ವಿಷಯದ ವಿವರಗಳಿಗೆ ದಾಟಿರಿ

Posts from the ‘ಧರ್ಮ’ Category

6
ಜೂನ್

ಶಂಕರಾಚಾರ್ಯರ ಕುರಿತು ವಿವೇಕಾನಂದರ ಧೋರಣೆಗಳು.

-ಚೈತನ್ಯ ಮಜಲುಕೋಡಿ

shankaracharya_new

ಶಂಕರರ ಕುರಿತು ಹಲವು ಬುದ್ಧಿಜೀವಿಗಳು ಅನುಸರಿಸಿರುವ ಏಕಮುಖ ಮತ್ತು ಛಿದ್ರಾನ್ವೇಷಣ ಮನಸ್ಥಿತಿಯ ಧೋರಣೆಯಲ್ಲಿ ಶಂಕರರೆಂದರೆ ವಿವೇಕಾನಂದರಿಗೆ ಅಲರ್ಜಿ ಎಂಬಂತೆ ಬಿಂಬಿಸಿಬಿಟ್ಟಿದ್ದಾರೆ. ಅಂತಹವರಿಂದಾಗಿ ನಮ್ಮಲ್ಲಿ ಯಾರು ಏನು ಬರೆದಿದ್ದಾರೆಂದು ಪೂರ್ತಿಯಾಗಿ ಅವಲೋಕಿಸುವ ಜಿಜ್ಞಾಸೆಯ ಆಸಕ್ತಿ ಮತ್ತೂ ಕಡಿಮೆಯಾಗಿಬಿಟ್ಟಿದೆ. ಪ್ರಸ್ತುತ ನಮಗೆ ವಿವೇಕಾನಂದರು ತಮ್ಮ ವಿಚಾರಗಳಲ್ಲಿ ಶಂಕರರ ಬಗ್ಗೆ ಯಾವ ರೀತಿಯ ಮನೋಭಾವ ಹೊಂದಿದ್ದರೆಂದು ಸಮಗ್ರವಾಗಿ ಅರಿಯಬೇಕಾದ್ದು ಮುಖ್ಯವಾದ ಕೆಲಸ. ತಮ್ಮ ಪ್ರಖರ ವಿದ್ವತ್ತಿನ ಸ್ವರೂಪದಿಂದ ಇಂದಿಗೂ ಈ ಆಚಾರ್ಯದ್ವಯರು ದೇದೀಪ್ಯಮಾನರಾಗಿ ಬೆಳಗುತ್ತಿದ್ದಾರೆ. ಸಾವಿರವಿವೇಕಾನಂದರು ಸೇರಿದರೆ ಒಬ್ಬರು ಶಂಕರಾಚಾರ್ಯರಾಗಬಹುದು ಎಂದು ಅವರ ಪಟ್ಟಶಿಷ್ಯೆ ಸಿಸ್ಟರ್ ನಿವೇದಿತಾ ಅವರೇ ಒಂದೆಡೆ ಹೇಳಿದ್ದಾರೆ. ಹಾಗಾಗಿ ಸ್ವಾಮಿ ವಿವೇಕಾನಂದರು ಯಾವ ಸಂದರ್ಭಗಳಲ್ಲಿ ಏನೆಲ್ಲ ನುಡಿದಿದ್ದಾರೆ/ಬರೆದಿದ್ದಾರೆ ಎಂಬ ಹಿನ್ನೆಲೆ, ಶಂಕರರ ಬಗ್ಗೆ ಅವರಿಗೆ ದೊರಕಿರಬಹುದಾದ ಅಂಶಗಳು, ಅವರ ವೈಚಾರಿಕ ತುಲನೆ ಮತ್ತು ಧೋರಣೆ, ಶಂಕರಾಚಾರ್ಯರ ಬರವಣಿಗೆ ಮತ್ತು ಜೀವನ ಇವುಗಳ ಬಗ್ಗೆ ವಿವೇಕಾನಂದರ ವಿಚಾರಗಳೇನಿದ್ದವು ಎಂಬುದನ್ನ ನೋಡೋಣ. ಮತ್ತಷ್ಟು ಓದು »

28
ಮೇ

ಭಾರತದಲ್ಲಿ ಶೂದ್ರರ ಶೋಷಣೆ ನಡೆದಿದೆಯೇ??

– ವಲವಿ ವಿಜಯಪುರ

c609ಸಾಮಾನ್ಯವಾಗಿ ಭಾರತದಲ್ಲಿ ಮನುಸ್ಮೃತಿಯು ಶೂದ್ರರಿಗೆ ವೇದಗಳನ್ನು ಕಲಿಯುವ ಅಧಿಕಾರ ನೀಡಲಿಲ್ಲ. ಅವರಿಗೆ ಸಂಸ್ಕೃತದ ಜ್ಞಾನವನ್ನು  ಕೊಡಲಿಲ್ಲ. ವಿದ್ಯೆಯನ್ನು ಶೂದ್ರರಿಂದ ಮುಚ್ಚಿಡಲಾಯಿತು.  ಮೇಲ್ವರ್ಗದವರ ಮನೆಯ ಸಗಣಿಯನ್ನು ಬಾಚುವದೇ ಅವರ ಕೆಲಸವಾಗಿತ್ತು. ಯಾವುದೇ ಉನ್ನತ ಹುದ್ದೆಗಳನ್ನು ನೀಡದೇ ಅವರನ್ನು ವಂಚಿಸಲಾಯಿತು. ಮತ್ತು ಈ ವಂಚನೆಯಲ್ಲಿ ಅಧಿಕವಾಗಿ ಬ್ರಾಹ್ಮಣರು ಭಾಗೀದಾರರು. ಸಮಾಜವೆಂಬ ಪಿರಮಿಡ್ ಆಕೃತಿಯಲ್ಲಿ ಅತ್ಯಂತ ಮೇಲೆ ಬ್ರಾಹ್ಮಣನಿದ್ದರೆ ಅತ್ಯಂತ ಕೆಳಸ್ತರದಲ್ಲಿ ಶೂದ್ರನಿದ್ದಾನೆ ಮತ್ತು ಅವನನ್ನು ವಿಶೇಷವಾಗಿ ಬ್ರಾಹ್ಮಣರು ಶೋಷಣೆ ಮಾಡಿದ್ದಾರೆ ಅನ್ನುವದು ಆಧುನಿಕ ಶಿಕ್ಷಣ ಪಡೆದವರ ವಾದವಾಗಿದೆ. ಮತ್ತಷ್ಟು ಓದು »

27
ಮೇ

ವೈಚಾರಿಕತೆಯ ಹೆಸರಿನಲ್ಲಿ ವಸಾಹತುಪ್ರಜ್ಞೆಯನ್ನು ನೆಕ್ಕುತ್ತಿರುವ ಬುದ್ಧಿಜೀವಿಗಳು

– ವಿನಾಯಕ ಹಂಪಿಹೊಳಿ
ksbhagawan-16-1463371160ವಿಶ್ವವಾಣಿಯಲ್ಲಿ ೮-ಮೇ-೨೦೧೬ ರಂದು ಪ್ರಕಟವಾದ ಕೆ. ಎಸ್. ಭಗವಾನ್ ಅವರ “ಯಜ್ಞದ ಹೆಸರಿನಲ್ಲಿ ಮುಗ್ಧರನ್ನು ಮುಕ್ಕುತ್ತಿರುವ ದೈವಜ್ಞರು” ಎಂಬ ಲೇಖನವು ಎರಡು ಭ್ರಮೆಗಳ ಆಧಾರದ ಮೇಲೆ ನಿಂತಿದೆ. ಮೊದಲನೆಯದು ಮತ್ತೂರಿನಲ್ಲಿ ನಡೆದ ಯಾಗದಲ್ಲಿ ಪ್ರಾಣಿಬಲಿಯು ನಡೆದಿದೆ ಎಂಬ ಭ್ರಮೆ ಮತ್ತು ಎರಡನೆಯದು ಪಾಶ್ಚಿಮಾತ್ಯ ವಿದ್ವಾಂಸರು ವೈದಿಕ ಸಂಪ್ರದಾಯಗಳು ಹೊಂದಿರುವ ಸಾಹಿತ್ಯದ ಕುರಿತು ಕಟ್ಟಿಕೊಟ್ಟ ಚಿತ್ರಣವೇ ಸತ್ಯ ಎಂಬ ಭ್ರಮೆ. ಮತ್ತೂರಿನಲ್ಲಿ ಪ್ರಾಣಿಬಲಿ ನಡೆದಿಲ್ಲ ಎಂಬ ಪ್ರಾಥಮಿಕ ವರದಿಯನ್ನು ಸರ್ಕಾರೀ ಅಧಿಕಾರಿಗಳೇ ನೀಡಿರುವುದರಿಂದ ನೇರವಾಗಿ ಎರಡನೇ ಭ್ರಮೆಗೆ ಬರೋಣ. ಮತ್ತಷ್ಟು ಓದು »

25
ಮೇ

ಭಾನುಮತಿ ನೀ ಸುಮತಿ.

–  ನಾಗೇಶ ಮೈಸೂರು

image1 (1)ಮಹಾಭಾರತದಲ್ಲಿ ನಿರ್ಲಕ್ಷ್ಯಕ್ಕೊಳಪಟ್ಟು ನೇಪಥ್ಯಕ್ಕೆ ಸರಿಸಲ್ಪಟ್ಟ ಅನೇಕ ಸ್ತ್ರೀ ಪಾತ್ರಗಳಲ್ಲೊಂದು ಪ್ರಮುಖ ಪಾತ್ರ ಕೌರವೇಶ ದುರ್ಯೋಧನನ ಪತ್ನಿ ಭಾನುಮತಿಯದು. ಭೂಮಂಡಲವನ್ನಾಳುವ ಒಡೆಯನಾದ ಕೌರವೇಶನ ಸತಿಯಾದರೂ ಯಾಕೊ ಅವಳ ಉಲ್ಲೇಖ ಅಲ್ಲಿಲ್ಲಿ ತುಸು ಮೆಲುವಾಗಿ ಹೆಸರಿಸಿದ್ದು ಬಿಟ್ಟರೆ ಗಾಢವಾದ ವಿವರಣೆ ಕಾಣಿಸುವುದಿಲ್ಲ. ಬಹುಶಃ ಸುಯೋಧನನಿಗೆ ಆರೋಪಿಸಿದ ಋಣಾತ್ಮಕ, ಖಳನಾಯಕ ಪಟ್ಟದಿಂದಲೋ ಅಥವಾ ಚತುಷ್ಟಯದ ಚಟುವಟಿಕೆಗಳಿಗೆ ಕೊಟ್ಟಷ್ಟೇ ಗಮನ ಅವನ ಖಾಸಗಿ ಜೀವನಕ್ಕೆ ಕೊಡಲಿಲ್ಲವೆಂದೊ – ಒಟ್ಟಾರೆ ಭಾನುಮತಿ ಹೆಚ್ಚಾಗಿ ತೆರೆಮರೆಯ ಅಪ್ರತ್ಯಕ್ಷ ಪ್ರಭಾವ ಬೀರುವ ಪಾತ್ರವಾಗಷ್ಟೆ ಆಗಿ ಗೌಣವಾಗಿಬಿಡುತ್ತಾಳೆ. ಈಗಲೂ ಅಂತರ್ಜಾಲ ಹುಡುಕಿದರೆ ಅವಳ ಕುರಿತಾದ ವಿವರ ಸಿಗುವುದು ತೀರಾ ಅಲ್ಪವೇ. ಮತ್ತಷ್ಟು ಓದು »

24
ಮೇ

ತಲೆಕೆಟ್ಟ ಕಾನೂನುಗಳು ಮತ್ತು ಸ್ವಂತ ಬುದ್ಧಿಯಿಲ್ಲದ ಜೀವಿಗಳು

–  ರಾಕೇಶ್ ಶೆಟ್ಟಿ

ಬುದ್ಧಿಜೀವಿಗಳ ಮೂಢನಂಬಿಕೆಗಳುಇತ್ತೀಚೆಗೆ ಮತ್ತೂರಿನಲ್ಲಿ ನಡೆದ ಸೋಮಯಾಗದಲ್ಲಿ ಸಂಕೇತಿ ಬ್ರಾಹ್ಮಣರು ಮೇಕೆ ಬಲಿ ಕೊಟ್ಟು ತಿಂದರಂತೆ, ಸೋಮರಸ ಕುಡಿದರಂತೆ ಅಂತ ಪ್ರಗತಿಪರರ ವಾಣಿಯೊಂದು ಸುಳ್ಳು ಸುದ್ದಿ ಬರೆಯಿತು. ಈ ಸುದ್ದಿಯಿಂದಾಗಿ ಟೌನ್ ಹಾಲ್ ಮುಂದೆ ನಿಂತು ದನ ತಿನ್ನುವುದನ್ನು ಬೆಂಬಲಿಸುವ ಕಬಾಬ್ ಕ್ರಾಂತಿಕಾರಿಗಳಿಗೂ ಹೊಟ್ಟೆನೋವು ಕಾಣಿಸಲಾರಂಭಿಸಿತು. ಇವರನ್ನು ಕರೆಯದೇ ತಿಂದರೂ ಎಂದು ಹೊಟ್ಟೆ ನೋವಾಗಿತ್ತೋ ಏನೋ. PhD ಮಹಾಶಯನೊಬ್ಬ ಬ್ರಾಹ್ಮಣರು ಮಾಂಸ ತಿನ್ನಲು ಶುರು ಮಾಡಿದರೆ ರೇಟ್ ಜಾಸ್ತಿಯಾಗುತ್ತೆ ಅಂತ ಅಳ್ತಾ ಇದ್ದ. ಎಂತೆಂತವರೆಲ್ಲ ವಿವಿಗಳಲ್ಲಿ ಪಾಠ ಮಾಡುತ್ತಾರಪ್ಪಾ ಅನಿಸಿತು. ಎಲ್ಲಾ (ಜಾತಿ/ಪಂಗಡದ) ಬ್ರಾಹ್ಮಣರು ಸಸ್ಯಹಾರಿಗಳು ಅನ್ನೋದು “ಮೂಢನಂಬಿಕೆ”. ಸಿದ್ರಾಮಯ್ಯನವರಿಗೆ ಹೇಳಿ ಮೌಢ್ಯ ನಿಷೇಧ ಕಾಯ್ದೆಯ ಮೂಲಕ ಈ ಮೂಢನಂಬಿಕೆಯನ್ನು ನಿಷೇಧಿಸಬೇಕು. ಕಾಶ್ಮೀರಿ ಪಂಡಿತರಿಗೆ ಶಿವರಾತ್ರಿ ಹಬ್ಬದಂದು ಮಾಂಸದಡುಗೆಯೇ ವಿಶೇಷವಾದದ್ದು. ಬಂಗಾಳಿ, ಓಡಿಶಾದ ಬ್ರಾಹ್ಮಣರೂ, ಗೌಡ ಸಾರಸ್ವತ ಬ್ರಾಹ್ಮಣರಲ್ಲೂ ಮಾಂಸಹಾರಿಗಳಿದ್ದಾರೆ. ಮತ್ತಷ್ಟು ಓದು »

17
ಮೇ

ಕಾಂಗ್ರೆಸ್‌ನ ವ್ಯಾಘ್ರ ದಾಳಿಗೆ ನಲುಗಿದ ಸಾಧ್ವಿ

– ಎಸ್.ಆರ್. ಅನಿರುದ್ಧ ವಸಿಷ್ಠ, ಭದ್ರಾವತಿ

sadhvi-pragya-singh.before_afterಮಾಲೇಗಾಂವ್ ಸ್ಪೋಟ ಪ್ರಕರಣದಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್‌ಗೆ ಕ್ಲೀನ್‌ಚಿಟ್ ನೀಡಿ ಆರೋಪಮುಕ್ತಗೊಳಿಸಲಾಗಿದೆ. ಹಾಗಾದರೆ, ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ನಿಜಕ್ಕೂ ಭಾಗಿಯಾದವರು ಯಾರು? ಸ್ಫೋಟದ ಹಿಂದಿರುವ ವ್ಯಕ್ತಿ ಹಾಗೂ ಸಂಘಟನೆಗಳು ಯಾರು ಎನ್ನುವುದರ ಕುರಿತು ಉನ್ನತ ಮಟ್ಟದ ತನಿಖೆ ನಡೆಯಬೇಕಿದ್ದು, ಈ ಕುರಿತಂತೆ ಸತ್ಯ ಹೊರಬರಬೇಕಿದೆ. ಈ ಕುರಿತಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ.

ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣಕ್ಕೀಗ ತಾರ್ಕಿಕ ಅಂತ್ಯ ದೊರೆತಿದ್ದು, ಸಾಧ್ವಿ ಪ್ರಜ್ಞಾ ಸಿಂಗ್ ಸೇರಿದಂತೆ ಆರು ಜನರ ಮೇಲೆ ಹೇರಲಾಗಿದ್ದ ಮೋಕಾ ಪ್ರಕರಣದಲ್ಲಿ ಇವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ ಎಂದು ಚಾರ್ಜ್‌ಶೀಟ್ ಸಲ್ಲಿಸಿರುವ ತನಿಖಾ ಸಂಸ್ಥೆ ಎನ್‌ಐಎ ಆರೋಪಗಳಿಂದ ಕ್ಲೀನ್ ಚಿಟ್ ನೀಡಿದೆ.

ನಿಜಕ್ಕೂ ಇದು ಸತ್ಯಕ್ಕೆ ಸಂದ ಜಯ ಎಂದು ಸಂತಸ ಪಡುವ ವೇಳೆಯೇ ಈ ಸಂತಸವನ್ನು ಸಂಭ್ರಮಿಸುವ ಮನಸ್ಥಿತಿ ಹಾಗೂ ದೇಹಸ್ಥಿತಿಯಲ್ಲಿ ಸ್ವತಃ ಸಾಧ್ವಿ ಪ್ರಜ್ಞಾ ಸಿಂಗ್ ಇಲ್ಲ ಎನ್ನುವುದು ಇಡೀ ಪ್ರಜಾಪ್ರಭುತ್ವ ವ್ಯವಸ್ಥೆ ತಲೆ ತಗ್ಗಿಸಬೇಕಾದ ವಿಚಾರ. ಮತ್ತಷ್ಟು ಓದು »

13
ಮೇ

ಶಂಕರಾಚಾರ್ಯರನ್ನು ಸ್ತುತಿಸಿದ್ದಾಯಿತು, ವಿದ್ಯಾರಣ್ಯರನ್ನೂ ಸ್ಮರಿಸೋಣ….

-ಶ್ರೀನಿವಾಸ ರಾವ್

vidyaranya

||ಅವಿದ್ಯಾರಣ್ಯಕಾನ್ತಾರೇ ಭ್ರಮತಾಂ ಪ್ರಾಣಿನಾಂ ಸದಾ

           ವಿದ್ಯಾಮಾರ್ಗೋಪದೇಷ್ಟಾರಂ ವಿದ್ಯಾರಣ್ಯಗುರುಂ ಶ್ರಯೇ||

ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಮಾರ್ಗದರ್ಶನ ನೀಡಿದರು. ದಕ್ಷಿಣಪಥದಲ್ಲಿ ಹಿಂದೂ ಧರ್ಮದ ಸಾಮ್ರಾಜ್ಯವನ್ನು ಸ್ಥಾಪಿಸುವ ಮೂಲಕ ಶೃಂಗೇರಿ ಪೀಠಾಧಿಪತಿಗಳ ಬಿರುದಾವಳಿಗೆ ‘ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ’ ಎಂಬ ಬಿರುದನ್ನು ತಂದುಕೊಟ್ಟಿದ್ದೂ ಅವರೇ. ಶೃಂಗೇರಿಯ ಈಗಿನ ಪೀಠಾಧಿಪತಿಗಳಿಗೆ ‘ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ’ ಎಂದು ಬಿರುದಾವಳಿಗಳಲ್ಲಿ ಹೇಳಿದರೂ ನಮಗೆ ಆ ಯತಿಶ್ರೇಷ್ಠರೇ ನೆನಪಾಗುತ್ತಾರೆ. ಮನಸ್ಸು ಪುಟಿದೇಳುತ್ತದೆ. ‘ವಿದ್ಯಾಶಂಕರ ಪಾದಪದ್ಮಾರಾಧಕ’ ಎಂದಾಗಲೂ ವಿದ್ಯಾತೀರ್ಥರ ಶಿಷ್ಯರಾಗಿ-ಭಾರತೀ ತೀರ್ಥರ ಕರಕಮಲ ಸಂಜಾತರಾಗಿದ್ದ ಅವರನ್ನೇ ಮನಸ್ಸು ನೆನೆಯುತ್ತದೆ. ಮತ್ತಷ್ಟು ಓದು »

28
ಏಪ್ರಿಲ್

ಶೂರ್ಪನಖಿ, ಆಹಾ! ಎಂಥಾ ಸುಖಿ!

– ನಾಗೇಶ ಮೈಸೂರು

4398694301_230970e9f7

ನಮ್ಮ ಟೀವಿ ಸೀರಿಯಲ್ಗಳಲ್ಲಿ ಬರುವ ಹೆಣ್ಣು ವಿಲನ್ ಪಾತ್ರಗಳಿಗೆಲ್ಲ ಈ ಶೂರ್ಪನಖಿ ಪಾತ್ರವೂ ಸ್ಪೂರ್ತಿಯಿರಬಹುದೇ?

ಬಹುಶಃ ರಾಮಾಯಣದ ಪಾತ್ರಗಳನ್ನು ವಿಶ್ಲೇಷಣೆಗೆ ಪರಿಗಣಿಸಿದಾಗ, ಅದರಲ್ಲೂ ಮಹಿಳೆಯ ಪಾತ್ರದ ವಿಷಯಕ್ಕೆ ಬಂದರೆ ಸೀತೆ, ಕೈಕೆ, ಮಂಡೋದರಿ, ಮಂಥರೆ ಹೀಗೆ ಎಷ್ಟೋ ಪಾತ್ರಗಳು ಕಣ್ಮುಂದೆ ಬಂದು ನಿಲ್ಲುತ್ತವೆ. ಆದರೆ ಅವುಗಳ ನಡುವೆ ಸಾಮಾನ್ಯವಾಗಿ ಯಾರೂ ಪರಿಗಣಿಸದ ಒಂದು ವಿಶೇಷ ಪಾತ್ರವೆಂದರೆ ಶೂರ್ಪನಖಿಯದು. ತೀರಾ ಪ್ರಖರವಾಗಿ ಎದ್ದು ಕಾಣದೆ, ತೆಳುವಾದ ಮೇಲುಸ್ತರದಲ್ಲೇ ಮುಲುಗಾಡುವ ಈ ಪಾತ್ರ ಇಡೀ ರಾಮಾಯಣದಲ್ಲಿ ಬಂದು ಹೋಗುವ ಆವರ್ತಗಳ ಗಣನೆಯಲ್ಲಿ ಕೆಲವೇ ಕೆಲವಾದರೂ, ಆ ಪಾತ್ರ ಇಡೀ ರಾಮಾಯಣ ಕಥನದಲ್ಲುಂಟುಮಾಡುವ ಪರಿಣಾಮ ನೋಡಿದರೆ, ಈ ಪಾತ್ರದ ಕುರಿತು ಅಷ್ಟಾಗಿ ಪರಿಶೀಲನೆ, ವಿಶ್ಲೇಷಣೆ ನಡೆದಿಲ್ಲವೆಂದೇ ಕಾಣುತ್ತದೆ. ಮತ್ತಷ್ಟು ಓದು »

25
ಏಪ್ರಿಲ್

ಸಾಯಣರ ವೇದವ್ಯಾಖ್ಯಾನವು ಏನನ್ನು ತಿಳಿಸುತ್ತದೆ?

– ವಿನಾಯಕ ಹಂಪಿಹೊಳಿ
vedaಸಾಯಣಾಚಾರ್ಯರು ಋಗ್ವೇದಕ್ಕೆ ಭಾಷ್ಯವನ್ನು ಬರೆಯುವಾಗ ಮೊದಲು ವೇದ ಎಂದರೇನು ?, ಅದರ ಲಕ್ಷಣವೇನು ಎಂಬುದರ ಕುರಿತು ಒಂದು ದೀರ್ಘ ಚರ್ಚೆಯನ್ನು ಮಾಡಿದ್ದಾರೆ. ಅದರಲ್ಲಿ ಪೂರ್ವಪಕ್ಷದ ವಾದಗಳನ್ನೆಲ್ಲ ಒಂದೊಂದಾಗಿ ಪರಿಗಣಿಸಿ, ವೇದದ ಲಕ್ಷಣದ ಕುರಿತು ತಮ್ಮ ಸಿದ್ಧಾಂತವನ್ನು ಮಂಡಿಸಿ, ಪೂರ್ವಪಕ್ಷಿಯ ಸಂದೇಹಗಳನ್ನೆಲ್ಲ ಪರಿಹರಿಸುತ್ತಾ ಸಾಗಿದ್ದಾರೆ. ಆ ಚರ್ಚೆ ಏನು ಎಂಬುದು ಮುಖ್ಯವಲ್ಲ. ಆ ಚರ್ಚೆಯಲ್ಲಿ ಪೂರ್ವಪಕ್ಷಿಗಳು ಮತ್ತು ಸಿದ್ಧಾಂತಿಗಳು ವೇದದ ಕುರಿತು ಯಾವ ದೃಷ್ಟಿಕೋಣವನ್ನು ಇಟ್ಟುಕೊಂಡಿದ್ದರು ಎಂಬುದು ಇಲ್ಲಿ ಮುಖ್ಯ. ಹೀಗಾಗಿ ಆ ಚರ್ಚೆಯ ಆದಿಭಾಗದ ಸಾರಾಂಶವನ್ನು ಮಾತ್ರ ನೋಡೋಣ. ಮೊದಲು ಪೂರ್ವಪಕ್ಷದ ವಾದಗಳನ್ನು ಪಟ್ಟಿ ಮಾಡಿ ನಂತರ ಸಾಯಣರು ಕೊಟ್ಟ ವೇದದ ವ್ಯಾಖ್ಯಾನವನ್ನು ನೀಡಲಾಗಿದೆ. ಪೂರ್ವಪಕ್ಷದ ಮತ: ವೇದ ಎನ್ನುವದು ಯಾವದನ್ನು? ವೇದಕ್ಕೆ ಲಕ್ಷಣಗಳೇನಾದರೂ ಇವೆಯೇ? ಪ್ರತ್ಯಕ್ಷ, ಅನುಮಾನ ಮತ್ತು ಆಗಮ ಎಂಬ ಮೂರು ಪ್ರಮಾಣಗಳಿವೆಯಲ್ಲ (ಊಟ ಮಾಡಿದರೆ ಹೊಟ್ಟೆ ತುಂಬುತ್ತದೆ ಎನ್ನುವದಕ್ಕೆ ಪ್ರತ್ಯಕ್ಷ ಪ್ರಮಾಣ, ಹೊಗೆಯಾಡುತ್ತಿರುವಲ್ಲಿ ಬೆಂಕಿಯಿರಬಹುದೆಂಬುದಕ್ಕೆ ಅನುಮಾನ ಪ್ರಮಾಣ, ಯಾಗದಿಂದ ಸ್ವರ್ಗಪ್ರಾಪ್ತಿ ಎಂಬುದಕ್ಕೆ ಆಗಮ ಪ್ರಮಾಣ), ಅವುಗಳಲ್ಲಿ ಕೊನೆಯ ಆಗಮ ಪ್ರಮಾಣವೆಂಬುದೇ ವೇದದ ಲಕ್ಷಣವೆನ್ನಲು ಸಾಧ್ಯವಿಲ್ಲ. ಏಕೆಂದರೆ ಮನ್ವಾದಿ ಸ್ಮೃತಿಗಳೂ ಆಗಮಗಳಾಗಿವೆ. ವೇದ ಎನ್ನುವದು ಸ್ವರ್ಗ ಅಥವಾ ಮೋಕ್ಷಕ್ಕೆ ಸಾಧನ ಎಂಬ ಲಕ್ಷಣವನ್ನೂ ಹೇಳಲು ಸಾಧ್ಯವಿಲ್ಲ ಕಾರಣ ಇತಿಹಾಸ ಪುರಾಣಗಳೂ ಸ್ವರ್ಗ ಅಥವಾ ಮೋಕ್ಷಕ್ಕೆ ಸಾಧನಗಳಾಗಿರುತ್ತವೆ. ಆಗಮವೇ ವೇದದ ಲಕ್ಷಣ ಎನ್ನುವದು ಅತಿವ್ಯಾಪ್ತಿದೋಷ ಒಳಗೊಂಡಿದೆ. ಬೆಳ್ಳಗಿರುವದು ಹಾಲಿನ ಲಕ್ಷಣ ಎಂದರೆ, ಸುಣ್ಣವೂ ಬೆಳ್ಳಗಿರುವದರಿಂದ, ಈ ಲಕ್ಷಣವಾಕ್ಯವು ಅತಿವ್ಯಾಪ್ತಿದೋಷ (Necessary But Not Sufficient) ಎಂಬ ದೋಷವನ್ನು ಹೊಂದಿರುತ್ತದೆ. ಮತ್ತಷ್ಟು ಓದು »

24
ಏಪ್ರಿಲ್

ಶನಿಯ ಬೆನ್ನೇರಿದ ಕಾಕ, ಇದೆಲ್ಲ ನಾಟಕ ಯಾಕ?

– ರೋಹಿತ್ ಚಕ್ರತೀರ್ಥ

shani-shingnapur_650x400_41460171606ನಮ್ಮ ದೇಶದಲ್ಲಿ ಖರ್ಚಿಲ್ಲದೆ ಪ್ರಸಿದ್ಧಿ ಒದಗಿಸುವ ಎರಡು ಸಂಗತಿಗಳಿವೆ. ಒಂದು ಬುದ್ಧಿಜೀವಿಯಾಗುವುದು, ಇನ್ನೊಂದು ಮಹಿಳಾವಾದಿಯಾಗುವುದು. ಬುದ್ಧಿಜೀವಿಯಾಗಬೇಕಾದರೆ ನೀವು ಸೆಕ್ಯುಲರ್ ಎಂದು (ಏನೆಂದು ಗೊತ್ತಿರದಿದ್ದರೂ) ತೋರಿಸಿಕೊಳ್ಳಬೇಕು. ಹಿಂದೂಗಳನ್ನು, ಅವರ ಆಚರಣೆ, ಪದ್ಧತಿ, ಹಬ್ಬಹರಿದಿನಗಳನ್ನು ಬಯ್ಯಬೇಕು. ಹಿಂದೂ ದೇವರನ್ನು, ದೇವಾಲಯಗಳನ್ನು ಪ್ರಶ್ನಿಸಬೇಕು. ಮುಸ್ಲಿಂ ಮತ್ತು ಕ್ರಿಶ್ಚಿಯನ್ ರಿಲಿಜನ್ನುಗಳನ್ನು ಓಲೈಸಬೇಕು. ಮೋದಿಯನ್ನು ತೆಗಳಬೇಕು. ಭಯೋತ್ಪಾದಕರನ್ನು, ನಕ್ಸಲರನ್ನು ಬೆಂಬಲಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಿಮಗೆ ಬೆನ್ನುಮೂಳೆ ಇರಬಾರದು. ಜೊತೆಗೆ, ಅರ್ಥವತ್ತಾದ ಮಾತು, ತರ್ಕಬದ್ಧವಾದ ಚಿಂತನೆ – ಇವೆರಡರ ಬಗ್ಗೆ ನೀವು ಎಂದೆಂದೂ ತಲೆ ಕೆಡಿಸಿಕೊಂಡಿರಬಾರದು. ಹಾಗೆಯೇ, ಮಹಿಳಾವಾದಿಯಾಗುವುದು ಕೂಡ ಸುಲಭ. ಮೊದಲಿಗೆ ಮಹಿಳಾವಾದ = ಪುರುಷದ್ವೇಷ ಎಂಬ ಸಮೀಕರಣ ಬರೆಯಿರಿ. ಮಹಿಳೆಗೆ ಸ್ವಾತಂತ್ರ್ಯ ಬೇಕು ಅನ್ನಿ. ಉದ್ಯೋಗದಲ್ಲಿ, ಸಂಸತ್ತಿನಲ್ಲಿ, ಬಸ್ಸಿನಲ್ಲಿ, ಚಿತ್ರಮಂದಿರದಲ್ಲಿ, ನಡೆದಾಡುವ ರಸ್ತೆಯಲ್ಲಿ – ಹೀಗೆ ಎಲ್ಲೆಲ್ಲೂ ಹೆಣ್ಣಿಗೆ ಸಮಾನತೆ ಬೇಕೆಂದು ಬೊಬ್ಬೆ ಹೊಡೆಯಿರಿ. ಉದ್ಧೇಶವೇ ಇಲ್ಲದೆ ಪ್ರತಿಭಟನೆ ಮಾಡಿದರೂ ಓಕೆ. ವಿರೋಧಿಸದವರಿಗೂ ಧಿಕ್ಕಾರ ಕೂಗಿದರೂ ಓಕೆ. ಒಟ್ಟಲ್ಲಿ ನಿಮ್ಮ ಮಾತು, ಕೂಗಾಟ, ಹಾರಾಟ, ಹೋರಾಟವೆಲ್ಲ ನಾಲ್ಕು ಜನಕ್ಕೆ ಗೊತ್ತಾಗಬೇಕು, ಪತ್ರಿಕೆ ಟಿವಿಗಳಲ್ಲಿ ಬರಬೇಕು. ಮತ್ತು ಇವೆಲ್ಲದರ ಜೊತೆ, ನೀವು, ಮೇಲೆ ಹೇಳಿದ ಬುದ್ಧಿಜೀವಿಯೂ ಆಗಿರಬೇಕಾದ್ದು ಅನಿವಾರ್ಯ. ಎರಡು ವರ್ಷಗಳ ಹಿಂದೆ ಒಂದು ಬುದ್ಧಿಜೀವಿ ಮಹಿಳಾಪರ ಲೇಖಕಿ, “ಮೋದಿಯ ಮುಖ ನೋಡಿದರೇನೇ ಆತ ಸ್ತ್ರೀದ್ವೇಷಿ ಅನ್ನೋದು ಗೊತ್ತಾಗುತ್ತದೆ” ಎಂದಿದ್ದರು. ಇಂಥ ಹೇಳಿಕೆ ಕೊಡುವವರಿಗೆ ಮಹಿಳಾಪರ ಸಂಘಟನೆಗಳಲ್ಲಿ ಒಳ್ಳೆಯ ಬೇಡಿಕೆ ಇದೆ. ಮತ್ತಷ್ಟು ಓದು »