ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ : ಬಣ್ಣದ ಬದುಕು 12 -ಯಕ್ಷಗಾನ ತಾಯಿಯ ಮಡಿಲಲ್ಲಿ ಬೆಳೆದ ಮಕ್ಕಳು
-ರಾಮಚಂದ್ರ ಪಿ
ಶಿರ್ವದಲ್ಲಿ ಆಟ ಮುಗಿದ ತರುವಾಯ, ಮುಂದಿನ ಪ್ರದರ್ಶನಕ್ಕೆ ನನಗೆ ಅವಕಾಶ ಕೊಡಿ ಎಂದು ಬೇಡುವ ಸಂದರ್ಭ ಬರಲೇ ಇಲ್ಲ. ನಾನು ಬಣ್ಣ ತೆಗೆಯುತ್ತಿದ್ದಲ್ಲಿಗೆ ಬಂದ ಕಟ್ಪಾಡಿಯ ಶ್ರೀ ಮುದ್ದು ಸುವರ್ಣರು ನಮ್ಮೂರಿಗೆ ಬನ್ನಿ ಎಂದು ವೀಳ್ಯ ಕೊಟ್ಟರು. ಅವರ ಹಿಂದೆಯೇ ಇನ್ನಿಬ್ಬರು ಬಂದರು. ಅವರಿಗಿಂತಲೂ ಮೊದಲೇ 3 ಆಟಗಳಿಗೆ ವೀಳ್ಯ ಪಡೆದಿದ್ದ ಫಲಿಮಾರಿಗೆ, ಮಾತು ಕೊಟ್ಟಂತೆ ಹೋಗಿ ಆಟಗಳನ್ನು ಆಡಿದೆವು.
ಅಲ್ಲಿಯೂ “ಬ್ರಹ್ಮ ಕಪಾಲ”. ಅದನ್ನು ನೋಡಲು ಉಡುಪಿ, ಮಲ್ಪೆ, ಕಲ್ಯಾಣಪುರಗಳಿಂದ ಜನರು ಬಂದಿದ್ದರು. ಅವರೆಲ್ಲ ಹಿಂತಿರುಗಿದಾಗ ಮಾಡಿದ್ದ ಪ್ರಚಾರವೇ ನಾವು ಕಟ್ಪಾಡಿ-ಕಾಪುಗಳ ಆಟ ಮುಗಿಸಿ, ಮಲ್ಪೆಯ ಸಮೀಪದ ಕ್ರೋಢಪುರಕ್ಕೆ (ಅದಕ್ಕೆ ಶಂಕರ ನಾರಾಯಣವೆಂಬ ಹೆಸರೂ ವಾಡಿಕೆಯಲ್ಲಿದೆ) ಬಂದಾಗ, ನಮಗೆ ಬಡಗು ನಾಡಿನಿಂದ ಅನಿರೀಕ್ಷಿತ ಸ್ವಾಗತವನ್ನು ಕೊಡಿಸಿತು.
“ವಿಶ್ವಾಮಿತ್ರ-ಮೇನಕೆ” ಮತ್ತು “ಕಂಸವಧೆ” ಎಂಬ ಎರಡು ಕಥಾಭಾಗಗಳನ್ನು ಇರಿಸಿಕೊಂಡು ಕ್ರೋಢಪುರದಲ್ಲಿ ನಾವು ಆಟವಾಡಿದೆವು. ಮೊದಲು ವಿಶ್ವಾಮಿತ್ರನಾಗಿಯೂ,ಅನಂತರ ಕೃಷ್ಣನಾಗಿಯೂ ಪಾತ್ರ ವಹಿಸಿದ ನಾನು, ಪ್ರೇಕ್ಷಕರ ಹರ್ಷಭರಿತ ಕರತಾಡನಗಳ ಆನಂದವನ್ನು ಅನುಭವಿಸುತ್ತಿದ್ದೆ. ಜನಸಮೂಹದಲ್ಲಿದ್ದ, ಅಲ್ಲಿನ ಪಂಡಿತರೊಬ್ಬರು ನಮಗೆಲ್ಲ ಹಾರ ಸಮರ್ಪಣೆ ಮಾಡಿದರು.
ನಡುವೆ, ಅಂತಹ ಕಾರಣದಿಂದ ಕೆಲವು ನಿಮಿಷಗಳ ಕಾಲ ಬಿಡುವು ದೊರೆತರೆ, ಮುಂದಿನ ಆಟ ನಡೆಯಲಿರುವ ಸ್ಥಳವನ್ನು ರಂಗಸ್ಥಳದಿಂದ ಕರೆದು ಹೇಳುವ ಪದ್ಧತಿ. ಮುಂದಿನ ಒಂದು ದಿನದ ವಿವರವನ್ನು ಸಾರಲೆಂದು ಹಾಸ್ಯಗಾರರು ರಂಗಸ್ಥಳವನ್ನು ಸೇರುವಾಗಲೇ ಅವರ ಕೈಗೆ ಆರು ಕಡೆಗಳ ಆಟ ನಿರ್ಣಯವಾದ ಚೀಟಿ ಸೇರಿತು. ಅವುಗಳನ್ನೂ ಹೇಳತೊಡಗಿದಾಗ ಇನ್ನೂ ಕೆಲವು ಸ್ಥಳಗಳೂ ತಾರೀಕುಗಳೂ ಸೂಚಿಸಲ್ಪಟ್ಟವು. ಬೇಡಿಕೆ ಹೆಚ್ಚುವ ಸೂಚನೆ ಕಂಡು ಬಂದಾಗ, ಮುಂದಿನ ಎಲ್ಲ (ನಿಶ್ಚಯವಾದ) ಆಟಗಳ ಕುರಿತು ಸ್ಥಳ ಮತ್ತು ತಾರೀಕುಗಳ ಒಂದು ಯಾದಿಯನ್ನು ತಯಾರಿಸಿ ಅವರ ಕೈಗೆ ಕೊಟ್ಟಾಗ, ಒಟ್ಟು 33 ಆಟಗಳು ನಿಶ್ಚಯವಾದುದು ಗೊತ್ತಾಯಿತು.
ಮತ್ತಷ್ಟು ಓದು 
ಶ್ರೀರಾಮುಲು ಪುರಾಣದೊಳ್ ಭಾಜಪದ ಅವಸ್ಥೆ….!!
-ಅರೆಹೊಳೆ ಸದಾಶಿವರಾವ್
ಇಡೀ ಕರ್ನಾಟಕದ ರಾಜಕೀಯ ನಕ್ಷೆಯ ಮೇಲೆ ತನ್ನ ಪ್ರಭಾವ ಬೀರಿ, ಒಂದು ಹಂತದಲ್ಲಿ ಪಕ್ಷದ ಹೈಕಮಾಂಡ್‌ನ್ನೂ ತನ್ನ ಬಿಗಿ ಹಿಡಿತದಲ್ಲಿಟ್ಟುಕೊಂಡಿದ್ದ ಬಳ್ಳಾರಿಯ ಕಥೆ ನೋಡಿ. ಇಂದು ತಮ್ಮಿಂದ ಉಪಕಾರ ಪಡೆದ ಎಲ್ಲರಿಗೂ ತಲೆನೋವಾಗಿ, ಉಪಚುನಾವಣೆಗೆ ಕಾರಣವಾಗಿ, ’ಬಹಿರಂಗ’ವಾಗಿ, ಅ ಕಾರಣವಾಗಿ ಭಾಜಪದಿಂದ ಡೈವೋರ್ಸ್ ಪಡೆದು, ಶ್ರೀರಾಮುಲು ನಡೆಸಿರುವ ಕಾರುಬಾರು, ಎಲ್ಲರ ಹುಬ್ಬೇರಿಸಿದೆ.
ಅಲ್ಲಿ, ಚಂಚಲಗೂಡಿನಲ್ಲಿ ಗಣಿಯ ಹಿರಿಧಣಿ,
ಪರಪ್ಪನ ಅಗ್ರಹಾರದಲ್ಲಿ ಭಾಜಪದ ಕಣ್ಮಣಿ!
ಈ ನಡುವೆ ಶ್ರೀರಾಮುಲುದ್ದೇ ಬೇರೆ ಹಣಾಹಣಿ.
ಈಗ ಬಳ್ಳಾರಿಗೆ ಮತ್ತೆ ಚುನಾವಣೆಯ ಸಗಣಿ!!!
ಈ ಸಗಣಿ ಎಂದ ಬಗ್ಗೆ ನಿಮಗೆ ಆಶ್ಚರ್ಯವಿರಬಹುದು. ಆದರೆ ಇದು ಶ್ರೀರಾಮುಲು ತಮ್ಮ ಮುಖಕ್ಕೆ ಮೆತ್ತಿದ ಸಗಣಿಯನ್ನು ಯಾರದ್ದೋ ಮುಖಕ್ಕೆ ಹಚ್ಚಿ, ಏನೋ ಮಾಡಲು ಹೊರಟಿದ್ದಾರೆ. ಇನ್ನುಳಿದ ಕೇವಲ ಅಲ್ಪ ಸಮಯಕ್ಕೆ ಅಲ್ಲಿ ಚುನಾವಣೆಯ ಕಾವೇರುವಂತೆ ಮಾಡಿದ ಶ್ರೀರಾಮುಲು ಒಂದು ರೀತಿಯಲ್ಲಿ ತನ್ನ ಆಪ್ತ ಜನಾರ್ದನ ರೆಡ್ಡಿಯೊಂದಿಗೆ ಸೇರಿಕೊಂಡು, ರಾಜ್ಯಕ್ಕೆ ಸಾಲು ಸಾಲಾಗಿ ಉಪಚುನಾವಣೆಗಳನ್ನೇ ತಂದವರು ಎಂಬುದು ಗಮನಾರ್ಹ!. ಇನ್ನೇನು ಸರಕಾರ ರಚನೆಗೆ ಅಣಿಯಾಗಬೇಕು ಎಂದು ಭಾಜಪ ಶಾಲು ಕೊಡವಿಕೊಳ್ಳುವಷ್ಟರಲ್ಲಿ ಎದುರಾದದ್ದು ಬಹುಮತದ ಕೊರತೆ. ಆಗ ಪಕ್ಷೇತರರಿಗೆ ಲಾಟರಿ ಹೊಡೆಸಿ, ಅವರನ್ನು ಹೆಲಿಕಾಪ್ಟರ್‌ನಲ್ಲಿಯೇ ತಂದು, ಖರೀದಿಸಿ ಸರಕಾರ ರಚಿಸಿದ ನಂತರ, ’ಆಪರೇಷನ್ ಕಮಲ’ದ ಆಮಿಷದ ಹಬ್ಬ. ಈ ಮೂಲಕ ಮತ್ತೆ ಮತ್ತೆ ಉಪಚುನಾವಣೆಗಳನ್ನು ಬೇರೆ ಬೇರೆ ಕ್ಷೇತ್ರದಲ್ಲಿ ಜನತೆಯ ಮೇಲೆ ಹೇರಿದ್ದು, ಇದೇ ರೆಡ್ಡಿ ಮತ್ತು ಕಂಪೆನಿ.
ಮತ್ತಷ್ಟು ಓದು 
ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ : ಬಣ್ಣದ ಬದುಕು 11 -ಮದ್ದಿಗೆ ಒದಗಿದ ಸಿದ್ದೌಷದ…..
ವೆಂಕಟರಮಣ ಭಟ್ಟರನ್ನು ಮೂಡಬಿದರೆಗೆ ಕರೆತರಲು ಜನ ಕಳುಹಿಸಿದೆ. ಅವರು ಬಂದರು.
“ಏನಾಗಬೇಕಿತ್ತು, ಜ್ಞಾನದಾಸಕ್ತನೇ, ಆನು ಬಂದುದರಿಂದ ಆಗಲೇನಿಹುದು?” ಎಂದರು. ಪ್ರಾಸಬದ್ಧವಾಗಿ ಮಾತನಾಡುವುದು ಅವರಿಗೊಂದು ಶ್ರಮದ ಕಾರ್ಯವಲ್ಲ.
ಕಾಗದ ಲೇಖನಿಗಳನ್ನು ಸಿದ್ಧವಾಗಿರಿಸಿಕೊಂಡೇ, ಅವರಲ್ಲಿ ನನ್ನ ಅಗತ್ಯಗಳನ್ನು ವಿವರಿಸಿದೆ.
ಪ್ರಸಂಗ ರಚನೆ
“ಹೂಂ ಬರೆದುಕೊಳ್ಳಿ” ಎಂಬ ಅಪ್ಪಣೆ ಆಯಿತು.
ನಾನು ಬರೆದುಕೊಳ್ಳತೊಡಗಿದೆ.
ಮತ್ತಷ್ಟು ಓದು 
ಬೈಲೂರ ಬಸ್ಸು ಹತ್ತಿ
ಪ್ರಶಸ್ತಿ.ಪಿ, ಸಾಗರ
ಮನೇಲಿ ಕಾರ್ಯಕ್ರಮ ಇದೆ, ಬರಲೇ ಬೇಕು ಅಂತ ಕರೆದಿದ್ರು ಅನ್ಸತ್ತೆ. ಹನ್ನೊಂದೂಕಾಲಿಗೆ ಹಸಿರು ಬಣ್ಣದ ಬಸ್ಸು ಬರತ್ತೆ , ಅದ್ರಲ್ಲಿ ಬಾ ಅಂತ ಸೂಚನೆ. ಸರಿ, ವಿಶ್ವಾಸದ ಮೇಲೆ ಕರೆದ ಮೇಲೆ ಬಿಡೋಕಾಗತ್ತಾ? ಹೂಂ ಜೈ ಅಂತ ಹನ್ನೊಂದ್ಘಂಟೆಗೇ ಬಸ್ಟಾಂಡಲ್ಲಿ ಹಾಜರು.ಎಲ್ಲಿಳ್ಯದು, ಯಾವ ಬಸ್ಸು ಎಂತನೂ ಗೊತ್ತಿಲ್ಲ. ಫೋನಲ್ಲಿ ಕೇಳಿದ್ದಷ್ಟೆ. ಹೋಗ್ಬೇಕಾಗಿರೋ ಊರ ಹೆಸ್ರನ್ನೇಳಿ ಕಂಡಕ್ಟ್ರಣ್ಣಂಗೆ ಕೇಳ್ದಾಗ “ಬೇಲೂರು ಗಾಡಿ ಬರತ್ತೆ ಹನೊಂದು ಕಾಲಿಗೆ. ಅದ್ರಲ್ಲೋಗಿ” ಅಂದ. ನಾ ಹೋಗ್ಬೇಕಾಗಿದ್ದು ಸೈದೂರು ದಾರಿ. ಬೇಲೂರಿಗೂ ಸೈದೂರಿಗೂ ಎಲ್ಲಿಂದೆಲ್ಲಿ ಸಂಬಂಧ ಅಂತ ಅರ್ಥ ಆಗ್ಲಿಲ್ಲ.ಹಂಗಂತಾ? ಗಣೇಶ ಸ್ಟೈಲಲ್ಲಿ ತಲೆ ಕೆರ್ಕಳಕೆ ಆಗತ್ತಾ? ಅದೂ ಬಸ್ಟಾಂಡ್ ಬೇರೆ 🙂
ಹನ್ನೊಂದು ಕಾಲಾಯ್ತು. ಬಂದಿರ್ಲಿಲ್ಲ ಬಸ್ಸು. ಬಿಸಿಲು ಬೇರೆ ಏರ್ತಾ ಇತ್ತು. ಬಸ್ಟಾಂಡಲ್ಲೊಂದು ಅಂಗಡಿ ಎದ್ರಿದ್ದ ನೆರಳಲ್ಲಿ ಜಾಗ ಖಾಲಿ ಇತ್ತು. ನಂತರನೇ ನೆರಳನರಸಿ ಸುಮಾರು ಜನ್ರಿದ್ರು ಬಿಡ್ರಿ.. ಕಾದ ತಗಡ ಶೀಟು. ಕೆಳಗೆ ನಾನು. ಕೇಳಬೇಕೆ? ಸೆಖೆ ಹೊಡ್ತ. ಬೆವ್ರೊರ್ಸದು, ಗಡಿಯಾರ ನೋಡದು ಇದೇ ಕೆಲ್ಸ ಆಯ್ತು. ಹನ್ನೊಂದು ಇಪ್ಪತ್ತೈದು. ಅಲ್ಲಿದ್ದೋರಲ್ಲಿ ಅನ್ಸತ್ತೆ ಊರಿಗೋಗೋರೂ ಇದ್ರು ಹೇಳೋದು ಅವರ ಮಾತಿಂದ ಗೊತ್ತಾಯ್ತು. ಇದ್ದಿದ್ರಲ್ಲಿ ಅದೊಂದು ಸಮಾಧಾನ. ಅದೇ ಊರಿಗಂತೂ ಹೋಗ್ತಾರೆ. ಅವ್ರ ಮನೇಗೆ ಹೋಗ್ಬೋದು ಅಂತ ಮನ್ಸು ಹೇಳಕ್ಕಿಡೀತು. ಆದ್ರೂ ಕೇಳಕ್ಕೆ ಬಾಯಿ ಬರ್ಲಿಲ್ಲ. ಫಿಲ್ಮಲ್ಲಿ ಹೀರೋಗೆ ಹೀರೋಯಿನ್ ಎದ್ರು ಮಾತು ಬರಲ್ವಲ ಹಂಗೆ ಅಂದ್ಕಂಡ್ರಾ? ಥೋ..ಅವ್ರೆಲ್ಲಾ ವಯಸ್ಸಾದವ್ರು 🙂 ಮತ್ತಷ್ಟು ಓದು 
ಮುಂದಿದೆ ಮಾರಿ ಹಬ್ಬ : ಯಡಿಯೂರಪ್ಪ ಅವರ ಮುಂದಿನ ರಾಜಕೀಯ ನಡೆಯೇನು?
-”ಸಿದ್ಧಾರ್ಥ ”
೨೪ ದಿನಗಳ ಸೆರೆಮನೆ ವಾಸದ ನಂತರ ಅಂತೂ ಇಂತೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದಾರೆ. ಇದನ್ನೇ ಒಂದು ವಿಜಯೋತ್ಸವವೆಂಬಂತೆ ಅವರ ಬೆಂಬಲಿಗರು ಬಾಣ ಬಿರುಸು, ಪಟಾಕಿಗಳನ್ನು ಸಿಡಿಸಿ ಹರ್ಷಿಸಿದ್ದಾರೆ. ಯಡಿಯೂರಪ್ಪ ಅವರು ದೇಗುಲಗಳ, ಮಠಗಳ ದರ್ಶನ ಕಾರ್ಯದಲ್ಲಿ ಮುಳುಗಿದಂತೆ ನಟಿಸುತ್ತಿದ್ದರು, ಅವರ ಅಂತರ್ಯ್ಯದಲ್ಲಿ ಮುಕ್ಕಾಗಿ ಹೋದ ವೈಬವವನ್ನು, ಅಧಿಕಾರವನ್ನು ಮರಳಿ ಪಡೆಯುವುದು ಹೇಗೆ ಎಂಬ ಲೆಕ್ಕಾಚಾರದಲ್ಲಿ ನಿರತರಾಗಿದ್ದಾರೆ. ಅದಕ್ಕೆ ಪೂರಕವೆನ್ನುವಂತೆ ಅವರ ಆಪ್ತ ಮಂತ್ರಿಗಳನೇಕರು ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಕಾರಣೀಭೂತರಾದ ಯಡಿಯೂರಪ್ಪನವರೇ ಪಕ್ಷದ ಪ್ರಶ್ನಾತೀತ ನಾಯಕರು ಆದ್ದರಿಂದ ಅವರನ್ನೇ ರಾಜ್ಯದ ಪಕ್ಷಾದ್ಯಕ್ಷರನ್ನಾಗಿ ಮಾಡಿ ಎಂಬ ಬೆದರಿಕೆ ರೂಪದ ಒತ್ತಡವನ್ನು ಹೈಕಮಾಂಡ್‌ಗೆ ರವಾನಿಸಿದ್ದಾರೆ.
ಸೆರಮನೆ ವಾಸ, ಅದೆಷ್ಟೇ ಅಲ್ಪಾವಧಿಯಾದಾಗಿರಲಿ ಅದಷ್ಟೇ ಸುಖ ವೈಬೋಗಗಳಿಂದ ಕೂಡಿರಲಿ, ಮಾನಸಿಕವಾಗಿ ಅದು ಸೆರಮನೆ ವಾಸವೇ. ಪರಿಸ್ಥಿತಿಯ ಶಿಶುವಾಗಿ ತಮ್ಮದಲ್ಲದ ತಪ್ಪಿಗೆ ಸೆರಮನೆ ವಾಸ ಕಂಡ ಯಡಿಯೂರಪ್ಪನವರಿಗೆ ಕಡ್ಡಾಯ ಬಂದನ ಒಂದು ರೀತಿಯಲ್ಲಿ ಪಾಠವಾಗಬೇಕಾಗಿತ್ತು. ಸಾಮಾನ್ಯವಾಗಿ ಸೆರೆಮನೆಯಲ್ಲಿ ಸಿಗುವ ಏಕಾಕಿತನದಲ್ಲಿ ವ್ಯಕ್ತಿಯೊಬ್ಬರ ಮನಸ್ಸು ಹಲವು ಬದಲಾವಣೆಗೆ ಒಳಪಡುತ್ತದೆ. ಸರಿ ತಪ್ಪುಗಳ ವಿಮರ್ಶೆಯ ಆತ್ಮಾವಲೋಕನಕ್ಕೆ ಅದು ಸಕಾಲವಾಗುತ್ತದೆ. ಕೆಲವೊಮ್ಮೆ ಏಕಾಂಗಿ ತನದಲ್ಲಿ ವ್ಯಕ್ತಿಯ ಮನಸ್ಸು, ಪ್ರತಿಭೆ ಅರಳುತ್ತದೆ. ಮತ್ತಷ್ಟು ಓದು 
ಯಡಿಯೂರಪ್ಪ ರಾಜಕೀಯದಲ್ಲಿ ‘ಮಾಜಿ’ ಆಗಿದ್ದಾರೆಯೇ?
-‘ಸಿದ್ಧಾರ್ಥ‘
೩೩ ವರ್ಷಗಳ ವೃತ್ತಿ ಜೀವನದಲ್ಲಿ ಅರ್ಧಾಂಶಕ್ಕೂ ಹೆಚ್ಚು ಕಾಲ ಅಧಿಕಾರಕ್ಕೆ ರಾಜಕಾರಣಿಗಳ ಪತ್ರಿಕಾ ಕಾರ್ಯದರ್ಶಿಯಾಗಿ ಆಪ್ತ ಸಿಬ್ಬಂದಿ ವರ್ಗದಲ್ಲಿ ಕೆಲಸ ಮಾಡಿರುವ ನನಗೆ ಅಧಿಕಾರ ತರುವ ಸಂತೋಷ, ಅಧಿಕಾರ ತ್ಯಾಗದಿಂದ ಬರುವ ವಿಷಾದ ಎರಡನ್ನೂ ಅತೀ ಸಂಮೀಪದಿಂದ ನೋಡಿ ಅನುಭವಿಸುವ ಅವಕಾಶ ಸಿಕ್ಕಿದೆ. ಅಧಿಕಾರ ಹೋದ ಕೂಡಲೇ, ಚುನಾವಣೆ ಸೋತ ಕೂಡಲೇ, ಆಕಾಶವೇ ಕಳಚಿ ಬಿದ್ದಂತೆ ಮೂಲೆಗೆ ಬೀಳುವ ರಾಜಕಾರಣಿಗಳನ್ನು, ಹೋದದ್ದು ಅಧಿಕಾರ ತಾನೇ? ಎಂದು sportive DV ಆಗಿ ನಗು ಮುಖ ಧರಿಸುವ ಧುರೀಣರನ್ನು ನೋಡಿದ್ದೇನೆ. ಹೊಟ್ಟೆಯಲ್ಲಿನ ನೋವು, ಮತ್ಸರ, ಈರ್ಷೆಗೆ ಸಿಲುಕಿ ಉತ್ತರಾಧಿಕಾರಿಯ ಪ್ರಮಾಣ ವಚನ ಸಮಾರಂಭಕ್ಕೆ ಗೈರುಹಾಜರಾದ ನಿರ್ಗಮಿತ ಮುಖ್ಯಮಂತ್ರಿಗಳನೇಕರನ್ನು ನೋಡಿದ್ದೇನೆ. ಅಧಿಕಾರ ಗ್ರಹಣದ ನಂತರ ಖುದ್ದಾಗಿ ಕಛೇರಿಗೆ ಕೊಂಡೊಯ್ದು ಪ್ರತಿಷ್ಠಾಪಿಸಿ ಶುಭ ಹಾರೈಸಿ ಹಗುರ ಹೃದಯದೊಂದಿಗೆ ಖಾಸಗಿ ವಾಹನದಲ್ಲಿ ಮನೆಗೆ ತೆರಳಿದ ವಿವೇಕಿಗಳನ್ನು, ಸಾಮಾನ್ಯ ಶಾಸಕರಾಗಿ ಅತೀವ ಉತ್ಸ್ಸಾಹ ದಿಂದ ಶಾಸನ ಸಭೆಗೆ ಮರಳಿ ಕ್ರಿಯಾತ್ಮಕವಾಗಿ ಕಲಾಪಗಳಲ್ಲಿ ಭಾಗವಹಿಸಿ ಮಾರ್ಗದರ್ಶನ ಮಾಡಿದ ಹಿರಿಯರನೇಕರ ಮಾತುಗಳು ನನ್ನ ಕಿವಿಗಳಲ್ಲಿ ಇನ್ನೂ ರಿಂಗಣಿಸುತ್ತಿವೆ.
ಇವೆಲ್ಲವೂ ನೆನಪಾದದ್ದು ಯಡಿಯೂರಪ್ಪನವರು ಅಧಿಕಾರ ಕಳೆದುಕೊಂಡ ಮರುಕ್ಷಣವೇ ಅವರ ಮನೆಯ ಮುಂದೆ ತುಂಬಿದ್ದ ಗೋಜುಗೋಜು ಜನ ಜಂಗುಳಿ ಏಕಾಏಕಿ ಮಾಯವಾದಾಗ. ಅಧಿಕಾರ ತರುವ ಜನ ಭಾಹುಳ್ಯವನ್ನು ಅಧಿಕಾರ ನಂತರದ ಜನ ವಿಯೋಗವನ್ನು ಪತ್ರಿಕೆಯೊಂದು ಛಾಯಾಚಿತ್ರಗಳ ಮೂಲಕ ಸಮರ್ಥವಾಗಿ ಪ್ರತಿಬಿಂಬಿಸಿತ್ತು. ಗಾದೆ ಮಾತೇ ಇಲ್ಲವೇ. ನಗುವಾಗ ಎಲ್ಲ ನೆಂಟರು ಅಳುವಾಗ ಯಾರೂ ಇಲ್ಲ.
ಭಾವುಕರಾಗೋಣ ಬನ್ನಿ!
-ಸಂತೋಷ್

ಮನುಷ್ಯನ ಜೀವನಕ್ಕೆ ಭಾವನೆಗಳು ಎಷ್ಟು ಮುಖ್ಯ? ಎಂದು ಕೇಳಿದರೆ ನಾನು ಕೋಡುವ ಉತ್ತರ ಖಂಡಿತ ಅವು ಮನುಷ್ಯನ ಜೀವನದ ಅವಿಭಾಜ್ಯ ಅಂಗವೆಂದು.ಭಾವನೆಗಳಿಲ್ಲದ ಮನುಷ್ಯ ಏನನ್ನು ಸಾದಿಸಲಾರ.ನಿಜವಾಗಲು ಭಾವನೆಗಳೇ ಮನುಷ್ಯನ ಜೀವನದ ದಾರಿದೀಪಗಳು.ಇದಕ್ಕೆಲ್ಲ ಅಪವಾದವೆಂಬಂತೆ,ನಮ್ಮಲ್ಲಿ ಹುಟ್ಟುವ ಸೂರ್ಯನನ್ನ,ಅರಳುವ ಗುಲಾಭಿಯನ್ನು,ಸುರಿಯುವ ಮಳೆಯನ್ನು,ಆಕಾಶದಲ್ಲಿ ಮೂಡುವ ಬಣ್ಣ ಬಣ್ಣದ ಚಿತ್ತಾರವನ್ನು,ರಂಗು ರಂಗಾಗಿ ಕಾಣುವ ಕಾಮನ ಬಿಲ್ಲನು ನೋಡಿ ಮುದಗೋಳದ ಕುಂಬಕರ್ಣರು ಇದ್ದಾರೆ!ಇದರ ಬಗ್ಗೆ ಅವರದೆಲ್ಲ ದಿವ್ಯ ನಿರ್ಲಕ್ಷೆ.
ಆದರೇ ಹಾಗೇ ನಿದ್ದೆ ಮಾಡುವ ಅವರು ಭಾವುಕತೆಯ ಸುಂದರ ಅನುಭವವನ್ನು ಕಳೆದುಕೋಳುತಾರೆ ಎಂಬುದೇ ನನ್ನ ಭಾವನೆ.ಕಡೇ ಪಕ್ಷ ಈ ಪ್ರಬಂದವನ್ನು ಓದಿದ ನಂತರವಾದರು ಅಂತ ಕುಂಬಕರ್ಣರು ನಿದ್ದೆಯಿಂದ ಎಚ್ಚೆತ್ತುಕೊಂಡರೆ ಸಂತೋಷ ಇಲ್ಲದಿದ್ದರೆ ನಾವು ನೀವು ಏನು ಮಾಡಕ್ಕೆ ಆಗುತ್ತೆ ಅವರನ್ನು ಅವರ ಪಾಡಿಗೆ ಬಿಡುವುದೇ ಸೂಕ್ತ.
ಭಾವುಕನಾದವನು ಸದ ಹೊಸತ್ತನ್ನೆ ಅನ್ವೇಷಣೆ ಮಾಡುತ್ತ ಇರುತ್ತಾನೆ.ಅವನು ಪ್ರಕೃತಿಯೊಂದಿಗೆ ಒಂದು ರೀತಿಯ ಸಂವಾದವನ್ನು ಸಮಾನತೆಯನ್ನು ಸಾದಿಸುತ್ತಾನೆ.ನಿಮ್ಮ ಕಣ್ಣಿಗೆ ಒಂದು ಸುಂದರ ಹೂವು ಅರಳಿ ನಿಂತಾಗ ಭಾವುಕನಾದವನ್ನು ಅದರ ಅರಳುವಿಕೆಯನ್ನು ನೆನೆದು ನೆನೆದು ಪುಳಕಗೋಳ್ಳುತದತ್ತಾನೆ.ಅದg ಬಣ್ಣಗಳನ್ನು ತನ್ನ ಕೈಯಿಂದ ಒರೆಸಿ ನೋಡುತ್ತಾನೆ. ಅದರ ಸುವಾಸನೆಗಾಗಿ ತನ್ನ,ಮೂಗನ್ನು ಅದರ ಬಳಿ ಕೊಂಡಯ್ಯತ್ತಾನೆ.ಧೀರ್ಘವಾದ ಉಸಿರನ್ನು ಏಳೆದುಕೊಂಡು ಅದರ ಸುವಾಸನೆಯನ್ನು ಆಸ್ವಾದಿಸುತ್ತಾನೆ.ಕೊನೆಗೆ ಆ ಹೂವಿನಿಂದ ಬಿಳ್ಕೋಡುವಾಗ ಆ ಹೂವಿಗೆ ಒಂದು ಹೂ ಮುತ್ತನ್ನು ನೀಡಿದರೇ ಅವನು ಭಾವುಕ ಎನಿಸಿಕೊಳ್ಳುತ್ತಾನೆ.
ಕರ್ನಾಟಕದಲ್ಲಿ ಬೇಲಿಯೇ ಎದ್ದು ಹೊಲ ಮೈಯುತ್ತಿದೆ ನೋಡ್ರಣ್ಣಾ.!
ಮಹೇಶ್ ಎಂ. ಆರ್.
ನಿಯಮಗಳು ಮಾಡುವುದೇ ಮುರಿಯೋದಕ್ಕೆ ಎಂಬ ಮಾತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಒಪ್ಪುತ್ತದೆ. ಅನೇಕ ಬಾರಿ ಕರ್ನಾಟಕ ಚಲನಚಿತ್ರ ಮಂಡಳಿ ವಿದಿಸಿದ ನಿಯಮಗಳನ್ನು ಪರಬಾಶೆ ಚಿತ್ರಗಳ ವಿತರಕರು ಗಾಳಿಗೆ ತೂರಿರುವುದನ್ನು ನಾವು ಕಾಣಬಹುದು. ಈ ಹಿಂದೆ ಹಿಂದಿಯ ರಾವಣ, ಕೈಟ್ಸ್, ತೆಲುಗಿನ ದೂಕುಡು, ಊಸರವಳ್ಳಿ ಚಿತ್ರ ಬಿಡುಗಡೆ ಸಮಯದಲ್ಲಿ ಈ ನಿಯಮಗಳನ್ನು ಪಾಲಿಸಲಾಗಿಲ್ಲ. ಅದೇ ಪರಿಪಾಠ ಈ ಸಲದ ದೀಪಾವಳಿ ಸಮಯದಲ್ಲೂ ಮುಂದುವರೆದಿದೆ. ಆದರೆ ಈ ಬಾರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೇ ಮುಂದೆ ನಿಂತು, ತಾನು ಸ್ವತ: ಮಾಡಿದ ನಿಯಮಗಳನ್ನು ಹಿಂದಿಯ ರಾ ವನ್, ತಮಿಳಿನ ವೆಲಾಯುದಂ, ೭ ಅಮ್ ಅರಿವು ಚಿತ್ರಗಳ ಮೂಲಕ ಕಸದ ಬುಟ್ಟಿಗೆ ಎಸೆದಿದೆ. ಮಂಡಳಿಯ ಸಲಹಾ ಸಮಿತಿ ಸದಸ್ಯರು ಈ ಮೂರು ಚಿತ್ರಗಳನ್ನು ಕರ್ನಾಟಕದಲ್ಲಿ ನಿಯಮ ಮೀರಿ ಬಿಡುಗಡೆಗೊಳಿಸಲು ಅನುಮತಿ ನೀಡಿದ್ದಾರೆ ಎಂಬ ಸುದ್ದಿ ಇತ್ತೀಚಿಗೆ ಡೆಕ್ಕನ್ ಹೆರಾಲ್ಡಿನಲ್ಲಿ ಪ್ರಕಟವಾಗಿತ್ತು. (The members of the advisory board of the Karnataka Film Chamber of Commerce (KFCC) have consented to the release of Ra. One, Velayudham, and 7 Aum Arivu during Deepavali this week. And because of this no Kannada films are releasing this week.) ಇದು ಆಶ್ಚರ್ಯವಾದರೂ ಸತ್ಯ. ಕನ್ನಡ ಚಿತ್ರರಂಗದ ಏಳಿಗೆಗೆ ಸಲಹೆಗಳನ್ನು ನೀಡಬೇಕಾದ ಮಂಡಳಿಯ ಸಲಹಾ ಸಮಿತಿ ಸದಸ್ಯರು ಪರಬಾಶೆ ಚಿತ್ರಗಳನ್ನು ನಿಯಮ ಮೀರಿ ಬಿಡುಗಡೆ ಮಾಡುವಂತೆ ಸಲಹೆ ಮಾಡಿದ್ದಾರೆ.! ಕನ್ನಡ ಚಿತ್ರಗಳ ಮಾರುಕಟ್ಟೆ ಬೆಳೆಸುವ ಬಗ್ಗೆ ಸಲಹೆ ನೀಡಬೇಕಾದವರಲ್ಲಿ ಕೆಲವರು ಪರಬಾಶೆ ಚಿತ್ರ ವಿತರಣೆ ಹಕ್ಕನ್ನು ಪಡೆದುಕೊಂಡು, ಕನ್ನಡ ಚಿತ್ರಗಳು ಬಿಡುಗಡೆ ಆಗದ ಹಾಗೆ, ಈಗಾಗಲೇ ಬಿಡುಗಡೆ ಆದ ಚಿತ್ರಗಳಿಗೆ ಚಿತ್ರಮಂದಿರ ಸಿಗದ ಹಾಗೆ ಪರಿಸ್ಥಿತಿ ನಿರ್ಮಿಸಿ ಕನ್ನಡ ಚಿತ್ರರಂಗದ ಬಗೆಗಿನ ತಮ್ಮ ಇಚ್ಚಾಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಇದು ಚಲನಚಿತ್ರ ಮಂಡಳಿಯ ಕರ್ಮಕಾಂಡ.
ಸಂದರ್ಭ ಸಹಿತ ಕುವೆಂಪು ಕವನಗಳ ಸೊಗಸು
ಬಿ ಅರ್ ಸತ್ಯನಾರಾಯಣ
ನಾನು ಚಿಕ್ಕವನಿದ್ದಾಗ ರೇಡಿಯೋದಲ್ಲಿ ಬರುತ್ತಿದ್ದ ಬೇಂದ್ರೆಯವರ ’ನೀ ಹೀಂಗ ನೋಡಬ್ಯಾಡ ನನ್ನ’ ಎಂಬ ಹಾಡನ್ನು ಅದೊಂದು ಪ್ರೇಮಗೀತೆ ಎನ್ನವಂತೆ ಭಾವಿಸಿದ್ದೆ. ಆಗಿನ್ನೂ ನನಗೆ ಇಡೀ ಕವಿತೆಯ ಪಾಠವನ್ನು ಗಮನಿಸುವ ವ್ಯವಧಾನವೂ ಇರಲಿಲ್ಲ. ಓದಿಯೂ ಇರಲಿಲ್ಲ. ನಂತರ ಆ ಕವಿತೆ ಹುಟ್ಟಿದ ಸಂದರ್ಭ ಸನ್ನಿವೇಶ, ಪೂರ್ಣಪಾಠ ಮೊದಲಾದವುಗಳು ದೊರೆತ ಮೇಲೆ ಅದು ನನಗೆ ದಕ್ಕಿದ, ತಟ್ಟಿದ ರೀತಿಯೇ ಬೇರೆ!
ಇದನ್ನು ಏಕೆ ಹೇಳಿದೆನೆಂದರೆ, ಒಂದು ಕವಿತೆ ಹುಟ್ಟಿದ ಸಂದರ್ಭ ಸನ್ನಿವೇಶ ಗೊತ್ತಿದ್ದಾಗ ಆ ಕವಿತೆ ನಮ್ಮ ಮೇಲೆ ಬೀರುವ ಪ್ರಭಾವವೇ ಬೇರೆ. ಏನೂ ಗೊತ್ತಿಲ್ಲದೆ ಒಂದು ಕವಿತೆಯನ್ನು ಓದಿದಾಗ ಆಗುವ ಪರಿಣಾಮವೇ ಬೇರೆ. ಅದು ಹುಟ್ಟಿದ ಸಂದರ್ಭವು ಗೊತ್ತಿರದ ಓದುಗನ ಮೇಲೆ ತೀವ್ರತರವಾದ ಬೇರೆ ಬೇರೆಯದೇ ಆದ ಪರಿಣಾಮವನ್ನು ಕವಿತೆ ಉಂಟು ಮಾಡುತ್ತದೆ, ನಿಜ. ಆದರೆ ಕವಿತೆ ಹುಟ್ಟಿದ ಸಂದರ್ಭ ಗೊತ್ತಿದ್ದಾಗ ಅದಕ್ಕೊಂದು ಹೆಚ್ಚುವರಿ ಸೊಬಗು ಇರುತ್ತದೆ ಎಂಬುದು ನಿಜ. ಅದಕ್ಕಿಂತ ಹೆಚ್ಚಾಗಿ ಆ ಕವಿತೆ ನಮ್ಮನ್ನು ತಡೆಹಿಡಿದು, ನಿಲ್ಲಿಸಿ, ಓದಿಸಿಕೊಳ್ಳುತ್ತದೆ. ಜೊತೆಗೆ ಚಾರಿತ್ರಿಕವಾಗಿ ಕವಿತೆಗೆ ಹೆಚ್ಚಿನ ಮಹತ್ವ ದೊರೆಯುತ್ತದೆ.
ಒಂದು ಕಲಾಕೃತಿ ಹೆಚ್ಚು ಪರಿಣಾಮಕಾರಿಯಾಗಲು ಚಾರಿತ್ರಿಕ ಅಂಶಗಳು ಕೆಲಸ ಮಾಡುತ್ತವೆ. ತೇಜಸ್ವಿ ತಮ್ಮ ’ವಿಮರ್ಶೆಯ ವಿಮರ್ಶೆ’ ಪುಸ್ತಕದಲ್ಲಿ ಒಂದು ಕಡೆ ಇದರ ಮಹತ್ವವನ್ನು ದಾಖಲಿಸಿದ್ದಾರೆ. ಅಬಚೂರಿನ ಪೋಸ್ಟಾಫೀಸು ಕಥಾಸಂಕನದಲ್ಲಿರುವ ’ಅವನತಿ’ ಮತ್ತು ’ತಬರನ ಕಥೆ’ ಎರಡು ಕಥೆಗಳಲ್ಲಿ ’ಅವನತಿ’ ಕಲಾತ್ಮಕವಾಗಿ ಶ್ರೇಷ್ಟಕೃತಿ. ಆದರೆ, ಚಾರಿತ್ರಿಕ ಸಂದರ್ಭಗಳಿಂದ ’ತಬರನ ಕಥೆ’ಗೆ ಹೆಚ್ಚು ಪ್ರಚಾರ, ಯಶಸ್ಸು ದೊರೆಯಿತು. ಮತ್ತಷ್ಟು ಓದು 
“ನನ್ನೂರು ಕೊಳ್ಳೇಗಾಲ …!!! ಹೆದರಿಕೊಳ್ಳಬೇಡಿ… ಮಾಟ-ಮಂತ್ರಕ್ಕೆ ಪ್ರಸಿದ್ಧಿ ಅಲ್ಲ…!”
-ಮೋಹನ್ ವಿ.ಬಬ್ಲಿ, ಚಿಕ್ಕಮಗಳೂರು
ಕೊಳ್ಳೇಗಾಲ ಎಂಬ ಹೆಸರು ಕೇಳಿದರೆ ಸಾಕು ಇಡೀ ಕರ್ನಾಟಕವೇ ಬೆಚ್ಚಿಬೀಳುತ್ತದೆ. ‘ಕೊಳ್ಳೇಗಾಲದವರು ನಾವು’ ಎಂದುಬಿಟ್ಟರೆ ಸಾಕು ಸುತ್ತಲಿನವರ ಕಣ್ಣು ಕಿವಿ ಅರಳುತ್ತದೆ. ಕೊಳ್ಳೇಗಾಲದ ಒಂದು ರುಪಾಯಿಯ ಒಂದು ನಿಂಬೇಹಣ್ಣಿಗೆ ಬೇರೆಯ ಕಡೆ ಕಡಿಮೆ ಅಂದರು ಸಾವಿರ ರೂಗಳು! ಅಲ್ಲಿನ ಮಾಟಮಂತ್ರವೇ ಇದಕ್ಕೆಲ್ಲ ಕಾರಣ. ವಾಮಮಾರ್ಗಕ್ಕೆ ಕೊಳ್ಳೇಗಾಲ ಪ್ರಸಿದ್ಧಿ ಎಂಬುದು ಎಲ್ಲರ ಅಂಬೋಣ. ಎಷ್ಟೋ ಜನ ಇದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ.
ನಾನಿರುವ ಚಿಕ್ಕಮಗಳೂರಿನಲ್ಲಿ ಕೊಳ್ಳೆಗಾಲದ ಮಾಂತ್ರಿಕರು ಎಂದುದುರಿಕೊಂಡು ಎಷ್ಟೋ ಜನ ಜೊತಿಷ್ಯಾಲಯಗಳನ್ನು ತೆರೆದಿದ್ದಾರೆ. ಸಿನಿಮಾಗಳಲ್ಲಿಯೂ ಕೂಡ ಹಾಗೆ. ಮಾಟಮಂತ್ರದ ವಿಚಾರ ಬಂದರೆ ಕೊಳ್ಳೇಗಾಲದ ಹೆಸರನ್ನು ಬಿಂಬಿಸುತ್ತಾರೆ. ‘ನೀವು ಮಾಟಮಂತ್ರಕ್ಕೆ ಫೇಮಸ್ ಅಲ್ವಾ’ ಎಂದು ಸಾವಿರಾರು ಜನ ನನ್ನನ್ನು ಕೇಳಿದ್ದಾರೆ. ಮೈಸೂರಿನ ಮಾನಸಗಂಗೋತ್ರಿಯಲ್ಲಿ ಓದುತ್ತಿರುವಾಗ ಎಷ್ಟೋ ಉಪನ್ಯಾಸಕರೂ ಕೂಡ ನನ್ನನ್ನು ಮಾಟ ಮಾಡಿಸಿಕೊಡಿ ಎಂದು ಅಹವಾಲಿಸಿಕೊಂಡಿದ್ದಾರೆ.
ನಿಮ್ಮೆಲ್ಲರ ಪ್ರಶ್ನೆ… ಹಾಗಾದರೆ ಕೊಳ್ಳೇಗಾಲ ಮಾಟಮಂತ್ರಕ್ಕೆ ಫೇಮಸ್ ಅಲ್ವಾ? ಖಂಡತಿವಾಗಿಯೂ ಇಲ್ಲ. ಕೊಳ್ಳೇಗಾಲದಲ್ಲಿ ದೇವಾಂಗ ಬೀದಿ ಎಂಬ ಒಂದು ಬೀದಿ ಇದೆ. ಮಾಟಮಂತ್ರಕ್ಕೆ ಅವರೇ ಪ್ರಸಿದ್ಧಿ. ನಮ್ಮ ಮನೆ ಇರುವುದು ಅದೇ ಬೀದಿಯಲ್ಲಿ! ನಮ್ಮ ಪಕ್ಕದ ಮನೆಯವನೂ ಮಾಟಮಂತ್ರಕ್ಕೆ ಫೇಮಸ್! ( ನಾವು ಇನ್ನು ಫೇಮಸ್ ಆಗಿಲ್ಲ! ). ಇದೇನಿದು, ಮಾಟಮಂತ್ರವೇ ಇಲ್ಲ ಎಂದು ಅದರ ಬಗ್ಗೆಯೇ ಹೇಳುತ್ತಿರುವನಲ್ಲ ಎಂದುಕೊಂಡು ಹುಬ್ಬೇರಿಸಬೇಡಿ. ಹೌದು ಕೊಳ್ಳೇಗಾಲದಲ್ಲಿ ಸರಿಸುಮಾರು ೩೦ ವರ್ಷಗಳ ಹಿಂದೆ ವಾಮಾಚಾರ ಅವ್ಯಾಹತವಾಗಿ ನಡೆಯುತ್ತಿತ್ತು. ನಿಮ್ಮ ಶತ್ರುಗಳ ಪತನಕ್ಕೆ ಸೂತ್ರ ರೂಪಿಸಿಕೊಡುತ್ತಿದ್ದರು. ಮತ್ತಷ್ಟು ಓದು 




