ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 7, 2011

27

ಹೈಟೆಕ್ ಬಹಿಷ್ಕಾರ…!

‍ನಿಲುಮೆ ಮೂಲಕ

– ರಾಕೇಶ್ ಶೆಟ್ಟಿ

‘ಬೇರೆ ಬೇರೆ ವಿಷಯಗಳಲ್ಲಿ ಒಟ್ಟಿಗೆ ಸೇರಿ ಕೆಲಸ ಮಾಡಿದ ಗೆಳೆಯರು ಈಗ ಜನಲೋಕಪಾಲ ವಿಷಯವಾಗಿ ತಾತ್ವಿಕ ಭಿನ್ನಭಿಪ್ರಾಯಗಳನ್ನು ಇಟ್ಟುಕೊಂಡು ವಿರುದ್ಧವಾಗಿ ಮಾತನಾಡುತ್ತಿರುವುದು ಬೇಸರತರಿಸಿದೆ ‘ ಅಂತ ಆ ಗೆಳೆಯ ಕಳೆದ ಆಗಸ್ಟಿನಲ್ಲಿ ಫೆಸ್ಬುಕ್ಕಿನಲ್ಲಿ ಬರೆದುಕೊಂಡಿದ್ದರು.ಅದಕ್ಕೆ ನಾನು ‘ಸಾಮಾಜಿಕ ಕಳಕಳಿಯಿರುವ ಎಲ್ಲ ಮನಸ್ಸುಗಳು ಅಂತಿಮವಾಗಿ ಬಯಸುವುದು ಒಳ್ಳೆಯ ಸಮಾಜವನ್ನಷ್ಟೇ,ತಾತ್ವಿಕ ಭಿನ್ನಭಿಪ್ರಾಯ್ಗಳನ್ನ ವೈಯುಕ್ತಿಕವಾಗಿ ನೋಡಬೇಡಿ’ ಅನ್ನುವಂತೆ ಬರೆದಿದ್ದೆ.ಅವರೂ ಅದನ್ನ ಇಷ್ಟ ಪಟ್ಟಿದ್ದರು.

ಅದಾಗಿ ಬಹುಷಃ ೩-೪ ದಿನಗಳು ನಾನು ಊರಿನಲ್ಲಿ ಇರಲಿಲ್ಲ,ವಾಪಸ್ಸು ಬಂದವನು ಫೇಸ್ಬುಕ್ ತೆಗೆದಾಗ ಗೊತ್ತಾಗಿದ್ದು , ತಾತ್ವಿಕ ಭಿನ್ನಾಭಿಪ್ರಾಯಗಳನ್ನ ವೈಯುಕ್ತಿಕ ಮಟ್ಟಕ್ಕೆ ಆ ಗೆಳೆಯ ಮಾತ್ರವಲ್ಲದೆ ಅವನ ‘ಬಳಗ’ವೂ ತೆಗೆದುಕೊಂಡು ನನಗೆ ಅವರ ಗೂಗಲ್ ಗುಂಪಿನಿಂದ,ಫೆಸ್ಬುಕ್ಕ್ ಗೆಳೆತನದಿಂದ ‘ಹೈಟೆಕ್ -ಬಹಿಷ್ಕಾರ’ ಹಾಕಿದೆ ಅಂತ…! ಈ ಹೈಟೆಕ್ ಬಹಿಷ್ಕಾರ ಹಾಕಿಸಿಕೊಳ್ಳುವಂತೆ ನಡೆದಿದ್ದಾರೂ ಏನು ಅಂತ ನೋಡ ಹೊರಟರೆ….

ಅಣ್ಣಾ ಹಜ಼ಾರೆ ಜನಲೋಕಪಾಲ ಮಸೂದೆಗಾಗಿ ಜಂತರ್ ಮಂಥರ್ನಲ್ಲಿ ಉಪವಾಸ ಕುಳಿತ ದಿನಗಳಿವೆಯಲ್ಲ ಅವು ಈ ದೇಶದಲ್ಲಿ ಇನ್ನೇನು ಬದಲಾವಣೆ ಸಾಧ್ಯವೇ ಇಲ್ಲ ಅನ್ನುವಂತಿದ್ದ ಜನರ ಮನಸ್ಸಿಗೆ ಆಶಾಭಾವನೆ ಮೂಡಿಸಿದ ದಿನಗಳು.ಆಗ ’ಈ ಹೋರಾಟ ಗೆಲ್ಲಲೇ ಬೇಕು’ ಅಂದವರು ಅದ್ಯಾಕೋ ಮತ್ತೆ ಅಣ್ಣಾ ’ರಾಮ ಲೀಲಾ ಮೈದಾನ’ಕ್ಕೆ ಬಂದು ನಿಂತಾಗ ’ಪ್ರಜಾಪ್ರಭುತ್ವದ ಬುಡಕ್ಕೆ ಬೆಂಕಿ ತಗುಲಿದೆ’ ಅನ್ನಲಾರಂಭಿಸಿದರು.ಆಗಲೇ ಅಣ್ಣಾ ಹೋರಾಟವನ್ನು ಬೆಂಬಲಿಸುತಿದ್ದವರು-ವಿರೋಧಿಸುವ ಗೆಳೆಯರ ನಡುವೆ ತಾತ್ವಿಕ ಭಿನ್ನಾಭಿಪ್ರಾಯಗಳ ಚರ್ಚೆ ಫ಼ೇಸ್ಬುಕ್ಕಿನಲ್ಲಿ ಶುರುವಾಗಿದ್ದು.ಈ ಹೋರಾಟ ಸರಿಯಿಲ್ಲ ಅನ್ನಲು ಅವರುಗಳು ಏನೇನು ಅಂಶ ಮುಂದಿಡುತಿದ್ದರೋ, ಹೋರಾಟ ಹೇಗೆ ಸರಿ ಅಂತ ನಾವುಗಳು ನಮ್ಮ ವಾದ ಮುಂದಿಟ್ಟಿದ್ದೆವು.

ಆದರೆ ತೀರಾ ಯಾವಗ ’ಬೆಂಗಳೂರಿನ ಫ಼್ರೀಡಂ ಪಾರ್ಕಿನ ಇನ್ನೊಂದು ಬದಿಯಲ್ಲಿ ಅಮೇರಿಕಾದ ವೀಸಾ ಕೊಡಲು ಶುರು ಮಾಡಿದರೆ,ಅಲ್ಲಿ ಹೋರಾಟ ಮಾಡುತ್ತಿರೋ ಸಾಫ಼್ಟ್ವೇರ್ ಮಂದಿಯೆಲ್ಲ ಹೋರಾಟ ಬಿಟ್ಟು ವೀಸಾಕ್ಕಾಗಿ ಕ್ಯೂ ನಿಲ್ಲುತ್ತಾರೆ’ ಅನ್ನುವ ಮಟ್ಟದ ಹೇಳಿಕೆಗಳು ಬಂದವೋ ಮತ್ತು ಅದಕ್ಕೆ ಇನ್ನೊಬ್ಬರು ’”ಈ ಐಟಿ ಮಂದಿಯ ೩ ದಿನದ ಶೋಕಿ ಹೋರಾಟಳನ್ನ ನಾವ್ ನೋಡಿಲ್ವ. ಅಮೇರಿಕಕ್ಕೇ ವೀಸಾ ಕೊಟ್ರೆ ನಾಳೇನೆ ಎಲ್ಲಾರು freedom park ನಿಂದ ಜಾಗ ಖಾಲಿ. ಇವರನೆಲ್ಲ ಏಕೆ serious ಆಗಿ ತೊಗೋತೀರ.”

ಅಂತ ಬರೆದರೋ,ನಾನು ಅದಕ್ಕುತ್ತರವಾಗಿ, ಅವರ ಹೆಸರನ್ನೆ ಉಲ್ಲೇಖಿಸಿ “ಐಟಿ ಮಂದಿಯ ಬಗ್ಗೆ ಅರೆದು ಕುಡಿದ ಸರ್ವಜ್ನನಂತೆ ಮಾತಾಡೋದು.ಇವರ ಬಳಗದಲ್ಲೇ ಇರೋ ಐಟಿ ಹುಡುಗರಿಗೂ ಇದೆ ಮಾತು ಅನ್ವಯಿಸುತ್ತಾ? ಉತ್ತರಿಸುವಿರಾ? ನಿಮ್ಮ ಬಳಗದಲ್ಲು ತಮ್ಮ ವೀಕೆಂಡ್ ಗಳನ್ನ ಕನ್ನಡ/ಕರ್ನಾಟಕ್ಕಾಗಿ ಸವೆಸುತ್ತಿರುವ ಆ ಐಟಿ ಮಂದಿಗಳನ್ನು ಸೇರಿಸಿ ಈ ಮಾತು ಹೇಳಿದ್ದೀರಾ?” ಅಂತ ಕೇಳಿದ್ದೇ ಮಹಾಪರಾಧವಾಗಿದ್ದಂತೆ…! ಅವರುಗಳು ವಿಷಯದ ಬಗ್ಗೆ ಮಾತನಾಡುವುದು ಬಿಟ್ಟು ಈ ರೀತಿ ಬರೆಯಲು ಶುರು ಮಾಡಿದಾಗ ಕೈಕಟ್ಟಿ ಕೂರಬೇಕಿತ್ತಾ? ಇದ್ದಿದ್ದನ್ನು ಇದ್ದ ಹಾಗೆ ಹೇಳುವ ಕೆಲಸವನ್ನಷ್ಟೆ ನಾನು ಮಾಡಿದ್ದು.ಇವರುಗಳು ಮಾಡುವ ಕನ್ನಡ ಕೆಲಸವನ್ನ ಶೋಕಿ ಅಂದರೆ ಇವರು ಸುಮ್ಮನಿರುವರೇ?

ಈ ಐಟಿ ಮಂದಿಯ ಕರ್ಮ ನೋಡ್ರಿ, ಹೋರಾಟಕ್ಕೆ ಹೋಗದಿದ್ದರೂ ಇದೇ ಮಂದಿ ಅದಕ್ಕೂ ಕೊಂಕು ಮಾತನಾಡುತಿದ್ದರು,ಹೋಗಿದಕ್ಕೂ ಮಾತನಾಡಿದರು ಈ ಜನ.ಇಂತ ಮಾತುಗಳು ಮಾಧ್ಯಮಗಳಿಂದಲೂ ಬಂದವು.ಈ ಹೋರಾಟದಲ್ಲಿ ಪಾಲ್ಗೊಂಡ ಜನರೆಷ್ಟು ಅನ್ನುವ ನಿಖರ ಮಾಹಿತಿ ನೀಡಿದ್ದು ನನ್ನ ನೆಚ್ಚಿನ ಅಂಕಣಕಾರ ದಿನೇಶ್ ಅಮಿನ್ ಮಟ್ಟು.ಬಹುಷಃ ೨೧ ಲಕ್ಷದ ಚಿಲ್ಲರೆ ಇರಬೇಕು(ಯಾವ ಸಮೀಕ್ಷೆಯ ವರದಿ ಮಾಡಿದ್ದೋ ಗೊತ್ತಿಲ್ಲ…!)  ನನ್ನ ಅಲ್ಪ ಬುದ್ದಿ ಶಕ್ತಿಗೆ ನೆನಪಿಲ್ಲ.ಅಷ್ಟೆ ಅಲ್ಲ ಅವರೂ ಸಹ ಈ ಐಟಿ ಮಂದಿಯ ತೋರಿದ ವಿಶೇಷ ಪ್ರೀತಿಯ ಬಗ್ಗೆ ವಿವರಿಸಲು ಇನ್ನೊಂದು ಲೇಖನವನ್ನೇ ಬರೆಯಬೇಕಾದೀತು.

ಸರಿ ನಾನು ಮಾಡಿದ ಮಹಾಪರಾಧಕ್ಕಾಗಿ(!?), ಈ ವಿಷಯಕ್ಕೆ ತಲೆ ಹಾಕದ ಗೆಳೆಯ ಸಾತ್ವಿಕ್ ಅವರನ್ನೂ ಈ ಹೈಟೆಕ್ ಹೋರಾಟಗಾರರು ’ಬಹಿಷ್ಕಾರ’ ಹಾಕಿದ್ಯಾಕೆ ಅನ್ನುವುದೇ ನನಗಿನ್ನೂ ಅರ್ಥವಾಗಿಲ್ಲ. ಶತಮಾನಗಳು ಉರುಳಿದರೂ ಈ ದೇಶದಲ್ಲಿ ಈಗಲು ಅನಿಷ್ಟ ಸಾಮಾಜಿಕ ಬಹಿಷ್ಕಾರ ಹಾಕುವ ಪದ್ದತಿ ಉಳಿದಿದೆ.ಅಂತ ಸಾಮಾಜಿಕ ಬಹಿಷ್ಕಾರಿಗಳಿಗೂ ಈ ಹೈಟೆಕ್ ಬಹಿಷ್ಕಾರಿಗಳಿಗೂ ಅಂತ ವ್ಯತ್ಯಾಸವಿದೆಯಾ?

ಅಸಲಿಗೆ, ಬಹಿಷ್ಕೃತನಾಗಿದ್ದಕ್ಕೆ ನನಗೆ ಬೇಸರವೇನಿಲ್ಲ.ನಾನಾಗಿಯೇ ಅವರ ಗುಂಪನ್ನು ಸೇರಲು ಹೋದವನಲ್ಲ ಕರೆದು ಸೇರಿಸಿಕೊಂಡವರೂ ಅವರೇ.ಈಗ ಅವರು ಹೇಳಿದ್ದಕ್ಕೆಲ್ಲ ಕೋಲೆ ಬಸವನಂತೆ ತಲೆ ಆಡಿಸಲಿಲ್ಲ ಅಂತ ಬಹಿಷ್ಕರಿಸಿದವ್ರು ಅವರೇ! ಅವ್ರಿಗೆ ಬೇರೆಯವರ ಹೋರಾಟದ ಕಮಿಟ್ಮೆಂಟ್ ಬಗ್ಗೆ ಅಸಡ್ಡೆಯಿರಬಹುದು.ಆದರೆ,ಅವರುಗಳ ಹೋರಾಟದ ಮೇಲೆ ನನಗೆ ಗೌರವವಿದೆ.ಆದರೆ ಇಂತ ಮನಸ್ಥಿತಿಯಿರುವ ಮಂದಿ ಈ ನಾಡಿನ ಪುನರ್ನಿರ್ಮಾಣ ಮಾಡ ಹೊರಟಿದ್ದಾರಲ್ಲ, ನನ್ನಂತ ಒಬ್ಬನ ತಾತ್ವಿಕ ಭಿನ್ನಾಭಿಪ್ರಾಯಕ್ಕೆ ಹೈಟೆಕ್ ಬಹಿಷ್ಕಾರ ಹಾಕುವವರು ನಾಳೆ ಅಧಿಕಾರ ಸಿಕ್ಕಾಗ ಪ್ರಶ್ನಿಸುವವರನ್ನ ಏನು ಮಾಡುತ್ತಾರೆ? ನಾವು ಹೇಳಿದ್ದಕ್ಕೆ ಜೈಕಾರ ಹಾಕಬೇಕು ಅನ್ನುವುದು ಸರ್ವಾಧಿಕಾರಿ ಮನಸ್ಥಿತಿಯಲ್ಲವೇ?

ಒಟ್ಟಿನಲ್ಲಿ ಇದು ’ಡಬಲ್ ಸ್ಟಾಂಡರ್ಡ್ ದುನಿಯಾ’ ಅನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇರುತ್ತದೆ… ಇದನ್ನ ಬರೆಯಬೇಕು ಅಂದುಕೊಂಡಿದ್ದೇ ಸೆಪ್ಟಂಬರ್ ತಿಂಗಳ ಸಮಯದಲ್ಲಿ,ಅದ್ಯಾಕೋ ಬರೆಯಲು ಕುಳಿತರೆ ಆಗುತ್ತಿರಲಿಲ್ಲ,ಅಂತೂ ಬರೆದಿದ್ದೇನೆ.

27 ಟಿಪ್ಪಣಿಗಳು Post a comment
 1. ನವೆಂ 7 2011

  ನೋಡಿ, ಇದಕ್ಕೇ ನಾನು ಯಾವುದೇ ಫೇಸ್‌ಬುಕ್ ಗುಂಪಿಗೆ ಸೇರಲು ಬಯಸುವುದಿಲ್ಲ.. ಅಲ್ಲಿ ನಡೆಯುವ ಕೆಲಸಕ್ಕೆ ಬಾರದ ಚರ್ಚೆಗಳಿಗೆ ಸಮಯ ಕೊಡುವಷ್ಟು ಪುರುಸೊತ್ತು ನನಗೆ ಇಲ್ಲ. ನನ್ನ ಪರಿಚಯದಲ್ಲೇ ಹೇಳಿಕೊಂಡಿದ್ದೇನೆ, “ನನ್ನನ್ನು ಯಾವುದೇ ಫೇಸ್‌ಬುಕ್ ಗುಂಪಿಗೆ ಸೇರಿಸಬೇಡಿ” ಎಂದು..

  ಉತ್ತರ
  • ನವೆಂ 7 2011

   ಪ್ರಸನ್ನ ನಮಸ್ತೆ,

   ಫೇಸ್ ಬುಕ್ ನಲ್ಲಿ ಬರಿ ಕಾಡು ಹರಟೆ ಆಗುತ್ತದೆ ಎಂದು ಭಾವಿಸಬೇಡಿ. ಸಾಕಷ್ಟು ವಿಷಯಗಳು ಸಿಗುತ್ತವೆ. ನಮ್ಮ ಆಯ್ಕೆ
   ಯಾವುದು ಎಂಬುದು ನಮಗೆ ಗೊತ್ತಿರಬೇಕು ಅಷ್ಟೇ. ಇಲ್ಲಿ ರಾಕೇಶ್ ಅವರು ಹೇಳಿದ ವಿಷಯ ಫೇಸ್ಬುಕ್ ಗೆ ಸಂಬಂಧಿಸಿದ್ದಲ್ಲ. ಬದಲಾಗಿ ನಮ್ಮ ಮತ್ತು ಗೆಳೆಯರ ನಡುವಿನ ತಾತ್ವಿಕ ಭಿನ್ನಾಭಿಪ್ರಾಯಕ್ಕೆ ಸೇರಿದ್ದು.
   ಒಂದು ಸಂಘಟನೆಯನ್ನು ಸಂಘಟಿಸಲು ಅದರ ನಾಯಕ ಯಾ ಮುಂದಾಳುಗಳಿಗೆ ತಾಳ್ಮೆ ಇರಬೇಕು. ನಾಲ್ಕು ಜನರಿಗೆ ಉತ್ತರ ನೀಡುವಷ್ಟು ತಾಳ್ಮೆ ಇರಬೇಕು. ಇಲ್ಲವಾದಲ್ಲಿ ಆಡೋ ಹುಡುಗರ ಹಾಗೆ ಅವರ ಮಾತು ಕೇಳಲಿಲ್ಲ ಅಂತ ನೀನು ಆಟಕ್ಕೆ ಬೇಡ ಹೋಗು ಅಂತಾರಲ್ಲ, ಹಾಗೆ ಬಹಿಷ್ಕಾರ ಹಾಕಿದ್ರೆ ಹೇಗೆ? ಈ ಬಗ್ಗೆ ರಾಕೇಶ್ ಲೇಖನ ಬರೆದಿದ್ದಾರೆ.
   ನನಗಂತೂ ಫೇಸ್ ಬುಕ್ ಒಳ್ಳೆಯ ಗೆಳೆಯರನ್ನು ಗಳಿಸಿಕೊಟ್ಟಿದೆ. ಅಲ್ಲದೇ ಕನ್ನಡ ಹೋರಾಟದ ಕುರಿತು ಹೊಸ ದೃಷ್ಟಿಕೋನವನ್ನು ಗಳಿಸಿಕೊಟ್ಟಿದೆ.

   ಸಾತ್ವಿಕ್

   ಉತ್ತರ
   • ನವೆಂ 7 2011

    ಒಂದು ಲೇಖನ, ವಿಷಯ ಅಥವ ಅಭಿಪ್ರಾಯದ ಬಗ್ಗೆ ನಮ್ಮ ವಯುಕ್ತಿಕ ಪ್ರತಿಕ್ರಿಯೆಗಳನ್ನು ನೀಡಲು ಬ್ಲಾಗ್‍ಗಳಲ್ಲಿ ಇರುವಷ್ಟು ಸ್ವಾತಂತ್ಯ್ರ ಫೇಸ್ಬುಕ್ಕಿನಲ್ಲಿ ಖಂಡಿತ ಇಲ್ಲ. ಫೇಸ್ಬುಕ್ಕಿನ ಕೆಲವು ಗುಂಪಿನಲ್ಲಿ, ಯಾವುದಾದರೊಂದು ಚರ್ಚೆ ನಡೆಯುತ್ತಿದ್ದು, ಅದು ೧೦ ಪ್ರತಿಕ್ರಿಗಳನ್ನು ದಟಿದರೆ ಸಾಕು ಆ ಪೋಸ್ಟನ್ನು ತಕ್ಷಣವೇ ತೆಗೆದುಹಾಕಲಾಗುತ್ತದೆ. ಯಾಕೆ ಹೇಗೆ ಮಾಡುವರೋ ತಿಳಿಯದು! ನಾನು ಪಾಲ್ಗೊಂಡಿದ್ದ ಹಲವು ಚರ್ಚೆಗಳಲ್ಲಿ ಕೆಲವು ಮಾತ್ರ ತಾತ್ವಿಕ ಅಂತ್ಯಕಂಡಿವೆ.
    ಪರ-ವಿರೋಧಗಳಿಲ್ಲವೆಂದರೆ ಅದನ್ನು ಚರ್ಚೆ ಎನ್ನಲು ಸಾಧ್ಯವೇ? ಒಂದು ವಿಷಯದ ಮೇಲಿನ ಎಲ್ಲರ ಅಭಿಪ್ರಾಯಗಳನ್ನು ಮಂಥನ ಮಾಡಿದಾಗ ಮಾತ್ರ ಚರ್ಚೆಯು ಒಂದು ಫಲಿತಾಂಶದೆಡೆಗೆ ನಡೆದು ಪೂರ್ಣಗೊಳ್ಳಲು ಸಾಧ್ಯವಾಗುತ್ತದೆ. ಚರ್ಚೆಗಳಲ್ಲಿ ಪಾಲ್ಗೊಳ್ಳುವವರು ಸ್ವಪ್ರತಿಷ್ಟೆ, ಪೂರ್ವಾಗ್ರಹಗಳನ್ನು ಇಟ್ಟುಕೊಳ್ಳದೆ, ಎಲ್ಲರ ಪ್ರತಿಕ್ರಿಯೆಗಳನ್ನು ಗೌರವಿಸಿಸಬೇಕು. ಅದನ್ನು ಬಿಟ್ಟು ವಿರೋಧ ಮಾಡಿದವರ ಪ್ರತಿಕ್ರಿಯೆಗಳನ್ನು, ಪೋಸ್ಟುಗಳನ್ನು ಅಳಿಸಿಹಾಕಿ, ಸದಸ್ಯತ್ವವನ್ನೇ ರದ್ದುಗೊಳಿಸುವುದು ’ಸರ್ವಾಧಿಕಾರಿ’ ಮನೋಭಾವವಲ್ಲದೇ ಮತ್ತೇನೂಅಲ್ಲ!

    ಉತ್ತರ
 2. guru
  ನವೆಂ 7 2011

  ತಲೆ ‘ಹಾಡಿಸಲಿಲ್ಲ’ ಅಲ್ಲ, ತಲೆ ‘ಆಡಿಸಲಿಲ್ಲ’.
  ಹಾಡು=sing
  ಆಡು= shake, nod

  ಉತ್ತರ
 3. guru
  ನವೆಂ 8 2011

  ಯಾವುದೇ ಬಳಗವು ಏನೋ ಕೆಲಸ ಮಾಡುತ್ತಿದ್ದಾಗ ಅದು ಒಂದು ಸಮುದಾಯದ ಜವಾಬ್ದಾರಿ ಎಂಬ ಉದ್ದೇಶ ಅರ್ಥ ಮಾಡಿಕೊಳ್ಳದೇ ಯಾರಾದರೂ ದಿನಾ ಕಿರಿಕಿರಿ ಮಾಡುತ್ತಿದ್ದರೆ ದಿನಾ ಉತ್ತರ ಕೊಟ್ಟೂ ಕೊಟ್ಟೂ ಟೈಮ್ ವೇಸ್ಟ್ ಮಾಡುವುದರ ಬದಲು ಅಂತವರನ್ನು ಬಹಿಷ್ಕರಿಸುವುದರಲ್ಲಿ ತಪ್ಪೇನಿಲ್ಲ. ಅದು ರಾಕೇಶ್ ಆಗಿರಬಹುದು, ಅಥವಾ ಅವರ ಆಪ್ತಮಿತ್ರ ಸಾತ್ವಿಕ್ ಆಗಿರಬಹುದು. ! ಗೋಳಾಡಬೇಡಿ ಬಿಡಿ. ನಿಮ್ಮ ಪಾಡಿಗೆ ನಿಮಗೆ ಸರಿಕಂಡ ದಾರಿಯಲ್ಲಿ ಕೆಲಸ ಮುಂದುವರೆಸಿ.

  ಉತ್ತರ
  • ನವೆಂ 8 2011

   ಆತ್ಮೀಯ ಗುರುಗಳೇ ನಮಸ್ತೆ.
   ನಿಮ್ಮ ಕಾಮೆಂಟ್ ಓದಿ ನೀವು ಬಳಗದ ಒಳಗಿನವರೇ ಇರಬೇಕೆಂದು ತಿಳಿದು ಈ ಉತ್ತರ ಬರೆಯುತ್ತಿದ್ದೇನೆ. ನೀವಾದರೂ ನನಗೆ ಮೂಡಿರುವ ಕೌತುಕಕ್ಕೆ ಉತ್ತರ ನೀಡಬಹುದೆಂಬ ಕಾರಣಕ್ಕೆ. ರಾಕೇಶ್ ಅವರು ನನ್ನ ಕುರಿತು ತಮ್ಮ ಲೇಖನದಲ್ಲಿಯೇ ಒಂದು ಸಾಲನ್ನು ಬರೆದಿದ್ದಾರೆ. ‘ಸರಿ ನಾನು ಮಾಡಿದ ಮಹಾಪರಾಧಕ್ಕಾಗಿ(!?), ಈ ವಿಷಯಕ್ಕೆ ತಲೆ ಹಾಕದ ಗೆಳೆಯ ಸಾತ್ವಿಕ್ ಅವರನ್ನೂ ಈ ಹೈಟೆಕ್ ಹೋರಾಟಗಾರರು ’ಬಹಿಷ್ಕಾರ’ ಹಾಕಿದ್ಯಾಕೆ ಅನ್ನುವುದೇ ನನಗಿನ್ನೂ ಅರ್ಥವಾಗಿಲ್ಲ’ ಎಂಬ ಮಾತನ್ನು ತಾವು ಗಮನಿಸಿರಬಹುದು.ನನಗೂ ಕೂಡ ಇದೇ ಸಂಗತಿ ತಲೆಯಲ್ಲಿ ಕೊರೆಯುತ್ತಿದೆ. ನಾನು ಬಳಗದ ಸದಸ್ಯನೂ ಅಲ್ಲ, ಕಾರ್ಯಕರ್ತನೂ ಅಲ್ಲ. ನನ್ನ ಮತ್ತು ನನ್ನನ್ನು ತಮ್ಮ ಗೆಳೆಯರ ಗುಂಪಿನಿಂದ ಹೊರಹಾಕಿದ ವ್ಯಕ್ತಿಯದ್ದು ಸ್ನೇಹದ ನೆಲೆಯ ಸಂಬಂಧ. ನಿಮ್ಮಿಬ್ಬರ ಕನ್ನಡ ಪ್ರೇಮ ಸಾಮ್ಯವೇ ನಮ್ಮನ್ನು ಗೆಳೆಯರನ್ನಾಗಿ ಮಾಡಿತ್ತು. ನಾನೇನು ಇವರ ಚಟುವಟಿಕೆಗಳಲ್ಲಿ ಭಾಗವಹಿಸಿ, ನೀವೆ ಹೇಳುವಂತೆ ‘ಕಿರಿ ಕಿರಿ’ ಮಾಡಿರಲಿಲ್ಲ. ಅದೇನೇ ಇರಲಿ ಗೆಳೆತನಕ್ಕೆ ಎಲ್ಲ ಭೇದಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ಇದೆ ಎಂಬುದನ್ನು ಕೇಳಿಬಲ್ಲೆ. ಇಲ್ಲಿ ಅದು ಯಾವುದು ಲೆಕ್ಕಕ್ಕೆ ಬರದೇ ಇರುವುದು ವಿಸ್ಮಯ. ನನ್ನದು ಕೇವಲ ಒಂದು ಪ್ರಶ್ನೆ- ಕನ್ನಡದಲ್ಲಿ ಒಂದು ಗಾದೆ ಇದೆ, ‘ಅಟ್ಟಕ್ಕೆ ಹಾರಿ ಮತ್ತೆ ಆಕಾಶಕ್ಕೆ ಹಾರಿ’ ಅಂತ.ಹಾಗೆ ರಾಕೇಶರ ಯಾವುದೇ ಸಂದೇಹಗಳಿಗೂ ಉತ್ತರ ನೀಡದಷ್ಟು ದಡ್ಡರೇನಲ್ಲ ನನ್ನ ಬಳಗದ ಗೆಳೆಯರು. ಆದರೆ ಬಹಿಷ್ಕಾರ ಎಂಬ ಹೀಗೊಂದು ಸುಲಭ ಪರಿಹಾರವನ್ನು ಹುಡುಕಿಕೊಳ್ಳುತ್ತಾರೆ ಅಂದರೆ ನನಗೆ ಸಖೇದಾಶ್ಚರ್ಯವಾಗುತ್ತದೆ.
   ಏನೇ ಇರಲಿ. ನನ್ನನ್ನೂ ಗೆಳೆಯ ರಾಕೇಶ್ ರನ್ನು ‘ಅಪ್ತಮಿತ್ರರನ್ನಾಗಿ’ ಮಾಡಿದ್ದಕ್ಕೆ ನಿಮಗೆ ಶರಣು ಶರಣಾರ್ಥಿಗಳು.

   ಸಾತ್ವಿಕ್
   ನಿಮ್ಮ ಸ್ನೇಹಿತ

   ಉತ್ತರ
   • guru
    ನವೆಂ 9 2011

    ನಮಸ್ತೆ, ನಿಮಗೂ ರಾಕೇಶ್ ಗೂ ಬಹಿಷ್ಕಾರದ ವಿಷಯ ನನಗೆ ಗೊತ್ತಿಲ್ಲ. ಹಾಗೇ ಸುಮ್ಮನೇ ಮಾತಿಗೆ ಹೇಳುವಾಗ ನಿಮ್ಮ ಹೆಸರು ಉಲ್ಲೇಖಿಸಿದ್ದೇನಷ್ಟೆ..

    ಉತ್ತರ
  • ನಿಜ ’ಗುರು’ಗಳೇ,
   ಊರಿಗೆಲ್ಲ ಕನ್ನಡ ಪಾಠ ಮಾಡಿ ತಾವುಗಳು ’ಇಂಗ್ಲೀಷ್’ನಲ್ಲಿ ಮಿಂಚೆ ವಿನಿಮಯ ಮಾಡಿಕೊಳ್ಳುವುದನ್ನು,ಫ಼ೇಸ್ಬುಕ್ಕಿನ ತಮ್ಮ ವಾಲ್ನಲ್ಲಿ ಇಂಗ್ಲೀಷಿನಲ್ಲಿ ಸ್ಟೇಟಸ್ ಹಾಕಿಕೊಳ್ಳುವುದನ್ನು,ಹಿಂದಿ ಹೇರಿಕೆಯನ್ನು ವಿರೋಧಿಸುತ್ತಲೇ ಹಿಂದಿ ಭಾಷೆಯನ್ನೆ ವಿರೋಧಿಸುವುದನ್ನು ಇವೆಲ್ಲವನ್ನು ’ಯಾಕೆ’ ಅಂತ ಕೇಳುವುದು ’ಕಿರಿಕಿರಿ’ಯೇ ಬಿಡಿ 🙂
   ಖುದ್ದು ತಾವುಗಳೆ ಐಟಿ ಉದ್ಯಮದಲ್ಲಿ ಕುಳಿತು ತಿಂಗಳು ತಿಂಗಳು ಹಣ ಏಣಿಸುತ್ತಲೇ ಮತ್ತದೇ ಅನ್ನ ಕೊಡುವ ಉದ್ಯಮವನ್ನ,ಕೆಲಸಗಾರರನ್ನು ಟಿಕೀಸುವುದನ್ನು ಪ್ರಶ್ನಿಸುವುದು ’ಕಿರಿಕಿರಿ’ಯೇ ಬಿಡಿ.
   ದೆಹಲಿಯ ಹೈ-ಕಮಾಂಡ್ ಬಗ್ಗೆ ಕಿಡಿಕಿಡಿಯಾಗುವವರಿಗೆ ತಾವು ನಡೆಸುತ್ತಿರುವುದು ಹೈಕಮಾಂಡ್ ಸಂಸ್ಕೃತಿ ಅನ್ನುವುದು ಅರಿವಿಗೆ ಬರಲಾರದಲ್ಲವೇ?
   ತಮ್ಮ ಪ್ರತಿಕ್ರಿಯೆಯ ದಾಟಿ ನನ್ನ ಲೇಖನದ ’ಸರ್ವಾಧಿಕಾರಿ,ಕೋಲೆ ಬಸವ’ ಮುಂತಾದ ಪದಗಳನ್ನ ಬೆಂಬಲಿಸುವಂತಿದೆ… ಧನ್ಯವಾದಗಳು 🙂

   ಅಂದ ಹಾಗೆ,ನಾನಾಗಿಯೇ ನಿಮ್ಮ ಬಳಗಕ್ಕೆ ಬಂದವನಲ್ಲ.ಗೋಳಾಡುವು ಅಗತ್ಯವೇನಿಲ್ಲ, ಸತ್ಯ ಹೊರಬರುತ್ತದೆ ಅಂತೇನು ವ್ಯಥೆ ಪಡಬೇಕಿಲ್ಲ.ನಾನು ಹೆಚ್ಚೇನು ಹೇಳುವುದಿಲ್ಲ.

   ಉತ್ತರ
   • guru
    ನವೆಂ 9 2011

    ಏನಾದ್ರೂ ಮಾಡ್ಕಳಿ ಹೋಗ್ರೀ..

    ನೀವು ಉತ್ತರ ಕೊಡುವ ಧಾಟಿ ನೋಡಿದರೇನೇ ಗೊತ್ತಾಗುತ್ತದೆ ಎಷ್ಟು ಕಿರಿಕಿರಿ ಮಾಡಿರಬಹುದು ಅಂತ.!

    ಉತ್ತರ
 4. Kumar
  ನವೆಂ 8 2011

  ’ಬಳಗ’ದ ಹೆಸರೇನು?

  ಉತ್ತರ
  • ನವೆಂ 8 2011

   ಕುಮಾರ್,
   ದಯವಿಟ್ಟು ಕ್ಷಮಿಸಿ.

   ಸಾತ್ವಿಕ್

   ಉತ್ತರ
  • ಆ ಗುಂಪಿನ ಬಗ್ಗೆ, ಗುಂಪಿನ ಉದ್ದೇಶದ ಬಗ್ಗೆ ನನಗೆ ಗೌರವವಿದೆ ಹಾಗಾಗಿ ಇಂತ ವಿಷಯದಲ್ಲೆಲ್ಲ ನಾನು ಹೆಸರು ತರ ಬಯಸುವುದಿಲ್ಲ ನರೇಂದ್ರ.
   ಕ್ಷಮಿಸಿ.

   ಉತ್ತರ
   • Kumar K
    ನವೆಂ 24 2011

    ಅಯ್ಯೋ ರಾಕೇಶ್ ಅದರಿಂದ ಏನಾದರು ತೊಂದರೆ ಆಗುತ್ತಿದರೆ ಸಮಾಜಕ್ಕೆ ಆಗ ಅದರ ಹೆಸರನ್ನ ಹೇಳಬಾರದು ಒಪ್ಪ್ಕೊತಿನಿ…ಆದರೆ “ಆ” ಗುಂಪಿನ ಹೆಸರು ಹೇಳಕ್ಕೆ ಏನು ತೊಂದರೆ ಇಲ್ಲ….

    @ಕುಮಾರ್ ==> ನಿಮಗೆ ಆ ಗುಂಪಿನ ಬಗ್ಗೆ ನಿಮಗೆ ತಿಳ್ಕೊಬೇಕು ಅಂದಿದ್ದರೆ ಒಂದು ಕ್ಲೂ ಕೊಡ್ತೀನಿ ನೀವು ಊಹಿಸ ಬೇಕು…ಆ ಘನವೆತ್ತ ಗುಂಪು ಅದಕ್ಕೆ
    “ಕದಂಬರ ತಮ್ಮ ಮೊದಲ ರಾಜಧಾನಿಯ ಹೆಸರನ್ನು ಇಟ್ಟು ಕೊಂಡಿದ್ದಾರೆ !!!”

    ಉತ್ತರ
    • Kumar
     ನವೆಂ 24 2011

     ಕುಮಾರ್ ಕೆ ಅವರೆ, ಸುಳಿವು ನೀಡಿದ್ದಕ್ಕೆ ಧನ್ಯವಾದಗಳು.
     ನೀವು ಹೇಳಿದ ಹೆಸರಿನ “ಬಳಗ” ತಿಳಿಯಿತು.

     ಉತ್ತರ
     • Kumar K
      ನವೆಂ 24 2011

      ಆ ಗುಂಪಿನವರಿಂದ ಬೇಗನೆ ರಿಪ್ಲೈ ಕೂಡ ಬರಬಹುದು…ಸ್ವಲ್ಪ ಕಾಯಿರಿ ..ಯಾಕೆ ಅಂದ್ರೆ ಅವರ ಗುಂಪಿನವರು ಅದನ್ನೇ ಕಾಯಿತ ಇರ್ತಾರೆ 🙂

      ಉತ್ತರ
 5. ನವೆಂ 8 2011

  ಅದ್ಯಾವನ್ರೀ ರಾಕೇಶ್, ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕೋ ವೀರ. ಒಂಚೂರಾದ್ರೂ ಪ್ರಜ್ಣೆ ಇರದವನಿರಬೇಕು, ಒಂದು ವಿಷಯದ ಬಗ್ಗೆ ಪರ ಮತ್ತು ವಿರೋಧದ ಪ್ರತಿಕ್ರಿಯೆಗಳನ್ನು ಆದರಿಸಿ, ಅದಕ್ಕೆ ಸಮಂಜಸ ಪ್ರತಿಕ್ರಿಯೆ ಕೊಡದವನು, ಇಂಥವನಿಗೆ ನಾಯಕತ್ವ ಕೊಟ್ಟ ಹಿಂಬಾಲಕರು ಜೀ ಹುಜೂರ್…… ಎಂಬಂತವರೇ ಇರಬೇಕು.

  ಬೆಂಗಳೂರಿನ ಫ್ರೀಡಂಪಾರ್ಕಿನ ಇನ್ನೊಂದು ಬದಿಯಲ್ಲಿ ಅಮೇರಿಕಾದ ವೀಸಾ ಕೊಡಲು ಶುರು ಮಾಡಿದರೆ,ಅಲ್ಲಿ ಹೋರಾಟ ಮಾಡುತ್ತಿರೋ ಸಾಫ್ಟ್ ವೇರ್ ಮಂದಿಯೆಲ್ಲ ಹೋರಾಟ ಬಿಟ್ಟು ವೀಸಾಕ್ಕಾಗಿ ಕ್ಯೂ ನಿಲ್ಲುತ್ತಾರೆ. ಈ ಮಾತಂತು ಅಕ್ಷರ ಸಹ ಸತ್ಯ.

  ಗುರು,

  ಫೇಕ್ ಐಡಿ ಇಟ್ಕೊಂಡು ಮಾತಾಡೊ ನಿಮಗೆ ತತ್ವ ಹೇಳೋ ಯೋಗ್ಯತೆಯೇ ಇಲ್ಲ. ಇನ್ನು ಆ ಬಳಗದ ಜೀ.. ಹುಜೂರ್.. ನೀವು…. ಅನ್ನೋದು ಗೊತ್ತಿದೆ, ಸಮುದಾಯದ ಜವಾಬ್ದಾರಿಯ ಬಗ್ಗೆ ನಿಮ್ಮಿಂದ ಬೇರೆ ಪಾಠ ಕಲಿಯಬೇಕ… ? ಒಂದಷ್ಟು ಲೇಖಕರನ್ನು ಒಗ್ಗೂಡಿಸಿ, ನಿಜವಾದ ಸಾಮಾಜಿಕ ಕಳಕಳಿಯ ವ್ಯಕ್ತಿಗಳನ್ನು ದಾರಿ ತಪ್ಪಿಸುತ್ತಿರುವ ನಿಮ್ಮ ನಾಯಕನಿಗೆ ಅವನ ಪಟಾಲಂಗಳಿಗೆ ಯಾವುದೇ ಪರ ವಿರೋಧದ ಪ್ರತಿಕ್ರಿಯೆಗಳನ್ನು ಉತ್ತರಿಸುವ ಯೋಗ್ಯತೆ ಇಲ್ಲ.

  ರಾಕೇಶ್,
  ನಿಮ್ಮ ಸಾಮಾಜಿಕ ಕಳಕಳಿಗೆ ಇಂಥ ಗೋಮುಖ ವ್ಯಾಘ್ರಗಳ ಮುಂದಾಳತ್ವ ಬೇಡ ಇನ್ನು, ಸದ್ಯ ಪೀಡೆ ತಾನಾಗೆ ತೊಲಗಿತು ಎಂದು ನೆಮ್ಮದಿಯಿಂದಿರಿ.

  ಅರವಿಂದ್
  http://aravindhrao.wordpress.com

  ಉತ್ತರ
  • guru
   ನವೆಂ 9 2011

   “ಇನ್ನು ಆ ಬಳಗದ ಜೀ.. ಹುಜೂರ್.. ನೀವು…. ಅನ್ನೋದು ಗೊತ್ತಿದೆ,”

   ಹೌದಾ? ಹೇಗೆ ಗೊತ್ತು? ಪುರಾವೆ? ನನ್ನದು ಫೇಕ್ ಐಡಿ ಅಂತ ಗೊತ್ತಾದ ಮೇಲೆ ನಾನು ಜೀ ಹುಜೂರ್ ಅಂತ ಹೇಗೆ ಗೊತ್ತಾಯಿತು. ಅತೀಂದ್ರಿಯ ಶಕ್ತಿ ನಿಮ್ಮಲ್ಲಿದೆಯೇ?!

   “ದಾರಿ ತಪ್ಪಿಸುತ್ತಿರುವ ನಿಮ್ಮ ನಾಯಕನಿಗೆ”

   ನಮ್ಮ ನಾಯಕನೇ? ಅವನ್ಯಾರು?!

   “ಹೋರಾಟದ ಹೆಸರಿನಲ್ಲಿ ಹೊಟ್ಟೆ ಹೊರಕೊಳ್ಳೋದನ್ನು ನಿಲ್ಲಿಸೋಕೆ ಹೇಳಿ.”

   ಯಾವ ಹೋರಾಟ? ಯಾರು ಹೊಟ್ಟೆ ಹೊರಕೊಳ್ಳುತ್ತಿದ್ದಾರೆ?

   ನನ್ನ ಅಭಿಪ್ರಾಯ ಹೇಳಿದರೆ ಹೀಗೆಲ್ಲಾ ಮೂದಲಿಸುತ್ತಿದ್ದೀರಲ್ಲಪ್ಪ! ನಿಮ್ಮದು ಇನ್ಯಾವ ಆರೋಗ್ಯಕರ ಮನಃಸ್ಥಿತಿ ಇರಬಹುದು?!

   ಉತ್ತರ
 6. ನವೆಂ 9 2011

  ಬಹಿಷ್ಕಾರ ಮಾಡಿದ್ರೆ ಮಾಡ್ಕೊಳ್ಳಿ, ನಿಮ್ಮದೇ ಆದ ಕೆಲವು ಸಿದ್ಧಾಂತಗಳಿವೆ ಅವನ್ನು ಮೀರಿ ಜೀ ಹುಜೂರ್ ಎಂಬುವಷ್ಟು ದುರ್ಬಲ ಮನಸ್ಸಿನವರಲ್ಲ ನೀವು, ಪರ ಮತ್ತು ವಿರೋಧದ ಪ್ರತಿಕ್ರಿಯೆಗಳನ್ನು ಆದರಿಸಿ, ಅದಕ್ಕೆ ಸಮಂಜಸ ಪ್ರತಿಕ್ರಿಯೆ ಕೊಡಬೇಕಾಗಿಲ್ಲ, ನಮ್ಮ ನಿಲುವು ಏನಿದೆಯೋ ಅದನ್ನೆ ವ್ಯಕ್ತ ಪಡಿಸಬೇಕಲ್ಲವೆ..

  ಉತ್ತರ
 7. ನವೆಂ 11 2011

  > ಬಹಿಷ್ಕಾರಕ್ಕೂ ಉಚ್ಚಾಟನೆಗೂ ಇರುವ ವ್ಯತ್ಯಾಸ ಆದಷ್ಟು ಬೇಗ ಕಂಡುಕೊಳ್ಳಿ.
  > ಪ್ರಜಾಪ್ರಭುತ್ವಕ್ಕೂ ಹಕ್ಕಿನ ದುರ್ಬಳಕೆಗೂ ವ್ಯತ್ಯಾಸವಿದೆ. ಅದನ್ನೂ ಕಂಡುಕೊಳ್ಳಿ.
  > ಸಮಾಜ ಸುಧಾರಣೆಯಲ್ಲಿ ಸ್ವಂತ ಚಿಂತನೆಗೂ, ಇನ್ನೊಬ್ಬರ ನಿಲುವುಗಳನ್ನು ಪ್ರಶ್ನಿಸುತ್ತಾ ಅದನ್ನೇ ವಿತಂಡ ವಾದವಾಗಿಸುವುದಕ್ಕೂ ಇರುವ ವ್ಯತ್ಯಾಸವನ್ನು ಕಂಡುಕೊಳ್ಳಿ.
  > ಹಾಗೇ, ಒಂದು ನಿಲುವನ್ನು ನಂಬಿ ಕೆಲಸ ಮಾಡಿ ಅದು ತಪ್ಪಾದರೆ ಸರಿಪಡೆಗೆ ತೆರೆದಿರುವುದು, ಸರಿಯಾದರೆ ಅದನ್ನು ಬಹಿರಂಗವಾಗಿ ಹೇಳಿಕೊಂಡು ಆ ಪುಣ್ಯ ಕಾರ್ಯದತ್ತ ಹೆಚ್ಚು ಜನರನ್ನು ಆಕರ್ಶಿಸುವುದಕ್ಕೂ, ಸ್ವಂತ ಚಿಂತನೆ ಮಾಡದೇ ಬರೀ ಪ್ರಶ್ನೆ ಕೇಳುತ್ತಾ ಇರುವವರಿಗೆ ಉತ್ತರ ಸಿಗದೇ ಇರುವುದಕ್ಕೂ ವ್ಯತ್ಯಾಸ ಕಂಡುಕೊಳ್ಳಿ.
  > ಅಂತಹ ಪ್ರಶ್ನೆಗಳಿಗೆ ಉತ್ತರ ನೀಡುವುದೇ ಸಮಾಜ ಸುಧಾರಣೆಯಲ್ಲ. ಒಂದು ನಂಬಿಕೆಯ ದಾರಿಯಲ್ಲಿ ನಡೆದು ಕೆಲಸ ಮಾಡಿ ತೋರಿಸುವುದೇ ಸುಧಾರಣೆಯ ರೀತಿ. ಇದನ್ನೂ ತಿಳಿದುಕೊಳ್ಳಲು ಪ್ರಯತ್ನಿಸಿ.
  > ಸತ್ಯ ಕಹಿಯಿರುವುದು ಹೌದು, ಆದರೆ ಕಹಿಯಿರುವುದೆಲ್ಲಾ ಸತ್ಯವಲ್ಲ ಎಂಬುದನ್ನೂ ನೆನಪಿಸಿಕೊಳ್ಳಿ.

  ಉತ್ತರ
  • guru
   ನವೆಂ 11 2011

   Perfect Reply. Rakesh idannu artha madkondre saaku.

   ಉತ್ತರ
   • ’ಗುರು’ಗಳೇ ಮೊದಲು ನಿಮ್ಮ ನಿಜವಾದ ಹೆಸರಿನಲ್ಲಿ ಬರೆಯುವ ಮನಸ್ಸು ಮಾಡಿ.
    ನಾನು ಮೊದಲೇ ಹೇಳಿದಂತೆ ’ಜೈ’ ಅನ್ನಲು ನನಗೆ ಬರುವುದಿಲ್ಲ. ಅರ್ಥವಾಗಬೇಕಾದದ್ದು ನನಗೆ ಆಗಿದೆ.ಹಿಂದಿ ಹೇರಿಕೆ ತಪ್ಪು ಅಂತ ಮಾತನಾಡುವವರಿಗೆ ’ಅಭಿಪ್ರಾಯ ಹೇರಿಕೆ’ ಮಾಡುವುದು ತಪ್ಪು ಅನ್ನಿಸುವುದಿಲ್ಲ.

    ಉತ್ತರ
  • ಬಹಳಷ್ಟು ’ಕೊಳ್ಳಲು’ ಹೇಳಿದಿರಪ್ಪಾ ನೀವು 🙂
   ಪ್ರಶ್ನಿಸದೆ ಯಾವುದನ್ನೂ ಒಪ್ಪಿಕೊಳ್ಳಬೇಡಿ ಅನ್ನುವವರು ನೀವೆ.ಪ್ರಶ್ನಿಸಿದರೆ ’ಉಚ್ಚಾಟನೆ’ ಮಾಡುವವರು ನೀವೇ!
   ಸ್ವಂತ ಚಿಂತನೆಯಿರುವುದಕ್ಕೆ ಪ್ರಶ್ನಿಸಿದ್ದು. ನನಗೇ ಬುದ್ದಿ ಹೇಳುವ ತಮಗೇ ತಮ್ಮ ಗುಂಪಿನವರು ಮಾತನಾಡಿದ ಮಾತುಗಳು ತಪ್ಪು ಅಂತ ಅನ್ನಿಸಿಯೂ ಇಲ್ಲ,ಅನ್ನಿಸುವುದು ಇಲ್ಲ.ಯಾಕೆಂದರೆ ಅದು ನಿಮ್ಮ ’ಸ್ವಂತ ಚಿಂತನೆ’…! ಅಲ್ಲ ರೀ, ತಿಂಗಳು ತಿಂಗಳು ನೋಟಿನ ಕಂತೆ ಏಣಿಸುವಾಗ ’ಐಟಿ’ ಬಗ್ಗೆ ಏನು ಅನ್ನಿಸುವುದಿಲ್ಲ ಅಲ್ವಾ?
   ಡಬಲ್ ಸ್ಟಾಂಡರ್ಡ್ ನನಗೆ ಬರುವುದಿಲ್ಲ.ಅದು ನನಗೇ ಬೇಕಾಗಿಯು ಇಲ್ಲ.

   ನನ್ ಕಥೆ ಏನೋ ಬಿಡಿ. ’ಸಾತ್ವಿಕ್’ ಅವ್ರನ್ನ ’ಉಚ್ಚಾಟನೆ’ (ನಿಮ್ಮ ಭಾಷೆಯಲ್ಲಿ) ಮಾಡಿದ್ದು ಯಾಕೆ ನೀವೂ ’ಕಂಡುಕೊಳ್ಳಿ’, ’ತಿಳಿದುಕೊಳ್ಳಿ’

   ಉತ್ತರ
   • Kumar K
    ನವೆಂ 27 2011

    ರಾಕೇಶ್, ಈವರುಗಳು ಮಾಡುವ ಇನ್ನೊಂದು ಕರ್ಮ ನೋಡಿ…ಗಣೇಶ್ ಮತ್ತು ಭೈರಪ್ಪ ಅವರ ಬಗ್ಗೆ ಇವರುಗಳು ಬರೆದಿರುವ ಲೇಖನ ಯಾವ ಮಟ್ಟದ್ದು ಅಂತ…ಅವರ ಗುಂಪಿನ ಈ ಲೇಖನದಲ್ಲಿ ಯಾವದೇ ಸತ್ಯ ಇಲ್ಲದೆ ಇರದೇ ಇರೋ ಕಾಮೆಂಟ್ಸ್ ಗಳಿಗೆ approve ಮಾಡ್ತಾರೆ ಅಂಡ್ ಅದರ ಬಗ್ಗೆ ನಿಜ ಬರೆದಿರೋ ಕಾಮೆಂಟ್ಸ್ ಗಳಿಗೆ approve ಕೊಡಲ್ಲ…ಮತ್ತೆ ಲೇಖನ ದಲ್ಲಿ ಹೇಳೋದು “ತಮ್ಮದು ಸತ್ಯದ ಹುಡುಕಾಟ” ಅಂತ ಹೇಳೋದ ಹಾಸ್ಯಸ್ಪದ 🙂 …ಈವರಗಳು ಮಾಡುವ ಜೀ ಹುಜೂರ್ ಬಗ್ಗೆ ಗೊತ್ತಾಗತ್ತಲ್ಲ…
    ಲಿಂಕ್ : http://enguru.blogspot.com/2011/11/praadeshikate-shataavadhaanada.html

    ಉತ್ತರ
 8. ನವೆಂ 11 2011

  @guru : ಹೆಸರು ಬದಲಿಸಿಕೊಂಡು ನಾನಲ್ಲ ಅಂದ್ರೆ ಹೇಗೆ ಗುರು ? ಮುಖವಾಡ ಕಳಚಿ ನಿಮ್ಮ ನಿಜವಾದ ಹೆಸರಿನಲ್ಲಿ ಪ್ರತಿಕ್ರಿಯೆ ಹಾಕೋ ಧ್ಯೆರ್ಯ ಮಾಡಿ.

  ಅರವಿಂದ್
  http://aravindhrao.wordpress.com

  ಉತ್ತರ

Trackbacks & Pingbacks

 1. ದೇಶ – ಭಾಷೆಗಳ ನಡುವೆ | ನಿಲುಮೆ
 2. ದೇಶ – ಭಾಷೆಗಳ ನಡುವೆ – ನಿಲುಮೆ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments