ಬೆಂಗಳೂರು ಕೇಂದ್ರಾಡಳಿತ ಪ್ರದೇಶವಾಗಲಿ
– ಶ್ರೀ ಹರ್ಷ ಸಾಲಿಮಠ
ಇದೊಂದು ಮಾತನ್ನು ಅತ್ಯಂತ ತೀವ್ರ ಸಂಕಟದಿಂದ ಹೇಳುತ್ತಿದ್ದೇನೆ. ಕಾಲಿಗೆ ಗ್ಯಾಂಗ್ರಿನ್ ಆದಾಗ ಕಾಲನ್ನು ಕತ್ತರಿಸುತ್ತಾರಲ್ಲ ಹಾಗೆ. ನೋವಾಗುತ್ತದೆ ಆದರೆ ಬದುಕಲು ಅದು ಅನಿವಾರ್ಯ. ಕನ್ನಡ/ಕರುನಾಡು ಉಳಿಯಬೇಕೆಂದರೆ ಈ ಕೆಲಸ ಆಗಬೇಕಾಗಿದೆ.
ಬೆಂಗಳೂರಲ್ಲಿ ಕನ್ನಡ ಸಿಗುವುದಿಲ್ಲ.ಕನ್ನಡಿಗರು ಕಾಣೆಯಾಗುತ್ತಿದ್ದಾರೆ ಎಂಬ ಮಾತನ್ನು ಅತಿಶಯೋಕ್ತಿ ಎಂದುಕೊಂಡಿದ್ದೆ.ಇತ್ತೀಚಿನ ನನ್ನ ಕೆಲ ಅನುಭವಗಳು ಇದು ಸತ್ಯವೆಂದು ಬಿಂಬಿಸಿವೆ. ನಾನು ಎರಡು ಕಂಪನಿಗಳಿಗೆ ಇಂಟರ್ ವ್ಯೂ ಪ್ಯಾನೆಲಿಸ್ಟ್ ಆಗಿದ್ದೇನೆ. ಎರಡು ಕಾಲೇಜುಗಳಿಗೆ ಅಕಡೆಮಿಕ್ ಕನ್ಸಲ್ಟಂಟ್ ಆಗಿದ್ದೇನೆ. ನನ್ನ ಅನುಭವ ಮತ್ತು ವಿಶ್ಲೇಷಣೆಯಿಂದ ಇದೊಂದು ಅಭಿಪ್ರಾಯವನ್ನು ಮುಂದಿಡುತ್ತಿದ್ದೇನೆ.
ಇಲ್ಲಿಯವರೆಗೆ ಕಂಪನಿಗಳಿಗಾಗಿ ಸುಮಾರು ಸೂರು ಜನರ ಸಂದರ್ಶನ ನಡೆಸಿದ್ದೇನೆ. ದಯವಿಟ್ಟು ನಂಬಿ. ಇಲ್ಲಿಯವರೆಗೆ ಒಬ್ಬನೇ ಒಬ್ಬ ಕನ್ನಡಿಗ ಸಂದರ್ಶನಕ್ಕಾಗಿ ಬಂದಿಲ್ಲ! ನಾನು ಮತ್ತು ಪ್ಯಾನೆಲ್ ನಲ್ಲಿರುವ ಕೆಲವರು ಕನ್ನಡಿಗ ಗೆಳೆಯರು ಕನ್ನಡದ ಹುಡುಗರು ಬಂದರೆ ಕೊಂಚ ದಡ್ಡರಿದ್ದರೂ ಸರಿ ಶತಾಯಗತಾಯ ಮುಂದಕ್ಕೆ ತಳ್ಳಬೇಕೆಂದು ಯೋಜಿಸಿಕೊಂಡಿದ್ದೆವು. ಆದರೆ ಕನ್ನಡದ ಒಬ್ಬ ಹುಡುಗನಾದರೂ ಬಂದರೆ ತಾನೆ? ಬಂದವರು ಬಹುತೇಕರು ತೆಲುಗರು ಮತ್ತು ಬಿಹಾರಿಗಳು! ಕೃಷ್ಣದೇವರಾಯ ವಿಶ್ವವಿದ್ಯಾಲಯದ ಲ್ಲಿ ಬಿಎಎಸ್ಸಿ ಪದವಿ ಮುಗಿಸಿ ಎರಡು ವರುಷಗಳ ಸುಳ್ಳು ಅನುಭವ ಹಾಕಿಕೊಂಡು ಬರುತ್ತಾರೆ. ಕಂಪನಿಗಳಾದರೋ ಇವರು ಸುಳ್ಳರು ಎಂದು ತಿಳಿದೂ ತೆಗೆದುಕೊಳ್ಳುತ್ತವೆ. ಏಕೆಂದರೆ ಈಗ ಬಹುತೇಕ ಕಂಪನಿಗಳು ಸರ್ವಿಸ್ ಮತ್ತು ಮೇಂಟೆನೆನ್ಸ್ ಕೆಲಸಗಳನ್ನು ನಡೆಸುತ್ತಿವೆ. ಈ ಕೆಲಸಕ್ಕೆ ಹೆಚ್ಚಿನ ಕೌಶಲ್ಯ ಅಗತ್ಯವಿಲ್ಲ. ಒಂದೆರಡು ತಿಂಗಳಲ್ಲಿ ಯಾರಾದರೂ ಕಲಿಯಬಹುದು. ಗಿರಾಕಿಗಳಿಗೆ ತೋರಿಸಲು ಬಿಲ್ಲಿಂಗಿಗಾಗಿ ಕೆಲವು ನೌಕರರ ಅವಶ್ಯಕತೆ ಇರುತ್ತದೆ. ಹಾಗಾಗಿ ಕೌಶಲ್ಯದ ಬಗ್ಗೆ ಹೆಚ್ಚಿನ ತಲೆ ಕೆಡಿಸಿಕೊಳ್ಳದೇ ಕಂಪನಿಗಳು ಇವರನ್ನು ಕೊಳ್ಳುತ್ತವೆ. ಇವರು ಕಡಿಮೆ ಸಂಬಳಕ್ಕೆ ರಾತ್ರಿ ಪಾಳಿಗೂ ಕೆಲಸ ಮಾಡಲು ತಯಾರಿರುವುದರಿಂದ ಕಂಪನಿಗಳಿಗೂ ಲಾಭ!
ಮತ್ತಷ್ಟು ಓದು 
ಗತಂ ಗತಂ
ಪವನ್ ಪಾರುಪತ್ತೇದಾರ್
ನಮಮ್ಮನಿಗೆ ಇದ್ದಕ್ಕಿದ್ದ ಹಾಗೆ ಅಕ್ಕನ ನೆನಪಾಗಿ ನನ್ನ ಕೇಳಿದ್ರು ಕರೆದು ಕೊಂಡು ಹೋಗು ಅಂತ, ನನಗು ಮಾಡಕ್ ಏನು ಕೆಲಸ ಇಲ್ಲದ ಕಾರಣ electronic ಸಿಟಿ ಕಡೆ ಪ್ರಯಾಣ ಮಾಡಿದೆ. ನಾನು ಅವರ ಮನೆಗೆ ಹೋಗಿ ಸುಮಾರು ೪ ವರ್ಷ ಗಳಾಗಿತ್ತು. ಹೋಗಿ ಅವರ ಮನೆ ಸೇರಿದ ತಕ್ಷಣ ಉಭಯ ಕುಶಲೋಪರಿಗಳನ್ನು ಮುಗಿಸಿ ಚೌ ಚೌ ಬಿಸ್ಕತ್ತು ತಿನ್ನುತ್ತ ಮಾತನಾಡುತ್ತಿರುವಾಗ ನಮ್ಮ ಅಣ್ಣ ನಮ್ಮ ತಾಯಿಗೆ ಹೇ ನಿನ್ನ 2nd year BA ದು ಒಂದು ಪುಸ್ತಕ ಹಾಗೆ ಇಟ್ಟಿದಿನಿ ಕಣೆ ಅಂದ ( ಹೆಚ್ಹು ಸಲಿಗೆ ಚಿಕ್ಕಮ್ಮ ಆದರು ಹೋಗೆ ಬಾರೆ ಎಂದೆ ಮಾತನಾಡುತ್ತಾರೆ )
ನಮಮ್ಮ ಯಾವುದೊ ಅದು ಅಂದ್ರು ,ಅದಕ್ಕೆ ನಮ್ಮಣ್ಣ untouchable ಅಂತ ನೆನಪಿದ್ಯ ಅಂದ ಅಮ್ಮ ಹೌದು ಹೌದು ಇನ್ನು ಇತ್ತಿದ್ಯ good ಅಂದ್ರು. ಅದಕ್ಕವ, ನಾನು ಮಾತ್ರ ಯಾರಿಗೂ ಪುಸ್ತಕ ಕೊಡೋದಿಲ್ಲಪ ಅದನ್ನ ಯಾರಿಗದ್ರು ಕೊಟ್ರೆ ವಾಪಾಸ್ ಬರೋದೆ ಕಷ್ಟ ಅದಕ್ಕೆ ಜೋಪಾನವಾಗಿ ಜೋಡಿಸ್ತೀನಿ ಸಮಯ ಸಿಕ್ಕಾಗ ಓದ್ತಾ ಇರ್ತೀನಿ ಅಂದ. ಅಷ್ಟರಲ್ಲೇ ಅಲ್ಲೇ ಕೂತಿದ್ದ ನಮ್ಮ ದೊಡ್ಡಪ್ಪ ಕಣಗಾಲ್ ಶಂಕರ್ ನಾರಾಯಣ್ ( ಕನ್ನಡ ಚಿತ್ರ ರಂಗದ ಹೆಸರಾಂತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ರವರ ಮೊದಲನೇ ತಮ್ಮ ) ಒಂದು ಮಾತು ಹೇಳಿದರು, ” ಪುಸ್ತಕಂ ವನಿತಂ ವಿತ್ತಂ ಪರ ಹಸ್ತೇ ಗತಂ ಗತಂ ” ಆಹಾ ಎಷ್ಟು ಅರ್ಥ ಗರ್ಭಿತವಾಗಿದೆ. ಈ ಮಾತು, ಪುಸ್ತಕ ಅಗಲಿ ಹೆಣ್ಣಾಗಲಿ ಹಣ ಅಗಲಿ ಇನ್ನೊಬ್ಬರ ಕೈಗೆ ಹೋದರೆ ಅದು ಹೋದಂತಯೇ ತಿಳಿಯಬೇಕು. ಅಕಸ್ಮಾತ್ ಮತ್ತೆ ಬಂದರು ಅದು ಸರಿಯಾಗಿ ಬರುವುದು ಬಹಳ ಕಷ್ಟ , ಸರಿಯಾದ ಮಾತು. ನನ್ನ ಜೆವನದಲ್ಲೇ ಅಂತ ಸಂಗತಿಗಳು ನಡೆದಿವೆ, ನಾನು ೫ನೆ ತರಗತಿ ಓದೋವಾಗ ನನಗೆ ಬಹುಮಾನವಾಗಿ ಬಂದಿದ್ದ ಒಂದು ಜನರಲ್ knowledge ಪುಸ್ತಕವನ್ನ ತೆಗೆದುಕೊಂಡಿದ್ದ ಮೇಸ್ಟ್ರು ನಾನು ಪ್ರೌಢ ಶಾಲೆ ಸೇರುವರೆಗೂ ಕೇಳಿದ್ರು ವಾಪಾಸ್ ಕೊಡಲಿಲ್ಲ. ಮತ್ತಷ್ಟು ಓದು 
ಕಳ್ಳ…! ನಮ್ಮ ಅನ್ನ ಕದ್ದ ಕಳ್ಳ..!
-ರವಿ ಮುರ್ನಾಡು
ಹೊಡೆಯಬೇಡಿ ನನ್ನನ್ನು… ಹೊಡೆಯಬೇಡಿ…. ಇನ್ನು ಮುಂದೆ ಕದಿಯುವುದಿಲ್ಲ…! ಹಾಗಂತ, ತೊದಲು ನುಡಿಯಲ್ಲಿ ಪ್ರಾರ್ಥಿಸಿದ್ದೆ. ಹೊಡೆತ ನಿಂತಿತ್ತು. “ಕಳ್ಳ” ಅನ್ನುವ ಹಣೆಪಟ್ಟಿ ತೆಗೆಯಲಾಗಲಿಲ್ಲ. ಅವರೆಲ್ಲಾ ಕೆಕ್ಕರುಗಣ್ಣಿನಲ್ಲಿ ದುರುಗುಟ್ಟಿ ನೋಡುತ್ತಿದ್ದರು. ಇನ್ನು ಅನ್ನ ಕದ್ದರೆ, ಕಣ್ಣಿಗೆ ಮೆಣಸು ಹಾಕಿ ಹೊಡೆದೇವು ಜೋಕೆ ಅಂದರು. ಆಯಿತು, ನಾನು ಕದಿಯಲಿಲ್ಲ. ಅನ್ನದ ಆಸೆಗೆ ಮೂಗು ಸುವಾಸನೆಯನ್ನು ಅರಸುತ್ತಿತ್ತು. ಹೊಟ್ಟೆ ಅರ್ಧವಾದರೂ ಏಟಿಗೆ ಹೆದರಿ ಹಸಿಯದೆ ಸುಮ್ಮನಾಯಿತು.
ಅನ್ನ ಕದ್ದ ಕತೆಗಳು ಸಿನೇಮಾದಲ್ಲಿ ಬಣ್ಣಗಳಾದವು. ಜಗತ್ತಿನ ಅತ್ತ್ಯುನ್ನತ ಪ್ರಶಸ್ತಿಗಳ ಕಿರೀಟ ಹೊತ್ತ ಹಲವು ಸಾಹಿತ್ಯ ಪ್ರಾಕಾರಗಳು ಇದರ ಹಿಂದೆ ಇತಿಹಾಸದ ಪುಟ ಸೇರಿದವು. ಇಂದಿಗೂ ಕಣ್ಣಿಗೆ ಕಾಣದ ಅನ್ನ ಕದಿಯುವ ಸರದಿಗಳು ಈ ಸಮಾಜದಲ್ಲಿ ಹೀಗೆ ಸಾಲು ಸಾಲಾಗಿ ಜೀವಂತವಾಗಿವೆ. ಇಂತಹ ಸಿನೇಮಾ ನೋಡುವಾಗ ಮತ್ತು ಸಾಹಿತ್ಯಗಳನ್ನು ಓದುವಾಗ ಅದರೊಳಗೆ ಆಕಸ್ಮಿಕವಾಗಿ ನಾನೇ ಪಾತ್ರಧಾರಿಯಾಗುತ್ತೇನೆ. ಅಲ್ಲೆಲ್ಲಾ ಮಾತನಾಡುತ್ತೇನೆ. ನನ್ನ ಹಾಗೇ ನನ್ನದೇ ನೆರಳಿನ ನರ್ತನ…!. ನನ್ನದೇ ಜಗತ್ತಿನ ಒಂದು ಪ್ರಶ್ನೆ . ನಾನೊಬ್ಬ ಅನ್ನ ಕದ್ದ ಕಳ್ಳನೇ?. ಹಿಗ್ಗಾ ಮುಗ್ಗಾ ಹೊಡೆದರು. ಬೆಳಿಗ್ಗಿನಿಂದ ಸಂಜೆಯವರೆಗೆ ದುಡಿದ ಅವರ ಅನ್ನವನ್ನು ನಾನು ಕದ್ಡೆ ಅನ್ನುವ ಕಾರಣಕ್ಕಾಗಿ ಕಂಡ ಕಂಡಾಗಲೆಲ್ಲ ಕಳ್ಳ ಎಂದು ಮೂದಲಿಸಿದರು. ಅವರ ಮಕ್ಕಳೆಲ್ಲಾ ಹಿಯ್ಯಾಳಿಸಿದರು. ಕಣ್ಣುಗಳು ತೇವಗೊಳ್ಳುತ್ತವೆ…. ಏಕೆ ಅನ್ನ ಕದ್ದೆ ಅಂತ ಅವರು ಕೇಳಲಿಲ್ಲ. ಸುರುಳಿ ಬಿಚ್ಚುತ್ತಿದೆ ಮನಸ್ಸು …!
ಅದು ಕಾರ್ಮಿಕರ ಲೈನ್ ಮನೆ. ಓಗರೆಯ ಐದು ಮನೆಗಳಿದ್ದವು. ಕೊಡಗಿನ ಸೋಮವಾರಪೇಟೆಯಲ್ಲಿ ಹೆಚ್ಚು ಇಂತಹ ಕಾರ್ಮಿಕರ ಮನೆಗಳು ಕಂಡು ಬರುತ್ತವೆ. ದೊಡ್ಡ ದೊಡ್ಡ ಕಾಫಿ ತೋಟಗಳು ಅದು. ಕಾಫೀ ಕೊಯ್ಲಿನ ಸಮಯದಲ್ಲಿ ಹೊರ ಜಿಲ್ಲೆಗಳಾದ ಮೈಸೂರು,ಹಾಸನ ಸೇರಿದಂತೆ, ಕೇರಳ,ತಮಿಳುನಾಡಿನಿಂದಲೂ ಕಾರ್ಮಿಕರು ಠಿಕಾಣಿ ಹೂಡುತ್ತಾರೆ. ಸುಂಟಿಕೊಪ್ಪ ಪಟ್ಟಣದಿಂದ ಎಂಟು ಕಿ. ಮೀ. ದೂರ ” ಕಾರೆಕೊಲ್ಲಿ” ಕಾಫಿ ಎಸ್ಟೇಟಿಗೆ. ಅಲ್ಲಿಂದ “ಕಂಟ್ರೋಲ್” ಎಸ್ಟೇಟಿಗೆ ಮೂರು ಕಿ.ಮೀ. ದೂರ . ಸುಂಟಿಕೊಪ್ಪದಿಂದ ಮಡಿಕೇರಿ ದಾರಿ ಮಧ್ಯೆಯೂ ಬಸ್ಸಿನಲ್ಲಿ ಇಳಿದು ಇಲ್ಲಿಗೆ ಹೋಗಬಹುದು. ಅದು ನಮಗೆ ಗೊತ್ತಿಲ್ಲ. ನಾವೆಲ್ಲರೂ ನಡೆದು ಹೋಗಿಯೇ ಈ ಎಸ್ಟೇಟಿಗೆ ತಲಪುತ್ತಿದ್ದದ್ದು. ಅದು ಕಾರೆಕೊಲ್ಲಿ ಎಸ್ಟೇಟ್ ಮೂಲಕ. ಇಲ್ಲಿಯೇ ನನ್ನ ಅಜ್ಜಿ ಮನೆ. ಮತ್ತಷ್ಟು ಓದು 
ಐ ಹೇಟ್ ಕ್ರಿಕೆಟ್..!!!???
ಅರೆಹೊಳೆ ಸದಾಶಿವರಾವ್
ಕ್ರಿಕೆಟಿಗರು ಮೈದಾನದಲ್ಲಿ ಆಡುತ್ತಿದ್ದರೆ ಮೈ ಎಲ್ಲಾ ಕಣ್ಣಾಗಿ, ದೇಶದ ಧ್ವಜವನ್ನು ಹಾರಿಸಿ ನೋಡುವ, ಮನೆಯೊಳಗೆ ಎಲ್ಲಾ ಕೆಲಸ ಬಿಟ್ಟು ಟಿ” ಮುಂದೆ ಕುಳಿತುಕೊಳ್ಳುವ ನಾವೆಲ್ಲರೂ ಇನ್ನೂ ಎಚ್ಚೆತ್ತುಕೊಳ್ಳದಿದ್ದರೆ, ಬಹುಷ ನಾವೂ ಈ ಕ್ರಿಕೆಟಿಗರೆಂಬ ‘ದೇಶ ದ್ರೋ”‘ಗಳಿಗಿಂತ ಕಡಿಮೆ ಇಲ್ಲದಂತಾಗುತ್ತದೆ. ವ್ಯತ್ಯಾಸ ಎಂದರೆ ಅವರಿಗೆ ಕೈತುಂಬಾ ಹಣ ಸಿಗುತ್ತದೆ, ನಮ್ಮದು ಜೀವನದ ಅಪೂರ್ವಗಳಿಗೆಗಳು ವ್ಯರ್ಥವಾಗಿ ಕಳೆದುಹೋಗುತ್ತವೆ.
ಹಲವು “ಷಯಗಳ ಬಗ್ಗೆ ನಾ”ಲ್ಲಿ ಯೋಚಿಸಲೇ ಬೇಕು. ಇತ್ತೀಚಿನ ಐಪಿಎಲ್ ಪಂದ್ಯಾವಳಿಯ ವೇಳೆ, ರಾಯಲ್ ಚ್ಯಾಲೆಂಜರ್ಸ್, ಬೆಂಗಳೂರು ತಂಡವನ್ನು ಹಲವರು ನಮ್ಮ ತಂಡ ಎಂದೇ ಸಂಬೋಧಿಸುತ್ತಿದ್ದರು. ನಮ್ಮ ಕರ್ನಾಟಕದ ಆಟಗಾರರನ್ನೆಲ್ಲಾ ಕೈ ಬಿಟ್ಟು, ಕೇವಲ ಬೇರೆ ರಾಜ್ಯ ಮತ್ತು “ದೇಶಿ ಆಟಗಾರರನ್ನು ಮಾತ್ರ ‘ಖರೀದಿಸಿ’, ನಮ್ಮ ರಾಜ್ಯದ ರಾಜಧಾನಿ ಬೆಂಗಳೂರಿನ ಹೆಸರಿಟ್ಟುಕೊಂಡು, ಬೆಂಗಳೂರಿನಲ್ಲಿ ಆದ ಪಂದ್ಯಗಳಲ್ಲೆಲ್ಲಾ ಕ್ರಿಕೆಟ್ ಪ್ರೇ”ಗಳ ಹಣ ದೋಚಿದ್ದು ಬಿಟ್ಟರೆ, ಬೇರಾವ ರೀತಿಯಲ್ಲೂ ಈ ಬೆಂಗಳೂರು ತಂಡ ನಮ್ಮzಲ್ಲವಾಗಿತ್ತು!. ಆದರೂ ಅದನ್ನು ನಮ್ಮದು ಎಂದು, ನಮ್ಮದೇ ರಾಜ್ಯದ ಕ್ರಿಕೆಟಿಗರು ಬೇರೆ ತಂಡದಲ್ಲಿ ಆಡುತ್ತಿದ್ದರೂ, ನಾವು ಮಾತ್ರ ಮರುಳರಂತೆ ‘ಅಭಿಮಾನ’ದ ಪರಾಕಾಷ್ಠೆ ಮೆರೆದದ್ದು. “ಜಯ ಮಲ್ಯರಿಗಂತೂ ಖುಯಾಗಿರಬಹುದು. ಮತ್ತಷ್ಟು ಓದು 
ಇಲ್ಲಿ ‘ನಿಮ್ಮ’ ಕಣ್ಣಿಗೆ ಸಣ್ಣವರಾದ ಸಾಮಾನ್ಯ ಜನರು ಇದ್ದರು…
ಡಾ.ಅಜಕ್ಕಳ ಗಿರೀಶ್
ರಾಮದೇವ್ ಬಗ್ಗೆ ಬೇಕಾದದ್ದು ಮಾತಾಡಲಿ. ಆದರೆ ಹಾಗೆ ಹಿಡನ್ ಅಜೆಂಡಾ, ಕೋಮುವಾದಿಗಳು ಇತ್ಯಾದಿ ಬೈಯುವಾಗ ಕೂಡ ಯಾರೊಬ್ಬರೂ ಗಮನಿಸದ ವಿಚಾರ ಅಂದರೆ, ಅವರನ್ನು ಬೇಂಬಲಿಸಿ ರಾಮಲೀಲ ಮೈದಾನಕ್ಕೆ ಗಂಟುಮೂಟೆ ಕಟ್ಟಿಕೊಂಡು ಹೋದ ಸಾವಿರಾರು ಜನರು ಇದ್ದಾರಲ್ಲ ಅವರು ಯಾವ ಸ್ವಾರ್ಥದಿಂದ ಹೋದರು? ನಿಜ , ಅಲ್ಲಿ ಕಡುಬಡವರು ಇದ್ದಿರಲಾರರು. ಆದರೆ,ಅಲ್ಲಿ ಇದ್ದವರು ನಿಜವಾದ ದೇಶಭಕ್ತರು. ದೇಶಭಕ್ತಿ ಅಂದರೆ ಏನು ಅಂತ ವಿವರಿಸುವುದು ಯಾವಾಗಲೂ ಕಷ್ಜ್ಟ. ಆದರೆ ಇಂದು ಬಹುಶಃ ದೇಶಭಕ್ತಿ ಅಂದರೆ ಏನು ಅಂತ ಯಾರಿಗಾದರೂ ಪಾಠ ಹೇಳಬೇಕಾದರೆ ನಾವು ಇದು ಅಂತ ತೋರಿಸಬಹುದುದು. ಬೇರೆ ಅಂಥ ಉದಾಹರಣೆಗಳು ಬಹಳ ಸಿಗಲಿಕ್ಕಿಲ್ಲ. ಊಟದ ಆಸೆಯಿಂದ ಸೇರಿದ್ದಾರೆ ಅನ್ನಲು ಅಲ್ಲಿ ಊಟವಿಲ್ಲ,ಉಪವಾಸ. ಹಣದ ಆಸೆಗೆ ಹೋದರೇ? ಅವರು ತಮ್ಮ ಸ್ವಂತ ಹಣದಿಂದ ಹೋದರು ,ಅಷ್ಟೇ ಅಲ್ಲ ,ಬಹುಶ ಬಹಳ ಜನ ಪೆಂಡಲ್ ಇತ್ಯಾದಿ ಖರ್ಚಿಗೆ ದೇಣಿಗೆ ಕೂಡ ಕೊಟ್ಟಿರಬಹುದು(ದೇವಸ್ತಾನಗಳಿಗೆ ನಮ್ಮ ಖರ್ಚಲ್ಲಿ ಹೋಗಿ ಕಾಣಿಕೆ ಹಾಕಿದಂತೆ.ದೇವಸ್ತಾನದಲ್ಲಿ ಪುಣ್ಯವಾದರೂ ಸಿಗುತ್ತೆ ಸ್ವಂತಕ್ಕೆ ಅಂತ ಆಸೆ ಇರುತ್ತೆ, ಇಲ್ಲಿ ಸ್ವಂತಕ್ಕೆ ಅಂತ ಏನಿಲ್ಲ.) ಮತ್ತಷ್ಟು ಓದು 
ನಾವಿನ್ನೂ ಬ್ರಿಟಿಷರ ಆಳ್ವಿಕೆಯಲ್ಲಿದ್ದೇವೆಯೇ?
– ಸಂಪತ್ ಕುಮಾರ್
ಸ್ವತಂತ್ರ, ಸಂವಿಧಾನಾತ್ಮಕವಾಗಿ ಕಾರ್ಯ ನಿರ್ವಹಿಸುವ ದೇಶದಲ್ಲಿ ಇಂತಹ ಘಟನೆಗಳು ನಡೆಯಲು ಸಾಧ್ಯವೇ!? ಜೂನ್ ೪ ರ ಘಟನೆ ನಾವೆಲ್ಲರೂ ತಲೆತಗ್ಗಿಸುವಂತೆ ಮಾಡಿದೆ.ಪ್ರಜೆಗಳ ಮೂಲಭೂತ ಹಕ್ಕುಗಳ ಕಗ್ಗೊಲೆಯಾಗಿದೆ. ಗಾಂಧಿಜಿ ಹೇಳಿಕೊಟ್ಟ ಸತ್ಯಾಗ್ರಹದಂತಹ ಅಸ್ತ್ರ ಬೆಲೆ ಕಳೆದುಕೊಂಡಿದೆ. ಹಿಂಸಾತ್ಮಕ ಪ್ರತಿಭಟನೆಗೆ ಪ್ರಚೋದನೆ ನೀಡಿದಂತಾಗಿದೆ.
ಪ್ರಜೆಗಳ ದನಿಯನ್ನು ಹತ್ತಿಕ್ಕಲು ಹೊಸ ವಿಧಾನವನ್ನು ಸರಕಾರ ಹೇಳಿಕೊಟ್ಟಿದೆ. ಬಾಬಾ ರಾಮದೇವ್ ಅವರ ಅಹಿಸಾತ್ಮಕ ಪ್ರತಿಭಟನೆಗೆ ಹಿಂಸಾತ್ಮಕ ಉತ್ತರ ನೀಡಿ ಸರ್ಕಾರ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದೆ.
ಏಪ್ರಿಲ್ ೧೨ ರಂದು ನಾನು ನಿಲುಮೆಯಲ್ಲಿ ಬರೆದ ಲೇಖನ “ಇನ್ನೊಂದು ಸಮರಕ್ಕೆ ಸಿದ್ದರಾಗಿ” ಸದಾಶಯದಂತೆ ಬಾಬಾ ರಾಮದೇವ್ ಅವರು ಸತ್ಯಾಗ್ರಹಕ್ಕೆ ಕುಳಿತದ್ದು ಸಂತೋಷದ ವಿಚಾರವಾಗಿರುತ್ತದೆ. ಲೋಕಪಾಲದಂತಹ ಬಹು ಆಯಾಮದ ಸಮಸ್ಯೆಯನ್ನು ಎದುರಿಸುವ ಬದಲು, “ಕಪ್ಪು ಹಣ” ದಂತಹ ಒಂದೇ ಸಮಸ್ಯೆಯನ್ನು ಎದುರಿಸಿ ಬಾಬಾ ಯಶಸ್ಸನ್ನು ಪಡೆಯುವ ಹಂತದಲ್ಲಿರುವಾಗಲೇ ಹೀಗೆ ಸತ್ಯಾಗ್ರಹವನ್ನು ಹತ್ತಿಕ್ಕಿದ್ದು ಸಮಸ್ಯೆಯನ್ನು ಉಲ್ಬಣಗೊಳಿಸಿದೆ. ಸರಕಾರದ ಸರ್ವಾಧೀಕಾರದ ಧೋರಣೆ ಎಂದಿಗೂ ಸಲ್ಲ.
ಬಾಲ್ಯಕಾಲವೇ ನೀ ಇನ್ನೊಮ್ಮೆ ಬಾರೆಯಾ?
– ಡಾ.ಶೈಲಾ ಯು.
ಮಾರಣಕಟ್ಟೆಯ ಜಾತ್ರೆಗೆ ಮಕ್ಕಳೊ೦ದಿಗೆ ಹೊರಟಿದ್ದೇನೆ; ನೆನಪುಗಳು ಮರುಕಳಿಸುತ್ತಿವೆ. ಅವರನ್ನು ನೆಪವಾಗಿಟ್ಟುಕೊ೦ಡು ಎಷ್ಟು ವರ್ಷಗಳಿ೦ದ ನನ್ನ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದೇನೋ? ನನಗೇ ನೆನಪಿಲ್ಲ. ಯಾವುದಕ್ಕೂ ಬಿಡುವಿಲ್ಲ ಬಿಡುವಿಲ್ಲ ಎ೦ಬ ಗೊಣಗಾಟವನ್ನು ತತ್ಕಾಲಕ್ಕೆ ನಿಲ್ಲಿಸಿ, ಮಕ್ಕಳಿಗೂ ಕಿ೦ಚಿತ್ ಅನುಭವ ಸಿಗುವುದೇ ಎ೦ಬ ಕಾತುರದಲ್ಲಿ ನನ್ನ ಅಕ್ಕರೆಯ ಅಜ್ಜಿ ನಮಗೆಲ್ಲ ಪ್ರೀತಿ ಉಣಿಸಿದ ಆವರಣ ಈಗ ಹೇಗಿದೆ ನೋಡಲು ಹೋಗುತ್ತಿದ್ದೇನೆ. ಅ೦ದು ಆ ಊರು ಎಷ್ಟೊ೦ದು ಆತ್ಮೀಯವಾಗಿತ್ತು; ಆ ದಿನಗಳು ಎಷ್ಟೊ೦ದು ಚೆನ್ನಾಗಿದ್ದವು!…
ಕು೦ದಾಪುರ ತಾಲೂಕಿನ ಅ೦ದಿನ ಒ೦ದು ಕುಗ್ರಾಮ ನನ್ನಜ್ಜಿಯ ಮನೆರುವ ಊರು. ಸುತ್ತಲಿನ ಇಳಿಜಾರಾದ ಪ್ರದೇಶದಲ್ಲಿ ಸಮತಟ್ಟಾದ ಗದ್ದೆಗಳು. ಅವುಗಳ ತಪ್ಪಲಲ್ಲಿ ನನ್ನಜ್ಜಿಯ ಮನೆ. ‘ಅಜ್ಜಿ ಮನೆ’ ಎನ್ನುವಾಗಲೇ ನನ್ನೊಳಗೆ ಅವಿತಿರುವ ಆರ್ದ್ರತೆಯ೦ತಹ ಹೇಳಿಕೊಳ್ಳಲಾರದ ಭಾವ ನನ್ನನ್ನು ಆವರಿಸಿಕೊಳ್ಳುತ್ತದೆ. ಮನಸ್ಸು ತು೦ಬಿಬರುವ ಸವಿ ಸವಿ ನೆನಪುಗಳು. ಬಾಲ್ಯದ ರಜಾಕಾಲದಲ್ಲಿ ಅಲ್ಲಿ ಕಳೆಯುತ್ತಿದ್ದ ದಿನಗಳು ನನ್ನನ್ನು ಏಕಾ೦ಗಿಯಾಗಿದ್ದಾಗಲೆಲ್ಲ ಕಾಡುತ್ತವೆ; ನನ್ನ ಸಹಜ ಭಾವುಕ ಗುಣವನ್ನು ಉದ್ದೀಪಿಸಿ ಕಣ್ಣ೦ಚಿನಲ್ಲಿ ನೀರು ಜಿನುಗುವ೦ತೆ ಮಾಡುತ್ತವೆ. ಮತ್ತಷ್ಟು ಓದು 
ಗಾಂಧಿ ಪಕ್ಷದೊಳಗಿನ ಬ್ರಿಟಿಷರು…!
– ರಾಕೇಶ್ ಶೆಟ್ಟಿ
ತಲೆಬರಹವನ್ನ ನಕಲಿ ಗಾಂಧಿಗಳ ಪಕ್ಷದೊಳಗಿನ ಬ್ರಿಟಿಷರು ಅಂತ ಓದಿಕೊಳ್ಳಿ.ಮಹಾತ್ಮರ ಹೆಸರನ್ನ ಬೇಡ ಬೇಡವೆಂದರೂ ಅನಿವಾರ್ಯವಾಗಿ ಅವರ ಹೆಸರನ್ನ ದುರ್ಬಳಕೆ ಮಾಡಿಕೊಳ್ಳುತ್ತಿರುವ ಪಕ್ಷದ/ಸರ್ಕಾರದ ದೌರ್ಜನ್ಯದ ವಿರುದ್ಧ ಮಾತನಾಡುವಾಗ ಬಳಸಿಕೊಳ್ಳಲೇಬೇಕಿದೆ.
ಪ್ರಾಮಾಣಿಕ ಪ್ರಧಾನಿಯ ಸರ್ಕಾರ ಅನೈತಿಕ ಕೆಲಸಕ್ಕೆ ಕಡೆಗೂ ಕೈ ಇಟ್ಟಿದೆ.ಮಧ್ಯರಾತ್ರಿ ಕಳ್ಳರಂತೆ-ದರೋಡೆಕೋರರಂತೆ ರಾಮ್ ಲೀಲಾ ಮೈದಾನಕ್ಕೆ ನುಗ್ಗಿ ಹೆಂಗಸರು-ಮಕ್ಕಳು ಅಂತ ನೋಡದೆಯೆ ರಾಕ್ಷಸರಂತೆ ವರ್ತಿಸಿದ ರೀತಿ ನೋಡಿದರೆ, ಮನಮೋಹನ್ ಸಿಂಗ್ ಅನ್ನುವ ಸೋ-ಕಾಲ್ಡ್ ಪ್ರಧಾನಿಯ ಪ್ರಾಮಾಣಿಕತೆ ಉಪ್ಪಿನಕಾಯಿ ಹಾಕಲಿಕ್ಕಾ ಅಂತ ಕೇಳಲೆಬೇಕಾಗುತ್ತದೆ.
ಹುಚ್ಚು ನಾಯಿ ಕಡಿತಕ್ಕೆ ಚುಚ್ಚು ಮದ್ದು ತೆಗೆದುಕೊಳ್ಳದಿದ್ದರೆ ಏನಾಗುತ್ತೆ ಅನ್ನೋದಕ್ಕೆ ದಿಗ್ವಿಜಯ್ ಸಿಂಗ್ ಆಗಾಗ ನೀಡೋ ಹೇಳಿಕೆಗಳೇ ಉದಾಹರಣೆ.ಇಂತ ದಿಗ್ಗಿ ನಿನ್ನೆ ಹೇಳಿದ ಮಾತು ನೆನಪಿದೆಯಾ? ‘ಸರ್ಕಾರ ರಾಮ್ದೇವ್ ಅವರಿಗೆ ಹೆದರಿಲ್ಲ, ಒಂದು ವೇಳೆ ಹೆದರಿದ್ದರೆ ರಾಮ್ ದೇವ್ ಅವರನ್ನ ಬಂಧಿಸುತಿತ್ತು!’.ಹಾಗೇ ಹೇಳಿದ ಮಧ್ಯರಾತ್ರಿಯೇ ಬ್ರಿಟಿಷರು ಜಲಿಯನ್ ವಾಲಾಬಾಗ್ಗೆ ನುಗ್ಗಿದ ರೀತಿಯಲ್ಲೆ ನುಗ್ಗಿ ಅದೇ ರಾಮ್ ದೇವ್ರನ್ನ ಬಂಧಿಸಿದ್ದಾರೆ.ಅಂದರೆ ಕಾಂಗ್ರೆಸ್ಸ್ ಸರ್ಕಾರದ ಬೆದರಿದೆ ಅಂತಲೇ ಅರ್ಥವಲ್ಲವಾ?
ರಾಮದೇವ್,ಮೀಡಿಯಾ ಮತ್ತು ಸಂಪಾದಕೀಯ
– ಮಹೇಶ ಪ್ರಸಾದ ನೀರ್ಕಜೆ
ಸಂಪಾದಕೀಯ ತಂಡ ಬರೆದ “ಸಂವಿಧಾನವನ್ನೇ ಒಪ್ಪದ ರಾಮದೇವ ಸತ್ಯಾಗ್ರಹಕ್ಕೆ ಇಳಿದಿದ್ದಾರೆ… ಜೈ ಹೋ! ” ಈ ಲೇಖನದ ಬಗ್ಗೆ ನನ್ನ ಕೆಲವು ಅನಿಸಿಕೆಗಳು. ಇವು ಒಟ್ಟಾರೆಯಾಗಿ ಮಾಧ್ಯಮಗಳ ಬೇಜವಾಬ್ದಾರಿತನದ ಬಗ್ಗೆ ನನ್ನ ಕೆಲವು ಟಿಪ್ಪಣಿಗಳು ಕೂಡ ಹೌದು. ಸದಾ ಮಾಧ್ಯಮದ ತಪ್ಪು ಒಪ್ಪುಗಳನ್ನು ಪ್ರಕಟಿಸುವ ತಂಡ ಅದರ ಜೊತೆಜೊತೆಗೆ ಬೇರೆ ಕೆಲವು ವಿಚಾರಗಳನ್ನು ಕೂಡ ಬರೆಯುತ್ತದೆ. ಅದರಲ್ಲೂ ವಿಶೇಷವಾಗಿ ಧಾರ್ಮಿಕ ಸಂಪ್ರದಾಯವಾದಿಗಳ ಬಗ್ಗೆ, ಮೂಢ ನಂಬಿಕೆಗಳ ಬಗ್ಗೆ ಸಾಕಷ್ಟು ಬರಹಗಳನ್ನು ಬರೆದಿದ್ದಾರೆ. ಅವರ ಕೆಲವು ಪ್ರಯತ್ನಗಳ ಬಗೆಗೆ ನನಗೆ ಹೆಮ್ಮೆಯಿದೆ. ಅದರಲ್ಲೂ ಜಿ ಕನ್ನಡ ವಾಹಿನಿಯಲ್ಲಿ ನಡೆಯುತ್ತಿದ್ದ ಬೃಹತ್ ಬ್ರಹ್ಮಾಂಡ ಕಾರ್ಯಕ್ರಮದ ಬಗೆಗಿನ ವಿರೋಧ ಎಲ್ಲರ ಗಮನ ಸೆಳೆದಿತ್ತು. ಆದರೆ ಮೊದಲಿನಿಂದಲೂ ಕೂಡ ನನಗೆ ಸಂಪಾದಕೀಯ ತಂಡದ ಬಗೆಗೆ ಕೆಲವು ಅನುಮಾನಗಳಿವೆ. ಮೊದಲನೆಯದಾಗಿ ತನ್ನ TRP ಹೆಚ್ಚಿಸಿ ಕೊಳ್ಳಲೋ ಎಂಬಂತೆ ಬ್ಲಾಗಿನಲ್ಲಿ ಎಲ್ಲೆಂದರಲ್ಲಿ ಅನಾಮಿಕ ಪ್ರತಿಕ್ರಿಯಗಳ ಮಹಾಪೂರ. ಈ ಪ್ರತಿಕ್ರಿಯೆಗಳನ್ನು ಯಾರು ಬರೆಯುತ್ತಾರೆ, ಅವರ ಪ್ರತಿಕ್ರಿಯೆಗಳಲ್ಲಿ ಏನಾದರು ಕುತ್ಸಿತ ಉದ್ದೇಶಗಳಿವೆಯೇ ಇತ್ಯಾದಿ ಪ್ರಶ್ನೆಗಳು ನನಗೆ ಮೊದಲಿನಿಂದಲೂ ಇವೆ. ಅಲ್ಲದೆ ಮೂಢ ನಂಬಿಕೆಯನ್ನು ವಿರೋಧಿಸುವ ನೆಪದಲ್ಲಿ ಎಲ್ಲಾ ಅಧ್ಯಾತ್ಮಿಕ ವ್ಯಕ್ತಿಗಳನ್ನು ಟೀಕಿಸುವ ಹುನ್ನಾರವೋ ಎಂದು ಕೂಡ ಸಂಶಯವಿದೆ. ಆದರೆ ಕೆಲವು ಬರಹಗಳಲ್ಲಿ ಉತ್ತಮ ಅಧ್ಯಾತ್ಮಿಕ ಮೌಲ್ಯಗಳನ್ನು ಅದರಲ್ಲೂ ವಿವೇಕಾನಂದ, ಬುಧ್ಧ ಗಾಂಧೀಜಿ ಬಗ್ಗೆ ಬರೆದಿದ್ದೂ ಹೌದು. ಒಟ್ಟಿನಲ್ಲಿ ನನ್ನ ಮಟ್ಟಿಗೆ ಸಂಪಾದಕೀಯ ವಿರೋಧಾಭಾಸಗಳ ಗೂಡು. ಇರಲಿ, ಈಗ ಪ್ರಸ್ತುತ ಲೇಖನದ ಬಗ್ಗೆ ಹೇಳುವುದಾದರೆ ನನ್ನ ಪ್ರಕಾರ ಇದರಲ್ಲಿ ಹಲವಾರು ತಪ್ಪುಗ್ರಹಿಕೆಗಳು, ಮತ್ತು ತಪ್ಪು ಮಾಹಿತಿಗಳು ಕಾಣಸಿಗುತ್ತವೆ. ಅವುಗಳನ್ನು ಪಟ್ಟಿ ಮಾಡಿ, ನಿಜ ಸಂಗತಿಯನ್ನು ಹೊರಗೆಡಹುವ ಒಂದು ಪ್ರಯತ್ನ ಇದು.
ಬಾನಿನಂಗಳದಲ್ಲೊಂದು ಸೌಂದರ್ಯ ಸ್ಪರ್ಧೆ
ನವನೀತ್ ಪೈ
ನಿಸರ್ಗ ದೇವತೆಯ ಎಲ್ಲಾ ಋತುಗಳಿಗೂ ತನ್ನದೇ ಆದ ಸೌಂದರ್ಯವಿದೆ. ಕೆಲವರಿಗೆ ಮುಂಜಾವಿನ ಮಂಜು ಸುಂದರ, ಕೆಲವರಿಗೆ ಮಳೆಗಾಲದ ಧಾರಾಕಾರ ಮಳೆ ಸುಂದರ, ಕೆಲವರಿಗೆ ಮುಸ್ಸೊಜೆಯ ಸೂರ್ಯಾಸ್ತ ಸುಂದರವಾದರೆ ಕೆಲವರಿಗೆ ಪೂರ್ಣಿಮೆಯ ರಾತ್ರಿ ಸೊಬಗು.
ಅಂದು ನಿದ್ದೆ ಬಾರದ ಕಾರಣ ಯಾವುದೋ ಒಂದು ಕಾದಂಬರಿಯ ಪುಟ ತಿರಿಗಿಸುತ್ತಾ ಕುಳಿತಿದ್ದೆ. ನಡುವೆ ತುಸು ವಿರಾಮ ಬೇಕೆನಿಸಿ ಅಂಗಳಕ್ಕೆ ಕಾಲಿಟ್ಟಾಗಷ್ಟೇ ತಿಳಿಯಿತು ಅಂದು ಹುಣ್ಣಿಮೆಯೆಂದು. ಬಾನಿನಂಗಳದಲ್ಲಿ ಚಂದಿರ ತನ್ನ ಸಮಸ್ತ ಕಾಂತಿಯಿಂದ ಕಂಗೊಳಿಸುತ್ತಾ ಚಿನ್ನದ ಬಟ್ಟಲಿನಂತೆ ಕಾಣಿಸುತ್ತಿದ್ದ. ನೆರೆಯ ಹೊಲಗಳಲ್ಲಿ ಹಾಲು ಚೆಲ್ಲಿದಂತೆ ಬೆಳದಿಂಗಳು ಹಬ್ಬಿತ್ತು. ತಂಗಾಳಿ ಗಿಡ ಮರಗಳನ್ನು ಅಪ್ಪಿ ಮಾಡುವ ನಿನಾದ ಇಂಪಾಗಿತ್ತು. ಚಂದಿರನನ್ನು ನೋಡುತ್ತಾ ಕುಳಿತುಕೊಳ್ಳಬೇಕೆನಿಸಿತು. ಚಂದಿರನೇತಕೆ ಓಡುವನಮ್ಮ ಮೋಡಕೆ ಬೆದರಿಹನೆ ಹಾಡು ಬಾಲ್ಯವನ್ನು ನೆನಪಿಸಿತು. ಚಂದಿರನಿಗೆ ಆಕರ್ಷಿತವಾಗಿ ಹಾರುತ್ತಿದ್ದ ಬೆಳ್ಳಕ್ಕಿ ಚಂದಿರನಲ್ಲೇ ಮನೆ ಮಾಡಿತು. ಈ ನಯನ ಮನೋಹರ ದೃಶ್ಯಕ್ಕೆ ಕಣ್ಣುಗಳೇ ಕ್ಯಾಮರಗಳಾದವು.
ಗಗನದಲ್ಲಿ ಚಂದಿರ ಮತ್ತು ತಾರೆಗಳ ನಡುವೆ ಸೌಂದರ್ಯ ಸ್ಪರ್ಧೆ ಏರ್ಪಟ್ಟಿತು. ಆಗಸವೇ ವೇದಿಕೆಯಾಯಿತು, ಮೋಡಗಳೇ ಪರದೆಗಳಾದವು, ಪರ್ವತ ಶ್ರೇಣಿಗಳೇ ನಿರ್ಣಾಯಕರಾದವು, ಸಮುದ್ರ ಸಾಗರಗಳೇ ಪ್ರೇಕ್ಷಕರಾದವು. ಮೋಡದ ಪರದೆ ಸರಿದಾಗ ಸ್ಪರ್ಧೆ ಆರಂಭವಾಯಿತು. ಚಂದಿರನ ಸೊಬಗನ್ನು ನೋಡಿ ಸಾಗರಗಳು ಚಂದಿರನನ್ನು ಅಪ್ಪಲು ಉಕ್ಕಿದವು. ಚಂದಿರ ಮಾರ್ಜಾಲದಂತೆ ಪೂರ್ವದಿಂದ ಪಶ್ಚಿಮಕ್ಕೆ ಅಡಿಯಿರಿಸುತ್ತಿದ್ದ. ನಿರ್ಣಾಯಕರು ಚಂದಿರನ ಮಾರ್ಜಾಲ ನಡಿಗೆಯಿಂದ ಆಕರ್ಷಿತರಾಗಿ ಪ್ರಾಥಮಿಕ ಸುತ್ತುಗಳಲ್ಲಿ ಚಂದಿರನಿಗೆ ಹೆಚ್ಚಿನ ಅಂಕಗಳನ್ನು ನೀಡಿದರು. ಅಹಂಕಾರದಿಂದ ಬೀಗಿದ ಚಂದ್ರ ತಾರೆಗಳನ್ನು ಹೀಯಾಳಿಸಿದ. ಬಾನಿಗೆಲ್ಲಾ ತಾನೇ ರಾಜ ಎಂದು ಮೆರೆದ.
ಸಂಘೇ ಶಕ್ತಿ ಕಲೌ ಯುಗೇ ಎಂದು ಅರಿತು ತಾರೆಗಳೆಲ್ಲಾ ಒಂದಾದರು. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಮನಗೊಂಡರು. ಸೋಲೇ ಗೆಲುವಿನ ಸೋಪಾನ ಎಂಬುದನ್ನು ಅರಿತು ಕಷ್ಟಪಟ್ಟು ಮುಂದಿನ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಚಂದಿರನು ಎಲ್ಲರನ್ನು ಹೀಯಾಳಿಸಿದ್ದರಿಂದ ಏಕಾಂಗಿಯಾದ. ಕೃಷ್ಣ ಪಕ್ಷ ಆರಂಭವಾಯಿತು. ದಿನೇ ದಿನೇ ಚಂದಿರ ಕುಗ್ಗುತ್ತಾ ಹೋದ ಮಾತ್ರವಲ್ಲದೆ ಸ್ಪರ್ಧೆಗಳಲ್ಲಿ ಆಸಕ್ತಿ ಕಳೆದುಕೊಂಡು ತಡವಾಗಿ ಆಗಮಿಸುತ್ತಿದ್ದ. ತಾರೆಗಳು ಏಕತಾನತೆಯಿಂದ ಒಂದೇ ರೀತಿಯಾಗಿ ಮಿಂಚುತ್ತಿದ್ದವು. ಚಂದಿರನ ಬೆಳದಿಂಗಳು ಕ್ಷೀಣಿಸುತ್ತಿರುವಾಗ ತಾರೆಗಳ ಬೆಳಕೆ ಬಾನನ್ನು ತುಂಬಿತು. ಚಂದಿರನಿಲ್ಲದ ಬಾನನ್ನು ಊಹಿಸಬಹುದಾದರೂ ತಾರೆಗಳಿಲ್ಲದ ಬಾನನ್ನು ಊಹಿಸಲೂ ಸಾಧ್ಯವಿಲ್ಲ. ಅಂತು ಸ್ಪರ್ಧೆಯ ನಿರ್ಣಾಯಕ ಘಟ್ಟ ಬಂದೇ ಬಿಟ್ಟಿತು. ಆ ದಿನ ಸೋಲು ತನಗೆ ಕಟ್ಟಿಟ್ಟ ಬುತ್ತಿ ಎಂದು ತಿಳಿದ ಚಂದಿರ ಸ್ಪರ್ಧೆಗೆ ಆಗಮಿಸಲೇ ಇಲ್ಲ. ಅಂದು ಅಮಾವಾಸ್ಯೆ ಆಗಿತ್ತು ತಾರೆಗಳ ಬೆಳಕೇ ಬಾನನ್ನು ತುಂಬಿತ್ತು. ಸೌಂದರ್ಯ ಸ್ಪರ್ಧೆಯನ್ನು ತಾರೆಗಳೇ ಗೆದ್ದರು. ಚಂದಿರನನ್ನು ತಮ್ಮೊಂದಿಗೆ ಸೇರಿಸಿಕೊಂಡರು. ಚಂದಿರನು ಶುಕ್ಲ ಪಕ್ಷದಲ್ಲಿ ಹಿಗ್ಗುತ್ತಾ ಸಾಗಿದ. ಮತ್ತಷ್ಟು ಓದು 




