾಂತ್ರಿಕ ಗೋಷ್ಠಿಗಳನ್ನ ಸೇರಿಸುವಂತೆ ಆಗ್ರಹ
– ಗಣೇಶ್ ದಾವಣಗೆರೆ
ಫೆಬ್ರವರಿಯಲ್ಲಿ ನಡೆಯಲಿರುವ ಬಿಜಾಪುರ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಕೆಳಕಂಡ ಕನ್ನಡ ತಾಂತ್ರಿಕ ಗೋಷ್ಠಿಗಳನ್ನ ಸೇರಿಸಿ. ಕನ್ನಡದ ಅಭಿವೃದ್ಧಿಯ ದೃಷ್ಟಿಯಿಂದ ಇದು ಅತ್ಯವಶ್ಯಕ.
ಸಧ್ಯದ ಮಾಹಿತಿಯ ಪ್ರಕಾರ ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಒಂದೇ ಒಂದು ತಾಂತ್ರಿಕ ಗೋಷ್ಟಿಯನ್ನ ಹಾಕಿಲ್ಲ. ಕನ್ನಡವೆಂದರೆ ಬರೀ ಹಳೆಗನ್ನಡ, ನಡುಗನ್ನಡ, ಆಧುನಿಕ ಕನ್ನಡ, ನವೋದಯ, ನವ್ಯ, ನವ್ಯೋತ್ತಗಳಷ್ಟೇನಾ? ನಿಮ್ಮ ಮೊಬೈಲುಗಳಲ್ಲಿ ಕನ್ನಡ ಸಾಹಿತ್ಯವನ್ನ ಓದಲಿಕ್ಕೆ, ಬರೆಯಲಿಕ್ಕೆ ಕನ್ನಡದ ಸಾಫ್ಟ್‌ವೇರುಗಳು, ಆಂಡ್ರಾಯ್ಡ್ App ಗಳು, ಕಂಪ್ಯೂಟರಿನಲ್ಲಿ, ಲ್ಯಾಪ್‌ಟಾಪಿನಲ್ಲಿ , ಟ್ಯಾಬ್ಲೆಟ್‌ನಲ್ಲಿ ಕನ್ನಡ ಬೇಡವಾ? ಕಂಪ್ಯೂಟರ್‌ನಲ್ಲಿ ಕನ್ನಡ ಬರೆಯುವ ಬಗ್ಗೆ ಜಾಗೃತಿ ಬೇಡವಾ? ಸ್ವತಃ ಕ.ಸಾ.ಪ ವೆಬ್ ಸೈಟೇ ಅಸ್ತಿತ್ವದಲ್ಲಿಲ್ಲ. ಯಾವುದೇ ಮಾಹಿತಿಯೂ ಇಲ್ಲ. ಕಂಪ್ಯೂಟರ್ ಯುಗದಲ್ಲಿರುವ ನಾವು ನಮ್ಮ ಭಾಷೆಗೆ ತಂತ್ರಜ್ಞಾನದ ನೆರವು ಪಡೆಯಬೇಕು.
ಕಸಾಪ ಅಧ್ಯಕ್ಷರಿಗೆ ಕೇಳಿದರೆ, ಈ ಬಾರಿ ಎಲ್ಲವೂ ಸಭೆಯಲ್ಲಿ ನಿರ್ಣಯಿಸಲಾಗಿದೆ ಸೇರಿಸಲಿಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ. ಇನ್ನೂ ಬಹಳ ದಿನಗಳ ಸಮಯವಿದೆ. ಕನ್ನಡದ, ಕನ್ನಡಿಗರ ಶ್ರೇಯೋಭಿವೃದ್ಧಿಗಾಗಿ ಆಸಕ್ತಿವಹಿಸಬೇಕಾದ ಕ.ಸಾ.ಪ.ಗೇಕೆ ತಂತ್ರಾಂಶ, ತಂತ್ರಜ್ಞಾನದ ಬಗ್ಗೆ ಇಷ್ಟು ಅಸಡ್ಡೇ?
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಪುಂಡಲೀಕ ಹಾಲಂಬಿಯವರಿಗೆ ಒಂದು ಸವಿನಯ ಮನವಿ. ಕನ್ನಡದ ಅಂತರ್ಜಾಲ ಪ್ರಪಂಚದಲ್ಲಿ ಸಕ್ರಿಯವಾಗಿರುವ ಸಾವಿರಾರು ಬ್ಲಾಗಿಗರು,ಕನ್ನಡ ವೆಬ್ ಡೆವಲಪರ್‌ಗಳು,ಓಪನ್ ಸೋರ್ಸ್ ಆಸಕ್ತರು, ಸಾಫ್ಟ್‌ವೇರ್ ಎಂಜಿನಿಯರುಗಳು, ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರುಗಳು, ವಿದ್ಯಾರ್ಥಿಗಳನ್ನ ಸೇರಿಸುವ ಪ್ರಯತ್ನವಾಗಿ ಕೆಳಕಂಡ ಗೋಷ್ಟಿಗಳನ್ನ ಸೇರಿಸಿ. ಕನ್ನಡದ ತಾಂತ್ರಿಕ ಅಭಿವೃದ್ಧಿಯ ದೃಷ್ಟಿಯಿಂದ ಇದು ಅತ್ಯಾವಶ್ಯಕ.
ಪದ ತಂತ್ರಾಂಶ – Pada Software (Indic word processor & IME)
ಕಂಪ್ಯೂಟರಲ್ಲಿ ಕನ್ನಡದ ಬಳಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಅಂತರಜಾಲದಲ್ಲಿ ಸದ್ಯಕ್ಕೆ ಕನ್ನಡ ವೆಬ್ ಸೈಟುಗಳ ಸಂಖ್ಯೆ ಕಡಿಮೆ ಇದ್ದರೂ ಕೂಡ ಓದುಗರ ಸಂಖ್ಯೆ ಕಡಿಮೆ ಇಲ್ಲ. ಬಹಳಷ್ಟು ಜನ ಕಂಪ್ಯೂಟರ್ನಲ್ಲಿ ಕನ್ನಡದಲ್ಲಿ ಬರೆಯಲು ಬಯಸುತ್ತಿದ್ದಾರೆ. ಕೆಲವರು ಒತ್ತಕ್ಷರ, ದೀರ್ಘ, ಮಹಾಪ್ರಾಣ ಮುಂತಾದ ಟೈಪಿಂಗ್ ಸ್ವಲ್ಪ ಸಮಸ್ಯೆಯಾಗಿ ಹಿಂಜರಿಯುತ್ತಿದ್ದಾರೆ. ಆದರೂ ಕೂಡ ಉತ್ಸಾಹಿಗಳಿಗೇನೂ ಕಡಿಮೆ ಇಲ್ಲ. ಬಹಳ ಸುಲಭವಾಗಿ ನೇರವಾಗಿ ಎಲ್ಲಿ ಬೇಕಾದರೂ ಕನ್ನಡದಲ್ಲಿ ಬರೆಯಲು ಗೂಗಲ್, ಮೈಕ್ರೋಸಾಫ್ಟ್, ಪ್ರಮುಖ್ ಮುಂತಾದ ಹಲವು IME ಟೂಲ್ ಗಳಿವೆ. ನುಡಿ, ಪದ, ಬರಹದ IME ಜೊತೆಗೆ ಪದ ಸಂಸ್ಕಾರಕಗಳೂ (Word Processors) ಇವೆ. ಆನ್ ಲೈನ್ ನಲ್ಲಿ ಬರೆಯಲು ಹಲವು ಟೂಲ್ ಗಳಿವೆ. ಸಾಮಾನ್ಯ ಬಳಕೆದಾರರಿಗೆ ಈಗ ಯಾವ ತಾಂತ್ರಿಕ ಸಮಸ್ಯೆ ಇಲ್ಲ. ಬೇಕಾಗಿರುವುದು ಸ್ವಲ್ಪ ಆಸಕ್ತಿ, ಅಭ್ಯಾಸ ಅಷ್ಟೆ. ಈ ಮೊದಲು ವ್ಯಾಪಕವಾಗಿ ಬಳಕೆಯಲ್ಲಿದ್ದ ‘ಬರಹ’ ತಂತ್ರಾಂಶ ಆವೃತ್ತಿ ಹತ್ತರ ಬಳಿಕ ಉಚಿತವಾಗಿ ಲಭ್ಯವಿಲ್ಲ. ಅದರಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗಾಗಿ ಸಂಪನ್ಮೂಲ ಒಟ್ಟುಮಾಡಲು ಸದ್ಯಕ್ಕೆ ಬರಹ ತಂತ್ರಾಂಶಕ್ಕೆ ಶುಲ್ಕವಿಡಲಾಗಿದೆ ಎಂದು ಹೇಳಲಾಗಿದೆ. ಮತ್ತೊಂದು ಬಹುಬಳಕೆಯ ‘ನುಡಿ’ ತಂತ್ರಾಂಶದಲ್ಲಿ ಕೆಲವು ಸೌಲಭ್ಯಗಳಿಲ್ಲ. (ಕನ್ನಡ ಬರೆಯಲು ಇರುವ ಹಲವು ತಂತ್ರಾಂಶ ಹಾಗೂ ಟೂಲ್ ಗಳ ಬಗ್ಗೆ ಹಿಂದೊಮ್ಮೆ ಬರೆದಿದ್ದೆ. ಅದು ಇಲ್ಲಿದೆ: Kannada Typing in Computers).ಮುಂದಿನ ಪೀಳಿಗೆಗೆ ನಾವು (ಕನ್ನಡ ಮಾಧ್ಯಮ) ಏನಂತ ಹೇಳಬಹುದು….
-ಅರವಿಂದ್
ಒಂದಾನೊಂದು ಕಾಲದಲ್ಲಿ ಕರ್ನಾಟಕದಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಇತ್ತು. ಆಗ ನಾವುಗಳು ನಮ್ಮ ಗುರುಗಳನ್ನು ಬಹಳ ಗೌರವದಿಂದ, ಭಯಮಿಶ್ರಿತ ಪುಳಕದಿಂದ ಅವರು ನಮ್ಮೆದುರಿಗೆ ಬಂದರೆ ಭೂಮಿಯೇ ನಮ್ಮ ಮೇಲೆ ಬಿದ್ದಂತೆ ಭಾಸವಾಗಿ, ಅವರುಗಳು ಹೇಳಿದ ಪಾಠಗಳನ್ನು, ಪದ್ಯ-ಗದ್ಯಗಳನ್ನು, ಲೆಕ್ಕಗಳನ್ನು, ವ್ಯಾಕರಣವನ್ನು ಚಾಚೂ ತಪ್ಪದೆ ಓದಿಕೊಂಡು ಶಾಲೆಗೆ ಹೋಗುತ್ತಿದ್ದೆವು… ನಾವುಗಳೆಲ್ಲರೂ ಕನ್ನಡದಲ್ಲೇ ಪಾಠ ಕೇಳುತ್ತಿದ್ದೆವು ಮತ್ತು ನಾವುಗಳು ಅದ್ಯಾವುದೇ ಭಾಷೆಯವರಾಗಿದ್ರೂ ಕನ್ನಡದಲ್ಲೇ ಮಾತಾಡ್ತಿದ್ದೆವು.
ನಮ್ಮ ಗುರುಗಳು ತರಗತಿಗೆ ಬಂದ ಕೂಡಲೇ ಗೌರವ ಸೂಚಕವಾಗಿ ನಮಸ್ತೇ ಗುರುಗಳೇ… ಅಂತ ಒಕ್ಕೊರಲಾಗಿ ಹೇಳಿ, ಅವರೂ ಸೂಚಿಸಿದ ನಂತರವೇ ನಮ್ಮ ನಮ್ಮ ಜಾಗದಲ್ಲಿ ಕುಳಿತುಕೊಳ್ಳುತ್ತಿದ್ದೆವು. ನಮ್ಮ ಮಾತೃಭಾಷೆಯಲ್ಲೇ ಪಾಠ ಕೇಳುತ್ತಿದ್ದ ನಾವು, ಜಗತ್ತಿನ ಅದೆಷ್ಟು ವಿಷಯಗಳನ್ನು ಕನ್ನಡದಲ್ಲೇ ತಿಳಿದುಕೊಳ್ಳುತ್ತಿದ್ದೆವು ಗೊತ್ತಾ…
ಕರ್ನಾಟಕದಲ್ಲಿ ಈ ಬಾರಿ ಪ್ರಾದೇಶಿಕ ಪಕ್ಷಗಳಿಗೆ ಕಾಲ ಕೂಡಿ ಬಂದಿದೆಯೇ?
ಭಾರತ ಒಕ್ಕೂಟದ ಮೇಲೊಂದು ಹಿನ್ನೋಟ
ಭಾರತ ಒಕ್ಕೂಟ ಅಸ್ತಿತ್ವಕ್ಕೆ ಬಂದ ದಿನಗಳನ್ನು ಒಮ್ಮೆ ಸುಮ್ಮನೆ ನೆನೆಸಿಕೊಳ್ಳಿ. ವಿವಿಧ ನುಡಿಯಾಡುವ, ವಿವಿಧ ಆಚರಣೆ, ಆಹಾರ, ಜೀವನವಿಧಾನವನ್ನೇ ಹೊಂದಿರುವ ಭಾರತ ಒಕ್ಕೂಟದ ಜನರನ್ನು ಭಾವನಾತ್ಮಕವಾಗಿ ಬೆಸೆದಿದ್ದು ನಮ್ಮೆಲ್ಲಗಿಂತಲೂ ಆರ್ಥಿಕವಾಗಿ, ತಾಂತ್ರಿಕವಾಗಿ ಮುಂದುವರೆದಿದ್ದ ಬ್ರಿಟಿಷ್ ಎಂಬ ಸಾಮಾನ್ಯ ಶತ್ರು. ಈ ಶತ್ರುವಿನ ವಿರುದ್ದ ಭಾರತ ಒಕ್ಕೂಟದ ಜನರನ್ನು ಸಂಘಟಿತರನ್ನಾಗಿಸಿ ಹೋರಾಟಕ್ಕೆ ಮೊನಚು ತಂದ ನಾಯಕರಿದ್ದದ್ದು ಕಾಂಗ್ರೆಸ್ ಅನ್ನುವ ಅಂದಿನ ಪಕ್ಷದಲ್ಲಿ. ಬ್ರಿಟಿಷರು ಭಾರತ ಬಿಟ್ಟು ಹೋದಾಗ ಜನರ ಮನದಲ್ಲಿದ್ದ “ಕಾಂಗ್ರೆಸ್ಸಿನವರು ಸ್ವಾತಂತ್ರಕ್ಕೆ ಕಾರಣರಾದರು” ಅನ್ನುವ ಭಾವನೆಯನ್ನೇ ಬಂಡವಾಳವಾಗಿಸಿಕೊಂಡು ದೇಶಾದ್ಯಂತ ಕಾಂಗ್ರೆಸ್ ಪಕ್ಷ ರಾಜಕೀಯ ನೆಲೆ ಕಂಡುಕೊಂಡಿತು. ಈ ಭಾವನಾತ್ಮಕ ಬಂಡವಾಳ ಗಟ್ಟಿಯಾಗಿದ್ದರಿಂದ ಸ್ವಾತಂತ್ರ್ಯ ನಂತರದ ಮೊದಲೆರಡು ದಶಕ ದೇಶಕ್ಕೆ ಒಂದೇ ಪಕ್ಷ ಅನ್ನುವಂತೆ ಕಾಂಗ್ರೆಸಿನ ಪಾರುಪತ್ಯ ನಡೆದಿತ್ತು.
ಒಂದು ಪಕ್ಷ, ಒಬ್ಬ ವ್ಯಕ್ತಿ ಒಕ್ಕೂಟವನ್ನಾಳುವುದು ಅಸಹಜ !
ಹೀಗೆ ಬ್ರಿಟಿಷರನ್ನು ಹೊಡೆದೊಡಿಸಲು ರೂಪುಗೊಂಡಿದ್ದ ಹೋರಾಟದಿಂದಾಗಿ ನೆಲೆ ಕಂಡಿದ್ದ ಭಾವನಾತ್ಮಕ ಒಗ್ಗಟ್ಟು ಅನ್ನುವ ತೆಳು ಅಂಟು ಕೆಲ ಸಮಯದಲ್ಲಿ ಖಾಲಿಯಾಗುತ್ತಲೇ ನಮ್ಮ ನಮ್ಮಲ್ಲಿನ ಆಸೆ, ಆಶೋತ್ತರಗಳು, ಏಳಿಗೆಯ ಕಲ್ಪನೆಗಳಲ್ಲಿನ ವೈವಿಧ್ಯತೆಗಳು ಹಂತ ಹಂತವಾಗಿ ಹೊರ ಹೊಮ್ಮತೊಡಗಿದವು. ಇಷ್ಟು ವ್ಯಾಪಕವೂ, ವೈವಿಧ್ಯಮಯವೂ ಆದ ಒಕ್ಕೂಟವೊಂದನ್ನು ಒಂದು ಪಕ್ಷ, ಒಬ್ಬ ವ್ಯಕ್ತಿ ದೆಹಲಿಯಿಂದ ಆಳುವುದು ಅತ್ಯಂತ ಅಸಹಜವೂ, ಆಳಲಸಾಧ್ಯವಾದದ್ದು (unwieldy) ಅನ್ನುವುದು ಅರ್ಥವಾಗತೊಡಗಿತು. ನೂರು ಕೋಟಿಗೂ ಮಿಗಿಲಾದ ಜನರ ಆಶೋತ್ತರಗಳನ್ನು ಒಂದು ಪಕ್ಷ, ಒಬ್ಬ ವ್ಯಕ್ತಿಯಿಂದ ಎಂದಿಗೂ ಈಡೇರಿಸಲಾಗದು ಅನ್ನುವ ಪ್ರಾಕ್ಟಿಕಲ್ ಆದ ತಿಳಿವೇ ಮುಂದಿನ ದಿನಗಳಲ್ಲಿ ಕಾಂಗ್ರೆಸಿನ ಪಾರಮ್ಯವನ್ನು ಮುರಿದು ದೇಶದ ಹಲವೆಡೆ ಪ್ರಾದೇಶಿಕ ಶಕ್ತಿಗಳು ಉದಯಿಸುವಂತೆ ಮಾಡಿದ್ದು ಅನ್ನುವುದನ್ನು ಗಮನಿಸಬೇಕಿದೆ. 1990ರ ಈಚೆಗೆ ಆರ್ಥಿಕ, ಸಾಮಾಜಿಕ ನೆಲೆಗಟ್ಟಿನಲ್ಲಾದ ತುರ್ತಿನ ಬದಲಾವಣೆಗಳು ಈ ಪ್ರಕ್ರಿಯೆಗೆ ಇನ್ನಷ್ಟು ವೇಗ ಒದಗಿಸಿದೆ ಅಂದರೆ ತಪ್ಪಾಗಲಾರದು. ಮತ್ತಷ್ಟು ಓದು 
ಸತ್ತ ನಂತರ ‘ಒಳ್ಳೆಯವರಾಗಿಬಿಡುವ’ ಪರಿಗೆ ಅಚ್ಚರಿಗೊಳ್ಳುತ್ತ….
‘ಸತ್ತವರ ಬಗ್ಗೆ ಕೆಟ್ಟದ್ದಾಡಬಾರದಂತೆ’; ಅವರು ಬದುಕಿದ್ದಾಗ ಕೆಟ್ಟವರಾಗಿದ್ದಾಗಲೂ ಸಹ! ವ್ಯಕ್ತಿಯೇ ಸತ್ತು ಹೋದ ಮೇಲೆ ಆತನ ಹಳೆಯ ಪುರಾಣಗಳನ್ನು ಕೆದಕುವುದು ಬೇಡವೆಂಬ ಭಾವನೆಯನ್ನೇನೋ ಒಪ್ಪಬಹುದು ಆದರೆ ಇದ್ದ – ಇರದ – ಸೃಷ್ಟಿಸಲ್ಪಟ್ಟ ವಿಶೇಷಣಗಳನ್ನೆಲ್ಲ ಸತ್ತ ವ್ಯಕ್ತಿಯ ವ್ಯಕ್ತಿತ್ವಕ್ಕೆ ಆರೋಪಿಸಿ ಸತ್ತವರಿಗೇ ಬೇಸರ ಬರಿಸುವಷ್ಟು ಹೊಗಳುವುದು ಎಷ್ಟರಮಟ್ಟಿಗೆ ಸರಿ?! ಶಿವಸೇನೆ ಮುಖ್ಯಸ್ಥ ಬಾಳ ಠಾಕ್ರೆಯ ಮರಣದ ನಂತರ ಪತ್ರಿಕೆಗಳಲ್ಲಿ, ಅಂತರ್ಜಾಲದಲ್ಲಿ ಬಾಳ ಠಾಕ್ರೆಯ ಬಗ್ಗೆ ಬರುತ್ತಿರುವ ವರದಿಗಳನ್ನು ಓದಿದರೆ ನಮ್ಮ ಸಮಾಜದ ಅಧಃಪತನದ ಮನಸ್ಥಿತಿಯ ಪ್ರತಿಬಿಂಬದಂತೆಯೇ ಕಾಣಿಸುತ್ತಿದೆ.
‘ಮರಾಠಿ ಮಾನೂಸ್’ ಸೃಷ್ಟಿಸಿ ಅದರ ಬೆಂಕಿಯಲ್ಲೇ ರಾಜಕೀಯದಾಟವಾಡಿದ, ಹಿಂದೂ ಮುಸ್ಲಿಮರ ದ್ವೇಷ ಹೆಚ್ಚಳಕ್ಕೆ ತನ್ನ ಕೈಲಾದ ಸಹಾಯ ಮಾಡಿದ ವ್ಯಕ್ತಿಯೊಬ್ಬ ಇಂದು ರಾಷ್ಟ್ರನಾಯಕರಂತೆ, ದೇಶಭಕ್ತನಂತೆ ಚಿತ್ರಿಸಲ್ಪಡುತ್ತಿದ್ದಾರೆ. ಶಿವಸೇನೆಯ ಕಟ್ಟರ್ ಹಿಂದುತ್ವದ ಬೆಂಬಲಿಗರು ಠಾಕ್ರೆಯ ಅಂತಿಮ ಯಾತ್ರೆಯಲ್ಲಿ ಭಾಗವಹಿಸಿದ ಲಕ್ಷಾಂತರ ಜನರನ್ನು ತೋರಿಸುತ್ತ ಆತ ಒಬ್ಬ ಮಹಾನ್ ನಾಯಕನೇ ಹೌದು ಎಂದ್ಹೇಳಬಹುದು. ಹಿಟ್ಲರನಿಗೂ ಅಪಾರ ಸಂಖ್ಯೆಯ ಬೆಂಬಲಿಗರಿದ್ದರು ಮತ್ತು ಬಾಳ ಠಾಕ್ರೆ ಸಂದರ್ಶನಗಳಲ್ಲಿ ಹಿಟ್ಲರನನ್ನು ಹಾಡಿ ಹೊಗಳಿದ್ದೂ ಇದೆ! ಮತ್ತಷ್ಟು ಓದು 
ಬಿಟ್ಟೇ ಹೋಗುವ ಬೆಂಗಳೂರು ಅರಮನೆ
-ಪ್ರಶಸ್ತಿ ಪಿ ಸಾಗರ
ಬೆಂಗಳೂರು ಅರಮನೆ
ಬೆಂಗಳೂರಲ್ಲಿ ಲಾಲ್ ಬಾಗ್ , ವಿಧಾನ ಸೌಧ, ಕಬ್ಬನ್ ಪಾರ್ಕ್ ಗೊತ್ತು. ಇದೆಲ್ಲಿಂದ ಬಂತಪ ಅರಮನೆ ಅಂದ್ಕಂಡ್ರಾ ? ಮೈಸೂರು ಅರಮನೆ ಬಗ್ಗೆ ಬರೆಯೋಕೆ ಪೀಟಿಕೆ ಹಾಕ್ತಿದೀನಿ ಅಂದ್ಕಂಡ್ರಾ ? ಇಲ್ಲ ಸ್ವಾಮಿ . ನಾ ಹೇಳೋಕೆ ಹೊರಟಿರೋದು ಅರಮನೆ ರೋಡಲ್ಲಿರೋ ಮಹಾರಾಜರ ಬೇಸಿಗೆ ಅರಮನೆ ಬಗ್ಗೆನೇ . ಟಿಪ್ಪು ಅರಮನೆ ಅಂತ ಮಾರ್ಕೆಟ್ ಹತ್ರ ಇದ್ಯಲ ಅಂದ್ರ್ರ ? ಅದ್ರ ಬಗ್ಗೆನೂ.. ಹರಿಕತೇನೆ ನಿಮಗೆ ನಿದ್ದೆ ತರಿಸೋ ಮೊದ್ಲು ಅರಮನೆಗೆ ವಾಪಾಸ್ ಬರೋಣ.
ಹಿಂದಿನ ವಾರ ನಾವು ಗೆಳೆಯರು ಬೆಂಗಳೂರು ಅರಮನೆಗೆ ಹೋಗಿದ್ವಿ .ಮೂರು ಬಣ್ಣದ ರಕ್ಷಕರ ಭದ್ರತೆ ಕಾಣ್ತಿತ್ತು ಹೊರಗಿಂದ . ಗೂಗಲ್ ದೈವ ದಯಪಾಲಿಸಿದ್ದ ಚಿತ್ರಗಳನ್ನ್ನು ನ್ನೋಡಿಯೇ ಕೆರಳಿದ್ದ ನಮ್ಮ ಕುತೂಹಲ ಪೋಲಿಸ್ ಮಾವಂದಿರ ದರ್ಶನದಿಂದ ಇನ್ನು ಹೆಚ್ಚಾಯ್ತು. ಹೊರಗಿನಿಂದಲೂ ಚಿತ್ರ ತೆಗೆಯಕ್ಕೆ ಬಿಡಲಿಲ್ಲ ಅಲ್ಲಿ ಸಿಬ್ಬಂದಿ. ಅದರೂ ಮೊಬೈಲ್ ಕ್ಯಾಮರ ಸಮಾಧಾನಿಸುತ್ತ ಒಳ ಸಾಗಿದ ನಮಗೆ ಮತ್ತೊಂದು ಬೇಸರ ಕಾದಿತ್ತು. ಪ್ರವೇಶ ಶುಲ್ಕ ೨೦೦ ರೂ. ಮೈಸೂರು ಅರಮನೆಯಲ್ಲೂ ನೂರರ ಮೇಲಿಲ್ಲ . ತಾಜಮಹಲ್ , ಕೆಂಪುಕೋಟೆ ಹೀಗೆ ಭಾರತದಲ್ಲೇ ಭಾರತೀಯರಿಗೆ ಎಲ್ಲೂ ಇರದಷ್ಟು ಶುಲ್ಕ ಇಲ್ಲಿ !! ಆದರೆ ಬರೋದು ಬಂದಾಗಿದೆ .ನೋಡ್ಕೊಂಡೆ ಹೋಗೋದು ಅಂತ ತೀರ್ಮಾನ ಮಾಡಿದ್ವಿ. ಗೆಳೆಯರ ಹತ್ರ ಇದ್ದ ಬದ್ದ ದುಡ್ಡೆಲ್ಲ ಗುಡ್ಡೆ ಹಾಕಿ ಅಂತೂ ಒಳಗೆ ಸೇರಿದ್ವಿ. ಅಲ್ಲಿರೋ ಎಲ್ಲದರ ಮಾಹಿತಿ ಇದ್ದ ಆಡಿಯೋ ಗೈಡ ಉಚಿತ ಅನ್ನೋದಷ್ಟೇ ಅವಾಗಿದ್ದ ಸಮಾಧಾನ.
ಮೊದಲ್ನೇ ಜಾಗ ಅಂದ್ರೆ ಮತ್ತೆ ಹೊರಬಾಗಿಲಿಗೆ ಬಂದ್ವಿ. ಈ ಅರಮನೆಯನ್ನು ೧೮೭೩ರಲ್ಲಿ ಕಟ್ಟಲಾಯಿತಂತೆ. ಅದನ್ನು ಕಟ್ಟಿದ ಪರಿ, ಆಗಿನ ರಾಜ ವೊಡೆಯರರ ಮೈಸೂರು ಸಂಸ್ಥಾನದ ಪರಿ, ನೀರಾವರಿಯಿಂದ , ಅಭಿವೃದ್ದಿ ಯೋಜನೆಗಳೆಡೆಗೆ ಸಂಸ್ಥಾನ ಗಮನ ಹರಿಸಿದ ರೀತಿಯನ್ನು ಕೇಳುತ್ತ ಅಭಿಮಾನ ಕನಕಣದಲ್ಲೂ ಉಕ್ಕಿದ ಅನುಭವ. “ಅಪಾರ ಕೀರ್ತಿಯಿಂದ ಮೆರೆವ ದಿವ್ಯ ನಾಡಿದು ” .. ಹಾಡಿನ ಹಿಮ್ಮೇಳ ಕೇಳಿದಂತಾಯ್ತು ಒಮ್ಮೆ . ಮತ್ತಷ್ಟು ಓದು 
ಯಡಿಯೂರಪ್ಪರ ಹೊಸ ಪಕ್ಷವೂ..ರಾಜ್ಯ ರಾಜಕೀಯ ಜಂಜಾಟವೂ..!
– ಶಂಶೀರ್ ಬುಡೋಳಿ

ರಾಜ್ಯ ಬಿಜೆಪಿಯ ಆಡಳಿತಾವಧಿಯ ಕಾಲಾವಧಿ ಮುಗಿಯುತ್ತಾ ಬಂದಿದೆ..ಜೊತೆಗೆ ದಿ ಗ್ರೇಟ್ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರ ಬ್ಲಾಕ್‌ಮೇಲ್ ರಾಜಕಾರಣ ಕೂಡಾ ಹೆಚ್ಚಾಗ್ತಾ ಇದೆ. ಹಗರಣದ ಆರೋಪ ಮೈಮೇಲೆ ಬಂದಾಗ ಅನಿವಾರ್ಯವಾಗಿ ಸಿಎಂ ಪಟ್ಟದಿಂದ ಕೆಳಗಿಳಿಯುವಾಗ ಬಿಜೆಪಿ ಹೈಕಮಾಂಡ್ ನಿಮಗೆ ಸೂಕ್ತ ಸ್ಥಾನಮಾನ ನೀಡುತ್ತೇವೆಂದು ಭರವಸೆ ನೀಡಿತ್ತೆಂದು ಹಲವಾರು ಬಾರಿ ಯಡಿಯೂರಪ್ಪರೇ ಹೇಳಿದ್ದರು. ಇದನ್ನೇ ಅಸ್ತ್ರವಾಗಿಟ್ಟುಕೊಂಡು ಮಾಜಿ ಸಿಎಂ ‘ಹಠ’(ಯಡಿ)ಯೂರಪ್ಪ ಬಿಜೆಪಿಯನ್ನ ತೊರೆದು ಕೆಜೆಪಿ ಎಂಬ ಸ್ವಪಕ್ಷ ಕಟ್ಟುವ ಮೂಲಕ ಬಿಜೆಪಿ ಹೈಕಮಾಂಡ್‌ಗೆ ಸವಾಲು ಎಸೆದಿದ್ದಾರೆ..ಅದಕ್ಕೂ ಮುನ್ನಾ ಹೈಕಮಾಂಡ್‌ಗೆ ತನಗೆ ಸೂಕ್ತ ಸ್ಥಾನಮಾನ ನೀಡುವುದರ ಬಗ್ಗೆ ಬೇಗ ಯೋಚಿಸಿ ಅಂತಾ ಎಚ್ಚರಿಕೆ ಕೊಟ್ಟು ತಾನೇ ಕರ್ನಾಟಕ ರಾಜ್ಯದಲ್ಲಿ ಬಿಜೆಪಿಯನ್ನ ಆಡಳಿತಕ್ಕೆ ತಂದಂತೆ ವರ್ತಿಸುತ್ತಿದ್ದಾರೆ. ನಿಜಕ್ಕೂ ಯಡಿಯೂರಪ್ಪಗೆ ಮಾನ ಮರ್ಯಾದೆ ಎನ್ನುವುದು ಇಲ್ಲವೇ..?
ಮಾಜಿ ಸಿಎಂ ಯಡಿಯೂರಪ್ಪನವರು ಬಿಜೆಪಿ ಹೈಕಮಾಂಡ್‌ನಿಂದ ಮುನಿಸಿಕೊಂಡು ಪ್ರತ್ಯೇಕ ಪಕ್ಷವನ್ನ ಕಟ್ಟುವ ದೊಡ್ಡ ಸಾಹಸಕ್ಕೆ ಕೈಹಾಕಿದ್ದಾರೆ. ನಿಜಕ್ಕೂ ಇದು ರಾಜ್ಯ ರಾಜಕೀಯದಲ್ಲಿ ಹೊಸ ಶಕೆಯನ್ನ ಆರಂಭಿಸಲಿದೆಯೇ..? ಎಂಬ ಪ್ರಶ್ನೆ ಉದ್ಭವವಾಗಿದೆ. ಇದಕ್ಕೆ ಉತ್ತರ ನಿಜಕ್ಕೂ ಇಲ್ಲ..ಯಾವ ಯಡಿಯೂರಪ್ಪ ತಾನು ಬಿಜೆಪಿಯಿಂದಲೇ ಬೆಳೆದು ಬಂದಿರುವುದನ್ನೇ ಮರೆತುಕೊಂಡು ತಾನು ಕುಣಿಸಿದ ಹಾಗೇ ಶೆಟ್ಟರ್ ಹಾಗೂ ಹೈಕಮಾಂಡ್ ಆಡಿಲ್ಲವೆಂದು ಮುನಿಸಿಕೊಂಡು ಅದಕ್ಕಿಂತಲೂ ಹಠ ಮಾಡಿಕೊಂಡು ಹೊಸ ಪಕ್ಷ ಕಟ್ಟುವುದಕ್ಕೆ ಮುಂದಾಗಿದ್ದು ಇವರ ಮೂರ್ಖತನಕ್ಕೊಂದು ಸಾಕ್ಷಿ. ಬಳ್ಳಾರಿ ಗ್ರಾಮಾಂತರ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ನಂತರ ಶ್ರೀರಾಮುಲು ‘ಬಿಎಸ್‌ಆರ್’ ಪಕ್ಷವನ್ನು ಸ್ಥಾಪನೆ ಮಾಡಿದ ವೇಳೆ ರಾಜ್ಯದಲ್ಲಿ ಬದಲಾವಣೆ ಆಗುತ್ತದೆಂದು ಭಾವಿಸಲಾಗಿತ್ತು. ಆದರೆ ಇಂದು ಈ ಪಕ್ಷ ಪ್ರಾಥಮಿಕ ಮಟ್ಟದಿಂದಲೇ ಬೇರೂರಲು ಇನ್ನು ಸಾಧ್ಯವಾಗಿಲ್ಲ. ಇನ್ನು ರಾಜ್ಯ ಬಿಜೆಪಿ ಹಾಗೂ ಯಡಿಯೂರಪ್ಪರ ವಿಷಯಕ್ಕೆ ಬರುವುದಾದರೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರ ಮನದಲ್ಲಿ ಏನೇನೋ ಇದೆ..ಮಾತು ಮೊದಲೇ ಹೇಳಿಬಿಡಲು ಕಾರಣನೂ ಇದೆ. ‘ನಾನು ಪಕ್ಷ ಬಿಟ್ಟು ಹೋಗುತ್ತಿದ್ದೇನೆ. ಯಾರಿಗೆ ಬೇಕಾಗಿದೆ ಬಿಜೆಪಿ. ನನಗೆ ಮಾಡಿದ ಅಪಮಾನಕ್ಕಾಗಿ ಪಕ್ಷ ಬಿಡುತ್ತಿದ್ದೇನೆ’ ಎಂದು ತಾನು ಬೆಳೆದು ಬಂದ ಪಕ್ಷದ ವಿರುದ್ಧನೆ ಇತ್ತೀಚಿಗಷ್ಟೇ ಶಿವಮೊಗ್ಗದಲ್ಲಿ ಹೇಳಿಕೆ ನೀಡಿ ತಾನಿಲ್ಲದೇ ಬಿಜೆಪಿ ಪಕ್ಷ ರಾಜ್ಯದಲ್ಲಿರಲು ಸಾಧ್ಯನೇ ಇಲ್ಲ ಅಂತಾ ಫೋಸು ಕೊಡುತ್ತಿರುವ ಯಡಿಯೂರಪ್ಪರ ಮೊಸಳೆ ಕಣ್ಣೀರು ಜನರಿಗೆ ಅರ್ಥವಾಗಲ್ಲವೇ..? ಮತ್ತಷ್ಟು ಓದು 
ದೆಹಲಿಗೂ ಹರಿಯಲಿ ಕಾವೇರಿ; ಇಲ್ಲದೇ ಹೋದರೆ ಸೋಲುವಿರಿ
-ರಾಕೇಶ್ ಎನ್ ಎಸ್
ಗಂಗಾ, ಯಮುನಾ ನದಿಗಳ ಹೆಸರು ಕೇಳಿದರೆ ನಿಮಗೆ ಯಾವುದಾದರೂ ರಾಜ್ಯದ ನೆನಪು ಆಗುತ್ತದೆಯೇ ಎಂದು ಹಿರಿಯ ಪತ್ರಕರ್ತರೊಬ್ಬರು ಕೇಳಿದರು. ನಾನು ಅವಾಕ್ಕಾದೆ. ಗಂಗಾ ನದಿಯೂ ಉತ್ತರಾ ಖಂಡ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ಗಳಲ್ಲಿ ಜೀವ ನದಿಯಾಗಿ ಹರಿಯುತ್ತದೆ. ಉತ್ತರಾ ಖಂಡ, ಉತ್ತರ ಪ್ರದೇಶ, ಹರಿಯಾಣ, ದೆಹಲಿಗಳಿಗೆ ಯಮುನೆಯ ಜೀವದಾಯಿ. ಮಾತು ಮುಂದುವರಿಸಿದ ಅವರು ನನಗೆ ಕಾವೇರಿ ಅಂದರೆ ತಮಿಳುನಾಡಿನ ನೆನಪಾಗುತ್ತದೆ ಎಂದರು. ಹೌದು, ಕಾವೇರಿ ನದಿ ಸಂಪೂರ್ಣವಾಗಿ ತಮಿಳುನಾಡಿಗೆ ಸೇರಿದಾಗಿದ್ದು, ಕರ್ನಾಟಕ ಸುಮ್ಮನೆ ಕಿರಿಕ್ ಮಾಡುತ್ತಿದೆ ಎಂಬ ಭಾವನೆ ಕರ್ನಾಟಕದ ಹೊರಗೆ ಮಡುಗಟ್ಟಿದೆ ಎಂಬುದನ್ನು ಅವರು ನನಗೆ ಸೂಚ್ಯವಾಗಿ ಮನದಟ್ಟು ಮಾಡಿಕೊಟ್ಟಿದ್ದರು.

ಏಕ್ ಥಾ ಟೈಗರ್…! ಅವನೊಬ್ಬನಿದ್ದ ನಮ್ಮ ಸಳ…!
– ಚರಿತ್ರ ಕುಮಾರ್
ಮಲೆನಾಡಿನ ಒಂದು ಹಳ್ಳಿ. ಗುರುವೊಬ್ಬ ಶಿಷ್ಯರನ್ನು ಕೂರಿಸಿಕೊಂಡು ಬಯಲಲ್ಲಿ ಪಾಠ ಹೇಳಿಕೊಡುತ್ತಿದ್ದ. ತನ್ಮಯನಾಗಿದ್ದ ಗುರು. ಆಲಿಸುತ್ತಾ ಮನನಮಾಡಿಕೊಳ್ಳುತ್ತಿದ್ದ ಶಿಷ್ಯರು. ವಿದ್ಯೆಯನ್ನು ಪರಿಕಿಸಲೋ ಅಥವಾ ಶಿಷ್ಯರನ್ನು ಅಳೆಯಲೋ ಅಥವಾ ಗುರುವಿನ ಮಟ್ಟವನ್ನು ತಿಳಿಯಲೋ ಎಂಬಂತೆ ವ್ಯಾಘ್ರವೊಂದು ಘರ್ಜಿಸುತ್ತಾ ಬಂತು. ಎಂಥಾ ಗುರು-ಶಿಷ್ಯರೂ ಒಮ್ಮೆ ಅವಕ್ಕಾಗುವ ಸಮಯ. ಗುರುವಿನ ಬಾಯಿಂದ ಬಂದಿದ್ದು ಒಂದೇ ಒಂದು ಮಾತು “ಹೊಯ್-ಸಳ” . ಸಳ ಎಂಬವನು ಶಿಷ್ಯ. ಆತ ನೆಚ್ಚಿನ ಶಿಷ್ಯನೇ ಇರಬೇಕು. ಆತ ಕತ್ತಿ ಹಿರಿಯಲಿಲ್ಲ. ಬಾಣ ಹೂಡಲಿಲ್ಲ. ಬಯಲಲ್ಲಿ ಗುರುಸಮ್ಮುಖದಲ್ಲಿ ಪಾರಾಯಣ ಮಾಡುತ್ತಿದ್ದವನಿಗೆ ಗುರುವಾಕ್ಯವೇ ಆಯುಧಕ್ಕಿಂತ ವೊನಚಾಯಿತು. ಸಳ ಬರಿಗೈಯಲ್ಲೇ ಕಾದ. ಗುರುವಾಕ್ಯ ಪೂರೈಸಿತು. ಹುಲಿ ಅಸುನೀಗಿತು. ಹೊಯ್ ಸಳ ಎಂದಿದ್ದ ಗುರುವೇ ಈಗ “ಭಲೇ ಸಳ” ಎಂದ. ಮುಂದೆ ಗುರುವಾಕ್ಯಬಲದಿಂದಲೇ ಯುವಕ/ಬಾಲಕ ಸಳ ರಾಜ್ಯ ಕಟ್ಟಿದ, ಆಳಿದ. ವಿದ್ಯೆಯ ಬಲ, ಗುರುವಿನ ಬಲ ಮತ್ತು ಶಿಷ್ಯನ ಅಂತಶಕ್ತಿಗೆ ಇವೆಲ್ಲಾ ಘಟನೆಗಳು ಸಾಕ್ಷಿಗಳಾಗಿ ನಿಲ್ಲುತ್ತವೆ. ಇದು ಕನ್ನಡದ ಇತಿಹಾಸದಲ್ಲಿ ದಾಖಲಾಗುವ ಮಹತ್ತರ ಪ್ರಸಂಗ. ಸ್ವಶಕ್ತಿಯಿಂದ , ಸ್ವಚಿಂತನೆಯಿಂದ ಸಾಮ್ರಾಜ್ಯವೊಂದು ಮೈದಾಳಿದ ಕಥೆ. ಹೀಗೆ ಕರ್ನಾಟಕ ಮರೆಯಲಾಗದ, ಸುವರ್ಣಯುಗವನ್ನು ಕಂಡ ಹೊಯ್ಸಳ ಸಾಮ್ರಾಜ್ಯಮುಂದೆ ಹಲವು ವೈಭವಗಳನ್ನು ಕಂಡಿತು. ಕನ್ನಡದ ಹಲವು ಕುರುಹುಗಳನ್ನು ಬಿಟ್ಟುಹೋಯಿತು. ಕರ್ನಾಟಕ ಶಿಲ್ಪ ಕಲೆಗಳ ಬೀಡಾಯಿತು. ಭೂಲೋಕದ ಸ್ವರ್ಗ ಎಂದು ಕವಿಗಳು ವರ್ಣಿಸುವಂತಾಯಿತು. ಕರ್ನಾಟಕ ನಾಟ್ಯ ಕಲೆಗಳ ನಾಡಾಯಿತು. ಸರ್ವಧರ್ಮ ಸಮನ್ವಯದ ನೆಲೆಯಾಯಿತು. ದ್ವಾರಸಮುದ್ರದ ಹೊಯ್ಸಳರು ಗಡಿಯಾಚೆಗಿನ ರಾಜರೊಂದಿಗೂ ಕಾದಾಡಿ ಕನ್ನಡದ ಹಿರಿಮೆಯನ್ನು ಸಾರಿದರು. ಆಧುನಿಕ ಪರಿಭಾಷೆಯಲ್ಲಿ ಹೇಳಬೇಕೆಂದರೆ ಕನ್ನಡದ ಮನಸ್ಸನ್ನು ಪ್ರಬಲವಾಗಿ ರೂಪಿಸಿದವರೇ ಹೊಯ್ಸಳರು. ಕರ್ನಾಟಕದಲ್ಲಿ ಶಿವ ದೇವಾಲಯಗಳು ಪ್ರಸಿದ್ಧವಾಗಿದ್ದೇ ವೈಷ್ಣವರಾಗಿದ್ದ ಹೊಯ್ಸಳರ ಕಾಲದಲ್ಲಿ ಎಂಬುದು ಇಂದಿನ ಕಾಲಮಾನದಲ್ಲೂ ಸೋಜಿಗ ಹುಟ್ಟಿಸುವ ಸಂಗತಿ.
ಇಂಥ ಎಷ್ಟೋ ಸಂಗತಿಗಳನ್ನು ಇತಿಹಾಸದ ಪುಟಗಳು ವಿವರಿಸುತ್ತಾ ಹೋಗುತ್ತವೆ. ಆ ಸಂಗತಿಗಳೆಲ್ಲವೂ ಹುಲಿಕೊಂದ ಸಳನ ವಂಶದ ವೈಭವಗಳು-ಕೊಡುಗೆಗಳು. ಇಷ್ಟೊಂದು ವೈಭವಶಾಲಿ, ಪರಾಕ್ರಮಶಾಲಿ,ಪರಿಶ್ರಮಶಾಲಿ ಸಾಮ್ರಾಜ್ಯಕ್ಕೆ ಬೀಜ ಹಾಕಿದ ಸಳ ನಿಜವಾದ ಕರ್ನಾಟಕದ ಹುಲಿ. ಪರಾಕ್ರಮದಲ್ಲಿ, ಗುರುವಾಕ್ಯ ಪರಿಪಾಲನೆಯಲ್ಲಿ , ಹಿಡಿದ ಸಂಗತಿಯನ್ನು ಪಾಲಿಸುವುದರಲ್ಲಿ , ಧರ್ಮ ಕಾರ್ಯದಲ್ಲಿ ,ಪರೋಪಕಾರದಲ್ಲೂ ಆತ ಹುಲಿ. ಅವನೊಬ್ಬನಿದ್ದ ಹುಲಿ. ಏಕ್ ಥಾ ಟೈಗರ್. ಹುಲಿ ಎಂದು ಕರೆದರೆ ಇವನನ್ನೇ ಕರೆಯಬೇಕು ಎಂಬ ಗುಣಲಕ್ಷಣ, ವ್ಯಕ್ತಿತ್ವವನ್ನು ಹೊಂದಿದ್ದ ಸಳ ರಾಜ್ಯ ಕಟ್ಟದೆ ಇನ್ನಾರು ಕಟ್ಟಿಯಾರು? ಆತನನ್ನಲ್ಲದೆ ಇನ್ನಾರನ್ನು ತಾನೇ ಹುಲಿ ಎಂದು ಕರೆಯಲಾದೀತು?
ಟೆಕ್ಕಿಗಳಿಂದ ಕನ್ನಡ ಹಾಸ್ಯ ನಾಟಕೋತ್ಸವ
ಪವನ್ ಪಾರುಪತ್ತೇದಾರ
ಪ್ರತಿದಿನ C++, Java,.net ಸರ್ವರ್ರುಗಳ ಮಧ್ಯೆ ಇರುವ ಸಾಫ್ಟ್ವೇರ್ ಇಂಜಿನಿಯರುಗಳ ತಂಡವೇ ರಂಗತಂತ್ರ. 2008ರಲ್ಲಿ ಸ್ಥಾಪಿತವಾದ ಈ ತಂಡ, ಹವ್ಯಾಸಿ ನಾಟಕಕಾರರನ್ನು ಹೊಂದಿದ್ದು, ಇಲ್ಲಿಯವರೆಗೂ 8 ಪ್ರದರ್ಶನಗಳನ್ನು ನೀಡಿದೆ. ಈ ಹವ್ಯಾಸಿ ಟೆಕ್ಕಿ ಕಲಾವಿದರು ತಮ್ಮ ಕಚೇರಿಯ ಬಿಡುವಿಲ್ಲದ ಸಮಯದ ಮಧ್ಯೆ, ತಮ್ಮ ವೀಕೆಂಡುಗಳನ್ನೆಲ್ಲ ಬದಿಗಿಟ್ಟು, ಬಹಳಷ್ಟು ಕಷ್ಟ ಪಟ್ಟು ಅಭ್ಯಾಸ ಮಾಡಿ, ಅಕ್ಟೋಬರ್ ತಿಂಗಳಲ್ಲಿ ನಿಮ್ಮ ಮುಂದೆ ಹಾಸ್ಯ ನಾಟಕೋತ್ಸವ ನಡೆಸಲು ಸಜ್ಜಾಗಿದ್ದಾರೆ.
ತಂಡದ ಮೇಷ್ಟ್ರು ಮಹದೇವ್ ಪ್ರಸಾದ್ ಯುವಪಡೆಯೊಂದನ್ನು ಸಜ್ಜು ಮಾಡಿಕೊಂಡಿದ್ದು, ನಾಟಕ ಪ್ರಿಯರಿಗೆ ನಗೆಯ ಹಬ್ಬದೂಟ ಬಡಿಸಲು ತಯಾರಿ ನಡೆಸುತಿದ್ದಾರೆ. ಲಾಕ್ ಔಟ್ ಅಲ್ಲ ನಾಕೌಟ್, ಶ್ರೀ ಕೃಷ್ಣ ಸಂಧಾನ ಮತ್ತು ಬಂಡ್ವಾಳವಿಲ್ಲದ ಬಡಾಯಿಯಂತಹ ಪ್ರಸಿದ್ಧ ಹಾಸ್ಯ ನಾಟಕಗಳನ್ನು ನಿಮ್ಮ ಮುಂದಿಡಲು ಕಾತುರದಿಂದ ಕಾಯುತಿದ್ದಾರೆ. ನಾಟಕ ಪ್ರಿಯರೆಲ್ಲ ಬಂದು ಸಾಫ್ಟ್ ವೇರ್ ಟೆಕ್ಕಿಗಳ ಪ್ರಯತ್ನವನ್ನು ಪ್ರೋತ್ಸಾಹಿಸಿ ಹರಸಬೇಕಾಗಿ ವಿನಂತಿ.
ನಾಟಕ ಪ್ರದರ್ಶನ ನಡೆಯುವ ದಿನಾಂಕಗಳು ಕೆಳಗಿನಂತಿವೆ.
ಅಕ್ಟೋಬರ್ 12 – ಶ್ರೀ ಕೃಷ್ಣ ಸಂಧಾನ
ಅಕ್ಟೋಬರ್ 13 – ಬಂಡ್ವಾಳವಿಲ್ಲದ ಬಡಾಯಿ
ಶ್ರೀ ಕೃಷ್ಣ ಸಂಧಾನ : ರಚನೆ : ವಿ ಎನ್ ಅಶ್ವಥ್
ವಿದ್ಯೆ ಇಲ್ಲದ ಹಳ್ಳಿ ಜನ ನಾಟಕ ಮಾಡಲು ಹೊರಟಾಗ ಎದುರಾಗುವ ಛಾಲೆಂಜುಗಳೇನು, ಅ ಹಳ್ಳಿ ಜನಕ್ಕೆ ನಾಟಕ ಹೇಳಿಕೊಡಲು ಬರುವ ಮೇಷ್ಟ್ರಿಗೆ ಅದರ ಅರಿವಿರೋದಿಲ್ಲ. ಬಂದು ಇವ್ರಿಗೆ ನಾಟಕ ಹೇಳಿಕೊಡಕ್ಕೆ ಶುರು ಮಾಡಿ ಗೆಜ್ಜೆಗ್ ಪೂಜೆ ಮಾಡ್ಸೋ ಅಷ್ಟ್ರಲ್ಲಿ ಮೇಷ್ಟ್ರು ಗೋಳು ಕೇಳಕ್ಕಾಗಲ್ಲ. ಅಂತಹ ಮೇಷ್ಟ್ರು ಮತ್ತೆ ಶಿಶ್ಯಂದಿರ ನಡುವೆ ನಡೆವ ನಗೆ ನಾಟಕ ಕೃಷ್ಣ ಸಂಧಾನ. ಈ ನಾಟಕ ಈಗಾಗ್ಲೆ ಕನ್ನಡದ ನಾಟಕ ಪ್ರಿಯರಿಗೆಲ್ಲ ಚಿರಪರಿಚಿತ. ಆದಕ್ಕೆ ಕಾರಣ ನಾಟಕದ ಪ್ರತಿಯೊಂದು ಸಾಲಿನಲ್ಲು ಇರುವ ನಗೆಮಿಠಾಯಿ ಅಂದ್ರೆ ತಪ್ಪಾಲ್ಲ ಬಿಡಿ. ನಾಟಕದ ಪ್ರತಿಯೊಂದು ಲೈನ್ ಸಹ ಪಂಚ್ ಲೈನ್. ನೀವೆಷ್ಟು ಬಾರಿ ನೋಡಿದರೂ ಬೇಜಾರಾಗದ ನಾಟಕ ಇದು. ಇಂತಹ ನಗೆಯ ರಸಾಯನ ಸಹ ರಂಗತಂತ್ರದ ಹಾಸ್ಯೋತ್ಸವದ ಕೊಡುಗೆ.








