ಹಳ್ಳಿಗರೇ ಕರೆಂಟ್ ಉಳಿಸಿ, ಎಂಜಿ ರೋಡಿಗೆ ಲೈಟ್ ಹಾಕಬೇಕು
ಪ್ರಪಂಚ ಹೀಗೆನೇ!
ಯಾರು ಪಾಲಿಸ್ತಾರೋ ಅವರ ಮೇಲೆಯೇ ಎಲ್ಲವನ್ನು ಹೇರಿ ಅರಾಮದಲ್ಲಿ ಇದ್ದು ಬಿಡುತ್ತೆ. ‘ಉಳಿಸಿ’ ಅಂತ ಸರ್ಕಾರ ಯಾವುದಾದ್ರು ಅಭಿಯಾನ ಮಾಡಿದ್ರೆ ಅದರ ಟಾರ್ಗೆಟ್ ಮಧ್ಯಮ ಇಲ್ಲವೇ ಕೆಳವರ್ಗವೇ ಆಗಿರುತ್ತೆ. ಅದು ನೀರುಳಿಸಿ ಎಂಬುದೋ, ಪೆಟ್ರೋಲ್ ಉಳಿಸಿ ಅಂತಲೋ, ಕಡೆಗೆ ವಿದ್ಯುತ್ ಉಳಿಸಿ ಅಂತಾನೋ ಇರಬಹುದು. ಇಲ್ಲಿ ‘ಉಳಿಸಬೇಕಾದವರು’ ಯಾವುದನ್ನು ಕಡಿಮೆ ಪಡೆಯುತ್ತಿರುತ್ತಾರೋ ಅವರೇ! ವಿಚಿತ್ರ, ಆದ್ರೂ ಸತ್ಯ.
ಉದಾಹರಣೆಗೆ ನೀರು ಉಳಿಸಿ-ಮಿತವಾಗಿ ಬಳಸಿ ಅಂತ ಹೇಳಲಾಗುತ್ತೆ. ಆದ್ರೆ ಅದನ್ನು ಪಾಲಿಸಬೇಕಾದ ಜನತೆಗೆ ವಾರಕ್ಕೆ ಒಮ್ಮೆಯೋ ಎರಡು ಬಾರಿಯೋ ನೀರು ಬಂದ್ರೆ ಅದೇ ಹೆಚ್ಚು. ಒಮ್ಮೆ ಎಲ್ಲಿಯಾದ್ರೂ ಈ ಜನರು ಈ ನಿಯಮಗಳನ್ನು ಪಾಲಿಸುವಲ್ಲಿ ಸೋತರೆ ನಾವೆಲ್ಲ ಬೊಬ್ಬೆ ಹಾಕಿ ಬಿಡ್ತೇವೆ. ಅದ್ರೆ ಆ ಬೊಬ್ಬೆಯಲ್ಲಿ ಸತ್ಯವೊಂದು ಮುಚ್ಚಿ ಹೋಗಿರುತ್ತೆ. ಒಬ್ಬ ಶ್ರೀಮಂತನ ಮನೆಯ ಟಾಯ್ಲೆಟ್ ನಲ್ಲಿ ಬಳಕೆಯಾಗುವ ನೀರಿನಷ್ಟು ಸಾಮಾನ್ಯ ಜನರ ಕುಡಿಯುವ ನೀರು ಶುದ್ಧವಾಗಿರಲ್ಲ.
ಎಂಡೋಸಲ್ಫನ್ ತಯಾರಕರ ದೇಶ ಸೇವೆ ಮುಖವಾಡ
– ಗೋವಿಂದ್ ಭಟ್
ಎಂಡೋಸಲ್ಫನ್ ತಯಾರಕರ ಹೊಸ ವರಸೆ ಗಾಬರಿಯಾಗುತ್ತದೆ. ಅವರೀಗ ಯುರೋಪಿನ ವಿಷ ತಯಾರಕರು ಎಂಡೋಸಲ್ಫನ್ ಬಹಿಷ್ಕಾರ ಚಳುವಳಿಯ ಹಿಂದಿದ್ದಾರೆ ಎಂದು ಆಪಾದಿಸುತ್ತಿದ್ದಾರೆ. ಬಾರತದ ತಯಾರಕರು ಜೀವ ಉಳಿಸುವ ಔಷದಿಯಲ್ಲಿ ಮೂಲವಸ್ತುಗಳ ಹೆಸರಿನಲ್ಲಿ ತಯಾರಿಸಿ ಕಡಿಮೆ ಬೆಲೆಯಲ್ಲಿ ಮಾರಿದ್ದು ಹಾಗೂ ಸಮಾಜ ಇವರಿಗೆ ಬೆಂಬಲಿಸಿದ್ದು ಈಗ ಇತಿಹಾಸ. ಈಗ ಈ ಕೀಟನಾಶಕ ವನ್ನೂ generic ಅನ್ನೋ ಮುಖವಾಡದ ಹವಣಿಕೆಯಲ್ಲಿದ್ದಾರೆ. ನಾವು ಕಡಿಮೆ ಬೆಲೆಯಲ್ಲಿ ಎಂಡೋಸಲ್ಫನ್ ತಯಾರು ಮಾಡಿ ಮಾರುವುದು ಬಾರತದ ರೈತರ ಉದ್ದಾರ ಮಾಡುವುದನ್ನು ಯುರೊಪಿಯನರು ಸಹಿಸುತ್ತಿಲ್ಲ. ನಾವು ಬಾಗಿಲು ಹಾಕಿದರೆ ಯುರೋಪಿನ ತಯಾರಕರು ಇದಕ್ಕಿಂತ ಹಲವು ಪಾಲು ದುಬಾರಿಯ ಮಾಲುಗಳನ್ನು ಬಾರತದ ರೈತರು ಅವಲಂಬಿಸಬೇಕಾಗುತ್ತದೆ.ಸಾವಯವ ಕೃಷಿ ಎಂಬ ಮೂರ್ಖತನ !
– ಶ್ರೀ ಹರ್ಷ ಸಾಲಿಮಠ
ವ್ಯವಸಾಯ ಎಂಬುದು ಭಾರತ ದೇಶದ ಮಟ್ಟಿಗೆ ಉದ್ಯೋಗ ಮತ್ತು ಹೊಟ್ಟೆಪಾಡು ಮಾತ್ರವಲ್ಲ. ಅದೊಂದು ಸಂಸ್ಕೃತಿ, ಜೀವನಶೈಲಿ. ಅದೆಷ್ಟೋ ವರ್ಷಗಳಿಂದ ನಾಗರಿಕತೆಯನ್ನು ಸಲಹಿಕೊಂಡು ಬಂದ ದಾರಿ.ಮನುಷ್ಯ ಒಂದೆಡೆ ನಿಂತು ನೆಲೆಯೂರಿ ತನ್ನದೊಂದು ಬದುಕು ಕಟ್ಟಿ ಕೊಳ್ಳುವುದು ಸಾಧ್ಯವಾದದ್ದೇ ಅವನು ಬೇಸಾಯ ಮಾಡಲು ಆರಂಭಿಸಿದಾಗಿನಿಂದ.
ಇತ್ತೀಚೆಗೆ ಸಾವಯವ ಕೃಷಿ ಎಂಬುದು ಬಹಳವಾಗಿ ಕೇಳಿ ಬರುತ್ತಿರುವ ಸುದ್ದಿ. ಸರಕಾರವೂ ಸೇರಿದಂತೆ ಸಮೂಹ ಸನ್ನಿಗೊಳಗಾದಂತೆ ಸಾವಯವ ಕೃಷಿಯ ಕಡೆ ಜನ ಓಡುತ್ತಿದ್ದಾರೆ. ಸುಭಾಶ್ ಪಾಳೇಕರ್ ರಂತಹ ಅನೇಕರು ಕೃಷಿ ಗುರುಗಳಾಗಿದ್ದಾರೆ.
ಅವರ ಬಳಿ ನೂರಾರು ರೈತರು ಸಾವಯವ ಕೃಷಿಯ ತರಬೇತಿ ಪಡೆದು ಬೇಸಾಯದಲ್ಲಿ ತೊಡಗಿದ್ದಾರೆ. ರಸಗೊಬ್ಬರ ಹಾಕಿ ಹಣ ಕಳೆದುಕೊಂಡವರಂತೆ ಸಾವಯವ ಕೃಷಿಗೆ ಮೊರೆ ಹೋದವರೂ ಹಣ ಕಳೆದುಕೊಂಡಿದ್ದಾರೆ. ಸಮಯ ಹಾಳು ಮಾಡಿಕೊಂಡಿದ್ದಾರೆ.ಅದೆಷ್ಟೇ ತರಬೇತಿ ಶಿಬಿರ ಪ್ರಚಾರ ನಡೆಯುತ್ತಿದ್ದರೂ ರೈತರ ಪರಿಸ್ಥಿತಿ ಸುಧಾರಿಸುತ್ತಿಲ್ಲ.
ನಮ್ಮ ದೇಶದಲ್ಲಿ ನೆಲ ಜಲ ಭಾಷೆ ಔಶಧಿ ನಲವತ್ತು ಕಿಲೋಮೀಟರು ಗಳಿಗೊಮ್ಮೆ ಬದಲಾಗುತ್ತದೆ. ಮಣ್ಣಿನ ಗುಣ ಪ್ರತಿ ನಲವತ್ತು ನಲವತ್ತು ಕಿಲೋಮೀಟರುಗಳಿಗೆ ಬದಲಾಗುತ್ತದೆ. ಗಾಳಿ ಬೀಸುವ ದಿಕ್ಕು, ಮಳೆಯ ಪ್ರಮಾಣ, ಭೂಮಿಯ ಗಟ್ಟಿತನ, ನೀರಿನ ಕ್ಷಾರತೆ ಎಲ್ಲವೂ ಬದಲಾಗುತ್ತಾ ಹೋಗುತ್ತದೆ. ಅಷ್ಟೇ ಅಲ್ಲ ಅಲ್ಲಿನ ಪ್ರಾಣಿಸಂಪತ್ತು ಸಹ ಬದಲಾಗುತ್ತದೆ. ಅಸುಗಳ ಜಾತಿ ಮತ್ತು ಅವುಗಳ ಹೊಂದಿಕೊಳ್ಳುವಿಕೆ ಬದಲಾಗುತ್ತದೆ. ಬೆಳೆಯುವ ಬೆಳೆ ಸಂಪೂರ್ಣವಾಗಿ ಈ ಎಲ್ಲ ಪ್ರಾಕೃತಿಕ ಗುಣಗಳ ಮೇಲೆ ಅವಲಂಬನೆಯಾಗಿರುತ್ತದೆ.
ಉದಾಹರಣೆಗೆ ಮಲೆನಾಡಿನಲ್ಲಿ ಬೇಸಿನ ಮರ ಜಾಲಿಯ ಮರಗಳು ಬೆಳೆಯುವದಿಲ್ಲ, ಅದೇ ಸಮಯಕ್ಕೆ ಬಯಲುಸೀಮೆಯಲ್ಲಿ ಜಾಲಿಯ ಮರ ಆಳದಷ್ಟು ದೊಡ್ಡದಾಗಿ ಬೆಳೆಯುತ್ತದೆ. ಮಲೆನಾಡಿನ ಔಷಧೀಯ ಸಸ್ಯಗಳು ಬಯಲು ಸೀಮೆಯ ಕಡೆ ಬೆಳೆಯಲು ಸಾಧ್ಯವೆ ಇಲ್ಲ. ಹೀಗಿರುವಾಗ ಆಯಾ ನೆಲದ ಪ್ರಾಕೃತಿಕ ಅಂಶಗಳಿಗೆ ಅನುಗುಣವಾಗಿ ಬೆಳೆ ಬರುವಂತೆ ಕೃಷಿ ಇರಬೇಕೆ ಹೊರತು ಎಲ್ಲೋ ನಡೆಸಿದ ಪ್ರಯೋಗಗಳಿಗೆ ಅನುಗುಣವಾಗಿ ಅಲ್ಲ. ಸುಭಾಶ್ ಪಾಳೇಕರ್ ಅವರ ಪ್ರಯೋಗ ನಡೆದಿರುವುದು ಮಹಾರಾಷ್ಟ್ರದ ಗದ್ದೆಗಳಲ್ಲಿ. ಅವರ ಪ್ರಯೋಗಗಳಲ್ಲಿ ಅಲ್ಲಿಯ ಪರಿಸರಕ್ಕೆ ಸರಿ ಹೊಂದುವಂತೆ ಕೆಲವು ಯಶಸ್ಸುಗಳು ಕೆಲವು ಅಪಜಯಗಳೂ ಸಿಕ್ಕಿರುತ್ತವೆ. ಅಲ್ಲಿನ ಯಶಸ್ವಿ ಸೂತ್ರಗಳನ್ನು ಅವರು ಎಲ್ಲೆಡೆ ಬೋಧಿಸುತ್ತಿದ್ದಾರೆ. ಆ ಯಶಸ್ಸನ್ನು ಹಿಂಬಾಲಿಸಿ ಜನ ಬೇಸಾಯ ಕೈಗೊಂಡು ಕೈ ಸುಟ್ಟು ಕೊಳ್ಳುತ್ತಿದ್ದಾರೆ.
ಸೌರ ವಿದ್ಯುತ್ ಅವಕಾಶಗಳು
– ಗೋವಿಂದ ಭಟ್
ವಿಚಾರ ಮನಸ್ಸಿಗೆ ಬಂದರೂ ಅವಕಾಶಗಳ ಬಗ್ಗೆ ಕೆದಕುತ್ತಾ ಸಾಗಿದಂತೆ ಸಾದ್ಯತೆಗಳು ಸ್ಪಷ್ಟವಾಗುತ್ತಾ ಬಂತು.ಒಮ್ಮೆ ಹೊಸ ಕೊಳವೆ ಬಾವಿಗೆ ಸೌರ submersible ಪಂಪಿನ ವಿಚಾರಣೆಗೆ ಹೋಗಿದ್ದೆ. ಆಗ ಒಂದು ಮಾಮೂಲಿ surface ಪಂಪಿಗೆ ಸಬ್ಸಿಡಿ ಇದ್ದ ಕಾಲ. ಹಾಗಾಗಿ ಅಂಗಡಿಯವರು ಅಷ್ಟೊಂದು ಫಲಕಗಳು ಕಡಿಮೆ ಬೆಲೆಗೆ ಸಿಗುತ್ತದೆ. ಆಲೋಚನೆ ಮಾಡಿ ಎಂದು ಪುಸಲಾಯಿಸಿದರು. ಅಂದಿಗೆ ಹದಿನೆಂಟು ವರ್ಷ ಹಿಂದೆ ಸೈಕಲಿನಲ್ಲಿ ದೆಹಲಿಗೆ ಸಾಗುವಾಗ ಟಿಲೋನಿಯದಲ್ಲಿ ಸೌರ ವಿದ್ಯುತ್ ಬಳಸಿ ರಾತ್ರಿ ಶಾಲೆ ಕಾರ್ಯಾಚರಿಸುವುದನ್ನು ಕಂಡಿದ್ದೆ. ಆಗಲೇ ಈ ಸೌರ ವಿದ್ಯುತ್ ಉಪಯೋಗ ಬಗೆಗೆ ಮನದಲ್ಲಿ ಬಿತ್ತಿದ ಬೀಜ ಮೊಳಕೆಯೊಡೆಯಿತು. ನನಗೆ ಬೇಕಾದ ಪಂಪ್ ಅಲ್ಲವಾದರೂ ಇದನ್ನು ಬಳಸಬಹುದೆಂಬ ಅಲೋಚನೆಯಿಂದ ಒಪ್ಪಿದೆ.
ಹಾಗೆ 2002ರಲ್ಲಿ ಒಂದಷ್ಟು ಫಲಕಗಳೊಂದಿಗೆ ಒಂದು ಸೌರ ಶಕ್ತಿಯ ಪಂಪು ನಮ್ಮಲ್ಲಿಗೆ ಬಂತು. ಅಂದಿನಿಂದ ಇಂದಿನ ವರೆಗೆ ಸೌರ ವಿದ್ಯುತ್ ಗರಿಷ್ಟ ಉಪಯೋಗದ ಬಗೆಗೆ ಆರು ಇಂಚು ಮೇಲೆ ಸರಿದರೆ ಮೂರು ಇಂಚು ಕೆಳಗೆ ಜಾರುವುದು ಎನ್ನುವ ಕಪ್ಪೆಯಾಟ ನಿರಂತರವಾಗಿ ಸಾಗುತ್ತಲೇ ಇದೆ.
ಕರಾವಳಿಗರನ್ನು ಬಲಿ ತೆಗೆದುಕೊಳ್ಳಲಿರುವ ನೇತ್ರಾವತಿ ನದಿ ತಿರುವು ಯೋಜನೆ…!
-ಶಂಶೀರ್, ಬುಡೋಳಿ
ಯಾರಾದರೂ ಊಹಿಸಿರಬಹುದೇ?
ತಣ್ಣನೆಯ ಹಾದಿಯಲ್ಲಿ ಹರಿಯುತ್ತಿದ್ದ ನೇತ್ರಾವತಿ ನದಿಗೋಸ್ಕರ ಒಂದೊಮ್ಮೆ ಹೋರಾಟ ನಡೆಸುವ ಬಗ್ಗೆ ನಮ್ಮ ಹಿರಿಯರು ಕನಸು ಕೂಡಾ ಕಂಡಿರಬಹುದೇ? ಇಲ್ಲ. ಸಾಧ್ಯವೇ ಇಲ್ಲ. ಯಾಕೆಂದರೆ ನದಿಯ ಮೂಲ ಶೋಧಿಸಬೇಡ ಎನ್ನುವ ಮಾತನ್ನು ಅವರು ನಂಬಿದ್ದರು. ಹಾಗಾಗಿ ಅವರು ಈ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಂಡಿರಲಿಲ್ಲ.ಪಶ್ಚಿಮ ಘಟ್ಟದ ಉಳಿವಿಗಾಗಿ ನಡೆಸುತ್ತಿರುವ ಹೋರಾಟದ ನಂತರ ಕರಾವಳಿಗರು ನಡೆಸುತ್ತಿರುವ ನೇತ್ರಾವತಿ ನದಿ ಉಳಿಸುವ ಹೋರಾಟ ಇವತ್ತಿಗೂ ನಡೆಯುತ್ತಲೇ ಇದೆ.ಮೊನ್ನೆಯ ವಿಶ್ವ ತುಳು ಸಮ್ಮೇಳನದಲ್ಲೂ ಸಹ ಈ ಬಗ್ಗೆ ಚರ್ಚೆ ಉಂಟಾಗಿತ್ತು. ಇತ್ತೀಚಿಗೆ ಪರಮಶಿವಯ್ಯನವರು ಈ ಬಗ್ಗೆ ಚಕಾರವೆತ್ತಿದ್ದು ತನ್ನ ವರದಿ ಅಸಮರ್ಪಕವಾಗಿದ್ಜದರೆ ತಾನು ಯಾವ ಶಿಕ್ಷಾರ್ಹ ಕ್ರಮಕ್ಕೂ ಬದ್ಧ ಎಂದು ಹೇಳಿಕೆ ಕೊಟ್ಟಿದ್ದಾರೆ. ಆದರೆ ಸರಕಾರ ಮಾತ್ರ ತೆಪ್ಪಗಾಗಿದೆ. ವಿಜ್ಞಾನ-ತಂತ್ರಜ್ಞಾನ,ಭ್ರಷ್ಟ ರಾಜಕಾರಣ,ಬಂಡವಾಳಶಾಹಿತ್ವದ ವಿರುದ್ಧದ ಹೋರಾಟದ ತರಹೇ ಈ ನೇತ್ರಾವತಿ ನದಿ ಉಳಿಸುವ ಹೋರಾಟ. ಈ ಹೋರಾಟಕ್ಕೆ ಪ್ರಗತಿಪರ ಸಂಘಟನೆಗಳು ಮಾತ್ರ ಬೆಂಬಲ ಕೊಡುತ್ತಿರುವುದರಿಂದ ಬಲಪಂಥೀಯ ಎನ್ನಿಸುವ ಸಂಘಟನೆಗಳ ವಿರುದ್ಧದ ಆಟದಿಂದ ಇವತ್ತು ಈ ಹೋರಾಟ ಮುಂದುವರಿಯುತ್ತಲೇ ಇದೆ. ಹಾಗಾಗಿ ಪಕ್ಷಾತೀತವಾದ ಸ್ವತಂತ್ರ ಸಂಘಟನೆಗಳು, ಸೇವಾ ಸಂಸ್ಥೆಗಳು ಮಾತ್ರ ಈ ಹೋರಾಟದಲ್ಲಿ ಭಾಗಿಯಾಗಿರುವುದನ್ನು ನಾವು ನೋಡ್ತಾ ಇದ್ದೇವೆ. ಉದಾಹರಣೆಗೆ ಭಾರತೀಯ ಕಿಸಾನ್ ಸಂಘ,ನಾಗರಿಕ ಸೇವಾ ಟ್ರಸ್ಟ್ ಮುಂತಾದ ಸಂಘಟನೆಗಳನ್ನ ಗುರುತಿಸಬಹುದು. ೨೦೦೯ಸಾಗಿದ್ದರೂ ಈ ವರ್ಷದಲ್ಲಿ ನೇತ್ರಾವತಿ ನದಿಯ ಹರಿವನ್ನು ನಿಲ್ಲಿಸಿ ಬೆಂಗಳೂರಿನಲ್ಲಿ ನದಿ ತಿರುಗಿಸುವ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ.






