ಬೇಕೇ ಇಂಥ ಮಕ್ಕಳು?
– ಪವನ್ ಎಂ. ಟಿ
ಒಂದು ಮಾತಿದೆಯಲ್ವಾ, ಈ ಜಗತ್ತಿನಲ್ಲಿ ಕೆಟ್ಟ ಮಕ್ಕಳಿರಬಹುದು ಆದರೆ ಕೆಟ್ಟ ತಾಯಿ ಇರಲಿಕ್ಕಿಲ್ಲ ಅಂತ.ನಾನೀಗ ಹೇಳ ಹೊರಟಿರುವುದು ಹಾಗೊಬ್ಬ ತಾಯಿಯ ಮತ್ತು ಅವಳ ಕಟುಕ ಮಗನ ಬಗ್ಗೆ.ತನ್ನ ವಯಸ್ಸಾದ ತಂದೆ ತಾಯಿಯನ್ನು ಯಾವ ಮಕ್ಕಳು ತಾನೆ ದಿನಗೂಲಿ ನೌಕರನಂತೆ ದುಡಿಸಿಕೊಳ್ಳುತ್ತಾರೆ ನೀವೆ ಹೇಳಿ? ಆದರೆ ಇಲ್ಲಿ ಅಂತವನಿದ್ದಾನೆ. ಒಬ್ಬ ಅಜ್ಜಿ ತನ್ನ ಒಂದು ತುತ್ತು ಅನ್ನಕ್ಕಾಗಿ, ನಿತ್ಯದ ಜೀವನಕ್ಕಾಗಿ ದಿನವಿಡೀ ದುಡಿಯಲೇ ಬೇಕಾದ ಅನಿವಾರ್ಯತೆಯಲ್ಲಿದ್ದಾರೆ.
ಈ ಬಡಜೀವ ತನ್ನ ೯೫ ನೇ ವಯಸ್ಸಿನಲ್ಲಿಯೂ ಕೂಡ ಬುಟ್ಟಿಯನ್ನು ತಯಾರಿಸಿ ಬದುಕಬೇಕಾಗಿದೆ. ಈ ಬುಟ್ಟಿಗಾಗಿ ದೂರದ ಕಾಡಿನಿಂದ ಸಾಮಾಗ್ರಿಗಳನ್ನು ತರಲು ಒಬ್ಬರೆ ಹೋಗುತ್ತಾರೆ. ಸರಿಯಾಗಿ ನಡೆಯಲು ಸಾಧ್ಯವಿಲ್ಲದ ಗೂನು ಬೆನ್ನಿನ ಅಜ್ಜಿ ಕಾಡಿಗೆ ತೆರಳಿದಾಗ ಅಲ್ಲಿ ಏನಾದರೂ ತೊಂದರೆಯಾದರೆ ಏನು ತಾನೆ ಮಾಡಿಯಾರು? ಒಂದು ವೇಳೆ ತೊಂದರೆಯಾದರೂ ಸಹ ಅಲ್ಲಿ ಅಜ್ಜಿಯ ಬಗ್ಗೆ ತಲೆಕೆಡಿಸಿ ಕೊಳ್ಳುವವರಾರು ಇಲ್ಲ.
ಮತ್ತಷ್ಟು ಓದು 
ಪಕ್ಷಗಳ ಆಟಕ್ಕೆ ಜನರ ಹಣವೇಕೆ ಬಲಿ?
– ರಾಕೇಶ್ ಶೆಟ್ಟಿ
ಮತ್ತೆ ೩ ಕ್ಷೇತ್ರಗಳಲ್ಲಿ ಉಪಚುನಾವಣೆ ಬಂದು ನಿಂತಿದೆ.ಮೊದಲೆಲ್ಲ ಜನಪ್ರತಿನಿಧಿಗಳ ಮರಣದಿಂದಾಗಿಯೇ ಉಪಚುನಾವಣೆಗಳು ನಡೆಯುತಿದ್ವು.ಅದರ ನಡುವೆ ನಮ್ಮ ಚುನಾವಣ ಆಯೋಗದ
ತಲೆ ಕೆಟ್ಟ ಒಂದು ಕಾನೂನು ಇದ್ಯಲ್ಲ : ’ಒಂದೇ ಕಾಲದಲ್ಲಿ ಒಬ್ಬ ಅಭ್ಯರ್ಥಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಬಹುದು’ ಅಂತ.ಅದೂ ಕೂಡ ಕೆಲವೊಮ್ಮೆ ಉಪಚುನಾವಣೆಗೆ ಕಾರಣವಾಗಿದ್ದಿದೆ.ಉದಾಹರಣೆಗೆ ಸೋನಿಯ ಮೇಡಂ ಬಳ್ಳಾರಿಲಿ ಗೆದ್ದು ’ಕೈ’ ಎತ್ತಿ ಹೊರಟಿದ್ದು ಗೊತ್ತಿದೆ ಅಲ್ವಾ?
ನಮ್ ದೇವೆಗೌಡ್ರು ಪ್ರಧಾನಿ ಕುರ್ಚಿಯಿಂದ ಇಳಿದು ಬಂದ್ಮೇಲೆ ಎದುರಿಸಿದ ಲೋಕಸಭಾಚುನಾವಣೆಯಲ್ಲಿ ಹಾಸನದಿಂದ ಸ್ಪರ್ಧಿಸಿ ಸೋತು,ಆ ನಂತರ ಕನಕಪುರದಲ್ಲಿ ನಡೆದ ಉಪಲೋಕಸಭೆ ಚುನಾವಣೆಯಲ್ಲಿ ಗೆದ್ದು ಬಂದಿದ್ರು.ಆ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಹಾಸನ ಮತ್ತೆ ಕನಕಪುರ ಎರಡೂ ಕ್ಷೇತ್ರದಿಂದ ಸ್ಪರ್ಧಿಸಿದ್ರು.ಒಂದು ವೇಳೆ ಎರಡೂ ಕಡೆ ಗೆದ್ದಿದ್ರೆ ಹಾಸನ ಕೈ ಬಿಡ್ತಾ ಇದ್ರೂ ಅಂತ ಆಗ ಜನ ಮಾತಡಿಕೊಳ್ತಾ ಇದ್ರು.ದೇವರ ದಯೆ ಹಾಸನದಲ್ಲಿ ಮಾತ್ರ ಗೆದ್ರು! 🙂
ದೇವರ ದಯೆ ಅಂತ್ಯಾಕ್ ಹೇಳ್ದೆ ಅಂದ್ರೆ, ಹೀಗೆ ಎರಡೂ ಕಡೆ ನಿಂತೂ ಎರಡೂ ಕಡೆ ಗೆದ್ರೆ, ಅವ್ರು ಒಂದು ಕ್ಷೇತ್ರವನ್ನ ಬಿಟ್ಟುಕೊಡಲೇಬೇಕಲ್ವಾ? ಆಗ ತೆರವಾದ ಸ್ಥಾನಕ್ಕೆ ಮತ್ತೊಮ್ಮೆ ಉಪಚುನಾವಣೆ ಬಂದು ನಿಲ್ಲುತ್ತೆ. ಮತ್ತೆ ನಮ್ಮ ಜನರು ಬೆವರು ಸುರಿಸಿದ ತೆರಿಗೆ ಹಣ ಪೋಲು ಆಗೋದಿಲ್ವಾ?
ಈ ಬಾರಿಯ ಬಿಜೆಪಿ ಸರ್ಕಾರ ಬಂದು ಆಪರೇಶನ್ ಕಮಲ ಅಂತ ಹೇಳಿಕೊಂಡು ಮಾಡಿದ್ದು ಜನರ ತೆರಿಗೆ ಹಣದ ಆಪರೇಶನ್ ಅಲ್ವಾ?… ಈ ಮಧ್ಯೆ ಕುಮಾರಸ್ವಾಮಿಯವ್ರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂ.ಪಿ ಆದ್ರು,ಈಗ ಮತ್ತೆ ಚನ್ನಪಟ್ಟಣ ಉಪಚುನಾವಣೆಗೆ ನಿಲ್ತಾ ಇದ್ದರೆ.ಅಲ್ಲಿ ಗೆದ್ರೆ ಮತ್ತೆ ಲೋಕಸಭೆಯ ಸ್ಥಾನಕ್ಕೆ ಉಪಚುನಾವಣೆ ನಡಿಬೇಕಲ್ವಾ?…
ಸಾವಯವ ಕೃಷಿ ಎಂಬ ಮೂರ್ಖತನ !
– ಶ್ರೀ ಹರ್ಷ ಸಾಲಿಮಠ
ವ್ಯವಸಾಯ ಎಂಬುದು ಭಾರತ ದೇಶದ ಮಟ್ಟಿಗೆ ಉದ್ಯೋಗ ಮತ್ತು ಹೊಟ್ಟೆಪಾಡು ಮಾತ್ರವಲ್ಲ. ಅದೊಂದು ಸಂಸ್ಕೃತಿ, ಜೀವನಶೈಲಿ. ಅದೆಷ್ಟೋ ವರ್ಷಗಳಿಂದ ನಾಗರಿಕತೆಯನ್ನು ಸಲಹಿಕೊಂಡು ಬಂದ ದಾರಿ.ಮನುಷ್ಯ ಒಂದೆಡೆ ನಿಂತು ನೆಲೆಯೂರಿ ತನ್ನದೊಂದು ಬದುಕು ಕಟ್ಟಿ ಕೊಳ್ಳುವುದು ಸಾಧ್ಯವಾದದ್ದೇ ಅವನು ಬೇಸಾಯ ಮಾಡಲು ಆರಂಭಿಸಿದಾಗಿನಿಂದ.
ಇತ್ತೀಚೆಗೆ ಸಾವಯವ ಕೃಷಿ ಎಂಬುದು ಬಹಳವಾಗಿ ಕೇಳಿ ಬರುತ್ತಿರುವ ಸುದ್ದಿ. ಸರಕಾರವೂ ಸೇರಿದಂತೆ ಸಮೂಹ ಸನ್ನಿಗೊಳಗಾದಂತೆ ಸಾವಯವ ಕೃಷಿಯ ಕಡೆ ಜನ ಓಡುತ್ತಿದ್ದಾರೆ. ಸುಭಾಶ್ ಪಾಳೇಕರ್ ರಂತಹ ಅನೇಕರು ಕೃಷಿ ಗುರುಗಳಾಗಿದ್ದಾರೆ.
ಅವರ ಬಳಿ ನೂರಾರು ರೈತರು ಸಾವಯವ ಕೃಷಿಯ ತರಬೇತಿ ಪಡೆದು ಬೇಸಾಯದಲ್ಲಿ ತೊಡಗಿದ್ದಾರೆ. ರಸಗೊಬ್ಬರ ಹಾಕಿ ಹಣ ಕಳೆದುಕೊಂಡವರಂತೆ ಸಾವಯವ ಕೃಷಿಗೆ ಮೊರೆ ಹೋದವರೂ ಹಣ ಕಳೆದುಕೊಂಡಿದ್ದಾರೆ. ಸಮಯ ಹಾಳು ಮಾಡಿಕೊಂಡಿದ್ದಾರೆ.ಅದೆಷ್ಟೇ ತರಬೇತಿ ಶಿಬಿರ ಪ್ರಚಾರ ನಡೆಯುತ್ತಿದ್ದರೂ ರೈತರ ಪರಿಸ್ಥಿತಿ ಸುಧಾರಿಸುತ್ತಿಲ್ಲ.
ನಮ್ಮ ದೇಶದಲ್ಲಿ ನೆಲ ಜಲ ಭಾಷೆ ಔಶಧಿ ನಲವತ್ತು ಕಿಲೋಮೀಟರು ಗಳಿಗೊಮ್ಮೆ ಬದಲಾಗುತ್ತದೆ. ಮಣ್ಣಿನ ಗುಣ ಪ್ರತಿ ನಲವತ್ತು ನಲವತ್ತು ಕಿಲೋಮೀಟರುಗಳಿಗೆ ಬದಲಾಗುತ್ತದೆ. ಗಾಳಿ ಬೀಸುವ ದಿಕ್ಕು, ಮಳೆಯ ಪ್ರಮಾಣ, ಭೂಮಿಯ ಗಟ್ಟಿತನ, ನೀರಿನ ಕ್ಷಾರತೆ ಎಲ್ಲವೂ ಬದಲಾಗುತ್ತಾ ಹೋಗುತ್ತದೆ. ಅಷ್ಟೇ ಅಲ್ಲ ಅಲ್ಲಿನ ಪ್ರಾಣಿಸಂಪತ್ತು ಸಹ ಬದಲಾಗುತ್ತದೆ. ಅಸುಗಳ ಜಾತಿ ಮತ್ತು ಅವುಗಳ ಹೊಂದಿಕೊಳ್ಳುವಿಕೆ ಬದಲಾಗುತ್ತದೆ. ಬೆಳೆಯುವ ಬೆಳೆ ಸಂಪೂರ್ಣವಾಗಿ ಈ ಎಲ್ಲ ಪ್ರಾಕೃತಿಕ ಗುಣಗಳ ಮೇಲೆ ಅವಲಂಬನೆಯಾಗಿರುತ್ತದೆ.
ಉದಾಹರಣೆಗೆ ಮಲೆನಾಡಿನಲ್ಲಿ ಬೇಸಿನ ಮರ ಜಾಲಿಯ ಮರಗಳು ಬೆಳೆಯುವದಿಲ್ಲ, ಅದೇ ಸಮಯಕ್ಕೆ ಬಯಲುಸೀಮೆಯಲ್ಲಿ ಜಾಲಿಯ ಮರ ಆಳದಷ್ಟು ದೊಡ್ಡದಾಗಿ ಬೆಳೆಯುತ್ತದೆ. ಮಲೆನಾಡಿನ ಔಷಧೀಯ ಸಸ್ಯಗಳು ಬಯಲು ಸೀಮೆಯ ಕಡೆ ಬೆಳೆಯಲು ಸಾಧ್ಯವೆ ಇಲ್ಲ. ಹೀಗಿರುವಾಗ ಆಯಾ ನೆಲದ ಪ್ರಾಕೃತಿಕ ಅಂಶಗಳಿಗೆ ಅನುಗುಣವಾಗಿ ಬೆಳೆ ಬರುವಂತೆ ಕೃಷಿ ಇರಬೇಕೆ ಹೊರತು ಎಲ್ಲೋ ನಡೆಸಿದ ಪ್ರಯೋಗಗಳಿಗೆ ಅನುಗುಣವಾಗಿ ಅಲ್ಲ. ಸುಭಾಶ್ ಪಾಳೇಕರ್ ಅವರ ಪ್ರಯೋಗ ನಡೆದಿರುವುದು ಮಹಾರಾಷ್ಟ್ರದ ಗದ್ದೆಗಳಲ್ಲಿ. ಅವರ ಪ್ರಯೋಗಗಳಲ್ಲಿ ಅಲ್ಲಿಯ ಪರಿಸರಕ್ಕೆ ಸರಿ ಹೊಂದುವಂತೆ ಕೆಲವು ಯಶಸ್ಸುಗಳು ಕೆಲವು ಅಪಜಯಗಳೂ ಸಿಕ್ಕಿರುತ್ತವೆ. ಅಲ್ಲಿನ ಯಶಸ್ವಿ ಸೂತ್ರಗಳನ್ನು ಅವರು ಎಲ್ಲೆಡೆ ಬೋಧಿಸುತ್ತಿದ್ದಾರೆ. ಆ ಯಶಸ್ಸನ್ನು ಹಿಂಬಾಲಿಸಿ ಜನ ಬೇಸಾಯ ಕೈಗೊಂಡು ಕೈ ಸುಟ್ಟು ಕೊಳ್ಳುತ್ತಿದ್ದಾರೆ.
ಈ ಸಾವು ನ್ಯಾಯವೇ?
– ರೂಪ ರಾವ್
ಮೊನ್ನೆಯ ಬೆಂಗಳೂರು ಮಿರರ್ ಪತ್ರಿಕೆಯಲ್ಲಿ ಓದಿದ ಸುದ್ದಿಯೊಂದು ಮನಸನ್ನ್ನು ಗಾಢವಾಗಿ ಕಾಡಿತು. ಸಯೋನಿ ಚಟರ್ಜಿ ಎಂಬ ಹನ್ನೊಂದರ ಮುದ್ದು ಬಾಲೆಯ ಫೋಟೊ ನೋಡುತ್ತಿದ್ದಂತೆ
ಮನಸು ಕಲಕಿತು.
ಎಂ ಎನ್ ಸಿಗಳ ತೆಕ್ಕೆಗೆ ಔಷಧ – ಹೆಲ್ತ್ ಫಾರ್ Only rich!
– ಹರ್ಷ ಕುಗ್ವೆ
ಒಂದು ದೇಶದಲ್ಲಿ ತಯಾರಿಸಲಾಗುವ ಔಷಧ ಮಾತ್ರೆಗಳು ಆ ದೇಶದ ಜನರ ಆರೋಗ್ಯಕ್ಕಾಗಿ ಅಲ್ಲದೇ ಕೇವಲ ಬಿಸಿನೆಸ್ ಕಂಪನಿಗಳ, ಅಥವಾ ಬಹುರಾಷ್ಟ್ರೀಯ ಕಂಪನಿಗಳ ಲಾಭಕ್ಕಾಗಿ ತಯಾರಿಸಲ್ಪಟ್ಟರೆ ಏನಾಗುತ್ತದೆ??
ಇದು ಸಧ್ಯದ ನಮ್ಮ ಭಾರತದ ಸ್ಥಿತಿ. ಇದಕ್ಕೆ ನಮ್ಮ ರಾಜಕಾರಣಿಗಳ, ಉದ್ಯಮಿಗಳ ದುರಾಸೆ ಒಂದೆಡೆ ಕಾರಣವಾದರೆ ವಿದೇಶೀ ದೈತ್ಯ ಕಂಪನಿಗಳ ಹಸಿವು ಮತ್ತೊಂದು ಕಾರಣ..
ಇದೆಲ್ಲಾ ಹೇಗಾಯ್ತು ಕೊಂಚ ನೋಡೋಣ.
ನಮ್ಮ ದೇಶವು ಪರಕೀಯರ ನೇರ ಮುಷ್ಠಿಯಿಂದ ಪಾರಾದ ಬಳಿಕ ಹಲವಾರು ಕ್ಷೇತ್ರಗಳಲ್ಲಿ ದಾಪುಗಾಲನ್ನಿಟ್ಟಿತ್ತು. ಔಷಧ ತಯಾರಿಕೆಯ ಉದ್ದಿಮೆಯಲ್ಲಿ ಸಹ ಅದು ಮುಂದುವರೆದ ದೇಶಗಳೂ ಹುಬ್ಬೇರಿಸಿ ನಿಲ್ಲುವಂತೆ ಅಭಿವೃದ್ಧಿ ಸಾಧಿಸಿತು. ನಮ್ಮ ಸಕರ್ಾರವು ಪಾಲಿಸಿದ ಕೆಲವಾರು ಉತ್ತಮ ಆರ್ಥಿಕ ನೀತಿಗಳಿಂದಾಗಿ ನಮ್ಮ ದೇಶದ ಔಷದೋದ್ಯಮವನ್ನು MNC ಸ್ಪರ್ಧೆಯಿಂದ ರಕ್ಷಿಸಿ ಅದು ಅಭೂತಪೂರ್ವ ಬೆಳವಣಿಗೆ ಸಾಧಿಸುವಂತೆ ಮಾಡಲಾಗಿತ್ತು. ಔಷದ್ಯುತ್ಪನ್ನಗಳ ಉತ್ಪಾದನೆಯ ಪ್ರಮಾಣದಲ್ಲಿ ಇಡೀ ಪ್ರಪಂಚದಲ್ಲಿ ನಾವೇ ಮೂರನೇ ಸ್ಥಾನಪಡೆಯುವ ಹಂತಕ್ಕೆ ಈ ಬೆಳವಣಿಗೆ ತಲುಪಿತು. ಮಾತ್ರವಲ್ಲ ಜನರ ಅಗತ್ಯಕ್ಕನುಗುಣವಾಗಿ ಉತ್ತಮ ಗುಣಮಟ್ಟದ ಔಷಧಿಗಳು ಕಡಿಮೆ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡಿದ್ದೂ ನಮ್ಮ ಉದ್ದಿಮೆಯ ಹೆಗ್ಗಳಿಕೆ.
2105ರ ಸುಮಾರಿಗೆ ಭಾರತದ ಔಷಧಿ ಮಾರುಕಟ್ಟೆಯಲ್ಲಿ ಒಂದು ವರ್ಷಕ್ಕೆ ನಡೆಯುವ ವಹಿವಾಟು ಎಷ್ಟು ಗೊತ್ತೇ? ಬರೋಬ್ಬರಿ 90ಸಾವಿರ ಕೋಟಿ!
‘ಕುಂದನಗರಿ’ಯ ಸಮ್ಮೇಳನದ ನೆನಪುಗಳು…!
– ಅರೆಹೊಳೆ ಸದಾಶಿವ ರಾವ್
ಹಾಗೆ ನೋಡಿದರೆ ಬೆಳಗಾವಿಗೆ ನಾನು ಎರಡು ತಿಂಗಳಿಗೊಮ್ಮೆ ಹೋಗುತ್ತಿರುತ್ತೇನೆ. ಹಾಗಾಗಿ ಸಂಪೂರ್ಣ ಅಲ್ಲದಿದ್ದರೂ ಬೆಳಗಾವಿಯ ರಸ್ತೆ ಮತ್ತದರ ದುರವಸ್ತೆಗಳನ್ನು ಆಗಾಗ ಗಮನಿಸಿದ್ದೇನೆ. ಇವತ್ತು ಬೆಳಗಾವಿ ಏನಾದರೂ ನಮ್ಮ ಪ್ರಭುಗಳ ಗಮನ ಸೆಳೆದಿದ್ದರೆ, ಅದಕ್ಕೆ ಮರಾಠಿಗರು ಖಂಡಿತಕ್ಕೂ ಕಾರಣರು! ಏಕೆಂದರೆ ಬೆಳಗಾವಿ ತಮ್ಮದು ಎಂಬ ವಿವಾದವನ್ನು ಸದಾ ಜೀವಂತವಾಗಿಟ್ಟುಕೊಂಡಿರುವವರು ಮರಾಠಿಗರು. ಈ ಹಿನ್ನೆಲೆಯಲ್ಲಿ ನಮ್ಮ ಪ್ರಭುತ್ವ, ಬೆಳಗಾವಿಯನ್ನು ಒಂದು ಕಣ್ಣಿಟ್ಟು ನೋಡುತ್ತಲೇ ಇರುತ್ತದೆ! ಅದಿಲ್ಲವಾಗಿದ್ದರೆ ಬಹುಶ: ಈ ಕುಂದನಗರಿಯೂ ಉತ್ತರ ಕರ್ನಾಟಕದ ಇತರ ಜಿಲ್ಲೆ-ಪಟ್ಟಣಗಳಂತೆ ನಿರ್ಲಕ್ಷ್ಯದ ಬೇಗುದಿಯಲ್ಲಿ ಕಾಲ ತಳ್ಳುತ್ತಲೇ ಇರುತ್ತಿತ್ತೇನೋ!.
ಅದಿರಲಿ, ಈಗ ವಿಷಯ ಅದಲ್ಲ. ಇಪ್ಪತ್ತೈದು ವರ್ಷಗಳ ನಂತರ ಈ ಕುಂದ ನಗರಿಯಲ್ಲಿ ಎರಡನೆಯ ವಿಶ್ವ ಕನ್ನಡ ಸಮ್ಮೇಳನ ನಡೆಯಿತಲ್ಲ; ಒಂದು ಅಪೂರ್ವ ಅವಕಾಶವೆಂಬಂತೆ, ನಾನೂ ಅದರಲ್ಲಿ ಭಾಗವಹಿಸುವ ಉದ್ದೇಶದಿಂದ ಹೋಗಿದ್ದೆ. ಸಮ್ಮೇಳನದ ಬಗ್ಗೆ, ಅಲ್ಲಿ ಮುಳುಗಿ ಹೋದ ೩೭ಕೋಟಿ ರೂಪಾಯಿಗಳ ಬಗ್ಗೆ ಮಾಧ್ಯಮಗಳು ಮಾತಾಡುತ್ತಲೇ ಇರುವುದನ್ನು ಕೇಳಿದ್ದೀರಿ. ನಾನು ಗಮನಿಸಿದ ಒಂದು ಅಂಶವೆಂದರೆ, ಬೆಳಗಾವಿಗೆ ಕಾಲಿಟ್ಟರೆ ಪ್ರತೀ ರಸ್ತೆಗಳೂ ರಿಪೇರಿಯಾಗಿರುವುದು ಬಿಟ್ಟರೆ, ಪಟ್ಟಣ ಸಿಂಗಾರಗೊಂಡಿರುವುದು ಮಾತ್ರ ಕಣ್ಣಿಗೆ ಕಾಣುತ್ತದೆ. ಮತ್ತೆ ಈ ಮೂವತ್ತೇಳು ಕೋಟಿ ಎಲ್ಲಿಗೆ ಹೋಗಿದೆ ಎಂಬುದಕ್ಕೆ ಹುಟುಕಾಡಿದರೂ ಏನೂ ಸಿಗುವುದಿಲ್ಲ.
ಇನ್ನು ಕನ್ನಡ ವೆಂದರೆ ಏನು? ಅದರ ಉಳಿವು-ಅಳಿವು ಎಂದರೆ ಏನು ಎಂಬುದೂ ಪ್ರಶ್ನೆಯಾಗಿ ಕಾಡಿದ್ದು ಸುಳ್ಳಲ್ಲ! ಈ ರೀತಿಯ ದ್ವಂದ್ವಕ್ಕೂ ಕಾರಣವಿದೆ. ಇದು ವಿಶ್ವ ಕನ್ನಡ ಸಮ್ಮೇಳನ. ಬೆಳಗಾವಿಯ ನಗರದ ಪ್ರತೀ ಗೋಡೆಯ ಮೇಲೂ ಕನ್ನಡ ಉಳಿಸಿ-ಬೆಳೆಸಿ ಎಂಬ ಉದ್ಘೋಷವೇ ಕಾಣುತ್ತಿತ್ತು. ಆದರೆ ಇಡೀ ಮೂರುದಿನ ನಡೆದ ಸಮ್ಮೇಳನದಲ್ಲಿ ಈ ಹಿನ್ನೆಲೆಯಲ್ಲಿ ಏನಾದರೂ ಕ್ರಮಗಳನ್ನು ಸರಕಾರ ಆಗಲೀ, ಸಮ್ಮೇಳನ ಸಮಿತಿಯಾಗಿಯಾಗಲೀ ಕೈಗೊಂಡ ಬಗ್ಗೆ ವರದಿಯಾಗಿಲ್ಲ. ಅದೂ ಅಲ್ಲದೇ ಇದೇ ರೀತಿಯ ಸಮ್ಮೇಳನವನ್ನು ಐದು ವರ್ಷಗಳಿಗೊಮ್ಮೆ ನಡೆಸುವ ತೀರ್ಮಾನವನ್ನು ‘ಬಹುಜನರ’ ಬೇಡಿಕೆಯ ಮೇರೆಗೆ ಮುಖ್ಯಮಂತ್ರಿಗಳು ಕೈಗೊಂಡರು. ಅದು ಒಂದು ರೀತಿಯಲ್ಲಿ ಸಂತಸದ ವಿಚಾರವೇ ಸರಿ…..ಆದರೆ…? ಮತ್ತಷ್ಟು ಓದು 
ಅನ್ಯಾಯವನ್ನು ಕಾಪಿಡುತಿರುವ ಕಾನೂನಿನಡಿಯಲ್ಲಿ ಮಹಿಳೆಯೆಷ್ಟು ಭದ್ರ?!!!
“ಎಲ್ಲಿ ನಾರಿಯರನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ವಾಸಿಸುತ್ತಾರೆ” -ಸಂಸ್ಕೃತ ಸುಭಾಷಿತವೊಂದು ತುಂಬಾ ಸುಂದರ ಸಂದೇಶವನ್ನು ನೀಡುತ್ತದೆ. ಅಂತೆಯೇ ಗಾಂಧೀಜಿ ಕೂಡ “ಎಂದು ಮಧ್ಯರಾತ್ರಿಯಂದೂ ಕೂಡ ಮಹಿಳೆ ನಿರ್ಭಯಳಾಗಿ ತಿರುಗುವಂತಾಗುವುದೋ ಅಂದೇ ನಮಗೆ ಸ್ವಾತಂತ್ರ್ಯ ಸಿಕ್ಕಿದಂತಾಗುವುದು” ಎಂದು ಹೇಳಿದ್ದಾರೆ. ಎಷ್ಟೊಂದು ಉದಾತ್ತ ವಿಚಾರಗಳಿವು! ಆದರೆ ಈ ಮೇಲಿನ ಹೇಳಿಕೆಗಳೆಲ್ಲಾ ಇಂದು ಕನಸಿನೊಳಗಿನ ಕನ್ನಡಿಗಂಟಿನಂತೇ ಸರಿ! ಎಂದೆಂದೂ ಈ ಸ್ವಾತಂತ್ರ್ಯ ಮಹಿಳೆಯದಾಗಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಇಂದಾಗಿದೆ. ಮುಂದೆ ಇದಕ್ಕಿಂತಲೂ ದುಃಸ್ಥಿತಿ ನಮ್ಮದಾಗಬಹುದು. ಮನೆಯೊಳಗೇ ಇರಲಿ ಇಲ್ಲಾ ಹೊರಜಗತ್ತಿನಲ್ಲೇ ಇರಲಿ ಮಹಿಳೆಯರ ಬದುಕು ಆತಂಕದೊಂದಿಗೇ ಕಳೆಯುವಂತಾಗಿರುವುದು ತುಂಬಾ ಖೇದಕರ!
“ಬಲಾತ್ಕಾರ, ಮಾನಭಂಗ, ಮಾನಹರಣ, ರೇಪ್” ಈ ಶಬ್ದಗಳನ್ನು ಕೇಳುವಾಗಲೇ ಮೊಗ ಕಪ್ಪಿಡುತ್ತದೆ. ಮನ ಭಯಗೊಳ್ಳುತ್ತದೆ. ಆ ಕೃತ್ಯ ಎಸಗಿದ ವ್ಯಕ್ತಿಯ ಮೇಲೆ ಅಗಾಧ ರೋಷ, ತಿರಸ್ಕಾರ, ಅಸಹ್ಯ ಮೂಡುತ್ತದೆ ನಮಗೆ. ಆದರೆ ಈ ದುಷ್ಕೃತ್ಯಕ್ಕೆ ಒಳಗಾದ ವ್ಯಕ್ತಿಗೆ ಯಾವ ರೀತಿ ಅನಿಸಬಹುದು? ಆಕೆ ಹೇಗೆ ತನ್ನ ತಾನು ಸಂಭಾಳಿಸಿಕೊಳ್ಳುವಳು? ಮುಂದೆ ಆಕೆಯ ಬದುಕು ಅವಳನ್ನು ಎಲ್ಲಿಗೆ ಒಯ್ಯಬಹುದು? ಎನ್ನುವ ಚಿಂತನೆಗೆ ಹೋಗುವವರು ಕಡಿಮೆಯೇ. ಆ ಕ್ಷಣದ ಕರುಣೆ, ಅನುಭೂತಿ, ಅಯ್ಯೋ ಪಾಪ ಎನ್ನುವ ಅನುಕಂಪವನ್ನಷ್ಟೇ ತೋರಿ, ಆ ಪಾಪಿಗೆ ಸರಿಯಾಗಿ ಶಿಕ್ಷೆಯಾಗಲೆಂದು ಹಾರೈಸಿ ಮರೆಯುತ್ತೇವೆ. ಆದರೆ ಅಂತಹ ಒಂದು ಮಹಾಪಾಪವನ್ನು ಎಸಗಿದ ವ್ಯಕ್ತಿಗೆ ಸರಿಯಾದ ಶಿಕ್ಷೆಯಾಗಿದೆಯೋ ಇಲ್ಲವೋ?! ಇಲ್ಲದಿದ್ದರೆ ಹೇಗೆ ಶಿಕ್ಷೆ ಆಗುವಂತೆ ಮಾಡಬೇಕು? ಎಂಬುದನ್ನು ನಾವು ಯೋಚಿಸುವುದೇ ಇಲ್ಲ. ಆ ಹೊತ್ತಿನ ಬಿಸಿ ಸುದ್ದಿಯನ್ನಷ್ಟೇ “Breaking News” ಆಗಿ ಪ್ರಸಾರಮಾಡುವ ಮಾಧ್ಯಮ, ತದನಂತರದ ಬೆಳವಣಿಗೆಯ ಬೆನ್ನತ್ತಿ ಹೋಗುವುದೂ ಇಲ್ಲ. ಆಘಾತಕ್ಕೊಳಗಾದ ಮಹಿಳೆಗೆ ತಮ್ಮ ಬೆಂಬಲ ಹಾಗೂ ಮಾನಸಿಕ ಶಕ್ತಿಯನ್ನು ನೀಡಿ, ಆ ಮೂಲಕ ಪಾಪಿಗೆ ಆಕೆಯೇ ಶಿಕ್ಷೆ ನೀಡುವಂತೆ ಮಾಡಲು ಸಹಕರಿಸುವ ನಿಟ್ಟಿನಲ್ಲಿ ನಮ್ಮ ಸಮಾಜವಾಗಲೀ, ಕಾನೂನಾಗಲೀ, ಕನಿಷ್ಠ ಆಕೆಯ ಮನೆಯವರಾಗಲೀ ಮುಂದುವರಿಯುವುದೇ ಇಲ್ಲ!
ಎರಡು ಕೋಟಿಗೆಷ್ಟು ಮನೆ ಕಟ್ಟಿಸಬಹುದು ಯಡ್ಯೂರಪ್ಪನವ್ರೇ?
– ರಾಕೇಶ್ ಶೆಟ್ಟಿ
ಸೂಪರ್ ಮೂನ್ ಎಫ಼ೆಕ್ಟ್ ಬಗ್ಗೆ ಮಾತಾಡುತ್ತ ಏನೋ ವಿಪತ್ತು ಕಾದಿದೆಯಂತೆ ಮಾರಾಯ ಅಂತ ಗುಸು ಗುಸು ಶುರುವಾಗಿತ್ತು,ಊಟಕ್ಕೆ ಹೋಗಿ ಬಂದವ ತಾಜ ಸುದ್ದಿಯೇನು ಅಂತ ನೋಡ ಹೋಗಿ
ಮೈ ಒಮ್ಮೆ ತಣ್ಣಗಾಯಿತು.ಜಪಾನ್ನಲ್ಲಿ ಸುನಾಮಿಯೆದ್ದಿದೆ! ಕ್ಷಣಕಾಲ ಅವಕ್ಕಾದೆ,ನಂತರ ಗೂಗಲ್ ಮಹರಾಜನ ಮೊರೆ ಹೋಗಿ ವಿಡಿಯೋ ನೋಡಿ ದಂಗಾಗಿ ಹೋದೆ,ಅದಿನ್ನೆಂತ ರಾಕ್ಷಸ ಅಲೆಗಳು ಅವು!ತಮ್ಮ ಹರಿವಿನಳೊಗೆ ಸಿಕ್ಕಿದ್ದನ್ನೆಲ್ಲ ಆಪೋಷನ ತೆಗೆದುಕೊಳ್ಳುತ್ತ ಹೊರಟಿತಲ್ಲ,ಅದಿನ್ನೆಷ್ಟು ಸಾವಿರ ಜನರ ಬದುಕು ಮೂರಾ ಬಟ್ಟೆಯಾಯಿತು,ಜಪಾನ್ ಅನ್ನುವ ಸ್ವಾಭಿಮಾನಿಗಳ ದೇಶಕ್ಕೆ ಇದೊಂದು ದೊಡ್ಡ ಪೆಟ್ಟು.ಈ ಆಘಾತದಿಂದ ಜಪಾನ್ ಸಹೋದರರು ಎದ್ದು ಬರಲಿ,ಮತ್ತೆ ಜಪಾನ್ ಗೆಲ್ಲಲೇಬೇಕು ಇದು ಬಹುಷಃ ಬಹುತೇಕರ ಪ್ರಾರ್ಥನೆ.
ಪ್ರವಾಹ! … ಸುನಾಮಿಯ ರಕ್ಕಸ ಅಲೆಗಳನ್ನ ನೋಡಿದಾಗ ನನಗೆ ತಟ್ಟನೆ ನೆನಪಾಗಿದ್ದು, ಎರಡು ವರ್ಷದ ಹಿಂದೆ ಬೆಂಗಳೂರಿನಲ್ಲಿ ರಾತ್ರೋ ರಾತ್ರಿ ಸುರಿದ ಮಳೆಯಲ್ಲಿ ಸಿಕ್ಕಿ ಹಾಕಿಕೊಂಡು almost ಎದೆಯ ಹತ್ತಿರ ಹರಿದು ಬರುತಿದ್ದ ನೀರಿನಲ್ಲಿ ನಾವು ಪಟ್ಟ ಪಾಡು! ಮತ್ತು ಆಗ ನೀರಿನ ರಭಸಕ್ಕೆ ಪಲ್ಸರ್ ಬೈಕಿನಲ್ಲಿ ತೇಲಿಕೊಂಡು ಬಂದ ಆಸಾಮಿಯೊಬ್ಬ ಸಾವರಿಸಿಕೊಂಡು ಹೇಳಿದ ಮಾತು!
“‘ಸರ್,ಈ ತರ ಟೀ.ವಿಯಲ್ಲಿ ನೋಡಿದ್ದೇ,ಅನುಭವಿಸಿರಲಿಲ್ಲ.ಈ ಮಳೆಗೆ ಹಿಂಗೆ ನಾವು ಚಡಪಡಿಸ್ತ ಇದ್ದಿವೀ, ಇನ್ನ ಪಾಪ ಉತ್ತರ ಕರ್ನಾಟಕದ ಪ್ರವಾಹದಲ್ಲಿ ಸಿಕ್ಕಿಕೊಂಡ ಜನರ ಕತೆ ಹೇಗಾಗಿರಬೇಡ”. ಅವನಂದ ಮಾತು ನಿಜ ಅಂತ ಅನ್ನಿಸಿತ್ತು.
ಹೆಣ್ಣು ಮಹಿಳೆಯಾಗುತ್ತಿದ್ದಾಳೇಯೇ?
– ರೂಪ ರಾವ್
ನಿನ್ನೆ ಮಹಿಳಾ ದಿನಾಚರಣೆ, ಎಷ್ಟೊ ಶುಭಾಶಯಗಳು, ಆಕಾಂಕ್ಷೆಗಳು. ಹಾರೈಕೆಗಳು. ಒಮ್ಮೆಗೆ ಕೂತು ಯೋಚಿಸುತ್ತಿದ್ದಾಗ, ಮೂಡಿದ ಯೋಚನೆಗಳು ಹಲವಾರು ಅದರಲ್ಲಿ ಮೂಡಿದ ಒಂದು ಪ್ರಶ್ನೆ,
ಮಹಿಳೆ ಎನಿಸಿಕೊಳ್ಳುವ ಹಂಬಲದಲ್ಲಿ ಹೆಣ್ಣಿನ ಸಹಜ ಸಂವೇದನೆಗಳನ್ನು ಕಳೆದುಕೊಳ್ಳುತ್ತಿದ್ದೇವೆಯೇ ನಾವುಗಳು? ಅಷ್ಟಕ್ಕೂ ಹೆಣ್ಣಿಗೂ ಮಹಿಳೆಗೂ ಏನು ವ್ಯತ್ಯಾಸ?
ಹೌದು ಅರ್ಥದ ಪ್ರಕಾರ ಯಾವುದೂ ಇಲ್ಲ
ಆದರೆ ಮನಸಿಗೆ ಹೆಣ್ಣು ಆಪ್ತಳಾಗುತ್ತಾಳೆ, ಆದರೆ ಮಹಿಳೆ ದೂರದಲ್ಲಿಯೇ ನಿಲ್ಲುತ್ತಾಳೆ .
ಇದರ ಬಗ್ಗೆ ನನ್ನದೊಂದಿಷ್ಟು ಸಂವೇದನೆಗಳು
ಹೆಣ್ಣಿನ ಮೊದಲ ಹಂತವೇ ಹೆಣ್ಣಾಗುವುದು.
ಬಾಲಕಿ ಹೆಣ್ಣಾಗುವ ಆ ಹಂತದಲ್ಲಿ ಎಷ್ಟೋ ಕಾತುರತೆ,ನಿರೀಕ್ಷೆಗಳು,ನಾಚಿಕೆ,ಲಜ್ಜೆ,ಕನಸುಕಂಗಳು,ಕೆನ್ನೆಯ ಚುಂಬಿಸುತ್ತಲೆ ಇರುವ ರೆಪ್ಪೆಗಳು… ಹೀಗೆ ಏನೇನೋ ಲಕ್ಷಣಗಳು … ಹೌದು ಇವೆಲ್ಲಾವನ್ನು ಓದಿರುತ್ತೇವೆ, ನೋಡಿರುತ್ತೇವೆ ಎಲ್ಲಿ ಕಥೆಗಳಲ್ಲಿ ಕಾವ್ಯಗಳಲ್ಲಿ,ನಮ್ಮ ತಾಯಿ ಅಥವಾ ಅವರ ತಾಯಿಯ ಕಾಲಕ್ಕಿರಬಹುದೇನೋ…!
ಈಗ ಬಾಲಕಿ ಹೆಣ್ಣಾಗುವುದಿಲ್ಲ ಸೀದಾ ಮಹಿಳೆಯಾಗುವ ಹಂತಕ್ಕೆ ತಲುಪಿರುತ್ತಾಳೆ, ಅದೇನು ಗಾಂಭೀರ್ಯ,ಎಲ್ಲವನ್ನೂ ತಿಳಿದಿರುವವರ ಲಕ್ಷಣ, ಹುಡುಗರೆಂಬ ಕುತೂಹಲವಿರಲಿ ಅವರನು ಹೇಗೆ ಆಟ ಆಡಿಸುವುದೆಂಬ ಯೋಚನೆಯಲ್ಲಿ ತೊಡಗುತ್ತಾಳೆ.ಯಾವುದೇ ವಿಚಾರಕ್ಕಿರಲಿ ದೊಡ್ಡವರನ್ನು ಕೇಳಬೇಕಾದ ಅನಿವಾರ್ಯತೆ ಈಗ ಇಲ್ಲ.ಎಲ್ಲಕ್ಕೂ ಅಂತರ್ಜಾಲವಿದೆ. ಯಾವುದೇ ಕುತೂಹಲ,ಪ್ರಶ್ನೆಗೆ ಉತ್ತರ ಅಗತ್ಯಕ್ಕಿಂತ ಹೆಚ್ಚಾಗಿಯೇ ಸಿಗುತ್ತದೆ.ಹಾಗಾಗಿ ಲೈಂಗಿಕತೆ ಎಂಬುದು ಅವಳಿಗೆ ದೊಡ್ಡ ವಿಷಯವೇ ಅನ್ನಿಸುವುದಿಲ್ಲ.
ಈಗೀಗ ಕಾಲೇಜಿನಲ್ಲಿ ಹುಡುಗ ಕೈ ಕೊಟ್ಟ ಎಂಬ ಮಾತುಗಳಿಗಿಂತ ಹುಡುಗಿ ಬಿಟ್ಟು ಹೋದಳು ಎಂಬ ದೂರುಗಳೇ ಹೆಚ್ಚು.
ಅಪ್ಪ ಅಮ್ಮನ ನಂತರ ಹುಡುಗಿ ಹುಡುಕುವುದೇ ಸೂಕ್ತ ಗೆಳೆಯನಿಗಾಗಿ, ಹುಡುಗನಲ್ಲಿ ಗೆಳೆಯನನ್ನು ಹುಡುಕುತ್ತಾಳೆ,ಆಪ್ತವಾದ ಭಾವನೆ ಹುಟ್ಟು ಹಾಕುವ ಹುಡುಗ ಅವಳಿಗೆ ಹಿಡಿಸುತ್ತಾನೆ. ಆದರೆ ಯಾವುದೋ ಒಂದು ಘಳಿಗೆ ಯಲ್ಲಿ ತಾನು ಬಂದಿರುವುದು ಓದಲು ಪ್ರೀತಿಸಲು ಅಲ್ಲ ಎಂಬ ದಿವ್ಯ ತಿಳುವಳಿಕೆ ಬರುತ್ತದೆ. ಇದ್ದಕ್ಕಿದ್ದಂತೆಯೇ ಬಾಳಿನ ಗುರಿಗಳು ನೆನಪಾಗುತ್ತವೆ. ತನ್ನ ಮೊದಲ ಆದ್ಯತೆ ತಂದೆ ತಾಯಿ ಹಾಗು ಗುರಿ ಈ ಹುಡುಗ ಅಲ್ಲ ಎಂಬ ಆಲೋಚನೆಗಳು ಮುತ್ತಿಡಲಾರಂಭಿಸಿದೊಡನೆಯೇ ಹುಡುಗನ ಚಿತ್ರ ಮನದಿಂದ ದೂರವಾಗಲಾರಂಭಿಸುತ್ತದೆ. ಅದು ತಾತ್ಕಾಲಿಕ, ಮತ್ತೊಬ್ಬ ಹುಡುಗ ಬಂದು ಮನದಲ್ಲಿ ಕೂರುವವರೆಗೆ…
ಅರುಣಳ ಬಾಳಿಗೆ ಅರುಣೋದಯವೆಂದು
ರೂಪಾ
ಕೊನೆಗೂ ಅರುಣಾಗೆ ಅರುಣೋದಯ ಕಾಣಲೇ ಇಲ್ಲ . ಕೊನೆಗೆ ಈ ಜೀವನದಿಂದ ಬಿಡುಗಡೆ ಸಿಕ್ಕೀತೆ ಎಂಬ ನಿರೀಕ್ಷೆಯೂ ಇಲ್ಲವಾಗಿ ಹೋಗಿದೆ. ಜೀವ ಹೋಗುವ ತನಕ ದಿನದಿನವೂ ಸಾಯುತ್ತಲೇ ಜೀವಿಸಿರಲೇಬೇಕಾಗಿದೆ. ಅಷ್ಟಕ್ಕೂ ಈ ಅರುಣಾ ಶಾನಭಾಗ್ ಎಂಬ ನಮ್ಮ ಕರ್ನಾಟಕದ ಹುಡುಗಿ ಮಾಡಿದ ತಪ್ಪಾದರೂ ಏನು?




