ವಿಷಯದ ವಿವರಗಳಿಗೆ ದಾಟಿರಿ

Posts from the ‘ಪ್ರಚಲಿತ’ Category

21
ಏಪ್ರಿಲ್

ಸೀಟ್ ಬೇಕು ಆದ್ರೆ ರಾಜ್ಯ ಬೇಡಾ….

– ಚೇತನ್ ಜೀರಾಳ್

ಡಾ. ಬಿ. ಆರ್. ಅಂಬೇಡ್ಕರ್ ಅವರ ಜನುಮ ದಿನದಂದು ಒಂದು ಸೋಜಿಗದ ವಿಷಯ ಹೊರಬಿದ್ದಿದೆ. ಪತ್ರಿಕೆಗಳಲ್ಲಿ ಇದರ ಬಗ್ಗೆ ವರದಿಯಾದರು ಸಹ, ಇದನ್ನ ಪತ್ರಿಕೆಗಳು ಗಂಭೀರವಾಗಿ ಪರಿಗಣಿಸಿದಂತೆ ಕಾಣಲಿಲ್ಲ. ವಿಷಯ ಏನಪ್ಪ ಅಂದರೆ ನಮ್ಮ ದೇಶದ ಪ್ರಧಾನ ಮಂತ್ರಿಗಳಾದ ಡಾ. ಮನಮೋಹನ ಸಿಂಗ್ ಅವರು, ಸದ್ಯಕ್ಕೆ ಅಸ್ಸಾಂ ರಾಜ್ಯದಲ್ಲಿ ನೆಲೆಸುತ್ತಿದ್ದಾರೆ ಅನ್ನೋದನ್ನ ದಾಖಲೆಗಳು ಹೇಳುತ್ತಿವೆ. ಮನಮೋಹನ್ ಸಿಂಗ್ ಹಾಗೂ ಅವರ ಪತ್ನಿ ದಿಸ್ಪುರ್ ಕ್ಷೇತ್ರದ ಮತದಾರರಾಗಿದ್ದು, ಈ ಸಾರಿಯ ಚುನಾವಣೆಯಲ್ಲಿ ಮತದಾನ ಮಾಡಿಲ್ಲ ಅಂತ ಪತ್ರಿಕೆಗಳಲ್ಲಿ ವರದಿಯಾಗಿದೆ ಹಾಗೂ ಇದನ್ನ ಆ ಕ್ಷೇತ್ರದ ಉಸ್ತುವಾರಿ ವಹಿಸಿದ್ದ ಚುನಾವಣಾ ಅಧಿಕಾರಿ ಸಹ ನಿಜವೆಂದು ಹೇಳಿದ್ದಾರೆ.

ಮುಖ್ಯವಾದ ವಿಷ್ಯ ಏನಪ್ಪಾ ಅಂದ್ರೆ ಡಾ. ಮನಮೋಹನ್ ಸಿಂಗ್, ಅಸ್ಸಾಂನಿಂದ ರಾಜ್ಯ ಸಭೆಗೆ ಆಯ್ಕೆಯಾಗಿ ಬಂದಿದ್ದಾರೆ ಹಾಗೂ ಹಿಂದೆಯೂ ಆಯ್ಕೆಯಾಗಿದ್ದರು. ಮತದಾನ ಪ್ರತಿಯೊಬ್ಬ ನಾಗರೀಕನ ಮೂಲ ಕರ್ತವ್ಯ ಎಂದು ನಮ್ಮ ಸಂವಿಧಾನದಲ್ಲಿ ಹೇಳಲಾಗಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಒಂದು ಜನಪ್ರಿಯ ಸರ್ಕಾರವನ್ನು ಆರಿಸಲು ಪ್ರತಿಯೊಬ್ಬ ಪ್ರಜೆಗೂ ನೀಡಲಾಗಿರುವ ಪವಿತ್ರ ಹಕ್ಕು ಅನ್ನೋದನ್ನ ನಮ್ಮ ದೇಶದ ಪ್ರಧಾನ ಮಂತ್ರಿಗಳು ಮರೆತು ಬಿಟ್ಟಿದ್ದಾರೆಯೇ?? ಪ್ರಜ್ಞಾವಂತ ಜನರು ಚುನಾವಣೆಯಿಂದ ವಿಮುಖರಾಗುತ್ತಿದ್ದಾರೆ ಎಂದು ಹೇಳುತ್ತಿರವ ಈ ಸಮಯದಲ್ಲಿ ಒಬ್ಬ ರಾಜಕಾರಣಿ ಹಾಗೂ ಜವಾಬ್ದಾರಿಯುತ ಸ್ಥಾನದಲ್ಲಿರುವ ಮನಮೋಹನ್ ಸಿಂಗ್ ಅವರಿಂದ ಇಂತಹ ನಡೆ ಸರಿಯಾದುದಲ್ಲ.

ಮತ್ತಷ್ಟು ಓದು »

21
ಏಪ್ರಿಲ್

ಪೂರ್ವಾವಲೋಕನ : ಒಂದು ಸಂವಾದ

– CSLC

ಕನ್ನಡದ ವಿದ್ವಾಂಸ ಜಗತ್ತಿಲ್ಲಿ ನಮ್ಮ ಸಮಾಜದ ಮತ್ತು ಸಮಾಜವಿಜ್ಞಾನದ ಕುರಿತು ವೈಜ್ಞಾನಿಕವಾಗಿ ಹೆಚ್ಚು ಚರ್ಚೆಯಾಗಬೇಕೆಂಬ ಉದ್ದೇಶದಿಂದ ಬಾಲಗಂಗಾಧರರ ಹಲವಾರು ಆಂಗ್ಲ ಭಾಷೆಯ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿಲಾದ ’ಪೂರ್ವಾವಲೋಕನ’ ಕೃತಿಯನ್ನು (ಅಭಿನವ ಪ್ರಕಾಶನ) ಇತ್ತೀಚೆಗೆ ಪ್ರಕಟಿಸಲಾಗಿದೆ. ಈ ಪುಸ್ತಕದಲ್ಲಿರುವ ಕೆಲವಾರು ಲೇಖನಗಳ ಆಧಾರದ ಮೇಲೆ “ಪೂರ್ವಾವಲೋಕನ : ಒಂದು ಸಂವಾದ”  ಒಂದು ದಿನ ಕಾರ್ಯಾಗಾರವನ್ನು ಇದೇ ತಿಂಗಳ ೨೪ ರಂದು ಸರ್ಕಾರಿ ಕಲಾ  ಕಾಲೇಜು, ಕೆ.ಆರ‍್. ಸರ್ಕಲ್ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.

ನಾವು ಬರೆದ ಲೇಖನಗಳಿಗೆ ಹಾಗೂ ಇತರ ಗೆಳೆಯರ ಲೇಖನಗಳಿಗೆ ಪ್ರತಿಕ್ರಿಯೆ ಬರೆದಂತಹ ಸಂದರ್ಭದಲ್ಲಿ ಆಸಕ್ತಿದಾಯಕವಾಗಿ ಚರ್ಚೆಗೆ ಅನುವು ಮಾಡಿಕೊಡಲಾಗಿದೆ. ಆದಕಾರಣ ಇದು ಕೇವಲ ಅಂತರ್ಜಾಲದಲ್ಲಿ ನಡೆಯುವ ಚರ್ಚೆಗೆ ಸೀಮಿತವಾಗದೆ, ನೇರವಾಗಿ ಮುಖಾಮುಖಿಯಾಗಿ ಚರ್ಚಿಸಲು ಒಂದು ಸುಸಂದರ್ಭ ಎಂದು ತಿಳಿದು ತಮ್ಮೆಲ್ಲರನ್ನೂ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇವೆ. ಕಾರ್ಯಾಗಾರಕ್ಕೆ ಬರಲು ಯಾವುದೇ ಪ್ರವೇಶ ಶುಲ್ಕವಿಲ್ಲ, ನಿಮ್ಮ ಆಸಕ್ತಿಯೇ ಶುಲ್ಕವಾಗಿದೆ. ಹಾಗೂ ಕೆಳಕಂಡ ಲೇಖನಗಳನ್ನು ಓದಿಕೊಂಡು ಬಂದು ಚರ್ಚಿಸಬಹುದು.
ರಾಜಾರಾಮ ಹೆಗ್ಡೆಯವರು “ Why Understand Western Culture” which is translated as ” ಪಾಶ್ಚಾತ್ಯ ಸಂಸ್ಕತಿಯನ್ನು ಯಾಕೆ ಅರ್ಥ ಮಾಡಿಕೊಳ್ಳಬೇಕು? (ಪುಟ ಸಂಖ್ಯೆ ೧೦೦ – ೧೧೫  ಪೂರ್ವಾವಲೋಕನ) ಲೇಖನದ ಕುರಿತು ಚರ್ಚಿಸಲಿದ್ದಾರೆ.
ಪ್ರೊ. ಜಿ ಸಿವರಾಮಕ್ರಷ್ಣನ್  ” To Follow Our fore Fathers…” which is translated as “ನಮ್ಮ ಪೂರ್ವಜರನ್ನು ಅನುಸರಿಸಿ…” ಸಂಪ್ರದಾಯದ ಸ್ವರೂಪ” (ಪುಟ ಸಂಖ್ಯೆ ೮೫-೧೦೦  ಪೂರ್ವಾವಲೋಕನ) ಲೇಖನದ ಕುರಿತು ಚರ್ಚಿಸಲಿದ್ದಾರೆ.
20
ಏಪ್ರಿಲ್

ಡಬ್ಬಿಂಗ್ ಬೇಕು/ಬೇಡ ಅನ್ನೋದನ್ನ ಪ್ರೇಕ್ಷಕ ನಿರ್ಧಾರ ಮಾಡ್ಲಿ

ಮನೋರಂಜನೆ ಎನ್ನೋದು ಎಲ್ಲರ ಹಕ್ಕು, ಒಬ್ಬ ವ್ಯಕ್ತಿ ಮನೊರಂಜನೆಯನ್ನು ತನ್ನ ಭಾಷೆಯಲ್ಲೆ ಪಡೆಯುವುದು ಕೂಡ ಆ ವ್ಯಕ್ತಿಯ ಹಕ್ಕೂ ಕೂಡ. ಇದನ್ನ ತಡೆಯಲು ಯಾವುದೇ ಕಾನೂನು ಮುಂದೆಬರುವುದಿಲ್ಲ. ಇದಕ್ಕಾಗಿಯೇ ಇರಬೇಕು ಇಂದಿಗೂ ಕನ್ನಡಕ್ಕೆ ಡಬ್ ಮಾಡಬಾರದು ಅನ್ನೋ ಕಾನೂನು ಇಲ್ಲ.
ಚಲನಚಿತ್ರಗಳು, ವಾಣಿಜ್ಯ ಮಂಡಳಿ ಅಥವಾ ಇನ್ಯಾವುದೋ ಸಂಸ್ಥೆ ಪ್ರೇಕ್ಷಕನಿಗೆ ನೀಡುತ್ತಿರುವ ಬಿಕ್ಷೆಯಲ್ಲ. ಪ್ರತಿಯೊಬ್ಬ ಪ್ರೇಕ್ಷಕನೂ ತನಗೆ ಬೇಕಾದ ಚಿತ್ರವನ್ನು ದುಡ್ಡು ಕೊಟ್ಟು ನೋಡ್ತಾನೆ ಹೊರೆತು ಬಿಟ್ಟಿಯಾಗಿ ಅಲ್ಲ. ಅದರಿಂದ ಯಾವ ಸಿನೆಮಾ ನೋಡ್ಬೇಕು ಅಥವಾ ಯಾವ ಸಿನೆಮಾ ನೋಡ್ಬಾರ್ದು ಅನ್ನೊದನ್ನ ಪ್ರೇಕ್ಷಕ ನಿರ್ಧಾರ ಮಾಡ್ತಾನೆ. ಕಾನೂನು ಇಲ್ಲದಿದ್ದರೂ ಸಹ, ಕನ್ನಡಿಗನಿಗೆ ಪ್ರಪಂಚದ ಒಳ್ಳೆಒಳೆಯ ಚಿತ್ರಗಳನ್ನು ತನ್ನ ಭಾಷೆಯಲ್ಲೇ ನೋಡಲು ಆಗದಿರುವಂತೆ ಮಾಡಿರುವುದು ಗೋರ ಅಪರಾದ ಮತ್ತು ಇದು ಮಾನವ ಹಕ್ಕುಗಳ ಉಲ್ಲಂಗನೆ ಅಂತಲೂ ಹೇಳಬಹುದಾಗಿದೆ.
ಇಂದು ಡಬ್ಬಿಂಗ್ ಅನ್ನು ವಿರೋಧಿಸುತ್ತಿರುವವರು ಪರಭಾಶೆಯ ಚಿತ್ರವನ್ನೇ ನೋಡುತ್ತಿಲ್ಲ ಎಂದೇನಿಲ್ಲ. ಡಬ್ಬಿಂಗ್ ಸಿನೆಮಾ ಬಿಡುಗಡೆಯಾದರೆ ಬೀದಿಗಿಳಿದು ಹೋರಾಟ ಮಾಡುತ್ತೇನೆ ಎಂದು ಹೇಳೋ ಚಿತ್ರರಂಗದ ನಾಯಕರೊಬ್ಬರ ಮನೆಯಲ್ಲಿ ಇಂದಿಗೂ ಪರಭಾಷೆಯ ಚಿತ್ರಗಳನ್ನ ತಮ್ಮ ಮನೆಗೇ ತರಿಸಿಕೊಂಡು ನೋಡೋ ಸಂಪ್ರದಾಯ ಇದೆಯಂತೆ….. ರಜನೀಕಾಂತ್ ಸೇರಿದಂತೆ ಹಲವಾರು ನಟರ ಅದ್ದೂರಿ ಸಿನೆಮಾಗಳನ್ನು ಬಿಡುಗಡೆಗೂ ಮುಂಚೆ ಈ ಕುಟುಂಬದವರಿಗೆಂದೇ ಒಂದು ಪ್ರದರ್ಶನ ಏರ್ಪಾಡು ಮಾಡಿದ್ದರೆಂದು ಪತ್ರಿಕೆಗಳಲ್ಲಿ ಓದಿದ್ದೇನೆ. ಡಬ್ಬಿಂಗ್ ವಿರೋಧಿಸಿ ಕನ್ನಡಿಗರಿಗೆ ಓಳ್ಳೆಯ ಸಿನೆಮಾಗಳನ್ನು ನೋಡದಂತೆ ಮಾಡಿರೋ ಜನ ತಾವು ಮಾತ್ರ ಆ ಒಳ್ಳೆಯ ಸಿನೆಮಾಗಳನ್ನು ನೋಡೋದನ್ನ ಮಾತ್ರ ಮರೆತಿಲ್ಲ. ಮತ್ತಷ್ಟು ಓದು »
19
ಏಪ್ರಿಲ್

ಕನ್ನಡ ಆಡಳಿತ ಭಾಷೆ ಯಾಕಾಗಿಲ್ಲ ಗೊತ್ತೆ!?

– ವಸಂತ್ ಶೆಟ್ಟಿ

ಕನ್ನಡ ನಾಡು ಏಕೀಕರಣಗೊಂಡು ದಶಕಗಳೇ ಕಳೆದರೂ ಕನ್ನಡ ಎಲ್ಲ ಹಂತದಲ್ಲಿ ಆಡಳಿತ ಭಾಷೆಯಾಗಿ ಅನುಷ್ಠಾನಗೊಂಡಿಲ್ಲ ಅನ್ನುವ ಕೂಗು ನಾವೆಲ್ಲರೂ ಕೇಳಿಯೇ ಇರುತ್ತೇವೆ. ಇದಕ್ಕೆ ಸರ್ಕಾರದ ಇಚ್ಛಾಶಕ್ತಿಯ ಕೊರತೆಯೇ ಕಾರಣ ಎಂದೂ ಕೇಳಿರುತ್ತೇವೆ. ಭಾಷಾ ವಿಜ್ಞಾನಿ ಕೆ.ವಿ.ನಾರಾಯಣ ಅವರ ಕನ್ನಡ ಜಗತ್ತು: ಅರ್ಧ ಶತಮಾನ ಅನ್ನುವ ಹೊತ್ತಗೆ ಓದುತ್ತಾ ಇದ್ದೆ. ಅಲ್ಲಿ ಈ ಬಗ್ಗೆ ಅವರು ಕೊಡುವ ವಿವರಣೆ ಒಂದು ರೀತಿಯಲ್ಲಿ ಬೇರೆಯಾಗಿದೆ ಅನ್ನಬಹುದು. ಸರ್ಕಾರದ ಹೆಚ್ಚಿನ ಪ್ರಯತ್ನ (ಬಾಯಿ ಮಾತಲ್ಲಿ ಅಂತ ಬೇಕಾದ್ರೂ ಅಂದುಕೊಳ್ಳೊಣ 🙂 )ದ ನಂತರವೂ ಆಡಳಿತದಲ್ಲಿ ಕನ್ನಡ ಬಳಕೆ ಒಂದು ರೀತಿಯಲ್ಲಿ ಪಿರಮಿಡ್ ನಂತೆ ನಮಗೆ ಗೋಚರಿಸುತ್ತೆ. ಕೆಳ ಹಂತದಲ್ಲಿ ಕನ್ನಡ ವ್ಯಾಪಕವಾಗಿ ಬಳಕೆಯಾದರೆ, ಮೇಲೆ ಮೇಲೆ ಹೋದಂತೆ ಅದರ ಪ್ರಮಾಣ ಕಡಿಮೆಯಾಗುತ್ತ ಹೋಗುತ್ತದೆ. ಹಾಗಿದ್ದರೆ ಆಡಳಿತದಲ್ಲಿ ಕನ್ನಡದ ಬಳಕೆ ಅಂದುಕೊಂಡ ಮಟ್ಟದಲ್ಲಿ ಗೆಲುವು ಪಡೆಯದಿರಲು ಕಾರಣವೇನು ಎಂದು ಅವರು ಕೊಟ್ಟ ವಿವರಣೆಯನ್ನು ಈ ಕೆಳಗೆ ಕೊಟ್ಟಿರುವೆ.

ಈ ಅಪಯಶಸ್ಸನ್ನು ಎರಡು ದಿಕ್ಕಿನಿಂದ ವಿಶ್ಲೇಷಿಸಬೇಕಾದ ಅಗತ್ಯವಿದೆ. ಕಾರ್ಯಕ್ರಮ ಯಶಸ್ಸು ಪಡೆಯದಿರಲು ಅದರ ಹಿಂದಿನ ಯೋಜನಾ ತಂತ್ರಗಳಲ್ಲಿ ಕೊರತೆ ಇರುತ್ತದೆ. ಅಥವಾ ಅನುಷ್ಠಾನದ ಹಂತದಲ್ಲಿ ಹಲವು ಎಡರು ತೊಡರುಗಳಿರಬೇಕು. ಈ ದಿಕ್ಕಿನಿಂದ ನೋಡಿದಾಗ ಕನ್ನಡ ಅನುಷ್ಠಾನಕ್ಕೆ ಬೇಕಾದ ಭಾಷಾನೀತಿ ಮತ್ತು ಯೋಜನೆಗಳು ರಾಜ್ಯ ಸರ್ಕಾರಕ್ಕೆ ಇಲ್ಲವೆಂಬ ನಿರ್ಣಯಕ್ಕೆ ಬರುವುದು ಸಾಧ್ಯ. ಆದರೆ ಇದನ್ನು ಇನ್ನೊಂದು ದಿಕ್ಕಿನಲ್ಲಿ ನೋಡಿದಾಗ ಬೇರೆಯ ಸಾಧ್ಯತೆ ಗೋಚರಿಸುತ್ತದೆ.

ಮತ್ತಷ್ಟು ಓದು »

19
ಏಪ್ರಿಲ್

ಹಸಿರುಕಾನನದ ಮಗಳೀಕೆ ಗೌರಾದೇವಿ…..

– ಚಿತ್ರ ಸಂತೋಷ್

ಉತ್ತರ ಖಾಂಡದ ರೇನಿ ಗ್ರಾಮದಲ್ಲಿ  ಮರಗಳನ್ನು ಕಡಿಯಲು ಬಂದ ಅಧಿಕಾರಿಗಳ ವಿರುದ್ಧ ಬಂಡೆದ್ದವಳು ಗೌರಾದೇವಿ. ಬುಡಕಟ್ಟು ಜನರಿಗೆ ದಟ್ಟಾರಣ್ಯಗಳೇ ತವರು. ಕಾಡಿಗೂ-ನಮಗೂ ಇರುವುದು ಅಮ್ಮ-ಮಕ್ಕಳ ಸಂಬಂಧ.ಬದುಕಿದರೆ ನಮಗೆ ಆಸರೆ ನೀಡಿದ ಈ ಹಸಿರು ಕಾಡುಗಳಿಗಾಗಿ ಬದುಕಿ …ಎಂದು ಹಳ್ಳಿ ಮನೆಗಳ ಜಗುಲಿಯಲ್ಲಿ ಕುಳಿತು ಜಾಗೃತಿಯ ಕಹಳೆ ವೊಳಗಿಸಿದವಳು ಇವಳೇ ಗೌರಾದೇವಿ. ದೇಶದ್ಯಾಂತ ಪರಿಸರ ಕ್ರಾಂತಿ ಮಾಡಿದ ಚಿಪ್ಕೋ ಚಳವಳಿನ್ನು ಹುಟ್ಟು ಹಾಕಿದ್ದೇ ಇವಳು. ಇಂಥ ಗೌರಾದೇವಿಯನ್ನು ಗೌರವದಿಂದ ನೆನೆಯುವ ಕೆಲಸವನ್ನು ನಾವು ಮಾಡಬೇಕಿದೆ.

“ಸಹೋದರರೇ  ಈ ಅರಣ್ಯ ಪ್ರದೇಶ ನಮ್ಮ ಜೀವಮೂಲ. ನಮ್ಮ ಹುಟ್ಟಿನಿಂದ ಸಾವಿನ ತನಕದ ಜೀವನ ಬಂಡಿಗೆ ಸಾಥ್ ನೀಡುವುದು ಇದೇ ಹಸಿರು ಕಾನನ. ಈ ‘ರಮೆಯೇ ನಮ್ಮಮ್ಮ. ನೀವು ನಿಮ್ಮ ಹರಿತವಾದ ಗರಗಸವನ್ನು ನಮ್ಮಮ್ಮನ ಕರುಳಿಗೆ ಇಡುವ ವೊದಲು ನನ್ನ ಎದೆಗೆ ಹಿಡಿ”

ಬಹುಶಃ ಚಿಪ್ಕೋ ಚಳವಳಿ ಹುಟ್ಟುವ ವೊದಲು ಓರ್ವ ಬುಡಕಟ್ಟು ಮಹಿಳೆ ಉತ್ತರ ಖಾಂಡದ ಆ ಬೃಹತ್ ಅರಣ್ಯದಲ್ಲಿ ಈ ರೀತಿ ಮರಗಳನ್ನು ತಬ್ಬಿಕೊಂಡು ಸರ್ಕಾರದ ಅಕಾರಿಗಳ ಎದುರು ಈ ರೀತಿ ಅಳಲು ತೋಡಿಕೊಂಡಿದ್ದು ಬಹಳಷ್ಟು ಜನರಿಗೆ ನೆನಪು ಇರಲಿಕ್ಕಿಲ್ಲ. ಚಿಪ್ಕೋ ಚಳವಳಿ ಕುರಿತು ಮಾತೆತ್ತಿದ್ದರೆ ತಕ್ಷಣಕ್ಕೆ ನೆನಪಿಗೆ ಬರುವುದು ಸುಂದರ್ ಲಾಲ್ ಬಹುಗುಣ ಎಂಬ ಮಹಾನ್ ವ್ಯಕ್ತಿ. ಆದರೆ, ಇವರಿಗಿಂತಲೂ ವೊದಲು ಅಲ್ಲಿ ಮಹಿಳೆಯೊಬ್ಬಳ ದನಿಯಿತ್ತು,  ದೇಶದಾದ್ಯಂತ ಬೃಹತ್ ಪರಿಸರ ಕ್ರಾಂತಿಗೆ ಮುನ್ನುಡಿಯಾದ ಆ ಚಳವಳಿಯ ಹಿಂದೆ ಅನಕ್ಷರಸ್ಥೆ ಮಹಿಳೆಯ ಶ್ರಮ ಇತ್ತು, ಕಣ್ಣೀರಿತ್ತು, ಜಾಗೃತಿಯ ಕಹಳೆಯಿತ್ತು.

ಅವಳ ಹೆಸರು ಗೌರಾದೇವಿ.

ಮತ್ತಷ್ಟು ಓದು »

18
ಏಪ್ರಿಲ್

ವೋಟ್ ಬ್ಯಾಂಕ್ ಭಾಷೆಯಾಗಲಿ ಕನ್ನಡ

– ರಾಕೇಶ್ ಶೆಟ್ಟಿ

ಪತ್ರಿಕೆಗಳಲ್ಲಿ ಆಗೀಗ ‘ಅನ್ನ ಕೊಡುವ ಭಾಷೆಯಾಗಲಿ ಕನ್ನಡ’ ಅನ್ನೋ ಕಳಕಳಿಯ ಲೇಖನಗಳು ಬರುತ್ತಲೇ ಇರುತ್ತವೆ.ಒಂದೆಡೆ ‘ಸರ್ವಂ ಇಂಗ್ಲೀಶ್ ಮಯಂ’ ಮತ್ತೊಂದೆಡೆ ‘ಏಕಮ್ ಭಾರತಂ ಹಿಂದಿಮಯಂ’ (ಈ ಮಂತ್ರ ಸರಿ ಇಲ್ಲ ಅಂತೆಲ್ಲ ಹೇಳ್ಬೆಡಿ 😉 )  ಅನ್ನೋ ಕೇಂದ್ರದ ನೀತಿಯ ನಡುವೆ ಕನ್ನಡ ‘ಅನ್ನ’ ಕೊಡುವ ಭಾಷೆಯಾಗುವುದು ಹೇಗೆ?  ನನಗನ್ನಿಸುವ ಹಾಗೆ, ಈಗಿನ ಪರಿಸ್ಥಿತಿಯಲ್ಲಿ  ಅನ್ನ ಕೊಡುವ ಭಾಷೆಯಾಗುವ ಶಕ್ತಿ ಬರಬೇಕೆಂದರೆ ಮೊದಲು ‘ವೋಟ್ ಕೊಡುವ ಭಾಷೆಯಾಗಬೇಕು ಕನ್ನಡ’.ಎಲ್ಲ ಪಕ್ಷಗಳು ಕುಣಿಯುವುದು ವೋಟಿಗಾಗಿ,ಪುಡಿ ವೋಟಿಗಾಗಿ ಅನ್ನೋ ಕಾಲವಿದು.ವೋಟಿಗಿರುವಷ್ಟು ಶಕ್ತಿ ಸದ್ಯಕ್ಕೆ ಯಾವುದಕ್ಕಿದೆ ನೀವೇ ಹೇಳಿ?

ಕೆಲವರು ನನ್ನ ಮಾತನ್ನು ಒಪ್ಪಬಹುದು ಇನ್ನ ಕೆಲವರು ಇದನ್ನ ನಿರಾಕರಿಸಬಹುದು. ನಿರಾಕರಿಸುವವರು ಭಾರತದ ರಾಜಕೀಯ ಇತಿಹಾಸವನ್ನೊಮ್ಮೆ ನೋಡುತ್ತಾ ಬನ್ನಿ.ಗಾಂಧೀಜಿ ಕಾಲದಿಂದ ಇಂದಿನವರೆಗೂ ನಮ್ಮಲ್ಲಿ ನಡೆಯುತ್ತಿರುವುದೇ ಓಲೈಕೆಯ ವೋಟ್ ಬ್ಯಾಂಕ್ ರಾಜಕಾರಣ ಅಲ್ವಾ?

ಮತ್ತಷ್ಟು ಓದು »

17
ಏಪ್ರಿಲ್

ಎಂಡ್ ‘ದಿ’ ಸಲ್ಫಾನ್…!

16
ಏಪ್ರಿಲ್

ಗುಲ್ಬರ್ಗ ಜಿಲ್ಲೆ ಯಾವುದೇ ಕಲೆ/ಕಲಾವಿದರೂ ಇಲ್ಲದಂತಹಾ ಮರುಭೂಮಿಯೇ?

– ಅರುಣ್ ಜಾವಗಲ್

ಕಳೆದ ಕೆಲವು ದಿನಗಳಿಂದ ಕರ್ನಾಟಕ ಸರಕಾರ ಹಲವಾರು ಜಿಲ್ಲೆಗಳಲ್ಲಿ ಉತ್ಸವಗಳನ್ನ ನಡೆಸುತ್ತಿದೆ.ಈ ಕಾರ್ಯಕ್ರಮಗಳು ಕರ್ನಾಟಕದ ಜನರ ತೆರಿಗೆ ಹಣದಲ್ಲಿ ನಡೆಯುತ್ತವೆ. ಈ ಕಾರ್ಯಕ್ರಮಗಳಲ್ಲಿ ಮುಖ್ಯವಾಗಿ ಆಯಾ ಜಿಲ್ಲೆಯ ಮತ್ತು ನಮ್ಮ ನಾಡಿನ ಕಲಾವಿದರ ಕಾರ್ಯಕ್ರಮಗಳಿಗೆ ಅವಕಾಶವಿರಬೇಕು.ಆದರೆ ಆ ಪ್ರದೇಶದ ಮತ್ತು ನಮ್ಮ ನಾಡಿನ ಇತರೇ ಕಲಾವಿದರನ್ನ ಮರೆತಿರುವ ಸರಕಾರ ಹೊರ ರಾಜ್ಯದಿಂದ ಕಲಾವಿದರನ್ನ ಕರೆಸಿ ಉತ್ಸವಗಳನ್ನ ನಡೆಸುತ್ತಿದೆ.

ಕೆಲವು ದಿನಗಳ ಹಿಂದೆ ನಡೆದ ಬೀದರ್ ಉತ್ಸವದಲ್ಲಿ ಶೇಕಡಾ 90% ರಷ್ಟು ಕಾರ್ಯಕ್ರಮ ನಡೆಸಿಕೊಟ್ಟವರು ಬೀದರ್ ಜಿಲ್ಲೆಗಾಗಲೀ ಅಥವಾ ನಮ್ಮ ನಾಡಿಗೆ ಯಾವುದೇ  ಸಂಭಂದವಿಲ್ಲದವರು.ಇದೀಗ ಇದೇ ತಿಂಗಳ 15 ರಿಂದ 17 ರ ವರೆಗೆ ಕರ್ನಾಟಕ ಸರಕಾರ ಗುಲ್ಬರ್ಗ ಉತ್ಸವವನ್ನ ಆಯೋಜಿಸಿದೆ.ಯಾವುದೇ ಅನುಮಾನವಿಲ್ಲದಂತೆ ಈ ಕಾರ್ಯಕ್ರಮಕ್ಕೂ ಸಹ ಪರಭಾಷಿಕರಿಗೆ ಬಹುಪರಾಕ್ ಹೇಳಲಾಗಿದೆ.

ಮತ್ತಷ್ಟು ಓದು »

16
ಏಪ್ರಿಲ್

ಕನ್ನಡಕ್ಕೆ ಚಪ್ಪಲಿ ತೋರಿಸಿದವರು ಮಣ್ಣು ಮುಕ್ಕಲಿ…!

– ಜಯತೀರ್ಥ ನಾಡಗೌಡ, ವಿಜಾಪುರ

ಕನ್ನಡಕ್ಕೆ ಚಪ್ಪಲಿ ತೋರಿಸಿ ಕರ್ನಾಟಕದಲ್ಲೇ ಮೇಯರ್ ಆಗಲು ಸಾಧ್ಯವೇ! ಹೌದು ಇಂಥ ಘನಘೋರ ಕೃತ್ಯಗಳು ನಮ್ಮ ರಾಜ್ಯದಲ್ಲಿ ಮಾತ್ರ ಕಾಣ ಸಿಗುತ್ತವೆ. ಇತ್ತೀಚಿಗೆ ಬೆಳಗಾವಿಯಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನ, ನಡೆಸಕೂಡದು ಎಂದು ಅಡ್ಡಿಪಡಿಸಿ ಚಪ್ಪಲಿ ತೋರಿಸಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ನ ನಿರ್ಲಜ್ಜ ಮಹಿಳೆ ಮಂದಾ ಬಾಳೆಕುಂದ್ರಿ ಬೆಳಗಾವಿಯ ಮೇಯರ್ ಆಗಿರುವುದು, ಎಲ್ಲ ಕನ್ನಡಿಗರು ತಮ್ಮ ಎಕ್ಕಡದಿಂದ ತಾವೇ ಹೊಡೆದುಕೊಂಡಂತೆ.

ಎಲ್ಲ ವರದಿ, ತೀರ್ಪುಗಳು ಬಂದು ಬೆಳಗಾವಿ ಕನ್ನಡದ ಅವಿಭಾಜ್ಯ ಅಂಗ ಅಂತ ಸಾಬೀತಾದರೂ, ಹಾಳು .ಈ.ಎಸ್ ನ ಕಾರ್ಯಕರ್ತರು ಪುಂಡಾಟಿಕೆ ಮಾಡುತ್ತಿರುವುದು ನಮ್ಮ ಆಳಿದ/ಆಳುವ ಘನಂದಾರಿ ಪಕ್ಷಗಳ ಕಾಣಿಕೆಯೇ ಸರಿ. ಕ.ರ.ವೇ ಸತತ ಪರಿಶ್ರಮದಿಂದ ಜಾಗ ಖಾಲಿ ಮಾಡಿದ್ದ ಶಿವಸೇನೆ, ಎಂಇಎಸ್ ನವರನ್ನು ಮತ್ತೆ ಬೆಳೆಯಲು ಬಿಟ್ಟು ಇಂಥ ರಾಜದ್ರೋಹಿಗಳೊಂದಿಗೆ ಚುನಾವಣ ಹೊಂದಾಣಿಕೆ ಮಾಡಲು ಕೂಡ ನಮ್ಮ ಕೆಲ ಧುರೀಣರು ಮನಸ್ಸು ಮಾಡಿದ್ದು ಎಲ್ಲರಿಗೂ ಗೊತ್ತಿದ್ದ ಸತ್ಯ.

ಮತ್ತಷ್ಟು ಓದು »

15
ಏಪ್ರಿಲ್

ದಯವಿಟ್ಟು ಗುದ್ದಲಿಪೂಜೆಗೆ ಬನ್ನಿ…

– ಕಿರಣ ಬಾಟ್ನಿ

’ನಿಲುಮೆ’ಯಲ್ಲಿ ಪ್ರಕಟವಾಗಿದ್ದ ಶ್ರೀ ಅಜಕ್ಕಳ ಗಿರೀಶಬಟ್ಟಕನ್ನಡಕ್ಕಿಂತ ತಮಿಳು ಯಾವುದರಲ್ಲಿ ಮುಂದಿದೆ? ಎಂಬ ಬರಹಕ್ಕೆ ಉತ್ತರವಾಗಿ ನಾನು ಬರೆದಿದ್ದ ಇಗೋ, ಇದರಲ್ಲಿ ಮುಂದಿದೆ ಎಂಬ ಬರಹಕ್ಕೆ ಹಲವರು ತಮ್ಮ ಅನಿಸಿಕೆಯನ್ನು ತಿಳಿಸಿ, ಅದರ ಬಗ್ಗೆ ’ನಿಲುಮೆ’ಯಲ್ಲಿ ಚರ್ಚೆಯಾಗಿರುವುದು ಮನಸ್ಸಿಗೆ ಮುದ ತಂದಿದೆ. ಕನ್ನಡದ ಸೊಲ್ಲರಿಮೆ ಮತ್ತು ನುಡಿಯರಿಮೆಗಳ ವಿಶಯ ಬಹಳ ಮುಕ್ಯವಾದುದು. ಹಾಗೆಯೇ, ಕನ್ನಡ-ಕನ್ನಡಿಗ-ಕರ್ನಾಟಕಗಳ ಬಗ್ಗೆ ಕಾಳಜಿಯುಳ್ಳವರು ಇದನ್ನು ಕುರಿತು ನೆಮ್ಮದಿಯ ಮನಸ್ಸಿನಿಂದ ಚಿಂತಿಸುವುದು ಕೂಡ ಬಹಳ ಮುಕ್ಯವಾದುದು. ಆದುದರಿಂದ ನನ್ನ ಬರಹಕ್ಕೆ ಬಂದ ಅನಿಸಿಕೆಗಳನ್ನು ನಿದಾನವಾಗಿ ಕುಳಿತು ಯೋಚಿಸಿ ಉತ್ತರಿಸಲು ಸಮಯವನ್ನು ಕೊಟ್ಟ ’ಒಡ-ಕಾಳಜಿಗ’ರಿಗೆ ದನ್ಯವಾದಗಳು. ಇಲ್ಲಿ ನಾನು ಮಂಡಿಸಿದ ವಿಶಯಕ್ಕೆ ಸಂಬಂದಿಸಿದ ಅನಿಸಿಕೆಗಳಿಗೆ ನನ್ನ ಟಿಪ್ಪಣಿಗಳನ್ನು ಬರೆಯಲು ಪ್ರಯತ್ನಿಸುತ್ತೇನೆ.

ಕನ್ನಡದಾ ಮಕ್ಕಳೆಲ್ಲ ಒಂದಾಗಿಮಕ್ಕಳಲ್ಲ!

ಮೊದಲನೆಯದಾಗಿ, ಶ್ರೀ ನರೇಂದ್ರಕುಮಾರ್ ಎಸ್. ಎಸ್. ಅವರು ನಾನು ಪ್ರಶ್ನೆಗಳನ್ನು ಸ್ವಾಗತಿಸುವೆನೆಂದೂ, ಪ್ರಶ್ನಿಸಿದವರ ಮೇಲೆ ಹಾರಾಡುವುದಿಲ್ಲವೆಂದೂ, ತರ್ಕಬದ್ದವಾದುದನ್ನು ಒಪ್ಪುವೆನೆಂದೂ ಎಣಿಸಿ ಕೆಲ ಪ್ರಶ್ನೆಗಳನ್ನು ನನ್ನ ಮುಂದಿಟ್ಟಿದ್ದಾರೆ. ಅವರ ಈ ಪೀಟಿಕೆ ಬಹಳ ಸಂತಸ ತಂದಿತು, ಏಕೆಂದರೆ ಈ ನಂಬುಗೆಯು ಯಾವರೀರ್ವರ ನಡುವೆ ಇರುವುದಿಲ್ಲವೋ, ಅವರ ನಡುವೆ ಚರ್ಚೆಗೆ ಅರ್ತವಿಲ್ಲ. ಆ ನಂಬುಗೆಯನ್ನು ನಾನು ಈ ನನ್ನ ಟಿಪ್ಪಣಿಯಲ್ಲಿ ಉಳಿಸಿಕೊಳ್ಳುತ್ತೇನೆ ಎಂದು ನಂಬಿದ್ದೇನೆ.

ಮತ್ತಷ್ಟು ಓದು »