ಗೆಳತಿಗೊಂದು ಪತ್ರ, ಪ್ರೇಮದ ಗುಂಗಲ್ಲಿ
– ಪ್ರಸಾದ್.ಡಿ.ವಿ.
ನಿನ್ನ ನೆನಪುಗಳು ಒತ್ತರಿಸಿ ಬರುವಾಗ ನಿನಗೇನಾದರು ಉಡುಗೊರೆ ಕೊಡಬೇಕೆಂದು ಯೋಚಿಸುತ್ತಿದ್ದೆ. ಆಗ ನೆನಪಿಗೆ ಬಂತು, ಅಯ್ಯೋ ನಾನೆಂತ ಪ್ರೇಮಿ? ಪ್ರೀತಿಸಿ ನಾಲ್ಕು ವರ್ಷಗಳಾಗಿವೆ ನಾನು ನಿನಗಾಗಿ ಒಂದೂ ಪ್ರೇಮಪತ್ರವನ್ನು ಬರೆಯಲಿಲ್ಲವಲ್ಲ. ಇಂದು ಫೆಬ್ರವರಿ ೧೪, ಅದೇನೊ ’ಪ್ರೇಮಿಗಳ ದಿನ’ವಂತೆ. ಕೆಲವರು ’ಫೆಬ್ರವರಿ ೧೪ ರಂದು ಪ್ರೇಮಿಗಳ ದಿನವೆಂದು ಆಚರಿಸಕೂಡದು ಅದು ಪಾಶ್ಚಾತ್ಯ ಅನುಕರಣೆ. ನಿಜವಾದ ಪ್ರೇಮಿಗಳಿಗೆ ದಿನವೂ ಪ್ರೇಮೋತ್ಸವವೆ’ ಎಂದು ಬೊಂಬಡ ಬಜಾಯಿಸುತ್ತಾರೆ. ಇನ್ನೂ ಕೆಲವರು ’ನಮ್ಮ ಯಾಂತ್ರಿಕ ಬದುಕಿನಲ್ಲಿ ಭಾವನೆಗಳಿಗೆ ಮತ್ತು ಮಾನವೀಯ ಮೌಲ್ಯಗಳಿಗೆ ಸ್ಥಾನವೇ ಇರುವುದಿಲ್ಲ, ಕೊಡಲು ನಮಗೆ ಸಮಯವೂ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಪ್ರೇಮವನ್ನು ಮಾತ್ರ ಆಚರಿಸಲು, ಎಲ್ಲೆಂದರಲ್ಲಿ ಕೆಂಪು ಗುಲಾಬಿಗಳು ಮತ್ತು ಬಲೂನ್ ಗಳಿಂದ ಇಡೀ ಪ್ರಪಂಚ ತನ್ನನ್ನೇ ತಾನು ಸಿಂಗರಿಸಿಕೊಂಡು ಹಬ್ಬದಂತೆ ಕಣ್ಣಿಗಾನಂದ ನೀಡುವ ’ಪ್ರೇಮಿಗಳ ದಿನ’ ದ ಆಚರಣೆ ಬೇಡವೇಕೆ?’ ಎಂದು ಜಾಗಟೆ ಬಾರಿಸುತ್ತಾರೆ. ಬೊಂಬಡವಾದರೂ ಸರಿಯಾಗಲಿ, ಜಾಗಟೆಯಾದರೂ ಸರಿಯಾಗಲಿ ನಮಗೇಕೆ ಅವುಗಳ ಗೌಜು ಗದ್ದಲ ಅಲ್ಲವೆ? ನಾನಂತು ತೀರ್ಮಾನಿಸಿದೆ ನಿನಗೊಂದು ಪ್ರೇಮಪತ್ರ ಬರೆದು ಮತ್ತೊಮ್ಮೆ ಪ್ರೇಮಿಯಾಗುತ್ತೇನೆ.
ಕರ್ನಾಟಕ ಬಿ.ಜೆ.ಪಿ ನಾಯಕರೇ ಏನ್ರೀ ನಿಮ್ ಅವಸ್ಥೆ…?
ಅತೀ ಪ್ರಸಿದ್ದಿ ಪಡೆದ ಗಾದೆ ಮಾತೊಂದಿದೆ “ನಾಯಿ ಬಾಲ ಯಾವತ್ತಿದ್ರೂ ಡೊಂಕೆ ” ಈ ಮಾತು ಕರ್ನಾಟಕದ ಬಿ.ಜೆ.ಪಿ ನಾಯಕರಿಗೆ ಅತ್ಯಂತ ಹತ್ತಿರದ ಗಾದೆ ಮಾತು .. ಒಂದೇ ಒಂದು ವ್ಯತ್ಯಾಸ ಅಂದ್ರೆ ಇಲ್ಲಿ ನಾಯಿಯ ಬಾಲ ಮಾತ್ರ ಡೊಂಕು ಅಲ್ಲರೀ.. ನಾಯಿಯೇ ಡೊಂಕಾಗಿಬಿಟ್ಟಿದೆ. ಇವರ ಸ್ಟೋರಿನೇ ವಿಚಿತ್ರ ಮಾದ್ಯಮಗಳಿಗೆ ಏನ್ ನ್ಯೂಸ್ ಸಿಕ್ಕಿಲ್ಲ ಅಂದ್ರೆ, ಯಾಕ್ರಿ ಸುಮ್ನೆ ಕುತ್ಕೊತಿರಾ ನಿಮಗೆ ನ್ಯೂಸ್ ತಾನೇ …? ನಾವ್ ಕೊಡ್ತಿವ್ರಿ ಅಂತ ಬರೋ ವಿಶಾಲ ಮನಸ್ಸಿನ ನಾಚಿಕೆ ಇಲ್ಲದ ನಾಯಕರು.ಪಾಪ ನಮ್ ಜನ ಬಿ.ಜೆ.ಪಿ ಯವರನ್ನ ವಿರೋದ ಪಕ್ಷದಲ್ಲಿ ನೋಡಿ ನೋಡಿ ಬೇಸತ್ತು ಇವರು ಒಂದು 5 ವರ್ಷ ಆಡಳಿತ ಮಾಡ್ಲಿ ಬಿಡಿ… ಅಂಥ ಇವರನ್ನ ಆಡಳಿತಕ್ಕೆ ತಂದ್ರು, ಆದರೆ ಈ ನಾಯಕರು ಕೊಟ್ಟ ಆಡಳಿತ 100 ವರುಷ ಕಳೆದರೂ ಮರೆಯಲು ಸಾದ್ಯವಾಗದ ಆಡಳಿತ. (ದಯವಿಟ್ಟು ಕ್ಷಮಿಸಿ ಓದುಗರೇ “ಅವರು-ಇವರು” ಪದವನ್ನ ಇಲ್ಲಿ ಬಳಸಿದರೆ ಆ ಪದಕ್ಕೆ ಇರುವ ಗೌರವ ಸ್ವಲ್ಪ ಕಡಿಮೆ ಆಗಬಹುದು ಅದ್ದರಿಂದ ಈ ಪದವನ್ನ ಇಲ್ಲಿ ನಿಷೇದಿಸಲಾಗಿದೆ) ಇವರಲ್ಲಿ ಒಬ್ಬ ಬರೋಬ್ಬರಿ ರಾಜ್ಯದ ಸಂಪತ್ತನ್ನ ದೋಚುತ್ತಾನೆ. ಇನ್ನೊಬ್ಬ ಸ್ನೇಹಿತನ ಹೆಂಡತಿಯ ಮೇಲೆ ಅತ್ಯಾಚಾರ ಮಾಡುತ್ತಾನೆ, ಇನ್ನೊಬ್ಬ ನರ್ಸ್ ಜೊತೆ ಮೊಬೈಲ್ ನಲ್ಲಿ ಹರಿದಾಡುತ್ತಾನೆ.
ಇವರೆಲ್ಲಾ ನಮ್ ನಾಯಕ್ರು. ಕುಟುಂಬ ಕಲ್ಯಾಣ ಯೋಜನೆಯನ್ನ ಪಾಲಿಸುವವನು ರಾಜ್ಯದ ಸಂಪತ್ತನ್ನ ತನ್ನ ಪ್ರೀತಿಯ ಕುಟುಂಬದವರ ಹೆಸರಲ್ಲಿ ಮಾಡಿ ಕೊಟ್ಟಂತಹ ಪುಣ್ಯಾತ್ಮ, ಇದೆಲ್ಲವನ್ನು ದಾಟಿ ನಿನ್ನೆ ನಮ್ಮ ತ್ರಿಮೂರ್ತಿ ಮಂತ್ರಿಗಳು ಸದನದ ಕಲಾಪ ನಡಯುತ್ತಿದ್ದ ಸಂದರ್ಭದಲ್ಲೇ “ಬ್ಲೂ ಫಿಲಂ” ನೋಡಿ ಸಿಕ್ಕಿಬಿದ್ದ ನಾಮಧೇಯ ನಾಯಕ್ರು.. ಯಾಕ್ರಿ ಹಿಂಗ್ ಮಾಡ್ತಿದ್ದೀರ..? ಯಾವಾಗ ಸಾರ್ ನೀವೆಲ್ಲಾ ಸರಿ ಆಗ್ತೀರಾ ? ಗೌರವಾನ್ವಿತ ಶ್ರೀ ಅಟಲ್ ಬಿಹಾರಿ ವಾಜಪಾಯಿ ಕಟ್ಟಿ ಬೆಳೆಸಿದ ಬಿ.ಜೆ.ಪಿ ಪಕ್ಷವನ್ನ ಯಾವ ಮಟ್ಟಕ್ಕೆ ತಂದು ಬಿಟ್ರಿ ನೀವು.. ನಿಮ್ಮನ್ನ ಒಂದು ವಿಷಯದಲ್ಲಂತೂ ಅಭಿನಂಧಿಸಬೇಕ್ರಿ.,!! 50 ವರುಷದಲ್ಲಿ ಮಾಡಬೇಕಾದ ಸಾಧನೆಯನ್ನ ಕೇವಲ 3 ವರುಷದಲ್ಲೇ ಸಾಧಿಸಿದ್ದೀರ, ಅಭಿನಂದನೆಗಳು ಬಿ.ಜೆ.ಪಿ ನಾಯಕರೇ ಅಭಿನಂದನೆಗಳು..!! ಮತ್ತಷ್ಟು ಓದು 
ಟಿ.ಆರ್.ಪಿಗಾಗಿ ನೀಲಿ ಚಿತ್ರದ ಬೆಂಬತ್ತಿದ ಮಾಧ್ಯಮ
–ವಿಜಯ್ ಹೆರಗು
ನಾನು : ಸರ್ ನಮಸ್ಕಾರ ನಾನು ವಿಜಯ್ ಅಂತ, ವಿಜಯ್ ಹೆರಗು ನಿಮ್ಮ ಫೇಸ್ಬುಕ್ ಗೆಳೆಯಕೇಸರಿಕರಣ ಅಂದರೆ ಕೇಸರಿ ಬಣ್ಣದ ಪುಸ್ತಕವೇ?
– ಅಶ್ವಿನ್ ಅಮೀನ್
ದ್ವಾರಕನಾಥ್ ಅವರೇ, ನೀವು ಇತ್ತೀಚಿಗೆ ಪ್ರಜಾವಾಣಿಯಲ್ಲಿ ಬರೆದ ‘ಪ್ರಾಥಮಿಕ ಪಠ್ಯದಲ್ಲಿ ಕೇಸರೀಕರಣದ ಸ್ಯಾಂಪಲ್’ ಎಂಬ ಲೇಖನದ ಬಗ್ಗೆ ಹಲವು ಸಂದೇಹಗಳಿರುವುದರಿಂದ ಈ ಪ್ರತಿಕ್ರಿಯೆಯನ್ನು ನೀಡಲಿಚ್ಚಿಸುತ್ತೇನೆ.
ಮೊದಲನೆಯದಾಗಿ ನೀವು ಅರ್ಥೈಸಿಕೊಂಡಂತೆ ‘ಕೇಸರೀಕರಣ’ ಎಂದರೇನು ಎಂದು ತಿಳಿಯಬಯಸುತ್ತೇನೆ. ಭಾರತದ ಮೂಲ ಇತಿಹಾಸವನ್ನು, ಸಂಸ್ಕೃತಿಯನ್ನು, ಪರಂಪರೆಯನ್ನು, ಪ್ರಾಚೀನ ಭಾರತದ ಜನರ ಜೀವನ ವಿಧಾನಗಳನ್ನು, ಅವರು ಆಚರಿಸಿಕೊಂಡು ಬರುತ್ತಿದ್ದ ವಿವಿಧ ಆಚರಣೆಗಳನ್ನು ಯಥಾವತ್ತಾಗಿ ತಿಳಿಸಿಕೊಡುವುದು ಕೇಸರೀಕರಣವಾಗುತ್ತದೆಯೇ?.. ಇಷ್ಟಕ್ಕೂ ನಿಮಗೆ ಈ ‘ಕೇಸರಿ’ ಎಂಬ ಕಲರ್ ಕೋಡ್ ಕೊಟ್ಟವರು ಯಾರು?… ಹಾಗಿದ್ದಲ್ಲಿ ಹಿಂದಿನ ಪಠ್ಯಪುಸ್ತಕಗಳಲ್ಲಿ ಇದ್ದಂತೆ ಭಾರತದ ಮೇಲೆ ಹಲವು ಬಾರಿ ಧಾಳಿ ಮಾಡಿ ಇಲ್ಲಿನ ಹಲವು ವೈಭವೋಪೇತ ದೇಗುಲಗಳನ್ನು ನಾಶ ಮಾಡಿ, ಸಂಪತ್ತನ್ನು ಲೂಟಿಗೈದ ಮಹಮ್ಮದ್ ಗಜಿನಿ, ಮಹಮ್ಮದ್ ಘೋರಿ ಮುಂತಾದ ಲೂಟಿಕೋರರ ವರ್ಣನೆ.. ಭಾರತದ ಮೇಲೆ ದಂಡೆತ್ತಿ ಬಂದ ಅಲೆಕ್ಸಾಂಡರನನ್ನು ಸೋಲಿಸಿ ಓಡಿಸಿದ ‘ಭಾರತೀಯ’ ದೊರೆ ‘ಪೌರವ’ನನ್ನು ವರ್ಣಿಸದೇ ಅಲೆಕ್ಸಾಂಡರನನ್ನು ವರ್ಣಿಸಿರುವುದು.. ಸ್ವಾತಂತ್ರ ಹೋರಾಟದ ಪಾಠಗಳಲ್ಲಿ ಆಜಾದ್, ಸಾವರ್ಕರ್, ನೇತಾಜಿ, ಭಗತ್ ಸಿಂಗ್, ಲಾಲ ಲಜಪತ್ ರಾಯ್ ಯಂತವರನ್ನು ನಾಲ್ಕೈದು ಸಾಲುಗಳಿಗೆ ಸೀಮಿತಗೊಳಿಸಿ ಗಾಂಧೀ-ನೆಹರೂ ಮುಂತಾದ ಕಾಂಗ್ರೆಸ್ಸ್ ನಾಯಕರುಗಳ ಬಗ್ಗೆ ಪುಟಗಟ್ಟಲೆ ಬರೆಯುವುದು.. ಮೌಲಾನ ಅಬ್ದುಲ್ ಕಲಾಮ್ ಅಜಾದರಂತಹ ಗಾಂಧಿಯ ಹಿಂಬಾಲಕರ ಬಗ್ಗೆ ಪಾಠಗಳನ್ನು ಸೃಷ್ಟಿಸಿ, ಅಶ್ಫಾಕುಲ್ಲ ಖಾನ್ ನಂತಹ ಕ್ರಾಂತಿಕಾರಿ ದೇಶಪ್ರೇಮಿಯನ್ನು ಕಡೆಗಣಿಸಿರುವುದು.. ಶಿವಾಜಿ ರಾಜ್ಯ ಕಟ್ಟಿದ ರೀತಿ, ಭಾರತೀಯ ಸಂಸ್ಕೃತಿಯ ಉಳಿವಿಗಾಗಿ ಅವನು ಪಟ್ಟ ಶ್ರಮದ ಬಗ್ಗೆ ಪಾಠಗಳನ್ನು ರಚಿಸದೇ ಔರಂಗಜೇಬನನ್ನು ಪಠ್ಯದಲ್ಲಿ ವರ್ಣಿಸಿ ಸೇರಿಸಿರುವುದು .. ಇವೆಲ್ಲ ನಿಮಗೆ ಸರಿ ಕಂಡು ಬರುವುದೇ.. ಒಂದರ್ಥದಲ್ಲಿ ಇವೆಲ್ಲ ‘ಹಸಿರೀಕರಣ’ವಾಗದೆ?!!!! ಅದಕ್ಕೇಕೆ ನೀವು ‘ಹಸಿರು’ ಎಂಬ ಕಲರ್ ಕೋಡ್ ಕೊಡುವುದಿಲ್ಲ.? ಸುಳ್ಳು ಇತಿಹಾಸವನ್ನು ಸೃಷ್ಟಿಸಿ ಬರೆದರೆ ಅದು ನಿಮಗೆ ಒಪ್ಪಿಗೆಯಾಗುತ್ತದೆ. ಅದೇ ಭಾರತದ ನಿಜವಾದ ಇತಿಹಾಸವನ್ನು ಮಕ್ಕಳಿಗೆ ತೆರೆದಿಟ್ಟರೆ ಅದು ಹೇಗೆ ಕೇಸರೀಕರಣವಾಗುತ್ತದೆ?
ಹುಟ್ಟೋ ಮಕ್ಕಳು ಪ್ರಪಂಚವನ್ನು ನೋಡಲಿ..
ಆ ವಿಧಿಯಾಟವ ಬಲ್ಲವರಾರು ?
– ಪ್ರಸಾದ್.ಡಿ.ವಿ.
ನಾನು ಇಂತಹದ್ದೊಂದು ಲೇಖನ ಬರೆಯುತ್ತೇನೆಂದು ನನ್ನ ಕನಸ್ಸು ಮನಸ್ಸಿನಲ್ಲಿಯು ಎಣಿಸಿರಲಿಲ್ಲ. ನನ್ನ ನಂಬಿಕೆಗಳ ವಾಸ್ತವದ ನೆಲೆಗಟ್ಟನ್ನೆ ಆ ಸಂದರ್ಭ ಅಲ್ಲಾಡಿಸುತ್ತದೆಂದು ನಾನು ಎಂದೂ ಭಾವಿಸಿರಲಿಲ್ಲ. ನೆನ್ನೆ ನನ್ನ ಕಣ್ಣೆದುರೆ ಗತಿಸಿದ ಘಟನೆ ನನ್ನನ್ನು ಈ ಲೇಖನ ಬರೆಯುವವರೆಗೂ ಸರಿಯಾಗಿ ನಿದ್ರಿಸಲು ಬಿಡುತ್ತಿಲ್ಲ.
ನನ್ನ ತಾತನಿಗೆ ಆರೋಗ್ಯ ಕೈಕೊಟ್ಟು ಎರಡು ವರ್ಷವೇ ಸರಿದಿರಬಹುದು. ವಯಸ್ಸಾದ ದೇಹ ರೋಗಗಳ ಕಣಜವೆಂಬಂತೆ. ನನ್ನವ್ವ(ಅಜ್ಜಿ)ನಿಗೆ ಅವಳ ಗಂಡನೇ ದೈವ. ಆ ದೇವತೆಯ ಇಚ್ಛಾಶಕ್ತಿಯೆ ತನ್ನ ಗಂಡನ ಪ್ರಾಣವನ್ನು ಹಿಡಿದಿಟ್ಟಿದೆ ಎನಿಸುತ್ತದೆ. ನನ್ನ ಅಮ್ಮ, ಚಿಕ್ಕಮ್ಮಂದಿರು ಮತ್ತು ಮಾವನಿಗೆ ನನ್ನಜ್ಜನನ್ನು ಹೇಗಾದರು ಮಾಡಿ ಉಳಿಸಿಕೊಳ್ಳಬೇಕೆಂಬ ಆಸೆ. ಆದ್ದರಿಂದ ಅಜ್ಜನನ್ನು ಮೈಸೂರಿನ ಆಸ್ಪತ್ರೆಯೊಂದರಲ್ಲಿ ದಾಖಲಿಸಿ ದಿನವೂ ಅವರನ್ನು ಕಾಯುತ್ತಿದ್ದಾರೆ. ನಾನು ಭಾವನೆಗಳನ್ನು ಅಪ್ಪಿ ಜೋತಾಡುವ ಮನೋಭಾವದವನಲ್ಲವೇ ಅಲ್ಲ. ವಾಸ್ತವಿಕ ಮತ್ತು ವೈಚಾರಿಕ ನೆಲೆಗಟ್ಟುಗಳೆ ನನ್ನ ಯೋಚನಾಧಾಟಿಯ ಅಡಿಪಾಯಗಳು, ಬಂಧನಗಳು ಮತ್ತು ಸಂಬಂಧಗಳೆಂದರೆ ತುಸು ತಟಸ್ಥನೆ. ಕೆಲವೊಮ್ಮೆ ತುಂಬಾ ಭಾವುಕನಾಗುವುದುಂಟು ಆದರೆ ಅದು ತೀರಾ ವಿರಳ. ನನ್ನ ಯೋಚನಾಧಾಟಿಯೋ ಇಲ್ಲವೆ ತಟಸ್ಥ ಭಾವದ ಉದ್ದಟತನವೋ, “ಅಜ್ಜನಿಗೆ ವಯಸ್ಸಾಯ್ತು, ಮಗನ ಮದುವೆಯನ್ನೂ ನೋಡಿದ್ದಾಯ್ತು ಮೊಮ್ಮಗನನ್ನು ಮುದ್ದಿಸಿದ್ದೂ ಆಯ್ತು, ಅವರು ಹೊರಡುವ ಕಾಲ ಸನ್ನಿಹಿತವಾಯಿತೆಂದರೆ ಹೋಗಲಿ ಬಿಡಿ. ಯಾಕಷ್ಟು ಭಾವುಕರಾಗುತ್ತೀರಿ?” ಎಂದುಬಿಟ್ಟೆ. ಎಲ್ಲರೂ ನನ್ನನ್ನು ಯಾವುದೇ ಭಾವನೆಗಳಿಲ್ಲದ ಬಂಡೆಯೆಂಬಂತೆ ನೋಡಿ, “ಬಾಯಿಗೆ ಬಂದಂತೆ ಹರಟಬೇಡ, ಕಾಲು ಮುರಿಯುತ್ತೇನೆ” ಎಂದು ಅಮ್ಮ ಗದರಿದರು. ನಾನು ನನ್ನಲ್ಲೆ ಇವರಿಗೆ ಬುದ್ಧಿಯಿಲ್ಲ, ಯಾರು ಪುಂಗಿ ಊದಿದರು ಸರಿಯಾಗದವರು ಇವರು ಎಂದು ಸುಮ್ಮನೆ ಹೊರಬಂದೆ. ಅವರ ಭಾವೋತ್ಕಟತೆಯ ಆಳವನ್ನು ವಿಮರ್ಶಿಸುವ ಗೋಜಿಗೂ ಹೊಗಲಿಲ್ಲ ನಾನು.
ದೇಶ – ಭಾಷೆಗಳ ನಡುವೆ
– ರಾಕೇಶ್ ಶೆಟ್ಟಿ
ಆಗ ದೇಶದಲ್ಲಿ ಆಹಾರ ಸಮಸ್ಯೆಯಿತ್ತು.ಅಂತ ಕ್ಲಿಷ್ಟಕರ ಸಮಯದಲ್ಲಿ ಪ್ರಧಾನಿಯಾಗಿದ್ದವರು ಲಾಲ್ ಬಹದ್ದೂರ್ ಶಾಸ್ತ್ರಿಗಳು.ಆಹಾರದ ಸಮಸ್ಯೆಗೆ ಅಮೇರಿಕಾ PL480 (food for peace) ಕಾರ್ಯಕ್ರಮದಲ್ಲಿ ಕಳಿಸುತಿದ್ದ ಗೋಧಿ ತುಂಬಾ ಕಳಪೆ ಮಟ್ಟ ಮುಟ್ಟಿದಾಗ,ಅಂತ ಗೋಧಿಯನ್ನ ಬಳಸುವುದನ್ನ ವಿರೋಧಿಸಿದ ಶಾಸ್ತ್ರಿಗಳು ‘ಇಂತ ಅವಮಾನದ ಬದಲು ಒಪ್ಪೊತ್ತು ಉಪವಾಸ ಇರೋಣ’ ಅಂತ ದೇಶದ ಜನಕ್ಕೆ ಕರೆ ಕೊಟ್ಟಿದ್ದರು,ಹಾಗೆ ಕರೆಕೊಡುವ ಮೊದಲೇ ಅವರ ಮನೆಯಲ್ಲಿ ರಾತ್ರಿ ಅಡಿಗೆ ಮಾಡುವಂತಿಲ್ಲ ಅಂತ ಹೇಳಿದ್ದರು! , ‘ನೀ ಬಯಸುವ ಬದಲಾವಣೆ ನಿನ್ನಿಂದಲೇ ಆಗಲಿ’ ಅನ್ನುವ ಗಾಂಧೀ ಮಾತನ್ನ ಪಾಲಿಸಿ ತೋರಿಸಿದ್ದರು ಶಾಸ್ತ್ರಿಗಳು!
ಆರ್.ಎಸ್.ಎಸ್ ನ ಎರಡನೇ ಸರಸಂಘಚಾಲಕರಾದ ಶ್ರೀ ಮಾಧವ ಸದಾಶಿವ ಗೋಲ್ವಾಲ್ಕರ್ ಅವರ “ಚಿಂತನಗಂಗಾ” ಪುಸ್ತಕದ ಸುತ್ತ ಅಂತರ್ಜಾಲದಲ್ಲಿ ನಡೆಯುತ್ತಿರುವ ಚರ್ಚೆ ಫ಼ಾಲೋ ಮಾಡುವಾಗ “ಸಂಘದಲ್ಲಿ ವಿಚಾರ ಸ್ವಾತಂತ್ರವಿದೆಯೇ” ಎನ್ನುವ ಪದ ಬಳಕೆ ನೋಡಿ ನಗು ಬಂತು.ಅಸಲಿಗೆ ಯಾವುದೇ ಸಂಘಟನೆ,ಸ್ವಸ್ಥ ಸಮಾಜದಲ್ಲಿ ವಿಚಾರ ಸ್ವಾತಂತ್ರ್ಯವಿರಲೇಬೇಕು ಅದು ಇರಲಿ ಅಂತ ಕೇಳುವುದು ತಪ್ಪೇನು ಅಲ್ಲ.ಆದರೆ ವಿಚಾರ ಸ್ವಾತಂತ್ರ್ಯದ ಬಗ್ಗೆ ಕೇಳಿದವರು ಯಾರು ಅನ್ನುವುದು ಮುಖ್ಯವಾಗುತ್ತದಲ್ಲವೇ? ವೇದಾಂತ ಇರೋದು ಬೇರೆಯವ್ರಿಗೆ ಹೇಳೋಕ್ ಮಾತ್ರ ಅಂದುಕೊಂಡವರಿಗಾಗಿಯೇ ಗಾಂಧೀಜಿಯವರು ‘ನೀ ಬಯಸುವ ಬದಲಾವಣೆ ನಿನ್ನಿಂದಲೇ ಆಗಲಿ’ ಅಂದಿದ್ದು.
ಅಪಘಾತ ಎಂಬ ಬಹಿರಂಗ ಹತ್ಯೆ
– ಚಾಮರಾಜ ಸವಡಿ

ಪುಣೆಯಲ್ಲಿ ಬುಧವಾರ ಸಂಭವಿಸಿದ ಘಟನೆ ನಿರ್ಲಕ್ಷ್ಯದ ಚಾಲನೆ ಅಥವಾ ರೋಷಾವೇಶದ ಚಾಲನೆ ಕುರಿತ ಪ್ರಶ್ನೆಗಳನ್ನು ಮತ್ತೆ ಎತ್ತಿದೆ. ತಲೆ ಕೆಟ್ಟ ಚಾಲಕನೊಬ್ಬ ಸರ್ಕಾರಿ ಬಸ್ಸನ್ನು ಮನಸೋಇಚ್ಛೆ ಚಾಲನೆ ಮಾಡಿ ೧೦ ಜನ ಅಮಾಯಕರ ಸಾವಿಗೆ ಹಾಗೂ ೩೫ಕ್ಕೂ ಹೆಚ್ಚು ಜನ ಗಾಯಗೊಳ್ಳಲು ಕಾರಣನಾಗಿದ್ದಾನೆ.
ನಿರ್ಲಕ್ಷ್ಯದಿಂದ ವಾಹನ ಚಲಾಯಿಸುವ ಘಟನೆಗಳು ಇತ್ತೀಚೆಗೆ ಹೆಚ್ಚುತ್ತಿರುವುದೇಕೆ?
ನಿಜ, ಎಲ್ಲರಿಗೂ ಅವರದೇ ಆದ ವೈಯಕ್ತಿಕ ಸಮಸ್ಯೆಗಳಿದ್ದೇ ಇರುತ್ತವೆ. ಆದರೆ, ಭಾವಾವೇಶಕ್ಕೆ ಒಳಗಾಗಿ ರಸ್ತೆಗಿಳಿಯುವ ಮನಃಸ್ಥಿತಿ ಎಂಥದು? ಅದರಲ್ಲೂ ಪಕ್ಕದಲ್ಲಿ ಹಾಗೂ ಎದುರು ಇರುವ ವಾಹನಗಳನ್ನು ಹಿಂದಿಕ್ಕಿ ಹೋಗಬೇಕೆನ್ನುವ ಚಪಲ ಏಕೆ ಉಂಟಾಗುತ್ತದೆ? ರಸ್ತೆ ಸೂಚನೆಗಳನ್ನು ಉಲ್ಲಂಘಿಸುವ, ಇತರರ ಸರಾಗ ಚಲನೆಗೆ ಅಡ್ಡಿಪಡಿಸುವ ಮನಃಸ್ಥಿತಿ ಏಕೆ ಮೂಡುತ್ತದೆ?
ಹೆಚ್ಚುತ್ತಿರುವ ಒತ್ತಡ
ಇತ್ತೀಚಿನ ದಿನಗಳಲ್ಲಿ ಒತ್ತಡ ಪ್ರಮಾಣ ಹೆಚ್ಚುತ್ತಿದೆ. ಕೆಲಸದ ಸ್ಥಳಗಳ ಒತ್ತಡ ಬಹಳಷ್ಟು ಸಾರಿ ಇಂಥ ತಲೆಕೆಟ್ಟ ನಡತೆಗಳಿಗೆ ಕಾರಣವಾಗಿದ್ದೂ ಉಂಟು. ಮೇಲಧಿಕಾರಿಗಳ ಒತ್ತಡ, ಹಿಂಸೆ, ಸಹೋದ್ಯೋಗಿಗಳ ಕಿರಿಕಿರಿ, ಕೆಲಸದ ಸ್ಥಳದಲ್ಲಿ ಮೂಲಸೌಕರ್ಯಗಳ ಕೊರತೆ, ಅಸ್ತವ್ಯಸ್ತ ಕೆಲಸದ ಅವಧಿ, ರಜೆ ಕೊಡದಿರುವುದು, ಸರಿಯಾದ ವೇತನ/ಸೌಲಭ್ಯ ನೀಡದಿರುವುದು- ಹೀಗೆ ಹಲವಾರು ಕಾರಣಗಳಿಂದ ಒತ್ತಡ ಉಂಟಾಗುತ್ತದೆ. ಇದಕ್ಕೆ ವೈಯಕ್ತಿಕ ಸಮಸ್ಯೆಗಳ ಒತ್ತಡವೂ ಸೇರುತ್ತದೆ. ಮತ್ತಷ್ಟು ಓದು 
ಏನ್ ಗುರು ರಾಜಕೀಯನಾ?
-ಅಶ್ವಿನ್ ಎಸ್ ಅಮೀನ್
ಇತ್ತೀಚೆಗೆ ಬನವಾಸಿ ಬಳಗದವರು ನಡೆಸುತ್ತಿರುವ ‘ಏನ್ ಗುರು’ ಎಂಬ ಬ್ಲಾಗ್ ನಲ್ಲಿ ಪ್ರಕಟವಾದ ‘RSS ಕಣ್ಣಲ್ಲಿ ಭಾಷಾ ನೀತಿ, ಒಕ್ಕೂಟ ಮತ್ತು ಸಮಾಜ’ ಎಂಬ ಲೇಖನವನ್ನು ಓದಿದೆ. ಲೇಖಕರ ಮಾತುಗಳು ಏಕಮುಖಿಯಾಗಿವೆಯೇನೋ ಎನಿಸಿ ಈ ಪ್ರತಿಕ್ರಿಯೆಯನ್ನು ದಾಖಲಿಸುತ್ತಿದ್ದೇನೆ.
ಲೇಖನ ಆರಂಭದಲ್ಲಿ ಅರೆಸ್ಸಿಸಿನ ಧನಾತ್ಮಕ ಅಂಶಗಳ ಕುರಿತು ಲೇಖಕರು ಗಮನ ಸೆಳೆಯುತ್ತಾರೆ. ಆದರೆ ಒಂದು ಕಡೆ ನೆರೆ ಬರ ಹಾಗು ಇತರ ವಿಕೋಪಗಳ ಸಂದರ್ಭದಲ್ಲಿ ಜಾತಿ ಮತ ಲೆಕ್ಕಿಸದೆ ಜನತೆಯ ಸಹಾಯಕ್ಕೆ ಧಾವಿಸುವ ಆರೆಸ್ಸೆಸ್ ನ ಬಗ್ಗೆ ಹೊಗಳುವ ಲೇಖಕರು ಮತ್ತೊಂದು ಕಡೆ ಪ್ರಾಂತೀಯ ವಿರೋಧದ ಬಗ್ಗೆ ಮಾತನಾಡುತ್ತಾರೆ.! ಪ್ರಾಂತೀಯ ಹಾಗು ವೈವಿಧ್ಯತಾ ವಿರೋಧವಿದ್ದರೆ ಆರೆಸ್ಸೆಸ್ ದೇಶದ ಯಾವದೇ ಭಾಗದಲ್ಲಿ ಉಂಟಾಗುವ ವಿಕೋಪಗಳ ಸಂದರ್ಭದಲ್ಲಿ ನೆರವಿಗೆ ಧಾವಿಸುತ್ತಿತ್ತೆ..?!
ಆರೆಸ್ಸೆಸಿನ ಪೂಜನೀಯ ಗುರುಗಳಾದ ಮಾಧವ ಸದಾಶಿವ ಗೋಳವಾಲ್ಕರ್ ಗುರೂಜಿಯವರ ‘ಚಿಂತನ ಗಂಗಾ’ ಪುಸ್ತಕವನ್ನಾಧರಿಸಿ ಆ ಲೇಖನವನ್ನು ಬರೆಯಲಾಗಿದೆ. ಆ ಸಮಗ್ರ ಗ್ರಂಥವನ್ನು ಲೇಖಕರು ಓದಿರುವುದು ಸಂತೋಷದಾಯಕ. ಆದರೆ ಅದನ್ನು ಸರಿಯಾಗಿ ಅರ್ಥೈಸುವಲ್ಲಿ ಎಡವಿದ್ದಾರೆ ಎಂಬುದೇ ವಿಪರ್ಯಾಸ.! ಮತ್ತಷ್ಟು ಓದು 
ಇಂದಿನ ರಾಜಕೀಯ ಮತ್ತು ಮಾಧ್ಯಮಗಳ ನಡುವೆ ಕಂಡುಬರುವಂತಹ ಸಾಮ್ಯತೆಗಳು
-ರಾಜುವಿನಯ್ ದಾವಣಗೆರೆ
ಇತ್ತೀಚಿಗೆ ನಾವು ಪ್ರಚಲಿತ ವಿದ್ಯಮಾನಗಳನ್ನು ಗಮನಿಸುತ್ತಿದ್ದರೆ.ಇಂದಿನ ರಾಜಕೀಯ ವ್ಯವಸ್ಥೆಗೂ, ಇಂದಿನ ಮಾಧ್ಯಮ (ದೃಶ್ಯ)ಗಳಿಗೂ ವ್ಯತ್ಯಾಸಗಳೇ ಕಾಣುತ್ತಿಲ್ಲ.
———–*ಪಕ್ಷಾಂತರ*———–





