ಯಶಸ್ಸಿನಿಂದ ಮುನ್ನುಗ್ಗುತ್ತಿರುವ #ಗೋಪ್ರಾಣಭಿಕ್ಷೆ
-ಶಿಶಿರ್ ಅಂಗಡಿ
ಸಾಮೂಹಿಕ ಪ್ರಾರ್ಥನೆ,ಸಮಾಜದ ಸಹಾಕರ ~ ಯಶಸ್ಸಿನಿಂದ ಮುನ್ನುಗ್ಗುತ್ತಿರುವ #ಗೋಪ್ರಾಣಭಿಕ್ಷೆ
ಪ್ರಾರ್ಥನೆ ಅಂದ್ರೆ ನಿಸ್ವಾರ್ಥವಾಗಿ ಒಳ್ಳೆಯ ಕೆಲಸಗಳನ್ನು ಮಾಡೋದು.ಪ್ರಾರ್ಥನೆ ಅಂದ್ರೆ ರಸ್ತೆ ದಾಟಲು ಕಷ್ಟ ಪಡುತ್ತಿರುವ ವೃದ್ಧರಿಗೆ, ಮಕ್ಕಳಿಗೆ ಸಹಾಯ ಮಾಡುವದು.ಪ್ರಾರ್ಥನೆ ಅಂದ್ರೆ ಇನ್ನೊಬ್ಬರಿಗೆ ಹೃದಯಾಂತರಾಳದಿಂದ ಶುಭವನ್ನು ಹಾರೈಸುವುದು.ಸಾಮೂಹಿಕ ಪ್ರಾರ್ಥನೆಗೆ ದೇವರನ್ನೇ ಧರೆಗಿಳಿಸುವ ಶಕ್ತಿ ಇದೆ ಅಂತ ಹೇಳ್ತಾರೆ.ಪ್ರಾರ್ಥನೆ ಎಂದರೆ ದೇವರ ಎದುರಿನಲ್ಲಿ ಬೇಡುವುದು ಎಷ್ಟು ಸರಿಯೋ, ಇನ್ನೊಬ್ಬರಿಗೆ ಒಳಿತು ಬಯಸುವುದು, ಒಳಿತನ್ನು ಮಾಡುವುದು ಕೂಡ ಅಷ್ಟೇ ಸರಿ ಎನ್ನುತ್ತಾರೆ ಬಲ್ಲವರು.
ಮಲೆಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಸಾವಿನಂಚಿನಲ್ಲಿರುವ ಗೋವುಗಳ ಶೋಷನೀಯ ಸ್ಥಿತಿ ಮನಗಂಡು ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀ ರಾಘವೇಶ್ವರಭಾರತಿ ಮಹಾಸ್ವಾಮಿಗಳವರು ಕೊಟ್ಟ ಒಂದು ಕರೆಗೆ ಸಾವಿರ ಸಾವಿರ ಸಂಖ್ಯೆಯಲ್ಲಿ ಗೋಪ್ರೇಮಿಗಳು ದೇಶದ ಉದ್ದಗಲಗಳಿಂದ ದೊಡ್ಡ ಮಟ್ಟದಲ್ಲಿ ಸ್ಪಂದಿಸಿ ಸರಳ ಭೋಜನ – ಸರಳ ಜೀವನದೊಟ್ಟಿಗೆ ವಾರಕ್ಕೆ ಒಂದು ಹೊತ್ತಿನ ಊಟ ಬಿಟ್ಟು ಆ ಹಣವನ್ನು ಗೋಪ್ರಾಣಭಿಕ್ಷೆಗೆ ಸಮರ್ಪಿಸಿದ್ದಾರೆ. ಈ ಮೂಲಕ ಸಾವಿರಾರು ಟನ್ ಮೇವು ಖರೀದಿಗೆ ಸಹಕರಿಸಿದ್ದಾರೆ. ನೂರಾರು ಕಾರ್ಯಕರ್ತರು ಬೆಟ್ಟದ ತಪ್ಪಲಿನಲ್ಲಿ ಅವಿಶ್ರಾಂತವಾಗಿ ಸೇವೆ ಸಲ್ಲಿಸುತ್ತಾ ದಿನನಿತ್ಯ ಸಮಯಕ್ಕೆ ಸರಿಯಾಗಿ ಗೋವಿಗೆ ಮೇವು ತಲುಪುವಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ #GiveUpAMeal ಅಭಿಯಾನಗಳ ಮೂಲಕ ದೇಶದ ಒಳ ಹೊರಗಿನ ಒಂದು ಮಿಲಿಯನಗೂ ಅಧಿಕ ಜನರನ್ನು ತಲುಪಿದ್ದು ಬಹುಪಾಲು ಜನ ಈ ಅಭಿಯಾನಕ್ಕೆ ತನು-ಮನ-ಧನದ ಸಹಕಾರ ನೀಡಿದ್ದಾರೆ.
ಹಾಗೇಯೆ ದೃಶ್ಯ ಹಾಗೂ ಪತ್ರಿಕಾ ಮಾಧ್ಯಮಗಳೂ, ನ್ಯೂಸ್ ಪೋರ್ಟಲ್,ಬ್ಲಾಗುಗಳೂ ಕೂಡ ಅಭಿಯಾನದ ಪ್ರತಿಹಂತದಲ್ಲೂ ವಿಷಯಗಳನ್ನು ಸಮಾಜಕ್ಕೆ ತಲುಪಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿವೆ.
ಯಕ್ಷಗಾನದಲ್ಲಿ ಏಸುಕ್ರಿಸ್ತ
– ವಿನಾಯಕ ಹಂಪಿಹೊಳಿ
ಏಸುಕ್ರಿಸ್ತನ ಜೀವನ ಕಥೆಯನ್ನು ಯಕ್ಷಗಾನದ ಆಟದ ರೂಪದಲ್ಲಿ ತೋರಿಸುವ ಪ್ರಯತ್ನವೊಂದು ಈಗ ಚರ್ಚೆಗೆ ಗ್ರಾಸವಾಗಿದೆ. ಒಂದು ಗುಂಪು ಇಂಥದೊಂದು ಪ್ರಯತ್ನವು ಕ್ರಿಶ್ಚಿಯಾನಿಟಿಯನ್ನು ಹರಡುವ ಹುನ್ನಾರದ ಭಾಗವೆಂದು ಭಾವಿಸಿದೆ. ಏಸುಕ್ರಿಸ್ತನ ಜೀವನವನ್ನು ಭಾರತೀಯ ಕಲೆಯೊಂದರ ಮೂಲಕ ತೋರಿಸಿ, ಏಸುವು ಇಡೀ ಮಾನವ ಸಮುದಾಯವನ್ನು ರಕ್ಷಿಸಲು ಹುಟ್ಟಿದ್ದಾನೆ ಎಂಬ ಕ್ರಿಶ್ಚಿಯಾನಿಟಿಯ ನಂಬಿಕೆಯೊಂದನ್ನು ಹರಡಿ, ಜನರನ್ನು ಮತಾಂತರಗೊಳಿಸುವ ಯೋಜನೆಯ ಒಂದು ಭಾಗ ಎಂಬುದು ಮೊದಲನೇ ಗುಂಪಿನ ವಾದವಾಗಿದೆ. ಹೀಗಾಗಿ ಇಂಥ ಪ್ರಯೋಗಗಳು ಉಚಿತವಲ್ಲ ಎಂಬುದು ಈ ಗುಂಪಿನವರ ಅಭಿಪ್ರಾಯ.
ಇನ್ನೊಂದು ಗುಂಪು ಇಂಥ ಹೊಸ ಪ್ರಯತ್ನವನ್ನು ಸ್ವಾಗತಿಸುತ್ತದೆ. ಕಲೆಗೆ ಯಾವುದೇ ನಿರ್ಬಂಧಗಳಿರಕೂಡದು. ಯಕ್ಷಗಾನವು ಯಾರೊಬ್ಬರ ಸೊತ್ತೂ ಅಲ್ಲ. ಭಾರತದಲ್ಲಿರುವ ಕ್ರಿಶ್ಚಿಯನ್ನರು ತಮ್ಮ ಯಕ್ಷಗಾನ ಕಲೆಯಲ್ಲಿ ಏಸುವನ್ನೇಕೆ ರೂಪಿಸಿಕೊಳ್ಳಬಾರದು ಎನ್ನುವದು ಎರಡನೇ ಗುಂಪಿನವರ ವಾದವಾಗಿದೆ. ಯಕ್ಷಗಾನದಲ್ಲಿ ಹೊಸ ಪ್ರಯೋಗಗಳು ನಡೆಯಬೇಕು. ಈ ರೀತಿಯ ಪ್ರಯೋಗಗಳು ಕೋಮು ಸೌಹಾರ್ದಕ್ಕೆ ಅಡಿಗಲ್ಲಾಗಿರುತ್ತವೆ. ಆ ನಿಟ್ಟಿನಲ್ಲಿ ಇಂಥ ಪ್ರಯೋಗಗಳನ್ನು ಅನುಮತಿಸಬೇಕು ಎನ್ನುವದು ಈ ಗುಂಪಿನವರ ಅಭಿಪ್ರಾಯವಾಗಿದೆ.
ಯಕ್ಷಗಾನದಲ್ಲಿ ಏಸುವಿನ ಕತೆಯನ್ನು ಅಳವಡಿಸುವದು ಚರ್ಚುಗಳ ಹುನ್ನಾರವೇ ಆಗಿರಬೇಕೆಂಬುದು ಕೇವಲ ಅನುಮಾನವಷ್ಟೇ ಆಗಿದೆ, ಒಂದು ವೇಳೆ ಅದು ಹುನ್ನಾರವೇ ಆಗಿದ್ದರೂ, ಆಗಿರದಿದ್ದರೂ ಅದೊಂದೇ ಕಾರಣವು ಅಂತಹ ಪ್ರಯೋಗಗಳನ್ನು ನಿಲ್ಲಿಸಲು ಸಮರ್ಥವಾದ ವಾದವಾಗುವದಿಲ್ಲ. ಅಲ್ಲದೇ ಕಲಾವಿದನಿಗೆ ಸ್ವಾತಂತ್ರ್ಯವಿರಬೇಕೆಂಬುದು ಎಲ್ಲರಿಗೂ ಒಪ್ಪಿತವಾಗುವ ಅಂಶವೇ ಆಗಿದೆ. ಹೀಗಾಗಿ ಯಕ್ಷಗಾನದಲ್ಲಿ ಏಸುವಿನ ಕತೆಯು ಅಳವಡಿಸಲ್ಪಡಬಾರದು ಎನ್ನುವ ವಾದವು ತರ್ಕಬದ್ಧವಾಗಿ ಯೋಚಿಸಿದಾಗ ಸಮರ್ಪಕವೆಂದು ಅನಿಸುವದಿಲ್ಲ.
ಕೇಳುತ್ತಿದೆಯಾ ಗೋವಿನ ಆಕ್ರಂದನ…
– ಶಾರದ ಡೈಮಂಡ್
ಜನನದಿಂದ ಮರಣ ಪರ್ಯಂತ ಹುಲು ಮಾನವರಿಗೆ ಅಮೃತ ಸಮಾನವಾದ ಹಾಲನ್ನುಣಿಸುವವಳು ಗೋಮಾತೆ. “ಗವಾಂ ಅಂಗೇಷು ತಿಷ್ಟಂತಿ ಭುವನಾನಿ ಚತುರ್ದಶ” – ಗೋವಿನ ದೇಹದ ಕಣಕಣಗಳಲ್ಲೂ ಹದಿನಾಲ್ಕು ಲೋಕಗಳನ್ನು ವ್ಯವಸ್ಥಿತವಾಗಿ ನಡೆಸತಕ್ಕ ಮೂವತ್ಮೂರು ಕೋಟಿ ದೇವತೆಗಳು ಅನ್ಯಾನ್ಯ ಸ್ಥಳಗಳಲ್ಲಿ ನೆಲೆಸಿರುತ್ತಾರೆ. ಗೋವಿನಿಂದ ದೊರಕುವ ಹಾಲು, ಮೊಸರು, ಬೆಣ್ಣೆ, ತುಪ್ಪ ಮನುಷ್ಯ ಸ್ವಾಸ್ಥಮಯ ಜೀವನವನ್ನು ನಡೆಸಲು ಆಧಾರವಾಗಿದೆ. ಗೋಮೂತ್ರ, ಗೋಮಯ ಕೃಷಿಗೆ ಜೀವಾಳ. ಹೀಗೆ ಒಂದಿಲ್ಲೊಂದು ರೀತಿಯಲ್ಲಿ ಕಾಮಧೇನುವಾಗಿ ನಮ್ಮನ್ನು ಸಲಹುತ್ತಿರುವ ಗೋವಿಗೆ ಭಾರತದಲ್ಲಿ ವಿಶೇಷವಾದ ಸ್ಥಾನವಿದೆ. ಮತ್ತಷ್ಟು ಓದು 
ಸತ್ಯಕ್ಕೆ ಸಾವಿಲ್ಲವೆನ್ನುವುದೇನೋ ನಿಜ, ಆದರೆ ಸುಳ್ಳಿಗೆ ಕೈಕಾಲುಗಳಿವೆಯಲ್ಲಾ!
– ಹನುಮಂತ ಕಾಮತ್
ಲೋಕ ಕಲ್ಯಾಣಕ್ಕಾಗಿ ತಪೋನಿರತ ಋಷಿಮುನಿಗಳಿಗೆ ರಾಕ್ಷಸರು ಉಪಟಳವನ್ನು ಕೊಡುತ್ತಿದ್ದರು, ಋಷ್ಯಾಶ್ರಮಗಳಿಗೆ ದಾಳಿ ಮಾಡುತ್ತಿದ್ದರು ಎನ್ನುವ ಕಥೆಗಳು ಪುರಾಣಗಳಲ್ಲಿ ಪದೇಪದೇ ಬರುತ್ತವೆ. ತ್ರೇತಾಯುಗದಲ್ಲೂ, ದ್ವಾಪರದಲ್ಲೂ ರಾಕ್ಷಸರದ್ದು ಅದೇ ಬುದ್ಧಿ, ಅದೇ ಚಾಳಿ. ಲೋಕಕಲ್ಯಾಣಕ್ಕೆ ಅಡ್ಡಗಾಲು ಹಾಕುವುದೆಂದರೆ ದುಷ್ಟಶಕ್ತಿಗಳಿಗೆ ಏನೋ ಖುಷಿ. ಅಂದರೆ ಸಮಾಜದಲ್ಲಿ ಸಾತ್ವಿಕ ಗುಣ ವೃದ್ಧಿಯಾದಾಗಲೆಲ್ಲಾ ಅದನ್ನು ತಡೆಯುವ ಪ್ರವೃತ್ತಿ ಅನಾದಿಯಿಂದಲೂ ಸೃಷ್ಟಿಯಲ್ಲಿ ನಡೆಯುತ್ತಾ ಬಂದಿವೆ.
ಮತ್ತಷ್ಟು ಓದು 
ಸಿದ್ಧಾಂತಕ್ಕಾಗಿ ಬದುಕುವ ಜೀವನ ಯಾವ ಸಂತರಿಗೂ ಕಡಿಮೆಯದ್ದಲ್ಲ..
– ಅರುಣ್ ಬಿನ್ನಡಿ
೨೫ ವರ್ಷಗಳ ಪ್ರಚಾರಕ್ ಜೀವನದಲ್ಲಿ ಗಳಿಸಿದ ಆಸ್ತಿ ಮೂರೂ ಜೊತೆ ಪಂಚೆ,ಎರಡು ಜುಬ್ಬ, ಎರಡು ಮೊಬೈಲ್, ಪುಸ್ತಕಗಳು ಜೊತೆಗೆ ಪ್ರಾಣಕೊಡುವ ಅಸಂಖ್ಯಾತ ಕಾರ್ಯಕರ್ತರು….
ಕೆಲವೊಮ್ಮೆ ಇಂದಿನ ಕರ್ನಾಟಕ ಬಿಜೆಪಿ ಯ ಸೈದ್ಧಾಂತಿಕ ತಿಕ್ಕಾಟಗಳಿಗೆ ನರೇಂದ್ರ ಮೋದಿಯೆ ಕಾರಣ ಎನ್ನಿಸಿ ಬಿಡುತ್ತದೆ, ಯುವ ಸಮುದಾಯವನ್ನು ಕಾಂಗ್ರೆಸಿನ ಪಾರಂಪರಿಕ ಓಲೈಕೆ ಹಾಗು ಜಾತಿ ರಾಜಕಾರಣದಿಂದ ರಾಷ್ಟ್ರೀಯತೆಯ ಸೈದ್ಧಾಂತಿಕ ರಾಜಕಾರಣಕ್ಕೆ, ಅಭಿವೃದ್ಧಿ ರಾಜಕಾರಣಕ್ಕೆ, ನೈತಿಕ ರಾಜಕಾರಣಕ್ಕೆ ಬದಲಾಯಿಸಿದ್ದೆ ದೊಡ್ಡ ಅಪರಾಧವಾಗಿಬಿಟ್ಟಿದೆ ಎನ್ನಬಹುದು. ಮತ್ತಷ್ಟು ಓದು 
ಯಾರು ಹಿತವರು ಯಡ್ಯೂರಪ್ಪನವರಿಗೆ..?
– ರಾಕೇಶ್ ಶೆಟ್ಟಿ
“ಕೊಟ್ಟ ಕುದುರೆಯನೇರಲರಿಯದೆ…” ವಚನದ ಸಾಲುಗಳು ಕರ್ನಾಟಕ ಬಿಜೆಪಿಯ ನಾಯಕರಿಗೆ ಸರಿಯಾಗಿ ಅನ್ವಯಿಸುತ್ತದೆ. ಎಪಿಎಂಸಿ,ಪಾಲಿಕೆ ಚುನಾವಣೆಗಳೆನ್ನದೇ ದೇಶದ ಮೂಲೆ ಮೂಲೆಯಲ್ಲೂ ಬಿಜೆಪಿ ಗೆದ್ದು ಬರುತ್ತಿರುವ ಕಮಲ ಪಕ್ಷದ ಸುವರ್ಣ ಸಮಯದಲ್ಲೂ, ರಾಜ್ಯ ಬಿಜೆಪಿ ನಾಯಕರು ಉಪಚುನಾವಣೆಯಲ್ಲಿ ಮಕಾಡೆ ಮಲಗಿ ಕಿರಗೂರಿನ ಗಯ್ಯಾಳಿಗಳಂತೆ ಕಾದಾಟಕ್ಕಿಳಿದಿದ್ದಾರೆ. ನಿನ್ನೆಯ ಸಂಘಟನೆ ಉಳಿಸಿ ಹೆಸರಿನ ಸಭೆ, ಅದಕ್ಕೆ ಪ್ರತಿಯಾಗಿ ನಡೆದ ಬೆಂಗಳೂರಿನ ಶಾಸಕ, ಸಂಸದರ ಪತ್ರಿಕಾಗೋಷ್ಟಿ, ನಾಯಕರೆನಿಸಿಕೊಂಡವರ ಏಕವಚನ ಪ್ರಯೋಗ, ಆರೋಪ-ಪ್ರತ್ಯಾರೋಪಗಳಿಂದಾಗಿ ನಿನ್ನೆ ಎಷ್ಟು ಮೆಗಾಧಾರವಾಹಿಗಳ ಟಿಆರ್ಪಿ ಕಡಿಮೆಯಾಯಿತೋ!
ದೇಶದ ಉಳಿದ ರಾಜ್ಯಗಳ ಬಿಜೆಪಿ, ನರೇಂದ್ರ ಮೋದಿಯವರ ಅಭಿವೃದ್ಧಿ ರಾಜಕಾರಣ ಮತ್ತು ಯುವ ಮನಸ್ಸುಗಳ ಆಲೋಚನಾ ಶಕ್ತಿಯಿಂದ ಮುಂದುವರೆಯುತ್ತಿದ್ದರೆ, ರಾಜ್ಯ ಬಿಜೆಪಿ ಮಾತ್ರ ಪುರಾತನ ಜಾತಿ ಮತ್ತು ಓಲೈಕೆ ರಾಜಕಾರಣವನ್ನೇ ನೆಚ್ಚಿಕೊಂಡಿದೆ.ಈಶ್ವರಪ್ಪನವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಮುಖಂಡರೊಬ್ಬರು, ಕುರುಬರಿಗಾಗಿ ಈಶ್ವರಪ್ಪ ಏನು ಮಾಡಿದ್ದಾರೆ? ಯಡ್ಯೂರಪ್ಪನವರೇ ಕನಕ ಜಯಂತಿ ಆರಂಭಿಸಿದ್ದು ಎಂದು ಹೇಳುತ್ತಿರುವುದನ್ನು ಕೇಳಿದೆ. ಆಗಾಗ್ಗೆ ಬರುವ ಜಯಂತಿಗಳ ನೆಪದಲ್ಲಿ ರಜೆಗಳನ್ನು ಕೊಟ್ಟು ಸರ್ಕಾರಿ ಯಂತ್ರವನ್ನು ನಿಲ್ಲಿಸುವ ಪರಿಪಾಠಗಳು ಕೊನೆಯಾಗಬೇಕೆಂಬ ಉದ್ದೇಶದಿಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಂತವರು ‘ಜಯಂತಿ ರಜೆ’ಗಳನ್ನೇ ಕಿತ್ತೊಗೆಯುವಂತಹ ಕೆಲಸ ಮಾಡುತ್ತಿರುವಾಗ, ರಾಜ್ಯ ಬಿಜೆಪಿಯ ನಾಯಕರ ಮನಸ್ಥಿತಿ ಇನ್ನೂ ಜಯಂತಿ ರಾಜಕಾರಣದಲ್ಲೇ ಇರುವುದು ಇವರ ಯೋಚನಾ ಲಹರಿ ಯಾವ ಕಾಲದಲ್ಲಿದೆ ಎಂದು ಸೂಚಿಸುತ್ತದೆ. ಹಾಗೆ ನೋಡಿದರೇ ಕಾಂಗ್ರೆಸ್ಸಿನ ‘ಭಾಗ್ಯ’ ರಾಜಕಾರಣಕ್ಕೂ, ಬಿಜೆಪಿಯ ‘ಜಯಂತಿ’ ರಾಜಕಾರಣಕ್ಕೂ ಯಾವ ವ್ಯತ್ಯಾಸವಿದೆ ? ಇವೆಲ್ಲವನ್ನೂ ಪ್ರಶ್ನಿಸಬೇಕಾದ ಪತ್ರಿಕೆಗಳು ಮಾಡುತ್ತಿರುವುದಾದರೂ ಏನು?
ಕರ್ನಾಟಕ ಬಿಜೆಪಿಯ ಪ್ರತೀ ನಾಯಕನು ತಾವು ನಡೆದು ಬಂದ ಹಾದಿಯನ್ನು ಒಮ್ಮೆ ಹಿಂದೆ ತಿರುಗಿ ನೋಡುವ ಸಮಯ ಬಂದಿದೆ.!
– ಸಾಮಾನ್ಯ ಕಾರ್ಯಕರ್ತ.
ಉಪಚುನಾವಣೆಯ ಪಲಿತಾಂಶವನ್ನು ನೆಪವಾಗಿ ಇಟ್ಟುಕೊಂಡು ಕರ್ನಾಟಕ ಬಿಜೆಪಿಗೆ ಕೆಲವು ಮಾತುಗಳನ್ನು ಹೇಳಲೇ ಬೇಕಿದೆ. ಜನಸಾಮಾನ್ಯನ ನಡುವೆ ಬದುಕುವ ಕಾರ್ಯಕರ್ತನ ಮಾತು ಜನರ ಮಾತೇ ಆಗಿರುತ್ತದೆ. ಅವರ ಮಾತನ್ನು ಕೇಳಿದರೆ ಉತ್ತಮ ಕೇಳದಿದ್ದರೆ ನಮ್ಮ ಕರ್ಮ ಅಷ್ಟೆ. ಯಡಿಯೂರಪ್ಪನವರ ಬಗ್ಗೆ ಪ್ರತಿ ಪದ ಬರೆಯುವಾಗ ನನ್ನ ಮನಸ್ಸಿನಲ್ಲಿ ಜಾಗ್ರತೆಯ ಭಾವ ಕಣ್ಣರಳಿಸಿ ಕೂರುತ್ತದೆ, ಯಡಿಯೂರಪ್ಪನವರೇ ಹೀಗೆ ಮಾಡಿ, ಹಾಗೆ ಮಾಡಿ ಎನ್ನಲು ನನಗಿರುವ ಯೋಗ್ಯತೆಯಾದರು ಏನು ಎಂದು ನನ್ನ ಮನಸ್ಸು ಯಾವಾಗಲು ಪ್ರಶ್ನಿಸುತ್ತದೆ. ಯಡಿಯೂರಪ್ಪನವರು ನನ್ನ ಪಕ್ಷದ ಬೆಳವಣಿಗೆಗೆ ಸವೆಸಿರುವ ಕಾಲ ಚರ್ಮದ ಮೂಲೆಯಲ್ಲಿರುವ ದೂಳಿಗೆ ಸಮನಲ್ಲ ಎನ್ನುವ ಶ್ರದ್ದೆ ಇಂದಿಗೂ ಎಂದಿಗೂ ನನ್ನ ಮನಸ್ಸಿನಲ್ಲಿ ಉಳಿಸಿಕೊಳ್ಳುತ್ತೇನೆ. ಆದರೆ ಒಂದಿಡೀ ಯುವ ಸಮೂಹ ತಾಯಿಭಾರತಿಯನ್ನು ವಿಶ್ವಗುರು ಸ್ಥಾನದಲ್ಲಿ ಕುಳ್ಳಿರಿಸಲು ಎಲ್ಲವನ್ನು ತೊರೆದು ದುಡಿಯುತ್ತಿರುವಾಗ, ಆ ಕಾರ್ಯ ಸಾಧನೆಗೆ ಪೂರಕವಾಗಿ ನೀವೊಂದಿಷ್ಟು ಜರೂರ್ ಕೆಲಸಗಳನ್ನು ಮಾಡಲೇಬೇಕಾಗಿರುವುದರಿಂದ ಹಾಗು ನೀವು ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ಆಗಿರುವುದರಿಂದ ನಿಮ್ಮ ಬಳಿ ದೇಶದ ಯುವ ಸಮೂಹದ ಪರವಾಗಿ ಈ ಕೆಲಸಗಳನ್ನು ದಯಮಾಡಿ ಮಾಡಿ ಎಂದು ಕೇಳಿಕೊಳ್ಳುತ್ತೇನೆ. ಹಾಗು ಬಿಜೆಪಿಯ ನಾಯಕ ಪಟ್ಟ ಅಲಂಕರಿಸಿ ತಮ್ಮ ಸುತ್ತ ಕೋಟೆ ಕಟ್ಟಿಕೊಂಡಿರುವ ಹಲವು ಮಹಾಶಯರಿಗೂ ಬದಲಾಗುತ್ತಿರುವ ಭಾರತದ ರಾಜಕಾರಣವನ್ನೊಮ್ಮೆ ಕಣ್ಣು ಬಿಟ್ಟು ನೋಡಿ ಎಂದು ಹೇಳಲು ಬಯಸುತ್ತೇನೆ. ಮತ್ತಷ್ಟು ಓದು 
ಎಳ್ಳಷ್ಟೂ ಒಳ್ಳೆಯದನ್ನು ಮಾಡದ ಇವರು ಹಿಮಾಲಯದಷ್ಟು ಕೆಟ್ಟದನ್ನೆ ಮಾಡುತ್ತಿದ್ದಾರೆ!!!
– ಶಿವಾನಂದ ಶಿವಲಿಂಗ ಸೈದಾಪೂರ (ಎಂ.ಎ. ವಿದ್ಯಾರ್ಥಿ)
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ
ಎಬಿವಿಪಿಯ ರಾಜ್ಯ ಕಾರ್ಯಕಾರಣಿ ಸದಸ್ಯರು
ಇವರು ಬುದ್ದಿ ಜೀವಿಗಳೊ ಇಲ್ಲ ಬೌದ್ಧಿಕ ಭಯೋತ್ಪಾದಕರೊ..?
ಬುದ್ದಿ ಜೀವಿ ಎನ್ನಿಸಿಕೊಂಡವರು ಯಾವಾಗಲೂ ಭಾಜಪವನ್ನು ಓಪ್ಪಿಕೊಳ್ಳುವುದಿಲ್ಲವೆಂಬುವುದು ತೆರೆದ ಸತ್ಯ. ನಿರಂತರವಾಗಿ ಅದನ್ನು ತೆಗಳುವುದರಲ್ಲಿಯೇ ಕಾಲ ಕಳೆಯುತ್ತಾರೆಂಬುವುದು ವಾಸ್ತವಿಕ ಸತ್ಯ. ಚುನಾವಣೆಗಳಲ್ಲಿ ಭಾಜಪ ಯಾವಾಗ ಎದುರಾಳಿಗಳನ್ನು ಹೀನಾಯವಾಗಿ ಸೋಲಿಸಿ ಕೇಂದ್ರದ ಚುಕ್ಕಾಣಿ ಹಿಡಿಯಿತೋ ಅದಾಗಲೇ ವಿವಿಧ ಬಗೆಯ ಸೊಗಲಾಡಿತನದ ನಾಟಕಗಳು ಪ್ರದರ್ಶನವಾಗತೊಡಗಿದವು. ಆರಂಭದಲ್ಲಿ ಖರೀದಿಸಿದ ಪ್ರಶಸ್ತಿ ವಾಪಸಿಕರಣದ ಜೊತೆಗೆ ಅಸಹಿಷ್ಣುತೆಯ ಆಟ ಆರಂಭಿಸಿ ಜೆ.ಎನ್.ಯು, ಹೈದರಾಬಾದ್ ವಿವಿಗಳತ್ತ ಸುತ್ತ ಹಾಯ್ದವು. Surgical strike ಬಗ್ಗೆ ಸಂಶಯ ವ್ಯಕ್ತ ಪಡಿಸಿ, Demonetisation ವಿರೋಧಿಸಿದರು. ಆಶ್ಚರ್ಯದ ಸಂಗತಿ ಎಂದರೆ ವಿರೋಧಿಸಿ ವೀಡಿಯೊ ಹೇಳಿಕೆ ನೀಡಿರುವ ಕುಖ್ಯಾತ ವಿಚಾರವಾದಿಯೊಬ್ಬರ ಮನೆಯಲ್ಲಿ ಕೆಲವೆ ದಿನದಲ್ಲಿ ಗರಿ ಗರಿ ಹೊಸ ನೋಟಿನ ಸುರುಳಿಗಳೆ ಸಿಕ್ಕವು. ಅದು ಬೇರೆ ವಿಷಯ. ಮತ್ತಷ್ಟು ಓದು 
ಚೆನಾನಿ – ನಶ್ರಿ ಏಷ್ಯಾದ ಅತೀ ದೊಡ್ಡ ಹಾಗೂ ಭಾರತದ ಅತೀ ಉದ್ದದ ಸುರಂಗ ಮಾರ್ಗ…
-ಶ್ರೇಯಾಂಕ ಎಸ್ ರಾನಡೆ.
ಈ ಕಣಿವೆ ಜಮ್ಮು ಕಾಶ್ಮೀರದ ಜೀವಸೆಲೆ; ಭಾರತದ ಇಂಜಿನಿಯರಿಂಗ್ ಅದ್ಭುತಕ್ಕೆ ಸಾಕ್ಷಿ.
– ಏಪ್ರಿಲ್ 2ರಂದು ಪ್ರಧಾನಿ ನರೇಂದ್ರ ಮೋದಿಯವರು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಭಾರತದ ಅತೀ ಉದ್ದದ, ಏಷ್ಯಾದ ಅತೀ ದೊಡ್ಡ, ಎಲ್ಲಾ ರೀತಿಯ ಹವಾಮಾನಗಳಿಗೂ ಒಪ್ಪುವ ದ್ವಿಮುಖ ಸಂಚಾರ ವ್ಯವಸ್ಥೆಯಿರುವ ಸುರಂಗ ರಸ್ತೆ ಮಾರ್ಗವನ್ನು ಲೋಕಾರ್ಪಣೆಗೊಳಿಸಿದ್ದರು. ಕಳೆದ ಐದು ವರ್ಷ ಐದು ತಿಂಗಳ ಅವಧಿಯಲ್ಲಿ 3,720 ಕೋಟಿ ವೆಚ್ಚದಲ್ಲಿ ಈ ಸುರಂಗ ಮಾರ್ಗವನ್ನು ತಯಾರಿಸಲಾಗಿದೆ. ಕಲೆ ಮತ್ತು ವಿಜ್ಞಾನದ ಇಂಜಿನಿಯರಿಂಗ್ ತಾಂತ್ರಿಕತೆಯನ್ನು ಬಳಸಿಕೊಂಡು ನಿರ್ಮಿಸಲಾಗಿರುವ ಈ ಸುರಂಗ ಮಾರ್ಗ ಅನೇಕ ಕಾರಣಗಳಿಂದ ವಿಶೇಷವಾಗಿದೆ. ಮತ್ತಷ್ಟು ಓದು 
ಈ ದೇಶದಲ್ಲಿ ಫಾರೂಕ್ ಯಾಕೆ ಹುತಾತ್ಮ ಅನ್ನಿಸಿಕೊಳ್ಳುವುದಿಲ್ಲ..?
– ಅಜಿತ್ ಹನುಮಕ್ಕನವರ್
ಫಸ್ಟ್ ಆಫ್ ಆಲ್, ಈ ಫಾರೂಕ್ ಯಾರು ಅನ್ನೋದನ್ನ ಒಮ್ಮೆ ಹೇಳಿಬಿಡ್ತೀನಿ. ಆತ ಮೂಲತಃ ತಮಿಳುನಾಡಿನ ಕೊಯಮತ್ತೂರು ಕಡೆಯವನು. ವಯಸ್ಸು ಮೂವತ್ತೊಂದು. ಮದುವೆ ಆಗಿ ಎರಡು ಮಕ್ಕಳ ತಂದೆಯೂ ಆಗಿದ್ದ ಕಬ್ಬಿಣದ ವ್ಯಾಪಾರಿ. ಮೊನ್ನೆ ಹದಿನಾರನೇ ತಾರೀಖು ರಾತ್ರಿ, ಏನೋ ಅರ್ಜೆಂಟ್ ಕೆಲಸ ಇದೆ ಆತನನ್ನ ಮನೆಯಿಂದ ಹೊರಗೆ ಕರೆಸಿಕೊಂಡ ನಾಲ್ಕು ಜನ ನಡುರಸ್ತೆಯಲ್ಲಿ ಕತ್ತರಿಸಿ ಕೊಂದುಬಿಟ್ಟರು. ಮತ್ತಷ್ಟು ಓದು 




