ವಿಷಯದ ವಿವರಗಳಿಗೆ ದಾಟಿರಿ

Posts from the ‘ಪ್ರಚಲಿತ’ Category

9
ಸೆಪ್ಟೆಂ

ಕಾವೇರಿ ವಿವಾದ : ನಾಲಾಯಕ್ ನಾಯಕರ ನಡುವಿನ ಜನನಾಯಕರು

800x480_image57629329ಕಾವೇರಿ ವಿವಾದ ಮತ್ತೆ ಭುಗಿಲೆದ್ದಿದೆ. ಸೆಪ್ಟಂಬರ್ ೯ರಂದು ಕರ್ನಾಟಕ ಬಂದ್ ಗೂ ಕರೆ ನೀಡಲಾಗಿದೆ. ನಮಗೆ ಕುಡಿಯಲಿಕ್ಕೇ ನೀರಿಲ್ಲದಿರುವಾಗ ಕೈಲಾಗದ ಸರ್ಕಾರ ತಮಿಳುನಾಡಿನ ಬೆಳೆಗಳಿಗೆ ನೀರು ಹರಿಸುತ್ತಿದೆ. ನಮ್ಮಲ್ಲೇ ಹೆಚ್ಚಾಗಿರುವ ನಾಲಾಯಕ್ ನಾಯಕರ ನಡುವೆ, ಅಪರೂಪಕ್ಕೆ ದಿಟ್ಟತನ ಹಾಗೂ ಚಾಣಾಕ್ಷತನ ತೋರಿದ ಇಬ್ಬರು ಜನನಾಯಕರ ನೆನಪುಗಳು ನಿಮಗಾಗಿ – ನಿಲುಮೆ

ನೆನಪು ೧ :
ನಿಜವಾದ ಗಂಡಸು ಎಂದರೆ ಅದು ಬಂಗಾರಪ್ಪ
1991ರಲ್ಲಿ, ತಮಿಳುನಾಡಿಗೆ 205 ಟಿಎಂಸಿ ನೀರು ಬಿಡುವಂತೆ ಕಾವೇರಿ ನ್ಯಾಯಾಧಿಕರಣವು ಮಧ್ಯಂತರ-ತೀರ್ಪನ್ನು ನೀಡಿತು. ಈ ತೀರ್ಪಿಗೆ ವಿರುದ್ಧವಾಗಿಯೇ ಮುಖ್ಯಮಂತ್ರಿ ಬಂಗಾರಪ್ಪನವರು ಸುಗ್ರೀವಾಜ್ಞೆ ಹೊರಡಿಸಿ ಕಾವೇರಿ ಕೊಳ್ಳದ ಅಣೆಕಟ್ಟುಗಳಲ್ಲಿನ ನೀರನ್ನು ರಕ್ಷಿಸಿ, ನಮ್ಮ ರಾಜ್ಯದ ರೈತರಿಗೇ ಉಳಿಸಿಕೊಳ್ಳುವಂತೆ ಅಣೆಕಟ್ಟುಗಳ ಉಸ್ತುವಾರಿಯ ಅಧಿಕಾರಿಗಳಿಗೆ ಆದೇಶಿಸಿದರು. ಮತ್ತಷ್ಟು ಓದು »

7
ಸೆಪ್ಟೆಂ

ಫ್ರಾನ್ಸಿನ ಸೆಕ್ಯುಲರಿಸಂ ಮತ್ತು ಇಸ್ಲಾಮಿನ ಜಗಳದಲ್ಲಿ ಭಾರತಕ್ಕೇನು ಪಾಠ?

– ವಿನಾಯಕ ಹಂಪಿಹೊಳಿ

726567-burqaಸದ್ಯಕ್ಕೆ ಫ್ರಾನ್ಸಿನಲ್ಲಿ ಬುರ್ಕ ಬ್ಯಾನ್ ಕುರಿತು ಚರ್ಚೆ ನಡೆಯುತ್ತಿದೆ. ಬುರ್ಕಾ ಬ್ಯಾನ್ ತುಂಬಾ ಹಿಂದೆಯೇ ಆಗಿದೆ. ಈ ರೀತಿಯ ನಿಷೇಧಗಳಿಗೆ ಫ್ರಾನ್ಸ್ ಕೊಡುತ್ತಿರುವ ಕಾರಣ ರಿಲಿಜನ್ನುಗಳು ಪ್ರತಿಪಾದಿಸುವ ವಸ್ತ್ರಸಂಹಿತೆಯನ್ನು ಪಬ್ಲಿಕ್ ವಲಯದಲ್ಲಿ ಪಾಲಿಸುವುದು ಅಲ್ಲಿನ ಸೆಕ್ಯುಲರಿಸಂ ಐಡಿಯಾಲಜಿಯೊಂದಿಗೆ ಸರಿಹೊಂದದಿರುವದು. ಫ್ರಾನ್ಸಿನಲ್ಲಿ ಪ್ರಜಾಪ್ರಭುತ್ವದ ಆಡಳಿತವನ್ನು ಚರ್ಚಿನಿಂದ ಪ್ರತ್ಯೇಕಿಸುವ ಪ್ರಕ್ರಿಯೆ ತುಂಬ ಕಟ್ಟುನಿಟ್ಟಾಗಿತ್ತು. ಫ್ರಾನ್ಸಿನ ಸೆಕ್ಯುಲರಿಸಂ ರಿಲಿಜನ್ನನ್ನು ಕೇವಲ ರಾಜಕೀಯದಿಂದಷ್ಟೇ ಪ್ರತ್ಯೇಕಿಸುವದಷ್ಟೇ ಅಲ್ಲ, ಫ್ರಾನ್ಸ್ ದೇಶವು ಯಾವ ರಿಲಿಜನ್ನಿನೊಂದಿಗೂ ಗುರುತಿಸಿಕೊಳ್ಳಬಾರದು ಎನ್ನುವದು ಅದರ ಆಶಯ. ಆದ್ದರಿಂದ ಫ್ರಾನ್ಸ್ ದೇಶವು ತನ್ನನ್ನು ತಾನು ರಿಪಬ್ಲಿಕ್ ಮತ್ತು ಸೆಕ್ಯುಲರ್ ದೇಶವೆಂದು ಘೋಷಿಸಿಕೊಂಡಿತ್ತು. ಈ ರೀತಿಯ ಲಿಬರಲ್ ಸೆಕ್ಯುಲರಿಸಂ ಅನ್ನು ಬರೀ ಕ್ರಿಶ್ಚಿಯನ್ನರೇ ತುಂಬಿಕೊಂಡಿದ್ದ ದೇಶದಲ್ಲಿ ಈ ರೀತಿಯ ಸೆಕ್ಯುಲರಿಸಂ ಅನ್ನು ಜಾರಿಗೆ ತರುವದು ಅಷ್ಟು ಕಷ್ಟವಾಗಿರಲಿಲ್ಲ. ಮತ್ತಷ್ಟು ಓದು »

4
ಸೆಪ್ಟೆಂ

ಇಂಡೋನೇಷ್ಯದ ನೋಟಿನಲ್ಲೂ ಈತನದೊಂದು ಫೋಟೋ ಇದೆ!

– ರೋಹಿತ್ ಚಕ್ರತೀರ್ಥ

Ganapati-Ganesh in Space Lighten Background Wallpaper - 1366x768ಗಿರೀಶ ಕಾರ್ನಾಡರ ಹಯವದನ ನಾಟಕ ಗೊತ್ತಲ್ಲ? ಪದ್ಮಿನಿ ಎಂಬ ಸುರಸುಂದರ ಹೆಣ್ಣನ್ನು ಮೋಹಿಸಿ ತಲೆ ಕಡಿದುಕೊಳ್ಳುವ ಮತ್ತು ಇದ್ದ (ಮತ್ತು ಬಿದ್ದ) ತಲೆಯ ಬದಲಾಗಿನ್ನೊಂದು ತಲೆ ಅಂಟಿಸಿಕೊಂಡು ಪೇಚಾಡುವ ಇಬ್ಬರು ಜೀವದ ಗೆಳೆಯರ ಕತೆ ಅದು. ಆ ನಾಟಕದ ಪ್ರಾರಂಭದಲ್ಲಿ ಭಾಗವತ ಹೇಳುತ್ತಾನೆ: “ಸರ್ವ ವಿಘ್ನಗಳನ್ನೂ ನಿರ್ಮೂಲನಗೊಳಿಸಿ ಸಕಲ ಈಪ್ಸಿತಗಳಲ್ಲಿ ಸಿದ್ಧಿಯನ್ನು ನೀಡುವ ಆ ವಿಘ್ನೇಶ್ವರನೇ ಇಂದಿನ ನಮ್ಮ ನಾಟಕಕ್ಕೆ ಯಶಸ್ಸನ್ನು ನೀಡಲಿ. ಆತನ ಮಹಾತ್ಮ್ಯವನ್ನಾದರೂ ವರ್ಣಿಸುವುದು ಹೇಗೆ? ಆನೆಯ ಮುಖ, ಮನುಷ್ಯನ ದೇಹ, ಮುಖದಲ್ಲಿ ಮುರುಕು ದಂತ, ದೇಹದಲ್ಲಿ ಬಿರುಕು ಬಿಟ್ಟ ಉದರ – ಹೇಗೆ ನೋಡಿದರೂ ಅಪೂರ್ಣತೆಗೇ ಸಾಕ್ಷಿಯಾಗಿರುವಂತೆ ಕಾಣುವ ಈ ವಕ್ರತುಂಡನೇ ವಿಘ್ನಹರ್ತನೂ ಆಗಿರಬೇಕು ಎಂಬುದರ ರಹಸ್ಯವನ್ನಾದರೂ ಹೇಗೆ ಬಿಡಿಸೋಣ? ಬಹುಶಃ ದೇವರ ಪೂರ್ಣತ್ವ ಮನುಷ್ಯ ಕಲ್ಪನೆಗೇ ಒಗ್ಗಲಾರದಂಥಾದ್ದು ಎಂಬುದನ್ನೇ ಈ ಮಂಗಳಮೂರ್ತಿಯ ರೂಪ ಸಂಕೇತಿಸುತ್ತಿರಬಹುದು” ಮತ್ತಷ್ಟು ಓದು »

3
ಸೆಪ್ಟೆಂ

ಅಂಬೇಡ್ಕರ್, ಮಾರ್ಕ್ಸ್ ಮತ್ತು ಬುದ್ಧ…..

– ಗುರುರಾಜ ಕೋಡ್ಕಣಿ. ಯಲ್ಲಾಪುರ
buddha_or_karl_marx“ಅದೊಮ್ಮೆ ಬುದ್ಧನ ಅಗ್ರಗಣ್ಯ ಶಿಷ್ಯರಲ್ಲಿ ಒಬ್ಬನಾದ ಅನಾಥಪಿಂಡಿಕನು ಬುದ್ದನಿರುವಲ್ಲಿಗೆ ಆಗಮಿಸುತ್ತಾನೆ. ಹಾಗೆ ಬಂದವನೇ ಬುದ್ಧನಿಗೆ ವಂದಿಸಿ, ಪಕ್ಕದಲ್ಲಿದ್ದ ಆಸನದಲ್ಲಿ ಕುಳಿತುಕೊಳ್ಳುತ್ತ ‘ಹೇ ಮಹಾಜ್ಞಾನಿಯೇ, ಗೃಹಸ್ತನೆನಿಸಿಕೊಂಡವನಿಗೆ ತುಂಬ ಆಸಕ್ತಿದಾಯವೆನ್ನಿಸುವ ಹಿತನೀಡುವ, ಆದರೆ ಅಷ್ಟೇ ಕಷ್ಟವೆನಿಸುವ ಕಾರ್ಯ ಯಾವುದೆಂದು ನಿನಗನ್ನಿಸುತ್ತದೆ .’? ಎಂದು ಪ್ರಶ್ನಿಸುತ್ತಾನೆ. ಹೀಗೊಂದು ಪ್ರಶ್ನೆಯನ್ನು ಕೇಳಿ ಮುಗುಳ್ನಕ್ಕ ಗೌತಮ, ‘ಅಂತಹ ಹಲವಾರು ಕೆಲಸಗಳಿವೆ ಶಿಷ್ಯೋತ್ತಮನೇ. ನ್ಯಾಯಬದ್ಧವಾಗಿ ಸಂಪತ್ತನ್ನು ಗಳಿಸುವುದು ಅಂಥದ್ದೊಂದು ಬಹುಮುಖ್ಯ ಕಾರ್ಯ. ಮೊದಲು ವ್ಯಕ್ತಿ ತಾನು ಧರ್ಮಯುತವಾಗಿ ಸಂಪತ್ತನ್ನು ಗಳಿಸಿಕೊಳ್ಳಬೇಕು. ನಂತರ ತನ್ನ ಹತ್ತಿರದ ಬಂಧುಗಳೂ ಸಹ ನ್ಯಾಯಸಮ್ಮತವಾಗಿಯೇ ಸಂಪತ್ತಿನ ಗಳಿಕೆ ಮಾಡುವಂತೆ ನೋಡಿಕೊಳ್ಳಬೇಕು. ಮೂರನೆಯದ್ದಾಗಿ ವ್ಯಕ್ತಿಯೊಬ್ಬ ತುಂಬ ಕಾಲ ಬದುಕಿ ದೀರ್ಘಾಯುಷಿಯೆನ್ನಿಸಿಕೊಳ್ಳಬೇಕು. ಇವೆಲ್ಲವೂ ಮನುಷ್ಯನಿಗೆ ಇಷ್ಟವಾಗುವ, ಹಿತವೆನಿಸುವ ಕಾರ್ಯಗಳೇ. ಆದರೆ ಅವುಗಳ ಸಾಧನೆ ಸುಲಭಸಾಧ್ಯವಲ್ಲ. ಇಂಥಹ ಐಹಿಕ ಭೋಗಗಳ ಗಳಿಕೆಗೂ ನಂಬಿಕೆ, ಸಚ್ಚಾರಿತ್ರ್ಯ, ಉದಾರತೆ ಮತ್ತು ವಿವೇಕವೆನ್ನುವ ನಾಲ್ಕು ಮೌಲ್ಯಗಳ ಆಶೀರ್ವಾದ ಬೇಕು. ಸಚ್ಚಾರಿತ್ರ್ಯವೆನ್ನುವುದು ಮನುಷ್ಯನ ಮನಸ್ಸು ಚಂಚಲವಾಗದೇ ಕುಡಿತ, ಕಳ್ಳತನ ಕೊಲೆಗಳಂತಹ ಕೆಟ್ಟ ಕಾರ್ಯಗಳನ್ನು ಮಾಡದಂತೆ ಆತನನ್ನು ತಡೆಯುತ್ತದೆ. ಉದಾರತೆಯ ಭಾವವು ಮನುಷ್ಯನನ್ನು ದುರಾಸೆಯಂತಹ ದುರ್ಗುಣಗಳಿಂದ ಮುಕ್ತವಾಗಿಸಿ ತೆರೆದ ಮನಸ್ಸಿನಿಂದ ದಾನಧರ್ಮಗಳನ್ನು ಮಾಡುವಂತೆ ಪ್ರೋತ್ಸಾಹಿಸುತ್ತದೆ. ವಿವೇಕವೆನ್ನುವುದು ಮನುಷ್ಯನನ್ನು ವಿಮೋಚನೆಯತ್ತ ಕರೆದೊಯ್ಯುವ ಮಾರ್ಗ. ವಿವೇಕವೆನ್ನುವ ಹಾರೈಕೆ, ಮನುಷ್ಯನನ್ನು ಜಡತ್ವ, ಕುಯುಕ್ತಿ, ಆಲಸ್ಯ ಅನುಮಾನದಂತಹ ಅವಗುಣಗಳಿಂದ ದೂರವಿರಿಸುತ್ತದೆ. ಹಾಗಾಗಿ ನೈತಿಕತೆಯಿಂದ, ನ್ಯಾಯಸಮ್ಮತ ದುಡಿಮೆಯಿಂದ ಬೆವರು ಸುರಿಸಿ ಗಳಿಸಿದ ಆಸ್ತಿಯೂ ಸಾಮಾನ್ಯ ಮನುಷ್ಯನಿಗೆ ಒಂದು ವರದಾನವಿದ್ದಂತೆಯೇ ಸರಿ. ಹೀಗೆ ಸಿರಿವಂತನಾಗುವ ಗೃಹಸ್ತ, ಬದುಕಿನುದ್ದಕ್ಕೂ ತಾನು ಸಂತಸವಾಗಿರುವುದಲ್ಲದೇ, ಸದಾಕಾಲ ತನ್ನ ಹೆತ್ತವರು, ಮಡದಿ ಮಕ್ಕಳು ಮತ್ತು ಸ್ನೇಹಿತರನ್ನೂ ಸಹ ಸಂತೋಷವಾಗಿರಸಬಲ್ಲ. ಸಂತಸವೇ ಸಾಮಾನ್ಯನೊಬ್ಬನ ಬದುಕಿನ ಸಾರ್ಥಕತೆ ‘ಎನ್ನುತ್ತ ಉತ್ತರಿಸುತ್ತಾನೆ’ ಎಂದು ಬರೆಯುತ್ತಾರೆ, ಸಂವಿಧಾನ ಶಿಲ್ಪಿ ಡಾ.ಭೀಮರಾವ್ ಅಂಬೇಡ್ಕರ್ ತಮ್ಮ ‘Buddha Or Karl Marx’ಎನ್ನುವ ಕೃತಿಯಲ್ಲಿ. ಮತ್ತಷ್ಟು ಓದು »

1
ಸೆಪ್ಟೆಂ

ವೀಡಿಯೋ ಗೇಮ್ ಸಾಧಕ – ಬಾಧಕಗಳ ಒಂದು ವಿಶ್ಲೇಷಣೆ

– ಶೈಲೇಶ್ ಕುಲ್ಕರ್ಣಿ

camp-pokemon-169-enವೀಡಿಯೊಗೇಮ್ ಗಳು ನಿಜಕ್ಕೂ ವ್ಯಕ್ತಿಯ ದೈಹಿಕ ಅಥವಾ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಲ್ಲಷ್ಟು ಪ್ರಭಾವಶಾಲಿಯೇ ಎಂಬ ಪ್ರಶ್ನೆಯನ್ನಿಟ್ಟುಕೊಂಡೇ ಪರ-ವಿರೋಧದ ಚರ್ಚೆ ಕಳೆದ ೩೦ವರ್ಷಗಳಿಂದಲೂ ವಿಶ್ವದಾದ್ಯಂತ ನಡೆದಿದೆ. ಸಿನೆಮಾ, ಕುಣಿತಗಳಿಂದ ತೊಡಗಿ ದೂರದರ್ಶನ, ಅಂತರ್ಜಾಲ, ಕಾದಂಬರಿಗಳಾದಿಯಾಗಿ ಬಹುಶಃ ಮನುಷ್ಯನ ಗಮನವನ್ನೆಲ್ಲಾ ತನ್ನಲ್ಲಿ ಹಿಡಿದಿಡಬಲ್ಲ ಸಾಧ್ಯತೆಯುಳ್ಳ ಎಲ್ಲಾ ಚಟುವಟಿಕೆಗಳೂ ಒಂದಲ್ಲ ಒಂದು ಸಾರಿ ಈ ರೀತಿಯ ಟೀಕೆಯನ್ನ ಎದುರಿಸಿಯೇ ಬಂದಿವೆ. ಮತ್ತಷ್ಟು ಓದು »

31
ಆಗಸ್ಟ್

ಕಾಶ್ಮೀರದ ಐತಿಹಾಸಿಕ ಸತ್ಯಗಳು : ನಿಲುಮೆ ವಿಚಾರ ಸಂಕಿರಣ

– ಹರೀಶ್ ಆತ್ರೇಯ

14088692_10154596775090649_5386569408904041755_nಕಾಶ್ಮೀರ ವಿವಾದಿತ ಪ್ರದೇಶವೇಕಾಗುತ್ತಿದೆ ಮತ್ತು ಅಲ್ಲಿನ ನಿಜ ಸ್ವರೂಪವೇನು ಎಂಬುದನ್ನು ತಿಳಿಯಲು ನಿಲುಮೆ ತಂಡ ಆಯೋಜಿಸಿದ ಕಾಶ್ಮೀರದ ಐತಿಹಾಸಿಕ ಸತ್ಯಗಳು ಮತ್ತು ವರ್ತಮಾನದ ತಲ್ಲಣಗಳು ಎಂಬ ಸಂವಾದ ಕಾರ್ಯಕ್ರಮದಲ್ಲಿನ ಪ್ರೊ. ಪ್ರೇಮಶೇಖರ್ ರವರ ಕೆಲವು ವಿಚಾರಗಳನ್ನು ಹಂಚಿಕೊಳ್ಳುತಿದ್ದೇನೆ..

ಭಾರತದ ವಿಭಜನೆಯಾದಾಗ ಬ್ರಿಟಿಷರು ತಮ್ಮ ನೇರ ಆಡಳಿತಕ್ಕೆ ಒಳಪಟ್ಟ ರಾಜ್ಯಗಳನ್ನು ಭಾರತವೆಂದು ಮತ್ತು ಉಳಿದ ದೇಶೀಯ ಸ್ವತಂತ್ರ್ಯ ಪ್ರಾಂತ್ಯಗಳನ್ನು ಅವುಗಳ ಇಚ್ಚೆಯಂತೆ ಭಾರತದಲ್ಲಾಗಲೀ ಅಥವಾ ಪಾಕೀಸ್ತಾನದಲ್ಲಿಯಾಗಲೀ ಸೇರುವಂತೆ ಹೇಳಲಾಯ್ತು. ಇಂಡಿಯನ್ ಇಂಡಿಪೆಂಡೆನ್ಸ್ ಆಕ್ಟ್ ಪ್ರಕಾರ “British paramount should relapse on the midnight of 14 Aug 1947. ಎಂದರೆ ಸುಮಾರು ಆರುನೂರು ಸ್ಥಳೀಯ ಸಂಸ್ಥಾನಗಳು ಬ್ರಿಟಿಷ್ ಕಾಲನಿಗಳಾಗುವದಕ್ಕೂ ಮುಂಚೆ ಇದ್ದ ರೀತಿಯಲ್ಲಿ ಸ್ವತಂತ್ರ್ಯವಾಗಿರಬಹುದು. ಅಲ್ಲಿನ ಸ್ಥಳೀಯ ನಾಯಕನ (ಆತ ನವಾಬನಾಗಿರಬಹುದು ಅಥವ ಅರಸನಾಗಿರಬಹುದು) ಆತನ ಆಜ್ಞೆ ಅಥವಾ ನಡೆಯಂತೆ ಆ ಸಂಸ್ಥಾನಗಳು ಪಾಕೀಸ್ತಾನದೊಳಗೆ ಅಥವಾ ಭಾರತದೊಳಗೆ ವಿಲೀನವಾಗಬಹುದು. ಅದರ ಜೊತೆಗೆ ಮತ್ತೂ ಒಂದು ಸಲಹೆಯನ್ನು ಬ್ರಿಟಿಷರು ಕೊಡುತ್ತಾರೆ ಅದೇನೆ೦ದರೆ ವಿಲೀನಗೊಳಿಸಿಕೊಳ್ಳುವಾಗ ಆ ಪ್ರಾಂತ್ಯದ ಭೌಗೋಳಿಕ ನೆಲೆ ಮತ್ತು ಪ್ರಜೆಗಳ ಧರ್ಮವನ್ನು ಪರಿಗಣಿಸಿ ಎಂಬುದಾಗಿತ್ತು. ಇದನ್ನು ಕೇಳಿದ ಕಾಶ್ಮೀರ ಮತ್ತು ತಿರುವನಂತಪುರಂ ಸಂಸ್ಥಾನಗಳು ಸ್ವತಂತ್ರ್ಯವಾಗುವ ಯೋಚನೆಯನ್ನು ಮಾಡಿದವು. ಅಂದರೆ ಯಾರ ಆಡಳಿತಕ್ಕೂ ಒಳಪಡದೆ (ಅತ್ತ ಪಾಕೀಸ್ತಾನವೂ ಅಲ್ಲ ಇತ್ತ ಭಾರತವೂ ಅಲ್ಲ) ಸ್ವತಂತ್ರ್ಯವಾಗಿ ರಾಜ್ಯಭಾರ ಮಾಡುವುದು. ಇದು ಪಾಕೀಸ್ತಾನಕ್ಕೆ ಸಮ್ಮತವಾಗಲಿಲ್ಲ. ಏಕೆಂದರೆ PAKISTAN ನಲ್ಲಿನ K ಕಾಶ್ಮೀರವನ್ನ ಸೂಚಿಸುತ್ತೆ. PAKISTAN ಎನ್ನುವುದು ಒಂದು ಪೂರ್ಣ ಹೆಸರಲ್ಲ, ಹಲವು ಸ್ಥಳಗಳ ಅಕ್ಷರಗಳನ್ನು ಸೇರಿಸಿದ ಸಂಕ್ಷಿಪ್ತ ರೂಪ. ಇದನ್ನು ಕೊಡಮಾಡಿದವನು ಲಂಡನ್ನಿನ ವಿದ್ಯಾರ್ಥಿಯಾಗಿದ್ದ  ಚೌದರಿ ರೆಹಮತ್ ಆಲಿ ಮತ್ತು ಪ್ರಕಟಿಸಿದ್ದು ೨೮ ಜನವರಿ ೧೯೩೩ರಂದು ನೌ ಆರ್ ನೆವರ್ ಎಂಬ ಪತ್ರಿಕೆಯಲ್ಲಿ, ಆತನ ಪ್ರಕಾರ ವಾಯುವ್ಯ ಭಾರತವು ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ಭಿನ್ನವಾಗಿದೆ ಮತ್ತು ಧಾರ್ಮಿಕವಾಗಿ ಮಧ್ಯ ಏಷಿಯಾಕ್ಕೆ ಮತ್ತು ಪಶ್ಚಿಮ ಏಷಿಯ ಹತ್ತಿರವಾಗಿದೆ, ಆದ ಕಾರಣ ಈ ಭಾಗವನ್ನು ಭಾರತದಿಂದ ಪ್ರತ್ಯೇಕಿಸಿ ಮಧ್ಯ ಏಷಿಯಾದೊಂದಿಗೆ ಸೇರಿಸಿ ಹೊಸತೊಂದು ರಾಷ್ಟ್ರವನ್ನು ಮಾಡಬೇಕು ಎಂಬುದು. ಆತ ಸೇರಿಸಿದ ಪ್ರಾಂತ್ಯಗಳು ಈ ಕೆಳಗಿನಂತಿವೆ. ಮತ್ತಷ್ಟು ಓದು »

28
ಆಗಸ್ಟ್

ಅರ್ಧ ನಿಮಿಷದ ಅಂತರದಲ್ಲಿ ಕಂಚು ಕೈತಪ್ಪಿತು!

– ರೋಹಿತ್ ಚಕ್ರತೀರ್ಥ

Manish Singh Rawat 2ನಸುಕಿನ ನಾಲ್ಕು ಗಂಟೆ. ಬದರಿನಾಥದ ಗಡಗಡ ಚಳಿಯಲ್ಲೂ ಇಪ್ಪತ್ತನಾಲ್ಕರ ಯುವಕನೊಬ್ಬ ಅಲಾರಂ ಇಲ್ಲದೆ ದಡ್ಡನೆದ್ದು ಕೂತಿದ್ದಾನೆ. ಒಂದೇ ಒಂದು ನಿಮಿಷವನ್ನು ವ್ಯರ್ಥ ಮಾಡದೆ; ಉದಾಸೀನವೆಂದು ಮತ್ತೆ ರಗ್ಗುಹೊದ್ದು ಮಲಗದೆ; ಅಯ್ಯಯ್ಯಪ್ಪ ಥಂಡಿ ಎಂದು ನೆಪ ಹೇಳದೆ ಎದ್ದು ಮುಖಪ್ರಕ್ಷಾಲನ ಮಾಡಿ ತನ್ನ ಎಂದಿನ ತೆಳು ಸಡಿಲ ಅಂಗಿ ತೊಟ್ಟು, ಕಾಲುಗಳಿಗೆ ಶೂ ಧರಿಸಿ ಮನೆಯಿಂದ ಹೊರಬಿದ್ದಿದ್ದಾನೆ. ಮೊದಲು ಅಂಗಳ, ಬೀದಿ, ಕೇರಿ ಎನ್ನುತ್ತ ಕೊನೆಗೆ ಬದರಿಯ ಮುಖ್ಯರಸ್ತೆಗಳಲ್ಲಿ ಅವನ ಪಯಣ ಸಾಗಿದೆ. ಅತ್ತ ನಡಿಗೆಯೆನ್ನಲಾಗದ ಇತ್ತ ಓಟ ಎನ್ನಲೂ ಬಾರದ ವಿಚಿತ್ರವಾದೊಂದು ಗತಿಯಲ್ಲಿ ಅವನ ಚಲನೆಯಿದೆ. ಬಾತುಕೋಳಿಯೊಂದು ತನ್ನ ಇಕ್ಕೆಲಗಳನ್ನು ಬಾಗಿಸುತ್ತ ಬಳುಕಿಸುತ್ತ ಪುತುಪುತು ನಡೆದಂತೆ ತನ್ನ ಇಡೀ ಮೈಯನ್ನು ರಬ್ಬರಿನ ಕೋಲಿನಂತೆ ಅತ್ತಿತ್ತ ಬಾಗಿಸುತ್ತ ಅವನು ನಡೆಯುವುದನ್ನು ಬೆಳಗ್ಗೆ ಪೇಪರು, ಹಾಲು ತರಲು ಹೊರಟವರು ಕ್ಷಣಕಾಲ ನಿಂತು ವಿಸ್ಮಯದಿಂದ ನೋಡುತ್ತಾರೆ. ಬದರಿಗೆ ಪ್ರವಾಸಿಗಳಾಗಿ ಬಂದವರು ಇವನ ನೃತ್ಯದಂಥ ನಡಿಗೆಯೋಟ ಕಂಡು ಮುಸಿಮುಸಿ ನಗುತ್ತಾರೆ. ಇನ್ನು ಕೆಲವರು ಇಂಥದೊಂದು ದೃಶ್ಯ ಮತ್ತೆ ಜನ್ಮದಲ್ಲಿ ಸಿಕ್ಕದೇನೋ ಎಂಬಂತೆ ತಮ್ಮ ಕ್ಯಾಮೆರಾ, ಮೊಬೈಲುಗಳಲ್ಲಿ ಆತನನ್ನು ದಾಖಲಿಸಿಕೊಳ್ಳುತ್ತಾರೆ. ಇದ್ಯಾವುದರ ಪರಿವೆಯೂ ಇಲ್ಲದೆ; ದೊಗಳೆ ಬನಿಯನ್ನು ಬೆವರಿಂದ ತೊಯ್ದು ತೊಪ್ಪೆಯಾದ್ದನ್ನೂ ಲೆಕ್ಕಿಸದೆ ಆ ತರುಣ ಓಡಿಯೇ ಓಡಿದ್ದಾನೆ. ಸುತ್ತಲಿನ ಜಗತ್ತು ಅವನ ಪಾಲಿಗೆ ನಗಣ್ಯ. ನಡಿಗೆಯ ದಾರಿ ಬಿಟ್ಟರೆ ಮಿಕ್ಕಿದ್ದೇನೂ ಈ ಜಗತ್ತಿನಲ್ಲಿ ಅಸ್ತಿತ್ವದಲ್ಲೇ ಇಲ್ಲವೆಂಬಂತೆ ಏಕಾಗ್ರಚಿತ್ತದಿಂದ ಹೋಗುತ್ತಿರುವ ಆ ಯುವಕನ ಕಣ್ಮುಂದೆ ಅತ್ತಿತ್ತ ಕದಲದೆ ನಿಶ್ಚಲವಾಗಿ ನಿಂತುಬಿಟ್ಟಿರುವುದೊಂದೇ – ರಿಯೋ ಒಲಿಂಪಿಕ್ಸ್‍ನ ಪದಕ! ಮತ್ತಷ್ಟು ಓದು »

26
ಆಗಸ್ಟ್

ಬ್ರಹ್ಮರ್ಷಿ ನಾರಾಯಣ ಗುರುಗಳ ಮೇಲೇಕೆ ಬೌದ್ಧಿಕ ವಿಧ್ವಂಸಕರ ವಕ್ರದೃಷ್ಟಿ?

– ಸಂತೋಷ್ ತಮ್ಮಯ್ಯ
narayanaguru-24-1472006537ಕೆಲವರ್ಷಗಳ ಹಿಂದೆ ಉತ್ತರ ಭಾರತದ ಎಲ್ಲೋ ಬಾಂಬ್ ಸ್ಪೋಟಿಸಿದವರನ್ನು ಹಿಡಿಯಲು ಭಯೋತ್ಪಾದನಾ ನಿಗ್ರಹ ದಳ ಮಂಗಳೂರಿಗೆ ಆಗಮಿಸಿತ್ತು. ಭಯೋತ್ಪಾದಕರು ತಲೆಮರೆಸಿಕೊಂಡಿದ್ದಾರೆ ಎನ್ನಲಾದ ಉಲ್ಲಾಳ ಪ್ರದೇಶದ ಒಂದು ಊರೊಳಗೂ ಅವರು ನುಗ್ಗಿ ಭಯೋತ್ಪಾದಕರನ್ನೂ ಹಿಡಿದಿದ್ದರು. ಆದರೆ ಭಯೋತ್ಪಾದನಾ ನಿಗ್ರಹ ದಳವೆಂಬ ಚಾಲಾಕಿಗಳ ತಂಡವನ್ನು ಸ್ಥಳೀಯರು ಊರಿಂದ ಜಪ್ಪಯ್ಯ ಎಂದರೂ ಹೊರಹೋಗಬಿಡಲಿಲ್ಲ. ಜನರು ಕಾಶ್ಮೀರದಲ್ಲಿ ಕಲ್ಲೆಸೆಯುವವರಂತೆ ಅಧಿಕಾರಿಗಳಿದ್ದ ಕಾರುಗಳತ್ತ ಕಲ್ಲೆಸೆದರು, ಟಯರುಗಳನ್ನು ಸುಟ್ಟು ರಸ್ತೆಗೆಸೆದರು. ಹೀಗೆ ಮಾಡಿದವರೇನೂ ಬಾಂಗ್ಲಾ ವಲಸಿಗರಲ್ಲ. ಲಷ್ಕರ್ ತೊಯಿಬಾದವರಲ್ಲ. ಎಲ್ಲರೂ ಕರಾವಳಿಯ ಬ್ಯಾರಿಗಳೆಂಬ ಸ್ಥಳೀಯ ಮುಸ್ಲಿಮರು. ಶಂಕಿತ ಭಯೋತ್ಪಾದಕನೂ ತಮ್ಮಂತೆ ಒಬ್ಬ ಮುಸಲ್ಮಾನ ಎಂಬ ಒಂದೇ ಒಂದು ಕಾರಣಕ್ಕೆ ಸ್ಥಳೀಯರು ಹಾಗೆ ವರ್ತಿಸಿದ್ದರು. ಆದರೂ ನಮ್ಮಲ್ಲಿ ಭಯೋತ್ಪಾದನೆಗೆ ಧರ್ಮವಿಲ್ಲ! ವಿಚಿತ್ರವೆಂದರೆ ಆಗ ಕರಾವಳಿಯ ರಕ್ಷಕರೆಂಬಂತೆ ವರ್ತಿಸುವ ಮಂಗಳೂರಿನ ಸಮಸ್ತ ಬುದ್ಧಿಜೀವಿಗಳು, ಬಾಂಬುಗಳನ್ನೇ ಅಕ್ಷರಗಳಾಗಿ ಬರೆಯುವವರಾರೂ ‘ಬ್ಯಾರಿಗಳು ಬಲ್ಲವರಾಗಬೇಕು’ ಎಂದು ತಲೆಕೆಟ್ಟವರಿಗೆ ಬುದ್ಧಿಹೇಳಲಿಲ್ಲ. ಮತ್ತಷ್ಟು ಓದು »

26
ಆಗಸ್ಟ್

ಜಮ್ಮು-ಕಾಶ್ಮೀರ : ಐತಿಹಾಸಿಕ ಸತ್ಯಗಳು ಮತ್ತು ವರ್ತಮಾನದ ತಲ್ಲಣಗಳು

IMG-20160824-WA0001 copy28th ಆಗಸ್ಟ್,ಅಂದರೆ ಮುಂದಿನ ಭಾನುವಾರದ ಬೆಳಗ್ಗೆ 10.30 -1.30 ವರೆಗಿನ ಸಮಯ “ನಿಲುಮೆ ಬಳಗ”ದ ಜೊತೆ ಮೀಸಲಿಡಿ…

(ಸ್ಥಳ : ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, opp RBI,ಬೆಂಗಳೂರು)

ಕಳೆದ ಕೆಲವು ದಿನಗಳಿಂದ “ಕಾಶ್ಮೀರ” ಸಮಸ್ಯೆಯ ಬಗ್ಗೆ ದೇಶದ ವಿವಿಧ ನಗರಗಳಲ್ಲಿ ಅತ್ಯಂತ ವ್ಯವಸ್ಥಿತವಾಗಿ ಭಾರತ ವಿರೋಧಿ ಮನಸ್ಥಿತಿಯನ್ನು ಉತ್ತೇಜಿಸುವ ವಿಧ್ವಂಸಕ ಕೆಲಸ ನಡೆಯುತ್ತಿದೆ.ದೇಶ ವಿರೋಧಿ ಕೂಗುಗಳು,ಸುಳ್ಳು ಇತಿಹಾಸದ ವೈಭವೀಕರಣವಾಗುತ್ತಿರುವ ಈ ಸಮಯದಲ್ಲಿ ರಾಷ್ಟ್ರೀಯ ಹಿತಾಸಕ್ತಿಗೆ ಬದ್ಧವಾಗಿ,ಜನ ಸಾಮಾನ್ಯರಿಗೆ ಮತ್ತು ಯುವ ಜನತೆಗೆ ಸತ್ಯವೇನು ಎಂದು ತಿಳಿಸಬೇಕಾದದ್ದು ಜವಬ್ದಾರಿಯುತ ಸಮೂಹವಾಗಿ ನಮ್ಮ ಕರ್ತ್ಯವ್ಯ.

“ಜಮ್ಮು-ಕಾಶ್ಮೀರ : ಐತಿಹಾಸಿಕ ಸತ್ಯಗಳು ಮತ್ತು ವರ್ತಮಾನದ ತಲ್ಲಣಗಳು” ಎಂಬ ಶೀರ್ಷಿಕೆಯಡಿಯಲ್ಲಿ ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮವನ್ನು “ನಿಲುಮೆ ಬಳಗ” ಆಯೋಜಿಸುತ್ತಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು, ನಿವೃತ್ತ ಪೊಲೀಸ್ ಮಹಾ ನಿರ್ದೇಶಕರಾದ ಶ್ರೀ.ಶಂಕರ ಬಿದರಿಯವರು ಮಾಡಲಿದ್ದಾರೆ.

ಜಮ್ಮು ಕಾಶ್ಮೀರದ ಐತಿಹಾಸಿಕ ಸತ್ಯಗಳ ಬಗ್ಗೆ ವಿಜಯವಾಣಿಯ ಅಂಕಣಕಾರರು ಮತ್ತು ಅಂತರಾಷ್ಟ್ರೀಯ ವಿದ್ಯಾಮಾನಗಳ ವಿಶ್ಲೇಷಕರಾದ ಶ್ರೀ ಪ್ರೇಮಶೇಖರ ಅವರು ಬೆಳಕು ಚೆಲ್ಲಲ್ಲಿದ್ದಾರೆ.

ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ವೀರ ಸೇನಾನಿ ಕ್ಯಾಪ್ಟನ್ ನವೀನ್ ನಾಗಪ್ಪ ಅವರು ಕಾರ್ಗಿಲ್ ಯುದ್ಧದ ಅನುಭವಗಳು, ಸ್ಥಳೀಯರು ಮತ್ತು ಯೋಧರ ಬಾಂಧವ್ಯಗಳ ಬಗ್ಗೆ ಬೆಳಕಲು ಚೆಲ್ಲಲ್ಲಿದ್ದಾರೆ.

ಸುಳ್ಳುಗಳಿಂದ ಆಜಾದಿ ಪಡೆಯಲು ಬರ್ತೀರಲ್ವಾ?

Event Link : https://www.facebook.com/events/288173218211336/?ti=icl
ನಿಮ್ಮೊಲುಮೆಯ,
ನಿಲುಮೆ ಬಳಗ

24
ಆಗಸ್ಟ್

ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ!

– ತೇಜಸ್ವಿನಿ ಹೆಗಡೆ.

india-pakistan-border5ಅದೊಂದು ಸುವಿಶಾಲ ಮನೆ. ಎಷ್ಟಂಕಣದ್ದು ಎಂದು ಹೇಳಲೂ ಆಗದಷ್ಟು ದೊಡ್ಡ ಮನೆ! ಆ ಮನೆಯೊಳಗೆ ಅಸಂಖ್ಯಾತ ಕೋಣೆಗಳು. ಗಾತ್ರದಲ್ಲಿ, ಆಕಾರಗಳಲ್ಲಿ, ಅಂದ ಚೆಂದಗಳಲ್ಲಿ ವಿವಿಧತೆಯನ್ನು, ವೈವಿಧ್ಯಗಳನ್ನು ಹೊಂದಿದ ಕೋಣೆಗಳು. ಅದೊಂದು ಬಹು ದೊಡ್ಡ ಒಟ್ಟು ಕುಟುಂಬ. ಕೆಲವು ಸದಸ್ಯರಿಗಂತೂ ಕೋಣೆಗಳೇ ಇಲ್ಲ. ಇದಕ್ಕಾಗಿ ಹೋರಾಟ ಮಾಡುತ್ತಿರುತ್ತಾರೆ. ಅವರ ಇದೇ ಅನಿವಾರ್ಯತೆಯನ್ನೇ ಬಂಡವಾಳ ಮಾಡಿಕೊಂಡು, ಅವರ ನೈಜ ಹೋರಾಟವನ್ನೇ ದಿಕ್ಕೆಡಿಸಿ, ತಮ್ಮ ಕುಟಿಲ ಸ್ವಾರ್ಥಕ್ಕಾಗಿಯೇ ಮನೆಯೊಡೆಯಲು ಕೆಲವೊಂದು ಸದಸ್ಯರು ಸಂಚು ಮಾಡುತ್ತಿರುತ್ತಾರೆ. ಕೆಲವು ನೆರಹೊರೆಯ ಕುಟುಂಬಗಳ ಕುಮ್ಮಕ್ಕೂ ಇದಕ್ಕೆ ಲಭಿಸುತ್ತಿರುತ್ತದೆ. ಹೀಗಾಗಿ ಕಚ್ಚಾಟ, ಜಗಳ, ಹೊಡೆದಾಟ ಪ್ರತಿದಿವಸವೂ ಅಲ್ಲಿ ನಡೆಯುತ್ತಿರುತ್ತದೆ ಮತ್ತು ಅದನ್ನು ಆ ಇಡೀ ಮನೆಯ ಜವಾಬ್ದಾರಿಯನ್ನು ಹೊತ್ತ ಯಜಮಾನ ಹಾಗೂ ಇನ್ನಿತರ ಹಿರಿಯ ಸದಸ್ಯರು ಬಗೆಹರಿಸಲು ಪ್ರಯತ್ನಿಸುತ್ತಲೇ ಇರುತ್ತಾರೆ. ಕಾಲ ಸರಿದಂತೇ, ಸ್ವಾರ್ಥಿಗಳ ಸತತ ತಲೆತುಂಬುವಿಕೆಯ ಪರಿಣಾಮದಿಂದ ಮನೆಯ ಕೆಲವೊಂದಿಷ್ಟು ಜನಕ್ಕೆ ಆಗಾಗ ಅನ್ನಿಸತೊಡಗುತ್ತದೆ.. ಈ ಮನೆಯೊಳಗೆ ಮಾತ್ರ ಸರಿಯಾದ ವ್ಯವಸ್ಥೆಯಿಲ್ಲ.. ಯಾವುದೂ ಸರಿಯಿಲ್ಲ.. ಭದ್ರತೆಯಿಲ್ಲ.. ಎಂಬಿತ್ಯಾದಿ ಕೊರಗು, ಕೂಗು ಎದ್ದೇಳುತ್ತಿರುತ್ತದೆ. ಮನೆಯನ್ನು ಒಂದಿಷ್ಟು ಪಾಲು ಮಾಡಿ ಹಂಚಿದರೇ ಪರಿಹಾರ ಎಂದು ಹೊರಟವರೂ ಹಲವರಿರುತ್ತಾರೆ. ಆದರೆ ಆ ಮನೆಯ ಹೊರಗೆ ಬಿದ್ದರೆ, ಅದರ ಅಕ್ಕ ಪಕ್ಕದ ಅಷ್ಟೇ ಮನೆಗಳೊಳಗಿನ ಸ್ಥಿತಿ-ಗತಿಯೂ ಬಹುಪಾಲು ಅದೇ ರೀತಿ ಇರುವುದು ಆ ಜನರಿಗೆ ಅರಿವಾಗಿರುವುದೇ ಇಲ್ಲ ಅಥವಾ ಕೆಲವರಿಗೆ ತಿಳಿದಿದ್ದರೂ ತಿಳಿಯದಂತೇ ನಟಿಸುತ್ತಿರುತ್ತಾರೆ. ಕ್ರಮೇಣ ಮನೆಯೊಳಗಿನ ಪ್ರತಿಯೊಂದು ಸಂಭ್ರಮದಲ್ಲೂ ಒಂದಲ್ಲಾ ಒಂದು ಕೊರಗು, ಕೆಡುಕು ತೆಗೆದು ಕಟಕಿಯಾಡುವ, ಮನೆಯನ್ನು, ಮನೆ ಮಂದಿಯನ್ನು ಹಳಿಯುತ್ತಲೇ, ಜರೆಯುತ್ತಲೇ ಸವೆಯುವ ಪ್ರಕ್ರಿಯೆ ಶುರುವಾಗುತ್ತದೆ. ಮತ್ತಷ್ಟು ಓದು »