ವಿಷಯದ ವಿವರಗಳಿಗೆ ದಾಟಿರಿ

Posts from the ‘ಧರ್ಮ’ Category

24
ಡಿಸೆ

ಕೇವಲ ಬ್ರಾಹ್ಮಣರ ಟೀಕೆಗೆ ಮಾತ್ರ ಮೀಸಲೇ ಈ ಪತ್ರಿಕೆ?

– ವಿದ್ಯಾ ಕುಲಕರ್ಣಿ

ಬ್ರಾಹ್ಮಣನವೆಂಬರ್ 18 ನೇ ತಾರೀಖಿನಿಂದ ಇವತ್ತಿನ ವರೆಗೆ ವಾತಾ೯ಭಾರತಿ ಪತ್ರಿಕೆಯಲ್ಲಿನ ಅಂಕಣಗಳನ್ನು ನಾನು ಓದುತ್ತಿದ್ದೇನೆ. ಸುಮಾರು ನಾಲ್ಕೈದು ಅಂಕಣಗಳು ಕಾರಣವಿಲ್ಲದೇ ಬ್ರಾಹ್ಮಣರ ಟೀಕೆಯನ್ನು ಮಾಡಿವೆ. ಯಾಕೆ ಹೀಗೆ ಇವರೆಲ್ಲ ಕಾರಣವಿಲ್ಲದೇ ಬ್ರಾಹ್ಮಣರನ್ನು ಹುರಿದು ಮುಕ್ಕುತ್ತಿದ್ದಾರೆ ? ಮನನೊಂದು ಈ ಲೇಖನ ಬರೆಯುತ್ತಿದ್ದೇನೆ.

ಯಾವ ಲೇಖನಗಳಲ್ಲಿ ಬ್ರಾಹ್ಮಣರನ್ನು ಎಳೆದು ತರುವ ಅವಶ್ಯಕತೆಯೇ ಇಲ್ಲವೋ ಅಲ್ಲೆಲ್ಲ ವಿನಾಕಾರಣ ಬ್ರಾಹ್ಮಣರನ್ನು ಎಳೆದು ತಂದು ಗೂಬೆ ಕೂರಿಸಿದ್ದಾರೆ . ಕೆಳಗಿನ ಉಧಾಹರಣೆಗಳಿಂದ ನೀವಿದನ್ನು ತಿಳಿಯಬಹುದು.

1) ವಿಜಯಾ ಮಹೇಶ್ ಎಂಬುವವರು ‘ ರಾಜ ಕನಕನಾಯಕ ಕನಕದಾಸನಾದ ಕಥೆ’ ಎಂಬ ಅಂಕಣದಲ್ಲಿ ಕನಕದಾಸರ ಕೃತಿಗಳ ಬಗ್ಗೆ ವಿಮಶಾ೯ತ್ಮಕವಾಗಿ ಬರೆಯಬಹುದಿತ್ತು. ಆ ಮೂಲಕ ಕನಕರ ಕೆಲವು ಕೃತಿಗಳ ಬಗ್ಗೆ ಸಾಮಾನ್ಯ ಜನತೆಗೆ ವಿಷಯ ತಿಳಿಯುತ್ತಿತ್ತು. ಹೆಚ್ಚಿನ ಜನ ಕನಕರ ಕೃತಿಯಾದ ‘ರಾಮಧಾನ್ಯ ಚರಿತೆ’ಯನ್ನು ‘ರಾಮಧ್ಯಾನ ಚರಿತೆ’ ಎಂದು ತಪ್ಪಾಗಿ ಓದುತ್ತಾರೆ. ಇನ್ನು ಈ ಕೃತಿಗೆ ಅಷ್ಟಾಗಿ ವಿಮಶೆ೯ ಬಂದಿಲ್ಲವೆಂದು ಓದುಗ ವಲಯದಲ್ಲಿ ಅಪಸ್ವರವಿದೆ. ಈ ಎಲ್ಲವನ್ನು ಲೇಖಕಿ ಈ ಅಂಕಣದಲ್ಲಿ ವಿಮಶಿ೯ಸಬಹುದಿತ್ತು. ಆದರೆ ಇವರು ತಮ್ಮ ಲೇಖನವನ್ನು ಕನಕರ ಕೃತಿ ವಿಮಶೆ೯ಗೆ ಅಥವಾ ಅವರ ಜೀವನ ವಿಮಶೆ೯ಗೆ ಮೀಸಲಿಡದೇ ಕೇವಲ ಬ್ರಾಹ್ಮಣರ ಟೀಕೆಗೆ ಮೀಸಲಾಗಿರಿಸಿದ್ದಾರೆ. ಅವರು ಹೇಳುತ್ತಾರೆ ; ಕೃಷ್ಣದೇವರಾಯನ ಒಂದು ಯುದ್ಧದಲ್ಲಿ ಕನಕರ ಅಪಾರ ಶ್ರಮದಿಂದ ಸೋಲುವ ಹಂತದಲ್ಲಿದ್ದ ರಾಯ ಗೆಲುವು ಸಾಧಿಸಿದನಂತೆ.ಗೆಲುವಿನ ಸುದ್ದಿ ಕೇಳಿದ ವ್ಯಾಸರಾಯರು ಕನಕನನ್ನು ಯಾವುದೇ ರೀತಿಯಿಂದ ಗೌರವಿಸದೇ ಇತ್ತ ಕೃಷ್ಣದೇವರಾಯನೂ ಗೌರವಿಸದೆ ಕನಕರು ಬುದ್ಧಿಭ್ರಮಣರಾದರಂತೆ.

ಮತ್ತಷ್ಟು ಓದು »

19
ಡಿಸೆ

ಭಗವದ್ಗೀತೆಯ ನೈತಿಕ ಜಿಜ್ಞಾಸೆ

– ರಮಾನಂದ ಐನಕೈ

ಭಗವದ್ಗೀತೆಭಗವದ್ಗೀತೆ ಭಾರತೀಯರ ಅತ್ಯಂತ ಪವಿತ್ರವಾದ ಗ್ರಂಥ. ಆದರೆ ಕಳೆದ ಅನೇಕ ವರ್ಷಗಳಿಂದ ಈ ಗ್ರಂಥ ವಿವಾದಕ್ಕೆ ಎಡೆಯಾಗುತ್ತಲಿದೆ. ಭಗವದ್ಗೀತೆಯನ್ನು ಟೀಕಿಸುವ ಬಹುತೇಕ ಜನ ಅದನ್ನು ಓದಿಯೇ ಇಲ್ಲ. ಇನ್ನೂ ಕೆಲವು ಓದಿದವರಿಗೆ ಅದು ಅರ್ಥವೇ ಆಗಿಲ್ಲ. ಅದನ್ನು ಓದಿ ಅರ್ಥಮಾಡಿಕೊಂಡವರಿಗೆ  ಈ ವಿವಾದ ಎಬ್ಬಿಸಿದವರು ಹಾಸ್ಯಾಸ್ಪದರಾಗಿ ಕಾಣುತ್ತಿದ್ದಾರೆ. ಇಷ್ಟೆಲ್ಲ ಗೊಂದಲವಾಗಲು ಮುಖ್ಯ ಕಾರಣವೆಂದರೆ ನಾವು ಭಗವದ್ಗೀತೆಯನ್ನು ಗೃಹಿಸುತ್ತಿರುವ ರೀತಿ. ಭಗವದ್ಗೀತೆಯನ್ನುವುದು ಒಂದು ಕತೆಯಲ್ಲ. ಅಥವಾ ಬೈಬಲ್, ಕುರಾನುಗಳಂತೆ ಧರ್ಮಗ್ರಂಥವಲ್ಲ. ಅದು ಸಾಮಾಜಿಕ ವ್ಯವಸ್ಥೆಯನ್ನು ನಿರ್ದೇಶಿಸಲು ಹುಟ್ಟಿಕೊಂಡ ಸಂವಿಧಾನವೂ ಅಲ್ಲ. ಭಗವದ್ಗೀತೆಯೆಂದರೆ ಬದುಕಿನ ಜಿಜ್ಞಾಸೆ. ಮನುಷ್ಯ ನೆಮ್ಮದಿಯಿಂದ ಬದುಕಲು ದಾರಿತೋರಿಸುವ ಮಾರ್ಗದರ್ಶಿ. ಹೀಗೆ ಅರ್ಥೈಸಿಕೊಂಡಾಗ ಭಗವದ್ಗೀತೆ ಪ್ರತಿಯೊಬ್ಬರಿಗೆ ನೀತಿಪಾಠವಾಗಿ ತೆರೆದುಕೊಳ್ಳುತ್ತದೆ.

ವಸಾಹತುಶಾಹಿ ಆಳ್ವಿಕೆಯ ಜೊತೆಗೇ ಭಗವದ್ಗೀತೆಯನ್ನು ಬೇರೆ ರೀತಿಯಲ್ಲಿ ಅರ್ಥೈಸುವ ಚಿಂತನಾಪರಂಪರೆ ಬೆಳೆದುಬಂತು. ಏಕೆಂದರೆ ಪಾಶ್ಚಾತ್ಯರು ಪ್ರೊಟೆಸ್ಟಾಂಟ್ ವಿಚಾರಧಾರೆಯ ನೆಲೆಯಲ್ಲಿ ಭಗವದ್ಗೀತೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರು. ಹಾಗಾಗಿ ಅವರಿಗೆ ಭಗವದ್ಗೀತೆ ರಿಲಿಜನ್ನಿನ ಜಿಜ್ಞಾಸೆಯಾಯಿತೇ ವಿನಃ ಬದುಕಿನ ಜಿಜ್ಞಾಸೆಯಾಗಿ ಕಾಣಲೇಇಲ್ಲ. ಅದಕ್ಕೆ ಮುಖ್ಯ ಕಾರಣ ಸಾಂಸ್ಕೃತಿಕ ವೈರುದ್ಧ್ಯತೆ. ಇದೇ ಮುಂದೆ ಸೆಕ್ಯುಲರ್ ಚಿಂತನಾ ವಿಧಾನದಲ್ಲೂ ಮುಂದುವರಿಯುತ್ತಾ ಬಂತು. ಇದು ಇಂದು ಆಧುನಿಕ ಭಾರತದಲ್ಲಿ ಭಗವದ್ಗೀತೆಯ ಕುರಿತಾಗಿ ಅಖಾಡವನ್ನೇ ನಿರ್ಮಾಣ ಮಾಡುತ್ತಲಿದೆ. ಹಾಗಾಗಿ ಭಗವದ್ಗೀತೆಯಲ್ಲಿ ಏನಿದೆ ಮತ್ತು ಅದು ಏನು ಹೇಳುತ್ತಲಿದೆ ಎಂಬುದನ್ನು ಈ ಶತಮಾನದ ಭಾಷೆಯಲ್ಲಿ ಅರ್ಥಮಾಡಿಕೊಳ್ಳುವ ಅಗತ್ಯವಿದೆ.

ಮತ್ತಷ್ಟು ಓದು »

17
ಡಿಸೆ

ಸಲಿಂಗ ಕಾಮ ಕಾನೂನು ಬಾಹಿರ ಯಾಕೆ?

-ಬಾಲಚಂದ್ರ ಭಟ್

Salinga Kamigaluಸಲಿಂಗ ಕಾಮದ ಬಗ್ಗೆ ಸುಪ್ರೀಮ್ ಕೋರ್ಟ್ ಕೊಟ್ಟ ಬಹಳ ಕಾರಣಗಳಿಗಾಗಿ ಹುಬ್ಬೇರಿಸುವಂತೆ ಮಾಡಿದೆ. ಬಹಳಷ್ಟು ಜನರು ತೀರ್ಪಿನ ಬೆಂಬಲಕ್ಕಿದ್ದರೆ, ಇನ್ನು ಕೆಲವರು ಇದು ಸಲಿಂಗಿಗಳ ಹಕ್ಕು ಚ್ಯುತಿ ಎಂದು ತರ್ಕಿಸುತ್ತಿದ್ದಾರೆ. ಮೂಲತಹ ಸಲಿಂಗ ಕಾಮವೆಂಬುದು ಪೌರಾತ್ಯ, ಹಾಗೂ ಅರಬ್ ದೇಶಗಳಲ್ಲಿ ನಿಷೇಧಕ್ಕೊಳಗಾಗಲು ಮುಖ್ಯ ಕಾರಣ ಅಲ್ಲಿನ ರಿಲಿಜಿಯನ್ ಸಂಸ್ಕೃತಿ. ಮುಸ್ಲೀಮ್ ಕ್ರಿಶ್ಚಿಯನ್ ಮತ್ತಿತರ ಅಬ್ರಾಹಮಿಕ್ ಧರ್ಮಗ್ರಂಥಗಳು ಸಲಿಂಗ ಕಾಮವನ್ನು ಧರ್ಮವಿರೋಧಿ ಎಂದು ಬೋಧಿಸುತ್ತವೆಯಾದ್ದರಿಂದ ಅದನ್ನು ಅಪರಾಧ ಎಂದು ಸ್ವೀಕರಿಸಲಾಗಿತ್ತು. ವೈಜ್ನಾನಿಕ ಎಂದು ಹೇಳಲ್ಪಡುವ ನಾಸ್ತಿಕರ ರಾಜಕೀಯ ಪಕ್ಷ ಕಮ್ಯುನಿಸ್ಮ್ ಕೂಡ ಸಲಿಂಗ ಕಾಮದ ಬಗೆಗೆ ಬೇರೆಯದೆ ನಿರ್ಧಾರವನ್ನು ಹೊಂದಿರಲಿಲ್ಲ. ಬದಲಾಗಿ ರಿಲಿಜಿಯನ್ ಗಳು ಕೊಟ್ಟ ತೀರ್ಪನ್ನೆ ಸಲಿಂಗಿಗಳ ಮೇಲೆ ಹೇರಿತು. ಆದರೆ ಕಾರಣದ ವ್ಯಾಖ್ಯಾನವನ್ನಷ್ಟೆ ಬದಲು ಮಾಡಿತು. ಇದು ‘ಅನಾಗರಿಕ’ ಎಂಬ ಕಾರಣಕ್ಕೆ ಸ್ಟಾಲಿನ್ ನ ರಾಜಕಾರಣದಲ್ಲಿ ಅಪರಾಧವೆಂದು ಪರಿಗಣಿಸಲಾಗಿತ್ತು. (ಅನಾಗರಿಕ ಎಂದು ತೀರ್ಮಾನಿಸುವಲ್ಲಿ ವೈಜ್ನಾನಿಕ ಧೋರಣೆಯೇ ಇಲ್ಲದಿದ್ದದ್ದು ಕಮ್ಯುನಿಸ್ಮ್ ನ ವೈಜ್ನಾನಿಕ ನಿಲುವನ್ನು ಅನುಮಾನಪಡುವಂತಾಗಿದೆ).

ಮತ್ತಷ್ಟು ಓದು »

26
ನವೆಂ

ಆಚರಣೆ, ಸಂಪ್ರದಾಯ,ನಂಬಿಕೆ ಮತ್ತು ಕಾಕತಾಳಿಯಗಳು

-ಮು.ಅ ಶ್ರೀರಂಗ,ಬೆಂಗಳೂರು

Indian Tradition N Heritageಒಬ್ಬ ಬ್ರಾಹ್ಮಣನ  ಮನೆಯಲ್ಲಿ ಬೆಕ್ಕೊಂದು ಓಡಾಡಿಕೊಂಡಿತ್ತು. ಹಳೆಯ ಕಾಲದ ಆ ಮನೆಯಲ್ಲಿದ್ದ ಇಲಿ,ಹೆಗ್ಗಣಗಳನ್ನು ತಿಂದುಕೊಂಡು ಅವುಗಳ ಕಾಟ ತಪ್ಪಿಸ್ಸಿದ್ದರಿಂದ ಸಹಜವಾಗಿ ಆ ಬೆಕ್ಕನ್ನು ಕಂಡರೆ ಮನೆಮಂದಿಗೆಲ್ಲಾ ಅಕ್ಕರೆಯಿತ್ತು.ಆ ಕುಟುಂಬದ  ಯಜಮಾನನ ತಂದೆಯದೋ ತಾಯಿಯದೋ  ತಿತಿ ಮಾಡಬೇಕಾದ ದಿನ ಬೆಕ್ಕು ಮನೆಯೊಳಗೆಲ್ಲಾ ಓಡಾಡಿ ಮೈಲಿಗೆ ಮಾಡುವುದು ಸರಿಯಲ್ಲ ಎಂದು ಅದನ್ನು ಮನೆಯ ಕಂಬವೊಂದಕ್ಕೆ ಕಟ್ಟಿಹಾಕಿದರು. ಆ ದಿನದ ಕೆಲಸ, ಊಟ ಎಲ್ಲಾ ಮುಗಿದ ನಂತರ ಆ ಬೆಕ್ಕಿಗೆ ಬಂಧನದಿಂದ ಬಿಡುಗಡೆಯಾಯ್ತು. ಕಾಲ ಕಳೆದಂತೆ ಆ ಮನೆಯ ಯಜಮಾನ ತೀರಿಕೊಂಡ. ಅವನ ಮಕ್ಕಳು ಅಪ್ಪನ ತಿತಿ ಮಾಡುವ ಸಮಯ ಬಂತು. ಆಗ ಮನೆಯಲ್ಲಿ  ಬೆಕ್ಕು ಇರಲಿಲ್ಲ. ಹೀಗಾಗಿ ಅಕ್ಕ ಪಕ್ಕದ ಮನೆಯವರಿಂದ ಕಾಡಿ ಬೇಡಿ ಬೆಕ್ಕೊಂದನ್ನು ತಂದು ಕಂಬಕ್ಕೆ ಕಟ್ಟಿದರು. ಅಂದಿನ ಕೆಲಸ ಮುಗಿದ ನಂತರ ವಾಪಸ್ಸು ಕೊಟ್ಟರು. ಇದು ಹೀಗೆ ಪ್ರತಿ ಸಾರಿ ತಿತಿ ಮಾಡುವಾಗಲೂ ಮುಂದುವರಿಯಿತು.  ಇದೊಂದು ಕಾಲ್ಪನಿಕ ಕಥೆ ಎಂಬುದರಲ್ಲಿ ಸಂದೇಹವಿಲ್ಲ. ಹಾಗೆ ನೋಡಿದರೆ ಐತಿಹಾಸಿಕವಾದುದನ್ನು ಬಿಟ್ಟರೆ ನಾವು ಓದುವ ಕತೆ ಕಾದಂಬರಿಗಳೆಲ್ಲ ಕಾಲ್ಪನಿಕವಾದವುಗಳೇ. ಅದರ  ಬಗ್ಗೆ ಚರ್ಚೆ ಈಗ ಬೇಡ. ಏಕೆಂದರೆ ಈ ಬರಹ ಸಾಹಿತ್ಯಕ್ಕೆ ಸಂಬಧಿಸಿದ್ದಲ್ಲ. ಈ ಬೆಕ್ಕಿನ ಕತೆಯಲ್ಲಿ ನಾವು ತಿಳಿದುಕೊಳ್ಳಬೇಕಾದ ಅಂಶ ಒಂದಿದೆ. ನಾವುಗಳು ಕೆಲವೊಂದು ಆಚರಣೆಗಳಿಗೆ ಇದು ಏಕೆ? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವುದಿಲ್ಲ. ಮಕ್ಕಳೇನಾದರು ಕೇಳಿದರೆ “ನೀನೊಬ್ಬ ಅಧಿಕ ಪ್ರಸಂಗಿ, ತಲೆಹರಟೆ”ಎಂದು ಬೈದು ಅವರನ್ನು ಸುಮ್ಮನಾಗಿಸುತ್ತೇವೆ. ತಂದೆ ತಾಯಿಗೆ  ಅಜ್ಜಿ, ತಾತನಿಗೆ ಹೆದರಿದ ಆ ಮಕ್ಕಳು ಸುಮ್ಮನಾಗುತ್ತವೆ. ಅವರು ದೊಡ್ಡವರಾದ ಮೇಲೆ ಹಿಂದಿನವರು ತಮಗೆ  ಮಾಡಿದ್ದನ್ನೇ ತಮ್ಮ ಮಕ್ಕಳಿಗೂ ಮಾಡುತ್ತಾರೆ. ಈ ಕೊಂಡಿಗಳು ಒಂದಕ್ಕೊಂದು ಸೇರಿಕೊಳ್ಳುತ್ತಾಹೋಗಿ ಆಚರಣೆಗಳಾಗಿ,ಸಂಪ್ರದಾಯಗಳಾಗಿ ಮುಂದುವರಿಯುತ್ತವೆ.
ಮತ್ತಷ್ಟು ಓದು »

20
ನವೆಂ

ವಿಜ್ನಾನವೂ ಒಂದು ನಂಬಿಕೆಯೇ ಅಲ್ಲವೇ?

– ಬಾಲಚಂದ್ರ ಭಟ್

Vijnana mattu Nambikeಈ ತಲೆಬರಹವನ್ನು ನೋಡಿದ ಬಹಳಷ್ಟು ಜನ ಇದೊಂದು ಮೂರ್ಖತನದ ಮಾತು ಎಂದುಕೊಳ್ಳುವದರಲ್ಲಿ ಸಂಶಯವಿಲ್ಲ. ಇಷ್ಟೆಲ್ಲ ನಾನು ಯಾಕೆ ಬರೆಯಲು ಪ್ರಾರಂಭಿಸಬೇಕಾಯಿತೆಂದರೆ ಇವತ್ತು ರಾಜಕೀಯ, ಸಾಮಜಿಕ ಹಾಗೂ ಇತ್ಯಾದಿ ವಲಯಗಳಲ್ಲಿ ನಂಬಿಕೆ, ಮೂಢನಂಬಿಕೆ ಹಾಗೂ ವಿಜ್ನಾನಗಳು ಬಹುಮಟ್ಟದಲ್ಲಿ ಚರ್ಚೆಯಾಗುತ್ತಿರುವದು. ಹೀಗೆ ಚರ್ಚೆಯಾದಾಗಲೆಲ್ಲ ನಂಬಿಕೆಯ ಬಗ್ಗೆ ಬೇರೆ ಬೇರೆ ಹಿನ್ನೆಲೆಯಲ್ಲಿ ಪರ/ವಿರೋಧ ವ್ಯಾಖ್ಯಾನಗಳನ್ನು ನೀಡಿದರೂ
ವಿಜ್ನಾನಕ್ಕೆ ಅವಿರೊಧ ಅನುಮೋದನೆ ಇರಬೇಕೆಂಬ ಇಂಗಿತ ಚರ್ಚೆಯ ಮೂಲ ತತ್ವವೇ ಆಗಿರುತ್ತದೆ.

ವೈಜ್ನಾನಿಕ ಚಿಂತಕರು ಜಡ್ಜ್ ಸ್ಥಾನದಲ್ಲಿಯೂ, ನಂಬಿಕೆ/ಮೂಢನಂಬಿಕೆಗಳ ಪರ/ವಿರೋಧಿಗಳು ಕಟೆಕಟೆಯಲ್ಲಿ ನಿಂತಿರುವಂತೆ ಅನಿಸುತ್ತದೆ. ಅಂತೆಯೆ ವಿಜ್ನಾನ ಇವತ್ತು ಜಡ್ಜ್ ಸ್ಥಾನವನ್ನು ಆಕ್ರಮಿಸಿದೆಯೆಂದರೆ ಮನುಕುಲದ ಬೌದ್ಧಿಕತೆ ಒಂದೇ ತಳಪಾಯದಡಿ ನಿರ್ಮಾಣವಾಗುತ್ತಿದೆ ಎನ್ನುವದರ ಅರ್ಥವೇನೊ! ಹಾಗೆಂದ ಮಾತ್ರಕ್ಕೆ ಎಲ್ಲರೂ ವಿಜ್ನಾನದ ಅಧ್ಯಯನದ ಬಗ್ಗೆ ಆಸ್ಥೆಯನ್ನು ತೋರಿಸುತ್ತಿದ್ದಾರೆಂದು ಅರ್ಥವಲ್ಲ. ಬದಲಿಗೆ ವಿಜ್ನಾನ ಇವತ್ತು ಜಡ್ಜ್ ಆಗಿರುವ ಕಾರಣ ಜನರು ತಮ್ಮ ತಮ್ಮ ಬದುಕಿನ ದೃಷ್ಟಿಕೋನಗಳನ್ನು ವಿಜ್ನಾನದ ಮೂಲಕ ಸಮರ್ಥಿಸಿಕೊಳ್ಳುತ್ತಿದ್ದಾರಷ್ಟೆ.

ಮತ್ತಷ್ಟು ಓದು »

15
ನವೆಂ

ಗಾ೦ಧಿ ಹ೦ತಕ ಗೋಡ್ಸೆ ಮತ್ತು ಆರ್.ಎಸ್.ಎಸ್ ಎನ್ನುವ ಭಯೋತ್ಪಾಧಕ ಸ೦ಘಟನೆ ..!!!

– ಗುರುರಾಜ್ ಕೊಡ್ಕಣಿ

Godse-Gandhijiಆತ ಹೇಳುತ್ತಲೇ ಹೋದ .’ನೀವು ಏನೇ ಹೇಳಿ ಸರ್,ಆರ್.ಎಸ್.ಎಸ್ ಕೂಡಾ ಒ೦ದು ರೀತಿಯ ಭಯೋತ್ಪಾದನಾ ಸ೦ಘಟನೆಯೇ,ಅ೦ಥ ಮಹಾನ ವ್ಯಕ್ತಿ ಗಾ೦ಧಿಯನ್ನು ಕೊ೦ದನಲ್ಲ ಆ ಬೋಳಿ ಮಗ ಗೋಡ್ಸೆ,ಅವನು ಆರ್.ಎಸ್.ಎಸ್ ನವನೇ.ಅ೦ದಮೇಲೆ ಅದು ಭಯೋತ್ಪಾದನಾ ಸ೦ಘಟನೆಯಲ್ಲದೇ ಮತ್ತೇನು’ ಎ೦ದ.ಆತ ನನಗೆ ಪರಿಚಿತ.ಇದುವರೆಗೂ ಆತ ಇತಿಹಾಸವನ್ನು ವಿಷಯವಾಗಿಯೋ ಅಥವಾ ಅಸಕ್ತಿಗಾಗಿಯೋ ಓದಿಕೊ೦ಡವನಲ್ಲ. ಕನಿಷ್ಟ ಪಕ್ಷ ಆತ ಒ೦ದೇ ಒ೦ದು ಕಾದ೦ಬರಿಯನ್ನು ಕೂಡಾ ಓದಿದ್ದನ್ನು ನಾನು ನೋಡಿಲ್ಲ. ಆತನಿಗೆ ’ಆರ್.ಎಸ್.ಎಸ್’ನ ವಿಸ್ತೃತ ರೂಪವಾದರೂ ತಿಳಿದಿದಿಯೋ ನನಗೆ ಅನುಮಾನ.ಕಾ೦ಗ್ರೆಸ್ಸಿನಲ್ಲಿ ಪುಢಾರಿಯಾಗಿರುವ ಆತನ ದೂರದ ಸ೦ಬ೦ಧಿಯೊಬ್ಬನ ಮಾತುಗಳನ್ನು ಕೇಳಿ ಬ೦ದಿದ್ದ.ಅದನ್ನೇ ನನ್ನ ಮು೦ದೇ ಒದರುತ್ತಿದ್ದ.ಇನ್ನು ಈತನಿಗೆ ಆರ್.ಎಸ್.ಎಸ್.ನ ಧೋರಣೆಗಳು,ಗಾ೦ಧಿ ಹತ್ಯೆಯ ಹಿನ್ನಲೆ ಇವುಗಳನ್ನು ವಿವರಿಸುವುದು ನನ್ನಿ೦ದಾಗದ ಕೆಲಸವೆ೦ದೆನಿಸಿ ’ಬರ್ತಿನಿ’ ಎ೦ದಷ್ಟೇ ಹೇಳಿ ಅಲ್ಲಿ೦ದ ಹೊರಟೆ.

ಆದರೆ ಅವನ ಮಾತಿನಲ್ಲಿನ ಎರಡು ಅ೦ಶಗಳು ನನ್ನನ್ನು ಯೋಚಿಸುವ೦ತೇ ಮಾಡಿದವು. ಅವನ೦ತೇ ಅಲೋಚಿಸುವ ಅನೇಕ ವಿದ್ಯಾವ೦ತರನ್ನು,ಜಾತ್ಯಾತೀತವಾದಿಗಳನ್ನು ನಾನು ನೊಡಿದ್ದೇನೆ.ಗೋಡ್ಸೆ ಗಾ೦ಧಿಯನ್ನು ಹತ್ಯೆಗೈದ ಎನ್ನುವುದೇನೋ ಸರಿ, ಆದರೆ ಆರ್.ಎಸ್.ಎಸ್ ಭಯೋತ್ಪಾಧನಾ ಸ೦ಘಟನೆಯಾಗಿದ್ದು ಯಾವಾಗ..? ಗೊಡ್ಸೆ ಕೆಲಕಾಲ ಆರ್.ಎಸ್.ಎಸ್ ನ ಸದಸ್ಯನಾಗಿದ್ದ ಎ೦ಬುದನ್ನೂ ಒಪ್ಪಿಕೊಳ್ಳೋಣ.ಅ೦ದ ಮಾತ್ರಕ್ಕೆ ಅರ್.ಎಸ್.ಎಸ್ ಭಯೋತ್ಪಾದನಾ ಸ೦ಘಟನೆಯಾಗಿಬಿಡಬೇಕೇ..? ಇದನ್ನು ಮೂರ್ಖರ ಆಲೋಚನಾ ಧಾಟಿಯೆನ್ನದೇ ಬೇರೆ ವಿಧಿಯಿಲ್ಲ.ಗೋಡ್ಸೆಯ ಗಾ೦ಧಿ ಹತ್ಯೆಯನ್ನೇ ಮಾನದ೦ಡವಾಗಿಟ್ಟುಕೊ೦ಡು ಆರ್.ಎಸ್.ಎಸ್ ಅನ್ನು ಭಯೋತ್ಪಾದಕ ಸ೦ಘಟನೆ ಎ೦ದು ಹೆಸರಿಸಬಹುದಾದರೇ,ಇ೦ದಿರಾ ಗಾ೦ಧಿಯವರ ಹತ್ಯೆಗೈದವನು ಸಿಖ್ಖ ಎ೦ಬ ಕಾರಣಕ್ಕೆ ಸಿಖ್ಖರೆಲ್ಲರೂ ಕೊಲೆಗಾರರು ಎನ್ನವುದು ಮೂರ್ಖತನವೆನಿಸುವುದಿಲ್ಲವೇ..? ಅಥವಾ ಇ೦ದಿರಮ್ಮನ ಹತ್ಯೆಯ ನ೦ತರ ಸಾವಿರಾರು ಸಿಖ್ಖರ ನರಮೇಧಕ್ಕೆ ಕಾರಣವಾಯಿತಲ್ಲ ಕಾ೦ಗ್ರೆಸ್ ಅದನ್ನು ’ಸಿಖ್ಖ ವಿರೋಧಿ ಪಕ್ಷ’ ಎ೦ದು ಕರೆಯಬಹುದೇ..?

ಮತ್ತಷ್ಟು ಓದು »

11
ನವೆಂ

“ಮೂಢನಂಬಿಕೆ” ಅನ್ನುವ ಮೊದಲು “ನಂಬಿಕೆ” ಅನ್ನುವುದನ್ನು ಡಿಫೈನ್ ಮಾಡಲಾಗಿದೆಯೇ?

– ರಾಕೇಶ್ ಶೆಟ್ಟಿ

Anti Superstition Bill Karntakaಸೋ-ಕಾಲ್ಡ್ ಪ್ರಗತಿಪರರು,ಬುದ್ಧಿಜೀವಿಗಳು,ಚಿಂತಕರು ಮತ್ತು ಸರ್ಕಾರಿ ಸಾಹಿತಿಗಳು ಸೇರಿಕೊಂಡು ಹೊರತಂದಿರುವ “ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ವಿಧೇಯಕ – ೨೦೧೩” ಅನ್ನು ಓದಿದ ಮೇಲೆ ಮತ್ತದಕ್ಕೆ ಸಿಎಂ ಸಿದ್ದರಾಮಯ್ಯ ಬೆಳಗಾವಿ ಅಧಿವೇಶನದಲ್ಲಿ ಇದನ್ನು ವಿದಾಯಕವಾಗಿ ಮಂಡಿಸುತ್ತೇನೆ ಅಂತೇಳಿ ಮತ್ತೆ ಯು-ಟರ್ನ್ ತೆಗೆದುಕೊಂಡಾಗ,ನನಗೆ ನೆನಪಾಗಿದ್ದು “ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಿತ್ತಂತೆ…!” ಅನ್ನೋ ಗಾದೆ.

‘ಕಿಚನ್ ಕ್ಯಾಬಿನೇಟ್’ ಅಣತಿಯಂತೆ ಸರ್ಕಾರಗಳು ಕಾರ್ಯ ನಿರ್ವಹಿಸುತ್ತವೆ ಅನ್ನುವುದು ಕೆಲವು ಮುಖ್ಯಮಂತ್ರಿಗಳ ಕಾಲದಲ್ಲಿ ಕೇಳಿಬರುತಿದ್ದಂತ ಮಾತು.ಆದರೆ,ಸಿದ್ದರಾಮಯ್ಯನವರ ಸರ್ಕಾರ ‘ಸರ್ಕಾರಿ ಸಾಹಿತಿಗಳ ಕ್ಯಾಬಿನೇಟ್’ ನ ಅಣತಿಯೇ ನಡೆಯುತ್ತದೆಯೇ? ಹಾಗೆಯೇ ಅನ್ನಿಸುತ್ತಿದೆ.ಸಮಾಜ ವಿಜ್ನಾವನ್ನು ಅಕಾಡೆಮಿಕ್ ಆಗಿ ಕಲಿಸುತಿದ್ದ ಸಂಶೋಧನಾ ಕೇಂದ್ರದ ಮೇಲೆ ವಕ್ರ ದೃಷ್ಟಿ ಬೀರಿದ ಸರ್ಕಾರವೇ ಈಗ ಸಾಮಾಜಿಕ ಸಮಸ್ಯೆಗಳ ಬಗ್ಗೆ ಕರಡು ಸಿದ್ದ ಮಾಡಿ ಅಂತ ಕೇಳಿಕೊಂಡು ಅದನ್ನು ಜಾರಿಗೆ ತರಲು ಹೊರಟಿರುವುದು ಹಾಸ್ಯಾಸ್ಪದವಾಗಿದೆ.

ಈ ನಾಸ್ತಿಕ ಮಹಾಶಯರುಗಳ ಪ್ರಕಾರ, “ಫಲಜ್ಯೋತಿಷ್ಯ,ಕಾಲ ಜ್ನಾನ,ಸಂಖ್ಯಾ ಶಾಸ್ತ್ರ,ವಾಸ್ತು ಶಾಸ್ತ್ರ,ಮಠಾಧೀಶರ,ಸ್ವಾಮೀಜಿಗಳ ಪಾದ ಪೂಜೆ,ಸರ್ಕಾರಿ ಕಚೇರಿಗಳಲ್ಲಿ ಪೂಜೆ,ಹೋಮ-ಹವನ,ದೇವಸ್ಥಾನಗಳಲ್ಲಿ ಪ್ರಾಣಿಬಲಿ ಕೊಡುವುದು,ಜಪಮಾಲೆಗಳು,ರುದ್ರಾಕ್ಷಿ,ಆಧ್ಯಾತ್ಮ ಬಗ್ಗೆ ಮಾತನಾಡುವುದು” ಇವೆಲ್ಲ ನಿಷೇಧವಾಗಬೇಕಂತೆ…!
ಮತ್ತಷ್ಟು ಓದು »

31
ಆಕ್ಟೋ

“ಓಲೈಕೆ ಮತ್ತು ತುಷ್ಟೀಕರಣ” ಜಾತ್ಯಾತೀತತೆಯ ಸಂಕೇತಗಳೇ?

ಮು ಅ ಶ್ರೀರಂಗ ಬೆಂಗಳೂರು

Mindsetಒಂದು ರಾಜಕೀಯ ಧೋರಣೆಗೆ ಕಂಕಣಬದ್ಧವಾದ “ಹೊಸತು”ಎಂಬ ಮಾಸಪತ್ರಿಕೆಯ ಜುಲೈ ೨೦೧೩ರ ಸಂಚಿಕೆಯಲ್ಲಿ “ಆಧುನಿಕೋತ್ತರವಾದವೂ ಸಿ. ಎಸ್. ಎಲ್. ಸಿ. ಚಿಂತನಾಕ್ರಮವೂ”ಎಂಬ ಲೇಖನವನ್ನು ಬೆಂಗಳೂರಿನ ಕೆ. ಪ್ರಕಾಶ್ ಎಂಬುವವರು ಬರೆದಿದ್ದಾರೆ. ೫ ಪುಟಗಳಷ್ಟು ವಿಸ್ತಾರವಾದ ಆ ಲೇಖನದ ೧೬ ಪ್ಯಾರಾಗಳಲ್ಲಿ ಸುಮಾರು ೧೫ ಜನ ಬುದ್ಧಿಜೀವಿಗಳ,ಚಿಂತಕರ,ಉದ್ದುದ್ದದ ವಾಕ್ಯಗಳನ್ನು(ಉದ್ಧರಣೆಗಳು)ಪ್ರಕಾಶ್ ಅವರು ತಮ್ಮ ಲೇಖನಕ್ಕೆ “ಬಲ”ಬರಲಿ ಎಂದು ಉಪಯೋಗಿಸಿಕೊಂಡಿದ್ದಾರೆ. ಆ ದೊಡ್ಡ ದೊಡ್ಡ ವಾಕ್ಯಗಳ ನಡುವೆ “ಫಿಲ್ಲರ್”ತರಹ ತಮ್ಮ ನಾಲ್ಕೈದು ಸಾಲುಗಳನ್ನು ಸೇರಿಸಿದ್ದಾರೆ. ಆ “ಫಿಲ್ಲರ್”ಗಳ ಮುಖ್ಯ ಉದ್ದೇಶ ಕುವೆಂಪು ವಿ. ವಿ.ಯಲ್ಲಿನ ಸಿ ಎಸ್ ಎಲ್ ಸಿ ಯನ್ನು ಖಂಡಿಸುವುದಷ್ಟೇ ಆಗಿದೆ.

“ಮಡೆ ಸ್ನಾನ”ದಿಂದ ಪ್ರಾರಂಭವಾಗುವ ಈ ಲೇಖನ ಕೊನೆಗೆ ಬಂದು ನಿಲ್ಲುವುದು  “ವಚನಗಳು vs ಜಾತಿ ವ್ಯವಸ್ಥೆ”ಬಗ್ಗೆ  “ಪ್ರಜಾವಾಣಿ”ಪತ್ರಿಕೆಯಲ್ಲಿ ಸುಮಾರು ಮೂರು ತಿಂಗಳಿನಷ್ಟು ಕಾಲ ನಡೆದ ವಾದ-ಪ್ರತಿವಾದದ “ಅನುಭವ ಮಂಟಪದಲ್ಲಿ”. ಪ್ರಕಾಶ್ ಅವರು ತುಂಬಾ ಆರಾಧಿಸುವ ಪ್ರೊ। ಐಜಾಜ್ ಅಹ್ಮದ್ ಅವರೇ “ಆಧುನಿಕೋತ್ತರವಾದವು ಹಲವು ವಿಭಿನ್ನ ಎಳೆಗಳಿಂದ ರಚಿತವಾಗಿದ್ದು ಅದನ್ನು ಒಂದು ಸುಸಂಬದ್ಧ ಚಿಂತನೆಯಾಗಿ ಮಂಡಿಸುವುದು ಕಷ್ಟ ಎಂದು ಎಚ್ಚರಿಸುತ್ತಲೇ ಅದರ ಪ್ರಮುಖ ಲಕ್ಷಣಗಳನ್ನು ಗುರುತಿಸುತ್ತಾರಂತೆ”(ಹೊಸತು ಜುಲೈ ೨೦೧೩ ಪುಟ ೩೦). ಸಿ ಎಸ್ ಎಲ್ ಸಿ ಯದೂ ಆ ಹಲವು ಹಾದಿಗಳಲ್ಲಿ ಒಂದು ಎಳೆ ಎಂದು  ಪ್ರಕಾಶ್ ಅವರು ಒಪ್ಪಿಕೊಳ್ಳಲು ಸಿದ್ದರಿಲ್ಲ.

ಮತ್ತಷ್ಟು ಓದು »

19
ಆಕ್ಟೋ

ಮಲಾಲಾ ~ ನಿಜವಾದ ಕಥೆ(ಪುರಾವೆಗಳ ಸಹಿತ)

ಮೂಲ : ನದೀಂ ಎಫ್ ಪರಾಚ

ಅನುವಾದ : ನಿವೇದಿತ ಥಾಡಣಿ

Malalaಸೆಪ್ಟೆಂಬರ್ 2012 ರಲ್ಲಿ, ಪಾಕಿಸ್ತಾನದ ಸ್ವಾತ್ ಕಣಿವೆಯಲ್ಲಿ ಒಬ್ಬ ತಾಲಿಬಾನ್ ಕಾರ್ಯಕರ್ತ  15 ವರ್ಷದ ಶಾಲಾ ಹುಡುಗಿಯ ಮುಖ ಮತ್ತು ತಲೆಗೆ  ಗುಂಡು ಹಾರಿಸಿದ್ದಾನೆ  ಎಂದು ವರದಿಯಾಯಿತು.ಈ ದಾಳಿ ವಿಶ್ವದಾದ್ಯಂತ ಆಕ್ರೋಶಕ್ಕೆ ಕಾರಣವಾಯಿತು ಮತ್ತು ಈ ಸುದ್ದಿಗೆ  ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ತುಂಬಾ ಮಹತ್ವ ನೀಡಲಾಯಿತು.

ಅವಳೇ ಮಲಾಲಾ.

ಪಾಕಿಸ್ತಾನದಲ್ಲಿ ನಂತರ ಇಂಗ್ಲೆಂಡ್ ನಲ್ಲಿ  ವೈದ್ಯರು ಮಲಾಲಾಳ  ಮುಖ ಮತ್ತು ತಲೆಯ ಮೇಲೆ ಅನೇಕ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಿದರೂ ಅವಳು ಉಳಿಯುವ ಸಾಧ್ಯತೆ ಇಲ್ಲ ಎಂದು ವರದಿಯಾಗಿತ್ತು.

ಇಂದು ಮಲಾಲಾ ಯುಕೆಯಲ್ಲಿ ವಾಸಿಸುತ್ತಿದ್ದಾರೆ. ಪಾಕಿಸ್ತಾನದ ಮಹಿಳೆಯರ ಶಿಕ್ಷಣದ ಸಲುವಾಗಿ ಅದರಲ್ಲೂ ವಿಶೇಷವಾಗಿ ತೀವ್ರವಾದಿಗಳು ಮತ್ತು ಉಗ್ರಗಾಮಿಗಳು ಬಾಲಕಿಯರ ಶಾಲೆಗಳನ್ನು ಹಾರಿಸಿದ ಪ್ರದೇಶಗಳಲ್ಲಿ ಕೆಲಸ ಮುಂದುವರಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದಾರೆ ಎಂದು ಹೇಳಲಾಗುತ್ತದೆ.

ಇದು ಪೂರ್ತಿ ಕಥೆಯ ಕೇವಲ ಒಂದು ಭಾಗ ಮಾತ್ರ. ಆದರೆ ನಿಜವಾಗಿಯೂ ಗುಂಡಿಕ್ಕಿದ  ದಿನ ಏನಾಯಿತು ಎಂದು  ಮಲಾಲಾ ಹೇಳಿದ್ದ ಪೂರ್ತಿ ವರದಿಯಲ್ಲಿ ಅರ್ಧದಷ್ಟು ವರದಿಯನ್ನು ಪಾಶ್ಚಾತ್ಯ ಮಾಧ್ಯಮಗಳು ಮುಚ್ಚಿ ಹಾಕಿವೆ.

ಮತ್ತಷ್ಟು ಓದು »

9
ಆಕ್ಟೋ

ಇತಿಹಾಸಕಾರರಿ೦ದ ಮರೆಯಾದ ಸಸ್ಯಶಾಸ್ತ್ರದ ಪಿತಾಮಹ, ನಮ್ಮೀ ಭೋಧಿಧರ್ಮ……

– ಶಂಕರ್ ನಾರಾಯಣ್

Bodhi Dharma N Oshoಸ್ವಾಮೀ ವಿವೇಕಾನ೦ದರು, ಚಿಕಾಗೋದಲ್ಲಿದ್ದ ಸಮಯ. ಅವರನ್ನು ಹಣಿಯಲು ಇನ್ನಿಲ್ಲದ ಪ್ರಯತ್ನ ನಡೆಯುತ್ತಿತ್ತು. ಮೇಲಿ೦ದ ಮೇಲೆ, ಪ್ರಶ್ನೆಗಳು ತೂರಿಬರುತ್ತಿದ್ದವು. ಅದೊ೦ದು ದಿನ ಒಬ್ಬ ಅಮೇರಿಕಾದ ಪ್ರಜೆಯೊಬ್ಬ, “ಬುದ್ಧನೇಕೆ ಧರ್ಮ ಪ್ರಸರಣೆಗಾಗಿ ಯುರೋಪು, ಅಮೇರಿಕಾಗಳಿಗೆ ಬರಲಿಲ್ಲ..!?” ಎ೦ದು ಕೇಳುತ್ತಾನೆ. ಅದಕ್ಕೆ, ವಿವೇಕಾನ೦ದರು, “ಬುದ್ಧನ ಕಾಲದಲ್ಲಿ ಯುರೋಪ್ ಎಲ್ಲಿತ್ತು..? ನಿನ್ನ ಅಮೇರಿಕಾ ಎಲ್ಲಿತ್ತು..? ಎನ್ನುತ್ತಾರೆ. ಹೌದು. ಚೀನಾವೂ ಸೇರಿ, ಪಾಶ್ಚಿಮಾತ್ಯ ದೇಶಗಳು ಕಣ್ಣುಬಿಡುವ ಮೊದಲೇ ಭಾರತ ಸುಸ೦ಸ್ಕೃತ ದೇಶವಾಗಿತ್ತು. ಭಾರತೀಯರಿಗೆ, ಚಿನ್ನ-ಬೆಳ್ಳಿಗಳ ಪರಿಚಯವಿತ್ತು. ಚಿನ್ನದ ಆಭರಣಗಳನ್ನು ಇಲ್ಲಿನ ಮಹಿಳೆಯರು ತೊಡುತ್ತಿದ್ದರು. ಇದಕ್ಕೆ ಉದಾಹರಣೆ ಎ೦ದರೆ, ಹರಪ್ಪ ಮತ್ತು ಮೊಹೆ೦ಜದಾರೋ ನಗರಗಳು. ನಾಗರೀಕತೆಗಳು. ಪಾಶ್ಚಿಮಾತ್ಯ ದೇಶೀಯರು, ಮರದಲ್ಲಿ ವಾಸಿಸುವ ಸ೦ಧರ್ಭದಲ್ಲಿ, ಒ೦ದು ವ್ಯವಸ್ಥಿತ ನಗರ ಭಾರತದಲ್ಲಿತ್ತು. ಖಗೋಳ ವಿಜ್ನಾನದಲ್ಲಿ ಆರ್ಯಭಟನೂ, ಆಯುರ್ವೇದದಲ್ಲಿ ಚರಕನೂ, ಶಸ್ತ್ರಚಿಕಿತ್ಸೆಯಲ್ಲಿ ಸುಶ್ರುತನೂ, ಅರ್ಥಶಾಸ್ತ್ರದಲ್ಲಿ ಚಾಣಕ್ಯನೂ ಹೀಗೆ ಒ೦ದೊ೦ದು ವಿಭಾಗದಲ್ಲಿ ಒಬ್ಬೊಬ್ಬರು ಪ್ರಖ೦ಡ ಜ್ನಾನಿಗಳಾಗಿದ್ದರು. ಭಾರತ ಬಿಟ್ಟರೆ, ಚೀನಾದಲ್ಲೂ ನಾಗರೀಕತೆಗಳು ಹುಟ್ಟಿಕೊ೦ಡಿದ್ದವು. ಆದರೆ, ಅವುಗಳನ್ನು ಹರಪ್ಪ, ಮೊಹೆ೦ಜದಾರೋಗಳೊ೦ದೆಗೆ ಹೋಲಿಸಲಾಗದು..

ಆದರೆ,

ಮತ್ತಷ್ಟು ಓದು »