ವಿಷಯದ ವಿವರಗಳಿಗೆ ದಾಟಿರಿ

Posts from the ‘ಪ್ರಚಲಿತ’ Category

11
ಮೇ

ದಲಿತರನ್ನು ರಾಜಕೀಯವಾಗಿ ಬಳಸಿಕೊಳ್ಳುವ ಹುನ್ನಾರ ಇನ್ನೆಷ್ಟು ದಿನ ಮುಂದುವರೆಯುವುದು?

– ಶಿವಾನಂದ ಸೈದಾಪೂರ

ಪಿ.ಜಿ ಡಿಪ್ಲೊಮಾ ಇನ್ ಅಂಬೇಡ್ಕರ್ ಸ್ಟಡಿಸ್

ಬೆಳಗಾವಿ.

ಈಗಲೇ ಎರಡು ದಿನಗಳಲ್ಲಿ ನಡೆದ ಘಟನೆಗಳು; ನೂರಕ್ಕೆ ನೂರರಷ್ಟು ಮತದಾನದ ಜಾಗೃತಿಗಾಗಿ ಊರೂರುಗಳಿಗೆ ಸಂಪರ್ಕ ಮಾಡುತ್ತಿರುವ ಹೊತ್ತಲ್ಲಿ ಆದ ಸ್ವಂತ ಅನುಭವ. ದಲಿತರ ಓಣಿಗಳನ್ನು ಪ್ರವೇಸಿಸುವಾಗ ನಡೆದಂತದ್ದವುಗಳು. ಘಟನೆ  ಓಣಿಯ ಪ್ರವೇಶಕ್ಕೂ ಮೊದಲು ಗಮನಿಸಿದಾಗ ಕಣ್ಣಿಗೆ ರಾಚುವಂಥದ್ದು; ಈ ಕೇರಿಯಲ್ಲಿ ಕಾಂಗ್ರೆಸ್ ಒಂದನ್ನು ಬಿಟ್ಟು ಬಿಜೆಪಿಯವರಿಗೆ ಪ್ರವೇಶವಿಲ್ಲ! ಈ ರೀತಿ ಫಲಕ ನೇತಾಡುತಿತ್ತು. ಇಂತಹ ವಾತಾವರಣ ಇನ್ನೂ ಯಾಕೆ ಹೀಗಿದೆ? ಚುನಾವಣೆ ಸಂದರ್ಭದಲ್ಲಿಯೇ ಯಾಕೆ ಹೀಗೆ? ಇದನ್ನು ಏನು ಅಂತ ತರ್ಕಿಸಬಹುದು? ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದರೂ ಯಾಕೆ ಈ ವಾತಾವರಣ? ಅಸ್ಪೃಶ್ಯತೆ ನಿವಾರಣೆಗಾಗಿ ಒಂದು ಕಡೆ ಹೋರಾಟಗಳು ನಡೆಯುತ್ತಿದ್ದರೆ, ಮತ್ತೊಂದು ಕಡೆ ಅವರನ್ನು ಸ್ವೃಶ್ಯ ಸಮಾಜ ವಾಸಿಯಾಗಲು ಬಿಡದೆ ನಡೆಸುತ್ತಿರುವ ರಾಜಕೀಯ ಷಡ್ಯಂತ್ರವೇ ಬಹಳಷ್ಟಿವೆ.

ಘಟನೆ ಎರಡು; ರಾಯಬಾಗ ತಾಲ್ಲೂಕಿನ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದೇ ಹೆಸರಾದ ಹಿಡಕಲ್ ನಲ್ಲಿ ನಡೆದದ್ದು. ಇದೇ ಒಂದು ವಾರದಲ್ಲಿ ನಡೀದಿದೆ. ದಲಿತರ ಓಣಿಯಲ್ಲಿ ಮಹಿಳೆಯೊಬ್ಬಳು ಬೈಗುಳಗಳುಳ್ಳ ವಿಡಿಯೋವೊಂದು ವೈರಲ್ ಆಗಿದೆ. ಆ ವಿಡಿಯೋದಲ್ಲಿರುವುದೇನು ಸಾಮಾನ್ಯ ಸಂಗತಿಯೇನಲ್ಲ. ಹಾಲಿ ಶಾಸಕ ಮತ್ತು ಈ ಸಲದ ಕುಡಚಿ ಮತ  ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ರಾಜು ಅವರನ್ನು ಅತ್ಯಂತ ಕೀಳು ಮಟ್ಟಕ್ಕಿಳಿದು ಬಾಯಿಗೆ ಬಂದಂತೆ ನಿಂದಿಸುತ್ತಿರುವುದು. ಸ್ವತಃ ತಾನು ಒಬ್ಬ ಹೆಣ್ಣು ಅನ್ನೋದನ್ನು ಮರೆತು ಪಿ.ರಾಜು ಅವರ ತಾಯಿಯನ್ನು ಬೈಯುತ್ತಿರುವುದು.  ಹೇಳುವುದಕ್ಕೆ ಸಾಧ್ಯವೇ ಇಲ್ಲದ ಕನಿಷ್ಠ ಮಟ್ಟದ ಶಬ್ದಗಳನ್ನು ಬಳಸಿ ಬೈಯುತ್ತಿರುವುದನ್ನು ನೋಡಿದರೆ ಎಂಥವರಿಗಾದರೂ ಮೈ ಬೆವರುತ್ತದೆ. ಆ ಕೀಳುಮಟ್ಟದ ಶಬ್ದಗಳನ್ನು ಕೇಳಿದರೆ ಯಾವ ಸ್ತ್ರೀ ಪುರುಷರು ಅಸಹ್ಯ ಪಡುವದರಲ್ಲಿ ಎರಡು ಮಾತಿಲ್ಲ. ಇಷ್ಟಕ್ಕೂ ಆ ವಿಡಿಯೋದಲ್ಲಿ ಮಹಿಳೆ ಮಾಡುತ್ತಿರುವುದಾದರೇನು ಗೊತ್ತೇ? ಈ ಸಲದ ಕುಡಚಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಅಮಿತ್ ಘಾಟಗೆ ಪರ ಪ್ರಚಾರ ಮಾಡುತ್ತಿದ್ದಾಳೆ. ಸ್ವತಃ ಅವಳೇ ಹೇಳುತ್ತಾಳೆ ದಲಿತಕೇರಿಗಳಲ್ಲಿ ಅಮಿತ್ ಘಾಟಗೆ ಮತ್ತು ಸಿದ್ದರಾಮಯ್ಯನವರನ್ನು ಬಿಟ್ಟರೆ ಬೇರೆ ಯಾರೂ ಬರಬಾರದಂತೆ!  ಉಳಿದವರ್ಯಾರು ದಲಿತ ಕೇರಿಯ ಸಮೀಪ ಕೂಡ ಸುಳಿಬಾರದಂತೆ! ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳಲ್ಲಿ ಐವತ್ತಕ್ಕೂ ಅಧಿಕ ವರ್ಷಗಳ ಕಾಲ ಈ ದೇಶವನ್ನು ಆಳಿದ್ದು ಕಾಂಗ್ರೆಸ್ ಸರ್ಕಾರವೇ. ಆದರೆ ಅಭಿವೃದ್ಧಿಗಿಂತ ಜನಸಾಮಾನ್ಯರಲ್ಲಿ ಯಾವ ರೀತಿ ಜಾತಿಯತೆಯನ್ನು ಬಿತ್ತಿ ಬೆಳೆಸಿದೆ ಎಂಬುವುದು ಇದರಿಂದಲೇ ಸ್ಪಷ್ಟವಾಗುತ್ತದೆ.

ಮತ್ತಷ್ಟು ಓದು »

18
ಏಪ್ರಿಲ್

‘ಕೈ’ ಪಕ್ಷಕ್ಕೆ ಈ ಸಲ ಜನತೆ ‘ಕೈ’ ಕೊಡಬೇಕಿದೆ !

– ಅಭಿಷೇಕ್ ಬಿ ಎಸ್
‘ಕರ್ನಾಟಕ ನಂಬರ್ 1 ರಾಜ್ಯ’ – ಮೇಲಿಂದಲೋ ಕೆಳಗಿಂದಲೋ ?

ಕರ್ನಾಟಕ ಮತ್ತೊಮ್ಮೆ ಚುನಾವಣೆಯ ಕಡೆ ಮುಖ ಮಾಡಿ ನಿಂತಿದೆ. ಒಂದು ಸರ್ಕಾರದ ಅಧಿಕಾರಾವಧಿ ಮುಗಿತಾ ಬರ್ತಾ ಇದೆ. ಹೊಸ ಸರ್ಕಾರವನ್ನ ನಿರ್ಧಾರ ಮಾಡುವ ಅಧಿಕಾರ ನೇರವಾಗಿ ಜನರ ಬಳಿಗೆ shift ಆಗತ್ತೆ. ಕಳೆದ ಮೂರು ಚುನಾವಣೆಗಳಲ್ಲಿ ಕರ್ನಾಟಕ ಮೂರೂ ಪಕ್ಷಗಳ ಅಧಿಕಾರವನ್ನ ನೋಡಾಗಿದೆ. ಹಾಗಿದ್ರೆ, ಈ ಸಲವೂ ಅದೇ ಮೂರು ಪಕ್ಷಗಳು, ಮತ್ತು ಅದೇ ಮೂರು ಪಕ್ಷಗಳ ನಾಯಕರು ಇದ್ದಾರಲ್ಲ, ಯಾರಿಗೆ ವೋಟ್ ಮಾಡಬೇಕು ಅನ್ನೋದನ್ನ ಕರ್ನಾಟಕದ ಸಾಮಾನ್ಯ ಮತದಾರ ಲೆಕ್ಕ ಹಾಕ್ತಾ ಇರ್ತಾನೆ.

ಯಶಸ್ವಿ ಐದು ವರ್ಷಗಳನ್ನ ಮುಗಿಸಿದ ಶ್ರೀಯುತ ಸಿದ್ದರಾಮಯ್ಯನವರ ಸರ್ಕಾರ ಜನರ ಆಶೋತ್ತರಗಳಿಗೆ ತಕ್ಕನಾಗಿ ಕೆಲಸ ಮಾಡಿದ್ಯಾ ? ನಾಡಿನ ಜನತೆ ಬಯಸಿದ್ದ ಆಡಳಿತದ ಗುರಿಯನ್ನ ತಲುಪಲಿಕ್ಕೆ ಸಾಧ್ಯ ಆಗಿದ್ಯಾ ? ಇದು ವಿಮರ್ಶೆಯ ಸಮಯ. ಮತ್ತಷ್ಟು ಓದು »

17
ಏಪ್ರಿಲ್

ಜಮ್ಮುವಿನ ಹಿಂದೂಗಳ ಮೇಲೆ ಕಣ್ಣಿಟ್ಟಿರುವ ಮಾಫಿಯಾಗಳು ಯಾವುವು?

– ರಾಕೇಶ್ ಶೆಟ್ಟಿ

೬ ವರ್ಷಗಳ ಹಿಂದೆ ದೆಹಲಿಯಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣವೊಂದು ಇಡೀ ದೇಶದ ಅಂತಃಕರಣವನ್ನೇ ಕಲುಕಿಹಾಕಿತ್ತು.ಸಾರ್ವಜನಿಕರು, ಭಿನ್ನ ಭಿನ್ನ ನಿಲುವುಳ್ಳ ಸಂಘಟನೆಗಳೆಲ್ಲ ಅಪರೂಪದ ಒಗ್ಗಟ್ಟು ಪ್ರದರ್ಶಿಸಿದ್ದ ಕೇಸು ಅದು.ದೆಹಲಿಯ ವಿದ್ಯಾರ್ಥಿಗಳು,ಸಾರ್ವಜನಿಕರು ನೋಡು ನೋಡುತ್ತಿದಂತೆಯೇ ರಾಷ್ಟ್ರಪತಿಭವನದ ರಸ್ತೆಗೆ ಮುತ್ತಿಗೆ ಹಾಕಿಬಿಟ್ಟಿದ್ದರು. ಹಾಗೆ ರಾಷ್ಟ್ರಪತಿ ಭವನದ ಮುಂದೆ ನಿಂತು ನ್ಯಾಯ ಕೇಳಿದ ಯುವಕ-ಯುವತಿಯರ ಮೇಲೆಯೇ ಲಾಠಿ ಚಾರ್ಜ್,ಜಲಫಿರಂಗಿ,ಅಶ್ರು ವಾಯು ಪ್ರಯೋಗವನ್ನು ಆಗಿನ ಯುಪಿಎ ಸರ್ಕಾರ ನಡೆಸಿ ಉರಿಯುವ ಬೆಂಕಿಗೆ ತುಪ್ಪ ಸುರಿದಿತ್ತು.ದೆಹಲಿಯಲ್ಲಿ ಹೊತ್ತಿಕೊಂಡ ಕಿಡಿ ದೇಶದ ಮೂಲೆಯಲ್ಲೂ ಪ್ರತಿಧ್ವನಿಸಿತ್ತು.ಮೊದಲು ಮೊದಲು ಮೊಂಡತನ ತೋರಿದ್ದ ದೆಹಲಿಯ ಶೀಲಾ ದೀಕ್ಷಿತ್ ಸರ್ಕಾರ ಆ ನಂತರ ತಲೆಬಾಗಿ,ಅತ್ಯಾಚಾರ ಪ್ರಕರಣಗಳ ಕುರಿತ ಕಾನೂನುಗಳ ಸುಧಾರಣೆಗೆ ನ್ಯಾ.ವರ್ಮಾ ಅವರ ನೇತೃತ್ವದ ಸಮಿತಿಯನ್ನು ನೇಮಿಸಿತ್ತು,ಅಂತಿಮವಾಗಿ Criminal Amendment Bill, 2013 ಹೊರಬಂದಿತ್ತು.

ಆ ಭೀಕರ ಅತ್ಯಾಚಾರ ಪ್ರಕರಣದ ಮುಖ್ಯ ಆರೋಪಿಗಳೆಲ್ಲ ಆತ್ಮಹತ್ಯೆ ಮಾಡಿಕೊಂಡು ತೊಲಗಿದ್ದಾರಾದರೂ,ಅತ್ಯಾಚಾರಿಗಳ ಅತಿಕ್ರೂರಿ ಎನಿಸಿಕೊಂಡಿದ್ದವ ಮಾತ್ರ ‘ಅಪ್ರಾಪ್ತ’ ಎಂಬ ಸ್ಲೇಟು ಹಿಡಿದು ಇಂದಿಗೂ ಎಲ್ಲೋ ಬದುಕಿಕೊಂಡಿದ್ದಾನೆ. ಜೈಲಿನಿಂದ ಬಿಡುಗಡೆಯಾಗಿ ಬಂದವನಿಗೆ ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್ ಸರ್ಕಾರವೇ ಜೀವನಕ್ಕೆ ವ್ಯವಸ್ಥೆ ಮಾಡಿಕೊಟ್ಟಿತ್ತು. ಇಡೀ ದೇಶದಲ್ಲಿ ಕಿಚ್ಚು ಹಚ್ಚಿಹೋದ ಆ ಹೆಣ್ಣುಮಗಳ ನಿಜವಾದ ಹೆಸರು ಬಿಬಿಸಿ ಸುದ್ದಿ ಸಂಸ್ಥೆ ಹೇಳುವ ತನಕ ಜನಸಾಮಾನ್ಯರಿಗೆ ಗೊತ್ತಿರಲಿಲ್ಲ. ದೇಶ ಆ ಹೆಣ್ಣುಮಗಳಿಗೆ ‘ನಿರ್ಭಯ’ ಎಂಬ ಹೆಸರಿಟ್ಟಿತ್ತು. ಈ ದೇಶದ ಎಷ್ಟೋ ತಾಯಂದಿರು ಆಕೆಗಾದ ಅನ್ಯಾಯ ತಮ್ಮದೇ ಕುಟುಂಬದವರ ಮೇಲಾದ ಅನ್ಯಾಯವೆಂಬಂತೆ ಮರುಗಿದರು,ಬೀದಿಗಿಳಿದರು.ಹಾಗೆ ಬೀದಿಗಿಳಿದವರಿಗೆ ನಿರ್ಭಯಳ ಜಾತಿ ಯಾವುದು,ರಿಲಿಜನ್ ಯಾವುದು? ಆಕೆಯ ಹಿಂದುವೋ?ಮುಸ್ಲಿಮೋ?ಕ್ರಿಶ್ಚಿಯನ್ನೋ?ಇದ್ಯಾವುದರೋ ಪರಿವೆಯೂ ಇರಲಿಲ್ಲ. ಮುಖ್ಯವಾಗಿ ಅದರ ಅವಶ್ಯಕತೆಯೂ ಇರಲಿಲ್ಲ. ಇಡೀ ದೇಶ ಆ ಹೆಣ್ಣುಮಗಳ ನೋವಿಗೆ ಜೊತೆಯಾಗಿ ನಿಂತಿದ್ದು ಆಕೆಯ ಮೇಲಾದ ದೌರ್ಜ್ಯನ್ಯಕ್ಕಾಗಿ,ಆಕೆಯ ಪ್ರಾಣ ತೆಗೆದ ರಾಕ್ಷಸರಿಗೆ ಶಿಕ್ಷೆಯಾಗಲೇ ಬೇಕೆಂಬ ಏಕೈಕ ಕಾರಣಕ್ಕಾಗಿ!

ಮತ್ತಷ್ಟು ಓದು »

7
ಏಪ್ರಿಲ್

ಬುದ್ಧಿಜೀವಿಗಳ ಐಡಿಯಾಲಜಿ ಹಾಗೂ ಭಾರತೀಯ ಸಾಧಕರ ಸಹಜತರ್ಕ

– ವಿನಾಯಕ ಹಂಪಿಹೊಳಿ

“ಕಡಲೆಯು ಬಡವರ ಗೋಡಂಬಿ” ಎಂಬ ಮಾತನ್ನು ನಾವೆಲ್ಲರೂ ಕೇಳಿರುತ್ತೇವೆ. ಇದರ ಅರ್ಥವೇನು ಎಂಬುದು ಏನೂ ಕಲಿಯದ ಮನುಷ್ಯನಿಗೂ ಬೇಗನೇ ಅರ್ಥವಾಗುತ್ತದೆ. ಈ ಮಾತನ್ನು ನಮ್ಮ ಅಜ್ಜನಿಗೋ, ಅಜ್ಜಿಗೋ ಹೇಳಿ, ಇದರ ಅರ್ಥವೇನು ಎಂದು ಕೇಳಿದರೆ ಅವರು ಏನು ಹೇಳಬಹುದು? “ಗೋಡಂಬಿಯಿಂದ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನವಿದೆಯೋ, ಆ ಪ್ರಯೋಜನವನ್ನು ಕಡಲೆಯಿಂದಲೂ ಪಡೆಯಬಹುದು; ಅದೂ ಕೂಡ ಕಡಿಮೆ ಖರ್ಚಿನಲ್ಲಿ.” ಎಂಬ ವಿವರಣೆ ಅವರಿಂದ ಬರಬಹುದು.

ಈಗ ನಾವು ನಮ್ಮ ಹಿರಿಯರ ಬಳಿ, “ಈ ಮಾತಿನಲ್ಲಿ ಬಹಳ ಗಹನ ಅರ್ಥವಿದೆ, ಇದು ಗೋಡಂಬಿಯ ಶ್ರೇಷ್ಠತೆಯನ್ನು ಧಿಕ್ಕರಿಸಿ, ಆಹಾರಗಳೆಲ್ಲವೂ ಸಮಾನ ಎಂಬುದನ್ನು ಸಾರುವ ಅರ್ಥವು ಇದರಲ್ಲಿ ಅಡಗಿದೆ” ಎಂದರೆ ಅವರಿಗೇನು ಅರ್ಥವಾಗಲು ಸಾಧ್ಯ? “ಏನೋಪ್ಪಾ! ಅಷ್ಟೆಲ್ಲ ಗೊತ್ತಿಲ್ಲ” ಎಂದು ನುಣುಚಿಕೊಳ್ಳುತ್ತಾರೆ. ಆಗ ನಮಗೆ “ನಮ್ಮ ಪೂರ್ವಜರಲ್ಲಿ ತಾರ್ಕಿಕ ಸಾಮರ್ಥ್ಯವೇ ಇರಲಿಲ್ಲ. ತರ್ಕಮಾಡಿ ವಿಚಾರಿಸುವ ಬುದ್ಧಿಯೇ ಇಲ್ಲದೇ ಮೌಢ್ಯದಲ್ಲಿ ಇದ್ದರು. ತರ್ಕಬದ್ಧವಾಗಿ ಯೋಚಿಸುವದನ್ನು ನಾವು ರೂಢಿಸಿಕೊಂಡು ಮೌಢ್ಯದಿಂದ ಹೊರಬರಬೇಕು.” ಎಂದೆಲ್ಲ ಭಾವಿಸುತ್ತೇವೆ. ಮತ್ತಷ್ಟು ಓದು »

14
ಮಾರ್ಚ್

ರಾಜಕಾರಣಿಗಳೇ, ಮಹಿಳೆಯರಿಗೆ ರಕ್ಷಣೆಕೊಡಿ ಇಲ್ಲವೇ ಜಾಗ ಖಾಲಿ ಮಾಡಿ

– ಚೈತ್ರ ಗೌಡ ಹಾಸನ
ಸ್ನಾತಕೋತ್ತರ ಪತ್ರಿಕೋದ್ಯಮ,
ಮಾನಸಗಂಗೋತ್ರಿ, ಮೈಸೂರು.

ಆದಿಯಿಂದಲೂ ಸೃಷ್ಟಿಯ ಮೂಲ ಹೆಣ್ಣು, ಕರುಣೆ, ವಾತ್ಸಲ್ಯ, ಮಮತೆ, ಅಕ್ಕರೆ ತಾಳ್ಮೆ ಹೀಗೆ ವಿಶಿಷ್ಟ ಶಕ್ತಿಗಳ ಸಂಗಮದ ಜೊತೆಗೆ ನವಿರಾದ ಭಾವನಾತ್ಮಕ ತಂತುಗಳು ಬೆಸೆದುಕೊಂಡಿವೆ. ಹೆಣ್ಣು ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ಈ ಪ್ರಕೃತಿಯಿಂದಲೇ ವಿಭಿನ್ನ ಶಕ್ತಿಯನ್ನು ಪಡೆದಿರುವ ಪೋಷಕಿ, ತನ್ನ ಗರ್ಭದಲ್ಲಿ ಒಂಬತ್ತು ತಿಂಗಳು ಶಿಶುವನ್ನು ಹೊತ್ತು ಪೋಷಿಸಿ, ತನ್ನ ಎಲ್ಲ ಕಷ್ಟಗಳನ್ನು ನಗುನಗುತ್ತ ಸಹಿಸಿ ಮರುಹುಟ್ಟು ಎನ್ನುವಂತಹ ನೋವನ್ನು ಸಹಿಸಿಕೊಂಡು ಜನ್ಮ ಕೊಡುತ್ತಾಳೆ. ಪುರುಷನ ಜೀವನದ ಪ್ರತಿ ಹಂತದಲ್ಲಿಯೂ ಹೆಣ್ಣಿನ ಪಾತ್ರ ಮಹತ್ವವಾದದ್ದು. ಜನ್ಮಕೊಟ್ಟು ಸಲಹುವ ತಾಯಿಯಾಗಿ, ಅಕ್ಕರೆಯ ಸೋದರಿಯಾಗಿ, ಸಾಂತ್ವನ ನೀಡುವ ಸ್ನೇಹಿತೆಯಾಗಿ, ಭಾವನೆಗಳ ಬೆಸುಗೆಯ ಮಡದಿಯಾಗಿ, ಪ್ರೀತಿ ಚಿಲುಮೆಯ ಮಗಳಾಗಿ. ಇಂದು ಹೆಣ್ಣು ಎಲ್ಲ ಕ್ಷೇತ್ರದಲ್ಲೂ ಮುನ್ನಡೆಯುತ್ತ ಜಗತ್ತಿನ ದೃಷ್ಟಿಯನ್ನು ತನ್ನೆಡೆಗೆ ಸೆಳೆದಿದ್ದಾಳೆ. ಪ್ರತಿಭೆ, ಕಲೆ, ಸಾಹಿತ್ಯ, ಸಾಹಸ ಪ್ರವೃತ್ತಿ ಅಂತಹ ಸಾಧನೆ ಮಾಡಿ ವಿಶ್ವದ ಗೌರವಕ್ಕೆ ಪಾತ್ರಳಾಗಿದ್ದಾಳೆ. ಉತ್ತಮ ಗುಣ ನಡತೆಗಳಿಂದ ಪೂಜನೀಯ ಸ್ಥಾನದಲ್ಲಿದ್ದಾಳೆ. ಮತ್ತಷ್ಟು ಓದು »

8
ಮಾರ್ಚ್

ರಾಷ್ಟ್ರಕ್ಕೆ ರಕ್ಷಣೆ ಹೆಣ್ಣು ನೀಡಬಲ್ಲಳಾದರೆ ತನ್ನನ್ನು ತಾನೂ ರಕ್ಷಿಸಿಕೊಳ್ಳಬಲ್ಲಳು..

– ತನ್ಮಯೀ ಪ್ರೇಮ್ ಕುಮಾರ್

ಪ್ರತಿ ವರ್ಷದ ಹಾಗೆ ಈ ವರ್ಷವೂ ಮತ್ತೊಂದು ಮಹಿಳಾ ದಿನಾಚರಣೆಯ ಹೊಸ್ತಿಲಲ್ಲಿ ನಿಂತಿದ್ದೇವೆ.ಮಹಿಳೆಯ ಹರಹಿನ ವಿಸ್ತಾರ ಅಗಾಧವಾಗಿ ಬೆಳೆದು ನಿಂತಿದೆ. ಸಮಾಜದ ಮುಖ್ಯ ವಾಹಿನಿಯಲ್ಲಿಯೂ ಮಹಿಳೆಯ ನಾಗಾಲೋಟ ಭರದಿಂದಲೇ ಸಾಗುತ್ತಿದೆ.ಆದರೆ ಎತ್ತ?? ಆಕೆಗೆ ಸುರಕ್ಷಿತವಾಗಿ ನಿರ್ಭಿಡೆಯಿಂದ ಕೆಲಸ ಮಾಡಲು,ಓಡಾಡಲು, ಸ್ವತಂತ್ರವಾಗಿರಲು ಅನುವು ಮಾಡಿಕೊಟ್ಟಿದ್ದೇವಾ?? ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಆಕೆಗೆ ರಕ್ಷಣೆ ಒದಗಿಸಿದ್ದೇವಾ?? ನಮ್ಮೊಳನಗಿನ ನಮ್ಮ ನಾಡಿನ ಆಂತರ್ಯವನ್ನು ಪ್ರಶ್ನಿಸಿಕೊಂಡಾಗಲಂತೂ ಅತ್ಯಂತ ಹೇಸಿಗೆಯಿಂದ ತಲೆ ಬಗ್ಗಿಸಬೇಕಾದ ಪರಿಸ್ಥಿತಿ ನಿರ್ಮಿಸಿಕೊಂಡಿದ್ದೇವೆ. ಮಹಿಳಾವಾದ ,ಸಮಾನತೆ,ಹಕ್ಕುಗಳು ಹೀಗೆ ರೋಮ್ಯಾಂಟಿಕ್ ಶಬ್ದಗಳ ಆಚೆಗೆ ಹೆಣ್ಣಿಗೆ ಸಿಗಬೇಕಿದ್ದ ಕನಿಷ್ಟ ಸುರಕ್ಷತೆಯ ಭರವಸೆ ತಂದಿದ್ದೇವಾ? ಮತ್ತಷ್ಟು ಓದು »

1
ಮಾರ್ಚ್

ಮೋದಿಯವರನ್ನು ಪ್ರಶ್ನಿಸುವ ನೈತಿಕತೆ ಸಿದ್ಧರಾಮಯ್ಯನವರಿಗೆ ಇದೆಯೇ?

– ರಾಕೇಶ್ ಶೆಟ್ಟಿ

ನೈತಿಕತೆ ಎಂದರೆ ಕೇಜಿಗೆಷ್ಟು ಎಂದು ಬದುಕುವ ಜನರು ಯಾರನ್ನು ಬೇಕಾದರೂ, ಏನನ್ನೂ ಬೇಕಾದರೂ ನಾಚಿಕೆ ಬಿಟ್ಟು ಪ್ರಶ್ನಿಸಬಲ್ಲರು. ಉದಾಹರಣೆಗೆ, ಮುಖ್ಯಮಂತ್ರಿ ಸಿದ್ಧರಾಮಯ್ಯ ಮೊನ್ನೆ ಟ್ವಿಟರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು “ಲೋಕಪಾಲ್’ ಯಾಕ್ರೀ ನೇಮಕ ಮಾಡಿಲ್ಲ ಅಂತ ಪ್ರಶ್ನಿಸುತ್ತಿದ್ದಿದ್ದು! ಇಡೀ ದೇಶಕ್ಕೆ ಮಾದರಿಯಾಗಿದ್ದ ಕರ್ನಾಟಕ ಲೋಕಾಯುಕ್ತವನ್ನು ನುಂಗಿ ನೀರು ಕುಡಿದ ಸಿಎಂ ಸಾಹೇಬರು ಪ್ರಧಾನಿಯವರನ್ನು ಆ ಪರಿ ಅಧಿಕಾರವಾಣಿಯಲ್ಲಿ ಪ್ರಶ್ನಿಸುವುದನ್ನು ನೋಡಿದಾಗ, ಇವರಿಗೆ ಪಾಪ ಪ್ರಜ್ಞೆಯೇ ಇಲ್ಲವೇನೋ ಎನ್ನಿಸುತ್ತಿತ್ತು. ಮತ್ತಷ್ಟು ಓದು »

27
ಫೆಬ್ರ

ನಂಬುಗೆಯೆಂಬ ಪಾತ್ರೆಯ ಒಳಗೆ ಸುಳ್ಳುಸುದ್ಧಿಗಳ ಜಾತ್ರೆ!

– ಸುಜಿತ್ ಕುಮಾರ್

ಇಲ್ಲಿ ಸರ್ವವೂ ಇಂಟರ್ನೆಟ್ಮಯ. ಇಲ್ಲಿ ಕ್ಷಣಮಾತ್ರದಲ್ಲಿ ಕಣ್ಣೊಡೆದು ಕೋಟಿ ಜನರ ಕನಸಿನ ರಾಣಿಯಾಗಲೂಬಹುದು ಅಂತೆಯೇ ಸುಳ್ಳಿನ ಕಂತೆಯಿಂದ ಕಟ್ಟಿರುವ ರಾಜಪಟ್ಟದ ಉತ್ತುಂಗದಿಂದ ಕಣ್ಮುಚ್ಚಿ ಬಿಡುವಷ್ಟರಲ್ಲಿ ನೆಲದ ಮೇಲೆ ವಿವಸ್ತ್ರನಾಗಿ ಬೀಳಲೂಬಹುದು. ಇಲ್ಲಿ ಸತ್ಯ, ಮಿಥ್ಯ, ಸರಿ, ತಪ್ಪು, ಅಂತೆ, ಕಂತೆ ಎಂಬೆಲ್ಲಾ ಗ್ರಹಿಕೆಗಳು ನಿಂತಿರುವುದು ಕೇವಲ ಒಂದು ಮಾತ್ರದ ಅಂಶದ ಮೇಲೆ. ಅದು ಪ್ರಸ್ತುತ ಇಂಟರ್ನೆಟ್ ಬಳಕೆದಾರನ ಬಳಿಯಿರುವ ಏಕೈಕ ಮಾಪನ. ಹೆಸರು ನಂಬುಗೆ. ಇಂದಿನ ಸಾಮಾಜಿಕ ಜಾಲತಾಣಗಳ ಸರೋವರದಲ್ಲಿ ಕಾಣಸಿಗುವ  ಪ್ರತಿಯೊಂದು ಸುದ್ದಿಯನ್ನು ಹಿಂದೂ-ಮುಂದೂ ನೋಡದೆ ಅವುಗಳ ಅಳೆತ್ತರವನ್ನೂ ಅರಿಯದೆ ಕಾದ ಎಣ್ಣೆಗೆ ಬಿದ್ದ ಒಣ ಹಪ್ಪಳದಂತೆ ಹಿರಿ ಹಿರಿ ಹಿಗ್ಗುವ ಜನಕೋಟಿಯ ವಿಚಾರಗ್ರಹಿಕೆ ತಾವು ಕಂಡ ಸುದ್ದಿಯನ್ನು ಒರೆಹಚ್ಚಿ ಪರೀಕ್ಷಿಸಿಕೊಳ್ಳುವುದು ಈ ನಂಬುಗೆ ಎಂಬ ಸೂಕ್ಷ್ಮ ಎಳೆಯ ಮೇಲೆಯೇ. ಮತ್ತಷ್ಟು ಓದು »

14
ಫೆಬ್ರ

ಹೌದು. ಸಿಎಂ ಸಿದ್ದರಾಮಯ್ಯನವರು ಎರಡನೇ ದೇವರಾಜ ಅರಸು…!

– ರಾಕೇಶ್ ಶೆಟ್ಟಿ

‘Law and order are the medicine of the politic body and when the politic body gets sick, medicine must be administered’ – ಕಾನೂನು ಸುವ್ಯವಸ್ಥೆಯು ರಾಜಕೀಯ ವ್ಯವಸ್ಥೆಗೆ ಔಷಧವಿದ್ದಂತೆ ಮತ್ತು ರಾಜಕೀಯ ವ್ಯವಸ್ಥೆಯೇ ಅನಾರೋಗ್ಯಕ್ಕೆ ಒಳಗಾದಾಗ, ಔಷಧವನ್ನು ನೀಡಲೇಬೇಕು” ಕಾನೂನು ಸುವ್ಯವಸ್ಥೆಯ ಕುರಿತು ಹೀಗೆ ಹೇಳುತ್ತಾರೆ ಡಾ. ಅಂಬೇಡ್ಕರ್. ಕರ್ನಾಟಕದ ಮಟ್ಟಿಗೆ ಸೂಕ್ತವಾದ ಮಾತಿದು. ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಸರ್ಕಾರವೇ ರೋಗಗ್ರಸ್ಥವಾಗಿ ಕುಳಿತಿದೆ. ಅದು ಯಾವ ಪರಿ ಕುಲಗೆಟ್ಟಿದೆಯೆಂದರೆ, ರಾಜಧಾನಿ ಬೆಂಗಳೂರಿನ ಪೊಲೀಸ್ ಕಮಿಷನರ್ ಕಚೇರಿಯ ಅನತಿದೂರದಲ್ಲೇ ರಾಬರಿಗಳು ನಡೆದಿರುವ ವರದಿಗಳಾಗುತ್ತಿವೆ. ಪೊಲೀಸ್ ಕಚೇರಿಯ ಬಳಿ ಬಿಡಿ, ಖುದ್ದು ಪೊಲೀಸರಿಗೆ ರಕ್ಷಣೆಯಿಲ್ಲದಂತಾಗಿದೆ. ರಸ್ತೆಯಲ್ಲಿ ಕುಡಿದು ಗಲಾಟೆ ಮಾಡುತ್ತಿದ್ದ ಪುಂಡರನ್ನು ಹಿಡಿಯಲು ಹೋದ ಪೊಲೀಸರ ಮೇಲೆಯೇ ರೌಡಿಗಳು ಮಚ್ಚು ಬೀಸುತ್ತಿದ್ದಾರೆ, ಗನ್ ಕಿತ್ತುಕೊಳ್ಳುತ್ತಿದ್ದಾರೆ. ಮಹಿಳಾ ಪೊಲೀಸ್ ಅಧಿಕಾರಿಗೆ ಕಿರುಕುಳ ನೀಡಿದ್ದಾರೆ, ಪೊಲೀಸರ ಸ್ಥಿತಿಯೇ ಹೀಗಾದರೆ ಇನ್ನು ಜನಸಾಮಾನ್ಯರ ಗತಿಯೇನು? ಮತ್ತಷ್ಟು ಓದು »

5
ಫೆಬ್ರ

ಕನ್ನಡ ಪರ ಹೋರಾಟವೆಂದರೆ ಕಾಂಗ್ರೆಸ್ ಪರ ಹೋರಾಟವೇ?

– ರಾಕೇಶ್ ಶೆಟ್ಟಿ

ಚಿತ್ರಕೃಪೆ  :- https://kannada.oneindia.com (ಕಲೆ : ಬಿ.ಜಿ. ಗುಜ್ಜಾರಪ್ಪ)

ಭಾವನಾತ್ಮಕವಾಗಿ ಜನರನ್ನು ಎತ್ತಿಕಟ್ಟುವುದು ರಾಜಕೀಯ ಪಕ್ಷಗಳಿಗೆ ಯಾವತ್ತಿಗೂ ಲಾಭದ ಬಾಬತ್ತು. ಈಗ ಮಹದಾಯಿ ವಿಷಯದಲ್ಲೂ ಆಗುತ್ತಿರುವುದೂ ಅದೇ. ಪ್ರಧಾನಿ ಮೋದಿಯವರ ಬಳಿ, ಗೋವಾ-ಮಹಾರಾಷ್ಟ್ರದ ಜೊತೆಗೆ ಸಂಧಾನದ ಮಧ್ಯಸ್ಥಿಕೆ ವಹಿಸುವಂತೆ ರಾಜ್ಯದ ಸರ್ವಪಕ್ಷ ನಿಯೋಗ ಹೋಗಿ ಕೇಳಿಕೊಂಡಾಗ, ಈ ವಿವಾದದ ಇತಿಹಾಸದ ಅರಿವಿದ್ದ ಅವರು, ಮಧ್ಯಸ್ಥಿಕೆ ನಿರಾಕರಿಸಿ ಮೊದಲು ಆಯಾ ರಾಜ್ಯಗಳಲ್ಲಿರುವ ಪಕ್ಷಗಳನ್ನು ಒಪ್ಪಿಸಿ ಎಂದಿದ್ದರು. ನಂತರ ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ನಡೆದಿದ್ದ ಸರ್ವಪಕ್ಷ ಸಭೆಯಲ್ಲಿ, ಗೋವಾದ ಬಿಜೆಪಿ ಸರ್ಕಾರವನ್ನು ಕರ್ನಾಟಕದ ಬಿಜೆಪಿಯವರು ಹಾಗೂ ಗೋವಾದ ವಿರೋಧ ಪಕ್ಷ ಕಾಂಗ್ರೆಸ್ಸನ್ನು ಕರ್ನಾಟಕದ ಆಡಳಿತ ಪಕ್ಷ ಕಾಂಗ್ರೆಸ್ಸಿನವರು ಒಪ್ಪಿಸುವ ನಿರ್ಧಾರವಾಗಿತ್ತು. ಮತ್ತಷ್ಟು ಓದು »