ವಿಷಯದ ವಿವರಗಳಿಗೆ ದಾಟಿರಿ

Posts from the ‘ಪ್ರಚಲಿತ’ Category

16
ಜೂನ್

ನನ್ನ ಕನಸಿನ ಹುಡುಗಿ

– ನವನೀತ್ ಪೈ

ನಾನು ನನ್ನ ಕನಸಿನ ಲೊಕದ ಚಕ್ರವರ್ತಿ. ಕನಸಿನಲ್ಲಿ ನನ್ನ ಮಹಾರಾಣಿಯು ಆಗಮಿಸುತ್ತಿರುವಾಗ ಭೀಕರ ಗುಡುಗಿನ ಆರ್ಭಟ ನನ್ನನ್ನು ಎಚ್ಚರಿಸಿತು. ಈ ನನ್ನ ನತದೃಷ್ಟ ಕಣ್ಣುಗಳು ಅವಳ ಆ ಸುಂದರ ಮುಖಕಮಲಗಳನ್ನು ನೋಡಲು ವಿಫಲವಾದವು. ಆಕೆ ಯಾರಿರಬಹುದು ಎಂದು ಯೋಚಿಸುವಾಗ ಪುನಃ ಗುಡುಗಿನ ಆರ್ಭಟ. ಈಗ ಕರೆಂಟ್ ಕೂಡ ಹೋಯಿತು. ನನ್ನ ಕಲ್ಪನಾ ಸಾಮ್ರಾಜ್ಯಕ್ಕೆ ಹೋಗಲು ಈ ಕತ್ತಲೆಯೇ ದಾರಿದೀಪವಾಯಿತು. ಒಂದು ಮೇಣದ ಬತ್ತಿಯನ್ನು ಹಚ್ಚಿ ಅದರ ಜ್ವಾಲೆಯಲ್ಲೇ ಅವಳ ಆ ಸುಂದರ ಮುಖವನ್ನು ಅರಸುತ್ತಿದ್ದೆ. ಅಲ್ಲೇ ಇದ್ದ ಮಂಚದ ಮೇಲೆ ಮಲಗಿ ಕಾರ್ಮೊಡದ ಹಿಂದೆ ಅವಿತಿರುವ ಚಂದಿರನನ್ನು ನೋಡಲು ಯತ್ನಿಸುತ್ತಾ ಅವಳ ಮುಖವನ್ನು ಊಹಿಸಿದೆ. ಬಹುಶಃ ಚಂದಿರನೇ ಎಸೆದ ಮಿಂಚಿನ ಚಾವಟಿ ನನ್ನ ಕನಸನ್ನು ಪುನಃ ಭಗ್ನಗೊಳಿಸಿತು. ಅವಳ ಬಗ್ಗೆ ಯೋಚಿಸುತ್ತಾ ರೆಪ್ಪೆಗಳು ಮುಚ್ಚಿಕೊಂಡವು ಆದರೆ ಮನಸಿನ್ನೂ ಜಾಗೃತವಾಗೇ ಇತ್ತು.

ನನ್ನ ಮೊದಲ ದಿನದ ಕಾಲೇಜು ಒಂದು ರೀತಿಯ ಹೊಸ ಉತ್ಸಾಹವನ್ನೂ, ಭಯವನ್ನೂ ಒಟ್ಟಿಗೆ ಮೂಡಿಸಿತು. ಕೋಟ್ಯಾಂತರ ನಕ್ಷತ್ರಗಳ ಮಧ್ಯೆ ಚಂದಿರನೊಬ್ಬನೇ ಹೇಗೆ ಪ್ರಕಾಶಿಸುತ್ತಾನೋ ಹಾಗೆ ನೂರಾರು ಹುಡುಗಿಯರ ನಡುವೆ ಅವಳೊಬ್ಬಳೇ ನನ್ನನ್ನು ಆಕರ್ಷಿಸಲು ಸಫಲಳಾದಳು.

 

 

ಮತ್ತಷ್ಟು ಓದು »

15
ಜೂನ್

ಕನ್ನಡ ನಾಡೆಂಬ ಕರುಣೆಯ ಬೀಡೂ, ರಾಬಿನ್ ಚುಗ್ ಎಂಬ ಅವಿವೇಕಿಯೂ

(ಇತ್ತೀಚೆಗೆ ಫೇಸ್ ಬುಕ್ ನಡೆಯಿತು ಎನ್ನಲಾದ ವಿವಾದ ಕುರಿತು ನಿಲುಮೆ ತಂಡದ ವಿಜಯ್ ಹೆರಗು ಅವರು ವಿವಾದಿತ ವ್ಯಕ್ತಿ ರಾಬಿನ್ ಚುಗ್ ರನ್ನು  ಸ್ವತಃ ಸಂಪರ್ಕಿಸಿ ಮಾತಾಡಿ ಅದರ ವಿವರಗಳನ್ನು ದಾಖಲಿಸಿದ ಲೇಖನವಿದು. -ನಿಲುಮೆ)

ಪ್ರಿಯ ಗೆಳೆಯರೇ,

                     “ರಾಬಿನ್ ಚುಗ್”, ಈಗ ಈ ಹೆಸರು ಅಂತರ್ಜಾಲ ಬಳಕೆದಾರರಿಗೆ ಅದರಲ್ಲೂ ಫೇಸ್ಬುಕ್  ಬಳಸುವ ಕನ್ನಡಿಗರಿಗೆ ಪರಿಚಿತ ಹೆಸರು. ಈತನ ಹೆಸರು ಕೇಳಿದೊಡನೆ ಕೆಲವರಲ್ಲಿ ರೋಷ ಉಕ್ಕಿಬರುತ್ತದೆ. ಕೈಗೆ ಸಿಕ್ಕರೆ ನಾಲ್ಕೇಟು ತದುಕಬೇಕು ಅಂತ ಹಲವರಿಗೆ ಆಸೆಯಿದೆ. ಸಮಾಜದಲ್ಲಿ ಹಲವಾರು ಜನ ತಮ್ಮ ಒಳ್ಳೆಯ ಕೆಲಸಗಳಿಗೆ, ಒಳ್ಳೆಯ ಮಾತುಗಳಿಗೆ ಪ್ರಚಾರ ಗಳಿಸಿದರೆ ಇನ್ನು ಕೆಲವರು ಕೆಟ್ಟ ಕೆಲಸಗಳು ಮತ್ತು ಕೆಟ್ಟ ಮಾತುಗಳಿಂದ ಪ್ರಚಾರ ಗಳಿಸುತ್ತಾರೆ. ಹೀಗೆ ತಾನು ಬಳಸಿದ ಕೆಟ್ಟ ಮಾತಿನಿಂದ ಕುಖ್ಯಾತಿ ಗಳಿಸಿದವನು ರಾಬಿನ್ ಚುಗ್.
               ಕೆಲವು ದಿನಗಳ ಹಿಂದೆ ಕನ್ನಡಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಯುತ ಮುಖ್ಯಮಂತ್ರಿ ಚಂದ್ರುರವರು ಕರ್ನಾಟಕ ಸರ್ಕಾರಕ್ಕೆ ಕಳುಹಿಸಿದ ೨೭ ಶಿಫಾರಸುಗಳಲ್ಲಿ  “ವಲಸಿಗರು ಒಂದು ವರ್ಷದ ಅವಧಿಯ ಒಳಗೆ ಕನ್ನಡ ಕಲಿಯಬೇಕು ಹಾಗೂ ಏಳನೇ ತರಗತಿ ಹಂತದ ಕನ್ನಡ ಪರೀಕ್ಷೆ ಪಾಸು ಮಾಡಬೇಕು” ಎಂಬುದು ಅತ್ಯಂತ ಪ್ರಮುಖವಾದ ಹಾಗೂ ವಿವಾದಾತ್ಮಕವಾದ ಶಿಫಾರಸು.
               ಈ  ಶಿಫಾರಸು ಎಷ್ಟರ ಮಟ್ಟಿಗೆ ಸೂಕ್ತ? ಇದರ ಸಾಧಕ-ಬಾಧಕಗಳೇನು? ಇದನ್ನು ಜಾರಿಗೊಳಿಸಲು ಸಾಧ್ಯವೇ? ಇದರಿಂದ ಕರ್ನಾಟಕದ ಹೊರಗೆ ನೆಲೆಸಿರುವ ಕನ್ನಡಿಗರು ಎದುರಿಸಬಹುದಾದ ಸವಾಲುಗಳೇನು? ಎಂಬೆಲ್ಲಾ ಪ್ರಶ್ನೆಗಳು ಕಣ್ಣ ಮುಂದೆ ನಿಲ್ಲುತ್ತವೆ.
                    ಇದನ್ನೆಲ್ಲಾ ಒತ್ತಟ್ಟಿಗಿಟ್ಟು ರಾಬಿನ್ ಚುಗ್ ಎಂಬ ಈ ರಾಜಾಸ್ಥಾನೀ ಯುವಕನ ಬಗ್ಗೆ ಮಾತನಾಡೋಣ. ವಿದ್ಯಾಭ್ಯಾಸದ ಸಲುವಾಗಿ ಸುಮಾರು ೫ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ತದನಂತರ ಇಲ್ಲಿನ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ‘ಬೆಂಗಳೂರ್ ಮಿರರ್’ ಎಂಬ ರದ್ದಿ ಪತ್ರಿಕೆಯೊಂದು ಕನ್ನಡಾಭಿವೃದ್ಧಿ ಪ್ರಾಧಿಕಾರದ ಈ ಶಿಫಾರಸ್ಸನ್ನು ವಲಸಿಗರನ್ನು ಪ್ರಚೋದಿಸುವ ರೀತಿಯಲ್ಲಿ ವರದಿ ಮಾಡಿ ವಲಸಿಗರಿಗೆ ಇನ್ನು ಬೆಂಗಳೂರಿನಲ್ಲಿ ಉಳಿಗಾಲವಿಲ್ಲ ಎಂಬಂತೆ ಬಿಂಬಿಸಿ ಸುದ್ದಿ ನೀಡಿತು. ಇದನ್ನು ತನ್ನ ಫೇಸ್ಬುಕ್ ಪ್ರೊಫೈಲಿನಲ್ಲಿ ಶೇರ್ ಮಾಡಿದ ರಾಬಿನ್ ಚುಗ್ “F**K OFF” ಎಂದು ಪ್ರತಿಕ್ರಿಯೆ ನೀಡಿದ. ಇದೇ ತರಹದ ಹಾಗೂ ಇದಕ್ಕಿಂತ ಕೆಳಮಟ್ಟದ ಪ್ರತಿಕ್ರಿಯೆಗಳು ಬೆಂಗಳೂರ್ ಮಿರರ್ ಪತ್ರಿಕೆಯ ಅಂತರ್ಜಾಲ ಆವೃತ್ತಿಯಲ್ಲಿದೆ. ಇದರ ಕೊಂಡಿ ಇಲ್ಲಿದೆ. ಮತ್ತಷ್ಟು ಓದು »
15
ಜೂನ್

ಹಣ ಕೊಟ್ಟು ಅತಿಥಿಯಾಗಿ..!

ಅರೆಹೊಳೆ ಸದಾಶಿವ ರಾವ್

ಆಶ್ಚರ್ಯವಾಗಬಹುದು ನಿಮಗೆ ಈ ಲೇಖನದ ರ್ಶೀಕೆ ನೋಡಿ. ಇದು ಇತ್ತೀಚಿನ ಒಂದು ಹವ್ಯಾಸವಾಗಿ ಬಿಟ್ಟಿದೆ. ಇತ್ತೀಚೆಗೆ ನನಗೊಂದು ಸಭೆಗೆ ಅತಿಥಿಯಾಗಿ ಭಾಗವಹಿಸಲು ಕರೆ ಬಂತು. ಸಂತಸದಿಂದ ಒಪ್ಪಿಕೊಂಡೆ. ಅಂತಹಾ ವಿಶೇಷ ವ್ಯಕ್ತಿ ನಾನಲ್ಲ ಎಂಬ ಅರಿವಿದ್ದೂ ಒಪ್ಪಿಕೊಂಡೆ. ಒಂದು ವಾರ ಕಳೆದಿತ್ತು. ಆಯೋಜಕರಿಂದ ಮತ್ತೆ ಕರೆ ಬಂತು. ಅತಿಥಿಯಾಗಿ ಒಪ್ಪಿಕೊಂಡಿದ್ದಕ್ಕೆ ಧನ್ಯವಾದಗಳನ್ನು ಹೇಳಿದರು. ಮುಂದುವರಿದು ಕಾರ್ಯಕ್ರಮದ ಒಟ್ಟೂ ಖರ್ಚಿನ ಬಗ್ಗೆ ನಾನು ಕೇಳದೆಯೇ ಹೇಳುತ್ತಾ, ನಿಮ್ಮಿಂದ ನಾವು ಕನಿಷ್ಟ ಇಂತಿಷ್ಟು ನಿರೀಕ್ಷಿಸುತ್ತಿದ್ದೇವೆ ಎಂದರು. ಒಮ್ಮೆ ಆಶ್ಚರ್ಯವಾದರೂ, ನಾನು ಅತಿಥಿಯಾಗಿ ಬರುತ್ತಿದ್ದೂ, ನಾನೇ ವಂತಿಗೆ ನೀಡಬೇಕಾದ ಅನಿವಾರ್ಯತೆಯ ಬಗ್ಗೆ ಪ್ರಶ್ನಿಸಿದೆ. ನಾವು ಇದೇ ಸಂಪ್ರದಾಯ ಪಾಲಿಸುತ್ತಿದ್ದೇವೆ ಎಂಬ ಉತ್ತರ ಬಂತು. ಕ್ಷಮಿಸಿ, ನಾನು ಈ ಸಂಪ್ರದಾಯ ಪಾಲಿಸುವುದಿಲ್ಲ ಎಂದೆ. ಸರಿ, ಮತ್ತೆ ಸಂಪರ್ಕಿಸುತ್ತೇವೆ ಎಂದು ಫೋನ್ ಇಟ್ಟರು… ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ನಾಪತ್ತೆ!

ಇದು ಇತ್ತೀಚೆಗೆ ಬೆಳೆದು ಬಂದಿರುವ ಸಂಪ್ರದಾಯ. ಇತ್ತೀಚೆಗೆ ನಾವೂ ಒಂದು ಕಾರ್ಯಕ್ರಮ ಆಯೋಜಿಸಿದ್ದೆವು.  ಸಮಾಜದಲ್ಲಿ ಉನ್ನತ ಸ್ಥಾನ ಹೊಂದಿದ್ದ   ಒಬ್ಬರಲ್ಲಿ ನಾವು ಅತಿಥಿಯಾಗಿ ಬರುವಂತೆ ವಿನಂತಿಸಿದೆವು. ನಿರ್ದಿಷ್ಠ ದಿನಾಂಕದಂದು ಅವರಿಗೆ ಬೇರಾವುದೋ ಕಾರ್ಯಕ್ರಮ ಇದ್ದುದಕ್ಕೆ ಬರಲಾಗುವುದಿಲ್ಲ ಎಂದರು. ಸರಿ, ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾದರೂ ಬರುವಂತೆ ಅವರನ್ನು ವಿನಂತಿಸಿದೆವು. ಅದಕ್ಕೆ ಥಟ್ಟಂತ ಆ ವ್ಯಕ್ತಿ ಆಗದು, ಆ ದಿನ ನಾನು ಫ್ರೀ ಆಗಿದ್ದರೂ, ಬರಲಾಗದು, ನನ್ನ ‘ಸ್ಥಾನ ಮಾನ’ ನೋಡಬೇಕಲ್ಲವೇ ಎಂದು ಬಿಟ್ಟರು!!. ಕೊನೆಗೆ ಸರಿ ಎಂದು ನಾವು ಹೋದ ದಾರಿಗೆ ಸುಂಕವಿಲ್ಲದಂತೆ ಮರಳ ಹೊರಟಾಗ, ಮುಂದೆ ಏನಾದರೂ ಇಂತಾದ್ದೇ ‘ದೊಡ್ಡ’ ಮಟ್ಟದ  ಕಾರ್ಯಕ್ರಮ ಇದ್ದರೆ ಬನ್ನಿ, ಅತಿಥಿಯಾಗಿಯೂ ಬರುತ್ತೇನೆ ಮತ್ತು ಸ್ವಲ್ಪ ಧನ ಸಹಾಯವನ್ನೂ ಮಾಡುತ್ತೇನೆ ಎಂದರು. ಧನ್ಯೋಸ್ಮಿ ಎಂದುಕೊಂಡೆವು!! ಮತ್ತಷ್ಟು ಓದು »

14
ಜೂನ್

ಸ್ವಲ್ಪವಾದರೂ ಸಭ್ಯತೆ ಇರಲಿ………!!!

 ಪವನ್ ಪಾರುಪತ್ತೇದಾರ್
ಬಹಳ ದಿನಗಳ ನಂತರ ಬೆಂಗಳೂರಿನಲ್ಲಿ ಓಡಾಡಬೇಕಾದ ಅನಿವಾರ್ಯತೆ ಬಂದಿತ್ತು. ಪ್ರಾಜೆಕ್ಟ್  ವರ್ಕ್ ಭೂತ ತಲೆಯ ಮೇಲೆ ಕೂತಿತ್ತು ಇಷ್ಟವಿಲ್ಲದಿದ್ದರೂ ಮಾಡಲೇಬೇಕಾದ ಕೆಲಸ ಅದು, ಇಂಜಿನಿಯರಿಂಗ್ ಮುಗಿದು ಹೋಯ್ತು ಅಂತ ಅಂದುಕೊಳ್ಳುತ್ತಿರುವಾಗಲೇ ಇದೊಂದು ಕೆಲಸ ಬಾಕಿ ಇದೆ ಎಂದು ಆಗಾಗ ಮೊಟಕುವ ಕುಟುಕುವ ವಸ್ತು ಈ ಪ್ರಾಜೆಕ್ಟ್ ವರ್ಕ್.
         ಅದೇ ಗುಂಗಿನಲ್ಲಿ ಮಡಿವಾಳ ಸಿಲ್ಕ್ ಬೋರ್ಡ್ ಅಲ್ಲಿ 201 no ಬಸ್ ಹತ್ತಿದೆ. ಅದೇನೋ ನನ್ನ ಅದೃಷ್ಟ ಬಸ್ ಖಾಲಿ ಖಾಲಿ ಆಗಿತ್ತು. ಬಂದು ಹಿಂದಿನ ಸೀಟ್ ಅಲ್ಲಿ ಕಿಟಕಿ ಪಕ್ಕ ಕೂತೆ. ೪೦ ರುಪಾಯಿ ಕೊಟ್ಟು ಪಾಸು ತೆಗೆದುಕೊಂಡರೆ ಇಡಿ ಬೆಂಗಳೂರೇ ತಿರುಗಬಹುದಾದ ಒಂದು ಸೌಕರ್ಯ ನಿಮಗೆಲ್ಲ ಗೊತ್ತಿರುವಂತೆ ಇಲ್ಲಿದೆ. ನಾನು ಅ ಪಾಸ್ ಖರೀದಿಸಿಯೇ ಓಡಾಡುತಿದ್ದೆ. ಬಸ್ ನಲ್ಲಿ ಕಡೆಯ ಸೀಟ್ ಅಲ್ಲಿ ಯುವ ಜೋಡಿಯೊಂದು ಕೂತಿತ್ತು.ನನ್ನ ಪಕ್ಕ ಒಬ್ಬ ತಾತ ಬಂದು ಕೂತರು, ಸುತ್ತಲು ಒಂದಷ್ಟು ಹಿರಿಯರು ಇದ್ದರು. ನನಗೋ, ಎಲ್ಲರಿಗು ಇದ್ದಂತೆ ಆ ಯುವ ಜೋಡಿಯನ್ನು ನೋಡುವ ಕುತೂಹಲ, ಅ ಕುತೂಹಲದಿಂದಲೇ ಆಗಾಗ ಮೆಲ್ಲಗೆ ಅವರಿಗೆ ತಿಳಿಯದಂತೆ ಅವರನ್ನು ಗಮನಿಸುತ್ತ ಇದ್ದೆ. ನಾ ಮಾತ್ರ ಅಲ್ಲ ಅಲ್ಲಿದ್ದ ಎಲ್ಲರು ತಮ್ಮ ಗಮನವನ್ನು ಅ ಕಡೆ ಇಟ್ಟುಕೊಂಡೆ ಇದ್ದರು. ಕ೦ಡಕ್ಟರ್ ಟಿಕೆಟ್ ಕೊಡುವ ನೆಪದಲ್ಲಿ ಆಗಾಗ ಹಿಂದೆ ಬಂದು ಮುಖ ಸಿಂಡರಿಸುತ್ತ  ಹೋಗುತಿದ್ದ. ನನಗಂತೂ ಇನ್ನು ಕುತೂಹಲ ಹೆಚ್ಚಾಯಿತು. ಇನ್ನು ಸ್ವಲ್ಪ ಗಮನಿಸಿದೆ ಅ ಹುಡುಗ ಹುಡುಗಿಯ ಹೆಗಲ ಮೇಲೆ ಕೈ ಹಾಕಿಕೊಂಡಿದ್ದ, ಆಗಾಗ ಕಿವಿಯಲ್ಲಿ ಏನೇನೋ ಹೇಳುತಿದ್ದ, ಒಂದೆರಡು ಬರಿ ಮುತ್ತನ್ನು ಕೊಟ್ಟ. ಹೀಗೆ ಒಂದೆರಡು ಸ್ಟಾಪ್ ಆದಮೇಲೆ ಕ೦ಡಕ್ಟರ್ ಬಂದವನೇ, ಎದ್ದೆಲ್ರಿ ಮೇಲೆ ನೀವು ಅಂದ, ಅದಕ್ಕವರು ಯಾಕೆ ಅಂತ ಬಲು ದರ್ಪದಿಂದ ಕೇಳಿದರು ಅದಕ್ಕೆ ನಮ್ಮ ಕ೦ಡಕ್ಟರ್, ನಾನು ನೋಡ್ತಾನೆ ಇದೀನಿ ಆಗ್ಲಿಂದ ಏನು ನೀವು ಮಾಡ್ತಿರೋ ಕೆಲಸ?? ಇದೆಲ್ಲ ಮಾಡೋಹಾಗಿದ್ರೆ ಲಾಲ್ ಭಾಗೋ ಕಬ್ಬನ್ ಪರ್ಕೋ ಹೋಗಿ, BTS ಬಸ್ ಏನು ಬೆಡ್ ರೂಂ ಅಂದುಕೊಂಡಿದ್ದಿರ ಅಂತ ಸರಿಯಾಗಿ ಚಾರ್ಜ್ ತೊಗೊಂಡ. ಅಷ್ಟರಲ್ಲೇ ಅಲ್ಲಿದ್ದ ಜನರು ಕೂಡ ಏನಮ್ಮ , ನಿನಗಾದ್ರು ಮಾನ ಮರ್ಯಾದೆ ಇಲ್ವಾ ಎಲ್ಲಿರೋದು ನಿಮ್ಮ ಮನೆ, ಏನು ನಿಮ್ಮ ತಂದೆ ಹೆಸರು ಅಂತ ಎಲ್ಲ ಪ್ರಶ್ನೆ ಮಾಡಲು ಶುರು ಮಾಡಿದ್ದರು. ಅಷ್ಟರಲ್ಲೇ ಮುಂದಿನ ಸ್ಟಾಪ್ ಬಂದಿತ್ತು ಇಬ್ಬರು ಇಳಿದು ಏನು ಮಾತನಾಡದೆ ಕಾಲುಕಿತ್ತರು. ಮತ್ತಷ್ಟು ಓದು »
14
ಜೂನ್

ಮಾರಿಯಮ್ಮ ದೇವರ ಕಾಣಿಕೆ ಡಬ್ಬವೂ – ಮಸಾಲೆ ದೋಸೆಯೂ..!

– ರವಿ ಮುರ್ನಾಡು

ದೇವರ ಕಾಣಿಕೆ ದುಡ್ಡು ತೆಗೆಯುವುದೆಂದರೇನು… ರಕ್ತ ಕಾರಿ ಸತ್ತಾರು…! ಪಕ್ಕದ ಮನೆಯ ಅಮ್ಮುಣ್ಣಿಯಮ್ಮ  ಒಮ್ಮೆ ಹೇಳಿದ್ದರು. ಈಗೇನು ಮಾಡುವುದು.? ಕಾಣಿಕೆ ದುಡ್ಡು ತೆಗೆದದ್ದು ಆಯಿತು.. .ಅಲ್ಲೆಲ್ಲಾ ಹಾವುಗಳು ಓಡಾಡುತ್ತವೆ. ನಾನು ನೋಡಿದ್ದೆ. ಭಾರೀ ಉದ್ದದ ಹಾವುಗಳು. ರಾತ್ರಿ ಬಂದರೋ? ಅಳು ಬರುವುದೊಂದೇ ಬಾಕಿ. ಅಜ್ಜಿ- ಚಿಕ್ಕಮ್ಮ ಬೆಲ್ಲದ ಮಿಠಾಯಿಗೆ ಕೊಡುವ ಹಣವನ್ನು ಒಟ್ಟು ಸೇರಿಸಿ ವಾಪಾಸು ಹಾಕುವುದಾಗಿ ಹೇಳಿದ ಮೇಲೆ ನಿದ್ದೆ ಬಂತು.

ತೆಗೆದದ್ದು ಒಂದು ರೂಪಾಯಿ..! ಅಜ್ಜಿ ಸೀರೆ ಸೆರಗಿನ ಅಂಚಿನಲ್ಲಿ ದುಡ್ಡು ಇಟ್ಟಿರುತ್ತಾರೆ. ತೋಟದಲ್ಲಿ ಕೆಲಸ ಮಾಡುವಾಗ ” ಟೀ” ಕುಡಿಯಲು ಐವತ್ತು ಪೈಸೆ, ಇಪ್ಪತ್ತೈದು ಪೈಸೆ ಹಾಗೆ. ತೆಗೆದರೆ  ಹೊಡೆತ ಬೀಳುವುದಂತು ಖಂಡಿತಾ. ದೇವರ ಕಾಣಿಕೆ ದುಡ್ಡು ವಿಷಯ ಗೊತ್ತಾದರೋ?. ಬೆಳಿಗ್ಗೆ ಕಣ್ಣು ಬಿಟ್ಟಾಗಲೂ ಇದೇ ಆಲೋಚನೆ.

ದೊಡ್ಡ ಮಾವ ವೀರಾಜಪೇಟೆಯ ಯಾವುದೋ ಹೋಟೇಲ್ಲಿನಲ್ಲಿ ಸಪ್ಲಯರ‍್ ಆಗಿದ್ದ. ಸಂತೆ ದಿನ ಭಾನುವಾರ ಎರಡು ತಿಂಗಳಿಗೊಮ್ಮೆ ಬರುವುದು. ಆ ಒಂದು ಸಂತೆ ದಿನ ಅಜ್ಜಿ, ಚಿಕ್ಕಮ್ಮ ಮತ್ತು ನಾನೂ ಸಂತೆಗೆ ಹೋಗಿದ್ದಾಗ, ಅವನೂ ಬಂದಿದ್ದ. ಎಲ್ಲಾ ಸಾಮಾನು ಖರೀದಿಸಿದ ಮೇಲೆ ನಾವು ಮಸಾಲೆ ದೋಸೆ ತಿಂದದ್ದು. ಸುಂಟಿಕೊಪ್ಪದ ಗಣೇಶ ಸಿನೇಮಾ ಥಿಯೇಟರ‍್ ಪಕ್ಕದ ಕ್ಯಾಂಟೀನಿನಲ್ಲಿ. ಭಾರೀ ಅಗಲದ ದೋಸೆ ಅದು. ತುಪ್ಪ ಹಾಕಿ ಮಾಡಿದ್ದು. ಜೊತೆಗೆ ರುಚಿರುಚಿಯಾದ ಆಲೂಗೆಡ್ಡೆ ಪಲ್ಯ ಮತ್ತು ತೆಂಗಿನಕಾಯಿ ಚಟ್ನಿಯೂ. ಈ ರುಚಿಯನ್ನು ನೆನೆದು ರಾತ್ರಿ ಊಟವೂ ಸಪ್ಪೆ..!. ಅದೇ ಮಸಾಲೆ ದೋಸೆಯ ಕನಸುಗಳು. ಮತ್ತಷ್ಟು ಓದು »

12
ಜೂನ್

ಕನ್ನಡಿಗರು ಬಿಟ್ಟಿ ಬಿದ್ದಿಲ್ಲ ಅನ್ನುವುದು ನೆನಪಿರಲಿ…!

– ರಾಕೇಶ್ ಶೆಟ್ಟಿ

ಹೊಟ್ಟೆ ಪಾಡಿಗೆ ಅಂತ ಹುಟ್ಟಿದ ಊರು ಬಿಟ್ಟು ನಮ್ಮ ಬೆಂಗಳೂರಿಗೆ ಬಂದು, ಇಲ್ಲಿನ ಅನ್ನ,ನೀರು ಕುಡಿದು ’ಕನ್ನಡ ಕಲಿಯಿರಿ’ ಅಂದರೆ ನಮ್ಮ ವಿರುದ್ಧವೇ ತಿರುಗಿ ಬಿದ್ದು ಕನ್ನಡ/ಬೆಂಗಳೂರಿನ ಬಗ್ಗೆ ದ್ವೇಷಕಾರುವುದು ಒಂದು ರೀತಿಯ ಸುಲಭದ ತುತ್ತಾಗಿದೆ.

ಮೊನ್ನೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ “ಐಟಿ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಪ್ರವಾಹದಲ್ಲಿ ಕರ್ನಾಟಕ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ನೆಲೆಸಿರುವವರು ಇನ್ನು ಮುಂದೆ ಪ್ರಾಥಮಿಕ ಕನ್ನಡ ಭಾಷೆ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಕಡ್ಡಾಯವಾಗಲಿದೆ” ಅನ್ನುವ ಪ್ರಸ್ತಾವನೆಯೊಂದನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿತ್ತು.ಇದೇ ವಿಷಯವನ್ನ ಬೆಂಗಳೂರು ಮಿರರ್ ಅನ್ನುವ ಇಂಗ್ಲೀಷ್ ಪತ್ರಿಕೆ ಅನ್ಯ ಭಾಷಿಗರನ್ನ ಉದ್ರೇಕಿಸುವ ರೀತಿಯಲ್ಲಿ ಬರೆದಿದೆ.ಅಲ್ಲಿನ ಪ್ರತಿಕ್ರಿಯೆಗಳನ್ನ ನೋಡಿದರೆ ಬರೆದವರನ್ನ ಅಟ್ಟಾಡಿಸಿ ಬಡಿಯಬೇಕು ಅನ್ನಿಸುತ್ತದೆ.

ಈ ನೆಲದಲ್ಲಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾದರೆ, ಈ ನೆಲದ ಭಾಷೆ,ಸಂಸ್ಕೃತಿ,ಆಚಾರಗಳಿಗೆ ಬೆಲೆ ಕೊಡಬೇಕು ಅನ್ನುವ ಕಾಮನ್ ಸೆನ್ಸ್ ಇವರಲ್ಲಿ ಇಲ್ಲ ಅನ್ನುವುದಕ್ಕಿಂತ, ಯಾವುದಕ್ಕೂ ಪ್ರತಿಕ್ರಿಯಿಸಿದ ಕನ್ನಡಿಗರ ಧೋರಣೆಯನ್ನೆ ಇಂತ ಜನಗಳು ನಮ್ಮ ದೌರ್ಬಲ್ಯ ಅಂದುಕೊಂಡಿದ್ದಾರೆ.ಇಲ್ಲದಿದ್ದರೆ ಫ಼ೇಸ್ಬುಕ್ಕಿನಲ್ಲಿ ಹಾಲಿಡೇಐಕ್ಯು ಕಂಪೆನಿಯ ಉದ್ಯೋಗಿ ರಾಬಿನ್ ಚುಗ್ ಅನ್ನುವ ಪರದೇಶಿ ಕನ್ನಡಿಗರಿಗೆ ಫ಼ಕ್ ಆಫ಼್ ಅನ್ನುತ್ತಿರಲಿಲ್ಲ ಅಲ್ಲವಾ? ಆ ಕಿಡಿಗೇಡಿ ಕೆಲಸ ಮಾಡುವ ಕಂಪೆನಿಯ ವಿಳಾಸವಿಲ್ಲಿದೆ. ಅವರಿಗೊಂದು ಮಿಂಚೆ ಬರೆದು (ಭಾಷೆ ವಿಷಯ ಮುಟ್ಟಿಸುವಂತಿರಲಿ,ಬೈಗುಳ ದಯವಿಟ್ಟು ಬೇಡ) ಈ ಮಣ್ಣಿನ ಭಾಷೆಯ ಬಗ್ಗೆ ಗೌರವ ಇಲ್ಲದ ಇಂತವರನ್ನ ನಿಮ್ಮ ಕಂಪೆನಿಯಲ್ಲಿ ಇಟ್ಟುಕೊಳ್ಳುವಿರಾ ಅಂತಲೇ ಕೇಳಬೇಕು.ಮೊದಲೆ ಅವನಿಗೆ ಇಲ್ಲಿನ ರೀತಿ ರಿವಾಜುಗಳ ಬಗ್ಗೆ ತಕರಾರುಗಳಿವೆ.ಇಂತ ಹುಡುಗನನ್ನ ವಾಪಸ್ ಅವನ ಮನೆಗೆ ಕಳಿಸೋದು ನಮ್ಮ ಕರ್ತವ್ಯವಲ್ಲವೇ ಗೆಳೆಯರೇ?

ಮತ್ತಷ್ಟು ಓದು »

11
ಜೂನ್

ದೇಶಕ್ಕೋಸ್ಕರ ಹೋರಾಡುವವರ ಗತಿ ಇಷ್ಟೇ ಏನೋ..!!

– ಕೆ.ಎಸ್ ರಾಘವೇಂದ್ರ ನಾವಡ

ನೀವು ಏನಾದ್ರೂ ಹೇಳಿ… ದೇಶಕ್ಕೋಸ್ಕರ ಹೋರಾಡುವವರ ಗತಿ ಇಷ್ಟೇ.. ಅ೦ಥ ಮತ್ತೊಮ್ರ್ ಪ್ರೂವ್ ಆಗಿ ಹೋಗಿದೆ. ನಮ್ಮ ದೇಶದಲ್ಲಿ ಕೆಲವರ ಹಣೆಬರಹವನ್ನು ಸುಲಭವಾಗಿ ನಿರ್ಧರಿಸಬಹುದು.. ಹಿ೦ದೆ ಹಾವೇರಿಯಲ್ಲಿ ರೈತರ ಮುಷ್ಕರಕ್ಕೆ ಯಡಿಯೂರಪ್ಪ ಗೋಲಿಬಾರ್ ಗೆ ಆದೇಶ ನೀಡುವುದರ ಮೂಲಕ ಅದಕ್ಕೊ೦ದು ಗತಿ ಕಾಣಿಸಿದರು! ಇ೦ದು ರಾಮ್ ದೇವ್ ಹಣೆಬರಹವನ್ನು ಕೇ೦ದ್ರ ಸರ್ಕಾರ ಈ ರೀತಿ ಬರೆಯಿತು!! ಒಟ್ಟಾರೆ ನಾವು ಬ್ರಿಟೀಶ್ ಸತ್ತೆಯ ಕಾಲಕ್ಕೆ ಹೋಗುತ್ತಿದ್ದೇವೇನೋ ಎ೦ಬುದು ನನ್ನ ಸ೦ಶಯ!!

ಭರತ ಭೂಮಿಯಲ್ಲಿ  ಬ್ರಿಟೀಶ್ ಆಡಳಿತದಿ೦ದ ಮುಕ್ತರಾಗ ಬಯಸಿ ಸ್ವಾತ೦ತ್ರ್ಯದ ಕನಸು ಕ೦ಡು ಅದಕ್ಕಾಗಿ ಹೋರಾಡಿದವರು- ಶೋಷಿತ ವರ್ಗ – ತಮ್ಮ ಬೇಡಿಕೆಯನ್ನು ನ್ಯಾಯಬಧ್ಧವಾಗಿ ಕೇಳುವವರು- ಜನ ಕಲ್ಯಾಣಕ್ಕಾಗಿ ಹಾತೊರೆದು ಮುನ್ನುಗ್ಗುವವರು – ರಾಜಕೀಯ ವ್ಯವಸ್ಥೆಯನ್ನು ಸುಧಾರಿಸ ಬಯಸುವವರು ಮು೦ತಾದವರ ಹೋರಾಟದ ಅ೦ತ್ಯ ಹೀಗೇ!! ಸರಿ ಸುಮಾರು ಬ್ರಿಟೀಷರಿ೦ದ ಆರ೦ಭವಾದ ಈ ಪ್ರಜೆಗಳ ಧ್ವನಿಯನ್ನು  ಅವರುಗಳ ಗ೦ಟಲನ್ನೇ ಹಿಸುಕುವ ಮೂಲಕ ,ಅವರ ಹೋರಾಟಕ್ಕೊ೦ದು ಅನೈತಿಕ ಅ೦ತ್ಯ ನೀಡುವ ಈ ಕ್ರಮ ದುರದೃಷ್ಟವಶಾತ್ ಇಲ್ಲಿಯವರೆವಿಗೂ ಮು೦ದುವರೆದಿದೆ!! ಹಾಗ೦ತ ಎಲ್ಲ ಹೋರಾಟಗಳೂ ಇದೇ ಅ೦ತ್ಯವನ್ನು ಕ೦ಡವೇ ಎ೦ದರೆ ಖಚಿತವಾದ ಉತ್ತರ ನೀಡಲಿಕ್ಕಾಗುವುದಿಲ್ಲ.. “ಕೆಲವು ಸಮಸ್ಯೆಗಳು ತಾವಾಗೇ ಸೃಷ್ಟಿಯಾದರೆ ಕೆಲವನ್ನು ನಾವೇ ಸೃಷ್ಟಿಸಿಕೊಳ್ಳುತ್ತೇವೆ“ ಎ೦ಬ ನಾವಡ ಉವಾಚವೊ೦ದಿದೆ.. ಅದರ ಪ್ರಕಾರ ಪ್ರಸಕ್ತ ಭರತಭೂಮಿಯಲ್ಲಿಯೂ ಏಕೆ ಸಮಸ್ತ ಜಗತ್ತಿನಲ್ಲಿಯೂ  ಸರ್ಕಾರ ಗಳು ಹಾಗೂ ಜನತೆಗಳ ವಿಚಾರದಲ್ಲಿ ನಡೆಯುತ್ತಿರುವುದು ಇದೇ!!

ಮತ್ತಷ್ಟು ಓದು »

11
ಜೂನ್

ಬೆಳಕಿಗೆ ಹೊಸತನ ನೀಡಲಿ ಹಣತೆಗಳ ಸಾಲು

– ಮನೋಹರ ಪ್ರಸಾದ್‌,ಮಂಗಳೂರು  

ಸಂಜೆ ಯಾವಾಗ ಆಗುವುದೆಂಬ ಕಾತುರ. ನಾನಾಗ ಐದನೆಯ ಅಥವಾ ಆರನೆಯ ತರಗತಿಯಲ್ಲಿದ್ದೆ. ಶಾಲೆಯ ಕೊನೆಯ ಗಂಟೆ – ಆಗಿನ ಪರಿಭಾಷೆಯಲ್ಲಿ ಲಾಂಗ್‌ಬೆಲ್‌ ಯಾವಾಗ ಕೇಳಿಸುವುದೆಂದೇ ನಮ್ಮ ಗಮನ. ಶಿಕ್ಷಕರು ಕೂಡ ಇದನ್ನು ಅರಿತವರೇ ಆಗಿದ್ದರು. ಏಕೆಂದರೆ, ಅವರು ಕೂಡ ನಮ್ಮ ಹಾಗೆ ಎಳೆಯರೇ ಆಗಿದ್ದವರಲ್ಲ! ಅರ್ಧತಾಸು ಬೇಗನೆ ಲಾಂಗ್‌ಬೆಲ್‌! ಕ್ಲಾಸಿನಿಂದ ಹೊರ ಚಿಮ್ಮಿದ ಮಕ್ಕಳ ಹರ್ಷೋದ್ಗಾರ. ಪುಸ್ತಕದ ಚೀಲ ಹೆಗಲಿಗೇರಿಸಿ, ಬುತ್ತಿಯನ್ನು ಹುಡುಕಿಕೊಂಡು… ಮನೆಯ ಕಡೆಗೆ ಓಟ. ಆ ದಿನ ಅದು ಎಂದಿನ, ಸಾಮಾನ್ಯ ನಡಿಗೆಯಾಗಿರಲಿಲ್ಲ. ಅದು ಮನೆಯ ಕಡೆಗೆ “ಒಲಿಂಪಿಕ್‌ ಓಟ’. ಎಷ್ಟು ಬೇಗ ಮನೆ ತಲುಪುತ್ತೇವೆಯೋ ಅಷ್ಟು ಸಂಭ್ರಮದ ವೃದ್ಧಿ ಎಂಬ ಭಾವನೆ. ಬಾಲ್ಯದ ದಿನಗಳ ವಿಶೇಷವಾದ ಸ್ಪಂದನ ಇದಾಗಿತ್ತು.

ಈ ಸಂಭ್ರಮಕ್ಕೆ ಕಾರಣ. ದೀಪಾವಳಿಯ ಆರಂಭ. ರಜೆಯ ಸಂತಸದ ಜತೆ ಪ್ರತಿದಿನವೂ ಬಗೆಬಗೆಯ ರೂಪದಲ್ಲಿ ದೀಪಾವಳಿಯ ಆಚರಣೆಯ ಸ್ವಾರಸ್ಯ. ವರ್ಷಪೂರ್ತಿ ಉಳಿಸಿಕೊಂಡು ಬಂದ ಚಿಲ್ಲರೆ ಈಗ ನಮ್ಮ ಡಬ್ಬಿಯಲ್ಲಿ ಭಾರೀ ಮೊತ್ತ ಆಗಿರಬಹುದು ಎಂಬ ಲೆಕ್ಕಾಚಾರ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾತ್ರ ನಮ್ಮ ಈ “ಖಜಾನೆ’ಯನ್ನು ಒಡೆಯಲು ಮನೆಯವರ ಅನುಮತಿ. ಈ ಖಜಾನೆಯ ಸಂಪತ್ತು ನಮ್ಮ ಪಟಾಕಿ ಖರೀದಿ ಎಂಬ “ಮಹತ್ಕಾರ್ಯ’ಕ್ಕೆ ವಿನಿಯೋಗವಾಗಬೇಕು.
ಮತ್ತಷ್ಟು ಓದು »

10
ಜೂನ್

ಕನ್ನಡ ಪ್ರೇಕ್ಷಕರಿಗೆ ತಿಳುವಳಿಕೆ ಇಲ್ವ?

– ಅರುಣ್ ಜಾವಗಲ್

ಡಬ್ಬಿಂಗ್ ಬೇಡ ಎಂದು ಹೇಳುತ್ತಿರುವ ಬಿ ಸುರೇಶ ರವರು ಫೇಸ್ ಬುಕ್ ನಲ್ಲಿ ಕೆಲವು ಡಬ್ಬಿಂಗ್ ಪರವಾದ ಮಾತುಗಳನ್ನು ಪಟ್ಟಿ ಮಾಡಿ ಅದಕ್ಕೆ ಉತ್ತರಿಸಲು ಪ್ರಯತ್ಸಿಸಿದ್ದಾರೆ. ಡಬ್ಬಿಂಗ್ ಪರವಾದ ಹೆಚ್ಚು ಕಡಿಮೆ ಎಲ್ಲಾ ಮಾತುಗಳನ್ನ ಪಟ್ಟಿಮಾಡಿದ್ದಕ್ಕಾಗಿ ಮತ್ತು ಅದಕ್ಕೆ ಅರೋಗ್ಯಕರ ರೀತಿಯಲ್ಲಿ ಉತ್ತರಿಸಲು ಪ್ರಯತ್ಸಿಸಿದ್ದಕ್ಕೆ ನಾನು ಅಬಿನಂದಿಸುತ್ತೇನೆ.

ಡಬ್ಬಿಂಗ್ ಪರವಾದ ಮಾತುಗಳಲ್ಲಿ ಡಬ್ಬಿಂಗ್ ಬೇಕೆ ಬೇಡವೇ ಅನ್ನೊದನ್ನ ಪ್ರೇಕ್ಷಕ(ಮಾರುಕಟ್ಟೆ) ನಿರ್ದರಿಸರಿ ಅನ್ನೋದು ಒಂದು. ಇದೇ ವಾದ ನನ್ನದೂ ಕೂಡ. ಆದರೆ ಡಬ್ಬಿಂಗ್ ಬೇಕೆ ಬೇಡವೇ ಎಂದು ಮಾರುಕಟ್ಟೆ ನಿರ್ದರಿಸೋದು ಸರಿ ಅಲ್ಲ ಅನ್ನೋ ಹಾಗೆ ಬಿ ಸುರೇಶ ರವರು ಹೇಳಿದ್ದಾರೆ. ಇದರ ಬಗ್ಗೆ ಅವರ ಉತ್ತರ ನೋಡಿ- ಮತ್ತಷ್ಟು ಓದು »
10
ಜೂನ್

ಅಂಥ ಕಳ್ಳರು ಸಂತೆಲೀ ಜೊತೆಯಾದರು…

– ವಿಜಯ್ ಹೆರಗು

ಭಾರತ ದೇಶದ ಪ್ರಜಾಪ್ರಭುತ್ವ ಸಂಕಷ್ಟದಲ್ಲಿದೆ. ಇಲ್ಲಿ ವಾಹನ ಚಲಾಯಿಸಲು ಪರವಾನಗಿ ಇಲ್ಲದಿದ್ದರೂ ಪರವಾಗಿಲ್ಲ, ಪೋಲಿಸಪ್ಪನ ಕೈಗೆ ನೂರರ ನೋಟು ತುರುಕಿ ಬಚಾವಾಗಬಹುದು. ಆದರೆ ಉಪವಾಸ ಸತ್ಯಾಗ್ರಹ ಮಾಡಲು ಅನುಮತಿ ಬೇಕು. ಇಲ್ಲದಿದ್ದರೆ ಹೆಂಗಸರು, ಮಕ್ಕಳೆಂಬ ಭೇದ ತೋರದೆ ಸದೆಬಡಿಯುತ್ತಾರೆ. ಸಾಮಾನ್ಯ ಜನರು ಏನೂ ಮಾಡಲಾಗದ ಹಂತ ತಲುಪಿದ್ದಾರೆ. ತಾವೇ ಆರಿಸಿಕಳಿಸಿದ ಮಂದಿ ತಮ್ಮ ಮೇಲೆ ದಬ್ಬಾಳಿಕೆ ಮಾಡುವುದನ್ನು ನೋಡುವ ಅಸಹಾಯಕ ಸ್ಥಿತಿ ಯಾವುದೇ ದೇಶದ ಜನರಿಗೂ ಬರಬಾರದು.

  ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಯು.ಪಿ.ಎ  ಸರ್ಕಾರ ಹಗರಣಗಳ ಮೇಲೆ ಹಗರಣಗಳನ್ನು ಸೃಷ್ಟಿಸುತ್ತಾ ಸಾಗಿದೆ. ಜನರು ಶಾಂತಿಯುತ ಪ್ರತಿಭಟನೆಗೆ ಮುಂದಾದರೆ ರಾತ್ರೋರಾತ್ರಿ ಪೋಲಿಸ್ ದಾಳಿಗಳಾಗುತ್ತವೆ. ಇದನ್ನು ಪ್ರಧಾನಿ ದುರದೃಷ್ಟಕರ ಎಂದರೆ ಅವರದೇ ಸಂಪುಟದ ಸಚಿವರು ಸಮರ್ಥಿಸಿಕೊಳ್ಳುತ್ತಾರೆ. ಇಂತಹ ಒಂದು ಸರ್ಕಾರವನ್ನು ಆರಿಸಿ ಕಳಿಸಿದ್ದು ನಮ್ಮ ದುರದೃಷ್ಟ ಎಂದೇ ಹೇಳಬೇಕು.
 ಇನ್ನು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಭಾಜಪ ಸರ್ಕಾರ ನಮ್ಮ ನಾಡು ಕಂಡ ಅತ್ಯಂತ ಭ್ರಷ್ಟ ಸರ್ಕಾರ ಎಂಬ ಹಣೆಪಟ್ಟಿ ಹೊಂದಿದೆ. ಇಲ್ಲಿ ಯಡಿಯೂರಪ್ಪನವರೇ ಸರ್ವಸ್ವ. ಅವರು ಹೇಳಿದ್ದಕ್ಕೆ ಎಲ್ಲರೂ ಅಸ್ತು ಎನ್ನಲೇಬೇಕು, ಇಲ್ಲದಿದ್ದರೆ ಅವರಿಗೆ ಉಳಿಗಾಲವಿಲ್ಲ. ತಮ್ಮ ಕುಯುಕ್ತಿಯಿಂದ ಹೈಕಮಾನ್ದನ್ನೇ ಅಲುಗಾಡಿಸಬಲ್ಲ ಶಕ್ತಿ ಯಡಿಯೂರಪ್ಪನವರಿಗಿದೆ. ಮತ್ತಷ್ಟು ಓದು »