ನಾನು ಗೌರಿಯಾದರೆ ನೀನು ಯಾರು ಎಂದು ಅವರ ಕೇಳಬೇಕಿತ್ತು!
– ನರೇಂದ್ರ ಎಸ್ ಗಂಗೊಳ್ಳಿ
ಪತ್ರಕರ್ತೆಯಾಗಿ ಅದಕ್ಕಿಂತ ಹೆಚ್ಚಾಗಿ ತನ್ನ ಎಡಪಂಥೀಯ ಧೋರಣೆಗಳಿಂದ ಗುರುತಿಸಿಕೊಂಡಿದ್ದ ಗೌರಿ ಲಂಕೇಶ್ ಹತ್ಯೆ ನಿಜಕ್ಕೂ ವಿಷಾದಕರ. ವಾದ ವಿವಾದಗಳಿಗೆ ಹತ್ಯೆಯೇ ಉತ್ತರವಾಗಬಾರದು. ಹಾಗಾಗಿ ಹಂತಕರು ಅದ್ಯಾರೇ ಆಗಿದ್ದರೂ ಅವರ ಬಂಧನವಾಗಲಿ ಶಿಕ್ಷೆಯಾಗಲಿ ಎನ್ನುವುದನ್ನು ಮಾನವೀಯತೆಯ ನೆಲೆಯಲ್ಲಿ ಎಲ್ಲರೂ ಒಪ್ಪುವಂತಾದ್ದು. ಆದರೆ ಒಂದು ಹತ್ಯೆಯ ಬಳಿಕ ಈ ಬುದ್ಧಿಜೀವಿಗಳೆನ್ನಿಸಿಕೊಂಡವರು ವರ್ತಿಸುತ್ತಿರುವ ರೀತಿ ಇದೆಯಲ್ಲಾ ಅದನ್ನು ಮಾತ್ರ ಯಾವ ಕಾರಣಕ್ಕೂ ಒಪ್ಪಿಕೊಳ್ಳಲಾಗದ್ದು.
ಮೊತ್ತ ಮೊದಲಿಗೆ ನಮ್ಮ ಮಾಧ್ಯಮಗಳು ಗೌರಿಯವರ ಹತ್ಯೆ ಬಳಿಕ ಅವರಿಗೆ ವಿಶೇಷ ಬಿರುದು ಬಾವಲಿಗಳನ್ನೇ ನೀಡುತ್ತಾ ಸುದ್ದಿಗಳನ್ನು ಬಿತ್ತರಿಸಲಾರಂಬಿಸಿದವು. ಹೋರಾಟಗಾರ್ತಿ, ಅಪೂರ್ವ ಚಿಂತಕಿ ಎಂದೆಲ್ಲಾ ಇವರು ಹೇಳುತ್ತಾರಲ್ಲಾ ಅದ್ಯಾವ ನೆಲೆಯಲ್ಲಿ ಅವರನ್ನು ಉತ್ತಮ ಚಿಂತಕಿ ಎನ್ನಲಾಗುತ್ತದೆ ಎನ್ನುವುದನ್ನು ಬಲ್ಲಿದರು ಹೇಳಬೇಕಿದೆ. ಆರಂಭದ ಹಂತದಲ್ಲಿ ನಕ್ಸಲರನ್ನು ಶರಣಾಗಿಸಿ ಸಮಾಜದ ಮುಖ್ಯವಾಹಿನಿಯಲ್ಲಿ ಅವರಿಗೊಂದು ಬದುಕು ಕಟ್ಟಿಕೊಡುವ ಒಂದಷ್ಟು ಪ್ರಯತ್ನಗಳನ್ನು ಅವರು ಮಾಡಿದ್ದು ನಿಜವಾದರೂ ಈ ಹೊತ್ತಿಗೂ ನಕ್ಸಲರಿಗೆ ಪರಿಹಾರ ಕೊಡಿಸುವ ಮತ್ತು ಅವರ ಮರುವಸತಿ ಯೋಜನೆಯಲ್ಲಿ ನಡೆದ ಅವ್ಯವಹಾರಗಳ ವಾಸನೆ ಆ ವಿಚಾರದ ಸುತ್ತಲೂ ಮೇಳೈಸಿಕೊಳ್ಳುತ್ತಿರುವುದನ್ನು ಅಲ್ಲಗಳೆಯಲಾದೀತಾ?
ಅವರ ಪತ್ರಿಕೆಯ ತಲೆಬರಹಗಳಾದಿಯಾಗಿ ಅವರ ಬರಹಗಳಲ್ಲಿನ ಬಾಷಾ ಪ್ರಯೋಗಗಳನ್ನು ಗಮನಿಸಿದಾಗ ಅವರೊಬ್ಬ ಅಪೂರ್ವ ಆದರ್ಶ ಚಿಂತನೆಗಳುಳ್ಳ ಉತ್ತಮ ಬರಹಗಾರರಾಗಿದ್ದರು ಎನ್ನುವುದನ್ನು ಸಜ್ಜನ ಮನಸ್ಸುಗಳಿಗೆ ಒಪ್ಪಿಕೊಳ್ಳಲು ಕಷ್ಟವಾಗುತ್ತದೆ.ಸತ್ತ ಮೇಲೆ ಪ್ರತಿಯೊಬ್ಬರನ್ನೂ ಗೌರವಿಸುವುದು ನಮ್ಮ ಸಂಸ್ಕೃತಿ ನಮಗೆ ಕಲಿಸಿದ ಉತ್ತಮ ವಿಚಾರಗಳಲ್ಲಿ ಒಂದು. ಹಾಗೆಂದು ಗೌರವ ಸಲ್ಲಿಸುವ ನೆಪದಲ್ಲಿ ತೀರಾ ಅತಿರಂಜಿತವಾಗಿ ಒಬ್ಬರನ್ನು ಹೊಗಳುವುದನ್ನು ಯಾವ ನೆಲೆಯಲ್ಲೂ ಒಪ್ಪಲಾಗದ್ದು.
ಕಳೆದ ಒಂದು ವಾರದಿಂದ ನಾನು ಕೇಳಲ್ಪಟ್ಟ ಐದು ಸುಳ್ಳುಗಳು
– ರಾಜೇಶ್ ನರಿಂಗಾನ.
೧) ಗೌರಿ ಲಂಕೇಶ್ ವಿಚಾರವಾದಿ
ಗೌರಿ ಲಂಕೇಶ್ ಯಾವ ರೀತಿಯ ವಿಚಾರವಾದಿ ಎಂದೇ ತಿಳಿಯುತ್ತಿಲ್ಲ. ತನ್ನ ಸಂಪಾದಕತ್ವದ ‘ಗೌರಿ ಲಂಕೇಶ್ ಪತ್ರಿಕೆ’ಯಲ್ಲಿ ಭಿನ್ನ ವಿಚಾರಧಾರೆಯ ನಿಲುವನ್ನು ಹೊಂದಿರುವ ಆಕೆಗಿಂತ ವಯಸ್ಸಿನಲ್ಲಿ ಅದೆಷ್ಟೇ ಹಿರಿಯರಿದ್ದರೂ ಏಕವಚನದಲ್ಲಿ ಹೀನಮಾನವಾಗಿ ನಿಂದಿಸುತ್ತಿದ್ದರು. ರಂಜನೆ, ಪ್ರಲೋಭನೆಯ ಹೆಸರಿನಲ್ಲಿ ಭಿನ್ನ ವಿಚಾರಧಾರೆಯವರ ವೈಯಕ್ತಿಕ ಸ್ವಾತಂತ್ರ್ಯವನ್ನು ಹರಣಗೈಯುತ್ತಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಶಿಕ್ಷೆಯನ್ನೂ ವಿಧಿಸಿತ್ತು. ಆದ್ದರಿಂದ ಭಿನ್ನ ವಿಚಾರಧಾರೆಯಿರುವ ವ್ಯಕ್ತಿಗಳ ತೇಜೋವಧೆ ಮಾಡುವುದನ್ನೇ ‘ವಿಚಾರವಾದ’ ಎನ್ನುವುದಾದರೆ ಅಂಥ ವಿಚಾರವಾದಕ್ಕೆ ನನ್ನ ಧಿಕ್ಕಾರವಿದೆ. ಮತ್ತಷ್ಟು ಓದು 
ಶವದ ಮೇಲಿನ ರಣಹದ್ದುಗಳು
ದೇಶದಲ್ಲಿ ಎಲ್ಲೇ ಬುದ್ಧಿಜೀವಿಗಳ ಹತ್ಯೆ ನಡೆದರೂ ಮೊದಲು ಆರೋಪ ಹೊರಿಸುವುದು ಬಲಪಂಥೀಯ ವಿಚಾರಧಾರೆ ಹೊಂದಿರುವವರ ಮೇಲೆ, ಸಂಘಪರಿವಾರದವರ ಮೇಲೆ. ಎಲ್ಲಾ ಹತ್ಯೆಯ ಹಿಂದಿನ ಮರ್ಮ ಒಂದೇ, ದೇಶದಲ್ಲಿ ಕಮ್ಮಿ ನಿಷ್ಟರ ಹಾಗೂ ತಮ್ಮ ಎಡಪಂಥೀಯ ಚಿಂತನೆ ಗಳಿಗೆ ಸ್ಪಂದಿಸುವ ಮನೋಭಾವನೆ ಹೊಂದಿರುವಂತವರದ್ದೆ ಕೈ ಇರಬೇಕೆನ್ನುವ ಹಿಡನ್ ಅಜೆಂಡ ಇದ್ದಂತಿದೆ.
ಉಪರಾಷ್ಟ್ರಪತಿ ಹುದ್ದೆಯ ಆಯ್ಕೆ ಮತ್ತವರ ಕರ್ತವ್ಯಗಳು…
– ಶ್ರೇಯಾಂಕ ಎಸ್ ರಾನಡೆ
ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ 13ನೇ ಉಪರಾಷ್ಟ್ರಪತಿ ಚುನಾವಣೆ ನಡೆದಿದೆ. ನಿರೀಕ್ಷೆಯಂತೆ ಎನ್.ಡಿ.ಎ ಮೈತ್ರಿಕೂಟದ ಅಭ್ಯರ್ಥಿ ಮಾನ್ಯ ವೆಂಕಯ್ಯನಾಯ್ಡು ನೂತನ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿ ಗೋಪಾಲಕೃಷ್ಣ ಗಾಂಧಿಯವರನ್ನು ಬಹು ಅಂತರದಿಂದ ಸೋಲಿಸಿದ್ದಾರೆ. ಅದಕ್ಕಾಗಿ ಅವರಿಗೂ, ಅವರನ್ನು ಉಪರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆಮಾಡಿದ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೂ ಶುಭಾಶಯಗಳು. ಈ ಹೊತ್ತಿನಲ್ಲಿ ರಾಷ್ಟ್ರಪತಿಗಳ ಕೆಲಸ, ಕರ್ತವ್ಯ ಹಾಗೂ ಇನ್ನಿತರ ಸಂಗತಿಗಳ ಕುರಿತು ಬೆಳಕು ಚೆಲ್ಲುವ ಬರಹ. ಮತ್ತಷ್ಟು ಓದು 
ಡೊಕ್ಲಮ್ ಸದ್ದು, ಚೀನಾ ದರ್ದು: ಭಾರತ-ಚೀನ ಪ್ರಚಲಿತ ಕಥನ
– ಶ್ರೇಯಾಂಕ ಎಸ್ ರಾನಡೆ
ಡೊಕ್ಲಮ್ ಒಳಗಿರ್ದುಂ ಬೆವರ್ದನಾ ಡ್ರ್ಯಾಗನ್ ಪತಾಕಂ
ನಾವು ನಮ್ಮ ಸ್ನೇಹಿತರನ್ನು ಆಯ್ಕೆಗೆ ತಕ್ಕಂತೆ ಬದಲಾಯಿಸಬಹುದು ಆದರೆ ಭೌಗೋಳಿಕವಾಗಿ ಬೆಸೆದುಕೊಂಡಿರುವ ನೆರೆಹೊರೆಯ ದೇಶ-ಪ್ರದೇಶಗಳನ್ನಲ್ಲ. “ನಾ ಕೊಡೆ ಎನ್ನುವ ಭಾರತ, ತಾ ಬಿಡೆ ಎನ್ನುವ ಚೀನಾ ಹಠ. ಮಧ್ಯದಲ್ಲಿ ಬಿಕ್ಕಟ್ಟಿಗೆ ಸಿಲುಕಿರುವ ಡೊಕ್ಲಮ್ ಪ್ರದೇಶದ ವಾರಸುದಾರ ಭೂತಾನ್”. 1962ರ ಪರಿಸ್ಥಿತಿ ಈಗಿಲ್ಲ. ಎರಡೂ ಪರಮಾಣುಶಕ್ತಿಯ ಶಕ್ತಿಶಾಲಿ ದೇಶಗಳು. ಅದೇ ಹೊತ್ತಿಗೆ ಇಬ್ಬರೂ ನ್ಯೂಕ್ಲಿಯರ್ ಶಸ್ತ್ರಗಳ “ಮೊದಲ ಬಳಕೆ ಇಲ್ಲ”(ನೋ ಫಸ್ಟ್ ಯೂಸ್) ಎಂಬ ತತ್ವ ಪಾಲಿಸುವ ಜವಾಬ್ದಾರಿ ಹೊತ್ತಿವೆ. ಅಂದಿಗೆ “ಹುಲ್ಲುಕಡ್ಡಿಯೂ ಬೆಳೆಯದ ಬರಡು ಭೂಮಿ”(1962, ಅಂದಿನ ಪ್ರಧಾನ ಮಂತ್ರಿ, ನೆಹರೂ ಜವಾಹರ್ ಲಾಲ್ ಮಾತುಗಳು, ಚೀನಾದ ಅತಿಕ್ರಮಣ ಪ್ರವೇಶಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿನ ಹೇಳಿಕೆ) ಎಂದು ನಿರ್ಲಕ್ಷಿಸಲಾಗಿದ್ದ, ಆದರೆ ಇಂದಿಗೆ ಚೀನಾದ ಸಾರ್ವಭೌಮತೆಯ ಪ್ರತಿಷ್ಟೆ ಹಾಗೂ ಭಾರತದ ಆಂತರಿಕ ಭದ್ರತೆಯ ಅನಿವಾರ್ಯತೆಯ ದೃಷ್ಟಿಯಿಂದ ಅಸ್ಪಷ್ಟ ಗಡಿಯಲ್ಲಿನ ಆಯಕಟ್ಟಿನ ಪ್ರದೇಶಗಳು ಈವರೆಗಿನ ಭಾರತ-ಚೀನಾ ಗಡಿ ವಿವಾದದ ಜ್ವಲಂತತೆಗೆ ಮೂಲ. ಅದೀಗ “ಡೊಕ್ಲಮ್” ಕಾರಣದಿಂದ ಮತ್ತೆ ಮುನ್ನೆಲೆಗೆ ಬಂದಿದೆ. ಬೂದಿಮುಚ್ಚಿದ ಕೆಂಡದಂತಿರುವ ಈ ಸರ್ವಋತು ಸಮಸ್ಯೆ 52 ದಿನಗಳ ಬಿಗಿ ಸಂಘರ್ಷಾತ್ಮಕ ವಾತಾವರಣದಿಂದ ಬದಲಾವಣೆಯ ಮುಂದಿನ ದಾರಿಕಾಣದೆ ವಿಚಲಿತವಾಗಿದೆ. ಮತ್ತಷ್ಟು ಓದು 
ಆಳ್ವರ ವಿರುದ್ಧ ವ್ಯವಸ್ಥಿತ ಪಿತೂರಿ ನಡೆಯುತ್ತಿದೆಯೇ!?
– ಹರೀಶ್ಚಂದ್ರ ಶೆಟ್ಟಿ
ಕಾವ್ಯಶ್ರೀ ಎಂಬ ಹೆಣ್ಣುಮಗಳ ಆತ್ಮಹತ್ಯೆಯ ಪ್ರಕರಣದಲ್ಲಿ ಮೋಹನ ಆಳ್ವರನ್ನು ಸಿಕ್ಕಿ ಹಾಕಿಸಲು ಪಟ್ಟಭದ್ರ ಹಿತಾಸಕ್ತಿಗಳು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿವೆ.ಜನರ ಭಾವನೆಗಳನ್ನು “ಎನ್ಕ್ಯಾಶ್” ಮಾಡಿಕೊಳ್ಳುವುದರಲ್ಲಿ ಪರಿಣಿತರಾದ ವ್ಯಕ್ತಿಗಳು ಪರದೆಯ ಹಿಂದೆ ನಿಂತುಕೊಂಡು ಪ್ರತಿಭಟನೆಯ ಮೂಲಕ” ಮೈಲೇಜ್ ” ಗಿಟ್ಟಿಸಿಕೊಳ್ಳುತ್ತಿದ್ದಾರೆ.ಮಣಿಪಾಲದಲ್ಲಿ ವಿದ್ಯಾರ್ಥಿನಿಯೊಬ್ಬಳನ್ನು ಅಪಹರಿಸಿ ಅತ್ಯಾಚಾರ ಮಾಡಿದ ಪ್ರಕರಣವೊಂದು ಸುಮಾರು ಸಮಯದ ಹಿಂದೆ ಸಾಕಷ್ಟು ಸುದ್ದಿ ಎಬ್ಬಿಸಿತ್ತು.ಮೊನ್ನೆ ಮೊನ್ನೆ ಮಂಗಳೂರಿನ ಪ್ರಸಿದ್ಧ ವೈದ್ಯಕೀಯ ಕಾಲೇಜ್ ನ ವೈದ್ಯರೊಬ್ಬರನ್ನು ಅಪಹರಿಸಿ ಕೊಲ್ಲಲು ಪ್ರಯತ್ನಿಸಲಾಯಿತು..ಇನ್ನೊಂದು ವೈದ್ಯಕೀಯ ಕಾಲೇಜ್ ನ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ.. ಒಂದೆರಡು ತಿಂಗಳ ಹಿಂದೆ,ಮತ್ತೊಂದು ಪ್ರತಿಷ್ಠಿತ ಕಾಲೇಜ್ ನ ವಿದ್ಯಾರ್ಥಿನಿಯೂ ಆತ್ಮಹತ್ಯೆ ಮಾಡಿಕೊಂಡಳು..ಆವಾಗಿನ ಎಲ್ಲಾ ಪ್ರಕರಣಗಳಲ್ಲಿ ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳ ಒಡೆಯರುಗಳ ಬಗ್ಗೆ ತಪ್ಪಿಯೂ ಪ್ರಸ್ತಾಪಗಳು ಬರಲಿಲ್ಲ…ಯಾವ ಮಾಧ್ಯಮಗಳೂ ಅಂತಹ ಶಿಕ್ಷಣ ಸಂಸ್ಥೆಗಳ ಮಾಲೀಕರ ವಿಡಿಯೋ ಕಾನ್ಫರೆನ್ಸ್ ಮಾಡಿಸಿ,ವಕೀಲರಂತೆ ಲೈವ್ ಕ್ರಾಸ್ ಎಕ್ಸಾಮಿನೇಷನ್ ಮಾಡಲಿಲ್ಲ..
ಇಂತಹ ಘಟನೆ ನಡೆಯಲು ನಿಮ್ಮಂತ ಶಿಕ್ಷಣ ಸಂಸ್ಥೆಯ ಮಾಲೀಕರ ಪರೋಕ್ಷ ಕುಮ್ಮಕ್ಕು ಎಂದು ಯಾವ ಅಬ್ಬೆ ಪಾರಿಯೂ ಹೇಳುವ ಧೈರ್ಯ ತೋರಿಸಲಿಲ್ಲ ..ಯಾವುದೇ ಲೆಟರ್ ಹೆಡ್ ಸಂಘಟನೆಗಳ ನಾಯಕರುಗಳು ಜನರನ್ನು ಒಟ್ಟುಮಾಡಿಸಿಕೊಂಡು ಬಂದು ಪ್ರತಿಭಟನೆ ಮಾಡಲಿಲ್ಲ..ಆದರೆ ಆಳ್ವರ ಬಗ್ಗೆ ಎಲ್ಲವೂ ಕ್ರಮಬದ್ಧವಾಗಿ ನೆಡೆಯುತ್ತಿದೆ..ಈಗಿನ ಎಲ್ಲಾ ಪ್ರತಿಭಟನೆಗಳ ನೇತೃತ್ವ ವಹಿಸಿಕೊಂಡಿರುವ ವ್ಯಕ್ತಿಗಳು ಪ್ರತಿಭಟನೆಯ ನಾಯಕತ್ವ ವಹಿಸಿಕೊಳ್ಳುವ ಮೊದಲು ತಾವುಗಳು ಈ ತನಕ ಮಾಡಿರುವ ಒಂದಾದರೂ ಜನಪರ ಕೆಲಸಗಳನ್ನು ಜನರ ಮುಂದಿರಿಸಿಕೊಂಡು ಪ್ರತಿಭಟಿಸಲಿ….
ಸುಮಾರು ಮೂರು ನಾಲ್ಕು ವರ್ಷಗಳ ಹಿಂದೆ ಮೂಡುಬಿದರೆಯಲ್ಲಿ ನಡೆಯುವ “ಆಳ್ವಾಸ್ ನುಡಿ ಸಿರಿ ” ಮತ್ತು “ಆಳ್ವಾಸ್ ವಿರಾಸತ್ ” ಎಂಬ ಅಪೂರ್ವ ಕಾರ್ಯಕ್ರಮಗಳ ಬಗ್ಗೆ ಎಡಪಂಥೀಯ ಬುದ್ಧಿ ಜೀವಿಗಳು ಧ್ವನಿ ಎಬ್ಬಿಸಿ ಸಾಕಷ್ಟು ರಾದ್ಧಾಂತ ಮಾಡಿದ್ದರು..ಆವಾಗ ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಆಪ್ ಮತ್ತು ಫೇಸ್ ಬುಕ್ ಗಳಲ್ಲಿ ಈಗಿನಂತೆ ಜನ ಸಂದಣಿ ಇರಲಿಲ್ಲ.. .ಹಾಗಾಗಿ ಅಂದು ಅವರಿಗೆ ತಮ್ಮ “ಹಿಡನ್ ಅಜೆಂಡಾ”ಗಳನ್ನು ಜನ ಸಾಮಾನ್ಯರ ನಡುವೆ ಹರಿಯಲು ಬಿಟ್ಟು ರಾಷ್ಟ್ರೀಯವಾದಿಗಳನ್ನು ಕಟ್ಟಿ ಹಾಕಲು ಆಗಿರಲಿಲ್ಲ..ಆದುದರಿಂದ ಈ ಬಾರಿ ಅವರೆಲ್ಲ ವ್ಯವಸ್ಥಿತವಾಗಿ ತಮಗಿರುವ ರಾಜಕೀಯ ವಶೀಲಿ ಬಾಜಿಗಳನ್ನು ಉಪಯೋಗಿಸಿಕೊಂಡು ಕೆಲಸ ಮಾಡುತ್ತಿದ್ದಾರೆ..ಆಗ ಆಳ್ವರ ಪರವಾಗಿ ನಾನೊಂದು ಲೇಖನ ಬರೆದಿದ್ದೆ..ಅದನ್ನು ಮತ್ತೊಮ್ಮೆ ನಿಮ್ಮ ನಡುವೆ ಹಂಚಿಕೊಂಡಿದ್ದೇನೆ. ಸ್ವಂತ ಬುದ್ದಿ ಮತ್ತು ವಿವೇಚನೆ ಇರುವವರಿಗೆ,ಆಳ್ವರ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಬಗ್ಗೆ ಸ್ವಲ್ಪವಾದರೂ ಅರ್ಥವಾದೀತು. ಸಾಧ್ಯವಾದರೆ ಒಮ್ಮೆ ಓದಿಕೊಳ್ಳಿ…
………………………………………………………………………………….
ಕಾರ್ಗಿಲ್ ಕಥನವೆಂದರೆ ಅದ್ಯಾವುದೋ ಹಾಲಿವುಡ್, ಬಾಲಿವುಡ್ ಸಿನೆಮಾ ಕಥೆಯಲ್ಲ!
– ಶಿವಾನಂದ ಶಿವಲಿಂಗ ಸೈದಾಪೂರ.
ಇಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿ ದಿನವು ಕಾಮೇಂಟ್ಸ್ ಚಕಮಕಿಗಳನ್ನು ಪ್ರತಿಯೊಬ್ಬರು ನೋಡಿಯೇ ನೋಡುತ್ತೆವೆ. ಸಾಕಷ್ಟು ದುಡ್ಡು ತೆಗೆದುಕೊಂಡು ನಟಿಸುವ ಹೆಸರಿಗೆ ಮಾತ್ರ ಹೀರೊಗಳಾಗಿರುವ ನಟರಿಗೆ ಇಂದು ಪ್ಯಾನ್ಸ್ ಕ್ಲಬ್‍ಗಳು ಬೇಕಾಬಿಟ್ಟಿಯಾಗಿ ಬೆಳೆದಿವೆ. ಒಬ್ಬ ನಟನ ಅಭಿಮಾನಿಗಳು ಮತ್ತೊಬ್ಬ ನಟನ ಮೇಲೆ ಎಗರಾಡುವುದು ಏರಾಡುವುದು ಮಿತಿ ಮಿರಿದೆ. ರೀಲ್ ಕಥೆಯ ನಾಯಕರಿಗೆ ರಿಯಲ್ ಬಿಲ್ಡಪ್ ಅಂತು ಅತಿಯಾಗಿದೆ. ಕಟೌಟ್ ಮೇಲೆ ಬೀಳುವ ಹಾಲಿನ ಕ್ಯಾನ್ ಗಳಿಗೇನು ಕೊರತೆಯಿಲ್ಲ. ಪ್ರತಿಯೊಂದು ಭಾಷೆಯಲ್ಲಿ ವಾರಕ್ಕೆ ಕನಿಷ್ಠ ಸುಮಾರು ಮೂರರಿಂದ ನಾಲ್ಕು ಸಿನೇಮಾ ಬಿಡುಗಡೆಯಾದರೂ ಕೂಡ ಸಾಮಾನ್ಯವಾಗಿ ಎಲ್ಲವನ್ನೂ ನೋಡುತ್ತೆವೆ. ಮತ್ತೆ ಮುಂದಿನ ವಾರದ ಹೋಸ ಸಿನೆಮಾ ಬರುವರೆಗೂ ಅದನ್ನು ಮೆಲುಕು ಹಾಕುತ್ತೆವೆ. ಬಿಡುಗಡೆಗೊಂಡ ಸಿನೇಮಾದ ನಾಯಕ, ನಾಯಕಿ, ಕಳನಾಯಕ, ನಿರ್ದೇಶಕ, ನಿರ್ಮಾಪಕನಿಂದ ಹಿಡಿದು ಪೋಷಕ ನಟನವರೆಗೂ ಎಲ್ಲರೂ ನೆನಪಿನಲ್ಲಿ ಉಳಿಯುತ್ತಾರೆ. ಆದರೆ…! ಮತ್ತಷ್ಟು ಓದು 
ಮರಳುಗಾಡಿನಲ್ಲಿ ಹಸಿರನ್ನೊತ್ತಿಸಿದ ದೇಶವೊಂದು ನಡೆದ ಹಾದಿಯಲ್ಲಿ…
– ಸುಜಿತ್ ಕುಮಾರ್
ಅರಬ್ಬರ ಹಾಗು ಜ್ಯೂವರ (ಯಹೂದಿ) ಕಿತ್ತಾಟವನ್ನು ನೋಡಲಾರದೆ ವಿಶ್ವಸಂಸ್ಥೆ ಅಂದು ಯಹೂದಿಗಳಿಗೊಂದಷ್ಟು ಹಾಗು ಅರಬ್ಬರಿಗೊಂದಿಷ್ಟು ನೆಲವನ್ನು ಪಾಲುಮಾಡಿ ಕೊಟ್ಟಿತ್ತು. ಇಬ್ಬರ ಕಿತ್ತಾಟದ ನಡುವೆ ಮೂರನೆಯವರ ಉಸಾಬರಿಯನ್ನು ಒಪ್ಪದ ಅರಬ್ ಪಡೆ (ಈಜಿಪ್ಟ್, ಸಿರಿಯಾ, ಜೋರ್ಡನ್, ಲೆಬನಾನ್) ತಮ್ಮ ಪಾಲು ಸಣ್ಣದೆಂದು ಕೊರಗಿ ವಿಶ್ವಸಂಸ್ಥೆ ಗೊತ್ತುಮಾಡಿದ್ದ ಯಹೂದಿಯರ ಅಷ್ಟೂ ನೆಲವನ್ನು ನುಂಗಿ ಹಾಕಲು ರಣತಂತ್ರವೊಂದನ್ನು ರೂಪಿಸಿದವು. ಜಾಗತಿಕ ಮಟ್ಟದಲ್ಲಿ ತನ್ನ ಪಿಳಿ ಪಿಳಿ ಕಣ್ಣುಗಳನ್ನು ಬಿಡುತ್ತಿರುವಷ್ಟರಲ್ಲೇ ವೈರಿ ಸೇನೆ ಯಹೂದಿಯರ ಪ್ರದೇಶವನ್ನು ಮೂರು ದಿಕ್ಕಿನಿಂದಲೂ ಆವರಿಸಿತು. ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿ ತನ್ನೆಲ್ಲಾ ಶಕ್ತಿಯನ್ನು ಬಸಿದು ಹೋರಾಡಿದ ಪಡೆ, ವೈರಿಸೇನೆ ಕನಸ್ಸಿನಲ್ಲಿಯೂ ಊಹಿಸಲಾಗದ ಮಟ್ಟಿಗೆ ಸದೆಬಡಿಯಿತು. ಯುದ್ಧದಲ್ಲಿ ಸೋತು ಓಡತೊಡಗಿದ್ದ ವೈರಿಪಡೆಯ ಒಂದೊಂದೇ ಪ್ರದೇಶಗಳನ್ನು ‘ಗೆದ್ದ’ ಯಹೂದಿಯರು 1948 ರಲ್ಲಿ ಹೊಸ ದೇಶವೊಂದನ್ನು ಹುಟ್ಟುಹಾಕಿ ಪ್ರಪಂಚಕ್ಕೆ ಪರಿಚಯ ಮಾಡಿಕೊಟ್ಟರು. ಇಂದು ಯುದ್ಧ ಸಾಮಗ್ರಿಗಳ ತಯಾರಿ ಹಾಗು ಅವುಗಳ ರಪ್ತಿನಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವ, ಹಾಗು ಅಭಿವೃದ್ದಿ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಝಳಪಿಸುವ ಆ ದೇಶದ ಹೆಸರೇ ಇಸ್ರೇಲ್. ಮತ್ತಷ್ಟು ಓದು 
ಸಿಡಿಲು ಸನ್ಯಾಸಿಯ ಐದು ನಿಮಿಷದ ಮಾತುಗಳು ಇಡೀ ಜಗತ್ತಿಗೆ ಸನಾತನ ಧರ್ಮದ ಶ್ರೇಷ್ಠತೆಯನ್ನು ಬಿತ್ತರಿಸಿದ್ದವು.
ಶಿವಾನಂದ ಶಿವಲಿಂಗ ಸೈದಾಪೂರ
(ಎಂ.ಎ.ವಿದ್ಯಾರ್ಥಿ.)
ರಾಣಿಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ.
ಸ್ವಾಮಿ ವಿವೇಕಾನಂದರ 115ನೇ ಪುಣ್ಯಸ್ಮರಣೆಯ ವಿಶೇಷ ಲೇಖನ.
ಅದೊಂದು ತಮ್ಮ ಧರ್ಮ ಪ್ರಾಬಲ್ಯವನ್ನು ಜಗತ್ತಿನ ಇತರ ದೇಶದ ಮೇಲೆ ಹರಡಲು ನಡೆಸಿದ ಸಮಾರಂಭ. ಅದಕ್ಕೂ ಒಂದು ಇತಿಹಾಸ, ನೂರ ಐವತ್ತು ವರ್ಷಗಳ ಹಿಂದೆ ಕೊಲಂಬಸ್ ಶೋಧಿಸಿದ್ದು, ಅದರ ಸ್ಮರಣೆಯ ಹೆಸರಲ್ಲಿ ಕ್ರೈಸ್ತ ಧರ್ಮವನ್ನು ಜಗತ್ತಾದ್ಯಂತ ಬಿತ್ತಲು ಆಯೋಜನಗೊಂಡಿದ್ದೇ ವಿಶ್ವ ಸರ್ವಧರ್ಮ ಸಮ್ಮೇಳನ.. ಅದಕ್ಕೆ ಕಾರಣ ಒಂದು ಉದ್ದೇಶ ಹಲವು. ಅಷ್ಟೊತ್ತಿಗೆ ಕ್ರೈಸ್ತ ಧರ್ಮ ಜಗತ್ತಿನ ಹಲವಾರು ದೇಶಗಳನ್ನು ಆಕ್ರಮಿಸಿಕೊಂಡಿತ್ತು. ಅಂತಹ ಆಕ್ರಮಣಕ್ಕೆ ಒಳಗೊಂಡ ದೇಶಗಳಲ್ಲಿ ಭಾರತವು ಒಂದು. ಮತ ಸುಧಾರಣೆಗಾಗಿ ಬುದ್ಧ, ಬಸವ, ಮಹಾವೀರ, ಶಂಕರ, ಮದ್ವಾಚಾರ್ಯರು…. ಹೀಗೆ ಎಲ್ಲರು ಬಂದು ಹೋದರು. ಯಶಸ್ವಿಯು ಇಲ್ಲ, ವಿಫಲವು ಇಲ್ಲ. ಎಲ್ಲವೂ ಮಧ್ಯಂತರದಲ್ಲಿಯೇ ಸಾಗಿತ್ತೇ ಹೊರತು ಅವರ್ಯಾರು ಸಹ ದೇಶದ ಹೋರ ಹೋಗಿ ಸನಾತನ ಧರ್ಮವನ್ನು ಪ್ರಚಾರ ಮಾಡಲಿಲ್ಲ. ಸನಾತನ ಧರ್ಮದ ಮೇಲೆ ದಾಳಿ ಆದಾಗಲೆಲ್ಲ ತಕ್ಕ ಉತ್ತರಕ್ಕೆ ಸಿದ್ಧವಾಗಿಯೇ ಇತ್ತು ಭಾರತ. ತುರ್ಕರ ದಾಳಿಗೆ ವಿಜಯನಗರ, ಮರಾಠರಂತಹ ಮನೆಗಳು ಹುಟ್ಟುತ್ತಲೇ ಬಂದವು. ಮತ್ತಷ್ಟು ಓದು 
ವಿಕೃತ ಮನಸ್ಸಿನ ಬುದ್ಧಿಗೇಡಿ ಜೀವಿಗಳಿಗೆ ಸ್ವದೇಶಾಭಿಮಾನ ಬರಲೇ ಇಲ್ಲ…
ಶಿವಾನಂದ ಶಿವಲಿಂಗ ಸೈದಾಪೂರ. ಎಂ.ಎ. ವಿದ್ಯಾರ್ಥಿ.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ.
“ಇದುವರೆಗೂ ಎಡಬಿಡಂಗಿಗಳು ಬರೆದದ್ದೇ ಇತಿಹಾಸ, ಹೇಳಿದ್ದೇ ಸತ್ಯಾಂಶ ಆಗಿ ಬಿಟ್ಟಿದೆ. ವಿಶ್ವವಿದ್ಯಾಲಯ, ಕಾಲೇಜು ಕ್ಯಾಂಪಸ್‍ಗಳಲ್ಲಿನ ಬೌದ್ಧಿಕ ಸ್ವಚ್ಚತೆಗೂ ಕೂಡ ಇಂದು ‘ಸ್ವಚ್ಛ ಭಾರತ ಅಭಿಯಾನ’ ನಡೆಯಬೇಕಿದೆ”.
ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ನಮ್ಮ ವಿಕೃತ ಮನಸ್ಸಿನ ಬುದ್ಧಿಗೇಡಿ ಜೀವಿಗಳಿಗೆ ಸ್ವದೇಶಭಿಮಾನ ಬರಲೇ ಇಲ್ಲ. ಮುಖ್ಯವಾಗಿ ಮೂರು ಸಲ ನೇರವಾಗಿ ಸೋತು, ಲೆಕ್ಕವಿಲ್ಲದಷ್ಟು ಸಾರಿ ಹಿಂದಿನಿಂದ ಚುರಿ ಹಾಕಲು ಬಂದು ಚಿಂದಿ ಚಿಂದಿಯಾದ ಪಾಕಿಸ್ತಾನದ ಬಗ್ಗೆ ಆಗಾಗ ಒಲವು ತೋರಿಸುತ್ತಿರುವ ಬುದ್ಧಿಜೀವಿಗಳ ಮನಸ್ಥಿತಿ ಈ ಜನ್ಮದಲ್ಲಿ ಸರಿ ಹೋಗುವುದಿಲ್ಲ ಎಂಬುವುದಕ್ಕೆ ಮತ್ತೆ ಅರುಂಧತಿ ರಾಯ್ ಸಾಬೀತು ಮಾಡಿದ್ದಾಳೆ. ಈ ಹಿಂದೆ ಒಮ್ಮೆ ಕಾಶ್ಮೀರದ ಬಗ್ಗೆ ಮಾತನಾಡುತ್ತ “ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಆಗಿರಲಿಲ್ಲ” ಎಂದು ತನ್ನ ಮಾನಸಿಕ ಅಸ್ವಸ್ತತೆಯನ್ನು ಪ್ರದರ್ಶಿಸಿದಳೇ ಹೊರತು, ಪಾಕಿಸ್ತಾನ ಯಾವುದರ ಅವಿಭಾಜ್ಯ ಅಂಗವೆಂದು ಹೇಳಲಿಲ್ಲ. ಈಗ ಏಳು ಲಕ್ಷ ಸೈನಿಕರ ಬದಲು ಎಪ್ಪತ್ತು ಲಕ್ಷ ನೇಮಿಸಿದರೂ ಪ್ರತ್ಯೇಕವಾದಿಗಳನ್ನು ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾಳೆ. ದಿನಗಳೆದಂತೆ ಅತಿ ಬುದ್ಧಿವಂತಿಕೆ ಪ್ರದರ್ಶಿಸಲು ಹೊರಟು ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡು ನಗೆಪಾಟಲಿಗೆ ಒಳಗಾಗುತ್ತಿದ್ದಾಳೆ. ಪದೆ ಪದೇ ಪಾಕಿಸ್ತಾನಿಯರನ್ನು ಸಮರ್ಥಿಸುವ ಈಕೆಗೆ ಸಾವಿರಾರು ವರ್ಷದ ಹಿಂದೆ ಈ ಹಿಂದೂ ದೇಶ (ಭಾರತ)ವು ಎಷ್ಟು ವಿಸ್ತೀರ್ಣಗೊಂಡಿತ್ತೆಂಬ ಸಾಮಾನ್ಯ ಜ್ಞಾನವು ಈಕೆಗೆ ಇದ್ದಂತಿಲ್ಲ. ಪಾಕಿಸ್ತಾನದ ಬಗ್ಗೆ ಮಾತನಾಡುವ ಈಕೆಗೆ ಪಾಕಿಸ್ತಾನ, ಅಪಘಾನಿಸ್ತಾನಗಳ ಮೂಲ ನಿವಾಸಿಗಳು ಯಾರು ಎಂಬುದನ್ನು ಒಮ್ಮೆಯೂ ಹೇಳಿಲ್ಲ. ನಿರಂತರವಾಗಿ ಈಕೆ ಪಾಕಿಸ್ತಾನದ ಪ್ರಜೆಯಂತೆ ವರ್ತಿಸುತ್ತ ಬಂದಿದ್ದಾಳೆ. ಮತ್ತಷ್ಟು ಓದು 






