ಬುವಿಯ ಸುಡುತ್ತವೆಯೇ ಸೌರಜ್ವಾಲೆಗಳು?
-ವಿಷ್ಣುಪ್ರಿಯ
ನಿಜಕ್ಕೂ ಪ್ರಳಯವಾಗುತ್ತದೆಯೇ? ಸೌರಜ್ವಾಲೆಗಳು ಭೂಮಿಯನ್ನು ಸುಡುತ್ತವೆಯೇ? ಸೂರ್ಯನಲ್ಲಿನ ಕಾಂತವಲಯದಲ್ಲಿ ಅತಿಯಾದ ಚಟುವಟಿಕೆಗಳು ಕಾಣಿಸಿಕೊಳ್ಳುವ ಮೂಲಕ ಉತ್ಪತ್ತಿಯಾಗುವಂಥ ಶಕ್ತಿಯುತ ಸೌರಜ್ವಾಲೆಗಳಿಂದ ಭೂಮಿ ಸರ್ವನಾಶವಾಗುತ್ತದೆ ಎಂಬ ಮಾತು ನಿಜವೇ?… ಈ ವಿಚಾರವಾಗಿ ಹುಟ್ಟಿಕೊಳ್ಳುವ ಪ್ರಶ್ನೆಗಳಿಗೆ ಕೊನೆಯಿಲ್ಲ. ಅವಕ್ಕೆ ಸ್ಪಷ್ಟವಾದ ಉತ್ತರಗಳೂ ಇಲ್ಲ.
ಇನ್ನು ಕೆಲವೇ ವಾರಗಳು. 2012ನೇ ಇಸವಿ ಕಾಲಿಡುತ್ತಿದೆ. `2012′ ಎಂಬ ಧ್ವನಿ ಕೆಳಿದ ತಕ್ಷಣ ಬಹಳಷ್ಟು ಜನ ಜೀವನದ ಬಗೆಗಿನ ಎಲ್ಲ ಆಸೆಗಳನ್ನೂ, ಭರವಸೆಗಳನ್ನೂ ಕಳೆದುಕೊಳ್ಳುತ್ತಿದ್ದಾರೆ. ಭೂಮಿಯ ಕಥೆಯೇ ಮುಗಿದು ಹೋಯಿತು; ಪ್ರಳಯ ಆಗುತ್ತೆ; ಸೂರ್ಯ ಉಗುಳಿದ ಸೌರಜ್ವಾಲೆಗಳು ಭೂಮಿಯನ್ನು ಸುಟ್ಟು ಹಾಕುತ್ತವೆ… ಎಂಬೆಲ್ಲ ಸುದ್ದಿಗಳು ಮೇಲಿಂದ ಮೇಲೆ ಪ್ರಸಾರವಾಗಿ ಜನರಲ್ಲಿನ ಭೀತಿಯನ್ನು ಇನ್ನಷ್ಟು ಹೆಚ್ಚಿಸುತ್ತಿವೆ. ಹಲವು ಜನರಲ್ಲಿ ಈ ಎಲ್ಲ ವಿಚಾರಗಳ ಬಗ್ಗೆ ಭೀತಿಯಿದೆ ನಿಜ. ಆದರೆ ಅವರೆಲ್ಲ ಇಂಥದ್ದೇನೂ ಆಗುವುದಿಲ್ಲ ಎಂದು ತಮ್ಮನ್ನು ತಾವೇ ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ.
ಮತ್ತಷ್ಟು ಓದು 
ಉಡುಪಿಯ ಕೃಷ್ಣ ತಿರುಗಿ ನಿಂತಷ್ಟು ಸುಲಭವಲ್ಲ ’ಮಡೆ ಸ್ನಾನ’ ನಿಲ್ಲುವುದು…!
– ರಾಕೇಶ್ ಶೆಟ್ಟಿ
“ಮಡೆಸ್ನಾನ ಅಥವಾ ಎಂಜೆಲೆಲೆ ಮೇಲೆ ಉರುಳು ಸೇವೆ ಮಾಡುವುದನ್ನು ನಿಷೇಧಿಸುವುದರಿಂದ ಯಾವ ರೀತಿ ಲಾಭವೂ ಇಲ್ಲ ನಷ್ಟವೂ ಇಲ್ಲ. ನಾನು ಈ ವಿಷಯದಲ್ಲಿ ತಟಸ್ಥ ನೀತಿ ಅನುಸರಿಸುತ್ತೇನೆ” ಹೀಗಂತ ಹೇಳಿರೋದು ಪೇಜಾವರಶ್ರೀಗಳು…!
ಒಂದು ಕಡೆ ದಲಿತ ಕಾಲೋನಿಗಳಲ್ಲಿ ಓಡಾಡಿ ಹಿಂದೂ ಧರ್ಮವನ್ನು ಉದ್ಧರಿಸುವ ಮತ್ತು ಮತಾಂತರವನ್ನ ವಿರೋಧಿಸುವ ಮಾತನಾಡುವ ಶ್ರೀಗಳಿಗೆ ಮಡೆಸ್ನಾನದಿಂದ ಯಾವ ಧರ್ಮಕ್ಕೆ,ಹೇಗೆ ನಷ್ಟವಾಗಬಹುದು ಮತ್ತು ಹಿಂದೂ ಅನ್ನುವ ಧರ್ಮದ ಬಗ್ಗೆ ಮಾಧ್ಯಮಗಳ ಮೂಲಕ ಜಗತ್ತಿಗೆ ಯಾವ ಸಂದೇಶ ತಲುಪಬಹುದು ಅನ್ನುವುದರ ಅರಿವಿರಲಿಕ್ಕಿಲ್ಲವಾ? ಇದ್ದರೆ ಈ ರೀತಿ ಮೈಗೆ ಎಣ್ಣೆ ಹಚ್ಚಿಕೊಂಡವರಂತೆ ಹೇಳಿಕೆ ನೀಡುತಿದ್ದರಾ?
’ಮಡೆ ಸ್ನಾನ’ ಅನ್ನುವ So Called ಧಾರ್ಮಿಕ ನಂಬಿಕೆ(!?) ನಡೆದುಕೊಂಡು ಬಂದ ಹಾದಿಗೆ ೪೦೦ ವರ್ಷಗಳ ಇತಿಹಾಸವಿದೆ.ಆದರೆ ತೀರಾ ಇದು ಮಾಧ್ಯಮಗಳಲ್ಲಿ ದೊಡ್ದ ಮಟ್ಟದ ಸುದ್ದಿ ಮಾಡಲಿಕ್ಕಾರಂಭಿಸಿದ್ದು ಬಹುಷಃ ಕಳೆದ ವರ್ಷದಿಂದಲೇ…! ಸದ್ಯ.ಈಗಲಾದರೂ ನಮ್ಮ ದನಿ ಕೇಳಿಬರುತ್ತಿದೆ ಅನ್ನುವ ಸಂತೋಷದ ಜೊತೆ ಜೊತೆಗೆ ಇಂತ ಅನಿಷ್ಟ ಪದ್ಧತಿಗಳಿಗೆ ಬ್ರೇಕ್ ಹಾಕಬೇಕಾದ ಸರ್ಕಾರ ಮತ್ತು ಸರ್ಕಾರದ ಸಚಿವರೇ ’ನೋ ಕಮೆಂಟ್ಸ್’ ಅನ್ನುವುದು ನೋಡಿ ಬೇಸರವೂ ಆಗುತ್ತದೆ.
ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ – ಒಂದು ಸಮೀಕ್ಷೆ
- ಇದೆ
- ಇಲ್ಲ
- ಹೌದು
- ಇಲ್ಲ
ವಿಶ್ವ ಸಂಸ್ಥೆ ಹೆಸರಲ್ಲಿ ಮತ್ತಿತರ ಮಿಂಚೆ ಮೋಸಗಳು!!!
–ಪ್ರಶಸ್ತಿ ಪಿ
ಶೀರ್ಷಿಕೆ ನೋಡಿ ಆಶ್ಚರ್ಯ ಆಗ್ತಾ ಇದೆಯಾ? ಜೊತೆಗಿರುವ ಚಿತ್ರಗಳನ್ನು ನೋಡಿ.. ವಿಶ್ವಸಂಸ್ಥೆಯಿಂದ ಎಂಬ ಸಂದೇಶವನ್ನು ಒಳಪಟ್ಟಿಯಲ್ಲಿ ನೋಡಿ ಒಮ್ಮೆ ಆಶ್ಚರ್ಯವಾಯಿತು.. ಅದು spam ಗೆ ಹೋಗದೇ ಒಳಪೆಟ್ಟಿಗೆಗೇ ಬಂದಿದೆಯೆಂದು ಒಮ್ಮೆ ಆಶ್ಚರ್ಯವಾಯಿತು..
ತೆಗೆದು ನೋಡಿದರೆ “ನಿಮಗೆ ಬರಬೇಕಾದ ಸಂಬಳ ಬಂದಿದೆಯಾ?” ಎಂಬ ಸಂದೇಶ. ತಕ್ಷಣ ನಿಮ್ಮ ಹೆಸರು, ವಿಳಾಸ, ಪಾಸಪೋರ್ಟು ನಂಬರ್, ಮೊಬೈಲು, ಸ್ಥಿರ ದೂರವಾಣಿ ನಂಬರುಗಳೊಂದಿಗೆ ಪ್ರತಿಕ್ರಯಿಸಿ ಎಂಬ ಒಕ್ಕಣೆ ಬೇರೆ. ಅವರು ಕೊಟ್ಟಿದ್ದ ವೆಬ್ ಕೊಂಡಿ ಸರಿಯಾಗೇ ಇದೆ.. ಸಂಶಯ ಶುರು ಆಯ್ತು..
ನಾನು ವಿಶ್ವಸಂಸ್ಥೆಗೆ ಯಾವ ರೀತಿಯಲ್ಲೂ ಸಂಬಂಧ ಪಟ್ಟವನಲ್ಲ..ಅಂತಹದರಲ್ಲಿ ಅವರೇಕೆ ನನಗೆ, ಯಾತಕ್ಕಾಗಿ ಸಂಬಳ ಕೊಡಬೇಕು? ಮೊಬೈಲ್ ನಂಬರು, ಇತರೆ ಮಾಹಿತಿಗಳನ್ನ ದುರುಪಯೋಗಪಡಿಸಿಕೊಳ್ಳುವ ಯಾವುದೋ ವ್ಯವಸ್ಥಿತ ಜಾಲ ಅದಿರಬೇಕು ಅಂತ ಆ ಮಿಂಚೆಯನ್ನು ನಾಶ ಮಾಡಿದೆ. ಅದಕ್ಕೂ ಮೊದಲು ಯಾವ ಸಂಬಳ ಎಂಬ ಉತ್ತರ ಕಳಿಸಿದೆ. ಯಾವ ಪ್ರತಿಕ್ರಿಯೆಯೂ ಬರಲಿಲ್ಲ..
ನಿಮಗೂ ಇಂಥಹ ಸಂದೇಶ ಬರಬಹುದು.. ಅವರು ಕೇಳಿದ ಮಾಹಿತಿ ಕೊಟ್ಟು ಮೋಸ ಹೋಗದಿರಿ.. ಮತ್ತು ಆ ಮಿಂಚೆಯನ್ನು ಈ ವಿಳಾಸಕ್ಕೆ forward ಮಾಡಿರಿ.. FraudDesk@city-of-london.pnn.police.uk
ಇಲ್ಲೂ ದೂರು ನೀಡಬಹುದು http://www.indiacyberlab.in/cybercrimes/report.htm. ಅದರಲ್ಲಿ ನೀಡಿರೋ ಕೊಂಡಿ ಕೆಲವೊಮ್ಮೆ ತೆರೆಯುವುದಿಲ್ಲ.. ಆಗ ಮತ್ತೆ ಪ್ರಯತ್ನಿಸಿ
ಮಡೆಸ್ನಾನದ ಮರ್ಮವೇನು ?
-ಸಂತೋಷ ಕುಮಾರ್
ಕುಕ್ಕೆ ಸುಬ್ರಮಣ್ಯದಲ್ಲಿ ಜರುಗ ಬೇಕಾಗಿದ್ದ ಮಡೆಸ್ನಾದ ಆಚರಣೆಯನ್ನು ರದ್ದುಗೊಳಿಸಬೇಕೇಂದು ಅಲ್ಲಿನ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಆದರೆ ದಿಡೀರ್ ಬೆಳವಣಿಗೆ ಎಂಬಂತೆ ನಿಷೇಧದ ಆದೇಶದ ಮರುದಿನವೇ ನಿಷೇಧವನ್ನು ರದ್ದುಪಡಿಸುವ ಆದೇಶವನ್ನೂ ಸಹ ನೀಡಲಾಯಿತು. ಇದನ್ನು ರಾಜಕೀಯ ವ್ಯವಸ್ಥೆಯ ಲೋಪದೋಷ ಅಥವಾ ದೌರ್ಬಲ್ಯ ಹಾಗೂ ಆಚರಣೆಯ ಅಥವಾ ಅದನ್ನು ಆಚರಿಸುವವರ ಸಂಸ್ಕೃತಿಯ ವಿಶಿಷ್ಟತೆ ಎಂಬ ಎರಡೂ ವಿಭಿನ್ನ ಆಯಾಮಗಳಲ್ಲಿ ವಿಶ್ಲೇಷಿಸಬಹುದು. ಇಲ್ಲಿ ಎರಡನೇ ಆಯಾಮದಿಂದ ಈ ಘಟನೆಯನ್ನು ವಿಶ್ಲೇಷಿಸಲು ಪ್ರಯತ್ನಿಸಲಾಗುವುದು. ಕುಕ್ಕೆ ಸುಬ್ರಮಣ್ಯದ ಮಡೆಸ್ನಾನದ ಆಚರಣೆಯನ್ನು ನಿಷೇಧಿಸಬೇಕೆಂಬ ಆದೇಶ ಹೊರಡಿಸುತ್ತಿದ್ದಂತೆ ವಿಶೇಷವಾಗಿ ನಮಗೆ ಆ ಆಚರಣೆಯಲ್ಲಿ ಭಾಗವಹಿಸುವ ಭಕ್ತರು ಹೇಗೆ ಪ್ರತಿಸ್ಪಂದಿಸುತ್ತಾರೆ ಎಂಬ ಕುತೂಹಲವಿತ್ತು.
ಎಚ್ಚರ ಬ್ಲಾಗಿಗರೆ, ಕಳ್ಳರಿಹರು
-ಪ್ರಶಸ್ತಿ ಪಿ.
ಒಳ್ಳೆ ಸಾಹಿತ್ಯವನು ಸೃಷ್ಟಿಸಿಯೂ ಮುಂದೆ
ಕಳ್ಳನೆಂದೊಂದು ದಿನ ಬಿರುದು ಬೇಕೆ?
ನೀ ಮೊದಲು ಬರೆದದ್ದು ಎಂಬುದಕೆ ಏನುಂಟು
ಮಿಥ್ಯಾರೋಪಗಳ ಒಪ್ಪಬೇಕೆ?
ಪುಗಸಟ್ಟೆ ಮಾತುಗಳ ನುಂಗಬೇಕೆ?
ನೀವು ಕವಿಯೇ?ಸಾಹಿತಿಯೇ? ಬರೆದದ್ದ ನಿಮ್ಮ ಬ್ಲಾಗಲ್ಲಿ ಹಾಕುತ್ತಿದ್ದೀರಾ? ಜನ ಮೆಚ್ಚಲಿ , ಇಲ್ಲದಿರಲಿ ನಿಮಗೊಂದು ನಮನ ಮತ್ತು ಅಭಿನಂದನೆ. ನೀವು ಬರೆದಿದ್ದದು ಎಂಬುದಕ್ಕೆ ಅಲ್ಲಿರುವ ದಿನಾಂಕವೇ ಸಾಕ್ಷಿ. ಬೇರೆ ಯಾರಾದರೂ ಅದನ್ನು ಕದ್ದು ತನ್ನ ಹೆಸರಲ್ಲಿ ಪ್ರಕಟಿಸಿದರೆ ನೀವು ನಿಮ್ಮ ಬ್ಲಾಗಿನ ಪ್ರಕಟಗೊಂಡ ದಿನಾಂಕವನ್ನು ತೊರಿಸಿ ಅದನ್ನು ನೀವೇ ಬರೆದದ್ದೆಂದು ನಿರೂಪಿಸಬಹುದು.ಹಾಗಾಗಿ ಬ್ಲಾಗೆಂಬುದು ನಿಮ್ಮ ಕವನಕ್ಕೆ ಶ್ರೀ ರಕ್ಷೆ..ಹಾಂ.. ತಡೀರಿ, ಇಷ್ಟಿದ್ದೂ ನಿಮ್ಮ ಕವನವನ್ನು, ಲೇಖನವನ್ನು ಯಾರಾದರೂ ಕದೀಬಹುದು. ಅದನ್ನು ನಿಮಗಿಂತ ಮುಂಚಿನ ದಿನಾಂಕದಲ್ಲಿ ತನ್ನ ಬ್ಲಾಗಲ್ಲಿ ಹಾಕಿಕೊಳ್ಳಬಹುದು. ಅವಾಗೇನ್ಮಾಡ್ತೀರ? ಹೆಚ್ಚು ಕೇಳ ಹೋದರೆ ನೀವೇ ಕಳ್ಳರೆನ್ನುತ್ತಾರೆ.. ಅರೇ, ಇದು ಹೇಗೆ ಸಾಧ್ಯ? ಇದಕ್ಕೆ ಪರಿಹಾರವೇ ಇಲ್ಲವೇ ಅನಿಸುತ್ತಿದೆಯಾ? ಅದನ್ನು ತಿಳಿಸುವ ಒಂದು ಪುಟ್ಟ ಪ್ರಯತ್ನವೇ ಈ ಕಿರು ಲೇಖನ.
ಜಾಬ್ಸ್ ಜಾತ್ರೆಯಲ್ಲಿ ಮರೆತೋದ ‘ರಿಚ್ಚಿ’
-ಪ್ರಶಸ್ತಿ ಪಿ
ಆಪಲ್ ಸ್ಥಾಪಕ ಸ್ಟೀವ್ ಜಾಬ್ಸನ ವಿಚಾರಗಳೆಲ್ಲಾ ಕದ್ದಿದ್ದು. ಅವನ ಸ್ವಂತದ್ದು ಏನೂ ಇಲ್ಲ. ಅವನ ಸಾವಿಗೆ ಅಷ್ಟು ಮನ್ನಣೆ. C, Unix ಗಳನ್ನು ಕಂಡು ಹಿಡಿದ ಡೆನ್ನಿಸ್ ರಿಚ್ಚಿಯ ಸಾವು ಯಾರೂ ಕಂಡೂ ಕೇಳದಂತೆ ಮರೆಯಾಗಿ ಹೋಯಿತಲ್ಲಾ ಎಂಬ ವೇದನೆಯ ಹಲರೂಪಾಂತರಗಳು ಅಂತರ್ಜಾಲದಲ್ಲೆಲ್ಲಾ ಸುತ್ತಾಡುತ್ತಿದ್ದವು ಕೆಲವಾರದ ಹಿಂದೆ. ಇನ್ನೂ ಅಲ್ಲೊಂದು , ಇಲ್ಲೊಂದು ಅಂತಹ ಫೋಟೋಗಳು, ಪೋಸ್ಟುಗಳು ಸುತ್ತಾಡುತ್ತಲೇ ಇವೆ. ಇಬ್ಬರಲ್ಲಿ ಯಾರು ಹೆಚ್ಚೆಂಬ ವಿಮರ್ಶೆಯನ್ನು ಮಾಡೋದು ಆ ದೈತ್ಯ ಪ್ರತಿಭೆಗಳೆದುರು ಪಾಮರನಾದ ನನ್ನಿಂದಂತೂ ಅಸಾಧ್ಯ. ಆದರೆ ಇಂದು ಮತ್ತೊಂದು ಅಂತಹದೇ ಪೋಸ್ಟನ್ನೋದಿದಾಗ ನನಗನಿಸಿದ ಭಾವಗಳನ್ನು ಹಂಚಿಕೊಳ್ಳುತ್ತಿದ್ದೇನೆ.
ಪಿಯುಸಿಯಲ್ಲಿ ಕಂಪ್ಯೂಟರ್ ಓದಿದವರಿಂದ ಹಿಡಿದು, BCA, BE, B.Com (Computers) , Diploma ಹೀಗೆ ಹಲವು ವಿಷಯಗಳನ್ನೋದಿದ ಜನರೆಲ್ಲಾ C ಎಂಬ Programming ಭಾಷೆಯನ್ನು ಓದೇ ಇರುತ್ತಾರೆ. ಬಲ್ಬು ಕಂಡುಹಿಡಿದವರು ಯಾರು ಎಂದರೆ ಎಂಥಾ ಟ್ಯೂಬ್ಲೈಟಾದರೂ ಥಾಮಸ್ ಅಲ್ವಾ ಎಡಿಸನ್ ಅಂತ ಹೇಳ್ತಾರಲ್ವಾ ಹಾಗೇನೆ ಇವರಿಗೆಲ್ಲಾ C ಯನ್ನು ಕಂಡುಹಿಡಿದವರು ಯಾರು ಅಂದರೆ ತಟ್ಟನೆ ಬರುವ ಉತ್ತರ ಡೆನ್ನಿಸ್ ರಿಚ್ಚಿ, ಕೆರಿಂಗ್ ಹ್ಯಾಮ್. ನಾನೂ ಓದಿ ಇಷ್ಟಪಟ್ಟ Programming ನ ಮೊದಲ ಪುಸ್ತಕ The C Programming Language . ಆಗ ರಿಚ್ಚಿಯ ಬಗ್ಗೆ ಅಷ್ಟು ತಿಳಿದಿರಲಿಲ್ಲ. ನಂತರ ಮೂರನೆಯ ಸೆಮಿಸ್ಟರಿನಲ್ಲಿ Unix ಅನ್ನೋ ವಿಷಯ ಇತ್ತು. ಅದರ ಬಗ್ಗೆ ಗೊತ್ತಿಲ್ದೇ ಇರೋರಿಗೆ ಹೇಳೋದಾದರೆ ನೀವು ಬಳಸ್ತಾ ಇರೋ Windows XP, Windows 7, Vista ಗಳಂತೆ ದುಡ್ಡು ಕೊಟ್ಟು Genuine ಅವತರಣಿಕೆ ಪಡೆಯಬೇಕೆಂಬ ರೇಜಿಗೆಯಿಲ್ಲದ್ದದು, ಯಾರು ಬೇಕಾದರೂ ಉಚಿತವಾಗಿ ಬಳಸಬಹುದಾದ ದತ್ತಾಂಶ Open Source ಗಳ ಪರಿಕಲ್ಪನೆಯನ್ನು ಹುಟ್ಟಿಹಾಕಿದ್ದೇ Unix ನ ಮತ್ತೊಂದು ರೂಪ Linux. ಇರಲಿ, ಆ Linux ಅನ್ನು ರೂಪಿಸುವಲ್ಲಿಯೂ ಕೆನ್ ಥಾಮ್ಸನ್ ಅನುವವರೊಂದಿಗೆ ಕೈ ಜೋಡಿಸಿದ್ದು ಇದೇ ರಿಚ್ಚಿ.
ಸರಿ, ಪ್ರೋರ್ಗಾಮಿಂಗ್ ಭಾಷೆಯನ್ನು , ಇನ್ನೊಂದು ಕಂಪ್ಯೂಟರ್ ಭಾಷೆಯನ್ನು ಕಂಡುಹಿಡಿದಾಕ್ಷಣ ಅದು ಮಹಾನ್ ಸಾಧನೆಯೇ ಎಂಬ ಸಂದೇಹ ಈಗಾಗಲೇ ಬಂದಿದ್ದರೆ ಅದನ್ನು ಪರಿಹರಿಸಲೋಸುಗ ಈ ಕೆಲವು ಸಾಲುಗಳು..ರಿಚ್ಚಿ ಸತ್ತ ದಿನ ಅವರ ದೀರ್ಘ ಕಾಲೀನ ಸಹೋದ್ಯೋಗಿ ರೋಬ್ ಪೈಕ್ ಸೂಚಿಸಿದ ಸಂತಾಪ ನುಡಿಗಳಿಂದ.
ನಮ್ಮೂರ ಕನ್ನಡ ರಾಜ್ಯೋತ್ಸವ – ‘ಕೆಳದಿ’
–ಪ್ರಹಸ್ತಿ ಪಿ.
ಶಿವಮೊಗ್ಗ ಜಿಲ್ಲೆಯ ಸುತ್ತಮುತ್ತಲಿರೋರಿಗೆ ಕೆಳದಿಯ ಬಗ್ಗೆ ಗೊತ್ತೇ ಇರುತ್ತದೆ. ಹೊಸಬರಿಗೆ ಹೇಳಬೇಕೆಂದರೆ, ನೀವು ಜಗತ್ಪ್ರಸಿದ್ಧ ಜೋಗ ಜಲಪಾತದ ಹೆಸರನ್ನು ಕೇಳಿಯೇ ಕೇಳಿರುತ್ತೀರಿ. ಅದಕ್ಕೆ ಹೋಗಬೇಕಾದರೆ ಸಾಮಾನ್ಯವಾಗಿ ಸಾಗರಕ್ಕೆ ಬಂದೇ ಹೋಗುತ್ತಾರೆ. ಸಾಗರದಿಂದ ಎಂಟು ಕಿ.ಲೋ ಮೀಟರು ದೂರವಿರುವ ಊರು ಕೆಳದಿ. ಇಲ್ಲಿಯ ಪಾಳೇಗಾರ ಶಿವಪ್ಪನಾಯಕ, ರಾಣಿ ಚೆನ್ನಮ್ಮ… ಈ ಹೆಸರುಗಳನ್ನು ಎಲ್ಲೋ ಕೇಳಿದ/ಓದಿದ ನೆನಪಾಗುತ್ತಿದೆಯೇ? ಹಾ ಅದೇ ಕೆಳದಿ. ಅದರ ಹತ್ತಿರವೇ ನಮ್ಮೂರು.
ಪ್ರತೀವರ್ಷವೂ ಕನ್ನಡ ರಾಜ್ಯೋತ್ಸವ ಬಂತೆಂದರೆ ನಮಗೆಲ್ಲಾ ಹಬ್ಬದ ವಾತಾವರಣ.ಹಂಪಿಯಿಂದ ಕೆಳದಿಗೆ ಬರುತ್ತಿದ್ದ ವಿದ್ಯಾರಣ್ಯ ಜ್ಯೋತಿಯದು ಕೆಳದಿಯಿಂದ ಸಾಗರದವರೆಗೆ ಮೆರವಣಿಗೆ..ಆ ಸಂದರ್ಭವೆಂದರೆ ನಮಗೆಲ್ಲಾ ಸಂಭ್ರಮವೋ ಸಂಭ್ರಮ.ಪ್ರತೀ ಮನೆಯೆದುರ ರಸ್ತೆಯನ್ನೂ ತೊಳೆದು ಎಳೆದ ದೊಡ್ಡದೊಡ್ಡ ರಂಗೋಲಿಗಳು,”ವಿದ್ಯಾರಣ್ಯ ಜ್ಯೋತಿಗೆ ಸ್ವಾಗತ”, “ರಾಜ್ಯೋತ್ಸವದ ಶುಭಾಶಯಗಳು” ಇತ್ಯಾದಿ ಬರಹಗಳೇನು, ಪ್ರತೀ ಹಳ್ಳಿಯ ಬಾಗಿಲುಗಳಲ್ಲಿ, ಹೆಚ್ಚೆಚ್ಚು ಮನೆಗಳಿದ್ದ ಕಡೆ ಹೀಗೆ ಸಾಲು ತೋರಣಗಳೇನು, ಪೇಟೆ ಹತ್ತಿರ ಸಾಗುತ್ತಿದ್ದಂತೆ ಸಾಲು ಸಾಲು ವಿದ್ಯುತ್ ದೀಪಗಳೇನು..ಅಬ್ಬಾ!! ಜ್ಯೋತಿಯೊಂದಿಗೆ ಎಂಟು ಕಿಲೋಮೀಟರಿಗಿಂತಲೂ ದೂರ ಸಾಗುವುದೆಂದರೆ ಒಂದು ಅವಿಸ್ಮರಣೀಯ ಅನುಭವ.. ವಿದ್ಯಾರಣ್ಯರು ಹಕ್ಕ-ಬುಕ್ಕರ ಗುರುಗಳಲ್ಲವೇ, ಆ ವಿಜಯನಗರ ಸಾಮ್ರಾಜ್ಯಕ್ಕೂ ಕೆಳದಿಗೂ, ಅವರ ಹೆಸರಿನ ಜ್ಯೋತಿಗೂ , ನಾನು ಹೇಳಹೊರಟಿರುವ ಮೆರವಣಿಗೆಗೂ ಎಲ್ಲಿಂದೆಲ್ಲಿಯ ಸಂಬಂಧವಯ್ಯಾ ಅಂತ ಸಂದೇಹ ಶುರು ಆಯ್ತಾ? ತಡೀರಿ ಒಂದೊಂದಾಗಿ ಹೇಳುತ್ತಾ ಹೋಗ್ತೇನೆ. ಮುಂದೆ ಓದಿ.
ವಿಜಯನಗರದ ಕೃಷ್ಣದೇವರಾಯನ ಕಾಲದಲ್ಲಿ ಕೆಳದಿಯ ಸಾಮಾನ್ಯ ರೈತನೊಬ್ಬನಾದ ಭದ್ರಗೌಡನೆಂಬುವನಿಗೆ ನಿಕ್ಷೇಪ ದೊರೆತು ಅದರಿಂದ ಅವನು ಪಾಳೆಯವನ್ನು ಕಟ್ಟಿಕೊಂಡನಂತೆ. ಅವನ ಪರಾಕ್ರಮಕ್ಕೆ ಮೆಚ್ಚಿ ಕೃಷ್ಣದೇವರಾಯ ಅವನಿಗೆ ಎಂಟು ಮಾಗಣಿಗಳ ನಾಯಕತ್ವವನ್ನು ಕೊಟ್ಟನೆಂದು ಇತಿಹಾಸವಿದೆ .ಕಾಲ ಕಳೆದಂತೆ ಸಂಸ್ಥಾನ ಬೆಳೆಯಿತು. ಕೆಳದಿ, ಇಕ್ಕೇರಿ, ಗೌರಿ ಬಿದನೂರು ಹೀಗೆ ಕೋಟೆ ಕೊತ್ತಲಗಳನ್ನು, ದೇವಾಲಯಗಳನ್ನು ಕಟ್ಟಿದರು. ಶಿವಪ್ಪನಾಯಕ, ಚೆನ್ನಮ್ಮ ರಾಣಿಯಂತಹವರು ಬಂದು ಹೋದರು. ಕೆಳದಿಯ ವೀರಭದ್ರ ದೇವಸ್ಥಾನದ ಪ್ರಧಾನ ಬಾಗಿಲ ಬಳಿ ಶ್ರೀಕೃಷ್ಣನ ಸಣ್ಣ ವಿಗ್ರಹವಿದೆ. ಇದು ಅಂದಿನಾ ಘಟನೆಯ ಸವಿನೆನಪಿಗಾಗಿ ಎಂದು ಅನೇಕರು ಹೇಳುತ್ತಾರೆ.
೧೯೫೬ ರಲ್ಲಿ ಕರ್ನಾಟಕ ಏಕೀಕರಣವಾಯಿತು. ರಾಜ್ಯೋತ್ಸವ ಆಚರಣೆಗಳು ಪ್ರಾರಂಭವಾದವು. ೭೦ರ ದಶಕದ ಕೊನೆಭಾಗದಲ್ಲಿ ರಾಜ್ಯೋತ್ಸವ ಆಚರಣೆಯ ಭಾಗವಾಗಿ ಇತಿಹಾಸ ಪ್ರಸಿದ್ದ ಸ್ಥಳಗಳಿಂದ ಜ್ಯೋತಿಯೊಂದನ್ನು ತಂದು ಮೆರವಣಿಗೆ ಮಾಡಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತಂತೆ. ಅದಾಗಿ ಕೆಲಸಮಯದಲ್ಲಿ ಅಂದರೆ ಈಗ್ಗೆ ಸುಮಾರು ಇಪ್ಪತ್ತು ವರ್ಶಗಳ ಹಿಂದಿಂದ ಕೆಳದಿಯಿಂದ ಜ್ಯೋತಿಯ ಮೆರವಣಿಗೆ ನಡೆಸುವ ಸಂಪ್ರದಾಯ ಶುರುವಾಗಿದೆ ಅಂತ ಅಲ್ಲಿನ ಹಿರಿಯರು ಹೇಳುತ್ತಾರೆ. ಮೊದಲಿಗೆ ನವೆಂಬರ್ ಒಂದರ ಹಿಂದಿನ ರಾತ್ರಿ ಹಂಪಿಯಿಂದಲೇ ವಿದ್ಯಾರಣ್ಯ ಜ್ಯೋತಿ ಕೆಳದಿಗೆ ಬರುತ್ತಿತ್ತಂತೆ. ಜೀಪಲ್ಲಿ ಹಿಂದಿನ ದಿನ ಮಧ್ಯರಾತ್ರಿಯ ಹೊತ್ತಿಗೆ ಕೆಳದಿಗೆ ಬರುತ್ತಿತ್ತು ಆ ಜ್ಯೋತಿ. ಮಧ್ಯರಾತ್ರಿ ಎಷ್ಟೊತ್ತಾದರೂ ಕೆಳದಿಗೆ ಬಂದೇ ತಲುಪುತ್ತಿದ್ದ ಜ್ಯೋತಿ ಹೊತ್ತು ತಂದವರು ಕೆಳದಿ ದೇಗುಲದ ಪ್ರಾಂಗಣದಲ್ಲೇ ಮಲಗಿರುತ್ತಿದ್ದರಂತೆ. ನಂತರ ಬೆಳಗ್ಗೆ ಆರೂ ಮುಕ್ಕಾಲರ ಹೊತ್ತಿಗಾಗಲೇ ಅದಕ್ಕೆ ಪೂಜೆಯಾಗಿ ಕೆಳದಿ ರಾಮೇಶ್ವರ ದೇವಸ್ಥಾನದಿಂದ ಸಾಗರದ ಕಡೆಗೆ ಹೊರಡುತ್ತಿತ್ತು.
ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳು ಹ್ಯಾಕ್ ಆದದ್ದಾದರೂ ಹೇಗೆ?
-ಓಂ ಶಿವಪ್ರಕಾಶ್
ಇತ್ತೀಚೆಗೆ ನ್ಯೂಯಾರ್ಕ್ ಟೈಮ್ಸ್ ನಲ್ಲೊಂದು ದೊಡ್ಡ ಸುದ್ದಿ. ೨ಮಿಲಿಯನ್ ಸಿಟಿಬ್ಯಾಂಕ್ ಗ್ರಾಹಕರ ಅಕೌಂಟುಗಳು, ಹೆಸರು, ಕ್ರೆಡಿಟ್ ಕಾರ್ಡುಗಳ ಸಂಖ್ಯೆ, ವಿಳಾಸ ಜೊತೆಗೆ ಇ-ಮೈಲ್ ಎಲ್ಲವೂ ಹ್ಯಾಕರ್‌ಗಳ ಕೈಗೆ ಸಿಕ್ಕಿವೆ ಎಂದು. ಇದು ಸಾಧ್ಯವಾದದ್ದಾದರೂ ಹೇಗೆ? ಇಲ್ಲಿದೆ ಒಂದು ಸಣ್ಣ ಇಣುಕು ನೋಟ.
ಅತಿಯಾದ ಕಾಳಜಿಯೂ ಮುಳುವಾದೀತು ಜೋಕೆ…!
-ವಿಷ್ಣುಪ್ರಿಯ
ಮನುಷ್ಯನ ಕೊಳ್ಳುಬಾಕ ಸಂಸ್ಕೃತಿಯ ಲಾಭ ಮಾಡಿಕೊಳ್ಳಲು ಹವಣಿಸುವ ಕಂಪನಿಗಳು `ಆರೋಗ್ಯದ ಬಗ್ಗೆ ಮಾಹಿತಿ ಕೊಡುವ ಉಪಕರಣಗಳು’ ಎಂಬ ಹಣೆಪಟ್ಟಿಯೊಂದಿಗೆ ಹಲವಾರು ಉಪಕರಣಗಳನ್ನು ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಮೊದಲೇ ಈ ರೋಗಗಳಿಂದಾಗಿ ಕಂಗೆಟ್ಟಿರುವಂಥ ಜನ ಈ ಉಪಕರಣಗಳನ್ನು ಮುಗಿಬಿದ್ದು ಕೊಳ್ಳುತ್ತಾರೆ.
ಅತಿಯಾದರೆ ಅಮೃತವೂ ವಿಷ ಎನ್ನುತ್ತಾರೆ. ಕೆಲವೊಂದು ಬಾರಿ ನಮ್ಮ ವಿಪರೀತ ಕಾಳಜಿಯೇ ನಮಗೆ ಮುಳುವಾಗುವಂಥ ಪ್ರಸಂಗಗಳೂ ಬರುತ್ತವೆ. ದಪ್ಪಗಾಗುತ್ತೇವೆ ಎಂಬ ಆತಂಕದಲ್ಲಿ ಆಹಾರ ಬಿಡುತ್ತೇವೆ; ಪೋಷಕಾಂಶದ ಕೊರತೆ ಎದುರಾಗುತ್ತದೆ; ನಿತ್ರಾಣ ಆವರಿಸಿಕೊಳ್ಳುತ್ತದೆ; ಮತ್ತೆ ಅದನ್ನು ಸರಿಪಡಿಸುವುದಕ್ಕೆ ಔಷಧಿ ತೆಗೆದುಕೊಳ್ಳುತ್ತೇವೆ; ಉಪ್ಪು ತಿಂದರೆ ಬಿಪಿ ಬರುತ್ತೆ ಅಂತ ಉಪ್ಪು ತೀರಾ ಕಡಿಮೆ ತಿನ್ನುತ್ತೇವೆ; ಬಿಪಿ ಕಡಿಮೆಯಾಗುತ್ತದೆ; ಮತ್ತೆ ಗಿಡ್ಡಿನೆಸ್ ಕಾಡುತ್ತದೆ; ಅದಕ್ಕೆ ಔಷಧಿ.
ಹೌದು, ಮನುಷ್ಯ ಸದಾ ಏನೋ ಮಾಡುತ್ತೇನೆಂದು ಹೊರಡುತ್ತಾನೆ. ಅದಿನ್ನೇನೋ ಆಗುತ್ತದೆ. ಇತ್ತೀಚಿನ ದಿನಗಳಲ್ಲಿ ವಿವಿಧ ರೋಗಗಳೇ ಪ್ರಪಂಚವನ್ನು ಆಳುತ್ತಿರುವಂಥ ಸಂದರ್ಭದಲ್ಲಿ ಮಾನವ ಯಾವುದೋ ಹೊಸ ರೋಗದ ಹೆಸರು ಕೇಳಿದರೆ ಭೀತಿಗೊಳಗಾಗುತ್ತಿದ್ದಾನೆ. ಅದರಿಂದ ರಕ್ಷಣೆ ಪಡೆಯಬೇಕು ಅಂತ ಮೊದಲೇ ಔಷಧಿ ತೆಗೆದುಕೊಳ್ಳುವ ಆತುರ ತೋರುತ್ತಾನೆ. ಇದಕ್ಕಿಂತಲೂ ಹೆಚ್ಚಾಗಿ ಮನುಷ್ಯನ ಕೊಳ್ಳುಬಾಕ ಸಂಸ್ಕೃತಿಯ ಲಾಭ ಮಾಡಿಕೊಳ್ಳಲು ಹವಣಿಸುವ ಕಂಪನಿಗಳು `ಆರೋಗ್ಯದ ಬಗ್ಗೆ ಮಾಹಿತಿ ಕೊಡುವ ಉಪಕರಣಗಳು’ ಎಂಬ ಹಣೆಪಟ್ಟಿಯೊಂದಿಗೆ ಹಲವಾರು ಉಪಕರಣಗಳನ್ನು ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಮೊದಲೇ ಈ ರೋಗಗಳಿಂದಾಗಿ ಕಂಗೆಟ್ಟಿರುವಂಥ ಜನ ಈ ಉಪಕರಣಗಳನ್ನು ಮುಗಿಬಿದ್ದು ಕೊಳ್ಳುತ್ತಾರೆ; ಆ ಉಪಕರಣಗಳ ಪ್ರಾಮಾಣಿಕತೆಯನ್ನು, ಅವುಗಳ ವಿಶ್ವಾಸಾರ್ಹತೆಯನ್ನು ಪರಿಗಣಿಸುವ, ಈ ವಿಚಾರದ ಬಗ್ಗೆ ಅರೆಕ್ಷಣವೂ ಯೋಚನೆ ಮಾಡುವುದಕ್ಕೇ ಹೋಗುವುದಿಲ್ಲ. ಕೊಂಡುಕೊಂಡು ಬಿಡುತ್ತೇನೆ. ತಪ್ಪು ಮಾಹಿತಿ ನಿಡಿ ರೋಗ ಇದೆ ಎಂದು ಹೇಳಿತೋ ನಮ್ಮ ಆತಂಕ ಹೆಚ್ಚುತ್ತದೆ, ಒಂದು ವೇಳೆ ಇರುವ ರೋಗವನ್ನು ಸೂಚಿಸದೇ ಇದ್ದಲ್ಲಿ, ನಮ್ಮ ಸಮಸ್ಯೆ ಹಾಗೆಯೇ ಉಳಿದುಕೊಳ್ಳುತ್ತದೆ.
ಇನ್ನು ಕೆಲವೊಂದು ಬಾರಿ ಯಾವುದೇ ಸಮಸ್ಯೆಗೆಂದು ಚಿಕಿತ್ಸೆ ಪಡೆಯುತ್ತೇವೆ. ಆದರೆ ಆ ಚಿಕಿತ್ಸೆ ಇನ್ನೊಂದು ಸಮಸ್ಯೆಗೆ ಕಾರಣವಾಗುತ್ತದೆ. ಹಲವಾರು ಬಾರಿ ಔಷಧಿಗಳು ಅಡ್ಡ ಪರಿಣಾಮ ಬೀರಿ ಆ ಸಮಸ್ಯೆಯನ್ನು ಸರಿಪಡಿಸಿಕೊಳ್ಳುವುದಕ್ಕೆ ಇನ್ನೊಂದಷ್ಟು ಸಮಯ ಹೆಣಗಾಡಬೇಕಾದಂಥ ಪರಿಸ್ಥಿತಿ ಬರುತ್ತದೆ. ಇಷ್ಟೇ ಆಗಿದ್ದರೆ ಹೀಗೆಯೋ ಸುಧಾರಿಸಬಹುದಿತ್ತು. ಆದರೆ ಕೆಲವೊಂದು ಚಿಕಿತ್ಸೆಗಳು ಕ್ಯಾನ್ಸರ್ನಂಥ ಗಂಭೀರ ರೋಗಗಳಿಗೆ ಕಾರಣವಾಗುತ್ತವೆ. ಹೀಗೆಲ್ಲ ಆಗುತ್ತದೆಯೇ? ನಿಜಕ್ಕೂ ಈ ಉಪಕರಣಗಳು ನಿಖರವಾದ ಮಾಹಿತಿಯನ್ನು ಕೊಡುವುದಿಲ್ಲವೇ? ಒಂದು ಚಿಕಿತ್ಸೆ ಇನ್ನೊಂದು ರೋಗವನ್ನು ಸೃಷ್ಟಿ ಮಾಡಿತ್ತದೆಯೇ? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ.
ಮತ್ತಷ್ಟು ಓದು 




