ಸಾಹಿತ್ಯ ಪರಿಷತ್ ಯಾರೊಬ್ಬರ ಖಾಸಗಿ ಆಸ್ತಿಯಲ್ಲ..!
ಕಿರಣ್ ಕಿಜೋ
ಸಂಶೋಧನಾ ವಿದ್ಯಾರ್ಥಿ
ದ್ರಾವಿಡ ವಿಶ್ವವಿದ್ಯಾಲಯ, ಕುಪ್ಪಂ.
ಆಂಧ್ರ ಪ್ರದೇಶ.
ಮೊದಲಿಗೆ ಭೈರಪ್ಪನವರನ್ನು ಶಿವಮೊಗ್ಗದ ಸಾಹಿತ್ಯ ಸಮ್ಮೇಳನದಿಂದ ದೂರವಿಡುವಲ್ಲಿ ಯಶಸ್ವಿಯಾದ ರಾಜೇಂದ್ರ ಚೆನ್ನಿ ಹಾಗೂ ಅವರ ಪರಮ ಸಹಿಷ್ಣತೆಯ ಎಲ್ಲಾ ಸಂಗಡಿಗರಿಗೂ ಅಭಿನಂದನೆಗಳು! ಕೆಲ ದಿನಗಳ ಹಿಂದಷ್ಟೆ, ಸಾಹಿತ್ಯ ಸಂಭ್ರಮದ ಅಂಗಳದಲ್ಲಿ ಚಪ್ಪಲಿಯ ಮೂಲಕ ತಮ್ಮ ಶಕ್ತಿ ಪಾರಮ್ಯದೊಂದಿಗೆ ಗೆಲುವಿನ ನಗೆ ಬೀರಿದ್ದ ಎಡ ಪಡೆ, ಇದೀಗ ಶಿವಮೊಗ್ಗದಲ್ಲಿ ಮತ್ತೊಂದು ಸುತ್ತಿನ ಯಶಸ್ಸನ್ನು ಸಾಧಿಸಿ, ಗೆಲುವಿನ ಕೇಕೆ ಹಾಕಿದೆ. ಧಾರವಾಡದ ಮ್ಯಾನ್ ಆಫ್ ದಿ ಸೀರಿಸ್ ಚಪ್ಪಲಿ ಚಂದ್ರಶೇಖರ ಹಾಗೂ ಕುಂ.ವೀರಭದ್ರಪ್ಪನವರಾದರೆ, ಶಿವಮೊಗ್ಗೆಯಲ್ಲಿ ರಾಜೇಂದ್ರ ಚೆನ್ನಿ! ಈ ರೀತಿಯ ಗೆಲುವುಗಳು ಅವರಿಗೇನು ಹೊಸದಲ್ಲ ಬಿಡಿ. ದೊಡ್ಡ ದಾಖಲೆಯ ಇತಿಹಾಸವೇ ಅವರ ಬೆನ್ನ ಹಿಂದಿದೆ! ಮತ್ತಷ್ಟು ಓದು 
ನಾನೇ ಭಾರತ!
ಆಂಗ್ಲ ಮೂಲ: ರಾಜೀವ್ ಮಲ್ಹೋತ್ರಾ
ಅನುವಾದ : ಉದಯನ ಹೆಗಡೆ
ಭಾರತವು ಸೂಪರ್ ಪವರ್ ಆಗುವುದೆಂಬ ಕಲರವ ಎಲ್ಲೆಡೆ ಕೇಳಿಬರುತ್ತಿದೆ. ಆದರೆ ಸೂಪರ್ ಪವರ್‌ಗಳು ರಾಷ್ಟ್ರೀಯತೆಯ ಬಗೆಗೆ ಭ್ರಮೆಯನ್ನು ಹೊಂದಿವೆಯೇ? ಅಥವಾ ತಮ್ಮ ಹಿಂದುಳಿದ ನಾಗರೀಕತೆಯನ್ನು ಬದಲಾಯಿಸಲು ಬೇರೆಯವರಿಗೆ ಆಹ್ವಾನ ನೀಡುವುದು ಎಂದರ್ಥವೇ ? ಸೂಪರ್ ಪವರ್ ಆದ ಯಾವುದಾದರೂ ದೇಶವು ಯಾವತ್ತಾದರೂ ತನ್ನ ಪ್ರಜೆಗಳನ್ನು ವಿದೇಶೀ ಒಪ್ಪಂದದ ಏಜೆಂಟರಾಗಿ ಬಳಸಿಕೊಳ್ಳಲು ಅನವು ಮಾಡಿಕೊಡುತ್ತದೆಯೇ ? ಇಲ್ಲ. ಆದರೆ, ಭಾರತವು ಉದಾರವಾಗಿ ವಿದೇಶೀ ಒಪ್ಪಂದಗಳನ್ನು ಒಪ್ಪಿಕೊಳ್ಳುತ್ತಿದೆ. ಇದರಿಂದ ಭಾರತವವನ್ನು ಅವರು ವಿಭಕ್ತವಾಗೇ ಕಾಣುತ್ತಾರೆ. ಆದರೆ ಸೂಪರ್ ಪವರ್‌ಗಳು ಅಂದರೆ ತಪ್ಪು ತಿಳುವಳಿಕೆ ಎಂದರ್ಥವೇ ? ಮತ್ತಷ್ಟು ಓದು 
“ಜಗತ್ತಿನಲ್ಲಿ ಯಾವ ಬಲಪಂಥವೂ ಇಲ್ಲ. ನೀವದಕ್ಕೆ ಸೇರಬೇಕೆಂಬ ಬಲವಂತವೂ ಇಲ್ಲ”
– ರಾಘವೇಂದ್ರ ಸುಬ್ರಹ್ಮಣ್ಯ
ಇಡೀ ಜಗತ್ತಿನಲ್ಲಿ ಎಲ್ಲರೂ ‘ಎಡಪಂಥೀಯರು’, ‘ಬಲಪಂಥೀಯರು’ ಎಂಬ ಪದಗಳನ್ನು ಪುಂಖಾನುಪುಂಖವಾಗಿ ಹರಿಬಿಡುತ್ತಾರೆ. ಆದರೆ ಯಾರಿಗೂ ಅವುಗಳ ಬಗ್ಗೆ ಸ್ಪಷ್ಟ ಕಲ್ಪನೆಯಿಲ್ಲ. ಯಾಕೆ ಯಾರನ್ನು ಎಡಪಂಥೀಯರು ಅಂತಾ ಕರೀತಾ ಇದ್ದೀವಿ ಅಂತಲೂ ಗೊತ್ತಿಲ್ಲದೇ ಆ ಪದವನ್ನ ಉಪಯೋಗಿಸ್ತಾ ಇದ್ದಾರೆ. ಎಡಪಂಥೀಯರು ಎಂಬ ಪದ, ಎಡಪಂಥೀಯ ರಾಜಕಾರಣ ಎಂಬ ಪದದಿಂದ ಎರವಲು ಪಡೆದದ್ದು. ಈ ಎಡಪಂಥೀಯ ರಾಜಕಾರಣವೆಂದರೇನು? ಮತ್ತಷ್ಟು ಓದು 
ಇಂದು ಕಂಬಳ, ನಾಳೆ ಜೋಡೆತ್ತಿನ ಗಾಡಿ, ಸಂಕ್ರಾಂತಿ, ನಾಡಿದ್ದು ಇನ್ನೇನೋ…?
– ಶಿವಕುಮಾರ ಪಿ.ವಿ.
ಸಂಶೋಧನಾ ವಿದ್ಯಾರ್ಥಿ
ರಾಜ್ಯಶಾಸ್ತ್ರ ವಿಭಾಗ, ಕುವೆಂಪು ವಿಶ್ವವಿದ್ಯಾನಿಲಯ.
ಪ್ರಾಣಿಗಳಿಗೆ ಹಿಂಸೆ ನೀಡಿ ಮನರಂಜನೆ ಪಡೆಯಲಾಗುತ್ತಿದೆ ಎಂಬುದು ಕಂಬಳ, ಜಲ್ಲಿಕಟ್ಟುವಿನಂತ ಕ್ರೀಡೆಗಳನ್ನು ನಿಲ್ಲಿಸಲು ಪ್ರಾಣಿದಯಾ ಸಂಘಗಳು ನೀಡುತ್ತಿರುವ ಕಾರಣ. ನ್ಯಾಯಾಲಯವೂ ಕೂಡ ‘ಪ್ರಾಣಿ ಹಿಂಸೆ’ಯ ಮಾನದಂಡವನ್ನಾದರಿಸಿ ಈ ಕ್ರೀಡೆಗಳಿಗೆ ನಿಷೇಧಾಜ್ಞೆಯನ್ನೂ ಹೇರುತ್ತಿದೆ. ಇದನ್ನಿಟ್ಟುಕೊಂಡೇ ನೋಡಿದರೆ, ಕೋಳಿ-ಕುರಿ, ದನಗಳನ್ನು ಕಡಿದು ತಿನ್ನುವುದು ಅವುಗಳ ಮಾರಣಹೋಮವಾಗಿ ಕಾಣಿಸಬೇಕಿತ್ತು. ಆದರೆ ಹಾಗಾಗುತ್ತಿಲ್ಲ. ಆಶ್ಚರ್ಯವೆಂದರೆ, ಪ್ರಾಣಿ ಹಿಂಸೆ, ಪ್ರಾಣಿ ಬಲಿಯನ್ನು ನಿಷೇಧಿಸಬೇಕೆನ್ನುವ ಸಕಲ ಪ್ರಾಣಿಗಳ ಜೀವಪರ ದಯಾಳುಗಳೆ ಬೀಫ್, ಮತ್ತಿತರ ಮಾಂಸ ಖಾದ್ಯಗಳನ್ನು, ಅವುಗಳ ರಕ್ತದ ಸೂಪನ್ನು ಚಪ್ಪರಿಸುತ್ತಿರುತ್ತಾರೆ. ಅದಕ್ಕಾಗಿ ಹೋರಾಟಗಳನ್ನೂ ಮಾಡುತ್ತಾರೆ. ಪ್ರಾಣಿಗಳನ್ನು ಬೇಕಾದರೆ ಕಡಿದು ತಿನ್ನಿ, ಆದರೆ ಅವುಗಳಿಗೆ ಹಿಂಸೆ ಕೊಡಬೇಡಿ ಎಂಬುದು ಇವರ ಆಕ್ಷೇಪಣೆ! ಹಾಗಾದರೆ, ಪ್ರಾಣಿ ಹಿಂಸೆಯ ಗುರಾಣಿಯ ಹಿಂದಿರುವ ತರ್ಕವೇನು, ಇವರ ನಿಜವಾದ ಕಾಳಜಿ ಪ್ರಾಣಿ ಹಿಂಸೆ ಮಾಡಬಾರದೆನ್ನುವುದೇ? ಮತ್ತಷ್ಟು ಓದು 
ಜಲ್ಲಿಕಟ್ಟು ಹೆಸರಿನಲ್ಲಿ ಹೊಸದೊಂದು ಸಂಸ್ಕೃತಿ ಸಾಧ್ಯವಿಲ್ಲ ಅಂತೀರಾ?
– ನರೇಂದ್ರ ಎಸ್ ಗಂಗೊಳ್ಳಿ
ನಾಡು ನುಡಿ ಸಂಸ್ಕೃತಿ ಸಂಪ್ರದಾಯದ ಅಭಿಮಾನದ ವಿಚಾರಕ್ಕೆ ಬಂದಾಗ ತಮಿಳುನಾಡಿನ ಜನರು ಯಾವತ್ತಿಗೂ ಒಂದು ಹೆಜ್ಜೆ ಮುಂದೆ ನಿಲ್ಲುತ್ತಾರೆ. ಇದು ಹೊಗಳಿಕೆ ಅಂತೇನೂ ಅಲ್ಲ. ನಮ್ಮ ಜನರ ಅಭಿಮಾನದ ನೆಲೆಯಲ್ಲಿ ನೋಡಿದಾಗ ಹಾಗನ್ನಿಸುವುದು ಸಹಜ. ಮೊನ್ನೆ ಮೊನ್ನೆ ಪ್ರಸ್ತುತ ಜಲ್ಲಿಕಟ್ಟು ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ನಡೆದ ಹೋರಾಟದ ಪರಿ ಇದೆಯಲ್ಲಾ ಅದು ನಿಜಕ್ಕೂ ಪ್ರತಿಯೊಬ್ಬರಿಗೂ ಪ್ರೇರಣೆಯನ್ನು ನೀಡುವಂತಾದ್ದು. ಅವರಿಗೊಂದು ಮೆಚ್ಚುಗೆಯಿರಲಿ. ಆದರೆ ಈ ಜಲ್ಲಿಕಟ್ಟು ವಿಚಾರವನ್ನು ತೀರಾ ಭ್ರಮೆಗಳಿಗೆ ಕಟ್ಟುಬೀಳದೆ ವಾಸ್ತವದ ನೆಲೆಗಟ್ಟಿನಲ್ಲಿ ವಿಶ್ಲೇಷಿಸಿ ತೀರ್ಮಾನಕ್ಕೆ ಬರುವ ಅವಶ್ಯಕತೆ ಇಲ್ಲ ಎನ್ನುತ್ತೀರಾ? ಮತ್ತಷ್ಟು ಓದು 
ಕಂಬಳ : ಸಂಸ್ಕೃತಿ ಉಳಿಸಲು ಬೇಕು ನಿಮ್ಮ ಬೆಂಬಲ
– ಡಾ. ಸಂತೋಷ್ ಕುಮಾರ್ ಪಿ.ಕೆ
ಕಂಬಳ : ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಡೆಯುವ ಈ ಜಾನಪದ ಶೈಲಿಯ ಕ್ರೀಡೆಯು ಕೇವಲ ಮನೊರಂಜನೆ ಸರಕಾಗಿ ಮಾತ್ರ ಉಳಿದಿರದೆ, ಸಂಸ್ಕೃತಿಯ ಭಾಗವಾಗಿಯೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡುಬಂದಿದೆ. ಜನಮಾನಸದಲ್ಲಿ ಹಚ್ಚಹಸುರಾಗಿ ಉಳಿಯುವ ಹಲವಾರು ಸಂಗತಿಗಳಲ್ಲಿ ಸಂಸ್ಕೃತಿಯ ಭಾಗವಾಗಿರುವ ಇಂತಹ ಕೆಲವಾರು ಸಂಗತಿಗಳು ಎನ್ನಬಹುದು. ಕರ್ನಾಟಕದ ಹಲವಾರು ಭಾಗಗಳಲ್ಲಿ ಇಂತಹ ವಿಶೇಷ ಸಾಂಸ್ಕೃತಿಕ ಆರಣೆಗಳು ಇನ್ನೂ ಅಸ್ತಿತ್ವದಲ್ಲಿವೆ. ಅವುಗಳ ಮೂಲಕವೆ ಆಯಾ ಭಾಗದ ಸಂಸ್ಕೃತಿ ಮೆರುಗು ಪಡೆಯುವ ಜೊತೆಗೆ, ತನ್ನನ್ನು ತಾನು ಬಿಂಬಿಸಿಕೊಳ್ಳುತ್ತದೆ. ಇವುಗಳನ್ನು ಸರಿಯಾದ ಕ್ರಮದಲ್ಲಿ ಅರ್ಥೈಸಿಕೊಂಡರೆ ಭಾರತೀಯ ಸಂಪ್ರದಾಯ ಮತ್ತು ಅದರ ಸತ್ವದ ನೈಜ ಅರಿವು ನಮಗೆ ದೊರಕುತ್ತದೆ. ಆದರೆ, ಆಧುನಿಕರಾಗುವ ಭರದಲ್ಲಿ ಅವುಗಳನ್ನು ಬದಿಗೆ ತಳ್ಳುತ್ತಿರುವ ಸೋ ಕಾಲ್ಡ್ ಆಧುನೀಕರು ಒಂದೆಡೆಯಾದರೆ, ಅದನ್ನು ಶತಾಯಗತಾಯ ಹತ್ತಿಕ್ಕುವ ನಶೆ ಸರ್ಕಾರಗಳಿಗೆ ಮತ್ತು ದಯಾ ಪರಪರ ಸಂಘಗಳಿಗೆ ಏರಿರುವುದು ಮತ್ತೊಂದು ಕಡೆ. ಸಂಪ್ರದಾಯ ಸಂಸ್ಕೃತಿಗಳಿಗೆ ಬಲವಾದ ಪೆಟ್ಟು ನೀಡುವುದು ಬ್ರಿಟೀಷರ ಸರ್ಕಾರದಿಂದ ಹಿಡಿದು ಆಧುನಿಕ ಸರ್ಕಾರ, ನ್ಯಾಯಾಂಗಗಳವರೆಗೂ ಯಾವುದೇ ಅಡೆತಡೆಯಿಲ್ಲದೆ ಬೆಳೆದುಕೊಂಡುಬಂದಿದೆ. ಇದರ ಒಂದು ಝಲಕ್ ಇತ್ತೀಚೆಗೆ ಕಂಬಳದಿಂದ ಪ್ರಾರಂಭವಾಗಿದೆ. ಮತ್ತಷ್ಟು ಓದು 
ಕಾಲೇಜು – ವಿ.ವಿಗಳಲ್ಲಿ ಐಡಿಯಾಲಜಿ ಪ್ರಣೀತ ಹೋರಾಟಗಳು ಅವಶ್ಯಕವೇ?
– ಪ್ರವೀಣ ಟಿ.ಎಲ್
ಶಿವಮೊಗ್ಗ
ಭಾರತೀಯ ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಕುರಿತು ಹಲವು ಪ್ರಬಂಧಗಳೇ ಮಂಡನೆಯಾಗಿವೆ. ಆದರೆ ಇತ್ತೀಚಿನ ಕೆಲವು ಘಟನೆಗಳು ನಮ್ಮನ್ನು ಹೊಸ ಸಮಸ್ಯೆಯತ್ತ ಗಮನಹರಿಸುವಂತೆ ಮಾಡಿದೆ. ಅಂತಹ ಘಟನೆಗಳೆಂದರೆ;
- ರೋಹಿತ್ ವೇಮುಲಾ ಎಂಬ ಸಂಶೋಧನಾ ವಿದ್ಯಾರ್ಥಿಯ ಆತ್ಮಹತ್ಯೆಯ ಸುತ್ತ ನಡೆದ ಪ್ರಹಸನ. ಆತ ವಿವಿಯಲ್ಲಿ ಸಕ್ರಿಯವಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಕಾರಣಕ್ಕೆ ಆತನ ಆತ್ಮಹತ್ಯೆಯನ್ನು ಕೇಂದ್ರ ಸರ್ಕಾರವೇ ವ್ಯವಸ್ಥಿತವಾಗಿ ನಡೆಸಿದೆ ಎಂಬ ಆರೋಪ.
ವೇಮುಲ ಸಾವಿನ ಬಗ್ಗೆ ಮಾತಾಡಿದವರು ಈಗೆಲ್ಲಿಹರು..?
– ಶಾರದ ಡೈಮಂಡ್
ನೂರಾರು ಕನಸುಗಳನ್ನು ಕಟ್ಟಿಕೊಂಡಿದ್ದ ಮುಗ್ದ ಜೀವಿಯೊಂದು ಕಾಣದ ಕೈಗಳ ಕೈವಾಡಕ್ಕೆ ಬಲಿಯಾಗಿದೆ. ಕಾಂಗ್ರೆಸ್ ಸರಕಾರದ ದುರಾಡಳಿತಕ್ಕೆ ಮತ್ತೊಂದು ಜೀವ ಮಣ್ಣಾಗಿಹೋಯಿತು. ಓದುವುದರಲ್ಲಿ ಬುದ್ಧಿವಂತನಾಗಿದ್ದ, ಸೌಮ್ಯ ಸ್ವಭಾವದವನಾದ ಅಭಿಷೇಕ್ ಮೂರು ಕುಟುಂಬಗಳಿಗೆ ಸ್ವಂತ ಮಗನಂತೆಯೇ ಇದ್ದ. ಸರ್ಕಾರಿ ಕೆಲಸವೊಂದಕ್ಕೆ ಸೇರಿ ತನ್ನನ್ನು ಕಷ್ಟಪಟ್ಟು ಸಾಕುತ್ತಿರುವ ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬುದೇ ಅವನ ಕನಸಾಗಿತ್ತು. ಶೃಂಗೇರಿಯ ಜೆಸಿಬಿಎಮ್ ಕಾಲೇಜಿನ ಬಿ.ಕಾಂ ಕೊನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಅಭಿಷೇಕ್ ಎಂ.ಕೆ ಎಂಬ ಹುಡುಗ ಪ್ರಸಕ್ತ ವರ್ಷದ ಕಾಲೇಜಿನ ವಾಣಿಜ್ಯ ಸಂಘದ ಅಧ್ಯಕ್ಷ! ಚೆನ್ನಾಗಿ ಓದುತ್ತಿರುವ ಆಲ್ ರೌಂಡರ್ ವಿದ್ಯಾರ್ಥಿಗಳನ್ನು ಕಾಲೇಜಿನ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಸಂಘಗಳಿಗೆ ಅಧ್ಯಕ್ಷ – ಉಪಾಧ್ಯಕ್ಷರನ್ನಾಗಿ ಕಾಲೇಜಿನವರೇ ನೇಮಿಸುತ್ತಾರೆ. ನೇಮಿಸುವಾಗ ಅವನು ಯಾವ ಸಂಘಟನೆಯವನೆಂದು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಇಂತಹ ಉತ್ತಮ ವಿದ್ಯಾರ್ಥಿಯಾದ ಅಭಿಷೇಕ್ ವಾಣಿಜ್ಯ ಸಂಘವನ್ನು ಹೊರತುಪಡಿಸಿ ತನ್ನನ್ನು ತಾನು ಎಬಿವಿಪಿ ಯಲ್ಲಿ ಗುರುತಿಸಿಕೊಂಡಿದ್ದೇ ಜೀವಕ್ಕೆ ಮುಳ್ಳಾಗುವ ಹಾಗಾಯಿತು. ಜನವರಿ ಏಳರಂದು ಎನ್.ಸಿ.ಸಿ ಮತ್ತು ಎನ್.ಎಸ್.ಎಸ್ ಜಂಟಿಯಾಗಿ ಸೈನಿಕರಿಗೆ ಗೌರವ ಸಲ್ಲಿಸುವ “ಯೋಧನಮನ” ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಮತ್ತಷ್ಟು ಓದು 
ಕಲಬುರ್ಗಿಯವರ ಸಾವಿನಲ್ಲೂ ಸಾಹಿತಿಗಳು ಲಾಭ ಹುಡುಕಿದರಾ ?
– ಪ್ರವೀಣ್ ಕುಮಾರ್, ಮಾವಿನಕಾಡು
ಇತ್ತೀಚಿಗೆ ಒಂದು ದಿನ ಬೆಳಿಗ್ಗೆ ರೈಲಿನಲ್ಲಿ ಪ್ರಯಾಣ ಹೊರಟಿದ್ದೆ. ಎಂದಿನಂತೆ 2-3 ದಿನಪತ್ರಿಕೆಗಳನ್ನು ಕೊಂಡು ರೈಲು ಹತ್ತಿ ಕುಳಿತೆ. ರೈಲು ಹೊರಟ ನಂತರ ಒಂದು ದಿನಪತ್ರಿಕೆಯನ್ನು ತೆಗೆದು ಓದಲು ಶುರು ಮಾಡಿದೆ. ಪಕ್ಕದಲ್ಲಿ ಕುಳಿತಿದ್ದ ಹಿರಿಯರೊಬ್ಬರು ನಾನು ಓದುತ್ತಿದ್ದ ಪತ್ರಿಕೆಯ ಕಡೆ ಇಣುಕಿ ಇಣುಕಿ ನೋಡತೊಡಗಿದರು. ಸಣ್ಣದೊಂದು ಮುಗುಳ್ನಗೆಯೊಂದಿಗೆ ನನ್ನಲ್ಲಿದ್ದ ಇನ್ನೊಂದು ದಿನಪತ್ರಿಕೆಯನ್ನು ಅವರಿಗೆ ನೀಡಿ ಓದು ಮುಂದುವರಿಸಿದೆ. ಕೆಲವು ನಿಮಿಷಗಳ ನಂತರ ಆ ಹಿರಿಯರು “ಛೆ, ಕಲಬುರ್ಗಿಯವರ ಸಾವಿನಲ್ಲೂ ಸಾಹಿತಿಗಳು ಲಾಭ ಮಾಡ್ಕೋಳೋಕೆ ಹೋದ್ರು” ಅಂತ ಒಂದು ಉದ್ಘಾರ ತೆಗೆದರು. ಮತ್ತಷ್ಟು ಓದು 
ಬಡವರ ಮಕ್ಕಳ ಭವಿಷ್ಯದ ಜೊತೆಗೆ ಬರಗೂರು ಭಂಡಾಟ
– ರಾಕೇಶ್ ಶೆಟ್ಟಿ
ಕಾಲಕ್ಕೆ ತಕ್ಕಂತೆ ಮನುಷ್ಯ Update ಆಗಲಿಲ್ಲಾಂದ್ರೆ Outdated ಆಗಿಬಿಡ್ತಾನೆ ಎನ್ನುವುದಕ್ಕೆ ರಾಜ್ಯದ ಬುದ್ಧಿಜೀವಿಗಳೇ ಸಾಕ್ಷಿ. ಉದಾಹರಣೆಗೆ, ಪಠ್ಯಪುಸ್ತಕ ಪುನರ್ ರಚನಾ ಸಮಿತಿಯ ಅಧ್ಯಕ್ಷರಾಗಿರುವ ಬರಗೂರು ರಾಮಚಂದ್ರಪ್ಪ ಅವರನ್ನೇ ತೆಗೆದುಕೊಳ್ಳಬಹುದು. ಬರಗೂರು ಅವರೇ ಯಾಕೆಂದರೆ, ಸಿದ್ಧರಾಮಯ್ಯನವರ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ,ಬಿಜೆಪಿಯ ಕಾಲದಲ್ಲಿ ಪಠ್ಯಪುಸ್ತಕಗಳ ಕೇಸರಿಕರಣವಾಗಿದೆ ಎಂಬ ಬುದ್ಧಿಜೀವಿಗಳ ಹುಯಿಲನ್ನು ಬೆಂಬಲಿಸಿ, ತಮ್ಮ ಆಸ್ಥಾನ ಸಾಹಿತಿಗಳಲ್ಲೊಬ್ಬರಾದ ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ೨೦೧೪ರಲ್ಲಿ ರಚಿಸಿದ್ದರು.ಈ ಸಮಿತಿಯ ಕೆಲಸ ಮುಗಿಯಬೇಕಾದ ಸಮಯಕ್ಕೆ ಮುಗಿದ್ದರಿಂದ ಅವಧಿಯ ವಿಸ್ತರಣೆಯನ್ನೂ ಮಾಡಲಾಯಿತು. ಸಮಿತಿಯೊಂದರ ಅವಧಿಯ ವಿಸ್ತರಣೆಯಾಗುವಾಗ ಅಲ್ಲಿಯವರೆಗೂ ಆಗಿರುವ ಕಾರ್ಯಗಳ ವರದಿ ನೀಡುವುದು ವಾಡಿಕೆ.ಆದರೆ,ಮುಖ್ಯಮಂತ್ರಿಗಳ ಆಸ್ಥಾನ ಸಾಹಿತಿಗಳ ನೇತೃತ್ವದ ಈ ಸಮಿತಿಯನ್ನು ಹಾಗೆಲ್ಲ ಪ್ರಶ್ನಿಸಲಾದೀತೆ? ಈ ಸಮಿತಿ ರಚನೆಯಾದ ನಂತರ, ಹಿಂದಿನ ಪಠ್ಯಗಳಲ್ಲಿನ ಯಾವೆಲ್ಲ ಲೋಪದೋಷಗಳನ್ನು ಪತ್ತೆ ಮಾಡಲಾಗಿದೆ,ಏನನ್ನು ಪುನರ್ ರಚನೆ ಮಾಡುತ್ತಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನು ಕೊಡದೆ ಎಲ್ಲವನ್ನೂ ನಿಗೂಢವಾಗಿಡಲಾಗುತ್ತಿದೆ.
ಈ ಪರಿ ನಿಗೂಢತೆಯನ್ನಿಟ್ಟುಕೊಂಡು ಬರಗೂರು ರಾಮಚಂದ್ರಪ್ಪನವರೇನು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಲು ಹೊರಟಿದ್ದಾರೆಯೇ? ಎಲ್ಲಾ ಪಠ್ಯ ಪುಸ್ತಕಗಳ ಪರಿಷ್ಕರಣೆಯಾದರೂ ಆಗಿದೆಯೇ ಎಂದರೆ ಅದೂ ಇಲ್ಲ ಜನವರಿ ೧೫ರೊಳಗೆ ನೀಡುತ್ತಾರಂತೆ.ಬಹುಶಃ ಎಲ್ಲಾ ಪ್ರಿಂಟ್ ಆದ ನಂತರವೇ ಬರಗೂರರ ನಿಗೂಢ ಪ್ರಪಂಚದಿಂದ ಈ ಪುಸ್ತಕ ಹೊರಬರುತ್ತದೆನಿಸುತ್ತದೆ. ಇಂತಹ ನಿಗೂಢತೆಯನ್ನಿಟ್ಟುಕೊಂಡೇನೂ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ಹೊರಟಿದ್ದರೆಯೇ ಎಂದು ನಿರೀಕ್ಷೆಯಿಟ್ಟುಕೊಂಡರೇ ಆಘಾತವಾಗುತ್ತದೆ.




