ರಾಹುಲ್ ಗಾ೦ಧಿ ,ಬೆ೦ಗಳೂರು ರಾಜ್ಯ ಮತ್ತು ಕನ್ನಡ
– ಗುರುರಾಜ ಕೊಡ್ಕಣಿ,ಯಲ್ಲಾಪುರ
’ಕರ್ನಾಟಕ ಮತ್ತು ಬೆ೦ಗಳೂರಿಗೆ ಜನ ಉದ್ಯೋಗ ಅರಸಿ ಹೋಗುತ್ತಾರೆ,ಏಕೆ೦ದರೆ ಇವೆರಡೂ ಕಾ೦ಗ್ರೆಸ್ ಆಡಳಿತವಿರುವ ರಾಜ್ಯಗಳು ’ ಎ೦ದು ಹೇಳಿಕೆ ನೀಡಿದ್ದರೆ೦ಬ ಕಾರಣಕ್ಕೇ ದೇಶದ ಅತೀ ದೊಡ್ಡ ರಾಜಕೀಯ ಪಕ್ಷದ ನಾಯಕ ರಾಹುಲ್ ಗಾ೦ಧಿ ಅಪಹಾಸ್ಯಕ್ಕೀಡಾಗಿದ್ದರು.ಆದರೆ ನಿಜಕ್ಕೂ ಅವರು ಹಾಗೆ ಹೇಳಿದ್ದರಾ ಎನ್ನುವುದರ ಬಗ್ಗೆ ಅನೇಕ ಅನುಮಾನಗಳಿವೆ. ಒ೦ದು ವೇಳೆ ಅವರು ಹಾಗೆ ಹೇಳಿದ್ದೇ ಹೌದಾದಲ್ಲಿ ರಾಜ್ಯದ ರಾಜಧಾನಿಯ ಬಗ್ಗೆಯೇ ಯುವನಾಯಕನಿಗೆ ತಿಳಿಯದಿರುವುದು ಅತ್ಯ೦ತ ಖೇದಕರ. ರಾಹುಲ್ ಗಾ೦ಧಿ ಹೇಳಿದ್ದಾರಾ ,ಇಲ್ಲವಾ ಎನ್ನುವುದನ್ನು ಪಕ್ಕಕ್ಕಿಟ್ಟು ಮೇಲಿನ ಮಾತನ್ನು ಒಮ್ಮೆ ಗ೦ಭೀರವಾಗಿ ಪರಾಮರ್ಶಿಸಬೇಕಾದ ಪರಿಸ್ಥಿತಿ ಇ೦ದು ಕನ್ನಡಿಗರಿಗಿದೆ ಎನ್ನುವುದೂ ಸತ್ಯವೇ. ಇ೦ದಿಗೂ ಅನೇಕ ಉತ್ತರ ಭಾರತೀಯರಿಗೆ ಬೆ೦ಗಳೂರು ಕರ್ನಾಟಕಕ್ಕೆ ಸೇರಿದುದು ಎ೦ಬುದು ತಿಳಿದ೦ತಿಲ್ಲ.ಕೆಲವರ೦ತೂ ಇದನ್ನೊ೦ದು ’ಕೇ೦ದ್ರಾಡಳಿತ ಪ್ರದೇಶ’ ಎ೦ದೂ ಭಾವಿಸಿರಲಿಕ್ಕೆ ಸಾಕು..!!
“ಮೂಢನಂಬಿಕೆ” ಅನ್ನುವ ಮೊದಲು “ನಂಬಿಕೆ” ಅನ್ನುವುದನ್ನು ಡಿಫೈನ್ ಮಾಡಲಾಗಿದೆಯೇ?
– ರಾಕೇಶ್ ಶೆಟ್ಟಿ
ಸೋ-ಕಾಲ್ಡ್ ಪ್ರಗತಿಪರರು,ಬುದ್ಧಿಜೀವಿಗಳು,ಚಿಂತಕರು ಮತ್ತು ಸರ್ಕಾರಿ ಸಾಹಿತಿಗಳು ಸೇರಿಕೊಂಡು ಹೊರತಂದಿರುವ “ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ವಿಧೇಯಕ – ೨೦೧೩” ಅನ್ನು ಓದಿದ ಮೇಲೆ ಮತ್ತದಕ್ಕೆ ಸಿಎಂ ಸಿದ್ದರಾಮಯ್ಯ ಬೆಳಗಾವಿ ಅಧಿವೇಶನದಲ್ಲಿ ಇದನ್ನು ವಿದಾಯಕವಾಗಿ ಮಂಡಿಸುತ್ತೇನೆ ಅಂತೇಳಿ ಮತ್ತೆ ಯು-ಟರ್ನ್ ತೆಗೆದುಕೊಂಡಾಗ,ನನಗೆ ನೆನಪಾಗಿದ್ದು “ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಿತ್ತಂತೆ…!” ಅನ್ನೋ ಗಾದೆ.
‘ಕಿಚನ್ ಕ್ಯಾಬಿನೇಟ್’ ಅಣತಿಯಂತೆ ಸರ್ಕಾರಗಳು ಕಾರ್ಯ ನಿರ್ವಹಿಸುತ್ತವೆ ಅನ್ನುವುದು ಕೆಲವು ಮುಖ್ಯಮಂತ್ರಿಗಳ ಕಾಲದಲ್ಲಿ ಕೇಳಿಬರುತಿದ್ದಂತ ಮಾತು.ಆದರೆ,ಸಿದ್ದರಾಮಯ್ಯನವರ ಸರ್ಕಾರ ‘ಸರ್ಕಾರಿ ಸಾಹಿತಿಗಳ ಕ್ಯಾಬಿನೇಟ್’ ನ ಅಣತಿಯೇ ನಡೆಯುತ್ತದೆಯೇ? ಹಾಗೆಯೇ ಅನ್ನಿಸುತ್ತಿದೆ.ಸಮಾಜ ವಿಜ್ನಾವನ್ನು ಅಕಾಡೆಮಿಕ್ ಆಗಿ ಕಲಿಸುತಿದ್ದ ಸಂಶೋಧನಾ ಕೇಂದ್ರದ ಮೇಲೆ ವಕ್ರ ದೃಷ್ಟಿ ಬೀರಿದ ಸರ್ಕಾರವೇ ಈಗ ಸಾಮಾಜಿಕ ಸಮಸ್ಯೆಗಳ ಬಗ್ಗೆ ಕರಡು ಸಿದ್ದ ಮಾಡಿ ಅಂತ ಕೇಳಿಕೊಂಡು ಅದನ್ನು ಜಾರಿಗೆ ತರಲು ಹೊರಟಿರುವುದು ಹಾಸ್ಯಾಸ್ಪದವಾಗಿದೆ.
ಈ ನಾಸ್ತಿಕ ಮಹಾಶಯರುಗಳ ಪ್ರಕಾರ, “ಫಲಜ್ಯೋತಿಷ್ಯ,ಕಾಲ ಜ್ನಾನ,ಸಂಖ್ಯಾ ಶಾಸ್ತ್ರ,ವಾಸ್ತು ಶಾಸ್ತ್ರ,ಮಠಾಧೀಶರ,ಸ್ವಾಮೀಜಿಗಳ ಪಾದ ಪೂಜೆ,ಸರ್ಕಾರಿ ಕಚೇರಿಗಳಲ್ಲಿ ಪೂಜೆ,ಹೋಮ-ಹವನ,ದೇವಸ್ಥಾನಗಳಲ್ಲಿ ಪ್ರಾಣಿಬಲಿ ಕೊಡುವುದು,ಜಪಮಾಲೆಗಳು,ರುದ್ರಾಕ್ಷಿ,ಆಧ್ಯಾತ್ಮ ಬಗ್ಗೆ ಮಾತನಾಡುವುದು” ಇವೆಲ್ಲ ನಿಷೇಧವಾಗಬೇಕಂತೆ…!
ಮತ್ತಷ್ಟು ಓದು 
ತುಳು ಭಾಷೆಯನ್ನು ‘ಕನ್ನಡ’ ಅಳಿಸುತ್ತಿದೆಯೋ..? ಉಳಿಸಿದೆಯೋ..?
-ತುಳುನಾಡು(ಅಫೀಶಿಯಲ್) ಫೇಸ್ಬುಕ್ ಪೇಜ್
ಕೆಲವು ತುಳುವಾದಿಗಳು ಕರ್ನಾಟಕ ರಾಜ್ಯದಿಂದ ಹೊರ ಬರುವ ಅಥವಾ ಪ್ರತ್ಯೇಕ ತುಳು ರಾಜ್ಯದ ಕಲ್ಪನೆಯನ್ನು ಇಟ್ಟುಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರ..! ಇದಕ್ಕೆ ಅವರು ನೀಡುವ ಅತೀ ದೊಡ್ಡ ಕಾರಣ ಕನ್ನಡ ಭಾಷೆಯಿಂದ ತುಳು ಭಾಷೆಗೆ ಕಂಟಕ ಇದೆ ಅನ್ನೋದು..!! ಅದಕ್ಕೆ ಹಲವಾರು ಕಾರಣಗಳೂ ಇವೆ. ಇದು ಸತ್ಯ ಕೂಡ..! ತುಳು ಭಾಷೆಗೆ ಸಿಗಬೇಕಾಗಿದ್ದ ಪ್ರಾಶಸ್ತ್ಯಗಳು, ಸ್ಥಾನಮಾನಗಳು ಇನ್ನೂ ದೊರಕದೆ ಇರುವುದು ದುರ್ದೈವವೇ ಸರಿ. ಹಾಗಂತ ಇದೆಲ್ಲಾ ಕನ್ನಡಿಗರ ‘ಕುತಂತ್ರ’ ಅನ್ನುವವರು ಶತಃ ಮೂರ್ಖರೇ ಸರಿ…!
ಈ ಎಲ್ಲಾ ಬೆಳವಣಿಗೆಗಳಿಗೆ ಕಾರಣ ಯಾರು ಅಂತ ಹುಡುಕುತ್ತಾ ಹೊರಟರೆ, ಇದಕ್ಕೆ ಕಾರಣ ತುಳುವರೇ ಹೊರತು ಬೇರಾರೂ ಅಲ್ಲ ಅನ್ನೋದು ಸ್ಪಷ್ಟವಾಗಿ ಗೋಚರಿಸುತ್ತದೆ.
ತುಳುನಾಡನ್ನು ಕನ್ನಡೀಕರಣಗೊಳಿಸಿ ಅಂತ ಯಾರೂ ನಮ್ಮ ಮೇಲೆ ದಬ್ಬಾಳಿಕೆ ಮಾಡಿಲ್ಲ. ಎಲ್ಲಾ ತುಳುವರು ಮನಸ್ಸು ಮಾಡಿದರೆ, ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿಸುವುದು ಹಾಗೂ ಕರ್ನಾಟಕದಲ್ಲಿ ತುಳು ಭಾಷೆ ನಾಳೆಯೇ ಆಡಳಿತ ಭಾಷೆ ಆಗೋದರಲ್ಲಿ ಅನುಮಾನವೇ ಇಲ್ಲ.
ಕನ್ನಡಕ್ಕೆ ಕನ್ನಡಿ ಹಿಡಿದವನ ನೆನೆಯುತ್ತ
– ನವೀನ್ ನಾಯಕ್
ಕನ್ನಡದ ಬೆಳವಣಿಗೆಗೆ ಎಷ್ಟೋ ಮಹನೀಯರು ತಮ್ಮ ಜೀವನದ ಬಹಳ ಸಮಯವನ್ನು ಈ ಮಹತ್ಕಾರ್ಯಕ್ಕೆ ಉಪಯೋಗಿಸಿದ್ದಾರೆ. ಅವರೆಲ್ಲರ ಪರಿಶ್ರಮದಿಂದ ನಮ್ಮ ಕನ್ನಡ ಇಂದಿಗೆ ಹೆಮ್ಮೆಯ ಸ್ಥಾನ ಪಡೆದಿದೆ.
ದ.ರಾ ಬೇಂದ್ರೆಯವರಿಂದಲೇ, “ಕನ್ನಡಕ್ಕೆ ಕನ್ನಡಿ ಹಿಡಿದು ದುಡಿದವ ನೀನು” ಅನ್ನಿಸಿಕೊಂಡ ಆ ವ್ಯಕ್ತಿ ಯಾರು? ಅವರ ಸಾಧನೆ ಏನು? ಎಂಬ ಕುತೂಹಲವೇ. ಆ ವ್ಯಕ್ತಿ ಜರ್ಮನಿಯಲ್ಲಿ ಜನಿಸಿ ಧಾರವಾಡಕ್ಕೆ ಬಂದು ಕನ್ನಡದ ಇತಿಹಾಸದಲ್ಲಿ ಹಲವಾರು ಸಾಹಸ ಮೆರೆದವರು. ಅವರೇ ರೆವರೆಂಡ್ ಎಫ್ ಕಿಟೆಲ್.
ರೆವರೆಂಡ್ ಎಫ್ ಕಿಟೆಲ್‍ರವರು ಜರ್ಮನಿಯ ಹ್ಯಾನೋವರ್ ಪ್ರಾಂತ್ಯದಲ್ಲಿರುವ ಫ್ರೀಸ್ಲ್ಯಾಂಡ್ ನಲ್ಲಿ 1832 ರಲ್ಲಿ ಗಾಜ್ ಫ್ರೀಟ್ ಮತ್ತು ಟ್ಯುಡೋವ್ ಹೆಲೇನ್ ಹ್ಯೂಬರ್ಟ ದಂಪತಿಗೆ ಜನಿಸಿದರು. ಇವರು ಭಾರತಕ್ಕೆ ಬರುವಾಗಲೇ ಹೀಬ್ರೂ, ಗ್ರೀಕ್, ಲ್ಯಾಟೀನ್,ಫ್ರೆಂಚ್, ಮತ್ತು ಇಂಗ್ಲಿಷ್ ಭಾಷೆಯ ಜ್ಞಾನ ಹೊಂದಿದ್ದರು. ಭಾರತಕ್ಕೆ ಬರುವಾಗಲೇ ಕನ್ನಡವನ್ನು ಕಲಿಯಬೇಕೆಂದು ಮಹದಾಸೆಯನ್ನು ಹೊಂದಿದ್ದರು. ಕಿಟೆಲ್ ರವರು 1850ರಲ್ಲಿ ಬಾಸೆಲ್ ಮಿಶನ್ ಸಂಸ್ಥೆಗೆ ಸೇರಿದರು. ಈ ಮಿಶನ್ ಸಂಸ್ಥೆ 1852 ರಲ್ಲಿ ಕಾಪ್ ಮನ್ ಮತ್ತು ಕಿಟೆಲ್ ರವರನ್ನು ದಕ್ಷಿಣ ಭಾರತದ ದಾವಣಗೆರೆಗೆ ಮತಪ್ರಚಾರಕ್ಕೆ ಕಳುಹಿಸಿಕೊಟ್ಟರು. ಧಾರವಾಡಕ್ಕೆ ಬಂದ ಕಿಟೆಲರಿಗೆ ಸಾಹಿತ್ಯಾಭ್ಯಾಸ ಮಾಡಿ ಹೆಸರುವಾಸಿಯಾಗಿದ್ದ ರೇ.ವೀಗಲ್ ರವರ ಭೇಟಿ ಮಾಡಬೇಕೆಂದುಕೊಂಡಿದ್ದರು. ಅದು ಸಾದ್ಯಾವಾಗದೇ ಇದ್ದಾಗ, ಅದೇ ಊರಿನ ಇನ್ನೊಬ್ಬ ಅಧಿಕಾರಿ ಕೆ ಮೋರಿಕ್ ರವರ ಪರಿಚಯ ಮಾಡಿಕೊಂಡರು. ಕನ್ನಡ ಕಲಿಯಲು ಅದೆಷ್ಟು ಅವರಿಗೆ ಉತ್ಸಾಹವಿತ್ತೆಂದರೆ ಬರೀ ಕಾಲ್ನಡಿಗೆಯಲ್ಲೇ ಗುಡ್ಡಗಾಡುಗಳಲ್ಲಿ, ಕಾಡುಗಳಲ್ಲಿ ಅಲೆದು ಊರೂರು ಅಲೆದು ಆ ಪ್ರದೇಶಗಳ ಆಡು ಭಾಷೆಯನ್ನು ಕಲಿತರು.
ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆಯಾಗಲೇಬೇಕು,ಆದರೆ ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯುತ್ತಿರುವುದೇಕೆ?
– ಗೋಪಾಲ ಕೃಷ್ಣ
ಧರ್ಮಸ್ಥಳವೆಂದರೆ ಪ್ರತಿನಿತ್ಯ ಸಾವಿರಾರು ಜನರು, ದೇಶದ ಖ್ಯಾತನಾಮರು, ಅಧಿಕಾರದ ಚುಕ್ಕಾಣಿ ಹಿಡಿದ ಮಂತ್ರಿ, ಮುಖ್ಯಮಂತ್ರಿಗಳು ಭೇಟಿ ನೀಡುವ ಧಾರ್ಮಿಕ ಸ್ಥಳ. ಇಲ್ಲಿನ ಪೂಜೆಯಿಂದ ಹಿಡಿದು ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಬಾಲಿವುಡ್ ತಾರೆಯರ ಭೇಟಿಯವರೆಗಿನ ಪ್ರತಿ ಬೆಳವಣಿಗೆಯೂ ರಾಜ್ಯ/ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿ ಮಾಡುತ್ತಿರುತ್ತದೆ. ತೀರಾ ಇತ್ತೀಚೆಗೆ ಅಂದರೆ ಜೂನ್ 27, 2011ರಂದು ಇಡೀ ರಾಜ್ಯವೇ ಧರ್ಮಸ್ಥಳದತ್ತ ಮುಖ ಮಾಡಿ ಕುಳಿತಿತ್ತು. ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಆಣೆ-ಪ್ರಮಾಣದ ಸಮರಕ್ಕೆ ಧರ್ಮಸ್ಥಳ ಸಾಕ್ಷಿಯಾಗುವುದಿತ್ತು. ಅಂದು ರಾಜ್ಯದ ಎಲ್ಲಾ ಸುದ್ದಿ ಮಾಧ್ಯಮಗಳು ಧರ್ಮಸ್ಥಳದಲ್ಲೇ ಠಿಕಾಣಿ ಹೂಡಿದ್ದವು; ಧರ್ಮಸ್ಥಳದ ವಿಚಾರದ ವಿನಹ ಮತ್ತೇನೂ ಸುದ್ದಿಯೇ ಅಲ್ಲ. ‘ಮಾತಿಗೆ ಹೆಣಗಿದವನು ಮಂಜುನಾಥ, ದುಡ್ಡಿಗೆ ಹೆಣಗಿದವನು ವೆಂಕಟರಮಣ’ ಎಂಬ ನಂಬಿಕೆ ಇರುವುದರಿಂದಲೇ ಜನರ ದೃಷ್ಟಿ ಧರ್ಮಸ್ಥಳದತ್ತ ನೆಟ್ಟಿತ್ತು.
ಅಂತಹ ಸಂದರ್ಭದಲ್ಲೂ ಧರ್ಮಸ್ಥಳದ ವಿರುದ್ಧ ಆರೋಪ ಮಾಡದಿದ್ದವರು, ಇಂದು ದಿಗ್ಗನೆದ್ದು ಕುಳಿತಿರುವುದೇಕೆ? ಸೌಜನ್ಯ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಲೇಬೇಕು. ಧರ್ಮಸ್ಥಳವೇ ಆಗಲಿ, ದೇಶದ ಬೇರೆ ಎಲ್ಲಿಯೇ ಆಗಲಿ ಸಾಮಾನ್ಯನಿಂದ ರಾಷ್ಟ್ರಪತಿಯವರೆಗೂ ಹತ್ಯಾಚಾರದಂತಹ ಪ್ರಕರಣದಲ್ಲಿ ಸಿಲುಕಿಕೊಂಡವರು ಯಾರೇ ಆದರೂ ಸರಿಯೇ ಅವರಿಗೆ ಮರಣದಂಡನೆ ವಿಧಿಸುವುದೇ ಸೂಕ್ತ ಶಿಕ್ಷೆ. ಆಗಲೇ ಸಹೋದರಿ ಸೌಜನ್ಯ ಆತ್ಮಕ್ಕೂ, ಅವರ ಕುಟುಂಬಕ್ಕೂ ನ್ಯಾಯ ಒದಗಿಸಿದಂತಾಗುವುದು.
ಶಾದಿ ಭಾಗ್ಯ ಮತ್ತು ಮುಸ್ಲಿಂ ಅವಶ್ಯಕತೆ
– ನವೀನ್ ನಾಯಕ್
ಅಲ್ಪ ಸಂಖ್ಯಾತರ ತುಷ್ಟೀಕರಣ ಲೋಕಸಭಾ ಚುನಾವಣ ಬರುತಿದ್ದಂತೆ ಹೆಮ್ಮರವಾಗಿ ಬೆಳೆಯುತ್ತಿದೆ. ಈ ಸಮುದಾಯದ ಜನರಿಗೆ ಇರುವ ಕೊರತೆ, ಅವಶ್ಯಕತೆಯ ಬಗ್ಗೆ ಸರಕಾರ ಕ್ರಮ ಕೈಗೊಳ್ಳುವುದರ ಬದಲು ಮತ ಬ್ಯಾಂಕ್ ಭದ್ರತೆಗೆ ಸರ್ವ ಪ್ರಯತ್ನವನ್ನೂ ಮಾಡುತ್ತಿದೆ.
ಮುಸ್ಲಿಂ ಸಮುದಾಯದ ಸಮಸ್ಯೆ ಅತಿಯಾದ ಧರ್ಮ ಶ್ರದ್ದೆ. ಒಂದು ದಂಪತಿಗೆ ಈಗಿನ ಸಮಯದಲ್ಲಿ ಒಂದು ಮಗುವನ್ನು ಸಾಕುವುದೇ ಕಷ್ಟ. ಅಂತದರಲ್ಲಿ ಈ ಸಮುದಾಯದಲ್ಲಿ ಹೆಗಲಿಗೊಂದು ಸೊಂಟಕ್ಕೊಂದು ತಲೆ ಮೇಲೊಂದು ಮಕ್ಕಳನ್ನು ಹೊತ್ತುಕೊಂಡು ಬರುವ ದಂಪತಿಗಳೇ ಹೆಚ್ಚು. ಇದು ಕುಹಕವಲ್ಲ ವಾಸ್ತವ. ಈ ಸಮುದಾಯದ ಮುಖಂಡರು ತಮ್ಮ ಸಮುದಾಯದ ನ್ಯೂನತೆ ಬಗ್ಗೆ ಯೋಚಿಸಬೇಕಿತ್ತು ಆದರೆ ಈ ಸಮಾಜದ ಮುಖಂಡರುಗಳು, ಜವಬ್ದಾರಿಯುತ ಕೆಲವು ವ್ಯಕ್ತಿಗಳು, ಬುದ್ದಿಜೀವಿಗಳೆಂದುಕೊಳ್ಳುವ ವ್ಯಕ್ತಿಗಳು ಇತರ ಧರ್ಮದ ನ್ಯೂನತೆಗಳನ್ನು ಎತ್ತಿ ತೋರಿಸುವುದಕ್ಕೆ ಹಲವು ಸಮಯವನ್ನು ಕಳೆಯುತಿದ್ದಾರೆ. ಹಾಗಂತ ಇತರ ಧರ್ಮದ ಬಗ್ಗೆ ಮಾತನಾಡಬಾರದೆಂಬುದು ಕೂಡ ತಪ್ಪಾಗುತ್ತದೆ. ಆದರೆ ಇನ್ನೊಬ್ಬನ ಶ್ರಧ್ಧೆಗಳ ಬಗ್ಗೆ ಮಾತನಾಡುವ ಮುಂಚೆ ತಾನು ಎಂತಹ ಅಡಿಪಾಯದಲ್ಲಿ (ಬಂಡೆಯಂತಹುದೋ ಅಥವ ಉಸುಗಿನಂತಹುದೋ) ನಿಂತಿದ್ದೇನೆ ಎಂಬುದನ್ನೂ ಯೋಚಿಸಬೇಕಾಗುತ್ತದೆ. ಇದನ್ನು ಬಿಟ್ಟು ಯೋಚಿಸುವಂತಹ ವ್ಯಕ್ತಿಗಳನ್ನೇ ಸೆಕ್ಯುಲರ್ ಎಂದು ಹೇಳಿಕೊಳ್ಳುವ ರಾಜಕೀಯ ಪಕ್ಷಗಳು ವ್ಯವಸ್ತಿತವಾಗಿ ಬಳಸಿಕೊಳ್ಳುತಿದ್ದಾರೆ.
ಎತ್ತಿನಹೊಳೆ ಯೋಜನೆ: ಬೇಕಿತ್ತಾ ಇದು?
ಸೌಜನ್ಯ ಹಂತಕರು ನೇಣಿಗೇರುವುದೆಂತು?
– ರಾಕೇಶ್ ಶೆಟ್ಟಿ
“ಬಹುಷಃ ಆಗಿನ ಕಾಲವೇ ಚೆನ್ನಾಗಿತ್ತೆನೋ.ಆಗಲಾದರೂ ಕುರು ಸಭೆಯಲ್ಲಿ ದ್ರೌಪದಿಯ ವಸ್ತ್ರಾಪಹರಣವಾಗುವಾಗ ಅವಳ ಸಹಾಯಕ್ಕೆ ಕರೆದೊಡನೆಯೇ ಶ್ರೀ ಕೃಷ್ಣ ಪರಮಾತ್ಮ ಬಂದಿದ್ದ.ಪಾಪ! ಈ ಕಾಲದ ಹೆಣ್ಣು ಮಕ್ಕಳ ಕೂಗು ಆ ಕಾಣದ ದೇವರಿಗೂ,ಕಾನೂನು ಪಾಲಕರಾದ ಮನುಷ್ಯ(?)ರಿಗೂ ಕೇಳುತ್ತಿಲ್ಲ.ಕುರುಕ್ಷೇತ್ರದ ಯುದ್ಧದ ಮುಗಿದರೂ ಕೌರವರು ಇನ್ನೂ ಸತ್ತಿಲ್ಲ.ದ್ರೌಪದಿಯರ ಗೋಳು ಮುಗಿಯೋಲ್ಲ…” ಅಂತ ’ನಿರ್ಭಯ’ ಅತ್ಯಾಚಾರದ ಪ್ರಕರಣದ ಸಮಯದಲ್ಲಿ ಬರೆದಿದ್ದೆ. ಮತ್ತೆ ಅದೇ ಸಾಲುಗಳನ್ನು ನಮ್ಮ ಧರ್ಮಸ್ಥಳದ ’ಸೌಜನ್ಯ’ ಅನ್ನುವ ಹೆಣ್ಣುಮಗಳ ಬಗ್ಗೆ ಬರೆಯುವಾಗಲೂ ಬಳಸಬೇಕಾಗಿ ಬಂದಿದೆ.ಆಗ ಕೃಷ್ಣನೇನೋ ಕರೆದಾಗ ಬಂದಿದ್ದ.ಆದರೆ ಇಲ್ಲಿ ಧರ್ಮಸ್ಥಳದ ಮಂಜುನಾಥ ಸ್ವಾಮಿ ಯಾಕೋ ವರುಷ ಕಳೆದರೂ ಇನ್ನು ಕರುಣೆ ತೋರಲಿಲ್ಲ …! ನನಗೆ ಈ ದೇವರುಗಳ ಮೇಲೆ ಒಮ್ಮೊಮ್ಮೆ ಕೋಪಬರುವುದು ಇದೇ ಕಾರಣಕ್ಕಾಗಿ, ಏನೆಲ್ಲಾ ಪಾಪಗಳನ್ನು ಮಾಡಿ ಒಂದು ನೇಮ,ಒಂದು ಹರಕೆ,ಒಂದು ಹೋಮ,ಒಂದು ಹವನ,ತಪ್ಪು ಕಾಣಿಕೆ ಸಲ್ಲಿಸಿ ಸುಮ್ಮನಾಗಿಬಿಡಬಹುದೇ? ಹಾಗಿದ್ದರೆ ’ಧರ್ಮ’ವೆಲ್ಲಿದೆ?
ದಿಲ್ಲಿಯಲ್ಲಿ ಕಳೆದ ಡಿಸೆಂಬರಿನಲ್ಲಿ ನಡೆದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ’ನಿರ್ಭಯ’ ಅತ್ಯಾಚಾರ ಪ್ರಕರಣದಲ್ಲಿ ಹೋರಾಟದ ಕಿಡಿಯನ್ನು ದೆಹಲಿಯ ವಿದ್ಯಾರ್ಥಿ ಮಿತ್ರರು ಹಚ್ಚಿದ್ದರು.ಅದು ದೇಶವ್ಯಾಪಿಯೂ ಹಬ್ಬಿತ್ತು. ಖುದ್ದು ಕೇಂದ್ರ ಸರ್ಕಾರವನ್ನೇ ಮಂಡಿಯೂರುವಂತೆ ಮಾಡಿದ್ದು ಯುವಶಕ್ತಿಗೆ ಸಂದ ಜಯವಾಗಿತ್ತು.ಈಗ ನಿರ್ಭಯ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಿದೆ.ಆದರೆ ನಮ್ಮ ಸೌಜನ್ಯ ಪ್ರಕರಣದ ಆರೋಪಿಗಳೇ ಇನ್ನೂ ಸಿಕ್ಕಿಲ್ಲ…! ಅತ್ಯಾಚಾರದ ಆರೋಪಿಗಳನ್ನು ವರ್ಷವಾದರೂ ಬಂಧಿಸಲಾಗದಷ್ಟು ನಿಷ್ಕ್ರಿಯರಾಗಿದ್ದಾರೆಯೇ ನಮ್ಮ ಕರ್ನಾಟಕ ಪೋಲಿಸರು? ಅಥವಾ ಪೋಲಿಸರನ್ನು ನಿಷ್ಕ್ರಿಯಗೊಳಿಸುವಲ್ಲಿ ಕಾಣದ ’ಕೈ’ ಗಳು ಕೆಲಸ ಮಾಡುತ್ತಿವೆಯೇ? ಪ್ರಕರಣ ನಡೆದಾಗ ಇದ್ದಿದ್ದು ಬಿಜೆಪಿ ಸರ್ಕಾರ.ಈಗ ಇರುವುದು ಕಾಂಗ್ರೆಸ್ಸ್ ಸರ್ಕಾರ.ಹಾಗಿದ್ದರೆ ಆ ಕಾಣದ ಕೈಗಳು ಸರ್ಕಾರದ ಕೈಗಳನ್ನೇ ಕಟ್ಟಿಹಾಕಬಲ್ಲಷ್ಟು ಬಲಿಷ್ಟವಾಗಿವೆಯೇ?
ಸುದ್ಧಿ ಮಾಡುವವರಲ್ಲಿ ಶುದ್ಧಿ ಇಲ್ಲವಾದರೆ. . .
– ಡ್ಯಾನಿ ಪಿರೇರಾ,ಹಳ್ಳಿಮೈಸೂರು
ಇಂದು ವಾರ್ತಾ ವಾಹಿನಿಗಳು ಯಥಾತ್‍ಶಿರ್ಘ ಸುದ್ಧಿಗಳನ್ನು ಜಗತ್ತಿನ ಮೂಲೆ ಮೂಲೆಗೂ ಅತಿ ವೇಗದಲ್ಲಿ ಮುಟ್ಟಿಸುವ ಕೆಲಸ ಮಾಡುತ್ತಿವೆ. ಇದರಿಂದ ಉಪಯೋಗವಿದೆ ಎನ್ನುವುದು ನಿಜವೇ ಆದರೂ ಸುದ್ಧಿ ಹೇಳುವ ಮನಸ್ಸುಗಳ ಹಿಂದೆ ಶುದ್ಧಿ ಇಲ್ಲದಿರುವುದು ಗೋಚರವಾಗುತ್ತಿದೆ. ಹಾಗಾಗಿ ಅವುಗಳ ಹಿಂದಿರುವ ಉದ್ದೇಶ ಪ್ರಶ್ನಾರ್ಹವಾಗುತ್ತಿದೆ. ಒಂದು ಕಾಲವಿತ್ತು ಒಬ್ಬ ವ್ಯಕ್ತಿಗೆ ಅಪಮಾನವೆನಿಸುವ ಸುದ್ಧಿಯೊಂದು ಪತ್ರಿಕೆ ಅಥವಾ ದೃಶ್ಯ ಮಾಧ್ಯಮಗಳಲ್ಲಿ ಬಂದರೆ ಅದರಿಂದ ವ್ಯಕ್ತಿಗೆ ಅದು ನಿಜವಿರಲಿ, ಸುಳ್ಳಿರಲಿ ಒಂದೋ ಅವನಿಗದು ಆಘಾತ ತರುವಂತಿತ್ತು ಅಥವಾ ಆತ ತನ್ನನ್ನು ತಾನು ಆತ್ಮ ವಿಮರ್ಶೆಗೆ ಒಳಪಡಿಸುವ ಸಾಧನವಾಗಿರುತ್ತಿತ್ತು. ಅದು ವ್ಯಕ್ತಿಯೊಬ್ಬ ಸಾರ್ವಜನಿಕ ಜೀವನದಲ್ಲಿರುವವನಾಗಿದ್ದರೆ ಕೂಡಲೇ ರಾಜೀನಾಮೆ ನೀಡಿ ಅದರಿಂದ ಬಿಡುಗಡೆ ಹೊಂದುವ ಸಾಕ್ಷಿಪ್ರಜ್ಞೆ ಆತನನ್ನು ಎಚ್ಚರಿಸುತ್ತಿತ್ತು. ಆದರೆ ಕಾಲ ಬದಲಾಗಿದೆ. ಅಕ್ಷರ ಮಾಧ್ಯಮಗಳಿಗಿಂತ ದೃಶ್ಯ ಮಾಧ್ಯಮಗಳು ಅದರಲ್ಲೂ ಸುದ್ಧಿ ವಾಹಿನಿಗಳು ಇನ್ನಿಲ್ಲದ ವೇಗದಲ್ಲಿ ಕಾರ್ಯಪ್ರವೃತ್ತವಾಗಿವೆ. ಕ್ಷಣಾರ್ಧದಲ್ಲಿ ಅದು ಅಸಲಿಯೋ ನಕಲಿಯೋ ಅಂತೂ ಸುದ್ಧಿಗಳು ಬಿತ್ತರವಾಗುತ್ತವೆ. ಆದರೆ ಅಪರಾಧಿ ಸ್ಥಾನದಲ್ಲಿರುವ ವ್ಯಕ್ತಿಯ ಮೇಲೆ ಮಾತ್ರ ಅದು ಯಾವುದೇ ಪರಿಣಾಮ ಬೀರುವಂತೆ ಕಾಣುತ್ತಿಲ್ಲ. ಏಕೆಂದರೆ ಸುದ್ಧಿ ಮಾಡುವವನ ಮತ್ತು ಸುದ್ಧಿಯಾಗುವವನಲ್ಲಿ ಚಿತ್ತಶುದ್ಧಿಯಿಲ್ಲದಿರುವುದು! ಸುದ್ಧಿ ಮಾಡುವ ದಾವಂತದಲ್ಲಿ ಅದರಿಂದಾಗುವ ಪರಿಣಾಮವನ್ನು ಸುದ್ಧಿ ಮಾಡುವವ ಯೋಚಿಸುತ್ತಿಲ್ಲವೋ ಅಥವಾ ಅದು ತನಗೆ ಸಂಬಂದಿಸಿದ್ದಲ್ಲ ಎನ್ನುವ ತಾತ್ಸಾರ ಮನೋಭಾವವೋ ಗೊತ್ತಿಲ್ಲ ಅಂತೂ ಅನಾಹುತ ಮಾಡುವುದರಲ್ಲೇ ಆನಂದ ಕಾಣುತ್ತಿವೆ ನಮ್ಮ ಅನೇಕ ದೃಶ್ಯ ಮಾಧ್ಯಮಗಳು.
ಕೆಲ ವರ್ಷಗಳ ಹಿಂದೆ ಕನ್ನಡದ ಸುದ್ಧಿ ಮಾಧ್ಯಮವೊಂದು ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿಕೊಂಡ ಮಕ್ಕಳು ತೀವ್ರ ಅಸ್ವಸ್ಥವೆಂದು ‘ಬ್ರೇಕಿಂಕ್ ನ್ಯೂಸ್’ ಹಾಕಿತು. ಲಸಿಕೆ ಹಾಕಿಸಿಕೊಂಡ ಮಕ್ಕಳ ಪೋಷಕರು ಆತಂಕದಿಂದ ಆಸ್ಪತ್ರೆ ಸುತ್ತ ಜಮಾವಣೆಗೊಂಡರು. ಜನರಿಗೆ ಅಲ್ಲಿನ ಆಸ್ಪತ್ರೆ ಮತ್ತು ಅದರ ಸಿಬ್ಬಂದಿ ದಾಳಿಯ ವಸ್ತುವಾದರು. ಆದರೆ ಅದರ ನೈಜ ವಿಚಾರವೆಂದರೆ ಅಸ್ವಸ್ಥಗೊಂಡ ಒಂದೆರಡು ಮಕ್ಕಳು ಸೇವಿಸಿದ ಆಹಾರ Food Poison ಅಗಿದ್ದು . ಆ ಸುದ್ಧಿ ಮಾಧ್ಯಮ ಮಾಡಿದ ಅವಾಂತರದ ಬಗ್ಗೆ ಅಂದಿನ ಗೃಹ ಸಚಿವರಾದ ವಿ.ಎಸ್. ಆಚಾರ್ಯರು ಗಮನ ಸೆಳೆದರೂ ಅದು ತನ್ನ ದುಡುಕುತನದ ಬಗ್ಗೆ ವಿಷಾದ ವ್ಯಕ್ತಪಡಿಸಲಿಲ್ಲ. ಹೀಗೆ ಸುದ್ಧಿ ಮಾಧ್ಯಮಗಳು ಸುದ್ಧಿ ಮಾಡುವ ಭರದಲ್ಲಿ ಅವುಗಳು ಮಾಡುವ ಅವಾಂತರಗಳೇ ದೊಡ್ಡ ಸುದ್ಧಿಯಾದರೂ ಅವುಗಳಿಗೇನು ಪಶ್ಚತ್ತಾಪವಾಗುವುದಿಲ್ಲ. ಜನರಿಗೆ ಉಚಿತ ಬುದ್ಧಿ ಹೇಳುವುದಷ್ಟೇ ಅವುಗಳ ಕೆಲಸ
ಇತಿಹಾಸದ ಅಚ್ಚರಿಗಳಲ್ಲಿ ಒಂದು ಇಣುಕು: ‘ಕರ್ನಾಟಕದ ಅಂದಿನ ಶ್ರೇಷ್ಟರ ಇಂದಿನ ವಂಶಸ್ಥರು ಮತ್ತು ಕುರುಹುಗಳು’
– ರಾಘವೇಂದ್ರ ಅಡಿಗ ಹೆಚ್.ಎನ್
ಕಳೆದ ವಾರ ಕನ್ನಡದ ಒಂದು ಅಪೂರ್ವ ಮತ್ತು ನೂತನ ಸ್ವರೂಪದ ಕೃತಿಯೊಂದರ ಬಿಡುಗಡೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನೆರವೇರಿತು.( ಆ ಸಂದರ್ಭದಲ್ಲಿ ನಾನೂ ಸಹ ಅಲ್ಲಿ ಇದ್ದೆ ಎನ್ನುವ ವಿಚಾರವೇ ನನಗೊಂದು ಖುಷಿಯ ಸಂಗತಿ.) ಕನ್ನಡ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದ ಅಗ್ರರಲ್ಲಿ ಒಬ್ಬರಾದ ಡಾ. ಎಮ್. ಚಿದಾನಂದಮೂರ್ತಿಯವರ ‘ಕರ್ನಾಟದ ಅಂದಿನ ಶ್ರೇಷ್ಟರ ಇಂದಿನ ವಂಶಸ್ಥರು ಮತ್ತು ಕುರುಗಳು’ ಎನ್ನುವ ಹೆಸರಿನ ಕೃತಿಯು ಗಾತ್ರದಲ್ಲಿ ಚಿಕ್ಕದಾಗಿದ್ದರೂ ಅದರಲ್ಲಿರುವ ವಿಷಯದ ದೃಷ್ಟಿಯಿಂದ ತೀರಾ ವಿನೂತನವಾದುದ ಅಷ್ಟೇ ಅಲ್ಲ ಬಹು ಮೌಲ್ಯಯುತವಾದುದು ಕೂಡ. ಲೇಖಕರೇ ಹೇಳುವಂತೆ ‘ಇಂತಹಾ ಒಂದು ಪುಸ್ತಕ ಕನ್ನಡದಲ್ಲಿ ಬರುತ್ತಿರುವುದು ಇದೇ ಮೊದಲು,ಇತರೆ ಭಾರತೀಯ ಭಾಷೇಗಳಲ್ಲಿಯೂ ಬಂದಂತಿಲ್ಲ’. ಈ ಒಂದು ಪುಸ್ತಕದಿಂದ ನಾವು-ನೀವು ಓದಿರುವ ಕನ್ನಡದ ಪ್ರಾಚೀನ ಕವಿಗಳು, ನಮ್ಮನ್ನಾಳಿದ ರಾಜ ಮಹಾರಾಜರ ವಂಶಸ್ಥರ ಕುರಿತಾಗಿ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳಬಹುದು.
ಕನ್ನಡದ ಶ್ರೇಷ್ಠ ಸಂಶೋಧಕರೂ, ಚಿಂತಕರೂ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತರೂ ಆಗಿರುವ ಡಾ. ಎಮ್. ಚಿದಾನಂದಮೂರ್ತಿಗಳ ಈ ಕಿರುಹೊತ್ತಿಗೆ ಅವರ ಹಲವು ವರ್ಷಗಳ ಪರಿಶ್ರಮದ ಫಲ. ಶತ ಶತಮಾನಗಳ ಹಿಂದೆ ಆಳಿಹೋದ ರಾಜವಂಶಸ್ಥರ, ನೂರಾರು-ಸಾವಿರಾರು ವರ್ಷಗಳ ಹಿಂದೆ ಬದುಕಿ ಕಾವ್ಯಗಳನ್ನು ರಚಿಸಿದ ಪ್ರಾಚೀನ ಕವಿಮಹೋದಯರ ಈಗಿನ ವಂಶಸ್ಥರು ಯಾರೆನ್ನುವುದನ್ನು ಪತ್ತೆ ಮಾಡಿ ಅವರನ್ನು ಸಂದರ್ಶಿಸಿ, ಅವರ ಬಳಿ ಇದ್ದ ಅಂದಿನ ಕಾಲದ ಕುರುಹುಗಳನ್ನು ನೋಡಿ ಅದರ ಬಗ್ಗೆ ಲೇಖನ ಅಥವಾ ಪುಸ್ತಕ ಬರೆಯುವುದು ಅಷ್ಟೇನೂ ಸುಲಭವಲ್ಲ. ಉದಾಹರಣೆಗೆ ಕನ್ನಡದ ಆದಿಕವಿ ಪಂಪನನ್ನು ತೆಗೆದುಕೊಂಡರೆ ಅವನ ಕಾಲ ಕ್ರಿ.ಶ.೯೦೨. ಅವನು ‘ವಿಕ್ರಮಾರ್ಜುನ ವಿಜಯ’ ಕಾವ್ಯವನ್ನು ಪೂರ್ಣಗೊಳಿಸಿದ್ದು ಕ್ರಿ.ಶ.೯೪೨ ರಲ್ಲಿ. ಅಂದರೆ ಇಂದಿಗೆ ಸುಮಾರು ಸಾವಿರದ ನೂರು ವರ್ಷಗಳಾದವು. ಹೀಗೆ ಸಾವಿರ ವರ್ಷಗಳ ಹಿಂದೆ ಬದುಕಿದ್ದ ಪಂಪನ ತಂದೆ ಹಾಗೂ ತಾಯಿಯ ವಂಶಸ್ಥರ ವಿವರಗಳಾನ್ನು ಪತ್ತೆ ಮಾಡುವುದು ಮತ್ತು ಅವರನ್ನು ಸ್ವತಃ ಸಂದರ್ಶಿಸಿ ಮತ್ತಷ್ಟು ಮಾಹಿತಿಯನ್ನು ಕಲೆಹಾಕಿ ಪುಸ್ತಕ ಪ್ರಕಟಿಸುವುದು ಬಲು ಅಪರೂಪದ ಸಂಗತಿ. ಹೀಗಾಗೆ ಇಂತಹಾ ಪುಸ್ತಕವು ಕನ್ನಡದಲ್ಲಿ ತೀರಾ ನೂತನವಾಗಿರುವುದು ಸಾಧ್ಯ.





